Friday, December 7, 2018

‘ದೇಶಭ್ರಷ್ಟ’ ಹಣೆಪಟ್ಟಿ: ವಿಜಯ್ ಮಲ್ಯ ಅರ್ಜಿಗೆ ಉತ್ತರಿಸಿ: ಕೇಂದ್ರಕ್ಕೆ ಸುಪ್ರೀಂ ತಾಕೀತು


ದೇಶಭ್ರಷ್ಟಹಣೆಪಟ್ಟಿ: ವಿಜಯ್ ಮಲ್ಯ ಅರ್ಜಿಗೆ ಉತ್ತರಿಸಿ: ಕೇಂದ್ರಕ್ಕೆ ಸುಪ್ರೀಂ ತಾಕೀತು

ನವದೆಹಲಿ:  ತಮ್ಮನ್ನುದೇಶಭ್ರಷ್ಟಎಂಬುದಾಗಿ ಘೋಷಿಸಲು ಮತ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ಪ್ರಶ್ನಿಸಿ  ಮದ್ಯ ಉದ್ಯಮಿ ವಿಜಯ್ ಮಲ್ಯ ಅವರು ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ಸುಪ್ರೀಂಕೋರ್ಟ್ 2018 ಡಿಸೆಂಬರ್ 7 ಶುಕ್ರವಾರ, ಕೇಂದ್ರ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿತು. ಆದರೆ ಸಂಬಂಧದ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಲಿಲ್ಲ.

ದೇಶಭ್ರಷ್ಟಹಣೆಪಟ್ಟಿ ಹಚ್ಚುವ ಹಾಗೂ ಆಸ್ತಿ ಮುಟ್ಟುಗೋಲು ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸುವಂತೆ ಕೋರಿ ಸಲ್ಲಿಸಲಾದ ತಮ್ಮ ಮನವಿಯನ್ನು ನವೆಂಬರ್ 22ರಂದು ಬಾಂಬೆ ಹೈಕೋರ್ಟ್ ತಿರಸ್ಕರಿಸಿದ ಒಂದು ವಾರದ ಬಳಿಕ ಮಲ್ಯ  ಅವರು ಸುಪ್ರೀಂಕೋಟ್ ಮೆಟ್ಟಿಲು ಏರಿದ್ದಾರೆ.

ತಾವು ದೇಶಭ್ರಷ್ಟ ಆರ್ಥಿಕ ಅಪರಾಧಿ ಅಲ್ಲ, ಮತ್ತು ಹಣ ವರ್ಗಾವಣೆಯ ನಿಗದಿತ ಅಪರಾಧದಲ್ಲಿ ಶಾಮೀಲಾಗಿಲ್ಲ ಎಂಬುದಾಗಿ ವಿಜಯ್ ಮಲ್ಯ ಅವರು ಸೆಪ್ಟೆಂಬರಿನಲ್ಲಿ ಹಣ ವರ್ಗಾವಣೆ  ಕಾಯ್ದೆ (ಪಿಎಂಎಲ್ ) ನ್ಯಾಯಾಲಯಕ್ಕೆ ತಿಳಿಸಿದ್ದರು.  ಪಿಎಂ ಎಲ್ ನ್ಯಾಯಾಲಯ ಮತ್ತು ಬಾಂಬೆ ಹೈಕೋರ್ಟ್ ತಮ್ಮ ಅರ್ಜಿಗಳನ್ನು ತಿರಸ್ಕರಿಸಿದ ಬಳಿಕ  ಅವರು ಗುರುವಾರ  ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ೧೨ ಬ್ಯಾಂಕುಗಳ ಒಕ್ಕೂಟದಿಂದ ಕಿಂಗ್ ಫಿಶರ್ ಏರ್ ಲೈನ್ಸ್ ಗಾಗಿ  ತೆಗೆದುಕೊಂಡ ದೊಡ್ಡ  ಮೊತ್ತದ ಸಾಲಗಳಿಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಅಪರಾಧಗಳ ವಿರುದ್ಧ ಪ್ರಕರಣಗಳು ದಾಖಲಾದ ಬಳಿಕ ಹಣಕಾಸಿನ ಅಪರಾಧಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಯು ಮಲ್ಯ ವಿರುದ್ಧ ನಡೆದ ತನಿಖೆ ಆರಂಭಿಸಿತ್ತು.

ಇತ್ತೀಚೆಗೆ ಜಾರಿಗೊಳಿಸಲಾದ ದೇಶಭ್ರಷ್ಟ  ಆರ್ಥಿಕ  ಅಪರಾಧಗಳ ಕಾಯ್ದೆ 2018  ಅಡಿಯಲ್ಲಿ ತನಿಖಾ ಸಂಸ್ಥೆಯು ವಿಶೇಷ ಪಿಎಂಎಲ್ಎಎ ನ್ಯಾಯಾಲಯಕ್ಕೆ ಮಲ್ಯ  ಅವರನ್ನು  ಓರ್ವ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸುವಂತೆ ಕೋರಿತ್ತು.

ಕಳೆದ ಎರಡು ದಿನಗಳಲ್ಲಿ ಮಲ್ಯ ಅವರು ಕರ್ನಾಟಕದ ಹೈಕೋರ್ಟಿನಲ್ಲಿ  ಬ್ಯಾಂಕುಗಳಿಗೆ ಪೂರ್ತಿ ಅಸಲು ಪಾವತಿ ಮೂಲಕ  ಪ್ರಕರಣ ಇತ್ಯರ್ಥ ಪಡಿಸುವ ತಮ್ಮ ಕೊಡುಗೆಯನ್ನು ಸ್ವೀಕರಿಸುವಂತೆ  ಭಾರತೀಯ ಅಧಿಕಾರಿಗಳಿಗೆ ಪುನರಾವರ್ತಿತ ಮನವಿಗಳನ್ನು ಮಾಡಿದ್ದಾರೆ.

ತಮ್ಮ ಗಡೀಪಾರು ಯತ್ನಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡಿನ ವೆಸ್ಟ್ ಮಿನ್ ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೋಮವಾರ ತೀರ್ಪು ನೀಡುವ ಮುನ್ನ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಳ್ಳಲು ಮಲ್ಯ ಯತ್ನಿಸಿದ್ದಾರೆ.

ಸಹಸ್ರಾರು ಕೋಟಿ ರೂಪಾಯಿಗಳ ಆರ್ಥಿಕ ಅಕ್ರಮಗಳ ಆರೋಪದಲ್ಲಿ ಇಂಗ್ಲೆಂಡಿನಿಂದ ಭಾರತಕ್ಕೆ ಗಡೀಪಾರು ಕ್ರಮವನ್ನು ಮದ್ಯ ಉದ್ಯಮಿ ಮಲ್ಯ ಎದುರಿಸುತ್ತಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಹಲವಾರು ಬ್ಯಾಂಕುಗಳು ನೀಡಿದ ಸಾಲವನ್ನು ಮರುಪಾವತಿ ಮಾಡದೇ ಸುಸ್ತಿದಾರರಾದ ಬಳಿಕ ಬೆಂಗಳೂರಿನ ಸಾಲ ನ್ಯಾಯಾಲಯವು ಮಲ್ಯ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ ನೀಡಿದ ಹಿನ್ನೆಲೆಯಲ್ಲಿ 2016 ಮಾರ್ಚ್ ತಿಂಗಳಲ್ಲಿ ಮಲ್ಯ ಅವರು ಭಾರತದಿಂದ ಪರಾರಿಯಾಗಿದ್ದರು.

ಗಡೀಪಾರು ಪ್ರಕರಣದ ಹೊರತಾಗಿ, 13 ಬ್ಯಾಂಕುಗಳಿಂದ ಪಡೆದ ಸಾಲಕ್ಕಾಗಿ ಇಂಗ್ಲೆಂಡಿನ ಆಸ್ತಿ ಮುಟ್ಟುಗೋಲು ಪ್ರಕರಣ ಹಾಗೂ ಕೇಂದ್ರ ಲಂಡನ್ನಿನ ತಮ್ಮ ಮನೆಗೆ ಸಂಬಂಧಿಸಿದಂತೆ  ಯುಬಿಎಸ್ ಬ್ಯಾಂಕಿನಿಂದ ಪಡೆದ  ಅಡವು ಸಾಲದ ವಸೂಲಾತಿ ಪ್ರಕರಣವನ್ನೂ  ಮಲ್ಯ  ಎದುರಿಸುತ್ತಿದ್ದಾರೆ.

No comments:

Post a Comment