ನಾನು ಮೆಚ್ಚಿದ ವಾಟ್ಸಪ್

Saturday, December 1, 2018

ಇಂದಿನ ಇತಿಹಾಸ History Today ಡಿಸೆಂಬರ್ 01

ಇಂದಿನ ಇತಿಹಾಸ History Today ಡಿಸೆಂಬರ್  01
2018: ವಾಷಿಂಗ್ಟನ್: ಅಮೆರಿಕದ ೪೩ ನೇ ಅಧ್ಯಕ್ಷರಾಗಿದ್ದ ಜಾರ್ಜ್ ಹರ್ಬರ್ಟ್ ವಾಕರ್ ಬುಶ್ (ಜಾರ್ಜ್ ಎಚ್. ಡಬ್ಲ್ಯೂ ಬುಶ್) ಅವರು ಡಿಸೆಂಬರ್ 31ರ ರಾತ್ರಿ ೧೦ ಗಂಟೆಗೆ (ಭಾರತೀಯ ಕಾಲಮಾನ ೦೧ ಡಿಸೆಂಬರ್  ಶನಿವಾರ ಬೆಳಗ್ಗೆ .೩೦ ಗಂಟೆ) ನಿಧನರಾಗಿದ್ದಾರೆ ಎಂದು ಬುಶ್ ಕುಟುಂಬ ಪ್ರಕಟಿಸಿತು. ಅವರಿಗೆ ೯೪ ವರ್ಷ ವಯಸ್ಸಾಗಿತ್ತು. ರಿಪಬ್ಲಿಕನ್ ಪಕ್ಷದ ನಾಯಕರಾಗಿದ್ದ ಬುಶ್ ೧೯೮೯ರಿಂದ ೧೯೯೩ರವರೆಗೆ ಅಮೆರಿಕದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಅದಕ್ಕೂ ಮುನ್ನ ೧೯೮೧ರಿಂದ ೧೯೮೯ರವರೆಗೆ ಅಮೆರಿಕದ ೪೩ನೇ ಉಪಾಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು. ಟೆಕ್ಸಾsಸ್ ಗವರ್ನರ್ ಆಗಿಯೂ ಅವರು ಸೇವೆ ಸಲ್ಲಿಸಿದ್ದರು. ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಬುಶ್ ಗಾಲಿಚಕ್ರವನ್ನು ಅವಲಂಬಿಸಿಕೊಂಡಿದ್ದರು. ರಷ್ಯಾದೊಂದಿಗೆ ನಡೆಯುತ್ತಿದ್ದ ದಶಕಗಳ ಶೀತಲ ಸಮರಕ್ಕೆ ಅಂತ್ಯ ಹಾಡುವಲ್ಲಿ ಜಾರ್ಜ್ ಬುಶ್ ಮಹತ್ವದ ಪಾತ್ರ ವಹಿಸಿದ್ದರು. ಬುಶ್ ಅವರ ಪತ್ನಿ, ಅಮೆರಿಕದ ಮೊದಲ ಮಹಿಳೆ ಬಾರ್ಬರಾ ಬುಶ್  ಕಳೆದ ಏಪ್ರಿಲ್ ತಿಂಗಳಲ್ಲಿ ನಿಧನರಾಗಿದ್ದರು. ಬುಶ್ ಅವರು ಐವರು ಪುತ್ರರು ಮತ್ತು ೧೭ ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ. ೧೯೨೪ರ ಜೂನ್ ೧೨ರಂದು ಮೆಸ್ಯಾಚ್ಯುಸೆಟ್ಸ್‌ನ ಮಿಲ್ಟನ್‌ನ ಬುಶ್ ಕುಟುಂಬದಲ್ಲಿ ಪ್ರೆಸ್ಕೋಟ್ ಬುಶ್ ಮತ್ತು ಡೊರೊತಿ ವಾಕರ್ ಬುಶ್ ದಂಪತಿಯ ಮಗನಾಗಿ ಜನಿಸಿದ್ದ ಜಾರ್ಜ್ ಹರ್ಬರ್ಟ್ ಬುಶ್ ಮೊದಲಿಗೆ ರಿಪಬ್ಲಿಕನ್ ಪಕ್ಷದ ಮೂಲಕ ಕಾಂಗ್ರೆಸ್ ಸದಸ್ಯರಾಗಿದ್ದರು. ರಾಯಭಾರಿ ಹಾಗೂ ಸೆಂಟಲ್ ಇಂಟಲಿಜೆನ್ಸ್ ನಿರ್ದೇಶಕರಾಗಿಯೂ ಕಾರ್‍ಯ ನಿರ್ವಹಿಸಿದ್ದರು. ತಮ್ಮ ಸಾರ್ವಜನಿಕ ಸೇವಾ ಅವಧಿಯಲ್ಲಿ ಜಾರ್ಜ್ ಬುಶ್ ಎಂಬುದಾಗಿ ಪರಿಚಿತರಾಗಿದ್ದ ಬುಶ್, ೨೦೦೧ರಲ್ಲಿ ತಮ್ಮ ಹಿರಿಯ ಪುತ್ರ ಜಾರ್ಜ್ ಡಬ್ಲ್ಯೂ ಬುಶ್ ಅವರು ಅಮೆರಿಕದ ೪೩ನೇ ಅಧ್ಯಕ್ಷರಾದ ಬಳಿಕ, ಜಾರ್ಜ್ ಎಚ್.ಡಬ್ಲ್ಯೂ. ಬುಶ್ ಇಲ್ಲವೇ ಜಾಜ್ ಬುಶ್ ಸೀನಿಯರ್, ಬುಶ್ ೪೨ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುತ್ತಿದ್ದರುಪರ್ಲ್ ಬಂದರು ಮೇಲಿನ ದಾಳಿ ಕಾಲದಲ್ಲಿ ತಮ್ಮ ವಿಶ್ವ ವಿದ್ಯಾಲಯ ಪರೀಕ್ಷೆಗಳನ್ನು ಮುಂದೂಡಿದ ಬುಶ್, ತಮ್ಮ ೧೮ನೇ ವಯಸ್ಸಿನಲ್ಲಿ ಅಮೆರಿಕ ನೌಕಾಪಡೆಗೆ ಸೇರ್ಪಡೆಯಾಗಿ ಕಾಲದಲ್ಲಿ ಅಮೆರಿಕದ ನೌಕಾಪಡೆಯ ಅತ್ಯಂತ ಕಿರಿಯ ಏವಿಯೇಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ೧೯೪೫ರವರೆಗೆ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ೧೯೪೫ರಲ್ಲಿ ಯಾಲೆ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಯಾಗಿದ್ದುರು. ೧೯೪೮ರಲ್ಲಿ ಪದವಿ ಪಡೆದ ಬಳಿಕ ಅವರ ಕುಟುಂಬ ಪಶ್ಚಿಮ ಟೆಕ್ಸಾಸ್‌ಗೆ ವಾಸ್ತವ್ಯ ಬದಲಿಸಿತ್ತು. ಅಲ್ಲಿ ತೈಲ ವ್ಯವಹಾರಕ್ಕೆ ಪ್ರವೇಶ ಮಾಡಿದ್ದ ಬುಶ್ ೧೯೬೪ರ ವೇಳೆಗೆ ತಮ್ಮ ೪೦ನೇ ವಯಸ್ಸಿನಲ್ಲಿ ಲಕ್ಷಾಧೀಶರಾದರು. ಇದೇ ವೇಳೆಯಲ್ಲಿ ರಾಜಕೀಯವನ್ನು ಪ್ರವೇಶಿಸಿದ ಬುಶ್ ೧೯೬೪ರಲ್ಲಿ ನಡೆದ ಸೆನೆಟ್ ಮೊದಲ ಚುನಾವಣೆಯಲ್ಲಿ ಪರಾಭವಗೊಂಡರು. ಆದರೆ ೧೯೬೬ರಲ್ಲಿ ಟೆಕ್ಸಾಸ್ ೭ನೇ ಜಿಲ್ಲೆಯಿಂದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಪ್ರವೇಶಿಸಿದರು. ೧೯೬೮ರಲ್ಲಿ ಪುನರಾಯ್ಕೆಗೊಂಡ ಬುಶ್, ೧೯೭೦ರಲ್ಲಿ ಸೆನೆಟ್ ಚುನಾಣೆಯಲ್ಲಿ ಪುನಃ ಪರಾಭವಗೊಂಡರು. ೧೯೭೧ರಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಬುಶ್ ಅವರನ್ನು ವಿಶ್ವಸಂಸ್ಥೆಯ ರಾಯಭಾರಿಯಾಗಿ ನೇಮಕ ಮಾಡಿದರು. ೧೯೭೩ರಲ್ಲಿ ಬುಶ್ ರಿಪಬ್ಲಿಕನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದರು. ೧೯೭೪ರಲ್ಲಿ ಅಧ್ಯಕ್ಷ ಗೆರಾಲ್ಡ್ ಫೋರ್ಡ್ ಅವರು ಬುಶ್ ಅವರನ್ನು ಚೀನಾದ ರಾಯಭಾರಿಯಾಗಿಯೂ, ಬಳಿಕ ಸೆಂಟ್ರಲ್ ಇಂಟಲಿಜೆನ್ಸ್ ನಿರ್ದೇಶಕರಾಗಿಯೂ ನೇಮಕ ಮಾಡಿದರು.  ೧೯೮೦ರಲ್ಲಿ ಬುಶ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರು. ಆದರೆ ರಿಪಬ್ಲಿಕನ್ ಪ್ರಾಥಮಿಕ ಸ್ಪರ್ಧೆಯಲ್ಲಿ ರೊನಾಲ್ಡ್ ರೇಗನ್ ಅವರಿಂದ ಪರಾಭವಗೊಂಡರು. ರೇಗನ್ ಅವರು ಬುಶ್ ಅವರನ್ನು ತಮ್ಮ ಜೊತೆಗಾರನಾಗಿ ಆಯ್ಕೆಮಾಡಿದರು. ರೇಗನ್-ಬುಶ್ ಟಿಕೆಟಿನಲ್ಲಿ ೧೯೮೦ರ ಚುನಾವಣೆಯಲ್ಲಿ ಗೆದ್ದ ಬಳಿಕ ಬುಶ್ ಅವರು ಉಪಾಧ್ಯಕ್ಷರಾದರು. ಉಪಾಧ್ಯಕ್ಷರಾಗಿ ವರ್ಷಗಳ ಸೇವಾವಧಿಯಲ್ಲಿ ಬುಶ್ ಅವರು ಮಾದಕ ದ್ರವ್ಯ ವಿರೋಧಿ ಸಮರಕ್ಕೆ ಸಂಬಂಧಿಸಿದಂತೆ ಕಾರ್‍ಯಪಡೆಗಳ ಆಡಳಿತ ನಿರ್ವಹಿಸಿದರು.  ೧೯೮೮ರಲಲಿ ಬುಶ್ ಅವರು ರೇಗನ್ ಉತ್ತರಾಧಿಕಾರಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಯಶಸ್ವೀ ಪ್ರಚಾರ ನಡೆಸಿ, ವಿರೋಧಿ ಡೆಮಾಕ್ರಾಟಿಕ್ ಅಭ್ಯರ್ಥಿ ಮೈಕೆಲ್ ಡ್ಯುಕ್ಕಿಸ್ ಅವರನ್ನು ಪರಾಭವಗೊಳಿಸಿದರುಬುಶ್ ಆಡಳಿತಾವಧಿಯಲ್ಲಿ ಅವರ ವಿದೇಶ ನೀತಿ ವಿಶ್ವ ವ್ಯಾಪಕತ್ವ ಪಡೆಯಿತು. ಪನಾಮಾ ಮತ್ತು ಪರ್ಷಿಯನ್ ಕೊಲ್ಲಯಲ್ಲಿ  ಸೇನಾ ಕಾರ್‍ಯಾಚರಣೆ ನಡೆಸಲಾಯಿತು. ೧೯೮೯ರಲ್ಲಿ ಜರ್ಮನಿಯ ಬರ್ಲಿನ್ ಗೋಡೆ ಕುಸಿಯಿತು. ಎರಡು ವರ್ಷಗಳ ಬಳಿಕ ಸೋವಿಯತ್ ಒಕ್ಕೂಟ ವಿಸರ್ಜನೆಗೊಂಡಿತು, ರಶ್ಯಾ ಜೊತೆಗಿನಶೀತಲ ಸಮರಅಂತ್ಯಗೊಂಡಿತು. ಬುಶ್ ಅವರು ಅಧಿಕಾರದಿಂದ ಇಳಿದ ಎರಡು ವರ್ಷಗಳ ಬಳಿಕ ಅನುಮೋದನೆ ಪಡೆದ ಉತ್ತರ ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದವನ್ನು (ಎನ್ ಎಫ್ ಟಿಎ) ಬುಶ್ ಅವಧಿಯಲ್ಲೇ ರೂಪಿಸಲಾಗಿತ್ತು. ಒಪ್ಪಂದವು ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ಒಳಗೊಂಡ ವಾಣಿಜ್ಯ ಗುಂಪನ್ನು ರಚಿಸಿತು. ವಿದೇಶ ನೀತಿಯಲ್ಲಿ ಯಶಸ್ಸು ಪಡೆದರೂ, ಆಂತರಿಕ ಆರ್ಥಿಕತೆಯನ್ನು ನಿಭಾಯಿಸುವಲ್ಲಿ ಬುಶ್ ಸೋತರು. ದುರ್ಬಲ ಆರ್ಥಿಕ ನೀತಿಯ ಹಿನ್ನೆಲೆಯಲ್ಲಿ ೧೯೯೨ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಾಟ್ ಅಭ್ಯರ್ಥಿ ಬಿಲ್ ಕ್ಲಿಂಟನ್ ಎದುರು ಬುಶ್ ಪರಾಭವಗೊಂಡರು೧೯೯೩ರಲ್ಲಿ ಅಧ್ಯಕ್ಷ ಸ್ಥಾನದಿಂದ ಹೊರಬಂದ ಬುಶ್ ೧೯೯೭ರಲ್ಲಿ ತಮ್ಮ ಅಧ್ಯಕ್ಷೀಯ ಲೈಬ್ರೆರಿಯನ್ನು ರಾಷ್ಟ್ರಾರ್ಪಣೆ ಮಾಡಿದರು. ಬಳಿಕವೂ ಹಲವಾರು ಮಾನವೀಯ ಚಟುವಟಿಕೆಗಳಲ್ಲಿ ಬಿಲ್ ಕ್ಲಿಂಟನ್ ಜೊತೆಗೇ ಅವರೂ ಸಕ್ರಿಯರಾಗಿದ್ದರು. ೨೦೦೦ದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿರಿಯ ಪುತ್ರ ಜಾರ್ಜ್ ಡಬ್ಲ್ಯೂ ಬುಶ್ ಅವರ ವಿಜಯದೊಂದಿಗೆ ಬುಶ್ ಮತ್ತು ಅವರ ಪುತ್ರ ಅಮೆರಿಕದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಎರಡನೇತಂದೆ-ಮಗಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಇದಕ್ಕೂ ಮುನ್ನ ಜಾನ್ ಆಡಮ್ಸ್ ಮತ್ತು ಜಾನ್ ಕ್ವಿನ್ಸಿ ಆಡಮ್ಸ್ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಬುಶ್ ಅವರ ದ್ವಿತೀಯ ಪುತ್ರ ಜೆಬ್ ಬುಶ್ ಅವರು ಫ್ಲಾರಿಡಾದ ೪೩ನೇ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ೯೪ನೇ ವಯಸ್ಸಿನಲ್ಲಿ ನಿಧನರಾದ ಬುಶ್ ಅಮೆರಿಕದ ಇತಿಹಾಸದಲ್ಲಿ ದೀರ್ಘಕಾಲ ಬದುಕಿದ್ದ ಅಮೆರಿಕದ ಅಧ್ಯಕ್ಷ ಎಂಬ ಹೆಗ್ಗಳಿಗೂ ಪಾತ್ರರಾಗಿದ್ದರು. ೧೯೭೭ರಿಂದ ೧೯೮೧ರವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್ (೯೪) ಅವರು ೧೯೨೪ರ ಅಕೋಬರ್ ೧ರಂದು ಜನಿಸಿದ್ದು, ಬುಶ್ ಬಳಿಕ ಅಮೆರಿಕದ ಇತಿಹಾಸದಲ್ಲಿ ದೀರ್ಘಕಾಲ ಬದುಕಿ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾದ್ದರು.

2018: ನವದೆಹಲಿ: ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಕಾಯ್ದೆಯನ್ನು ರದ್ದು ಪಡಿಸಿ ೨೦೧೫ರಲ್ಲಿ ತಾನು ನೀಡಿದ್ದ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತುತನ್ಮೂಲಕ ನ್ಯಾಯಮೂರ್ತಿಗಳು/ ನ್ಯಾಯಾಧೀಶರ ನೇಮಕಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಕೊಲಿಜಿಯಂ ವ್ಯವಸ್ಥೆಯೇ ಮುಂದುವರೆಯಲಿದೆಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಪೀಠವು ಪುನರ್ ಪರಿಶೀಲನಾ ಅರ್ಜಿಯನ್ನು ವಿಳಂಬ ಹಾಗೂ ಅರ್ಹತೆ ಇಲ್ಲ ಎಂಬ ನೆಲೆಯಲ್ಲಿ ವಜಾಗೊಳಿಸಲಾಗಿದೆ ಎಂದು ಹೇಳಿತು.  ’ಹಾಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವಲ್ಲಿ ೪೭೦ ದಿನಗಳ ವಿಳಂಬವಾಗಿದೆ. ವಿಳಂಬಕ್ಕೆ ತೃಪ್ತಿಕರ ವಿವರಣೆಯನ್ನು ನೀಡಲಾಗಿಲ್ಲ. ವಿಳಂಬದ ಏಕೈಕ ನೆಲೆಯಲ್ಲಿಯೇ ಪುನರ್ ಪರಿಶೀಲನಾ ಅರ್ಜಿಯು ವಜಾಕ್ಕೆ ಯೋಗ್ಯವಾಗಿದೆಎಂದು ಪೀಠ ತನ್ನ ಆದೇಶದಲ್ಲಿ ಹೇಳಿತು.  ’ಆದರೂ, ನಾವು ಪುನರ್ ಪರಿಶೀಲನಾ ಅರ್ಜಿಯನ್ನು  ಮತ್ತು ಅದರ ಜೊತೆ ಸಲ್ಲಿಸಲಾದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದೆವು. ನಮಗೆ ಅದರಲ್ಲಿ ಯಾವುದೇ ಅರ್ಹತೆ ಲಭಿಸಲಿಲ್ಲಎಂದು ಪಂಚ ಸದಸ್ಯ ಪೀಠವು ಹೇಳಿತು.  ’ಶುಕ್ರವಾರ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರು ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ, ನಿರ್ದಿಷ್ಟವಾಗಿ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರ ಆಯ್ಕೆಯನ್ನು ವಿಳಂಬಿಸುವ ಮೂಲಕ ಕೇಂದ್ರ ಸರ್ಕಾರವು ಹಸ್ತಕ್ಷೇಪ ಮಾಡಿದೆಎಂದು ಟೀಕಿಸಿದ್ದರುತಾವು ಎಂದೂ ಸರ್ಕಾರಿ ಅಥವಾ ರಾಜಕೀಯ ಒತ್ತಡ ಅನುಭವಿಸಿರಲಿಲ್ಲ, ಆದರೆ ನೇಮಕಾತಿ ವಿಚಾರದಲ್ಲಿ ನೇಮಕಾತಿಗಳಲ್ಲಿ ನಿರ್ದಿಷ್ಟ ನೇಮಕಾತಿಗಳನ್ನು ವಿಳಂಬಿಸುವುದು ನೇಮಕಾತಿಗಳನ್ನು ತಡೆ ಹಿಡಿಯುವುದು - ಇವೆಲ್ಲ ಹಸ್ತಕ್ಷೇಪದ ವಿಧಾನಗಳುಎಂದು ಜೋಸೆಫ್ ಹೇಳಿದ್ದರು.  ೨೦೧೪ರ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಯು ಉನ್ನತ ನ್ಯಾಯಾಂಗಕ್ಕೆ ನ್ಯಾಯಮೂರ್ತಿಗಳನ್ನು ನೇಮಿಸುವಲ್ಲಿ ಸರ್ಕಾರಕ್ಕೆ ಮಹತ್ವದ ಪಾತ್ರವನ್ನು ನೀಡುತ್ತಿತ್ತು. ಇದು ನ್ಯಾಯಾಂಗದ ಸ್ವಾತಂತ್ರ್ಯದಲ್ಲಿ ನಡೆದ ಹಸ್ತಕ್ಷೇಪದ ಯತ್ನ ಎಂದು ಭಾವಿಸಲಾಗಿತ್ತುಸುಪ್ರೀಂಕೋರ್ಟಿನ ಪಂಚ ಸದಸ್ಯ ಸಂವಿಧಾನ ಪೀಠವು ೨೦೧೫ರ ಅಕ್ಟೋಬರ್ ೧೬ರಂದು ಕಾಯ್ದೆಯನ್ನುಸಂವಿಧಾನಬಾಹಿರಎಂಬುದಾಗಿ ಹೇಳಿ ರದ್ದು ಪಡಿಸಿತ್ತು.  ನ್ಯಾಯ ಮೂರ್ತಿಗಳನ್ನು ನೇಮಕ ಮಾಡುವ ೨೨ ವರ್ಷಗಳಷ್ಟು ಹಳೆಯದಾದ ಕೊಲಿಜಿಯಂ ವ್ಯವಸ್ಥೆಯನ್ನು ಬದಲಾಯಿಸಲು ಕಾಯ್ದೆಯನ್ನು ರೂಪಿಸಲಾಗಿತ್ತುಸಂವಿಧಾನ ಪೀಠದ ಐವರು ನ್ಯಾಯಮೂರ್ತಿಗಳ ಪೈಕಿ ನಾಲ್ವರು ನ್ಯಾಯಮೂರ್ತಿಗಳೂ ರಾಷ್ಟ್ರೀಯ ನಾಯಾಂಗ ನೇಮಕಾತಿ ಆಯೋಗ ಕಾಯ್ದೆ ಮತ್ತು ಸಂವಿಧಾನದ (೯೯ನೇ ತಿದ್ದುಪಡಿ) ಕಾಯ್ದೆ ೨೦೧೪ ಸಂವಿಧಾನ ಬಾಹಿರ ಮತ್ತು ಅಸಿಂಧು ಎಂದು ತೀರ್ಪು ನೀಡಿದ್ದರು. ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಅವರು ಮಾತ್ರ ಸಂವಿಧಾನ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನು ಎತ್ತಿ ಹಿಡಿದಿದ್ದರು.  ’ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್ ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಮೂರ್ತಿಗಳನ್ನು ಒಂದು ನ್ಯಾಯಾಲಯದಿಂದ ಇನ್ನೊಂದು ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವ ಸಂವಿಧಾನ (೯೯ನೇ ತಿದ್ದುಪಡಿ) ಕಾಯ್ದೆಗಿಂತ (೨೦೧೪) ಹಿಂದೆ ಜಾರಿಯಲ್ಲಿದ್ದ  (ಕೊಲಿಜಿಯಂ ವ್ಯವಸ್ಥೆ ಹೆಸರಿನ) ವ್ಯವಸ್ಥೆಯೇ ಮುಂದುವರೆಯುವುದಾಗಿ ಘೋಷಿಸಲಾಗಿದೆಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತ್ತು. ’ಕೊಲಿಜಿಯಂ ವ್ಯವಸ್ಥೆಯು ಸುಪ್ರೀಂಕೋರ್ಟಿನ ಒಳಗೇಇಂಪೆರಿಯಂ ಇಂಪೆರಿಯೊ (ಸಾಮ್ರಾಜ್ಯದೊಳಗೆ ಸಾಮ್ರಾಜ್ಯ) ಸೃಷ್ಟಿ ಮಾಡಿದೆ ಎಂದು ಕೇಂದ್ರ ಸರ್ಕಾರ ಟೀಕೆ ಮಾಡಿತ್ತು.

2018: ಶ್ರೀನಗರ: ಗಡಿ ನಿಯಂತ್ರಣ ರೇಖೆಯ ಆಚೆ ಬದಿ ಪಾಕಿಸ್ತಾನ ಆಡಳಿತಕ್ಕೆ ಒಳಪಟ್ಟಿರುವ ಕಾಶ್ಮೀರದಲ್ಲಿನ ಶಾರದಾ ಪೀಠಕ್ಕೆ ಕರ್ತಾರಪುರ ಮಾದರಿಯ ಕಾರಿಡಾರ್ ರೂಪಿಸುವಂತೆ ಕೋರಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದರು. ಪಾಕ್ ಆಡಳಿತಕ್ಕೆ ಒಳಪಟ್ಟಿರುವ ಕಾಶ್ಮೀರದಲ್ಲಿನ ಶಾರದಾ ಪೀಠವು ಕಾಶ್ಮೀರ ಇತಿಹಾಸದ ಒಂದು ಅಪೂರ್ವ ಮಹಾತ್ಮರ ಅವಶೇಷ ಎಂಬುದಾಗಿ ಮೆಹಬೂಬಾ ಹೇಳಿದರು. ನಿಮ್ಮ ಪೂರ್ವಾಧಿಕಾರಿಗಳ ಕಾಲದಲ್ಲಿ ಭಾರತ ಸರ್ಕಾರ ಕೈಗೊಂಡ ಉಪಕ್ರಮಗಳು ಮುಜಾಫ್ಫರಾಬಾದ್ ಮತ್ತು ರಾವಲ್ ಕೋಟ್ ಮಾರ್ಗಗಳನ್ನು ತೆರೆಯಲು ಕಾರಣವಾಗಿದ್ದವು. ಅವುಗಳ ಪೂರ್ಣ ಪ್ರಮಾಣದ ಬಳಕೆ ಇನ್ನೂ ಸಾಧ್ಯವಾಗದೇ ಇದ್ದರೂ, ಕರ್ತಾರಪುರ ಕಾರಿಡಾರ್ ಅವಕಾಶದ ಇನ್ನೊಂದು ಕಿಟಕಿಯನ್ನು ತೆರೆದಿದೆಎಂದು ಮೆಹಬೂಬಾ ಹೇಳಿದರು. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಜನರಿಂದ -ಜನರ ಸಂಪರ್ಕವನ್ನು ಬೆಳೆಸುವುದು ವಿಶ್ವಾಸ ವರ್ಧನೆ ನಿಟ್ಟಿನಲ್ಲಿ ಅತ್ಯಂತ ಮಹತ್ವದ ವಿಚಾರ ಎಂಬುದಾಗಿ ತಮ್ಮ ಪಕ್ಷವು ಯಾವಾಗಲೂ ನಂಬಿದೆ ಎಂದು ಪಿಡಿಪಿ ಅಧ್ಯಕ್ಷೆ ತಿಳಿಸಿದರು. ಇದು ಇಲ್ಲಿನ ಜನರನ್ನು ಅವರ ಸಾಂಸ್ಕೃತಿಕ ಮತ್ತು ಬೌದ್ಧಿಕ ಬೇರುಗಳತ್ತ ಸಂಪರ್ಕಿಸುವುದು. (ಕಾಶ್ಮೀರಿ) ಪಂಡಿತರಿಗೆ ಇದು ಸ್ವಾತಂತ್ರ್ಯ ಲಭಿಸುವವರೆಗೂ ಅತ್ಯಂತ ಮಹತ್ವದ ಯಾತ್ರಾ ಸ್ಥಳವಾಗಿತ್ತುಶ್ರೀನಗರ-ಮುಜಾಫ್ಫರಾಬಾದ್ ರಸ್ತೆ ಪುನರಾಂಭವಾದಂದಿನಿಂದಲೂ ಶಾರದಾ ಪೀಠಕ್ಕೆ ಯಾತ್ರೆಯ ವ್ಯವಸ್ಥೆ ಬೇಕೆಂಬ ಆಗ್ರಹವನ್ನು ಕಾಶ್ಮೀರಿ ಪಂಡಿತರು ಮಾಡುತ್ತಾ ಬಂದಿದ್ದಾರೆಎಂದು ಮೆಹಬೂಬಾ ಹೇಳಿದರು. ಕರ್ತಾರಪುರ ಕಾರಿಡಾರ್ ಈಗ ಕಾಶ್ಮೀರಿ ಪಂಡಿತ ಸಮುದಾಯದಲ್ಲೂ ಶಾರದಾ ಪೀಠಕ್ಕೆ ಇದೇ ಮಾದರಿಯಲ್ಲಿ ಯಾತ್ರೆ ಆರಂಭಿಸುವ ಸಾಧ್ಯತೆಗಳ ಸಾಗರವನ್ನೇ ಕಾಣುವಂತೆ ಮಾಡಿದೆ. ಕತಾಸ್ ರಾಜ್ ಯಾತ್ರೆಯ ಜೊತೆಗೆ ಇದಕ್ಕೆ ಅವಕಾಶ ನೀಡಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮುಂದಾಗಿದ್ದಾರೆ ಎಂಬ ವರದಿಗಳು ನಮ್ಮ ನಂಬಿಕೆಯನ್ನು ಬಲಪಡಿಸಿದೆ ಎಂದು ಪಿಡಿಪಿ ಅಧ್ಯಕ್ಷರ ಪತ್ರ ಹೇಳಿತು. ಕಾಶ್ಮೀರಿ ಪಂಡಿತ ಸಮುದಾಯದ ಕೆಲವು ಸದಸ್ಯರು ವಿಷಯದ ಬಗ್ಗೆ ತಮ್ಮ ಜೊತೆ ಮಾತನಾಡಿದ್ದು, ಪ್ರಧಾನಿಯವರ ಜೊತೆ ವಿಷಯವನ್ನು ಎತ್ತುವಂತೆ ಒತ್ತಾಯಿಸಿದ್ದಾರೆ ಎಂದು ಅವರು ಹೇಳಿದರು. ಆದ್ಯತೆ ಆಧಾರದಲ್ಲಿ ನೀವು ವಿಷಯವನ್ನು ಪರಿಗಣಿಸುವಿರಿ ಎಂಬ ಖಚಿತ ವಿಶ್ವಾಸ ನನಗಿದೆ. ಇದು ಪಂಡಿತ ಸಮುದಾಯಕ್ಕೆ ನಿರ್ದಿಷ್ಟವಾದ ಕ್ರಮವಾಗಿದ್ದರೂ, ರಾಜ್ಯದ ಎಲ್ಲ ನಾಗರಿಕರೂ ಇದನ್ನು ಸ್ವಾಗತಿಸುವರು ಎಂಬುದರಲ್ಲಿ ನನಗೆ ಸಂಶಯ ಇಲ್ಲಎಂದು ಮೆಹಬೂಬಾ ತಿಳಿಸಿದರು. ನಾವು ಕಾಣುತ್ತಿರುವ ಸಾವು ಮತ್ತು ನಾಶದ ಮುಗಿಯದ ಸಮಸ್ಯೆ- ಸಂಕಷ್ಟಗಳಿಂದ ಜಮ್ಮು ಮತ್ತು ಕಾಶ್ಮೀರವನ್ನು ರಾಜತಾಂತ್ರಿಕ ಮತ್ತು ರಾಜಕೀಯ ಮಾರ್ಗಗಳ ಮೂಲಕ ಹೊರತರುವ ನಿಟ್ಟಿನಲ್ಲೂ ಇದು ಅನುಕೂಲಕರವಾಗಬಲ್ಲುದು ಎಂದು ಮುಫ್ತಿ ಹೇಳಿದರು.


2018: ಜೈಪುರ: ಹಲವು ದ್ವಂದ್ವಗಳೊಂದಿಗೆ ಭ್ರಮನಿರಸನಗೊಂಡಿರುವ ಕಾಂಗ್ರೆಸ್ ಎಲ್ಲ ಐದು ರಾಜ್ಯಗಳಲ್ಲೂ ವಿಧಾನಸಭಾ ಚುನಾವಣೆಗಳಲ್ಲಿ ಪರಾಭವ ಅನುಭವಿಸಲಿದೆ ಎಂಬುದು ಸ್ಪಷ್ಟ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇಲ್ಲಿ ಹೇಳಿದರು. ಡಿಸೆಂಬರ್ ೭ರ ರಾಜಸ್ಥಾನ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಪ್ರಚಾರಕ್ಕಾಗಿ ಜೈಪುರಕ್ಕೆ ಆಗಮಿಸಿದ್ದ ಸ್ವರಾಜ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕಾಂಗೆಸ್ ಪಕ್ಷವು ಹಲವಾರು ದ್ವಂದ್ವಗಳಲ್ಲಿ ಮುಳುಗಿದೆ ಎಂದು ಹೇಳಿದರು.  ’ಮೈತ್ರಿಕೂಟ ಇರುತ್ತದೆಯೇ? ರಾಹುಲ್ ಗಾಂಧಿ ಅವರನ್ನು ಮೈತ್ರಿಕೂಟದ ನಾಯಕನಾಗಿ ಅಂಗೀಕರಿಸಲಾಗುವುದೇ ಎಂಬ ದ್ವಂದ್ವಗಳ ಜೊತೆಗೆ ಅವರ ಧರ್ಮ ಮತ್ತು ಜಾತಿ ಬಗ್ಗೆಯೂ ಕಾಂಗ್ರೆಸ್ ದ್ವಂದ್ವದಲ್ಲಿ ಸಿಲುಕಿದೆಎಂದು ಸುಷ್ಮಾ ನುಡಿದರುಆಡಳಿತ ವಿರೋಧಿ ಅಲೆಯ ಕಾರಣ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಕೆಲವು ಸಮೀಕ್ಷೆಗಳು ಹೇಳುತ್ತಿವೆ. ಆದರೆ ಕಾಂಗ್ರೆಸ್ ಪಕ್ಷವು ಹಲವಾರು ದ್ವಂದ್ವ- ಗೊಂದಲಗಳಲ್ಲಿ ಮುಳುಗಿದೆ ಎಂದು ಚುನಾವಣಾ ಭವಿಷ್ಯಕಾರರಿಗೆ ನಾನು ತಿಳಿಸಬಯಸುತ್ತೇನೆ. ಗೊಂದಲಗಳು ಕಾರ್‍ಯಕರ್ತರ ನೈತಿಕತೆಯನ್ನು ಕುಗ್ಗಿಸಿದೆ. ಆತ್ಮವಿಶ್ವಾಸದೊಂದಿಗೆ ಜನರ ಬಳಿಗೆ ಹೋಗದಂತೆ ಮಾಡಿದೆ. ಬಿಜೆಪಿ ಆಡಳಿತವಿರುವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಎಂದೂ ಗೆಲ್ಲಲು ಸಾಧ್ಯವಿಲ್ಲಎಂದು ಸುಷ್ಮಾ ಹೇಳಿದರುತೆಲಂಗಾಣ ಮತ್ತು ಮಿಜೋರಾಂನಲ್ಲೂ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಅವರು ನುಡಿದರು. ಕಾಂಗೆಸ್ ಪಕ್ಷವು ದ್ವಂದ್ವಗಳಲ್ಲಿ ಮುಳುಗಿದೆ, ರಾಹುಲ್ ಗಾಂಧಿ ಅವರಹಿಂದೂ ನಟನೆನೆರವಾಗದು ಮತ್ತು ಎಲ್ಲ ಐದೂ ರಾಜ್ಯಗಳ ಚುನಾವಣೆಗಳಲ್ಲೂ ಸೋಲಲಿದೆ ಎಂಬುದು ಗೋಡೆಯಲ್ಲಿ ಕಾಣುತ್ತಿರುವ ಬರಹವಾಗಿದೆ ಎಂದೂ ಸುಷ್ಮಾ ನುಡಿದರು.
 


2017: ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಪೌಷ್ಟಿಕ ಆಹಾರ ಯೋಜನೆ (ಎನ್ಎನ್ಎಂ) ಸಮರ್ಪಕ ಜಾರಿಗೆ ಆರು ಹಂತದ ನಿಗಾ ವ್ಯವಸ್ಥೆ ರೂಪಿಸಲು ಕೇಂದ್ರ ಸಚಿವ ಸಂಪುಟ ಸಮ್ಮತಿ ಸೂಚಿಸಿತು. ಮಕ್ಕಳನ್ನು ಕಾಡುತ್ತಿರುವ ಅಪೌಷ್ಟಿಕತೆ, ಕುಂಠಿತ ಬೆಳವಣಿಗೆ, ದೌರ್ಬಲ್ಯ ಸಮಸ್ಯೆಗಳನ್ನು 2022 ವೇಳೆಗೆ ಸಂಪೂರ್ಣವಾಗಿ ತಡೆಗಟ್ಟುವ ಮಹತ್ವದ ಉದ್ದೇಶದಿಂದ ಕೇಂದ್ರ ಸರ್ಕಾರ ಯೋಜನೆ ರೂಪಿಸಿತು. ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತು. ಯೋಜನೆಯ ಮೇಲುಸ್ತುವಾರಿಗೆ ಅನುಕೂಲವಾಗುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ಫೋನ್ಮತ್ತು ಮೇಲ್ವಿಚಾರಕಿಯರಿಗೆ ಟ್ಯಾಬ್ನೀಡಲು ನಿರ್ಧರಿಸಲಾಯಿತು. ಅನುಷ್ಠಾನ ಮತ್ತು ನಿಗಾ ವ್ಯವಸ್ಥೆಗೆ ತಗಲುವ ಖರ್ಚುವೆಚ್ಚ ಭರಿಸಲು ಮೂರು ವರ್ಷಗಳ ಅವಧಿಗೆ ರೂ.9,046.19 ಕೋಟಿ ಅನುದಾನ ಮೀಸಲಿಡಲಾಯಿತು. ಯೋಜನೆ ಯಶಸ್ಸಿಗೆ ಸಮನ್ವಯದಿಂದ ಕೆಲಸ ಮಾಡಲು ಕೇಂದ್ರ ಆರೋಗ್ಯ ಸಚಿವಾಲಯ, ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳನ್ನು ಒಂದೇ ವೇದಿಕೆ ಅಡಿ ತರಲಾಗಿದೆ. ದೇಶದಲ್ಲಿ ಮಕ್ಕಳು ಪೌಷ್ಟಿಕ ಆಹಾರದ ತೀವ್ರ ಕೊರತೆ ಎದುರಿಸುತ್ತಿರುವ 315 ಜಿಲ್ಲೆಗಳನ್ನು ಗುರುತಿಸಲಾಗಿದ್ದು ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಜಾರಿಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ರಾಕೇಶ್ಶ್ರೀವಾತ್ಸವ್ತಿಳಿಸಿದರು.ಯೋಜನೆಯಿಂದ ಹತ್ತು ಕೋಟಿ ಜನರಿಗೆ ಪ್ರಯೋಜನ ದೊರೆಯಲಿದೆ. ಅಪೌಷ್ಟಿಕತೆ ಮತ್ತು ಕಡಿಮೆ ತೂಕದ ಮಕ್ಕಳು ಹುಟ್ಟುವ ಪ್ರಮಾಣವನ್ನು ವರ್ಷಕ್ಕೆ ಶೇ 2ರಷ್ಟು ಇಳಿಸುವುದು ಯೋಜನೆಯ ಮುಖ್ಯ ಉದ್ದೇಶ. ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪುವಂತೆ ನೋಡಿಕೊಳ್ಳಲು ಆಧಾರ್ನೆರವು ಪಡೆಯಲು ನಿರ್ಧರಿಸಿದ್ದೇವೆ. ಇದರಿಂದ ಯೋಜನೆಯ ದುರುಪಯೋಗ ಮತ್ತು ಸೋರಿಕೆಗೆ ಅವಕಾಶ ಸಿಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ತಿಳಿಸಿದರು. ಫಲಾನುಭವಿಗಳ ಹೆಸರನ್ನು ಆಧಾರ್ಗೆ ನೋಂದಣಿ ಮಾಡಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ರೂ.500 ಪ್ರೋತ್ಸಾಹಧನ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.  ಮೂರು ಹಂತಗಳಲ್ಲಿ ಯೋಜನೆ ಜಾರಿ: * 2017: ಅಪೌಷ್ಟಿಕತೆಯ ಸಮಸ್ಯೆ ಎದುರಿಸುತ್ತಿರುವ 162 ಜಿಲ್ಲೆಗಳಲ್ಲಿ ಎನ್ಎನ್ಎಂ ಪ್ರಾಯೋಗಿಕ ಜಾರಿ. *2017–18: ಮೊದಲ ಹಂತದ ಯೋಜನೆಗೆ 315 ಜಿಲ್ಲೆ ಆಯ್ಕೆ. * 2018–19: ಎರಡನೇ ಹಂತದಲ್ಲಿ 225 ಜಿಲ್ಲೆಗಳಲ್ಲಿ ಅನುಷ್ಠಾನ. *2019–20: ಆದ್ಯತೆ ಮೇರೆಗೆ ಇನ್ನುಳಿದ ಜಿಲ್ಲೆಗಳ ಆಯ್ಕೆ.

2017: ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ವಿವಾಹ ವಿಚ್ಛೇದನಕ್ಕೆ ಬಳಕೆಯಾಗುತ್ತಿರುವ ತ್ರಿವಳಿ ತಲಾಖ್ಪದ್ಧತಿಯನ್ನು ನಿಷೇಧಿಸುವ ಮಸೂದೆಯ ಕರಡನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿತು. ಸುಪ್ರೀಂ ಕೋರ್ಟ್ನಿಷೇಧಿಸಿದ್ದರೂ ತ್ರಿವಳಿ ತಲಾಖ್ಮುಂದುವರಿದಿದೆ. ಹಾಗಾಗಿ ತ್ರಿವಳಿ ತಲಾಖ್ನೀಡಿದವರಿಗೆ ಮೂರು ವರ್ಷ ಶಿಕ್ಷೆ ಮತ್ತು ದಂಡ ವಿಧಿಸುವ ಪ್ರಸ್ತಾವ ಮಸೂದೆಯ ಕರಡಿನಲ್ಲಿ ಇದೆ. ತ್ರಿವಳಿ ತಲಾಖ್ನೀಡುವುದು ಜಾಮೀನುರಹಿತ ಅಪರಾಧ ಎಂದು ಮಸೂದೆಯಲ್ಲಿ ಹೇಳಲಾಯಿತು. ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆ ಮಸೂದೆಯನ್ನು ಅಭಿಪ್ರಾಯ ಪಡೆಯುವುದಕ್ಕಾಗಿ ರಾಜ್ಯ ಸರ್ಕಾರಗಳಿಗೆ ಕಳುಹಿಸಲಾಯಿತು. ಮಸೂದೆಯ ಬಗ್ಗೆ ತುರ್ತಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ ಎಂದು ಕೇಂದ್ರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಕೇಂದ್ರ ಗೃಹ ಸಚಿವ ರಾಜನಾಥ್ಸಿಂಗ್ಅವರ ನೇತೃತ್ವದ ಅಂತರ್ಸಚಿವಾಲಯ ಗುಂಪು ಕರಡು ಮಸೂದೆಯನ್ನು ಸಿದ್ಧಪಡಿಸಿತು. ಸುಷ್ಮಾ ಸ್ವರಾಜ್‌, ಅರುಣ್ಜೇಟ್ಲಿ, ರವಿಶಂಕರ್ ಪ್ರಸಾದ್ಮತ್ತು ಪಿ.ಪಿ. ಚೌಧರಿ ಸಮಿತಿಯಲ್ಲಿದ್ದ ಇತರ ಸಚಿವರು. ತ್ರಿವಳಿ ತಲಾಖ್ಗೆ ಮಾತ್ರ   ಮಸೂದೆ ಅನ್ವಯ. ತ್ರಿವಳಿ ತಲಾಖ್ಗೆ ಒಳಗಾದ ಮಹಿಳೆ ಗಂಡನಿಂದ ಜೀವನಾಂಶ ಪಡೆಯುವುದಕ್ಕೆ ಅವಕಾಶ ಕಲ್ಪಿಸುವ ಪ್ರಸ್ತಾವ ಇದೆ. 18 ವರ್ಷದೊಳಗಿನ ಮಕ್ಕಳಿಗೂ ಜೀವನಾಂಶ ಪಡೆಯಬಹುದು. ಮಕ್ಕಳನ್ನು ತನ್ನೊಂದಿಗೆ ಇರಿಸುವುದಕ್ಕೂ ಮಹಿಳೆಗೆ ಇದು ಅವಕಾಶ ಕಲ್ಪಿಸುತ್ತದೆ. ಹೆಂಡತಿಯನ್ನು ಗಂಡ ಮನೆಯಿಂದ ಹೊರಗೆ ಹಾಕಿದ ಸಂದರ್ಭದಲ್ಲಿಯೂ ಜೀವನಾಂಶ ಮತ್ತು ಮಕ್ಕಳ ಸುಪರ್ದಿ ಹೊಂದುವುದಕ್ಕೆ ಅವಕಾಶ ಕೊಡುವ ಪ್ರಸ್ತಾವ ಮಸೂದೆಯಲ್ಲಿ ಇದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ವಿವಾಹ ಮತ್ತು ವಿಚ್ಛೇದನ ಸಂವಿಧಾನದ ಸಹವರ್ತಿ ಪಟ್ಟಿಯಲ್ಲಿರುವ ವಿಚಾರ. ಹಾಗಾಗಿ ತುರ್ತು ಸಂದರ್ಭದಲ್ಲಿ ಮಸೂದೆ ಅಂಗೀಕರಿಸುವುದಕ್ಕೆ ಸಂಸತ್ತಿಗೆ ಅವಕಾಶ ಇದೆ. ಆದರೆ ಸರ್ಕಾರಿಯಾ ಸಮಿತಿಯ ಶಿಫಾರಸನ್ನು ಅನುಸರಿಸಿರುವ ಕೇಂದ್ರ, ಮಸೂದೆಯ ಬಗ್ಗೆ ರಾಜ್ಯಗಳ ಅಭಿಪ್ರಾಯ ಪಡೆಯಲು ಮುಂದಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಯೇ ಮಸೂದೆ ಮಂಡನೆಗೆ ಕೇಂದ್ರ ನಿರ್ಧರಿಸಿದೆ ಎಂದು ಅವರು ಹೇಳಿದರು.
2017: ಲಖನೌ: ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತು. ಕಾಂಗ್ರೆಸ್‌, ಬಿಎಸ್ಪಿ ಮತ್ತು ಸಮಾಜವಾದಿ ಪಕ್ಷಗಳ ಕಳಪೆ ಪ್ರದರ್ಶನ ಮುಂದುವರೆಯಿತು. ಈದಿನ ಸಂಜೆ ಉತ್ತರ ಪ್ರದೇಶದ 16 ಪಾಲಿಕೆಗಳ ಫಲಿತಾಂಶ ಪ್ರಕಟವಾಗಿದ್ದು ಪೈಕಿ 14ರಲ್ಲಿ ಬಿಜೆಪಿ ಜಯಗಳಿಸಿತು. ಆದರೆ, ಪ್ರಬಲ ಕೋಟೆ ಅಲಿಗಡದಲ್ಲಿ ಸೋಲು ಉಂಡಿತು. ಇಲ್ಲಿ ಮಾಯಾವತಿ ಅವರ ಬಿಎಸ್ಪಿ ಜಯಗಳಿಸಿತು. ಇದೇ ಮೊದಲ ಬಾರಿಗೆ ಬಿಎಸ್ಪಿ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಗುರುತಿನ (ಆನೆ) ಮೇಲೆ ಸ್ಪರ್ಧಿಸಿತ್ತು. ಕಾಂಗ್ರೆಸ್ಉಪಾಧ್ಯಕ್ಷ ರಾಹುಲ್ಗಾಂಧಿ ಪ್ರತಿನಿಧಿಸುವ ಅಮೇಠಿಯಲ್ಲಿಯೇ ಕಾಂಗ್ರೆಸ್ನೀರಸ ಪ್ರದರ್ಶನ ತೋರಿತು. ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿಯಾದ ನಂತರ ನಡೆದ ಮೊದಲ ಚುನಾವಣೆ ಇದು. ಉತ್ತರ ಪ್ರದೇಶದ ಜಯ ಗುಜರಾತ್ನಲ್ಲಿ ಬಿಜೆಪಿಯ ನೈತಿಕ ಬಲ ಹೆಚ್ಚಿಸಿತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಜಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ಷಾ ಅವರಿಗೆ ಅರ್ಪಿಸಿದರು. ಅಭಿವೃದ್ಧಿ ಕೆಲಸಗಳಿಗೆ ಸಂದ ಜಯ ಎಂದು ಮೋದಿ ಬಣ್ಣಿಸಿದರು. ಜನರಿಗಾಗಿ ಕೆಲಸ ಮಾಡಲು ಜಯ ಮತ್ತಷ್ಟು ಪ್ರೇರಣೆ ನೀಡಿದೆ ಎಂದು ಹೇಳಿದರು. ಅಯೋಧ್ಯೆ, ವಾರಾಣಸಿ, ಮಥುರಾವೃಂದಾವನ, ಲಖನೌ, ಗೋರಖಪುರ, ಮೊರಾದಾಬಾದ್‌, ಝಾನ್ಸಿ, ಫಿರೋಜಾಬಾದ್, ಬರೇಲಿಯ ಮೇಯರ್ಸ್ಥಾನಗಳು ಬಿಜೆಪಿ ಪಾಲಾದವು. 16 ನಗರ ನಿಗಮ, 198 ನಗರ ಪಾಲಿಕೆ ಪರಿಷತ್‌, 438 ನಗರ ಪಂಚಾಯಿತಿಗಳಿಗೆ ಚುನಾವಣೆ ನಡೆದಿತ್ತು
2017: ನವದೆಹಲಿ : ತಮಿಳುನಾಡಿನಲ್ಲಿ ಕಾರು ತಯಾರಿಕಾ ಘಟಕ ಸ್ಥಾಪಿಸಿದ್ದಕ್ಕೆ ಪ್ರತಿಫಲವಾಗಿ ತಮಿಳುನಾಡು ಸರ್ಕಾರ ಪ್ರೋತ್ಸಾಹಧನ ನೀಡದಿರುವ ವ್ಯಾಜ್ಯವನ್ನು ಬಗೆಹರಿಸಿಕೊಳ್ಳಲು ಭಾರತ ಸರ್ಕಾರದ ವಿರುದ್ಧ ಜಪಾನಿನ ನಿಸಾನ್ ಮೋಟಾರ್ಸ್ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಮಂಡಳಿ ಮೊರೆ ಹೋಯಿತು. ಡಿಸೆಂಬರ್ ಮೂರನೇ ವಾರದಲ್ಲಿ ವ್ಯಾಜ್ಯದ ಮೊದಲ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿದವು. ಬಗ್ಗೆ ಯಾವುದೇ ಮಾಹಿತಿ ನೀಡಲು ಕಂಪೆನಿ ನಿರಾಕರಿಸಿತು. ಬಗ್ಗೆ ಪ್ರತಿಕ್ರಿಯೆ ನೀಡಿ ಎಂದು ಕಳುಹಿಸಿದ ಮೇಲ್ಗೆ ಭಾರತದ ಪ್ರಧಾನಿ ಕಾರ್ಯಾಲಯ ಸ್ಪಂದಿಸಿಲ್ಲಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿತು. ಪ್ರೋತ್ಸಾಹಧನ ತಡೆಹಿಡಿಯುವ ಮೂಲಕ ಭಾರತಜಪಾನ್ ನಡುವಣ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು ಭಾರತ ಸರ್ಕಾರ ಉಲ್ಲಂಘಿಸಿದೆ ಎಂದು ನಿಸಾನ್ ಆರೋಪಿಸಿತು. ಜಪಾನ್ ನಿಸಾನ್ ಮತ್ತು ಫ್ರಾನ್ಸ್ ರೆನೊ ಕಂಪೆನಿಗಳು ಜಂಟಿ ಸಹಭಾಗಿತ್ವದಲ್ಲಿ ತಮಿಳುನಾಡಿನಲ್ಲಿ ಕಾರು ತಯಾರಿಕಾ ಘಟಕವನ್ನು ಸ್ಥಾಪಿಸಿದ್ದವು. ಸಂಬಂಧ ಎರಡೂ ಕಂಪೆನಿಗಳು 2008ರಲ್ಲಿ ತಮಿಳುನಾಡು ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದ್ದವು. ಒಪ್ಪಂದದ ಭಾಗವಾಗಿ ತಮಿಳುನಾಡು ಸರ್ಕಾರ 2015ರಲ್ಲಿ ನಿಸಾನ್ಗೆ ಪ್ರೋತ್ಸಾಹಧನ ನೀಡಬೇಕಿತ್ತು. ಜತೆಗೆ ಕಂಪೆನಿ ಪಾವತಿಸಿರುವ ಎಲ್ಲಾ ಸ್ವರೂಪದ ತೆರಿಗೆಗಳಲ್ಲಿ ಸ್ವಲ್ಪ ಭಾಗವನ್ನು ರಾಜ್ಯ ಸರ್ಕಾರ ಹಿಂತಿರುಗಿಸಬೇಕಿತ್ತು. ಆದರೆ ಎರಡೂ ಪ್ರಕ್ರಿಯೆಯನ್ನು ತಮಿಳುನಾಡು ಸರ್ಕಾರ ತಡೆಹಿಡಿದಿದೆಎಂದು ಮೂಲಗಳು ಹೇಳಿದವು. ಸಂಬಂಧ ಕಂಪೆನಿಯು ರಾಜ್ಯ ಸರ್ಕಾರದ ಜತೆ ಹಲವು ಭಾರಿ ಮಾತುಕತೆ ನಡೆಸಿದರೂ ಅದು ಫಲಪ್ರದವಾಗಿರಲಿಲ್ಲ. ‘ರಾಜ್ಯ ಸರ್ಕಾರದಿಂದ ಪ್ರೋತ್ಸಾಹಧನ ಕೊಡಿಸಿಎಂದು ಕಂಪೆನಿ ನಿರ್ದೇಶಕ ಕಾರ್ಲೊ ಗೋಸ್ನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಅದೂ ಫಲ ನೀಡಿರಲಿಲ್ಲಎಂದು ಮೂಲಗಳು ಮಾಹಿತಿ ನೀಡಿದವು. ಹೀಗಾಗಿ 2016 ಜುಲೈನಲ್ಲಿ ಪ್ರಧಾನಿ ಕಾರ್ಯಾಲಯಕ್ಕೆ ಕಂಪೆನಿ ನೋಟಿಸ್ ಜಾರಿ ಮಾಡಿತ್ತು. ‘ಪ್ರೋತ್ಸಾಧನ ನೀಡದಿರುವುದು ಮತ್ತು ತೆರಿಗೆ ವಾಪಸಾತಿ ಮಾಡದ ಕಾರಣ ನಷ್ಟ ಅನುಭವಿಸಿದ್ದೇವೆ. ಸಂಬಂಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕುಎಂದು ಕಂಪೆನಿ ನೋಟಿಸ್ನಲ್ಲಿ ಹೇಳಿತ್ತು. ಆನಂತರ ಕೇಂದ್ರ ಸರ್ಕಾರ, ತಮಿಳುನಾಡು ಸರ್ಕಾರದ ಪ್ರತಿನಿಧಿಗಳು ಕಂಪೆನಿಯ ಪ್ರತಿನಿಧಿಗಳ ಜತೆ 12 ಬಾರಿ ಮಾತುಕತೆ ನಡೆಸಿದ್ದರು. ಆದರೂ ಸಮಸ್ಯೆ ಬಗೆಹರಿದಿರಲಿಲ್ಲ ಎಂದು ಮೂಲಗಳು ಹೇಳಿದವು. ಭಾರತದಲ್ಲಿ ಘಟಕ ಆರಂಭಿಸಿರುವ ವಿದೇಶಿ ಕಂಪೆನಿಗಳು ತೆರಿಗೆ ಮತ್ತು ಪ್ರೋತ್ಸಾಹಧನಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಮಂಡಳಿಯ ಮೊರೆ ಹೋಗಿರುವ 20 ಪ್ರಕರಣಗಳು ಬಾಕಿ ಇವೆ. ಮಂಡಳಿಯಲ್ಲಿ ಭಾರತದ ವಿರುದ್ಧವೇ ಹೆಚ್ಚು ಪ್ರಕರಣಗಳು ಇತ್ಯರ್ಥವಾಗದೇ ಉಳಿದಿವೆ.
2017: ನವದೆಹಲಿ: ಹಿರಿಯ ಪತ್ರಕರ್ತ .ಸೂರ್ಯಪ್ರಕಾಶ್ಅವರನ್ನು ಪ್ರಸಾರ ಭಾರತಿ ಅಧ್ಯಕ್ಷರಾಗಿ ಸತತ ಎರಡನೇ ಅವಧಿಗೆ ನೇಮಿಸಲಾಯಿತು. ಇವರ ಸೇವಾವಧಿ 2020 ಫೆಬ್ರುವರಿ 8ರವರೆಗೆ ಇರುತ್ತದೆ. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ನೇತೃತ್ವದ ಸಮಿತಿಯು ಪ್ರಕಾಶ್ಅವರ ಹೆಸರನ್ನು ಶಿಫಾರಸು ಮಾಡಿತ್ತು. ಅದರ ಅನ್ವಯ, ಸ್ಮೃತಿ ಇರಾನಿ ನೇತೃತ್ವದ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಆದೇಶ ಪ್ರಕಟಿಸಿತು. ದೂರದರ್ಶನ ಹಾಗೂ ಆಲ್ಇಂಡಿಯಾ ರೇಡಿಯೊ ಕಾರ್ಯನಿರ್ವಹಣೆಯ ಮೇಲುಸ್ತುವಾರಿಯನ್ನು ಪ್ರಸಾರಭಾರತಿ ನೋಡಿಕೊಳ್ಳುತ್ತಿದೆ. ಮಾಹಿತಿ ಹಾಗೂ ಪ್ರಸಾರ ಖಾತೆ ಇಲಾಖೆಯ ಕಾರ್ಯದರ್ಶಿ ಎನ್‌.ಕೆ.ಸಿನ್ಹಾ, ಪ್ರೆಸ್ಕೌನ್ಸಿಲ್ಆಫ್ಇಂಡಿಯಾದ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಸಿ.ಕೆ.ಪ್ರಸಾದ್ಸೇರಿದಂತೆ ಇನ್ನಿಬ್ಬರು ಸದಸ್ಯರನ್ನು ಒಳಗೊಂಡ ಸಮಿತಿಯು ಸೂರ್ಯಪ್ರಕಾಶ್ಅವರ ಹೆಸರನ್ನು ಶಿಫಾರಸು ಮಾಡಿತ್ತು.

2008: ಮುಂಬೈಯಲ್ಲಿ ನಡೆದ ಭಯೋತ್ಪಾದನೆ ಕೃತ್ಯಕ್ಕೆ ಕಾರಣವಾದ ಪಾಕಿಸ್ಥಾನದ ವಿರುದ್ಧ ಭಾರತ ಕಠಿಣ ನಿಲುವು ತಳೆಯಿತು. ಈದಿನ ಪಾಕಿಸ್ಥಾನದ ಹೈಕಮಿಷನರ್ ಶಾಹಿದ್ ಮಲ್ಲಿಕ್ ಅವರನ್ನು ಕರೆಸಿ ಪ್ರತಿಭಟನೆ ವ್ಯಕ್ತಪಡಿಸಿತು. ಸೆರೆ ಸಿಕ್ಕಿದ ಉಗ್ರ ಕಸಾಬ್ ಹೇಳಿಕೆ, ಪಾಕಿಸ್ಥಾನದ ಕೈವಾಡವನ್ನು ಬಹಿರಂಗಗೊಳಿಸುತ್ತಿದ್ದಂತೆಯೇ ಭಾರತ ಮತ್ತು ಪಾಕಿಸ್ಥಾನ ನಡುವಣ ಸಂಬಂಧ ಅನಿರೀಕ್ಷಿತ ತಿರುವುಗಳನ್ನು ಕಂಡಿತು. ಭಾರತ ಸೇನೆಯು ಏಕಾಏಕಿ ಪಾಕಿಸ್ಥಾನದ ಗಡಿಯಲ್ಲಿ ತನ್ನ ಸೇನಾ ಚಟುವಟಿಕೆಗಳನ್ನು ಹೆಚ್ಚಿಸಿದ ಬಗ್ಗೆ ಪಾಕಿಸ್ಥಾನದಲ್ಲಿ ಆತಂಕ ಕಂಡು ಬಂದಿತು. ಈ ನಡುವೆ ಪಾಕ್ ವಿರುದ್ಧ ಧ್ವನಿ ಎತ್ತಿದ ಭಾರತ ಕುಖ್ಯಾತ ದಾವೂದ್ ಇಬ್ರಾಹಿಂನನ್ನು ತನ್ನ ವಶಕ್ಕೆ ಒಪ್ಪಿಸಬೇಕೆಂದು ಆಗ್ರಹಿಸಿತು..

2008: ಮುಂಬೈ ಮೇಲಿನ ಭಯೋತ್ಪಾದಕರ ದಾಳಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಆರ್. ಆರ್.ಪಾಟೀಲ್ ಅವರ ಸ್ಥಾನಕ್ಕೂ ಸಂಚಕಾರ ತಂದಿತು. ಉಗ್ರರ ದಾಳಿ ಹಿನ್ನೆಲೆಯಲ್ಲಿ ಎನ್‌ಸಿಪಿಯ ಪಾಟೀಲ್ ರಾಜೀನಾಮೆ ನೀಡಿದರು. 'ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ಅವರಿಗೆ ನೀಡಿದ್ದೇನೆ. ಇದು ನನ್ನ ಆತ್ಮಸಾಕ್ಷಿ ಮತ್ತು ವಿವೇಚನೆಯ ತೀರ್ಮಾನ' ಎಂದು ಸುದ್ದಿ ಸಂಸ್ಥೆಗೆ ಅವರು ತಿಳಿಸಿದರು.. ರಾಜ್ಯ ಗೃಹ ಸಚಿವರೂ ಆದ ಪಾಟೀಲ್ ಮುಂಬೈಯಲ್ಲಿನ ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದ್ದರು.. ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯಸ್ಥೆ ಕಾಪಾಡುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದ ಶಿವಸೇನಾ ರಾಜೀನಾಮೆ ನೀಡುವಂತೆ ಪಾಟೀಲರನ್ನು ಒತ್ತಾಯಿಸಿತ್ತು.

2008: ಚಿಕ್ಕಮಗಳೂರಿನ ದತ್ತಾತ್ರೇಯಸ್ವಾಮಿ ಬಾಬಾ ಬುಡನ್ಗಿರಿ ದರ್ಗಾದ ದತ್ತ ಪೀಠದಲ್ಲಿನ ಪೂಜಾ ವಿಧಾನಗಳ ಬಗ್ಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾದ ಆರ್. ವಿ.ರವೀಂದ್ರನ್ ಮತ್ತು ಡಿ.ಕೆ.ಜೈನ್ ಅವರನ್ನೊಳಗೊಂಡ ನ್ಯಾಯಪೀಠವು, 1989ರ ಧಾರ್ಮಿಕ ದತ್ತಿ ಆಯುಕ್ತರ ಆದೇಶಕ್ಕೆ ಅನುಗುಣವಾಗಿ ಯಥಾಸ್ಥಿತಿ ಕಾಪಾಡಿಕೊಂಡು ಬರುವಂತೆ ಆದೇಶ ನೀಡಿತು.

2008: ಅಮೆರಿಕದ ಚುನಾಯಿತ ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದರು.

2008: ಮಾಜಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ಹಿರಿಯ ಉಪಾಧ್ಯಕ್ಷ ವಿಶ್ವನಾಥ ರೆಡ್ಡಿ ಮುದ್ನಾಳ (85) ಅವರು ಈದಿನ ರಾತ್ರಿ ಯಾದಗಿರಿಯಲ್ಲಿ ನಿಧನರಾದರು.

2008: ಹಲವು ಮೌಲ್ಯ ವರ್ಧಿತ ಸೇವೆಗಳನ್ನು ಆರಂಭಿಸಿದ ಭಾರ ತೀಯ ಅಂಚೆ ಇಲಾಖೆ ಕರ್ನಾಟಕ ವೃತ್ತವು ಹೊಸದಾಗಿ ಚಿನ್ನದ ನಾಣ್ಯ ಮಾರಾಟಕ್ಕೆ ಚಾಲನೆ ನೀಡಿತು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಅಂಚೆ ಇಲಾಖೆಯ ಸೇವಾ ವಿಭಾಗದ ನಿರ್ದೇಶಕ ಕೆ.ಕೆ. ಶರ್ಮಾ, 'ದೇಶದಲ್ಲಿ ಚಿನ್ನದ ನಾಣ್ಯ ಮಾರಾಟವು ಪ್ರಮುಖ ವಹಿವಾ ಟಾಗಿ ಪರಿವರ್ತನೆಯಾಗಿದ್ದು, ಚಿನ್ನದ ಹೊಳಪು ಸದಾಕಾಲ ಜನರ ಆಕರ್ಷಣೆಯಿಂದ ದೂರಾಗಿಲ್ಲ. ಈ ನಿಟ್ಟಿನಲ್ಲಿ ಜನರಿಗೆ ಗುಣಮಟ್ಟದ ಸೇವೆಯ ವಿಶ್ವಾಸವನ್ನು ಅಂಚೆ ಇಲಾಖೆ ಮುಂದುವರೆಸುವುದು' ಎಂದು ಹೇಳಿದರು.

2008: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು 2008ರ ಅತ್ಯುತ್ತಮ ಬ್ಯಾಂಕ್ ಎಂದು ಲಂಡನ್ ಮೂಲದ ಫೈನಾನ್ಷಿಯಲ್ ಟೈಮ್ಸ್ ಗ್ರೂಪ್‌ಗೆ ಸೇರಿದ 'ದಿ ಬ್ಯಾಂಕರ್' ಮ್ಯಾಗಜಿನ್ ಪರಿಗಣಿಸಿತು. ಸ್ಟೇಟ್ ಬ್ಯಾಂಕ್ ಅಧ್ಯಕ್ಷ ಓ. ಪಿ. ಭಟ್ ಅವರು ಈ ಪ್ರಶಸ್ತಿಯನ್ನು ಮ್ಯಾಗಜಿನ್ ಪ್ರಧಾನ ಸಂಪಾದಕ ಸ್ಟೀಫನ್ ಟೈಮ್‌ವೆಲ್ ಅವರಿಂದ ಸ್ವೀಕರಿಸಿದರು ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿತು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಲಂಡನ್‌ನ ಡೊರ್ಷೆಸ್ಟರ್ ಹೋಟೆಲಿನಲ್ಲಿ ನವೆಂಬರ್ 26ರಂದು ಏರ್ಪಡಿಸಲಾಗಿತ್ತು.

2007: ಚೀನಾದ ಸನ್ಯಾದಲ್ಲಿ ನಡೆದ 2007ನೇ ಸಾಲಿನ ವಿಶ್ವಸುಂದರಿ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಚೀನಾದ ಝಂಗ್ ಜಲಿನ್ ಅವರು ವಿಶ್ವಸುಂದರಿಯಾಗಿ ಆಯ್ಕೆಯಾದರು.

2007: ಲಘು ಹೃದಯಾಘಾತ ಸಂಭವಿಸಿದಾಗ ಹೃದಯದ ಕೆಲವೊಂದು ಜೀವಕೋಶಗಳು ನಾಶವಾಗುತ್ತವೆ. ನಾಶವಾದ ಈ ಜೀವಕೋಶಗಳನ್ನು ಹೊಸ ಆಕರ ಕೋಶಗಳೊಂದಿಗೆ ಬದಲಾಯಿಸಿದರೆ ಗಂಭೀರ ಪ್ರಮಾಣದ ಹೃದಯಾಘಾತವನ್ನು ತಡೆಯಬಹುದು ಎಂದು ವಾಷಿಂಗ್ಟನ್ನಿನಲ್ಲಿ ಸಂಶೋಧಕರು ಪ್ರಕಟಿಸಿದರು. ಆಕರ ಕೋಶಗಳನ್ನು ದೇಹದೊಳಗೆ ತೂರಿಸಿದಾಗ ಹೃದಯದ ರಕ್ತನಾಳಗಳು ಬಲಿಷ್ಠಗೊಳ್ಳುತ್ತವೆ. ಇವು ಮುಂದೆ ಸಂಭವಿಸಬಹುದಾದ ಗಂಭೀರ ಆಘಾತವನ್ನು ತಡೆಯಲು ಸಹಾಯ ಮಾಡುತ್ತವೆ ಎಂದು ಲೆಡೆನ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ವಿಂಟರ್ ಅಭಿಪ್ರಾಯ ಪಟ್ಟಿತು.

2007: ಅಗ್ನಿಶಾಮಕದಳ ಹಾಗೂ ಹಗಲು-ರಾತ್ರಿ ಎರಡೂ ಪಾಳಿಯಲ್ಲಿ ಕಾರ್ಯನಿರ್ವಹಿಸುವವರಿಗೆ ಕ್ಯಾನ್ಸರ್ ಬರುವ ಸಂಭವ ಸಾಮಾನ್ಯ ಜನರಿಗಿಂತಲೂ ಹೆಚ್ಚು ಎಂದು ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಹೇಳಿತು. ಇಂತಹ ಅಪಾಯಕಾರಿ ಕೆಲಸಗಳನ್ನು ಕ್ಯಾನ್ಸರಿಗೆ ದಾರಿ ಮಾಡಿಕೊಡುವ ಕೆಲಸಗಳೆಂದು ಘೋಷಿಸಬೇಕೆಂದು ಸಂಸ್ಥೆಯು ಅಂತಾರಾಷ್ಟ್ರೀಯ ಸಮುದಾಯಕ್ಕೆ ಒತ್ತಾಯ ಮಾಡಿತು. ಈ ಕುರಿತು ಲಾನ್ಸೆಟ್ ಓಂಕಾಲಜಿ ವೈದ್ಯಕೀಯ ನಿಯತಕಾಲಿಕದ ಡಿಸೆಂಬರ್ ಸಂಚಿಕೆಯಲ್ಲಿ ಸಂಪೂರ್ಣ ವಿವರವನ್ನು ಪ್ರಕಟಿಸಲಾಯಿತು.

2007: ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಹಿಲೆರಿ ಕ್ಲಿಂಟನ್ ಅವರ ಚುನಾವಣಾ ಪ್ರಚಾರದ ಕಚೇರಿಯೊಳಗೆ ನುಗ್ಗಿ, ಅಲ್ಲಿನ ಸಿಬ್ಬಂದಿಯನ್ನು ಕೆಲಹೊತ್ತು ಒತ್ತೆಯಾಳುಗಳಾಗಿ ಇರಿಸಿಕೊಂಡು ಆತಂಕ ಸೃಷ್ಟಿಸಿದ್ದ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗುವುದರೊಂದಿಗೆ ಪ್ರಕರಣ ಸುಖಾಂತ್ಯ ಕಂಡಿತು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ 47 ವರ್ಷದ ಲೀ ಐಸೆನ್ ಬರ್ಗ್ ಎಂಬಾತ ರೊಕೆಸ್ಟರ್ ಪ್ರದೇಶದಲ್ಲಿನ ಚುನಾವಣಾ ಪ್ರಚಾರದ ಕಚೇರಿಗೆ ನುಗ್ಗಿ ಮೂವರು ಮಹಿಳೆಯರು, ಆರು ತಿಂಗಳ ಮಗು ಸೇರಿದಂತೆ ಐವರನ್ನು ಒತ್ತೆ ಸೆರೆ ಇಟ್ಟುಕೊಂಡು ತನ್ನ ಬಳಿ ಬಾಂಬ್ ಇರುವುದಾಗಿ ಬೆದರಿಕೆಯೊಡ್ಡಿದ. ನಂತರ ಸಿಬ್ಬಂದಿಯನ್ನು ತನ್ನ ವಶಕ್ಕೆ ತೆಗೆದುಕೊಂಡು ಮಗು ಮತ್ತು ಅದರ ತಾಯಿಯನ್ನು ಬಿಡುಗಡೆ ಮಾಡಿದ. ಆದರೆ ಕಚೇರಿಯಿಂದ ಹೊರಬಂದ ಈ ಮಹಿಳೆ ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದಾಗ, ಅವರು ಕಾರ್ಯ ಪ್ರವರ್ತರಾಗಿ ಐಸೆನ್ ಬರ್ಗನನ್ನು ಬಂಧಿಸಿದರು. ಆತನ ಬಳಿ ಯಾವುದೇ ಬಾಂಬ್ ಇರಲಿಲ್ಲ ಎಂದು ನಂತರ ಗೊತ್ತಾಯಿತು.

2007: ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಪಕ್ಷವು ಭವಿಷ್ಯದ ಸವಾಲುಗಳನ್ನು ಎದುರಿಸುವುದಕ್ಕಾಗಿ ರಚಿಸಿದ ಉನ್ನತ ಮಟ್ಟದ ಸಮಿತಿಯಿಂದ ಕೇಂದ್ರ ಸಚಿವ ಜೈರಾಮ್ ರಮೇಶ್ ಅವರನ್ನು ಕೈಬಿಟ್ಟಿತು. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಆಪ್ತರೆನ್ನಲಾದ ರಮೇಶ್ ಈ ಹಿಂದೆ ಸಮಿತಿಯ ಸಂಚಾಲಕರಾಗಿದ್ದರು. ಆದರೆ, ವೀರಪ್ಪ ಮೊಯಿಲಿ ಅಧ್ಯಕ್ಷರಾಗಿರುವ ಈ ಸಮಿತಿ ಕೆಲ ದಿನಗಳ ಹಿಂದೆ ಮೊದಲ ಸಭೆ ನಡೆಸಿದ ನಂತರ ಜೈರಾಮ್ ರಮೇಶ್ ಅವರನ್ನು ಸಮಿತಿಯಿಂದ ಕೈಬಿಟ್ಟಿತು. ಆದರೆ ಇದಕ್ಕೆ ಕಾರಣ ನೀಡಿಲ್ಲ. ಸೇತು ಸಮುದ್ರಂ ಯೋಜನೆ ವಿಚಾರದಲ್ಲಿ ಸಂಸ್ಕೃತಿ ಸಚಿವಾಲಯದಿಂದ ಸುಪ್ರೀಂ ಕೋರ್ಟಿಗೆ ಸಲ್ಲಿಸಲಾಗಿದ್ದ ಪ್ರಮಾಣ ಪತ್ರದ ಹಿನ್ನೆಲೆಯಲ್ಲಿ ಸಚಿವೆ ಅಂಬಿಕಾ ಸೋನಿ ಅವರನ್ನು ಬಹಿರಂಗವಾಗಿ ಜೈರಾಮ್ ರಮೇಶ್ ಅವರು ಟೀಕಿಸಿದ್ದೇ ಈ ಕ್ರಮಕ್ಕೆ ಕಾರಣ ಎಂದು ರಾಜಕೀಯ ತಜ್ಞರು ಲೆಕ್ಕ ಹಾಕಿದರು.

2007: ಶ್ರೀಲಂಕಾದ ಉತ್ತರ ಭಾಗದಲ್ಲಿ ಸೈನಿಕರು ಹಾಗೂ ಎಲ್ಟಿಟಿಇ ಉಗ್ರರ ನಡುವೆ ನಡೆದ ಸಂಘರ್ಷದಲ್ಲಿ 19 ಉಗ್ರರು ಮತ್ತು ಮೂವರು ಯೋಧರು ಮೃತರಾದರು. 57 ಮಂದಿ ಗಾಯಗೊಂಡರು.

2007: ಇರಾಕಿನ ಷಿಯಾ ಮುಸ್ಲಿಮರು ಪ್ರಾಬಲ್ಯದಲ್ಲಿರುವ ಉತ್ತರ ಬಾಗ್ದಾದ್ ಹಳ್ಳಿಯನ್ನು ವಶಕ್ಕೆ ತಗೆದುಕೊಂಡ ಅಲ್ ಖೈದಾ ಉಗ್ರರು 12ಮಂದಿ ನಾಗರಿಕರನ್ನು ಹತ್ಯೆ ಮಾಡಿ, ಎಂಟು ಮಂದಿಯನ್ನು ಗಾಯಗೊಳಿಸಿದರು. ಜೊತೆಗೆ 35 ಜನರನ್ನು ಅಪಹರಿಸಿ ಎಂಟು ಮನೆಗಳಿಗೆ ಬೆಂಕಿ ಹಚ್ಚಿದರು.

2007: ಎಚ್ಐವಿ/ಏಡ್ಸ್ ನಿರ್ಮೂಲನೆ ಹಾಗೂ ಅದರಿಂದ ರಕ್ಷಣೆ ಪಡೆಯುವ ಬಗೆ ಹೇಗೆಂಬ ಮಾಹಿತಿ ಹೊತ್ತ ವಿಶೇಷ ವಿನ್ಯಾಸದ ಏಳು ಬೋಗಿಯ `ದಿ ರೆಡ್ ರಿಬ್ಬನ್ ಎಕ್ಸ್ ಪ್ರೆಸ್' ರೈಲಿಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಏಡ್ಸ್ ದಿನಾಚರಣೆ ಅಂಗವಾಗಿ ನವದೆಹಲಿಯಲ್ಲಿ ಚಾಲನೆ ನೀಡಿದರು.

2007: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಕಲ್ಲಿನ ಮಾಧ್ಯಮದಲ್ಲಿ ಹೂವಿನಹಡಗಲಿಯ ಬಿ. ಶಿವಾನಂದಚಾರ್, ಬೆಂಗಳೂರಿನ ಸುರೇಂದ್ರ ಕಾಳಪ್ಪ ವಿಶ್ವಕರ್ಮ, ಮೈಸೂರಿನ ಗುರುರಾಜ ಎಸ್. ನಾಯಕ್ ಹಾಗೂ ಮರ, ಮಿಶ್ರ ಮಾಧ್ಯಮ ಮತ್ತು ಲೋಹ ಮಾಧ್ಯಮದಲ್ಲಿ ಬಿಡದಿಯ ರುಕ್ಕಪ್ಪ ಕುಂಬಾರ, ಮೈಸೂರಿನ ಆನಂದಬಾಬು ಎಂ. ಅಂಬರಖಾನೆ ಮತ್ತು ಶಿವಾರಪಟ್ಟಣದ ಎಸ್. ಶಶಿಧರ್ ಈ ಆರು ಕಲಾವಿದರನ್ನು ಶಿಲ್ಪಕಲಾ ಅಕಾಡೆಮಿ ಬಹುಮಾನಕ್ಕೆ ಆಯ್ಕೆ ಮಾಡಿತು. ಗುಲ್ಬರ್ಗದ ಮಲ್ಲಿಕಾರ್ಜುನ ಕೆ. ಚಿಕನಹಳ್ಳಿ ಅವರಿಗೆ ಮೈಸೂರಿನ `ರಾಮ್ ಸನ್ಸ್ ಕಲಾ ಪ್ರತಿಷ್ಠಾನ ಪ್ರಶಸ್ತಿ'ಯನ್ನು ಪ್ರಕಟಿಸಿತು.

2006: ಹದಿನೆಂಟು ವರ್ಷಗಳ ಹಿಂದೆ ರಸ್ತೆ ಬದಿ ನಡೆದ ಜಗಳವೊಂದರಲ್ಲಿ ಗುರ್ನಾಮ್ ಸಿಂಗ್ ಎಂಬಾತನ ಸಾವಿಗೆ ಕಾರಣವಾಗಿದ್ದುದಕ್ಕಾಗಿ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಬಿಜೆಪಿಯ ಲೋಕಸಭಾ ಸದಸ್ಯ ನವಜೋತ್ ಸಿಂಗ್ ಸಿಧು ತಪ್ಪಿತಸ್ಥ ಎಂದು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ತೀರ್ಪು ನೀಡಿತು. ಈ ಹಿನ್ನೆಲೆಯಲ್ಲಿ ಸಿಧು ಅವರು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.

2006: ಫಿಲಿಪ್ಪೀನ್ಸಿನಲ್ಲಿ ಭೀಕರ ಬಿರುಗಾಳಿ ಮಳೆ, ಭೂಕುಸಿತಗಳ ಪರಿಣಾಮವಾಗಿ 400ಕ್ಕೂ ಹೆಚ್ಚು ಜನ ಅಸು ನೀಗಿದರು.

2006: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ನಗರ ಪಂಚಾಯತ್ ಸದಸ್ಯ ಹಾಗೂ ಮೂಲ್ಕಿ- ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದಶಿರ್ಶಿ ಸುಖಾನಂದ ಶೆಟ್ಟಿ (32) ಅವರನ್ನು ಮಂಗಳೂರಿಗೆ ಸಮೀಪದ ಕುಳಾಯಿಯಲ್ಲಿ ಕೊಲೆಗೈಯಲಾಯಿತು. ಪರಿಣಾಮವಾಗಿ ಮೂಲ್ಕಿಯಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದು ಪೊಲೀಸ್ ಗೋಲಿಬಾರಿಗೆ ಇಬ್ಬರು ಬಲಿಯಾದರು.

2005: ಭಾರತದ ನಾಲ್ಕನೇ `ತೇಜಸ್' ಹಗುರ ಯುದ್ಧ ವಿಮಾನದ ಯಶಸ್ವೀ ಚೊಚ್ಚಲ ಹಾರಾಟ (ಪಿವಿ2) ಬೆಂಗಳೂರಿನಲ್ಲಿ ನಡೆಯಿತು. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಈ ಯುದ್ಧ ವಿಮಾನದಲ್ಲಿ ಬಹುಪಾಲು ಕಾರ್ಯಗಳನ್ನು ಸಾಫ್ಟವೇರ್ ತಂತ್ರಜ್ಞಾನದ ಮೂಲಕವೇ ನಿಯಂತ್ರಿಸಬಹುದು. ಭಾರತದ ಯುದ್ಧ ವಿಮಾನಗಳ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿರುವ ಇದು ಯುದ್ಧ ವಿಮಾನಗಳ ಪಟ್ಟಿಗೆ ಇನ್ನೊಂದು ಮಹತ್ವದ ಸೇರ್ಪಡೆ.

2005: ಬಿಸಿನೆಸ್ ಇಂಡಿಯ ನಿಯತಕಾಲಿಕವು ನೀಡುವ `ಬಿಸಿನೆಸ್ ಮನ್ ಆಫ್ ದಿ ಈಯರ್ 2005' ಪ್ರಶಸ್ತಿಗೆ ಐಸಿಐಸಿಐ ಬ್ಯಾಂಕ್ ಅಧ್ಯಕ್ಷ ಕೆ.ವಿ. ಕಾಮತ್ ಆಯ್ಕೆಯಾದರು.

2005: ಮೈಸೂರಿನ ರಮಣಶ್ರೀ ಪ್ರತಿಷ್ಠಾನವು ಹಾಸ್ಯ ಸಾಹಿತ್ಯದಲ್ಲಿ ಮಾಡಿದ ಸಾಧನೆಗಾಗಿ ನೀಡುವ ಪ್ರಸಕ್ತ ಸಾಲಿನ `ನಗೆರಾಜ' ಪ್ರಶಸ್ತಿಗೆ ಪತ್ರಕರ್ತ ಜಿ.ಎಚ್. ರಾಘವೇಂದ್ರ ಆಯ್ಕೆಯಾದರು.

2005: ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವ ಪಾಕಿಸ್ಥಾನ ಮೂಲದ ಹಿಜಬುಲ್ ಮುಜಾಹಿದ್ದೀನ್ ಸಂಘಟನೆಯನ್ನು ಐರೋಪ್ಯ ಸಮುದಾಯ ರಾಷ್ಟ್ರಗಳು ಕಪ್ಪು ಪಟ್ಟಿಗೆ ಸೇರಿಸಿದವು. 2001ರ ಸೆಪ್ಟೆಂಬರ್ 11ರಂದು ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ನಡೆದ ನಂತರ ಐರೋಪ್ಯ ರಾಷ್ಟ್ರಗಳು ಭಯೋತ್ಪಾದಕ ಸಂಘಟನೆಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಆರಂಭಿಸಿದವು.

1990: ಬ್ರಿಟಿಷ್ ಮತ್ತು ಫ್ರಾನ್ಸ್ ಮಧ್ಯೆ ಸುರಂಗ ಕಾಲುವೆ ತೋಡುತ್ತಿದ್ದ ಕಾರ್ಮಿಕರು ಬಂಡೆಯ ಕೊನೆಯ ತುಂಡನ್ನು ತುಂಡರಿಸುವ ಮೂಲಕ ಪರಸ್ಪರ ಸಂಧಿಸಿ ಕೈ ಕುಲುಕಿದರು. ಇಂಗ್ಲೆಂಡಿನಿಂದ 22.3 ಕಿ.ಮೀ. ಹಾಗೂ ಫ್ರಾನ್ಸಿನಿಂದ 15.6 ಕಿ.ಮೀ. ದೂರದಲ್ಲಿ ಉಭಯ ದೇಶಗಳ ಕಡೆಗಳ ಈ ಸುರಂಗಗಳು ಪರಸ್ಪರ ಸಂಧಿಸಿದವು. ಬ್ರಿಟಿಷ್ ಕನ್ ಸ್ಟ್ರಕ್ಷನ್ ಕಾರ್ಮಿಕ ಗ್ರಹಾಂ ಫಾಗ್ ಹಾಗೂ ಫ್ರೆಂಚ್ ಕಾರ್ಮಿಕ ಫಿಲಿಪ್ ಕೊಝೆಟ್ಟ್ ಈ ಕೊನೆಯ ಬಂಡೆಯನ್ನು ತುಂಡರಿಸಿ ಉಭಯ ರಾಷ್ಟ್ರಗಳು ಮೊತ್ತ ಮೊದಲ ಬಾರಿಗೆ ಸುರಂಗ ಮೂಲಕ ಸಂಪರ್ಕಿಸುವಂತೆ ಮಾಡಿದರು. ಈ ಸುರಂಗ ತೋಡುವ ಕಾರ್ಯ ಮೂರು ವರ್ಷಗಳ ಹಿಂದೆ 1987ರಲ್ಲಿ ಇದೇ ದಿನ ಆರಂಭವಾಗಿತ್ತು.

1990: ಭಾರತದ ಪ್ರಥಮ ರಾಯಭಾರಿ ಮತ್ತು ರಾಜಕಾರಣಿ ವಿಜಯಲಕ್ಷ್ಮಿ ಪಂಡಿತ್ ನಿಧನ.

1988: ಇಂದು ವಿಶ್ವ ಏಡ್ಸ್ ದಿನ. ಏಡ್ಸ್ ಹಾಗೂ ಎಚ್ ಐ ವಿ ಸೋಂಕು ವಿರುದ್ಧ ವಿಶ್ವದಾದ್ಯಂತ ಜಾಗೃತಿ ಮೂಡಿಸಲು ಸಮರ್ಪಿತವಾದ ದಿನ. 1988ರಲ್ಲಿ ಆರೋಗ್ಯ ಸಚಿವರ ಜಾಗತಿಕ ಶೃಂಗ ಸಮ್ಮೇಳನದಲ್ಲಿ ಈ ವಿಚಾರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಚನೆ ಮೂಡಿತು. ಅಂದಿನಿಂದ ವಿಶ್ವದಾದ್ಯಂತ ಎಲ್ಲ ಸರ್ಕಾರಗಳು ಅಂತಾರಾಷ್ಟ್ರೀಯ ಸಂಘಟನೆಗಳು ಈ ದಿನ ವಿಶ್ವ ಏಡ್ಸ್ ದಿನ ಆಚರಿಸುತ್ತಿವೆ.

1989: ಪೋಪ್ ಎರಡನೇ ಜಾನ್ ಪಾಲ್ ಮತ್ತು ಸೋವಿಯತ್ ಒಕ್ಕೂಟದ ಧುರೀಣ ಮಿಖಾಯಿಲ್ ಗೊರ್ಬಚೆವ್ ಅವರ ಐತಿಹಾಸಿಕ ಭೇಟಿ ಹಾಗೂ ಮಾತುಕತೆಯು ಸೋವಿಯತ್ ಒಕ್ಕೂಟ ಮತ್ತು ವ್ಯಾಟಿಕನ್ ಮಧ್ಯೆ ಬೆಳೆದಿದ್ದ 70 ವರ್ಷಗಳ ವೈರತ್ವದ ಭಾವನೆಗಳಿಗೆ ತೆರೆ ಎಳೆಯಿತು.

1974: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಸುಚೇತಾ ಕೃಪಲಾನಿ ನಿಧನ.

1973: ಇಸ್ರೇಲಿನ ಪ್ರಥಮ ಪ್ರಧಾನಿ ಡೇವಿಡ್ ಬೆನ್- ಗುರಿಯನ್ ಅವರು ಟೆಲ್ ಅವೀವಿನಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು.

1963: ಶ್ರೀಲಂಕಾದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಅರ್ಜುನ ರಣತುಂಗ ಹುಟ್ಟಿದ ದಿನ.

1957: ಸಾಹಿತಿ ಲೋಕಾಪುರ ಐ.ಎ. ಜನನ.

1955: ಕರಿಯ ಮಹಿಳೆ ರೋಸಾ ಪಾರ್ಕ್ಸ್ ಈದಿನ ಅಲಾಬಾಮಾದ ಮಾಂಟ್ಗೊಮೆರಿ ಪಟ್ಟಣದ ಬಸ್ ಪ್ರಯಾಣದಲ್ಲಿ ಬಿಳಿಯ ಪ್ರಯಾಣಿಕನಿಗೆ ಆಸನ ತೆರವುಗೊಳಿಸಲು ನಿರಾಕರಿಸಿದರು. ಆಕೆಯ ಬಂಧನ ಬಸ್ ಬಹಿಷ್ಕಾರ ಚಳವಳಿಗೆ ನಾಂದಿ ಹಾಡಿತು. ಮಾರ್ನಿನ್ ಲೂಥರ್ ಕಿಂಗ್ ಜ್ಯೂನಿಯರ್ ಈ ಚಳವಳಿಯ ನೇತೃತ್ವ ವಹಿಸಿದರು. ಇದು ಅಮೆರಿಕಾದಲ್ಲಿ ನಾಗರಿಕ ಹಕ್ಕುಗಳ ಚಳವಳಿಯ ಯುಗಾರಂಭಕ್ಕೆ ಕಾರಣವಾಯಿತು.

1955: ಸಾಹಿತಿ ತುಳಸೀಪ್ರಿಯ ಜನನ.

1948: ಪಾಕಿಸ್ಥಾನದ ಮಾಜಿ ಬೌಲರ್ ಸರ್ ಫ್ರಾಜ್ ನವಾಜ್ ಹುಟ್ಟಿದ ದಿನ.

1939: `ಗಾನ್ ವಿದ್ ದಿ ವಿಂಡ್' ಚಲನಚಿತ್ರವು ಅಟ್ಲಾಂಟಾದಲ್ಲಿ ಪ್ರದರ್ಶನಗೊಂಡಿತು. ಅತ್ಯಂತ ಜನಪ್ರಿಯತೆ ಗಳಿಸುತ್ತಾ ಸಾಗಿದ ಈ ಚಿತ್ರ ಒಂಬತ್ತು ಪ್ರಮುಖ ಆಸ್ಕರ್ ಪ್ರಶಸ್ತಿಗಳನ್ನು, ಎರಡು ವಿಶೇಷ ಆಸ್ಕರ್ ಪ್ರಶಸ್ತಿಗಳನ್ನು ತನ್ನ ಬಗಲಿಗೆ ಏರಿಸಿಕೊಂಡಿತು. ಅಷ್ಟೇ ಅಲ್ಲ ಎರಡು ದಶಕಗಳ ಕಾಲ ಅತ್ಯಂತ ಹೆಚ್ಚು ಹಣ ಗಳಿಕೆಯ ಚಿತ್ರವಾಯಿತು.

1923: ನವೋದಯ, ಪ್ರಗತಿಶೀಲ, ನವ್ಯ ಹೀಗೆ ಸಾಹಿತ್ಯದ ಎಲ್ಲ ಮಜಲುಗಳಲ್ಲೂ ಹಾದು ಮಧ್ಯಮವರ್ಗದ ಬದುಕಿನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಕಾದಂಬರಿಯ ಮೂಲಕ ನಿರೂಪಿಸುವ ವ್ಯಾಸರಾಯ ಬಲ್ಲಾಳ ಅವರು ರಾಮದಾಸ- ಕಲ್ಯಾಣಿ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ ಜನಿಸಿದರು.

1918: ಸಾಹಿತಿ ಕೆ.ಟಿ. ಪಾಂಡುರಂಗಿ ಜನನ.

1918: ಸಾಹಿತಿ ಸುನಂದಾ ತುಂಕೂರು ಜನನ.

1878: ವಾಷಿಂಗ್ಟನ್ ಡಿಸಿಯಲ್ಲಿ ಇರುವ ಶ್ವೇತಭವನಕ್ಕೆ ಮೊತ್ತ ಮೊದಲ ಟೆಲಿಫೋನ್ ಸಂಪರ್ಕ ಕಲ್ಪಿಸಲಾಯಿತು. ಅಧ್ಯಕ್ಷ ರುತ್ ಫೋರ್ಡ್ ಬಿ. ಹೇಸ್ ಆಡಳಿತದ ಕಾಲದಲ್ಲಿ ಅಲೆಗ್ಸಾಂಡರ್ ಗ್ರಹಾಂಬೆಲ್ ಸ್ವತಃ ಈ ಕಾರ್ಯವನ್ನು ನೆರವೇರಿಸಿದ. ಶ್ವೇತಭವನದಿಂದ ಹೊರಹೋಗುವ ಮೊದಲ ಕರೆ 13 ಮೈಲುಗಳಷ್ಟು ದೂರದಲ್ಲಿದ್ದ ಗ್ರಹಾಂಬೆಲ್ ಗೆ ಹೋಯಿತು. `ನಿಧಾನವಾಗಿ ಮಾತನಾಡಪ್ಪಾ!' ಎಂಬುದಾಗಿ ಹೇಸ್ ಅವರು ಗ್ರಹಾಂಬೆಲ್ ಗೆ ಸೂಚಿಸಿದರು. ವಾಷಿಂಗ್ಟನ್ನಿನಲ್ಲಿ ಬೇರೆ ಯಾರಲ್ಲೂ ಟೆಲಿಫೋನುಗಳು ಇಲ್ಲದೇ ಇದ್ದುದರಿಂದ ಹೇಸ್ ಈ ಟೆಲಿಫೋನನ್ನು ಹೆಚ್ಚು ಬಳಸಲಾಗಲಿಲ್ಲ.

No comments:

Post a Comment