ನಾನು ಮೆಚ್ಚಿದ ವಾಟ್ಸಪ್

Thursday, December 27, 2018

ಇಂದಿನ ಇತಿಹಾಸ History Today ಡಿಸೆಂಬರ್ 27

ಇಂದಿನ ಇತಿಹಾಸ History Today ಡಿಸೆಂಬರ್  27
2018: ನವದೆಹಲಿ: ಕಾವೇರಿದ ಚರ್ಚೆಯ ಬಳಿಕ ಕಾಂಗ್ರೆಸ್ ಮತ್ತು ಎಐಎಡಿಎಂಕೆ ಪಕ್ಷಗಳ ಸಭಾತ್ಯಾಗದ ಮಧ್ಯೆ, ಲೋಕಸಭೆಯು ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾದ ಹಾಗೂ ಮುಸ್ಲಿಮ್ ಮಹಿಳೆಯರಿಗೆ ದಿಢೀರ್ ತ್ರಿವಳಿ ತಲಾಖ್ ನೀಡುವುದನ್ನು ದಂಡನೀಯ ಅಪರಾಧವನ್ನಾಗಿ ಮಾಡುವ ಪರಿಷ್ಕೃತ ಮಸೂದೆಗೆ ತನ್ನ ಅನುಮೋದನೆಯನ್ನು ನೀಡಿತುಮಸೂದೆಯನ್ನು ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಮತಕ್ಕೆ ಹಾಕಿದಾಗ ೨೫೦ ಮತಗಳ ಪೈಕಿ ಪರವಾಗಿ ೨೩೮ ಮತ್ತು ವಿರುದ್ಧವಾಗಿ ೧೨ ಮತಗಳು ಬಂದವು. ಸದನದಲ್ಲಿ ಹಾಜರಿದ್ದ ಎಲ್ಲರೂ ಮತ ಚಲಾಯಿಸಿದರು. ಕಾಂಗ್ರೆಸ್, ಎಐಎಂಐಎಂ, ತೃಣಮೂಲ ಕಾಂಗ್ರೆಸ್ ಮತ್ತು ಎನ್ಸಿಪಿ ಸದಸ್ಯರು ಮಸೂದೆಯ ವಿಧಿಗಳು ಸಂವಿಧಾನ ಬಾಹಿರವಾಗಿರುವುದರಿಂದ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು. ಕರಡು ಕಾನೂನನ್ನು ಇನ್ನಷ್ಟು ವಿಶ್ಲೇಷಣೆಗೆ ಒಳಪಡಿಸಬೇಕಾದ ಅಗತ್ಯ ಇದೆ ಎಂದು ಅವರು ಸಭಾತ್ಯಾಗಕ್ಕೆ ಮುನ್ನ ವಾದಿಸಿದರುಪ್ರಸ್ತಾಪಿತ ಕಾನೂನು ತಪ್ಪೆಸಗುವ ಗಂಡಂದಿರಿಗೆ ಮೂರು ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುತ್ತದೆ. ಇದು ತ್ರಿವಳಿ ತಲಾಖ್ನ್ನು ನಿಷೇಧಿಸಿದ ಸುಪ್ರೀಂಕೋರ್ಟಿನ ಆಶಯಕ್ಕೆ ಅನುಗುಣವಾಗಿಲ್ಲ ಎಂದು ವಿರೋಧ ಪಕ್ಷಗಳು ವಾದಿಸಿದವು. ಸುಪ್ರೀಂಕೋರ್ಟ್ ಕಳೆದ ವರ್ಷ ತ್ರಿವಳಿ ತಲಾಖ್ ಪದ್ಧತಿಯನ್ನು ಸಂವಿಧಾನ ಬಾಹಿರ ಎಂಬುದಾಗಿ ಘೋಷಿಸಿತ್ತು. ಒಂದೇ ಉಸಿರಿನಲ್ಲಿ ಮೂರು ಬಾರಿ ತಲಾಖ್ ಹೇಳಿ ಮುಸ್ಲಿಂ ಮಹಿಳೆಯರಿಗೆ ವಿವಾಹ ವಿಚ್ಛೇದನ ನೀಡುವ ಪದ್ಧತಿಯನ್ನು ನಿಷೇಧಿಸುವ ಸಂಬಂಧ ಲೋಕಸಭೆಯು ಹಿಂದೆಯೇ ಅಂಗೀಕರಿಸಿತ್ತು. ಆದರೆ ರಾಜ್ಯ ಸಭೆಯಲ್ಲಿ ಅನುಮೋದನೆ ಲಭಿಸದ ಕಾರಣ ಅದು ಕಾನೂನಾಗಿ ರೂಪುಗೊಂಡಿರಲಿಲ್ಲ. ಹೀಗಾಗಿ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಕಾಯ್ದೆಯನ್ನು ಜಾರಿಗೆ ತಂದಿತ್ತು. ಸುಗ್ರೀವಾಜ್ಞೆಗೆ ಉಭಯ ಸದನಗಳ ಒಪ್ಪಿಗೆ ಬೇಕಾದ ಕಾರಣ ಕೇಂದ್ರವು  ಪರಿಷ್ಕೃತ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ‘ತ್ರಿವಳಿ ತಲಾಖ್ ಮಸೂದೆಯ ಕೆಲವು ಅಂಶಗಳು ಸಂವಿಧಾನ ಬಾಹಿರವಾಗಿವೆ. ಹೀಗಾಗಿ ಇದನ್ನು ಇನ್ನಷ್ಟು ಆಳವಾಗಿ ವಿಶ್ಲೇಷಿಸಬೇಕಾಗಿದೆ. ಆದ್ದರಿಂದ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣಾ ಮಸೂದೆಯನ್ನು ಉಭಯ ಸದನಗಳ ಜಂಟಿ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು. ಮಸೂದೆಯಲ್ಲಿ ತಲಾಖ್ ನೀಡುವ ಮುಸ್ಲಿಂ ಪುರುಷರನ್ನು ಕ್ರಿಮಿನಲ್ ಅಪರಾಧಿಗಳಾಗಿ ಪರಿಗಣಿಸುವ ಮಸೂದೆಯ ವಿಧಿಗಳನ್ನು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತೀವ್ರವಾಗಿ ವಿರೋಧಿಸಿದವು. ಸತತ ನಾಲ್ಕು ಗಂಟೆಗಳ ಕಾವೇರಿದ ಚರ್ಚೆಯಲ್ಲಿ ಮಸೂದೆಯನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರ ವಿರೋಧಿಸಿದ ತತ್ ಕ್ಷಣವೇ ಕಾಂಗ್ರೆಸ್ ಮತ್ತು ಎಐಎಡಿಎಂಕೆ ಸದನದಿಂದ ಹೊರ ನಡೆದವು. ಎಐಎಂ ಪಕ್ಷದ ನಾಯಕ ಅಸಾದುದ್ದೀನ್ ಒವೈಸಿ ಶಬರಿಮಲೈ ವಿಷಯವನ್ನೂ ಪ್ರಸ್ತಾಪಿಸಿ ಮಸೂದೆಯನ್ನು ವಿರೋಧಿಸಿದರು. ಶಬರಿಮಲೈ  ವಿಚಾರವು ನಂಬಿಕೆಯ ಪ್ರಶ್ನೆಯಾದರೆತ್ರಿವಳಿ ತಲಾಖ್ ಕೂಡಾ ನಂಬಿಕೆಯ ಪ್ರಶ್ನೆ ಎಂದು ಅವರು ವಾದಿಸಿದರು. ಹಲವಾರು ವಿರೋಧಿ ಸದಸ್ಯರು ಮಸೂದೆಯಲ್ಲಿ ತ್ರಿವಳಿ ತಲಾಖ್ ನೀಡುವುದನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡುವ ವಿಧಿಗಳನ್ನು ತೆಗೆಯುವಂತೆ  ಆಗ್ರಹಿಸಿದರು. ಆದರೆ ಎನ್ಡಿಎ ಸದಸ್ಯರು ಅಖಂಡವಾಗಿ ಮಸೂದೆಯನ್ನು ಬೆಂಬಲಿಸಿದರುಎಐಎಡಿಎಂಕೆಯ ಪಿ. ವೇಣುಗೋಪಾಲ್, ಟಿಎಂಸಿ ಸದಸ್ಯ ಸುದೀಪ್ ಬಂದೋಪಾಧ್ಯಾಯ, ಎನ್ ಸಿಪಿಯ ಸುಪ್ರೀಯಾ ಸುಳೆ, ಕಾಂಗ್ರೆಸ್ಸಿನ ಸುಷ್ಮಿತಾ ದೇವಿ ಅವರೂ ಮಸೂದೆಯಲ್ಲಿನ ಅಪರಾಧೀಕರಣದ ವಿಧಿಯನ್ನು ವಿರೋಧಿಸಿದರು. ಮಸೂದೆಯು ಮುಸ್ಲಿಂ ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿಲ್ಲ, ಬದಲಿಗೆ ಮುಸ್ಲಿಂ ಪುರುಷರನ್ನು ದಂಡಿಸುತ್ತದೆ ಅಷ್ಟೆ ಎಂದು ಸುಷ್ಮಿತಾ ದೇವಿ ಹೇಳಿದರು. ವಿರೋಧಿ ಸದಸ್ಯರ ಆಕ್ಷೇಪಗಳನ್ನು ತಳ್ಳಿಹಾಕಿದ ಕಾನೂನು ಸಚಿವ ರವಿಶಂಕರ ಪ್ರಸಾದ್ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಉದ್ದೇಶವನ್ನು ಮಸೂದೆ ಹೊಂದಿದೆ. ಮಸೂದೆಯ ಯಾವುದೇ ಮತ, ಧರ್ಮಕ್ಕೆ ವಿರುದ್ಧವಲ್ಲ. ಇದು ನ್ಯಾಯಮತ್ತು ಮಹಿಳೆಯರ ಸಮಾನತೆಗೆ ಸಂಬಂಧಪಟ್ಟದ್ದು. ದಿಢೀರ್ ತ್ರಿವಳಿ ತಲಾಖ್ ಭಾರತದಲ್ಲಿ ಇನ್ನೂ ಮುಂದುವರಿಯುತ್ತಿರುವುದರಿಂದ ನಾವು ಸುಗ್ರೀವಾಜ್ಞೆ ತಂದಿದ್ದೇವೆ. ಇದರ ಉದ್ದೇಶ ಯಾರನ್ನೂ ಬಲಿಪಶುವನ್ನಾಗಿ ಮಾಡುವುದಲ್ಲ. ೨೦ಕ್ಕೂ ಹೆಚ್ಚು ಮುಸ್ಲಿಂ ರಾಷ್ಟ್ರಗಳು ತ್ರಿವಳಿ ತಲಾಖ್ ನ್ನು ನಿಷೇಧಿಸಿವೆ ಎಂದು ಪ್ರಸಾದ್ ಹೇಳಿದರು. ಪುರುಷ ಮತ್ತು ವಿಚ್ಛೇದಿತ ಪತ್ನಿ ರಾಜಿಗೆ ಒಪ್ಪಿದಲ್ಲಿ ಪ್ರಕರಣವನ್ನು ಹಿಂತೆಗೆದುಕೊಳ್ಳಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮತ್ತು ಪತ್ನಿ ಮತ್ತು ಆಕೆಯ ನಿಕಟ ಬಂಧುಗಳು ಮಾತ್ರವೇ ಎಫ್ ಆರ್ ದಾಖಲಿಸಬಹುದು. ಹೀಗಾಗಿ ಕಾಯ್ದೆಯ ದುರಪಯೋಗದ ಸಾಧ್ಯತೆ ಇಲ್ಲ ಎಂದು ಅವರು ಪ್ರತಿಪಾದಿಸಿದರು. ಕಾನೂನು ಸಚಿವರ ಭಾಷಣಕ್ಕೆ ವಿರೋಧಿ ಸದಸ್ಯರು ನಿರಂತರ ಅಡ್ಡಿ ಪಡಿಸಿದರು. ಕಾಂಗ್ರೆಸ್ ಪಕ್ಷವು ಚರ್ಚೆಯಲ್ಲಿ ಪಾಲ್ಗೊಳ್ಳಲು ಒಪ್ಪಿದ ಬಳಿಕ ಕಳೆದ ಡಿಸೆಂಬರ್ ೨೭ರಂದು ಮಸೂದೆಯನ್ನು ಚರ್ಚೆಗೆ ಎತ್ತಿಕೊಳ್ಳಲು ಕಳೆದ ವಾರ ನಿರ್ಧರಿಸಲಾಗಿತ್ತು. ಮಸೂದೆಯನ್ನು ಚರ್ಚೆಗೆ ಪರಿಗಣಿಸುವ ಪ್ರಸ್ತಾಪ ಬರುತ್ತಿದ್ದಂತೆಯೇ ಖರ್ಗೆ ಅವರು ಮಸೂದೆಯನ್ನು ಮುಂದಿನವಾರ ಚರ್ಚಿಸಬಹುದು ಎಂದು ಹೇಳಿದ್ದರು. ಕಲಾಪಕ್ಕೆ ಭಂಗವಾಗದಂತೆ ಚರ್ಚೆ ನಡೆಸುವುದಾಗಿ ವಿಪಕ್ಷಗಳು ಭರವಸೆ ನೀಡಬೇಕು ಎಂದು ಸಂಸದೀಯ ವ್ಯವಹಾರಗಲ ಸಚಿವ ನರೇಂದ್ರ ಸಿಂಗ್ ತೋಮರ್ ಆಗ್ರಹಿಸಿದ್ದರುಬಿಜೆಪಿಯು ತನ್ನ ಸಂಸದರಿಗೆ ಸದನದಲ್ಲಿ ಹಾಜರು ಇರುವಂತೆ ವಿಪ್ ಜಾರಿಮಾಡಿತ್ತು. ಕಾಂಗ್ರೆಸ್ ಕೂಡಾ ತನ್ನ ಸದಸ್ಯರಿಗೆ ವಿಪ್  ನೀಡಿತ್ತು.

2018: ನವದೆಹಲಿ: ಐಸಿಸ್ (ಇಸ್ಲಾಮಿಕ್ ಸ್ಟೇಟ್) ಪ್ರೇರಿತ ಉಗ್ರ ಸಂಘಟನೆಯ ಸಂಪರ್ಕ ಹೊಂದಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ೧೦ ಮಂದಿಯನ್ನು ದೆಹಲಿಯ ನ್ಯಾಯಾಲಯವೊಂದು ೧೨ ದಿನಗಳ ಅವಧಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ವಶಕ್ಕೆ ಒಪ್ಪಿಸಿತು. ಬಂಧಿತ ಆರೋಪಿಗಳೆಲ್ಲರನ್ನೂ ಭಾರೀ ಬಂದೋಬಸ್ತಿನಲ್ಲಿ ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಅಜಯ್ ಪಾಂಡೆ ಅವರ ಮುಂದೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಪ್ರಕರಣದ ಕಲಾಪಗಳನ್ನು ಕ್ಯಾಮರಾದಲ್ಲಿ ದಾಖಲಿಸಿಕೊಳ್ಳಲು ಆದೇಶಿಸಿದರು. ರಾಷ್ಟ್ರೀಯ ತನಿಖಾ ಸಂಸ್ಥೆಯು ರಾಜಧಾನಿ ಮತ್ತು  ಉತ್ತರ ಪ್ರದೇಶದ ೧೭ ಕಡೆಗಳಲ್ಲಿ ಬುಧವಾರ ಬೆಳಗ್ಗಿನಿಂದ ಶೋಧ ನಡೆಸಿದ ಬಳಿಕ ದೆಹಲಿ, ಅಮ್ರೋಹ, ಲಕ್ನೋ ಮತ್ತು ಮೀರತ್ನಲ್ಲಿ ಆರೋಪಿಗಳನ್ನು ಬಂಧಿಸಿತ್ತು. ಗುಂಪಿನ ಚಟುವಟಿಕೆಗಳ ಮೇಲೆ ಕನಿಷ್ಠ ತಿಂಗಳ ಕಾಲ ಹದ್ದುಗಣ್ಣು ಇರಿಸಿದ ಬಳಿಕ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಶೋಧದ ವೇಳೆಯಲ್ಲಿ ೧೨ ಪಿಸ್ತೂಲು, ಒಂದು ಕಂಟ್ರಿ ಮೇಡ್ ರಾಕೆಟ್ ಲಾಂಚರ್ ಮತ್ತಿತರ ವಸ್ತುಗಳು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪತ್ತೆ ಹಚ್ಚಲಾಗಿರುವ ಐಸಿಸ್ ಪ್ರೇರಿತ ಉಗ್ರ ಸಂಘಟನೆಯು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಹಿರಿಯ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ನಾಯಕರ ಮೇಲೆ ಮತ್ತು ಜನಸಂದಣಿಯ ಮಾರುಕಟ್ಟೆಗಳ ಮೇಲೆ ಹೊಸ ವರ್ಷಾರಂಭಕ್ಕೂ ಮುಂಚಿತವಾಗಿ ವ್ಯಾಪಕ ದಾಳಿ ನಡೆಸಲು ಯೋಜನೆ ರೂಪಿಸಿದ್ದರು ಎಂದು ಎನ್ಐಎ ಹೇಳಿದೆ. ಇಸ್ಲಾಮಿಕ್ ಸ್ಟೇಟ್ (ಐಸಿಸ್) ಪರ ಭಯೋತ್ಪ್ಪಾದಕ ಗುಂಪುಹರ್ಕತ್ -ಉಲ್-ಹರ್ಬ್--ಇಸ್ಲಾಮ್ ಯೋಜನೆಯ ಹಿಂದಿತ್ತು. ಹರ್ಕತ್-ಉಲ್-ಇಸ್ಲಾಮ್ ಸಂಘಟನೆಯು ಆಫ್ಘಾನಿಸ್ಥಾನದ ಯೋಜಕನ ಜೊತೆ ಸೇರಿ ಷಡ್ಯಂತ್ರ ರೂಪಿಸಿತ್ತು ಎಂದು ಭಾವಿಸಲಾಗಿದೆ ಎಂದ ಪರಿಚಯ ಬಹಿರಂಗ ಪಡಿಸಲು ನಿರಾಕರಿಸಿದ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಹೇಳಿದರು. ಅವರ ಪ್ರಕಾರ ಆಫ್ಘಾನಿಸ್ಥಾನದ ವ್ಯಕ್ತಿ ಬಂಧಿತರಿಗೆ ತರಬೇತಿಗೆ ವ್ಯವಸ್ಥೆ ಮಾಡುವುದರ ಜೊತೆಗೆ ಹಣಕಾಸು ನೆರವನ್ನೂ ನೀಡುತ್ತಿದ್ದ ಎಂದು ಅವರು ನುಡಿದರು. ಗುಂಪಿನ ಸ್ಥಳೀಯ ನಾಯಕನನ್ನು ಈಶಾನ್ಯ ದೆಹಲಿಯ ಜಾಫರಾಬಾದ್ ನಿವಾಸಿ ಮುಫ್ತಿ ಮೊಹಮ್ಮದ್ ಸುಹೈಲ್ ಎಂಬುದಾಗಿ ಗುರುತಿಸಲಾಗಿದ್ದು, ಆತ ಪ್ರಸ್ತುತ ಉತ್ತರ ಪ್ರದೇಶದ ಅಮ್ರೋಹದಲ್ಲಿ ಮಸೀದಿಯೊಂದರ ಮೌಲ್ವಿಯಾಗಿದ್ದ. ಗುಂಪು ಗಣರಾಜ್ಯ ದಿನದ ಪರೇಡ್ನ್ನು ಗುರಿಯಾಗಿ ಇಟ್ಟುಕೊಂಡಿತ್ತೇ ಎಂಬ ಬಗ್ಗೆ ಎನ್ ಐಎ ತನಿಖೆಗಾರರು ತನಿಖೆ ನಡೆಸುತ್ತಿದ್ದಾರೆ. ಗುಂಪಿನ ೧೬ ಸದಸ್ಯರನ್ನು ತನಿಖಾ ಸಂಸ್ಥೆಯು ಈವರೆಗೆ ಗುರುತಿಸಿದೆ.. ಲಕ್ನೋದ ೪೫ರ ಹರೆಯದ ಮಹಿಳೆ ಮತ್ತು ಆಕೆಯ ಪುತ್ರ ಗುಂಪಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ಇತರ ಕಡೆಗಳಿಂದಲೂ ಹಣಕಾಸು ಒದಗಿಸುತ್ತಿದ್ದರು ಎಂದು ಶಂಕಿಸಲಾಯಿತು.

2018: ಇಸ್ಲಾಮಾಬಾದ್: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಯ ಅಡಿಯಲ್ಲಿ ಚೀನಾವು ತೊಡಗಿಸುವ  ೨೬. ಬಿಲಿಯನ್ (೨೬೫೦ ಕೋಟಿ) ಡಾಲರ್ ಹೂಡಿಕೆಯ ಮೇಲೆ ಪಾಕಿಸ್ತಾನವು ೨೦ ವರ್ಷಗಳಲ್ಲಿ ಸಾಲ ಮತ್ತು ಡಿವಿಡೆಂಡ್ ರೂಪದಲ್ಲಿ ೪೦ ಬಿಲಿಯನ್ (೪೦೦೦ ಕೋಟಿ) ಡಾಲರ್ಗಳನ್ನು ಮರು ಪಾವತಿ ಮಾಡಲಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿತು. ಸಿಪಿಇಸಿಯಲ್ಲಿ ಚೀನೀ ಹೂಡಿಕೆಯ ಮೊತ್ತ ಸುಮಾರು ೫೦ ಬಿಲಿಯನ್ (೫೦೦೦ ಕೋಟಿ) ಡಾಲರುಗಳು ಎಂದು ಹಿಂದೆ ವ್ಯಾಪಕವಾಗಿ ವರದಿಯಾಗಿತ್ತು. ಆದರೆ ಈಗ ಬಂದಿರುವ ಪತ್ರಿಕಾ ವರದಿಯ ಪ್ರಕಾರ ಮೊತ್ತ ಇದರ ಅರ್ಧದಷ್ಟು ಎಂದು ಬಹಿರಂಗಗೊಳಿಸಿತು. ಸಾಲ ಮರುಪಾವತಿ ರೂಪದಲ್ಲಿ ಪಾವತಿಸಲಾಗುವ ೩೯.೮೩ ಬಿಲಿಯನ್ ಡಾಲರ್ ಮೊತ್ತದಲ್ಲಿ ಇಂಧನ ಮತ್ತು ಮೂಲಸವಲತ್ತು ಯೋಜನೆಗಳ ಮೊತ್ತ ೨೮.೪೩ ಬಿಲಿಯನ್ ಡಾಲರುಗಳಾಗುತ್ತವೆ ಎಂದು ಯೋಜನೆ ಮತ್ತು ಅಭಿವೃದ್ಧಿ ಸಚಿವಾಲಯದ ದಾಖಲೆಗಳನ್ನು ಉಲ್ಲೇಖಿಸಿ ದಿನಪತ್ರಿಕೆಯೊಂದು ವರದಿ ಮಾಡಿತು. ಉಳಿದ ೧೧. ಬಿಲಿಯನ್ ಡಾಲರುಗಳನ್ನು ಹೂಡಿಕೆದಾರರಿಗೆ ಲಾಭಾಂಶವಾಗಿ (ಡಿವಿಡೆಂಡ್) ರೂಪದಲ್ಲಿ ಪಾವತಿ ಮಾಡಲಾಗುವುದು ಎಂದು ಅಧಿಕೃತ ಅಂಕಿಸಂಖ್ಯೆಗಳು ಹೇಳಿದವು. ಅಂಕಿಸಂಖ್ಯೆಗಳು ಕೆಲವು ಖಾಸಗಿ ಸಂಸ್ಥೆಗಳು ಅಂದಾಜು ಮಾಡಿದ್ದಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿವೆ ಎಂದು ಪತ್ರಿಕಾ ವರದಿ ತಿಳಿಸಿತು. ‘ಸಿಪಿಇಸಿ ಹೂಡಿಕೆ ಮೊತ್ತ್ತ ೫೦ ಬಿಲಿಯನ್ ನಿಂದ ೬೨ ಬಿಲಿಯನ್ ಡಾಲರುಗಳಷ್ಟಿದೆ ಎಂಬ ಪ್ರತಿಪಾದನೆಗಳು ಸರಿಯಲ್ಲ, ನೈಜ ಹೂಡಿಕೆ ಪ್ರಾರಂಭದಲ್ಲಿ ಪ್ರಕಟಿಸಿದ ಹೂಡಿಕೆ ಮೊತ್ತದ ಅರ್ಧದಷ್ಟು ಮಾತ್ರವೇ ಆಗಿರುವ ಸಾಧ್ಯತೆ ಇದೆ ಎಂದು ವರದಿ ಹೇಳಿತು. ಮುಂದಿನ ಕೆಲವರ್ಷಗಳಲ್ಲಿ ಅನುಷ್ಠಾನಗೊಳ್ಳಲಿರುವ ಏಕೈಕ ಪ್ರಮುಖ ಯೋಜನೆಯೆಂದರೆ ಪಾಕಿಸ್ತಾನ ರೈಲ್ವೇಯ . ಬಿಲಿಯನ್ ಡಾಲರ್ ಮೊತ್ತದ ಮೆಯಿನ್ ಲೈನ್ - ಯೋಜನೆ ಮಾತ್ರ ಎಂದು ವರದಿ ತಿಳಿಸಿದೆ. ಇದರ ಯೋಜನಾ ವೆಚ್ಚ ಅಂದಾಜುಗಳಲ್ಲಿ ಸೇರ್ಪಡೆಯಾಗಿಲ್ಲ. ಹಣಕಾಸು ಸಚಿವಾಲಯವು ಅಂದಾಜುಗಳನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜೊತೆಗೂ ಕಳೆದ ತಿಂಗಳು ಹಂಚಿಕೊಂಡಿದೆ ಎಂದು ಸಿಪಿಇಸಿ ವ್ಯವಹಾರಗಳ ಕುರಿತ ಸರ್ಕಾರಿ ವಕ್ತಾರರು ಪತ್ರಿಕೆಗೆ ದೃಢ ಪಡಿಸಿದ್ದಾರೆರಾಷ್ಟ್ರವು ಚೀನಾಕ್ಕೆ ವಾರ್ಷಿಕ ಸರಾಸರಿ ಬಿಲಿಯನ್ ಡಾಲರ್ ಹಣವನ್ನು ಪಾವತಿ ಮಾಡಲಿದೆ. ಈಗ ಬಹಿರಂಗಗೊಂಡಿರುವ ಅಂಕಿಸಂಖ್ಯೆಗಳು ಜಾರಿಯಾಗುತ್ತಿರುವ ಯೋಜನೆಗೆ ಸಂಬಂಧಿಸಿದಂತೆ ಹೂಡಿಕೆಯಾಗುವ ಮೊತ್ತದ ಮತ್ತು ಇಂಧನ ಮತ್ತು ಮೂಲಸವಲತ್ತು ಯೋಜನೆಗಳ ಸಾಲ ಸೇವೆಗಳಿಗಾಗಿ ಹಾಗೂ ವಿದ್ಯುತ್ ಯೋಜನೆಗಳ ಲಾಭಾಂಶ ರೂಪದ ಮರುಪಾವತಿಗಳ ಸಮಗ್ರ ಅಂದಾಜು ಎಂದು ಹೇಳಲಾಯಿತು. ಸಿಪಿಇಸಿ ಖಾತೆಯು ಪ್ರಸ್ತುತ ಖಾಸಗಿ ಹೂಡಿಕೆದಾರರು ಸ್ಥಾಪಿಸುವ ಇಂಧನ ಯೋಜನೆಗಳು ಮತ್ತು ಸರ್ಕಾರವು ಕೈಗೆತ್ತಿಕೊಂಡಿರುವ ಮೂಲಸವಲತ್ತು ಯೋಜನೆಗಳನ್ನು ಒಳಗೊಂಡಿದೆ.  ಶೇಕಡಾ ೨ರಿಂದ ಗರಿಷ್ಠ ಶೇಕಡಾ . ರಷ್ಟು ಬಡ್ಡಿಯ . ಬಿಲಿಯನ್ ಡಾಲರುಗಳ ಸಾಲಕ್ಕೆ ಸರ್ಕಾರ ಸಹಿ ಹಾಕಿದೆ. ಶೇಕಡಾ .೨ರ ಬಡ್ಡಿಯಲ್ಲಿ ಒಟ್ಟು ೭೭೪ ಮಿಲಿಯನ್ ಡಾಲರುಗಳ ಮೂರು ಸಾಲಗಳನ್ನು ಸರ್ಕಾರವು ಪಡೆದಿದೆ. ಲಂಡನ್ ಇಂಟರ್ ಬ್ಯಾಂಕ್ ಕೊಡುಗೆಯ ಶೇಕಡಾ .೫ರ ಹೆಚ್ಚುವರಿ ವಾಣಿಜ್ಯ ಸಾಲಗಳನ್ನೂ ವಿದ್ಯುತ್ ಘಟಕಗಳ ಸ್ಥಾಪನೆಗಾಗಿ ವ್ಯವಸ್ಥೆ ಮಾಡಲಾಗಿದೆ. ಸಿಪಿಇಸಿ ಯೋಜನೆಗಳಿಗಾಗಿ ಬರುವ ಹಣ ೨೦೨೨-೨೩ರಲ್ಲಿ ೨೬. ಬಿಲಿಯನ್ ಡಾಲರ್ಗಳು ರಾಷ್ಟ್ರಕ್ಕೆ ಬರುವುದರೊಂದಿಗೆ ನಿಂತು ಹೋಗಲಿದೆ ಎಂದು ಯೋಜನಾ ಸಚಿವಾಲಯದ ಅಂಕಿಸಂಖ್ಯೆಗಳು ತಿಳಿಸಿವೆ. ಒಳಹರಿವಿನ ಆಧಾರದಲ್ಲಿ ರಾಷ್ಟ್ರವು ಚೀನೀ ಸಂಸ್ಥೆಗಳಿಗೆ ೩೯.೮೩ ಬಿಲಿಯನ್ ಡಾಲರುಗಳನ್ನು ಮರುಪಾವತಿ ಮಾಡಬೇಕಾಗುತ್ತದೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಅಂದಾಜು ಮಾಡಿದರು.

2018: ಲಕ್ನೋ: ಗ್ರೇಟರ್ ನೋಯ್ಡಾ ಸೆಕ್ಟರ್ ೩೭ರಲ್ಲಿಕಥಾ ಕಾರ್ಯಕ್ರಮಕ್ಕಾಗಿ ಹಾಕಲಾಗಿದ್ದ ಪಂಡಾಲ್ನ್ನು ಗ್ರೇಟರ್ ನೋಯ್ಡಾ ಪ್ರಾಧಿಕಾರದ ಅಧಿಕಾರಿಗಳು ಕಿತ್ತು ಹಾಕಿದ ಘಟನೆ ಘಟಿಸಿತು. ಸಂಘಟಕರು ಕಾರ್ಯಕ್ರಮ ಸಂಘಟಿಸಲು ಪರವಾನಗಿ ಪಡೆದುಕೊಂಡಿಲ್ಲವಾದ ಕಾರಣ ಅದನ್ನು ಕಿತ್ತು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಸೆಕ್ಟರ್ ೫೮ರ ಸಾರ್ವಜನಿಕ ಉದ್ಯಾನದಲ್ಲಿ ನಮಾಜ್ ಮಾಡುವುದು ಕಂಡರೆ ನಿಮ್ಮ ನೌಕರರನ್ನೇ ಹೊಣೆ ಮಾಡಲಾಗುವುದು ಎಂದು ನೋಯ್ಡಾ ಪೊಲೀಸರು ಕಂಪೆನಿಗಳಿಗೆ ಎಚ್ಚರಿಕೆ ನೀಡಿದ ಕೆಲವೇ ದಿನಗಳ ಬಳಿಕ ಘಟನೆ ಘಟಿಸಿತು. ಹಿಂದಿನ ದಿನ ಗ್ರೇಟರ್ ನೋಯ್ಡಾ ಅಧಿಕಾರಿಗಳಿಗೆ ಸೆಕ್ಟರ್ ೩೭ರ ಕೆಲವು ನಿವಾಸಿಗಳಿಂದ ಪ್ರದೇಶದಲ್ಲಿಕಥಾ ಸಮಾರಂಭಕ್ಕೆ ಸಿದ್ಧತೆ ನಡೆಯುತ್ತಿರುವ ಬಗ್ಗೆ ದೂರು ಬಂದಿತು. ಹಿನ್ನೆಲೆಯಲಿ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಪ್ರಾಧಿಕಾರದ ಅಧಿಕಾರಿಗಳು ಪಂಡಾಲ್ ಕಿತ್ತು ಹಾಕಿದರು.   ‘ಕೆಲವು ವ್ಯಕ್ತಿಗಳು ಅನುಮತಿ ಇಲ್ಲದೇ ಪಂಡಾಲ್ ಹಾಕಿ ಕಾರ್ಯಕ್ರಮ ಸಂಘಟಿಸಿರುವುದಾಗಿ ಕೆಲವು ವ್ಯಕ್ತಿಗಳಿಂದ ನಮಗೆ ಮಾಹಿತಿ ಬಂತು. ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಯಿತು ಮತ್ತು ಕಾರ್ಯಕ್ರಮ ನಡೆಸುತ್ತಿದ್ದ ವ್ಯಕ್ತಿಗಳಿಗೆ ಕಾರ್ಯಕ್ರಮ ಸಂಘಟಿಸಬಯಸುವುದಿದ್ದರೆ ಗ್ರೇಟರ್ ನೋಯ್ಡಾ ಪ್ರಾಧಿಕಾರದಿಂದ ಅನುಮತಿ ಪಡೆಯುವಂತೆ ಸೂಚಿಸಲಾಗಿದೆ. ಪೊಲೀಸ್ ಮತ್ತು ಸಿಟಿ ಮ್ಯಾಜಿಸ್ಟ್ರೇಟ್ ಪರಿಶೀಲಿಸಿದ ಬಳಿಕ ಪ್ರಾಧಿಕಾರವು ಕಾರ್ಯಕ್ರಮಕ್ಕೆ ಅನುಮತಿ ನೀಡಬಹುದು ಎಂದು ಗ್ರೇಟರ್ ನೋಯ್ಡಾ ಪ್ರಾಧಿಕಾರದ ಹೆಚ್ಚುವರಿ ಮುಖ್ಯ ಎಕ್ಸಿಕ್ಯೂಟಿವ್ ಅಧಿಕಾರಿ ಕೃಷ್ಣ ಕುಮಾರ್ ಗುಪ್ತ ಹೇಳಿದರು.
ಸಂಘಟಕರು ನಮ್ಮ ಅನುಮತಿ ಪಡೆದಿರಲಿಲ್ಲ ಮತ್ತು ಗ್ರೇಟರ್ ನೋಯ್ಡಾ ಪ್ರಾಧಿಕಾರ ನಂತರ ಕೈಗೊಂಡ ಕ್ರಮದಲ್ಲಿ ತಮ್ಮ ಪಾತ್ರವಿಲ್ಲ ಎಂದು ಪೊಲೀಸರು ಸ್ಪಷ್ಟ ಪಡಿಸಿದರು. ಗ್ರೇಟರ್ ನೋಯ್ಡಾ ಪ್ರಾಧಿಕಾರದ ಅಧಿಕಾರಿಗಳ ತಂಡವೊಂದು ಸೆಕ್ಟರ್ ೩೭ರಲ್ಲಿ ಕೆಲವು ನಿವಾಸಿಗಳು ಹಾಕಿದ್ದ ಪಂಡಾಲ್ ನ್ನು ಕಿತ್ತು ಹಾಕಿತು. ನಿವಾಸಿಗಳು ಕಥಾ ಕಾರ್ಯಕ್ರಮ ನಡೆಸಲು ಪ್ರಾಧಿಕಾರದ ಅನುಪತಿ ಪಡೆದಿರಲಿಲ್ಲ. ಪಂಡಾಲ್ ಕಿತ್ತು ಹಾಕಿದ ಘಟನೆಯಲ್ಲಿ ಪೊಲೀಸರ ಪಾತ್ರವೇನೂ ಇಲ್ಲ ಎಂದು ಕಸ್ನಾಸ್ಟೇಷನ್ ಹೌಸ್ ಅಧಿಕಾರಿ ರಾಂಫಲ್ ಸಿಂಗ್ ನುಡಿದರುಪ್ರಾಧಿಕಾರದ ಕ್ರಮವನ್ನು ಹಲವರು ಪ್ರತಿಭಟಿಸಿದರು. ಅದರೆ ಪ್ರತಿಭಟನೆ ಹೆಚ್ಚು ತೀವ್ರಗೊಳ್ಳಲಿಲ್ಲ.  ‘ಗ್ರೇಟರ್ ನೋಯ್ಡಾ ಪ್ರಾಧಿಕಾರದಿಂದ ಅನುಮತಿ ಪಡೆದ ಬಳಕ ಕಾರ್ಯಕ್ರಮ ಮುಂದುವರೆಸಬಹುದು ಎಂಬುದಾಗಿ ನಾವು ಭಕ್ತರಿಗೆ ತಿಳಿಸಿದ್ದೇನೆ. ಅವರು ಅದಕ್ಕೆ ಒಪ್ಪಿದ್ದು, ಪ್ರತಿಭಟನೆ ನಿಲ್ಲಿಸಿದರು ಎಂದು ಸಿಂಗ್ ಹೇಳಿದರು. ಸ್ಥಳದಲ್ಲಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸ್ಥಾಪಿಸಿದ್ದ ಹಿಂದು ಯುವ ವಾಹಿನಿಯ ಗೌತಮ ಬುದ್ಧ ನಗರ ಘಟಕದ ಅಧ್ಯಕ್ಷ ಚೈನಪಾಲ್ ಭಾಟಿ ಅವರುಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಭಕ್ತರು ಕಥಾ ಕಾರ್ಯಕ್ರಮ ನಡೆಸಲು ಅನುಮತಿ ಪಡೆದಿರಲಿಲ್ಲವಾದ ಕಾರಣ ಕ್ರಮ ಕೈಗೊಳ್ಳಲಾಗಿದೆ ಅಷ್ಟೆ ಎಂದು ಹೇಳಿದರು. ಪಾರ್ಕಿನಲ್ಲಿ ನಮಾಜ್ ಮಾಡುವುದರ ವಿರುದ್ಧ ನೋಯ್ಡಾ ಪೊಲೀಸರು ನೀಡಿದ ನೋಟಿಸ್ ರಾಜಕೀಯ ವಲಯದಲ್ಲಿ ಕೋಲಾಹಲ ಉಂಟು ಮಾಡಿದ್ದು, ೨೦೧೯ರ ಮಹಾಚುನಾವಣೆಗೆ ಮುನ್ನ ಉತ್ತರ ಪ್ರದೇಶದಲ್ಲಿ ಆಳುವ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಅಧಿಕಾರಿಗಳು ಸಮಾಜದಲ್ಲಿ ವಿಭಜನೆ ಹುಟ್ಟು ಹಾಕುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷ ಆಪಾದಿಸಿತು. ಸೆಕ್ಟರ್ ೫೮ರ ಪಾರ್ಕಿನಲ್ಲಿ ನಮಾಜ್ ನಡೆಸಲು ಸ್ಥಳಾವಕಾಶ ನೀಡುವಂತೆ ಕೋರಿದ್ದ ಜನರಿಗೆ ನಗರ ಮ್ಯಾಜಿಸ್ಟ್ರೇಟ್ ಅವರು ಅನುಮತಿ ನೀಡದೇ ಇದ್ದಕಾರಣ ಪೊಲೀಸರು ನೋಯ್ಡಾದ ಕಂಪೆನಿಗಳಿಗೆ ನೋಟಿಸ್ ನೀಡಿದ್ದಾರೆ ಎಂದು ಹೇಳುವ ಮೂಲಕ ಗೌತಮ ಬುದ್ಧ ನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿ.ಎನ್. ಸಿಂಗ್ ಅವರು ಪೊಲೀಸರ ನೆರವಿಗೆ ಬಂದಿದ್ದರು.

2017:  ಶಿಮ್ಲಾ: ಜೈರಾಮ್ ಥಾಕೂರ್ ಅವರು ಇಲ್ಲಿನ ಚಾರಿತ್ರಿಕ ರಿಜ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಲಾಲ್ ಕೃಷ್ಣ ಅಡ್ವಾಣಿ, ಹಲವಾರು ಕೇಂದ್ರ ಸಚಿವರು ಮತ್ತು ಹಿರಿಯ ಬಿಜೆಪಿ ನಾಯಕರ ಸಮ್ಮುಖದಲ್ಲಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿ ಧ್ವಜಗಳಿಂದಾಗಿ ಸಂಪೂರ್ಣ ಕೇಸರಿಮಯವಾಗಿದ್ದ ರಿಜ್ ಮೈದಾನದಲ್ಲಿ ಎಲ್ಲೆಡೆಯಲ್ಲೂ ಮೋದಿ, ಶಾ ಮತ್ತು ಥಾಕೂರ್ ಅವರ ಕಟೌಟ್ ಗಳು ರಾರಾಜಿಸುತ್ತಿದ್ದವು. ೬೮ ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ೪೪ ಸ್ಥಾನಗಳನ್ನು ಗಳಿಸಿದೆ. ಥಾಕೂರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡುವ ಮೂಲಕ ಭಾನುವಾರ ಉನ್ನತ ಹುದ್ದೆಯ ಅಭ್ಯರ್ಥಿಯನ್ನು ಪಕ್ಷವು ಅಂತಿಮಗೊಳಿಸಿತ್ತು. ತಮ್ಮ ಸರ್ಕಾರವು ಹಿಂದಿನ ಕಾಂಗ್ರೆಸ್ ಸರ್ಕಾರ ಬೆಳೆಸಿದ್ದ ’ವಿಐಪಿ ಸಂಸ್ಕೃತಿಗೆ ಕೊನೆ ಹಾಡಲಿದೆ ಎಂದು ಥಾಕೂರ್ ಈ ಸಂದರ್ಭದಲ್ಲಿ ನುಡಿದರು. ಥಾಕೂರ್ ಅವರ ಮಂಡಿ ಕ್ಷೇತ್ರದ ಸೆರಾಜ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹಿಮಾಚಲ ಬಿಜೆಪಿ ಸರ್ಕಾರವು ರಾಜ್ಯದ ಹಿತಕ್ಕಾಗಿ ಅವಿರತ ಶ್ರಮಿಸಲಿದೆ ಎಂದು ಪ್ರಧಾನಿ ಮೋದಿ ಹಾರೈಸಿದರು.  ಥಾಕೂರ್ ಜೊತೆಗೆ ಪ್ರಮಾಣ ವಚನ ಸ್ವೀಕರಿಸಿದ ಇತರ ಸಚಿವರು: ಮಹೇಂದ್ರ ಸಿಂಗ್ (ಮಂಡಿ ಜಿಲ್ಲೆಯ ಧರಮ್ ಪುರ್ ಕ್ಷೇತ್ರ), ಸುರೇಶ ಭಾರಧ್ವಾಜ್ (ಶಿಮ್ಲಾ ಜಿಲ್ಲೆ),  ಕಿಷನ್ ಕಪೂರ್ (ಧರ್ಮಶಾಲಾ ಕ್ಷೇತ್ರ ಕಾಂಗ್ರಾ ಜಿಲ್ಲೆ), ಅನಿಲ್ ಶರ್ಮ (ಮಂಡಿ ಜಿಲ್ಲೆ), ಸರ್ವೀನ್ ಚೌಧರಿ (ಶಹಾಪುರ, ಕಾಂಗ್ರಾ ಜಿಲ್ಲೆ), ರಾಮ್ ಲಾಲ್ ಮಾರ್ಕಾಂಡ (ಲಾಹುಲ್ ಮತ್ತು ಸ್ಪಿತಿ), ವಿಪಿನ್ ಸಿಂಗ್ ಪರ್ಮಾರ (ಸುಲಹ್ ಕ್ಷೇತ್ರ ಕಾಂಗ್ರಾ ಜಿಲ್ಲೆ), ವೀರೇಂದ್ರ ಕನ್ವರ್ (ಕುಟ್ಲೆಹರ್ ಕ್ಷೇತ್ರ ಉನಾ ಜಿಲ್ಲೆ), ಗೋಬಿಂದ್ ಸಿಂಗ್ (ಮನಾಲಿ, ಕುಲು ಜಿಲ್ಲೆ), ರಾಜೀವ್ ಸಜ್ಜಲ್ (ಕೌಸಾಲಿ, ಸೋಲನ್ ಜಿಲ್ಲೆ).

2017: ನವದೆಹಲಿ: ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರು ಸಂವಿಧಾನ ಬದಲಾವಣೆಗೆ ಸಂಬಂಧಿಸಿದಂತೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಸತ್ತಿನ ಉಭಯ ಸದನಗಳಲ್ಲೂ ವಿಪಕ್ಷಗಳು ಒಟ್ಟಾಗಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿ, ಪ್ರತಿಭಟಿಸಿದ್ದರಿಂದ ಸದನ ಕಲಾಪಗಳು ಅಸ್ತವ್ಯಸ್ತಗೊಂಡವು. ಕಲಾಪ ಆರಂಭವಾಗುವುದಕ್ಕೆ  ಮುನ್ನವೇ ಕಾಂಗ್ರೆಸ್ ಲೋಕಸಭೆಯಲ್ಲಿ ನಿಲುವಳಿ ಸೂಚನೆ ನೀಡಿದ್ದರೆ ರಾಜ್ಯಸಭೆಯಲ್ಲಿ ಕಲಾಪ ಅಮಾನತು ನೋಟಿಸ್ ನೀಡಿತ್ತು. ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಅವರು ಸಂವಿಧಾನಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯ ಮೇಲೆ ಲೋಕಸಭೆಯಲ್ಲಿ ನಿಲುವಳಿ ಸೂಚನೆಯನ್ನು ಕಾಂಗ್ರೆಸ್ ನೀಡಿತ್ತು.  ರಾಜ್ಯಸಭೆಯಲ್ಲಿ ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ಸದಸ್ಯನ ಸಭಾಪತಿಯವರ ಪೀಠದ ಮುಂಭಾಗಕ್ಕೆ ಧಾವಿಸಿ ಘೋಷಣೆಗಳನ್ನು ಕೂಗಿ ಹೆಗಡೆ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿದರು. ಪರಿಣಾಮವಾಗಿ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ಕಲಾಪವನ್ನು ಮೊದಲ ೧೨ ಗಂಟೆವರೆಗೆ ಮುಂದೂಡಿದರು.  ’ಜಾತ್ಯತೀತ ಪದ ಬಳಸಿರುವ ಸಂವಿಧಾನವನ್ನು ತಮ್ಮ ಪಕ್ಷವು ಶೀಘ್ರದಲ್ಲೇ ಬದಲಾಯಿಸಲಿದೆ ಎಂದು ಎಂದು ಹೆಗಡೆ ಹೇಳಿದ್ದರು. ’ತಮ್ಮನ್ನು ತಾವೇ ಜಾತ್ಯತೀತು ಎಂದು ಹೇಳಿಕೊಳ್ಳುವುದು ಈಗ ಕೆಲವು ಜನರಿಗೆ ಗೀಳಾಗಿದೆ ಎಂದೂ ಹೆಗಡೆ ಟೀಕಿಸಿದ್ದರು.  ಹೆಗಡೆ ಅವರು ಮಂಡಿಸಬೇಕಾಗಿದ್ದ ಕಾಗದಪತ್ರಗಳನ್ನು ಮಂಡಿಸಲು ಎದ್ದು ನಿಲ್ಲುತ್ತಿದ್ದಂತೆಯೇ ವಿಪಕ್ಷ ಸದಸ್ಯರು ಪ್ರತಿಭಟಿಸಲು ಆರಂಭಿಸಿದ್ದರಿಂದ ಸದನಲ್ಲಿ ಗದ್ದಲ ಉಂಟಾಯಿತು. ’ಶೇಮ್ ಶೇಮ್ ಎಂಬುದಾಗಿ ಕೂಗುತ್ತಾ ಗದ್ದಲ ನಡೆಸಿದ ವಿಪಕ್ಷ ಸದಸ್ಯರು ತಮ್ಮ ಹೇಳಿಕೆ ಬಗ್ಗೆ ಹೆಗಡೆ ತತ್ ಕ್ಷಣ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವ ಹೆಗಡೆ ಅವರನ್ನು ತತ್ ಕ್ಷಣ ಸಂಪುಟದಿಂದ ಕೈಬಿಡಬೇಕು ಎಂದು ವಿಪಕ್ಷಗಳು ಸದನದಲ್ಲಿ ಆಗ್ರಹಿಸಿದವು. ಆದರೆ ಹೆಗಡೆ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಕೇಂದ್ರ ಸಚಿವ ವಿಜಯ್ ಗೋಯಲ್ ಅವರು ರಾಜ್ಯಸಭೆಯಲ್ಲಿ ಒಂದು ಹಂತದಲ್ಲಿ ಸಮಜಾಯಿಷಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಇತರರ ಬಗ್ಗೆ ನೀಡಿದ ಹೇಳಿಕೆಯ ಮೇಲೆ ಕಲಾಪ ಅಮಾನತುಗೊಳಿಸುವ ಸೂಚನೆಯನ್ನು ಮೇಲ್ಮನೆಯಲ್ಲಿ ಕಾಂಗ್ರೆಸ್ ನೀಡಿತ್ತು.  ನಾಲ್ಕು ದಿನಗಳ ವಿರಾಮದ ಬಳಿಕ ಬುಧವಾರ ಸಮಾವೇಶಗೊಂಡ ಸಂಸತ್ತಿನಲ್ಲಿ ಕಾಂಗ್ರೆಸ್ ಸದಸ್ಯರು ಗುಜರಾತ್ ಚುನಾವಣಾ ಪ್ರಚಾರ ಕಾಲದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಇತರರ ಬಗ್ಗೆ ಮಾಡಿದ ಟೀಕೆಗಾಗಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಸಚಿವ ಅನಂತ ಕುಮಾರ್ ಹೆಗಡೆ ಅವರ ವಿವಾದಾತ್ಮಕ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಬಳಿಕ ಲೋಕಸಭಾ ಕಲಾಪವನ್ನು ಮತ್ತೆ ಮಧ್ಯಾಹ್ನ ೨.೪೫ರವರೆಗೆ ಮುಂದೂಡಲಾಯಿತು.
ನಾವು ಸಂವಿಧಾನ ತಿದ್ದುಪಡಿ ಮಾಡಲು ಬಂದಿದ್ದೇವೆ. ಜಾತ್ಯತೀತ ಎಂಬ ಶಬ್ದದ ತಿದ್ದುಪಡಿಯಾಗಬೇಕು ಎಂದು ಅನಂತ ಕುಮಾರ್ ಹೆಗಡೆ ಇತೀಚೆಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಎಡೆ ಮಾಡಿತ್ತು. ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲೂ ಅನಂತ ಕುಮಾರ್ ಹೆಗಡೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಕಿವಿಮಾತು ಹೇಳಿಸುವ ಬಗೆಗೂ ಚರ್ಚೆ ನಡೆದಿತ್ತು. ಗದ್ದಲದ ಮಧ್ಯೆ ಲೋಕಸಭೆ ಕಲಾಪವನ್ನು ಎರಡೆರಡು ಬಾರಿ ಮುಂದೂಡಲಾಯಿತು.  ಜೇಟ್ಲಿ ಸ್ಪಷ್ಟನೆ: ರಾಜ್ಯಸಭೆಯಲ್ಲಿ ಸಚಿವ ಅರುಣ್ ಜೇಟ್ಲಿ ಅವರು ಹೇಳಿಕೆ ನೀಡಿ ಪ್ರಧಾನಿಯವರು ತಮ್ಮ ಭಾಷಣಗಳಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಥವಾ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಈ ರಾಷ್ಟ್ರದ ಬಗ್ಗೆ ಹೊಂದಿರುವ ಬದ್ಧತೆಯನ್ನು ಪ್ರಶ್ನಿಸಿಲ್ಲ. ಅಂತಹ ಯಾವುದೇ ಗ್ರಹಿಕೆ ತಪ್ಪು. ಈ ನಾಯಕರ ಬಗ್ಗೆ ಹಾಗೂ ರಾಷ್ಟ್ರದ ಬಗ್ಗೆ ಅವರಿಗೆ ಇರುವ ಬದ್ದತೆ ನಮಗೆ ಅತೀವ ಗೌರವ ಇದೆ ಎಂದು ಜೇಟ್ಲಿ ರಾಜ್ಯಸಭೆಯಲ್ಲಿ ಹೇಳಿದರು. ಅನಂತ ಕುಮಾರ್ ಹೆಗಡೆ ಅವರ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ಧುರೀಣ ಗುಲಾಂ ನಬಿ ಆಜಾದ್ ಅವರು ’ಸಂವಿಧಾನದಲ್ಲಿ ನಂಬಿಕೆ ಇಲ್ಲದ ಸಚಿವರು ಸಂಪುಟದಲ್ಲಿ ಇರಬೇಕೆ? ಇದು ಮೂಲಭೂತ ಪ್ರಶ್ನೆ. ಸಚಿವರ ಸದನಕ್ಕೆ ಬಂದು ಸದನ ಮತ್ತು ರಾಷ್ಟ್ರದ ಕ್ಷಮೆಯಾಚಿಸಬೇಕು. ಅವರು ಕ್ಷಮೆ ಕೇಳದೇ ಇದ್ದಲ್ಲಿ ಅವರನ್ನು ಸಂಪುಟದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಅರುಣ್ ಜೇಟ್ಲಿ ಅವರ ಹೇಳಿಕೆ ಬಳಿಕ ಹೇಳಿಕೆ ನೀಡಿದ ಗುಲಾಂ ನಬಿ ಆಜಾದ್ ಅವರು ’ಸದನದ ನಾಯಕರು ವಿಷಯಕ್ಕೆ ಸಂಬಂಧಿಸಿದಂತೆ ನೀಡಿದ ಸ್ಪಷ್ಟನೆಗಾಗಿ ವಂದನೆ ಅರ್ಪಿಸುತ್ತೇನೆ. ನನ್ನ ಪಕ್ಷದ ಪರವಾಗಿ  ಚುನಾವಣೆ ಸಂದರ್ಭದಲ್ಲಿ ಯಾರೇ ಸದಸ್ಯರು ಪ್ರಧಾನಿಯವರ ವರ್ಚಸ್ಸಿಗೆ ಹಾನಿಯಾಗುವಂತೆ ನೀಡಿದ ಹೇಳಿಕೆಯಿಂದ ಪಕ್ಷವು ದೂರ ಇರುತ್ತದೆ ಎಂಬು ಹೇಳಬಯಸುತ್ತೇನೆ. ಭವಿಷ್ಯದಲ್ಲಿ ಇಂತಹ ಘಟನೆಗಳಾಗದಿರಲಿ ಎಂದು ನಾವು ಬಯಸುತ್ತೇವೆ ಎಂದು ಅವರು ನುಡಿದರು. ಚರ್ಚೆಯ ಮಧ್ಯೆ ಮಾತನಾಡಿದ ಕಾಂಗ್ರೆಸ್ ಧುರೀಣ ಎಂ. ವೀರಪ್ಪ ಮೊಯಿಲಿ ಅವರು ಕುಲಭೂಷಣ್ ಜಾಧವ್ ಅವರು ಕುಟುಂಬ ಸದಸ್ಯರನ್ನು ಪಾಕಿಸ್ತಾನವು ನಡೆಸಿಕೊಂಡ  ರೀತಿ ಅಮಾನವೀಯ. ಕುಟುಂಬಕ್ಕೆ ಯಾವ ರೀತಿಯ ಶಿಷ್ಟಾಚಾರದ ವ್ಯವಸ್ಥೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೊದಲೇ ಖಚಿತ ಪಡಿಸಿಕೊಳ್ಳಬೇಕಾಗಿತ್ತು. ಇದು ನಮ್ಮ ವಿದೇಶಾಂಗ ಸಚಿವಾಲಯದ ಪಾಲಿಗೆ ಸಂಬಂಧಿಸಿದಂತೆ ರಾಜತಾಂತ್ರಿಕ ವೈಫಲ್ಯ. ಪ್ರಧಾನಿಯವರು ಈ ಬಗ್ಗೆ ಪಾಕ್ ಪ್ರಧಾನಿ ಜೊತೆ ಮಾತನಾಡಬೇಕಿತ್ತು ಎಂದು ಅವರು ಹೇಳಿದರು.

2017: ನವದೆಹಲಿ: ಕುಲಭೂಷಣ್ ಜಾಧವ್ ಜೊತೆಗೆ ಡಿಸೆಂಬರ್ ೨೫ರಂದು ಇಸ್ಲಾಮಾಬಾದಿನಲ್ಲಿ ನಡೆದ ಕುಟುಂಬ ಸದಸ್ಯರ ಭೇಟಿ ಕಾಲದಲ್ಲಿ ಜಾಧವ್ ಪತ್ನಿ ಧರಿಸಿದ್ದ ಶೂಗಳಲ್ಲಿ ’ಲೋಹದ ವಸ್ತುವನ್ನು ಪತ್ತೆ ಮಾಡಗಿದ್ದು,  ಅದನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪಾಕಿಸ್ತಾನ ಪ್ರತಿಪಾದಿಸಿರುವುದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿದವು. ಶೂಗಳಲ್ಲಿ ಇದ್ದ ’ಲೋಹದ ವಸ್ತು ಕ್ಯಾಮರಾ ಇರಬಹುದೇ ಅಥವಾ ರೆಕಾರ್ಡಿಂಗ್ ಚಿಪ್ ಇರಬಹುದೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ವಿದೇಶಾಂಗ ಕಚೇರಿಯ ವಕ್ತಾರ ಮೊಹಮ್ಮದ್ ಫೈಸಲ್ ಅವರನ್ನು ಉಲ್ಲೇಖಿಸಿ ’ಪಾಕಿಸ್ತಾನ್ ಟುಡೆ ವರದಿ ಮಾಡಿತು. ‘ಜಾಧವ್ ಪತ್ನಿ ಧರಿಸಿದ್ದ ಶೂಗಳಲ್ಲಿ ಲೋಹದ ವಸ್ತು ಪತ್ತೆಯಾಗಿದೆ ಎಂದು ವಿದೇಶಾಂಗ ಕಚೇರಿ ದೃಢಪಡಿಸಿದೆ. ಭೇಟಿಗೆ ಮುನ್ನ ಈ ಶೂಗಳನ್ನು ಭದ್ರತಾ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದು ಇಟ್ಟುಕೊಂಡಿದ್ದರು ಎಂದು ’ಡಾನ್ ವರದಿ ಮಾಡಿತು. ಜಾಧವ್ ಪತ್ನಿಯ ಶೂಗಳನ್ನು ತಪಾಸಣೆ ಸಲುವಾಗಿ ಇರಿಸಿಕೊಳ್ಳಲಾಗಿದೆ. ಚಿನ್ನಾಭರಣ ಸೇರಿದಂತೆ ಇತರ ವಸ್ತುಗಳನ್ನು ಹಿಂತಿರುಗಿಸಲಾಗಿದೆ ಎಂದು ಮೊಹಮ್ಮದ್ ಫೈಸಲ್ ಹೇಳಿದರು. ತಾನು ಧರಿಸಿದ್ದ ಶೂ ಕಳಚಿದ ಬಳಿಕ ಧರಿಸಲು ಪ್ರತ್ಯೇಕ ಶೂಗಳನ್ನು ಆಕೆಗೆ ಒದಗಿಸಲಾಗಿತ್ತು ಎಂದು ಅವರು ನುಡಿದರು. ಹಿಂದಿನ ಹೇಳಿಕೆಯಲ್ಲಿ ಪಾಕ್ ವಿದೇಶಾಂಗ ಕಚೇರಿ ’ಲೋಹದ ವಸ್ತು ಬಗ್ಗೆ ಯಾವುದೇ ಪ್ರಸ್ತಾಪವನ್ನೂ ಮಾಡಿರಲಿಲ್ಲ. ಶೂಗಳಲ್ಲಿ ಏನೋ ಇತ್ತು ಎಂದು ಹೇಳಿತ್ತು. ಭೇಟಿ ಕಾಲದಲ್ಲಿ ಜಾಧವ್ ತಾಯಿ ಮತ್ತು ಪತ್ನಿಗೆ ಕಿರುಕುಳ ನೀಡಲಾಯಿತು ಎಂಬ ಭಾರತದ ಪ್ರತಿಪಾದನೆ ’ಆಧಾರ ರಹಿತ ಎಂದು ಪಾಕಿಸ್ತಾನ ತಿರಸ್ಕರಿಸಿದೆ. ಜಾಧವ್ ಪತ್ನಿಯ ಶೂಗಳಲ್ಲಿ ಏನೋ ಇದ್ದುದರಿಂದ ಭದ್ರತಾ ನೆಲೆಯಲ್ಲಿ ಅವುಗಳನ್ನು ವಶ ಪಡಿಸಿಕೊಳ್ಳಲಾಯಿತು ಎಂದು ಅವರು ನುಡಿದರು.
ಜಾಧವ್ ಅವರ ತಾಯಿ ಮತ್ತು ಪತ್ನಿಯ ಬಿಂದಿ, ಬಳೆಗಳು ಮತ್ತು ಮಂಗಳಸೂತ್ರವನ್ನು ಜಾಧವ್ ಭೇಟಿಗೆ ಮುನ್ನವೇ ತೆಗೆಸಲಾಯಿತು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.  ಭದ್ರತೆಯ ಹೆಸರಿನಲ್ಲಿ ಸಂಸ್ಕೃತಿ ಕುಟುಂಬ ಸದಸ್ಯರ ಧಾರ್ಮಿಕ ಸೂಕ್ಷ್ಮತೆ ಮತ್ತು ಸಂಸ್ಕೃತಿಯ ಬಗ್ಗೆ ಪಾಕಿಸ್ತಾನ ಅಗೌರವ ತೋರಿಸಿದೆ ಎಂದೂ ಭಾರತ ಆಪಾದಿಸಿದೆ. ’ಮಂಗಳಸೂತ್ರ, ಕೈಬಳೆಗಳು ಮತ್ತು ಬಿಂದಿಯನ್ನು ತೆಗೆಸುವ ಮತ್ತು ಉಡುಪು ಬದಲಾವಣೆ ಮಾಡುವ ಅಗತ್ಯ ಇರಲಿಲ್ಲ ಎಂದು ಭಾರತದ ಹೇಳಿಕೆ ತಿಳಿಸಿತ್ತು. ಆದರೆ ಭಾರತದ ಆಪಾದನೆಯನ್ನು ತಿರಸ್ಕರಿಸಿದ ಪಾಕಿಸ್ತಾನದ ವಿದೇಶಾಂಗ ಕಚೇರಿ ’ಅರ್ಥ ರಹಿತ ವಾಗ್ಯುದ್ಧದಲ್ಲಿ ತೊಡಗಲು ನಾವು ಬಯಸುವುದಿಲ್ಲ ಎಂದು ಹೇಳಿತು. ಭಾರತೀಯ ಅಧಿಕಾರಿಗಳು ಭೇಟಿಯ ೨೪ ಗಂಟೆ ಬಳಿಕ ಈ ಆಪಾದನೆಗಳನ್ನು ಮಾಡಿದ್ದಾರೆ. ಭಾರತದ ಕಾಳಜಿ ಗಂಭಿರವಾದುದಾಗಿದ್ದರೆ ಭಾರತದ ಡೆಪ್ಯುಟಿ ಹೈಕಮೀಷನರ್ ಗಳು ಭೇಟಿ ಕಾಲದಲ್ಲೇ ವಿಷಯ ಪ್ರಸ್ತಾಪಸಿಬಹುದಿತ್ತು ಎಂದು ಪಾಕಿಸ್ತಾನ ಹೇಳಿತು.

2017: ಪಾಟ್ನಾ: ಬಿಹಾರ ರಾಜ್ಯದ ಎಲ್ಲ ೩೯,೦೭೩ ಗ್ರಾಮಗಳಿಗೂ ಈಗ ವಿದ್ಯುದೀಕರಣ ಮಾಡಲಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಲ್ಲಿ ತಿಳಿಸಿದರು. ರಾಜ್ಯದ ಪ್ರತಿಮನೆಯೂ ಮುಂದಿನ ವರ್ಷಾಂತ್ಯದ ವೇಳೆಗೆ ಉಚಿತ ವಿದ್ಯುತ್ ಸಂಪರ್ಕ ಹೊಂದಿರುತ್ತದೆ ಎಂದು ಅವರು ನುಡಿದರು. ‘ಉತ್ತಮ ಆಡಳಿತದ ಏಳು ನಿರ್ಧಾರಗಳ ಭಾಗವಾಗಿ ಈ ನಿಟ್ಟಿನ ಪ್ರಯತ್ನಗಳನ್ನು ನಡೆಸಲಾಗಿದೆ ಎಂದು ನಿತೀಶ್ ಕುಮಾರ್ ಹೇಳಿದರು. ೨೦೦೫ರಲ್ಲಿ ಅಧಿಕಾರಕ್ಕೆ ಬಂದಂದಿನಿಂದ ನಾವು ಸಾಕಷ್ಟು ದೂರ ಸಾಗಿದ್ದೇವೆ. ಹಿಂದೆ ಸಣ್ಣ ಪಟ್ಟಣಗಳು ಮತ್ತು ಗ್ರಾಮಗಳು ವಿದ್ಯುತ್ ಪಡೆಯುವ ಆಸೆಯನ್ನೇ ಬಿಟ್ಟು ಬಿಟ್ಟಿದ್ದವು. ರಾಜಧಾನಿ ಪಾಟ್ನಾದಲ್ಲೂ ವಿದ್ಯುತ್ ಪರಿಸ್ಥಿತಿ ತೃಪ್ತಿಕರವಾಗಿ ಇರಲಿಲ್ಲ ಎಂದು ಮುಖ್ಯಮಂತ್ರಿ ನುಡಿದರು. ೨೦೦೫ರಲ್ಲಿ ಬಿಹಾರ ರಾಜ್ಯದಲ್ಲಿ ಎನ್‌ಡಿ ಎ ಅಧಿಕಾರಕ್ಕೆ ಬಂದಾಗ ಮೊತ್ತ ಮೊದಲ ಬಾರಿಗೆ ನಿತೀಶ್ ಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ೨೦೧೪ರ ಮಹಾಚುನಾವಣೆಯಲ್ಲಿ ಜನತಾದಳ (ಯು) ಪರಾಭವಗೊಂಡಾಗ ಅಧಿಕಾರ ತ್ಯಜಿಸಿ ಜಿತನ್ ರಾಮ್ ಮಾಂಜ್ಹಿ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಿದ ವೇಳೆಯಲ್ಲಿ ಕೆಲವು ತಿಂಗಳು ಹೊರತು ಪಡಿಸಿ ಈ ಎಲ್ಲ ವರ್ಷಗಳಲ್ಲೂ ಅವರೇ ಮುಖ್ಯಮಂತ್ರಿಯಾಗಿದ್ದರು. ವಿದ್ಯುತ್ ಅಭಾವದಿಂದ ಕಂಗೆಟ್ಟಿರುವ ರಾಜ್ಯದ ವಿದ್ಯುತ್ ಪರಿಸ್ಥಿತಿ ಸುಧಾರಿಸುವುದಕ್ಕೆ ತಮ್ಮ ಸರ್ಕಾರ ಅಗ್ರ ಪ್ರಾಶಸ್ತ್ಯ ನೀಡಿದೆ ಎಂದು ಕುಮಾರ್ ಹಲವಾರು ಸಂದರ್ಭಗಳಲ್ಲಿ ಹೇಳಿದ್ದರು. ರಾಜ್ಯದ ಎಲ್ಲ ೩೯,೦೭೩ ಗ್ರಾಮಗಳು ವಿದ್ಯುದೀಕರಣಗೊಂಡಿವೆ ಎಂಬುದಾಗಿ ರಾಜ್ಯ ವಿದ್ಯುತ್ ಇಲಾಖೆ ಸಂಘಟಿಸಿದ ಸಮಾರಂಭದಲ್ಲಿ ಘೋಷಿಸಿದ ಅವರು ೩,೦೩೦.೫೨ ಕೋಟಿ ರೂಪಾಯಿ ಮೌಲ್ಯದ ವಿದ್ಯುತ್ ಯೋಜನೆಗಳಿಗೆ ಶಿಲಾನ್ಯಾಸವನ್ನೂ ನೆರವೇರಿಸಿದರು. ಎಲ್ಲ ಗ್ರಾಮಗಳಿಗೆ ವಿದ್ಯುತ್ ತರುವುದು ಸುಲಭದ ಕೆಲಸವಲ್ಲ. ಅದು ರಸ್ತೆ ನಿರ್ಮಾಣಕ್ಕಿಂತಲೂ ಕಷ್ಟದ ಕೆಲಸ. ಆದರೆ ೨೦೧೭ರ ಅಂತ್ಯದ ವೇಳೆಗೆ ಎಲ್ಲ ಗ್ರಾಮಗಳನ್ನು ವಿದ್ಯುದೀಕರಿಸುವ ಗುರಿಯನ್ನು ನಾವು ಸಾಧಿಸಿದ್ದೇವೆ ಎಂದು ಹೇಳಲು ಸಂತಸವಾಗುತ್ತದೆ. ೨೦೧೮ರ ಡಿಸೆಂಬರ್ ೩೧ರ ಒಳಗಾಗಿ ಪ್ರತಿಮನೆಗೂ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿಯನ್ನು ಸಾಧಿಸುವ ವಿಶ್ವಾಸವೂ ನಮಗಿದೆ ಎಂದು ಜೆಡಿ (ಯು) ಮುಖ್ಯಸ್ಥ ಹೇಳಿದರು. ಪ್ರತಿಗ್ರಾಮ ಮತ್ತು ಪ್ರತಿ ಮನೆಗೆ ವಿದ್ಯುತ್ ಒದಗಿಸುವ ತಮ್ಮ ಸರ್ಕಾರದ ನಿರ್ಧಾರ ಈ ದೇಶದ ಎಲ್ಲೆಡೆಯಲ್ಲೂ ಅನುಕರಣೆಯಾಗುತ್ತಿದೆ. ಕೇಂದ್ರ ಸರ್ಕಾರದ ಸೌಭಾಗ್ಯ ಯೋಜನೆಯು ನಮ್ಮ ’ಹರ್ ಘರ್ ಬಿಜಲಿ ಲಗಾತಾರ್ ಯೋಜನೆಯಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ನಿತೀಶ್ ಕುಮಾರ್ ನುಡಿದರು.

2017: ಮುಂಬೈ: ೨೦೦೮ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಾದ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಮತ್ತು ಸಾದ್ವಿ ಪ್ರಜ್ಞಾ ಅವರು ತಮ್ಮನ್ನು ಸಂಪೂರ್ಣ ಖುಲಾಸೆಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಗಳನ್ನು ಮುಂಬೈಯ ವಿಶೇಷ ಎನ್ ಐಎ ಕೋರ್ಟ್ ತಿರಸ್ಕರಿಸಿತು.  ಆದರೆ ಎಲ್ಲ ಆರೋಪಿಗಳನ್ನೂ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯ (ಎಂಕೋಕ) ಕಠಿಣ ವಿಧಿಗಳಿಂದ ಮುಕ್ತಗೊಳಿಸಿತು. ಎನ್ ಐಎ ಕೋರ್ಟ್ ತೀರ್ಪಿನ ಪರಿಣಾಮವಾಗಿ ಪುರೋಹಿತ್, ಮತ್ತು ಸಾದ್ವಿ ಪ್ರಜ್ಞಾ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳೂ ಇದೀಗ ಭಯೋತ್ಪಾದನೆ ನಿಗ್ರಹ ಕಾಯ್ದೆಯ ಅಡಿಯಲ್ಲಿ ವಿಚಾರಣೆ ಎದುರಿಸಬೇಕಾಗಿದೆ. ಆರೋಪಿಗಳು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಅಡಿಯಲ್ಲಿ ಭಯೋತ್ಪಾದಕ ಕೃತ್ಯ ಎಸಗುವಿಕೆ, ಕ್ರಿಮಿನಲ್ ಷಡ್ಯಂತ್ರ ಹಾಗೂ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಧಿಗಳ ಅಡಿಯಲ್ಲಿ ಕ್ರಿಮಿನಲ್ ಒಳಸಂಚು, ಕೊಲೆ, ಕೊಲೆಯತ್ನ ಮತ್ತು ಉದ್ದೇಶಪೂರ್ವಕವಾಗಿ ಇತರರಿಗೆ ಹಾನಿ ಉಂಟು ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುವರು ಎಂದು ಕೋರ್ಟ್ ಹೇಳಿತು. ಭಯೋತ್ಪಾದಕ ಕೃತ್ಯ ಎಸಗುವುದಕ್ಕೆ ಸಂಬಂಧಿಸಿದ ಯುಎಪಿಎಯ ಸೆಕ್ಷನ್ ೧೬ರ ಅಡಿಯಲ್ಲಿ ಅಪರಾಧ ಸಾಬೀತಾದರೆ ಮರಣ ದಂಡನೆ ಮತ್ತು ಜೀವಾವಧಿ ಸಜೆ ವಿಧಿಸಬಹುದು. ಸಾಧ್ವಿ ಮತ್ತು ಪುರೋಹಿತ್ ಹೊರತಾಗಿ ಸುಧಾಕರ ದ್ವಿವೇದಿ, ನಿವೃತ್ತ ಮೇಜರ್ ರಮೇಶ ಉಪಾಧ್ಯಾಯ, ಸಮೀರ್ ಕುಲಕರ್ಣಿ, ಸುಧಾಕರ ಚತುರ್ವೇದಿ ಮತ್ತು ಅಜಯ್ ರಾಹಿರ್ಕರ್ ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಲಿದ್ದಾರೆ. ಪ್ರಸ್ತುತ ಎಲ್ಲ ಆರೋಪಿಗಳು ಜಾಮೀನಿನ ಅಡಿ ಬಿಡುಗಡೆಯಾಗಿದ್ದಾರೆ. ಜಗದೀಶ್ ಮ್ಹಾತ್ರೆ ಮತ್ತು ರಾಕೇಶ್ ಧ್ವಾಡೆ  ಅವರು ಕೇವಲ ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲಿ ವಿಚಾರಣೆ ಎದುರಿಸುವರು ಎಂದು ಕೋರ್ಟ್ ಹೇಳಿತು. ಶ್ಯಾಮ್ ಸಾಹು, ಶಿವನಾರಾಯಣ ಕಲ್ಸಂಗ್ರ ಮತ್ತು ಪ್ರವೀಣ್ ತಕಾಲ್ಕಿ ಅವರನ್ನು ನ್ಯಾಯಾಲಯ ಎಲ್ಲ ಆರೋಪಗಳಿಂದ ಮುಕ್ತಗೊಳಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಜನವರಿ ೧೫ರಂದು ನಡೆಯಲಿದೆ. ೨೦೦೮ರ ಸೆಪ್ಟೆಂಬರ್ ೨೯ರಂದು ಮುಂಬೈಯಿಂದ ೨೭೦ ಕಿಮೀ ದೂರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ಪಟ್ಟಣದಲ್ಲಿ ಸಂಭವಿಸಿದ ಮೋಟಾರ್ ಸೈಕಲ್ ಬಾಂಬ್ ಸ್ಫೋಟದಲ್ಲಿ ೬ ಜನ ಹತರಾಗಿ ಇತರ ೧೦೦ ಜನ ಗಾಯಗೊಂಡಿದ್ದರು. ಮೋಟಾರ್ ಸೈಕಲನ್ನು  ಷಡ್ಯಂತ್ರಕ್ಕಾಗಿ ಬಳಸಲಾಗುತ್ತಿದೆ ಎಂಬ ಅರಿವು ಇದ್ದ ಕಾರಣ ಸಾದ್ವಿ ಪ್ರಜ್ಞಾ ಅವರನ್ನು ಆರೋಪಗಳಿಂದ ಮುಕ್ತರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟ ಪಡಿಸಿತು. ೨೦೦೮ರ ಅಕ್ಟೋಬರ್ ತಿಂಗಳಲ್ಲಿ ಬಂಧಿಸಲ್ಪಟ್ಟಿದ್ದ ಸಾಧ್ವಿ ಮತ್ತು ಪುರೋಹಿತ್ ಅವರು ಅಭಿನವ ಭಾರತ್ ಹೆಸರಿನ ಬಲಪಂಥೀಯ ಹಿಂದು ಸಮೂಹದ ಯೋಜನೆ ಪ್ರಕಾರ ಸ್ಫೋಟ ಸಂಚು ಹೆಣೆದಿದ್ದರು ಎಂದು ಆಪಾದಿಸಲಾಗಿತ್ತು. ಈ ವರ್ಷ ಆಗಸ್ಟ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಪುರೋಹಿತ್ ಅವರಿಗೆ ಜಾಮೀನು ನೀಡಿತ್ತು. ಈ ವರ್ಷದ ಆದಿಯಲ್ಲಿ ಬಾಂಬೆ ಹೈಕೋರ್ಟ್ ಸಾಧ್ವಿ ಪ್ರಜ್ಞಾ ಅವರನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಿತ್ತು.

2017: ಬೀಜಿಂಗ್: ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಗೆ ಆಫ್ಘಾನಿಸ್ಥಾನವನ್ನು ಸೇರ್ಪಡೆ ಮಾಡುವ ಪ್ರಸ್ತಾವವನ್ನು ಚೀನಾ ಮುಂದಿಟ್ಟಿದ್ದು, ಇದು ಭಾರತಕ್ಕೆ ಕಿರಿಕಿರಿ ಉಂಟು ಮಾಡುವ ಸಾಧ್ಯತೆಗಳಿವೆ. ಚೀನಾ, ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನ ಈ ಮೂರು ರಾಷ್ಟ್ರಗಳ ಮೊತ್ತ ಮೊದಲ ವಿದೇಶಾಂಗ ಸಚಿವರ ಸಭೆಯ ಹಿನ್ನೆಲೆಯಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಸಿಪಿಇಸಿ ಯೋಜಯ ಬಾಗಿಲನ್ನು ಕಾಬೂಲ್ ಗೆ ತೆರೆಯುವ ಪ್ರಸ್ತಾಪ ಮಾಡಿದರು. ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಮೂಲಕ ಹಾದು ಹೋಗುವ ಈ ಯೋಜನೆಯಿಂದ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕಾಗಿ ಭಾರತ ಸಿಪಿಇಸಿ ಯೋಜನೆಯನ್ನು ವಿರೋಧಿಸಿದೆ. ಬೀಜಿಂಗ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಾಂಗ್, ಜನರ ಬದುಕಿನ ಸುಧಾರಣೆ ದೃಷ್ಟಿಯಿಂದ ಸಂಪರ್ಕ ಯೋಜನೆಗಳಲ್ಲಿ ಆಫ್ಘಾನಿಸ್ಥಾನ ಪಾಲ್ಗೊಳ್ಳಬಹುದು ಎಂಬುದಾಗಿ ಸಲಹೆ ಮಾಡಿದರು. ಹೀಗಾಗಿ ಚೀನಾ ಮತ್ತು ಪಾಕಿಸ್ತಾನ ಎಲ್ಲರಿಗೂ ಗೆಲುವು ತತ್ವದ ಅಡಿಯಲ್ಲಿ ಪರಸ್ಪರ ಅನುಕೂಲಕ್ಕಾಗಿ ಯೋಜನೆಯನ್ನು ಆಫ್ಘಾನಿಸ್ಥಾನದತ್ತ ವಿಸ್ತರಿಸಲು ಆಸಕ್ತವಾಗಿವೆ ಎಂದು ವಾಂಗ್ ಅವರನ್ನು ಉಲ್ಲೇಖಿಸಿ ಪಾಜೋವೊಕ್ ಆಫ್ಘಾನ್ ನ್ಯೂಸ್ ವರದಿ ಮಾಡಿತು.
  
2016: ನವದೆಹಲಿ: ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಗುಜರಾತ್ ಮತ್ತು ಒಡಿಶಾ ನಡುವಿನ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುಜರಾತ್ ಆರಂಭಿಕ ಆಟಗಾರ ಸಮಿತ್ ಗೋಹೆಲ್ ವಿಶ್ವದಾಖಲೆಯ ಆಟವಾಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಐತಿಹಾಸಿಕ ಸಾಧನೆ ಮಾಡಿದರು.. 26 ವರ್ಷದ ಗೋಹೆಲ್ ಒಡಿಶಾ ವಿರುದ್ಧದ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಅಜೇಯ 359 ರನ್ ಪೇರಿಸಿದರು. ಮೂಲಕ ಆರಂಭಿಕ ಆಟಗಾರನೋರ್ವ ಗಳಿಸಿದ ಅತ್ಯಧಿಕ ರನ್ ಎಂದು ಗೋಹೆಲ್ ಆಟ ವಿಶ್ವದಾಖಲೆಯ ಪುಟಗಳಲ್ಲಿ ಸೇರ್ಪಡೆಯಾಯಿತು. ಇದಕ್ಕೂ ಮುನ್ನ ಇಂಗ್ಲೆಂಡ್ ಸರ್ರೆ ತಂಡದ ಬಾಬಿ ಅಬೆಲ್ 1899ರಲ್ಲಿ 357 ರನ್ ಗಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಇದರ ಜತೆಯಲ್ಲೇ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ಅಜೇಯ ತ್ರಿಶತ ಗಳಸಿ ಇನಿಂಗ್ಸ್ ಪೂರಾ ಆಡಿದ 4ನೇ ಆಟಗಾರ ಎಂಬ ಗೌರವಕ್ಕೂ ಸಹ ಗೋಹೆಲ್ ಪಾತ್ರರಾದರು. 723 ಬಾಲ್ ಎದುರಿಸಿದ ಗೋಹೆಲ್ 45 ಬೌಂಡರಿ ಮತ್ತು 1 ಸಿಕ್ಸ್ರ್ ಒಳಗೊಂಡ 359 ರನ್ ಪೇರಿಸಿದರು. ಗೋಹೆಲ್ ಆಟದ ಬಲದಿಂದ ಗುಜರಾತ್ ಒಡಿಶಾಗೆ 706 ರನ್ ಗುರಿ ನೀಡಿತು. ಒಡಿಶಾ 1 ವಿಕೆಟ್ ಕಳೆದುಕೊಂಡು 81 ರನ್ ಗಳಿಸಿದ್ದಾಗ ಉಭಯ ನಾಯಕರು ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು. ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಗುಜರಾತ್ ಸೆಮಿಫೈನಲ್ಗೆ ಪ್ರವೇಶ ಪಡೆಯಿತು.

2016: ಡೆಹ್ರಾಡೂನ್: ನೋಟು ನಿಷೇಧ ಕ್ರಮವು ರಾಷ್ಟ್ರದಲ್ಲಿ ಆರ್ಥಿಕ ಸ್ವಚ್ಛತಾ ಅಭಿಯಾನವಾಗಿ ಪರಿಣಮಿಸಿದೆ. ಭ್ರಷ್ಟರನ್ನು ಶಿಕ್ಷಿಸುತ್ತೇವೆ ಎಂದು ಭರವಸೆ ನೀಡಿದ್ದೇವು. ಪ್ರಸ್ತುತ ಭರವಸೆ ಪೂರೈಸುತ್ತಿದ್ದೇವೆ. ಭ್ರಷ್ಟರನ್ನು ಹುಡುಕಿ ಕಪ್ಪುಹಣ ಹೊರಗೆಳೆಯುತ್ತಿದ್ದೇವೆ. ನೋಟು ನಿಷೇಧದ ನಿರ್ಧಾರಕ್ಕೆ ರಾಷ್ಟ್ರದ ಪ್ರಜೆಗಳ ಬೆಂಬಲ ಇರದೇ ಇದ್ದಿದ್ದರೆ ಭ್ರಷ್ಟರು ನನ್ನ ಮೇಲೆ ದಾಳಿ ನಡೆಸುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಡೆಹ್ರಾಡೂನಿನಲ್ಲಿ ಬಿಜೆಪಿಯ ಪರಿವರ್ತನ ಸಭೆಯನ್ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಕೇದಾನಾಥ ಪ್ರವಾಹದಿಂದ ಪ್ರಾಣ ಕಳೆದುಕೊಂಡ ಯಾತ್ರಿಗಳಿಗೆ ಗೌರವ ಸಮರ್ಪಿಸಿದರು. ಪ್ರವಾಸೋದ್ಯಮ ಉತ್ತರಖಂಡದ ಅತ್ಯಂತ ಪ್ರಮುಖ ಆರ್ಥಿಕ ಬೆನ್ನೆಲುಬು. ಪ್ರವಾಸಿಗರಿಗೆ ಅಗತ್ಯ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿದರೆ ರಾಷ್ಟ್ರದ ಯಾವ ಕುಟುಂಬ ಉತ್ತರಖಂಡಕ್ಕೆ ಆಗಮಿಸಲು ಮನಸ್ಸು ಮಾಡುವುದಿಲ್ಲ? ಹೀಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರಿಂದ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ಮೋದಿ ತಿಳಿಸಿದರು. ಉತ್ತರಖಂಡದ ಸಮಗ್ರ ಅಭಿವೃದ್ಧಿಗೆ ಇನ್ನು ಹೆಚ್ಚಿನ ದಿನಗಳನ್ನು ಕಾಯುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಕೇದಾರನಾಥ, ಬದರಿನಾಥ ಯಾತ್ರೆಗೆ ಬರುವ ಭಕ್ತರು ಸರ್ಕಾರ ಮತ್ತು ಸಚಿವ ನಿತಿನ್ ಗಡ್ಕರಿ ಅವರನ್ನು ನೆನಪಿಸಿಕೊಳ್ಳುತ್ತಾರೆ. ನೂತನ ಹೆದ್ದಾರಿ ಯೋಜನೆಯಿಂದಾಗಿ ವಿಫುಲ ಉದ್ಯೋಗಾವಕಾಶಗಳು ರಾಜ್ಯದ ಜನತೆಗೆ ಸಿಕ್ಕಿವೆ ಎಂದರು. ಓಆರ್ಓಪಿಗೆ ಯುಪಿಎ ಕೊಡುಗೆ ಶೂನ್ಯ: 40 ವರ್ಷಗಳ ಕಾಲ ರಾಷ್ಟ್ರವನ್ನು ಆಳಿದ ಕುಟುಂಬ ಏಕ ಶ್ರೇಣಿ ಏಕ ಪಿಂಚಣಿ(ಓಆರ್ಓಪಿ)ಗಾಗಿ ಏನನ್ನು ಮಾಡಿಲ್ಲ. ಜನಸಾಮಾನ್ಯರಿಗೆ ಕನಿಷ್ಠ ಅಗತ್ಯ ಸೌಕರ್ಯಗಳನ್ನು ನೀಡಿಲ್ಲ. ಸಾರ್ವಜನಿಕರನ್ನು ಮೋಸಹೋಗಿಸುವುದರಲ್ಲೇ ಹಿಂದಿನ ಸರ್ಕಾರ ಆಡಾಳಿತಾವಧಿಯನ್ನು ಕಳೆದಿದೆ. ಪ್ರಸ್ತುತ ಜನಸಾಮಾನ್ಯರು ಬುದ್ಧಿವಂತರಾಗಿದ್ದಾರೆ. ರಾಜಕಾರಣಿಗಳ ಹುನ್ನಾರವನ್ನು ಅರಿತಿದ್ದಾರೆ. ದಲಿತ ಹೆಸರಿನಲ್ಲಿ ಕಳಂಕ ಮರೆಮಾಚಲು ಯತ್ನ: ಬಿಎಸ್ಪಿ ನಾಯಕಿ ಮಯಾವತಿ ತಮ್ಮ ಪಕ್ಷ ಮತ್ತು ಸಹೋದರನ ಮೇಲಿನ ಜಾರಿ ನಿರ್ದೇಶನಾಲಯದ ದಾಳಿಯ ಕಳಂಕದಿಂದ ತಪ್ಪಿಸಿಕೊಳ್ಳಲು ದಲಿತ ಅಸ್ತ್ರವನ್ನು ಕೈಗೆತ್ತಿಕೊಂಡಿದ್ದಾರೆ. ದಲಿತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿಲ್ಲ. ಬಡವರ ಮೇಲಿನ ಕಾಳಜಿಯಿಂದ ಕಪ್ಪುಕುಳಗಳನ್ನು ಶಿಕ್ಷಿಸಲು ಮುಂದಾಗಿದ್ದೇವೆ ಎಂದು ಮಾಯಾವತಿಗೆ ತಿರುಗೇಟು ನೀಡಿದರು. ತಾನು ದಲಿತೆ ಎಂಬ ಕಾರಣಕ್ಕೆ ಬಿಜೆಪಿ ತನ್ನ ಮೇಲೆ ಮತ್ತು ಪಕ್ಷದ ಮೇಲೆ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ್ದರು. ಸೋಮವಾರ ಬಿಎಸ್ಪಿ ಮತ್ತು ಮಾಯಾವತಿ ಸಹೋದರ ಆನಂದ ಕುಮಾರ್ ಖಾತೆಗಳ ಮೇಲೆ ಇಡಿ ದಾಳಿ ನಡೆಸಿ ಕೋಟ್ಯಾಂತರ ರೂಪಾಯಿಗಳಿರುವುದನ್ನು ಪತ್ತೆ ಮಾಡಿತ್ತು. ಚಾರ್ಧಾಮ್ ಹೆದ್ದಾರಿ ಯೋಜನೆಗೆ ಚಾಲನೆ: ಪ್ರವಾಸೋದ್ಯಮ ಮತ್ತು ಸಂಪರ್ಕ ವ್ಯವಸ್ಥೆ ಅಭಿವೃದ್ಧಿ ನಿಟ್ಟಿನಲ್ಲಿ ಸುಮಾರು 900 ಕಿ.ಮೀ. ರಸ್ತೆ ಅಭಿವೃದ್ಧಿ ಯೋಜನೆ ಚಾರ್ ಧಾಮ್ೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಕೇದರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿಗೆ ಉತ್ತಮ ಸಂಪರ್ಕ ಕಲ್ಪಿಸುವ ಮೂಲಕ ಚಾರ್ ಧಾಮ್ ಯಾತ್ರೆಗೆ ಉತ್ತೇಜನ ನೀಡುವುದು ಯೋಜನೆ ಉದ್ದೇಶ. ಭೂಕುಸಿತ, ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳನ್ನು ಸಮರ್ಥವಾಗಿ ಎದುರಿಸಬಲ್ಲ ಬೈಪಾಸ್, ಟನಲ್, ಸೇತುವೆಗಳು, ಫ್ಲೈಓವರ್ಗಳ ನಿರ್ಮಾಣ ಯೋಜನೆಯ ಭಾಗಗಳಾಗಿವೆ.

2016: ನವದೆಹಲಿ: ಮುಂದಿನ ಆರು ವರ್ಷಗಳಲ್ಲಿ ಅಂದರೆ 2022 ವೇಳೆಗೆ ಕೃಷಿ ಉತ್ಪನ್ನವನ್ನು
ದುಪ್ಪಟ್ಟು ಗೊಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಆರ್ಥಿಕ ತಜ್ಞರು ನೀತಿ ಆಯೋಗದ ಆರ್ಥಿಕ ತಜ್ಞರ ಸಂವಹನ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರೂ ಪಾಲ್ಗೊಂಡಿದ್ದ ಸಭೆಯ ಬಳಿಕ ಮಾತನಾಡಿದ ಭಾರತೀಯ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯ ಅವರು ವಿಚಾರವನ್ನು ತಿಳಿಸಿದರು. ಆರ್ಥಿಕ ತಜ್ಞರ ಜೊತೆಗೆ ಆರ್ಥಿಕ ನೀತಿ- ಮುಂದಿನ ದಾರಿ ವಿಷಯವಾಗಿ ಸಂವಹನ ನಡೆಸಿದ ಪ್ರಧಾನಿ ಮೋದಿ, ಮುಂಬರುವ ಮುಂಗಡ ಪತ್ರಕ್ಕೆ ಸಂಬಂಧಿಸಿದಂತೆ ಬೆಳಕು ಚೆಲ್ಲುವಂತೆ ಕೋರಿದರು. ಮುಂಗಡಪತ್ರವು ಜನರ ಆರ್ಥಿಕತೆಯ ಮೇಲೆ ನೈಜ ಪರಿಣಾಮ ಬೀರಬೇಕು ಎಂದು ಅವರು ನುಡಿದರು. ಸಭೆಯಲ್ಲಿ ಸಲಹೆ, ಸೂಚನೆಗಳನ್ನು ನೀಡಿದ್ದಕ್ಕಾಗಿ ತಜ್ಞರಿಗೆ ಧನ್ಯವಾದಗಳನ್ನು ಹೇಳಿದ ಪ್ರಧಾನಿ ಕೌಶಲ್ಯ ವೃದ್ಧಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ನವೀನ ಮಾರ್ಗಗಳ ಹುಡುಕಾಟವಾಗಬೇಕು ಎಂದು ಹೇಳಿದರು.
2016: ನವದೆಹಲಿ: ಕಾನೂನು ಉಲ್ಲಂಘನೆಗಾಗಿ ದೇಶದ 33,000 ಸರ್ಕಾರೇತರ ಸಂಸ್ಥೆಗಳ (ಎನ್ಜಿಒ) ಪೈಕಿ 20,000 ಎನ್ಜಿಒ ಗಳ ಎಫ್ಸಿಆರ್ (ವಿದೇಶೀ ಕೊಡುಗೆ ನಿಯಂತ್ರಣ ಕಾಯ್ದೆ) ಪರವಾನಿಗಗಳನ್ನು ಸರ್ಕಾರ ರದ್ದು ಪಡಿಸಿತು. ರಾಷ್ಟ್ರದಲ್ಲಿನ 13,000 ಎನ್ಜಿಒಗಳು ಮಾತ್ರ ಕಾನೂನು ಬದ್ಧವಾಗಿದ್ದು, ಅಸಮರ್ಪಕ ದಾಖಲಾತಿಗಳಿಗಾಗಿ 20,000 ಎನ್ಜಿಒಗಳ ಪರವಾನಗಿಗಳನ್ನು ರದ್ದು ಪಡಿಸಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಡಿಸೆಂಬರ್ 15ರಂದು ಸಾಮಾಜಿಕ ಕಾರ್ಯಕರ್ತೆ ಶಬನಮ್ ಹಶ್ಮಿ ನಡೆಸುವ ಎನ್ಜಿ ಸೇರಿದಂತೆ 7 ಎನ್ಜಿಒಗಳನ್ನು ವಿದೇಶೀ ಹಣ ಸ್ವೀಕರಿಸದಂತೆ ಸರ್ಕಾರ ನಿಷೇಧಿಸಿತ್ತು. ಬಳಿಕ ಗುಪ್ತಚರ ದಳದ ಪ್ರತಿಕೂಲ ವರದಿಗಳನ್ನು ಆಧರಿಸಿ ಅವುಗಳ ಎಫ್ಸಿಆರ್ ಪರವಾನಗಿಗಳನ್ನು ರದ್ದು ಪಡಿಸಲಾಗಿತ್ತು. ಇತ್ತೀಚೆಗೆ ಎಫ್ಸಿಆರ್ ಪರವಾನಗಿಗಳನ್ನು ನವೀಕರಿಸಿದ ಸಂಸ್ಥೆಗಳ ಕಾರ್ಯ ನಿರ್ವಹಣೆ ಬಗ್ಗೆ ತನಿಖೆ ನಡೆಸಿದ ಬಳಿಕ ಗೃಹ ಸಚಿವಾಲಯವು ನಿರ್ಧಾರ ಕೈಗೊಂಡಿತ್ತು. ವಿದೇಶೀ ನಿಧಿ ಬಳಸಿ ಸರ್ಕಾರವನ್ನು ದಲಿತ ವಿರೋಧಿ ಎಂಬುದಾಗಿ ವಿದೇಶಗಳಲ್ಲಿ ಪ್ರಚುರ ಪಡಿಸುವುದೇ ಇತ್ಯದಿ ಸಾರ್ವಜನಿಕ ಹಿತಕ್ಕೆ ವಿರುದ್ಧವಾದ ಕೆಲಸಗಳನ್ನು 7 ಎನ್ಜಿಒಗಳು ನಡೆಸುತ್ತಿವೆ ಎಂದು ಗುಪ್ತಚರ ವರದಿಗಳು ತಿಳಿಸಿದ್ದವು. ಹಿನ್ನೆಲೆಯಲ್ಲಿ ಕೆಂಡಾಮಂಡಲವಾಗಿದ್ದ ಗೃಹ ಇಲಾಖೆ ಎನ್ಜಿಒಗಳ ವಿಚಾರದಲ್ಲಿ ಇನ್ನಷ್ಟು ತನಿಖೆ ಕೈಗೊಂಡಿತ್ತು. ಡಿಸೆಂಬರ್ 14ರಂದು ಸರ್ಕಾರ ತೀಸ್ತಾ ಸೆಟಲ್ವಾಡ್ ನಡೆಸುತ್ತಿದ್ದ ಸಬ್ರಂಗ್ ಟ್ರಸ್ಟ್ ಮತ್ತು ಸಿಟಿಜನ್ಸ್ ಫಾರ್ ಜಸ್ಟಿಸ್ ಅಂಡ್ ಪೀಸ್ ಹೆಸರಿನ ಎನ್ಜಿಒ ಹಾಗೂ ಗ್ರೀನ್ ಪೀಸ್ ಇಂಡಿಯಾ ಎನ್ಜಿಒಗಳ ಎಫ್ಸಿಆರ್ ಲೈಸೆನ್ಸ್ ನವೀಕರಣವನ್ನು ರದ್ದು ಪಡಿಸಿತ್ತು.
2016: ಗಾಜಿಯಾಬಾದ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೀರತ್ ಶಾಖೆಯಲ್ಲಿ ತನ್ನ ಜನಧನ ಖಾತೆಯಲ್ಲಿ 100 ಕೋಟಿ ರೂಪಾಯಿ ಜಮಾ ಆಗಿರುವುದನ್ನು ಕಂಡು ಹೌಹಾರಿರುವ ಇಲ್ಲಿನ ಮಹಿಳೆಯೊಬ್ಬರು ವಿಚಾರವನ್ನು ಪ್ರಧಾನ ಮಂತ್ರಿಯವರ ಕಾರ್ಯಾಲಯದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿರುವ ಘಟನೆ ಘಟಿಸಿತು.  ತನ್ನ ಖಾತೆಗೆ ಇಷ್ಟೊಂದು ಮೊತ್ತದ ಹಣ ಬಂದ ಬಗ್ಗೆ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಬ್ಯಾಂಕ್ ಸಿಬ್ಬಂದಿಗೆ ಮಾಡಿದ ಮನವಿ ಪ್ರಯೋಜನವಾಗದೇ ಹೋದಾಗ ಮಹಿಳೆ ವಿದ್ಯಾವಂತರೊಬ್ಬರ ನೆರವಿನಿಂದ ಪ್ರಧಾನಿಯವರ -ಮೇಲ್ ವಿಳಾಸಕ್ಕೆ ವಿಷಯವನ್ನು ಸಮಸ್ಯೆ ಬಗೆ ಹರಿಸಲು ನೆರವಾಗುವಂತೆ ಕೋರಿದರು. ಪತಿ ಜಿಲೇದಾರ್ ಸಿಂಗ್ ಮೂಲಕ ಪ್ರಧಾನಿಗೆ ಕಳುಹಿಸಿರುವ ತಮ್ಮ ಮಿಂಚಂಚೆ (-ಮೇಲ್) ದೂರಿನಲ್ಲಿ ಶೀತಲ್ ಯಾದವ್ ಅವರು ಘಟನೆಯನ್ನು ವಿವರಿಸಿದ್ದಾರೆ. ಅವರ ದೂರಿನ ಪ್ರಕಾರ ಎಸ್ಬಿಐಯ ಶಾರದಾ ರಸ್ತೆ ಶಾಖೆಯಲ್ಲಿ ಆಕೆ ಜನಧನ ಖಾತೆ ಹೊಂದಿದ್ದು, ಡಿಸೆಂಬರ್ 18ರಂದು ಹಣ ಹಿಂಪಡೆಯಲು ಅವರು ಐಸಿಐಸಿಐ ಎಟಿಎಂಗೆ ಹೋಗಿದ್ದರು. ಎಟಿಎಂನಿಂದ ಬಂದ ಚೀಟಿಯಲ್ಲಿ ಖಾತೆಯ ಉಳಿಕೆ ಮೊತ್ತ 99,99,99,394 ರೂ. ಎಂಬುದು ನಮೂದಾಗಿದ್ದುದು ಕಂಡು ಅಚ್ಚರಿಗೊಂಡರು. ಸಾಲಿನಲ್ಲಿ ಇನ್ನೊಬ್ಬನಿಗೂ ಅದನ್ನು ತೋರಿಸಿ ಖಚಿತಪಡಿಸಿಕೊಂಡರು. ಸಂಶಯ ನಿವಾರಣೆಗಾಗಿ ಸಮೀಪದ ಯೆಸ್ ಬ್ಯಾಂಕ್ ಎಟಿಎಂನಲ್ಲೂ ಶಿಲ್ಕು ವಿಚಾರಿಸಿದಾಗಲೂ ಅದೇ ಮೊತ್ತ ಖಚಿತಗೊಂಡಾಗ ದಿಗಿಲುಗೊಂಡರು. ತತ್ ಕ್ಷಣವೇ ಎಸ್ಬಿಐ ಶಾಖೆಗೆ ಹೋಗಿ ತಪ್ಪು ಸರಿಪಡಿಸಿ ಸಮಸ್ಯೆ ನಿವಾರಿಸುವಂತೆ ಕೋರಿದರು. ಎರಡು ದಿನಗಳ ಕಾಲ ಬ್ಯಾಂಕಿಗೆ ಅಲೆದರೂ ಆದರೆ ಬ್ಯಾಂಕ್ ಸಿಬ್ಬಂದಿ ಅವರನ್ನು ಲಕ್ಷಿಸಲಿಲ್ಲ. ಇನ್ನೊಂದು ದಿನ ಬರುವಂತೆ ಹೇಳಿ ಕಳುಹಿಸಿದರು. ಕಡೆಗೆ ವಿದ್ಯಾವಂತರೊಬ್ಬರ ನೆರವು ಪಡೆದು ಪತಿಯ ಮೂಲಕ ಪ್ರಧಾನಿ ಮಿಂಚಂಚೆಗೆ ಮೇಲ್ ಕಳುಹಿಸಿ ತಮ್ಮ ದೂರು ದಾಖಲಿಸಿದರು.
 

2016: ಚೆನ್ನೈ: ವರ್ಗಾವಣೆ ಪತ್ರ ಈವರೆಗೂ ನನಗೆ ತಲುಪಿಲ್ಲ. ಈಗಲೂ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ  ನಾನೇ ಎಂದು ಪಿ.ರಾಮಮೋಹನ್ರಾವ್ಹೇಳಿದರು. ಚೆನ್ನೈನಲ್ಲಿ  ಸುದ್ದಿಗೋಷ್ಠಿ  ನಡೆಸಿದ ರಾಮಮೋಹನ್ರಾವ್‌, ಅಧಿಕಾರಿಗಳು ನನ್ನನ್ನು ಗೃಹ ಬಂಧನದಲ್ಲಿ ಇರಿಸಿದ್ದಾರೆ ಎಂದು ಆರೋಪಿಸಿದರು. ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಆಗಿನ ಮುಖ್ಯಮಂತ್ರಿ ಜಯಲಲಿತಾ ನನ್ನನ್ನು ನೇಮಿಸಿದ್ದರು. ಈಗಲೂ ನಾನೇ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ. ನನಗೆ ಯಾವುದೇ ವರ್ಗಾವಣೆ ಪತ್ರ ತಲುಪಿಲ್ಲ ಎಂದರು. ಇನ್ನೂ ಐಟಿ ದಾಳಿ ವೇಳೆ ರೂ.1ಲಕ್ಷ ಮಾತ್ರ ದೊರೆತಿದೆ. ಚಿನ್ನ ಮತ್ತು ಬೆಳ್ಳಿ ನನ್ನ ಪತ್ನಿ ಹಾಗೂ ಮಕ್ಕಳಿಗೆ ಸೇರಿದ್ದಾಗಿದೆ. ನನ್ನ ಮನೆಯಲ್ಲಿ ಯಾವುದೇ ಸೀಕ್ರೆಟ್ರೂಂಗಳು ಇಲ್ಲ. ಸರ್ಚ್ವಾರಂಟ್ಇಲ್ಲದೆ ಸಿಆರ್ಪಿಎಫ್ಪೊಲೀಸರು ನನ್ನ ಚೇಂಬರ್ಹೇಗೆ ಪ್ರವೇಶಿಸಿದರು? ಅವರು ಮುಖ್ಯಮಂತ್ರಿಗಳ ಅನುಮತಿ ಪಡೆದಿದ್ದರೇ? ಸಿಆರ್ಪಿಎಫ್ಸಿಬ್ಬಂದಿ ನನಗೆ ಗನ್ತೋರಿಸಿ ಬೆದರಿಕೆ ಹಾಕಿದರುತಮಿಳುನಾಡು ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ 31 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ, ಈಗ ನನ್ನ ಜೀವಕ್ಕೆ ಅಪಾಯವಿದೆ. ಐಟಿ ದಾಳಿಯನ್ನು ಜನತಾ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ ಎಂದರು. ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ರಾವ್ಅವರ ಸಂಬಂಧಿಕರ ನಿವಾಸ ಸೇರಿದಂತೆ  15ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆಸಿದ ತಪಾಸಣೆಯಲ್ಲಿ  ರೂ.131 ಕೋಟಿ ನಗದು ಮತ್ತು 177 ಕಿಲೋ ಚಿನ್ನ ವಶ ಪಡಿಸಿಕೊಳ್ಳಲಾಯಿತು ಎನ್ನಲಾಗಿತ್ತು. ಐಟಿ ದಾಳಿ ಬಳಿಕ ಸಿಎಸ್ಸ್ಥಾನದಿಂದ ರಾವ್ಅವರನ್ನು ವಜಾ ಮಾಡಿ, ಗಿರಿಜಾ ವೈದ್ಯನಾಥನ್ಅವರನ್ನು ತಮಿಳುನಾಡು ಸರ್ಕಾರ ನೂತನ ಸಿ.ಎಸ್ಆಗಿ ನೇಮಕ ಮಾಡಿತ್ತು.
2016: ಪಣಜಿ: ಗೋವಾ ಮತ್ತು ದೆಹಲಿ ವಿಮಾನ ನಿಲ್ದಾಣಗಳಲ್ಲಿ ಅದೃಷ್ಟವಶಾತ್ ಎರಡು ಭಾರಿ
ವಿಮಾನ ದುರಂತಗಳು ತಪ್ಪಿದವು. ಪಣಜಿ ರನ್ವೇಯಲ್ಲಿ ಜೆಟ್ ಏರ್ವೇಸ್ ಸ್ಕಿಡ್ ಆದ ಬೆನ್ನಲ್ಲೇ ದೆಹಲಿ ವಿಮಾನ ನಿಲ್ದಾಣದ ರನ್ವೇ ಯನಲ್ಲಿ ಎರುಡು ವಿಮಾನಗಳು ಮುಖಾಮುಖಿಯಾದ ಘಟನೆ ಸಂಭವಿಸಿತು.  ಅದೃಷ್ಟವಶಾತ್ ಸ್ವಲ್ಪದರಲ್ಲೇ ಭಾರಿ ವಿಮಾನ ದುರಂತ ತಪ್ಪಿತು. ಇನ್ನೇನು ಮೇಲೆ ಹಾರಬೇಕು ಎಂಬಷ್ಟರಲ್ಲಿ ರನ್ವೇನಲ್ಲೇ ಸ್ಕಿಡ್ ಆದ ವಿಮಾನ 360 ಡಿಗ್ರಿ ಸುತ್ತಿ ನಿಂತಿತು. ಈದಿನ  ಬೆಳಗ್ಗೆ 4.40ಕ್ಕೆ ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದ 154 ಪ್ರಯಾಣಿಕರನ್ನು ಹೊತ್ತಿದ್ದ ಜೆಟ್ ಏರ್ವೇಸ್ ವಿಮಾನ ರನ್ ವೇನಲ್ಲೇ ಸ್ಕಿಡ್ ಆಯಿತು. ಘಟನೆಯಲ್ಲಿ 16 ಮಂದಿ ಪ್ರಯಾಣಿಕರು ಗಾಯಗೊಂಡರು. ವಿಮಾನದಲ್ಲಿದ್ದ ಎಲ್ಲ  154 ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿಸಲಾಯಿತು. ಗೋವಾ ರನ್ವೇ ಘಟನೆ ಬೆನ್ನಲ್ಲೇ ದೆಹಲಿ ವಿಮಾನ ನಿಲ್ದಾಣದಲ್ಲಿ ರವ್ವೇ ವೈಫಲ್ಯ ಸಂಭವಿಸಿದತು. ಲ್ಯಾಂಡಿಂಗ್ ಆಗುತ್ತಿದ್ದ ವಿಮಾನ ಮತ್ತು ಟೇಕ್ಆಫ್ ಆಗುತ್ತಿದ್ದ ವಿಮಾನ ಒಂದೇ ರನ್ವೇನಲ್ಲಿ ಮುಖಾಮುಖಿಯಾಗಿದ್ದವು. ಅದೃಷ್ಟವಶಾತ್ ಕೂದಲೆಳೆ ಅಂತರದಿಂದ ದುರಂತ ತಪ್ಪಿದತು.. ಡಿಜಿಸಿಎ ತನಿಖೆಗೆ ಆದೇಶಿಸಿತು. .


2016: ನವದೆಹಲಿ: ಅನಾಣ್ಯೀಕರಣ ನಿರ್ಧಾರ ಘೋಷಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ 50 ದಿನಗಳ ಸಮಯಾವಕಾಶ ನೀಡುವಂತೆ ಕೋರಿದ್ದರು. ಆದರೆ ಗಡುವು ಸಮೀಪಿಸುತ್ತಿದ್ದರೂ ಸಹ ಅನಾಣ್ಯೀಕರಣದ ಯಾವುದೇ ಉದ್ದೇಶಗಳು ಈಡೇರಿಲ್ಲ, ಸಮಸ್ಯೆಗಳು ಪರಿಹಾರವಾಗಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾದರು. ಅನಾಣ್ಯೀಕರದ ವಿರುದ್ಧ ವಿರೋಧ ಪಕ್ಷಗಳ ನಾಯಕರು ನವದೆಹಲಿಯಲ್ಲಿ ನಡೆಸಿದ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ರಾಹುಲ್ ಮಾತನಾಡಿದರುನನ್ನ ವಿರುದ್ಧ ಯಾವುದೇ ಆರೋಪ ಕೇಳಿಬಂದರೆ ತಕ್ಷಣ ನಾನು ತನಿಖೆ ಎದುರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿತಿಳಿಸಿದ್ದರು. ಈಗ ಅವರ ಭ್ರಷ್ಟಾಚಾರದ ಆರೋಪ ಬಂದಿದೆ. ಕಾಂಗ್ರೆಸ್ ಹಿರಿಯ ನಾಯಕಿ ಶೀಲಾ ದೀಕ್ಷಿತ್ ತನಿಖೆ ಎದುರಿಸಲು ತಾವು ಸದಾ ಸಿದ್ಧ ಎಂದು ತಿಳಿಸಿದ್ದಾರೆ, ಆದರೆ ಪ್ರಧಾನ ಮಂತ್ರಿ ಮಾತ್ರ ತನಿಖೆ ಎದುರಿಸಲು ಸಿದ್ಧರಿಲ ಎಂದು ರಾಹುಲ್ ಮೋದಿ ಅವರ ನಡೆಯನ್ನು ಪ್ರಶ್ನಿಸಿದರು. ಅನಾಣ್ಯೀಕರಣ ಸ್ವಾತಂತ್ರ್ಯಾನಂತರದ ದೇಶದಲ್ಲಿ ನಡೆದಿರುವ ಅತಿ ದೊಡ್ಡ ಹಗರಣ, ಕೇಂದ್ರ ಸರ್ಕಾರ ನೋಟು ನಿಷೇಧ ಮಾಡುವ ಮೂಲಕ ಬಡವರನ್ನು ಲೂಟಿ ಮಾಡುತ್ತಿದೆ. ಅನಾಣ್ಯೀಕರಣದಿಂದಾಗಿ ದೇಶದ ಬಹುಪಾಲು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕೇಂದ್ರದ ನಿರ್ಧಾರದಿಂದಾಗಿ ದೇಶ 20 ವರ್ಷ ಹಿಂದಕ್ಕೆ ಹೋಗಿದೆ, ಆರ್ಥಿಕತೆ ಪಾತಾಳಕ್ಕೆ ತಲುಪಿದೆ. ದೇಶದಲ್ಲಿ ಮಹಾ ತುರ್ತು ಪರಿಸ್ಥಿತಿ (ಸೂಪರ್ ಎಮರ್ಜೆನ್ಸಿ) ನಿರ್ಮಾಣವಾಗಿದೆ. 50 ದಿನಗಳ ನಂತರ ಸಹ ಪರಿಸ್ಥಿತಿ ಸುಧಾರಿಸದಿದ್ದರೆ ಪ್ರಧಾನಿ ರಾಜೀನಾಮೆ ನೀಡಲು ಸಿದ್ಧರಿದ್ದಾರೆಯೇ? ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೋದಿ ಅವರಿಗೆ ಸವಾಲು ಹಾಕಿದರು. ಜಂಟಿ ಪತ್ರಿಕಾ ಗೋಷ್ಠಿಗೆ ತೃಣಮೂಲ ಕಾಂಗ್ರೆಸ್ ಮಮತಾ ಬ್ಯಾನರ್ಜಿ, ಡಿಎಂಕೆ ಮತ್ತು ಆರ್ಜೆಡಿ ನಾಯಕರನ್ನು ಹೊರತು ಪಡಿಸಿ ಯಾವುದೇ ವಿರೋಧ ಪಕ್ಷಗಳ ನಾಯಕರು ಹಾಜರಾಗಲಿಲ್ಲ..
2008: ಬಾಲಿವುಡ್ಡಿನ ಖ್ಯಾತ ನಟ ಅಮೀರ್ ಖಾನ್ ಮೊಟ್ಟ ಮೊದಲ ಬಾರಿಗೆ ನಿರ್ದೇಶಿಸಿದ 'ತಾರೆ ಜಮೀನ್ ಪರ್' ಹಾಗೂ ನೀರಜ್ ಪಾಂಡೆ ಅವರ 'ಎ ವೆನ್ಸಡೆ' ಚಿತ್ರಗಳು ಹಲವು ವಿಭಾಗಗಳಲ್ಲಿ ವಿ. ಶಾಂತಾರಾಮ್ ಪ್ರಶಸ್ತಿ ಪಡೆದುಕೊಂಡವು. ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ 'ತಾರೆ ಜಮೀನ್ ಪರ್' ಚಿತ್ರವು ಅತ್ಯುತ್ತಮ ಚಿತ್ರಕ್ಕಾಗಿ ವಿ.ಶಾಂತಾರಾಮ್ ಸ್ವರ್ಣ ಪ್ರಶಸ್ತಿ ಪಡೆದುಕೊಂಡಿತು. ಅದರಂತೆ 'ಎ ವೆನ್ಸಡೆ' ಹಾಗೂ ಮರಾಠಿ ಚಿತ್ರ 'ತಿಂಗ್ಯಾ' ರಜತ ಹಾಗೂ ಕಂಚು ಪ್ರಶಸ್ತಿ ಪಡೆದುಕೊಂಡವು. 'ಎ ವೆನ್ಸಡೆ' ಚಿತ್ರ ನಿರ್ದೇಶಿಸಿದ ನೀರಜ್ ಪಾಂಡೆ ಅವರಿಗೆ ಅತ್ಯುತ್ತಮ ನಿರ್ದೇಶಕ ಹಾಗೂ ಮೊದಲ ಬಾರಿ ನಿರ್ದೇಶನ ಮಾಡಿದ್ದಕ್ಕಾಗಿ ಪ್ರಶಸ್ತಿ ದಕ್ಕಿದವು. 2ನೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಅಮೀರ್ ಖಾನ್ (ತಾರೆ...), 3ನೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಅಶುತೋಷ್ ಗಾವರಿಕರ್ (ಜೋಧಾ ಅಕ್ಬರ್) ಭಾಜನರಾದರು. ಅತ್ಯುತ್ತಮ ನಟನಾಗಿ ದರ್ಶಿಲ್ ಸಫಾರೆ (ತಾರೆ...) ಹಾಗೂ ಅತ್ಯುತ್ತಮ ನಟಿಯಾಗಿ ಐಶ್ವರ್ಯ ರೈ (ಜೋಧಾ ಅಕ್ಬರ್) ಆಯ್ಕೆಯಾದರು. ಅತ್ಯುತ್ತಮ ಪೋಷಕ ಪಾತ್ರದ ಪ್ರಶಸ್ತಿ ಜಿಮ್ಮಿ ಶೆರ್ಗಿಲ್ (ಎ ವೆನ್ಸಡೆ) ಅವರ ಮುಡಿಗೇರಿತು. ಮೊದಲ ಬಾರಿ ನಟಿಸಿದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಫರ್ಹಾಣ್ ಅಖ್ತರ್ ಸ್ವೀಕರಿಸಿದರು. ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಎ.ಆರ್. ರೆಹಮಾನ್ (ಜೋಧಾ ಅಕ್ಬರ್) ಅವರಿಗೆ ಲಭಿಸಿತು.

2008: ಮುಂಬೈ ಮೇಲೆ ನವೆಂಬರ್ 26ರಂದು ನಡೆದ ಉಗ್ರರ ದಾಳಿ ವೇಳೆ ಬಂಧಿತನಾದ ಪಾಕಿಸ್ಥಾನಿ ಪ್ರಜೆ ಮೊಹಮ್ಮದ್ ಅಜ್ಮಲ್ ಅಮೀರ್ ಅಲಿಯಾಸ್ ಕಸಾಬ್‌ನನ್ನು ದಕ್ಷಿಣ ಮುಂಬೈನ ಆರ್ಥರ್ ಜೈಲಿನಲ್ಲಿ ಪೆರೇಡ್ ಮಾಡಿಸಲಾಯಿತು. ಕಸಾಬ್‌ನನ್ನು ಕನಿಷ್ಠ 40 ಜನ ಪ್ರತ್ಯಕ್ಷ ಸಾಕ್ಷಿಗಳು ದೃಢೀಕರಿಸಿದರು. ಇವರಲ್ಲಿ ಪೊಲೀಸ್ ಜೀಪ್‌ನಲ್ಲಿ ಸಾಗುತ್ತಿದ್ದ ಪೊಲೀಸ್ ಅರುಣ್ ಜಾಧವ್ ಕೂಡಾ ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. ಈ ಪೊಲೀಸ್ ಜೀಪ್ ಅನ್ನು ಅಂದು ಕಸಾಬ್ ಮತ್ತು ಆತನ ಸಹಚರ ಅಪಹರಿಸಿದ್ದರು. ಭದ್ರತಾ ದೃಷ್ಟಿಯಿಂದ ಸೀಮೀತ ಸಂಖ್ಯೆಯ ಪ್ರತ್ಯಕ್ಷ ಸಾಕ್ಷಿಗಳನ್ನು ಮಾತ್ರವೇ ಜೈಲಿಗೆ ಕರೆಸಲಾಗಿತ್ತು.

2008: ಗಾಜಾ ಪ್ರದೇಶದಲ್ಲಿ ಇಸ್ರೇಲಿ ಯುದ್ಧ ವಿಮಾನಗಳು ನಡೆಸಿದ ದಾಳಿಗೆ 120 ಪ್ಯಾಲಿಸ್ಥೀನಿಯರು ಬಲಿಯಾದರು ಎಂದು ಹಮಾಸ್ ಮೂಲಗಳು ತಿಳಿಸಿದವು. ಮೃತರಲ್ಲಿ ಬಹುತೇಕ ಹಮಾಸ್ ರಕ್ಷಣಾ ಪಡೆಯವರು ಎಂದು ಮೂಲಗಳು ಹೇಳಿದವು. ಮೃತರಲ್ಲಿ ಹಮಾಸ್ ಪೊಲೀಸ್ ಮುಖ್ಯಸ್ಥ ತವ್ಫೀಕ್ ಜಬೇರ್ ಕೂಡ ಸೇರಿದ್ದರು. ಹಮಾಸ್ ರಕ್ಷಣಾ ಪಡೆಯ ಮುಖ್ಯ ಕಚೇರಿ ಮತ್ತು ಅಲ್ಲಿನ ಸೇನಾ ವಿಭಾಗದ ತರಬೇತಿ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು.

2008: ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರನ್ನು ಡಿಎಂಕೆ ಪಕ್ಷದ 10ನೇ ಅವಧಿಯ ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡಲಾಯಿತು. ಈದಿನ ಚೆನ್ನೈಯಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಕರುಣಾನಿಧಿ ಅವರ ಪುತ್ರ ಎಂ.ಕೆ.ಸ್ಟಾಲಿನ್ ಖಜಾಂಚಿಯಾಗಿ ಹಾಗೂ ಪಕ್ಷದ ಹಿರಿಯ ಮುಖಂಡ ಆರ್ಕಾಟ್ ಎನ್. ವೀರಸ್ವಾಮಿ ಅವರು ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.

2007: ಪಾಕಿಸ್ಥಾನದ ಮಾಜಿ ಪ್ರಧಾನಿ, ಪಾಕಿಸ್ಥಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷೆ ಬೆನಜೀರ್ ಭುಟ್ಟೊ (54) ಅವರನ್ನು ರಾವಲ್ಪಿಂಡಿಯ ಲಿಯಾಖತ್ ಬಾಗಿನಲ್ಲಿ ನಡೆದ ಚುನಾವಣಾ ರಾಲಿಯಲ್ಲಿ
ಉಗ್ರಗಾಮಿಗಳು ಗುಂಡಿಟ್ಟು ಹತ್ಯೆ ಮಾಡಿದರು. 2008ರ ಜನವರಿ 8ಕ್ಕೆ ನಡೆಯುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಪ್ರಚಾರ ರಾಲಿಯಲ್ಲಿ ಅಪಾರ ಸಂಖ್ಯೆಯ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ನಂತರ ಸಂಜೆ ಸುಮಾರು 5.30ಕ್ಕೆ ತಮ್ಮ ಕಾರಿನಲ್ಲಿ ಕೂರುತ್ತಿದ್ದಾಗ ಭಯೋತ್ಪಾದಕನೊಬ್ಬ ಎ.ಕೆ.47 ಬಳಸಿ ಸಮೀಪದಿಂದ ಐದು ಸುತ್ತು ಗುಂಡು ಹಾರಿಸಿದ. ಬೆನಜೀರ್ ಅವರ ಕುತ್ತಿಗೆ ಮತ್ತು ತಲೆಗೆ ಗುಂಡು ತಗುಲಿದ್ದರಿಂದ ಅವರನ್ನು ತಕ್ಷಣ ಸ್ಥಳೀಯ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಅವರನ್ನು ಉಪಚರಿಸಿದ ವೈದ್ಯರು ಸಂಜೆ 6 ಗಂಟೆ 16 ನಿಮಿಷಕ್ಕೆ ಬೆನಜೀರ್ ಮೃತರಾಗಿರುವುದಾಗಿ ಘೋಷಿಸಿದರು. ಬೆನಜೀರ್ ಮೇಲೆ ಗುಂಡು ಹಾರಾಟ ನಡೆಯುತ್ತಿದ್ದಂತೆಯೇ ಸಂಭವಿಸಿದ ಇನ್ನೊಂದು ಆತ್ಮಹತ್ಯಾ ದಾಳಿಯಿಂದ ಇದೇ ಸ್ಥಳದಲ್ಲಿ 22ಕ್ಕೂ ಹೆಚ್ಚು ಮಂದಿ ಮೃತರಾಗಿ ಹಲವರು ಗಾಯಗೊಂಡರು. ಘಟನೆಯ ಬೆನ್ನಲ್ಲೇ ಪಾಕಿಸ್ಥಾನದ ವಿವಿಧ ಕಡೆಗಳಲ್ಲಿ ನಡೆದ ಹಿಂಸಾತ್ಮಕ ಘಟನೆಗಳಲ್ಲಿ 14 ಮಂದಿ ಮೃತರಾದರು. 2007ರ ಅಕ್ಟೋಬರ್ 19ರಂದು ಬೆನಜೀರ್ ಭುಟ್ಟೊ ಪಾಕಿಸ್ಥಾನಕ್ಕೆ ಮರಳಿದ ನಂತರ ಅವರ ಸಭೆಗಳ ಮೇಲೆ ನಡೆದ ಎರಡನೇ ದಾಳಿ ಇದು. ಅವರು ಪಾಕ್ ಪ್ರವೇಶಿಸಿದ ದಿನವೇ ಪಿಪಿಪಿ ಆಯೋಜಿಸಿದ್ದ ಬೃಹತ್ ಸ್ವಾಗತ ರಾಲಿಯಲ್ಲಿಯೂ ಆತ್ಮಾಹುತಿ ದಾಳಿ ನಡೆದಿತ್ತು. ಆ ದಾಳಿಯಲ್ಲಿ ಸುಮಾರು 140ಕ್ಕೂ ಅಧಿಕ ಜನ ಮೃತರಾಗಿದ್ದರು.

2007: ಖ್ಯಾತ ವಿವಾದಾತ್ಮಕ ಚಿತ್ರ ಕಲಾವಿದ ಎಂ.ಎಫ್. ಹುಸೇನ್ ಅವರ ಕಲಾ ಕೃತಿಗಳ ಪ್ರದರ್ಶನವನ್ನು ಸಂಘಟಿಸಿದ್ದ ನವದೆಹಲಿಯ ಭಾರತದ ಅಂತಾರಾಷ್ಟ್ರೀಯ ಕೇಂದ್ರದ ಮೇಲೆ ಶಿವಸೇನಾ ಕಾರ್ಯಕರ್ತರು ದಾಳಿಮಾಡಿ ಎರಡು ಕಲಾಕೃತಿಗಳನ್ನು ವಿಕೃತಗೊಳಿಸಿದರು. ಘಟನೆಯಲ್ಲಿ 1.5 ಲಕ್ಷ ಬಲೆಬಾಳುವ ಅಕ್ಬರ್ ದೊರೆಯ ಚಿತ್ರ ಸಂಪೂರ್ಣ ಹಾಳಾಗಿದ್ದು, ಮತ್ತೊಂದು ಚಿತ್ರ ಸ್ವಲ್ಪ ಹಾಳಾಯಿತು.

2007: ಭೂ ಒತ್ತುವರಿ ಹಾವಳಿಯಿಂದಾಗಿ ರಾಷ್ಟ್ರದಾದ್ಯಂತ ಹಲವಾರು ಕೆರೆಗಳೇ ಗುಳುಂ ಆದದ್ದು ಇತಿಹಾಸ. ಇಂತಹ ಇತಿಹಾಸವನ್ನೆ ಮೀರಿಸುವ ಮತ್ತೊಂದು ಭೂಗಳ್ಳತನದ ಕುಖ್ಯಾತಿಗೆ ರಾಷ್ಟ್ರದ 2ನೇ ಅತಿದೊಡ್ಡ ಕೆರೆ ಎಂದೇ ಪ್ರಸಿದ್ಧಿಯಾಗಿರುವ ಚೆನ್ನೈಯ ಪುಲಿಕ್ಯಾಟ್ ಕೆರೆ ತುತ್ತಾಗಿರುವುದು ಬೆಳಕಿಗೆ ಬಂತು. ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಸಾಗರದಂತಹ ಈ ಕೆರೆ ಕಳೆದ ಎರಡು ದಶಕಗಳಿಂದ ತನ್ನ ವಿಸ್ತೀರ್ಣದಲ್ಲಿ ಭಾರಿ ಪ್ರಮಾಣದಲ್ಲಿ ಕುಗ್ಗುತ್ತ ಬಂದಿದೆ. ಆರಂಭದಲ್ಲಿ ಪುಲಿಕ್ಯಾಟ್ ಕೆರೆಯ ವಿಸ್ತೀರ್ಣ 600 ಚದರ ಕಿ. ಮೀ. ಇತ್ತು. ಕ್ರಮೇಣ ಇದರ ವಿಸ್ತೀರ್ಣ 400 ಚ.ಕಿ.ಮೀ.ಗೆ ಕುಗ್ಗಿದೆ. 4ಮೀ. ಆಳವಿದ್ದ ಕೆರೆ ಈಗ 2ಮೀ. ಮಾತ್ರ ಇದೆ. ಈ ಕೆರೆಗೆ ವಲಸೆ ಬರುವ ಪಕ್ಷಿಗಳ ಸಂಖ್ಯೆಯಲ್ಲಿಯೂ ಗಣನೀಯ ಕುಸಿತ ಕಂಡು ಬಂದಿದೆ. ಚಳಿಗಾಲದಲ್ಲಿ ಈ ಕೆರೆಗೆ ವಲಸೆ ಬರುತ್ತಿದ್ದಪಕ್ಷಿಗಳು ಈಗ ನೀರಿನ ಕೊರತೆಯಿಂದ ಬರಲು ಹಿಂದೇಟು ಹಾಕುತ್ತಿವೆ. 2002ರ ಚಳಿಗಾಲದಲ್ಲಿ ಸುಮಾರು 30 ಸಾವಿರ ಪಕ್ಷಿಗಳು ಬಂದಿದ್ದವು. ಆದರೆ, 2006ರಲ್ಲಿ ಕೇವಲ 7 ಸಾವಿರ ಪಕ್ಷಿಗಳು ಈ ಕೆರೆಗೆ ಬಂದಿವೆ ಎಂಬುದು ಸಮೀಕ್ಷೆಯೊಂದರಿಂದ ಬೆಳಕಿಗೆ ಬಂತು.

2007: ಪ್ಯಾರಿಸ್ಸಿಗೆ ಹೋಗಬೇಕಾಗಿದ್ದ ವಿಷ್ಣುವಿನ `ಟೆರಕೋಟ' ಮೂರ್ತಿಗಳು ಢಾಕಾ ವಿಮಾನ ನಿಲ್ದಾಣದಲ್ಲಿಯೇ ಕಳುವಾದ ಹಿನ್ನೆಲೆಯಲ್ಲಿ ಭುಗಿಲೆದ್ದ ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಬಾಂಗ್ಲಾದೇಶ ಸರ್ಕಾರದ ಶಿಕ್ಷಣ ಮತ್ತು ಸಂಸ್ಕೃತಿ ವ್ಯವಹಾರಗಳ ಖಾತೆಯ ಸಲಹೆಗಾರ ಅಯೂಬ್ ಖಾದ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪ್ಯಾರಿಸ್ಸಿನಲ್ಲಿ ನಡೆಯುವ ವಸ್ತು ಪ್ರದರ್ಶನದಲ್ಲಿ ಇಡಲಿಕ್ಕಾಗಿ ಅಲ್ಲಿಗೆ ಕಳುಹಿಸಲು ವಿಷ್ಣುವಿನ ಮೂರ್ತಿಗಳನ್ನು ವಿಮಾನ ನಿಲ್ದಾಣದಲ್ಲಿ ಇಡಲಾಗಿತ್ತು. ಆದರೆ ಐದು ದಿನಗಳ ಹಿಂದೆ ಈ ಎರಡು ಮೂರ್ತಿಗಳು ಕಳುವಾಗಿದ್ದವು.

2007: ದೇವನಹಳ್ಳಿ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರು ನಗರದ ನಡುವಿನ ಅತಿ ವೇಗದ ಅಟ್ಟಣಿಗೆ (ಎಲಿವೇಟೆಡ್) ರೈಲು ಯೋಜನೆ ಜಾರಿಗೆ ಕೈಗೊಳ್ಳಬೇಕಾದ ಕ್ರಮಗಳಿಗೆ ಚಾಲನೆ ನೀಡುವ ಸಂಬಂಧ ಸರ್ಕಾರಿ ಆದೇಶ ಹೊರ ಬಿದ್ದಿತು. 2007ರ ಸೆಪ್ಟೆಂಬರ್ 26ರಂದು ಹಣಕಾಸು ಇಲಾಖೆ ಈ ಯೋಜನೆಗೆ ಸಮ್ಮತಿ ನೀಡಿತ್ತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟಕ್ಕೆ ಸಮನಾದ ರಾಜ್ಯ ಸರ್ಕಾರದ ಕಾರ್ಯಕಾರಿ ಸಮಿತಿ ಸಭೆಯು ಈ ಯೋಜನೆ ಜಾರಿಗೆ ಅಂತಿಮ ಒಪ್ಪಿಗೆ ಕೊಟ್ಟಿತ್ತು.

2006: ಅಮೆರಿಕದ ಚುನಾವಣೆ ಎದುರಿಸದ ಅಧ್ಯಕ್ಷ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಜೆರಾಲ್ಡ್ ಫೋರ್ಡ್ (93) (1913-2006) ಲಾಸ್ ಏಂಜೆಲಿಸ್ನಲ್ಲಿ ನಿಧನರಾದರು. 1974ರಲ್ಲಿ ರಿಚರ್ಡ್ ನಿಕ್ಸನ್ ಅವರು ವಾಟರ್ ಗೇಟ್ ಹಗರಣದ ಆರೋಪಕ್ಕೆ ಗುರಿಯಾಗಿ ರಾಜೀನಾಮೆ ಸಲ್ಲಿಸಿದಾಗ ಫೋರ್ಡ್ ಅವರು ಅಮೆರಿಕದ 38ನೇ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ರಿಪಬ್ಲಿಕನ್ ಪಕ್ಷಕ್ಕೆ ಸೇರಿದ ಅವರು ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಚುನಾವಣೆ ಎದುರಿಸಲಿಲ್ಲ. ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಲ್ಲಿ ನಿಕ್ಸನ್ ಅವರಿಗೆ ಸಂಪೂರ್ಣ ಕ್ಷಮಾಪಣೆ ನೀಡಿ ಜನರನ್ನು ಅಚ್ಚರಿಯ ಕೂಪಕ್ಕೆ ಕೆಡವಿದ್ದರು.

2006: ತೈವಾನ್ ರಾಷ್ಟ್ರದ ಅಧ್ಯಕ್ಷ ಚೆನ್ ಶುಯಿ ಬಿಯಾನ್ ಅಳಿಯ ಚೌ ಚುಯಾನ್ ಮಿಂಗ್ ಅವರು ಅಧ್ಯಕ್ಷರ ಹೆಸರು ಬಳಸಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದು ಸಾಬೀತಾದ ಕಾರಣ ನ್ಯಾಯಾಲಯ 6 ವರ್ಷಗಳ ಸೆರೆಮನೆವಾಸದ ಶಿಕ್ಷೆ ವಿಧಿಸಿತು.

2006: ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಬಿ ಎಸ್ ಸಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಮುಕುಂದ ತಿವಾರಿ ಅವರಿಗೆ ಅಂಗವಿಕಲರ ನೆರವಿಗಾಗಿ ಸಂಶೋಧಿಸಿದ ಅಗ್ಗದ ದರದ ತಂತ್ರಜ್ಞಾನಕ್ಕಾಗಿ ರಾಷ್ಟ್ರೀಯ ಪುರಸ್ಕಾರ ಲಭಿಸಿತು.

2006: ಸೌರಮಂಡಲದ ಆಚೆಗಿನ ಭೂಮಿಯನ್ನು ಹೋಲುವ ಹೊಸ ಗ್ರಹ ಒಂದನ್ನು ಹುಡುಕುವ ಸಲುವಾಗಿ ಹಾಗೂ ನಕ್ಷತ್ರಗಳ ಆಂತರಿಕ ಒಳಗುಟ್ಟು ಅರಿಯುವ ಸಲುವಾಗಿ ಫ್ರೆಂಚ್ ಪ್ರಾಯೋಜಿತ ಮುಖ್ಯ ಉಪಗ್ರಹ ಯೋಜನೆಯಡಿ `ಕೊರೋಟ್' ಹೆಸರಿನ `ಗ್ರಹ ಅನ್ವೇಷಕ' ಒಂದನ್ನು ಕಜಕಿಸ್ಥಾನದಿಂದ ಉಡಾವಣೆ ಮಾಡಲಾಯಿತು. `ಕೊರೋಟ್' ಸೌರ ಮಂಡಲದಾಚೆಗಿನ ಸೌರ ವ್ಯವಸ್ಥೆ ಹಾಗೂ ಭೂಮಿಯನ್ನು ಹೋಲುವಂತಹ ಗ್ರಹವನ್ನು ಹುಡುಕುವಂತಹ ಪ್ರಪ್ರಥಮ ಬಾಹ್ಯಾಕಾಶ ದೂರದರ್ಶಕ (ಟೆಲೆಸ್ಕೋಪ್) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2005: ಲೈಂಗಿಕ ಹಗರಣದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜಯ ಜೋಶಿ ರಾಜೀನಾಮೆ ನೀಡಿದರು.

1979: ಸೋವಿಯತ್ ಪಡೆಗಳು ಅಪಘಾನಿಸ್ಥಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡವು. ಅಧ್ಯಕ್ಷ ಹಫೀಜುಲ್ಲಾ ಅಮೀನ್ ಅವರನ್ನು ಮರಣದಂಡನೆಗೆ ಗುರಿಪಡಿಸಲಾಯಿತು. ಅವರ ಸ್ಥಾನಕ್ಕೆ ಬಬ್ರಾಕ್ ಕರ್ಮಾಲ್ ಅವರನ್ನು ನೇಮಿಸಲಾಯಿತು. ಇದು ಹತ್ತು ವರ್ಷಗಳಿಗೂ ಹೆಚ್ಚಿನ ಕಾಲದ ಸಮರದ ಆರಂಭಕ್ಕೆ ನಾಂದಿಯಾಯಿತು.

1965: ಹಿಂದೀ ಚಿತ್ರನಟ ಸಲ್ಮಾನ್ ಖಾನ್ ಹುಟ್ಟಿದ ದಿನ.

1959: ಸಾಹಿತಿ ಮುಕುಂದರಾಜ್ ಎಲ್. ಜನನ.

1948: ಸಾಹಿತಿ ತಾಳ್ತಜೆ ವಸಂತಕುಮಾರ್ ಜನನ.

1945: ವಾಷಿಂಗನ್ನಿನಲ್ಲಿ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ `ವಿಶ್ವ ಬ್ಯಾಂಕ್' ಸ್ಥಾಪನೆಗೊಂಡಿತು. 28 ರಾಷ್ಟ್ರಗಳು ಈ ನಿಟ್ಟಿನ ಒಪ್ಪಂದಕ್ಕೆ ಸಹಿ ಹಾಕಿದವು.

1939: ಸಾಹಿತಿ ಜಯದೇವಪ್ಪ ಜೈನ ಕೇರಿ ಜನನ.

1929: ಉತ್ತಮ ಪ್ರಾಧ್ಯಾಪಕ, ಸುಗಮ ಸಂಗೀತ ಗಾಯಕ ಪ್ರೊ. ಕೆ.ಬಿ. ಪ್ರಭುಪ್ರಸಾದ್ ಅವರು ಬಿ.ಎಸ್. ಕುರುವತ್ತಿ- ಸರ್ವಮಂಗಳೆ ದಂಪತಿಯ ಮಗನಾಗಿ ದಾವಣಗೆರೆಯಲ್ಲಿ ಜನಿಸಿದರು.

1911: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಕಲ್ಕತ್ತಾ (ಈಗಿನ ಕೋಲ್ಕತ) ಅಧಿವೇಶನದಲ್ಲಿ `ಜನ ಗಣ ಮನ' ಗೀತೆಯನ್ನು ಹಾಡಲಾಯಿತು. 1950ರ ಜನವರಿ 24ರಂದು ಅದನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು.

1831: ಚಾರ್ಲ್ಸ್ ಡಾರ್ವಿನ್ ಅವರಿದ್ದ ಎಚ್ ಎಂ ಎಸ್ ಬೀಗಲ್ ನೌಕೆಯು ಜಗತ್ತಿಗೆ ಸುತ್ತುಹಾಕುವ ವೈಜ್ಞಾನಿಕ ಪ್ರವಾಸಕ್ಕಾಗಿ ಪ್ಲೈಮೌತ್ನಿಂದ ಯಾನ ಆರಂಭಿಸಿತು. ಈ ಯಾನ ಐದು ವರ್ಷಗಳ ಕಾಲ ಮುಂದುವರೆಯಿತು.

1797: ಪರ್ಷಿಯನ್ ಹಾಗೂ ಉರ್ದು ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದ ಭಾರತದ ಖ್ಯಾತ ಕವಿ, ಬರಹಗಾರ ಮಿರ್ಜಾ ಅಸದುಲ್ಲಾ ಖಾನ್ ಘಾಲಿಬ್ (1797-1869) ಹುಟ್ಟಿದ ದಿನ.

1773: ಸರ್ ಜಾರ್ಜ್ ಗೇಲೇ (1773-1857) ಹುಟ್ಟಿದ ದಿನ. ಈತ ಮಾನವನನ್ನು ಒಯ್ಯಬಹುದಾದ ಮೊತ್ತ ಮೊದಲ ಗ್ಲೈಡರನ್ನು ಯಶಸ್ವಿಯಾಗಿ ನಿರ್ಮಿಸಿದ.

1571: ಜರ್ಮನ್ ಖಗೋಳ ತಜ್ಞ ಹಾಗೂ ಭವಿಷ್ಯಕಾರ ಜೊಹಾನ್ನೆಸ್ ಕೆಪ್ಲರ್ (1571-1630) ಹುಟ್ಟಿದ ದಿನ. ಗ್ರಹಗಳ ಚಲನೆಗೆ ಸಂಬಂಧಿಸಿದ ಮೂರು ತತ್ವಗಳಿಗಾಗಿ ಈತ ಖ್ಯಾತನಾಗಿದ್ದಾನೆ.

No comments:

Post a Comment