ಮೋದಿ
ಸಂಪುಟಕ್ಕೆ
ಉಪೇಂದ್ರ
ಕುಶವಾಹ
ರಾಜೀನಾಮೆ
ನವದೆಹಲಿ: ಕೇಂದ್ರ ಸಚಿವ ಮತ್ತು ಆರ್ಎಲ್ ಎಸ್
ಪಿ ಮುಖ್ಯಸ್ಥ ಉಪೇಂದ್ರ ಕುಶವಾಹ
ಅವರು ಪ್ರಧಾನಿ ಮಂತ್ರಿ ನರೇಂದ್ರ ಮೋದಿ
ಸಚಿವ ಸಂಪುಟಕ್ಕೆ
2018 ಡಿಸೆಂಬರ್
10ರ
ಶನಿವಾರ
ರಾಜೀನಾಮೆ
ಸಲ್ಲಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಬಿಹಾರದಲ್ಲಿ ಸ್ಥಾನ ಹಂಚಿಕೆ ವಿಚಾರವಾಗಿ
ಕುಶವಾಹಜ
ಮತ್ತು
ಬಿಜೆಪಿಯ ನಡುವೆ ಕೆಲವು
ತಿಂಗಳುಗಳಿಂದ
ನಡೆಯತ್ತಿರುವ
ಉದ್ಭವಿಸಿದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ
ಸಂಸತ್ತಿನ
ಚಳಿಗಾಲದ
ಅಧಿವೇಶನಕ್ಕೆ
ಒಂದು ದಿನ ಮುಂಚಿತವಾಗಿ ಈ ಬೆಳವಣಿಗೆ ನಡೆದಿದೆ.
"ಕುಶವಾಹ
ಅವರು ದೆಹಲಿಯಲ್ಲಿ ೨ ಗಂಟೆಗೆ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ," ಎಂದು ಆರ್ಎಲ್ ಎಸ್
ಪಿ ವಕ್ತಾರ ಫಜಲ್ ಇಮಾಮ್ ಮಲಿಕ್ ತಿಳಿಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ
ದೆಹಲಿಯಲ್ಲಿ ಪ್ರಧಾನಿ
ನರೇಂದ್ರ
ಮೋದಿ
ನೇತೃತ್ವದಲ್ಲಿ
ನಡೆಯಲಿರುವ
ಎನ್
ಡಿಎ
ಮೈತ್ರಿಕೂಟದ
ಅಂಗಪಕ್ಷಗಳ ಸಭೆ ದೆಹಲಿಯಲ್ಲಿ ಕುಶವಾಹ
ಅವರು
ಭಾಗವಹಿಸುವುದಿಲ್ಲ
ಎಂದು ಅವರು
ಹೇಳಿದರು.
ಸೀಟು
ಹಂಚಿಕೆ
ವಿಷಯದಲ್ಲಿ
ನಿಲುವು
ಸ್ಪಷ್ಟ
ಪಡಿಸಲು
ನವೆಂಬರ್ ೩೦ ರಂದು ಗಡುವನ್ನು
ಪಕ್ಷವು
ಬಿಜೆಪಿಗೆ ನೀಡಿತ್ತು ಎಂದು ಫಜಲ್
ಸ್ಪಷ್ಟಪಡಿಸಿದರು.
"ಸೀಟು ಹಂಚಿಕೆ
ಕುರಿತು
ಶೀಘ್ರ
ನಿರ್ಧಾರ ತೆಗೆದುಕೊಳ್ಳದಿದ್ದರೆ ಅದು ಎನ್ ಡಿಎಗೆ
ತುಂಬಾ ಹಾನಿಕಾರಕವಾಗಲಿದೆ’
ಎಂದು
ನಾವು
ಎಚ್ಚರಿಸಿದ್ದೆವು.. ನಮಗೆ
ನಾವು ಗೌರವಾನ್ವಿತ ಸಂಖ್ಯೆಯ ಸ್ಥಾನಗಳನ್ನು ಪಡೆಯಬೇಕಾಗಿದೆ
ಎಂದು
ಅವರು
ನುಡಿದರು.
೨೦೧೪ ರ ಚುನಾವಣೆಯಲ್ಲಿ ಎನ್
ಡಿ
ಎ
ಯಲ್ಲಿ
ಬಿಜೆಪಿಯ ಮಿತ್ರ
ಪಕ್ಷವಾಗಿದ್ದ
ಆರ್ಎಲ್ಎಸ್
ಪಿ
ಮೂರು ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ ೨೨ ಸ್ಥಾನಗಳನ್ನು ಮತ್ತು ಎಲ್ ಜೆಪಿ
ಆರು ಸ್ಥಾನಗಳನ್ನು ಪಡೆದಿದ್ದವು.
ಆದರೆ, ಮಹಾಮೈತ್ರಿಯು
ವಿಘಟಿತಗೊಂಡ ಬಳಿಕ ಕಳೆದ ವರ್ಷ ಜೆಡಿ
(ಯು)
ಎನ್
ಡಿಎ
ಗೆ
ವಾಪಸಾದ
ಬಳಿಕ
ಸಮೀಕರಣ ಬದಲಾಯಿತು.
೨೦೧೯ ಲೋಕಸಭೆ ಚುನಾವಣೆಯಲ್ಲಿ ಆರ್ಎಲ್ಎಸ್ಪಿಗೆ ಎರಡು ಸ್ಥಾನಗಳನ್ನೂ
ನೀಡಲಾಗಿಲ್ಲ
ಎಂದು ಕುಶವಾಹ
ಬಿಜೆಪಿಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಹಾರದಲ್ಲಿ
ಬಿಜೆಪಿ
ಮತ್ತು
ಜೆಡಿ(ಯು)
ಸಮಾನ
ಸಂಖ್ಯೆಯ
ಸ್ಥಾನಗಳನ್ನು
ಹಂಚಿಕೊಳ್ಳಲು
ನಿರ್ಧರಿಸಿವೆ.
ಆರ್ಎಲ್ಎಸ್ ಪಿ ಈಗ ವಿರೋಧೀ ಕಾಂಗ್ರೆಸ್ ಜೊತೆ ಕೈ ಜೋಡಿಸಬಹುದು. ಲಾಲು ಪ್ರಸಾದ್ ಅವರ ಆರ್ ಜೆ ಡಿ ಮತ್ತು ಕಾಂಗ್ರೆಸ್ ಈಗಾಗಲೇ ಕಾಂಗ್ರೆಸ್ ಜೊತೆ ಸೇರಿವೆ.
ಆರ್ಎಲ್ಎಸ್ ಪಿ ಈಗ ವಿರೋಧೀ ಕಾಂಗ್ರೆಸ್ ಜೊತೆ ಕೈ ಜೋಡಿಸಬಹುದು. ಲಾಲು ಪ್ರಸಾದ್ ಅವರ ಆರ್ ಜೆ ಡಿ ಮತ್ತು ಕಾಂಗ್ರೆಸ್ ಈಗಾಗಲೇ ಕಾಂಗ್ರೆಸ್ ಜೊತೆ ಸೇರಿವೆ.
ಲೋಕಸಭೆಗೆ ಬಿಹಾರ ೪೦ ಎಂಪಿಗಳನ್ನು ಕಳುಹಿಸುತ್ತದೆ.
No comments:
Post a Comment