ನಾನು ಮೆಚ್ಚಿದ ವಾಟ್ಸಪ್

Sunday, December 2, 2018

ಇಂದಿನ ಇತಿಹಾಸ History Today ಡಿಸೆಂಬರ್ 02

ಇಂದಿನ ಇತಿಹಾಸ History Today ಡಿಸೆಂಬರ್  02
2018: ನವದೆಹಲಿ:  ಸುನೀಲ್ ಅರೋರಾ ಅವರು ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಹಾಲಿ ಸಿಇಸಿ, ಓಂ ಪ್ರಕಾಶ್ ರಾವತ್ ಅವರು ಹಿಂದಿನ ದಿನ  ನಿವೃತ್ತರಾಗಿದ್ದರು. ೨೦೧೯ ಸಾರ್ವತ್ರಿಕ ಚುನಾವಣೆಯನ್ನು ಚುನಾವಣಾ ಆಯೋಗವು  ಅರೋರಾ ನೇತೃತ್ವದಲ್ಲಿ ನಿರ್ವಹಿಸಲಿದೆ. ಅಲ್ಲದೆ  ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂಗಳಲ್ಲಿ ವಿಧಾನಸಭೆ ಚುನಾವಣೆಗಳು ಮುಂದಿನ ವರ್ಷ ನಡೆಯಲಿದೆ. ಸಿಇಸಿ ಅಥವಾ ಇಸಿ ಅವರ ಅಧಿಕಾರಾವಧಿ 6 ವರ್ಷ  ಅಥವಾ ಅವರಿಗೆ ೬೫ ವರ್ಷ ವಯಸ್ಸು ಆಗುವವರೆಗೆ ಇರುತ್ತದೆ. ಹಿರಿಯ ಚುನಾವಣಾ ಆಯುಕ್ತರನ್ನು  ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ ಮಾಡಲಾಗುತ್ತದೆ.  ನಿವೃತ್ತ ಅಧಿಕಾರಿ ಅರೋರಾ ಅವರನ್ನು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಚುನಾವಣಾ ಆಯುಕ್ತರಾಗಿ ನೇಮಿಸಲಾಗಿತ್ತು. ಅದಕ್ಕೆ ಮುನ್ನ ಅವರು ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ, ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಕಾರ್ಯದರ್ಶಿಯಾಗಿದ್ದರುರಾಜಸ್ಥಾನ್ ಕೇಡರಿನ ೧೯೮೦ ತಂಡದ ಐಎಎಸ್ ಅಧಿಕಾರಿಯಾದ ಅರೋರಾ ಹಣಕಾಸು, ಜವಳಿ ಮತ್ತು ಯೋಜನಾ ಆಯೋಗದಂತಹ ಸಚಿವಾಲಯಗಳಲ್ಲಿ ಕೆಲಸ ಮಾಡಿದ್ದರು. ಅವರು ೧೯೯೯-೨೦೦೨ ರಿಂದ ನಾಗರಿಕ ವಿಮಾನಯಾನ (ಸಿವಿಲ್ ಏವಿಯೇಶನ್) ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಮತ್ತು ಐದು ವರ್ಷಗಳ ಕಾಲ ಭಾರತೀಯ  ಏರ್ ಲೈನ್ಸನಿನ  ಮುಖ್ಯ ಆಡಳಿತ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರುರಾಜಸ್ಥಾನದಲ್ಲಿ, ಧೋಲ್ಪುರ್,  ಆಳ್ವಾರ್, ನಗೌರ್ ಮತ್ತು ಜೋಧ್ ಪುರ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುವುದರ ಜೊತೆಗೆ ಅವರು ೧೯೯೩-೧೯೯೮ರ ಅವಧಿಯಲ್ಲಿ ಮುಖ್ಯಮಂತ್ರಿಯ ಕಾರ್ಯದರ್ಶಿಯಾಗಿ ಹಾಗೂ ಮುಖ್ಯಮಂತ್ರಿಗಳ  ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ (ಐಪಿಆರ್), ಕೈಗಾರಿಕೆಗಳು ಮತ್ತು ಹೂಡಿಕೆ ಇಲಾಖೆಗಳನ್ನೂ ನಿರ್ವಹಿಸಿದ್ದರು.

2018: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಯುವಕರನ್ನು ಉಗ್ರಗಾಮಿ ಕೃತ್ಯಗಳತ್ತ ಸೆಳೆಯಲು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ಮಹಿಳೆಯರನ್ನುಹನಿ ಟ್ರ್ಯಾಪ್ ಆಗಿ ಬಳಸುತ್ತಿರುವ ವಿಚಾರ ಬೆಳಕಿಗೆ ಬಂದಿತು. ಜಮ್ಮು ಮತ್ತು ಕಾಶ್ಮೀರದ ಯುವಕರನ್ನು ಉಗ್ರಗಾಮಿ ಕೃತ್ಯಗಳತ್ತ ಆಕರ್ಷಿಸಲು ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಬಳಸುತ್ತಿರುವ ಹೊಸ ತಂತ್ರಗಳಲ್ಲಿ ಮಹಿಳೆಯರ ಮೂಲಕಹನಿ ಟ್ರ್ಯಾಪ್ ಬೀಸುವುದೂ ಒಂದಾಗಿದ್ದು, ಬಲೆಗೆ ಬೀಳುವ ಯುವಕರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಶಸ್ತ್ರಾಸ್ತ್ರಗಳ ಸಾಗಣೆಗೆಮಾನವ ವಾಹಕರಾಗಿ ಬಳಸಲಾಗುತ್ತಿತ್ತು ಇಲ್ಲವೇ ಭಾರತಕ್ಕೆ ನುಸುಳುವ ಭಯೋತ್ಪಾದಕರಿಗೆ ಗೈಡ್ ಗಳಾಗಿ ಬಳಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದರು. ಗುಪ್ತಚರ ಆಧಾರಿತ ಕಾರ್ಯಾಚರಣೆಯೊಂದರಲ್ಲಿ ಹದಿನೈದು ದಿನಗಳ ಹಿಂದೆ ಬಂಡಿಪೋರದಲ್ಲಿ ೩೦ರ ಹರೆಯದ ಸೈಯದ್ ಶಾಜಿಯಾ ಎಂಬ ಮಹಿಳೆಯನ್ನು ಬಂಧಿಸಲಾಗಿದ್ದು, ಈಕೆ ಇಂತಹ ಕೃತ್ಯಗಳಲ್ಲಿ ನಿರತಳಾಗಿದ್ದಳು ಎಂದು ಅಧಿಕಾರಿಗಳು ಹೇಳಿದರು. ಬಂಧಿತ ಶಾಜಿಯಾ ಫೇಸ್ ಬುಕ್, ಇನ್ಸ್ಟಾಗ್ರಾಮ್ ಇತ್ಯಾದಿ ಸಾಮಾಜಿಕ ಜಾಲತಾಣಗಲಲ್ಲಿ ಹಲವಾರು ಖಾತೆಗಳನ್ನು ಹೊಂದಿದ್ದು, ಕಣಿವೆಯ ಹಲವಾರು ಯುವಕರು ತನ್ಮೂಲಕ ಆಕೆಯ ಸಂಪರ್ಕ ಹೊಂದಿದ್ದರು. ಮಹಿಳೆ ಬಳಸುತ್ತಿದ್ದ ಇಂಟರ್ ನೆಟ್ ಪ್ರೊಟೋಕಾಲ್ (ಐಪಿ) ವಿಳಾಸ ಮೇಲೆ ಹಲವಾರು ತಿಂಗಳುಗಳ ಕಾಲ ಕಣ್ಣಿಟ್ಟ ಕೇಂದ್ರೀಯ ಭದ್ರತಾ ಸಂಸ್ಥೆಗಳ ಅಧಿಕಾರಿಗಳು, ನೀಡಲಾಗುವ ಸರಕನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಿಸಿದರೆ ಮಾತ್ರವೇ ತಾನು ಭೇಟಿ ಮಾಡುವುದಾಗಿ ಯುವಕರಿಗೆ ಭರವಸೆ ನೀಡುತ್ತಿದ್ದುದನ್ನು ಪತ್ತೆ ಹಚ್ಚಿದರು.  ಶಾಜಿಯಾ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳ ಜೊತೆಗೂ ಸಂಪರ್ಕ ಹೊಂದಿದ್ದಳು. ಆದರೆ ಇದು ಸೇನೆಯ ಚಲನವಲನಗಳ ಬಗ್ಗೆ ವರದಿ ಮಾಡಲು ಬಳಸಲಾಗುವ ಮಾಮೂಲಿಡಬಲ್ ಕ್ರಾಸ್ ತಂತ್ರ ಎಂಬುದಾಗಿ ಪೊಲೀಸ್ ಅಧಿಕಾರಿಗಳು ಬಣ್ಣಿಸಿದ್ದರು. ಗಡಿಯಾಚೆಯ ಮಂದಿಗೆ ಈಕೆ ಕೊಡುತ್ತಿದ್ದ ವರದಿ ಅಂತಹ ಸೂಕ್ಷ್ಮ ವರದಿಗಳೂ ಆಗಿರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದರು.  ಬಂಧನದ ಬಳಿಕ ವಿಚಾರಣೆ ಕಾಲದಲ್ಲಿ ಶಾಜಿಯಾ ಉಗ್ರವಾದದತ್ತ ಯುವಕರನ್ನು ಸೆಳೆಯುವ ಕೆಲಸವಹಿಸಲಾದ, ಉಗ್ರಗಾಮಿಗಳ ಜೊತೆಗೆ ಸಂಪರ್ಕದಲ್ಲಿರುವ ಇನ್ನಷ್ಟು ಮಹಿಳೆಯರು ಇರುವ ಸಾಧ್ಯತೆ ಇರುವ ಬಗ್ಗೆ ಸುಳಿವು ನೀಡಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ಶಾಜಿಯಾ ಬಂಧನಕ್ಕೆ ಒಂದು ವಾರ ಮುನ್ನ, ನವೆಂಬರ್ ೧೭ರಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಆಯೇಸಿಯಾ ಜಾನ್ (೨೮) ಎಂಬ ಯುವತಿಯನ್ನು ೨೦ ಗ್ರೆನೇಡ್ ಗಳನ್ನು ನಗರ ಹೊರವಲಯದ ಲಾಯಪೋರದಲ್ಲಿ ಒಯ್ಯುತ್ತಿದ್ದುದಕ್ಕಾಗಿ ಬಂಧಿಸಿದ್ದರು. ನಗರಕ್ಕೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಕಳ್ಳಸಾಗಣೆ ಮಾಡಲು ಉಗ್ರಗಾಮಿಗಳು ಯತ್ನಿಸುತ್ತಿದ್ದಾರೆ ಎಂಬ ವರ್ತಮಾನವನ್ನು ಅನುಸರಿಸಿ ಪೊಲೀಸರು ಯುವತಿಯನ್ನು ಬಂಧಿಸಿದ್ದರು. ಯುವತಿಯಿಂದ ಗ್ರೆನೇಡ್ಗಳಲ್ಲದೆ ಮದ್ದುಗುಂಡನ್ನೂ ಪೊಲೀಸರು ವಶಪಡಿಸಿಕೊಂಡಿದ್ದರುಕಳೆದ ವರ್ಷ ಸೆಪ್ಟೆಂಬರಿನಲ್ಲಿ ಪೊಲೀಸರು ಲಷ್ಕರ್--ತೊಯ್ಬಾ ಭಯೋತ್ಪಾದಕ ಮುಖ್ಯಸ್ಥ ಅಬು ಇಸ್ಮಾಯಿಲ್ ಮತ್ತು ಆತನ ಸಂಗಡಿಗ ಛೋಟಾ ಖಾಸಿಮ್ ಅವರನ್ನು ಕೊಂದ ಬಳಿಕ ಯುವತಿಯ ಮೇಲೆ ನಿಗಾ ಇಡಲಾಗಿತ್ತುಹತ ಭಯೋತ್ಪಾದಕರಿಬ್ಬರೂ ಹಿಂದಿನ ವರ್ಷ ಅಮರನಾಥ ಯಾತ್ರಿಕರ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲಿ ಶಾಮೀಲಾಗಿದ್ದರು. ದಾಳಿಗೆ ಮಂದಿ ಬಲಿಯಾಗಿದ್ದರು. ಶ್ರೀನಗರದ ಹೊರ ವಲಯದಲ್ಲಿ ನಡೆದ ಗುಂಡಿನ ಘರ್ಷಣೆಯ ಸ್ಥಳದಲ್ಲಿ ವಶಪಡಿಸಿಕೊಳ್ಳಲಾಗಿದ್ದ ಕೆಲವು ದಾಖಲೆಗಳು ಮತ್ತು ವಸ್ತುಗಳು ಉತ್ತರ ಕಾಶ್ಮೀರದ ಅಪರಿಚಿತ ಮಹಿಳೆಯೊಬ್ಬಳು ಇಬ್ಬರೂ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಮದ್ದುಗುಂಡು ಸರಬರಾಜಿನಲ್ಲಿ ಶಾಮೀಲಾಗಿದ್ದಳು ಎಂಬ ಸುಳಿವು ನೀಡಿದ್ದವು.   ವರ್ಷದ ಏಪ್ರಿಲ್ ನಲ್ಲಿ ಸೈಯದ್ ಶಾಜಿಯಾಳನ್ನು ಗುರುತಿಸಲಾಗಿತ್ತು. ಆಕೆಯ ಸಾಮಾಜಿಕ ಜಾಲತಾಣ ಖಾತೆಗಳ ಮೇಲಿನ ನಿರಂತರ ನಿಗಾದಿಂದ ಆಕೆ ಭಯೋತ್ಪಾದನೆ ಕೃತ್ಯಕ್ಕಾಗಿ ಯುವಕರ  ’ಹನಿಟ್ರ್ಯಾಪ್ ಕೆಲಸಕ್ಕೆ ಸಂಬಂಧಿಸಿದಂತೆ ಗಡಿಯಾಚೆಯ ವ್ಯಕ್ತಿಗಳಿಂದ ಸೂಚನೆಗಳನ್ನು ಪಡೆಯುತ್ತಿದ್ದುದು ಪತ್ತೆಯಾಗಿತ್ತುಜೈಶ್--ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಶೆರ್ವಾನ್  ಯಾನೆ ಅಲಿ ಜೊತೆಗೆ ಶಾಜಿಯಾ ನಿರಂತರ ಸಂಪರ್ಕ ಹೊಂದಿದ್ದಳು. ಪಾಕಿಸ್ತಾನ ಮೂಲದ ಭಯೋತ್ಪಾದಕರಾದ ಸುಫಿಯಾನ್ ಮತ್ತು ಖಾಸಿಮ್ ಖಾನ್ ಗೌರಿ ಅವರಿಗೆ ಶೆರ್ವಾನನೇ ಮಹಿಳೆಯನ್ನು ಪರಿಚಯಿಸಿದ್ದ. ಭೇಟಿಯ ಬಳಿಕ ಶಾಜಿಯಾ ಜೈಶ್ ಭಯೋತ್ಪಾದಕ ಗುಂಪಿನ ಕಾರ್ಯಕರ್ತೆಯಾಗಿ ಕಣಿವೆಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ತಾನೆಹನಿ ಟ್ರ್ಯಾಪ್ ಮಾಡಿ ಸೆಳೆದ ಯುವಕರ ಮೂಲಕ ಶಸ್ತ್ರಾಸ್ತ್ರಗಳನ್ನು ಸಾಗಣೆ ಮಾಡಿಸುವ ಕೆಲಸ ನಿರ್ವಹಿಸಿದಳು ಎಂದು ಅಧಿಕಾರಿಗಳು ಹೇಳಿದ್ದಾರೆ.   ಶಾಜಿಯಾ ಬಂಧನಕ್ಕೆ ಮುನ್ನ ಹಂದ್ವಾರದ ವಿಶೇಷ ಪೊಲೀಸ್ ಅಧಿಕಾರಿಯೊಬ್ಬರನ್ನು ಪೊಲೀಸರು ಮಹಿಳೆಯ ಜೊತೆ ದೂರವಾಣಿ ಸಂಪರ್ಕ ಇಟ್ಟಿದ್ದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದರು. ಇರ್ಫಾನ್ ಎಂಬುದಾಗಿ ಗುರುತಿಸಲಾದ ವಿಶೇಷ ಪೊಲೀಸ್ ಅಧಿಕಾರಿ ಆಕೆಗೆ ಇಲಾಖೆಯ ಮಾಹಿತಿಗಳನ್ನು ರವಾನಿಸುತ್ತಿದ್ದುದು ಗೊತ್ತಾಗಿತ್ತು ಎಂದು ಅಧಿಕಾರಿಗಳು ಹೇಳಿದರು. ಮಹಿಳೆಯನ್ನು ರಣಬೀರ್ ಪೀನಲ್ ಕೋಡ್ (ಭಾರತಿಯ ದಂಡ ಸಂಹಿತೆಗೆ ಸಮಾನವಾದ ಸಂಹಿತೆ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ವಿಧಿಗಳ ಅಡಿಯಲ್ಲಿ ಬಂಧಿಸಲಾಯಿತು.

2018: ನವದೆಹಲಿ: ಭಾರತದ ಚೊಚ್ಚಲ ಲೋಕೋಮೋಟಿವ್ (ಎಂಜಿನ್) ರಹಿತ ರೈಲು ಅಥವಾರೈಲು ೧೮ ಪರೀಕ್ಷಾ ಚಾಲನೆಯಲ್ಲಿ ಗಂಟೆಗೆ ೧೮೦ ಕಿಮೀ ವೇಗದ ದಾಖಲೆಯನ್ನು ಮುರಿದಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಬಹಿರಂಗ ಪಡಿಸಿದರು.  ಇದರೊಂದಿಗೆ ೧೦೦ ಕೋಟಿ ರೂಪಾಯಿ ವೆಚ್ಚದ ದೇಶೀ ವಿನ್ಯಾಸದ ರೈಲು ರಾಷ್ಟ್ರದ ಪ್ರಪ್ರಥಮ ಅತಿ ವೇಗದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.   ‘ರೈಲು ೧೮ ಗಂಟೆಗೆ ೧೮೦ ಕಿಮಿಗಳ ವೇಗದ ಮಿತಿಯನ್ನು ಕೋಟಾ-ಸವಾಯಿ ಮಾಧೋಪುರ ವಿಭಾಗದಲ್ಲಿ ಮುರಿಯಿತು. ಪ್ರಮುಖ ಪರೀಕ್ಷಾ ಚಾಲನೆಗಳು ಇದೀಗ ಮುಗಿದಿದ್ದು ಇನ್ನು ಕೆಲವೇ ಕೆಲವು ಪರೀಕ್ಷಾ ಓಡಾಟಗಳು ಬಾಕಿ ಇವೆ. ಈವರೆಗೆ ಯಾವುದೇ ತಾಂತ್ರಿಕ ಸಮಸ್ಯೆಗಳು ಉದ್ಭವಿಸಿಲ್ಲ ಎಂದು ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯ (ಐಸಿಎಫ್) ಜನರಲ್ ಮ್ಯಾನೇಜರ್ ಎಸ್. ಮಣಿ ತಿಳಿಸಿದರು. ಜನವರಿಯಲ್ಲಿ ವಾಣಿಜ್ಯ ಓಡಾಟ: ೨೦೧೯ರ ಜನವರಿಯಲ್ಲಿರೈಲು ೧೮ ತನ್ನ ವಾಣಿಜ್ಯ ಓಡಾಟವನ್ನು ಆರಂಭಿಸುವುದು  ಎಂಬುದು ನಮ್ಮ ನಿರೀಕ್ಷೆ. ಸಾಮಾನ್ಯವಾಗಿ ಪರೀಕ್ಷಾ ಚಾಲನೆಗಳು ತಿಂಗಳ ಕಾಲ ನಡೆಯುತ್ತವೆ. ಆದರೆ ಈಗ ಇದು ನಿರೀಕ್ಷೆಗಿಂತ ವೇಗವಾಗಿ ಆಗುತ್ತಿವೆ ಎಂದು ಮಣಿ ನುಡಿದರು. ಎಲ್ಲವೂ ಎಣಿಕೆಯಂತೆಯೇ ನಡೆದರೆರೈಲು ೧೮ ಹಾಲಿ ಶತಾಬ್ದಿ ಎಕ್ಸ್ ಪ್ರೆಸ್ ಹಗಲು ರೈಲುಗಾಡಿ ಸ್ಥಾನಕ್ಕೆ ಬರಲಿದೆಹಳಿಗಳು, ಸಿಗ್ನಲ್ ಇತ್ಯಾದಿಗಳು ಇದರ ವೇಗಕ್ಕೆ ಅನುಗುಣವಾಗಿ ಸ್ಪಂದಿಸಿದರೆರೈಲು ೧೮ ಗಂಟೆಗೆ ೨೦೦ ಕಿಮೀ ವೇಗದಲ್ಲಿ ಸಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರುಸ್ಲೀಪರ್ ರೈಲು ಕೂಡಾ ಸಾಧ್ಯ: ರೈಲು ೧೮ರ ಸ್ಲೀಪರ್ ಆವೃತ್ತಿಗಳ ಬಗ್ಗೆ ಕೇಳಲಾದ ಪ್ರಶ್ನೆಗೆನಾವು ಸ್ಲೀಪರ್ ರೈಲುಗಳನ್ನೂ ಹೊರಗೆ ಬಿಡಲು ಸಾಧ್ಯವಿದೆ. ಅದಕ್ಕಾಗಿ ರೈಲುಗಾಡಿಗೆ ಮಹತ್ವದ ಬದಲಾವಣೆಗಳನ್ನೇನೂ ಮಾಡಬೇಕಾಗುವುದಿಲ್ಲ ಎಂದು ಅವರು ನುಡಿದರು. ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯು ಪ್ರಸ್ತುತ ಹಣಕಾಸು ವರ್ಷದಲ್ಲಿ ಇನ್ನೂ ಒಂದು ರೈಲು ೧೮ನ್ನು ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ನಾಲ್ಕು ರೈಲು ೧೮ ಗಾಡಿಗಳನ್ನು ನಿರ್ಮಿಸಲಿದೆ ಎಂದು ಮಣಿ ಹೇಳಿದರು. ರಫ್ತು ಸಾಧ್ಯತೆ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರುಮೊದಲ ದೇಶೀಯ ಬೇಡಿಕೆಗಳನ್ನು ಈಡೇರಿಸಲಾಗುವುದು. ಬಳಿಕ ಸಾಗರದಾಚೆಯ ಮಾರುಕಟ್ಟೆಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ನುಡಿದರು.  ‘ವಿದೇಶೀ ಬೇಡಿಕೆಯು ರಾಷ್ಟ್ರಗಳು ಹೊಂದಿರುವ ರೈಲ್ವೇ ಹಳಿಗಳನ್ನು ಅವಲಂಬಿಸಿದೆ. ಮಧ್ಯಮ ಆದಾಯದ ರಾಷ್ಟ್ರಗಳು ಖಂಡಿತವಾಗಿ ರೈಲನ್ನು ಖರೀದಿಸಬಲ್ಲವು ಎಂದು ಮಣಿ ಹೇಳಿದರು. ಅಕ್ಟೋಬರ್ ೨೯ರಂದು ಅತ್ಯುನ್ನತ ತಂತ್ರಜ್ಞಾನದ, ಇಂಧನ ದಕ್ಷತೆಯ ಸ್ವಯಂಚಾಲಿತ ಅಥವಾ ಎಂಜಿನ್ ರಹಿತ ರೈಲಿಗೆ ರೈಲ್ವೇ ಮಂಡಳಿ ಅಧ್ಯಕ್ಷ ಅಶ್ವನಿ ಲೋಹಾನಿ ಹಸಿರು ನಿಶಾನೆ ತೋರಿಸಿದ್ದರು೧೬ ಬೋಗಿಗಳಿರುವ ರೈಲುಗಾಡಿಯು ಶತಾಬ್ದಿ ಎಕ್ಸ್ಪ್ರೆಸ್ ರೈಲು ಒಯ್ಯುವಷ್ಟೇ ಪ್ರಯಾಣಿಕರನ್ನು ಒಯ್ಯಬಲ್ಲುದು. ಇದು ಸಾಂಪ್ರದಾಯಿಕ ರೈಲುಗಾಡಿಗಳಿಗೆ ಹೋಲಿಸಿದರೆ ಶೇಕಡಾ ೧೫ರಿಂದ ೨೦ರಷ್ಟು ಕಡಿಮೆ ಇಂಧನವನ್ನು ಬಳಸುತ್ತದೆ. ಮತ್ತು ಕಡಿಮೆ ಕಾರ್ಬನ್ ಹೊರಹಾಕುತ್ತದೆರೈಲುಗಾಡಿಯ ಕಲ್ಪನೆ, ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಕೇವಲ ೧೮ ತಿಂಗಳುಗಳ ಅವಧಿಯಲ್ಲಿ ಮಾಡಲಾಯಿತು. ಸಾಮಾನ್ಯವಾಗಿ ಕೆಲಸಕ್ಕೆ ನಾಲ್ಕು ವರ್ಷಗಳು ತಗುಲುತ್ತವೆ ಎಂದು ಅಧಿಕಾರಿಗಳು ಹೇಳಿದರು. ಎಂಜಿನ್ ರಹಿತ ರೈಲುಗಾಡಿಯು ಏರೋಡೈನಮಿಕ್ ವಿನ್ಯಾಸದ ಚಾಲಕ ಕ್ಯಾಬಿನ್ಗಳನ್ನು ರೈಲುಗಾಡಿಯ ಉಭಯ ಕಡೆಗಳಲ್ಲೂ ಹೊಂದಿರುತ್ತದೆ

2018: ನವದೆಹಲಿ: ಭಯೋತ್ಪಾದನೆ ನಿಗ್ರಹದ ಹೋರಾಟವನ್ನು ಏಕಾಂಗಿಯಾಗಿ ನಿಭಾಯಿಸಲು ಸಾಧ್ಯವಿಲ್ಲ ಎಂದಾದರೆ ಪಾಕಿಸ್ತಾನವು ಅದಕ್ಕಾಗಿ ಭಾರತದ ನೆರವನ್ನು ಕೋರಬಹುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ರಾಜಸ್ಥಾನದಲ್ಲಿ ಹೇಳಿದರು. ಮೂಲಕ ಪಾಕಿಸ್ತಾನವು ಕೋರಿದರೆ, ಭಯೋತ್ಪಾದನೆ ನಿಗ್ರಹಕ್ಕಾಗಿ ಅದಕ್ಕೆ ನೆರವು ನೀಡಲು ಭಾರತ ಸಿದ್ಧ ಎಂಬ ಸುಳಿವನ್ನು ಗೃಹ ಸಚಿವರು ನೀಡಿದರು. ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ನಿರತರಾಗಿದ್ದ ಅವರು ಬನ್ಸೂರ್ ಜಿಲ್ಲೆ ಆಳ್ವಾರ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ’ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರಾಷ್ಟ್ರದಲ್ಲಿ ಭಯೋತ್ಪಾದನೆ ಸಂಬಂಧಿತವಾದ ಯಾವುದೇ ಮಹತ್ವದ ಘಟನೆ ಘಟಿಸಿಲ್ಲ ಎಂದು ಒತ್ತಿ ಹೇಳಿದರು.  ‘ಅಮೆರಿಕದ ನೆರವಿನೊಂದಿಗೆ ಆಫ್ಘಾನಿಸ್ಥಾನದಲ್ಲಿ ಭಯೋತ್ಪಾದನೆ ಮತ್ತು ತಾಲಿಬಾನ್ ವಿರುದ್ಧ ಹೋರಾಡಬಹುದಾದರೆ, ಭಯೋತ್ಪಾದನೆ ನಿಗ್ರಹ  ಕಾರ್ಯವನ್ನು ಏಕಾಂಗಿಯಾಗಿ ನಿಭಾಯಿಸಲು ಸಾಧ್ಯವಿಲ್ಲ ಅನಿಸಿದರೆ ಪಾಕಿಸ್ತಾನವು ಭಾರತದ ನೆರವನ್ನು ಕೋರಬಹುದಲ್ಲವೇ ಎಂದು ನಾನು ಪಾಕಿಸ್ತಾನಿ ಪ್ರಧಾನಿ (ಇಮ್ರಾನ್ ಖಾನ್) ಅವರನು ಪ್ರಶ್ನಿಸಬಯಸುತ್ತೇನೆ ಎಂದು ಕೇಂದ್ರ ಗೃಹ ಸಚಿವರು ನುಡಿದರು. ಜಮ್ಮು ಮತ್ತು ಕಾಶ್ಮೀರವು ಒಂದು ವಿಷಯವೇ ಅಲ್ಲ. ಅದು ಭಾರತದ ಅವಿಭಾಜ್ಯ ಅಂಗ. ಅದು ಭಾರತದ ಅವಿಭಾಜ್ಯ ಅಂಗವಾಗಿಯೇ ಮುಂದುವರೆಯುತ್ತದೆಭಯೋತ್ಪಾದನೆ ಒಂದು ವಿಷಯ ಮತ್ತು ಪಾಕಿಸ್ತಾನವು ಅದರ ಬಗ್ಗೆ ಮಾತುಕತೆ ನಡೆಸಬಹುದು ಎಂದು ಸಿಂಗ್ ಹೇಳಿದರು.  ಜಮ್ಮು ಮತ್ತು ಕಾಶ್ಮೀರ ವಿಷಯವೇ ಬೇರೆ, ಭಯೋತ್ಪಾದನೆ ವಿಷಯವೇ ಬೇರೆ ಎಂಬುದಾಗಿ ಹೇಳುವ ಮೂಲಕ ಭಾರತದ ಗೃಹ ಸಚಿವರು ಪಾಕಿಸ್ತಾನವು ಗಡಿಯಲ್ಲಿನ ಭಯೋತ್ಪಾದನೆ ನಿಗ್ರಹಕ್ಕೆ ಮುಂದಾಗಬೇಕು ಎಂಬುದನ್ನು  ಪರೋಕ್ಷವಾಗಿ ಹೇಳಿದರು.  ಪಾಕಿಸ್ತಾನವೂ ಏನಾದರೂ ಭಯೋತ್ಪಾದನೆ ನಿಗ್ರಹಕ್ಕೆ ಭಾರತದ ನೆರವು ಕೋರಿದ್ದೇ ಆದರೆ ಅದು ದಕ್ಷಿಣ ಏಷ್ಯಾದಲ್ಲಿ ಮಹತ್ವದ ಬದಲಾವಣೆಗಳಿಗೆ ನಾಂದಿಯಾಗುವ ಸಾಧ್ಯತೆಗಳಿವೆಕಾಂಗ್ರೆಸ್ ವಿರುದ್ಧ ದಾಳಿ: ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಗಳು ಬಂದಾಗ ಮಾತ್ರ ದೇವಾಲಯಗಳ ಹಾಗೂ ಪ್ರಾರ್ಥನೆಯ ನೆನಪಾಗುತ್ತದೆಪಕ್ಷವು ನಮ್ಮ ಸಶಸ್ತ್ರ ಪಡೆಗಳ ಶೌರ್ಯದ ಹಿಂದೆ ಅಡಗಲು ಪ್ರಯತ್ನಿಸುತ್ತಿದೆ ಎಂದು ಇದೇ ವೇಳೆಯಲ್ಲಿ ರಾಜನಾಥ್ ಸಿಂಗ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ರಾಜಸ್ಥಾನದ ಬನ್ಸೂರ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಸಿಂಗ್ ಅವರು ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಕೂಡಾ ಭಾರತೀಯ ಸೇನೆ ಸರ್ಜಿಕಲ್ ಮೂರು ದಾಳಿಗಳನ್ನು ನಡೆಸಿತ್ತು ಎಂಬುದಾಗಿ ನೀಡಿದ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿದರು.  ‘ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲೂ ಮೂರು ಸರ್ಜಿಕಲ್ ದಾಳಿಗಳು ನಡೆದಿವೆ ಎಂದು ರಾಹುಲ್ ಅವರು ಹೇಳಿದ್ದಾರೆ. ಅವರು ಅದನ್ನು ಈಗ ಏಕೆ ಬಹಿರಂಗ ಪಡಿಸುತ್ತಿದ್ದಾರೆ? ಮೊದಲೇ ಅದನ್ನು ಹೇಳಲಿಲ್ಲವೇಕೆ? ಕಾಂಗ್ರೆಸ್ ಏಕೆ ನಮ್ಮ ಸಶಸ್ತ್ರ ಪಡೆಗಳ ಶೌರ್ಯದ ಹಿಂದೆ ಏಕೆ ಅಡಗುತ್ತಿದೆ? ಪಡೆಗಳ ಶೌರ್ಯದ ಹಿಂದೆ ಅಡಗಲು ಅವರು ಈಗ ಏಕೆ ಯತ್ನಿಸುತ್ತಿದ್ದಾರೆ? ಸೇನೆಯ ಸಾಧನೆಗಳನ್ನು ಅರಿಯುವ ಹಕ್ಕು ಜನರಿಗೆ ಇದೆ ಎಂದು ಸಿಂಗ್ ಚುನಾವಣಾ ರ್ಯಾಲಿಯಲ್ಲಿ ಹೇಳಿದರು.  ರಾಹುಲ್ ಗಾಂಧಿಯವರು ಶನಿವಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತಾವಧಿ ಯಲ್ಲಿ ಮೂರು ಸರ್ಜಿಕಲ್ ದಾಳಿಗಳನ್ನು ನಡೆಸಲಾಗಿತ್ತು. ಆದರೆ ಸೇನೆಯು ಅದು ರಹಸ್ಯವಾಗಿರಬೇಕು ಎಂಬುದಾಗಿ ಬಯಸಿದ್ದರಿಂದ ಅದಕ್ಕೆ ಪ್ರಚಾರ ನೀಡಿರಲಿಲ್ಲ ಎಂದು ಪ್ರತಿಪಾದಿಸಿದ್ದರುಚುನಾವಣೆ ನಡೆಯಲಿರುವ ರಾಜಸ್ಥಾನದ ಉದಯಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಹುಲ್, ’ನರೇಂದ್ರ ಮೋದಿ ಅವರು ಮಾತ್ರವೇ ಪಾಕಿಸ್ತಾನದ ವಿರುದ್ಧ ೨೦೧೬ರಲ್ಲಿ ಸರ್ಜಿಕಲ್ ದಾಳಿ ನಡೆಸಿದ್ದಲ್ಲಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ಇಂತಹ ಮೂರು ಸರ್ಜಿಕಲ್ ದಾಳಿಗಳು ನಡೆದಿದ್ದವು ಎಂಬುದು ನಿಮಗೆ ಗೊತ್ತೆ? ಸೇನೆಯು ಸಿಂಗ್ ಅವರನ್ನು ಸಂಪರ್ಕಿಸಿ ಪಾಕಿಸ್ತಾನದ ವಿರುದ್ಧ ಸೇಡು ತೀರಿಸುವ ಅಗತ್ಯವಿದೆ ಎಂದು ಹೇಳಿತ್ತು. ಸೇನಾ ಪಡೆಯು ಅದನ್ನು ರಹಸ್ಯವಾಗಿ ಇರಿಸಬೇಕು ಎಂದೂ ಬಯಸಿತ್ತು ಎಂದು ಹೇಳಿದ್ದರು. ಕಾಂಗ್ರೆಸ್ ಪಕ್ಷವು ಅಪನಂಬಿಕೆಯ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ ಎಂದೂ ಸಿಂಗ್ ಆಪಾದಿಸಿದರು. ’ಕಾಂಗ್ರೆಸ್ ರಾಜಕೀಯದಲ್ಲಿ ಅಪನಂಬಿಕೆಯ ಬಿಕ್ಕಟ್ಟನ್ನು ಸೃಷ್ಟಿಸಿದೆ. ಅವರ ಮಾತುಗಳು ಮತ್ತು ಕೃತಿಗಳಲ್ಲಿ ಅಂತರವಿದೆ ಎಂದು ಅವರು ನುಡಿದರು. ಚುನಾವಣೆಗಳು ಹತ್ತಿರ ಬಂದಾಗ ಕಾಂಗ್ರೆಸ್ ನಾಯಕರು ದೇವಾಲಯಗಳಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲು ಆರಂಭಿಸುತ್ತಾರೆ, ಆದರೆ ಬಿಜೆಪಿಗೆ ಅವು ಸಂಸ್ಕೃತಿಯ ಅವಿಭಾಜ್ಯ ಅಂಗಗಳು ಎಂದು ರಾಜನಾಥ್ ಸಿಂಗ್ ಜೈಪುರದಲ್ಲಿ ಹೇಳಿದರು. ಇದಕ್ಕೆ ಮುನ್ನ ಬನ್ಸೂರಿನ ಇನ್ನೊಂದು ಚುನಾವಣಾ ರಾಲಿಯಲ್ಲಿ ಮಾತನಾಡಿದ ಅವರುರಾಷ್ಟ್ರವು ಬಡರಾಷ್ಟ್ರಗಳ ಪಟ್ಟಿಗೆ ಸೇರಲು ಭಾರತವನ್ನು ೫೫ ವರ್ಷ ಆಳಿದ ಕಾಂಗ್ರೆಸ್ ಪಕ್ಷವೇ ಕಾರಣ, ಪಕ್ಷವು ಜನರನ್ನು ವಂಚಿಸಿತು ಎಂದು ಆಪಾದಿಸಿದರು.  ‘ನಾವು (ಬಿಜೆಪಿ) ಜನರ ಕಣ್ಣಿಗೆ ಉಣ್ಣೆ ಪಟ್ಟಿ ಕಟ್ಟುವ ರಾಜಕೀಯವನ್ನು ಮಾಡಿಲ್ಲ. ನಾವು ಜನರ ಕಣ್ಣುಗಳನ್ನು ನೇರವಾಗಿ ನೋಡುತ್ತೇವೆ ಎಂದು ಅವರು ನುಡಿದರುಕಾಂಗ್ರೆಸ್ ೫೦ ವರ್ಷಗಳಲ್ಲಿ ೧೦೩ ಐಟಿಐಗಳನ್ನು ಸ್ಥಾಪಿಸಿತು. ವಸುಂಧರಾಜೆ ಸರ್ಕಾರವು ಐದು ವರ್ಷಗಳಲ್ಲಿ ೯೫೮ ಐಟಿಐಗಳನ್ನು ಸ್ಥಾಪಿಸಿದೆ ಎಂದು ಸಿಂಗ್ ಪ್ರತಿಪಾದಿಸಿದರು. ಬನ್ಸೂರ್ ಜಿಲ್ಲೆಯ ಆಳ್ವಾರ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವರುದೇವಾಲಯಗಳು ಮತ್ತು ಗೋವುಗಳು ಬಿಜೆಪಿಗೆ ಚುನಾವಣಾ ಸ್ಟಂಟ್ಗಳಲ್ಲ ಎಂದೂ ಹೇಳಿದರು. ‘ಚುನಾವಣೆಗಳು ಬಂದಾಗ ಕಾಂಗ್ರೆಸ್ ನಾಯಕರು ದೇವಾಲಯಗಳಲ್ಲಿ ಪ್ರಾರ್ಥನೆಗಳಲ್ಲಿ ಸಲ್ಲಿಸಲು ಆರಂಭಿಸಿತ್ತಾರೆ. ಅದಕ್ಕೆ ಮುನ್ನ ದೇವಾಲಯಗಳಲ್ಲಿ ಅವರು ಪ್ರಾರ್ಥನೆ ಸಲ್ಲಿಸುವುದು ಕಾಣಿಸುವುದಿಲ್ಲ. ದೇವಾಲಯಗಳು ಮತ್ತು ಗೋವುಗಳು ಕಾಂಗ್ರೆಸ್ಗೆ ಚುನಾವಣಾ ವಿಷಯಗಳಾಗಬಹುದು ಆದರೆ ಬಿಜೆಪಿಗೆ ಅವು ಚುನಾವಣಾ ಸ್ಟಂಟ್ ಅಲ್ಲ. ಅದು ನಮ್ಮ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗ ಎಂದು ಸಿಂಗ್ ಹೇಳಿದರು.
  

2017: ಮಂಗಳೂರು: ಓಖಿ ಚಂಡಮಾರುತದ ಪರಿಣಾಮವಾಗಿ ಅರಬ್ಬೀ ಸಮುದ್ರದಲ್ಲಿ  ಅಮೇನಿಕಡಮ ಬಳಿ  ಸರಕುಸಾಗಾಣಿಗೆ ಹಡಗುಗಳೆರಡು ಮುಳುಗಡೆಯಾಗಿದ್ದು, ಕರಾವಳಿ ರಕ್ಷಣಾ ಪಡೆಗಳು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಸಿ ಒಂದು ಹಡಗಿನಲ್ಲಿದ್ದ 6 ಮಂದಿ ಪ್ರಾಣ ಉಳಿಸುವಲ್ಲಿ ಯಶಸ್ವಿಯಾದವು. ಇನ್ನೊಂದು ಹಡಗಿನಲ್ಲಿದ್ದ 8 ಮಂದಿ  ಸಿಬಂದಿ ನಾಪತ್ತೆಯಾಗಿದ್ದು ಅವರಿಗಾಗಿ  ತೀವ್ರ ಶೋಧ ನಡೆಸಲಾಯಿತು. ನವೆಂಬರ್ 30 ರಂದು ಮಂಗಳೂರಿನಿಂದ ಜಲ್ಲಿ, ಎಮ್ ಸ್ಯಾಂಟ್ ಮತ್ತು ದಿನಸಿ ತುಂಬಿಕೊಂಡು ಲಕ್ಷದ್ವೀಪಕ್ಕೆ ಹೊರಟಿದ್ದ 2 ಹಡಗುಗಳಲ್ಲಿ ಒಟ್ಟು14 ಮಂದಿ ಸಿಬಂದಿಗಳಿದ್ದು ಪ್ರಾಣಾಪಾಯಕ್ಕೆ ಸಿಲುಕಿದ್ದರು. ಪೈಕಿ ಒಂದು ಬೋಟ್ನಲ್ಲಿ ಸಂಕಷ್ಟದಲ್ಲಿದ್ದ 6 ಮಂದಿಯನ್ನು ಕೋಸ್ಟಲ್ ಗಾರ್ಡ್ ಸಿಬ್ಬಂದಿ ಹರಸಾಹಸ ನಡೆಸಿ ರಕ್ಷಣೆ ಮಾಡಿರುವುದಾಗಿ ವರದಿ ತಿಳಿಸಿತು. ಸಮುದ್ರದಲ್ಲಿ ಭಾರೀ ಗಾಳಿ ಮತ್ತು ಅಲೆಗಳ ಅಬ್ಬರವಿದ್ದ ಕಾರಣ ಹಡಗುಗಳು ಮುಳುಗಡೆಯಾದವು. ನಾಪತ್ತೆಯಾಗಿರುವ   8 ಮಂದಿಗಾಗಿ ನಸುಕಿನಿಂದಲೇ  ರಕ್ಷಣಾ ಕಾರ್ಯ ಮುಂದುವರೆಯಿತು. ಮುಳುಗಡೆಯಾಗಿರುವ ಒಂದು ಹಡಗು ತಮಿಳುನಾಡಿನ ಮೂಲದ್ದಾಗಿದ್ದು, ಇನ್ನೊಂದು ಬೋಟ್ ಮಂಗಳೂರಿನದ್ದು ಎಂದು ತಿಳಿದು ಬಂದಿತು.

2017: ಕವರಟ್ಟಿ/ ತಿರುವನಂತಪುರಂ: ತಮಿಳುನಾಡು ಮತ್ತು ಕೇರಳ ರಾಜ್ಯಗಳನ್ನು ತತ್ತರಿಸುವಂತೆ ಮಾಡಿದ ಓಖಿ ಚಂಡಮಾರುತ ನಸುಕಿನಲ್ಲಿ ಲಕ್ಷದ್ವೀಪವನ್ನು ಅಪ್ಪಳಿಸಿತು. ಭಾರಿ ಗಾಳಿ, ಮಳೆಯಿಂದಾಗಿ ದ್ವೀಪಸಮೂಹದ ಜನಜೀವನ ಅಸ್ತವ್ಯಸ್ತಗೊಂಡಿತು. ಕಲ್ಪೇನಿ ದ್ವೀಪದಲ್ಲಿ ಭಾರಿ ಮಳೆಯಿಂದಾಗಿ ನೀರಿನ ಮಟ್ಟ ಏರಿ ಐದು ಮೀನುಗಾರಿಕಾ ದೋಣಿಗಳು ಹಾನಿಗೊಂಡವು. ಬಂಗಾಳಿಯಲ್ಲಿ ’ಕಣ್ಣು ಎಂಬ ಅರ್ಥವನ್ನು ಹೊಂದಿರುವ ’ಓಖಿ ಚಂಡಮಾರುತ ಲಕ್ಷದ್ವೀಪದಲ್ಲಿ ಮುಂದಿನ ೨೪ ಗಂಟೆಯಲ್ಲಿ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಗಳಿದ್ದು, ಲಕ್ಷದ್ವೀಪ ಸಮೂಹದ ಉತ್ತರದ ಸಾಗಲಿದೆ. ಗಂಟೆಗೆ ೧೨೦-೧೩೦ ಕಿಮೀಗಳಿಂದ ೧೪೫ ಕಿಮೀವರೆಗಿನ ವೇಗದಲ್ಲಿ ಬೀಸುತ್ತಿರುವ ಗಾಳಿ ಮುಂದಿನ ೨೪ ಗಂಟೆಗಳಲ್ಲಿ ಲಕ್ಷದ್ವೀಪವನ್ನು ತಲುಪುವ ಸಾಧ್ಯತೆಯಿದ್ದು ಬಳಿಕ ಕ್ರಮೇಣ ದುರ್ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿತು. ಕೇರಳ ಕರಾವಳಿಯಲ್ಲೂ ರಕ್ಕಸ ಅಲೆಗಳು ಕಾಣಿಸುವ ನಿರೀಕ್ಷೆಯಿದೆ ಎಂದು ಅಧಿಕೃತ ಮೂಲಗಳು ಹೇಳಿದವು. ಲಕ್ಷದ್ವೀಪ ಸಮೂಹದ ಮಿನಿಕಾಯ್ ದ್ವೀಪದಲ್ಲಿ ಕಳೆದ ೨೪ ಗಂಟೆಗಳಲ್ಲಿ ೧೪ ಸೆಂಮೀ ಮಳೆ ಸುರಿಯಿತು. ಪೂರ್ವ ಕಲ್ಪೇನಿ ಮತ್ತು ಮಿನಿಕಾಯ್ ದ್ವೀಪಗಳ ಹಲವಡೆಗಳಲ್ಲಿ ತೆಂಗಿನ ಮರಗಳು ಉರುಳಿ ಬಿದ್ದಿದ್ದು ಹಲವಾರು ಮನೆಗಳೂ ಕುಸಿದವು. ಹಾನಿಯ ಪ್ರಮಾಣವನ್ನು ಇನ್ನೂ ಅಂದಾಜು ಮಾಡಲಾಗುತ್ತಿದೆ. ಕಲ್ಪೇನಿ ದ್ವೀಪದ ಬ್ರೇಕ್ ವಾಟರ್ ಜೆಟ್ಟಿಗೆ ತೀವ್ರ ಹಾನಿಯಾಗಿದೆ ಎಂದು ಮೂಲಗಳು ಹೇಳಿದವು. ೧೫ ಮೀನುಗಾರರ ರಕ್ಷಣೆ: ಕೇರಳ ಮತ್ತು ತಮಿಳುನಾಡಿನಿಂದ ಸಮುದ್ರಕ್ಕೆ ತೆರಳಿದ್ದ ೧೨ ಮೀನುಗಾರಿಕಾ ದೋಣಿಗಳಲ್ಲಿದ್ದ ರಕ್ಷಿಸಲು ಯತ್ನ ನಡೆದಿದೆ ಎಂದು ವರದಿಗಳು ಹೇಳಿದವು.  ಕೇರಳದ ವಿಳಿಂಜಂ/ ಕೊಲ್ಲಂನಲ್ಲಿ ಸಮುದ್ರದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ೧೫ ಮೀನುಗಾರರನ್ನು ರಕ್ಷಿಸಿ ಕರೆತರಲಾಗಿದೆ ಎಂದು ಭಾರತೀಯ ಕರಾವಳಿ ಪಡೆ ತಿಳಿಸಿತು. ಹಿಂದಿನ ದಿನ ಕರಾವಳಿಯಾಚೆ ಸಮುದ್ರಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದ ೨೧೮ ಮಂದಿ ಮೀನುಗಾರರನ್ನು ನೌಕಾಪಡೆ, ವಾಯುಪಡೆ ಮತ್ತು ಕರಾವಳಿ ಕಾವಲು ಪಡೆಗಳ ನೆರವಿನಿಂದ  ಸುರಕ್ಷಿತವಾಗಿ ದಡಕ್ಕೆ ಕರೆತರಲಾಯಿತು. ರಕ್ಷಿಸಲಾದ ಮೀನುಗಾರರ ಪೈಕಿ ೬೦ ಮಂದಿಯನ್ನು  ಜಪಾನೀ ಸರಕುಸಾಗಣೆ ಹಡಗು ರಕ್ಷಿಸಿತು. ೨೬೦೦ ಜನರ ಸ್ಥಳಾಂತರ: ಓಖಿ ಚಂಡಮಾರುತದ ಹಿನ್ನೆಲೆಯಲ್ಲಿ ಕೇರಳದ ಕರಾವಳಿ ಪ್ರದೇಶಗಳಾದ ಎರ್ನಾಕುಲಂ ಜಿಲ್ಲೆಯ ಸುಮಾರು ೭೧೮ ಕುಟುಂಬಗಳ ೨,೬೪೮ ಮಂದಿಯನ್ನು ಕೋಚಿ ತಾಲೂಕಿನ ಐದು ಗ್ರಾಮಗಳಲ್ಲಿ ನಿರ್ಮಿಸಲಾದ ಸುರಕ್ಷಿತ ನಿರಾಶ್ರಿತ ಕೇಂದ್ರಗಳಿಗೆ ಸ್ಥಳಾಂತರಿಸಲಾಯಿತು. ಪಶ್ಚಿಮ ಕೋಚಿಯ ಚೆಲ್ಲನಂ ಪ್ರದೇಶದ ಮರುವಕ್ಕಾಡಿನಲ್ಲಿ ೪೨ರ ಹರೆಯದ ರೆಕ್ಸಾನ್ ಎಂಬ ವ್ಯಕ್ತಿಯ ಶವ  ಮುಳುಗಡೆಯಾದ ಆತನ ಮನೆಯ ಸಮೀಪ ಪತ್ತೆಯಾಯಿತು. ನಿರಾಶ್ರಿತ ಕೇಂದ್ರಕ್ಕೆ  ಸ್ಥಳಾಂತರಿಸಿದ ಬಳಿಕ ಈತ ಮನೆಯ ಪರಿಸ್ಥಿತಿ ನೋಡಲೆಂದು ಹಿಂದಿರುಗಿದ್ದ ಎನ್ನಲಾಗಿದ್ದು, ಕುಸಿದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಯಿತು.. ಆತನ ಕುಟುಂಬ ಸದಸ್ಯರು ನಿರಾಶ್ರಿತ ಕೇಂದ್ರಗಳಲ್ಲಿ ಇದ್ದಾರೆ ಎಂದು ವರದಿ ತಿಳಿಸಿತು.

2017: ಮುಂಬೈ: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ನಾಯಕ ಇನ್ಫೋಸಿಸ್ ತನ್ನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ(ಸಿಇಒ) ಮತ್ತು ಆಡಳಿತ ನಿರ್ದೇಶಕರಾಗಿ (ಎಂಡಿ) ಸಲೀಲ್ ಎಸ್. ಪರೇಖ್ ಅವರನ್ನು ನೇಮಕ ಮಾಡಿತು. ಈ ನೇಮಕಾತಿಯು ೨೦೧೮ರ ಜನವರಿ ೨ರಿಂದ ಜಾರಿಗೆ ಬರಲಿದೆ ಎಂದು ಕಂಪೆನಿಯು ಪ್ರಕಟಿಸಿತು. ‘ಸಲೀಲ್ ಅವರು ಇನ್ಫೋಸಿಸ್ ಸಿಇಒ ಮತ್ತು ಎಂಡಿ ಆಗಿ ಸೇರುತ್ತಿದ್ದಾರೆ ಎಂದು ತಿಳಿಸಲು ನಮಗೆ ಹರ್ಷವಾಗುತ್ತಿದೆ. ಅವರು ಮಾಹಿತಿ ತಂತ್ರಜ್ಞಾನ (ಐಟಿ) ಸೇವಾ ಉದ್ಯಮದಲ್ಲಿ ಮೂರು ದಶಕಗಳ ಜಾಗತಿಕ ಅನುಭವವನ್ನು ಹೊಂದಿದ್ದಾರೆ. ವ್ಯವಹಾರ ಮತ್ತು ಆಡಳಿತದಲ್ಲಿ ಬಲವಾದ ಸಾಧನೆಯ ದಾಖಲೆಯನ್ನು ಅವರು ಹೊಂದಿದ್ದಾರೆ ಎಂದು ಇನ್ಫೋಸಿಸ್ ಅಧ್ಯಕ್ಷ ನಂದನ್ ನೀಲೇಕಣಿ ತಿಳಿಸಿದರು. ಪರೇಖ್ ಅವರು ಕ್ಯಾಪ್ಜೆಮಿನಿಯಿಂದ ಇನ್ಫೋಸಿಸ್ ಸೇರುತ್ತಿದ್ದಾರೆ. ಹಂಗಾಮಿ ಸಿಇಒ ಮತ್ತು ಎಂಡಿ ಆಗಿರುವ ಯು.ಬಿ. ಪ್ರವೀಣ್ ರಾವ್ ಅವರು ೨೦೧೮ರ ಜನವರಿ ೨ರಿಂದ ಪರೇಖ್ ಅವರಿಗೆ ಅಧಿಕಾರ ವಹಿಸಿ ತಾವು ಕಂಪೆನಿಯ ಮುಖ್ಯ  ಕಾರ್ಯಾಚರಣಾ ಅಧಿಕಾರಿ ಮತ್ತು ಪೂರ್ಣಕಾಲಿಕ ನಿರ್ದೇಶಕರಾಗಿ ಮುಂದುವರಿಯುವರು ಎಂದು ಕಂಪೆನಿಯ ಹೇಳಿಕೆ ತಿಳಿಸಿತು. ಪರೇಖ್ ನೇಮಕಾತಿಯ ಪ್ರಕಟಣೆಯೊಂದಿಗೆ ನೂತನ ಸಿಇಒಗಾಗಿ ಕಂಪೆನಿ ನಡೆಸುತ್ತಿದ್ದ ಶೋಧಕ್ಕೆ ತೆರೆ ಬಿದ್ದಿತು. ಕಂಪೆನಿಯ ಸ್ಥಾಪಕರೊಂದಿಗೆ ಸುದೀರ್ಘ ಬಹಿರಂಗ ಸಮರ ನಡೆಸಿದ ವಿಶಾಲ್  ಸಿಕ್ಕ ಅವರ ರಾಜೀನಾಮೆಯೊಂದಿಗೆ ನೂತನ ಸಿಇಒಗಾಗಿ ಕಂಪೆನಿ ತೀವ್ರ ಹುಡುಕಾಟ ನಡೆಸಿತ್ತು. ಸಿಇಒ ಶೋಧಕ್ಕಾಗಿ ಎಗೋನ್ ಝೆಹೆಂಡರ್ ನೆರವು ಪಡೆದಿದ್ದ ಇನ್ಫೋಸಿಸ್  ಖಾಲಿ ಬಿದ್ದಿದ್ದ ಉನ್ನತ ಹುದ್ದೆಯನ್ನು ಭರ್ತಿ ಮಾಡಲು ೨೦೧೮ರ ಮಾರ್ಚ್ ತಿಂಗಳ ಗುರಿ ಇಟ್ಟುಕೊಂಡಿತ್ತು. ಉದ್ಯಮ ಬದಲಾವಣೆಯ ಹಾದಿಯಲ್ಲಿ ಸಾಗುತ್ತಿರುವ ಈ ಹೊತ್ತಿನಲ್ಲಿ ಕಂಪೆನಿಯನ್ನು ಮುನ್ನಡೆಸಲು ಪರೇಖ್ ಅವರು ಸರಿಯಾದ ಆಯ್ಕೆ ಎಂದು ಇನ್ಫೋಸಿಸ್ ಮಂಡಳಿ ವಿಶ್ವಾಸ ವ್ಯಕ್ತ ಪಡಿಸಿತು.

2017: ನವದೆಹಲಿ: ಹಿಮಾಚಲ ಪ್ರದೇಶದ ಬಸ್ಸೊಂದರಲ್ಲಿ ಪ್ರಯಾಣಿಕನೊಬ್ಬ  ಧರಿಸಿದ್ದ ಕೊಳಕು ಕಾಲ್ಚೀಲದ (ಸಾಕ್ಸ್ ) ದುರ್ಗಂಧ ಪ್ರತಿಭಟನೆಗೆ ಕಾರಣವಾಗಿ ಪೊಲೀಸರು ಆ ಸಾಕ್ಸ್ ಧರಿಸಿದ್ದ ಪ್ರಯಾಣಿಕನನ್ನು ಬಂಧಿಸಿದ ಘಟನೆ ಘಟಿಸಿತು. ಸಹ ಪ್ರಯಾಣಿಕರು ತೀವ್ರವಾಗಿ ಪ್ರತಿಭಟಿಸಿದ ಬಳಿಕ ವಾಸನೆ ಹೊಡೆಯುತ್ತಿದ್ದ ಕಾಲ್ಚೀಲ ಧರಿಸಿದ ಪ್ರಯಾಣಿಕನನ್ನು ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. ಹಿಮಾಚಲ ಪ್ರದೇಶದಿಂದ ನವದೆಹಲಿಗೆ ಹೊರಟಿದ್ದ ಬಸ್ಸಿನಲ್ಲಿದ್ದ ಪ್ರಯಾಣಿಕ ತನ್ನ ವಾಸನೆ ಹೊಡೆಯುತ್ತಿದ್ದ ಕೊಳಕು ಕಾಲ್ಚೀಲಗಳನ್ನು ಕಾಲಿನಿಂದ ತೆಗೆದು ತನ್ನ ಆಸನದ ಬಳಿಯೇ ಕೆಳಗೆ ಇರಿಸಿದ. ಮೂಗು ಮುಚ್ಚಿಕೊಂಡ ಇತರ ಪ್ರಯಾಣಿಕರು ಸ್ವಲ್ಪ ಹೊತ್ತು ಕಾದು ನೋಡಿ ಬಳಿಕ ಪ್ರತಿಭಟಿಸಿದರು ಮತ್ತು ವಾಸನೆ ಹೊಡೆಯುತ್ತಿದ್ದ ಕಾಲ್ಚೀಲಗಳನ್ನು ದೂರ ಇಡುವಂತೆ ಅಥವಾ ಎಸೆಯುವಂತೆ ಆಗ್ರಹಿಸಿದರು. ಆದರೆ ಆ ವ್ಯಕ್ತಿ ನಿರಾಕರಿಸಿದ. ಮಾತಿನ ಚಕಮಕಿ ಜಾಸ್ತಿಯಾಗಿ ನಿಯಂತ್ರಿಸಲಾಗದ ಹಂತಕ್ಕೆ ಬಂದಾಗ, ಚಾಲಕ ಬಸ್ಸನ್ನು ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಪೊಲೀಸ್ ಠಾಣೆಯ ಬಳಿ ನಿಲ್ಲಿಸಬೇಕಾಯಿತು. ಉನಾ ಪೊಲೀಸ್ ಠಾಣೆ ತಲುಪುವುದಕ್ಕೆ ಮುನ್ನವೂ ವಾಸನೆ ಹೊಡೆಯುತ್ತಿದ್ದ ಕಾಲ್ಚೀಲದ ಗದ್ದಲದಿಂದಾಗಿ ಹಲವಾರು ಬಾರಿ ಬಸ್ಸನ್ನು ನಿಲ್ಲಿಸಬೇಕಾಗಿ ಬಂದಿತ್ತು ಎಂದು ಉನಾ ಪೊಲೀಸ್ ಮುಖ್ಯಸ್ಥ ಸಂಜೀವ್ ಗಾಂಧಿ ಹೇಳಿದರು. ಕಡೆಗೆ ಸಾರ್ವಜನಿಕರಿಗೆ ಉಪದ್ರವ ನೀಡಿದ ಆರೋಪದಲ್ಲಿ ಆ ಪ್ರಯಾಣಿಕನನ್ನು ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆ ಮಾಡಲಾಯಿತು ಎಂದು ಗಾಂಧಿ ನುಡಿದರು. ಬಂಧಿಸುವುದಕ್ಕೆ ಮುನ್ನ ಆರೋಪಿಯು ಇತರ ಪ್ರಯಾಣಿಕರಿಗೆ ಬೆದರಿಕೆ ಹಾಕಿದ್ದಲ್ಲದೆ ಪೊಲೀಸ್ ಠಾಣೆಯಲ್ಲೂ ಗದ್ದಲ ಮಾಡಿದ ಎಂದು ಗಾಂಧಿ ಹೇಳಿದರು. ಘಟನೆಗೆ ಪ್ರತಿಯಾಗಿ ಆರೋಪಿತ ಪ್ರಯಾಣಿಕನೂ ಸಹ ಪ್ರಯಾಣಿಕರು ಮತ್ತು ಬಸ್ಸಿನ ಸಿಬ್ಬಂದಿ ವಿರುದ್ಧ ತನ್ನ ಕಾಲ್ಚೀಲಗಳು ವಾಸನೆ ಹೊಡೆಯುತ್ತಿದೆ ಎಂದು ದೂರಿ ಕಿರುಕುಳ ನೀಡಲಾಯಿತು ಎಂದು ಆಪಾದಿಸಿ ದೂರು ದಾಖಲಿಸಿದ್ದಾನೆ ಎಂದು ಗಾಂಧಿ ನುಡಿದರು. ಬಳಿಕ ಬೇರೊಂದು ಬಸ್ಸಿನಲ್ಲಿ ಆತ ತನ್ನ ಪ್ರಯಾಣ ಮುಂದುವರೆಸಿದ ಎಂದು ಪೊಲೀಸರು ಹೇಳಿದರು.

2017: ಅಹ್ಮದಾಬಾದ್: ನೋಟು ಅಮಾನ್ಯೀಕರಣ (ಅಪಮೌಲ್ಯ) ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ನಮ್ಮ ಆರ್ಥಿಕತೆಗೆ ಗಂಡಾಂತರವನ್ನು ತಂದ ಅವಳಿ ಪೆಟ್ಟುಗಳಾಗಿದ್ದು, ಈ ಪರಿಸ್ಥಿತಿಯ ಸಂಪೂರ್ಣ ಲಾಭ ಗಳಿಸಿಕೊಂಡದ್ದು ಚೀನಾ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಹಾಗೂ ಆರ್ಥಿಕ ತಜ್ಞ  ಮನಮೋಹನ್ ಸಿಂಗ್ ಅವರು ಸೂರತ್ ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಕ್ ಪ್ರಹಾರ ನಡೆಸಿದರು. ಜಿಎಸ್ ಟಿ ಜಾರಿಯ ಬಳಿಕ ಸೂರತ್ ನಲ್ಲಿ ಹಲವಾರು ಅಂಗಡಿಗಳು ಮತ್ತು ಜವುಳಿ ಮಾರುಕಟ್ಟೆಗಳು ಮುಚಿದ್ದು, ಪ್ರಬಲ ಪ್ರತಿಭಟನೆಗಳು ನಡೆದಿದ್ದವು. ಜಿಎಸ್ ಟಿಯ ಪರಿಣಾಮಗಳ ಬಗ್ಗೆ ಮಾತನಾಡಿದ ಮಾಜಿ ಪ್ರಧಾನಿ, ವರ್ತಕರು ಕಳೆದ ಒಂದು ವರ್ಷದಿಂದ ಅದೆಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದಾರೆ ಎಂಬುದರ ಅರಿವು ತಮಗಿದೆ ಎಂದು ಹೇಳಿದರು. ಇದಕ್ಕಿಂತಲೂ ದೊಡ್ಡ ದುರಂತವೇನೆಂದರೆ ಈ ಗೋರಿ ಸ್ವರೂಪಿ ತಪ್ಪಿನಿಂದಲೂ ಯಾವುದೇ ಪಾಠವನ್ನು ಕಲಿಯಲಾಗಿಲ್ಲ ಎಂಬುದು. ಬದಲಾಗಿ ನಾನು ಸಂಸತ್ತಿನಲ್ಲಿ ಮನವಿ ಮಾಡಿದ ಬಳಿಕ ಬಡವರು, ಮೂಲೆಗುಂಪಾದವರು, ರೈತರು, ವರ್ತಕರು, ಸಣ್ಣ ಮತ್ತು ಮಧ್ಯಮ ವ್ಯವಹಾರಸ್ಥರಿಗೆ ಪರಿಹಾರಗಳನ್ನು ಒದಗಿಸುತ್ತಾ ಅವಸರ ಅವಸರವಾಗಿ ಕೆಟ್ಟ ರೂಪದಲ್ಲಿ ಜಾರಿಗೆ ತರಲಾದ ಜಿಎಸ್ ಟಿಯನ್ನು ಅವರ ಮೇಲೆ ಹೇರಲಾಗಿದೆಎಂದು ಮಾಜಿ ಪ್ರಧಾನಿ ಟೀಕಿಸಿದರು. ಈ ಅವಳಿ ಹೊಡೆತ ಸಣ್ಣ, ಮಧ್ಯಮ ಉದ್ಯಮ ರಂಗಕ್ಕೆ ತೀವ್ರ ಧಕ್ಕೆಯನ್ನು ಉಂಟು ಮಾಡಿದೆ. ಇದು ಸಣ್ಣ ಮತ್ತು ಮಧ್ಯಮ ವ್ಯವಹಾರಸ್ಥರ ಬೆನ್ನುಮೂಳೆಯನ್ನೇ ಮುರಿದಿದೆ. ರಾಷ್ಟ್ರದಲ್ಲಿ ಇತರರ ಮೇಲಿನ ಪ್ರಭಾವ ನಿಕೃಷ್ಟವಲ್ಲದೇ ಹೋದರೂ ಅಷ್ಟೇ ಕೆಟ್ಟದ್ದು ಎಂಬುದಂತೂ ನಿಜ. ನಮ್ಮ ಎಂಎಸ್ ಎಂಇ ರಂಗ ಮತ್ತು ಕೈಗಾರಿಕಾ ಸಮೂಹಗಳ ಸರಬರಾಜು ಮತ್ತು ಸಾಲ ವ್ಯವಸ್ಥೆ ಮೇಲೆ ದೊಡ್ಡ ಪ್ರಮಾಣದಲ್ಲಿ ಪ್ರತಿಕೂಲ ಪರಿಣಾಮವಾಗಿ, ಉತ್ಪಾದನೆಗೆ ಧಕ್ಕೆಯಾಗಿದೆ. ಮೊರ್ಬಿಯಲ್ಲಿ ಸೆರಾಮಿಕ್ಸ್ ರಂಗ, ವಾಪಿ ಮತ್ತು ರಾಜಕೋಟ್ ನಲ್ಲಿ ಕೈಗಾರಿಕೆಗಳ ಮೇಲೆ ಆಗಿರುವ ಹಾನಿಯ ಅರಿವು ನಿಮಗಿದೆ. ಎಲ್ಲಕ್ಕೂ ಹೆಚ್ಚಾಗಿ ನಮ್ಮ ದೇಶೀಯ ಮಾರುಕಟ್ಟೆಗೆ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ, ಈ ಪರಿಸ್ಥಿತಿಯ ಲಾಭವನ್ನು ಚೀನಾ ಪಡೆದುಕೊಳ್ಳುತ್ತಿದೆ ಎಂದು ಮನಮೋಹನ್ ಸಿಂಗ್ ವಿವರಿಸಿದರು. ತಮ್ಮ ಬಡತನದ ಹಿನ್ನೆಲೆಯನ್ನು ಆಗಾಗ ಪ್ರಸ್ತಾಪಿಸುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಮಾಜಿ ಪ್ರಧಾನಿ, ’ದೇಶ ವಿಭಜನೆಗೆ ಮುನ್ನ ಪಂಜಾಬಿನ ಇನ್ನೊಂದೆಡೆಯಲ್ಲಿ ಬದುಕು ಹಿಂಡುವ ಬಡತನ ಇದ್ದುದನ್ನು ನಾನು ನೋಡಿದ್ದೇನೆ. ನಮ್ಮ ಮಹಾನ್ ದೇಶವು ನನ್ನ ಜೀವಮಾನದಲ್ಲೇ ಪಂಡಿತ್ ಜವಾಹರಲಾಲ್ ನೆಹರೂ ಅವರಿಂದ ನರಸಿಂಹರಾವ್ ಅವರವರೆಗಿನ ಕಾಂಗ್ರೆಸ್ ಸರ್ಕಾರಗಳು ಹಾಕಿದ ತಳಹದಿಯ ಮೇಲೆ ನಿರ್ಮಾಣವಾಗುತ್ತಿರುವುದನ್ನೂ ನಾನು ಕಂಡಿದ್ದೇನೆ ಎಂದು ಹೇಳಿದರು. ಗುಜರಾತ್ ವಿಧಾನಸಭಾ ಚುನಾವಣೆಗೆ ಮುನ್ನ ವಿಶಾಲವಾದ ಜಾತಿ ಆಧಾರಿತ ಒಕ್ಕೂಟವನ್ನು ರಚಿಸಲು ಕಾಂಗ್ರೆಸ್ ಯತ್ನಿಸಿದ್ದನ್ನೂ ಮನಮೋಹನ್ ಸಿಂಗ್ ಪ್ರಸ್ತಾಪಿಸಿದರು. ಒಬಿಸಿ ನಾಯಕ ಅಲ್ಪೇಶ್ ಥಾಕೋರೆಯವರನ್ನು ಒಲಿಸಿಕೊಂಡದ್ದಲ್ಲದೆ ಬಿಜೆಪಿ ಸರ್ಕಾರದ ವಿರುದ್ಧ ಅತೃಪ್ತರಾಗಿರುವ ದಲಿತರು ಮತ್ತು ಪಾಟೀದಾರರ ಬೆಂಬಲವನ್ನೂ ಕಾಂಗ್ರೆಸ್ ಗೆದ್ದಿದೆ ಎಂದು ಮಾಜಿ ಪ್ರಧಾನಿ ಪ್ರತಿಪಾದಿಸಿದರು. ಸಮಾಜದ ವಿವಿಧ ವರ್ಗಗಳ ಯುವಜನರ ಇತ್ತೀಚಿನ ಚಳವಳಿಗಳು ಗುಜರಾತಿನ ನಿರಂತರ ಬಿಜೆಪಿ ಸರ್ಕಾರಗಳ ಕಾರ್ಯ ನಿರ್ವಹಣೆ ಬಗೆಗಿನ ಆಳವಾದ ಅಸಮಾಧಾನದ ದ್ಯೋತಕವಾಗಿದೆ. ಗುಜರಾತಿನಲ್ಲಿ ಬದಲಾವಣೆಯ ಗಾಳಿ ಭೋರ್ಗರೆಯುತ್ತಿದೆ. ಪಾಟೀದಾರರು, ಇತರ ಹಿಂದುಳಿದ ವರ್ಗದವರು (ಒಬಿಸಿ) ಮತ್ತು ದಲಿತರು ರಾಜ್ಯ ಸರ್ಕಾರದ ವಿರುದ್ಧ ಮೀಸಲಾತಿ, ಮೂಲ ಸವಲತ್ತು ಮತ್ತು ದಲಿತರ ಮೇಲಿನ ದೌರ್ಜನ್ಯ ಇತ್ಯಾದಿ ವಿಷಯಗಳನ್ನು ಇಟ್ಟುಕೊಂಡು ಪ್ರತಿಭಟಿಸುತ್ತಿದ್ದಾರೆ ಎಂದು  ಅವರು ನುಡಿದರು.

2017: ನವದೆಹಲಿ: ಹೊಸದಾಗಿ ಬಿಡುಗಡೆ ಮಾಡಲಾಗಿರುವ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳನ್ನು ಬಳಸುವಲ್ಲಿ ದೃಷ್ಟಿ ಹೀನ ವ್ಯಕ್ತಿಗಳಿಗೆ ಅತೀವ ತೊಂದರೆಯಾಗುತ್ತಿದೆ ಎಂದು ಇಲ್ಲಿ ಹೇಳಿದ ದೆಹಲಿ ಹೈಕೋರ್ಟ್ ಈ ವಿಚಾರವಾಗಿ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿಗೆ (ಆರ್ ಬಿಐ) ನೋಟಿಸ್ ಜಾರಿ ಮಾಡಿತು. ಈ ವಿಷಯವು ಅತ್ಯಂತ ಗಂಭೀರವಾದ ಸಾರ್ವಜನಿಕ ಹಿತಾಸಕ್ತಿಯ ವಿಷಯ ಎಂದು ಹೇಳಿದ ನ್ಯಾಯಾಲಯ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೇಳಿತು. ರಾಷ್ಟ್ರದಲ್ಲಿ ಭಾರಿ ಸಂಖ್ಯೆಯ ದೃಷ್ಟಿಹೀನ ವ್ಯಕ್ತಿಗಳು ಈ ಹೊಸ ನೋಟುಗಳನ್ನು ಬಳಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳ ಜೊತೆಗಿನ ನಮ್ಮ ಸಂಭಾಷಣೆ ಕಾಲದಲ್ಲಿ ಅವರು ನೋಟುಗಳ ಗಾತ್ರ ಬದಲಾವಣೆಯ ಕಾರಣದಿಂದಲೂ ತಮಗೆ ಅಪಾರ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ ಎಂದು ಹಂಗಾಮೀ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾಯಮೂರ್ತಿ ಸಿ. ಹರಿಶಂಕರ್ ಹೇಳಿದರು. ಹೊಸ ಕರೆನ್ಸಿ ನೋಟುಗಳನ್ನು ಬದಲಾಯಿಸಬೇಕು ಮತ್ತು ದೃಷ್ಟಿಹೀನರಿಗೂ ಸುಲಭವಾಗಿ ಅವುಗಳನ್ನು ಗುರುತಿಸಲು ಸಾಧ್ಯವಾಗುವಂತೆ ಮಾಡಬೇಕು ಎಂಬುದಾಗಿ ಕೋರಿದ ಅರ್ಜಿಯ ವಿಚಾರಣೆ ಕಾಲದಲ್ಲಿ ಕೋರ್ಟ್ ಈ ವಿಶ್ಲೇಷಣೆಯನ್ನು ಮಾಡಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಡಿಸೆಂಬರ್ ೬ಕ್ಕೆ ನಿಗದಿ ಪಡಿಸಿತು. ವಿಚಾರಣೆ ವೇಳೆ ಕೇಂದ್ರ ಸರ್ಕಾರ ಮತ್ತು ಆರ್ ಬಿಐ  ಪರ ಹಾಜರಾಗಿದ್ದ ವಕೀಲ ಸಂಜೀವ ನರುಲಾ ಅವರು  ಅರ್ಜಿಯನ್ನು ಮನವಿ ಎಂಬುದಾಗಿ ಪರಿಗಣಿಸಿ ನ್ಯಾಯಾಲಯವು ಇತ್ಯರ್ಥ ಪಡಿಸಬಹುದು ಎಂದು ಹೇಳಿದರು. ಆದರೆ ನ್ಯಾಯಾಲಯವು ಅರ್ಜಿಯನ್ನು ಈ ಹಂತದಲ್ಲಿ ಇತ್ಯರ್ಥ ಪಡಿಸಲು ಸಾಧ್ಯವಿಲ್ಲ ಎಂದು ಹೇಳಿ, ಈ ವಿಷಯದ ಬಗ್ಗೆ ಪರಿಶೀಲಿಸಲಾಗುತ್ತಿದೆಯೇ ಎಂದು ಕೇಂದ್ರ ಸರ್ಕಾರ ಮತ್ತು ಆರ್ ಬಿಐಯನ್ನು ಪ್ರಶ್ನಿಸಿತು. ಸರ್ಕಾರೇತರ ಸಂಘಟನೆಯಾದ ಅಖಿಲ ಭಾರತ ಅಂಧರ ಒಕ್ಕೂಟ ಸಲ್ಲಿಸಿದ ಈ ಅರ್ಜಿಯು ದೃಷ್ಟಿ ಹೀನರು ಹೊಸ ನೋಟುಗಳಾದ ೨೦೦೦ ರೂಪಾಯಿ, ೫೦೦ ರೂಪಾಯಿ, ೨೦೦ ರೂಪಾಯಿ ಮತ್ತು ೫೦ ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳ ಗುರುತಿಸುವಿಕೆ, ಬಳಕೆ ಮತ್ತು ವಹಿವಾಟಿನಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿತ್ತು. ಹಳೆಯ ಮತ್ತು ಹೊಸ ನೋಟುಗಳ ಗಾತ್ರ ಭಿನ್ನವಾಗಿದೆ ಎಂಬುದಾಗಿ ಹೇಳಿದ ಅರ್ಜಿ, ಇವುಗಳ ಜೊತೆಗೆ ಇದೇ ರೀತಿಯಲ್ಲಿ ಗುರುತಿಸಲು ಕಷ್ಟವಾಗುತ್ತಿರುವ ೧೦ ರೂಪಾಯಿ, ೫ ರೂಪಾಯಿ, ೨ ರೂಪಾಯಿ ಮತ್ತು ೧ ರೂಪಾಯಿ ನಾಣ್ಯಗಳನ್ನು ಕೂಡಾ ಸೂಕ್ತವಾಗಿ ಬದಲಾಯಿಸಬೇಕು ಎಂದು ಕೋರಿತ್ತು. ನ್ಯೂನತೆಗಳು ಇರುವ ವ್ಯಕ್ತಿಗಳನ್ನು ಗಮನಕ್ಕೆ ತೆಗೆದುಕೊಳ್ಳದೆಯೇ ಹೊಸ ನೋಟುಗಳನ್ನು ಬಿಡುಗಡೆ ಮಾಡಲಾಗಿದೆ. ನೋಟುಗಳಲ್ಲಿ ಇರುವಂತಹ ಕೆಲವು ಗುರುತುಗಳನ್ನು ಕೂಡಾ ಗುರುತಿಸಲು ಕಷ್ಟವಾಗುವಂತಿದ್ದು, ಕರೆನ್ಸಿಯ ಬಳಕೆಯೊಂದಿಗೆ ಈ ಗುರುತುಗಳೂ ಕಣ್ಮರೆಯಾಗುತ್ತಿವೆ ಎಂದು ಅರ್ಜಿ ಹೇಳಿತ್ತು. ಈ ಕರೆನ್ಸಿಯನ್ನು ಹಂತ ಹಂತವಾಗಿ ಮತ್ತು ಕಾಲಮಿತಿಯಲ್ಲಿ ಹಿಂತೆಗೆದುಕೊಳ್ಳುವಂತೆ ಅಥವಾ ಬದಲಾಯಿಸುವಂತೆ ಹಾಗೂ ಬದಲಿಗೆ ದೃಷ್ಟಿ ಹೀನರೂ ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತಹ ಬೇರೆ ನೋಟುಗಳನ್ನು ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿ ಕೋರಿತ್ತು. ಈ ಸಮಸ್ಯೆಯಿಂದಾಗಿ ದೃಷ್ಟಿ ಹೀನರು ತಮ್ಮ ದೈನಂದಿನ ಹಣಕಾಸು ನಿರ್ವಹಣೆಯನ್ನು ಸ್ವತಂತ್ರವಾಗಿ ಮಾಡುವುದು ಕಷ್ಟವಾಗಿದ್ದು, ಈ ನೋಟುಗಳು ಮತ್ತು ನಾಣ್ಯಗಳನ್ನು ಗುರುತಿಸಲು ಇತರರನ್ನು ಅವಲಂಬಿಸಬೇಕಾದ ಸ್ಥಿತಿ ಬಂದಿದೆ ಎಂದು ಅರ್ಜಿ ಹೇಳಿತ್ತು.

2017: ಶ್ರೀನಗರ: ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ (ಪಿಡಿಪಿ) ಅಧ್ಯಕ್ಷೆಯಾಗಿ ಮರು ಆಯ್ಕೆಯಾದರು. ಮೂಲಕ ಸತತ ಆರನೇ ಬಾರಿಗೆ ಪಕ್ಷದ ಉನ್ನತ ಹುದ್ದೆಯನ್ನು ಅಲಂಕರಿಸಲಿರುವ ಹೆಗ್ಗಳಿಕೆಗೆ ಅವರು ಪಾತ್ರರಾದರು. ತಮ್ಮನ್ನು ಮರು ಆಯ್ಕೆ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಮುಫ್ತಿ, ಪಕ್ಷದ ನಾಯಕರಿಗೆ ಧನ್ಯವಾದ ಅರ್ಪಿಸಿದರು. ಜತೆಗೆ ಜಮ್ಮ ಕಾಶ್ಮೀರದಲ್ಲಿ ಅಭಿವೃದ್ಧಿ, ಸಹಕಾರ ಮತ್ತು ಸಮನ್ವಯತೆ ಸಾಧಿಸಲು ದಣಿವರಿಯದೆ ಶ್ರಮಿಸಲಿದ್ದೇವೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡರು.
2008: ಮುಂಬೈಯ ನಾರಿಮನ್ ಹೌಸಿನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಮೃತರಾದ ರಬ್ಬಿ ಗ್ಯಾವ್ರಿಯಲ್ ಹೋಲ್ಜರ್ಗ್, ಅವರ ಪತ್ನಿ ರಿವ್ಕಾ ಸೇರಿದಂತೆ ಆರು ಯಹೂದಿಗಳ ಅಂತ್ಯಸಂಸ್ಕಾರ ಇಸ್ರೇಲ್‌ನಲ್ಲಿ ನಡೆಯಿತು. ಟೆಲ್ ಅವೀವ್ ಸಮೀಪದ ಪ್ರದೇಶದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು.

2008: ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುಟುಂಬದ ವಿರುದ್ಧ ಮಾಡಿದ ಟೀಕೆಗೆ ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದು ಕೇರಳ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದರು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿದ್ದ ಅವರು ಹೈದರಾಬಾದಿಗೆ ತೆರಳುವ ಮುನ್ನ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. 'ಆ ಮನೆ ಮೇಜರ್ ಸಂದೀಪ್ ಅವರದಲ್ಲದಿದ್ದಿದ್ದರೆ ನಾಯಿಯೂ ಆ ಮನೆಗೆ ಹೋಗುತ್ತಿರಲಿಲ್ಲ' ಎಂಬುದಾಗಿ ನೀಡಿದ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಾವು ಕ್ಷಮೆ ಕೋರುತ್ತೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ 'ನೋ ನೋ' ಎಂದಷ್ಟೇ ಅಚ್ಯುತಾನಂದನ್ ಉತ್ತರಿಸಿದರು.

2007: ಸಿತಾರ್ ರತ್ನ ರಹಿಮತ್ ಖಾನ್ ಅವರ ಮೊಮ್ಮಗ ಸಿತಾರ್ ವಾದಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಸ್ತಾದ್ ಬಾಲೇಖಾನ್ (65) (28-8-1942ರಿಂದ 2-12-2007) ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ದೇಶ, ವಿದೇಶಗಳಲ್ಲಿ ಸಿತಾರ್ ವಾದನ ಕಾರ್ಯಕ್ರಮ ನೀಡಿ ಶ್ರೋತೃಗಳ ಮನ ಗೆದ್ದಿದ್ದ ಬಾಲೇಖಾನ್ ಕರ್ನಾಟಕ ಸಂಗೀತ ಅಕಾಡೆಮಿಯ ಸದಸ್ಯರಾಗಿ ಮೂರು ಅವಧಿ ಕಾರ್ಯ ನಿರ್ವಹಿಸಿದ್ದರು. ದಕ್ಷಿಣ ಭಾರತದಲ್ಲಿ ಸಿತಾರ್ ಜನಪ್ರಿಯ ಗೊಳಿಸುವಲ್ಲಿ ಬಾಲೇಖಾನ್ ಅವರ ಕೊಡುಗೆ ಅಪಾರ. ತಮ್ಮ ಅಜ್ಜ ಸಿತಾರರತ್ನ ರಹಿಮತ್ ಖಾನ್ ಅವರಿಂದ ಎರಡು ವಿಶೇಷತೆಗಳನ್ನು ಬಾಲೇಖಾನ್ ಕರಗತ ಮಾಡಿಕೊಂಡಿದ್ದರು. ಏಕಕಾಲಕ್ಕೆ ಎರಡೂ ಕೈಗಳ ಚಲನೆ ಒಂದಾದರೆ, ಮೊಹರಾ ಶೈಲಿ ಇನ್ನೊಂದು. ಮೊಹರಾ ಎಂದರೆ 16 ಮಾತ್ರೆಗಳ ತೀನತಾಲದ ಕೊನೆಗೆ ಎರಡೂವರೆ ಮಾತ್ರೆಗಳಲ್ಲಿ ಹೆಣೆದ ಸುಮಧುರ ಸ್ವರಗುಚ್ಛ. ಇದರಿಂದ ಕಲಾ ರಸಿಕರ ಮನ ತಣಿಯುತ್ತಿತ್ತು. ಸಂಗೀತ ಪರಂಪರೆಯ ಮನೆತನದಲ್ಲಿ 1942ರ ಆಗಸ್ಟ್ 28 ರಂದು ಜನಿಸಿದ ಬಾಲೇಖಾನ್, ಶಾಲೆ ಸೇರುವುದಕ್ಕಿಂತ ಮುಂಚೆಯೆ ಸಂಗೀತ ಕಲಿಯಲಾರಂಭಿಸಿದ್ದರು. ತಂದೆ ಪ್ರೊ. ಎ.ಕರೀಂ ಖಾನ್ ಅವರು ತಮ್ಮ ಒಂಬತ್ತು ಮಕ್ಕಳಲ್ಲಿ ಒಬ್ಬರನ್ನಾದರೂ ಗಾಯಕನನ್ನಾಗಿ ರೂಪಿಸುವ ಬಯಕೆಯಿಂದ ಬಾಲೇಖಾನ್ ಅವರಿಗೆ ಗಾಯನ ಕಲಿಸಲು ಮುಂದಾಗಿ ಒಂದು ದಶಕ ಕಾಲ ಗಾಯನ ಪಾಠ ಮಾಡಿದರು. ಬಾಲೇಖಾನರ ಮೊದಲ ಹೆಸರು ಬಾಬುಖಾನ್. ಇವರನ್ನು ಅಜ್ಜ ರಹಿಮತ್ ಖಾನ್ `ಬಾಲೆ' (ಪುಟ್ಟ) ಎಂದು ಕರೆಯುತ್ತಿದ್ದರು. ಈ ಹೆಸರೇ ಕಾಯಂ ಆಗಿ ಉಳಿಯಿತು. ಹನ್ನೊಂದು ವರ್ಷದವರಿದ್ದಾಗಲೇ ಮಿರಜಿನಲ್ಲಿ ತೋಡಿ ರಾಗ ಹಾಡಿದ್ದರು. ಆದರೆ ಸಿತಾರ್ ವಾದನದ ಗೀಳು ಬಿಡಲಿಲ್ಲ. ಒಂದು ವರ್ಷದ ನಂತರ ಸಿತಾರ್ ರಿಯಾಜ್ ಆರಂಭಿಸಿದರು. ಪುಣೆಯ ರಸಿಕ ವಲಯದಲ್ಲಿ ಇವರ ಮನೆತನ ಸಿತಾರ್ ವಾದಕರ ಮನೆತನ ಎಂದೇ ಪ್ರಸಿದ್ಧಿ ಪಡೆದಿತ್ತು. ಅಜ್ಜ ತೀರಿಕೊಂಡ ಧಾರವಾಡಕ್ಕೆ ಬಂದು ನೆಲೆಸಿದರು. 1968ರಲ್ಲಿ ಆಕಾಶವಾಣಿ ಕಲಾವಿದರಾದ ಬಾಲೇಖಾನ್, 1971ರಲ್ಲಿ ಆಕಾಶವಾಣಿನಿಲಯ ಕಲಾವಿದರಾಗಿ ನಿಯುಕ್ತಿಗೊಂಡರು. ನಂತರ `ಎ' ಶ್ರೇಣಿ ಗಿಟ್ಟಿಸಿ ಕೊಂಡರು. ಪುಣೆ, ಪಣಜಿ, ನಾಗಪುರ, ಔರಂಗಾಬಾದ, ಮಂಗಳೂರು, ಬೆಂಗಳೂರಿನಲ್ಲಿ ಶ್ರೋತೃವೃಂದವನ್ನು ಮಂತ್ರಮುಗ್ಧಗೊಳಿಸಿದವರು ಅವರು. ಲಂಡನ್, ಕಿನ್ಯಾ, ಉಗಾಂಡಾ, ತಾಂಜಾನಿಯಾ, ಮ್ಯಾಂಚೆಸ್ಟರ್, ಪ್ಯಾರಿಸ್ ಮತ್ತಿತರ ಕಡೆಗಳಲ್ಲೂ ಕಾರ್ಯಕ್ರಮ ನೀಡಿ ಸೈ ಎನಿಸಿಕೊಂಡವರು. ಬಾಲೇಖಾನರಿಗೆ 1987ರಲ್ಲಿ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಜೊತೆಗೆ ಕರ್ನಾಟಕ ಸಂಗೀತ ಅಕಾಡೆಮಿ ಪ್ರಶಸ್ತಿ ಹಾಗೂ ಇತ್ತೀಚೆಗೆ ಪಂ. ಪುಟ್ಟರಾಜ ಗವಾಯಿ ಪ್ರಶಸ್ತಿ ದೊರಕಿತ್ತು.

2007: ಶ್ರೀಲಂಕಾದ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರ ದಾಖಲೆಯನ್ನು ಸರಿಗಟ್ಟಿದರು. ಕ್ಯಾಂಡಿಯಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದ ಎರಡನೇ ದಿನ ಮುರಳಿ ಹೊಸ ವಿಕ್ರಮ ಸಾಧಿಸಿದರು. ಇಂಗ್ಲೆಂಡ್ ತಂಡದ ರವಿ ಬೋಪಾರ ಅವರನ್ನು ವಿಕೆಟ್ ಕೀಪರ್ ಪ್ರಸನ್ನ ಜಯವರ್ಧನೆ ಸಹಾಯದಿಂದ ಔಟ್ ಮಾಡಿದ ಮುರಳಿ ತಮ್ಮ ವಿಕೆಟುಗಳ ಸಂಖ್ಯೆಯನ್ನು 708ಕ್ಕೆ ಹೆಚ್ಚಿಸಿದರು. ವಿಶ್ವ ಕಂಡಂತಹ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರೂ 708 ವಿಕೆಟುಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ.

2007: `ಆಜಾ ನಚ್ ಲೇ' ಚಲನಚಿತ್ರ ತನ್ನ ಶೀರ್ಷಿಕೆ ಗೀತೆಯ ಮಾರ್ಪಾಡಿನೊಂದಿಗೆ ಉತ್ತರಪ್ರದೇಶ ಮತ್ತು ಪಂಜಾಬಿನ ಚಿತ್ರ ಮಂದಿರಗಳಿಗೆ ಮರಳಿತು. ಬಾಲಿವುಡ್ಡಿನಲ್ಲಿ ಮಾಧುರಿ ದೀಕ್ಷಿತ್ ಅವರು ಎರಡನೇ ಇನಿಂಗ್ಸ್ ಆರಂಭಿಸಿರುವ ಈ `ಆಜಾ ನಚ್ ಲೇ' ಚಿತ್ರದ ಶೀರ್ಷಿಕೆ ಗೀತೆಯಲ್ಲಿ ಹಿಂದುಳಿದ ಜನಾಂಗವೊಂದನ್ನು ಅವಹೇಳನ ಮಾಡಲಾಗಿದೆ ಎಂದು ನಿಷೇಧಿಸಲಾಗಿತ್ತು. ವಿವಾದಿತ ಸಾಲುಗಳನ್ನು ತೆಗೆದು ಹಾಕಿದ ನಂತರ ಪಂಜಾಬ್ ಸರ್ಕಾರ ಚಿತ್ರವನ್ನು ಪ್ರದರ್ಶಿಸಲು ಹಸಿರು ನಿಶಾನೆ ತೋರಿತು.

2007: `ಯಾವುದೇ ಕಾರಣಕ್ಕೂ ಶ್ರೀಕೃಷ್ಣನ ಪೂಜೆ ಬಿಡುವುದಿಲ್ಲ ಎಂಬ ಸಂಕಲ್ಪ ಮಾಡಿರುವುದಾಗಿ ಹೇಳಿದ್ದೇನೆಯೇ ಹೊರತು, ಪೂಜೆಯನ್ನು ಮಾಡಿಯೇ ತೀರುತ್ತೇನೆ ಎಂದು ಹೇಳಿಲ್ಲ' ಎನ್ನುವ ಮೂಲಕ ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಹಿಂದಿನ ಹೇಳಿಕೆಯಿಂದ ಹಿಂದೆ ಸರಿದರು. ಹಂಪಿಯಲ್ಲಿ ನಡೆದ ರಘುನಂದನತೀರ್ಥರ 503ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಸಂದರ್ಭದಲ್ಲಿ ರಘುನಂದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

2007: ಭಾರತೀಯ ಸಂಸತ್ತಿನ ಚರಿತ್ರೆಯಲ್ಲಿ `ಮೊದಲ ದಂಪತಿ' ಎಂಬ ಹೆಗ್ಗಳಿಕೆಗೆ ಪಾತ್ರರಾದ ಜೋಕಿಂ ಮತ್ತು ವಯಲೆಟ್ ಆಳ್ವ ಜೋಡಿಯ ಭಾವಚಿತ್ರ 2007ರ ಡಿಸೆಂಬರ್ 5ರಂದು ಲೋಕಸಭೆಯಲ್ಲಿ ಅನಾವರಣಗೊಳ್ಳಲಿದೆ ಎಂದು ಈದಿನ ಪ್ರಕಟಿಸಲಾಯಿತು. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾ ನಂತರದ ರಾಷ್ಟ್ರೀಯ ರಾಜಕಾರಣದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ ಈ `ಜೋಡಿ'ಯ ಬದುಕು ವರ್ಣರಂಜಿತ. 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಜೋಕಿಂ ಆಳ್ವ ಅವರು ಲೋಕಸಭೆಗೆ ಆಯ್ಕೆಯಾದರೆ, ವಯಲೆಟ್ ಆಳ್ವ ರಾಜ್ಯಸಭೆಗೆ ಆಯ್ಕೆಯಾಗಿ ಸುದ್ದಿಯಾಗಿದ್ದರು. ಇವರಿಬ್ಬರೂ ಆಗಿನ ಮುಂಬೈ ರಾಜ್ಯವನ್ನು ಪ್ರತಿನಿಧಿಸಿದ್ದರು. ಜೋಕಿಂ ಆಳ್ವ ಅವರ ಜನ್ಮಶತಾಬ್ಧಿಯ ಪ್ರಯುಕ್ತ ಈ ದಂಪತಿಯ ಭಾವಚಿತ್ರವನ್ನು ಲೋಕಸಭೆಯಲ್ಲಿ ಅನಾವರಣ ಮಾಡಲು ನಿರ್ಧರಿಸಲಾಯಿತು. ಮುಂಬೈ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಜೋಕಿಂ ಆಳ್ವ ಅವರಿಗೆ ಗುಜರಾತಿ ಮೂಲದ ವಯಲೆಟ್ ಎಂಬ ವಿದ್ಯಾರ್ಥಿನಿಯ ಪರಿಚಯವಾಯಿತು. ಪರಿಚಯ ಪ್ರೇಮಕ್ಕೆ ತಿರುಗಿತ್ತು. ಮದುವೆಯಾಗಲು ನಿರ್ಧರಿಸಿದರು. ಆಗ ಅದೊಂದು ಕ್ರಾಂತಿಕಾರಿ ಹೆಜ್ಜೆ. ಏಕೆಂದರೆ ವಯಲೆಟ್ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ್ದರೆ, ಜೋಕಿಂ ಉಡುಪಿಯ ಕೊಂಕಣಿ ಕ್ಯಾಥೊಲಿಕ್ ಸಮುದಾಯಕ್ಕೆ ಸೇರಿದವರು. ಈ ಎರಡು ಸಮುದಾಯದ ಮಂದಿ ಪರಸ್ಪರ ಮದುವೆಯಾಗುವುದು ಅಸಾಧ್ಯ ಎಂಬ ಕಟ್ಟುಪಾಡಿನ ದಿನಗಳವು. ವಯಲೆಟ್ ಹರಿ ಅವರು 1937ರ ನವೆಂಬರ್ 20ರಂದು ಜೋಕಿಂ ಆಳ್ವರ ಕೈಹಿಡಿಯುವ ಮೂಲಕ ವಯಲೆಟ್ ಆಳ್ವ ಆದರು. ತಮ್ಮ ಪತಿಯ ಪ್ರೋತ್ಸಾಹದಿಂದಾಗಿ ಇವರು ಸಾರ್ವಜನಿಕ ಜೀವನದಲ್ಲಿ ಯಶಸ್ಸಿನ ಹೆಜ್ಜೆಗಳನ್ನು ಇರಿಸತೊಡಗಿದರು. ಇವರಿಬ್ಬರೂ ಮುಂಬೈನಲ್ಲಿ ಮೊದಲು ವಕೀಲರಾಗಿ, ನಂತರ ಪತ್ರಿಕೋದ್ಯಮದಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದರು. 1943ರ ಆಗಸ್ಟ್ 9ರಂದು ಈ ದಂಪತಿ `ಫೋರಂ' ಎಂಬ ರಾಜಕೀಯ ವಾರಪತ್ರಿಕೆ ಆರಂಭಿಸಿದರು. ನಂತರ ವಯಲೆಟ್ ಅವರು `ಬೇಗಮ್' ಎಂಬ ಮಹಿಳಾ ಮಾಸಪತ್ರಿಕೆ ಪ್ರಾರಂಭಿಸಿದರು. ಜೋಕಿಂ ಆಳ್ವ ಅವರು ಉತ್ತರ ಕನ್ನಡ ಜಿಲ್ಲೆಯಿಂದ 1952, 1957 ಮತ್ತು 1962ರಲ್ಲಿ ಲೋಕಸಭೆಗೆ ಆಯ್ಕೆ ಯಾಗಿದ್ದರು. ಉಡುಪಿಯಲ್ಲಿ 1907ರಲ್ಲಿ ಜನಿಸಿದ ಜೋಕಿಂ ಆಳ್ವ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಕೂಡಾ ಪಾಲ್ಗೊಂಡಿದ್ದರು. ಆ ದಿನಗಳಲ್ಲಿಯೇ ಇವರು ರಾಷ್ಟ್ರೀಯ ಕಿಶ್ಚಿಯನ್ನರ ಪಕ್ಷವನ್ನು ಕಟ್ಟಿ, ಇದರ ಮೂಲಕ ಸ್ವಾತಂತ್ರ್ಯ ಚಳವಳಿಗೆ ಕ್ರಿಶ್ಚಿಯನ್ ಸಮುದಾಯದವರನ್ನು ಆಕರ್ಷಿಸಲು ಯತ್ನಿಸಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡದ್ದಕ್ಕಾಗಿ ಮೂರು ವರ್ಷ ಕಾಲ ಸೆರೆವಾಸದ ಶಿಕ್ಷೆಯನ್ನೂ ಅನುಭವಿಸಿದ್ದರು. 32ನೇ ವೈವಾಹಿಕ ವರ್ಷದಂದು ವಯಲೆಟ್ ನಿಧನರಾದರು. ಜೋಕಿಂ 1979ರಲ್ಲಿ ನಿಧನರಾದರು. ದೆಹಲಿಯ ಕಾಂಗ್ರೆಸ್ ವಲಯದಲ್ಲಿ ಪ್ರಭಾವಿ ರಾಜಕಾರಣಿ ಎನಿಸಿದ ಕರ್ನಾಟಕದ ಮಾರ್ಗರೆಟ್ ಆಳ್ವ ಅವರು ಜೋಕಿಂ ಆಳ್ವ ಕುಟುಂಬದ ಸೊಸೆ. ಎರಡು ದಶಕಗಳ ಹಿಂದೆ ಕೇಂದ್ರ ಸರ್ಕಾರದಲ್ಲಿ ಕ್ರೀಡಾ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದ ಮಾರ್ಗರೆಟ್, ಹಿಂದೆ ಉತ್ತರ ಕನ್ನಡ ಜಿಲ್ಲೆಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

2007: ಭೂಮಿಯಿಂದ ಭೂಮಿಗೆ ಚಿಮ್ಮುವ ಪೃಥ್ವಿ- 2 ಕ್ಷಿಪಣಿಯ `ಪೂರ್ವಸಿದ್ಧತಾ' ಪರೀಕ್ಷೆಯನ್ನು ಭಾರತವು ಬಂಗಾಳ ಕೊಲ್ಲಿಯ ಧಮ್ರಾ ಕಡಲ ತಡಿಯ ಬಳಿಯಿರುವ ಚಾಂದಿಪುರ ಹಾಗೂ ವ್ಹೀಲರ್ ದ್ವೀಪದಲ್ಲಿ ಯಶಸ್ವಿಯಾಗಿ ಕೈಗೊಂಡಿತು

2006: ಬಿಹಾರಿನ ಭಾಗಲ್ಪುರದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಪಾದಚಾರಿ ಮೇಲುಸೇತುವೆಯ ಭಾಗವೊಂದು ಹೌರಾ- ಜಮಾಲ್ ಪುರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಕುಸಿದ ಪರಿಣಾಮವಾಗಿ 7 ಮಹಿಳೆಯರು ಸೇರಿ 37 ಜನ ಮೃತರಾಗಿ ಇತರ 55 ಜನ ಗಾಯಗೊಂಡರು. ಬೆಳಗ್ಗೆ 7.50ರ ಸುಮಾರಿಗೆ ರೈಲು ಭಾಗಲ್ಪುರ ನಿಲ್ದಾಣ ಪ್ರವೇಶಿಸುವ ಕೆಲ ಕ್ಷಣ ಮೊದಲು ಈ ದುರಂತ ಸಂಭವಿಸಿತು.

2006: ಬೆಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಗೆ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ, ನಟಿ ಬಿ. ಸರೋಜಾದೇವಿ, ಸಾಮಾಜಿಕ ಕಾರ್ಯಕರ್ತೆ ರುತ್ ಮನೋರಮಾ ಅವರನ್ನು ಆಯ್ಕೆ ಮಾಡಿತು.

2005: ಮದ್ರಸಾಗಳು ಉಗ್ರವಾದಕ್ಕೆ ಕುಮ್ಮಕ್ಕು ನೀಡುವುದು, ಪಂಥಾಭಿಮಾನ ಹಾಗೂ ಧಾರ್ಮಿಕ ದ್ವೇಷವನ್ನು ಪ್ರಚೋದಿಸುವಂತಹ ಬೋಧನೆ ಹಾಗೂ ಸಾಹಿತ್ಯ ಪ್ರಕಟಿಸುವುದನ್ನು ನಿಷೇಧಿಸಿ ಪಾಕಿಸ್ಥಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಸುಗ್ರೀವಾಜ್ಞೆ ಹೊರಡಿಸಿದರು.

2005: ಇರಾಕಿನ ಆಹಾರಕ್ಕಾಗಿ ತೈಲ ಹಗರಣದಲ್ಲಿ ಸಚಿವ ನಟವರ್ ಸಿಂಗ್ ಕಮಿಷನ್ ಪಡೆದಿದ್ದಾರೆ ಎಂಬ ಆರೋಪಗಳನ್ನು ಸಮರ್ಥಿಸಿ ಕ್ರೊಯೇಷಿಯಾದಲ್ಲಿ ಭಾರತೀಯ ರಾಯಭಾರಿಯಾಗಿದ್ದ ಅನಿಲ್ ಮಥೆರಾನಿ ನೀಡಿದ ಕುತೂಹಲಕರ ಹೇಳಿಕೆ ಭಾರತದ ಸಂಸತ್ತಿನ ಉಭಯ ಸದನಗಳಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು.

1982: ಯುನಿವರ್ಸಿಟಿ ಆಫ್ ಉಟಾಹ್ ಮೆಡಿಕಲ್ ಸೆಂಟರಿನ ವೈದ್ಯರು ಡಾ. ವಿಲಿಯಂ ಡೆ ವ್ರೀಸ್ ನೇತೃತ್ವದಲ್ಲಿ ಕಾಯಂ ಕೃತಕ ಹೃದಯವನ್ನು ನಿವೃತ್ತ ದಂತವೈದ್ಯ ಬಾರ್ನಿ ಕ್ಲಾರ್ಕ್ ಅವರಿಗೆ ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸಿದರು. ಈ ಕೃತಕ ಉಪಕರಣದೊಂದಿಗೆ ಅವರು 112 ದಿನಗಳ ಕಾಲ ಬದುಕಿದ್ದರು. ತಮ್ಮ ಹೃದಯ ಅಪ್ರಯೋಜಕವಾಗಿದ್ದು ತಮಗಿನ್ನು ಸಾವೇ ಖಚಿತ ಎಂಬುದು ದೃಢವಾದುದನ್ನು ಅನುಸರಿಸಿ ಕ್ಲಾರ್ಕ್ ಈ ಪ್ರಯೋಗಕ್ಕೆ ಒಪ್ಪಿಗೆ ನೀಡಿದ್ದರು. `ನನಗೆ ಇದರಿಂದ ಪ್ರಯೋಜನ ಆಗದಿರಲೂ ಬಹುದು. ಆದರೆ ಮುಂದಿನ ರೋಗಿಗಾಗಿ ನಾನು ಈ ಪ್ರಯೋಗಕ್ಕೆ ಒಪ್ಪಿಕೊಳ್ಳುವೆ' ಎಂದು ಅವರು ಹೇಳಿದ್ದರು.

1969: ಬೋಯಿಂಗ್ 747 ಜಂಬೋಜೆಟ್ ತನ್ನ ಚೊಚ್ಚಲ ಪಯಣ ಆರಂಭಿಸಿತು. ವಿಮಾನದಲ್ಲಿ 191 ಜನರಿದ್ದರು. ಅವರಲ್ಲಿ ಹೆಚ್ಚಿನವರು ವರದಿಗಾರರು ಮತ್ತು ಛಾಯಾಗ್ರಾಹಕರು. ವಿಮಾನ ಸಿಯಾಟಲ್ ನಿಂದ ನ್ಯೂಯಾರ್ಕ್ ನಗರಕ್ಕೆ ಪ್ರಯಾಣ ಬೆಳೆಸಿತು.

1962: ಟಿ.ವಿ. ಧಾರಾವಾಹಿಗಳ ಸಂವೇದನಾಶೀಲ ಬರಹಗಾರ್ತಿ ಗೀತಾ ಬಿ.ಯು. ಅವರು ಎಚ್.ಎಸ್. ಉಪೇಂದ್ರರಾವ್- ಶಾಂತಾ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.

1859: ಗುಲಾಮೀ ಪದ್ಧತಿ ವಿರೋಧಿ ಪ್ರಚಾರಕ ಜಾನ್ ಬ್ರೌನ್ ನನ್ನು ವರ್ಜೀನಿಯಾದ ಚಾರ್ಲ್ಸ್ ಟೌನಿನಲ್ಲಿ ಗಲ್ಲಿಗೇರಿಸಲಾಯಿತು. ಇದು ಆತನನ್ನು ಹುತಾತ್ಮನನ್ನಾಗಿ ಮಾಡಿತು. ಅಷ್ಟೇ ಅಲ್ಲ 1861-1865ರಲ್ಲಿ ನಡೆದ ಅಮೆರಿಕದ ಅಂತರ್ ಯುದ್ಧಕ್ಕೆ (ಅಮೆರಿಕನ್ ಸಿವಿಲ್ ವಾರ್) ಮೂಲ ಪ್ರೇರಣೆಯೂ ಆಯಿತು.

1804: ಫ್ರಾನ್ಸಿನ ಚಕ್ರವರ್ತಿಯಾಗಿ ಪ್ಯಾರಿಸ್ಸಿನಲ್ಲಿ ನೆಪೋಲಿಯನ್ ಸಿಂಹಾಸನ ಏರಿದ. ಫ್ರಾನ್ಸಿನ ನೋಟ್ರೆ ಡೇಮ್ ಎಂಬಲ್ಲಿ ನಡೆದ ಸಮಾರಂಭಕ್ಕೆ ಪೋಪ್ 7ನೇ ಪಯಸ್ ಆಗಮಿಸಿದ್ದರು. ಅದರೆ ಕೊನೆಯ ಕ್ಷಣದಲ್ಲಿ ಪೋಪ್ ಕೈಯಲ್ಲಿದ್ದ ಕಿರೀಟವನ್ನು ತಾನು ಸ್ವತಃ ತೆಗೆದುಕೊಂಡು ತನ್ನ ತಲೆಯ ಮೇಲೆ ಇರಿಸಿಕೊಂಡ.

No comments:

Post a Comment