Showing posts with label ನಾಸಾ. Show all posts
Showing posts with label ನಾಸಾ. Show all posts

Thursday, April 24, 2025

PARYAYA:  ಬನ್ನಿ ನಾನು ಹಬಲ್..‌ ಬಾನಂಗಳದಲ್ಲಿ ವಿಹರಿಸೋಣ..!ನಾನು ಹಬ...

 ಬನ್ನಿ ನಾನು ಹಬಲ್..‌ ಬಾನಂಗಳದಲ್ಲಿ ವಿಹರಿಸೋಣ..!

ನಾನು ಹಬಲ್.‌ ಕಳೆದ 35 ವರ್ಷಗಳಿಂದ ಬಾಹ್ಯಾಕಾಶದಲ್ಲಿ ಇದ್ದುಕೊಂಡೇ ದೂರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.

35 ವರ್ಷಗಳ ಹಿಂದೆ 1990ರ ಏಪ್ರಿಲ್ 24ರಂದು ಅಮೆರಿಕದ ನಾಸಾ ಬಾಹ್ಯಾಕಾಶ ಕೇಂದ್ರವು ಡಿಸ್ಕವರಿ ಬಾಹ್ಯಾಕಾಶ ನೌಕೆಯ ಮೂಲಕ ನನ್ನನ್ನು ಬಾಹ್ಯಾಕಾಶಕ್ಕೆ ಏರಿಸಿತು ಮತ್ತು ಬಾಹ್ಯಾಕಾಶದ ವಿವಿಧ ಮಜಲುಗಳ ಚಿತ್ರ ತೆಗೆಯುವ ಕಾರ್ಯಕ್ಕೆ ನನ್ನನ್ನು ನಿಯೋಜಿಸಿತು.

ಈ 35 ವರ್ಷಗಳಲ್ಲಿ ನಾನು ಬಾಹ್ಯಾಕಾಶದ ಲಕ್ಷಾಂತರ ಚಿತ್ರಗಳನ್ನು ತೆಗೆದು ಭೂಮಿಗೆ ಕಳುಹಿಸಿದ್ದೇನೆ. ನಾನು ಬಾಹ್ಯಾಕಾಶಕ್ಕೆ ಏರಿದ ಈದಿನದ ಆಚರಣೆಗೆ ಈ ಚಿತ್ರಗಳು ಅಪೂರ್ವವಾಗಿದ್ದು ಬ್ರಹ್ಮಾಂಡಕ್ಕೆ ಹೊಸ ಉಡುಗೊರೆಯಾಗಿವೆ ಎಂದು ನನ್ನನ್ನು ಇಲ್ಲಿಗೆ ಕಳುಹಿಸಿದ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಬ್ರಹ್ಮಾಂಡದ ರಹಸ್ಯಗಳನ್ನು ಅರಿಯಲು ನಾನು ಕಳುಹಿಸಿದ ಚಿತ್ರಗಳು ಅನುಕೂಲಕರವಾಗಿವೆಯಂತೆ. ಬಾಹ್ಯಾಕಾಶ ಪಯಣದ ಇತಿಹಾಸದಲ್ಲಿ ನಾನು ಅತ್ಯಂತ ಪ್ರತಿಮಾರೂಪದ ವೈಜ್ಞಾನಿಕ ಸಾಧನಗಳಲ್ಲಿ ಒಂದಾಗಿದ್ದೇನೆ ಎಂದು ಅವರು ಹೇಳುತ್ತಿದ್ದಾರೆ.

ʼಬ್ರಹ್ಮಾಂಡದ ಅಸ್ಪಷ್ಟ ರಹಸ್ಯವನ್ನು ಸ್ಪಷ್ಟ ಕಣ್ಣಿನ ಅನ್ವೇಷಣೆಯಾಗಿ ಪರಿವರ್ತಿಸಿದ ಯಂತ್ರ ನಾನುʼ ಎಂದೂ ವಿಜ್ಞಾನಿಯೊಬ್ಬರು ಬಣ್ಣಿಸಿದ್ದಾರೆ.

"35 ವರ್ಷಗಳ ಹಿಂದೆ ಉಡಾವಣೆಯಾದಾಗ ಹಬಲ್ ವಿಶ್ವಕ್ಕೆ ಹೊಸ ಕಿಟಕಿಯನ್ನು ತೆರೆಯಿತು" ಎಂದು ನಾಸಾ ಪ್ರಧಾನ ಕಚೇರಿಯಲ್ಲಿರುವ ಖಗೋಳ ಭೌತಶಾಸ್ತ್ರ ವಿಭಾಗದ ಕಾರ್ಯಕಾರಿ ನಿರ್ದೇಶಕ ಶಾನ್ ಡೊಮಗಲ್-ಗೋಲ್ಡ್‌ಮನ್ ಹೇಳಿದರಂತೆ.

"ಅದರ ಬೆರಗುಗೊಳಿಸುವ ಚಿತ್ರಣವು ಪ್ರಪಂಚದಾದ್ಯಂತ ಜನರಿಗೆ ಸ್ಫೂರ್ತಿ ನೀಡಿತು ಮತ್ತು ಆ ಚಿತ್ರಗಳ ಹಿಂದಿನ ದತ್ತಾಂಶವು ಆರಂಭಿಕ ಗ್ಯಾಲಕ್ಸಿಗಳಿಂದ ಹಿಡಿದು ನಮ್ಮದೇ ಸೌರವ್ಯೂಹದ ಗ್ರಹಗಳವರೆಗೆ ಎಲ್ಲದರ ಬಗ್ಗೆ ಹಲವಾರು ಅಚ್ಚರಿಗಳನ್ನು ಬಹಿರಂಗ ಪಡಿಸಿತು” ಎಂದು ಹೇಳಿದ್ದು ಗೋಲ್ಡಮನ್ ಮಾರಾಯರೇ -‌ ನಾನಲ್ಲ.”

ಏನೋ, ನನಗೆ ಗೊತ್ತಿಲ್ಲ. ಈ ವರ್ಷ ನನ್ನ ಬಾನಿಗೇರಿದ ವರ್ಷಾಚರಣೆಗಾಗಿ ಒಂದಷ್ಟು ಚಿತ್ರಗಳನ್ನು ವಿಶ್ವಕ್ಕೆ ಕಳುಹಿಸಿಬಿಡಬೇಕು ಎಂದು ತೀರ್ಮಾನಿಸಿ, ನಾಸಾ ಒಂದಷ್ಟು ಚಿತ್ರಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ನನಗೆ ಪ್ರಮುಖ ಅನ್ನಿಸಿದ ಚಿತ್ರಗಳಲ್ಲಿ ಕೆಲವು ಇಲ್ಲಿವೆ ನೋಡಿ.

ಮೇಲಿನಿಂದ ಎಡಕ್ಕೆ: ಡಿಸೆಂಬರ್ 2024 ರ ಕೊನೆಯಲ್ಲಿ ಭೂಮಿಯಿಂದ ಸರಿಸುಮಾರು 61 ಮಿಲಿಯನ್ ಮೈಲುಗಳಷ್ಟು ದೂರದಲ್ಲಿದ್ದಾಗ ಕಂಡು ಬಂದ ಮಂಗಳ ಗ್ರಹ ಇದು. ನನ್ನ ವಿಶಿಷ್ಟ ನೇರಳಾತೀತ ಸಾಮರ್ಥ್ಯದಿಂದ ಬಹಿರಂಗಗೊಂಡ ತೆಳುವಾದ ನೀರು-ಮಂಜುಗಡ್ಡೆಯ ಮೋಡಗಳು ಕೆಂಪು ಗ್ರಹಕ್ಕೆ ಹಿಮಭರಿತ ನೋಟವನ್ನು ನೀಡಿವೆ.

ಮೇಲಿನಿಂದ ಬಲಕ್ಕೆ: ಇದು ಗ್ರಹ ನೀಹಾರಿಕೆ NGC 2899. ನೋಡಲು ಪತಂಗದಂತೆ ಕಾಣುವ ನೀಹಾರಿಕೆಯು ಮಧ್ಯದಲ್ಲಿ ಸುಮಾರು 40,000-ಡಿಗ್ರಿ-ಫ್ಯಾರನ್‌ಹೀಟ್ ಉಷ್ಣಾಂಶದೊಂದಿಗೆ ಸಾಯುತ್ತಿರುವ ನಕ್ಷತ್ರ ಅಂದರೆ ʼಬಿಳಿ ಕುಬ್ಜʼದಿಂದ ಬರುತ್ತಿರುವ ವಿಕಿರಣ ಮತ್ತು ನಾಕ್ಷತ್ರಿಕ ಗಾಳಿಗಳ ಹೊರಹರಿವಿನಿಂದಾಗಿ ಹೀಗೆ ಪತಂಗವನ್ನು ಕೆತ್ತಿ ಇಟ್ಟಿರುವಂತೆ ಕಾಣುತ್ತಿದೆ.

ಕೆಳಗಿನಿಂದ ಎಡಕ್ಕೆ: ರಕ್ಕಸನಂತೆ ಕಾಣುತ್ತಿದೆಯಲ್ಲ? ಇದು ರೋಸೆಟ್ ನೀಹಾರಿಕೆ. ಇದು ಬೃಹತ್ ನಕ್ಷತ್ರವೊಂದು ರೂಪುಗೊಳ್ಳುತ್ತಿರುವ ಪ್ರದೇಶದ  ಸಣ್ಣ ಭಾಗ. ಧೂಳಿನಿಂದ ಕೂಡಿದ ಹೈಡ್ರೋಜನ್ ಅನಿಲದ ಕರಿಯ ಮೋಡಗಳು ಇಂತಹ ರೂಪವನ್ನು ಇದಕ್ಕೆ ನೀಡಿವೆ.

ಕೆಳಗಿನಿಂದ ಬಲಭಾಗಕ್ಕೆ: ಇದು NGC 5335 ನಕ್ಷತ್ರಪುಂಜ, ಇದು ಒಂದು ಚಪ್ಪಟೆಯಾದ ಸುರುಳಿಯಾಕಾರದ ನಕ್ಷತ್ರಪುಂಜ. ಇದರ ಡಿಸ್ಕ್‌ನಾದ್ಯಂತ ನಕ್ಷತ್ರ ರಚನೆಯ ತೇಪೆಯ ಸ್ಟ್ರೀಮರ್‌ಗಳಿವೆ. ನಕ್ಷತ್ರಪುಂಜದ ಮಧ್ಯಭಾಗವನ್ನು ಗಮನಾರ್ಹವಾದ ಲಟ್ಟಣಿಗೆಯಂತಹ ರಚನೆಯು ವಿಭಜಿಸುತ್ತದೆ.

ಈ ಚಿತ್ರಗಳಿಗೆ ಸಂಬಂಧಿಸಿದಂತೆ ನಾಸಾದ ವಿಜ್ಞಾನಿಯೊಬ್ಬರು ನೀಡಿದ ವಿವರಣೆಯ ವಿಡಿಯೋ 👇👇👇 ಒಂದನ್ನು ಕೂಡಾ ನಾಸಾ ಬಿಡುಗಡೆ ಮಾಡಿದೆ.


ಹೆಚ್ಚಿಲ್ಲ, ಒಂದೈದು ನಿಮಿಷ ಬಿಡುವು ಮಾಡಿಕೊಂಡು ಈ ವಿಡಿಯೋ ಒಳಹೊಕ್ಕು ನೋಡಿ. ನಿಮ್ಮ ಭೂಮಿಯಾಚೆ ಇರುವ ಈ ನಭೋ ಮಂಡಲದಲ್ಲಿ ಎಂತೆಂತಹ ವಿಸ್ಮಯಗಳಿವೆ ಎಂಬುದು ನಿಮಗೆ ಗೊತ್ತಾಗುತ್ತದೆ. ಈ ಬಾಹ್ಯಾಕಾಶ ಯಾನ ಅದೆಷ್ಟು ಸುಂದರ ಎಂದು ನಂತರ ನೀವೇ ಮೂಗಿನ ಮೇಲೆ ಬೆರಳು ಇಡುತ್ತೀರಿ. ಖಂಡಿತ.

-ನೆತ್ರಕೆರೆ ಉದಯಶಂಕರ.

ಇವುಗಳನ್ನೂ ಓದಿ:

ಇಸ್ರೋದಿಂದ ಕೋವಿಡ್ ಲಾಕ್‌ಡೌನ್ ನಂತರ ಮೊದಲ ಭೂ ವೀಕ್ಷಣೆ ಉಪಗ್ರಹ ಉಡಾವಣೆ
ಮೂರ್ಜೆ ಸುನಿತಾ ಪ್ರಭುವಿಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ

Indian-American Scientist to Get Rare Honour
Prestigious INSA Teachers Award to Prof. R Vasudeva
Ancient India had Planes: Claim at Indian Science Congress

PARYAYA:  ಬನ್ನಿ ನಾನು ಹಬಲ್..‌ ಬಾನಂಗಳದಲ್ಲಿ ವಿಹರಿಸೋಣ..!ನಾನು ಹಬ...:   ಬನ್ನಿ ನಾನು ಹಬಲ್..‌ ಬಾನಂಗಳದಲ್ಲಿ ವಿಹರಿಸೋಣ..! ನಾ ನು ಹಬಲ್ .‌ ಕಳೆದ 35 ವರ್ಷಗ ಳಿಂದ ಬಾಹ್ಯಾಕಾಶದಲ್ಲಿ ಇದ್ದುಕೊಂಡೇ ದೂರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದ್ದ...

Saturday, December 8, 2018

ಭೂಮಿಗೆ ಕೇಳಿಸಿತು ಮೊದಲ ‘ಮಂಗಳ ಧ್ವನಿ’

ಭೂಮಿಗೆ ಕೇಳಿಸಿತು ಮೊದಲ ‘ಮಂಗಳ ಧ್ವನಿ’
ನೀವೂ ಅದನ್ನು ಇಲ್ಲಿ ಆಲಿಸಬಹುದು!
ಕೇಪ್ ಕೆನೆವರಾಲ್: ಮಂಗಳಗ್ರಹದಲ್ಲಿ ಬೀಸುವ ಗಾಳಿಯ ಸದ್ದನ್ನು ಭೂಮಿಯ ಮೇಲಿನ ಮಾನವರು ಇದೀಗ ಆಲಿಸಬಹುದು. ಕೆಂಪು ಗ್ರಹದಲ್ಲಿ ಇಳಿದಿರುವ ನಾಸಾದ  ಇನ್ ಸೈಟ್ ಲ್ಯಾಂಡರ್ ಮಂಗಳನ ಅಂಗಳದಲ್ಲಿ ಬೀಸುವ ಗಾಳಿಯ  ಸದ್ದನ್ನು ರೆಕಾರ್ಡ್ ಮಾಡಿ ಇದೇ ಮೊತ್ತ ಮೊದಲ ಬಾರಿಗೆ ಭೂಮಿಗೆ ಕಳುಹಿಸಿದೆ.

2018 ನವೆಂಬರ್ 26ರಂದು ಮಂಗಳ ಗ್ರಹದಲ್ಲಿ ಇಳಿದಿರುವ ನಾಸಾದ ಮಾನವ ರಹಿತ ಸಂಶೋಧನಾ ನೌಕೆ ಇನ್ ಸೈಟ್  ಅಲ್ಲಿ ಬೀಸುತ್ತಿರುವ 10-15 ಎಂಪಿ ಎಚ್ (ಸೆಕೆಂಡಿಗೆ 5-7 ಮೀಟರ್) ವೇಗದ ಗಾಳಿಯನ್ನು ತನ್ನ ಸೌರಫಲಕದ ಮೇಲೆ ಹಾದು ಹೋಗುವಾಗ ಧ್ವನಿಮುದ್ರಿಸಿಕೊಂಡು ಭೂಮಿಗೆ ರವಾನಿಸಿದೆ.

 ಲ್ಯಾಂಡರ್‌ನ ಜೆಟ್‌ ಪ್ರೊಪಲ್ಷನ್ ಪ್ರಯೋಗಾಲಯ ಅನ್ಯಗ್ರಹದ ಗಾಳಿಯ ಸದ್ದಿನ ಧ್ವನಿಮುದ್ರಿಕೆಯನ್ನು 2018 ಡಿಸೆಂಬರ್ 7ರ ಶುಕ್ರವಾರ (ಭಾರತೀಯ ಕಾಲಮಾನದ ಪ್ರಕಾರ ಡಿಸೆಂಬರ್ 8ರ ಶನಿವಾರ) ಬಿಡುಗಡೆ ಮಾಡಿದೆ. ಮಂಗಳನ ಅಂಗಳದಲ್ಲಿ ಇಳಿದ ಮೊದಲ ವಾರವೇ ಅತ್ಯಂತ ಕ್ಷೀಣ ತರಂಗಗಳ ಧ್ವನಿಯನ್ನು ಗ್ರಹಿಸಿದ ಇನ್‌ಸೈಟ್‌ ಲ್ಯಾಂಡರ್‌ ಅದನ್ನು ದಾಖಲಿಸಿ ಭೂಮಿಗೆ ಕಳುಹಿಸಿದೆ.

ಮಂಗಳನ ಈ ಮೊದಲ ಧ್ವನಿಯನ್ನು ಮಾನವನ ಕಿವಿಗೆ ಕೇಳಿಸುವಂತೆ ಇನ್ ಸೈಟ್ ಲ್ಯಾಂಡರ್ ಸೆರೆ ಹಿಡಿದಿದೆ ಎಂದು ನಾಸಾದ ಸಂಶೋಧಕರು ಪ್ರಕಟಿಸಿದರು.

'ಇದು ಬೇಸಿಗೆ ಮಧ್ಯಾಹ್ನ ಹೊರಗೆ ಕುಳಿತಾಗ ಬೀಸುವ ಗಾಳಿಯ ಸದ್ದನ್ನು ನೆನಪಿಸುವಂತಿದೆ... ಮಂಗಳನ ಮೇಲಿರುವ ಇನ್‌ಸೈಟ್‌ ಲ್ಯಾಂಡರ್‌ ನೌಕೆಯಲ್ಲಿ ನೀವು ಕುಳಿತಿದ್ದರೆ ಈ ಸದ್ದು ಕೇಳಬಹುದು' ಎಂದು ಕಾರ್ನೆಲ್‌ ಯುನಿವರ್ಸಿಟಿಯ ಸಂಶೋಧಕ ಡಾನ್ ಬ್ಯಾನ್‌ಫೀಲ್ಡ್ ಸುದ್ದಿಗಾರರಿಗೆ ತಿಳಿಸಿದರು.

ಈ ಧ್ವನಿ ಹೊರ ಜಗತ್ತಿನದ್ದೇ ಎಂಬುದರಲ್ಲಿ ಸಂದೇಹವಿಲ್ಲ ಎಂದು ಯೋಜನೆಯಲ್ಲಿ ಪಾಲ್ಗೊಂಡ ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ.

'
ಇದು ಭೂಮಿಯಲ್ಲಿ ನಾವು ಕೇಳುವ ಸದ್ದಿಗಿಂತ ಭಿನ್ನವಾಗಿದೆ. ಈ ಸಂಕೇತಗಳು ನಮ್ಮನ್ನು ತಲುವುವಾಗ ಇಷ್ಟು ಕ್ಷೀಣವಾಗಬೇಕಾದರೆ ನಾವು ಆ ಜಗತ್ತಿನಿಂದ ಅದೆಷ್ಟು ದೂರದಲ್ಲಿದ್ದೇವೆ ಎಂದು ಕಲ್ಪಿಸಿಕೊಳ್ಳಬಹುದು' ಎಂದು ಲಂಡನ್ನಿನ ಇಂಪೀರಿಯಲ್ ಕಾಲೇಜಿನ ಥೋಮಸ್ ಪೈಕ್ ಹೇಳುತ್ತಾರೆ.

ಇನ್‌ಸೈಟ್‌ನ ಸೌರ ಫಲಕಕ್ಕೆ ಎದುರಾಗಿ ಬೀಸುವ ಗಾಳಿಯ ಸದ್ದು ಅದು. ಆ ಗಾಳಿಗೆ ವೇಗಕ್ಕೆ ಇಡೀ ನೌಕೆ ಕಂಪಿಸುತ್ತಿದ್ದು ಅದರಿಂದ ಹೊಮ್ಮಿದ ಸದ್ದು ಅದಾಗಿರಬೇಕು. ಲ್ಯಾಂಡರ್‌ನ ಒಳಗೆ ಭೂಮಿಯ ಗಾಳಿಯ ಒತ್ತಡದಲ್ಲಿರುವ ಸೆನ್ಸರ್‌ಗಳು ಮುದ್ರಿಸಿಕೊಂಡ ಧ್ವನಿ ಸಂಕೇತಗಳಿವು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕ್ಷೀಣವಾದ ಈ ಸದ್ದನ್ನು ಹೆಡ್ ಪೋನ್ ಹಾಕಿಕೊಂಡು ಸ್ಪಷ್ಟವಾಗಿ ಕೇಳಿಸಿಕೊಳ್ಳಬಹುದು.

ಮಂಗಳದ ಗಾಳಿಯ ಆಡಿಯೊ ಟ್ರ್ಯಾಕ್ www.nasa.gov/insightmarswind ನಲ್ಲಿ ಲಭ್ಯವಿದೆ.

ಈ ಕೆಳಗೆ ಕ್ಲಿಕ್ ಮಾಡಿ ನೀವು ಅದನ್ನು ಕೇಳಬಹುದು: 



Saturday, September 15, 2018

ಭೂಮಿಯ ಮಂಜುಗಡ್ಡೆ ಪದರ ನಷ್ಟ ಪತ್ತೆ ಹಚ್ಚುವ ಬಾಹ್ಯಾಕಾಶ ಲೇಸರ್ ಉಪಗ್ರಹ


ಭೂಮಿಯ ಮಂಜುಗಡ್ಡೆ ಪದರ ನಷ್ಟ ಪತ್ತೆ
ಹಚ್ಚುವ ಬಾಹ್ಯಾಕಾಶ ಲೇಸರ್
ಉಪಗ್ರಹ

ಲಾಸ್ ಏಂಜೆಲಿಸ್: ಭೂಮಿಯ ಮೇಲಿನ ಮಂಜುಗಡ್ಡೆ ಪದರ ಕರಗುವಿಕೆಯನ್ನು ಪತ್ತೆ ಹಚ್ಚಬಲ್ಲಂತಹ ಅತ್ಯಾಧುನಿಕ ಬಾಹ್ಯಾಕಾಶ ಲೇಸರ್ ಉಪಗ್ರಹವನ್ನು ನಾಸಾ ಸಂಸ್ಥೆಯು 2018ರ ಸೆಪ್ಟೆಂಬರ್ 15ರ ಶನಿವಾರ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿತು. ಈ ಅತ್ಯಾಧುನಿಕ ಉಪಗ್ರಹವು ಭೂಮಿಯಾದ್ಯಂತ ಮಂಜುಗಡ್ಡೆ ಪದರ ಕರಗುವಿಕೆಯನ್ನು ಪತ್ತೆ ಹಚ್ಚಿ ನಿಖರ ಮಾಹಿತಿ ಒದಗಿಸಲಿದೆ.

ಮಂಜುಗಡೆ ಪದರಗಳ ನಷ್ಟದಿಂದ ಸಮುದ್ರದ ನೀರಿನ ಮಟ್ಟ ಏರಿಕೆ ಹಾಗೂ ಹವಾಮಾನ ವ್ಯತಾಸದ ಬಗ್ಗೆ ಮುನ್ಸೂಚನೆ ನೀಡಲು ಇದರಿಂದ ಸಾಧ್ಯವಾಗಲಿದೆ.

ಈದಿನ ಬೆಳಗ್ಗೆ ಸೂರ್ಯೋದಯಕ್ಕೂ ಮುಂಚೆ ೬.೦೨ ಗಂಟೆಗೆ, ೧ ಬಿಲಿಯನ್ (೧೦೦ ಕೋಟಿ) ಡಾಲರ್ ವೆಚ್ಚದ, ಅರ್ಧ ಟನ್ ತೂಕದ ಐಸ್ ಸ್ಯಾಟ್ -೨ ಉಪಗ್ರಹವನ್ನು ಕ್ಯಾಲಿಫೋರ್ನಿಯಾದ ವಾಂಡೆನ್‌ಬರ್ಗ್ ವಾಯುಪಡೆ ನೆಲೆಯಿಂದ ಡೆಲ್ಟಾ ೨ ರಾಕೆಟ್ ಮೂಲಕ ಭೂ ಕಕ್ಷೆಗೆ ಉಡಾವಣೆ ಮಾಡಲಾಯಿತು ಎಂದು ನಾಸಾ ತಿಳಿಸಿತು.

‘ಐಸ್
‌ಸ್ಯಾಟ್-೨ ಉಡಾವಣೆ ಮೂಲಕ ನಮ್ಮ ಭೂಮಿಯಲ್ಲಿ ಬದಲಾಗುತ್ತಿರುವ ಮಂಜುಗಡೆ ಪದರದ ಬಗ್ಗೆ ನಿರಂತರ ನಿಖರ ಮಾಹಿತಿ ಪಡೆಯುವುದು, ವಿಶೇಷವಾಗಿ ಉತ್ತರ ಮತ್ತು ದಕ್ಷಿಣ ಧ್ರುವಗಳ ಹಿಮ ಪದರಗಳ ನಷ್ಟ ಬಗ್ಗೆ ಕಣ್ಣಿಡುವುದು ಸಾಧ್ಯವಾಗಲಿದೆ’ ಎಂದು ವಿಜ್ಞಾನಿಗಳು ಹೇಳಿದರು.

ಕಳೆದ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ನಾಸಾ ಭೂಮಿಯ ಮೇಲಿನ ಮಂಜುಗಡ್ಡೆ ಪದರವನ್ನು ಅಳೆಯುವಂತಹ ಇಂತಹ ಉಪಕರಣವನ್ನು ಹೊಂದಿದ ಉಪಗ್ರಹವನ್ನು ಭೂ ಕಕ್ಷೆಗೆ ಕಳುಹಿಸಿತ್ತು.

ಹಿಂದೆ, ೨೦೦೩ರಲ್ಲಿ ಐಸ್ ಸ್ಯಾಟ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ಇದು ೨೦೦೯ರಲ್ಲಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತ್ತು.

ಮೊದಲ ಐಸ್‌ಸ್ಯಾಟ್ ಉಪಗ್ರಹವು ಸಮುದ್ರದ ಮೇಲಿನ ಮಂಜುಗಡ್ಡೆ ತೆಳ್ಳಗಾಗುತ್ತಿರುವ ಬಗ್ಗೆ ಮತ್ತು ಗೀನ್ ಲ್ಯಾಂಡ್ ಮತ್ತು ಅಂಟಾರ್ಕ್ಟಿಕಾದಲ್ಲಿ ಮಂಜುಗಡ್ಡೆ ಪದರ ಕರಗುತ್ತಿರುವುದನ್ನು ಪತ್ತೆ ಹಚ್ಚಿ ಮಾಹಿತಿ ನೀಡಿತ್ತು.

ಕಳೆದ ೯ ವರ್ಷಗಳಲ್ಲಿ ಆಪರೇಷನ್ ಐಸ್ ಬ್ರಿಜ್ ಹೆಸರಿನ ವಿಮಾನಯಾನ ಸಾಹಸದ ಮೂಲಕ ಉತ್ತರ ಮತ್ತು ದಕ್ಷಿಣ ಧ್ರುವಗಳ (ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್) ಮೇಲೆ ಹಾರಾಡಿ ಬದಲಾಗುತ್ತಿರುವ ಮಂಜುಗಡ್ಡೆಗಳ ಪದರದ ಅಳತೆ ಮಾಡುವ ಯತ್ನ ನಡೆಸಲಾಗಿತ್ತು.

ಆದರೆ ಬಾಹ್ಯಾಕಾಶದಿಂದ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಭೂಮಿಯ ಮೇಲಿನ ಮಂಜುಗಡ್ಡೆ ಪದರವನ್ನು ಅಳೆಯುವುದು ಅತ್ಯಂತ ಹೆಚ್ಚು ನಿಖರವಾಗಿರುತ್ತದೆ.

ಹೊಸ ಲೇಸರ್ ಉಪಕರಣವು ಒಂದು ಸೆಕೆಂಡ್ ನಲ್ಲಿ ೧೦,೦೦೦ ಸಲ ಲೇಸರ್ ಬೆಳಕನ್ನು ಹೊಮ್ಮ ಬಲ್ಲುದು. ಮೂಲ ಐಸ್ ಸ್ಯಾಟ್ ಉಪಗ್ರಹದ ಉಪಕರಣ ಸೆಕೆಂಡ್ ಗೆ ೪೦ ಬಾರಿ ಮಾತ್ರ ಲೇಸರ್ ಬೆಳಕನ್ನು ಹೊಮ್ಮುವ ಸಾಮರ್ಥ್ಯ ಹೊಂದಿತ್ತು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ: