ನಾನು ಮೆಚ್ಚಿದ ವಾಟ್ಸಪ್

Monday, December 17, 2018

ಇಂದಿನ ಇತಿಹಾಸ History Today ಡಿಸೆಂಬರ್ 17

ಇಂದಿನ ಇತಿಹಾಸ History Today ಡಿಸೆಂಬರ್  17
2018: ನವದೆಹಲಿ: ೧೯೮೪ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರನ್ನು ಸಿಖ್ ಅಂಗರಕ್ಷಕರು ಕೊಂದ ಬಳಿಕ ಸಂಭವಿಸಿದ ಸಿಖ್ ವಿರೋಧಿ ದಂಗೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರನ್ನು ಖುಲಾಸೆ ಮಾಡಿ ನೀಡಲಾಗಿದ್ದ ತೀರ್ಪನ್ನು ರದ್ದು ಪಡಿಸಿದ ದೆಹಲಿ ಹೈಕೋರ್ಟ್, ಹತ್ಯೆಗೆ ಕ್ರಿಮಿನಲ್ ಸಂಚು ರೂಪಿಸಿದ್ದಕ್ಕಾಗಿ ಸಜ್ಜನ್ ಕುಮಾರ್ ಅವರಿಗೆ ಜೀವಾವಧಿ ಸಜೆ ವಿಧಿಸಿತು. ಇದರೊಂದಿಗೆ ೨೦೧೯ರಲ್ಲಿ ನಡೆಯಲಿರುವ ಮಹಾಚುನಾವಣೆಗೆ ಮುನ್ನ ಕಾಂಗ್ರೆಸ್ಸಿಗೆ ಭಾರೀ ಹಿನ್ನಡೆಯಾದರೆ, ಕಾಂಗ್ರೆಸ್ ವಿರುದ್ಧ ದಾಳಿಗಾಗಿ ಬಿಜೆಪಿ ಬತ್ತಳಿಕೆಗೆ ಇನ್ನೊಂದು ಅಸ್ತ್ರ ಬಂದು ಸೇರಿದಂತಾಯಿತು. ನ್ಯಾಯಮೂರ್ತಿಗಳಾದ ಎಸ್. ಮುರಳೀಧರ್ ಮತ್ತು ವಿನೋದ ಗೋಯೆಲ್ ಅವರನ್ನು ಒಳಗೊಂಡ ಪೀಠವು ಸಿಕ್ಖರ ವಿರುದ್ಧ ಪ್ರಚೋದನಾತ್ಮಕ ಭಾಷಣಗಳ ಮೂಲಕ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಹಾಗೂ ಕೋಮು ಸೌಹಾರ್ದ ಹಾಳುಗೆಡವಿದ ಅಪರಾಧಗಳಿಗಾಗಿ ಸಜ್ಜನ್ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ’ಸತ್ಯ ಜಯಿಸುತ್ತದೆ ಮತ್ತು ನ್ಯಾಯ ಲಭಿಸುತ್ತದೆ ಎಂದು ಪೀಠ ಹೇಳಿತು. ಕಾಂಗ್ರೆಸ್ ನಾಯಕನಿಗೆ ನೀಡಲಾಗಿರುವ ಜೀವಾವಧಿ ಸಜೆಯು ಅವರ ಬದುಕಿನ ಉಳಿದ ಅವಧಿಗೆ ಅನ್ವಯಿಸುತ್ತದೆ ಎಂದು ಹೇಳಿದ ನ್ಯಾಯಾಲಯ ಡಿಸೆಂಬರ್ ೩೧ರ ಒಳಗಾಗಿ ಶರಣಾಗುವಂತೆ ಸಜ್ಜನ್ ಕುಮಾರ್ ಅವರಿಗೆ ನಿರ್ದೇಶನ ನೀಡಿತು. ಡಿಸೆಂಬರ್ ೩೧ರವರೆಗೆ ಸಜ್ಜನ್ ಕುಮಾರ್ ಅವರು ದೆಹಲಿ ನಗರವನ್ನು ತ್ಯಜಿಸುವಂತಿಲ್ಲ ಎಂದೂ ಕೋರ್ಟ್ ನಿರ್ಬಂಧ ವಿಧಿಸಿತು. ಸಿಖ್ ವಿರೋಧಿ ದಂಗೆಗಳನ್ನುರಾಜಕೀಯ ಕೃಪಾಶ್ರಯ ಹೊಂದಿದ್ದ ವ್ಯಕ್ತಿಗಳು ನಡೆಸಿದ ಮಾನವೀಯತೆ ವಿರುದ್ಧದ ಅಪರಾಧ ಎಂದು ಕೋರ್ಟ್ ಬಣ್ಣಿಸಿತು. ಹತ್ಯೆಗೀಡಾದ ಸಿಖ್ ಕುಟುಂಬದ ಕೇಹರ್ ಸಿಂಗ್, ಗುರುಪ್ರೀತ್ ಸಿಂಗ್, ರಘುವೆಂದರ್ ಸಿಂಗ್, ನರೇಂದ್ರ ಪಾಲ್ ಸಿಂಗ್, ಮತ್ತು ಕುಲದೀಪ್ ಸಿಂಗ್ ಅವರನ್ನು ದೆಹಲಿ ಕಂಟೋನ್ಮೆಂಟಿನ ರಾಜ್ ನಗರ ಪ್ರದೇಶದಲ್ಲಿ ೧೯೮೪ರ ನವೆಂಬರ್ ೧ರಂದು ಹತ್ಯೆಗೈದ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಅವರನ್ನು ಖುಲಾಸೆಗೊಳಿಸಿದ್ದನ್ನು ವಿರೋಧಿಸಿ ಕೇಂದ್ರೀಯ ತನಿಖಾ ಸಂಸ್ಥೆ ಸಲ್ಲಿಸಿದ್ದ  ಮೇಲ್ಮನವಿಯನ್ನು ಹೈಕೋರ್ಟ್ ಭಾಗಶಃ ಅಂಗೀಕರಿಸಿತು. ತೀರ್ಪನ್ನು ಶಿಕ್ಷಿತರಾದ ಇತರ ಅಪರಾಧಿಗಳೂ ಪ್ರಶ್ನಿಸಿದ್ದರು. ಇದೇ ಪ್ರಕರಣದಲ್ಲಿ ಹೈಕೋರ್ಟ್ ಕಾಂಗ್ರೆಸ್ಸಿನ ಮಾಜಿ ನಗರಪಾಲಿಕೆ ಸದಸ್ಯ ಬಲವಾನ್ ಖೋಖರ್, ನಿವೃತ್ತ ನೌಕಾಧಿಕಾರಿ ಕ್ಯಾಪ್ಟನ್ ಭಾಗ್ಮಲ್, ಗಿರಿಧಾರಿ ಲಾಲ್ ಮತ್ತು ಶಾಸಕರಾದ ಮಹೇಂದರ್ ಯಾದವ್ ಮತ್ತು ಕಿಶನ್ ಖೋಖರ್ ಅವರಿಗೆ ನೀಡಲಾದ ವಿವಿಧ ಶಿಕ್ಷೆಗಳನ್ನು ಹೈಕೋರ್ಟ್ ಎತ್ತಿ ಹಿಡಿಯಿತು. ಅಪರಾಧಿಗಳಿಗೆ ಸಿಖ್ ಕುಟುಂಬಗಳ ಮನೆಗಳನ್ನು ಮತ್ತು ಗುರುದ್ವಾರ ಒಂದನ್ನು ಗಲಭೆಗಳ ಸಂದರ್ಭದಲ್ಲಿ ಸುಟ್ಟು ಹಾಕಲು ಕ್ರಿಮಿನಲ್ ಸಂಚು ರೂಪಿಸಿದ್ದಕ್ಕಾಗಿ ನ್ಯಾಯಾಲಯ  ಶಿಕ್ಷೆ ವಿಧಿಸಿತು. ನಾಯಕರಿಗೂ ಡಿಸೆಂಬರ್ ೩೧ರ ಒಳಗೆ ಶರಣಾಗುವಂತೆ ನಿರ್ದೇಶಿಸಿದ ಹೈಕೋರ್ಟ್, ಅದಕ್ಕೆ ಮುನ್ನ ನಗರದಿಂದ ಹೊರಹೋಗದಂತೆ ನಿರ್ಬಧ ವಿಧಿಸಿತು. ನಿರ್ದೇಶನದೊಂದಿಗೆ ವಿಚಾರಣಾ ನ್ಯಾಯಾಲಯದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಐವರು ಅಪರಾಧಿಗಳು ತಮಗೆ ಶಿಕ್ಷೆ ವಿಧಿಸಿದ್ದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಗಳನ್ನು ಪೀಠ ವಜಾಗೊಳಿಸಿತು೨೦೧೩ರ ಮೇ ತಿಂಗಳಲ್ಲಿ ವಿಚಾರಣಾ ನ್ಯಾಯಾಲಯವು ಕುಮಾರ್ ಅವರನ್ನು ಖುಲಾಸೆಗೊಳಿಸಿ, ಬಲ್ವಾನ್ ಖೋಖರ್, ಭಾಗ್ಮಲ್ ಮತ್ತು ಲಾಲ್ ಅವರಿಗೆ ಜೀವಾವಧಿ ಸಜೆ ಮತ್ತು ಯಾದವ್ ಮತ್ತು ಕಿಷನ್ ಖೋಖರ್ ಅವರಿಗೆ ಮೂರು ವರ್ಷಗಳ ಸೆರೆವಾಸವನ್ನು ವಿಧಿಸಿತ್ತು. ಬಲ್ವಾನ್ ಖೋಖರ್ಭಾಗ್ಮಲ್ ಮತ್ತು ಲಾಲ್ ಅವರ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದ ಹೈಕೋರ್ಟ್, ಯಾದವ್ ಮತ್ತು ಕಿಷನ್ ಖೋಖರ್ ಅವರಿಗೆ ವಿಧಿಸಿದ್ದ ಸೆರೆವಾಸವನ್ನು ೧೦ ವರ್ಷಗಳಿಗೆ ಏರಿಸಿತು. ಮೊದಲೇ ಮುಕ್ತಾಯಗೊಳಿಸಲಾಗಿದ್ದ  ೧೯೮೪ರ ಇತರ ಐದು ಸಿಖ್ ವಿರೋಧಿ ದಂಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾದವ್ ಸೇರಿದಂತೆ ೧೧ ಆರೋಪಿಗಳಿಗೆ ಕಳೆದ ವರ್ಷ ಮಾರ್ಚ್ ೨೯ರಂದು ಹೈಕೋರ್ಟ್ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಪ್ರಕರಣಗಳ ವಿಚಾರಣೆಯನ್ನು ಇನ್ನೊಂದು ವಿಭಾಗೀಯ ಪೀಠ ನಡೆಸಿತು. ಖುಲಾಸೆಗೊಂಡಿದ್ದ ಆರೋಪಿಗಳಿಗೆಮಾನವತೆ ವಿರುದ್ಧ ಭಯಾನಕ ಅಪರಾಧಗಳನ್ನು ಎಸಗಿದ ಆಪಾದನೆಗಳು ಬಂದಿರುವ ಕಾರಣ ನ್ಯಾಯಾಲಯವು ನಿಮ್ಮ ವಿರುದ್ಧ ಮರುವಿಚಾರಣೆಗೆ ಆದೇಶಿಬಾರದೇಕೆ? ಎಂದು ಕೋರ್ಟ್ ಪ್ರಶ್ನಿಸಿತ್ತು. ಕೋಮು ಉನ್ಮಾದ: ೧೯೮೪ರ ಸಿಖ್ ವಿರೋಧಿ ದಂಗೆಗಳನ್ನುಕೋಮು ಉನ್ಮಾದ ಎಂದು ಹೈಕೋರ್ಟ್ ಬಣ್ಣಿಸಿತು. ಸಜ್ಜನ್ ಕುಮಾರ್ಗೆ ಜೀವಾವಧಿ ಶಿಕ್ಷೆಯ ಜೊತೆಗೆ ಲಕ್ಷ ರೂಪಾಯಿಗಳ ದಂಡ ಹಾಗೂ ಇತರ ಎಲ್ಲ ಅಪರಾಧಿಗಳಿಗೆ ತಲಾ ಒಂದು ಲಕ್ಷ ರೂಪಾಯಿಗಳ ದಂಡವನ್ನೂ ಪೀಠ ವಿಧಿಸಿತು. ಸಿಖ್ ವಿರೋಧೀ ದಂಗೆಗಳಲ್ಲಿ ದೆಹಲಿಯೊಂದರಲ್ಲೇ ,೭೦೦ಕ್ಕೂ ಹೆಚ್ಚು ಸಿಕ್ಖರ ಕಗ್ಗೊಲೆ ಹಾಗೂ ಅಸಂಖ್ಯ ಆಸ್ತಿಪಾಸ್ತಿ ಧ್ವಂಸ ಕೃತ್ಯಗಳನ್ನು ಎಸಗಲಾಗಿತ್ತುಕಾನೂನುಯಂತ್ರ ಸಂಪೂರ್ಣವಾಗಿ ಕುಸಿದು ಬಿದ್ದು, ಎಲ್ಲರಿಗೂ ಮುಕ್ತ ಸ್ವಾತಂತ್ರ್ಯ ಎಂಬಂತಹ ಸ್ಥಿತಿ ತಲೆದೋರಿತ್ತು. ಅತ್ಯಾಚಾರಗಳ ಮರು ಆಘಾತಗಳು ಈಗಲೂ ಅರಿವಿಗೆ ಬರುತ್ತವೆ ಎಂದು ೨೦೩ ಪುಟಗಳ ತಮ್ಮ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಮುರಳೀಧರ್ ಮತ್ತು ವಿನೋದ ಗೋಯೆಲ್ ಬಣ್ಣಿಸಿದರು.೧೯೪೮ರ ಕೋಮುದಂಗೆಗಳ ಪರಿಸ್ಥಿತಿಯನ್ನು ಉಲ್ಲೇಖಿಸಿದ ತೀರ್ಪು, ’೨೭ ವರ್ಷಗಳ ಬಳಿಕ ರಾಷ್ಟ್ರವು ಇನ್ನೊಂದು ಭೀಕರ ಮಾನವ ದುರಂತವನ್ನು ಕಂಡಿತು. ೧೯೮೪ರ ಅಕ್ಟೋಬರ್ ೩೧ರಂದು ಆಗಿನ ಪ್ರಧಾನಿ ಇಂದಿರಾಗಾಂಧಿ ಅವರನ್ನು ಸಿಖ್ ಅಂಗರಕ್ಷಕರು ಹತ್ಯೆಗೈದ ಬಳಿಕ ಎಲ್ಲೆಡೆ ಕೋಮು ಉನ್ಮಾದ ರಾರಾಜಿಸಿತು ಎಂದು ಹೇಳಿತು. ಸಹಸ್ರಾರು ಸಿಕ್ಖರನ್ನು ಬಲಿ ಪಡೆದ ಹಿಂಸಾಚಾರದ ಅಪರಾಧಿಗಳು ರಾಜಾಶ್ರಯ ಪಡೆದು ಎರಡು ದಶಕಗಳಿಗೂ ಹೆಚ್ಚು ಕಾಲ ಶಿಕ್ಷೆಯನ್ನು ತಪ್ಪಿಸಿಕೊಂಡಿದ್ದಾರೆ ಮತ್ತು ಕಾನೂನು ಕ್ರಮದಿಂದ ಪಾರಾಗಿದ್ದಾರೆ ಎಂದು ಪೀಠ ಹೇಳಿತು. ಹಿಂಸಾಚಾರದ ತನಿಖೆಯಲ್ಲಿ ಪೊಲೀಸರು ಸಂಪೂರ್ಣ ವಿಫಲರಾದರು ಎಂದೂ ಪೀಠ ಹೇಳಿತು.ಕಡೆಗೂ ನ್ಯಾಯದ ಚಕ್ರ ತಿರುಗಿತು: ೧೯೮೪ರ ಸಿಖ್ ವಿರೋಧಿ ಗಲಭೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರಿಗೆ ಜೀವಾವಧಿ ಸಜೆ ವಿಧಿಸಿದ್ದನ್ನು ಶ್ಲಾಘಿಸಿದ ಕೇಂದ್ರ ಸಚಿವೆ ಹರಿಸಿಮ್ರತ್ ಕೌರ್ ಬಾದಲ್ ಅವರುಕಡೆಗೂ ನ್ಯಾಯದ ಚಕ್ರಗಳು ತಿರುಗಿದವು ಎಂದು ಹೇಳಿದರು. ‘೨೦೧೫ರಲ್ಲಿ ೧೯೮೪ರ ಹತ್ಯಾಕಾಂಡದ ತನಿಖೆಗೆ ಶಿರೋಮಣಿ ಅಕಾಲಿದಳವು ಸಲ್ಲಿಸಿದ್ದ ಮನವಿ ಮೇರೆಗೆ ವಿಶೇಷ ತನಿಖಾ ತಂಡವನ್ನು ರಚಿಸಿದ್ದಕ್ಕಾಗಿ ನಾನು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ನೀಡಬಯಸುತ್ತೇನೆ. ಇದೊಂದು ಚಾರಿತ್ರಿಕ ತೀರ್ಪು. ನ್ಯಾಯದ ಚಕ್ರಗಳು ಕಡೆಗೂ ಚಲಿಸಿದವು ಎಂದು ಸಚಿವೆ ನುಡಿದರು.’ಇಂದು ಸಜ್ಜನ್ ಕುಮಾರ್, ನಾಳೆ ಜಗದೀಶ ಟೈಟ್ಲರ್, ಬಳಿಕ ಕಮಲ್ ನಾಥ್ ಹಾಗೂ ಕೊನೆಗೆ ಗಾಂಧಿ ಕುಟುಂಬ ಎಂದು ಕೌರ್ ಹೇಳಿದರು.ಜಗದೀಶ್ ಟೈಟ್ಲರ್, ಕಮಲ್ ನಾಥ್: ಕಾಂಗ್ರೆಸ್ ನಾಯಕರಾದ ಜಗದೀಶ ಟೈಟ್ಲರ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕಮಲ್ ನಾಥ್ ಅವರು ಕೂಡಾ ಸಿಖ್ ವಿರೋಧಿ ಗಲಭೆಗಳಲ್ಲಿ ಗುಂಪುಗಳನ್ನು ಪ್ರಚೋದಿಸಿದ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.೧೯೮೪ರ ಸಿಖ್ ವಿರೋಧಿ ದಂಗೆಯ ಆರೋಪಿತ ಪಾತ್ರಕ್ಕಾಗಿ ಪಂಜಾಬಿನ ಪಕ್ಷ ವ್ಯವಹಾರಗಳ ಉಸ್ತುವಾರಿಯನ್ನು ತ್ಯಜಿಸಿದ್ದ ಕಮಲ್ ನಾಥ್, ತಾವು ನಿರಪರಾಧಿಯಾಗಿದ್ದು ಸಿಬಿಐ ತನಿಖೆ ಸೇರಿದಂತೆ ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಘೋಷಿಸಿದ್ದರು.

2018: ನವದೆಹಲಿ: ಚೀನಾದ ನಿರ್ಮಾಣ ಸಾಲದ ಸುಳಿಯಲ್ಲಿ ಸಿಲುಕಿರುವ ಹಿಂದೂ ಮಹಾಸಾಗರ ಮಧ್ಯದ ಮಾಲ್ದೀವ್ಸ್ ದ್ವೀಪರಾಷ್ಟ್ರಕ್ಕೆ ಭಾರತವು . ಬಿಲಿಯನ್ (೧೪೦ ಕೋಟಿ) ಡಾಲರ್ ನೆರವು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇಲ್ಲಿ ಪ್ರಕಟಿಸಿದರು.ಭಾರತಕ್ಕೆ ಭೇಟಿ ನೀಡಿರುವ ದಕ್ಷಿಣ ಏಷ್ಯಾ ದ್ವೀಪ ಸಮೂಹದ ಅಧ್ಯಕ್ಷ ಮೊಹಮ್ಮದ್ ಇಬ್ರಾಹಿಂ ಸೊಲಿಹ್ ಅವರ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಪ್ರಧಾನಿ ಅವರು ಭಾರತದ ಆರ್ಥಿಕ ನೆರವಿನ ಕೊಡುಗೆಯನ್ನು ಘೋಷಿಸಿದರು. ‘ಮಾಲ್ದೀವ್ಸ್ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಮುಂಗಡಪತ್ರ ಬೆಂಬಲ, ಕರೆನ್ಸಿ ಬದಲಾವಣೆ ಒಪ್ಪಂದ ಮತ್ತು ರಿಯಾಯ್ತಿ ಬಡ್ಡಿ ದರದ ಸಾಲ ಇತ್ಯಾದಿಗಳ ರೂಪದಲ್ಲಿ ಭಾರತವು . ಬಿಲಿಯನ್ (೧೪೦ ಕೋಟಿ) ಡಾಲರ್ ಹಣಕಾಸು ನೆರವನ್ನು ಒದಗಿಸಲಿದೆ ಎಂದು ಮೋದಿ ಹೇಳಿದರು. ಸೆಪ್ಟೆಂಬರಿನಲ್ಲಿ ನಡೆದ ಚುನಾವಣೆಯಲ್ಲಿ ಅಚ್ಚರಿಯ ಗೆಲುವು ಸಾಧಿಸಿದ್ದ ಅಧ್ಯಕ್ಷ ಮೊಹಮ್ಮದ್ ಇಬ್ರಾಹಿಂ ಸೊಲಿಹ್ ಅವರು ಪ್ರಾದೇಶಿಕ ಶಕ್ತಿಯಾಗಿರುವ ಭಾರತದ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಯತ್ನಿಸುತ್ತಿದ್ದಾರೆ. ಮೊಹಮ್ಮದ್ ಇಬ್ರಾಹಿಂ ಅವರಿಂದ ಪರಾಭವಗೊಂಡಿದ್ದ ಮಾಲ್ದೀವ್ಸ್ ಹಿಂದಿನ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅವರು ಮಾಲ್ದೀವ್ಸ್ ದ್ವೀಪ ಸಮೂಹವನ್ನು ಚೀನಾ ಸನಿಹಕ್ಕೆ ಒಯ್ದಿದ್ದರುಮಾಲ್ದೀವ್ಸ್ ನಲ್ಲಿ ಐದು ವರ್ಷಗಳ ಅವಧಿಯಲ್ಲಿ ನಿರ್ಮಾಣ ಸಾಲ ಒದಗಿಸಿದ್ದ ಚೀನಾ ರಾಜಧಾನಿ ಮಾಲೆಯನ್ನು ಮುಖ್ಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಸಮುದ್ರ ಸೇತುವೆಯನ್ನು ನಿರ್ಮಿಸಿತ್ತು. ಸಮುದ್ರದಿಂದ ಇತ್ತೀಚೆಗೆ ಮೇಲಕ್ಕೆ ಬಂದ ನೆಲದಲ್ಲಿ ವಿಮಾನ ನಿಲ್ದಾಣ ಮತ್ತು ಮನೆಗಳನ್ನು ಚೀನಾ ನಿರ್ಮಿಸಿತ್ತು. ಆದರೆ ತ್ವರಿತಗತಿಯ ನಿರ್ಮಾಣ ಚಟುವಟಿಕೆಯು ಮಾಲ್ದೀವ್ಸ್ನ್ನು . ಬಿಲಿಯನ್ (೧೫೦ ಕೋಟಿ) ಡಾಲರುಗಳಿಂದ ಬಿಲಿಯನ್ (೩೦೦ ಕೋಟಿ) ಡಾಲರುಗಳಿಗೂ ಹೆಚ್ಚಿನ ಸಾಲದ ಕೂಪದಲ್ಲಿ ಸಿಲುಕಿಸಲು ಚೀನಾ ನಡೆಸುತ್ತಿರುವ ಯತ್ನ ಎಂಬ ಭೀತಿಯನ್ನು ಉಂಟು ಮಾಡಿತ್ತುಕೇವಲ ಲಕ್ಷ ಜನಸಂಖ್ಯೆಯ ರಾಷ್ಟ್ರವು, ಚೀನಾಕ್ಕೆ ನೀಡಬೇಕಾಗಿರುವ ಹಣ ಎಷ್ಟು ಎಂಬುದನ್ನು ಪತ್ತೆ ಹಚ್ಚಲು ತಾನು ಯತ್ನಿಸುತ್ತಿರುವುದಾಗಿ ಸೊಲಿಹ್ ಆಡಳಿತ ಹೇಳಿತು. ನಿಕಟ ಗೆಳೆಯ ಹಾಗೂ ನೆರೆಹೊರೆ ರಾಷ್ಟ್ರವಾಗಿ ಪರಿಗಣಿಸುವ ಮೂಲಕ ಮಾಲ್ದೀವ್ಸ್ ಗೆ ನೆರವು ನೀಡುಲು ಭಾರತ ಸಿದ್ಧವಿದೆ ಎಂದು ಮೋದಿ ಹೇಳಿದರು.

2018: ಮುಂಬೈ: ಮುಂಬೈಯ ಅಂಧೇರಿ (ಪೂರ್ವ) ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದ ಭಾರೀ ಬೆಂಕಿ ಅನಾಹುತಕ್ಕೆ ಎರಡು ತಿಂಗಳ ಮಗು ಸೇರಿದಂತೆ ಮಂದಿ ಬಲಿಯಾಗಿದ್ದು, ಇತರ ೧೪೭ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.  ‘ಇಡೀ ಕಟ್ಟಡ ಹೊಗೆಯಿಂದ ತುಂಬಿದೆ. ಹಲವಾರು ರೋಗಿಗಳು ಅಲ್ಲಿ ಸಿಕ್ಕಿಹಾಕಿಕೊಂಡಿರಬಹುದು ಎಂಬ ಭೀತಿ ಇದೆ. ಕೆಲವರು ಕಟ್ಟಡದ ಛಾವಣಿಗೆ ಧಾವಿಸಿದ್ದಾರೆ. ಅವರ ರಕ್ಷಣೆಗೆ ಯತ್ನಗಳನ್ನು ಮಾಡಲಾಗುತ್ತಿದೆ. ರಾತ್ರಿಯ ವೇಳೆಗೆ ಬೆಂಕಿಯನ್ನು ಹತೋಟಿಗೆ ತರಲಾಗಿದೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಪಿ. ರಹಂಗ್ದಲೆ ಹೇಳಿದರುಬಿಎಂಸಿಯ ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ ಅಗ್ನಿ ದುರಂತ ಸ್ಥಳದಲ್ಲಿ ಪತ್ತೆ ಹಚ್ಚಲಾಗಿರುವ ಎರಡು ಅಪರಿಚಿತ ಶವಗಳು ಸೇರಿ ಜನ ಮೃತರಾಗಿದ್ದಾರೆ. ಜೊತೆಗೆ ತಿಂಗಳ ಮಗುವಿನ ಸಾವನ್ನೂ ವೈದ್ಯರು ದೃಢ ಪಡಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಕಾಯಲಾಗಿದೆ ಎಂದು ಅಧಿಕಾರಿ ನುಡಿದರುನೌಕರರ ರಾಜ್ಯ ವಿಮಾ ನಿಗಮ (ಇಎಸ್ ಐಸಿ) ಆಸ್ಪತ್ರೆಯಲ್ಲಿ ಗಂಭೀರ ಅಗ್ನಿ ಅನಾಹುತ ಸಂಭವಿಸಿದ ಬಗ್ಗೆ ಸಂಜೆ .೨೦ಕ್ಕೆ ಮಾಹಿತಿ ಬಂತು. .೫೪ರ ವೇಳೆಗೆ ಬೆಂಕಿಯ ತೀವ್ರತೆ ಇನ್ನೂ ಹೆಚ್ಚಿತು ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತಿಳಿಸಿದರು.

2018: ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರಿಗೆ ತಮ್ಮ ರೋಗಕ್ಕೆ ಯಾವುದೇ
ಒತ್ತಡ, ತಮಾಷೆ ರಹಿತವಾಗಿ ಚಿಕಿತ್ಸೆ ಪಡೆಯಲು ಬಿಡಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲ ಹೇಳಿದರು. ಪರಿಕ್ಕರ್ ಅವರು ಪಣಜಿಯಲ್ಲಿ ಮಾಂಡೋವಿ ನದಿಯ ಮೇಲೆ ನಿರ್ಮಿಸಲಾಗುತ್ತಿರುವ ಸೇತುವೆಗಳ ಪರಿಶೀಲನೆ ಮಾಡಿದ ಭಾವಚಿತ್ರಗಳನ್ನು ಗಮನಿಸಿದ ಬಳಿಕ ಒಮರ್ ಅಬ್ದುಲ್ಲ ಆಕ್ಷೇಪ ವ್ಯಕ್ತ ಪಡಿಸಿದರು. ಮೇಧೋಜ್ಜೀರಕ ಗ್ರಂಥಿ ಸಮಸ್ಯೆಯಿಂದ ಬಳಲುತ್ತಿರುವ ಮುಖ್ಯಮಂತ್ರಿ ಮೂಗಿಗೆ ಹಾಕಲಾಗಿದ್ದ ಕೊಳವೆ ಸಹಿತವಾಗಿಯೇ ಮಾಂಡೋವಿ ನದಿ ಸೇತುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆಗೆ ಮಾತನಾಡುತ್ತಿದ್ದ ಚಿತ್ರಗಳು ಈದಿನದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ‘ಪರಿಕ್ಕರ್ ಅವರನ್ನು ಕೆಲಸ ಮಾಡುವಂತೆ ಒತ್ತಾಯಿಸುವುದು ಮತ್ತು ಇಂತಹ ಫೋಟೋಗಳನ್ನು ಪ್ರಕಟಿಸುವುದು ಅಮಾನವೀಯ. ಪರಿಕ್ಕರ್ ಅವರ ಜೀರ್ಣಾಂಗಕ್ಕೆ ಸಂಪರ್ಕ ಕಲ್ಪಿಸುವ ಕೊಳವೆಯನ್ನು ಮೂಗಿದೆ ಹಾಕಲಾಗಿದೆ. ಇಂತಹ ಸ್ಥಿತಿಯಲ್ಲಿ ಅವರನ್ನು ಕೆಲಸ ಮಾಡುವಂತೆ ಬಲಾತ್ಕರಿಸುವುದು ಮತ್ತು ಇಂತಹ ಫೊಟೋಗಳನ್ನು ಪ್ರಕಟಿಸುವುದು ಎಷ್ಟೊಂದು ಅಮಾನವೀಯ. ಅವರಿಗೆ ಇಂತಹ ಒತ್ತಡ ಮತ್ತು ತಮಾಷೆ ರಹಿತವಾಗಿ ತಮ್ಮ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಟ್ವೀಟ್ ಒಂದರಲ್ಲಿ ತಿಳಿಸಿದರು. ೬೩ರ ಹರೆಯದ ಪರಿಕ್ಕರ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಕ್ಟೋಬರ್ ೧೪ರಂದು ಮನೆಗೆ ಮರಳಿದ ಬಳಿಕ ಮನೆಯಲ್ಲೇ ಚಿಕಿತ್ಸೆ ಮುಂದುವರೆಸಿದ್ದರು.ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡ ಮುಖ್ಯಮಂತ್ರಿ, ಪಣಜಿಯಲ್ಲಿ ಸೇತುವೆಗಳ ಪರಿಶೀಲನೆ ನಡೆಸಿ ಬಳಿಕ ಇಲ್ಲಿಂದ ಸುಮಾರು ೧೫ ಕಿಮೀ ದೂರದ ಅಗಸ್ಸಾಯಿಮ್ ಗಾಮದ ಸಮೀಪ ಇರುವ ಜುವಾರಿ ನದಿ ಮೇಲಿನ ಸೇತುವೆ ಕಾಮಗಾರಿಯನ್ನೂ ಪರಿಶೀಲಿಸಿದ್ದರು.ದೆಹಲಿಯಿಂದ ವಾಪಸಾದ ಬಳಿಕ ಅಕ್ಟೋಬರ್ ೧೪ರಿಂದ ತಮ್ಮ ಖಾಸಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ರಿರುವ ಪರಿಕ್ಕರ್ ಅವರು ತಮ್ಮ ಮನೆಯಿಂದ ಹೊರಕ್ಕೆ ಬಂದದ್ದು ಇದೇ ಮೊದಲು ಎಂದು ಅಧಿಕಾರಿಗಳು ಹೇಳಿದ್ದರು. ಮುಖ್ಯಮಂತ್ರಿಯವರು ಪೊರ್ವೊರಿಮ್ನಿಂದ ಮರ್ಸೆಸ್ಗೆ ಸೇತುವೆಯ ಪರಿಶೀಲನೆ ನಡೆಸುತ್ತಾ ಪಯಣಿಸಿದ್ದರು. ಮಾಂಡೋವಿ ನದಿ ಮೇಲೆ ನಿರ್ಮಿಸುತ್ತಿರುವ ಮೂರನೇ ಸೇತುವೆ ಇದು. ಸೇತುವೆ ಮುಂದಿನ ವರ್ಷ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಇದು ಪಣಜಿಯನ್ನು ಉತ್ತರ ಗೋವಾದ ಜೊತೆಗೆ ಸಂಪರ್ಕಿಸಲಿದೆ.ಕಾಮಗಾರಿ ಸ್ಥಳದಲ್ಲಿ ಕಾರಿನಿಂದ ಹೊರಕ್ಕೆ ಬಂದ ಪರಿಕ್ಕರ್ ಗೋವಾ ಮೂಲ ಸವಲತ್ತು ಅಭಿವೃದ್ಧಿ ನಿಗಮ ಮತ್ತು ಗುತ್ತಿಗೆದಾರ ಕಂಪೆನಿ ಲಾರ್ಸೆನ್ ಅಂಡ್ ಟೂಬ್ರೋ ಅಧಿಕಾರಿಗಳ ಜೊತೆಗೆ ಕಾಮಗಾರಿಯ ಪ್ರಗತಿ ಬಗ್ಗೆ ಚರ್ಚಿಸಿದ್ದರು. ಸಂದರ್ಭದಲ್ಲಿ ಸೆರೆಹಿಡಿಯಲಾದ ಫೋಟೋಗಳು ಪತ್ರಿಕೆಗಳಲ್ಲಿ ಪ್ರಕಟಿವಾಗಿದ್ದವು.ಅಸ್ವಸ್ಥತೆ ಕಾರಣ ಕಚೇರಿಗೆ ಮುಖ್ಯಮಂತ್ರಿಯವರು ಗೈರುಹಾಜರಾಗಿರುವುದರಿಂದ ಕರಾವಳಿ ರಾಜ್ಯದ ಆಡಳಿತ ಸ್ಥಗಿತಗೊಂಡಿದೆ ಎಂದು ವಿರೋಧಿ ಕಾಂಗ್ರೆಸ್ ನಿರಂತರವಾಗಿ ಆಪಾದಿಸುತ್ತಿತ್ತು.

2018: ನವದೆಹಲಿ:  ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದಿತು.  ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮೂರು ರಾಜ್ಯಗಳ ಮುಖ್ಯಮಂತ್ರಿ ಗಳು ಒಂದೇ ದಿನ ಪ್ರಮಾಣ ವಚನ ಸ್ವೀಕರಿಸಿದರು. ರಾಜಸ್ತಾನ ಮುಖ್ಯಮಂತ್ರಿಯಾಗಿ ಅಶೋಕ್ ಗೆಹ್ಲೋಟ್ ಹಾಗೂ ಉಪ ಮುಖ್ಯಮಂತ್ರಿಯಾಗಿ ಸಚಿನ್ ಪೈಲಟ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದ ಆಲ್ಬರ್ಟ್ ಹಾಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಕಲ್ಯಾಣ ಸಿಂಗ್ ಅವರು ಅಶೋಕ್ ಮತ್ತು ಪೈಲೆಟ್ ಅವರುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ತೃತೀಯ ರಂಗದ ಹಲವಾರು ಘಟಾನುಘಟಿ ರಾಜಕಾರಣಿಗಳು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಸಮ್ಮುಖದಲ್ಲಿ ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿ, ಸಚಿನ್ ಪೈಲೆಟ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.  ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜು ನ ಖರ್ಗೆ, ನಿರ್ಗಮಿತ ಮುಖ್ಯಮಂತ್ರಿ ವಸುಂಧರ ರಾಜೇ ಸಿಂಧ್ಯಾ, ಎನ್‌ಪಿ ಮುಖಂಡ ಶರದ್ ಪವಾರ್, ಎನ್‌ಜೆಡಿ ಮುಖಂಡ ಶರದ್ ಯಾದವ್, ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲಾ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಆರ್‌ಜೆಡಿ ಮುಖಂಡ ತೇಜಸ್ವಿನಿ ಯಾದವ್, ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್, ಜೆಎಂಎಂ ಲೀಡರ್ ಹೇಮಂತ್ ಸೊರೇನ್, ಜೆವಿಎಂ ಲೀಡರ್ ಬಾಬು ಲಾಲ್ ಮರಾಂಡಿ, ಪುದುಚೆರಿ ಸಿಎಂ ನಾರಾಯಣ ಸ್ವಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಪ್ರದೇಶ: ರಾಜಸ್ತಾನದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮುಗಿಯುತ್ತಿದ್ದಂತೆ ತೃತೀಯ ರಂಗದ ಘಟಾನುಘಟಿಗಳು ಮಧ್ಯಪ್ರದೇಶ ಮುಖ್ಯ ಮಂತ್ರಿ ಕಮಲ್‌ನಾಥ್ ಪ್ರಮಾಣ ವಚನ ಸ್ವೀಕಾರ ಸಮಾ ರಂಭದಲ್ಲೂ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ಈ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರು ಸಾಕ್ಷಿಯಾದರು. ಮಧ್ಯಪ್ರದೇಶದ ಮುಖ್ಯ ಮಂತ್ರಿಯಾಗಿ ಕಮಲ್ ನಾಥ್ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲೆ ಆನಂದಿಬೆನ್ ಪಟೇಲ್ ಪ್ರತಿಜ್ಞಾವಿಧಿ ಬೋಧಿಸಿದರು.  ಛತ್ತೀಸ್‌ಗಢ: ಸಂಜೆ ನಡೆದ ಛತ್ತೀಸ್‌ಗಢ ಮುಖ್ಯ ಮಂತ್ರಿ ಭೂಪೇಶ್ ಬಘೇಲ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲೂ ತೃತೀಯ ರಂಗದ ಹಲವಾರು ಘಟಾನುಘಟಿ ರಾಜಕಾರಣಿಗಳು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ರಾಜ್ಯಪಾಲರು ೫೭ ವರ್ಷದ ಭೂಪೇಶ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಹವಾಮಾನ ವೈಪರೀತ್ಯದಿಂದಾಗಿ ಮುಖ್ಯಮಂತ್ರಿ ಪ್ರಮಾನ ವಚನಕ್ಕೆ ನಿಗದಿಯಾಗಿದ್ದ ಸ್ಥಳವನ್ನು ವಿಜ್ಞಾನ ಕಾಲೇಜು ಮೈದಾನದಿಂದ ಬಲ್ಬೀರ್ ಸಿಂಗ್ ಜುನೆಜಾ ಒಳಾಂಗಣ ಕ್ರೀಡಾಂಗಣಕ್ಕೆ ಬದಲಾಯಿಸಲಾಗಿತ್ತು.  ಕರ್ನಾಟಕವೇ ಮೂಲ: ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ೧೦೪ ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸುವ ಕನಸು ಕಾಣುತ್ತಿತ್ತು. ಆದರೆ ೭೯ ಸ್ಥಾನ ಗೆದ್ದ ಕಾಂಗ್ರೆಸ್ ಮತ್ತು ೩೮ ಸ್ಥಾನ ಪಡೆದಿದ್ದ ಜೆಡಿಎಸ್ ಮೈತ್ರಿ ಕೂಟ ರಚಿಸಿಕೊಳ್ಳುವ ಮೂಲಕ ಬಿಜೆಪಿಗೆ ಟಾಂಗ್ ನೀಡುವಲ್ಲಿ ಯಶಸ್ವಿಯಾಗಿದ್ದೇ ಅಲ್ಲದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ವಿಧಾನಸೌಧದಲ್ಲಿ ಕುಮಾರಸ್ವಾಮಿ ಅವರ ಅಧಿಕಾರ ಸ್ವೀಕಾರ ಸಮಾರಂಭ ಬಿಜೆಪಿ ವಿರುದ್ಧ ತೃತೀಯ ರಂಗದ ಶಕ್ತಿಗೆ ವೇದಿಕೆಯಾಗಿ ಪರಿಣಮಿಸಿತ್ತು.


2017: ನವದೆಹಲಿ: ಪಾಕಿಸ್ಥಾನದ ಐಎಸ್ ಭಾರತದ ಹೈ ಕಮಿಷನ್ ಮೂವರು ಅಧಿಕಾರಿಗಳನ್ನು ಹನಿಟ್ರ್ಯಾಪ್ಖೆಡ್ಡಾಕ್ಕೆ ಬೀಳಿಸಲು ಯತ್ನಿಸಿ ವಿಫಲವಾಯಿತು. ಇಸ್ಲಾಮಾಬಾದಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ  ಅಧಿಕಾರಿಗಳನ್ನು ಹನಿಟ್ರ್ಯಾಪ್ಬಲೆಗೆ ಬೀಳಿಸಿ ರಹಸ್ಯಗಳನ್ನು ಪಡೆಯುವ ಸಂಚು ಬಯಲಾಯಿತು. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು  ಅಧಿಕಾರಿಗಳ ಹೆಸರುಗಳನ್ನು ಗೌಪ್ಯವಾಗಿ ಇರಿಸಲಾಯಿತು. ಮೂವರು ಅಧಿಕಾರಿಗಳು ಎಚ್ಚರಿಕೆಯಿಂದ ಇದ್ದ ಕಾರಣ ಐಎಸ್ಐನ ಸಂಚು ಯಶಸ್ವಿಯಾಗಿಲ್ಲ. ಪ್ರಕರಣದಲ್ಲಿ ಭಾರತೀಯ ಅಧಿಕಾರಿಗಳು ಯಾವುದೇ ತಪ್ಪು ಎಸಗದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಅವರಿಗೆ ಇಸ್ಲಾಮಾಬಾದಿನಲ್ಲೇ  ಸೇವೆ ಮುಂದುವರಿಸಲು ಸೂಚನೆ ನೀಡಿರುವ ಬಗ್ಗೆ ವರದಿಯಾಯಿತು. ಹನಿಟ್ರ್ಯಾಪ್ಗೆ ಯತ್ನ ನಡೆಯುತ್ತಿರುವುದು ಗಮನಕ್ಕೆ ಬಂದ ಕೂಡಲೇ ಅಧಿಕಾರಿಗಳು ದೆಹಲಿಯ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ ಸಲಹೆ ಕೋರಿದ್ದರು. ಕೂಡಲೇ ಅವರಿಗೆ ದೆಹಲಿಗೆ ಬರುವಂತೆ ಸೂಚಿಸಲಾಗಿತ್ತು.  2010 ರಲ್ಲಿ ಭಾರತದ ಹೈಕಮಿಷನ್ ಮಾಧ್ಯಮ ವಿಭಾಗದ ಕಾರ್ಯದರ್ಶಿಯಾಗಿದ್ದ ಮಾಧುರಿ ಗುಪ್ತಾ ಅವರನ್ನು ಐಎಸ್ ಅಧಿಕಾರಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಕಾರಣಕ್ಕೆ ಬಂಧಿಸಲಾಗಿತ್ತು.
2017: ನ್ಯೂಯಾರ್ಕ್: ಅಮೆರಿಕನ್ ಅಧ್ಯಕ್ಷರ ಒಲವಿನ ವಿಮಾನವಾಗಿದ್ದ ಮೂಲ ಜಂಬೋ ಜೆಟ್ಬೋಯಿಂಗ್ ೭೪೭ ವಾರ ವಿಮಾನ ಯಾನ ಇತಿಹಾಸದ ಗರ್ಭ ಸೇರಲಿದೆ. ಬೋಯಿಂಗ್ ಅಧ್ಯಕ್ಷರಿಗೆ ಪ್ರಿಯವಾಗಿದ್ದುದರ ಜೊತೆಗೆ, ಅಮೆರಿಕದಲ್ಲಿ ವಿಮಾನ ಪಯಣ ಎಲ್ಲರ ಕೈಗೆಟಕುವಂತೆಯೂ ಮಾಡಿತ್ತು. ತನ್ನ ಚೊಚ್ಚಲ ಯಾನದ ೫೦ ವರ್ಷಗಳ ಬಳಿಕ ಬೋಯಿಂಗ್ ೭೪೭ ತನ್ನ ಕಡೆಯ ವಾಣಿಜ್ಯ  ಹಾರಾಟವನ್ನು ಡಿಸೆಂಬರ 19ರ ಮಂಗಳವಾರ ನಡೆಸಲಿದ್ದು ಅಮೆರಿಕದ ವಿಮಾನವಾಹಕ ಡೆಲ್ಟಾ ಏರ್ ಲೈನ್ಸ್ ಜೊತೆಗೆ ಸಿಯೋಲ್ ನಿಂದ ಡೆಟ್ರಾಯಿಟ್ ಮಾರ್ಗವಾಗಿ ಪಯಣಿಸಲಿದೆ. ‘ಅದು ಪ್ರತಿಯೊಬ್ಬರಿಗೂ ವಿಮಾನ ಪಯಣ ಸಾಧ್ಯವಾಗುವಂತೆ ಮಾಡಿತು ಎಂದು ಹೇಳಿದ ಬೋಯಿಂಗ್ ಕಂಪೆನಿಯ ಮುಖ್ಯ ಇತಿಹಾಸಜ್ಞ ಮೈಕೆಲ್ ಲೊಂಬಾರ್ಡಿಐಕಾನಿಕ್ ಜೆಟ್ ೭೪೭ ಜಗತ್ತಿಗೆ ರೆಕ್ಕೆಗಳನ್ನು ನೀಡಿತು ಎಂದು ಬಣ್ಣಿಸಿದರು. ವಿಮಾನವು ಪಯಣವನ್ನೇ ಬದಲಾಯಿಸಿತು ಎಂದು ಏರೋಸ್ಪೇಸ್ ಕನ್ ಸಲ್ಟೆಂಟ್ ಮೈಕೆಲ್ ಮೆರಲುಜಿಯು ನುಡಿದರು. ’ದಿಢೀರನೆ ನೀವು ಸಿಂಗಪುರದಿಂದ ಲಂಡನ್ ಗೆ ೧೨ ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಪಯಣಿಸಬಹುದು. ಎಲ್ಲವನ್ನೂ ಅದು ಕೈಗೆಟಕುವಂತೆ ಮಾಡಿತು ಎಂದು ಅವರು ನುಡಿದರು. ಜಂಬೋಜೆಟ್  ವಿದಾಯದ ಸಂದರ್ಭದಲ್ಲಿ ಡಿಸೆಂಬರ್ 20 ಬುಧವಾರ ತನ್ನ ನೌಕರರು ಮತ್ತು ಉನ್ನತ ಗ್ರಾಹಕರಿಗಾಗಿ ವಿಶೇಷ ಹಾರಾಟಗಳನ್ನೂ ಡೆಲ್ಟಾ ವ್ಯವಸ್ಥೆ ಮಾಡಿತು. ಯದ್ವಾತದ್ವ ಬೇಡಿಕೆಯ ಪರಿಣಾಮವಾಗಿ  ವಿದಾಯ ಪ್ರವಾಸ ಹಾರಾಟದ ಟಿಕೆಟ್ ದರಗಳು ಗಗನಕ್ಕೆ ಏರಿದವು. ಅಮೆರಿಕದಲ್ಲಿ ಸ್ಥಗಿತಗೊಂಡರೂ, ಬೋಯಿಂಗ್ ೭೪೭ ಲುಫ್ತಾನ್ಸಾ, ಬ್ರಿಟಿಷ್ ಏರ್ ವೇಸ್ ಮತ್ತು ಕೊರಿಯನ್ ಏರ್ ಲೈನ್ಸ್ ಮೂಲಕ ಗಗನದಲ್ಲಿ ಹಾರಾಟ ಮುಂದುವರೆಸಲಿವೆ.  ಅಮೆರಿಕದ ಅಧ್ಯಕ್ಷರು ಸೇರಿದಂತೆ ಕೆಲವು ವಿಶಿಷ್ಠ ಗ್ರಾಹಕರಿಗಾಗಿ ಸರಕು ಸಾಗಣೆ ವಿಮಾನವಾಗಿ ಇನ್ನು ಮುಂದೆಯೂ ಬೋಯಿಂಗ್ ನಿರ್ಮಾಣವಾಗಲಿದೆ. ಅಮೆರಿಕದ ಅಧ್ಯಕ್ಷರು ೧೯೯೦ರಿಂದ ವಿಶೇಷವಾಗಿ ನಿರ್ಮಿಸಲಾದ ಏರ್ ಫೋರ್ಸ್ ಆಗಿ ಬೋಯಿಂಗ್ ೭೪೭ನಲ್ಲೇ ಪಯಣಿಸುತ್ತಿದ್ದರು. ಈಗ ಅಮೆರಿಕದ ಏರೋಸ್ಪೇಸ್ ದೈತ್ಯ ಕಂಪೆನಿಯು ವಾಣಿಜ್ಯ ಪಯಣಕ್ಕಾಗಿ ಹೆಚ್ಚು ಇಂಧನ ದಕ್ಷತೆಯ ಮಾದರಿಗಳತ್ತ ಗಮನ ಹರಿಸಿದೆ. ಮೂಲಜಂಬೋಜೆಟ್: ವಿಮಾನ ಹಾರಾಟದ ಇತಿಹಾಸದಲ್ಲಿ ೭೪೭ ಒಂದು ಪ್ರಮುಖ ಮೈಲಿಗಲ್ಲು. ಅದು ಅತ್ಯಂತ ದೊಡ್ಡದು, ಸುಂದರ, ಅತ್ಯಂತ ಅನುಕೂಲಕರ,  ಒಳಗೆ ಮೆಟ್ಟಿಲುಗಳನ್ನೂ ಹೊಂದಿದೆ. ಅದು ಆರ್ಥಿಕ ಶಕ್ತಿಯ ಸಂಕೇತ ಎಂದು ವಾಷಿಂಗ್ಟನ್ ಸ್ಮಿತ್ ಸೋನಿಯನ್ ಇನ್ ಸ್ಟಿಟ್ಯೂಷನ್ ನಲ್ಲಿನ ನ್ಯಾಷನಲ್ ಏರ್ ಅಂಡ್ ಸ್ಪೇಸ್ ಮ್ಯೂಸಿಯಂನ ಏರೋನಾಟಿಕ್ಸ್ ಇಲಾಖೆಯ ಕ್ಯುರೇಟರ್ ಬಾಬ್ ವ್ಯಾನ್ ಡೆರ್ ಲಿಂಡನ್ ಹೇಳಿದರು. ತನ್ನ ಗಜಗಾತ್ರದ ಕಾರಣಜಂಬೋಜೆಟ್ ಎಂಬ ಅಡ್ಡ ಹೆಸರು ಪಡೆದ ವಿಮಾನ, ೬೦೦ಕ್ಕೂ ಹೆಚ್ಚು ಪ್ರಯಾಣಿಕರನ್ನು ಒಯ್ಯಬಲ್ಲುದು. ೧೯೬೦ರಷ್ಟು ಹಿಂದೆ ಬೋಯಿಂಗ್ಸ್ ಆಗಿನ ಮುಖ್ಯಸ್ಥ ಬಿಲ್ ಅಲ್ಲೆನ್ ಅವರು ಪಾನ್ ಆಮ್ ಏರ್ಲೈನ್ಸಿನ ಮುಖ್ಯಸ್ಥ ಜುವಾನ್ ಟ್ರಿಪ್ಪೆ ಅವರನ್ನು ಭೇಟಿ ಮಾಡಿ ವಿಮಾನಯಾನಕ್ಕೆ ಜನದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ವಿಮಾನ ತಯಾರಿಸಲು ಕೋರಿದ್ದು ಜಂಬೋ ಜೆಟ್ ಜನನಕ್ಕೆ ಕಾರಣವಾಗಿತ್ತು. ಮೊದಲಿಗೆ ಡಬ್ಬಲ್ ಡೆಕ್ಕರ್ ವಿಮಾನವಾಗಿ ಬೋಯಿಂಗ್ ನಿರ್ಮಾಣಕ್ಕೆ ಯೋಚಿಸಲಾಗಿತ್ತು. ಆದರೆ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರನ್ನು ಇಳಿಸುವುದು ಕಷ್ಟವಾಗಬಹುದು ಎಂಬ ತೀರ್ಮಾನಕ್ಕೆ ಕಂಪೆನಿಗಳು ಬಂದವು. ಹೀಗಾಗಿ ಅವಳಿ ಹಜಾರದ ದೊಡ್ಡ ಗಾತ್ರದ ವಿನ್ಯಾಸವನ್ನು ಮಾಡಲಾಯಿತು. ೧೯೬೯ರಲ್ಲಿ ಚೊಚ್ಚಲ ವಿಮಾನ ಬಿಡುಗಡೆ ಬಳಿಕ ೧೫೦೦ ರಷ್ಟು ಬೋಯಿಂಗ್  ೭೪೭ ವಿಮಾನಗಳನ್ನು ವಿತರಿಸಲಾಯಿತು. ಅವುಗಳ ಪೈಕಿ ೫೦೦ ಇನ್ನೂ ಸೇವೆ ಸಲ್ಲಿಸುತ್ತಿವೆ. ೭೪೭ ಬಳಿಕ ಬೋಯಿಂಗ್ ಗಾತ್ರವನ್ನು ಕುಗ್ಗಿಸಿ ೧೯೯೫ರಲ್ಲಿ ೫೫೦ ಆಸನಗಳ ಸಣ್ಣ ೭೭೭ ವಿಮಾನವನ್ನು ಬಿಡುಗಡೆ ಮಾಡಲಾಯಿತು. ಎರಡು ಎಂಜಿನ್ ಗಳಿದ್ದ ಕಾರಣ ಇದಕ್ಕೆ ಕಡಿಮೆ ಇಂಧನ ಸಾಕಾಗುತ್ತಿತ್ತು. ‘ನಿಜ ಹೇಳಬೇಕೆಂದರೆ, ನಮಗೆ ದೊಡ್ಡ ವಿಮಾನಗಳಿಗೆ ಹೆಚ್ಚಿನ ಬೇಡಿಕೆಯೇನೂ ಇಲ್ಲ. ವಿಐಪಿಗಳಿಗೆ, ಅಧ್ಯಕ್ಷರಿಗೆ, ಸೇನಾ ಕಾರ್ಯಾಚರಣೆಗಳಿಗೆ ಇವು ಹೆಚ್ಚು ಬೇಕಾಗುತ್ತವೆ. ಇದರ ಹೊರತಾಗಿ ಪ್ರಯಾಣಿಕ ೭೪೭ ವಿಮಾನಗಳಿಗೆ ಹೆಚ್ಚೇನೂ ಬೇಡಿಕೆ ಇರುವುದಿಲ್ಲ ಎಂದು ಬೋಯಿಂಗ್ ಮಾರ್ಕೆಟಿಂಗ್  ಉಪಾಧ್ಯಕ್ಷ ರಾಂಡಿ ಟಿನ್ಸೆಥ್ ನುಡಿದರು.

2017: ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನದ ಕ್ವೆಟ್ಟಾ ನಗರದ ಚರ್ಚ್ (ಇಗರ್ಜಿ) ಒಂದರಲ್ಲಿ ಭಯೋತ್ಪಾದಕರು ನಡೆಸಿದ ಮಾನವ ಬಾಂಬ್ ದಾಳಿಗೆ ಕನಿಷ್ಠ ಮಂದಿ ಬಲಿಯಾಗಿ ಇತರ ೪೪ ಮಂದಿ ಗಾಯಗೊಂಡರು. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಒಬ್ಬ ಭಯೋತ್ಪಾದಕ ಚರ್ಚ್ ದ್ವಾರದಲ್ಲಿ ಅಸು ನೀಗಿದರೆ, ಇನ್ನೊಬ್ಬ ಚರ್ಚ್ ಆವರಣದಲ್ಲಿ ಸ್ವತಃ ಸ್ಫೋಟಿಸಿಕೊಂಡು ಅಲ್ಲಿ ಇದ್ದವರನ್ನೂ ಬಲಿತೆಗೆದುಕೊಂಡ ಎಂದು ಗೃಹ ಸಚಿವ ಸರ್ಫ್ರಾಜ್ ಬಗ್ತಿ ಹೇಳಿದರು. ಭಯೋತ್ಪಾದಕರನ್ನು  ಪ್ರಾರ್ಥನಾ ಸಭಾಂಗಣದತ್ತ ಸಾಗದಂತೆ ತಡೆಯಲಾಯಿತು. ಇಬ್ಬರೂ ಭಯೋತ್ಪಾದಕರು ಯದ್ವಾತದ್ವ ಗುಂಡು ಹಾರಿಸುತ್ತಿದ್ದರೂ ಅವರನ್ನು ಮುಂದೆ ಸಾಗದಂತೆ ತಡೆಯುವಲ್ಲಿ ಪೊಲೀಸರು ಯಶಸ್ವಿಯಾದರು ಎಂದು ಅವರು ನುಡಿದರು. ಭಯೋತ್ಪಾದಕರು ಬೆಥೆಲ್ ಮೆಮೋರಿಯಲ್ ಮೆಥೋಡಿಸ್ಟ್ ಚರ್ಚ್ ನಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ವೇಳೆಯಲ್ಲಿ ದಾಳಿ ನಡೆಸಿದರು. ಚರ್ಚ್ನಲ್ಲಿ ಕನಿಷ್ಠ ೪೦೦ ಜನರಿದ್ದರು. ’ಭದ್ರತಾ ಸಿಬ್ಬಂದಿ ಮಿಂಚಿನ ಗತಿಯಲ್ಲಿ ಸಾಗಿ ದಾಳಿಯನ್ನು ವಿಫಲಗೊಳಿಸಿ ಭಯೋತ್ಪಾದಕರನ್ನು ಕೊಂದು ಹಾಕಿದರು. ದುರದೃಷ್ಟಕರವಾಗಿ ಒಬ್ಬ ಭಯೋತ್ಪಾದಕ ತನ್ನನ್ನು ತಾನು ಸ್ಫೋಟಿಸಿಕೊಂಡ ಪರಿಣಾಮವಾಗಿ ಹಲವು ಸಾವುಗಳು ಸಂಭವಿಸಿದವು’ ಎಂದು ಪೊಲೀಸರು ಹೇಳಿದರು. ಚರ್ಚ್ನಲ್ಲಿದ್ದ ಜನರನ್ನು ಪೊಲೀಸರು ರಕ್ಷಿಸಿದರು. ಗಾಯಾಳುಗಳಲ್ಲಿ ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದ್ದಾರೆ. ಕ್ರೈಸ್ತ ಸಂಸದ . ಅನಿತಾ ಇರ್ಫಾನ್ ದಾಳಿಯನ್ನು ಖಂಡಿಸಿ ಕ್ಷಿಪ್ರ ಕಾರ್ಯಾಚರಣೆಗಾಗಿ ಭದ್ರತಾ ಸಿಬ್ಬಂದಿಯನ್ನು ಶ್ಲಾಘಿಸಿದರು. ಪ್ರಧಾನಿ ಶಾಹಿದ್ ಖಾಖನ್ ಅಬ್ಬಾಸಿ ಮತ್ತು ರಾಜಕೀಯ ಪಕ್ಷಗಳ ನಾಯಕರು ದಾಳಿಯನ್ನು ಖಂಡಿಸಿದರು.  ಭಯೋತ್ಪಾದಕರು ಇನ್ನಷ್ಟು ಗುರಿಗಳನ್ನು ಇಟ್ಟುಕೊಂಡಿದ್ದಾರೆ ಎಂಬುದಾಗಿ ಗುಪ್ತಚರ ಮೂಲಗಳು ವರದಿ ನೀಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಯಿತು. ಕ್ವೆಟ್ವಾ ನಗರವು ಬಲೂಚಿಸ್ಥಾನ ಪ್ರಾಂತ್ಯದ ರಾಜಧಾನಿಯಾಗಿದ್ದು, ನಗರ ಕಳೆದ ಎರಡು ವರ್ಷಗಳಲ್ಲಿ ಇಂತಹ ಹಲವಾರು ದಾಳಿಗಳನ್ನು ಕಂಡಿದೆ. ವರ್ಷ ಇದು ಐದನೇ ದಾಳಿ ಎಂದು ಮೂಲಗಳು ಹೇಳಿದವು. ಅಕ್ಟೋಬರ್ ತಿಂಗಳಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪೊಲೀಸರು ಸೇರಿ ಮಂದಿ ಬಲಿಯಾಗಿದ್ದರು.

2017: ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ತವರು ರಾಜ್ಯದ ಪ್ರತಿಷ್ಠೆಯ ಹೋರಾಟ ಮತ್ತು  ಕಾಂಗ್ರೆಸ್ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪಾಲಿಗೆ ಲಿಟ್ಮಸ್ ಪರೀಕ್ಷೆ ಎಂದು ಪರಿಗಣಿತವಾಗಿರುವ ಗುಜರಾತ್ ವಿಧಾನಸಭಾ  ಚುನಾವಣೆಯ ಮತಗಳ ಎಣಿಕೆ ಡಿಸೆಂಬರ್ 18ರ ಸೋಮವಾರ ನಡೆಯಲಿದ್ದು ದೇಶಾದ್ಯಂತ ಎಲ್ಲರ ಕಣ್ಣು ಕಡೆಗೇ ನೆಟ್ಟಿತು.  ಬಿಜೆಪಿ ಸತತ ಅವಧಿಗೆ ಅಧಿಕಾರ ಪಡೆಯಲು ಬಯಸಿದ್ದರೆ, ಎರಡು ದಶಕಗಳಿಂದ ವಿಪಕ್ಷವಾಗಿರುವ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವ ಗುರಿ ಹೊಂದಿದೆ. ೨೦೧೪ರಲ್ಲಿ ಮೋದಿ ಅವರುಗುಜರಾತ್ ಮಾದರಿ ಅಭಿವೃದ್ಧಿಯನ್ನು ಆಧರಿಸಿಯೇ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವುದರಿಂದ ಗುಜರಾತ್ ಚುನಾವಣಾ ಫಲಿತಾಂಶವು ೨೦೧೯ರ ಸಂಸತ್ ಚುನಾವಣೆ ಮೇಲೂ ಪರಿಣಾಮ ಬೀರುವುದೆಂಬ ನಿರೀಕ್ಷೆ ಇದೆ. ರಾಜ್ಯದ ೩೩ ಜಿಲ್ಲೆಗಳ ೩೭ ಕೇಂದ್ರಗಳಲ್ಲಿ ಮತಗಳ ಎಣಿಕೆಯೊಂದಿಗೆ ತೀವ್ರ ಹಣಾಹಣಿ ನಡೆದ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ.  ಪ್ರಮುಖ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ಪರಸ್ಪರರ ಮೇಲೆ ತೀವ್ರ  ದಾಳಿ ನಡೆಸಿದ್ದವು. ಪ್ರಧಾನಿ ಮೋದಿ ಬಿಜೆಪಿ ಪರ ಪ್ರಚಾರದ ನೇತೃತ್ವ ವಹಿಸಿದ್ದರೆ, ರಾಹುಲ್ ಗಾಂಧಿ ಕಾಂಗ್ರೆಸ್ ಪ್ರಚಾರದ ಸಾರಥ್ಯ ವಹಿಸಿದ್ದರು. ಪ್ರಚಾರ ಕಾಲದಲ್ಲಿ ಮೋದಿ ಮತ್ತು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರು ರಾಮ ಮಂದಿರ, ಗುಜರಾತ್ ಚುನಾವಣೆಯಲ್ಲಿ ಪಾಕಿಸ್ತಾನಿ ಹಸ್ತಕ್ಷೇಪದ ಆರೋಪ ಮತ್ತು (ಅಮಾನತುಗೊಂಡಿರುವ ಕಾಂಗ್ರೆಸ್ ನಾಯಕ) ಮಣಿ ಶಂಕರ ಅಯ್ಯರ್ ಟೀಕೆಗಳನ್ನು ಪ್ರಮುಖ ವಿಷಯಗಳನ್ನಾಗಿ ಮಾಡಿ ಕಾಂಗ್ರೆಸ್ಸನ್ನು ತರಾಟೆಗೆ ತೆಗೆದುಕೊಂಡಿದ್ದರು. ರಾಹುಲ್ ಗಾಂಧಿ ಅವರು ಮೋದಿ ಮತ್ತು ಬಿಜೆಪಿ ವಿರುದ್ಧರಾಜ್ಯದ ಜನರು ಎದುರಿಸುತ್ತಿರುವ ಪ್ರಮುಖ ವಿಷಯಗಳನ್ನು ಕೈಬಿಟ್ಟು, ಗುಜರಾತಿನ ಭವಿಷ್ಯದ ಬಗ್ಗೆ ಮಾತನಾಡದೇ ಇರುವುದಕ್ಕಾಗಿ ನಿರಂತರ ಟೀಕಾ ಪ್ರಹಾರ ಮಾಡಿದ್ದರು. ಬಿಜೆಪಿಯನ್ನು ಎರಡು ದಶಕಗಳ ಅಧಿಕಾರದ ಗದ್ದುಗೆಯಿಂದ ಇಳಿಸುವುದಕ್ಕಾಗಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಾಟೀದಾರ್ ಮತ್ತು ದಲಿತ ನಾಯಕರಾದ ಹಾರ್ದಿಕ್ ಪಟೇಲ್, ಅಲೇಶ್ ಥಾಕೂರ್ ಮತ್ತು ಜಿಗೇಶ್ ಮೇವಾನಿ ಅವರನ್ನು ಜೊತೆ ಸೇರಿಸಿಕೊಂಡು ವಿಶಾಲ ಸಾಮಾಜಿಕ ಮೈತಿಯನ್ನು ಕಾಂಗ್ರೆಸ್ ಹೆಣೆದಿತ್ತು. ಹಾರ್ದಿಕ್ ಪಟೇಲ್ ಅವರು ಮೀಸಲಾತಿಗಾಗಿ ನಡೆದ ತಮ್ಮ ಸಮುದಾಯದ ಸುದೀರ್ಘ ಹೋರಾಟದ ನೇತೃತ್ವ ವಹಿಸಿದ್ದರೆ, ಥಾಕೂರ್  ಅವರು ಒಬಿಸಿ ಮೀಸಲಾತಿ ಪಟ್ಟಿಗೆ ಪಾಟಿದಾರರನ್ನು ಸೇರಿಸಿದ್ದರ ವಿರುದ್ಧ ಪ್ರತಿ ಹೋರಾಟ ರೂಪಿಸಿ ಅದರ ನೇತೃತ್ವ ವಹಿಸಿದ್ದರು. ಮೇವಾನಿ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ದನಿ ಎತ್ತಿದ್ದರು. ರಾಜ್ಯದ ಜನಸಂಖ್ಯೆಯ ಶೇಕಡಾ ೧೨ರಷ್ಟು ಇರುವ ಪ್ರಭಾವಶಾಲಿ ಪಾಟೀದಾರ ಸಮುದಾಯವು ಚುನಾವಣೆಯಲ್ಲಿ ನಿರ್ಣಾಯಕವಾಗುವ ಸಾಧ್ಯತೆ ಇದೆ. ಪಟೇಲ್ ಅವರು ಕಾಂಗ್ರೆಸ್ ಗೆ ಬೆಂಬಲ ಸೂಚಿಸಿ, ಬಾರಿ ಬಿಜೆಪಿಯನ್ನು ಬುಡಸಮೇತ ಕಿತ್ತು ಹಾಕುವಂತೆ ಜನತೆಗೆ ಮನವಿ ಮಾಡಿದ್ದರು. ಪ್ರಧಾನಿ ಮೋದಿ ಅವರವಿಕಾಸ ಘೋಷಣೆಯೊಂದಿಗೆ ಆರಂಭವಾಗಿದ್ದ ಪ್ರಚಾರ ಸಮರದಲ್ಲಿ ಮುಕ್ತಾಯದ ವೇಳೆಗೆವಿಕಾಸ ಹಿಂದಕ್ಕೆ ಸರಿದು, ಜಾತಿ ಮತ್ತು ಧಾರ್ಮಿಕ ವಿಷಯಗಳು ಮುಂಚೂಣಿಗೆ ಬಂದಿದ್ದವು. ಸಾಮಾಜಿಕ ಮಾಧ್ಯಮದಲ್ಲೂ ಪ್ರಮುಖ ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ವಾಕ್ ಪ್ರಹಾರ ನಡೆಸಿದ್ದವು. ಕಾಂಗ್ರೆಸ್ ಮತ್ತು ಬೆಂಬಲಿಗರುವಿಕಾಸ ಬಿರುಕು ಬಿಟ್ಟಿದೆ ಎಂದು ವಾದಿಸಿದರೆ, ಬಿಜೆಪಿನಾನೇ ಅಭಿವೃದ್ಧಿ, ನಾನೇ ಗುಜರಾತ್ ಎಂದು ಪ್ರತಿಪಾದಿಸಿತ್ತು. ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಸರಾಸರಿ ಶೇಕಡಾ ೬೮.೪೧ರಷ್ಟು ಮತದಾನ ದಾಖಲಾಗಿತ್ತು.



2016: ಮುಂಬೈ: ಬಾಲಿವುಡ್ಮೆಗಾಸ್ಟಾರ್ಅಮಿತಾಬ್ಬಚ್ಚನ್ಅವರು 23 ಕೋಟಿ, 96 ಲಕ್ಷ ಟ್ವಿಟರ್ಹಿಂಬಾಲಕರನ್ನು ಹೊಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಜನ ಹಿಂಬಾಲಕನ್ನು ಹೊಂದಿರುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 74 ವರ್ಷದ ನಟ ಅಮಿತಾಬ್ಬಚ್ಚನ್‌ 23 ಕೋಟಿ 96ಲಕ್ಷ, ಶಾರುಕ್ಖಾನ್‌ 22ಕೋಟಿ, 56ಲಕ್ಷ, ಸಲ್ಮಾನ್ಖಾನ್‌ 20ಕೋಟಿ, 72ಲಕ್ಷ, ಅಮೀರ್ಖಾನ್‌ 19ಕೋಟಿ, 3ಲಕ್ಷ, ನಟಿ ದೀಪಿಕಾ ಪಡುಕೋಣೆ 16ಕೋಟಿ, 8ಲಕ್ಷ, ಪ್ರಿಯಾಂಕ ಚೋಪ್ರಾ 15ಕೋಟಿ, 77ಲಕ್ಷ ಜನ ಹಿಂಬಾಲಕರನ್ನು ಹೊಂದಿದ್ದಾರೆ.
ಅಮಿತಾಬ್ಬಚ್ಚನ್ಅವರು 2010ರಲ್ಲಿ ಟ್ವಿಟರ್ಬಳಕೆಯನ್ನು ಪ್ರಾರಂಭಿಸಿದ್ದು, ಟ್ವಿಟರ್ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಬಗ್ಗೆ ಅಮಿತಾಬ್ಬಚ್ಚನ್ಸಂತಸ ವ್ಯಕ್ತಪಡಿಸಿದರು.

2016: ನವದೆಹಲಿ
: ಲೆಫ್ಟಿನೆಂಟ್ ಜನರಲ್ಬಿಪಿನ್ರಾವತ್ಅವರನ್ನು ಸೇನಾ ಪಡೆಯ ನೂತನ
ಮುಖ್ಯಸ್ಥರನ್ನಾಗಿ ಮತ್ತು ಏರ್ಚೀಫ್ಮಾರ್ಷಲ್ಬಿ.ಎಸ್‌. ಧನೋವಾ ಅವರನ್ನು ವಾಯು ಪಡೆಯ (ಐಎಎಫ್‌) ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿತು. ಸೇನಾ ಪಡೆಯ ಉಪ ಮುಖ್ಯಸ್ಥರಾಗಿರುವ ರಾವತ್ಅವರು, ಇಬ್ಬರು ಹಿರಿಯ ಅಧಿಕಾರಿಗಳನ್ನು  (ಅತ್ಯಂತ ಹಿರಿಯ ಸೇನಾ ಕಮಾಂಡರ್‌, ಪೂರ್ವ ಕಮಾಂಡ್ ಮುಖ್ಯಸ್ಥ ಪ್ರವೀಣ್ಬಕ್ಷಿ ಮತ್ತು ದಕ್ಷಿಣ ಕಮಾಂಡ್ ಮುಖ್ಯಸ್ಥ ಪಿ.ಎಂ. ಹರಿಜ್‌) ಹಿಂದಿಕ್ಕಿ ಭೂ ಸೇನೆಯ ಮುಖ್ಯಸ್ಥರ ಹುದ್ದೆಗೆ ನೇಮಕವಾದರು. ಸೇನಾ ಪಡೆ ಮುಖ್ಯಸ್ಥ ಜನರಲ್ದಲ್ಬೀರ್ಸಿಂಗ್ಸುಹಾಗ್ಅಧಿಕಾರಾವಧಿ ಡಿಸೆಂಬರ್‌ 31ಕ್ಕೆ ಕೊನೆಗೊಳ್ಳಲಿದ್ದು, ರಾವತ್ಅವರು ಸುಹಾಗ್ಸ್ಥಾನವನ್ನು ತುಂಬಲಿದ್ದಾರೆ. ವಾಯುಪಡೆಯ ಮುಖ್ಯಸ್ಥರಾದ ಅರೂಪ್ರಾಹಾ ಅವರು ಡಿ.  31ರಂದು ನಿವೃತ್ತರಾಗಲಿದ್ದು, ಧನೋವಾ ಅವರು ಅದೇ ದಿನ ಅಧಿಕಾರ ವಹಿಸಿಕೊಳ್ಳುವರು.
 2016: ನವದೆಹಲಿ: ಐಪಿಎಸ್ಅಧಿಕಾರಿಗಳಾದ ರಾಜೀವ್ಜೈನ್ಅವರನ್ನು ಗುಪ್ತದಳದ (ಐಬಿ) ನಿರ್ದೇಶಕರಾಗಿ ಮತ್ತು ಅನಿಲ್ಧಸ್ಮಾನಾ ಅವರನ್ನು ಗುಪ್ತಚರ ಸಂಸ್ಥೆರಾ’ (ರಿಸರ್ಚ್ಅಂಡ್ ಅನಾಲಿಸಿಸ್ವಿಂಗ್‌) ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿತು. ಗುಪ್ತದಳದ ನಿರ್ದೇಶಕರಾಗಿರುವ ದಿನೇಶ್ವರ್ಶರ್ಮಾಅವರ ಅವಧಿ  ಡಿಸೆಂಬರ್‌ 31 ಕ್ಕೆ  ಪೂರ್ತಿಯಾಗುತ್ತದೆ. ರಾಜೀವ್ಅವರು ಶರ್ಮಾ ಸ್ಥಾನವನ್ನು ತುಂಬಲಿದ್ದಾರೆ.
 2016: ಜಮ್ಮು: ಪುಲ್ವಾಮ ಜಿಲ್ಲೆಯಲ್ಲಿ ಶ್ರೀನಗರ- ಜಮ್ಮು ಹೆದ್ದಾರಿಯ ಸಮೀಪ ಪಾಂಪೋರೆಯಲ್ಲಿ
ಭಯೋತ್ಪಾದಕರು ಸೇನಾ ತುಕಡಿ ಮೇಲೆ ಗುಂಡಿನ ದಾಳಿ ನಡೆಸಿದರು. ದಾಳಿಯಿಂದ ಮೂವರು ಯೋಧರು ಹುತಾತ್ಮರಾದರು. ಪುಲ್ವಾಮ ಜಿಲ್ಲೆಯ ಪಾಂಪೋರೆ ಪಟ್ಟಣದ ಕಡ್ಲಾಬಲ್ನಲ್ಲಿ ದಾಳಿ ಈದಿನ ಮಧ್ಯಾಹ್ನದ ವೇಳೆಗೆ ನಡೆಯಿತು ಎಂದು ಅಧಿಕಾರಿಗಳು ಹೇಳಿದರು. ಘಟನೆಯ ಬೆನ್ನಲ್ಲೇ ಸೇನೆ ಪ್ರದೇಶವನ್ನು ಸುತ್ತುವರಿದು, ಶೋಧ ಕಾರ್ಯಾಚರಣೆ ಕೈಗೊಂಡಿತು. ಗುಂಡಿನ ದಾಳಿಗೆ ನಮ್ಮ ಯೋಧರು ಸೂಕ್ತ ಪ್ರತ್ಯುತ್ತರ ನೀಡಿದ್ದಾರೆ ಎಂದು ಅವರು ನುಡಿದರು.

2016: ನವದೆಹಲಿ
: ಇರಾನಿನ ಚಾಬಹಾರ್ ಬಂದರಿನ ಮೂಲಕ ವ್ಯಾಪಾರ ಮತ್ತು ಸಾಗಣೆ
ಕೊಂಡಿಗಳನ್ನು ಬಲ ಪಡಿಸುವ ನಿಟ್ಟಿನಲ್ಲಿ ಇನ್ನಷ್ಟು ಶ್ರಮಿಸಲು ಭಾರತ ಮತ್ತು ತಾಜಿಕಿಸ್ತಾನ ನಿರ್ಧರಿಸಿದವು. ತಾಜಿಕಿಸ್ತಾನದ ಅಧ್ಯಕ್ಷ ಎಮೊಮಲಿ ರಹ್ಮೋನ್ ಜೊತೆಗಿನ ಮಾತುಕತೆಗಳ ಬಳಿಕ ನೀಡಲಾದ ಜಂಟಿ ಹೇಳಿಕೆಯಲ್ಲಿ ವಿಚಾರವನ್ನು ತಿಳಿಸಲಾಯಿತು. ವ್ಯಾಪಾರ ಮತ್ತು ಹೂಡಿಕೆಗೆ ಒತ್ತು ಕೊಡುವ ಮೂಲಕ ನಮ್ಮ ಆರ್ಥಿಕ ಬಾಂಧವ್ಯವನ್ನು ಗಟ್ಟಿಗೊಳಿಸಲು ಮತ್ತು ಅವುಗಳ ಅವಕಾಶ ವಿಸ್ತರಿಸಲು ನಾವು ಒಪ್ಪಿದ್ದೇವೆ ಎಂದು ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು. ನಾವು ಫಲಪ್ರದ ಮಾತುಕತೆ ನಡೆಸಿದ್ದೇವೆ. ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವುದು ಪ್ರಾದೇಶಿಕ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ ವಿಚಾರ ಎಂಬ ಉಭಯರೂ ಒಪ್ಪಿದ್ದೇವೆ. ಉಗ್ರವಾದ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೇಂದ್ರ ಏಷ್ಯಾ ಪ್ರದೇಶದಲ್ಲಿ ತಾಜಿಕಿಸ್ತಾನದ ಪಾತ್ರ ಮಹತ್ವದ್ದು ಎಂದು ನಾವು ಮೆಚ್ಚಿದ್ದೇವೆ ಎಂದು ಮೋದಿ ಹೇಳಿದರು.
2016: ಇಸ್ಲಾಮಾಬಾದ್: ಭಾರತದ ಜೊತೆಗಿನ ಸಿಂಧೂ ಜಲ ಒಪ್ಪಂದದಲ್ಲಿ ಯಾವುದೇ
ಬದಲಾವಣೆಯನ್ನೂ ತಾನು ಒಪ್ಪುವುದಿಲ್ಲ ಎಂದು ಪಾಕಿಸ್ತಾನ ಸ್ಪಷ್ಟ ಪಡಿಸಿತು. ಸಿಂಧೂ ಜಲ ಒಪ್ಪಂದ ಜಾರಿ ಕುರಿತ ಭಿನ್ನಮತಗಳನ್ನು ನಿವಾರಿಸಿಕೊಳ್ಳಲು ದ್ವಿಪಕ್ಷೀಯ ಮಾತುಕತೆ ನಡೆಸಲು ಸಿದ್ಧ ಎಂಬುದಾಗಿ ಭಾರತ ಹಿಂದಿನ ದಿನ ಸ್ಪಷ್ಟ ಪಡಿಸಿದ ಬಳಿಕ ಪಾಕಿಸ್ತಾನಿ ಪ್ರತಿಕ್ರಿಯೆ ನೀಡಿತು. ಭಾರತವು ವಿವಾದ ಇತ್ಯರ್ಥವನ್ನು ವಿಳಂಬಗೊಳಿಸಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿಯ ವಿಶೇಷ ಸಹಾಯಕ ತಾರಿಖ್ ಫತೇಮಿ ಅವರು ಡಾನ್ ಪತ್ರಿಕೆ ಜೊತೆಗೆ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿದರು. 1960ರಲ್ಲಿ ಸಹಿ ಹಾಕಲಾಗಿರುವ ಸಿಂಧೂ ಜಲ ಒಪ್ಪಂದದ ಪ್ರಕಾರ ಸಿಂಧೂಕೊಳ್ಳದ ನದಿಗಳ ಪೈಕಿ ಪೂರ್ವ ಭಾಗದ ಮೂರು ನದಿಗಳಾದ ಬಿಯಾಸ್, ರಾವಿ ಮತ್ತು ಸಟ್ಲೆಜ್ ನದಿಗಳ ಮೇಲೆ ಭಾರತ ನಿಯಂತ್ರಣ ಹೊಂದಿದೆ. ಪಶ್ಚಿಮದ ಮೂರು ನದಿಗಳಾದ ಸಿಂಧೂನದಿ, ಚೇನಾಬ್ ಮತ್ತು ಜೇಲಂ ನದಿಗಳ ಮೇಲೆ ಪಾಕಿಸ್ತಾನ ನಿಯಂತ್ರಣ ಹೊಂದಿದೆ. ಸಿಂಧೂ ಜಲ ಒಪ್ಪಂದದ ಪ್ರಕಾರ ಉಭಯ ರಾಷ್ಟ್ರಗಳಿಂದಲೂ ತಲಾ ಒಬ್ಬರು ಕಮೀಷನರ್ ಇರುವ ಖಾಯಂ ಸಿಂಧೂ ಆಯೋಗವನ್ನೂ ಒಪ್ಪಂದ ಅನುಷ್ಠಾನ ಸಲುವಾಗಿ ರಚಿಸಲಾಗಿದೆ. ಡಾನ್ ಜೊತೆಗೆ ಮಾತನಾಡಿದ ತಾರಿಖ್ ಅವರು ಸಿಂಧೂ ಜಲ ಒಪ್ಪಂದ ವಿಧಿಗಳಿಗೆ ಮಾಡುವ ಯಾವುದೇ ಬದಲಾವಣೆಯನ್ನೂ ಪಾಕಿಸ್ತಾನ ಅಂಗೀಕರಿಸುವುದಿಲ್ಲ. ಒಪ್ಪಂದದಲ್ಲಿ ವ್ಯಕ್ತ ಪಡಿಸಲಾಗಿರುವ ತತ್ವಗಳನ್ನು ಆಧರಿಸಿ ನಾವು ನಮ್ಮ ನಿಲುವನ್ನು ತಾಳಿದ್ದೇವೆ. ಒಪ್ಪಂದವನ್ನು ಅಕ್ಷರಶಃ ಗೌರವಿಸಬೇಕು ಎಂದು ಹೇಳಿದರು. ಇದಕ್ಕೆ ಮುನ್ನ ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ ಸ್ವರೂಪ್ ಅವರು ನವದೆಹಲಿಯಲ್ಲಿ ಸಿಂಧೂ ಜಲ ಒಪ್ಪಂದ ಜಾರಿ ಪ್ರಕ್ರಿಯೆ ಅಂತಿಮಗೊಳಿಸಲು ಸಮಯ ಬೇಕಾಗುತ್ತದೆ ಎಂದಿದ್ದರು.
2016: ಮುಂಬೈ: ಸಿಎಸ್ಟಿ ಮುಂಬೈಯ ಸೆಂಟ್ರಲ್ ರೈಲ್ವೆಯ ಅಸಿಸ್ಟೆಂಟ್ ಕಮರ್ಶಿಯಲ್ ಮ್ಯಾನೇಜರ್ ಕೆ.ಎಲ್. ಭೋಯರ್ ವಿರುದ್ಧ ಪಿ.ಸಿ. ಕಾಯ್ದೆಯ ವಿವಿಧ ವಿಧಿಗಳ ಅಡಿಯಲ್ಲಿನೋಟು ಪರಿವರ್ತನೆಮಾಡಿದ ಆರೋಪದಲ್ಲಿ ಸಿಬಿಐ ಪ್ರಕರಣ ದಾಖಲಿಸಿತು. ಕೇಂದ್ರ ರೈಲ್ವೆ ಸಿಎಸ್ಟಿಯಲ್ಲಿ ಅಸಿಸ್ಟೆಂಟ್ ಕಮರ್ಶಿಯಲ್ ಮ್ಯಾನೇಜರ್ ಕೆ.ಎಲ್. ಭೋಯರ್ ಅವರು ಅಂದಾಜು 8.22 ಲಕ್ಷ ರೂಪಾಯಿ ಮೌಲ್ಯದ ಹಳೆಯ ನೋಟುಗಳನ್ನು 100 ರೂಪಾಯಿ ಮತ್ತು 2000 ರೂಪಾಯಿ ಮುಖಬೆಲೆಯ ಹೊಸ ನೋಟುಗಳಿಗೆ ವಿನಿಮಯ ಮಾಡಿಕೊಟ್ಟಿದ್ದಾರೆ ಎಂದು ಆಪಾದಿಸಲಾಯಿತು. ಮುಂಬೈ, ಕಲ್ಯಾಣ್ ಮತ್ತು ಥಾಣೆ ಸಿಎಸ್ಟಿಗಳ ಬುಕಿಂಗ್ ಕೌಂಟರ್ಗಳಲ್ಲೇ ವ್ಯವಹಾರ ನಡೆದಿತ್ತು ಎಂದು ಹೇಳಲಾಗಿದೆ. ಸಿಬಿಐ ಶೋಧ ಮುಂದುವರೆಸಿತು.
2016:  ಮುಂಬೈ: ನ್ಯಾಯಮೂರ್ತಿ ಲೋಧಾ ಸಮಿತಿಯ ಶಿಫಾರಸುಗಳ ಹಿನ್ನೆಲೆಯಲ್ಲಿ ಮುಂಬೈ
ಕ್ರಿಕೆಟ್ ಅಸೋಸಿಯೇಶನ್ನಿನ ಅಧ್ಯಕ್ಷ ಸ್ಥಾನದಿಂದ ಶರದ್ ಪವಾರ್ ಅವರು ಕೆಳಗಿಳಿದರು. ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕೇ ಅಥವಾ ಬೇಡವೇ ಎಂಬುದಾಗಿ ರ್ಚಚಿಸಲು ಅಸೋಸಿಯೇಶನ್ ಈದಿನ ತುರ್ತು ಸಭೆ ಕರೆದಿತ್ತು. ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಎಂಬ ತೀರ್ಮಾನವನ್ನು ಕೈಗೊಂಡರೆ ಶರದ್ ಪವಾರ್ ಅವರು ಹುದ್ದೆಯಿಂದ ಕೆಳಗಿಳಿಯುವುದು ಅನಿವಾರ್ಯವಾಗುತ್ತದೆ ಎಂದು ಸುದ್ದಿಮೂಲಗಳು ಮೊದಲೇ ತಿಳಿಸಿದ್ದವು.ಕ್ರಿಕೆಟ್ ಆಡಳಿತಗಾರರು 70 ವರ್ಷ ಮೀರಿರಬಾರದು ಮತ್ತು ಸತತ ಎರಡು ಅವಧಿಗಳಲ್ಲಿ ಸೇವೆ ಸಲ್ಲಿಸಿರಬಾರದು ಎಂಬುದಾಗಿ ಲೋಧಾ ಸಮಿತಿ ಶಿಫಾರಸು ಮಾಡಿತ್ತು. ಶಿಫಾರಸು ಜಾರಿಗೆ ಎಂಸಿಎ ತೀರ್ಮಾನಿಸಿದರೆ ಶರದ್ ಪವಾರ್ ಅವರು ಹುದ್ದೆಯಲ್ಲಿ ಮುಂದುವರೆಯುವ ಅರ್ಹತೆ ಕಳೆದುಕೊಳ್ಳುತ್ತಾರೆ ಎಂಬುದು ಸ್ಪಷ್ಟವಾಗಿತ್ತು.
 2016: ನವದೆಹಲಿ: ಅಗಸ್ತಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಸಿಬಿಐನಿಂದ
ಬಂಧಿತರಾಗಿರುವ ಮಾಜಿ ಏರ್ ಚೀಫ್ ಮಾರ್ಷಲ್ ಎಸ್.ಪಿ. ತ್ಯಾರಿ ಮತ್ತು ಇತರ ಇಬ್ಬರ ನ್ಯಾಯಾಂಗ ಬಂಧನವನ್ನು ಡಿ. 30ರವರೆಗೆ ವಿಸ್ತರಿಸಲಾಯಿತು. ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ಎಸ್. ಪಿ. ತ್ಯಾಗಿ, ತ್ಯಾಗಿ ಅವರ ಸೋದರ ಸಂಬಂಧಿ ಸಂಜೀವ್ ತ್ಯಾಗಿ ಮತ್ತು ವಕೀಲ ಗೌತಮ್ ಕೈತನ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿದರು. ಯುಪಿಎ-2 ಸರ್ಕಾರದ ಅವಧಿಯಲ್ಲಿ ಅಗಸ್ತಾ ವೆಸ್ಟ್ಲ್ಯಾಂಡ್ನಿಂದ 12 ವಿವಿಐಪಿ ಹೆಲಿಕ್ಯಾಪ್ಟರ್ ಖರೀದಿಸಿದ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಡಿಸೆಂಬರ್ 9 ರಂದು ತ್ಯಾಗಿ ಮತ್ತು ಇತರ ಇಬ್ಬರನ್ನು ಬಂಧಿಸಿತ್ತು. ತ್ಯಾಗಿ ಮತ್ತು ಇತರ ಇಬ್ಬರು ಜಾಮೀನು ಅರ್ಜಿ ಸಲ್ಲಿಸಿದ್ದು, ಡಿಸೆಂಬರ್ 21ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಯುವುದು.
2016: ದುಬೈ: ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ದುಬೈ ವರ್ಲ್ಡ್ ಸೂಪರ್ ಸಿರೀಸ್ ಫೈನಲ್ಸ್
ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ನಲ್ಲಿ ಮುಗ್ಗರಿಸಿದರು. ಹಮ್ದನ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಪಿವಿ ಸಿಂಧು 15-21, 21-18, 15-21 ಗೇಮ್ ಗಳಿಂದ ಕೊರಿಯಾದ ಜಿ ಹ್ಯೂನ್ ಸಂಗ್ ವಿರುದ್ಧ ಸೋಲನುಭವಿಸಿದರು. ಪಂದ್ಯದುದ್ದಕ್ಕೂ ಒತ್ತಡದಲ್ಲೆ ಆಡಿದ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ನಿಕಟ ಪೈಪೋಟಿ ನೀಡಿದರೂ ಕೊರಿಯಾ ಆಟಗಾರ್ತಿಯ ಹೋರಾಟದ ಮುಂದೆ ಸಾಟಿಯಾಗಲಿಲ್ಲ. ಮೊದಲ ಗೇಮಿನಲ್ಲಿಸೋತರೂ ತಕ್ಷಣವೇ ಪುಟಿದೇಳುವ ಮೂಲಕ 2ನೇ ಗೇಮ್ಲ್ಲಿ ತಿರುಗೇಟು ಕೊಟ್ಟ ಸಿಂಧು ಪಂದ್ಯದಲ್ಲಿ ಸಮಬಲ ಸಾಧಿಸಿದರು. ನಿರ್ಣಾಯಕ 3ನೇ ಹಾಗೂ ಅಂತಿಮ ಗೇಮಿನಲ್ಲಿಅನವಶ್ಯಕ ಹೊಡೆತಗಳಿಗೆ ಕೈಹಾಕಿದ ಸಿಂಧು ಕೊರಿಯಾ ಆಟಗಾರ್ತಿಗೆ ಸುಲಭವಾಗಿ ಮಣಿದರು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆಯ ತಜು ಯಿಂಗ್ ಥಾಯಿ 21-19, 21-19 ನೇರ ಗೇಮ್ಳಿಂದ ಚೀನಾದ ಯೂ ಸನ್ ವಿರುದ್ಧ ಜಯ ದಾಖಲಿಸಿದರು.
2016: ನವದೆಹಲಿ: 1.99 ಕೋಟಿ ರೂಪಾಯಿ ಮೌಲ್ಯದ ಹಳೆಯ ನೋಟುಗಳನ್ನು 2000 ರೂಪಾಯಿ
ಮುಖಬೆಲೆಯ ಹೊಸ ನೋಟು ಹಾಗೂ 100 ರೂಪಾಯಿಗಳ ನೋಟುಗಳಿಗೆ ವಿನಿಮಯ ಮಾಡಿಕೊಟ್ಟ ಆಪಾದನೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿ ) ಇಬ್ಬರು ಅಧಿಕಾರಿಗಳನ್ನು ಸಿಬಿಐ ಬೆಂಗಳೂರಿನಲ್ಲಿ ಬಂಧಿಸಿತು.. ಆರ್ಬಿಐ ನಗದು ಇಲಾಖೆಯ ಸೀನಿಯರ್ ಸ್ಪೆಷಲ್ ಅಸಿಸ್ಟೆಂಟ್ ಸದಾನಂದ ನಾಯ್ಕ ಮತ್ತು ಸ್ಪೆಷಲ್ ಅಸಿಸ್ಟೆಂಟ್ .ಕೆ. ಕವಿನ್ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ತೆಗೆದುಕೊಳ್ಳಲಾಗಿದ್ದು ಅವರ ವಿರುದ್ಧ ಕ್ರಿಮಿನಲ್ ಸಂಚು ಮತ್ತು ವಂಚನೆ ಆಪಾದನೆ ಜೊತೆಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವಿವಿಧ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಬೆಂಗಳೂರಿನ ವಿಶೇ ನ್ಯಾಯಾಲಯವು ಆರೋಪಿಗಳಿಬ್ಬರನ್ನೂ ನಾಲ್ಕು ದಿನಗಳ ಅವಧಿಗೆ ಸಿಬಿಐ ವಶಕ್ಕೆ ಒಪ್ಪಿಸಿದೆ ಎಂದು ಸಿಬಿಐ ಮೂಲಗಳು ತಿಳಿಸಿದವು. ಉಭಯ ಆರೋಪಿಗಳೂ ಆರ್ಬಿಐಯ ಇತರ ಅನಾಮಧೇಯ ಅಧಿಕಾರಿಗಳ ಜೊತೆ ಸೇರಿ ಇತರ ಅನಾಮಧೇಯ ವ್ಯಕ್ತಿಗಳನ್ನು ಸೇರಿಸಿಕೊಂಡು ಕ್ರಿಮಿನಲ್ ಸಂಚು ಹೂಡಿದ್ದರು ಎಂದು ಸಿಬಿಐ ವಕ್ತಾರ ದೇವಪ್ರೀತ್ ಸಿಂಗ್ ನುಡಿದರು. ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದ ಸ್ಟೇಟ್ಬ್ಯಾಂಕ್ಆಫ್ಮೈಸೂರು (ಎಸ್ಬಿಎಂ) ಶಾಖೆಯಲ್ಲಿ  ₹ 1.51 ಕೋಟಿ ಕಪ್ಪು ಹಣ ಬಿಳಿ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಆರ್ಬಿಐ ಹಿರಿಯ ವಿಶೇಷ ಸಹಾಯಕ ಕೆ. ಮೈಕಲ್ಅವರನ್ನು ಸಿಬಿಐ ಈಚೆಗಷ್ಟೆ ಬಂಧಿಸಿತ್ತು. ಈಗ ಮತ್ತಿಬ್ಬರ ಬಂಧನವಾಗಿದ್ದು, ಆರ್ಬಿಐನ ಮೂವರ ಬಂಧನವಾದಂತಾಯಿತು.

2016: ಹುಬ್ಬಳ್ಳಿ: ಸಂಗೀತ ವಿದ್ವಾಂಸ ಪಂ. ನಾಗನಾಥ ಒಡೆಯರ್ (72) ಅವರು ಹುಬ್ಬಳ್ಳಿಯ
ವಿಕಾಸ್ನಗರದ ನಿವಾಸದಲ್ಲಿ ನಿಧನರಾದರು. ಗಂಗೂಬಾಯಿ ಹಾನಗಲ್ ಅವರ ಪ್ರೀತಿಯ ಶಿಷ್ಯರಾಗಿದ್ದ ನಾಗನಾಥರು ಮಹಾರಾಷ್ಟ್ರ  ಮತ್ತು ಗೋವಾ ರಾಜ್ಯದಲ್ಲಿ  ಸರಣಿ ಕಾರ್ಯಕ್ರಮಗಳನ್ನು ನೀಡಿದ್ದರು. ನಾಗನಾಥರು 1944ರಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯ ಬಂಕಾಪುರದಲ್ಲಿ ಜನಿಸಿದರು. 1955–56ರಲ್ಲಿ ವಿ.ಎಚ್. ಇನಾಮದಾರರ ಬಳಿ ಪ್ರಾಥಮಿಕ ಸಂಗೀತ ಅಭ್ಯಾಸ ಆರಂಭಿಸಿದ ಅವರು ನಂತರ 15 ವರ್ಷಗಳ ಕಾಲ ಗಂಗೂಬಾಯಿ ಹಾನಗಲ್ ಅವರಲ್ಲಿ ಕಿರಾಣಾ ಘರಾನಾ ಅಭ್ಯಾಸ ಮಾಡಿದ್ದರು. 1974ರಿಂದ ಅವರು ಆಕಾಶವಾಣಿಯಲ್ಲಿ ಗಾಯನ ಕಾರ್ಯಕ್ರಮ ನೀಡುತ್ತಿದ್ದರು. ನಾಗನಾಥರ ಪುತ್ರ, ತಬಲಾ ವಾದಕ ಸಂತೋಷ ಒಡೆಯರ್ ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತರಾಗಿದ್ದರು. ನಂತರ ನಾಗನಾಥರು ಖಿನ್ನರಾಗಿದ್ದರು.
2014: ಲಂಡನ್: ಪ್ರಪಂಚದಾದ್ಯಂತ ಸಮುದ್ರಗಳು ಪ್ಲಾಸ್ಟಿಕ್ ಕಸದ ತೊಟ್ಟಿಯಾಗಿ ಪರಿವರ್ತನೆಯಾಗಿದ್ದು ಸಾಗರದ ಜಲಚರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ಅಧ್ಯಯನವೊಂದು ತಿಳಿಸಿತು.. ಪ್ಲೆಮೌತ್ ವಿಶ್ವವಿದ್ಯಾಲಯ ಮತ್ತು ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ವಿಜ್ಞಾನಿಗಳು ನಡೆಸಿದ ಅಧ್ಯಯನದಿಂದ ಸಾಗರ ತಳದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಅತೀ ಹೆಚ್ಚಿನ ಪ್ರಮಾಣದಲ್ಲಿ ಜಮೆಯಾಗಿರುವುದು ತಿಳಿದು ಬಂದಿತು. ಸಮುದ್ರದ ತಳದಲ್ಲಿ ಪ್ರತೀ ಚದರ ಕಿ.ಮೀ. ನಲ್ಲಿ ನಾಲ್ಕು ಬಿಲಿಯನ್ ಸೂಕ್ಷ್ಮ ಪ್ಲಾಸ್ಟಿಕ್ ತುಂಡುಗಳು ಜಮೆಯಾಗಿವೆ ಎಂಬ ಆಘಾತಕಾರಿ ಅಂಶ ಬಯಲಾಯಿತು. ಸಮುದ್ರದಲ್ಲಿ ಜಮೆಯಾಗಿರುವ ಪ್ಲಾಸ್ಟಿಕ್ನಿಂದಾಗಿ ಜಲಚರಗಳ ಜೀವನ ಚಕ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದೊಂದು ಜಾಗತಿಕ ಸಮಸ್ಯೆಯಾಗಿದ್ದು, ಇದರಿಂದಾಗಿ ಪ್ರವಾಸೋದ್ಯಮ, ಮೀನುಗಾರಿಕೆ ಮತ್ತು ನೌಕಾಯಾನದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಕಸದ ರೂಪದಲ್ಲಿ ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್ ಸಣ್ಣ ಸಣ್ಣ ಚೂರುಗಳಾಗಿ ವಿಭಜನೆ ಹೊಂದಿ ಸಮುದ್ರದ ತಳದಲ್ಲಿ ಜಮೆಯಾಗುತ್ತಿವೆ. 2-3 ಮಿ.ಮೀ. ಗಾತ್ರದ ತುಂಡುಗಳಾಗಿ ವಿಭಜನೆ ಹೊಂದುವ ಪ್ಲಾಸ್ಟಿಕ್ ಸಾಮಾನ್ಯವಾಗಿ ನೀಲಿ, ಕಪ್ಪು, ಹಸಿರು ಅಥವಾ ಕೆಂಪು ಬಣ್ಣ ಹೊಂದಿರುತ್ತವೆ. ಜತೆಗೆ ಮಾನವ ನಿರ್ವಿುತ ಪಾಲಿಮರ್ಗಳಾದ ಪಾಲಿಯಸ್ಟರ್, ಪಾಲಿಮೈಡ್ಸ್, ಅಸಿಟೇಟ್ ಮತ್ತು ಆಕ್ರಲಿಕ್ ಹೆಚ್ಚಾಗಿ ಸಮುದ್ರದಲ್ಲಿ ಕಂಡು ಬಂದಿದೆ ಎಂದು ತಜ್ಞರು ತಿಳಿಸಿದರು.

2014:  ನವದೆಹಲಿ: ಪಾಕಿಸ್ತಾನದ ಪೇಶಾವರ ನಗರದಲ್ಲಿ 16-12-2014ರ ಮಂಗಳವಾರ ನಡೆದ ಭೀಭತ್ಸ ತಾಲಿಬಾನ್ ದಾಳಿಯಲ್ಲಿ ತಮ್ಮ ಪ್ರಾಣಗಳನ್ನು ಕಳೆದುಕೊಂಡವರ ಸ್ಮರಣೆಗಾಗಿ ಲೋಕಸಭೆಯು ಈದಿನ ಸಂಕ್ಷಿಪ್ತ ಮೌನ ಪ್ರಾರ್ಥನೆ ಸಲ್ಲಿಸಿತು. ಸದನ ಸಮಾವೇಶಗೊಂಡ ತತ್ ಕ್ಷಣವೇ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಮೌನ ಆಚರಿಸುವಂತೆ ಮತ್ತು ದಾಳಿಯನ್ನು ಖಂಡಿಸುವಂತೆ ಸದಸ್ಯರನ್ನು ಕೋರಿದರು. ಪ್ರಧಾನಿ ನರೇಂದ್ರ ಮೋದಿ ಅವರೂ ಈ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದರು. ಪಾಕಿಸ್ತಾನಿ ತಾಲೀಬಾನ್ ಸಂಘಟನೆ ಸಶಸ್ತ್ರಧಾರಿ, ಆತ್ಮಾಹುತಿ ಬಾಂಬ್ ದಾಳಿಕೋರರ ಮೂಲಕ ಪೇಶಾವರ ನಗರದಲ್ಲಿ ಸೇನೆಯ ವತಿಯಿಂದ ನಡೆಯುವ ಶಾಲೆಯಲ್ಲಿ ರಕ್ತಪಾತ ಎಸಗಿ 148ಕ್ಕೂ ಹೆಚ್ಚು ಜನರನ್ನು ಕೊಂದಿತ್ತು. ಮೃತರಲ್ಲಿ 132ಕ್ಕೂ ಹೆಚ್ಚಿನ ಮಂದಿ ಮಕ್ಕಳಾಗಿದ್ದರು. ಅನಧಿಕೃತ ವರದಿಗಳ ಪ್ರಕಾರ ಸತ್ತವರ ಸಂಖ್ಯೆ 160ಕ್ಕೂ ಹೆಚ್ಚು. ಮಕ್ಕಳನ್ನು ಭಯಭೀತರನ್ನಾಗಿ ಮಾಡಲು ಭಯೋತ್ಪಾದಕರು ಅವರ ಎದುರಿನಲ್ಲಿಯೇ ಶಿಕ್ಷಕರೊಬ್ಬರನ್ನು ಸಜೀವವಾಗಿ ಸುಟ್ಟು ಹಾಕಿದ್ದರು.

2014:  ನವದೆಹಲಿ: ಇಂಚೋನ್ ಏಷಿಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಸ್ವೀಕರಿಸಲು ನಿರಾಕರಿಸಿದ್ದ ಭಾರತದ ಬಾಕ್ಸರ್ ಸರಿತಾ ದೇವಿ ಅವರನ್ನು ವಿಶ್ವ ಬಾಕ್ಸರ್ ಸಂಸ್ಥೆ ಎಐಬಿಎ ಒಂದು ವರ್ಷದ ಅವಧಿಗೆ ನಿಷೇಧಿಸಿತು. 1000 ಸಿಎಚ್ಎಫ್ (ಸ್ವಿಸ್ ಫ್ರಾಂಕ್) ದಂಡವನ್ನೂ ಆಕೆಗೆ ವಿಧಿಸಲಾಯಿತು. ವಿವಾದಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸರಿತಾ ದೇವಿ ಅವರ ಬಗೆಗಿನ ನಿರ್ಧಾರವನ್ನು ದೀರ್ಘಕಾಲದಿಂದ ನನೆಗುದಿಯಲ್ಲಿ ಇಟ್ಟಿದ್ದ ಎಐಬಿಎ ಕಡೆಗೂ ಗುಮಾನಿಗೆ ತೆರೆ ಎಳೆಯಿತು. ಸರಿತಾ ಪ್ರತಿಭಟನೆ ಸಂದರ್ಭದಲ್ಲಿ ಅವರ ಪಕ್ಷ ವಹಿಸಿದ್ದಕ್ಕಾಗಿ ಭಾರತದ ವಿದೇಶೀ ಕೋಚ್ ಬಿ.ಐ. ಫರ್ನಾಂಡೆಸ್ ಅವರಿಗೂ ಎಐಬಿಎ ಎರಡು ವರ್ಷಗಳ ನಿಷೇಧ ಹೇರಿತು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕೋಚ್ ಜಿ.ಎಚ್. ಸಂಧು ಅವರನ್ನು ಆರೋಪಮುಕ್ತ ಗೊಳಿಸಿತು.

2014: ಮುಂಬೈ: ಭಾರತೀಯ ಬಾಕ್ಸರ್ ಎಲ್. ಸರಿತಾ ದೇವಿ ವೃತ್ತಿಜೀವನ ಅಂತ್ಯಗೊಳ್ಳುವ ರೀತಿಯಲ್ಲಿ ಯಾವುದೇ ಕ್ರಮ ಜರುಗಿಸದಂತೆ ವಿಶ್ವ ಬಾಕ್ಸಿಂಗ್ ಸಂಸ್ಥೆಗೆ (ಎಐಬಿಎ) ಪತ್ರ ಬರೆದಿರುವುದಾಗಿ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮುಂಬೈಯಲ್ಲಿ ತಿಳಿಸಿದರು. ಮಹಿಳಾ ಬಾಕ್ಸಿಂಗ್ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತದೆನ್ನುವ ಅಭಿಪ್ರಾಯ ವ್ಯಕ್ತಪಡಿಸಿರುವ ಸಚಿನ್, ಸರಿತಾ ದೇವಿ ಮಾಡಿರುವ ಸಣ್ಣ ತಪ್ಪಿಗೆ ವೃತ್ತಿಜೀವನವೇ ಅಂತ್ಯಗೊಳ್ಳಬಾರದು. ಈ ಕಾಳಜಿಯೊಂದಿಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾಗಿ ಹೇಳಿದರು. ಇಂಚೋನ್ನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಸರಿತಾದೇವಿ ವಿವಾದಾತ್ಮಕ ನಿರ್ಣಯವನ್ನು ಪ್ರತಿಭಟಿಸಿ, ಆಕ್ರೋಶದಿಂದ ಸ್ಥಳದಲ್ಲೇ ತಮ್ಮ ಪಾಲಿಗೆ ಸಂದ ಕಂಚಿನ ಪದಕ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದರು. ಇದು ಎಐಬಿಎ ಕಣ್ಣು ಕೆಂಪಗಾಗಿಸಿತ್ತು. ನಿಯಮದಂತೆ ಅಂಪೈರ್ ನಿರ್ಣಯವನ್ನು ಗೌರವಿಸಬೇಕಿದ್ದ ಸರಿತಾ ಟೀಕೆಗೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸರಿತಾಗೆ ಎಐಬಿಎ ಒಂದು ವರ್ಷ ನಿಷೇಧ ಮತ್ತು ಸಾವಿರ ರೂ. ದಂಡ ವಿಧಿಸಿತ್ತು.  ಸರಿತಾದೇವಿಗೆ ಒಂದು ವರ್ಷ ನಿಷೇಧ ಹೇರಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ ಕೂಡಾ ನಿಷೇಧ ತೆರವುಗೊಳಿಸಲು ಪರಿಶೀಲಿಸುವಂತೆ ಮನವಿ ಮಾಡುವುದಾಗಿ ಹೇಳಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ರೀಡಾ ಸಚಿವ ಸರನಾನಂದ ಸೊನೊವಾಲ್, ನಿಷೇಧದಿಂದ ಸರಿತಾದೇವಿ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಭಾವಂಥ ಬಾಕ್ಸರ್ ಇದರಿಂದ ಆತ್ಮವಿಶ್ವಾಸ ಕಳೆದುಕೊಳ್ಳಬಹುದು. ಜೊತೆಗೆ ಮಹಿಳಾ ಬಾಕ್ಸಿಂಗ್ ಕ್ಷೇತ್ರದ ಪ್ರಗತಿ ಮೇಲೂ ಪರಿಣಾಮ ಬೀರಲಿದೆ. ಕಾರಣ ನಿಷೇಧ ತೆರವು ಮಾಡಲು ಪರಿಶೀಲಿಸುವಂತೆ ಮನವಿ ಮಾಡುವುದಾಗಿ ಹೇಳಿದರು

2014: ನವದೆಹಲಿ: ತೈಲ ಕಂಪೆನಿಗಳು ಇಂಧನ ಪೂರೈಕೆಗೆ ನಿರಾಕರಿಸಿದ್ದನ್ನು ಅನುಸರಿಸಿ ಕಡಿಮೆ ಬಜೆಟ್ ವಾಹಕ ಸ್ಪೈಸ್ ಜೆಟ್ ಕಾರ್ಯಾಚರಣೆ ಈದಿನ ಬೆಳಗ್ಗೆಯಿಂದ ಸ್ಥಗಿತಗೊಂಡರೂ ಸಂಜೆ 4 ಗಂಟೆ ವೇಳೆಗೆ ಸಂಚಾರ ಪುನರಾರಂಭಿಸಿತು.  ಸ್ಪೈಸ್ ಜೆಟ್ ಹೇಳಿಕೆ ಪ್ರಕಾರ ಸಂಸ್ಥೆಗೆ ಇಂಧನ ಸರಬರಾಜಿಗೆ ತೈಲ ಕಂಪೆನಿಗಳು ನಿರಾಕರಿಸಿದ ಬಳಿಕ ಒಂದೇ ಒಂದು ಸ್ಪೈಸ್ ಜೆಟ್ ವಿಮಾನವೂ ಸಂಚರಿಸಲಿಲ್ಲ. ಈ ಮಧ್ಯೆ, ಬಿಕ್ಕಟ್ಟಿನಿಂದ ಪಾರಾಗುವ ಸಲುವಾಗಿ ಸ್ಪೈಸ್ ಜೆಟ್ಗೆ 600 ಕೋಟಿ ರೂಪಾಯಿಗಳಷ್ಟು ಕೆಲಸ ಬಂಡವಾಳ ಸಾಲ ಒದಗಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯವು ಬ್ಯಾಂಕುಗಳಿಗೆ ಸೂಚಿಸಿತು. ಪ್ರವರ್ತಕರಿಂದ ಖಚಿತ ಸಾಲದ ಭರವಸೆ ಬಂದ ಬಳಿಕ ಸ್ಪೈಸ್ ಜೆಟ್ಗೆ ಈ ತಾತ್ಕಾಲಿಕ ಪರಿಹಾರ ಸಿಕ್ಕಿತು. ಸಚಿವಾಲಯದಿಂದ ಈ ಪ್ರಕಟಣೆ ಹೊರಬೀಳುವುದಕ್ಕೆ ಮುನ್ನ ಬ್ಯಾಂಕುಗಳು ಸಾಲ ನೀಡುವ ಸಾಧ್ಯತೆಗಳಿಲ್ಲ ಎಂದು ಪ್ರವರ್ತಕರು ಭ್ರಮನಿರಸನಗೊಂಡಿದ್ದರು. ಕಿಂಗ್ಫಿಶರ್ ಏರ್ಲೈನ್ಸ್ ವಿಮಾನಯಾನ ಸಂಸ್ಥೆ ನೆಲಕಚ್ಚಿದ ಅನುಭವದ ಹಿನ್ನೆಲೆಯಲ್ಲಿ ಸ್ಪೈಸ್ಜೆಟ್ಗೆ ಸಾಲರೂಪದ ನೆರವು ನೀಡಲು ಬ್ಯಾಂಕುಗಳು ಹಿಂದೇಟು ಹಾಕಿದ್ದವು. 'ಹಾಲಿ ಪರಿಸ್ಥಿತಿ ಮುಂದುವರೆದರೆ, ಏರ್ಲೈನ್ಗೆ ದಯಾಮರಣ ನೀಡುವುದರ ಹೊರತು ಬೇರೆ ಪರ್ಯಾಯವೇ ಇಲ್ಲ' ಎಂದು ಸನ್ಗ್ರೂಪ್ನ ಎಕ್ಸಿಕ್ಯೂಟಿವ್ ಒಬ್ಬರು ಹೇಳಿದ್ದರು. ಆದರೆ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಸ್ಪೈಸ್ ಜೆಟ್ಗೆ ಎರಡು ವಾರಗಳ ಸಾಲ ಸವಲತ್ತು ಆಧಾರದಲ್ಲಿ ಇಂಧನ ಸರಬರಾಜು ಮಾಡುವ ಬಗ್ಗೆ ಸಂಜೆವರೆಗೂ ನಿರ್ಧಾರ ಕೈಗೊಂಡಿರಲಿಲ್ಲ. 'ವಿಮಾನಗಳ ಹಾರಾಟ ಶೀಘ್ರದಲ್ಲೇ ಮಾಮೂಲಿಗೆ ಬರುವ ನಿರೀಕ್ಷೆ ಇದೆ ಎಂದು ಏರ್ಲೈನ್ ವಕ್ತಾರರು ತಮ್ಮನ್ನು ಸಂರ್ಪಸಿದ ಮಾಧ್ಯಮಗಳಿಗೆ ತಿಳಿಸಿದರು. ನಷ್ಟದೆಡೆಗೆ ಹೊರಳಿದ ವಿಮಾನಯಾನ ಕಂಪೆನಿಯ ನೆರವಿಗೆ ಬಂದ ನಾಗರಿಕ ವಿಮಾನಯಾನ ಸಚಿವಾಲಯವು 'ಏರ್ ಲೈನ್ಸ್ ರಕ್ಷಣೆ ಸಲುವಾಗಿ ಸ್ಪೈಸ್ ಜೆಟ್ಗೆ 15 ದಿನಗಳ ಸಾಲ ಸವಲತ್ತು ಕಲ್ಪಿಸುವಂತೆ ತೈಲ ಕಂಪೆನಿಗಳು ಮತ್ತು ವಿಮಾನ ನಿಲ್ದಾಣ ನಿರ್ವಾಹಕರಿಗೆ  ಮನವಿ ಮಾಡುವುದಾಗಿ ಭರವಸೆ ನೀಡಿತ್ತು.

2014: ಆಗ್ರಾ: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಜನವರಿ 26ರ ಭಾರತ ಭೇಟಿಗೆ ಮುಂಚಿತವಾಗಿಯೇ ಅಮೆರಿಕದ ಭದ್ರತಾ ಸಲಹೆಗಾರರು, ಉಭಯ ಸದನಗಳ ಪ್ರತಿನಿಧಿಗಳು ಮತ್ತು ಪತ್ರಕರ್ತರನ್ನು ಒಳಗೊಂಡ 40 ಮಂದಿಯ ತಂಡವೊಂದು ಆಗ್ರಾದ ತಾಜ್ ಮಹಲ್ಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಹಾಗೂ ಸಾಮಾನು ಸರಂಜಾಮು ಇಳಿಸುವ ಸ್ಥಳ ಪರಿಶೀಲನೆ ನಡೆಸಿತು. ಅಮೆರಿಕದ ಅಧ್ಯಕ್ಷರು ಆಗ್ರಾದಲ್ಲಿನ ತಾಜ್ವುಹಲ್ಗೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದರು. ಏನಿದ್ದರೂ ಆಗ್ರಾ ಭೇಟಿಯ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ ಎಂದು ಅವರು ನುಡಿದರು. ಅಮೆರಿಕದ ಭದ್ರತಾ ತಂಡ 16-12-2014ರಂದು ಮಧ್ಯಾಹ್ನ ಖೇರಿಯಾ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಭಾರತೀಯ ಪುರಾತತ್ವ ಸಮೀಕ್ಷಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿತು.

2014: ನವದೆಹಲಿ: ಪಾಕಿಸ್ತಾನದ ಪೇಶಾವರದಲ್ಲಿ ಶಾಲೆಯ ಮೇಲೆ ಭಯೋತ್ಪಾದಕ ದಾಳಿ ನಡೆದ ಹಿನ್ನೆಲೆಯಲ್ಲಿ ಎಲ್ಲ ಕಡೆ ಅದರಲ್ಲೂ ವಿಶೇಷವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಭದ್ರತೆ ಬಿಗಿಗೊಳಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚನೆ ನೀಡಿತು. 'ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸಲಹಾತ್ಮಕ ನಿರ್ದೇಶನ ನೀಡಲಾಗಿದೆ' ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸಂಸತ್ತಿನ ಹೊರಗೆ ಪತ್ರಕರ್ತರ ಜೊತೆಗೆ ಮಾತನಾಡುತ್ತಾ ಹೇಳಿದರು. ಪೇಶಾವರ ಶಾಲೆಯ ಮೇಲೆ ಭಯೋತ್ಪಾದಕ ದಾಳಿ ನಡೆದ ಹಿನ್ನೆಲೆಯಲ್ಲಿ ರಾಷ್ಟ್ರದ ಶಾಲೆಗಳಲ್ಲಿ ಭದ್ರತಾ ಖಾತರಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬುದಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

2014: ನವದೆಹಲಿ: ಭಾರತದಲ್ಲಿ 5,200 ಪಾಕಿಸ್ತಾನೀಯರು ನಿಗದಿತ ಅವಧಿ ಮೀರಿದ ವಾಸ್ತವ್ಯ ಹೊಂದಿದವರಾಗಿದ್ದಾರೆ ಎಂದು ಸರ್ಕಾರ ಅಧಿಕೃತವಾಗಿ ತಿಳಿಸಿತು. ದಾಖಲೆಗಳ ಸಹಿತ ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನಿಗಳಲ್ಲಿ ಇಷ್ಟು ಮಂದಿ ಅವಧಿ ಮುಗಿದರೂ ಇನ್ನೂ ವಾಸವಿದ್ದಾರೆ ಎನ್ನುವುದನ್ನು ರಾಜ್ಯಸಭೆಗೆ ಲಿಖಿತವಾಗಿ ತಿಳಿಸಿದ ಗೃಹ ಸಚಿವಾಲಯದ ರಾಜ್ಯ ಸಚಿವ ಕಿರೆಣ್ ರಿಜಿಜು, 2014, ಜೂನ್ನಲ್ಲಿ ದಾಖಲಿಸಲಾದ ಮಾಹಿತಿಯಂತೆ ದೇಶದಲ್ಲಿ 5,200 ಪಾಕಿಸ್ತಾನೀಯರು ಅನಧಿಕೃತವಾಗಿ ವಾಸವಿದ್ದಾರೆ ಎನ್ನುವ ಮಾಹಿತಿ ನೀಡಿದರು. ಪಾಕಿಸ್ತಾನದಲ್ಲಿ ನಡೆದ ವಿಶ್ವವನ್ನೇ ನಡುಗಿಸಿದ ಉಗ್ರರ ಅಟ್ಟಹಾಸದ ಹಿನ್ನೆಲೆಯಲ್ಲಿ ಮತ್ತು ಸಿಡ್ನಿಯಲ್ಲಿ ನಡೆದ ಘಟನೆಯ ಬಳಿಕ ಭಾರತದಲ್ಲೂ ಇದೇ ಮಾದರಿಯಲ್ಲೇ ದಾಳಿ ನಡೆಸುತ್ತೇವೆಂದು ಉಗ್ರರು ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಈಗ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಾರಣ ಭಾರತದಲ್ಲಿರುವ ಪಾಕಿಸ್ತಾನೀಯರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ಹೇಳಿದವು.

2014: ಪೇಶಾವರ: ಪೇಶಾವರ ನಗರದ ಸೇನಾ ಶಾಲೆಯ ಮೇಲೆ ದಾಳಿ ನಡೆಸಿದ ತಾಲಿಬಾನ್ ಭಯೋತ್ಪಾದಕರು ಬಹುತೇಕ ಮಕ್ಕಳು ಸೇರಿದಂತೆ 150ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ ಒಂದು ದಿನದ ಬಳಿಕ ಪೇಶಾವರದಲ್ಲಿ ಮಾತನಾಡಿದ ಪಾಕಿಸ್ತಾನಿ ಪ್ರಧಾನಿ ನವಾಜ್ ಷರೀಫ್ ಅವರು ಭಯೋತ್ಪಾದನಾ ಪ್ರಕರಣಗಳಲ್ಲಿ ಮರಣ ದಂಡನೆ ಮೇಲಿನ ನಿಷೇಧವನ್ನು ರದ್ದು ಪಡಿಸಲಾಗುವುದು ಎಂದು ಘೋಷಿಸಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ರಾಷ್ಟ್ರವು ಏಕತೆಯಿಂದಿದೆ ಎಂದು ಅವರು ನುಡಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನದ ಎಲ್ಲಾ ಪಕ್ಷಗಳೂ ಒಂದಾಗಿವೆ ಎಂದು ನವಾಜ್ ಷರೀಫ್ ತಿಳಿಸಿದರು. ಮಕ್ಕಳ ಮಾರಣಹೋಮ ಘಟನೆಯ ಹಿನ್ನೆಲೆಯಲ್ಲಿ ಇಲ್ಲಿನ ಗವರ್ನರ್ ಭವನದಲ್ಲಿ ಪ್ರಧಾನಿ ಕರೆದಿದ್ದ ಸಭೆಯಲ್ಲಿ ಎಲ್ಲಾ ಪಕ್ಷಗಳ ಧುರೀಣರೂ ಪಾಲ್ಗೊಂಡಿದ್ದರು. 'ಪಾಕಿಸ್ತಾನದ ಇತಿಹಾಸದಲ್ಲಿ ಇದು ಅತ್ಯಂತ ಬೇಸರದ ದಿನ' ಎಂದು ಸಭೆಯಲ್ಲಿ ಪಾಲ್ಗೊಂಡದ್ದಕ್ಕಾಗಿ ಎಲ್ಲಾ ಪಕ್ಷಗಳ ಧುರೀಣರಿಗೆ ಧನ್ಯವಾದ ಹೇಳುತ್ತಾ ಷರೀಫ್ ನುಡಿದರು. 'ನಮ್ಮ ಮಕ್ಕಳ ಬಲಿದಾನ ವ್ಯರ್ಥವಾಗಲು ನಾವು ಬಿಡಬಾರದು. ಪೇಶಾವರ ಮುತ್ತಿಗೆ ಕ್ಷಣಗಳ ಎಲ್ಲಾ ಚಿತ್ರಗಳನ್ನೂ ನಾವು ನಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು ಮತ್ತು ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಹೆಚ್ಚಿನ ಹುಮ್ಮಸ್ಸಿನೊಂದಿಗೆ ಸಾಗಬೇಕು. ತಾಲಿಬಾನ್ ಜೊತೆಗಿನ ಮಾತುಕತೆಯಿಂದ ಯಾವ ಪ್ರಯೋಜನವೂ ಆಗಿಲ್ಲ' ಎಂದು ಅವರು ಹೇಳಿದರು. ಪಾಕಿಸ್ತಾನವು ದೀರ್ಘಕಾಲದಿಂದ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುತ್ತಿದೆ. ಈ ಹೋರಾಟವು ನಮ್ಮ ಆರ್ಥಿಕತೆ ಮೇಲೂ ಪರಿಣಾಮ ಬೀರಿದೆ. ಮಕ್ಕಳ ಮೇಲಿನ ದಾಳೀಯ ಭೀಕರ ಘಟನೆ ನಮ್ಮ ಕಣ್ಣು ತೆರೆಸಬೇಕು. ನಾವು ಝುರ್ಬ್-ಇ-ಅಝರ್  ಕಾರ್ಯಾಚರಣೆ ಮೂಲಕ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದ್ದೇವೆ. ನಾವು ಯಶಸ್ವಿಯಾಗುತ್ತಿದ್ದೇವೆ. ಈ ಹಾವಳಿಯನ್ನು ಮಟ್ಟಹಾಕಲು ನಾವು ಇನ್ನೂ ಸ್ವಲ್ಪ ಶ್ರಮ ಹಾಕಬೇಕು ಎಂದು ಷರೀಫ್ ನುಡಿದರು. ಭಯೋತ್ಪಾದನೆ ಪ್ರಕರಣಗಳಲ್ಲಿ ಮರಣದಂಡನೆ ಮೇಲೆ ವಿಧಿಲಾಗಿರುವ ನಿಷೇಧವನ್ನು ರದ್ದು ಪಡಿಸಲಾಗುವುದು. ಇದರಿಂದ ಮರಣದಂಡನೆಗೆ ಗುರಿಯಾಗಿರುವ ಭಯೋತ್ಪಾದಕರನ್ನು ಗಲ್ಲಿಗೇರಿಸಲು ಅನುಕೂಲವಾಗುವುದು ಎಂದು ಅವರು ಹೇಳಿದರು.

2014: ಬಾಗಲಕೋಟೆ: ಕರ್ನಾಟಕದ ನಾರಾಯಣಪುರ ಜಲಾಶಯ ಹಿನ್ನೀರಿನಲ್ಲಿ ತೆಪ್ಪ ಮುಳುಗಿ 6 ಜನರು ನಾಪತ್ತೆಯಾದರು. ಇಬ್ಬರು ಈಜಿ ದಡ ಸೇರಿ ಅಪಾಯದಿಂದ ಪಾರಾದರು. ಕೌಜಗನೂರ ಗ್ರಾಮದ ಒಂದೇ ಕುಟುಂಬಕ್ಕೆ ಸೇರಿದ ಮಲ್ಲವ್ವ ಯಲ್ಲಪ್ಪ ಮಡಿವಾಳರ(38), ಸಾವಿತ್ರಿ ಯಮನಪ್ಪ ಮಡಿವಾಳರ(6), ಸಚಿನ್ ಯಮನಪ್ಪ ಮಡಿವಾಳರ(5), ಮಂಜುಳಾ ಭೀಮಪ್ಪ ಮಡಿವಾಳರ(18), ಹುಲಿಗೆವ್ವ ಮಹಾಂತೇಶ ಮಡಿವಾಳರ(16) ಹಾಗೂ ಅಮರವಾಡಿ ಗ್ರಾಮದ ನಾವಿಕ ಕರಿಯಪ್ಪ ಪರಸಪ್ಪ ಅಂಬಿಗೇರ(29) ಹಿನ್ನೀರಿನಲ್ಲಿ ನಾಪತ್ತೆ ಆದವರು. ಇದೇ ಗ್ರಾಮದ ಮಹಾಂತೇಶ ಮಡಿವಾಳರ(20) ಹಾಗೂ ರೇಣುಕಾ ಮಡಿವಾಳರ(35) ಹಿನ್ನೀರಿನಲ್ಲಿ ಈಜಿ ಇಂದವಾರ ದಡ ತಲುಪಿದರು. ಹುನಗುಂದ ತಾಲೂಕಿನ ಕೌಜಗನೂರ ಗ್ರಾಮದಿಂದ ಅಮರವಾಡಿ ಗ್ರಾಮಕ್ಕೆ ಮದುವೆಗೆಂದು ಮಡಿವಾಳ ಕುಟುಂಬದ ಏಳು ಜನರು ತೆರಳಿದ್ದರು. ತಮ್ಮೂರಿನಿಂದ ಇಂದವಾರ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ಸಾಗಿ ಅಲ್ಲಿಂದ ತೆಪ್ಪದ ಮೂಲಕ ಅಮರವಾಡಿಗೆ ಹೋಗಿದ್ದರು. ಮದುವೆ ಮುಗಿಸಿ ಬರುತ್ತಿದ್ದಾಗ ಭಾರ ಹೆಚ್ಚಾಗಿ ತೆಪ್ಪ ಮುಳುಗಿ ಈ ದುರ್ಘಟನೆ ಸಂಭವಿಸಿತು.

2014:ಪೇಶಾವರ: ಸೇನಾ ಆಡಳಿತದ ಶಾಲೆಯ ಮೇಲೆ ನಡೆದ ಉಗ್ರರ ದಾಳಿಯಿಂದ ತತ್ತರಿಸಿದ ಪಾಕಿಸ್ತಾನದಲ್ಲಿ ಈದಿನ ಸಂಜೆ ಇನ್ನೆರಡು ಭಾರಿ ಪ್ರಮಾಣದ ಬಾಂಬ್ ಸ್ಪೋಟಗಳು ಸಂಭವಿಸಿದವು. ಪೇಶಾವರ ಸಮೀಪದ ದೇರಾ ಇಸ್ಮೇಲ್ ಖಾನ್ನಲ್ಲಿರುವ ಬಾಲಕಿಯರ ಕಾಲೇಜು ಬಳಿ ಘಟನೆ ಸಂಭವಿಸಿತು. ಸ್ಪೋಟದ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳು ಹೊತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದವು.

2008: ಮುಂಬೈ ಮೇಲಿನ ಉಗ್ರರ ದಾಳಿ ಹಿನ್ನೆಲೆಯಲ್ಲಿ ಸರ್ಕಾರ ಮಂಡಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ರಚನೆಯ ಮಸೂದೆ (ಎನ್‌ಐಎ) ಮತ್ತು ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ತಿದ್ದುಪಡಿ ಮಸೂದೆಗಗಳಿಗೆ (ಯುಎಪಿಎ) ಲೋಕಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರ ಲಭಿಸಿತು. ಇದಕ್ಕೂ ಮುನ್ನ, ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು ಈ ಮಸೂದೆಗಳನ್ನು ಒಮ್ಮತದಿಂದ ಅಂಗೀಕರಿಸುವಂತೆ ಎಲ್ಲ ಲೋಕಸಭಾ ಸದಸ್ಯರಿಗೂ ಕೈಜೋಡಿಸಿ ಮನವಿ ಮಾಡಿದರು. ವಿವಿಧ ರಾಜಕೀಯ ಪಕ್ಷಗಳು ಹಾಗೂ ಕಾನೂನು ತಜ್ಞರ ಸಲಹೆಗಳನ್ನು ಪಡೆದೇ ಈ ಮಸೂದೆಗಳನ್ನು ಮಂಡಿಸಲಾಗಿದೆ ಎಂದು ಅವರು ಸದನಕ್ಕೆ ಸ್ಪಷ್ಟಪಡಿಸಿದ್ದರು. ಈ ಮಸೂದೆಗಳಲ್ಲಿರುವ ಕೆಲವೊಂದು ಅನುಕೂಲಗಳ ಕುರಿತು ಮಾತನಾಡಿದ ಅವರು, 'ಇದು ಒಕ್ಕೂಟ ವ್ಯವಸ್ಥೆ ವಿರೋಧಿಸುವುದಿಲ್ಲ, ಭಯೋತ್ಪಾದನಾ ಪ್ರಕರಣಗಳ ತನಿಖೆ ನಡೆಸುವ ರಾಜ್ಯ ಸರ್ಕಾರಗಳ ಅಧಿಕಾರವನ್ನೂ ಗೌರವಿಸುತ್ತದೆ' ಎಂದು ಹೇಳಿದ್ದರು.

2008: ಬ್ರಿಟಿಷ್ ನಿರ್ದೇಶಕ ಡ್ಯಾನಿ ಬಾಯ್ಲೆ ಅವರ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರಕ್ಕೆ ನೀಡಿದ ಸಂಗೀತಕ್ಕಾಗಿ ಖ್ಯಾತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದರು. ಈ ಚಿತ್ರಕ್ಕೆ ಒದಗಿಸಿದ ಅತ್ಯುತ್ತಮ ಸಂಗೀತ ಸಂಯೋಜನೆಗಾಗಿ ಅಂತಾರಾಷ್ಟ್ರೀಯ ಪ್ರೆಸ್ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯನ್ನು ರೆಹಮಾನ್ ಬಾಚಿಕೊಂಡರು. ಇದೇ ಚಿತ್ರಕ್ಕಾಗಿ ಬಾಯೆಗ್ಲೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಲಾಯಿತು. ಅತ್ಯುತ್ತಮ ಕಥಾ ರೂಪಕದ ಪ್ರಶಸ್ತಿಯೂ ಚಿತ್ರದ ಪಾಲಾಯಿತು. ಮುಂಬೈಯ ಕೊಳೆಗೇರಿಯ 18 ವರ್ಷದ ಅನಾಥ ಗೌತಮ ಬಾಲಕ ಗೇಮ್ ಷೋ ಒಂದರಲ್ಲಿ 2 ಕೋಟಿ ರೂ. ಬಹುಮಾನ ಗೆದ್ದು ರಾತ್ರೋರಾತ್ರಿ ಸಿರಿವಂತನಾಗುವ ಮನಮಿಡಿಯುವ ಕಥೆಯನ್ನು ಈ ಚಿತ್ರ ಹೊಂದಿದೆ.

2008: ಸತತ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರುವ ಮೂಲಕ ಶೀಲಾ ದೀಕ್ಷಿತ್ ಅವರು ಇಡೀ ದೇಶದಲ್ಲಿಯೇ ಅತ್ಯಂತ ಪ್ರಭಾವಶಾಲಿ ರಾಜಕಾರಣಿಗಳಲ್ಲಿ ತಾವೂ ಒಬ್ಬರು ಎನ್ನುವುದನ್ನು ಸಾಬೀತುಪಡಿಸಿದರು. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತೇಜೇಂದರ್ ಖನ್ನಾ ತಮ್ಮ ಅಧಿಕೃತ ನಿವಾಸದಲ್ಲಿ ದೀಕ್ಷಿತ್ ಅವರಿಗೆ ಅಧಿಕಾರ ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಇತರ ಆರು ಸಚಿವರು ದೀಕ್ಷಿತ್ ಜೊತೆಗೆ ಪ್ರಮಾಣವಚನ ಸ್ವೀಕರಿಸಿದರು.

2008: ಸೆಪ್ಟೆಂಬರ್ 13ರಂದು ದೆಹಲಿಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನವದೆಹಲಿ ಮೆಟ್ರೋಪಾಲಿಟನ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದರು. ಶಂಕಿತ 'ಇಂಡಿಯನ್ ಮುಜಾಹಿದ್ದೀನ್' ಸಂಘಟನೆಯ ಐವರು ಉಗ್ರರನ್ನು ಆರೋಪಪಟ್ಟಿಯಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಯಿತು. ಸೆಪ್ಟೆಂಬರ್ 13ರಂದು ದೆಹಲಿಯ ಕರೋಲ್ ಬಾಗ್‌ನಲ್ಲಿ ಸಂಭವಿಸಿದ ಈ ಬಾಂಬ್ ಸ್ಫೋಟದಲ್ಲಿ ಒಟ್ಟು 26 ಜನರು ಮೃತರಾಗಿದ್ದರು.

2008: ಕನ್ನಡಿಗ ಎಚ್.ಎಲ್.ದತ್ತು ಸೇರಿದಂತೆ ಅಶೋಕ ಕುಮಾರ ಗಂಗೂಲಿ ಮತ್ತು, ಆರ್.ಎಂ.ಲೋಧಾ ಅವರು ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾಗಿ ನವದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂವರೂ ನ್ಯಾಯಮೂರ್ತಿಗಳ ನೇಮಕದಲ್ಲಿ ಸೇವಾ ಹಿರಿತನ ನಿರ್ಲಕ್ಷಿಸಲಾಗಿದೆ ಎನ್ನುವ ಕೇಂದ್ರ ಸರ್ಕಾರದ ಅಕ್ಷೇಪಗಳನ್ನು ಸುಪ್ರೀಂಕೋರ್ಟ್ ಕಡೆಗಣಿಸಿತು. ಸರಳ ಸಮಾರಂಭವೊಂದರಲ್ಲಿ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರು ಪ್ರಮಾಣ ವಚನ ಬೋಧಿಸಿದರು. ಸುಪ್ರೀಂಕೋರ್ಟಿನಲ್ಲಿ 26 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, ಸದ್ಯಕ್ಕೆ 24 ಹುದ್ದೆಗಳನ್ನು ಭರ್ತಿ ಮಾಡಿದಂತಾಯಿತು.

2008: ಪ್ರಸಕ್ತ ವರ್ಷದ ವಾರ್ಷಿಕ ತೀರ್ಥ ಯಾತ್ರೆಯ ಮೊದಲ ತಿಂಗಳಾಂತ್ಯದಲ್ಲೇ ಕೇರಳದ ಖ್ಯಾತ ಶಬರಿಮಲೆ ದೇವಸ್ಥಾನದ ಆದಾಯ 51 ಕೋಟಿ ರೂಪಾಯಿಯ ಗಡಿ ದಾಟಿತು. ರಾಜ್ಯದ ಮುಜರಾಯಿ ಇಲಾಖೆ ಸಚಿವ ಜಿ. ಸುಧಾಕರನ್ ಅವರು ಈ ದಾಖಲೆ ಗಳಿಕೆಗೆ ಹೆಚ್ಚಿದ ಭಕ್ತಾದಿಗಳ ಸಂಖ್ಯೆಯೆ ಕಾರಣ ಎಂದು ಹೇಳಿದರು.

2008: ಭಾರತೀಯ ಮೂಲದ ಕಫಿಲ್ ಅಹ್ಮದ್ ಜೊತೆ ಬರ್ಸೊಲ್ ವಿಮಾನ ನಿಲ್ದಾಣ ಉಡಾಯಿಸುವ ಸಂಚು ರೂಪಿಸಿದ್ದ ಇರಾಕ್ ವೈದ್ಯ ಬಿಲಾಲ್ ಅಬ್ದುಲ್ಲಾಗೆ ಲಂಡನ್ ನ್ಯಾಯಾಲಯ 32 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ವೂಲ್‌ವಿಚ್ ಕ್ರೌನ್ ನ್ಯಾಯಾಲಯದಲ್ಲಿ ಒಂಬತ್ತು ವಾರಗಳ ಕಾಲ ಬಿಲಾಲ್ ಅಬ್ದುಲ್ಲಾ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಆತ ತಪ್ಪಿತಸ್ಥ ಎಂದು ಘೋಷಿಸಿದ್ದರು. ಸಾಮೂಹಿಕ ಕೊಲೆ ಹಾಗೂ ಸ್ಫೋಟದ ಸಂಚು ರೂಪಿಸಿದ ಆರೋಪ ಬಿಲಾಲ್ ಮೇಲಿತ್ತು. ಈದಿನ ಆತನಿಗೆ ಶಿಕ್ಷೆಯ ಪ್ರಮಾಣ ಘೋಷಿಸಲಾಯಿತು. ಅಬ್ದುಲ್ಲಾ ಧಾರ್ಮಿಕ ಮೂಲಭೂತವಾದಿ ಹಾಗೂ ಮತಾಂಧ ಎಂದು ನ್ಯಾಯಾಧೀಶ ಮೆಕಾಯ್ ಹೇಳಿದರು. 2007ರ ಜೂನ್ 30ರಂದು ಬಿಲಾಲ್ ಅಬ್ದುಲ್ಲಾ ಹಾಗೂ ಕಫೀಲ್ ಅಹ್ಮದ್ ಬರ್ಸೋಲ್ ವಿಮಾನ ನಿಲ್ದಾಣಕ್ಕೆ ಸ್ಫೋಟಕ ತುಂಬಿದ್ದ ಜೀಪ್ ನುಗ್ಗಿಸಿ ನಿಲ್ದಾಣ ಉಡಾಯಿಸಲು ಯತ್ನಿಸಿದ್ದರು.

2008: ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ರೀಡರ್ ಡಾ. ಪ್ರೀತಿ ಶುಭಚಂದ್ರ ಅವರ 'ಸೃಜನೆಯ ಮೂಡು' ಕೃತಿಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ 'ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ ಯೋಜನೆ'ಯ ಬಹುಮಾನ ದೊರಕಿತು. ಬಹುಮಾನದ ಮೊತ್ತ ರೂ 10 ಸಾವಿರ. ಡಾ. ಪ್ರೀತಿ ಶುಭಚಂದ್ರ ಅವರು ಕಳೆದ ಮೂವತ್ತು ವರ್ಷಗಳಲ್ಲಿ ಬರೆದ ಮೂವತ್ತೊಂದು ಮಹಿಳಾ ಪರ ಕಾಳಜಿಯ ಲೇಖನಗಳನ್ನು ಒಳಗೊಂಡ 'ಸೃಜನೆಯ ಮೂಡು' ಕೃತಿಗೆ ಈ ಬಹುಮಾನ ಲಭಿಸಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ. ಬಿ.ವಿ. ಗುಂಜೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದರು.

2007: ಬಿಜೆಪಿ ಧುರೀಣ ಪ್ರಮೋದ್ ಮಹಾಜನ್ ಅವರನ್ನು 2006ರಲ್ಲಿ ಕೊಲೆಗೈಯಲಾದ ಪ್ರಕರಣದಲ್ಲಿ ಅವರ ಸಹೋದರ ಪ್ರವೀಣ್ ಮಹಾಜನ್ ತಪ್ಪಿತಸ್ಥ ಎಂದು ಮುಂಬೈ ಸೆಷನ್ಸ್ ನ್ಯಾಯಾಲಯ ಘೋಷಿಸಿತು. ಪ್ರವೀಣ್ ಮಹಾಜನ್ ಗಂಭೀರ ಅಪರಾಧ ಎಸಗುವ ಉದ್ದೇಶದಿಂದಲೇ ಮನೆಯೊಳಕ್ಕೆ ಅತಿಕ್ರಮ ಪ್ರವೇಶ ಮಾಡಿ, ಕೊಲೆ ನಡೆಸಿದ ಅಪರಾಧಿ ಎಂದು ಎಂದು ಸೆಷನ್ಸ್ ನ್ಯಾಯಾಧೀಶ ಎಸ್.ಪಿ. ದಾವರೆ ತೀರ್ಪು ನೀಡಿದರು. 2006ರ ಏಪ್ರಿಲ್ 22ರಂದು ಪ್ರಮೋದ್ ಮಹಾಜನ್ ಅವರ ಮನೆಯಲ್ಲಿ ಪ್ರವೀಣ್ ಮಹಾಜನ್ ತನ್ನ ಹಿರಿಯ ಸಹೋದರನ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದ್ದರು. ಮುಂಬೈ ಆಸ್ಪತ್ರೆಯಲ್ಲಿ 12 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಬಳಿಕ ಪ್ರಮೋದ್ ಮಹಾಜನ್ ಅಸು ನೀಗಿದ್ದರು. ಹತ್ತೊಂಬತ್ತು ತಿಂಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್.ಪಿ.ದಾವರೆ ಒಟ್ಟು 32 ಸಾಕ್ಷಿಗಳ ವಿಚಾರಣೆಯ ನಂತರ ಭಾರತೀಯ ದಂಡ ಸಂಹಿತೆ (ಐಪಿಸಿ) 302 ಮತ್ತು 449ರ ಅಡಿಯಲ್ಲಿ ಪ್ರವೀಣ್ ತಪ್ಪಿತಸ್ಥ ಎಂದು ತೀರ್ಪು ನೀಡಿದರು.

2007: ಜಾಗತಿಕ ಷೇರುಪೇಟೆಯ ಕುಸಿತವು ಮುಂಬೈ ಷೇರುಪೇಟೆ ಮೇಲೆ ಕರಾಳ ಛಾಯೆ ಬೀರಿತು. ಸಂವೇದಿ ಸೂಚ್ಯಂಕವು, ಅನಿರೀಕ್ಷಿತವಾಗಿ 769 ಅಂಶಗಳಷ್ಟು ಕುಸಿತ ದಾಖಲಿಸಿತು. ಈ ಮೂಲಕ 20 ಸಾವಿರ ಅಂಶಗಳ ಗಡಿಯಿಂದ ಸೂಚ್ಯಂಕವು ಹಠಾತ್ತಾಗಿ ಹಿನ್ನಡೆ ಕಂಡಿತು. ಷೇರುಪೇಟೆ ಇತಿಹಾಸದಲ್ಲಿ ಇದು ಎರಡನೇ ದೊಡ್ಡ ಕುಸಿತ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗಮನಾರ್ಹ ಪ್ರಮಾಣದಲ್ಲಿ (ಎಫ್ ಐ ಐ) ಬಂಡವಾಳ ಹಿಂದೆ ತೆಗೆದುಕೊಂಡದ್ದೇ ಈ ಹಿನ್ನಡೆಗೆ ಮುಖ್ಯ ಕಾರಣ.

2007: ವಿದ್ಯುನ್ಮಾನ ಸಮಾಜ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವ `ಕಂಪ್ಯೂಟಿಂಗ್ ಮತ್ತು ಇಂಟರ್ನೆಟ್ ತಾಂತ್ರಿಕತೆ' ಕುರಿತ ನಾಲ್ಕನೇ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಒರಿಸ್ಸಾದ ಕಳಿಂಗ ಕೈಗಾರಿಕಾ ತಂತ್ರಜ್ಞಾನ ಸಂಸ್ಥೆ ವಿಶ್ವವಿದ್ಯಾಲಯ ಹಾಗೂ ಮಕಾವೊದ ಸಂಯುಕ್ತ ಸಂಸ್ಥಾನ ವಿಶ್ವವಿದ್ಯಾಲಯಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ನಾಲ್ಕು ದಿನಗಳ ಸಮ್ಮೇಳನವನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್ ಉದ್ಘಾಟಿಸಿದರು.

2007: ಭೂದಾಖಲೆ ನೀಡಲು ಲಂಚ ಪಡೆದ ಗ್ರಾಮ ಲೆಕ್ಕಿಗನಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದ ಕರ್ನಾಟಕ ರಾಜ್ಯ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಹಾಸನ ಜಿಲ್ಲೆಯ ಕೌಶಿಕ ವೃತ್ತದ ಗ್ರಾಮ ಲೆಕ್ಕಿಗನಾಗಿದ್ದ ಡಿ.ಕೆ. ರಾಮಸ್ವಾಮಿ ಭೂದಾಖಲೆ ನೀಡಲು ರಮೇಶ ಎಂಬುವವರಿಂದ 600 ರೂಪಾಯಿ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ರಾಮಸ್ವಾಮಿ ಅವರನ್ನು ಆರೋಪಮುಕ್ತಗೊಳಿಸಿತ್ತು. ಆದರೆ ಸರ್ಕಾರದ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ರಾಮಸ್ವಾಮಿ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

2007: ಬ್ರಿಟಿಷ್ ರಾಣಿ ದ್ವಿತೀಯ ಎಲಿಜಬೆತ್ ಅವರು ದೇಶದ ಇತಿಹಾಸದಲ್ಲೇ `ದೀರ್ಘಾವಧಿ ಬದುಕಿದ ಅತ್ಯಂತ ಹಿರಿಯ ರಾಣಿ' ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ಎಂದು ಅರಮನೆ ಮೂಲಗಳು ತಿಳಿಸಿದವು. ಎಲಿಜಬೆತ್ ಅವರಿಗೆ 2008ರ ಏಪ್ರಿಲ್ 21ಕ್ಕೆ 82 ವರ್ಷ ತುಂಬಲಿದೆ. ಇವರು 1901ರ ಜನವರಿ 22ರಂದು ಮೃತರಾದ ತಮ್ಮ ಮುತ್ತಜ್ಜಿ ವಿಕ್ಟೋರಿಯಾ ಅವರ 81 ವರ್ಷ ಬದುಕಿದ ದಾಖಲೆಯನ್ನು ಮುರಿಯಲಿದ್ದಾರೆ. 81 ವರ್ಷ 239 ದಿನ ಬದುಕಿ, 1820ರಲ್ಲಿಮೃತರಾದ ತೃತೀಯ ಜಾರ್ಜ್ ಬ್ರಿಟನ್ನಿನ ಅತ್ಯಂತ ಹಿರಿಯ ರಾಜ ಎಂಬ ದಾಖಲೆ ಹೊಂದಿದ್ದಾರೆ.

2006: ಪೋಪ್ 16ನೇ ಬೆನೆಡಿಕ್ಟ್ ಅವರು ಭಾರತದ ಬಾಹ್ಯಾಕಾಶ ವಿಜ್ಞಾನಿ, 2003ರವರೆಗೆ ಇಸ್ರೋ ಸಂಸ್ಥೆಯ ಮುಖ್ಯಸ್ಥರಾಗಿದ್ದ ಕೆ. ಕಸ್ತೂರಿ ರಂಗನ್ ಅವರನ್ನು ರೋಮ್ ಮೂಲದ ಪ್ರತಿಷ್ಠಿತ `ಪಾಂಟಿಫಿಕಲ್ ವಿಜ್ಞಾನ ಅಕಾಡೆಮಿ'ಯ ಸದಸ್ಯರನ್ನಾಗಿ ನೇಮಕ ಮಾಡಿದರು. 403 ವರ್ಷಗಳಷ್ಟು ಹಳೆಯದಾದ ಈ ಅಕಾಡೆಮಿಗೆ 89-90 ಮಂದಿ ಸದಸ್ಯರನ್ನು ವ್ಯಾಪಕ ಪರಿಶೀಲನೆಯ ಬಳಿಕ ನೇಮಿಸಲಾಗುತ್ತದೆ. ಗಣಿತ, ಭೌತ, ಸಹಜ ವಿಜ್ಞಾನಗಳ ಪ್ರಗತಿ ಸಾಧನೆಯ ಗುರಿ ಹೊಂದಿರುವ ಈ ಅಕಾಡೆಮಿಗೆ ಸ್ವತಃ ಪೋಪ್ ಅವರ ರಕ್ಷಣೆಯಲ್ಲೇ ಕಾರ್ಯ ಎಸಗುತ್ತದೆ. ಈ ಗೌರವ ಪ್ರಾಪ್ತಿಯಾದುದು ತಮಗೆ ಅತೀವ ಸಂತಸ ಉಂಟು ಮಾಡಿದೆ, ಸ್ವತಃ ಪೋಪ್ ಅವರಿಂದ ನೇಮಕಾತಿ ಪತ್ರ ಪಡೆಯುವುದು ಅತ್ಯಂತ ದೊಡ್ಡ ಗೌರವ ಎಂದು ಕಸ್ತೂರಿ ರಂಗನ್ ಹರ್ಷ ವ್ಯಕ್ತಪಡಿಸಿದರು.

2006: ಸಮುದ್ರ ಈಜಿನಲ್ಲಿ ಈ ಹಿಂದೆ ದಾಖಲೆ ಮಾಡಿದ್ದ ಉಡುಪಿ ತಾಲ್ಲೂಕಿನ ಬ್ರಹ್ಮಾವರ ಕೋಡಿ ಕನ್ಯಾನದ ನಿವಾಸಿ ಗೋಪಾಲ ಖಾರ್ವಿ ತನ್ನ ಕೈ ಕಾಲುಗಳಿಗೆ ಬೇಡಿ ತೊಟ್ಟು ಸಮುದ್ರದಲ್ಲಿ 10 ಕಿ.ಮೀ. ದೂರವನ್ನು ನಿರಂತರ 2 ಗಂಟೆ 20 ನಿಮಿಷದಲ್ಲಿ ಈಜಿ ಹೊಸ ದಾಖಲೆ ನಿರ್ಮಿಸಿದರು. ಬೆಳಗ್ಗೆ 6.55ಕ್ಕೆ ಸೈಂಟ್ ಮೇರೀಸ್ ದ್ವೀಪದಿಂದ ಕೈಗೆ ಕೋಳ ತೊಡಿಸಿಕೊಂಡು ಕಾಲುಗಳನ್ನು ಕಟ್ಟಿ ಸಮುದ್ರಕ್ಕೆ ಧುಮುಕಿದ ಅವರು ಬೆಳಗ್ಗೆ 9.15ಕ್ಕೆ ಮಲ್ಪೆ ಕರಾವಳಿಗೆ ತಲುಪಿ ನೂತನ ದಾಖಲೆ ಸೃಷ್ಟಿಸಿದರು.

2006: ಭಾರತೀಯ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಬಂದು ಬಾಹ್ಯಾಕಾಶದಲ್ಲಿ ತಮ್ಮ ಚೊಚ್ಚಲ ನಡಿಗೆ ನಡೆಸಿದರು.

2006: ಶಿಯಾಗಳ ಪವಿತ್ರ ನಗರವಾದ ಕರ್ಬಾಲಾದಲ್ಲಿ 30 ಶವಗಳಿದ್ದ ಸದ್ದಾಂ ಹುಸೇನ್ ಕಾಲದ ಗೋರಿಯೊಂದು ಪತ್ತೆಯಾಯಿತು. ವ್ಯಕ್ತಿಯೊಬ್ಬ ಮನೆ ಕಟ್ಟಿಸಲು ಪಾಯ ತೋಡುವಾಗ ಮನುಷ್ಯರ ಮೂಳೆಗಳು ಹಾಗೂ ಜೀರ್ಣವಾದ ಬಟ್ಟೆಗಳು ದೊರಕಿದವು. ಇದು 1991ರ ಕೊಲ್ಲಿ ಯುದ್ಧದ ಸಮಯದಲ್ಲಿ ಬಂಡೆದ್ದ ಶಿಯಾಗಳನ್ನು ಸಾಮೂಹಿಕವಾಗಿ ಹತ್ಯೆ ನಡೆಸಿದ್ದಾಗಿರಬಹುದು ಎಂದು ನಂಬಲಾಗಿದೆ.

2005: ಆಸ್ಟ್ರೇಲಿಯಾ ತಂಡದ ಶೇನ್ ವಾರ್ನ್ ಅವರು ಪರ್ತ್ನಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೂರು ವಿಕೆಟ್ ಉರುಳಿಸುವ ಮೂಲಕ ವರ್ಷವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿದ ವಿಶ್ವದಾಖಲೆಯ ಸಾಧನೆ ಮಾಡಿದರು. ಆಸ್ಟ್ರೇಲಿಯಾ ಪರ ಉತ್ತಮ ದಾಳಿ ನಡೆಸಿದ ಶೇನ್ ವಾರ್ನ್ ಈ ವರ್ಷದಲ್ಲಿ ತಮ್ಮ ವಿಕೆಟ್ ಗಳಿಕೆಯನ್ನು 87ಕ್ಕೆ ಹೆಚ್ಚಿಸಿಕೊಂಡರು. ಇದರೊಂದಿಗೆ ಶೇನ್ ವಾರ್ನ್ 1981ರಲ್ಲಿ ಡೆನ್ನಿಸ್ ಲಿಲ್ಲಿ ಸ್ಥಾಪಿಸಿದ್ದ 85 ವಿಕೆಟುಗಳ ವಿಶ್ವದಾಖಲೆ ಬದಿಗೊತ್ತಿದರು.

2005: ಇಂದೋರಿನ ಉನ್ನತ ತಂತ್ರಜ್ಞಾನ ಕೇಂದ್ರಕ್ಕೆ (ಸಿಎಟಿ) ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಖ್ಯಾತ ಪರಮಾಣು ವಿಜ್ಞಾನಿ ದಿವಂಗತ ರಾಜಾರಾಮಣ್ಣ ಉನ್ನತ ತಂತ್ರಜ್ಞಾನ ಕೇಂದ್ರ ಎಂಬುದಾಗಿ ಮರುನಾಮಕರಣ ಮಾಡಿದರು.

1998: ಲೋಕಸಭೆಯ ಉಪಾಧ್ಯಕ್ಷರಾಗಿ ಕಾಂಗ್ರೆಸ್ಸಿನ ಪಿ.ಎಂ. ಸಯೀದ್ ಅವಿರೋಧ ಆಯ್ಕೆಯಾದರು.

1988: ನ್ಯೂಜಿಲ್ಯಾಂಡಿನ ವಿರುದ್ಧ ಬರೋಡದಲ್ಲಿ ನಡೆದ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಮಹಮ್ಮದ್ ಅಜರ್ದುದೀನ್ ಅವರು ಕೇವಲ 62 ಚೆಂಡೆಸೆತಗಳಿಗೆ 100 ರನ್ ಸೇರಿಸಿ ಭಾರತದ ಅತ್ಯಂತ ವೇಗದ ಶತಕ ಸಿಡಿಸಿದರು.

1931: ಪಿ.ಸಿ. ಮಹಾಲನಾವೊಬಿಸ್ ಅವರು ಭಾರತೀಯ ಸಾಂಸ್ಥಿಕ ಸಂಸ್ಥೆಯನ್ನು (ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್) ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತ) ಸ್ಥಾಪಿಸಿದರು.

1929: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಬ್ರಿಟಿಷ್ ಪೊಲೀಸ್ ಅಧಿಕಾರಿ ಜೆ.ಪಿ. ಸ್ಯಾಂಡರ್ಸ್ ನನ್ನು ಗುಂಡಿಟ್ಟು ಕೊಲೆಗೈದರು. ಈ ಅಧಿಕಾರಿಯನ್ನು ಲಾಲಾ ಲಜಪತರಾಯ್ ಅವರ ಮೇಲೆ ಲಾಠಿ ಪ್ರಹಾರ ಮಾಡಲು ಆದೇಶಿಸಿದ ಸ್ಕಾಟ್ ಎಂಬುದಾಗಿ ಭಗತ್ಸಿಂಗ್ ತಪ್ಪಾಗಿ ಭಾವಿಸಿದ್ದರು.

1903: ಒರಿವಿಲ್ ರೈಟ್ ಅವರು ಇಂಧನ ಚಾಲಿತ ವಿಮಾನದ (ಏರ್ ಪ್ಲೇನ್) ಮೊದಲ ಹಾರಾಟವನ್ನು ದಾಖಲಿಸಿದರು. ಉತ್ತರ ಕರೋಲಿನಾದ ಕಿಟ್ಟಿ ಹಾಕ್ ಸಮೀಪ 12 ಸೆಕೆಂಡುಗಳ ಕಾಲ ಬಾನಿನಲ್ಲಿ ಹಾರಿದ ಈ ವಿಮಾನ 120 ಅಡಿಗಳಷ್ಟು ದೂರ ಚಲಿಸಿತು.

No comments:

Post a Comment