ಇಂದಿನ ಇತಿಹಾಸ History Today ಡಿಸೆಂಬರ್ 05
2018: ನವದೆಹಲಿ: ಭಾರತದ ಇಂಟರ್ ನೆಟ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಲ್ಲ ಭಾರೀ ತೂಕದ ಜಿಸ್ಯಾಟ್-೧೧ ಉಪಗ್ರಹದ ಉಡಾವಣೆ ಯಶಸ್ವಿಯಾಯಿತು. ಭಾರ
ತೀಯ ಕಾಲಮಾನ ನಸುಕಿನ ಜಾವ ೨.೦೭ಕ್ಕೆ ಏರಿಯಾನ್ ರಾಕೆಟ್ ಮೂಲಕ ಉಪಗ್ರಹ ವನ್ನು ಉಡಾವಣೆ ಮಾಡಲಾಯಿತು. ಭಾರತದಲ್ಲಿ ಬ್ರಾಂಡ್ ಬಾಂಡ್ ಗಳ ಸೇವೆ ಯನ್ನು ಹೆಚ್ಚಿಸಲು ಮತ್ತು ಮುಂದಿನ ಪೀಳಿಗೆಗೆ ಸುಧಾರಿತ ತಂತ್ರಜ್ಞಾನಗಳ ಬಳಕೆಗೆ ಈ ಉಪಗ್ರಹ ಸಹಾಯವಾಗಲಿದ್ದು,
ಭಾರತೀಯ ಕಾಲಮಾನ ನಸುಕಿನ ಜಾವ ೨ ಗಂಟೆ ೭ ನಿಮಿ?ಕ್ಕೆ ದಕ್ಷಿಣ ಅಮೆರಿಕಾದ ಈಶಾನ್ಯ ಕರಾವಳಿಯಲ್ಲಿ ಉಪ ಗ್ರಹ ನೆಲೆನಿಂತಿತ್ತು.
ಇದನ್ನು ಫ್ರಾನ್ಸ್ ನ ಗಯಾನಾ ಉಡ್ಡಯನ ಕೇಂದ್ರದಿಂದ ಏರಿಯನ್ ೫ ವಿಎ-೨೪೬ ಉಡ್ಡಯನ ವಾಹಕ ಹೊತ್ತೊಯ್ದಿತ್ತು ಎಂದು ಇಸ್ರೊ ಸಂಸ್ಥೆ ಅಧ್ಯಕ್ಷ ಕೆ ಶಿವನ್ ಹರ್ಷ ವ್ಯಕ್ತಪಡಿಸಿದರು. ಇದು ಭಾರತಕ್ಕೆ ಅತ್ಯಂತ ಸಂಪದ್ಭರಿತ ಉಪಗ್ರಹ ವಾಗಿದೆ ಎಂದು ಅವರು ಹೇಳಿದರು. ೫,೮೫೪ ಕೆಜಿ ತೂಕದ ಜಿಸ್ಯಾಟ್-೧೧ ಇಸ್ರೊ ಇದುವರೆಗೆ ನಿರ್ಮಿಸಿದ ಅತ್ಯಂತ ಭಾರದ ಭಾರತ ಉಪಗ್ರಹವಾಗಿದೆ. ಇದು ೧೫ ವರ್ಷಕ್ಕಿಂತ ಹೆಚ್ಚು ಜೀವಿತಾವಧಿಯನ್ನು
ಹೊಂದಿದೆ ಎಂದು ಇಸ್ರೊ ವಿಜ್ಞಾನಿಗಳು ವಿಶ್ಲೇಷಿಸಿದರು. ಫ್ರೆಂಚ್ ಗಯಾನಾದಿಂದ ಏರಿಯಾನ್ ೫ ರಾಕೆಟ್ ಮೂಲಕ ಉಡಾವಣೆಯಾದ ಉಪಗ್ರಹ ೨೯ ನಿಮಿಷದಲ್ಲಿ ನಿಗದಿತ ಕಕ್ಷೆಯನ್ನು ತಲುಪಿದೆ ಎಂದು ಇಸ್ರೋ ಹೇಳಿತು. ಭಾರತೀಯ
ಬ್ರಾಡ್ ಬ್ಯಾಂಡ್ ಸೇವೆಯಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಿಸುವ ಉದ್ದೇಶವನ್ನು ಜಿಸ್ಯಾಟ್ ೧೧ ಹೊಂದಿದೆ. ಸೆಕೆಂಡ್ ಗೆ ೧೬ ಜಿಬಿ(ಗಿಗಾ ಬೈಟ್ ಪರ್ ಸೆಕೆಂಡ್) ವೇಗದಲ್ಲಿ ಅಂತರ್ಜಾಲ ಸೌಲಭ್ಯ ನೀಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಜಿಸ್ಯಾಟ್ ೧೧ ಉಡ್ಡಯನಕ್ಕಾಗಿ ಇಸ್ರೋಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು. ದೇಶಕ್ಕೆ ಸುಮಾರು ೧೬ ಜಿಬಿಪಿಎಸ್ ಡಾಟಾ ಸಂಪರ್ಕ ಸೇವೆಯನ್ನು ಒದಗಿಸಲಿದ್ದು ಕೇಂದ್ರ ಸರ್ಕಾರದ ಡಿಜಿಟಲ್ ಭಾರತ ಅಭಿಯಾ ನದಡಿ ದೇಶದ ಹಳ್ಳಿ ಹಳ್ಳಿಗಳಿಗೂ ೧೦೦ ಜಿಬಿಪಿಎಸ್ ನಷ್ಟು ಅತ್ಯಧಿಕ ಡಾಟಾ ಸಂಪರ್ಕ ಸೇವೆಯನ್ನು ಒದಗಿಸುವ ಮಹಾತ್ವಾಕಾಂಕ್ಷೆಯ
ಯೋಜನೆಯನ್ನು ಇದು ಈಡೇರಿಸಲಿದೆ. ಭಾರತ ಸಂಪರ್ಕ ಯೋಜನೆಯಡಿ ಗ್ರಾಮ ಪಂಚಾಯತ್ ಗಳಿಗೆ ಇಂಟರ್ನೆಟ್, ಬ್ರಾಡ್ ಬ್ಯಾಂಡ್ ಸೇವೆಯನ್ನು ಒದಗಿಸಲು ಜಿಸ್ಯಾಟ್-೧೧ ಅಧಿಕ ಡಾಟಾ ಸಂಪರ್ಕವನ್ನು ಒದಗಿಸಲಿದೆ. ಯಾಕೆ
ಉಡಾವಣೆ? ೫೦೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಉಪಗ್ರಹ ೫,೮೫೪ ಕೆ.ಜಿ. ತೂಕ ವನ್ನು ಹೊಂದಿದ್ದು, ೧೫ ವ? ಜೀವಿತಾವಧಿ ಯನ್ನು ಹೊಂದಿದೆ. ಭೂಮಿಯಿಂದ ೩೬ ಸಾವಿರ ಕಿ.ಮೀ. ಎತ್ತರದ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸಲಿರುವ ಜಿಸ್ಯಾಟ್-೧೧ ಉಪಗ್ರಹವು ನಾಲ್ಕು ಸೋಲಾರ್ ಪ್ಯಾನಲ್ಗಳನ್ನು ಹೊಂದಿದೆ. ಭಾರತದ ಗ್ರಾಮೀಣ ಹಾಗೂ ದ್ವೀಪ ಪ್ರದೇಶಗಳಲ್ಲಿ ಉತ್ತಮ ಇಂಟರ್ ನೆಟ್ ಸೇವೆ ನೀಡಲು ಇಸ್ರೋ ಈ ಉಪಗ್ರಹವನ್ನು ಉಡಾವಣೆ ಮಾಡಿದೆ. ಇನ್ಸ್ಯಾಟ್ ಕಡಿಮೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಜಿಸ್ಯಾಟ್-೧೧ ಅಭಿವೃದ್ಧಿ ಪಡಿಸಿದೆ.
2018: ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್
ನಿಂದ ಹಿಂದಿನ ರಾತ್ರಿ ಭಾರತಕ್ಕೆ ಗಡೀಪಾರಾಗಿ ಬಂದಿರುವ
೩೬೦೦ ಕೋಟಿ ರೂಪಾಯಿಗಳ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ವ್ಯವಹಾರದ ಮಧ್ಯವರ್ತಿ
(ದಲ್ಲಾಳಿ) ಎಂಬುದಾಗಿ ಆಪಾದಿಸಲಾಗಿರುವ ಕ್ರಿಸ್ಟಿಯನ್ ಮೈಕೆಲ್‌ನನ್ನು ದೆಹಲಿ ನ್ಯಾಯಾಲಯದಲ್ಲಿ ಹಾಜರು
ಪಡಿಸಲಾಗಿದ್ದು, ನ್ಯಾಯಾಲಯವು ತನಿಖೆ ಸಲುವಾಗಿ ಆತನನ್ನು ಐದು ದಿನಗಳ ಅವಧಿಗೆ ಸಿಬಿಐ ವಶಕ್ಕೆ ಒಪ್ಪಿಸಿತು.
೫೪ರ ಹರೆಯದ ಮೈಕೆಲ್ ಗಲ್ಫ್ ಸ್ಟ್ರೀಮ್ ಜೆಟ್ ಮೂಲಕ ಹಿಂದಿನ ರಾತ್ರಿ ೧೦.೩೫ ಗಂಟೆಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ
ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ತತ್ ಕ್ಷಣವೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಆತನನ್ನು
ಬಂಧಿಸಿತು. ಮೈಕೆಲ್‌ನನ್ನು
ವಿಶೇಷ ಸಿಬಿಐ ನ್ಯಾಯಾಧೀಶ ಅರವಿಂದ ಕುಮಾರ್ ಅವರ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ತನ್ನ
ವಕೀಲರ ಜೊತೆಗೆ ಮಾತನಾಡಲು ಮೈಕೆಲ್ ಗೆ ೫ ನಿಮಿಷಗಳ ಕಾಲಾವಕಾಶ ನೀಡಿತು. ಮೈಕೆಲ್‌ನನ್ನು ನ್ಯಾಯಾಂಗ
ವಶಕ್ಕೆ ಒಪ್ಪಿಸುವಂತೆ ಮೈಕೆಲ್ ಅವರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ ತನಿಖೆ ಸಲುವಾಗಿ
ತನ್ನ ವಶಕ್ಕೆ ಒಪ್ಪಿಸುವಂತೆ ಸಿಬಿಐ ಕೋರಿತು. ಸಾಕ್ಷ್ಯಾಧಾರಗಳ ಬಗ್ಗೆ ಆರೋಪಿಯನ್ನು ಪ್ರಶ್ನಿಸಬೇಕಾಗಿದೆ
ಮತ್ತು ಹಗರಣದ ಹಣ ವರ್ಗಾವಣೆ ಮಾರ್ಗವನ್ನು ಪತ್ತೆ
ಹಚ್ಚಬೇಕಾಗಿದೆ ಎಂದು ಸಿಬಿಐ ಹೇಳಿತು. ಮೈಕೆಲ್ ಪರವಾಗಿ ಜಾಮೀನು ಅರ್ಜಿಯನ್ನೂ ಸಲ್ಲಿಸಲಾಯಿತು. ಪ್ರಕರಣಕ್ಕೆ
ಸಂಬಂಧಿಸಿದಂತೆ ಮೂವರು ಆಪಾದಿತ ಮಧ್ಯವರ್ತಿಗಳ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಮೈಕೆಲ್ ಇವರಲ್ಲಿ
ಒಬ್ಬನಾಗಿದ್ದಾನೆ. ಗುಯಿಡೊ ಹಶ್ಚಕೆ ಮತ್ತು ಕಾರ್ಲೋ ಗೆರೋಸಾ ಅವರು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ
ತನಿಖೆ ನಡೆಸುತ್ತಿರುವ ಪ್ರಕರಣದ ಉಳಿದಿಬ್ಬರು ಆರೋಪಿತ ಮಧ್ಯವರ್ತಿಗಳು. ಜಾರಿ ನಿರ್ದೇಶನಾಲಯ ಮತ್ತು
ಸಿಬಿಐ ಉಳಿದಿಬ್ಬರು ಮಧ್ಯವತಿಗಳ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್‌ಗಾಗಿ ಪ್ರಕಟಣೆ ನೀಡಿದ್ದು,
ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು. ಏನಿದ್ದರೂ, ಮೈಕೆಲ್ ತನ್ನ
ವಿರುದ್ಧದ ಆರೋಪಗಳನ್ನು ನಿರಾಕರಿಸಿದ. ಬೊಕ್ಕಸಕ್ಕೆ ೨,೬೬೬ ಕೋಟಿ ರೂ ನಷ್ಟ: ವಿವಿಐಪಿ ಅಗಸ್ಟಾ ವೆಸ್ಟ್
ಲ್ಯಾಂಡ್ ಹೆಲಿಕಾಪ್ಟರ್ ವಹಿವಾಟನಲ್ಲಿ ಬೊಕ್ಕಸಕ್ಕೆ ೩೯೮.೨೧ ಮಿಲಿಯನ್ ಯೂರೋ (ಅಂದಾಜು ೨,೬೬೬ ಕೋಟಿ
ರೂಪಾಯಿ) ನಷ್ಟವಾಗಿದೆ ಎಂದು ಸಿಬಿಐ ಆಪಾದಿಸಿತು. ೫೫೬.೨೬೨ ಮಿಲಿಯನ್ ಯೂರೋ ಮೌಲ್ಯದ ವಿವಿಐಪಿ ಹೆಲಿಕಾಪ್ಟರ್
ಸರಬರಾಜಿಗಾಗಿ ೨೦೧೦ರ ಫೆಬ್ರುವರಿ ೮ರಂದು ಸಹಿ ಮಾಡಲಾಗಿತ್ತು. ೨೦೧೬ರ ಜೂನ್ ತಿಂಗಳಲ್ಲಿ ಮೈಕೆಲ್ ವಿರುದ್ಧ ಸಲ್ಲಿಸಲಾದ ತನ್ನ
ದೋಷಾರೋಪ ಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯವು ವಹಿವಾಟಿನಲ್ಲಿ ಮೈಕಲ್ ೩೦ ಮಿಲಿಯನ್ ಯೂರೂ (ಅಂದಾಜು
೨೨೫ ಕೋಟಿ ರೂಪಾಯಿ) ಹಣವನ್ನು ಅಗಸ್ಟಾ ವೆಸ್ಟ್ ಲ್ಯಾಂಡ್‌ನಿಂದ ಪಡೆದಿರುವುದಾಗಿ ಆಪಾದಿಸಿತ್ತು. ಈ
ಹಣವು ೧೨ ಹೆಲಿಕಾಪ್ಟರ್ ವ್ಯವಹಾರವನ್ನು ಅನುಷ್ಠಾನಗೊಳಿಸಲು ಸಂಸ್ಥೆಯಿಂದ ಪಾವತಿ ಮಾಡಲಾದ ಲಂಚ (ಕಿಕ್
ಬ್ಯಾಕ್) ಹೊರತು ಬೇರೇನಲ್ಲ. ರಾಷ್ಟ್ರದಲ್ಲಿ ವಿವಿಧ ಕೆಲಸಗಳ ಗುತ್ತಿಗೆ (ಕಾಂಟ್ರಾಕ್ಟ್) ಮೂಲಕ ಸಂಸ್ಥೆಯ
ಪರವಾಗಿ ವಹಿವಾಟು ಅನುಷ್ಠಾನಕ್ಕಾಗಿ ಈ ಹಣ ಪಾವತಿ ಮಾಡಲಾಗಿತ್ತು ಎಂದು ದೋಷಾರೋಪ ಪಟ್ಟಿ ಹೇಳಿತ್ತು.
ಮೈಕೆಲ್ ಗೆ ಆತನ ದುಬೈ ಮೂಲದ ಗ್ಲೋಬಲ್ ಸರ್ವೀಸಸ್ ಮೂಲಕ ಈ ಹಣವನ್ನು ಪಾವತಿ ಮಾಡಲಾಗಿದ್ದುದನ್ನು ಜಾರಿ
ನಿರ್ದೇಶನಾಲಯದ ತನಿಖೆ ಪತ್ತೆ ಹಚ್ಚಿತ್ತು. ದೆಹಲಿಯಲ್ಲಿ ಇಬ್ಬರು ಭಾರತೀಯರ ಜೊತೆಗೆ ಆರಂಭಿಸಲಾಗಿದ್ದ್ದ
ಮಾಧ್ಯಮ ಸಂಸ್ಥೆಗೆ, ಅಗಸ್ಟಾ ವೆಸ್ಟ್ ಲ್ಯಾಂಡ್ ಮೂಲಕ ತನಗೆ ಲಭಿಸಿದ ಹಣವನ್ನು ಭ್ರಷ್ಟಾಚಾರ ಮತ್ತು
ಕ್ರಿಮಿನಲ್ ಚಟುವಟಿಕೆಗಳ ಸಲುವಾಗಿ ಆತ ನೀಡಿದ್ದ ಎಂದು ದೋಷಾರೋಪ ಪಟ್ಟಿ ತಿಳಿಸಿತ್ತು. ೧೨ ಎ ಡಬ್ಲ್ಯೂ
- ೧೦೧ ವಿವಿಐಪಿ ಹೆಲಿಕಾಪ್ಟರುಗಳನ್ನು ಭಾರತೀಯ ವಾಯುಪಡೆಗೆ ಸರಬರಾಜು ಮಾಡುವ ಸಲುವಾಗಿ ಇಟಲಿ ಮೂಲಕ
ಫಿನ್‌ಮೆಕ್ಕಾನಿಕಾದ ಬ್ರಿಟಿಶ್ ಆಧೀನ ಸಂಸ್ಥೆ ಅಗಸ್ಟಾ ವೆಸ್ಟ್‌ಲ್ಯಾಂಡ್ ಜೊತೆಗೆ ಮಾಡಿಕೊಳ್ಳಲಾಗಿದ್ದ
ಒಪ್ಪಂದವನ್ನು ಭಾರತವು ೨೦೧೪ರ ಜನವರಿ ೧ರಂದು ರದ್ದು ಪಡಿಸಿತ್ತು. ವಹಿವಾಟು ಗಳಿಕೆಗಾಗಿ ೪೨೩ ಕೋಟಿ
ರೂಪಾಯಿಗಳಷ್ಟು ಮೊತ್ತದ ಲಂಚ ನೀಡಲಾಗಿದೆ ಮತ್ತು ಗುತ್ತಿಗೆ ಬದ್ಧತೆಗಳನ್ನು ಉಲ್ಲಂಘಿಸಲಾಗಿದೆ ಎಂಬ
ಕಾರಣಗಳನ್ನು ಭಾರತವು ಒಪ್ಪಂದ ರದ್ದಿಗೆ ನೀಡಿತ್ತು. ದೋಷಾರೋಪ ಪಟ್ಟಿ: ೨೦೧೭ರ ಸೆಪ್ಟೆಂಬರ್ ೧ರಂದು,
ಸಿಬಿಐ ದೋಷಾರೋಪಪಟ್ಟಿಯನ್ನು ಸಲ್ಲಿಸಿದ್ದು ಅದರಲ್ಲಿ ಮೈಕೆಲ್ ಹೆಸರನ್ನು ಆರೋಪಿಗಳ ಪೈಕಿ ಒಬ್ಬರಾಗಿ
ಹೆಸರಿಸಲಾಯಿತು. ವಿವಿಐಪಿ ಹೆಲಿಕಾಪ್ಟರ್ ಲಂಚ ಹಗರಣಕ್ಕೆ
ಸಂಬಂಧಿಸಿದಂತೆ ಇತರ ಒಂಬತ್ತು ಮಂದಿಯ ಜೊತೆಗೆ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ. ತ್ಯಾಗಿ
ಅವರ ವಿರುದ್ಧವೂ ದೆಹಲಿ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತು. ಮೈಕೆಲ್ ಗೆ ಸಿಬಿಐ ಪ್ರಶ್ನಾವಳಿ:
ಈ ಮಧ್ಯೆ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಐದು ಅಂಶಗಳ ಪ್ರಶ್ನಾವಳಿಯೊಂದನ್ನು
ದುಬೈಯಿಂದ ಗಡೀಪಾರಾಗಿ ಭಾರತಕ್ಕೆ ಬಂದಿರುವ ಕ್ರಿಸ್ಟಿಯನ್ ಮೈಕೆಲ್‌ಗೆ ನೀಡಿದೆ. ಇದರಲ್ಲಿ ನಿಗೂಢವಾದ ’ಎಪಿ’ ಮತ್ತು ’ಎಫ್ ಎ ಎಂ’ ಗುರುತು ವಿವರಿಸುವಂತೆ ಸಿಬಿಐ ಸೂಚಿಸಿತು.
ಸೂಚಿಸಲಾದ ಇಬ್ಬರು ವ್ಯಕ್ತಿಗಳಿಗೆ ವ್ಯಕ್ತಿಗಳಿಗೆ ನೀಡಲಾದ ಲಂಚದ ಮೊತ್ತ ಮತ್ತು ಭಾರತೀಯ ವಾಯುಪಡೆಯ
ಹಿರಿಯ ಅಧಿಕಾರಿಗಳ ಜೊತೆಗಿನ ಶಂಕಿತ ಸಂಪರ್ಕಗಳ ಬಗೆಗೂ ಸಿಬಿಐ ಮೈಕೆಲ್ ಬಳಿ ಪ್ರಶ್ನಿಸಿದೆ ಎಂದು ಮೂಲಗಳು
ಹೇಳಿದವು. ಮೂಲಗಳ ಪ್ರಕಾರ ಮೈಕಲ್ ಗೆ ಕೇಳಲಾಗಿರುವ ಪ್ರಶ್ನೆಗಳು ಈ ಕೆಳಗಿನಂತಿವೆ: -’ಎಪಿ’ ಮತ್ತು ’ಎಫ್ ಎಎಂ’ ಯಾರು? ಅವರಿಗೆ ನೀಡಲಾಗಿರುವ ಲಂಚದ ಮೊತ್ತ
ಎಷ್ಟು? -ಗುತ್ತಿಗೆ ನೀಡಿಕೆ ಪ್ರಕ್ರಿಯೆಯನ್ನು ನೀವು ನಿಕಟವಾಗಿ ಗಮನಿಸುತ್ತಿದ್ದಿರಾ? -ವಾಯುಪಡೆಯ ಹಿರಿಯ ಅಧಿಕಾರಿಗಳ ಜೊತೆಗೆ ನಿಮಗೆ ಎಂತಹ ಸಂರ್ಪಕ
ಇತ್ತು? -ನಿಮ್ಮಿಂದ ಅನುಷ್ಠಾನಗೊಂಡ ೫ ನಕಲಿ ಗುತ್ತಿಗೆಗಳ
ಮೂಲಕ ನೀವು ಲಂಚ ಪಡೆದಿದ್ದೀರಾ? -ಅಗಸ್ಟಾಕ್ಕೆ ಸರಿಹೊಂದುವಂತೆ ಎತ್ತರದ ನಿರ್ದಿಷ್ಟ ವಿವರಣೆಗಳನ್ನು
ಬದಲಾಯಿಸುವಂತೆ ನೀವು ಐಎಎಫ್ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಿರಾ? ಹೆಲಿಕಾಪ್ಟರ್ ಹಗರಣದ ಇನ್ನೊಬ್ಬ
ಮಧ್ಯವರ್ತಿ ಗುಯಿಡೊ ಹಶ್ಚಕೆ ಬರೆದದ್ದು ಎಂದು ಆಪಾದಿಸಲಾದ ಟಿಪ್ಪಣಿಯೊಂದರಲ್ಲಿ ’ಎಪಿ’ ಮತ್ತು ’ಎಫ್ ಎಎಂ’ ಸಂಕ್ಷೇಪಾಕ್ಷರಗಳು ಮೊತ್ತ ಮೊದಲಿಗೆ ಕಂಡು
ಬಂದಿದ್ದವು. ತಪ್ಪು ಲೆಕ್ಕ ಮತ್ತು ಭ್ರಷ್ಟಾಚಾರಕ್ಕಾಗಿ ಅಗಸ್ಟಾ ವೆಸ್ಟ್ ಲ್ಯಾಂಡ್‌ನ ಮಾಜಿ ಮುಖ್ಯಸ್ಥ
ಬ್ರೂನೋ ಸ್ಪಾಗ್ನೊಲಿನಿ ಅವರನ್ನು ಮತ್ತು ಫಿನ್‌ಮೆಕ್ಯಾನಿಕಾದ ಮಾಜಿ ಸಿಇಒ ಗುಯಿಸೆಪ್ಪೆ ಒರ್‍ಸಿ ಅವರನ್ನು
ಇಟಲಿಯ ನ್ಯಾಯಾಲಯವೊಂದು ಜೈಲಿಗೆ ಕಳುಹಿಸಿದಾಗ ಈ ಟಿಪ್ಪಣಿಯನ್ನು ಉಲ್ಲೇಖಿಸಲಾಗಿತ್ತು. ‘ಎಪಿ’ ಸಂಕ್ಷೇಪಾಕ್ಷರವು ಕಾಂಗ್ರೆಸ್
ನಾಯಕಿ ಸೋನಿಯಾಗಾಂಧಿ ಅವರ ನಿಕಟವರ್ತಿ ಹಾಗೂ ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ಅವರದ್ದಾಗಿದ್ದು,
’ಎಫ್ ಎಎಂ’ ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ್ದು ಎಂದು
ಬಿಜೆಪಿ ಆಪಾದಿಸಿತು.
2018: ಬೆಂಗಳೂರು: ರಾಜಧಾನಿಗೆ ೪೪೦ ಕಿಮೀ
ದೂರದಲ್ಲಿರುವ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮದ ತುಂಬಿ ತುಳುಕುತ್ತಿರುವ ಕೆರೆಯ
ನೀರನ್ನು ಅಧಿಕಾರಿಗಳು ’ಜನರ ಏಡ್ಸ್ ಭೀತಿ’ ಹೋಗಲಾಡಿಸುವ ಸಲುವಾಗಿ
ಪಂಪ್ ಮೂಲಕ ಖಾಲಿ ಮಾಡಿಸಿದರು. ಕೆರೆಯಲ್ಲಿ ಎಚ್ ಐವಿ ಸೋಂಕು ತಗುಲಿದ್ದ ಮಹಿಳೆಯೊಬ್ಬರ ಶವ ಪತ್ತೆಯಾದ
ಬಳಿಕ, ಕೆರೆಯ ನೀರು ಏಡ್ಸ್ ಮಾಲಿನ್ಯಕ್ಕೆ ಒಳಗಾಗಿದೆ ಎಂಬುದಾಗಿ ಗ್ರಾಮಸ್ಥರು ಭೀತಿ ಪಟ್ಟಿರುವ ಹಿನ್ನೆಲೆಯಲ್ಲಿ
ಅಧಿಕಾರಿಗಳು ಈ ಕ್ರಮ ಕೈಗೊಂಡಿಡರು. ಮೊರಬ ಗ್ರಾಮದ ೧೦೦೦ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿಗೆ
ಈ ಕೆರೆಯೇ ಪ್ರಮುಖ ಆಸರೆಯಾಗಿದ್ದು, ೩೨ ಎಕರೆ (೧೩ ಹೆಕ್ಟೇರ್) ವ್ಯಾಪ್ತಿಯನ್ನು ಆವರಿಸಿದೆ. ಕುಡಿಯುವುದರ ಜೊತೆಗೆ ಆಸುಪಾಸಿನ ಗ್ರಾಮಗಳಲ್ಲಿ ಕೃಷಿಗೂ ಜನರು
ಈ ಕೆರೆಯ ನೀರನ್ನೇ ಬಳಸುತ್ತಾರೆ. ‘ಕೆರೆಯ ನೀರನ್ನು
ಪರೀಕ್ಷೆಗೆ ಕಳುಹಿಸೋಣ ಎಂಬುದಾಗಿ ಗ್ರಾಮಸ್ಥರನ್ನು ಸಂತೈಸಲು ನಾವು ಯತ್ನಿಸಿದೆವು. ಆದರೆ ಜನರು ಅದಕ್ಕೆ
ಒಪ್ಪಲಿಲ್ಲ. ಕೆರೆಯಬಳಿಗೆ ಬರಲೂ ಅವರು ಒಪ್ಪುತ್ತಿಲ್ಲ’ ಎಂದು ಪ್ರದೇಶದ ಅಧಿಕಾರಿ
ನವೀನ್ ಹುಲ್ಲೂರು ತಿಳಿಸಿದರು. ಎಚ್ ಐವಿ ಸೋಂಕು ಸಾಮಾನ್ಯವಾಗಿ
ಲೈಂಗಿಕ ಸಂಪರ್ಕದಿಂದ ಮಾತ್ರ ಹರಡುತ್ತದೆ. ಇಲ್ಲವೇ ರಕ್ತದ ಮೂಲಕ ಮತ್ತು ಸೋಂಕು ತಗಲಿದ ತಾಯಿಯಿಂದ
ಗರ್ಭದಲ್ಲಿರುವ ಮಗುವಿಗೆ ಹರಡುತ್ತದೆ. ಅಂತಹ ತಾಯಿ ಮಗುವಿಗೆ ಸ್ತನಪಾನ ಮಾಡಿಸಿದರೂ ಹರಡಬಹುದು. ಆದರೆ
ವಾರದ ಹಿಂದೆ ಎಚ್ ಐಪಿ ಪೀಡಿತ ಮಹಿಳೆಯ ಶವ ಕೆರೆಯಲ್ಲಿ ಪತ್ತೆಯಾದ ಬಳಿಕ ಗ್ರಾಮಸ್ಥರು ಕೆರೆಯ ನೀರು
ಖಾಲಿ ಮಾಡಿಸಲೇಬೇಕು ಎಂದು ದುಂಬಾಲು ಬಿದ್ದರು ಎಂದು ಅಧಿಕಾರಿ ನುಡಿದರು. ಕಳೆದ ನಾಲ್ಕೈದು
ದಿನಗಳಿಂದ ಪಂಪುಗಳ ಮೂಲಕ ನೀರನ್ನು ಖಾಲಿ ಮಾಡಲಾಗುತ್ತಿದೆ. ಮತ್ತು ಸಮೀಪದ ನಾಲೆಯಿಂದ ಬೇರೆ
ನೀರನ್ನು ಕೆರೆಗೆ ಹರಿಸಲಾಗುತ್ತಿದೆ ಎಂದು ಹುಲ್ಲೂರು ಹೇಳಿದರು. ಕೆರೆಯ ನೀರು ಖಾಲಿ ಮಾಡಲು ತಗಲುವೆ ವೆಚ್ಚ ಎಷ್ಟೆಂಬ ಮಾಹಿತಿ
ತತ್ ಕ್ಷಣಕ್ಕೆ ಲಭ್ಯವಾಗಿಲ್ಲ. ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಪ್ರತಿಕ್ರಿಯೆಗೆ ಮಾಧ್ಯಮಗಳಿಗೆ
ಸಿಕ್ಕಿಲ್ಲ.
ಏಡ್ಸ್
ಗೆ ಕಾರಣವಾಗುವ ಎಚ್ ಐವಿ ಸೋಂಕು ಗಾಳಿ, ನೀರು, ಅಥವಾ ಆಹಾರದಿಂದ ಇಲ್ಲವೇ ಕಪ್, ಬೌಲ್, ಕಟ್ಲೇರಿ, ಬಟ್ಟೆ ಅಥವಾ ಟಾಯ್ಲೆಟ್ ಬಳಕೆಯಿಂದ ಹರಡುವುದಿಲ್ಲ.
ಸೋಂಕು ತಗುಲಿದ ವ್ಯಕ್ತಿ ಮೃತನಾದ ಬಳಿಕ ಆತನ ದೇಹದಲ್ಲಿ ಎಚ್‌ಐವಿ ವೈರಾಣುಗಳು ಬದುಕುವುದಿಲ್ಲ ಎಂದು
ವೈದ್ಯಕೀಯ ಮೂಲಗಳು ಹೇಳಿದವು.
2018: ನವದೆಹಲಿ: ಯುಪಿಎ ಕೇಂದ್ರ ಸರ್ಕಾರದ
ಅವಧಿಯಲ್ಲಿ ನಡೆದ ಕಲ್ಲಿದ್ದಲು ಗಣಿ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕಲ್ಲಿದ್ದಲು ಕಾರ್ಯದರ್ಶೀ
ಗುಪ್ತಾರಿಗೆ ದೆಹಲಿ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಪ್ರಕಟಿಸಿತು. ಇನ್ನಿಬ್ಬರು ಅಧಿಕಾರಿಗಳಾದ
ಕೆ.ಎಸ್. ಕ್ರೊಫಾ ಮತ್ತು ಕೆ.ಸಿ ಸಮ್ರಿಯಾರಿಗೂ ೩ ವರ್ಷಗಳ ಜೈಲು ಶಿಕ್ಷೆಯಾಯಿತು. ಈ ಮೂವರು ಅಧಿಕಾರಿ ಗಳಿಗೆ ೫೦ ಸಾವಿರ ರೂ ದಂಡವನ್ನು ಸಹ ವಿಧಿಸಲಾಯಿತು.
ಶಿಕ್ಷೆಯ ಪ್ರಮಾಣ ನಾಲ್ಕು ವರ್ಷದೊಳಗೆ ಇದ್ದುದ್ದರಿಂದ
ನಂತರ ಅವರಿಗೆ ಜಾಮೀನು ಲಭಿಸಿತು. ವಿಕಾಸ ಮೆಟಲ್ಸ್ ಮತ್ತು ಪಾವರ್ ಲಿಮಿಟೆಡ್‌ನ ಎಂಡಿ ವಿಕಾಸ ಪಾಟಿ ಮತ್ತು ಅದರ ಅಧಿಕೃತ ಅಧಿಕಾರಿ ಆನಂದ ಮಲ್ಲಿಕ ರಿಗೆ ನಾಲ್ಕು
ವ?ದ ಜೈಲು ಶಿಕ್ಷೆ ನೀಡಿದ್ದು ಕಂಪನಿಗೆ ೧ ಲಕ್ಷ ರೂ ದಂಡ ವಿಧಿಸಿತು. ಈ ಶಿಕ್ಷೆಗೆ ಒಳಗಾದ ವ್ಯಕ್ತಿಗಳಿಗೆ
ಸಿಬಿಐ ಏಳು ವರ್ಷದ ಗರಿಷ್ಠ ಶಿಕ್ಷೆ ವಿಧಿಸಿದ ಕಂಪೆನಿಗೆ ಭಾರಿ ದಂಡ ವಿಧಿಸುವಂತೆ ಕೋರಿತ್ತು. ನ.೩
ರಂದು ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಪಶ್ಚಿಮ
ಬಂಗಾಲದ ವಿಎಂಪಿಎಲ್ ನಗರ ಪ್ರದೇಶಗಳಾದ ಉತ್ತರ ಮತ್ತು ದಕ್ಷಿಣದ ಮೊಕಾ ಮತ್ತು ಮಧು ಜೊರೆಯ ಹಂಚಿಕೆಯಲ್ಲಿ
ನಡೆದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಆರೋಪಿಸಿ ಸೆಪ್ಟೆಂಬರ್‍ನಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.
ಗುಪ್ತಾರಿಗೆ ಇನ್ನೆರಡು ಕಲ್ಲಿದ್ದಲು ಪ್ರದೇಶಗಳ ಹಂಚಿಕೆಯಲ್ಲಿ
ಈ ಹಿಂದೆ ಎರಡು ಪ್ರಕರಣಗಳಲ್ಲಿ ತಲಾ ಎರಡು ಮತ್ತು ಮೂರು ವ?ದ ಜೈಲು ಶಿಕ್ಷೆಯಾಗಿದ್ದು ಅವರು ಜಾಮೀನು
ಮೇಲೆ ಹೊರಗಿದ್ದರು
2018: ನವದೆಹಲಿ: ಬಹುಕೋಟಿ ಅಗಸ್ಟಾವೆಸ್ಟ್‌ಲ್ಯಾಂಡ್
ಹಗರಣ ದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್‌ನನ್ನು ದುಬೈನಿಂದ ಭಾರತಕ್ಕೆ ಹಸ್ತಾಂತರ ಮಾಡಿದ ಬೆನ್ನಲ್ಲೇ
ಮದ್ಯದದೊರೆ ವಿಜಯ್ ಮಲ್ಯಗೆ ಬಂಧನದ ಭೀತಿಎದುರಾಯಿತು. ಇದರಿಂದಾಗಿಸರಣಿ ಟ್ವೀಟ್‌ಗಳ ಮೂಲಕ ಭಾರತದ ಸಾರ್ವಜನಿಕ
ವಲಯದ ಬ್ಯಾಂಕ್‌ಗಳಿಗೆ ತಾನು ಪಡೆದು ಕೊಂಡಿರುವ ಸಾಲವನ್ನು ಸಂಪೂರ್ಣವಾಗಿ ಮರುಪಾವ ತಿಸುವುದಾಗಿ ಹೇಳಿದರು.
ಅಲ್ಲದೆ, ದಯವಿಟ್ಟು ಹಣವನ್ನು ಪಡೆದುಕೊಳ್ಳಿ. ಎಲ್ಲಾ ಸಾಲವನ್ನು ತೀರಿಸುತ್ತೇನೆ ಎಂದು ಮನವಿ ಮಾಡಿದರು.
ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸುಮಾರು ಒಂಭತ್ತು
ಸಾವಿರ ಕೋಟಿ ರೂಪಾಯಿ ಸಾಲ ಮರು ಪಾವತಿಸದೆ ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ
ಬಂಧನದ ಭೀತಿಯಿಂದ ಟ್ವೀಟ್ ಮಾಡಿದ್ದಾರೆ ಎನ್ನಲಾಯಿತು. ಬ್ಯಾಂಕ್‌ಗಳಿಂದ
ಪಡೆದ ಸಾಲದ ಅಸಲು ಹಣವನ್ನು ಮರುಪಾವತಿಸಲು ಸಿದ್ಧನಿದ್ದು, ಬ್ಯಾಂಕುಗಳು ಅದನ್ನುದಯವಿಟ್ಟು ಸ್ವೀಕರಿಸಬೇಕು
ಎಂದು ಟ್ವಿಟ್ಟರ್ ಮೂಲಕ ಮಲ್ಯ ಮನವಿ ಮಾಡಿದರು. ನಾನು ಎಂದೂ ಸಾಲ ಮರುಪಾವತಿಸುವುದಿಲ್ಲವೆಂ ದು ಹೇಳಿಲ್ಲ.
ಮಾಧ್ಯಮಗಳು ನನ್ನನ್ನುವಂಚಕ, ದೇಶದಿಂದ ಪಲಾಯಾನ ಮಾಡಿ, ತಲೆಮರೆಸಿಕೊಂಡಿದ್ದಾನೆಂದು ತಪ್ಪಾಗಿ ಬಿಂಬಿಸುತ್ತಿವೆ.
ಬ್ಯಾಂಕ್‌ಗಳು ಒಪ್ಪಿಕೊಂಡರೆ ಸಾಲ ತೀರಿಸುತ್ತೇನೆ. ಇದರಿಂದ ಬ್ಯಾಂಕ್‌ಗಳಿಗೆ ನಷ್ಟವಾಗು ವುದಿಲ್ಲ
ಎಂದು ಹೇಳಿದರು. ಕ್ರಿಶ್ಚಿಯನ್ ಮೈಕೆಲ್‌ರೀತಿಯಲ್ಲೇ ನಮ್ಮದೇಶದಿಂದ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ,
ನೀರವ್ ಮೋದಿ, ಮೆಹುಲ್‌ಚೋಕ್ಸಿಅವರನ್ನೂ ಶೀಘ್ರದಲ್ಲೇ ವಶಕ್ಕೆ ಪಡೆಯಲಾಗುವುದುಎಂದು ವಿತ್ತ ಸಚಿವಜೇಟ್ಲಿಹೇಳಿಕೆ
ನೀಡಿದ್ದರು. ಸಚಿವರ
ಹೇಳಿಕೆ ನೀಡಿದ ಬೆನ್ನಲ್ಲೇ ವಿಜಯ್ ಮಲ್ಯ ಸರಣಿ ಟ್ವೀಟ್‌ಗಳ ಮೂಲಕ ಬ್ಯಾಂಕ್‌ಗಳಿಗೆ ಆಫರ್ ನೀಡಿದ್ದು,
ದಯವಿಟ್ಟು ಸಾಲ ಪಡೆದುಕೊಳ್ಳುವಂತೆ ಅವ ಲತ್ತುಕೊಂಡರು. ಅಲ್ಲದೆ, ತನ್ನ ಮೇಲೆ ಇರುವಎಲ್ಲ ಆರೋಪಗಳಿಂದ
ಮುಕ್ತಗೊಳಿಸಬೇಕೆಂದು ಮನವಿ ಮಾಡಿದರು. ನನ್ನ ಬಗ್ಗೆ
ರಾಜಕಾರಣಿಗಳು ಮತ್ತು ಪತ್ರಕರ್ತರು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಬ್ಯಾಂಕ್‌ಗಳಿಗೆ ಕೋಟ್ಯಂತರರೂಪಾಯಿ
ಸಾಲ ಪಡೆದು ದೇಶದಿಂದ ಪಲಾಯನ ಮಾಡಿದ್ದೇನೆಂದು ಹೇಳುತ್ತಿ ದ್ದಾರೆ. ಭಾರತದ ಹಣವನ್ನು ಲೂಟಿ ಮಾಡಿದ್ದೇನೆಂದೂ
ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಬ್ಯಾಂಕ್‌ಗಳಿಗೆ ಅನೇಕ ಬಾರಿ ನಾನು ಆಫರ್ ನೀಡಿದ್ದೇನೆ. ಈ ಕುರಿತು
ಯಾರೂಧ್ವನಿ ಎತ್ತುತ್ತಿಲ್ಲ. ನನ್ನಎಲ್ಲಾ ಹೇಳಿಕೆಗಳನ್ನು ತಿರುಚಿತ್ತಿದ್ದಾರೆ. ನನ್ನೊಂದಿಗೆ ಯಾರೂ
ಸೂಕ್ತ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಎಂದುಟ್ವೀಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಶಕಗಳಿಂದ
ನಾನು ನಡೆಸಿದ ಮದ್ಯದ ಉದ್ಯಮದಿಂದ ಭಾರತಕ್ಕೆ ಸಾವಿರಾರು ಕೋಟಿರೂ. ಆದಾಯ ಸಂಗ್ರಹವಾಗಿದೆ. ಇದೇ ರೀತಿ
ಕಿಂಗ್ ಫಿ?ರ್ ಏರ್‌ಲೈನ್ಸ್‌ನಿಂ ದಲೂ ರಾಜ್ಯ ಸರ್ಕಾರಕ್ಕೆ ಉತ್ತಮ ಆದಾಯ ಬಂದಿತ್ತು. ಆದರೆ, ವಿಮಾನದಇಂಧನದ
ಬೆಲೆ ಹೆಚ್ಚಳದಿಂದ ಕಿಂಗ್‌ಫಿಶರ್‌ಏರ್‌ಲೈನ್ಸ್‌ಗೆ ನಷ್ಟವಾಯಿತು. ಇದನ್ನೆಲ್ಲ ಮರೆತನನ್ನನ್ನು ಕಳ್ಳನೆಂಬಂತೆ
ನೋಡುತ್ತಿದ್ದಾರೆಎಂದು ಮಲ್ಯಬೇಸರ ವ್ಯಕ್ತಪಡಿಸಿದರು.
2018: ನವದೆಹಲಿ: ಇಬ್ಬರು ಉನ್ನತ ಅಧಿಕಾರಿಗಳ
ನಡುವಣ ಬೆಕ್ಕುಗಳ ಮಾದರಿ ಜಗಳದಿಂದಾಗಿ ತನಿಖಾ ಸಂಸ್ಥೆಯ ವರ್ಚಸ್ಸಿಗೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಲು
ಸಿಬಿಐ ನಿರ್ದೇಶಕ ಅಲೋಕ್ ವರ್ಮ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸುವುದು ತನಗೆ ಅನಿವಾರ್ಯವಾಯಿತೇ
ಹೊರತು ಅವರ ವಿರುದ್ಧದ ಭ್ರಷ್ಟಾಚಾರದ ಕಾರಣಕ್ಕಾಗಿ ಅಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ
ವಿವರಿಸಿತು. ವರ್ಮ ಮತ್ತು ಸಿಬಿಐ ವಿಶೇಷ ನಿರ್ದೇಶಕ
ಅಸ್ತಾನ ಇಬ್ಬರನ್ನೂ ದೂಷಿಸಿದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ’ಸಂಸ್ಥೆಯ ಒಳಗೆ ಒಳಜಗಳ
ಮುಂದುವರೆಯದಂತೆ ನೋಡಿಕೊಳ್ಳುವ ಸಲುವಾಗಿ ಮಧ್ಯಪ್ರವೇಶ ಮಾಡಬೇಕಾಯಿತು ಎಂದು ಹೇಳಿದರು. ಕೇಂದ್ರ ಸರ್ಕಾರವು
ತನ್ನ ಅಧಿಕಾರ ವ್ಯಾಪ್ತಿಯ ಒಳಗೇ ಕ್ರಮ ಕೈಗೊಂಡಿದೆ, ಅದಕ್ಕೆ ಹೆಚ್ಚಿನ ಆಯ್ಕೆಗಳೂ ಇರಲಿಲ್ಲ ಎಂದು
ಅವರು ನ್ಯಾಯಮೂರ್ತಿಗಳಿಗೆ ವಿವರಿಸಿದರು. ಸಿಬಿಐ ನಿರ್ದೇಶಕರನ್ನು ಹೊರಕ್ಕೆ ಕಳುಹಿಸುವ ಬದಲು ನಿಶ್ಚಲಗೊಳಿಸಬಹುದಾಗಿತ್ತಲ್ಲ
ಎಂಬುದಾಗಿ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆಗೆ ’ಉಭಯ
ಅಧಿಕಾರಿಗಳ ಕಚ್ಚಾಟ ನಿರ್ಣಾಯಕ ಮಟ್ಟಕ್ಕೆ ಮುಟ್ಟಿ ಸಾರ್ವಜನಿಕ ಚರ್ಚೆಯ ವಿಷಯವಾಗಿ ಪರಿವರ್ತನೆಯಾಗತೊಡಗಿತ್ತು.
ಉಭಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಸರ್ಕಾರ ಅಚ್ಚರಿಯೊಂದಿಗೆ ಗಮನಿಸುತ್ತಿತ್ತು. ಅವರಿಬ್ಬರೂ
ಬೆಕ್ಕುಗಳಂತೆ ಕಚ್ಚಾಡುತ್ತಿದ್ದರು. ಭಾರತ ಸರ್ಕಾರ ಮಧ್ಯಪ್ರವೇಶ ಮಾಡದೇ ಇದ್ದಿದ್ದರೆ ಈ ಜಗಳ ಹೇಗೆ
ಕೊನೆಗೊಳ್ಳುತ್ತಿತ್ತೋ ದೇವರೇ ಬಲ್ಲ’ ಎಂದು ವೇಣುಗೋಪಾಲ್ ನುಡಿದರು. ‘ಕೇಂದ್ರಕ್ಕೆ ಲಭಿಸಿದ ಮಾಹಿತಿ, ದಾಖಲೆಗಳನ್ನು ಎಚ್ಚರಿಕೆಯಿಂದ
ಪರಿಶೀಲಿಸಿದ ಬಳಿಕ ಅಲೋಕ್ ವರ್ಮ ಅವರನ್ನು ಅಧಿಕಾರಗಳಿಂದ ಮುಕ್ತರನ್ನಾಗಿ ಮಾಡುವ ಕ್ರಮ ಕೈಗೊಳ್ಳಲೇಬೇಕಾದ
ಪರಿಸ್ಥಿತಿ ಉದ್ಭವಿಸಿದೆ ಎಂಬುದು ಮನವರಿಕೆಯಾದ ನಂತರ
ಕೇಂದ್ರವು ಕ್ರಮ ಕೈಗೊಂಡಿತು’ ಎಂದು ವೇಣುಗೋಪಾಲ್ ವಿವರಿಸಿದರು. ‘ನಮ್ಮ ಉದ್ದೇಶ ಸಂಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸ
ನಶಿಸದಂತೆ ಖಾತರಿ ಪಡಿಸುವುದಾಗಿತ್ತು. ಆದ್ದರಿಂದ ಉಭಯ ಅಧಿಕಾರಿಗಳನ್ನೂ ರಜೆಯಲ್ಲಿ ಕಳುಹಿಸಲಾಯಿತು’ ಎಂದು ಅವರು ನುಡಿದರು. ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ
ಪೀಠವು ಅಲೋಕ್ ವರ್ಮ ಅವರು ಸಲ್ಲಿಸಿದ ಅರ್ಜಿಯ ಮೇಲೆ ಕಳೆದ ಒಂದು ತಿಂಗಳಿನಿಂದ ವಿಚಾರಣೆ ನಡೆಸುತ್ತಿದೆ.
ತಮ್ಮನ್ನು ಎರಡು ವರ್ಷಗಳ ನಿಗದಿತ ಅವಧಿಗೆ ನೇಮಕ ಮಾಡಲಾಗಿದೆ ಎಂಬ ನೆಲೆಯಲ್ಲಿ ತಮ್ಮ ಅಧಿಕಾರ ಚ್ಯುತಿಯನ್ನು
ಸಿಬಿಐ ನಿರ್ದೇಶಕರು ಪ್ರಶ್ನಿಸಿದ್ದರು. ಅಲೋಕ್ ವರ್ಮ ಪರ ವಕೀಲ ಫಾಲಿ ನಾರಿಮನ್ ಅವರು ವರ್ಮ ಅವರನ್ನು
ಅಧಿಕಾರ ಮುಕ್ತನನ್ನಾಗಿ ಮಾಡಿದ ಸರ್ಕಾರದ ಆದೇಶಕ್ಕೆ ಯಾವುದೇ ಆಧಾರ ಇಲ್ಲ. ಸಿಬಿಐ ನಿರ್ದೇಶಕನನ್ನು
ವಿರೋಧ ಪಕ್ಷದ ನಾಯಕ ಮತ್ತು ಮುಖ್ಯ ನ್ಯಾಯಮೂರ್ತಿಯನ್ನು ಒಳಗೊಂಡ ಸಮಿತಿಯ ಅನುಮೋದನೆ ಮೇರೆಗೆ ಮಾತ್ರವೇ
ಕಿತ್ತು ಹಾಕಬಹುದು ಎಂದು ವಾದಿಸಿದ್ದರು. ಆದರೆ ಅಟಾರ್ನಿ ಜನರಲ್ ಅವರು ಬುಧವಾರ ಉಭಯ ಅಧಿಕಾರಿಗಳನ್ನು
ವರ್ಗಾವಣೆ ಮಾಡಲಾಗಿದೆ ಎಂಬುದಾಗಿ ಅರ್ಥೈಸಲಾಗದು ಎಂದು ವಾದಿಸಿದರು. ‘ಸಿಬಿಐ ನಿರ್ದೇಶಕ ಯಾರು ಎಂದು ನೀವು ಯಾರನ್ನು ಬೇಕಾದರೂ
ಕೇಳಿ - ಅವರು ಅಲೋಕ್ ವರ್ಮ ಎಂಬುದಾಗಿ ಹೇಳುತ್ತಾರೆ. ಸಿಬಿಐ ವಿಶೇಷ ನಿರ್ದೇಶಕ ಯಾರು ಎಂದು ಪ್ರಶ್ನಿಸಿ-
ಅವರು ರಾಕೇಶ್ ಅಸ್ತಾನ ಎಂಬುದಾಗಿ ಉತ್ತರ ನೀಡುತ್ತಾರೆ’ ಎಂದು ವೇಣುಗೋಪಾಲ್ ನುಡಿದರು.
ಕೇಂದ್ರವು ಸಿಬಿಐ ನಿರ್ದೇಶಕನನ್ನು ನೇಮಕ ಮಾಡುವ ಪ್ರಾಧಿಕಾರಿಯಾಗಿದ್ದು ಸಂಸ್ಥೆಯ ಮೇಲ್ವಿಚಾರಣೆ ಮಾಡುವ
ಅಧಿಕಾರವನ್ನೂ ಹೊಂದಿದೆ’ ಎಂದು ಅಟಾರ್ನಿ ಜನರಲ್
ನುಡಿದರು. ಪ್ರಕರಣದಲ್ಲಿ ಉನ್ನತ ಸಿಬಿಐ ಅಧಿಕಾರಿಗಳಿಬ್ಬರು
ಪರಸ್ಪರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿಕೊಂಡಿದ್ದಾರೆ. ಸಿಬಿಐ ನಿರ್ದೇಶಕ ಅಲೋಕ್ ವರ್ಮ ಅವರು ಸಿಬಿಐ
ವಿಚಾರಣೆಗೆ ಗುರಿಪಡಿಸಿರುವ ಹೈದರಾಬಾದ್ ಮೂಲದ ಉದ್ಯಮಿ ಒಬ್ಬರಿಂದ ಲಂಚ ಪಡೆದಿದ್ದಾರೆ ಎಂದು ಅವರ ಉಪ
ಅಧಿಕಾರಿ ವಿಶೇಷ ಸಿಬಿಐ ನಿರ್ದೇಶಕ ರಾಕೇಶ್ ಅಸ್ತಾನ ಆಪಾದಿಸಿದ್ದರು. ರಾಕೇಶ್ ಅಸ್ತಾನ ಲಂಚ ಪಡೆದಿದ್ದಾರೆ
ಎಂದು ಅಲೋಕ್ ವರ್ಮ ಆಪಾದಿಸಿದ್ದರು. ಸಿಬಿಐಯ ಉನ್ನತ ಅಧಿಕಾರಿಗಳಿಬ್ಬರು ಪರಸ್ಪರ ಭ್ರಷ್ಟಾಚಾರ ಆರೋಪ
ಮಾಡಿಕೊಂಡ ಬಳಿಕ ಉಭಯ ಅಧಿಕಾರಿಗಳನ್ನೂ ಅವರ ಅಧಿಕಾರಗಳಿಂದ ಮುಕ್ತಗೊಳಿಸಿ ಅಕ್ಟೋಬರ್ ೨೩ರ ರಾತ್ರಿ
ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿತ್ತು ಮತ್ತು ಅಸ್ತಾನ ವಿರುದ್ಧ ತನಿಖೆ ನಡೆಸುತ್ತಿದ್ದ ಹಲವಾರು ಅಧಿಕಾರಿಗಳನ್ನು
ವರ್ಗಾವಣೆ ಮಾಡಲಾಗಿತ್ತು. ಉಭಯ ಅಧಿಕಾರಿಗಳನ್ನೂ ಅಧಿಕಾರಗಳಿಂದ ಮುಕ್ತಗೊಳಿಸಲಾಗಿದೆ ಮತ್ತು ಅವರ ಎಲ್ಲ
ಭತ್ಯೆಗಳನ್ನೂ ಮುಂದುವರೆಸಲಾಗಿದೆ ಎಂದು ಕೇಂದ್ರ ಪರ ವಕೀಲರು ಹೇಳಿದರು. ಅಲೋಕ್ ವರ್ಮ ಅವರು ರಾಕೇಶ್ ಅಸ್ತಾನ ವಿರುದ್ಧ ಭ್ರಷ್ಟಾಚಾರ
ಪ್ರಕರಣ ದಾಖಲಿಸಿದ ಬಳಿಕ ಉಭಯ ಅಧಿಕಾರಿಗಳನ್ನೂ ಅವರ ಅಧಿಕಾರಗಳಿಂದ ಮುಕ್ತಗೊಳಿಸುವ ಆದೇಶ ಹೊರಡಿಸಲಾಗಿತ್ತು. ತಮ್ಮನ್ನು
ಅಧಿಕಾರದಿಂದ ಮುಕ್ತಗೊಳಿಸಿದ ಕೇಂದ್ರದ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ವರ್ಮ ಸುಪ್ರೀಂಕೋರ್ಟ್
ಮೆಟ್ಟಿಲೇರಿದ್ದರು. ಆದರೆ ಪ್ರಕರಣ ಕುರಿತ ತನ್ನ ಕಾರ್ಯ
ವಿಧಾನ ಮತ್ತು ಅದು ಸಾಗಬೇಕಾದ ದಿಕ್ಕಿನ ಕುರಿತೇ ಖಚಿತತೆಯ ಕೊರತೆ ಕಾರಣ ನ್ಯಾಯಾಲಯದ ಕಲಾಪಗಳು ಕುತೂಹಲಕಾರಿ
ತಿರುವು ಪಡೆದುಕೊಂಡಿದೆ. ಇದರ ಜೊತೆಗೇ ಫೆಬ್ರುವರಿ ಮೊದಲ ವಾರದಲ್ಲಿ ನಿವೃತ್ತರಾಗಬೇಕಾಗಿರುವ ಅಲೋಕ್
ವರ್ಮ ಅವರ ಸಮಯ ವೇಗವಾಗಿ ಕೊನೆಗೊಳ್ಳುತ್ತಿದೆ. ಕಾನೂನಿನ ಅಂಶಗಳು ಮತ್ತು ವರ್ಮ ವಿರುದ್ಧದ ಭ್ರಷ್ಟಾಚಾರದ
ಆಪಾದನೆ ವಿಷಯಕ್ಕೆ ಸಂಬಂಧಿಸಿದ ವಾದ-ವಿವಾದಗಳಲ್ಲಿ ಯಾವ ಪ್ರಗತಿಯನ್ನೂ ಕಾಣದೆ ನ್ಯಾಯಾಲಯ ಡೋಲಾಯಮಾನವಾಗಿದೆ.
ವರ್ಮ ವಿರುದ್ಧದ ಭ್ರಷ್ಟಾಚಾರ ಕುರಿತ ಸಿವಿಸಿ ವರದಿಯನ್ನು ಪರಿಶೀಲಿಸಬಯಸಿದ್ದ ಪೀಠವು, ಕಳೆದ ವಿಚಾರಣೆಯ
ದಿನಾಂಕದ ವೇಳೆಗೆ ವರ್ಮ ಅವರು ಸಿವಿಸಿ ವರದಿ ಬಗ್ಗೆ ನೀಡಿದ್ದ ಪ್ರತಿಕ್ರಿಯೆ ಅಂತರ್ಜಾಲದಲ್ಲಿ ಬಹಿರಂಗಗೊಂಡ
ಬಳಿಕ ಕೇಂದ್ರ ಸರ್ಕಾರದ ನಿರ್ಧಾರದ ಸಿಂಧುತ್ವ ಕುರಿತ
ವಿಚಾರಣೆಯ ತನ್ನ ಹಳಿಯನ್ನೇ ದಿಢೀರನೆ ಬದಲಾಯಿಸಿತು.
2018: ಬೆಂಗಳೂರು: ಬೆಂಗಳೂರಿನ ಭಾರತೀಯ
ವಿಜ್ಞಾನ ಸಂಸ್ಥೆಯಲ್ಲಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸಸ್ -ಐಐಎಸ್‌ಸಿ) ಮಧ್ಯಾಹ್ನ ಸಂಭವಿಸಿದ
ಹೈಡ್ರೋಜನ್ ಸಿಲಿಂಡರ್ ಸ್ಫೋಟದಲ್ಲಿ ಸಂಶೋಧಕರೊಬ್ಬರು ಸಾವನ್ನಪ್ಪಿದ್ದು, ಇತರ ಮೂವರು ಗಂಭೀರವಾಗಿ
ಗಾಯಗೊಂಡರು. ಪ್ರಯೋಗಾಲಯದಲ್ಲಿ ಪ್ರಯೋಗವೊಂದರಲ್ಲಿ
ನಿರತರಾಗಿದ್ದಾಗ ಈ ದುರಂತ ಸಂಭವಿಸಿತು. ‘ಮಧ್ಯಾಹ್ನ ೨.೩೦ರ ಸುಮಾರಿಗೆ ಸಂಶೋಧಕರು ಪ್ರಯೋಗಾಲಯದಲ್ಲಿ
ಹೈಪರ್ ಸಾನಿಕ್ ಮತ್ತು ಶಾಕ್ ವೇವ್ ಸಂಶೋಧನೆಗೆ ಸಂಬಂಧಿಸಿದ ಪ್ರಯೋಗವೊಂದರಲ್ಲಿ ನಿರತರಾಗಿದ್ದಾಗ ಈ
ಸ್ಫೋಟ ಸಂಭವಿಸಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಸಂಶೋಧಕರು ಐಐಎಸ್‌ಸಿಗೆ ಸೇರಿದ ಸೂಪರ್ ವೇವ್ ಟೆಕ್ನಾಲಜಿ
ಎಂಬ ಸ್ಟಾರ್ಟಪ್‌ಗೆ ಸೇರಿದವರಾಗಿದ್ದರು ಎನ್ನಲಾಯಿತು. ಹೆಸರು ತಿಳಿಸಲು ಇಚ್ಛಿಸದ ಹಿರಿಯ ಪೊಲೀಸ್
ಅಧಿಕಾರಿಯೊಬ್ಬರು ಮೃತ ಸಂಶೋಧಕರನ್ನು ಚಾಮರಾಜ ನಗರ ಜಿಲ್ಲೆಯ ಕೊಳ್ಳೇಗಾಲದ ಮನೋಜ್ ಕುಮಾರ್ (೩೨) ಎಂಬುದಾಗಿ
ಗುರುತಿಸಲಾಗಿದೆ ಎಂದು ಹೇಳಿದರು. ಘಟನೆಯಲ್ಲಿ ಗಾಯಗೊಂಡಿರುವ
ಇತರ ಮೂವರನ್ನು ಕಾರ್ತಿಕ್ ಶೆಣೈ, ನರೇಶ್ ಕುಮಾರ್ ಮತ್ತು ಅತುಲ್ಯ ಉದಯ್ ಕುಮಾರ್ ಎಂಬುದಾಗಿ ಗುರುತಿಸಲಾಗಿದೆ.
ಅವರಿಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡಿರುವ ಮೂವರ ಸ್ಥಿತಿಯೂ
ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿದವು.
ಸೂಪರ್ ವೇವ್ ಟೆಕ್ನಾಲಜೀಸ್ ಕಂಪೆನಿಯು ತನ್ನ ಸಂಶೋಧನೆಗೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲು ಐಐಎಸ್‌ಸಿ
ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು ಎಂದು ಎಸಿಪಿ ನಿರಂಜನ ರಾಜ್ ಅರಸ್ ಹೇಳಿದರು.
2017:
ನವದೆಹಲಿ: ಅಯೋಧ್ಯೆಯ ರಾಮಜನ್ಮ ಭೂಮಿ-ಬಾಬರಿ ಮಸೀದಿ ವಿವಾದ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳ ವಿಚಾ ರಣೆಯನ್ನು ಸುಪ್ರೀಂಕೋರ್ಟ್ 2018ರ ಫೆಬ್ರುವರಿ 8ಕ್ಕೆ ಮುಂದೂಡಿತು. ವಕೀಲರೆಲ್ಲರೂ ಒಂದೆಡೆ ಕುಳಿತು, ವಿವಾದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಭಾಷಾಂತರ ಮಾಡುವ, ಫೈಲ್ ಮಾಡುವ ಕೆಲಸಗಳನ್ನು ಪೂರ್ಣಗೊಳಿಸಿ, ಅವುಗಳನ್ನು ನ್ಯಾಯಾಲಯದ ರಿಜಿಸ್ಟ್ರಿಗೆ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಆದೇಶಿಸಿತು. 2019ರ ನಂತರ ನಡೆಯಲಿ: ಮಂಗಳವಾರದ ವಿಚಾರಣೆ
ವೇಳೆ ಸುನ್ನಿ ವಕ್ಫ್ ಬೋರ್ಡ್ ಪರವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, "ವಿಚಾರಣೆಗೆ ಈಗಿನ ಪರಿಸ್ಥಿತಿ ಪೂರಕವಾಗಿಲ್ಲ. ಹಾಗಾಗಿ, ವಿಚಾರಣೆಯನ್ನು 2019ರ ಜುಲೈ 15ರ
ನಂತರ ಅಂದರೆ ಮುಂದಿನ ಲೋಕಸಭೆ ಚುನಾವಣೆ ಮುಗಿದ ಬಳಿಕವೇ ಕೈಗೆತ್ತಿಕೊಳ್ಳಬೇಕು,' ಎಂದು ಮನವಿ ಮಾಡಿದರು. ಅಲ್ಲದೆ, 19 ಸಾವಿರ ಪುಟಗಳುಳ್ಳ ಕಡತಗಳನ್ನು ಕಡಿಮೆ ಸಮಯದಲ್ಲಿ ಭಾಷಾಂತರ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಮಿಶ್ರಾ, "ಆಗಸ್ಟ್ನಲ್ಲಿ ನಮ್ಮ ಮುಂದೆ ಬಂದಾಗ ಜನವರಿಯಿಂದ ವಿಚಾರಣೆ ಆರಂಭಿಸಿ ಎಂದಿದ್ದ ನೀವು, ಈಗ 2019ರ ನಂತರ ಆರಂಭಿಸಿ
ಎಂದು ಹೇಳುತ್ತಿರುವುದೇಕೆ' ಎಂದು ಪ್ರಶ್ನಿಸಿದರು. ಇದೇ ವೇಳೆ, ಉತ್ತರಪ್ರದೇಶ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಸಿಬಲ್ ವಾದವನ್ನು ಸಂಪೂರ್ಣವಾಗಿ ವಿರೋಧಿಸಿದ್ದು, "ಎಲ್ಲ ಪ್ರಕ್ರಿಯೆಗಳೂ ಮುಗಿದಿರುವ ಕಾರಣ, ವಿಚಾರಣೆಗೆ ಇದು ಸುಸಮಯ' ಎಂದು ಹೇಳಿದರು. ರಾಮಮಂದಿರಕ್ಕೆ ಶಿಯಾ ಒಲವು: ಈ ನಡುವೆ,
ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಮ್ಮದೇನೂ ಆಕ್ಷೇಪವಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ಶಿಯಾ ವಕ್ಫ್
ಮಂಡಳಿ ತಿಳಿಸಿತು. ಜತೆಗೆ, ಪ್ರಕರಣವನ್ನು ಶಾಂತಿಯುತವಾಗಿ ಬಗೆಹರಿಸುವ ಕುರಿತು ಒಲವು ವ್ಯಕ್ತಪಡಿಸಿತು. ಅಲ್ಲದೆ, ಲಕ್ನೋದಲ್ಲಿ ಮಸೀದಿ ನಿರ್ಮಿಸುವಂತೆಯೂ ಕೇಳಿಕೊಂಡಿತು. ತದನಂತರ
ಮಾತನಾಡಿದ ಶಿಯಾ ಮಂಡಳಿಯ ಅಧ್ಯಕ್ಷ ಸಯ್ಯದ್ ವಾಸಿಂ ರಿಜ್ವಿ, "ನಾವು ಪ್ರಸ್ತಾಪಿಸಿದ ಸಂಧಾನಸೂತ್ರವನ್ನು ಸುಪ್ರೀಂ ಕೋರ್ಟ್ ಸ್ವೀಕರಿಸಿರುವುದು ಸಂತೋಷದ ವಿಚಾರ' ಎಂದು ಹೇಳಿದರು. ಶಾಂತಿ ಕಾಪಾಡುವಂತೆ ರಾಜ್ಯಗಳಿಗೆ ಸೂಚನೆ: ಬಾಬರಿ ಮಸೀದಿ ಧ್ವಂಸ ವರ್ಷಾಚರಣೆಗೆ 25 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ
ಡಿಸೆಂಬರ್ 6ರಂದು ಯಾವುದೇ
ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಎಲ್ಲ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿತು. ದೇಶದ ಯಾವ ಮೂಲೆ ಯಿಂದಲೂ ಕೋಮುಗಲಭೆ, ಹಿಂಸಾ ಚಾರದಂಥ ಘಟನೆಗಳು ನಡೆಯದಂತೆ ನೋಡಿಕೊಳ್ಳಿ ಎಂದು ತಿಳಿಸಲಾಯಿತು.
2017:
ಚೆನ್ನೈ: ಆರ್.ಕೆ. ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಟ ವಿಶಾಲ್ ಕೃಷ್ಣ ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಆಯೋಗ ಕೊನೆಗೂ ತಿರಸ್ಕರಿಸಿತು. ವಿಶಾಲ್ ನಾಮಪತ್ರಕ್ಕೆ ಹತ್ತು ಮಂದಿ ಅನುಮೋದಕರ ಸಹಿ ಬೇಕಿತ್ತು. ಆದರೆ, ನಾಮಪತ್ರದಲ್ಲಿರುವ ಸಹಿ ತಮ್ಮದಲ್ಲ ಎಂದು ಸುಮತಿ ಮತ್ತು ದೀಪನ್ ಎಂಬುವವರು ತಿಳಿಸಿದ್ದರು. ತಾಂತ್ರಿಕ ಕಾರಣ ಎಂದಷ್ಟೇ ಹೇಳಿ ನಟ ವಿಶಾಲ್ ಹಾಗೂ ಜಯಲಲಿತಾ ಅವರ ಸೋದರ ಸಂಬಂಧಿ ದೀಪಾ ಜಯಕುಮಾರ್ ಅವರ ನಾಮಪತ್ರಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು. ಚುನಾವಣಾ ಆಯೋಗ ನಾಮಪತ್ರ ತಿರಸ್ಕರಿಸಿದನ್ನು ವಿರೋಧಿಸಿ ನಟ ವಿಶಾಲ್ ಹಾಗೂ ಅವರ ಬೆಂಬಲಿಗರು ಚುನಾವಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಸುಮಾರು ಎರಡು ಗಂಟೆಗಳ ಕಾಲ ಚುನಾವಣಾ ಆಯೋಗದ ಪ್ರಾದೇಶಿಕ ಅಧಿಕಾರಿಗಳೊಂದಿಗೆ
ಮಾತುಕತೆ ನಡೆಸಿದ ಬಳಿಕ ನಾಮಪತ್ರ ಅಂಗೀಕಾರಗೊಂಡಿದೆ ಎಂದು ಆಯೋಗ ತಿಳಿಸಿತ್ತು. ಆದರೆ, ಅಂತಿಮವಾಗಿ ನಾಮಪತ್ರ ತಿರಸ್ಕರಿಸಲಾಗಿದೆ
ಎಂದು ಚುನಾವಣಾಧಿಕಾರಿ ಕೆ. ವೇಲುಸಾಮಿ ರಾತ್ರಿ ತಿಳಿಸಿದರು. ‘ಸುಮತಿ ಮತ್ತು ದೀಪನ್ ಎಂಬುವರು ಸಹಿ ತಮ್ಮದಲ್ಲ ಎಂದು ಖುದ್ದಾಗಿ ಹೇಳಿಕೆ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಎಲ್ಲಾ ನಿಯಮಗಳನ್ನು ಪೂರ್ಣಗೊಳಿಸದ ಕಾರಣ ವಿಶಾಲ್ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ’ ಎಂದು ವೇಲುಸಾಮಿ ತಿಳಿಸಿದರು. ‘ಮೊದಲು ನನ್ನ ನಾಮಪತ್ರ ಅಂಗೀಕರಿಸಿ ನಾನು ಚುನಾವಣಾಧಿಕಾರಿ ಕಚೇರಿಯಿಂದ ಹೊರಟ ಬಳಿಕ ಅದನ್ನು ತಿರಸ್ಕರಿಸಲಾಗಿದೆ. ಪ್ರಜಾಪ್ರಭುತ್ವದ
ಮೌಲ್ಯಗಳು ಕುಸಿಯುತ್ತಿವೆ.
2016ರ ಡಿಸೆಂಬರ್ 5: ಅಮ್ಮನ ಸಾವು, 2017ರ ಡಿಸೆಂಬರ್ 5: ಪ್ರಜಾಪ್ರಭುತ್ವದ ಸಾವು’ ಎಂದು ವಿಶಾಲ್ ಟ್ವೀಟ್ ಮಾಡಿದರು.2017: ಇಸ್ಲಾಮಾಬಾದ್: ಪಾಕಿಸ್ತಾನದ ಮೂರು ಪ್ರಮುಖ ರಸ್ತೆ ಯೋಜನೆಗಳಿಗೆ ನೀಡುತ್ತಿರುವ ಆರ್ಥಿಕ ನೆರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಚೀನಾ ನಿರ್ಧರಿಸಿತು. ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿದ್ದರಿಂದ ಚೀನಾ ಈ ನಿಲುವು ತೆಗೆದುಕೊಂಡಿದ್ದು, ಪಾಕಿಸ್ತಾನಕ್ಕೆ ಆಘಾತವಾಗಿದೆ. ಚೀನಾದ ಈ ನಿರ್ಧಾರ ಅಂದಾಜು ರೂಪಾಯಿ 1 ಲಕ್ಷ ಕೋಟಿ ಮೌಲ್ಯದ ರಸ್ತೆ ಯೋಜನೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ’ಡಾನ್’ ಪತ್ರಿಕೆ ವರದಿ ಮಾಡಿತು. ಚೀನಾ–ಪಾಕಿಸ್ತಾನ ಆರ್ಥಿಕ ವಲಯದ (ಸಿಪಿಇಸಿ) ಭಾಗವಾಗಿ ಈ ರಸ್ತೆಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿತ್ತು. ಪಾಕಿಸ್ತಾನದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎ) ಈ ಯೋಜನೆಗಳನ್ನು ಕೈಗೊಂಡಿತ್ತು. ಹೊಸದಾಗಿ ನಿಯಮಾವಳಿಗಳನ್ನು ರೂಪಿಸಿದ ಬಳಿಕವಷ್ಟೇ ಈ ನಿರ್ಮಾಣ ಕಾರ್ಯಗಳಿಗೆ ಚೀನಾ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ರೂ.3.86 ಲಕ್ಷ ಕೋಟಿ ವೆಚ್ಚದ ಸಿಪಿಇಸಿ ಯೋಜನೆ ಚೀನಾದ ಮಹತ್ವಾಕಾಂಕ್ಷಿ ಯೋಜನೆಯಾದ ‘ಒಂದು ಪ್ರದೇಶ, ಒಂದು ರಸ್ತೆ’ಯ ಭಾಗವಾಗಿದೆ. ಸಿಪಿಇಸಿ ಅಡಿಯಲ್ಲಿ ನಿರ್ಮಾಣವಾಗುವ ರಸ್ತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮೂಲಕ ಹಾದುಹೋಗಲಿದ್ದು, ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ ಹಾಗೂ ಪಾಕಿಸ್ತಾನ ಬಲೂಚಿಸ್ತಾನ ಪ್ರಾಂತಕ್ಕೆ ಸಂಪರ್ಕ ಕಲ್ಪಿಸಲಿದೆ. ಆರಂಭದಲ್ಲಿ ಈ ಮೂರು ರಸ್ತೆಗಳ ನಿರ್ಮಾಣವನ್ನು ಪಾಕಿಸ್ತಾನ ಸರ್ಕಾರವೇ ವಹಿಸಿಕೊಂಡಿತ್ತು. ಆದರೆ, ಚೀನಾದ ಆರ್ಥಿಕ ನೆರವು ಪಡೆಯುವ ಸಲುವಾಗಿ 2016ರ ಡಿಸೆಂಬರ್‌ನಲ್ಲಿ ಈ ರಸ್ತೆ ನಿರ್ಮಾಣ ಕಾರ್ಯವನ್ನು ಸಿಪಿಇಸಿ ವ್ಯಾಪ್ತಿಗೆ ಸೇರಿಸಲಾಯಿತು.
2016: ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಹೃದಯ ಸ್ಥಂಬನದ ಬಳಿಕ ಈದಿನ ರಾತ್ರಿ ನಿಧನರಾದರು. ರಾತ್ರಿ 11.30ಕ್ಕೆ ಜಯಲಲಿತಾ ಅವರು ಕೊನೆಯುಸಿರು ಎಳೆದರು ಎಂದು ಅವರನ್ನು ನೋಡಿಕೊಳ್ಳುತ್ತಿದ್ದ ಅಪೋಲೋ ಆಸ್ಪತ್ರೆ ರಾತ್ರಿ ಪ್ರಕಟಣೆಯಲ್ಲಿ ತಿಳಿಸಿತು. ಇದಕ್ಕೆ ಮುನ್ನ ಸಂಜೆ ಜಯಲಲಿತಾ ಅವರು ನಿಧನರಾಗಿದ್ದಾರೆ ಎಂದು ತಮಿಳು ಸುದ್ದಿವಾಹಿನಿಗಳು ಸಂಜೆ ಮಾಡಿದ ಸುದ್ದಿಯನ್ನು ಅಪೋಲೊ ಆಸ್ಪತ್ರೆ ತಳ್ಳಿ ಹಾಕಿತ್ತು.ಚಿಕಿತ್ಸೆ ಮುಂದುವರಿದಿದ್ದು ಜಯಾ ಬದುಕುಳಿಯುವ ಆಶಾವಾದವಿದೆ ಎಂದು ವೈದ್ಯರ ತಂಡ ಹೇಳಿತ್ತು. ಸೆಪ್ಟೆಂಬರ್ 22 ರಂದು ಜ್ವರ ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದ ಜಯಾ ಚೆನ್ನೈ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ 74 ದಿನಗಳಿಂದ ಆಸ್ಪತ್ರೆಯಲ್ಲೇ ಅವರು ಚಿಕಿತ್ಸೆ ಪಡೆಯುತ್ತಿದ್ದರು. ನವೆಂಬರ್ 19ರಂದು ಐಸಿಯುನಿಂದ ವಾರ್ಡ್ಗೆ ಶಿಫ್ಟ್ ಆಗಿದ್ದ ಜಯಾ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಲಿದ್ದಾರೆ ಎಂದು ನಿರೀಕ್ಷಿಸುತ್ತಿದ್ದಂತೆ ಹಿಂದಿನ ಸಂಜೆ ಸಂಜೆ ತೀವ್ರ ಹೃದಯಸ್ತಂಭನವಾಗಿತ್ತು. ಇತ್ತೀಚಿನ ದಿನಗಳಲ್ಲಿ 68 ವರ್ಷದ ಜಯಲಲಿತಾ ಅವರ ಆರೋಗ್ಯ ಏರು ಪೇರಾಗುತ್ತಲೇ ಇತ್ತು. ಹೃದಯ ಸ್ತಂಭನಕ್ಕೊಳಗಾಗಿದ್ದ ಜಯಾ ಅವರಿಗೆ ಲಂಡನ್‍ನ ತಜ್ಞ ಡಾ. ರಿಚರ್ಡ್ ಬೀಲೆ ಅವರ ಸಲಹೆಯಂತೆ ವೈದ್ಯರ ತಂಡ ಚಿಕಿತ್ಸೆ ನೀಡಿತ್ತು. ಕಳೆದ ರಾತ್ರಿಯಿಂದ ಇವತ್ತು ಮಧ್ಯಾಹ್ನದ ವರೆಗೆ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಸಂಜೆಯ ಹೊತ್ತಿಗೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೋಮಾಗೆ ಜಾರಿದ್ದರು. ಆಸ್ಪತ್ರೆ ಎದುರು ನೆರೆದ ಅಭಿಮಾನಿಗಳ ದಂಡು: ಹಲವು ದಿನಗಳ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಹೃದಯ ಸ್ತಂಭನ ಸುದ್ದಿ ಹರಡಿದ ಬೆನ್ನಲ್ಲೇ ಅಪೋಲೊ ಆಸ್ಪತ್ರೆಯ ಹೊರಭಾಗದಲ್ಲಿ ಹಿಂದಿನ ರಾತ್ರಿಯಿಂದಲೇ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಗುಂಪು ಗುಂಪಾಗಿ ಆಸ್ಪತ್ರೆ ಮುಂಭಾಗಕ್ಕೆ ಧಾವಿಸಿದ ಜನಸಾಗರದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆಸ್ಪತ್ರೆಯ ಸುತ್ತಮುತ್ತ ನಿಷೇಧಾಜ್ಞೆ ಹೊರಡಿಸಲಾಗಿತ್ತು. ಜಯಾ ಅವರ ಆರೋಗ್ಯ ಸ್ಥಿತಿ ಬಗ್ಗೆ ಅರಿಯಲು ಕುತೂಹಲದಿಂದ ಕಾದು ಕುಳಿತಿದ್ದ ಅಭಿಮಾನಿಗಳು ಕಣ್ಣೀರಿಟ್ಟು ಪ್ರಾರ್ಥಿಸುತ್ತಿದ್ದ ದೃಶ್ಯ ಎಲ್ಲೆಡೆ ಕಾಣಿಸಿತು. ಈ ಮಧ್ಯೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ನಿಧನರಾಗಿರುವ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಅಪೋಲೊ ಆಸ್ಪತ್ರೆ ಹೇಳಿತು. ಜಯಾ ಅವರ ಪ್ರಾಣ ಉಳಿಸುವ ಚಿಕಿತ್ಸೆ ಮುಂದುವರಿಸುತ್ತಿದ್ದೇವೆ ಎಂದು ಅಪೋಲೊ ಆಸ್ಪತ್ರೆ ಟ್ವೀಟ್ ಮಾಡಿತು. ಕೆಲವು ಮಾಧ್ಯಮಗಳು ಜಯಲಲಿತಾ ನಿಧನರಾಗಿದ್ದಾರೆ ಎಂದು ಸುದ್ದಿ ಮಾಡಿದ್ದವು. ಇದು ಆಧಾರ ರಹಿತ ಮತ್ತು ಸತ್ಯಕ್ಕೆ ದೂರವಾದುದು. ನಾವು ಜಯಾ ಅವರಿಗೆ ಚಿಕಿತ್ಸೆ ಮುಂದುವರಿಸಿದ್ದೇವೆ ಎಂದು ಅಪೋಲೊ ಆಸ್ಪತ್ರೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ. ಸುದ್ದಿವಾಹಿನಿಗಳಲ್ಲಿ ಜಯಲಲಿತಾ ನಿಧನರಾಗಿದ್ದಾರೆ ಎಂಬ ಸುದ್ದಿ ಪ್ರಕಟವಾಗುತ್ತಿದ್ದಂತೆ ಎಐಎಡಿಎಂಕೆ ಕಚೇರಿಯಲ್ಲಿ ಧ್ವಜವನ್ನು ಅರ್ಧಕ್ಕಿಳಿಸಲಾಗಿತ್ತು. ಸ್ವಲ್ಪ ಹೊತ್ತಿನಲ್ಲಿ ಸುದ್ದಿ ವಾಹಿನಿಗಳು ಜಯಾ ಬದುಕಿದ್ದಾರೆ ಎಂಬ ಸುದ್ದಿ ಪ್ರಕಟಿಸಿದಾಗ ಅರ್ಧಕ್ಕಿಳಿಸಿದ್ದ ಧ್ವಜವನ್ನು ಮೇಲಕ್ಕೇರಿಸಲಾಯಿತು.
2016: ಚೆನ್ನೈ: ತಮಿಳುನಾಡು ಸಿಎಂ ಜಯಲಲಿತಾ ಉತ್ತರಾಧಿಕಾರಿಯಾಗಿ ಎಐಎಡಿಎಂಕೆಯ
ಹಿರಿಯ ನಾಯಕ ಒ. ಪನ್ನೀರ ಸೆಲ್ವಂ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಪಕ್ಷದ ಶಾಸಕರು ಅವರನ್ನು ನೂತನ ಶಾಸಕಾಂಗ ಪಕ್ಷದ ನಾಯಕರಾಗಿ
ಆಯ್ಕೆ ಮಾಡಿದರು. ಈ ನಿಟ್ಟಿನಲ್ಲಿ
ಎಐಎಡಿಎಂಕೆ ಅಪೋಲೊ ಆಸ್ಪತ್ರೆಯಲ್ಲೇ ಕಸರತ್ತು ನಡೆಸಿತು. ಪಕ್ಷದ ಎಲ್ಲ ಶಾಸಕರನ್ನು ತುರ್ತಾಗಿ ಆಸ್ಪತ್ರೆಗೆ ಆಗಮಿಸಿ ಘೋಷಣೆ ಪತ್ರಕ್ಕೆ ಸಹಿ ಹಾಕುವಂತೆ ತಿಳಿಸಲಾಯಿತು. ಒಬ್ಬೊಬ್ಬರಾಗಿ ಆಸ್ಪತ್ರೆಗೆ ಆಗಮಿಸಿದ ಎಐಎಡಿಎಂಕೆ ಶಾಸಕರು ಜಯಲಲಿತಾರ ಉತ್ತರಾಧಿಕಾರಿ ಸ್ಥಾನಕ್ಕೆ ಪನ್ನೀರ ಸೆಲ್ವಂರ ಆಯ್ಕೆ ಪತ್ರಕ್ಕೆ ಸಹಿ ಹಾಕಿದರು.. ಈ ಹಿಂದೆ ಪನ್ನೀರ ಸೆಲ್ವಂ 2 ಬಾರಿ ಅಲ್ಪಾವಧಿಗೆ ಸಿಎಂ ಪಟ್ಟ ಧರಿಸಿದ್ದರು. ಜಯಲಲಿತಾರ ಪರಮಾಪ್ತರು ಎಂದೇ ಪರಿಚಿತರು.
2016: ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ವಿಶ್ವದ ಘಟಾನುಘಟಿ ನಾಯಕರನ್ನು ಹಿಂದಿಕ್ಕಿ ಟೈಮ್ಸ್ ವರ್ಷದ ವ್ಯಕ್ತಿ 2016ರ ಆನ್ಲೈನ್ ಓದುಗರ ಮತ ಸಂಗ್ರಹಣೆಯಲ್ಲಿ ಶೇ. 18 ಮತ ಪಡೆಯುವ ಮೂಲಕ ಗೆಲುವು ಸಾಧಿಸಿದರು. ಡಿ,4ರ ಭಾನುವಾರ ರಾತ್ರಿ ಮುಕ್ತಾಯವಾದ ಮತ ಸಂಗ್ರಹಣೆಯಲ್ಲಿ ನರೇಂದ್ರ ಮೋದಿ ಅವರು ಒಟ್ಟು ಶೇ. 18 ಮತ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದರು. ನಂತರದ ಸ್ಥಾನದಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡೊನಾಲ್ಡ್ ಟ್ರಂಫ್, ಮೀಕಿಲೀಕ್ಸ್ ಸಂಸ್ಥಾಪಕ ಜುಲಿಯನ್ ಅಸ್ಸಾಂಜೆ ಬಂದರು.. ಇವರೆಲ್ಲರಿಗೂ ತಲಾ ಶೇ. 7 ಮತ ಲಭಿಸಿತು. ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಗರ್ಬರ್ಕ್ ಅವರಿಗೆ ಶೇ. 2ರಷ್ಟು ಮತ ದೊರೆತಿದ್ದರೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲನುಭವಿಸಿದೆ ಹಿಲರಿ ಕ್ಲಿಂಟನ್ ಶೇ. 4ರಷ್ಟು ಮತ ಪಡಿದ್ದಾರೆ. ಟೈಮ್್ಸ ಪತ್ರಿಕೆಯ ಸಂಪಾದಕ ಮಂಡಳಿ ಈ ವಾರ ಟೈಮ್್ಸ ವರ್ಷದ ವ್ಯಕ್ತಿಯನ್ನು ಆಯ್ಕೆ ಮಾಡಲಿದೆ. ಆನ್ಲೈನ್ ಮತ ಸಂಗ್ರಹಣೆಯಿಂದ ಜನರು ಇಷ್ಟಪಡುತ್ತಿರುವ ನಾಯಕರು ಯಾರು ಎಂಬುದರ ಕುರಿತು ನಮಗೆ ಮಾಹಿತಿ ಸಿಗಲಿದೆ. ಇದು ವರ್ಷ ವ್ಯಕ್ತಿಯನ್ನು ಆಯ್ಕೆ ಮಾಡಲು ನೆರವಾಗಲಿದೆ ಎಂದು ಟೈಮ್ಸ್ ತಿಳಿಸಿತು. ಈ ಹಿಂದೆ 2014ರಲ್ಲಿ ಮೋದಿ ಟೈಮ್ಸ್ ವರ್ಷದ ವ್ಯಕ್ತಿ ಪ್ರಶಸ್ತಿಯ ಆನ್ಲೈನ್ ಮತ ಸಂಗ್ರಹಣೆಯಲ್ಲಿ ಗೆಲುವು ಸಾಧಿಸಿದ್ದರು. ಆಗ ಮೋದಿ ಅವರಿಗೆ 50 ಲಕ್ಷ (ಶೇ. 16) ಮತ ಬಂದಿತ್ತು. ಜತೆಗೆ ಸತತ ನಾಲ್ಕು ವರ್ಷಗಳಿಂದ ಮೋದಿ ಟೈಮ್ಸ್ ವರ್ಷದ ವ್ಯಕ್ತಿ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಸ್ಥಾನ ಪಡೆದಿದ್ದಾರೆ. 2015ರಲ್ಲಿ ಜರ್ಮನಿಯ ಚಾನ್ಸಲರ್ ಏಂಜಲಾ ಮಾರ್ಕೆಲ್ ಟೈಮ್ಸ್ ವರ್ಷದ ವ್ಯಕ್ತಿ ಪ್ರಶಸ್ತಿ ಪಡೆದಿದ್ದರು.
2016: ನವದೆಹಲಿ: ಸಿಬಿಐ ನಿರ್ದೇಶಕರಾಗಿ ಐಪಿಎಸ್ ಅಧಿಕಾರಿ ರಾಕೇಶ್ ಆಸ್ಥಾನ ನೇಮಕ ವಿರುದ್ಧ ಎಎಪಿ ಮುಖಂಡ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸಿದರು.. ಡಿಸೆಂಬರ್ 2ರಂದು ಸಿಬಿಐ ನಿರ್ದೇಶಕರಾಗಿ ರಾಕೇಶ್ ಆಸ್ಥಾನ ನೋಮಕಗೊಂಡಿದ್ದಾರೆ. ಈ ಮೊದಲು ಅನಿಲ್ ಸಿನ್ಹಾ ಸಿಬಿಐ ನಿರ್ದೇಶಕರಾಗಿದ್ದರು. ಇವರು ನಿವೃತ್ತಗೊಂಡ ನಂತರ ಕೇಂದ್ರ ಸರ್ಕಾರ ರಾಕೇಶ್ ಆಸ್ಥಾನ ಅವರನ್ನು ಸಿಬಿಐ ನಿರ್ದೇಶಕರಾಗಿ ಆಯ್ಕೆ ಮಾಡಿತು.
2016: ಆಕ್ಲೆಂಡ್(ನ್ಯೂಜಿಲೆಂಡ್): ಪ್ರಧಾನಿ ಜಾನ್ ಕೀ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಅಭಿಮಾನಿಗಳಿಗೊಂದು ಶಾಕ್ ನೀಡಿದರು.. ಜಾಕ್ ಕೀ ನ್ಯೂಜಿಲೆಂಡಿನ ಜನಪ್ರಿಯ ಪ್ರಧಾನಿ ಎನಿಸಿಕೊಂಡಿದ್ದರು. ಕಳೆದ ಎಂಟು ವರ್ಷಗಳಿಂದ ಪ್ರಧಾನಿ ಹುದ್ದೆಯಲ್ಲಿ ಮುಂದುವರಿದಿದ್ದ ಅವರು ‘ರಾಜೀನಾಮೆಗೆ ಇದು ಸೂಕ್ತ ಸಮಯ’ ಎನ್ನುವ ಕಾರಣ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಾನ್ ಕೀ, ‘ಈ ನಿರ್ಧಾರಕ್ಕೆ ಬರಲು ಕಷ್ಟವಾಯತು. ನನಗಿದು ಅತ್ಯಂತ ಕಠಿಣ ನಿರ್ಧಾರ ಎನಿಸಿದ್ದೂ ಹೌದು. ಹಾಗೇ ಮುಂಬರುವ ದಿನಗಳಲ್ಲಿ ಏನು ಮಾಡಬೇಕು ಎನ್ನುವುದರ ಸ್ಪಷ್ಟತೆ ನನಗಿಲ್ಲ. ಆ ಬಗ್ಗೆ ಇನ್ನೂ ಖಚಿತ ನಿರ್ಧಾರ ತೆಗೆದುಕೊಂಡಿಲ್ಲ. ನನ್ನನ್ನು ವೃತ್ತಿಪರ ರಾಜಕೀಯ ವ್ಯಕ್ತಿಯನ್ನಾಗಿ ನಾನೇ ನೋಡಿಕೊಂಡಿಲ್ಲ’ ಎಂದು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುವ ಸಂದರ್ಭದಲ್ಲಿ ಹೇಳಿದರು.. ಇದೇ ವೇಳೆ ಪ್ರಧಾನಿಯಾಗಿ ಹಾಗೂ ಪಕ್ಷದ ನಾಯಕನಾಗಿ ನನಗೆ ಮರೆಯಲಾರದ ಅನುಭವ ಸಿಕ್ಕಿದೆ ಎಂದರು. ಹಾಲಿ ಉಪ ಪ್ರಧಾನಿ ಬಿಲ್ ಇಂಗ್ಲಿಷ್ ಮುಂದಿನ ಪ್ರಧಾನಿಯಾಗಿ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು. 2002ರಲ್ಲಿ ಕಿವೀಸ್ ಸಂಸತ್ ಪ್ರವೇಶಿಸಿದ್ದ, ಜಾನ್ ಕೀ ಅವರು ನ್ಯಾಷನಲ್ ಪಕ್ಷದ ನಾಯಕತ್ವ ವಹಿಸಿಕೊಂಡಿದ್ದು 4 ವರ್ಷಗಳ ಬಳಿಕ. 1008ರಲ್ಲಿ ಹೆಲೆನ್ ಕ್ಲಾರ್ಕ್ ಹುದ್ದೆಯಿಂದ ಕೆಳಗಿಳಿದ ಬಳಿಕ ಜಾನ್ ಕೀ ಅವರು ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು.
2016: ಚೆನ್ನೈ: ಹೃದಯಾಘಾತಕ್ಕೆ ಒಳಗಾಗಿರುವ ತಮಿಳುನಾಡು ಸಿಎಂ ಜಯಲಲಿತಾ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಚೆನ್ನೈನ ಅಪೋಲೊ ಆಸ್ಪತ್ರೆಗೆ ಜನನಾಯಕರ ಭೇಟಿ ಹೆಚ್ಚುತ್ತಿದೆ. ಅಭಿಮಾನಿಗಳು ಆಸ್ಪತ್ರೆಯ ಮುಂದೆ ಜಮಾವಣೆಗೊಂಡಿದ್ದಾರೆ. ಈ ನಡುವೆ ಜಯಲಲಿತಾ ಅವರ ಅಭಿಮಾನಿಗಳಿಬ್ಬರು ಅನಾರೋಗ್ಯ ಸುದ್ದಿಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದರು. ಜಯಲಲಿತಾ ಅವರ ಅಪ್ಪಟ ಅಭಿಮಾನಿಗಳಾಗಿದ್ದರು ಎನ್ನಲಾಯಿತು. ದೇವಾಲಯಗಳಲ್ಲಿ ಪ್ರಾರ್ಥನೆ: ಚೆನ್ನಯ ಸೇರಿ ತಮಿಳುನಾಡಿನ ಅನೇಕ ಕಡೆಗಳಲ್ಲಿ ಜಯಲಲಿತಾ ಬೇಗ ಗುಣಮುಖರಾಗಲಿ ಎಂದು ಮಹಿಳೆಯರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ದೇವರ ಮುಂದೆ ಕುಳಿತು ಭಜನೆ ಮಾಡಿ ಪ್ರಾರ್ಥಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದವು. ಅನೇಕ ಕಡೆಗಳಲ್ಲಿ ಹುಚ್ಚು ಅಭಿಮಾನ ಪ್ರದರ್ಶಿಸುತ್ತಿರುವ ದೃಶ್ಯಗಳೂ ಕಂಡು ಬಂದವು.
2014: ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಯಶಸ್ವಿಯಾಗಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಭಂಗಗೊಳಿಸುವ ಧುಸ್ಸಾಹಸಕ್ಕೆ ಕೈ ಹಾಕಿದ ಉಗ್ರರು ಈದಿನ ಒಂದೇ ದಿನ ನಾಲ್ಕು ಕಡೆ ಯೋಜಿತ ದಾಳಿ ನಡೆಸಿದರು. ಭದ್ರತಾ ಸಿಬ್ಬಂದಿ ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ಜನನಿಬಿಡ ಪ್ರದೇಶಗಳಲ್ಲಿ ಉಗ್ರರು ದಾಳಿ ನಡೆಸಿದರು. ಉರಿ ಸೇನಾ ಶಿಬಿರ ಮತ್ತು ಶೋಪಿಯಾನ್ ಪೊಲೀಸ್ ಠಾಣೆಯ ಮೇಲೆ ಗ್ರೆನೇಡ್ ದಾಳಿ ನಡೆಸಿದರು. ಪುಲ್ವಾಮಾ ಜಿಲ್ಲೆಯ ತ್ರಾಲ್ನ ಬಸ್ ನಿಲ್ದಾಣದ ಸಮೀಪದಲ್ಲೇ ದಾಳಿ ನಡೆಯಿತು.. ಶ್ರೀನಗರದ ಪ್ರಖ್ಯಾತ ಲಾಲ್ಚೌಕದಿಂದ ಕೇವಲ 10 ಕಿ.ಮೀ. ದೂರದಲ್ಲಿರುವ ಸೌರಾದಲ್ಲೂ ಸೇನಾ ಶಿಬಿರಗಳ ಮೇಲೆ ದಾಳಿ ನಡೆಯಿತು.. ಈ ದಾಳಿಗಳಲ್ಲಿ 11 ಭದ್ರತಾ ಸಿಬ್ಬಂದಿ ಮೃತರಾಗಿ, ಹತ್ತಾರು ನಾಗರಿಕರು ಗಂಭೀರವಾಗಿ ಗಾಯಗೊಂಡರು. ಭದ್ರತಾ ಸಿಬ್ಬಂದಿ ನಡೆಸಿದ ಪ್ರತಿದಾಳಿಗೆ 6 ಉಗ್ರರು ಹತರಾದರು. ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿನ ಸೇನಾ ಶಿಬಿರದ ಮೇಲೆ ನಸುಕಿನ ಜಾವ 3.10ರ ವೇಳೆಗೆ ಉಗ್ರರು ನಡೆಸಿದ ಗುಂಡಿನ ದಾಳಿಗೆ ಮೂವರು ಪೊಲೀಸರು ಸೇರಿದಂತೆ 8 ಭದ್ರತಾ ಸಿಬ್ಬಂದಿ ಅಸು ನೀಗಿದರು. ಸೇನೆಯೂ ಪ್ರತಿ ದಾಳಿ ನಡೆಸಿ, ಕುಖ್ಯಾತ ಲಷ್ಕರ್ ಕಮಾಂಡರ್ ಸೇರಿ 6 ಉಗ್ರರನ್ನು ಹತ್ಯೆಗೈದಿತು.
2014: ಸಿಂಗಾಪುರ: 'ಏಷ್ಯಾದ ವರ್ಷದ ವ್ಯಕ್ತಿ' ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಯಿತು. ಸಿಂಗಾಪುರದ ಮಾಧ್ಯಮ ಸಂಸ್ಥೆಯೊಂದು ಪ್ರಶಸ್ತಿಗಾಗಿ ನಡೆಸಿದ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಅವರನ್ನೇ ಹೆಚ್ಚಿನವರು ಅನುಮೋದಿಸಿದರು.. ಈ ಹಿನ್ನೆಲೆಯಲ್ಲಿ ಸಂಘಟಕರು ಮೋದಿ ಅವರನ್ನು 'ಏಷ್ಯಾದ ವರ್ಷದ ವ್ಯಕ್ತಿ' ಪುರಸ್ಕಾರಕ್ಕೆ ಆಯ್ಕೆ ಮಾಡಿದರು. ಅಭಿವೃದ್ಧಿ ಕಾರ್ಯ, ಯೋಜನೆಗಳಿಂದ ಜನಪ್ರಿಯತೆ ಗಳಿಸಿಕೊಂಡ ವ್ಯಕ್ತಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡುವಂತೆ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಯಲ್ಲಿ ಮೋದಿ ಕೇವಲ ಅವರ ದೇಶವಷ್ಟೇ ಅಲ್ಲ ನೆರೆಯ ದೇಶಗಳಲ್ಲೂ ಜನಪ್ರಿಯತೆ ಗಳಿಸಿಕೊಂಡಿದ್ದಾರೆ ಎನ್ನುವ ಅಭಿಪ್ರಾಯ ಸಾಕಷ್ಟು ಮಂದಿಯಿಂದ ವ್ಯಕ್ತಗೊಂಡಿದೆ ಎಂದು ಪ್ರಶಸ್ತಿ ನೀಡುತ್ತಿರುವ ಮಾಧ್ಯಮ ಸಂಸ್ಥೆ ಹೇಳಿತು.
2014: ವಾಷಿಂಗ್ಟನ್: ಮಾನವ ರಹಿತ ಬಾಹ್ಯಾಕಾಶ ನೌಕೆ 'ಒರಿಯಾನ್' ಗಗನಕ್ಕೆ ಚಿಮ್ಮಿತು. ಫ್ಲೊರಿಡಾದ ಕೇಪ್ ಕೆನಾವೆರಾಲ್ ಉಡಾವಣಾ ನೆಲೆಯಿಂದ ಬಾಹ್ಯಾಕಾಶಕ್ಕೆ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಮಾನವನನ್ನು ಮಂಗಳ ಗ್ರಹಕ್ಕೆ ಕಳುಹಿಸುವ ಒನ್ ಮಾರ್ಸ್ ಯೋಜನೆಗೆ ಪೂರ್ವಭಾವಿಯಾಗಿ ನಾಸಾ ಪ್ರಾಯೋಗಿಕವಾಗಿ ಈ ಮಾನವ ರಹಿತ ಈ ನೌಕೆಯನ್ನು ಮಂಗಳನ ಅಂಗಳದತ್ತ ಹಾರಿಬಿಟ್ಟಿತು. ಮುಂಬರುವ ದಿನದಲ್ಲಿ ಮನುಷ್ಯನನ್ನು ಮಂಗಳನ ಅಂಗಳಕ್ಕೆ ಕರೆದೊಯ್ಯುವ ನಾಸಾದ ಯೋಜನೆಗೆ ಪರೀಕ್ಷಾರ್ಥ ಉಡಾವಣೆ ಮಹತ್ವದ್ದಾಗಿದೆ. ಹಿಂದಿನ ದಿನವೇ ಉಡಾವಣೆಯಾಗಬೇಕಿದ್ದ ಈ ನೌಕೆಯನ್ನು ಹವಾಮಾನ ವ್ಯತ್ಯಯವಾದ ಹಿನ್ನೆಲೆಯಲ್ಲಿ ಈದಿನ ಹಾರಿಬಿಡಲಾಯಿತು. 11 ಅಡಿ ಎತ್ತರ, 16.5 ಅಡಿ ವಿಸ್ತಾರದ ನೌಕೆ 40 ವರ್ಷಗಳ ಹಿಂದೆ ಚಂದ್ರನ ಅಂಗಳಕ್ಕೆ ಹಾರಿಬಿಟ್ಟ ಅಪೊಲೊ ನೌಕೆಗಳಿಗಿಂತಲೂ ದೊಡ್ಡದು.
2014: ನ್ಯೂಯಾರ್ಕ್: ಭಾರತದ ಕಾಂಗ್ರೆಸ್ ಪಕ್ಷದ ವಿರುದ್ಧ ಹೂಡಲಾದ ಸಿಕ್ಖರ ಹಕ್ಕುಗಳ ಉಲ್ಲಂಘನೆಯ 1984ರ ಪ್ರಕರಣವನ್ನು ಫೆಡರಲ್ ಕೋರ್ಟ್ಗೆ ವಹಿಸಬೇಕೆ ಅಥವಾ ವಜಾಗೊಳಿಸಬೇಕೆ ಎಂಬ ಕುರಿತ ತನ್ನ ತೀರ್ಪನ್ನು ಅಮೆರಿಕದ ನ್ಯಾಯಾಲಯವೊಂದು ಕಾಯ್ದಿರಿಸಿತು. ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಹಕ್ಕುಗಳ ಗುಂಪು ನ್ಯೂರ್ಯಾನ ಎರಡನೇ ರ್ಸಟ್ ಮೇಲ್ಮನವಿ ಕೋರ್ಟ್ನಲ್ಲಿ ಈ ಖಟ್ಲೆ ಹೂಡಿದ್ದು, ಕ್ಯಾಲಿಫೋರ್ನಿಯಾ ಫೆಡರಲ್ ಕೋರ್ಟ್ ಈಗಾಗಲೇ ಸಿಕ್ಖರಿಗೆ ನಿರಾಶ್ರಿತ ಸ್ಥಾನಮಾನ ನೀಡಿರುವುದರಿಂದ ಸುಪ್ರೀಂಕೋರ್ಟ್ ಆದೇಶದ ಅಡಿಯಲ್ಲಿ ತಮ್ಮ ಪ್ರತಿಪಾದನೆ ವ್ಯಾಪ್ತಿ ಮೀರುವುದಿಲ್ಲ ಎಂದು ಪ್ರತಿಪಾದಿಸಿತು. ಎಸ್ಎಫ್ಜೆಯ ಈ ನಿಲುವಿನ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ವಾದದ ವೇಳೆ, ಅಮೆರಿಕದ ನ್ಯಾಯಾಲಯಗಳಿಂದ ಘೊಷಣಾತ್ಮಕ ತೀರ್ಪಗಳನ್ನು ಕೋರಲು ಮಾನವ ಹಕ್ಕುಗಳ ಗುಂಪುಗಳಿಗೆ ಸಾಂಸ್ಥಿಕ ನೆಲೆ ಇದೆ ಎಂದು ವಾದಿಸಲಾಯಿತು. 1984ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ಬಳಿಕ ಸಿಖ್ ಸಮುದಾಯದ ವಿರುದ್ಧ ನಡೆದ ಹಿಂಸಾಚಾರವನ್ನು 'ಜನಾಂಗಹತ್ಯೆ' ಎಂಬುದಾಗಿ ಘೋಷಿಸಬೇಕು ಎಂದು ಎಸ್ಎಫ್ಜೆ ಈ ಪ್ರಕರಣದಲ್ಲಿ ಕೋರಿತ್ತು. 1984ರ ಹಿಂಸಾಚಾರ ಪ್ರಕರಣಗಳಲ್ಲಿ ಮೃತರಾದವರ ಕಾನೂನುಬದ್ಧ ವಾರಸುದಾರರು ಅಥವಾ ಬದುಕಿಳಿದವರು ವೈಯಕ್ತಿಕ ಅರ್ಜಿದಾರರಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಆರ್ಥಿಕ ನೆರವು ಕೋರಿ ಈ ಮೊಕದ್ದಮೆ ದಾಖಲಿಸಿದ್ದರು.
2014: ಕೊಲಂಬೊ: ಮಾಲ್ಡೀವ್ಸ್ನ ರಾಜಧಾನಿ ಮಾಲೆಯಲ್ಲಿ ನೀರಿನ ಅಭಾವ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತ ಐದು ವಿಶೇಷ ವಿಮಾನಗಳ ಮೂಲಕ ನೀರು ಪೂರೈಕೆ ಮಾಡಿತು. ಈ ಕುರಿತು ವಿದೇಶಾಂಗ ಸಚಿವಾಲಯದ ವಕ್ತಾರ ಸೈಯ್ಯದ್ ಅಕ್ಬರುದ್ದೀನ್ ಟ್ವೀಟ್ನಲ್ಲಿ ಮಾಹಿತಿ ನೀಡಿದರು. ಮಾಲ್ಡೀವ್ಸ್ನ ನೀರು ಪೂರೈಕೆ, ಶುದ್ಧೀಕರಣ ಘಟಕದಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ನೀರು ಸರಬರಾಜು ಹಠಾತ್ ಸ್ಥಗಿತಗೊಂಡಿತ್ತು. ಪರಿಣಾಮ ಲಕ್ಷಕ್ಕೂ ಹೆಚ್ಚು ನಿವಾಸಿಗಳಿಗೆ ನೀರು ಪೂರೈಕೆ ಸಮಸ್ಯೆಯಾಗಿದ ಕಾರಣ ಮಾಲ್ಡೀವ್ಸ್ ಸರ್ಕಾರ ನರೆ ರಾಷ್ಟ್ರಗಳಾದ ಭಾರತ, ಶ್ರೀಲಂಕಾ, ಚೀನಾ ಮತ್ತು ಅಮೆರಿಕಕ್ಕೆ ಮನವಿ ಸಲ್ಲಿಸಿತ್ತು. ಮಾಲ್ಡೀವ್ ರಾಜಧಾನಿ ಮಾಲೆ ದ್ವೀಪವಾಗಿದ್ದು, ಇಲ್ಲಿ ನೈಸರ್ಗಿಕ ನೀರಿನ ವ್ಯವಸ್ಥೆಯಿಲ್ಲ. ಸಮುದ್ರದ ನೀರನ್ನೇ ಶುದ್ಧೀಕರಿಸಿ ಬಳಸಬೇಕಾಗಿದೆ.
2008: ಮುಂಬೈ ಮೇಲೆ ನಡೆದ ಉಗ್ರರ ದಾಳಿಯ ತನಿಖೆಯಲ್ಲಿ ಪಾಕಿಸ್ಥಾನ ಅಸಹಕಾರ ತೋರಿದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಭಾರತ ನಿರ್ಧರಿಸಿತು. ಮುಂಬೈ ಮೇಲಿನ ದಾಳಿಯ ಸಂಚು ರೂಪಿಸಿ ಪ್ರಚೋದನೆ ನೀಡಿದ್ದಾರೆ ಎನ್ನಲಾದ ವ್ಯಕ್ತಿಗಳು ಹಾಗೂ ಈ ಹಿಂದೆ ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ್ದಾರೆ ಎನ್ನಲಾದ ಉಗ್ರರು ಹಾಗೂ ಭೂಗತ ಪಾತಕಿಗಳನ್ನು ಹಸ್ತಾಂತರಿಸುವಂತೆ ಭಾರತ ಮಾಡಿಕೊಂಡ ಮನವಿಗೆ ಪಾಕಿಸ್ಥಾನ ಉತ್ತರಿಸದ ಕಾರಣ ಹಾಗೂ ತಪ್ಪಿತಸ್ಥರನ್ನು ತನ್ನ ನೆಲದಲ್ಲಿಯೇ ಶಿಕ್ಷಿಸುವುದಾಗಿ ಪಾಕ್ ಸರ್ಕಾರ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಭಾರತ ಈ ನಿರ್ಧಾರ ಕೈಗೊಂಡಿತು.
2014: ಸಿಂಗಾಪುರ: 'ಏಷ್ಯಾದ ವರ್ಷದ ವ್ಯಕ್ತಿ' ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಯಿತು. ಸಿಂಗಾಪುರದ ಮಾಧ್ಯಮ ಸಂಸ್ಥೆಯೊಂದು ಪ್ರಶಸ್ತಿಗಾಗಿ ನಡೆಸಿದ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಅವರನ್ನೇ ಹೆಚ್ಚಿನವರು ಅನುಮೋದಿಸಿದರು.. ಈ ಹಿನ್ನೆಲೆಯಲ್ಲಿ ಸಂಘಟಕರು ಮೋದಿ ಅವರನ್ನು 'ಏಷ್ಯಾದ ವರ್ಷದ ವ್ಯಕ್ತಿ' ಪುರಸ್ಕಾರಕ್ಕೆ ಆಯ್ಕೆ ಮಾಡಿದರು. ಅಭಿವೃದ್ಧಿ ಕಾರ್ಯ, ಯೋಜನೆಗಳಿಂದ ಜನಪ್ರಿಯತೆ ಗಳಿಸಿಕೊಂಡ ವ್ಯಕ್ತಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡುವಂತೆ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಯಲ್ಲಿ ಮೋದಿ ಕೇವಲ ಅವರ ದೇಶವಷ್ಟೇ ಅಲ್ಲ ನೆರೆಯ ದೇಶಗಳಲ್ಲೂ ಜನಪ್ರಿಯತೆ ಗಳಿಸಿಕೊಂಡಿದ್ದಾರೆ ಎನ್ನುವ ಅಭಿಪ್ರಾಯ ಸಾಕಷ್ಟು ಮಂದಿಯಿಂದ ವ್ಯಕ್ತಗೊಂಡಿದೆ ಎಂದು ಪ್ರಶಸ್ತಿ ನೀಡುತ್ತಿರುವ ಮಾಧ್ಯಮ ಸಂಸ್ಥೆ ಹೇಳಿತು.
2014: ವಾಷಿಂಗ್ಟನ್: ಮಾನವ ರಹಿತ ಬಾಹ್ಯಾಕಾಶ ನೌಕೆ 'ಒರಿಯಾನ್' ಗಗನಕ್ಕೆ ಚಿಮ್ಮಿತು. ಫ್ಲೊರಿಡಾದ ಕೇಪ್ ಕೆನಾವೆರಾಲ್ ಉಡಾವಣಾ ನೆಲೆಯಿಂದ ಬಾಹ್ಯಾಕಾಶಕ್ಕೆ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಮಾನವನನ್ನು ಮಂಗಳ ಗ್ರಹಕ್ಕೆ ಕಳುಹಿಸುವ ಒನ್ ಮಾರ್ಸ್ ಯೋಜನೆಗೆ ಪೂರ್ವಭಾವಿಯಾಗಿ ನಾಸಾ ಪ್ರಾಯೋಗಿಕವಾಗಿ ಈ ಮಾನವ ರಹಿತ ಈ ನೌಕೆಯನ್ನು ಮಂಗಳನ ಅಂಗಳದತ್ತ ಹಾರಿಬಿಟ್ಟಿತು. ಮುಂಬರುವ ದಿನದಲ್ಲಿ ಮನುಷ್ಯನನ್ನು ಮಂಗಳನ ಅಂಗಳಕ್ಕೆ ಕರೆದೊಯ್ಯುವ ನಾಸಾದ ಯೋಜನೆಗೆ ಪರೀಕ್ಷಾರ್ಥ ಉಡಾವಣೆ ಮಹತ್ವದ್ದಾಗಿದೆ. ಹಿಂದಿನ ದಿನವೇ ಉಡಾವಣೆಯಾಗಬೇಕಿದ್ದ ಈ ನೌಕೆಯನ್ನು ಹವಾಮಾನ ವ್ಯತ್ಯಯವಾದ ಹಿನ್ನೆಲೆಯಲ್ಲಿ ಈದಿನ ಹಾರಿಬಿಡಲಾಯಿತು. 11 ಅಡಿ ಎತ್ತರ, 16.5 ಅಡಿ ವಿಸ್ತಾರದ ನೌಕೆ 40 ವರ್ಷಗಳ ಹಿಂದೆ ಚಂದ್ರನ ಅಂಗಳಕ್ಕೆ ಹಾರಿಬಿಟ್ಟ ಅಪೊಲೊ ನೌಕೆಗಳಿಗಿಂತಲೂ ದೊಡ್ಡದು.
2014: ನ್ಯೂಯಾರ್ಕ್: ಭಾರತದ ಕಾಂಗ್ರೆಸ್ ಪಕ್ಷದ ವಿರುದ್ಧ ಹೂಡಲಾದ ಸಿಕ್ಖರ ಹಕ್ಕುಗಳ ಉಲ್ಲಂಘನೆಯ 1984ರ ಪ್ರಕರಣವನ್ನು ಫೆಡರಲ್ ಕೋರ್ಟ್ಗೆ ವಹಿಸಬೇಕೆ ಅಥವಾ ವಜಾಗೊಳಿಸಬೇಕೆ ಎಂಬ ಕುರಿತ ತನ್ನ ತೀರ್ಪನ್ನು ಅಮೆರಿಕದ ನ್ಯಾಯಾಲಯವೊಂದು ಕಾಯ್ದಿರಿಸಿತು. ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಹಕ್ಕುಗಳ ಗುಂಪು ನ್ಯೂರ್ಯಾನ ಎರಡನೇ ರ್ಸಟ್ ಮೇಲ್ಮನವಿ ಕೋರ್ಟ್ನಲ್ಲಿ ಈ ಖಟ್ಲೆ ಹೂಡಿದ್ದು, ಕ್ಯಾಲಿಫೋರ್ನಿಯಾ ಫೆಡರಲ್ ಕೋರ್ಟ್ ಈಗಾಗಲೇ ಸಿಕ್ಖರಿಗೆ ನಿರಾಶ್ರಿತ ಸ್ಥಾನಮಾನ ನೀಡಿರುವುದರಿಂದ ಸುಪ್ರೀಂಕೋರ್ಟ್ ಆದೇಶದ ಅಡಿಯಲ್ಲಿ ತಮ್ಮ ಪ್ರತಿಪಾದನೆ ವ್ಯಾಪ್ತಿ ಮೀರುವುದಿಲ್ಲ ಎಂದು ಪ್ರತಿಪಾದಿಸಿತು. ಎಸ್ಎಫ್ಜೆಯ ಈ ನಿಲುವಿನ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ವಾದದ ವೇಳೆ, ಅಮೆರಿಕದ ನ್ಯಾಯಾಲಯಗಳಿಂದ ಘೊಷಣಾತ್ಮಕ ತೀರ್ಪಗಳನ್ನು ಕೋರಲು ಮಾನವ ಹಕ್ಕುಗಳ ಗುಂಪುಗಳಿಗೆ ಸಾಂಸ್ಥಿಕ ನೆಲೆ ಇದೆ ಎಂದು ವಾದಿಸಲಾಯಿತು. 1984ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ಬಳಿಕ ಸಿಖ್ ಸಮುದಾಯದ ವಿರುದ್ಧ ನಡೆದ ಹಿಂಸಾಚಾರವನ್ನು 'ಜನಾಂಗಹತ್ಯೆ' ಎಂಬುದಾಗಿ ಘೋಷಿಸಬೇಕು ಎಂದು ಎಸ್ಎಫ್ಜೆ ಈ ಪ್ರಕರಣದಲ್ಲಿ ಕೋರಿತ್ತು. 1984ರ ಹಿಂಸಾಚಾರ ಪ್ರಕರಣಗಳಲ್ಲಿ ಮೃತರಾದವರ ಕಾನೂನುಬದ್ಧ ವಾರಸುದಾರರು ಅಥವಾ ಬದುಕಿಳಿದವರು ವೈಯಕ್ತಿಕ ಅರ್ಜಿದಾರರಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಆರ್ಥಿಕ ನೆರವು ಕೋರಿ ಈ ಮೊಕದ್ದಮೆ ದಾಖಲಿಸಿದ್ದರು.
2014: ಕೊಲಂಬೊ: ಮಾಲ್ಡೀವ್ಸ್ನ ರಾಜಧಾನಿ ಮಾಲೆಯಲ್ಲಿ ನೀರಿನ ಅಭಾವ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತ ಐದು ವಿಶೇಷ ವಿಮಾನಗಳ ಮೂಲಕ ನೀರು ಪೂರೈಕೆ ಮಾಡಿತು. ಈ ಕುರಿತು ವಿದೇಶಾಂಗ ಸಚಿವಾಲಯದ ವಕ್ತಾರ ಸೈಯ್ಯದ್ ಅಕ್ಬರುದ್ದೀನ್ ಟ್ವೀಟ್ನಲ್ಲಿ ಮಾಹಿತಿ ನೀಡಿದರು. ಮಾಲ್ಡೀವ್ಸ್ನ ನೀರು ಪೂರೈಕೆ, ಶುದ್ಧೀಕರಣ ಘಟಕದಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ನೀರು ಸರಬರಾಜು ಹಠಾತ್ ಸ್ಥಗಿತಗೊಂಡಿತ್ತು. ಪರಿಣಾಮ ಲಕ್ಷಕ್ಕೂ ಹೆಚ್ಚು ನಿವಾಸಿಗಳಿಗೆ ನೀರು ಪೂರೈಕೆ ಸಮಸ್ಯೆಯಾಗಿದ ಕಾರಣ ಮಾಲ್ಡೀವ್ಸ್ ಸರ್ಕಾರ ನರೆ ರಾಷ್ಟ್ರಗಳಾದ ಭಾರತ, ಶ್ರೀಲಂಕಾ, ಚೀನಾ ಮತ್ತು ಅಮೆರಿಕಕ್ಕೆ ಮನವಿ ಸಲ್ಲಿಸಿತ್ತು. ಮಾಲ್ಡೀವ್ ರಾಜಧಾನಿ ಮಾಲೆ ದ್ವೀಪವಾಗಿದ್ದು, ಇಲ್ಲಿ ನೈಸರ್ಗಿಕ ನೀರಿನ ವ್ಯವಸ್ಥೆಯಿಲ್ಲ. ಸಮುದ್ರದ ನೀರನ್ನೇ ಶುದ್ಧೀಕರಿಸಿ ಬಳಸಬೇಕಾಗಿದೆ.
2008: ಮುಂಬೈ ಮೇಲೆ ನಡೆದ ಉಗ್ರರ ದಾಳಿಯ ತನಿಖೆಯಲ್ಲಿ ಪಾಕಿಸ್ಥಾನ ಅಸಹಕಾರ ತೋರಿದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಭಾರತ ನಿರ್ಧರಿಸಿತು. ಮುಂಬೈ ಮೇಲಿನ ದಾಳಿಯ ಸಂಚು ರೂಪಿಸಿ ಪ್ರಚೋದನೆ ನೀಡಿದ್ದಾರೆ ಎನ್ನಲಾದ ವ್ಯಕ್ತಿಗಳು ಹಾಗೂ ಈ ಹಿಂದೆ ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ್ದಾರೆ ಎನ್ನಲಾದ ಉಗ್ರರು ಹಾಗೂ ಭೂಗತ ಪಾತಕಿಗಳನ್ನು ಹಸ್ತಾಂತರಿಸುವಂತೆ ಭಾರತ ಮಾಡಿಕೊಂಡ ಮನವಿಗೆ ಪಾಕಿಸ್ಥಾನ ಉತ್ತರಿಸದ ಕಾರಣ ಹಾಗೂ ತಪ್ಪಿತಸ್ಥರನ್ನು ತನ್ನ ನೆಲದಲ್ಲಿಯೇ ಶಿಕ್ಷಿಸುವುದಾಗಿ ಪಾಕ್ ಸರ್ಕಾರ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಭಾರತ ಈ ನಿರ್ಧಾರ ಕೈಗೊಂಡಿತು.
2008: ಮಹಾರಾಷ್ಟ್ರ ಶಾಸಕಾಂಗ ಪಕ್ಷದ ನಾಯಕನ ಹುದ್ದೆಗೆ ಅಶೋಕ್ ಚವಾಣ್ ಅವರನ್ನು ಆಯ್ಕೆ ಮಾಡಿದ ವಿಚಾರವನ್ನು ಹಿರಿಯ ನಾಯಕ ಪ್ರಣವ್ ಮುಖರ್ಜಿ ಅಧಿಕೃತವಾಗಿ ನವದೆಹಲಿಯಲ್ಲಿ ಪ್ರಕಟಿಸಿದರು. ಉಪ ಮುಖ್ಯಮಂತ್ರಿಯಾಗಿ ಎನ್‌ಸಿಪಿಯ ಛಗನ್ ಭುಜಬಲ್ ಅವರು ಆಯ್ಕೆಯಾದರು. 50 ವರ್ಷದ ಅಶೋಕ್ ಚವಾಣ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರಾಗಿದ್ದ ದಿವಂಗತ ಎಸ್.ಬಿ. ಚವಾಣ್ ಅವರ ಪುತ್ರ.
2008: ಬೈಕ್ ಹ್ಯಾಂಡಲ್ ಹಿಡಿಯದೇ ಬಾಗಲಕೋಟೆಯಿಂದ ಬೆಂಗಳೂರಿನವರೆಗೆ ಪ್ರಯಾಣಿಸುವ ಮೂಲಕ ಇಳಕಲ್ಲಿನ ಈರಣ್ಣ ಜಿ. ಕುಂದರಗಿಮಠ ವಿಶಿಷ್ಟ ಸಾಧನೆ ಮಾಡಿದರು. ಒಟ್ಟು 510 ಕಿ. ಮೀ ದೂರದ ಪ್ರಯಾಣವನ್ನು ಕೇವಲ 11 ಗಂಟೆಯಲ್ಲಿ ಕ್ರಮಿಸಿ ವಿಭಿನ್ನ ರೀತಿಯ ಬೈಕ್ ಸಾಹಸವನ್ನು ಮೆರೆದರು. 'ಬೆಳಿಗ್ಗೆ ಬಾಗಲಕೋಟೆಯಿಂದ ಪ್ರಯಾಣ ಆರಂಭಿಸಿ ರಾತ್ರಿ ವೇಳೆಗೆ ಬೆಂಗಳೂರಿಗೆ ತಲುಪಿದೆ. ಗಂಟೆಗೆ 80 ಕಿ.ಮೀ ವೇಗದಲ್ಲಿ ಬೈಕ್ ಓಡಿಸಿದ ನನಗೆ ನಿರೀಕ್ಷಿತ ಗುರಿ ಸಾಧಿಸಿದರ ಬಗ್ಗೆ ಸಂತಸವಿದೆ' ಎಂದು ಈರಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
2008: ಪಾಕಿಸ್ಥಾನದ ಪೇಶಾವರದ ಷಿಯಾ ಪ್ರಾರ್ಥನಾ ಮಂದಿರವೊಂದರಲ್ಲಿ ಪ್ರಬಲ ಬಾಂಬ್ ಸ್ಫೋಟಿಸಿ 26 ಜನ ಬಲಿಯಾಗಿ 95ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ನಡೆಯಿತು. ನಗರದ ಇಕ್ಕಟ್ಟಾದ ಕುಚಾ ರಿಸಾಲ್ದಾರ್ ಪ್ರದೇಶದ ಇಮಾಮ್ ದರ್ಗಾದ ಸಮೀಪ ವಾಹನವೊಂದರಲ್ಲಿ ಬಾಂಬ್ ಹುದುಗಿಸಿ ಇಡಲಾಗಿತ್ತು.
2008: ಗುಲ್ಬರ್ಗದ 13ರ ಹರೆಯದ ಬಾಲೆ ಸ್ಫೂರ್ತಿ ಜೋಶಿ, ಅಂತಾರಾಷ್ಟ್ರೀಯ ಮಟ್ಟದ ಯುಸಿ ಮಾಸ್ ಅಬ್ಯಾಕಸ್ ಹಾಗೂ ಮೆಂಟಲ್ ಅರಿಥ್‌ಮ್ಯಾಟಿಕ್ ಸ್ಪರ್ಧೆಯಲ್ಲಿ ಚಾಂಪಿಯನ್‌ಶಿಪ್ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಸಾಧನೆ ಮಾಡಿದರು. 'ಮಲೇಷ್ಯಾದ ಕೌಲಾಲಂಪುರದಲ್ಲಿ ಈ ಸ್ಪರ್ಧೆ ನಡೆಯಿತು. ಕೇವಲ ಎಂಟು ನಿಮಿಷದಲ್ಲಿ ಗಣಿತದ 200 ಲೆಕ್ಕಗಳನ್ನು ಬಿಡಿಸಬೇಕಿತ್ತು. ಎಲ್ಲ ಸಮಸ್ಯೆಗಳನ್ನು ಬಿಡಿಸಿ ಒಟ್ಟು 300 ಅಂಕಗಳ ಪೈಕಿ 295 ಅಂಕ ಪಡೆದು ಚಾಂಪಿಯನ್ ಆದೆ' ಎಂದು ಸ್ಫೂರ್ತಿ ಹೆಮ್ಮೆಯಿಂದ ನುಡಿದರು.
2007: ಜಗತ್ತಿನಾದ್ಯಂತ ಎಲ್ಲರ ಗಮನ ಸೆಳೆದು ಆಕರ್ಷಣೆಯ ಕೇಂದ್ರವಾದ ಲಂಡನ್ನಿನ ಸ್ವಾಮಿ ನಾರಾಯಣ ದೇಗುಲವು ಇಂಗ್ಲೆಂಡಿನ `ಹೆಮ್ಮೆಯ ತಾಣ' ಪ್ರಶಸ್ತಿ ಪಡೆಯಿತು. ಆನ್ ಲೈನ್ ಮತದಾನದ ಮೂಲಕ ಈ ಆಯ್ಕೆ ನಡೆದಿದ್ದು, ಫಲಿತಾಂಶಗಳನ್ನು ಈದಿನ ಪ್ರಕಟಿಸಲಾಯಿತು. ಯೂರೋಪಿನಲ್ಲಿ ನಿರ್ಮಾಣವಾದ ಮೊದಲ ಸಾಂಪ್ರದಾಯಿಕ ಹಿಂದೂ ದೇಗುಲವಿದು. ಸ್ವಾಮಿ ನಾರಾಯಣ ದೇಗುಲವನ್ನು ತಮ್ಮ ಹೆಮ್ಮೆಯ ತಾಣವೆಂದು ಆನ್ ಲೈನ್ ಮತದಾನದಲ್ಲಿ ಭಾಗವಹಿಸಿದ್ದ ಬಹುತೇಕ ಲಂಡನ್ ನಿವಾಸಿಗಳು ಒಪ್ಪಿದರು. ರಾಷ್ಟ್ರೀಯ ಮತದಾನದಲ್ಲೂ ಈ ದೇಗುಲಕ್ಕೆ ಮೊದಲ ಸ್ಥಾನ ದೊರಕಿತು.
2007: ರಾಮಜನ್ಮಭೂಮಿ- ಬಾಬ್ರಿ ಮಸೀದಿ ಧ್ವಂಸವಾದ 15 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪ್ರಕರಣದ ವಿಚಾರಣೆ ಉತ್ತರಪ್ರದೇಶದ ರಾಯ್ ಬರೇಲಿಯ ಸಿಬಿಐ ನ್ಯಾಯಾಲಯದಲ್ಲಿ ಈದಿನ ಆರಂಭವಾಯಿತು. ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ, ಬಿಜೆಪಿ ನಾಯಕರಾದ ಮುರಳಿ ಮನೋಹರ ಜೋಷಿ, ವಿನಯ್ ಕಟಿಯಾರ್, ಭಾರತೀಯ ಜನಶಕ್ತಿ ಪಕ್ಷದ ಮುಖ್ಯಸ್ಥೆ ಉಮಾ ಭಾರತಿ, ವಿ ಎಚ್ ಪಿ ನಾಯಕರಾದ ಅಶೋಕ ಸಿಂಘಾಲ್, ಗಿರಿರಾಜ ಕಿಶೋರ್, ವಿಷ್ಣು ದಾಲ್ಮಿಯಾ ಮತ್ತು ಸಾಧ್ವಿ ಋತಂಬರಾ ಅವರನ್ನು ಆರೋಪಿಗಳಾಗಿ ಹೆಸರಿಸಲಾಯಿತು. ಇವರೆಲ್ಲರೂ ಘಟನಾ ಸ್ಥಳದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎಂದು ರಾಮ ಜನ್ಮಭೂಮಿ ಪೊಲೀಸ್ ಠಾಣೆಯ ಆಗಿನ ಮುನ್ಷಿ (ಈಗ ಸಹಾಯಕ ಪೊಲೀಸ್ ಇನ್ ಸ್ಪೆಕ್ಟರ್) ಹನುಮಾನ್ ಪ್ರಸಾದ್ ದಾಖಲಿಸಿದ್ದ ಎಫ್ ಐ ಆರ್ ನ್ನು ಪರಿಶೀಲಿಸಲಾಯಿತು. ತಾವೇ ಈ ವರದಿ ತಯಾರಿಸಿದ್ದಾಗಿ ಹನುಮಾನ್ ಪ್ರಸಾದ್ ಒಪ್ಪಿಕೊಂಡರು. ಆದರೆ ಅವರನ್ನು ಪ್ರಶ್ನಿಸಲು ಸಿಬಿಐಗೆ ನ್ಯಾಯಾಲಯ ಅವಕಾಶ ನೀಡಲಿಲ್ಲ.
2007: ದೇಶದ ಸಂಸತ್ತಿಗೆ ಆಯ್ಕೆಯಾದ `ಮೊದಲ ದಂಪತಿ' ಎಂಬ ಹೆಗ್ಗಳಿಕೆಗೆ ಪಾತ್ರರಾದ ಜೋಕಿಂ ಮತ್ತು ವಯಲೆಟ್ ಆಳ್ವ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಬಿಪಿನ್ ಚಂದ್ರಪಾಲ್ ಅವರ ಭಾವಚಿತ್ರವನ್ನು ಸಂಸತ್ ಸಭಾಂಗಣದಲ್ಲಿ ಈದಿನ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅನಾವರಣಗೊಳಿಸಿದರು. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ವಿರೋಧ ಪಕ್ಷದ ನಾಯಕ ಎಲ್. ಕೆ. ಅಡ್ವಾಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆಳ್ವ ದಂಪತಿಯ ಭಾವಚಿತ್ರ ರಚಿಸಿದ ಕಲಾವಿದ ಸುಹಾಸ್ ಬಹುಳ್ಕರ್ ಅವರನ್ನು ಪ್ರಧಾನಿ ಸಿಂಗ್ ಹಾಗೂ ಬಿಪಿನ್ ಚಂದ್ರಪಾಲ್ ಅವರ ಭಾವಚಿತ್ರ ರಚಿಸಿದ ಕಲಾವಿದ ಪ್ರೊ. ಜಾಗರ್ ಜಾಹೂರ್ ಅವರನ್ನು ಉಪರಾಷ್ಟ್ರಪತಿ ಅನ್ಸಾರಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಆಳ್ವ ದಂಪತಿ ಮತ್ತು ಬಿಪಿನ್ ಅವರ ಪರಿಚಯವನ್ನು ಒಳಗೊಂಡ ಹಿಂದಿ ಮತ್ತು ಇಂಗ್ಲಿಷ್ ಭಾಷಾ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
2007: ಡಾ.ಶಿವರಾಮ ಕಾರಂತ ಅವರು ರಚಿಸಿರುವ ಏಳು ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶನ ಮಾಡುವ ಮುನ್ನ ಅವರ ಉತ್ತರಾಧಿಕಾರಿ ಬಿ.ಮಾಲಿನಿ ಮಲ್ಯ ಅವರಿಂದ ಹಕ್ಕು ಸ್ವಾಮ್ಯ (ಕಾಪಿ ರೈಟ್) ಪಡೆಯುವುದು ಅಗತ್ಯ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿತು. ಹಕ್ಕು ಸ್ವಾಮ್ಯ ಪಡೆಯುವುದು ಅತ್ಯಗತ್ಯ ಎಂದು 2003ರ ನವೆಂಬರಿನಲ್ಲಿ ಉಡುಪಿಯ ಜಿಲ್ಲಾ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ ಹಾಗೂ ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜುಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ವಿ.ಜಗನ್ನಾಥನ್ ವಜಾ ಮಾಡಿದರು. (ಭೀಷ್ಮ ವಿಜಯ, ನಳ - ದಮಯಂತಿ (ಕನಕಾಂಗಿ ಕಲ್ಯಾಣ), ಅಭಿಮನ್ಯು ವಧೆ, ಚಿತ್ರಾಂಗದಾ, ಬಬ್ರುವಾಹನ ಕಾಳಗ, ಪಂಚವಟಿ ಹಾಗೂ ಗಯ ಚರಿತಾ ಇವು ಈ ಏಳು ಯಕ್ಷಗಾನ ಪ್ರಸಂಗಗಳು.) ಯಕ್ಷಗಾನವೆಂಬುದು ಬಹು ಪುರಾತನ ಕಲೆ. ಶತಮಾನದ ಇತಿಹಾಸವುಳ್ಳ ಇಂತಹ ಕಲೆಗೆ ಹಕ್ಕು ಸ್ವಾಮ್ಯ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಅನೂರ್ಜಿತಗೊಳಿಸುವಂತೆ ಅವರು ಕೋರಿದ್ದರು. ಮಾಲಿನಿ ಮಲ್ಯ ಅವರ ಪರ ವಾದಿಸಿದ ವಕೀಲ ಟಿ.ಎನ್. ರಘುಪತಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಬೇರೆಯವರು ರಚಿಸಿರುವ ಇದೇ ಪ್ರಸಂಗಗಳನ್ನು ಪ್ರದರ್ಶನ ಮಾಡಬಾರದು ಎಂಬುದು ತಮ್ಮ ಆಶಯವಲ್ಲ. ಬದಲಿಗೆ ಕಾರಂತರು ರಚಿಸಿರುವ ಕೃತಿಗಳ ಪ್ರದರ್ಶನಕ್ಕೆ ಹಕ್ಕು ಸ್ವಾಮ್ಯ ಪಡೆಯುವುದು ಅಗತ್ಯ ಎಂಬುದು ಅವರ ಸ್ಪಷ್ಟನೆಯಾಗಿತ್ತು. `ಈ ಎಲ್ಲ ಪ್ರಸಂಗಗಳು ಪೌರಾಣಿಕ ಹಿನ್ನೆಲೆ ಹೊಂದಿದ್ದರೂ, ಕಾರಂತರು ಅದಕ್ಕೆ ಹೊಸ ರೂಪ ಕೊಟ್ಟಿದ್ದಾರೆ. ಅದಕ್ಕೆ ರಾಗ, ತಾಳದ ಸಂಯೋಜನೆ, ಸಂಗೀತ ರಚನೆ, ರಂಗಸ್ಥಳದ ಕಲ್ಪನೆ ಸೇರಿದಂತೆ ಪ್ರಯೋಗಗಳಿಗೆ ಹೊಸ ಆಯಾಮ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಕ್ಕು ಸ್ವಾಮ್ಯ ಪಡೆಯದೇ ಅದನ್ನು ಪ್ರದರ್ಶನ ಮಾಡುವುದು ಸಲ್ಲದು' ಎಂದು ವಾದಿಸಿದರು. 1997ರ ಡಿಸೆಂಬರ್ ತಿಂಗಳಿನಲ್ಲಿ ಕಾರಂತರು ನಿಧನರಾದರು. ಆದರೆ 1994ರ ಜೂನ್ 18ರಂದು ಉಯಿಲು ಬರೆದಿಟ್ಟಿದ್ದ ಅವರು ಮಾಲಿನಿ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಲಿನಿ ಅವರ ಅನುಮತಿ ಅಗತ್ಯ ಎಂದು ಆದೇಶಿಸುವಂತೆ ಕೋರಿದರು. ಈ ವಾದವನ್ನು ಕೋರ್ಟ್ ಮಾನ್ಯ ಮಾಡಿತು.
2007: ಬಂಧನದಲ್ಲಿದ್ದ ಪಾಕಿಸ್ಥಾನ ಸುಪ್ರೀಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮೊಹಮ್ಮದ್ ಚೌಧುರಿ ಸೇರಿದಂತೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟುಗಳ 37 ನ್ಯಾಯಮೂರ್ತಿಗಳನ್ನು ಪಾಕಿಸ್ಥಾನ ಸರ್ಕಾರ ವಜಾ ಮಾಡಿತು. ಈ ಸಂಬಂಧ ಕಾನೂನು ಸಚಿವಾಲಯ ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿತು. ಅಧ್ಯಕ್ಷ ಪರ್ವೇಜ್ ಮುಷರಫ್ ಹೊರಡಿಸಿರುವ ಸಂವಿಧಾನಿಕ ಆಜ್ಞೆಯ ಅಡಿ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿರುವ ಕಾರಣ ಈ ನ್ಯಾಯಮೂರ್ತಿಗಳನ್ನು ವಜಾಗೊಳಿಸಲಾಯಿತು. ವಜಾಗೊಂಡ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಲ್ಲಿ ಪಾಕಿಸ್ಥಾನದ ಏಕೈಕ ಹಿಂದೂ ನ್ಯಾಯಮೂರ್ತಿ ರಾಣಾ ಭಗವಾನ್ ದಾಸ್ ಸಹ ಒಬ್ಬರು. ಚೌಧುರಿ ಹಾಗೂ ದಾಸ್ ಹೊರತಾಗಿ ಸುಪ್ರೀಂಕೋರ್ಟಿನ ಇನ್ನೂ 11 ನ್ಯಾಯಮೂರ್ತಿಗಳನ್ನು ಕಿತ್ತು ಹಾಕಲಾಯಿತು. ಸಿಂಧ್, ಪಂಜಾಬ್ ಹಾಗೂ ಪೇಶಾವರ ಹೈಕೋರ್ಟುಗಳ 24 ನ್ಯಾಯಮೂರ್ತಿಗಳನ್ನು ಸಹ ವಜಾಗೊಳಿಸಲಾಯಿತು. ವಜಾಗೊಂಡ ನ್ಯಾಯಮೂರ್ತಿಗಳಿಗೆ ಪಿಂಚಣಿ ಇತ್ಯಾದಿ ಯಾವುದೇ ಸೌಲಭ್ಯ ನಿರಾಕರಿಸಲಾಯಿತು.
2007: ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿಯು ಅನಿಲ್ ಕುಂಬ್ಳೆ ಅವರನ್ನು ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಉಳಿಸಿಕೊಂಡಿತು. ಬೆಂಗಳೂರಿನಲ್ಲಿ ದಿಲೀಪ್ ವೆಂಗ್ ಸರ್ಕರ್ ನೇತೃತ್ವದಲ್ಲಿ ಸಭೆ ಸೇರಿದ ಆಯ್ಕೆಗಾರರು ಈ ನಿರ್ಧಾರ ಕೈಗೊಂಡರು.
2005: ಭಾರತೀಯ ಮೂಲದ ವ್ಯಕ್ತಿಗಳ ವಿರುದ್ಧ ಕೊಲೆ ಯತ್ನದ ಆರೋಪ ದಾಖಲಿಸುವುದನ್ನು ಮಲೇಷ್ಯಾ ಆಡಳಿತ ಮುಂದುವರೆಸಿತು. ಈದಿನ ಮತ್ತೆ ಐವರ ವಿರುದ್ಧ ಇಂಥ ಗುರುತರ ಆರೋಪ ದಾಖಲಿಸಲಾಯಿತು. ಇದರಿಂದಾಗಿ ಇಂಥ ಆರೋಪ ಎದುರಿಸುತ್ತಿರುವ ಭಾರತೀಯರ ಸಂಖ್ಯೆ 31 ಕ್ಕೆ ಏರಿತು. ಸರ್ಕಾರದ ನಿಷೇಧದ ಹೊರತಾಗಿಯೂ 2007ರ ನವೆಂಬರ್ 25 ರಂದು ಭಾರತೀಯ ಮೂಲದ ಸಾವಿರಾರು ಜನ ಸಭೆ ಸೇರಿ ಜನಾಂಗೀಯ ಭೇದಭಾವದ ವಿರುದ್ಧ ರ್ಯಾಲಿ ನಡೆಸಿದ್ದರು. ಆ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದರೆಂಬ ಆರೋಪವನ್ನು ಈ 31 ಜನರ ಮೇಲೆ ಹೊರಿಸಲಾಗಿದೆ. ಗರಿಷ್ಠ 20 ವರ್ಷ ಜೈಲುವಾಸದ ಶಿಕ್ಷೆ ವಿಧಿಸಬಹುದಾದ ಅಪರಾಧದ ಆರೋಪ ಹೊತ್ತಿರುವ 31 ಜನರನ್ನು ಈದಿನ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.
2006: ರಾಷ್ಟ್ರವ್ಯಾಪಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಆಪ್ತ ಕಾರ್ಯದರ್ಶಿ ಶಶಿನಾಥ್ ಝಾ ಕೊಲೆ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್ ಅವರಿಗೆ ದೆಹಲಿ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ಐದು ಲಕ್ಷ ರೂಪಾಯಿಗಳ ದಂಡ ವಿಧಿಸಿತು. 12 ವರ್ಷಗಳ ಹಿಂದೆ ಈ ಕೊಲೆ ನಡೆದಿತ್ತು. ಸೊರೇನ್ ಅಪರಾಧಿ ಎಂದು ನ್ಯಾಯಾಲಯ ನವೆಂಬರ್ 28ರಂದು ತೀರ್ಪು ನೀಡಿತ್ತು.
2006: ಬೆಂಗಳೂರು ಜಯನಗರ ವಾಣಿಜ್ಯ ಸಂಕೀರ್ಣದಲ್ಲಿ ಇರುವ ಪುಟ್ಟಣ್ಣ ಕಣಗಾಲ್ ಚಿತ್ರಮಂದಿರವನ್ನು ಮಲ್ಟಿಪ್ಲೆಕ್ಸ್ ಕಟ್ಟಡವಾಗಿ ಪರಿವರ್ತಿಸಲು ಮತ್ತು ಜಯನಗರ ವಾಣಿಜ್ಯ ಸಂಕೀರ್ಣವನ್ನು ನವೀಕರಿಸಲು ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿತು. ಈ ಸಲುವಾಗಿ ನಕ್ಷೆ ತಯಾರಿಸುವಂತೆ ಆಯುಕ್ತ ಜೈರಾಜ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
2006: ಫಿಜಿಯಲ್ಲಿ ನಡೆದ ರಕ್ತರಹಿತ ಕ್ಷಿಪ್ರಕ್ರಾಂತಿಯಲ್ಲಿ ಸೇನೆ ಅಧಿಕಾರವನ್ನು ತನ್ನ ವಶಕ್ಕೆ ತೆಗೆದುಕೊಂಡು, ಪ್ರಧಾನಿ ಲೈಸೆನಿಯಾ ಕರಾಸೆ ಅವರನ್ನು ಪದಚ್ಯುತಿಗೊಳಿಸಿತು. ಕಳೆದ 20 ವರ್ಷಗಳಲ್ಲಿ ಫಿಜಿಯಲ್ಲಿ ನಡೆಯುತ್ತಿರುವ ನಾಲ್ಕನೇ ಸೇನಾ ದಂಗೆ ಇದು. ಬೆಳಿಗ್ಗೆ ಸೇನೆ ಸರ್ಕಾರ ಮತ್ತು ದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ' ಎಂದು ಸೇನಾ ದಂಡನಾಯಕ ಫ್ರಾಂಕ್ ಬೈನಿಮರಮ ಅವರು ಫಿಜಿಯ ರಾಜಧಾನಿ ಸುವಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಫಿಜಿಯ ಈಗಿನ ಕ್ಷಿಪ್ರಕ್ರಾಂತಿಗೆ 2000ನೇ ಇಸ್ವಿಯಲ್ಲಿ ನಡೆದ ಘಟನೆಗೆ ನಂಟು ಹಾಕಲಾಗಿದೆ. ಆಗ ಸ್ಥಳೀಯರು ನಡೆಸಿದ ಕ್ಷಿಪ್ರಕ್ರಾಂತಿ ರಕ್ತಪಾತದಲ್ಲಿ ಅಂತ್ಯಗೊಂಡಿತ್ತು. ಸೇನಾ ದಂಗೆಯೂ ವಿಫಲವಾಗಿತ್ತು. ಬೈನಿಮರಮ ವಿರುದ್ಧವೇ ಸೇನೆಯ ಒಂದು ಭಾಗ ತಿರುಗಿ ಬಿದ್ದಿತ್ತು.. ಆಗ ದಂಗೆ ಎದ್ದ ಸೈನಿಕರ ಮೇಲೆ ಪ್ರಧಾನಿ ಕರಾಸೆ ಮೃದುಧೋರಣೆ ತಾಳಿದ್ದಾರೆ ಎಂಬ ಅಸಹನೆ ಬೈನಿಮರಮ ಅವರಲ್ಲಿತ್ತು ಎಂದು ವಿಶ್ಲೇಷಿಸಲಾಯಿತು.
2006: ವಿಯೆಟ್ನಾಮಿನ ದಕ್ಷಿಣ ಭಾಗಗಳಲ್ಲಿ ಬಲವಾಗಿ ಅಪ್ಪಳಿಸಿದ ಡ್ಯೂರಿಯನ್ ಚಂಡಮಾರುತಕ್ಕೆ ಕನಿಷ್ಠ 38 ಮಂದಿ ಬಲಿಯಾದರು. ಘಟನೆಯಲ್ಲಿ ನೂರಾರು ಮನೆಗಳು ನಾಶವಾದವು.. ಫಿಲಿಪ್ಪೀನ್ಸಿನಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಇದೇ ಚಂಡಮಾರುತ ನೂರಾರು ಮಂದಿಯನ್ನು ಬಲಿ ತೆಗೆದುಕೊಂಡಿತ್ತು. ಭಾರಿ ಮಳೆಯೊಂದಿಗೆ ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಬಂದ ಚಂಡಮಾರುತ, ವಿಯೆಟ್ನಾಮಿನ ಪ್ರಮುಖ ಕೃಷಿ ಪ್ರದೇಶವಾದ ಮೆಕಾಂಗಿನಲ್ಲಿ ಭಾರಿ ಹಾನಿ ಉಂಟುಮಾಡಿತು.
2005: ಇಂಗ್ಲೆಂಡಿನಲ್ಲಿ ಸಲಿಂಗಕಾಮಿಗಳ ಮದುವೆಗೆ ಮಾನ್ಯತೆ ಒದಗಿಸುವ ಸಿವಿಲ್ ಪಾರ್ನರ್ ಶಿಪ್ ಆಕ್ಟ್ ಜಾರಿಗೆ ಬಂದಿತು. ಈ ಕಾಯ್ದೆಯ ಪ್ರಕಾರ ಸಲಿಂಗಕಾಮಿ ಜೋಡಿಗಳು ರಿಜಿಸ್ಟ್ರಾರ್ ಮತ್ತು ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಮದುವೆ ದಾಖಲಾತಿ ಮಾಡಿಕೊಳ್ಳಬಹುದು. ಈ ನೋಂದಣಿ ಅವರಿಗೆ ದಂಪತಿ ಮಾದರಿಯಲ್ಲೇ ಒಬ್ಬನು(ಳು) ಮೃತನಾದರೆ ಆತನ ಜೋಡಿ ಹುಡುಗ(ಗಿ)ನಿಗೆ ಮೃತನ(ಳ) ಪಿಂಚಣಿ, ಆಸ್ಪತ್ರೆ ಹಕ್ಕುಗಳನ್ನು ಒದಗಿಸುತ್ತದೆ. ಜೋಡಿಯ ಮನೆಯಿಂದ ಲಭಿಸುವ ಆಸ್ತಿಗೆ ತೆರಿಗೆ ವಿನಾಯ್ತಿ ಸಿಗುತ್ತದೆ. ವಿಚ್ಛೇದನಾ ನಿಯಮಗಳ ಪ್ರಕಾರ ಅವರು ಈ ದಾಂಪತ್ಯ ಒಪ್ಪಂದವನ್ನು ವಿಸರ್ಜನೆ ಮಾಡಲೂ ಈ ಕಾಯ್ದೆ ಅವಕಾಶ ನೀಡಿದೆ.
2005: ಅಶಿಸ್ತು ಹಾಗೂ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡದ್ದಕ್ಕಾಗಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಯಿತು.
2005: ಇರಾಕಿನ ಆಹಾರಕ್ಕಾಗಿ ತೈಲ ಕಾರ್ಯಕ್ರಮದ ಲಾಭ ಪಡೆದಿದ್ದಾರೆ ಎಂಬುದಾಗಿ ವೋಲ್ಕರ್ ಸಮಿತಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಹೆಚ್ಚಿದ ಒತ್ತಡಕ್ಕೆ ಕೊನೆಗೂ ಮಣಿದ ಕೇಂದ್ರ ಸಚಿವ ಕೆ. ನಟವರ್ ಸಿಂಗ್ ರಾಜೀನಾಮೆ ನೀಡಲು ಮುಂದೆ ಬಂದರು. ಮಾಸ್ಕೊ ಭೇಟಿಯಲ್ಲಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ನಟವರ್ ಸಿಂಗ್ ಪ್ರಧಾನಿ ಪ್ರವಾಸದಿಂದ ವಾಪಸಾದೊಡನೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದರು.
2000: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮಹಮ್ಮದ್ ಅಜರುದ್ದೀನ್ ಮತ್ತು ಅಜಯ್ ಶರ್ಮಾ ಅವರನ್ನು ಮ್ಯಾಚ್ ಫಿಕ್ಸಿಂಗ್ ಮತ್ತು ಲಂಚ ಪಡೆದ ಆರೋಪದಲ್ಲಿ ಇಡೀ ಜೀವಮಾನದ ಅವಧಿಗೆ ಡಿಬಾರ್ ಮಾಡಿತು. ಅಜಯ್ ಜಡೇಜಾ, ಮನೋಜ್ ಪ್ರಭಾಕರ್ ಮತ್ತು ಫಿಸಿಯೋ ಥೆರೆಪಿಸ್ಟ್ ಅಲಿ ಇರಾನಿ ಅವರಿಗೆ ಐದೈದು ವರ್ಷಗಳ ನಿಷೇಧ ವಿಧಿಸಲಾಯಿತು.
1994: ಸಂಸತ್ತಿಗೆ ವಿ.ಪಿ. ಸಿಂಗ್ ರಾಜೀನಾಮೆ ಸಲ್ಲಿಸಿದರು.
1965: ಸಾಹಿತಿ ವಿದ್ಯಾ ಉಮೇಶ್ ಜನನ.
1961: ಸಾಹಿತಿ ಕಬ್ಬಿನಾಲೆ ವಸಂತ ಭಾರಧ್ವಾಜ್ ಜನನ.
1959: ಭಾರತದ ಖ್ಯಾತ ಕ್ರಿಕೆಟ್ ಪಟು ದುಲೀಪ್ ಸಿನ್ಹಜಿ ಅವರು ನಿಧನರಾದರು.
1950: ಶ್ರೀ ಅರವಿಂದ ಘೋಷ್ ಅವರು ತಮ್ಮ 78ನೇ ವಯಸ್ಸಿನಲ್ಲಿ ಪಾಂಡಿಚೇರಿಯಲ್ಲಿ `ಮಹಾಸಮಾಧಿ' ಹೊಂದಿದರು.
1943: ಕಲ್ಕತ್ತ (ಈಗ ಕೋಲ್ಕತ್ತ) ಬಂದರಿನ ಮೇಲೆ ಜಪಾನ್ ವಿಮಾನದಾಳಿ ನಡೆಸಿತು.
1940: ಸಾಹಿತಿ ಗೀತಾ ಸಿ.ವಿ. ಜನನ.
1939: ಸಾಹಿತಿ ಚಿರಂಜೀವಿ ಜನನ.
1932: ನವಾಬ್ ಪಟೌಡಿ ಸೀನಿಯರ್ ಇಂಗ್ಲೆಂಡ್ ಪರವಾಗಿ ತಮ್ಮ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕೆ ಚೊಚ್ಚಲ ಹೆಜ್ಜೆ ಇರಿಸಿದರು. ಭಾರತದ ಇತರ ಇಬ್ಬರು ಕ್ರಿಕೆಟ್ ಪಟುಗಳಾದ ರಣಜಿತ್ ಸಿನ್ಹಜಿ ಮತ್ತು ದುಲೀಪ್ ಸಿನ್ಹಜಿ ಅವರಂತೆ ಶತಕ ಸಿಡಿಸಿದರು.
1913: ಸಾಹಿತಿ ವಿಶಾಲಾಕ್ಷಿ ಲಕ್ಷ್ಮಣಗೌಡ ಜನನ.
1908: ಕಾವ್ಯ, ನಾಟಕ, ಶಿಶುಸಾಹಿತ್ಯ ಇತ್ಯಾದಿ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ದುಡಿದ ಜಿ.ಪಿ. ರಾಜರತ್ನಂ (5-12-1908ರಿಂದ 13-3-1979) ಅವರು ಪಿ. ಗೋಪಾಲಕೃಷ್ಣ ಅಯ್ಯಂಗಾರ್ ಮಗನಾಗಿ ರಾಮನಗರದಲ್ಲಿ ಜನಿಸಿದರು.
1905: ಸ್ವಾತಂತ್ರ್ಯ ಹೋರಾಟಗಾರ ಷೇಕ್ ಮಹಮ್ಮದ್ ಅಬ್ದುಲ್ಲ (1905-1982) ಹುಟ್ಟಿದ ದಿನ. ಕಾಶ್ಮೀರಿಗಳಿಗೆ ವಿಶೇಷ ಹಕ್ಕುಗಳನ್ನು ಪಡೆಯುವ ಸಲುವಾಗಿಯೂ ಹೋರಾಡಿದ ಇವರು ಭಾರತದೊಳಗೇ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಪಡೆಯುವಲ್ಲಿ ಸಫಲರಾದರು.
1901: ವಾಲ್ಟೇರ್ ಎಲಿಯಾಸ್ ಡಿಸ್ನಿ (1901-1966) ಹುಟ್ಟಿದ ದಿನ. `ಮಿಕ್ಕಿ ಮೌಸ್', `ಡೊನಾಲ್ಡ್ ಡಕ್'ಗಳಂತಹ ಕಾರ್ಟೂನ್ ಪಾತ್ರಗಳನ್ನು ನಿರ್ಮಿಸಿದ `ವಾಲ್ಟ್ ಡಿಸ್ನಿ' ಅನಿಮೇಷನ್ ಚಿತ್ರಗಳನ್ನು ಮೊತ್ತ ಮೊದಲಿಗರಾಗಿ ನಿರ್ಮಿಸಿದ ಅಮೆರಿಕನ್.
1776: ಲಂಡನ್ನಿನ ಪಾಲ್ ಮಾಲ್ನಲ್ಲಿ `ಹರಾಜು ಮನೆ' (ಆಕ್ಷನ್ ಹೌಸ್) ಸ್ಥಾಪಿಸಿದ ಮಾಜಿ ನೌಕಾ ಅಧಿಕಾರಿ ಜೇಮ್ಸ್ ಕ್ರಿಸ್ಟೀ ದಿ ಎಲ್ಡರ್ (1730-1803) ತನ್ನ ಮಳಿಗೆಯಲ್ಲಿ ಮೊದಲ ಮಾರಾಟ ನಡೆಸಿದ. ಥಾಮಸ್ ಗೇನ್ಸ್ ಬರೋ, ಸರ್ ಜೊಶುವಾ ರೇನಾಲ್ಡ್ಸ್, ಥಾಮಸ್ ಚಿಪ್ಪಾಂಡೇಲ್ ಅವರಂತಹ ಕಲಾವಿದರಿಗೆ ಜೇಮ್ಸ್ ಗೆಳೆಯನಾದ. ಆತನ `ಹರಾಜುಮನೆ' ಕಲಾಕೃತಿಗಳನ್ನು ಕೊಳ್ಳುವವರು- ಮಾರುವವರಿಗೆ ಕೇಂದ್ರವಾಯಿತು. 1859ರಲ್ಲಿ ಸಂಸ್ಥೆ ಈಗಿನ `ಕ್ರಿಸ್ಟೀ, ಮ್ಯಾನ್ಸನ್ ಅಂಡ್ ವುಡ್ಸ್' ಹೆಸರನ್ನು ಪಡೆದುಕೊಂಡಿತು. 1973ರಲ್ಲಿ ಸಾರ್ವಜನಿಕ ಕಂಪೆನಿಯಾಯಿತು.
1456: ನೇಪಾಳದಲ್ಲಿ ಭೂಕಂಪದಿಂದ 35,000 ಜನ ಮೃತರಾದರು.
No comments:
Post a Comment