ನಾನು ಮೆಚ್ಚಿದ ವಾಟ್ಸಪ್

Saturday, December 8, 2018

ಭೂಮಿಗೆ ಕೇಳಿಸಿತು ಮೊದಲ ‘ಮಂಗಳ ಧ್ವನಿ’

ಭೂಮಿಗೆ ಕೇಳಿಸಿತು ಮೊದಲ ‘ಮಂಗಳ ಧ್ವನಿ’
ನೀವೂ ಅದನ್ನು ಇಲ್ಲಿ ಆಲಿಸಬಹುದು!
ಕೇಪ್ ಕೆನೆವರಾಲ್: ಮಂಗಳಗ್ರಹದಲ್ಲಿ ಬೀಸುವ ಗಾಳಿಯ ಸದ್ದನ್ನು ಭೂಮಿಯ ಮೇಲಿನ ಮಾನವರು ಇದೀಗ ಆಲಿಸಬಹುದು. ಕೆಂಪು ಗ್ರಹದಲ್ಲಿ ಇಳಿದಿರುವ ನಾಸಾದ  ಇನ್ ಸೈಟ್ ಲ್ಯಾಂಡರ್ ಮಂಗಳನ ಅಂಗಳದಲ್ಲಿ ಬೀಸುವ ಗಾಳಿಯ  ಸದ್ದನ್ನು ರೆಕಾರ್ಡ್ ಮಾಡಿ ಇದೇ ಮೊತ್ತ ಮೊದಲ ಬಾರಿಗೆ ಭೂಮಿಗೆ ಕಳುಹಿಸಿದೆ.

2018 ನವೆಂಬರ್ 26ರಂದು ಮಂಗಳ ಗ್ರಹದಲ್ಲಿ ಇಳಿದಿರುವ ನಾಸಾದ ಮಾನವ ರಹಿತ ಸಂಶೋಧನಾ ನೌಕೆ ಇನ್ ಸೈಟ್  ಅಲ್ಲಿ ಬೀಸುತ್ತಿರುವ 10-15 ಎಂಪಿ ಎಚ್ (ಸೆಕೆಂಡಿಗೆ 5-7 ಮೀಟರ್) ವೇಗದ ಗಾಳಿಯನ್ನು ತನ್ನ ಸೌರಫಲಕದ ಮೇಲೆ ಹಾದು ಹೋಗುವಾಗ ಧ್ವನಿಮುದ್ರಿಸಿಕೊಂಡು ಭೂಮಿಗೆ ರವಾನಿಸಿದೆ.

 ಲ್ಯಾಂಡರ್ ಜೆಟ್ ಪ್ರೊಪಲ್ಷನ್ ಪ್ರಯೋಗಾಲಯ ಅನ್ಯಗ್ರಹದ ಗಾಳಿಯ ಸದ್ದಿನ ಧ್ವನಿಮುದ್ರಿಕೆಯನ್ನು 2018 ಡಿಸೆಂಬರ್ 7 ಶುಕ್ರವಾರ (ಭಾರತೀಯ ಕಾಲಮಾನದ ಪ್ರಕಾರ ಡಿಸೆಂಬರ್ 8 ಶನಿವಾರ) ಬಿಡುಗಡೆ ಮಾಡಿದೆ. ಮಂಗಳನ ಅಂಗಳದಲ್ಲಿ ಇಳಿದ ಮೊದಲ ವಾರವೇ ಅತ್ಯಂತ ಕ್ಷೀಣ ತರಂಗಗಳ ಧ್ವನಿಯನ್ನು ಗ್ರಹಿಸಿದ ಇನ್ಸೈಟ್ ಲ್ಯಾಂಡರ್ ಅದನ್ನು ದಾಖಲಿಸಿ ಭೂಮಿಗೆ ಕಳುಹಿಸಿದೆ.

ಮಂಗಳನ ಮೊದಲ ಧ್ವನಿಯನ್ನು ಮಾನವನ ಕಿವಿಗೆ ಕೇಳಿಸುವಂತೆ ಇನ್ ಸೈಟ್ ಲ್ಯಾಂಡರ್ ಸೆರೆ ಹಿಡಿದಿದೆ ಎಂದು ನಾಸಾದ ಸಂಶೋಧಕರು ಪ್ರಕಟಿಸಿದರು.

'ಇದು ಬೇಸಿಗೆ ಮಧ್ಯಾಹ್ನ ಹೊರಗೆ ಕುಳಿತಾಗ ಬೀಸುವ ಗಾಳಿಯ ಸದ್ದನ್ನು ನೆನಪಿಸುವಂತಿದೆ... ಮಂಗಳನ ಮೇಲಿರುವ ಇನ್ಸೈಟ್ ಲ್ಯಾಂಡರ್ ನೌಕೆಯಲ್ಲಿ ನೀವು ಕುಳಿತಿದ್ದರೆ ಸದ್ದು ಕೇಳಬಹುದು' ಎಂದು ಕಾರ್ನೆಲ್ ಯುನಿವರ್ಸಿಟಿಯ ಸಂಶೋಧಕ ಡಾನ್ ಬ್ಯಾನ್ಫೀಲ್ಡ್ ಸುದ್ದಿಗಾರರಿಗೆ ತಿಳಿಸಿದರು.

ಧ್ವನಿ ಹೊರ ಜಗತ್ತಿನದ್ದೇ ಎಂಬುದರಲ್ಲಿ ಸಂದೇಹವಿಲ್ಲ ಎಂದು ಯೋಜನೆಯಲ್ಲಿ ಪಾಲ್ಗೊಂಡ ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ.

'
ಇದು ಭೂಮಿಯಲ್ಲಿ ನಾವು ಕೇಳುವ ಸದ್ದಿಗಿಂತ ಭಿನ್ನವಾಗಿದೆ. ಸಂಕೇತಗಳು ನಮ್ಮನ್ನು ತಲುವುವಾಗ ಇಷ್ಟು ಕ್ಷೀಣವಾಗಬೇಕಾದರೆ ನಾವು ಜಗತ್ತಿನಿಂದ ಅದೆಷ್ಟು ದೂರದಲ್ಲಿದ್ದೇವೆ ಎಂದು ಕಲ್ಪಿಸಿಕೊಳ್ಳಬಹುದು' ಎಂದು ಲಂಡನ್ನಿನ ಇಂಪೀರಿಯಲ್ ಕಾಲೇಜಿನ ಥೋಮಸ್ ಪೈಕ್ ಹೇಳುತ್ತಾರೆ.

ಇನ್ಸೈಟ್ ಸೌರ ಫಲಕಕ್ಕೆ ಎದುರಾಗಿ ಬೀಸುವ ಗಾಳಿಯ ಸದ್ದು ಅದು. ಗಾಳಿಗೆ ವೇಗಕ್ಕೆ ಇಡೀ ನೌಕೆ ಕಂಪಿಸುತ್ತಿದ್ದು ಅದರಿಂದ ಹೊಮ್ಮಿದ ಸದ್ದು ಅದಾಗಿರಬೇಕು. ಲ್ಯಾಂಡರ್ ಒಳಗೆ ಭೂಮಿಯ ಗಾಳಿಯ ಒತ್ತಡದಲ್ಲಿರುವ ಸೆನ್ಸರ್ಗಳು ಮುದ್ರಿಸಿಕೊಂಡ ಧ್ವನಿ ಸಂಕೇತಗಳಿವು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕ್ಷೀಣವಾದ ಈ ಸದ್ದನ್ನು ಹೆಡ್ ಪೋನ್ ಹಾಕಿಕೊಂಡು ಸ್ಪಷ್ಟವಾಗಿ ಕೇಳಿಸಿಕೊಳ್ಳಬಹುದು.

ಮಂಗಳದ ಗಾಳಿಯ ಆಡಿಯೊ ಟ್ರ್ಯಾಕ್ www.nasa.gov/insightmarswind ನಲ್ಲಿ ಲಭ್ಯವಿದೆ.

 ಕೆಳಗೆ ಕ್ಲಿಕ್ ಮಾಡಿ ನೀವು ಅದನ್ನು ಕೇಳಬಹುದು: 



No comments:

Post a Comment