ನಾನು ಮೆಚ್ಚಿದ ವಾಟ್ಸಪ್

Sunday, December 30, 2018

ಅಂಡಮಾನ್ ನಿಕೋಬಾರ್: ಇನ್ನು ನೇತಾಜಿ ಸುಭಾಶ್ ಚಂದ್ರ ಬೋಸ್ ದ್ವೀಪಗಳು

ಅಂಡಮಾನ್ ನಿಕೋಬಾರ್:  ಇನ್ನು ನೇತಾಜಿ
ಸುಭಾಶ್ ಚಂದ್ರ ಬೋಸ್ ದ್ವೀಪಗಳು
ಪೋರ್ಟ್ ಬ್ಲೇರ್: ಪೋರ್ಟ್ ಬ್ಲೇರ್‌ನಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ತ್ರಿವರ್ಣ ಧ್ವಜ ಹಾರಿಸಿದ ’ಅಮೃತ ಮಹೋತ್ಸವ’ (೭೫ನೇ ವರ್ಷಾಚರಣೆ) ಸಂದರ್ಭದಲ್ಲಿ 2018 ಡಿಸೆಂಬರ್ 30ರ ಭಾನುವಾರ ಮೂರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮರುನಾಮಕರಣ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿಗೆ ರಾಷ್ಟ್ರದ ಗೌರವವನ್ನು ಸಲ್ಲಿಸಿದರು.

ರೋಸ್ ಐಲ್ಯಾಂಡಿಗೆ ’ನೇತಾಜಿ ಸುಭಾಶ್ ಚಂದ್ರ ಬೋಸ್ ದ್ವೀಪ’,  ನೀಲ್ ಐಲ್ಯಾಂಡಿಗೆ ’ಶಹೀದ್ ದ್ವೀಪ’ ಮತ್ತು ಹ್ಯಾವ್‌ಲಾಕ್ ದ್ವೀಪಕ್ಕೆ ’ಸ್ವರಾಜ್ ದ್ವೀಪ’ ಎಂಬುದಾಗಿ ಈಗ ಮರುನಾಮಕರಣ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.


ಪ್ರಧಾನಿಯವರು ಈ ಸಂದರ್ಭದಲ್ಲಿ ಒಂದು ಸ್ಮಾರಕ ಅಂಚೆ ಚೀಟಿ, ಅಂಚೆ ಚೀಟಿಯ ಮೊದಲ ದಿನದ ಲಕೋಟೆ ಮತ್ತು ೭೫ ರೂಪಾಯಿಗಳ ನಾಣ್ಯವನ್ನೂ ಈ ವಿಶೇಷ ದಿನದ ಅಂಗವಾಗಿ ಬಿಡುಗಡೆ ಮಾಡಿದರು.

ಬೋಸ್ ಅವರ ಹೆಸರಿನಲ್ಲಿ ಡೀಮ್ಡ್ ವಿಶ್ವ ವಿದ್ಯಾಲಯ ಆರಂಭಿಸುವುದಾಗಿಯೂ ಅವರು ಪ್ರಕಟಿಸಿದರು.


ಇದಕ್ಕೆ ಮುನ್ನ ಮೋದಿಯವರು ಇಲ್ಲಿನ ಮರೀನಾ ಪಾರ್ಕಿಗೆ ಭೇಟಿ ನೀಡಿ ೧೫೦ ಅಡಿ ಎತ್ತರದ ಧ್ವಜಸ್ತಂಭದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿದರು. 

No comments:

Post a Comment