ನಾನು ಮೆಚ್ಚಿದ ವಾಟ್ಸಪ್

Friday, December 21, 2018

ಇಂದಿನ ಇತಿಹಾಸ History Today ಡಿಸೆಂಬರ್ 21

ಇಂದಿನ ಇತಿಹಾಸ History Today ಡಿಸೆಂಬರ್  21
2018: ನವದೆಹಲಿ:  ಕಾಂಗ್ರೆಸ್ಮುಖವಾಣಿಯಾಗಿರುವ ನ್ಯಾಷನಲ್ಹೆರಾಲ್ಡ್ ಪತ್ರಿಕೆಯ ಕಚೇರಿಯನ್ನು ಎರಡು ವಾರದೊಳಗೆ ತೆರವುಗೊಳಿಸಿ ಕಟ್ಟಡವನ್ನು ಕೇಂದ್ರ ಸರಕಾರದ ವಶಕ್ಕೆ ಒಪ್ಪಿಸುವಂತೆ ದೆಹಲಿ ಹೈಕೋರ್ಟ್ಆದೇಶ ನೀಡಿತು. ದೆಹಲಿಯ  ಐಟಿಒ ರಸ್ತೆಯಲ್ಲಿರುವ ಕಟ್ಟಡವನ್ನು 56 ವರ್ಷಗಳ ಹಿಂದೆ ಅಸೋಸಿಯೇಟೆಡ್ಜರ್ನಲ್ಸ್ಲಿಮಿಟೆಡ್‌ (ಎಜೆಎಲ್‌) ಭೋಗ್ಯಕ್ಕೆ ನೀಡಲಾಗಿದ್ದು, ಕಳೆದ ಅಕ್ಟೋಬರ್‌ 30ರಂದು ಕೇಂದ್ರ ಸರ್ಕಾರ ಭೋಗ್ಯವನ್ನು ಅಂತ್ಯಗೊಳಿಸಿತ್ತು. ಕಟ್ಟಡವನ್ನು ತೆರವುಗೊಳಿಸುವಂತೆ ಕೇಂದ್ರ ಸರಕಾರ ನೀಡಿದ ಆದೇಶದ ವಿರುದ್ಧ ಎಜೆಎಲ್ದೆಹಲಿ ಹೈಕೋರ್ಟ್ಮೊರೆ ಹೊಕ್ಕಿತ್ತು. ರಾಹುಲ್ಸಂಸ್ಥೆಗೆ ಕಟ್ಟಡ ಮಾರಾಟ: 1938ರಲ್ಲಿ ನೆಹರೂ ಸ್ಥಾಪಿಸಿದ ನ್ಯಾಷನಲ್ಹೆರಾಲ್ಡ್ಪತ್ರಿಕೆ 2008ರಲ್ಲಿ ಹಣಕಾಸು ಮುಗ್ಗಟ್ಟಿನಿಂದ ಮುಚ್ಚಿತ್ತು. 2016ರಲ್ಲಿ ಪುನಶ್ಚೇತನ ನೀಡುವ ಭಾಗವಾಗಿ ವೆಬ್ಆವೃತ್ತಿ ಆರಂಭಿಸಲಾಗಿತ್ತು. 2017 ಜೂನ್‌ 12ರಂದು ಬೆಂಗಳೂರಿನಲ್ಲಿ ಪತ್ರಿಕೆಯ ಮರು ಆರಂಭದ ಕಾರ್ಯಕ್ರಮವೂ ನಡೆದಿತ್ತು. ನಡುವೆ, ಪತ್ರಿಕೆಯ ಹೆಸರಿನಲ್ಲಿ ಕಟ್ಟಡವನ್ನು ವಾಣಿಜ್ಯ ಬಳಕೆಗೆ ಬಳಸಲಾಗುತ್ತಿದೆ ಎಂದು ಕೇಂದ್ರದ ನಗರಾಭಿವೃದ್ಧಿ ಇಲಾಖೆ ಆರೋಪಿ ಭೋಗ್ಯವನ್ನು ಅಂತ್ಯಗೊಳಿಸಲು ನಿರ್ಧರಿಸಿತು. ಅದಕ್ಕಿಂತಲೂ ಮುಖ್ಯವಾಗಿ ಎಜೆಎಲ್ 98% ಪಾಲುದಾರಿಕೆಯನ್ನು ಯಂಗ್ಇಂಡಿಯಾಕ್ಕೆ ಹಸ್ತಾಂತರಿಸಿದ್ದು, ಇದರಲ್ಲಿ ಕಟ್ಟಡವೂ ಸೇರಿತ್ತು. ಯಂಗ್ಇಂಡಿಯಾ ಸೋನಿಯಾ ಮತ್ತು ರಾಹುಲ್ಗಾಂಧಿ ಗರಿಷ್ಠ ಷೇರು ಹೊಂದಿರುವ ಸಂಸ್ಥೆ!  ಎರಡು ವಾರದ ಒಳಗೆ ಕಚೇರಿಯನ್ನು ತೆರವುಗೊಳಿಸದೆ ಇದ್ದರೆ 1971 ಸಾರ್ವಜನಿಕ ಕಟ್ಟಡ (ಅನಧಿಕೃತ ಅತಿಕ್ರಮಣ ತೆರವು) ಕಾಯಿದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿತ್ತು.  17 ಪುಟಗಳ ತೀರ್ಪು: ಕೇಂದ್ರ ಸರ್ಕಾರವು ದುರುದ್ದೇಶದಿಂದ ನ್ಯಾಷನಲ್ಹೆರಾಲ್ಡ್ಪತ್ರಿಕೆಯ ಮೇಲೆ ದ್ವೇಷ ಸಾಧಿಸುತ್ತಿದೆ ಎಂಬ ಎಜೆಎಲ್ವಾದವನ್ನು 17 ಪುಟಗಳ ತೀರ್ಪಿನಲ್ಲಿ ಹೈಕೋರ್ಟ್ಸ್ಪಷ್ಟವಾಗಿ ತಳ್ಳಿ ಹಾಕಿತು. ಇದು ಜವಾಹರಲಾಲ್ನೆಹರೂ ಅವರ ಪರಂಪರೆಯನ್ನು ಅಪಮಾನಿಸುವ ಯತ್ನ ಎಂದು ಎಜೆಎಲ್ವಾದಿಸಿತ್ತು. ಆದರೆ, 'ಇದರಲ್ಲಿ ನೆಹರೂ ಅವರನ್ನು ಅಪಮಾನಿಸುವ ಸಂಗತಿ ಏನಿದೆ,'' ಎಂದು ನ್ಯಾಯಮೂರ್ತಿ ಸುನಿಲ್ಗೌರ್ಪ್ರಶ್ನಿಸಿದರು. ಕೋರ್ಟ್ತಪರಾಕಿ:  ಎಜೆಎಲ್ 99 ಶೇಕಡಾ ಷೇರುಗಳನ್ನು ಯಂಗ್ಇಂಡಿಯಾ ಸಂಸ್ಥೆಗೆ ವರ್ಗಾಯಿಸಲಾಗಿದೆ. ಇದರೊಂದಿಗೆ ಎಜೆಎಲ್ 413.40 ಕೋಟಿ ರೂ. ಮೌಲ್ಯದ ಆಸ್ತಿಯೂ 'ಗುಪ್ತವಾಗಿ' ಹಸ್ತಾಂತರವಾದಂತಾಗಿದೆ ಎಂದು ನ್ಯಾಯಮೂರ್ತಿ ಹೇಳಿದರು.  ''ಯಂಗ್ಇಂಡಿಯಾ ಕಂಪನಿ ಅಕ್ಷರಶಃ ಎಜೆಎಲ್ನ್ನು ಹೈಜಾಕ್ಮಾಡಿದಂತಾಗಿದ್ದು, ಇದು ಭೋಗ್ಯ ಕಾಯಿದೆಯ ನಿಯಮಗಳ ಉಲ್ಲಂಘನೆ,'' ಎಂದು ಕೋರ್ಟ್ಹೇಳಿತು. ಎಜೆಎಲ್ಆಸ್ತಿಯನ್ನು ಸೋನಿಯಾ ಗಾಂಧಿ, ರಾಹುಲ್ಗಾಂಧಿ, ಮೋತಿಲಾಲ್ವೋರಾ ಮತ್ತು ಆಸ್ಕರ್ಫರ್ನಾಂಡಿಸ್ಅವರು ಷೇರುದಾರರಾಗಿರುವ ಯಂಗ್ಇಂಡಿಯಾಕ್ಕೆ ಹಸ್ತಾಂತರ ಮಾಡಿದ್ದನ್ನು ತಿಳಿದ ಬಳಿಕ ಕೇಂದ್ರ ಸರಕಾರ ಎಜೆಎಲ್ಗೆ ನೋಟಿಸ್ನೀಡಿದ್ದನ್ನು ಕೋರ್ಟ್ಉಲ್ಲೇಖಿಸಿದೆ. ಕೇಂದ್ರದ ಕಡೆಯಿಂದ ಯಾವುದೇ ಕಾನೂನು ಉಲ್ಲಂಘನೆ ನಡೆದಿಲ್ಲ ಎಂದು ಅದು ಸ್ಪಷ್ಟಪಡಿಸಿತು.

2018: ಮುಂಬೈ: ಮುಂಬೈಯ ವಿಶೇಷ  ಸಿಬಿಐ ನ್ಯಾಯಾಲಯವು ಸೊಹ್ರಾಬುದ್ದೀನ್ ಶೇಖ್ ಎನ್ಕೌಂಟರ್ ಪ್ರಕರಣದ ಎಲ್ಲ ೨೨ ಮಂದಿ ಆರೋಪಿಗಳ ಕೊಲೆ ಕೃತ್ಯವನ್ನು ಸಾಬೀತುಪಡಿಸಲು ಸಾಕ್ಷ್ಯ ಪುರಾವೆ ಇಲ್ಲ ಎಂದು ಹೇಳಿ ಖುಲಾಸೆ ಮಾಡಿತು.  ಭಯೋತ್ಪಾದಕರೊಂದಿಗೆ ಸಂಪರ್ಕ ಇತ್ತೆನ್ನಲಾದ ಶೇಖ್ ಎಂಬ ವ್ಯಕ್ತಿಯನ್ನು ೨೦೦೫ರ ನವೆಂಬರ್ ತಿಂಗಳಲ್ಲಿ ನಡೆದ ನಕಲಿ ಗುಂಡಿನ ಘರ್ಷಣೆಯಲಿ ಕೊಲೆಗೈದ ಕೃತ್ಯದಲ್ಲಿ ಶಾಮೀಲಾಗಿದ್ದ ಆರೋಪದಲ್ಲಿ ಗುಜರಾತ್ ಮತ್ತು ರಾಜಸ್ಥಾನದ ೨೨ ಮಂದಿ ಬಹುತೇಕ ಕಿರಿಯ ಪೊಲೀಸ್ ಅಧಿಕಾರಿಗಳು ವಿಚಾರಣೆ ಎದುರಿಸಿದ್ದರು.  ಶೇಖ್ ಪತ್ನಿ ಕೌಸರ್ ಬಿ ಕೂq ಅದೇ ತಿಂಗಳು ಕೊಲ್ಲ ಲ್ಪಟ್ಟಿದ್ದರು. ಗುಜರಾತ್ ಮತ್ತು ರಾಜಸ್ಥಾನ್ ಪೊಲೀಸರು ೨೦೦೬ ಡಿಸೆಂಬರಿನಲ್ಲಿ ನಡೆದ ಇನ್ನೊಂದು ಗುಂಡಿನ ಘರ್ಷಣೆಯಲ್ಲಿ ಶೇಖ್ ಸಹಾಯಕ ತುಳಸಿರಾಮ್ ಪ್ರಜಾಪತಿಯನ್ನು ಕೊಂದು ಹಾಕಿದ್ದರು. ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ೨೧೦ ಸಾಕ್ಷಿಗಳನ್ನು ಹಾಜರು ಪಡಿಸಿತ್ತು. ಅವರ ಪೈಕಿ ೯೨ ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಪರಿ ವರ್ತನೆಗೊಂಡಿದ್ದರು. ತಿಂಗಳ ಆರಂಭದಲ್ಲಿ ಅಂತಿಮ ವಾದ ಮುಕ್ತಾ ಯದ ಬಳಿಕ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶ ಎಸ್. ಜೆ.ಶರ್ಮಾ ಅವರು ಡಿಸೆಂಬರ್ ೨೧ ರಂದು ತೀರ್ಪು ಘೋಷಿಸುವುದಾಗಿ ಪ್ರಕಟಿಸಿದ್ದರು. ಗುಜರಾತ್ ಗೃಹ ಸಚಿವ (ಈಗ ಬಿಜೆಪಿ ಅಧ್ಯಕ್ಷ ಅಮಿತ್ ಶಾ) ಮತ್ತು ಗುಜರಾತ್ ಮತ್ತು ರಾಜಸ್ಥಾನದ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ೩೮ ಜನರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ೨೦೧೦ ರಲ್ಲಿ ಪ್ರಕರಣ ದಾಖಲಿಸಿತ್ತು. ಸುಪ್ರೀಂಕೋರ್ಟ್ ಆದೇಶದಂತೆ ೨೦೧೩ರಲ್ಲಿ ಗುಜರಾ ತಿನಿಂದ ಮುಂಬೈ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿ ದ್ದ ಪ್ರಕರಣದಲ್ಲಿ ಮುಂಬೈಯ ಸಿಬಿಐ ವಿಶೇಷ ನ್ಯಾಯಾಲಯವು ಅಮಿತ್ ಶಾ ಮತ್ತು ಗುಜರಾತ್ ಪೊಲೀಸ್ ಮುಖ್ಯಸ್ಥ ಪಿ.ಸಿ. ಪಾಂಡೆ ಹಾಗೂ ಭಯೋ ತ್ಪಾದನಾ ನಿಗ್ರಹ ತಂಡದ ಮುಖ್ಯಸ್ಥ ಡಿ.ಜಿ. ವಂಜಾರ ಸೇರಿದಂತೆ ೧೬ ಹಿರಿಯ ಪೊಲೀಸ್ ಅಧಿಕಾರಿಗಳನ್ನು ದೋಷಮುಕ್ತರನ್ನಾಗಿ ಮಾಡಿತ್ತು. ಬಳಿಕ, ವಂಜಾರ ಮತ್ತು ಇತರ ನಾಲ್ವರು ಪೊಲೀಸ್ ಅಧಿ ಕಾರಿಗಳ ಖುಲಾಸೆ ವಿರುದ್ಧ ಶೇಖ್ ಸಹೋದರ ಬಾಬುದ್ದೀನ್ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಘಟನೆ ನಡೆದಿದ್ದು ಹೇಗೆ...? ೨೦೦೫ರ ನವೆಂಬರ್ ೨೨-೨೩ರಂದು ಸೊಹ್ರಾಬುದ್ದೀನ್, ಪತ್ನಿ ಕೌಸರ್ ಬಿ ಮತ್ತು ಸಹಚರ ತುಳಸಿರಾಮ್ ಪ್ರಜಾಪತಿ ಮೂವರೂ ಹೈದರಾಬಾದ್ ನಿಂದ ಅಹಮದಾಬಾದ್ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಗುಜರಾತ್ ಪೊಲೀಸರು ಇವರನ್ನು ಬಂಧನಕ್ಕೊಳಪಡಿಸಿ ಮಹಾರಾಷ್ಟ್ರ  ಸಾಂಗ್ಲಿಗೆ ಕರೆದೊಯ್ದಿದ್ದರು. ನವೆಂಬರ್ ೨೬ ರಂದು ಅಹಮದಾಬಾದ್ ನಲ್ಲಿ ನಕಲಿ ಎನ್ಕೌಂಟರ್ ನಲ್ಲಿ ಸೊಹ್ರಾಬುದ್ದೀನ್ ಅವರನ್ನು ಹತ್ಯೆ ಮಾಡಲಾಗಿತ್ತು.  .೨೮ರಂದು ಕೌಸೆರ್ ಬಿ ಅವರ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು. ಬಳಿಕ ಅವರ ದೇಹವನ್ನು ಸುಟ್ಟು ಹಾಕಲಾಗಿತ್ತು. ೨೦೦೫ರ ಡಿಸೆಂಬರ್: ಸೊಹ್ರಾಬುದ್ದೀನ್ ಅವರ ಸಹೋದರ ರುಬಾಬುದ್ದೀನ್ ಅವರು ಭಾರತೀಯ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದು, ಸಹೋದರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಗುಜರಾತ್ ಪೊಲೀಸರಿಗೆ ವಹಿಸಿತ್ತು. ಸೊಹ್ರಾಬು ದ್ದೀನ್ ಹಾಗೂ ಅವರ ಪತ್ನಿ ಯಾವ ರೀತಿಯಲ್ಲಿ ಹತ್ಯೆಯಾದರು ಎಂಬುದರ ಮಾಹಿತಿ ಕಲೆ ಹಾಕುವಂತೆ ಸೂಚಿಸಿತ್ತು.  ೨೦೦೬ರ ನವೆಂಬರ್: ಪತ್ರಕರ್ತ ಪ್ರಶಾಂತ್ ದಯಾಳ್ ಇದೊಂ ದು ನಕಲಿ ಎನ್ಕೌಂಟರ್ ಆಗಿದ್ದು, ಪಾನಮತ್ತ ಪೊಲೀಸ್ ಎನ್ಕೌಂಟರ್ ನಡೆಸಿದ್ದಾನೆಂದು ದೈನಿಕ್ ಭಾಸ್ಕರ್ ನಲ್ಲಿ ವರದಿ ಪ್ರಕಟಿಸಿದ್ದರು. ಡಿಸೆಂಬರ್ ೨೮, ೨೦೦೬: ಪೊಲೀಸ್ ಅಧಿಕಾರಿ ಡಿ.ಜಿ ವಂಜಾರಾ ಅವರ ಗ್ರಾಮ ಛಾಪ್ರಿಯಲ್ಲಿ ಸೊಹ್ರಾಬುದ್ದೀನ್ ಅವರ ಸಹಚರನಾಗಿದ್ದ ಪ್ರಜಾಪತಿಯನ್ನೂ ಹತ್ಯೆ ಮಾಡಲಾಗಿತ್ತು.  ೨೦೦೭ ಏಪ್ರಿಲ್: ಪ್ರಜಾಪತಿ ಹತ್ಯೆ ಬಳಿಕ ಡಿಐಜಿ ಡಿ.ಜಿ ವಂಜಾರಾ ಅವರನ್ನು ಬಂಧನಕ್ಕೊಳಪಡಿಸಲಾಗಿತ್ತು. ೨೦೧೦ ಜನವರಿ: ಪ್ರಜಾಪತಿ ಹತ್ಯೆ ಬಳಿಕ ಸುಪ್ರೀಂಕೋರ್ಟ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿತ್ತು.  ೨೦೧೦ ಜುಲೈ ೨೩: ತನಿಖೆ ಆರಂಭಿಸಿದ್ದ ಸಿಬಿಐ, ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೂ ಕೂಡ ಭಾಗಿಯಾಗಿ ದ್ದಾರೆಂದು ಚಾರ್ಜ್ ಶೀಟ್ನಲ್ಲಿ ತಿಳಿಸಿತ್ತು. ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ್ದಾರೆಂಬ ಆರೋಪವನ್ನು ಮಾಡಲಾಗಿತ್ತು. ೨೦೧೦ ಜುಲೈ ೨೫: ಅಮಿತ್ ಶಾ ಅವರನ್ನು ಸಿಬಿಐ ಬಂಧನಕ್ಕೊಳಪಡಿಸಿತ್ತು. ೨೦೧೦ ಅಕ್ಟೋಬಪ್ ೨೯: ಪ್ರಕರಣ ಸಂಬಂಧ ಸುದೀರ್ಘ ವಿಚಾ ರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್ ಸಾಕ್ಷ್ಯಾಧಾರ ಕೊರತೆ ಕಾರಣ ನೀಡಿ ಅಮಿತ್ ಶಾ ಅವರಿಗೆ ಜಾಮೀನು ನೀಡಿತ್ತು. ೨೦೧೦ ಸೆಪ್ಟೆಂಬರ್ ೨೭: ಸುಪ್ರೀಂಕೋರ್ಟ್ ಗುಜರಾತ್ ರಾಜ್ಯದಿಂದ ಮುಂಬೈಗೆ ಪ್ರಕರಣವನ್ನು ಸ್ಥಳಾಂತರ ಮಾಡಿತ್ತು. ೨೦೧೩ ಏಪ್ರಿಲ್ : ಸೊಹ್ರಾಬುದ್ದೀನ್ ಹತ್ಯೆ ಪ್ರಕರಣದೊಂದಿಗೆ ಪ್ರಜಾಪತಿ ಪ್ರಕರಣವನ್ನು ತಾಳೆ ಮಾಡಿದ್ದ ಸುಪ್ರೀಂಕೋರ್ಟ್. ೨೦೧೩ ಸೆಪ್ಟೆಂಬರ್: ಜೈಲಿನಲ್ಲಿಯೇ ಇದ್ದ ಡಿಐಜಿ ವಂಜಾರಾ ಅವರು ಗುಜರಾತ್ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದರು. ಪ್ರಕರಣಕ್ಕೆ ನಕಲಿ ಎನ್ಕೌಂಟರ್ ಹೆಸರು ನೀಡುತ್ತಿರುವ ಸರ್ಕಾರ, ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ಒಬ್ಬ ಪೊಲೀಸ್ ಅಧಿಕಾರಿ ಜೈಲಿನಲ್ಲಿಯೇ ಇರುವಂತೆ ನೋಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.   ೨೦೧೪ ಡಿಸೆಂಬರ್ ೩೦: ಪ್ರಕರಣ ಸಂಬಂಧ ಬಿಜೆಪಿ ರಾ?ಧ್ಯಕ್ಷ ಅಮಿತ್ ಶಾ ಅವರಿಗೆ ಸಿಬಿಐ ನ್ಯಾಯಾಲಯ ಕ್ಲೀನ್ ಚಿಟ್ ನೀಡಿತ್ತು. ೨೦೧೬ ಆಗಸ್ಟ್ : ಅಮಿತ್ ಶಾ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ೨೦೧೭ ಆಗಸ್ಟ್ : ವಂಜಾರಾ ಹಾಗೂ ಇತರರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಸಿಬಿಐ ಕೈಬಿಟ್ಟಿತ್ತು. ೨೦೧೭ ಡಿಸೆಂಬರ್ : ಅಂತಿಮ ಘಟ್ಟ ತಲುಪಿದ್ದ ಪ್ರಕರಣದ ವಿಚಾರಣೆ.
2018:  ನವದೆಹಲಿ: ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ದಾಖಲಿಸಿಟ್ಟ ಮಾಹಿತಿಗಳ ಮೇಲೆ ನಿಗಾ ವಹಿಸಲು ಹಾಗೂ ತನಿಖೆ ಮಾಡಲು ತನಿಖಾ ಸಂಸ್ಥೆಗಳಿಗೆ ಕೇಂದ್ರ ಸರಕಾರ ಹೆಚ್ಚಿನ ಬಲ ತುಂಬಿತು.   ವಿಚಾರಕ್ಕೆ ಸಂಬಂಧಿಸಿ ದಂತೆ ಗೃಹ ಇಲಾಖೆ ಕಾರ್ಯ ದರ್ಶಿ ಆದೇಶಕ್ಕೆ ಸಹಿ ಹಾಕಿದರು. ಹತ್ತು ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ವಿಶೇಷಅಧಿಕಾರ ನೀಡಲಾಯಿತು.  ಯಾವುದೇ ಕಂಪ್ಯೂಟರ್ನಲ್ಲಿ ಸಂಗ್ರಹಿಸಿದ, ಪಡೆದ, ಸೃಷ್ಟಿಸಿದ ಹಾಗೂ ಕಳುಹಿಸಿದ ಮಾಹಿತಿ ಮೇಲೆ ನಿಗಾ ಇಡಲು, ಭೇದಿಸಲು ಅಧಿಕಾರ ಲಭಿಸಿದಂತಾಯಿತು.   ಹತ್ತು ಸಂಸ್ಥೆಗಳು ಯಾವುದು ಎಂಬುದನ್ನು ಕೂಡ ಪಟ್ಟಿ ಮಾಡಲಾಯಿತು. ಈ ಅನುಮತಿ ಪಡೆದ ವಿಶೇಷ ಏಜೆನ್ಸಿಗಳೆಂದರೆ ಗುಪ್ತಚರ ವಿಭಾಗ, ನಾರ್ಕೊಟಿಕ್ಸ್ ನಿಯಂತ್ರಣ ಬ್ಯೂರೊ, ಕಾನೂನು ಜಾರಿ ನಿರ್ದೇಶನಾಲಯ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ, ಕಂದಾಯ ಗುಪ್ತಚರ ನಿರ್ದೇಶನಾಲಯ, ಕೇಂದ್ರೀಯ ತನಿಖಾ ಸಂಸ್ಥೆ, ರಾಷ್ಟ್ರೀಯ ತನಿಖಾ ಸಂಸ್ಥೆ, ಕ್ಯಾಬಿನೆಟ್ ಸೆಕ್ರೆಟೆರಿಯೇಟ್ (ಆರ್ & ಎಡಬ್ಲ್ಯು), ಡೈರೆಕ್ಟೋರೇಟ್ ಆಫ್ ಸಿಗ್ನಲ್ ಇಂಟೆಲಿಜೆನ್ಸ್, ದೆಹಲಿ ಪೊಲೀಸ್ ಆಯು ಕ್ತರ ಕಚೇರಿ. ಆದೇಶದ ಪ್ರಕಾರ, ಕಂಪ್ಯೂಟರ್ ಸಂಪನ್ಮೂಲದ ಸೇವೆ ಒದಗಿಸುವ ವ್ಯಕ್ತಿಗಳು, ಇಂಥ ಏಜೆನ್ಸಿಗಳಿಗೆ ಸೌಲಭ್ಯವನ್ನು ಒದಗಿಸಲು ಮತ್ತು ತಾಂತ್ರಿಕ ನೆರವು ನೀಡಲು ನಿರಾಕರಿಸಿದಲ್ಲಿ ಏಳು ?ಗಳ ಜೈಲು ಶಿಕ್ಷೆ ಮತ್ತು ದಂಡಕ್ಕೆ ಅರ್ಹರಾಗುತ್ತಾರೆ.ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆ- ೨೦೦೦ದ ಸೆಕ್ಷನ್ ೬೯() ಅಡಿಯಲ್ಲಿ ಅನುಮತಿ ನೀಡಲಾಯಿತು.

2018: ನವದೆಹಲಿ: ಸಿಖ್ ವಿರೋಧಿ ದಂಗೆ ಪ್ರಮುಖ ಆರೋಪಿ, ಸದ್ಯ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸಜ್ಜನ್ಕುಮಾರ್ ಅವರು ಶರಣಾ ಗತಿಯಾಗಲು ಕಾಲಾವಕಾಶ ಕೋರಿದ್ದ ಅರ್ಜಿ ಯನ್ನು ದೆಹಲಿ ಹೈ ಕೋರ್ಟ್ ವಜಾಗೊಳಿಸಿತು. ಪ್ರಕರಣ ಸಂಬಂಧ ಸಜ್ಜನ್ ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟಿ ಸಲಾಗಿತ್ತು. ಬಗ್ಗೆ ಕಾನೂನು ಹೋರಾಟ ನಡೆಸುತ್ತಿರುವ ಅವರು, ಶರಣಾಗತಿಗೆ ೩೦ ದಿನಗಳ ಕಾಲಾವಕಾಶ ಬೇ ಕೆಂದು ಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು. ಆದರೆ ಕೋರಿಕೆಯನ್ನು ದೆಹಲಿ ನ್ಯಾಯಾಲಯ ಪುರಸ್ಕರಿಸಲಿಲ್ಲ. ನ್ಯಾಯಾಮೂರ್ತಿಗಳಾದ  ಎಸ್. ಮುರುಳಿಧರ ಹಾಗೂ ವಿನೋದ್ ಗೊಯೆಲ್ ಅವರಿದ್ದ ಪೀಠ ಸಜ್ಜನ್ ಕೋರಿ ಕೆಗೆ ಅವಕಾಶ ನೀಡಲಾಗದು ಎಂದಿತು.  ಡಿಸೆಂಬರ್ ೧೭ ರಂದು ಇಬ್ಬರೂ ನ್ಯಾಯಮೂರ್ತಿಗಳ ಪೀಠ ಸಜ್ಜನ್ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ಜೀವಾವಧಿ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಸಜ್ಜನ್ ಕುಮಾರ್ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ದ್ದರು.

2017: ನವದೆಹಲಿ: ದೇಶಾದ್ಯಂತ ಕುತೂಹಲ ಕೆರಳಿಸಿದ್ದ, ಯುಪಿಎ ಸರ್ಕಾರದ ದೊಡ್ಡ ಹಗರಣಗಳಲ್ಲಿ ಒಂದು ಎಂದು ಪರಿಗಣಿತವಾಗಿದ್ದ ಜಿ ಹಗರಣ ಎಂದೇ ಹೆಸರಾಗಿದ್ದ್ದ ೨ಜಿ ತರಂಗಾಂತರ ಹಂಚಿಕೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಯುಪಿಎ ಸರ್ಕಾರದ ದೂರಸಂಪರ್ಕ ಸಚಿವ . ರಾಜಾ, ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಪುತ್ರಿ ಕನಿಮೋಳಿ ಸೇರಿದಂತೆ  ಎಲ್ಲ ೧೯ ಆರೋಪಿಗಳನ್ನೂ ವಿಶೇಷ ಸಿಬಿಐ ನ್ಯಾಯಾಲಯ ಖುಲಾಸೆ ಮಾಡಿತು. ಎ. ರಾಜಾ ಮತ್ತು  ಕನಿಮೋಳಿ ಹೊರತಾಗಿ  ಶಾಹಿದ್ ಬಲ್ವಾ, ವಿನೋದ್ ಗೋಯೆಂಕಾ, ಅಸಿಫ್ ಬಲ್ವಾ,  ರಾಜೀವ್ ಅಗರ್ ವಾಲ, ಕರೀಮ್ ಮೊರಾನಿ, ಪಿ. ಅಮೃತಂ ಮತ್ತು ಶರದ್ ಕುಮಾರ್ ಅವರು ಜಾರಿ ನಿರ್ದೇಶನಾಲಯವು (ಇಡಿ) ದಾಖಲಿಸಿದ್ದ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಖುಲಾಸೆಗೊಂಡವರಲ್ಲಿ  ಸೇರಿದ್ದಾರೆ. ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರ ಪತ್ನಿ ದಯಾಲು ಅಮ್ಮಾಲ್ ಅವರನ್ನೂ ಆರೋಪಿ ಎಂದು ಜಾರಿ ನಿರ್ದೇಶನಾಲಯವು ತನ್ನ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಿತ್ತು. ಡಿಎಂಕೆ ಸ್ವಾಮ್ಯದ ಕಲೈಗ್ನಾರ್ ಟಿವಿಗೆ ಸ್ವಾನ್ ಟೆಲೆಕಾಮ್ (ಪ್ರೈವೇಟ್) ಲಿಮಿಟೆಡ್ (ಎಸ್ ಟಿ ಪಿಎಲ್) ಕಂಪೆನಿಯ ಪ್ರವರ್ತಕರು  ೨೦೦ ಕೋಟಿ ರೂಪಾಯಿಗಳನ್ನು ಪಾವತಿ ಮಾಡಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಆಪಾದಿಸಲಾಗಿತ್ತು. ತನ್ನ ಅಂತಿಮ ವರದಿಯಲ್ಲಿ ಜಾರಿ ನಿರ್ದೇಶನಾಲಯವು ೧೦ ಮಂದಿಯನ್ನು ಮತ್ತು ಕಂಪೆನಿಗಳನ್ನು ಆರೋಪಿಗಳಾಗಿ ಹೆಸರಿಸಿ ಅವರ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ವಿವಿಧ ಅಪರಾಧಗಳಿಗಾಗಿ ಚಾರ್ಜ್ಶೀಟ್ ಸಲ್ಲಿಸಿತ್ತು. ಕಲೈಗ್ನಾರ್ ಟಿವಿಯನ್ನು ಹೊರತು ಪಡಿಸಿ, ಪ್ರಕರಣದಲ್ಲಿ ಆರೋಪಿಗಳಾಗಿದ್ದ ಕಂಪೆನಿಗಳು: ಎಸ್ ಟಿ ಪಿ ಎಲ್ (ಈಗ ಎಟಿಸಲಾತ್ ಡಿಬಿ ಟೆಲಿಕಾಮ್ (ಪ್ರೈವೇಟ್ ) ಲಿಮಿಟೆಡ್,  ಕುಸೆಗಾಂವ್ ರಿಯಾಲ್ಟಿ (ಪ್ರೈವೇಟ್) ಲಿಮಿಟೆಡ್, ಸಿನೆಯುಗ್ ಮೀಡಿಯಾ ಅಂಡ್ ಎಂಟರ್ಟ್ರೈನ್ ಮೆಂಟ್ (ಪ್ರೈವೇಟ್ ಲಿಮಿಟೆಡ್), ಡೈನಾಮಿಕ್ಸ್ ರಿಯಾಲ್ಟಿ, ಎವರ್ ಸ್ಮೈಲ್ ಕನ್ ಸ್ಟ್ರಕ್ಷನ್ ಕಂಪೆನಿ (ಪ್ರೈವೇಟ್) ಲಿಮಿಟೆಡ್, ಕಾನ್ ವುಡ್ ಕನ್ ಸ್ಟ್ರಕ್ಷನ್ ಅಂಡ್ ಡೆವಲಪರ್ಸ್ (ಪ್ರೈವೇಟ್) ಲಿಮಿಟೆಡ್, ಡಿಬಿ ರಿಯಾಲ್ಟಿ ಲಿಮಿಟೆಡ್ ಅಂಡ್  ಮಿಸ್ಟಿಕಲ್ ಕನ್ ಸ್ಟ್ರಕ್ಷನ್ (ಪ್ರೈವೇಟ್) ಲಿಮಿಟೆಡ್ (ಹಿಂದೆ ನಿಹಾರ್ ಕನ್ ಸ್ಟ್ರಕ್ಷನ್ಸ್ (ಪ್ರೈವೇಟ್) ಲಿಮಿಟೆಡ್ ಎಂದೇ ಪರಿಚಿತವಾಗಿತ್ತು).  ಯುಪಿಎ ಸರ್ಕಾರವನ್ನು ಅಡಿಮೇಲು ಮಾಡಿದ್ದ, ವಿಪಕ್ಷಗಳಿಗೆ ಭಾರಿಅಸ್ತ್ರವಾಗಿದ್ದ,  ಕುಖ್ಯಾತ ಹಗರಣ ಕುರಿತು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಪ್ರತ್ಯೇಕ ಪ್ರಕರಣಗಳ ಪೈಕಿ ಪ್ರಕರಣಗಳಿಗೆ  ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಧೀಶ .ಪಿ. ಸೈನಿ ಅವರು ಪ್ರತ್ಯೇಕ ಪ್ರತ್ಯೇಕವಾಗಿ ಒಟ್ಟು ೧೫೫೨ ಪುಟಗಳ ತೀರ್ಪು ನೀಡಿದರು. ಆರೋಪ ಸಾಬೀತು ಪಡಿಸುವಲ್ಲಿ ಸಿಬಿಐ ವಿಫಲವಾಗಿದೆ ಎಂದು ಅವರು ಹೇಳಿದರು. ನಿಯಮ ಉಲ್ಲಂಘಿಸಿ ಜಿ ತರಂಗಾಂತರ ಹಂಚಿಕೆ ಮಾಡಿದ್ದರಿಂದ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ ಎಂದು ಸಿಬಿಐ ಆಪಾದಿಸಿತ್ತು. ಕಳೆದ ಸುಮಾರು ಏಳು ವರ್ಷಗಳಲ್ಲಿ, ಬಹುತೇಕ ಪ್ರತಿಯೊಂದು ಕೆಲಸದ ದಿನಗಳಲ್ಲಿ, ಬೇಸಿಗೆ ರಜಾ ಕಾಲವೂ ಸೇರಿದಂತೆ ನಾನು ಅತ್ಯಂತ ಶ್ರದ್ಧೆಯಿಂದ ಬೆಳಗ್ಗೆ ೧೦ರಿಂದ ಸಂಜೆ ಗಂಟೆಯವರೆಗೂ ಕುಳಿತು ಯಾರಾದರೂ ಒಬ್ಬರು ತಮ್ಮ ಬಳಿ ಇರುವ ಕಾನೂನುಬದ್ಧವಾಗಿ ಸ್ವೀಕಾರಾರ್ಹವಾಗುವಂತಹ ಸಾಕ್ಷ್ಯಾಧಾರ ನೀಡಬಹುದು ಎಂದು ನಿರೀಕ್ಷಿಸುತ್ತಿದ್ದೆ, ಆದರೆ ಎಲ್ಲವೂ ವ್ಯರ್ಥವಾಯಿತು ಎಂದು ನ್ಯಾಯಾಧೀಶ ಸೈನಿ ತಮ್ಮ ತೀರ್ಪಿನಲ್ಲಿ ಬರೆದರು. ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ  ಟೆಲಿಕಾಮ್ ಪರವಾನಗಿಗಳಿಗೆ ಸಂಬಂಧಿಸಿದ ವಾಸ್ತವಾಂಶಗಳನ್ನು ತಪ್ಪಾಗಿ ನೀಡಿದ್ದು . ರಾಜಾ ಅವರಲ್ಲ, ಆದರೆ ಪುಲೋಕ್ ಚಟರ್ಜಿ ಮತ್ತು ಟಿಕೆಎ ನಾಯರ್ (ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕಾರಿಗಳು) ಎಂದು ತೀರ್ಪು ಹೇಳಿತು. ಸಿಬಿಐ, ಇಡಿ  ಮೇಲ್ಮನವಿ: ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪಿನ ವಿರುದ್ಧ ದೆಹಲಿ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಸಿಬಿಐ ವಕ್ತಾರ ಅಭಿಷೇಕ್ ದಯಾಳ್ ಹೇಳಿದರು. ೨ಜಿ ತರಂಗಾಂತರ ಹಂಚಿಕೆ ಪ್ರಕರಣದ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯವು ಸಮರ್ಪಕ ದೃಷ್ಟಿಕೋನದಿಂದ ಗ್ರಹಿಸಿ ಗೌರವಿಸಿಲ್ಲ. ಸಿಬಿಐ ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯ ಶಾಸನಬದ್ಧ ಪರಿಹಾರಗಳನ್ನು ತೆಗೆದುಕೊಳ್ಳಲಿದೆ ಎಂದು ಅವರು ನುಡಿದರು. ಏನು ಪ್ರಕರಣ?: ಇದು ೨೦೦೭-೦೮ರಲ್ಲಿ ಜಿ ತರಂಗಾಂತರ ಹಂಚಿಕೆ ಮಾಡಿದ್ದಕ್ಕೆ  ಸಂಬಂಧಿಸಿದ ಪ್ರಕರಣ. ಹಗರಣದಲ್ಲಿ ಸರ್ಕಾರಕ್ಕೆ .೭೬ ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಭಾರತದ ನಿಯಂತ್ರಕರು ಮತ್ತು ಮಹಾಲೆಕ್ಕಪತ್ರ ಪರಿಶೋಧಕರು (ಕಂಪ್ಟ್ರೋಲರ್ ಅಂಡ್ ಅಡಿಟರ್ ಜನರಲ್ ಆಫ್ ಇಂಡಿಯಾ) ನೀಡಿದ್ದ ವರದಿ ತಿಳಿಸಿತ್ತು. ಖುಲಾಸೆಯಾಗಿರುವ ಇತರ ಪ್ರಮುಖರು: ಮಾಜಿ ಟೆಲಿಕಾಮ್ ಕಾರ್ಯದರ್ಶಿ ಸಿದ್ಧಾರ್ಥ ಬೆಹುರಾ, ರಾಜಾ ಅವರ ಹಿಂದಿನ ಖಾಸಗಿ ಕಾರ್ಯದರ್ಶಿ ಆರ್.ಕೆ. ಚಾಂಡೋಲಿಯ, ಸ್ವಾನ್ ಟೆಲಿಕಾಮ್ ಪ್ರವರ್ತಕ ಶಾಹಿದ್ ಉಸ್ಮಾನ್ ಬಲ್ವಾ ಮತ್ತು ವಿನೋದ್ ಗೋಯೆಂಕಾ, ಯುನಿಟೆಕ್ ಲಿಮಿಟೆಡ್ ಆಡಳಿತ ನಿರ್ದೇಶಕ ಸಂಜಯ್ ಚಂದ್ರ ಮತ್ತು ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಗುಂಪಿನ (ಆರ್ ಡಇಎಜಿ) ಮೂವರು ಉನ್ನತ ಎಕ್ಸಿಕ್ಯೂಟಿವ್ ಗಳಾದ ಗೌತಮ್ ದೋಶಿ, ಸುರೇಂದ್ರ ಪಿಪರಾ ಮತ್ತು ಹರಿ ನಾಯರ್. ಕುಸೆಗಾಂವ್ ಫ್ರುಟ್ಸ್ ಅಂಡ್ ವೆಜಿಟೇಬಲ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾದ ಅಸಿಫ್ ಬಲ್ವಾ ಮತ್ತು ರಾಜೀವ್ ಅಗರ್ ವಾಲ್, ಕಲೈಗ್ನಾರ್ ಟಿವಿ ನಿರ್ದೇಶಕ ಶರದ್ ಕುಮಾರ್ ಮತ್ತು ಬಾಲಿವುಡ್ ನಿರ್ಮಾಪಕ ಕರೀಮ್ ಮೊರಾನಿ೯ ಅವರನ್ನು ಪ್ರಕರಣದಲ್ಲಿ ಖುಲಾಸೆ ಮಾಡಲಾಯಿತು. ಇವರಲ್ಲದೆ ಮೂರು ಟೆಲಿಕಾಮ್ ಕಂಪೆನಿಗಳಾದ ಸ್ವಾನ್ ಟೆಲಿಕಾಮ್ ಪ್ರೈವೇಟ್ ಲಿಮಿಟೆಡ್ (ಎಸ್ಟಿ ಪಿಎಲ್), ರಿಲಯನ್ಸ್ ಟೆಲಿಕಾಮ್ ಲಿಮಿಟೆಡ್ ಮತ್ತು ಯುನಿಟೆಕ್ ವೈರ್ ಲೆಸ್ (ತಮಿಳುನಾಡು) ಲಿಮಿಟೆಡ್ ಇವುಗಳನ್ನೂ  ಪ್ರಕರಣದಲ್ಲಿ ಖುಲಾಸೆ ಮಾಡಲಾಯಿತು. ತೀರ್ಪಿನ ಕೆಲವು ಪ್ರಮುಖ ಅಂಶಗಳು: * . ರಾಜಾ ಅವರು ಇಡೀ ಒಳಸಂಚಿನ ಮೂಲವ್ಯಕ್ತಿ ಎಂಬುದನ್ನು ತೋರಿಸುವ ದಾಖಲೆ ಇಲ್ಲ. ಅವರು ತಪ್ಪು ಮಾಡಿದ ಬಗ್ಗೆ, ಷಡ್ಯಂತ್ರ ರೂಪಿಸಿದ ಬಗ್ಗೆ ಮತ್ತು ಭ್ರಷ್ಟಾಚಾರ ನಡೆಸಿದ ಬಗ್ಗೆ ಸಾಕ್ಷ್ಯಾಧಾರ ಇಲ್ಲ. * ದೋಷಾರೋಪ ಪಟ್ಟಿಯಲ್ಲಿ ದಾಖಲಿಸಲಾದ ಹಲವಾರು ವಿಷಯಗಳು ವಾಸ್ತವವಾಗಿ ಸರಿಯಲ್ಲ. * ವಿಷಯಗಳನ್ನು ಸರಿಯಾದ ದೃಷ್ಟಿಕೋನದಿಂದ ಗ್ರಹಿಸದಿರುವುದು ಭಾರಿ ತಪ್ಪಾಗಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ, ಆದರೆ ಅಂತಹ ತಪ್ಪೇ ಅಲ್ಲಿ ಇಲ್ಲ. * ಪ್ರಾಸೆಕ್ಯೂಷನ್ ಮುಖ್ಯ ವಾದ ಕ್ಲಾಸ್ ೮ಕ್ಕೆ ಸಂಬಂಧಿಸಿದ್ದು. ಅದು ಸಿವಿಲ್ ವಿಚಾರ. ಅದು ಕ್ರಿಮಿನಲ್ ವಿಷಯ ಅಲ್ಲವೇ ಅಲ್ಲ ಎಂದು ನ್ಯಾಯಾಲಯ ಹೇಳಿದೆ ಎಂದು ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಹೇಳಿದರು.   
     


2017:  ನವದೆಹಲಿ: ಕ್ರಿಕೆಟ್ ದಂತಕಥೆಯಾಗಿರುವ ಸಚಿನ್ ತೆಂಡೂಲ್ಕರ್ ಅವರಿಗೆ ಮಾತನಾಡಲು ಬಿಡದೆ ಕಾಂಗ್ರೆಸ್ ಸದಸ್ಯರು ತೀವ್ರ ಕೋಲಾಹಲ ಉಂಟು ಮಾಡಿದ ಪರಿಣಾಮವಾಗಿ ಸದನ ಕಲಾಪ ಏಕಾಏಕಿ ಸ್ಥಗಿತಗೊಂಡು 22 ಡಿಸೆಂಬರ್ 2017ರ ಶುಕ್ರವಾರಕ್ಕೆ ಮುಂದೂಡಿಕೆಯಾದ ಘಟನೆ  ಈದಿನ ರಾಜ್ಯಸಭೆಯಲ್ಲಿ ಘಟಿಸಿತು. ರಾಜ್ಯಸಭೆಗೆ ನಾಮಕರಣಗೊಂಡಿರುವ ಸಚಿನ್ ತೆಂಡೂಲ್ಕರ್ ಅವರು ಮೇಲ್ಮನೆಯಲ್ಲಿ ಭಾರತದಲ್ಲಿ ಕ್ರಿಕೆಟ್ ಭವಿಷ್ಯ ಮತ್ತು ಆಟದ ಹಕ್ಕು ವಿಷಯಕ್ಕೆ ಸಂಬಂಧಿಸಿದಂತೆ ಅಲ್ಪಾವಧಿಯ ಚರ್ಚೆಗೆ ನಿರ್ಣಯವನ್ನು ಮಂಡಿಸಿ, ಅದರ ಬಗ್ಗೆ ಮೇಲ್ಮನೆಯಲಿ ಚೊಚ್ಚಲ ಭಾಷಣ ಮಾಡಬಯಸಿದ್ದರು. ಅಂತಾರಾಷ್ಟ್ರೀಯ ಪದಕ ವಿಜೇತರಿಗೆ ಕೇಂದ್ರೀಯ ಆರೋಗ್ಯ ಖಾತರಿ ಯೋಜನೆಯನ್ನು (ಸಿಜಿಎಚ್ ಎಸ್) ಅನ್ವಯಿಸುವುದು  ಮತ್ತು ಶಾಲಾ ಪಠ್ಯಸೂಚಿಯಲ್ಲಿ ಕ್ರೀಡೆಯನ್ನು ಸೇರಿಸುವ ವಿಷಯ ಸೇರಿದಂತೆ ದೀರ್ಘ ಕಾಲದಿಂದ ನನೆಗುದಿಯಲ್ಲಿರುವ ವಿಷಯಗಳ ಬಗ್ಗೆ ಅವರು ತೆಂಡೂಲ್ಕರ್ ಅವರು ಮಾತನಾಡುವ ನಿರೀಕ್ಷೆ ಇತ್ತು. ಆದರೆ ಸದನ ಕಲಾಪ ಆರಂಭಿಸುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಚಳಿಗಾಲದ ಅಧಿವೇಶನ ಆರಂಭವಾದ ದಿನದಿಂದಲೇ ಶುರುಮಾಡಿದ್ದ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು. ತೆಂಡೂಲ್ಕರ್ ಅವರು ಎದ್ದು ನಿಂತು ಚರ್ಚೆ ಆರಂಭಿಸುತ್ತಿದ್ದಂತೆಯೇ, ಕಾಂಗ್ರೆಸ್ ಸದಸ್ಯರೂ ಎದ್ದು ನಿಂತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನದ ಜೊತೆ ಕೈಜೋಡಿಸಿದ್ದಾರೆ ಎಂಬ ಅವಮಾನಕರ ಹೇಳಿಕೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಲಾರಂಭಿಸಿದರು.  ಸದನದ ಸುವ್ಯವಸ್ಥೆ ಕಾಪಾಡುವಂತೆ ಸಭಾಪತಿ ವೆಂಕಯ್ಯ ನಾಯ್ಡು ಅವರು ನೀಡಿದ ಸೂಚನೆಗಳನ್ನು ಲೆಕ್ಕಿಸದೆ ವಿರೋಧಿ ಸದಸ್ಯರು ಘೋಷಣೆಗಳನ್ನು ಕೂಗುತ್ತಿದ್ದಾಗ, ಭಾರತ ರತ್ನ ಪುರಸ್ಕೃತ ತೆಂಡೂಲ್ಕರ್ ಅವರು ೧೦ ನಿಮಿಷ ಕಾಲ ಮಾತನಾಡಲಾಗದೆ ನಿಂತೇ ಇದ್ದರು. ರಾಜ್ಯಸಭೆಯಲ್ಲಿನ ಕೋಲಾಹಲವನ್ನು ದೇಶ ನೋಡುತ್ತಿದೆ ಎಂದು ಸದಸ್ಯರಿಗೆ ನೆನಪಿಸಿದ ನಾಯ್ಡು, ತೆಂಡೂಲ್ಕರ್ ಅವರಿಗೆ ಮಾತನಾಡಲು ಬಿಡುವಂತೆ ಮನವಿ ಮಾಡಿದರು. ಆದರೆ ಪ್ರಕ್ಷುಬ್ಧ ಕಾಂಗ್ರೆಸ್ ಸದಸ್ಯರು ಅವರ ಮನವಿಗಳಿಗೆ ಸ್ಪಂದಿಸಲಿಲ್ಲ. ನಾವು ಕ್ರೀಡೆ ಬಗ್ಗೆ ಮಾತನಾಡುತ್ತಿದ್ದೇವೆ, ನಿಮ್ಮಲ್ಲಿ ಕ್ರೀಡಾಸ್ಫೂರ್ತಿಯೇ ಇಲ್ಲ ಎಂದೂ ಸದನ ಕಲಾಪವನ್ನು ದಿಢೀರನೆ ಮುಂದೂಡುವ ಮುನ್ನ ನಾಯ್ಡು ಸದಸ್ಯರನ್ನು ಟೀಕಿಸಿದರು. ಕೋಲಾಹಲದ ಮಧ್ಯೆ ಮುಂದೂಡಿಕೆಯಾಗಿದ್ದ  ಕಲಾಪ ಮಧ್ಯಾಹ್ನ  ಗಂಟೆಗೆ ಪುನಾರಂಭವಾಗಿತ್ತು. ಆದರೆ ತೆಂಡೂಲ್ಕರ್ ಅವರಿಗೆ ಚೊಚ್ಚಲ ಭಾಷಣಕ್ಕೂ ಅವಕಾಶ ನೀಡದೆ  ಕಾಂಗ್ರೆಸ್ ಸದಸ್ಯರು ನಿರಂತರ ಘೋಷಣೆಗಳನ್ನು ಕೂಗುತ್ತಿದ್ದ ಪರಿಣಾಮವಾಗಿ ಸಭಾಪತಿ ಕೋಲಾಹಲದ ಮಧ್ಯೆ ಕಲಾಪಗಳನ್ನು ಮರುದಿನ ಮಧ್ಯಾಹ್ನ ೧೧ ಗಂಟೆಗೆ ಮುಂದೂಡಿದರು.

2017: ಲಕ್ನೋ: ಜನ ಭಿಕ್ಷುಕ ಎಂಬುದಾಗಿ ಭಾವಿಸಿದ್ದ  ವಯೋವೃದ್ಧ ವ್ಯಕ್ತಿಯೊಬ್ಬ  ನಿಜವಾಗಿ ಭಿಕ್ಷುಕನಲ್ಲ ಕೋಟ್ಯಧಿಪತಿ ಎಂಬುದು ಆಧಾರ್ ಕಾರ್ಡ್ ದಯೆಯಿಂದ  ಬೆಳಕಿಗೆ ಬಂದ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಘಟಿಸಿತು. ಆಧಾರ್ ಕಾರ್ಡ್ ನೆರವಿನಿಂದ ವಯೋವೃದ್ಧ ವ್ಯಕ್ತಿಯನ್ನು ತಮಿಳುನಾಡಿನ ತಿರುನಲ್ವೇಲಿಯ ಥಿಧಿಯೂರ್ ಪೋಕುಲಿಯ ೨೪೦ ಬಿ ನಾರ್ತ್ ನೆರು ನಿವಾಸಿ ಮುತ್ಥಾಯಿಯ ನಾಡಾರ್ ಎಂಬುದಾಗಿ ಪತ್ತೆ ಹಚ್ಚಲಾಯಿತು. ಆತ ಬ್ಯಾಂಕ್ ಖಾತೆ ಹೊಂದಿದ್ದು, ಎಲ್ಲರಿಗೂ ಅಚ್ಚರಿಯಾಗುವಂತೆ ಆತನ ಖಾತೆಯಲ್ಲಿ ಒಟ್ಟು ,೬೩,೯೩,೦೦೦ ರೂಪಾಯಿ ಹಣ ವಿದ್ದುದೂ ಆಧಾರ್ ಸಂಖ್ಯೆಯಿಂದ  ಬೆಳಕಿಗೆ ಬಂತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸ್ವಾಮಿ ಪ್ರಬೋಧ ಪರಮಹಂಸ ಇಂಟರ್ ಕಾಲೇಜಿನ ಸ್ವಾಮಿ ಭಾಸ್ಕರ್ ಅವರು ಡಿಸೆಂಬರ್ ೧೩ರಂದು ಈವ್ಯಕ್ತಿಯನ್ನು ಅತ್ಯಂತ ದುಃಸ್ಥಿತಿಯಲ್ಲಿ ಪತ್ತೆ ಹಚ್ಚಿದ್ದರು. ನೋಟದಿಂದ ವ್ಯಕ್ತಿ ಭಿಕ್ಷುಕನಂತೆ ಕಾಣುತ್ತಿತ್ತು. ಭಾಸ್ಕರ್ ಅವರು   ವ್ಯಕ್ತಿಯ ಬಳಿ ಮಾತನಾಡಲು ಯತ್ನಿಸಿದಾಗ ಆತನಿಗೆ ಭಾಷೆ ಅರ್ಥವಾಗಲಿಲ್ಲ. ತನಗೆ ಹಸಿವಾಗಿದೆ ಎಂದು ವ್ಯಕ್ತಿ ಸಂಜ್ಞೆ ಮಾಡಿದ. ಭಾಸ್ಕರ್ ಆತನಿಗೆ ಆಹಾರ ಕೊಡಿಸಿ, ಕ್ಷೌರಿಕನ ಬಳಿಗೆ ಕರೆದೊಯ್ದು ಕ್ಷೌರ ಮಾಡಿಸಿದರು. ಬಳಿಕ ವ್ಯಕ್ತಿ ಸ್ನಾನಕ್ಕೆ ಹೋದಾಗ, ಆತನ ಬಟ್ಟೆಯಲ್ಲಿ ಆಧಾರ್ ಕಾರ್ಡ್, ಬ್ಯಾಂಕ್ ಎಫ್ ಡಿ ಮತ್ತು ಕೀ ಲಭಿಸಿದವು. ಭಾಸ್ಕರ್ ಕುಟುಂಬ ಸದಸ್ಯರು ಬಳಿಕ ಆಧಾರ್ ಕಾರ್ಡ್ನಲ್ಲಿ ಇದ್ದ ಫೋನ್ ನಂಬರ್  ನೆರವಿನಿಂದ ವ್ಯಕ್ತಿಯ ಕುಟುಂಬ ಸದಸ್ಯರನ್ನು ಸಂಪರ್ಕಿಸಿದರು. ಕುಟುಂಬ ಸದಸ್ಯರು ರಾಯ್ ಬರೇಲಿಗೆ ಬಂದು ನಾಡಾರ್ನನ್ನು ವಿಮಾನದಲ್ಲಿ  ಕರೆದೊಯ್ದರು.  ಕುಟುಂಬ ಸದಸ್ಯರು ನೀಡಿದ ಮಾಹಿತಿಯಂತೆ ನಾಡಾರ್ ತನ್ನ ಕುಟುಂಬ ಸದಸ್ಯರೊಂದಿಗೆ ಜೂನ್ ತಿಂಗಳಲ್ಲಿ ಯಾತ್ರೆಗೆ ತೆರಳಿದ್ದರು. ಆದರೆ ಯಾತ್ರೆ ಮಧ್ಯೆ ಕಣ್ಮರೆಯಾಗಿದ್ದರು. ಪ್ರವಾಸ ಕಾಲದಲ್ಲಿ ಯಾರೋ ನಾಡಾರ್ ಅವರಿಗೆ ಮಾದಕ ದ್ರವ್ಯ ಕುಡಿಸಿದ್ದಿರಬಹುದು ಎಂದು ಕುಟುಂಬ ಸದಸ್ಯರು ಶಂಕಿಸಿದರು. ಕಣ್ಮರೆಯಾದ ದಿನದಿಂದಲೂ ಕುಟುಂಬ ಸದಸ್ಯರು ನಾಡಾರ್ ಗಾಗಿ ಹುಡುಕಾಟ ನಡೆಸಿದ್ದರು. ಕಡೆಗೆ ಆಧಾರ್ ಕಾರ್ಡ್ ಅವರನ್ನು ಪತ್ತೆ ಹಚ್ಚಲು ನೆರವಾಯಿತು.
2017: ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯ 2017ನೇ ಸಾಲಿನ ಪ್ರಶಸ್ತಿಗೆ ಕನ್ನಡದ ಟಿ.ಪಿ. ಅಶೋಕ ಹಾಗೂ ಎಚ್‌.ಎಸ್‌. ಶ್ರೀಮತಿ ಆಯ್ಕೆಯಾದರು. ಟಿ.ಪಿ. ಅಶೋಕ ಅವರಕಥನ ಭಾರತಿಕೃತಿಯು ಪ್ರಸಕ್ತ ಸಾಲಿನ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪ್ರಶಸ್ತಿಯು ರೂ. 1 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಎಚ್.ಎಸ್‌. ಶ್ರೀಮತಿ ಅವರು ಅನುವಾದಿಸಿರುವ ಬೆಂಗಾಲಿ ಸಾಹಿತಿ ಮಹಾಶ್ವೇತಾದೇವಿ ಅವರ ಕಥಾ ಸಾಹಿತ್ಯ- ಭಾಗ–1 ಮತ್ತು ಭಾಗ– 2 ಕೃತಿಗಳು ಅನುವಾದ ಪ್ರಕಾರದ ಪ್ರಶಸ್ತಿಗೆ ಆಯ್ಕೆಯಾಗಿವೆ. ಪ್ರಶಸ್ತಿಯು ರೂ.50,000 ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. 2018 ಫೆಬ್ರುವರಿ 12ರಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿಯ ಕಾರ್ಯದರ್ಶಿ ಕೆ.ಶ್ರೀನಿವಾಸರಾವ್ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪ್ರೊ.ತೇಜಸ್ವಿ ಕಟ್ಟೀಮನಿ, .ನಾ. ತೇಜಶ್ರೀ ಹಾಗೂ ಡಾ.ಕೆ.ಆರ್‌. ಸಂಧ್ಯಾರೆಡ್ಡಿ ಅವರಿದ್ದ ಆಯ್ಕೆ ಸಮಿತಿಯು ಕನ್ನಡ ವಿಭಾಗದ ಕೃತಿಗಳನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿತ್ತು ಎಂದು ಅವರು ಹೇಳಿದರು. ದೇಶದ 24 ಭಾಷೆಗಳಲ್ಲಿ ಪ್ರಕಟವಾಗಿರುವ ಕೃತಿಗಳಿಗೆ ಪ್ರಶಸ್ತಿ ನೀಡಲಾಗಿದ್ದು, ಕಾವ್ಯ, ಸಣ್ಣ ಕಥೆ, ಕಾದಂಬರಿ, ವಿಮರ್ಶೆ, ಪ್ರಬಂಧ ಹಾಗೂ ನಾಟಕ ವಿಭಾಗದ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು. ಕನ್ನಡದ ಹಿರಿಯ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಅವರಸ್ವಾತಂತ್ರ್ಯದ ಓಟಕಾದಂಬರಿಗೆ 2016ನೇ ಸಾಲಿನ ಪ್ರಶಸ್ತಿ ದೊರತಿತ್ತು.
2016: ಚೆನ್ನೈ: ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಪಿ. ರಾಮ ಮೋಹನ್ ರಾವ್ ಅವರ ನಿವಾಸ ಸೇರಿದಂತೆ ಒಟ್ಟು 13 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈದಿನ ಬೆಳಗ್ಗೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದರು. ರಾಮ ಮೋಹನ್ ರಾವ್ ಅವರ ಮಗ, ಅವರ ಸಂಬಂಧಿಕರು ಮತ್ತು ಅವರ ಆಪ್ತರ ನಿವಾಸಗಳ ಮೇಲೆ ಚೆನ್ನೈ, ಬೆಂಗಳೂರು ಮತ್ತು ಚಿತ್ತೂರಿನಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಯಿತು. ಬೆಳಗ್ಗೆ 5.30 ಸುಮಾರಿಗೆ 20 ಕ್ಕೂ ಹೆಚ್ಚು ಅಧಿಕಾರಿಗಳು ಚೆನ್ನೈನ ಅಣ್ಣಾ ನಗರದಲ್ಲಿರುವ ರಾಮ ಮೋಹನ್ ರಾವ್ ಅವರ ನಿವಾಸದ ಮೇಲೆ ದಾಳಿ ನಡೆಸಿದರು. ಭಾರೀ ಪ್ರಮಾಣದಲ್ಲಿ ಕಪ್ಪು ಹಣ ಹೊಂದಿದ್ದ ಶೇಖರ್ ರೆಡ್ಡಿ ಮತ್ತು ಇತರರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ರಾಮ ಮೋಹನ್ ಅವರ ನಿವಾಸದ ಮೇಲೆ ದಾಳಿ ನಡೆಸಲಾಯಿತು ಎಂದು ಐಟಿ ಅಧಿಕಾರಿಗಳು ತಿಳಿಸಿದರು. ಮರಳು ಗಣಿಗಾರಿಕೆ ಉದ್ಯಮಿ ಜೆ.ಶೇಖರ್ ರೆಡ್ಡಿ ಮತ್ತು ಇತರರ ನಿವಾಸಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಲಾಗಿತ್ತು. ದಾಳಿಯ ಸಂದರ್ಭದಲ್ಲಿ 136 ಕೋಟಿ ರೂ. ಹಳೆಯ ಮತ್ತು ಹೊಸ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜತೆಗೆ 177 ಕೋಟಿ ರೂ. ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿತ್ತು. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿವೆ.
2016: ನವದೆಹಲಿ: ಸಹರಾದಿಂದ ಅಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಹಣ ಪಡೆದಿದ್ದಾರೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ, ಮೋದಿ ಗಂಗಾ ನದಿಯಷ್ಟೇ ಪವಿತ್ರರು. ಕಾಂಗ್ರೆಸ್ ನಿರಂತರವಾಗಿ ಚುನಾವಣೆಗಳಲ್ಲಿ ಸೋಲುತ್ತಿರುವುದರಿಂದ ರಾಹುಲ್ ಗಾಂಧಿ ಹತಾಶರಾಗಿದ್ದಾರೆ ಎಂದು ಬಿಜೆಪಿ ತಿರುಗೇಟು ನೀಡಿತು. ಮೋದಿ ವಿರುದ್ಧ ಆಧಾರವಿಲ್ಲದ ಆರೋಪಗಳನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ತನ್ನ ಕುಟುಂಬ ವರ್ಗದವರನ್ನು ಸುತ್ತಿಕೊಳ್ಳುತ್ತಿರುವ ಅಗಸ್ತಾ ವೆಸ್ಟ್ಲೆಂಡ್ ಹಗರಣದ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಕನಿಷ್ಠ ನಗರಸಭೆಗಳಲ್ಲಿ ಅಧಿಕಾರ ನಡೆಸಲು ಕಾಂಗ್ರೆಸ್ನಿಂದ ಸಾಧ್ಯವಿಲ್ಲ ಎಂದು ಜನರು ನಿರ್ಧರಿಸಿದ್ದಾರೆ. ಹಾಗಾಗಿ ನಿರಂತರವಾಗಿ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲುತ್ತಿದೆ. ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮತ್ತೊಮ್ಮೆ ಸ್ಮರಿಸಿಕೊಳ್ಳುವುದು ಒಳಿತು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರತಿಕ್ರಿಯಿಸಿದರು.
2016: ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ 40 ಕೋಟಿ ರೂ. ಭ್ರಷ್ಟಾಚಾರ ನಡೆಸಿದ್ದಾರೆ. ಸಹರಾದಿಂದ ಅಕ್ರಮವಾಗಿ ಮೋದಿ ಹಣ ಸ್ವೀಕರಿಸಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು.  ಕೇಂದ್ರ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡರೂ  ಕಾಂಗ್ರೆಸ್ ಬೆಂಬಲಿಸುತ್ತದೆ. ಆದರೆ ನೋಟು ನಿಷೇಧದ ಕ್ರಮ ಭ್ರಷ್ಟಾಚಾರ ಅಥವಾ ಕಪ್ಪುಹಣದ ವಿರುದ್ಧವಾಗಿಲ್ಲ, ಸಾಮಾನ್ಯ ಜನರ ವಿರುದ್ಧವಾಗಿದೆ ಎಂದು ರಾಹುಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಗುಜರಾತಿನ ಮೆಹ್ಸಾನ ಜಿಲ್ಲೆಯ ಉಮಿಯಾ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿದ್ದ ರಾಹುಲ್ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲ ನಗದು ಕಪ್ಪುಹಣವಲ್ಲ ಮತ್ತು ಎಲ್ಲ ಕಪ್ಪುಹಣ ನಗದು ರೂಪದಲ್ಲಿಲ್ಲ. ಪ್ರಧಾನಿ ಮೋದಿ ಶೇ.94ರಷ್ಟಿರುವ ಕಪ್ಪುಹಣ ಗುರಿಯಾಗಿಸದೆ ಶೇ.6ರಷ್ಟಿರುವ ಹಣದ ಮೇಲೆ ಕ್ರಮ ಜರುಗಿಸಿದ್ದಾರೆ. ಶೇ.1 ಭ್ರಷ್ಟರನ್ನು ಗುರಿಯಾಗಿಸದೆ ಶೇ.99 ಸಾಮಾನ್ಯ ಜನರ ಮೇಲೆ ಸಂಕಷ್ಟಗಳ ಹೊರೆ ಹೊರಿಸಿದ್ದಾರೆ. ಭಾರತದಲ್ಲಿ ಇದುವರೆಗೆ ಇಂತಹ ನಿರುದ್ಯೋಗ ಕಂಡುಬಂದಿರಲಿಲ್ಲ. ಸಣ್ಣ ವ್ಯಾಪಾರ, ಉದ್ದಿಮೆಗಳನ್ನು ಮುಚ್ಚಿಹಾಕಿದ್ದಾರೆ. ಕೋಟ್ಯಂತರ  ಶ್ರಮಿಕರ ಜೇಬನ್ನು ಪ್ರಧಾನಿ ಮೋದಿ ಸುಟ್ಟುಹಾಕಿದ್ದಾರೆ ಎಂದು ರಾಹುಲ್ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
2016: ನವದೆಹಲಿಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಯಿತು. ಬೊಳುವಾರರಸ್ವಾತಂತ್ರ್ಯದ ಓಟಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ ಎಂದು ಸಾಹಿತ್ಯ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿತು. ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಪೆಬ್ರುವರಿ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
2016: ನವದೆಹಲಿ: ರದ್ದಾದ ನೋಟುಗಳಲ್ಲಿ ಒಂದು ಖಾತೆಗೆ ರೂ5,000ಕ್ಕಿಂತ ಹೆಚ್ಚು ಮೊತ್ತ ಒಮ್ಮೆ ಮಾತ್ರ ಜಮೆ ಮಾಡಬಹುದು ಎಂಬ ನಿಯಮವನ್ನು ಆರ್ಬಿಐ ಹಿಂಪಡೆಯಿತು. ಇನ್ನು ಮಂದೆ ಕೆವೈಸಿ ಖಾತೆದಾರರು ರೂ.5,000ಕ್ಕಿಂತ ಹೆಚ್ಚು ಮೊತ್ತವನ್ನು ಬ್ಯಾಂಕ್ನಲ್ಲಿ ಜಮೆ ಮಾಡಬಹುದು. ಹೀಗೆ ಜಮೆ ಮಾಡುವವರನ್ನು ಯಾರೂ ಪ್ರಶ್ನಿಸುವುದಿಲ್ಲ ಎಂದು ಆರ್ಬಿಐ ಹೇಳಿತು. ನವೆಂಬರ್ 8ರಂದು ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದ್ದ ಕೇಂದ್ರ ಸರ್ಕಾರ, ಆನಂತರ ಹಲವಾರು ರೀತಿಯ ನಿರ್ಬಂಧಗಳನ್ನು ವಿಧಿಸಿತ್ತು. ಎರಡು ದಿನಗಳ
ಹಿಂದೆಯಷ್ಟೇ ಆರ್ಬಿಐ ಹೊರಡಿಸಿದ ಹೊಸ ನಿಯಮದ ಪ್ರಕಾರ ರದ್ದಾದ ನೋಟುಗಳಲ್ಲಿ ಒಂದು ಖಾತೆಗೆ ರೂ.5,000ಕ್ಕಿಂತ ಹೆಚ್ಚು ಮೊತ್ತ ಒಮ್ಮೆ ಮಾತ್ರ ಜಮೆ ಮಾಡಲು ಅವಕಾಶ ನೀಡಲಾಗಿತ್ತು. ಹೀಗೆ ಜಮೆ ಮಾಡುವಾಗ ಈವರೆಗೆ ಯಾಕೆ ಜಮೆ ಮಾಡಿಲ್ಲ ಎಂಬುದಕ್ಕೆ ಬ್ಯಾಂಕ್ಅಧಿಕಾರಿಗಳಿಗೆ ವಿವರಣೆ ನೀಡಬೇಕು. ವಿವರಣೆ ಪಡೆಯುವಾಗ ಕನಿಷ್ಠ ಇಬ್ಬರು ಅಧಿಕಾರಿಗಳು ಉಪಸ್ಥಿತರಿರಬೇಕು. ವಿವರಣೆಯನ್ನು ದಾಖಲಿಸಿಕೊಳ್ಳಬೇಕು. ಯಾವುದೇ ಖಾತೆಗೆ ರದ್ದಾದ ನೋಟುಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮಾಡಿದ ಜಮೆ ರೂ.5,000 ಮೀರಿದರೆ ರೂ.5,000ಕ್ಕಿಂತ ಹೆಚ್ಚು ಜಮೆ ಮಾಡಿದವರಿಗೆ ಅನ್ವಯವಾಗುವ ಎಲ್ಲ ಷರತ್ತು ಅನ್ವಯವಾಗುತ್ತವೆ. ರೂ.5,000 ಒಳಗಿನ ಮೊತ್ತ ಜಮೆ ಮಾಡಲು ಯಾವುದೇ ನಿರ್ಬಂಧ ಇಲ್ಲಬೇರೆಯವರ ಖಾತೆಗೂ ರದ್ದಾದ ನೋಟು ಜಮೆ ಮಾಡಲು ಅವಕಾಶ ಇದೆ. ಆದರೆ ಖಾತೆದಾರರ ಅನುಮತಿ ಪತ್ರ, ಜಮೆ ಮಾಡುವವರ ಗುರುತಿನ ಚೀಟಿ ನೀಡಬೇಕು. ಗುರುತಿನ ಚೀಟಿ ನೀಡಿಲ್ಲದ (ಕೆವೈಸಿ) ಖಾತೆಗಳಿಗೆ ರೂ.5,000ಕ್ಕಿಂತ ಹೆಚ್ಚಿನ ಮೊತ್ತ  ಜಮೆ ಮಾಡುವಂತಿಲ್ಲ. ಖಾತೆಯಲ್ಲಿ ಗರಿಷ್ಠ ರೂ.50,000ಕ್ಕಿಂತ ಹೆಚ್ಚು ಹಣಇಡುವಂತಿಲ್ಲ. ಉದಾಹರಣೆಗೆ ಖಾತೆಯಲ್ಲಿ ರೂ.48 ಸಾವಿರ ಇದ್ದರೆ, ಮತ್ತೆ ರೂ.2,000 ಮಾತ್ರ ಜಮೆ ಮಾಡಬಹುದು. ನಿಯಮದಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದು, ಇದೀಗ ಆರ್ಬಿಐ ಪ್ರಸ್ತುತ ಆದೇಶವನ್ನು ಹಿಂಪಡೆದಿದೆ.
2016: ಬರ್ಲಿನ್: ಡಿ.19ರ ಸೋಮವಾರ ರಾತ್ರಿ ಜರ್ಮನಿಯ ರಾಜಧಾನಿ ಬರ್ಲಿನ್ನಲ್ಲಿರುವ ಪ್ರಸಿದ್ಧ ಕ್ರಿಸ್ ಮಸ್ ಮಾರುಕಟ್ಟೆಯ ಮೇಲೆ ಟ್ರಕ್ ಹರಿಸಿ 12 ಜನರನ್ನು ಹತ್ಯೆ ಮಾಡಿದ ಘಟನೆಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರ ಸಂಘಟನೆ ಹೊತ್ತುಕೊಂಡಿತು. ಈ ಸಂಬಂಧ ಹೇಳಿಕೆ ನೀಡಿರುವ ಜರ್ಮನಿ ಅಧಿಕಾರಿಗಳು ಉಗ್ರ ಸಂಘಟನೆ ಸುಲಭ ಗುರಿಯ ಮೇಲೆ ದಾಳಿ ನಡೆಸಿದೆ. ಇದೇ ಮೊದಲ ಬಾರಿಗೆ ಜರ್ಮನಿಯ ನೆಲದಲ್ಲಿ ಉಗ್ರರು ಅತಿ ದೊಡ್ಡ ದಾಳಿ ಸಂಘಟಿಸಿದ್ದಾರೆ. ಉಗ್ರ ದಾಳಿ ನಡೆಸಿದವರಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ದಾಳಿ ನಡೆದ ಸಂದರ್ಭದಲ್ಲಿ ವಶಕ್ಕೆ ಪಡೆದಿದ್ದ ವ್ಯಕ್ತಿಯನ್ನು ಬಿಡುಗಡೆ ಮಾಡಲಾಗಿದೆ. ಆತನ ವಿರುದ್ಧ ಅಗತ್ಯ ಸಾಕ್ಷಾಧಾರಗಳು ಲಭ್ಯವಿರಲಿಲ್ಲ ಎಂದು ತಿಳಿಸಿದರು. ಇಸ್ಲಾಮಿಕ್ ಸ್ಟ್ರೇಟ್ ಉಗ್ರರು ಬರ್ಲಿನ್ ದಾಳಿಯ ಹೊಣೆ ಹೊತ್ತಿರುವ ಕುರಿತು ಅಮಾಖ್ ನ್ಯೂಸ್ ಏಜೆನ್ಸಿ ವರದಿ ಮಾಡಿತು.. ಇಸ್ಲಾಮಿಕ್ ಸ್ಟೇಟ್ ಸಂಘಟನೆ ಟ್ರಕ್ ದಾಳಿ ನಡೆಸಿದಾತ ನಮ್ಮ ಸೈನಿಕ, ಇನ್ನು ಮುಂದೆ ಸಹ ದಾಳಿ ಸಂಘಟಿಸಲಾಗುವುದು ಎಂದು ಐಸಿಸ್ ತಿಳಿಸಿತು.. ಜರ್ಮನಿ ನೇರವಾಗಿ ಭಯೋತ್ಪಾದಕ ವಿರೋಧಿ ಯುದ್ಧದಲ್ಲಿ ಭಾಗಿಯಾಗಿಲ್ಲ. ಆದರೆ ಮಿತ್ರ ಪಡೆಗಳಿಗೆ ತನ್ನ ಟೋರ್ನೆಡೋ ಜೆಟ್ ವಿಮಾನಗಳನ್ನು ಒದಗಿಸಿದೆ ಮತ್ತು ವಿಮಾನಗಳಿಗೆ ಇಂಧನ ಭರ್ತಿ ಮಾಡುವ ಸ್ಥಳವನ್ನು ಟರ್ಕಿಯಲ್ಲಿ ಹೊಂದಿದೆ. ಜತೆಗೆ ಫ್ರಾನ್ಸ್ ವಿಮಾನ ವಾಹಕ ಹಡಗನ್ನು ರಕ್ಷಣೆ ಮಾಡಲು ನೆರವು ನೀಡುತ್ತಿದೆ.
2016: ಮೆಕ್ಸಿಕೋ: ಮೆಕ್ಸಿಕೋದ ಅತಿದೊಡ್ಡ ಪಟಾಕಿ ಮಾರುಕಟ್ಟೆಯಲ್ಲಿ ಭಾರೀ ಸ್ಫೋಟ ಸಂಭವಿಸಿದ ಪರಿಣಾಮ ಕನಿಷ್ಠ 29 ಜನರು ಮೃತರಾಗಿ, 70 ಕ್ಕೂ ಹೆಚ್ಚು ಜನರು ಗಾಯಗೊಂಡರು. ಮೆಕ್ಸಿಕೋದ ಉಪನಗರ ಟುಲ್ಟೆಪೆಕ್ನಲ್ಲಿ ಘಟನೆ ಘಟಿಸಿತು. ಕ್ರಿಸ್ ಮಸ್ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ಪಟಾಕಿ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಾರುಕಟ್ಟೆಗೆ ಆಗಮಿಸಿದ್ದರು. ಮಂಗಳವಾರ 2.50 ಸುಮಾರಿಗೆ (ಸ್ಥಳೀಯ ಕಾಲಮಾನ) ಅಂಗಡಿಯೊಂದರಲ್ಲಿ ಪಟಾಕಿಗೆ ಬೆಂಕಿ ಬಿದ್ದಿತು. ಬೆಂಕಿ ನೋಡ ನೋಡುತ್ತಿದ್ದಂತೆ ಮಾರುಕಟ್ಟೆಯಾದ್ಯಂತ ವ್ಯಾಪಿಸಿ, ಭಾರೀ ಸದ್ದಿನೊಂದಿಗೆ ಸ್ಫೋಟ ಸಂಭವಿಸಿತು. ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತು. ಹಲವು ಕಿ.ಮೀ. ದೂರದವರೆಗೆ ಸ್ಪೋಟದ ಸದ್ದು ಕೇಳಿಸಿತು. ಅಗ್ನಿ ಶಾಮಕ ದಳದ ಸಿಬ್ಬಂದಿ 3 ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಇದುವರೆಗೂ 26 ಮೃತದೇಹಗಳನ್ನು ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ. ಮೂವರು ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಪೊಲೀಸ್ ಇಲಾಖೆ ತಿಳಿಸಿತು.

2016: ನವದೆಹಲಿ: ಮುಂದಿನ ದಿನಗಳಲ್ಲಿ ಸಂಬಳವನ್ನು ನಗದು ರೂಪದಲ್ಲಿ ಪಡೆಯುವ ಬದಲಾಗಿ ನಗದು ರಹಿತ ವೇತನ ಪಾವತಿಗೆ ಹೆಚ್ಚಿನ ಒತ್ತು ನೀಡಲು ಕೇಂದ್ರ ಸರ್ಕಾರ ಮಹತ್ವದ  ಕ್ರಮ ತೆಗೆದುಕೊಂಡಿತು. ಈದಿನ ಕೇಂದ್ರ ಸಂಪುಟ ಸಚಿವರ ಸಭೆಯಲ್ಲಿ ನಗದು ರಹಿತ ವೇತನ ಪಾವತಿಗೆ ಸಂಬಂಧಿಸಿ ಸುಗ್ರೀವಾಜ್ಞೆ ಹೊರಡಿಸಲು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಸಚಿವ ಸಂಪುಟದ ಅನುಮೋದನೆಯೂ ದೊರಕಿತು.   ನಿರ್ಧಾರಕ್ಕೆ ರಾಷ್ಟ್ರಪತಿಗಳ ಅಂಗೀಕಾರವಷ್ಟೇ ಬಾಕಿ ಇದೆ. ನಡುವೆ ನಗದು ವೇತನ ಕ್ರಮವನ್ನು ಅನುಸರಿಸುತ್ತ ಬಂದಿರುವವರಿಗೆ ಮುಂದುವರಿಸಲೂ ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ವಿಚಾರಕ್ಕೆ ಸಂಬಂಧಿಸಿ 6 ತಿಂಗಳೊಳಗೆ ಸಂಸತ್ತಿನ ಉಭಯ ಕಲಾಪದಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಬೇಕಿದೆ. ಜತೆ ಜೊತೆಗೆ ವೇತನ ಪಾವತಿ ಕಾಯ್ದೆಯಲ್ಲಿಯೂ ತಿದ್ದುಪಡಿಗೆ ಚಿಂತನೆ ನಡೆಸಿದೆ ಎಂದು ಹೇಳಲಾಯಿತು. ಕ್ಯಾಶ್ಲೆಸ್ ಟ್ರಾನ್ಸ್ಸ್ಯಾಕ್ಷನ್ಗೆ ಸಂಬಂಧಿಸಿ ಮಹತ್ವದ ಹೆಜ್ಜೆ ಇಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ನೋಟು ರದ್ದು ಮಾಡಿ ಶಾಕ್ ನೀಡಿದ ಬೆನ್ನಲ್ಲೇ ಇದೀಗ ಪೂರಕವಾದ ಮತ್ತೊಂದಯ ಕಾರ್ಯಾಚರಣೆಗೆ ಇಳಿದಿದೆ. ಕಾಳಧನಿಕರಿಗೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಇದೂ ಕೂಡ ಮಹತ್ವದ ನಿರ್ಧಾರ ಎಂದು ವಿಶ್ಲೇಷಿಸಲಾಗುತ್ತಿದೆ. ನಿರ್ಧಾರದ ಪರಿಣಾಮ ಇನ್ನು ಮುಂದೆ ನಗದು ವೇತನ ಪಾವತಿಗೆ ಬ್ರೇಕ್ ಬೀಳಲಿದ್ದು, ಚೆಕ್ ಅಥವಾ -ಪೇಮೆಂಟ್ ಕಡ್ಡಾಯಗೊಳ್ಳಲಿದೆ.
2008: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಾಲಿವುಡ್ಡಿನ ಖ್ಯಾತ ನಟ ಶಾರುಖ್ ಖಾನ್ ಅವರು ಜಗತ್ತಿನ 50 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿದ್ದಾರೆ, ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬರಾಕ್ ಒಬಾಮ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ ಎಂದು ಅಮೆರಿಕದ ಪ್ರತಿಷ್ಠಿತ ನಿಯತಕಾಲಿಕೆ 'ನ್ಯೂಸ್ ವೀಕ್' ಸಮೀಕ್ಷೆ ತಿಳಿಸಿತು. ದೇಶದ ಅಣ್ವಸ್ತ್ರ ಸಂಗ್ರಹಗಳ ಮೇಲೆ ನಿಯಂತ್ರಣ ಹೊಂದಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಶ್ಫಕ್ ಪರ್ವೇಜ್ ಕಯಾನಿ ಅವರು ಈ ಪಟ್ಟಿಯಲ್ಲಿ 20ನೇ ಸ್ಥಾನವನ್ನು ಗಳಿಸಿದ್ದಾರೆ ಎಂದು ಸಮೀಕ್ಷೆ ಹೇಳಿತು. ಒಬಾಮ ನಂತರ ಪಟ್ಟಿಯಲ್ಲಿ ಚೀನಾದ ಅಧ್ಯಕ್ಷ ಹ್ಯು ಜಿಂಟಾವೊ, ಫ್ರಾನ್ಸ್ ಅಧ್ಯಕ್ಷ ನಿಕೊಲಸ್ ಸರ್ಕೋಜಿ, ಬ್ರಿಟನ್ ಪ್ರಧಾನಿ ಗಾರ್ಡನ್ ಬ್ರೌನ್, ಜರ್ಮನಿಯ ಚಾನ್ಸಲರ್ ಅಂಗೆಲಾ ಮಾರ್ಕ್ ಮತ್ತು ರಷ್ಯಾದ ಪ್ರಧಾನಿ ವಾಡ್ಲಿಮಿರ್ ಪುಟಿನ್ ಸೇರಿದ್ದರು. ಆಶ್ಚರ್ಯಕರ ವಿಚಾರವೆಂದರೆ ಈ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಮತ್ತು ಉತ್ತರ ಕೊರಿಯಾದ ಸರ್ವಾಧಿಕಾರಿ ಜಿಮ್ ಜೊಂಗ್-2 ಅವರೂ ಸೇರಿದ್ದಾರೆ ಎಂದು ಸಮೀಕ್ಷೆ ವಿವರಿಸಿತು. ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿರುವ ಸೋನಿಯಾ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ರಾಣಿ, ಭಾರತದಲ್ಲಿ ಅನೇಕ ರಾಜಕೀಯ ಪಕ್ಷಗಳು ಹರಿದು ಹಂಚಿ ಹೋದರೂ ಸೋನಿಯಾ ನೇತೃತ್ವದ ಕಾಂಗ್ರೆಸ್ ಅಖಂಡವಾಗಿ ಉಳಿದಿದೆ ಎಂದು ನಿಯತಕಾಲಿಕೆ ಬಣ್ಣಿಸಿತು.

2008: ಭೂಮಿಯ ಮೇಲೆ ಬದುಕಿದ್ದ ಜೀವಿಗಳಲ್ಲೇ ಅತ್ಯಂತ ಹಳೆಯ ಹಾಗೂ ಸಾಮಾನ್ಯ ಸೂಕ್ಷ್ಮ ಜೀವಿಯ ಬಗೆಗೆ ವಿಜ್ಞಾನಿಗಳು ಈ ವರೆಗೆ ಹೊಂದಿದ್ದ ಅಂದಾಜು, ಗುಣಲಕ್ಷಣ ಮತ್ತು ಕಲ್ಪನೆ ಅವರು ಅಂದುಕೊಂಡಂತೆ ಇಲ್ಲ ಎಂಬ ಅಭಿಪ್ರಾಯಕ್ಕೆ ಕೆನಡಾದ ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಬಂದಿರುವುದಾಗಿ 'ನೇಚರ್ ಜನರಲ್' ಪತ್ರಿಕೆ ವರದಿ ಮಾಡಿತು. 3.8 ಶತಕೋಟಿ ವರ್ಷಗಳಷ್ಟು ಹಳೆಯದಾದ 'ಲ್ಯೂಕಾ' (ಲಾಸ್ಟ್ ಯೂನಿವರ್ಸಲ್ ಕಾಮನ್ ಏನ್‌ಸೆಸ್ಟರ್) ಸೂಕ್ಷ್ಮ ಜೀವಿಯು 90 ಡಿಗ್ರಿ ಸೆಲ್ಷಿಯಸ್ಸಿಗಿಂತಲೂ ಹೆಚ್ಚಿನ ಉಷ್ಣಾಂಶ ಹಾಗೂ ಸಮುದ್ರದ ಆಳದ ವಾತಾವರಣದಲ್ಲಿ ಇರಲು ಬಯಸುವ ಜೀವಿ ಎಂದೇ ಈ ಮೊದಲು ನಂಬಲಾಗಿತ್ತು. ಆದರೆ ಈಗ ಈ ಅಂಶವನ್ನು ವಿಜ್ಞಾನಿಗಳು ನಿರಾಕರಿಸಿದ್ದು ಲ್ಯೂಕಾ ಸಾಮಾನ್ಯ ಉಷ್ಣಾಂಶದ 50 ಡಿಗ್ರಿ ಸೆಲ್ಷಿಯಸ್‌ಗಳಿಗಿಂತಲೂ ಕಡಿಮೆ ವಾತಾವರಣದಲ್ಲಿ ಜೀವಿಸುತ್ತಿತ್ತು ಎಂದು ಸಂಶೋಧನೆಯ ನೇತೃತ್ವ ವಹಿಸ್ದಿದ ನಿಕೊಲಾಸ್ ಲಾರ್ಟಿಲ್ಲೊಟ್ ಹೇಳಿರುವುದಾಗಿ 'ನೇಚರ್' ತಿಳಿಸಿತು. ಜೀವಿಗಳ ಉಗಮದಿಂದ ಈವರೆಗಿನ ಬೆಳವಣಿಗೆ ಹಾಗೂ ಆಧುನಿಕ ವಂಶವಾಹಿಗಳು ಮತ್ತು ಭೂಮಿಯ ಮೇಲೆ ಬದುಕಿದ್ದ ಅತ್ಯಂತ ಎಲ್ಲ ಪುರಾತನ ವಂಶವಾಹಿಗಳ ಕುರಿತು ಈ ವಿಜ್ಞಾನಿಗಳ ತಂಡ ಸಂಶೋಧನೆ ನಡೆಸಿತು.

2008: 'ಬಹುಸಂಖ್ಯಾತರಿಗೆ ಪೂಜ್ಯವಾದ ಗೋವನ್ನು ಇತರರು ಗೌರವದಿಂದ ಕಾಣಬೇಕು ಅದಕ್ಕೆ ಮೊದಲಾಗಿ ಹಿಂದೂಗಳು ಗೋವನ್ನು ಕಸಾಯಿಖಾನೆಗೆ ಮಾರುವುದಿಲ್ಲ ಎಂಬ ಸಂಕಲ್ಪ ತೊಡಬೇಕು' ಎಂದು ಹಜ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಡಾ. ಮುಮ್ತಾಜ್ ಆಲಿಖಾನ್ ಚಾಮರಾಜನಗರದ ಕನಕಗಿರಿಯಲ್ಲಿ ಹೇಳಿದರು. ಭಾರತೀಯ ಜೈನ್ ಮಿಲನ್ ವಲಯ- 8ರ 14ನೇ ವಲಯ ಸಮ್ಮೇಳನದ ಅಂಗವಾಗಿ ಇಲ್ಲಿನ ವಿಜಯ ಪಾರ್ಶ್ವನಾಥ ಸಭಾ ಮಂಟಪದಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಅವರು ಮಾತನಾಡಿದರು. 'ಜೈನ ಧರ್ಮದಲ್ಲಿ ಇರುವಂತೆ ಶಾಂತಿ, ಅಹಿಂಸೆಯ ತತ್ವಗಳು ಇಸ್ಲಾಮಿನಲ್ಲಿಯೂ ಇವೆ. ಆದರೆ ಭಯೋತ್ಪಾದನೆಯಲ್ಲಿ ತೊಡಗಿರುವವರು ಇಸ್ಲಾಮ್ ಧರ್ಮದಲ್ಲಿ ನಂಬಿಕೆ ಇಲ್ಲದವರು. ವಿಧ್ವಂಸಕ ಕೃತ್ಯ ನಡೆಸುವವರು ಇಸ್ಲಾಮ್ ಧರ್ಮದ ಅನುಯಾಯಿಗಳೋ ಅಥವಾ ಅನುನಾಯಿಗಳೋ ತಿಳಿಯದು. ಹಿಂಸೆಯಲ್ಲಿ ತೊಡಗಿರುವವರು ಜೀವನದಲ್ಲಿ ಇಸ್ಲಾಮ್ ಅಳವಡಿಸಿಕೊಂಡಿಲ್ಲ' ಎಂದು ಅವರು ನುಡಿದರು. 'ಬಹುದೇವತಾ ಉಪಾಸನೆಯಲ್ಲಿ ನಂಬಿಕೆ ಇಟ್ಟ ಧರ್ಮಗಳ ಅಂತರ್ಗತದಲ್ಲಿ ನಿರಾಕಾರನಾದ ಒಬ್ಬನೇ ಭಗವಂತನಿದ್ದಾನೆ. ಏಕ ದೈವ ಉಪಾಸನೆಯ ಇಸ್ಲಾಮಿನಲ್ಲಿಯೂ ದೇವರ 99 ಹೆಸರುಗಳಿವೆ. ಆದ್ದರಿಂದ ಮಹಾವೀರ, ರಾಮ, ಕೃಷ್ಣ, ಬುದ್ಧ ಇವರೆಲ್ಲರನ್ನು ಪ್ರವಾದಿಗಳು ಎಂದೊಪ್ಪಬೇಕು' ಎಂದು ಅವರು ಹೇಳಿದರು.

2007: ಪಾಕಿಸ್ಥಾನದ ವಾಯವ್ಯ ಗಡಿಪ್ರಾಂತ್ಯದ ಚರ್ಸಡ್ಡ ಎಂಬ ಪಟ್ಟಣದ ಮಸೀದಿಯಲ್ಲಿ ಮಾಜಿ ಸಚಿವರೂ ಸೇರಿದಂತೆ ನೂರಾರು ಮಂದಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಮಾನವ ಬಾಂಬ್ ಸ್ಫೋಟಿಸಿ 54ಕ್ಕಿಂತಲೂ ಹೆಚ್ಚು ಜನ ಮೃತರಾಗಿ 100ಕ್ಕೂ ಹೆಚ್ಚು ಜನರು ಗಾಯಗೊಂಡರು. ಆಂತರಿಕ ವ್ಯವಹಾರಗಳ ಖಾತೆಯ ಮಾಜಿ ಸಚಿವ ಪಾಕಿಸ್ಥಾನ ಮುಸ್ಲಿಂಲೀಗ್ (ಪಿಎಂಕ್ಯೂ) ಮುಖಂಡ ಅಫ್ತಾಬ್ ಅಹ್ಮದ್ ಖಾನ್ ಶೆರ್ಪೊ ಅವರ ನಿವಾಸದ ಬಳಿಯೇ ಇರುವ ಈ ಮಸೀದಿಯಲ್ಲಿ ಈದ್ ನಿಮಿತ್ತ ಪ್ರಾರ್ಥನೆ ಸಲ್ಲಿಸಲು ನೂರಾರು ಜನ ಸೇರಿದ್ದಾಗ ದಾಳಿಕೋರ ಬಾಂಬ್ ಸಿಡಿಸಿದ್ದು ಆತನ ಗುರಿ ಶೆರ್ಪೊ ಅವರೇ ಆಗಿದ್ದರು ಎಂದು ಶಂಕಿಸಲಾಯಿತು. ಶೆರ್ಪೊ ಅವರನ್ನೇ ಗುರಿಯಾಗಿಸಿಕೊಂಡು ನಡೆದ ಎರಡನೇ ಆತ್ಮಾಹುತಿ ದಾಳಿ ಇದು. ಏಪ್ರಿಲ್ 28ರಂದು ನಡೆದ ದಾಳಿಯಲ್ಲಿ 28ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.

2007: ಆರ್ಟ್ ಆಫ್ ಲಿವಿಂಗ್ನ ಶ್ರೀರವಿಶಂಕರ ಗುರೂಜಿ ಚಿತ್ರದುರ್ಗದಲ್ಲಿ ರೈತರ ಆತ್ಮಹತ್ಯೆ ತಡೆಗೆ ಹೊಸ ಸೂತ್ರಗಳನ್ನು ಮಂಡಿಸಿದರು. ರೈತರು ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಹಾಗೆಯೇ ಮಾನಸಿಕ ಒತ್ತಡ ನಿವಾರಣೆಗೆ ಪ್ರಾಣಾಯಾಮ ಮತ್ತು ಧ್ಯಾನದ ಮೊರೆ ಹೋಗಬೇಕು ಎಂದು ಅವರು ಸಲಹೆ ಮಾಡಿದರು. ಮಹಾರಾಷ್ಟ್ರದ ವಿದರ್ಭದಲ್ಲಿ ಸಂಸ್ಥೆ ಪ್ರಾಯೋಗಿಕವಾಗಿ 705 ಹಳ್ಳಿಗಳಲ್ಲಿ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿದೆ. ಎಂಟು ತಿಂಗಳಿನಿಂದ ಅಲ್ಲಿ ಒಂದೂ ಆತ್ಮಹತ್ಯೆ ಪ್ರಕರಣ ವರದಿಯಾಗಿಲ್ಲ. ಕರ್ನಾಟಕದಲ್ಲೂ 100 ಹಳ್ಳಿಗಳನ್ನು ಈ ಕೃಷಿ ಪದ್ಧತಿ ಅಳವಡಿಕೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಹೊಲದ ಬದುವಿನಲ್ಲಿ `ಲಕ್ಷ್ಮೀತರು' ಸಸಿಗಳನ್ನು ಬೆಳಸುವುದು ಸೇರಿದಂತೆ ಗಂಜಲ, ಬೇವಿನ ಎಲೆ, ಅರಿಶಿಣ ಮಿಶ್ರಣ ಮಾಡಿ ಹೊಲಕ್ಕೆ ಉಣಬಡಿಸುವುದು ಈ ಪದ್ಧತಿಯ ಗುಣಲಕ್ಷಣ. ಶೂನ್ಯ ಬಂಡವಾಳವಾದುದರಿಂದ ರೈತರ ಆತ್ಮಹತ್ಯೆ ತಡೆಗೆ ಇದು ರಾಮಬಾಣವಾಗಲಿದೆ. ಇದು ಪಾಳೇಕರ್ ಪದ್ಧತಿಕ್ಕಿಂತ ಭಿನ್ನ ಎಂದು ಗುರೂಜಿ ಸ್ಪಷ್ಟಪಡಿಸಿದರು. ಔಷಧದಿಂದ ವಾಸಿಯಾಗದ ಎಷ್ಟೋ ರೋಗಗಳು ಸುದರ್ಶನ ಕ್ರಿಯೆ ಮೂಲಕ ಗುಣವಾಗಿರುವುದು ದೃಢಪಟ್ಟಿದೆ. ರೈತರಿಗೆ ನೈಸರ್ಗಿಕ ಕೃಷಿ ಪದ್ಧತಿ ಬಗ್ಗೆ ತಿಳಿಸುವುದರ ಜೊತೆಗೆ ಒತ್ತಡ ನಿವಾರಣೆಗೆ ಸತ್ಸಂಗದ ಮೂಲಕ ಪ್ರಾಣಾಯಾಮ, ಧ್ಯಾನ ಹೇಳಿಕೊಡಲಾಗುವುದು ಎಂದು ಅವರು ವಿವರಿಸಿದರು.

2007: `ಏಡ್ಸ್ ರೋಗ ಲೈಂಗಿಕ ಸಂಪರ್ಕದಿಂದ ಹರಡುತ್ತದೆ. ಇದಕ್ಕೆ ಮದ್ದೇ ಇಲ್ಲ' ಎಂದು ವೈದ್ಯಕೀಯ ಲೋಕ ಒಪ್ಪಿಕೊಂಡಿರುವ ಸತ್ಯಕ್ಕೆ ಹೆಸರಾಂತ ಹೋಮಿಯೋಪತಿ ವೈದ್ಯರೊಬ್ಬರು ಸವಾಲು ಹಾಕಿದರು. ಹೋಮಿಯೋಪತಿ ಔಷಧಿಯಲ್ಲಿ ಏಡ್ಸ್ ಹರಡುವ ವೈರಸ್ಗಳನ್ನು ನಾಶಪಡಿಸುವ ಸಾಮರ್ಥ್ಯ ಇರುವುದು ಸಾಬೀತಾಗಿದೆ ಎಂದು ಹೋಮಿಯೋಪತಿ ವೈದ್ಯ ಡಾ. ರಾಜ್ ಕಿಶೋರ್ ಸಿನ್ಹಾ ನವದೆಹಲಿಯಲ್ಲಿ ಹೇಳಿದರು. ಇದು ಎಚ್ ಐ ವಿ ವೈರಸ್ ಅಲ್ಲ. ಚರ್ಮರೋಗಕ್ಕೆ ಕಾರಣವಾಗುವ (ಆಂಟಿ ಸ್ಪೋರಿಕ್) ವೈರಸ್ ಆಗಿದೆ. ಹಾಗಾಗಿ ಈ ರೋಗ ಲೈಂಗಿಕ ಸಂಪರ್ಕದಿಂದ ಹಾಗೂ ರಕ್ತ ವರ್ಗಾವಣೆಯಿಂದ ಹರಡುವುದಿಲ್ಲ ಎಂಬುದು ಸಿನ್ಹಾ ವಾದ. ಸಿನ್ಹಾ ಅವರು ಈ ಸಂಶೋಧನಾ ವರದಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ಕೇಂದ್ರ ಹೋಮಿಯೋಪತಿ ಸಂಶೋಧನಾ ಮಂಡಳಿ ನಿರ್ದೇಶಕರಿಗೆ ಸಲ್ಲಿಸಿದ್ದಾರೆ. ಸೂಕ್ಷ್ಮಜೀವಿಗಳನ್ನು ನಾಶಮಾಡುವ 40 ಹೋಮಿಯೋಪತಿ ಔಷಧಗಳಿಂದ ಏಡ್ಸ್ ಗುಣಪಡಿಸಬಹುದು. ಈ ಔಷಧಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತವೆ ಎಂದು ಸಿನ್ಹಾ ಹೇಳುತ್ತಾರೆ. ಆಂಥ್ರಾಕ್ಸ್ ರೋಗಕ್ಕೆ ಕಾರಣವಾಗುವ ವೈರಸ್ ಹೊರತುಪಡಿಸಿ ಯಾವುದೇ ವೈರಸ್ ರಕ್ತ ಸಂಪರ್ಕದಿಂದ ಹರಡುವುದಿಲ್ಲ ಎನ್ನುತ್ತಾರೆ ಸಿನ್ಹಾ.

2007: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ತಾಯಿ ತೇಜಿ ಬಚ್ಚನ್ (93) ಅವರು ದೀರ್ಘಕಾಲದ ಅನಾರೋಗ್ಯದಿಂದ ಮುಂಬೈಯ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದಿಂದಾಗಿ ಅವರು ಈ ವರ್ಷವಿಡೀ ಲೀಲಾವತಿ ಆಸ್ಪತ್ರೆಯಲ್ಲಿಯೇ ಕಳೆದರು. ಕಳೆದ ತಿಂಗಳು ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಪಂಜಾಬಿನ ಸಿಖ್ ಕುಟುಂಬದಲ್ಲಿ ಜನಿಸಿದ್ದ ತೇಜಿ ಅವರು 1941ರಲ್ಲಿ ಖ್ಯಾತ ಹಿಂದಿ ಕವಿ ಹರಿವಂಶ ರಾಯ್ ಬಚ್ಚನ್ ಅವರನ್ನು ಮದುವೆಯಾದರು. ಹರಿವಂಶ ರಾಯ್ ಅವರಿಗೆ ತೇಜಿ ಎರಡನೆ ಪತ್ನಿ. ಮೊದಲ ಪತ್ನಿ ಶ್ಯಾಮಲಾ ಗತಿಸಿದ ಬಳಿಕ ಹರಿವಂಶರಾಯ್ ಅವರು ತೇಜಿ ಅವರನ್ನು ಮದುವೆಯಾದರು. 50ರ ದಶಕದಲ್ಲಿ ಬಚ್ಚನ್ ಕುಟುಂಬ ದೆಹಲಿಗೆ ವಾಸ್ತವ್ಯ ಬದಲಾಯಿಸಿದಾಗ ತೇಜಿ ಅವರು ನೆಹರು-ಗಾಂಧಿ ಕುಟುಂಬಕ್ಕೆ ಆಪ್ತರಾದರು. ಉತ್ತಮ ಗಾಯಕಿಯಾಗಿದ್ದ ತೇಜಿ ಬಚ್ಚನ್ ರಂಗ ಕಲಾವಿದೆ ಕೂಡ ಆಗಿದ್ದರು. ತಮ್ಮ ಪತಿ ಭಾಷಾಂತರಿಸಿದ ಶೇಕ್ಸ್ ಪಿಯರನ ನಾಟಕಗಳಲ್ಲಿ ಅಭಿನಯಿಸಿದ್ದರು. ಅಮಿತಾಭ್ ಮನೆಯಲ್ಲಿ ಯಾವುದೇ ಶುಭಕಾರ್ಯಕ್ಕೆ ಮುನ್ನ ತೇಜಿ ಬಚ್ಚನ್ ಅವರ ಆಶೀರ್ವಾದ ಪಡೆದುಕೊಳ್ಳುವುದು ರೂಢಿಯಾಗಿತ್ತು. ಅಂತೆಯೇ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಅವರು ತಮ್ಮ ಮದುವೆಗೆ ಮುನ್ನ ಆಸ್ಪತ್ರೆಯಲ್ಲಿದ್ದ ತೇಜಿ ಬಚ್ಚನ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದರು.

2007: ಭಾರತೀಯ ಮೂಲದ ವೈದ್ಯ ಮೊಹಮ್ಮದ್ ಹನೀಫ್ ಅವರಿಗೆ ಉದ್ಯೋಗ ವೀಸಾ ಮರಳಿಸುವಂತೆ ಮೆಲ್ಬೋರ್ನ್ ನ್ಯಾಯಾಲಯ ನೀಡಿದ ತೀರ್ಪನ್ನು ಆಸ್ಟ್ರೇಲಿಯಾದ ಫೆಡರಲ್ ನ್ಯಾಯಾಲಯ ಎತ್ತಿ ಹಿಡಿಯಿತು. ಹೀಗಾಗಿ ಅಲ್ಲಿನ ಸರ್ಕಾರ ಮತ್ತೊಮ್ಮೆ ಮುಖಭಂಗ ಅನುಭವಿಸಿತು. ಲಂಡನ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಉಗ್ರರಿಗೆ ನೆರವು ನೀಡಿದ್ದಾರೆಂದು ಅಂದಿನ ವಲಸೆ ಸಚಿವ ಕೆವಿನ್ ಆಂಡ್ರೂವ್ಸ್ ಅವರು ಬೆಂಗಳೂರಿನ ವೈದ್ಯ ಹನೀಫ್ ಅವರ ಉದ್ಯೋಗ ವೀಸಾವನ್ನು ರದ್ದುಗೊಳಿಸಿದ್ದರು. ಇದನ್ನು ಹನೀಫ್ ಬ್ರಿಸ್ಬೇನ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಹನೀಫ್ ಪರ ತೀರ್ಪು ನೀಡಿ, ವೀಸಾವನ್ನು ಮರಳಿಸುವಂತೆ ಸರ್ಕಾರಕ್ಕೆ ಆದೇಶಿಸಿದರು. ದೇಶದ ಸುರಕ್ಷತೆಯ ನೆಪವೊಡ್ಡಿ ಸರ್ಕಾರ ಈ ತೀರ್ಪನ್ನು ಫೆಡರಲ್ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.

2007: ಚೀನಾ ಮತ್ತು ಭಾರತ ನಡುವಿನ ಮಹತ್ವದ ವಿಶ್ವಾಸ ವರ್ಧನೆ ಕ್ರಮದ ಅಂಗವಾಗಿ ಇದೇ ಮೊದಲ ಬಾರಿ ನೈಋತ್ಯ ಚೀನಾದ ಕುನ್ಮಿಂಗ್ ಮಿಲಿಟರಿ ಆಕಾಡೆಮಿಯಲ್ಲಿ ಐದು ದಿನಗಳ ಜಂಟಿ ಸಮರಾಭ್ಯಾಸಕ್ಕೆ ಚಾಲನೆ ನೀಡಲಾಯಿತು.

2007: ಕರಗಿ ಹೋಗುವ ಯೌವ್ವನ ಮತ್ತು ಸಾವು ಮನುಷ್ಯನಿಗೆ ನಿರಂತರ ಕಾಡುವ ಸಂಗತಿಗಳು. ಸಾವನ್ನು ಮುಂದೂಡುವ ಯಾವ ಔಷಧವನ್ನು ವಿಜ್ಞಾನಿಗಳು ಕಂಡು ಹಿಡಿದಿಲ್ಲವಾದರೂ, ಕಳೆದು ಹೋಗುವ ಯೌವ್ವನವನ್ನು ಉಳಿಸಿಕೊಳ್ಳುವ ರಹಸ್ಯವನ್ನು ಹೊರಗೆಡವಿದರು. ಯಾವಾಗಲೂ ಸೃಜನಶೀಲರಾಗಿರಿ. ಏನಾದರೂ ಮಾಡುತ್ತಿರಿ... ರಚನಾತ್ಮಕ ಕೆಲಸಗಳಲ್ಲಿ ತೊಡಗಿಕೊಳ್ಳಿರಿ... ಸಾಹಸಿಗಳಾಗಿ... ಹಾಗಾದರೆ ನಿಮಗೆ ಬೇಗನೇ ವಯಸ್ಸಾಗುವುದಿಲ್ಲ. ಎಂದು ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧಕರ ಸಲಹೆ. `ಯಾವುದೇ ಕೆಲಸವಾಗಲಿ ಆಸಕ್ತಿಯಿಂದ ಮಾಡಿ. ಸದಾ ಸೃಜನಶೀಲವಾಗಿರಿ. ಅದು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ' ಎಂದು ಟೆಕ್ಸಾಸ್ ವಿ.ವಿ.ಯ ಜನಸಂಖ್ಯಾ ಸಂಶೋಧನಾ ವಿಭಾಗದ ಸಮಾಜಶಾಸ್ತ್ರಜ್ಞ ಪ್ರೊ . ಜಾನ್ ಮಿರೋಸ್ಕಿ ಅಭಿಪ್ರಾಯ. `ಸೃಜನಶೀಲ ಚಟುವಟಿಕೆನಿರತರಾಗಿದ್ದರೆ, ಸಮಸ್ಯೆಗಳನ್ನು ಎದುರಿಸುವ ಶಕ್ತಿ ಸಂಚಯವಾಗವುದಷ್ಟೇ ಅಲ್ಲ, ಅವಕಾಶಗಳು ತಾವಾಗಿ ಒದಗಿ ಬರುತ್ತವೆ. ನಿಮ್ಮ ಶ್ರಮಕ್ಕೆ ತಕ್ಕ ಹಣ ಸಿಗುತ್ತದೋ ಬಿಡುತ್ತದೋ ಅದು ಬೇರೆಯದೇ ಪ್ರಶ್ನೆ. ಆದರೆ ಅರೋಗ್ಯ ಮಾತ್ರ ಉತ್ತಮವಾಗಿರುತ್ತದೆ. ದೈಹಿಕವಾಗಿ ಹೆಚ್ಚಿನ ಸಮಸ್ಯೆಗಳು ಬರುವುದಿಲ್ಲ' ಎನ್ನುತ್ತಾರೆ ಜಾನ್. ನಿರುದ್ಯೋಗಿಗಳಿಗಿಂತ ಉದ್ಯೋಗಿಗಳೇ ಹೆಚ್ಚು ಸೃಜನಶೀಲರಾಗಿರುತ್ತಾರೆ. ಅವರು ತಮ್ಮ ವಾರಿಗೆಯ ಇತರರಿಗಿಂತ ಚಿಕ್ಕ ವಯಸ್ಸಿನವರಂತೆ ಕಾಣುತ್ತಾರೆ ಎಂದೂ ಸಂಶೋಧನೆಯ ವರದಿ ಹೇಳುತ್ತದೆ. ಒಟ್ಟಿನಲ್ಲಿ ಯಾವುದೇ ಕೆಲಸ ಮಾಡಿ ಹೆಚ್ಚು ಸೃಜನಶೀಲವಾಗಿರಲು ಸಾಧ್ಯ. ಇದೇ ಚಿರಯೌವ್ವನದ ಗುಟ್ಟು ಎಂಬುದು ಸಂಶೋಧನಾ ವರದಿಯ ಪ್ರತಿಪಾದನೆ.

2007: ತಮಿಳುನಾಡಿನ ಪಿ. ಕಾರ್ತಿಕೇಯನ್ ಅವರು ಮುಂಬೈಯಲ್ಲಿ ಮುಕ್ತಾಯವಾದ ಏಷ್ಯನ್ ಜೂನಿಯರ್ ಚೆಸ್ ಚಾಂಪಿಯನ್ ಶಿಪ್ನ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಗೋರೆಗಾಂವ್ ಸ್ಪೋರ್ಟ್ಸ್ ಕ್ಲಬ್ಬಿನಲ್ಲಿ ನಡೆದ ಒಂಬತ್ತನೇ ಹಾಗೂ ಕೊನೆಯ ಸುತ್ತಿನ ಸ್ಪರ್ಧೆಯ ನಂತರ ಕಾರ್ತಿಕೇಯನ್ ಏಳು ಪಾಯಿಂಟುಗಳನ್ನು ಪಡೆಯುವ ಮೂಲಕ ಅಗ್ರಸ್ಥಾನ ಪಡೆದುಕೊಂಡರು.

2006: ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಂ.ಎಂ. ಕಲಬುರ್ಗಿ ಅವರು 2006ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದರು. ಅವರ ಪ್ರಬಂಧ ಸಂಕಲನ `ಮಾರ್ಗ-4' ಕೃತಿಗೆ ಈ ಗೌರವ ಲಭಿಸಿತು. ಡಾ. ಕೆ. ಮರುಳಸಿದ್ದಪ್ಪ, ಪ್ರೊ. ಕಮಲಾ ಹಂಪನಾ, ಮಲ್ಲೇಪುರಂ ಜಿ. ವೆಂಕಟೇಶ್ ಅವರಿದ್ದ ತೀರ್ಪುಗಾರರ ಸಮಿತಿಯು 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣ ಅವರನ್ನು ಕುರಿತು ಕಲಬುರ್ಗಿ ಅವರು ರಚಿಸಿದ ಪ್ರಬಂಧ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು.

2006: ತುರ್ಕಮೆನಿಸ್ಥಾನದ ಸರ್ವಾಧಿಕಾರಿ ಅಧ್ಯಕ್ಷ ಸಪರ್ ಮುರತ್ ನಿಯಾಜೊವ್ (66) ಅವರು ಮಾಸ್ಕೊದಲ್ಲಿ ನಿಧನರಾದರು.

2006: ಆನೆಗಳು ಮಾನವರಿಗೆ ಸರಿ ಸಮಾನ ಎಂಬುದಾಗಿ ಚಾರಿತ್ರಿಕ ತೀರ್ಪು ನೀಡಿದ ರಾಜಸ್ಥಾನ ಹೈಕೋರ್ಟ್, 1988ರಲ್ಲಿ ಅಪಘಾತ ಒಂದರಲ್ಲಿ ಸತ್ತ ಆನೆಗೆ 5,99,440 ರೂಪಾಯಿಗಳ ಪರಿಹಾರ ನೀಡುವಂತೆ ನ್ಯೂ ಇಂಡಿಯಾ ಇನ್ ಶ್ಯೂರೆನ್ಸ್ ಕಂಪೆನಿಗೆ ಆಜ್ಞಾಪಿಸಿತು. ಆನೆಯ ಮಾಲೀಕ ಸಾದಿಕ್ ಖಾನ್ ಅವರಿಗೆ ಈ ಪರಿಹಾರವನ್ನು ನೀಡಬೇಕು ಎಂದು ನ್ಯಾಯಾಲಯ ಆದೇಶ ನೀಡಿತು.

2006: ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಸಾಮಾಜಿಕ ಕ್ಷೇತ್ರದ ಹಿರಿಯ ವಿದ್ವಾಂಸ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಉಡುಪಿಯ ರಂಗಭೂಮಿ ವತಿಯಿಂದ ನೀಡಲಾಗುವ ಸಾಹಿತ್ಯ ಕಲಾ ವಿಭೂಷಣ ಪ್ರಶಸ್ತಿಗೆ ಆಯ್ಕೆಯಾದರು.

2006: ಪತ್ರಕರ್ತ ಹಾಗೂ ಹರಿಕಥಾ ವಿದ್ವಾನ್ ಕೊಡಪಾಡೆ ಶೇಷಗಿರಿ ನಾವಡ (ರಾವ್) ಅವರು ಬೆಂಗಳೂರಿನಲ್ಲಿ ತಮ್ಮ ಪುತ್ರನ ಮನೆಯಲ್ಲಿ ನಿಧನರಾದರು.

2006: ಶಿವಮೊಗ್ಗದಲ್ಲಿ ಕೆ.ಎಸ್. ನಿಸಾರ್ ಅಹಮದ್ ಅಧ್ಯಕ್ಷತೆಯಲ್ಲಿ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಯಿತು. ಕೀಳರಿಮೆ ತೊರೆದು ಕನ್ನಡಕ್ಕಾಗಿ ಪಣತೊಡುವಂತೆ ನಿಸಾರ್ ಕರೆ ನೀಡಿದರು.

2006: ಕ್ರಿಕೆಟ್ ಜಗತ್ತು ಕಂಡ ಸರ್ವಶ್ರೇಷ್ಠ ಲೆಗ್ ಸ್ಪಿನ್ನರ್ ಆಸ್ಟ್ರೇಲಿಯಾ ತಂಡದ ಬೌಲರ್ ಶೇನ್ ಕೀತ್ ವಾರ್ನ್ ತಮ್ಮ ನಿವೃತ್ತಿ ನಿರ್ಧಾರವನ್ನು ಮೆಲ್ಬೋರ್ನಿನಲ್ಲಿ ಘೋಷಿಸಿದರು.

2005: ಹಿಂದೂ ಮೇಲ್ಜಾತಿ ಸ್ತ್ರೀಯೊಬ್ಬಳು ಪರಿಶಿಷ್ಟ ಜಾತಿ/ ಪಂಗಡದ ಪುರುಷನನ್ನು ಮದುವೆಯಾಗುವ ಮೂಲಕ ಮೀಸಲಾತಿ ಕ್ಷೇತ್ರಗಳ್ಲಲಿ ಚುನಾವಣೆಗೆ ಸ್ಪರ್ಧಿಸುವ ಅವಕಾಶದ ಲಾಭ ಪಡೆಯಲಾಗದು ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿತು.ಈ ಸಂಬಂಧ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್.ಬಿ. ಸಿನ್ಹ ಮತ್ತು ಪಿ.ಕೆ. ಬಾಲಸುಬ್ರಮಣಿಯನ್ ಅವರನ್ನು ಒಳಗೊಂಡ ಪೀಠ ತಳ್ಳಿ ಹಾಕಿತು. ಮೇಲ್ಜಾತಿ ಹೆಣ್ಣುಮಗಳನ್ನು ಪರಿಶಿಷ್ಟ ಜಾತಿ/ಪಂಗಡದವರು ಮನೆಗೆ ಸೇರಿಸಿಕೊಳ್ಳುವುದು ಆಕೆಗೆ ಮೀಸಲಾತಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಅರ್ಹತೆ ಆಗುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ಎಸ್. ಸಿ. ಜೈನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಬಳಿಕ ಈ ತೀರ್ಪು ನೀಡಲಾಯಿತು.

2005: ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಹಾಗೂ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಕಲ್ಪಿಸುವ ಸಂಧಾನದ 104ನೇ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಸರ್ವಾನುಮತದಿಂದ ಅಂಗೀಕರಿಸಿತು. ಮಸೂದೆ ಪರ 379 ವಿರುದ್ಧ 1 ಮತ ಬಂದವು. ಮಸೂದೆ ವ್ಯಾಪ್ತಿಯಿಂದ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ವಿನಾಯ್ತಿ ನೀಡುವುದನ್ನು ಬಿಜೆಪಿ ವಿರೋಧಿಸಿತು.

1958: ಫಿಫ್ತ್ ರಿಪಬ್ಲಿಕ್ ಆಫ್ ಫ್ರಾನ್ಸಿನ ಮೊದಲ ಅಧ್ಯಕ್ಷರಾಗಿ ಏಳು ವರ್ಷಗಳ ಅವಧಿಗೆ ಚಾರ್ಲ್ಸ್ ಡಿಗಾಲೆ ಅವರು ಚುನಾಯಿತರಾದರು.

1958: ಸಾಹಿತಿ ಮಮ್ತಾಜ್ ಬೇಗಂ ಜನನ.

1953: ಸಾಹಿತಿ ಪ್ರಭಾಕರ ಶಿಶಿಲ ಜನನ.

1945: ಜನರಲ್ ಜಾರ್ಜ್ ಎಸ್ ಪ್ಯಾಟ್ಟನ್ ಅವರು ಜರ್ಮನಿಯ ಹೈಡೆಲ್ಬರ್ಗಿನಲ್ಲಿ ಕಾರು ಅಪಘಾತದಿಂದ ಉಂಟಾದ ಗಾಯಗಳ ಪರಿಣಾಮವಾಗಿ ಮೃತರಾದರು.

1943: ಸಾಹಿತಿ ಮಾವಿನಕೆರೆ ರಂಗನಾಥನ್ ಜನನ.

1937: ವಾಲ್ಟ್ ಡಿಸ್ನಿ ಅವರ ಮೊತ್ತ ಮೊದಲ ಪೂರ್ಣ ಪ್ರಮಾಣದ ಮಾತನಾಡುವ ಕಾರ್ಟೂನ್ ಸಿನಿಮಾ `ಸ್ನೊ ವೈಟ್ ಅಂಡ್ ದಿ ಸೆವೆನ್ ಡ್ವಾರ್ಫ್ಸ್' ಲಾಸ್ ಏಂಜೆಲಿಸ್ನಲ್ಲಿ ಪ್ರದರ್ಶನಗೊಂಡಿತು.

1932: ನವ್ಯ ಸಾಹಿತ್ಯವನ್ನು ಬೆಳೆಸಿದವರಲ್ಲಿ ಪ್ರಮುಖರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿ ಅವರು ರಾಜಗೋಪಾಲಾಚಾರ್ಯ- ಸತ್ಯಭಾಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ ಜನಿಸಿದರು.

1918: ಆಸ್ಟ್ರಿಯಾದ ರಾಜತಂತ್ರಜ್ಞ, ವಿಶ್ವಸಂಸ್ಥೆಯ ನಾಲ್ಕನೇ ಸೆಕ್ರೆಟರಿ ಜನರಲ್ ಕರ್ಟ್ ವಾಲ್ಡ್ ಹೀಂ ಹುಟ್ಟಿದ ದಿನ. 1972ರಿಂದ

1981ರ ವರೆಗೆ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಗಿದ್ದ ಇವರು 1986ರಿಂದ 1992ರ ವರೆಗೆ ಆಸ್ಟ್ರಿಯಾದ ಅಧ್ಯಕ್ಷರಾಗಿದ್ದರು.

1913: ಆರ್ಥರ್ ವೈನ್ ಅವರ ಮೊತ್ತ ಮೊದಲ `ಕ್ರಾಸ್ ವರ್ಡ್' (ಪದಬಂಧ) `ನ್ಯೂಯಾರ್ಕ್ ವರ್ಲ್ಡ್' ಪತ್ರಿಕೆಯ ವಾರಾಂತ್ಯದ ಪುರವಣಿಯಲ್ಲಿ ಪ್ರಕಟಗೊಂಡಿತು. ಪತ್ರಿಕಾ ಸಂಪಾದಕ ವೈನ್ ಅವರು ತಮ್ಮ ಪತ್ರಿಕೆಯ ಭಾನುವಾರದ ಮ್ಯಾಗಜಿನ್ ವಿಭಾಗದ `ಮೋಜು' ಪುಟದಲ್ಲಿ ಹೊಚ್ಚ ಹೊಸತನ್ನು ಸೇರ್ಪಡೆ ಮಾಡಲು ಬಯಸಿದ್ದರು. ಮೂಲ ಶಬ್ದ, ಚೌಕ ಹಾಗೂ ಪದಕೋಶವನ್ನು ಬಳಸಿ ವಜ್ರಾಕೃತಿಯಲ್ಲಿ ಶಬ್ದಗಳನ್ನು ಪೋಣಿಸುವ ವಿಧಾನವನ್ನು ಅವರು ರೂಪಿಸಿದರು. ಇದರಲ್ಲಿ ಅವರಿಗೆ ಅದ್ಭುತ ಯಶಸ್ಸು ಲಭಿಸಿತು. ಸುಮಾರು ಹತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ `ನ್ಯೂಯಾರ್ಕ್ ವರ್ಲ್ಡ್' ಪತ್ರಿಕೆ ಮಾತ್ರವೇ ಈ `ಕ್ರಾಸ್ ವರ್ಡ್'ಗಳನ್ನು ಪ್ರಕಟಿಸುತ್ತಿತ್ತು.

1909: ಸಾಹಿತಿ ಕೃಷ್ಣಕುಮಾರ ಕಲ್ಲೂರ ಜನನ.

1892: ಬ್ರಿಟಿಷ್ ಪತ್ರಕರ್ತೆ, ಕಥೆಗಾರ್ತಿ ಡೇಮ್ ರೆಬೆಕ್ಕಾ ವೆಸ್ಟ್ (1892-1983) ಹುಟ್ಟಿದ ದಿನ. ಈಕೆ ಯುದ್ಧ ಅಪರಾಧಿಗಳ `ನ್ಯೂರೆಂಬರ್ಗ್ ವಿಚಾರಣೆ'ಗಳ ವರದಿಗಳಿಗಾಗಿ ಖ್ಯಾತಿ ಪಡೆದಾಕೆ.

No comments:

Post a Comment