Monday, December 3, 2018

ಇಂದಿನ ಇತಿಹಾಸ History Today ಡಿಸೆಂಬರ್ 03

ಇಂದಿನ ಇತಿಹಾಸ History Today ಡಿಸೆಂಬರ್  03
2018: ಕೊಲಂಬೋ: ಉಸ್ತುವಾರಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸದಂತೆ ಮಹಿಂದ ರಾಜಪಕ್ಸೆ ಅವರನ್ನು ಶ್ರೀಲಂಕೆಯ ನ್ಯಾಯಾಲಯವೊಂದು ನಿಷೇಧಿಸಿತು. ಇದರೊಂದಿಗೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ ಭಾರೀ ಹಿನ್ನಡೆಯಾಯಿತು. ವಿವಾದಾತ್ಮಕ ನಿರ್ಧಾರ ಒಂದರಲ್ಲಿ ಸಿರಿಸೇನಾ ಅವರು ರಾನಿಲ್ ವಿಕ್ರಮ ಸಿಂಘೆ ಅವರ ಸ್ಥಾನಕ್ಕೆ ಮಹಿಂದ ರಾಜಪಕ್ಸೆ ಅವರನ್ನು ನೇಮಕ ಮಾಡಿದ್ದರು. ಮೇಲ್ಮನವಿ ನ್ಯಾಯಾಲಯವು ರಾಜಪಕ್ಸೆ ಮತ್ತು ಅವರ ಸರ್ಕಾರದ ವಿರುದ್ಧ ನೋಟಿಸ್ ಮತ್ತು ಮಧ್ಯಂತರ ಆದೇಶವನ್ನು ನೀಡಿ ಪ್ರಧಾನಿಯಾಗಿ ಕಾರ್ ನಿರ್ವಹಿಸದಂತೆ ಹಾಗೂ ಅವರ ಸಂಪುಟ, ಉಪ ಸಚಿವರು ಕೂಡಾ ಕಾರ್ ನಿರ್ವಹಿಸದಂತೆ ನಿಷೇಧಿಸಿದೆ ಎಂದು ಕೊಲಂಬೋ ಗಜೆಟ್ ವರದಿ ಮಾಡಿತು. ರಾಜಪಕ್ಸೆ ಮತ್ತು ಅವರ ಸರ್ಕಾರದ ವಿರುದ್ಧ ೧೨೨ ಸಂಸತ್ ಸದಸ್ಯರು ದಾಖಲಿಸಿದ ಕ್ವೊ ವಾರಂಟೋ (ಯಾವ ಹಕ್ಕಿನ ಅಡಿಯಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ   ಎಂಬುದಾಗಿ ಪ್ರಶ್ನಿಸಲಾದ) ಪ್ರಕರಣದಲ್ಲಿ ನ್ಯಾಯಾಲಯವು ಆದೇಶವನ್ನು ನೀಡಿತು. ಅಧ್ಯಕ್ಷ ಸಿರಿಸೇನಾ ಅವರು ಅಕ್ಟೋಬರ್ ೨೬ರಂದು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿ ಅವರ ಸ್ಥಾನಕ್ಕೆ ಮಹಿಂದ ರಾಜಪಕ್ಸೆ ಅವರನ್ನು ನೇಮಕ ಮಾಡಿದಂದಿನಿಂದ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಸಿರಿಸೇನಾ ಅವರು ಬಳಿಕ ಸಂಸತ್ತನ್ನು ಅವಧಿ ಮುಗಿಯುವುದಕ್ಕೆ ೨೦ ತಿಂಗಳು ಮುಂಚಿತವಾಗಿಯೇ ವಿಸರ್ಜನೆ ಮಾಡಿ, ದಿಢೀರ್ ಚುನಾವಣೆಗೆ ಆದೇಶ ನೀಡಿದ್ದರು. ಆದರೆ ಸುಪ್ರೀಂಕೋರ್ಟ್ ಸಿರಿಸೇನಾ ಅವರ ಸಂಸತ್ ವಿಸರ್ಜನೆಯ ನಿರ್ಧಾರವನ್ನು ರದ್ದು ಪಡಿಸಿ ದಿಢೀರ್ ಚುನಾವಣೆಯ ಸಿದ್ಧತೆಗಳನ್ನು ಸ್ಥಗಿತಗೊಳಿಸಿತ್ತು. ವಿಕ್ರಮ ಸಿಂಘೆ ಮತ್ತು ರಾಜಪಕ್ಸೆ ಇಬ್ಬರೂ ತಾವು ಶ್ರೀಲಂಕೆಯ ಪ್ರಧಾನ ಮಂತ್ರಿಗಳು ಎಂಬುದಾಗಿ ಪ್ರತಿಪಾದಿಸುತ್ತಿದ್ದಾರೆ. ೨೨೫ ಸದಸ್ಯ ಬಲದ ಸಂಸತ್ತಿನಲ್ಲಿ ತಮಗೆ ಇನ್ನೂ ಬಹುಮತ ಇರುವುದರಿಂದ ತಮ್ಮನ್ನು ವಜಾಗೊಳಿಸಿರುವುದು ಅಸಿಂಧು ಎಂದು ವಿಕ್ರಮ ಸಿಂಘೆ ಪ್ರತಿಪಾದಿಸಿರು.  ಹುದ್ದೆಯಿಂದ ಕೆಳಗಿಳಿಯಲು ನಿರಾಕರಿಸಿರುವ ರಾಜಪಕ್ಸೆ ವಿರುದ್ಧ ಯುಎನ್ ಎಫ್ ಮೂರು ಅವಿಶ್ವಾಸ ನಿರ್ಣಯಗಳನ್ನು ಮಂಡಿಸಿತ್ತು.

2018: ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಆಲ್ ಇಂಡಿಯಾ ಮಜ್ಲಿಸ್ --ಇತ್ತೇಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಎಲ್ಲರೂ ಒಂದೇ ಎಂಬುದಾಗಿ ಹೇಳುವ ಮೂಲಕ ತಮ್ಮ ದಾಳಿಯನ್ನು ಪ್ರಖರಗೊಳಿಸಿದರು. ತೆಲಂಗಾಣದ ಡಿಸೆಂಬರ್ ೭ರ ವಿಧಾನಸಭಾ ಚುನಾವಣೆ ಸಲುವಾಗಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುವ ಮುನ್ನ ಟ್ವಿಟ್ಟರ್ ಮೂಲಕ ದಾಳಿ ನಡೆಸಿದ ಅವರುತೆಲಂಗಾಣದ ಮಹಾನ್ ಜನರೇ, ಮೋದಿ, ಕೆಸಿಆರ್ ಮತ್ತು ಓವೈಸಿ ಮೂವರೂ ಒಂದೇ. ಅವರು ತಿರುಚಿದ ನಾಲಿಗೆಗಳಲ್ಲಿ ಮಾತನಾಡುತ್ತಾರೆ. ಅವರ ಮಾತುಗಳಿಂದ ಮೂರ್ಖರಾಗಬೇಡಿ!’ ಎಂದು ಹೇಳಿದರು.  ‘ಟಿಆರ್ಎಸ್ ಬಿಜೆಪಿಯಬಿ ತಂಡವಾಗಿದ್ದು, ಕೆಸಿಆರ್ ಅವರು ಮೋದಿ ಅವರ ತೆಲಂಗಾಣದ ರಬ್ಬರ್ ಸ್ಯಾಂಪ್ (ಮೊಹರು) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಓವೈಸಿ ಅವರ ಎಐಎಂಐಎಂ ಪಕ್ಷವು ಬಿಜೆಪಿಯಸಿ ತಂಡವಾಗಿದ್ದು, ಬಿಜೆಪಿ/ ಕೆಸಿಆರ್ ವಿರೋಧಿ ಮತಗಳನ್ನು ಒಡೆಯುವ  ಪಾತ್ರ ವಹಿಸುತ್ತಿದೆ ಎಂದು ರಾಹುಲ್ ಗಾಂಧಿ ಟೀಕಿಸಿದರು. ಕಾಂಗ್ರೆಸ್ ಪಕ್ಷವು ತೆಲಂಗಾಣದಲ್ಲಿ ಎನ್. ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಪಕ್ಷ (ಟಿಡಿಪಿ), ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಮತ್ತು ಹೊಸದಾಗಿ ರಚನೆಯಾಗಿರುವ ತೆಲಂಗಾಣ ಜನ ಸಮಿತಿ (ಟಿಜೆಎಸ್ಜೊತೆಗೆ ಮೈತ್ರಿಕೂಟ ರಚಿಸಿಕೊಂಡು ರಾಜ್ಯದಲ್ಲಿ ಟಿಆರ್ಎಸ್ ಮತ್ತು ಬಿಜೆಪಿ ವಿರುದ್ಧ ಸೆಣಸಾಡುತ್ತಿದೆ. ಟಿಆರ್ಎಸ್ ಮತ್ತು ಬಿಜೆಪಿ ರಾಜ್ಯ ವಿಧಾನಸಭೆಗೆ ಪ್ರತ್ಯೇಕವಾಗಿ ಕಣಕ್ಕೆ ಇಳಿದಿವೆನವೆಂಬರ್ ೨೮ರಂದು, ರಾಹುಲ್ ಗಾಂಧಿ ಅವರು ತೆಲಂಗಾಣದಲ್ಲಿನ ಆಡಳಿತ ಪಕ್ಷವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮತ್ತು ಬಿಜೆಪಿಯಬಿ ತಂಡ ಎಂದು ಹೇಳಿದ್ದರು.  ‘ಟಿಆರ್ಎಸ್ ಅಂದರೆ ತೆಲಂಗಾಣ ರಾಷ್ಟ್ರ ಸಮಿತಿ ಅಲ್ಲ, ಅದು ತೆಲಂಗಾಣ ರಾಷ್ಟ್ರೀಯ ಸಂಘ ಪರಿವಾರ. ಅದು ಆರೆಸ್ಸೆಸ್ ಮತ್ತು ಬಿಜೆಪಿಯಬಿ ತಂಡ ಎಂದು ರಾಹುಲ್ ಗಾಂಧಿ ಅವರು ಕೋಸ್ಗಿಯಲ್ಲಿ ಚುನಾವಣಾ ಪ್ರಚಾರಸಭೆಯಲ್ಲಿ ಹೇಳಿದ್ದರು.

2018: ಮುಂಬಯಿ: ಮಹಾರಾಷ್ಟ್ರದ ಒಬ್ಬ ಈರುಳ್ಳಿ ಬೆಳೆಗಾರ ಈರುಳ್ಳಿಯನ್ನು ಕೆಜಿಗೆ ರೂಪಾಯಿಗಿಂತಲೂಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗಿ ಬಂದ ದುರವಸ್ಥೆಗೆ ಪ್ರತಿಭಟನೆಯಾಗಿ ಅದರ ಮಾರಾಟ ಮೂಲಕ ಬಂದ ತನ್ನಆದಾಯವನ್ನು ಪೂರ್ತಿಯಾಗಿಪ್ರಧಾನಿ ಪರಿಹಾರ ನಿಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದರು.  ನಾಸಿಕ್ ಜಿಲ್ಲೆಯ ನಿಫಡ್ ತೆಹ್ಸಿಲ್ ನಿವಾಸಿ ಸಂಜಯ್ ಸಾಥಿ ಅವರು ೨೦೧೦ ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗಿನ ಸಂವಾದಕ್ಕಾಗಿ ಕೇಂದ್ರ  ಕೃಷಿ ಸಚಿವಾಲಯದಿಂದ ಆರಿಸಲ್ಪಟ್ಟ ಪ್ರಗತಿಪg ರೈತರ ಪೈಕಿ ಒಬ್ಬರಾಗಿದ್ದರು.ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಸಾಥಿ ಅವರು, " ಋತುವಿನಲ್ಲಿ ನಾನು ೭೫೦ ಕೆ.ಜಿ. ಈರುಳ್ಳಿಯನ್ನು ಬೆಳೆದಿದ್ದೇನೆ. ಆದರೆ ಕಳೆದ ವಾರ ನಿಫಡ್ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ ರೂಪಾಯಿಗೆ ಖರೀದಿಸುವ ಪ್ರಸ್ತಾಪ ಮುಂದಿಡಲಾಯಿತು. ಮಾತುಕತೆ ಬಳಿಕ ಅಂತಿಮವಾಗಿ ನಾನು ಪ್ರತಿ ಕೆಜಿಗೆ .೪೦ ರೂಪಾಯಂತೆ ಒಪ್ಪಂದ ಮಾಡಿಕೊಂಡು ೭೫೦ ಕೆಜಿಗೆ ,೦೬೪ ರೂ. ಆದಾಯ ಪಡೆದೆ. ನಾಲ್ಕು ತಿಂಗಳ ಶ್ರಮದಲ್ಲಿ ಇಂತಹ ನಿಕೃಷ್ಟ  ಆದಾಯವನ್ನು ನೋಡುವುದು ಮನಸ್ಸಿಗೆ ನೋವುಂಟು ಮಾಡಿದೆ. ಹಾಗಾಗಿ  ,೦೬೪ ರೂಪಾಯಿಗಳನ್ನು  ಪ್ರಧಾನಿಯವರ ವಿಪತ್ತು ಪರಿಹಾರ ನಿಧಿಗೆ ಪ್ರತಿಭಟನೆಯಾಗಿ ದಾನ ಮಾಡಿದ್ದೇನೆ. ಹಣವನ್ನು ಕಳುಹಿಸಲು ಮನಿಯಾರ್ಡರ್ ಗೆ ಹೆಚ್ಚುವರಿಯಾಗಿ ರೂ ೫೪ ಪಾವತಿಸಬೇಕಾಯಿತು ಎಂದು ವಿವರಿಸಿದರು. "ನಾನು ಯಾವುದೇ ರಾಜಕೀಯ ಪಕ್ಷವನ್ನು ಪ್ರತಿನಿಧಿಸುತ್ತಿಲ್ಲ. ಆದರೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರದ ಬಗ್ಗೆ ಸಿಟ್ಟಿಗೆದ್ದಿದ್ದೇನೆ ಎಂದು ಅವರು ನುಡಿದರು. ಮನಿಯಾರ್ಡರನ್ನು  ನವೆಂಬರ್ ೨೯ ರಂದು ಭಾರತೀಯ ಅಂಚೆ ಇಲಾಖೆಯ ನಿಫಡ್ ಕಚೇರಿಯಿಂದ "ನರೇಂದ್ರ ಮೋದಿ, ಭಾರತದ ಪ್ರಧಾನ ಮಂತ್ರಿ" ಹೆಸರಿಗೆ ಕಳುಹಿಸಲಾಯಿತು. ಭಾರತದಲ್ಲಿ ಉತ್ಪಾದನೆಯಾಗುವ ಈರುಳ್ಳಿಯ ಶೇಕಡಾ ೫೦ರಷ್ಟು ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತದೆಎಂಟು ವರ್ಷಗಳ ಹಿಂದೆ ಒಬಾಮಾ ಅವರೊಂದಿಗಿನ ಭೇಟಿ ಬಗ್ಗೆ ಕೇಳಿದಾಗ, "ನಾನು ದೀರ್ಘಕಾಲದವರೆಗೆ ಟೆಲಿಕಾಂ ಆಪರೇಟರ್ ಮೂಲಕ ರೈತರಿಗೆ ನೀಡಲಾಗುತ್ತಿದ್ದ ಧ್ವನಿ ಆಧಾರಿತ ಸಲಹಾ ಸೇವೆಯನ್ನು  ಬಳಸಿಕೊಂಡು  ಹವಾಮಾನದ ಬದಲಾವಣೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ, ಮತ್ತು ನನ್ನ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದೆ ಎಂದು ಸಂಜಯ್ ಸಾಥಿ ನುಡಿದರು"ಆಲ್ ಇಂಡಿಯಾ ರೇಡಿಯೋದ (ಎಐಆರ್ಸ್ಥಳೀಯ ರೇಡಿಯೊ ಕೇಂದ್ರಗಳಲ್ಲಿ ಕೃಷಿಯಲ್ಲಿನ ನನ್ನ ಪ್ರಯೋಗಗಳ ಬಗ್ಗೆ ಮಾತನಾಡಲು ನನಗೆ ಆಹ್ವಾನಿಸಲಾಗುತ್ತಿತ್ತುಹಾಗಾಗಿ ಒಬಾಮಾಗೆ ಭೇಟಿ ನೀಡಿದಾಗ ಮುಂಬೈಯ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಒಂದು ಮಳಿಗೆ ಸ್ಥಾಪಿಸಲು ಕೃಷಿ ಸಚಿವಾಲಯ ನನ್ನನ್ನು ಆಯ್ಕೆ ಮಾಡಿತು. ದುಬಾಷಿಯೊಬ್ಬರ ಮೂಲಕ ನಾನು ಒಂದೆರಡು ನಿಮಿಷಗಳ ಕಾಲ ಒಬಾಮಾ ಅವರ ಜೊತೆಗೆ ಮಾತನಾಡಿದ್ದೆ ಎಂದು ಸಾಥಿ ಹೇಳಿದರು.

2018: ನವದೆಹಲಿ: ದೆಹಲಿ ಮುಖ್ಯ ಮಂತ್ರಿ ಅರವಿಂದ ಕೇಜ್ರಿ ವಾಲ್ ಮತ್ತು ಇತರೆ ಆರು ಮಂದಿಗೆ ೨೦೧೨ ಗಲಭೆ ಪ್ರಕರ ಣದಲ್ಲಿ ರಿಲೀಫ್ ಸಿಕ್ಕಿತು. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಮನೆಯ ಎದುರು ಗಲಭೆ ಸೃಷ್ಟಿಸಿದ ಆರೋಪದಿಂದ ಕೇಜ್ರಿವಾಲ್ ಅವರನ್ನು ದೆಹಲಿ ಕೋರ್ಟ್ ದೋಷಮುಕ್ತಗೊಳಿಸಿತು. ೨೦೧೨ರ ಆಗಸ್ಟ್ ೨೬ರಂದು ಮನ ಮನಮೋಹನ  ಸಿಂಗ್ ಅವರ ಮನೆ ಎದುರು ಕಲ್ಲಿ ದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಜ್ರಿವಾಲ್ ಮತ್ತು ಇತ ರರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿತ್ತು. ಪ್ರತಿಭಟನಾ ಕಾರರನ್ನು ನಿಯಂತ್ರಿಸಲು ಪೊಲೀಸರು ಹಲವು ಬಾರಿ ಟಿಯರ್ ಗ್ಯಾಸ್ ಬಳಸಿದ್ದರು. ಬ್ಯಾರಿಕೇಡ್ ಸೇರಿದಂತೆ ಹಲವು ಪರಿಕರಗಳಿಗೆ ಹಾನಿಯಾಗಿತ್ತು ಸಂಬಂಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೇಜ್ರಿವಾಲ್ ಮತ್ತು ಇತರೆ ಆರು ಮಂದಿಯ ವಿರುದ್ಧ ದೆಹಲಿ ಪೊಲೀಸರು ಸೆಕ್ಷನ್ ೧೪೭ (ಗಲಭೆ) ೧೪೮ (ಮಾರಕಾಸ್ತ್ರಗಳಿಂದ ದೊಂಬಿ ಗಲಾಟೆ) ಮತ್ತು ೧೪೯ (ಅಕ್ರಮವಾಗಿ ಗುಂಪುಗೂಡುವಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು ೨೦೧೨ರಲ್ಲಿ ನಡೆದ ಪ್ರಕರಣದ ತೀರ್ಪುನ್ನು ಸೋಮವಾರ ಪ್ರಕಟಿಸಿದರು. ಅರವಿಂದ್ ಕೇಜ್ರಿವಾಲ್, ಘನಶ್ಯಾಮ್, ಮಹೇಶ್, ದೀಪಕ್ ಚಾಬ್ರ, ರಂಜಿತ್ ಬಿಶತ್, ಅಮಿತ್ ಕುಮಾರ್ ಮತ್ತು ಗೌತಮ್ ಕುಮಾರ್ ಸಿಂಗ್ ಆರೋಪದಿಂದ ಮುಕ್ತಗೊಂಡರು.

2018: ಶ್ರೀನಗರ: ಇಸ್ಲಾಮಿಕ್ ಸ್ಟೇಟ್ ಆಫ್ ಜಮ್ಮು ಕಾಶ್ಮೀರ ಉಗ್ರ ಸಂಘಟನೆಗೆ ಸೇರಿದ್ದ ಕಾಶ್ಮೀರದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದರು. ಎಹ್ತಿಶಮ್ ಬಿಲಾಲ್ ಸೋಫಿ (೨೩) ಬಂಧಿತ. ಶ್ರೀನಗರ ನಿವಾಸಿಯಾಗಿರುವ ಈತ ಉತ್ತರಪ್ರದೇಶದ ಗ್ರೇಟರ್ ನೊಯ್ಡಾ ವಿಶ್ವವಿದ್ಯಾಲಯದ ಮೊದಲ ? ಪದವಿ ವಿದ್ಯಾರ್ಥಿಯಾಗಿದ್ದು ಅಕ್ಟೋಬರ್ ೨೮ ರಂದುದೆಹಲಿಯಿಂದ ನಾಪತ್ತೆಯಾಗಿ, ಐಎಸ್ಜೆಕೆಉಗ್ರ ಸಂಘಟನೆ ಸೇರಿದ್ದ ಈತನನ್ನು ಹಿಂದಿನ ದಿನ ಬಂಧಿಸಲಾಗಿತ್ತು. ಅಕ್ಟೋಬರ್ ೨೮ರಂದು ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಅಫ್ಘಾನಿಸ್ತಾನ ಮತ್ತು ಭಾರತದ ವಿದ್ಯಾರ್ಥಿಗಳ ಮಧ್ಯೆ ವಿವಾದ, ನೂಕು ನುಗ್ಗಲು ಉಂಟಾದ ಬಳಿಕ ಈತನಿಗೆ ದೆಹಲಿಗೆ ಹೋಗಲು ಅಧಿಕೃತವಾಗಿ ಅನುಮತಿ ಸಿಕ್ಕಿತ್ತು. ಅದಾದ ಬಳಿಕ ದೆಹಲಿಗೆ ಬಂದುಅಲ್ಲಿಂದ ಉಗ್ರ ಸಂಘಟನೆ ಸೇರಿಕೊಂಡಿದ್ದ ಎನ್ನಲಾಗಿತ್ತು. ಉತ್ತರ ಪ್ರದೇಶದ ಉಗ್ರ ವಿರೋಧಿ ದಳ ತನಿಖೆ ನಡೆಸಿ ಕಾಶ್ಮೀರಿ ಕಣಿವೆಯಲ್ಲಿ ಬಿಲಾಲ್ನನ್ನು ಪೊಲೀಸರು ಬಂಧಿಸಿದರು.. ಬಿಲಾಲ್ಉಗ್ರ ಸಂಘಟನೆ ತೊರೆದು ಮನೆಗೆ ಬರುವಂತೆ ಆತನ ಪಾಲಕರು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದರು. ಕಳೆದ ತಿಂಗಳು ಬಿಲಾಲ್ ಕಪ್ಪು ಬಣ್ಣದ ಧಿರಿಸು ತೊಟ್ಟು, ಶಸ್ತ್ರ ಮತ್ತು ಐಸಿಸ್ ಧ್ವಜ ಹಿಡಿದುಕೊಂಡಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು. ಮಧ್ಯೆ, ಕಾಣೆಯಾಗಿರುವ ತಮ್ಮ ಪುತ್ರನನ್ನು ಹುಡುಕಿಕೊಡುವಂತೆ ಬಿಲಾಲ್ ಪೋಷಕರು ಪೊಲೀಸರಲ್ಲಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರು.  ಮನೆಗೆ ಮರಳುವಂತೆ ಕುಟುಂಬದ ಸದಸ್ಯರು ಕೈಮುಗಿದು ಬೇಡಿಕೊಳ್ಳುತ್ತಿರುವ ಫೋಟೋ ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.ಹೆತ್ತವರ ಶವಮಂಚಕ್ಕೆ ಹೆಗಲು ನೀಡಲಾದರೂ ಮರಳಿ ಬಾ ಎಂದು ಭಾವನಾಪೂರ್ಣ ಮನವಿ ಮಾಡಿಕೊಂಡಿದ್ದರು.

ಅಲ್ಲದೆ ಕುಟುಂಬದ ಏಕೈಕ ಗಂಡುಸಂತಾನವಾಗಿರುವ ತಮ್ಮ ಮಗನನ್ನು ಮರಳಿ ಕಳಿಸುವಂತೆ ಭಯೋತ್ಪಾದಕ ಸಂಘಟನೆಗಳಿಗೂ ಮನವಿ ಮಾಡಿಕೊಂಡಿದ್ದರು.  ‘ಸ್ವರ್ಗವು ಹೆತ್ತವರ ಕಾಲಡಿಯಲ್ಲಿದೆ ಎಂದು ಹೇಳುತ್ತಿರುವ ನೀವು, ಇದೀಗ ನನ್ನ ಮಗನನ್ನು ಹೆತ್ತವರ ಬಳಿಗೆ ಕಳುಹಿಸಿ ನಮ್ಮೊಂದಿಗೆ ಮತ್ತೆ ಜೀವನ ನಡೆಸಲು ಅನುವು ಮಾಡಿಕೊಡಿ ಎಂದು ಬಿಲಾಲ್ ತಂದೆ ಕೋರಿದ್ದರು. ಇದೀಗ ಹೆತ್ತವರ ಪ್ರಾರ್ಥನೆ ಫಲಿಸಿದೆ. ರವಿವಾರ ಮಧ್ಯಾಹ್ನ ಬಿಲಾಲ್ ಮನೆಗೆ ಮರಳಿದ್ದಾನೆ. ತಕ್ಷಣ ಆತನನ್ನು ಪೊಲೀಸರ ತಂಡ ಬಂಧಿಸಿ ವೈದ್ಯಕೀಯ ನೆರವು ಒದಗಿಸುವ ಉದ್ದೇಶದಿಂದ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದೆ ಎಂದು ಬಿಲಾಲ್ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಕುಟುಂಬದ ಹಾಗೂ ಪೊಲೀಸರಸಹಾಯದಿಂದ ಓರ್ವ ವ್ಯಕ್ತಿಯನ್ನು ಸಮಾಜದ ಮುಖ್ಯವಾಹಿನಿಗೆ ಮರಳಿ ಕರೆತರಲಾಗಿದೆ ಎಂದು ಜಮ್ಮು-ಕಾಶ್ಮೀರದ ಪೊಲೀಸರು ಟ್ವೀಟ್ ಮಾಡಿದ್ದಾರೆ

2017: ಲಾಹೋರ್ : ಮುಂಬೈ ದಾಳಿಯ ಸಂಚುಕೋರ ಹಫೀಜ್ಸಯೀದ್ನೇತೃತ್ವದ ಜಮಾತ್‌- ಉದ್- ದವಾ (ಜೆಯುಡಿ) ಸಂಘಟನೆ ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿತು. ಮಿಲ್ಲಿ ಮುಸ್ಲಿಂ ಲೀಗ್ಹೆಸರಿನಲ್ಲಿ ಅದು ಸ್ಪರ್ಧಿಸಲಿದ್ದು, ಇನ್ನಷ್ಟೇ ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿದೆ. ನಿಷೇಧಿತ ಜೆಯುಡಿ, 2008 ಮುಂಬೈ ದಾಳಿಗೆ ಕಾರಣವಾದ ಲಷ್ಕರ್‌– ತೊಯ್ಬಾದ ಆಧೀನ ಸಂಘಟನೆ ಇದು ಎಂದು ನಂಬಲಾಗಿದೆ. ಚಾವ್ಬುರ್ಜಿ ಎಂಬಲ್ಲಿರುವ ಜೆಯುಡಿ ಮುಖ್ಯ ಕಚೇರಿಯಲ್ಲಿ ಅಂಕಣಕಾರರ ತಂಡದೊಂದಿಗೆ ಮಾತನಾಡಿದ ಹಫೀಜ್‌, 2018ನೇ ವರ್ಷವನ್ನು ಕಾಶ್ಮೀರದ ಜನರಿಗಾಗಿ ಅರ್ಪಿಸುವುದಾಗಿ ಹೇಳಿದ. ಏನೇ ಕಷ್ಟ ಬಂದರೂ ಕಾಶ್ಮೀರಿಗರಿಗೆ ನನ್ನ ಬೆಂಬಲ ಮುಂದುವರಿಯುತ್ತದೆ ಎಂಬುದನ್ನು ನಾನು ಭಾರತಕ್ಕೆ ತಿಳಿಸಬಯಸುತ್ತೇನೆ. ಕಾಶ್ಮೀರಿಗರ ಪರ ವಾಗಿ ನಾವು ಧ್ವನಿ ಎತ್ತಬಾರದು ಎಂದು ಬಯಸುವ ಭಾರತ, ಸಂಬಂಧ ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಹಿಂಬಾಗಿಲಿನ ರಾಜತಾಂತ್ರಿಕತೆಯು ಕಾಶ್ಮೀರ ವಿಷಯದಲ್ಲಿ ಇನ್ನಷ್ಟು ತೊಂದರೆಗಳನ್ನು ತಂದೊಡ್ಡುತ್ತದೆ ಎಂಬುದನ್ನು ಪಾಕಿಸ್ತಾನ ಅರಿಯಬೇಕುಎಂದು ಹೇಳಿದ.ನನ್ನನ್ನು ಗೃಹಬಂಧನದಿಂದ ಮುಕ್ತಗೊಳಿಸಿರುವುದಕ್ಕೆ ಭಾರತ ಆಕ್ರೋಶಗೊಂಡಿದೆ. ಕಾಶ್ಮೀರಿಗರ ಮೇಲಿನ ದೌರ್ಜನ್ಯ ನಿಲ್ಲಿಸದಿದ್ದರೆ ನಮ್ಮ ಹೋರಾಟ ಇನ್ನಷ್ಟು ಹೆಚ್ಚುತ್ತದೆ ಮತ್ತು ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆಎಂದು ಆತ ಎಚ್ಚರಿಸಿದ.
2017: ವಾಷಿಂಗ್ಟನ್‌ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ಟ್ರಂಪ್ತಮ್ಮ ಮೂರನೇ ತ್ರೈಮಾಸಿಕದ ವೇತನವನ್ನು ಆರೋಗ್ಯ ಮತ್ತು ಮಾನವಿಕ ಸೇವಾ ಇಲಾಖೆಗೆ ದಾನ ಮಾಡಿದರು. ಹಣವನ್ನು ವ್ಯಾಪಕವಾಗಿರುವ, ನೋವು ನಿವಾರಕ ಔಷಧ ಓಪಿಯಾಯ್ಡ್ವ್ಯಸನದ ಬಗ್ಗೆ ಜನಜಾಗೃತಿ ಮೂಡಿಸಲು ಬಳಸಿಕೊಳ್ಳಲಾಗುತ್ತದೆ. ಆರೋಗ್ಯ ಕಾರ್ಯದರ್ಶಿ ಎರಿಕ್ಹರ್ಗನ್ಅವರು ಸ್ವೀಕರಿಸಿರುವ ಚೆಕ್ನಲ್ಲಿ ಎಷ್ಟು ಮೊತ್ತದ ಹಣವಿದೆ ಎಂಬುದನ್ನು ತಿಳಿಸಿಲ್ಲ. ಓಪಿಯಾಯ್ಡ್ದುರ್ಬಳಕೆಯನ್ನು ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಅಕ್ಟೋಬರ್ನಲ್ಲಿ ಘೋಷಿಸಲಾಗಿದೆ.   ಔಷಧದ ಅತಿಯಾದ ಬಳಕೆಯಿಂದ ದಿನಕ್ಕೆ 175 ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ಹರ್ಗನ್ತಿಳಿಸಿದ್ದಾರೆ.
2016: ಮೊರಾದಾಬಾದ್ (ಉತ್ತರ ಪ್ರದೇಶ): ಬಡವರ ಜನಧನ ಖಾತೆಗಳಲ್ಲಿ ಕಾಳಧನ ತುಂಬಿದ ಅಪರಾಧಿಗಳನ್ನು ಸೆರೆಮನೆಗೆ ತಳ್ಳುವ ಮಾರ್ಗಗಳನ್ನು ಹುಡುಕಾಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈದಿನ  ಉತ್ತರ ಪ್ರದೇಶದ ಮೊರಾದಾಬಾದಿನಲ್ಲಿ  ಪ್ರಕಟಿಸಿದರು. ಪರಿವರ್ತನ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಅಗರ್ ಆಪ್ ವೋ ಪೈಸೆ ರಖೇ ರಖೋಗೆ ತೊ ಮೈ ಕುಚ್ ರಾಸ್ತಾ ನಿಕಾಲ್ ಲೂಂಗಾ, ಮೈ ಧಿಮಾಗ್ ಖಪಾ ರಹಾ ಹೂಂ ಅಭಿ ಎಂದು ಹೇಳಿದರು. ಭ್ರಷ್ಟರು ನಿಮ್ಮ ಜನಧನ ಖಾತೆಗಳಿಗೆ ಹಾಕಿದ ಹಣವನ್ನು ಮುಟ್ಟಬೇಡಿ ಎಂದು ಬಡ ಜನರಿಗೆ ಮನವಿ ಮಾಡಿದ ಪ್ರಧಾನಿ ಹಣ ಹಿಂತೆಗೆಯಲು ನಿಮ್ಮ ಮೇಲೆ ಹೆಚ್ಚಿನ ಒತ್ತಡ ಹಾಕಿದರೆ, ಹಣಕ್ಕೆ ಸಂಬಂಧಪಟ್ಟ ಲೆಕ್ಕಪತ್ರ ಕೇಳಿ ಎಂದು ಸಲಹೆ ಮಾಡಿದರು. ಕಪ್ಪು ಹಣ ಸಂಗ್ರಹಿಸಿ ಇಟ್ಟುಕೊಂಡವರು ಈಗ ಬಡವರ ಮನೆಗಳ ಮುಂದೆ ಕ್ಯೂ ನಿಂತುಕೊಂಡು ಸಹಾಯ ಮಾಡುವಂತೆ ಕೋರುತ್ತಿದ್ದಾರೆ. ಕೆಲವರಂತು ಹೋಗಿ ಬಡವರ ಕಾಲು ಹಿಡಿಯುತ್ತಿದ್ದಾರೆ. ಎಂದಾದರೂ ಯಾರಾದರೂ ಒಬ್ಬ ಶ್ರೀಮಂತ ಬಡವನ ಮನೆಗೆ ಹೋಗಿ ಕಾಲು ಹಿಡಿದುಕೊಂಡದ್ದನ್ನು ಎಲ್ಲಾದರೂ ನೋಡಿದ್ದೀರಾ? ಎಂದು ಪ್ರಧಾನಿ ಪ್ರಶ್ನಿಸಿದರು. ‘ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬಾರದೇ? ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಅಪರಾಧವೇ? ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವುದಕ್ಕಾಗಿ ಕೆಲವರು ನನ್ನನ್ನು ತಪ್ಪಿತಸ್ಥ ಎಂದು ಏಕೆ ಹೇಳುತ್ತಿದ್ದಾರೆ? ಭ್ರಷ್ಟಾಚಾರ ತಾನೇ ತಾನಾಗು ಹೊರಟುಹೋಗುತ್ತದೆಯೇ? ಅದನ್ನು ಬಡಿಗೆ ಹಿಡಿದು ಓಡಿಸಬೇಕಾದ ಅಗತ್ಯ ಇಲ್ಲವೇನು? ಭ್ರಷ್ಟಾಚಾರದ ವಿರುದ್ಧ ಯಾರಾದರೂ ಹೋರಾಡಿದರೆ ಅವರು ಅಪರಾಧಿಗಳೇನು? ಎಂದು ಪ್ರಶ್ನಿಸಿದ ಮೋದಿ ಇವರು ಹೆಚ್ಚೆಂದರೆ ಏನು ಮಾಡಿಯಾರು? ನಾನೊಬ್ಬ ಫಕೀರ. ಜೋಳಿಗೆ ಹಿಡಿದುಕೊಂಡು ಹೊರಟೇನು ಎಂದು ಮೋದಿ ನುಡಿದರು. ‘ಜನರೇ ನನ್ನ ಹೈಕಮಾಂಡ್ ಬೇರಾರೂ ಅಲ್ಲ ಎಂದು ಪ್ರಧಾನಿ ಹೇಳಿದರು.
 2016: ಹೇಗ್: ಯುಎಇಯಲ್ಲಿ ನೆಲೆಸಿದ 16 ವರ್ಷದ ಭಾರತೀಯ ಮೂಲದ ಪರಿಸರ
ಹೋರಾಟಗಾರ್ತಿ ಕೆಹಕಶನ್ ಬಸು ಅವರಿಗೆ ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿ ದೊರಕಿತು. ಹವಾಮಾನ ನ್ಯಾಯ ಮತ್ತು ಪರಿಹರ ಸಂರಕ್ಷಣೆ ಕುರಿತು ಹೋರಾಟ ನಡೆಸುತ್ತಿರುವ ಕೆಹಕಶನ್ ಬಸು ಅವರಿಗೆ ಹೇಗ್ನಲ್ಲಿ ನಡೆದ ಸಮಾರಂಭದಲ್ಲಿ ಬಾಂಗ್ಲಾದೇಶದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನುಸ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಗಾಗಿ 49 ದೇಶಗಳ 120 ಮಕ್ಕಳ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು. ಅಂತಿಮವಾಗಿ ಕೆಹಕಶನ್ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.  ಡಚ್ ಕಿಡ್ಸ್ ರೈಟ್ಸ್ ಫೌಂಡೇಶನ್ ಪ್ರಶಸ್ತಿಯನ್ನು ನೀಡುತ್ತದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಬಸು ನಾನು ನನ್ನ ಕೆಲಸವನ್ನು ಮುಂದುವರೆಸುತ್ತೇನೆ. ನಾವು ಇಂದು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ, ಮಕ್ಕಳು ಮತ್ತು ಹಿರಿಯರು ಸುಸ್ಥಿರ ಭವಿಷ್ಯವನ್ನು ಸೃಷ್ಟಿಸಲು ನಾನು ನನ್ನ ಹೋರಾಟದ ಮೂಲಕ ಪ್ರೋತ್ಸಾಹಿಸುತ್ತೇನೆ ಎಂದು ತಿಳಿಸಿದರು. ಕೆಹಕಶನ್ ತಮ್ಮ 8ನೇ ವಯಸ್ಸಿನಲ್ಲಿ ನೆರೆಹೊರೆಯವರಿಗೆ ಪರಿಸರದ ಮಹತ್ವ ಕುರಿತು ತಿಳಿಸಿಕೊಡುವ ಮೂಲಕ ಪರಿಸರ ಸಂರಕ್ಷಣೆಯ ತಮ್ಮ ಅಬಿಯಾನವನ್ನು ಆರಂಭಿಸಿದರು. ನಂತರ ಆಕೆ ಗ್ರೀನ್ ಹೋಪ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಪರಿಸರ ಜಾಗೃತಿ ಮೂಡಿಸಿದ್ದಾರೆ. ಜತೆಗೆ ಈಕೆ ವಿಶ್ವಸಂಸ್ಥೆಯ ಮಕ್ಕಳ ಮತ್ತು ಯುವ ಪರಿಸರ ಕಾರ್ಯಕ್ರಮದ ಅತಿ ಕಿರಿಯ ಸಂಯೋಜಕಿಯಾಗಿ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ.
2016: ಮೊಹಾಲಿ: 2000 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸುವ
ದಂಧೆಯಲ್ಲಿ ತೊಡಗಿದ್ದ ಯುವ ಎಂಜಿನಿಯರ್‍‍ನ್ನು ಪೊಲೀಸರು ಬಂಧಿಸಿದರು. ಮೇಕ್ ಇನ್ ಇಂಡಿಯಾ ಪ್ರಶಸ್ತಿ ಪುರಸ್ಕೃತ ಅಭಿನವ್ ವರ್ಮಾ ಎಂಬ ಎಂಜಿನಿಯರ್ ನಕಲಿ ನೋಟು ಮುದ್ರಿಸಿ ಪಂಜಾಬ್ ಪೊಲೀಸರ ಕೈಗೆ ಸಿಕ್ಕಿ ಬಿದ್ದ ವ್ಯಕ್ತಿ.  ಈತನ ಬಳಿ  2000 ರೂಪಾಯಿ ಮುಖಬೆಲೆಯ 42 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳು ಪತ್ತೆಯಾದವು. ನಕಲಿ ನೋಟು ಮುದ್ರಣದಲ್ಲಿ ತೊಡಗಿದ್ದ ಅಭಿನವ್ ವರ್ಮಾರ ಸಂಬಂಧಿ ವಿಶಾಖಾ ವರ್ಮಾ ಮತ್ತು ಲೂಧಿಯಾನಾ ಮೂಲದ ದಲ್ಲಾಳಿ ಸುಮನ್ ನಾಗ್ಪಾಲ್  ಅವರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡರು. ರದ್ದು ಮಾಡಲಾಗಿರುವ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಜನರಿಂದ ಸ್ವೀಕರಿಸಿ, ವರ್ಮಾ ಅವರು 2000 ರೂ. ಮುಖಬೆಲೆಯ ನಕಲಿ ನೋಟುಗಳನ್ನು ನೀಡುತ್ತಿದ್ದರು. ರೀತಿ ನೋಟು ಬದಲಾವಣೆ ಮಾಡಿದುದಕ್ಕೆ ಅವರು ಶೇ.30ರಷ್ಟು ಕಮಿಷನ್ ಕೂಡಾ ಪಡೆಯುತ್ತಿದ್ದರು. ಮೂವರು ಆರೋಪಿಗಳನ್ನು ಮೊಹಾಲಿಯಲ್ಲಿ ನವೆಂಬರ್ 30ರಂದು ಬಂಧಿಸಿದ್ದು, ಅವರು ಬಳಸುತ್ತಿದ್ದ ಹೊಸ ಐಷಾರಾಮಿ ಕಾರುಗಳಾದ ಆಡಿ ಎಸ್ಯುವಿಯನ್ನು ವಶಪಡಿಸಿಕೊಂಡಿದ್ದೇವೆ ಎಂದು ಮೊಹಾಲಿ ಎಸ್ಪಿ ಪರ್ಮಿಂದರ್ ಸಿಂಗ್  ಹೇಳಿದರು.  2015ರಲ್ಲಿ ಅಂಧರಿಗೆ ವಾಕಿಂಗ್ ಸ್ಟಿಕ್ ಇಲ್ಲದೆಯೇ ನಡೆದಾಡಲು ಸಹಾಯವಾಗುವ ಉಪಕರಣವಾದ ಲಿವ್ ಬ್ರೈಲಿ ತಯಾರಿಸಿ ಅಭಿನವ್ ಗಮನ ಸೆಳೆದಿದ್ದ. ಈತ ತಯಾರಿಸಿದ ಉಪಕರಣವನ್ನು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಪ್ರದರ್ಶಿಸಿ ಪ್ರಶಸ್ತಿ ನೀಡಲಾಗಿತ್ತು.
2016: ಕೋಲ್ಕತ: ಪಶ್ಚಿಮ ಬಂಗಾಳದ ಟೋಲ್ ಪ್ಲಾಜಾಗಳಲ್ಲಿ ಸೇನೆ ನಿಯೋಜನೆ ವಿಷಯ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಮತ್ತು ಪಶ್ಚಿಮಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡುವೆ ವಾಗ್ಯುದ್ಧಕ್ಕೆ ಕಾರಣವಾಯಿತು. ಸೇನೆಯಂತಹ ಜವಾಬ್ದಾರಿಯುತ ಸಂಘಟನೆ ವಿರುದ್ಧ ಆಪಾದನೆ ಮಾಡುವಾಗ ತುಂಬ ಎಚ್ಚರಿಕೆಯಿಂದ ಇರಬೇಕು ಎಂದು ಹೇಳುವ ಮೂಲಕ ಸೇನಾ ಕವಾಯತಿನ ಬಗ್ಗೆ ತ್ರಿಪಾಠಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪರವಾಗಿ ನಿಲ್ಲಲು ವಸ್ತುಶಃ ನಿರಾಕರಿಸಿದರು. ರಾಜ್ಯಪಾಲರ ಹೇಳಿಕೆಯಿಂದ ರೊಚ್ಚಿಗೆದ್ದ ಮಮತಾ ಬ್ಯಾನರ್ಜಿ ಅವರು ರಾಜ್ಯಪಾಲರು ಕೇಂದ್ರ ಸರ್ಕಾರದ ಧ್ವನಿಯಲ್ಲಿ ಮಾತನಾಡಿದ್ದಾರೆ ಎಂದು ಟೀಕಿಸಿದರು. ರಾಜ್ಯಪಾಲರು ಕೇಂದ್ರ ಸರ್ಕಾರದ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಅವರು ಎಂಟು ದಿನಗಳ ಕಾಲ ನಗರದಲ್ಲಿ ಇರಲಿಲ್ಲ. ಹೇಳಿಕೆ ನೀಡುವ ಮುನ್ನ ಎಲ್ಲ ವಿವರಗಳನ್ನೂ ಅವರು ಪರಾಂಬರಿಸಬೇಕಿತ್ತು. ರಾಜ್ಯಪಾಲರ ಹೇಳಿಕೆ ದುರದೃಷ್ಟಕರ ಎಂದು ಮಮತಾ ಟ್ವೀಟ್ ಮಾಡಿದರು. ತೃಣಮೂಲ ಕಾಂಗ್ರೆಸ್ ಶಾಸಕರು ಮತ್ತು ಸಚಿವರು ಶುಕ್ರವಾರ ಕೋಲ್ಕತ ರಾಜಭವನದ ಮುಂದೆ ಪ್ರದರ್ಶನ ನಡೆಸಿ ಟೋಲ್ ಪ್ಲಾಜಾಗಳಿಂದ ಸೇನೆಯನ್ನು ತತ್ ಕ್ಷಣ ಹಿಂದಕ್ಕೆ ಕರೆಸಬೇಕು ಎಂದು ಅಗ್ರಹಿಸಿದ್ದರು. ಆದರೆ ರಾಜ್ಯಪಾಲರು ನಗರದಲ್ಲಿ ಇಲ್ಲದೇ ಇದ್ದುದರಿಂದ ರಾಜ್ಯಪಾಲರನ್ನು ಭೇಟಿ ಮಾಡಲು ಅವರಿಗೆ ಸಾಧ್ಯವಾಗಿರಲಿಲ್ಲ.
2016: ನವದೆಹಲಿ: ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯ ಅಧಿಕಾರಿಗಳು ತಮ್ಮ ಸಂಬಳವನ್ನು ಪಡೆಯಲು ಬ್ಯಾಂಕ್ ಹೆಚ್ಚುವರಿ ನಿಬಂಧನೆಗಳನ್ನು ವಿಧಿಸಿರುವುದನ್ನು ವಿರೋಧಿಸಿ ಪಾಕಿಸ್ತಾನವು ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು ಕಿಡಿ ಕಾರಿತು. ರಾಯಭಾರ ಕಚೇರಿಯ ಅಧಿಕಾರಿಗಳು ತಮ್ಮ ಸಂಬಳವನ್ನು ಡಾಲರ್ ರೂಪದಲ್ಲಿ ಪಡೆಯಲು ಬ್ಯಾಂಕಿನಲ್ಲಿ ಹೆಚ್ಚುವರಿ ನಿಬಂಧನೆಗಳನ್ನು ವಿಧಿಸಲಾಗಿದೆ. ಹೊಸ ನಿಬಂಧನೆಗಳನ್ನು ಕಳೆದ ವಾರದಿಂದ ಜಾರಿಗೆ ತರಲಾಗಿದೆ. ಹೊಸ ನಿಬಂಧನೆ ಪ್ರಕಾರ ಪಾಕ್ ಅಧಿಕಾರಿಗಳು ತಾವು ಯಾವುದಕ್ಕೆ ಹಣವನ್ನು ಖರ್ಚು ಮಾಡುತ್ತೇವೆ ಎಂಬುದನ್ನು ಅರ್ಜಿಯಲ್ಲಿ ನಮೂದಿಸಬೇಕು. ಜತೆಗೆ ತಾವು ಪಡೆಯುವ ಡಾಲರ್ ಅನ್ನು ಅದೇ ಬ್ಯಾಂಕಿನಲ್ಲಿ ಬದಲಿಸಿಕೊಳ್ಳಬೇಕು ಎಂಬ ನಿಬಂಧನೆ ವಿಧಿಸಲಾಗಿದೆ. ಇದನ್ನು ನಾವು ವಿರೋಧಿಸುತ್ತೇವೆ. ಬ್ಯಾಂಕ್ ಕೇವಲ ಪಾಕ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಹೊಸ ನಿಬಂಧನೆ ಜಾರಿಗೆ ತಂದಿದೆ. ಉಳಿದ ದೇಶಗಳ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ನಿಬಂಧನೆಗಳು ಅನ್ವಯವಾಗುತ್ತಿಲ್ಲ ಎಂದು ಪಾಕಿಸ್ತಾನ ತನ್ನ ಪತ್ರದಲ್ಲಿ ತಿಳಿಸಿತು. ಜೊತೆಗೆ ಇಸ್ಲಾಮಾಬಾದಿನಲ್ಲಿರುವ  ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳಿಗೂ ಸಹ ಸಂಬಳವನ್ನು ಬ್ಯಾಂಕಿನಿಂದ ಪಡೆಯಲು ಹೆಚ್ಚುವರಿ ನಿಬಂಧನೆ ವಿಧಿಸುವುದಾಗಿ ಪಾಕ್ ಬೆದರಿಕೆ ಒಡ್ಡಿತು. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಹಲವು ಹಿರಿಯ ಅಧಿಕಾರಿಗಳು ತಮ್ಮ ಸಂಬಳವನ್ನು ಬ್ಯಾಂಕಿನಿಂದ ಡ್ರಾ ಮಾಡದೆ ಪ್ರತಿಭಟನೆ ನಡೆಸಿದರು. ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಪಾಕಿಸ್ತಾನದ ಆರೋಪವನ್ನು ತಳ್ಳಿ ಹಾಕಿದ್ದು, ಸಂಬಳ ಪಡೆಯಲು ಯಾವುದೇ ನಿಬಂಧನೆ ವಿಧಿಸಲಾಗಿಲ್ಲ ಎಂದು ತಿಳಿಸಿದರು.
 2016: ಜಕಾರ್ತ (ಇಂಡೋನೇಷ್ಯಾ): ಹದಿನಾರು ಮಂದಿ ಇದ್ದ ವಿಮಾನವೊಂದು ಪಶ್ಚಿಮ ಇಂಡೋನೇಷ್ಯಾದ ಬಟಾಮ್ ದ್ವೀಪದ ಬಳಿ ಸಮುದ್ರ ದಾಟುತ್ತಿದ್ದಾಗ ಸಂಪರ್ಕ ಕಳೆದುಕೊಂಡಿದೆ ಎಂದು ಇಂಡೋನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಕಚೇರಿಯ ವಕ್ತಾರ ಮಾರ್ಸುಡಿ ತಿಳಿಸಿದರು. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳ ಬಂದಿಲ್ಲ ಎಂದು ಕ್ಷಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿತು.
 2016: ಕಾನ್ಪುರ: ಹಣ ಪಡೆಯಲು ಬ್ಯಾಂಕಿನಲ್ಲಿ ಬೆಳಗ್ಗೆಯಿಂದಲೂ ಕ್ಯೂನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಸಂಜೆ ವೇಳೆಗೆ ಬ್ಯಾಂಕಿನಲ್ಲೇ  ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರ ದೆಹತ್ ಜಿಲ್ಲೆಯಲ್ಲಿ ಡಿ.2ರಂದು ಘಟಿಸಿತು. ಸರ್ವೆಶ (30) ಎಂಬ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಮಗು ಮತ್ತು ತಾಯಿ ಇಬ್ಬರು ಆರೋಗ್ಯದಿಂದಿದ್ದಾರೆ. ಆಕೆ ಹಣ ಪಡೆಯುವ ಸಲುವಾಗಿ ಡಿಸೆಂಬರ್ 1ರಂದು ಬ್ಯಾಂಕಿಗೆ ತೆರಳಿದ್ದರು, ಆದರೆ ಹಣ ಸಿಗದಿದ್ದ ಕಾರಣ ಡಿ.2ರಂದು ಮತ್ತೆ ಬ್ಯಾಂಕಿಗೆ ತೆರಳಿ ಕ್ಯೂನಲ್ಲಿ ನಿಂತಿದ್ದರು. ಬೆಳಗ್ಗೆಯಿಂದಲೂ ಕ್ಯೂನಲ್ಲಿ ನಿಂತಿದ್ದ ಸರ್ವೆಶ ಅವರಿಗೆ ಸಂಜೆ 4 ಗಂಟೆ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ತತ್ ಕ್ಷಣ ಜನರು ಆಂಬ್ಯುಲೆನ್ಸಿಗೆ ಕರೆ ಮಾಡಿದರು.  ಆದರೆ ಆಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಆಗಮಿಸದ ಕಾರಣ ಸ್ಥಳದಲ್ಲಿದ್ದ ಮಹಿಳೆಯರು ಈಕೆಗೆ ಹೆರಿಗೆ ಮಾಡಿಸಿದರು. ನಂತರ ಪೊಲೀಸರು ತಾಯಿ ಮತ್ತು ಮಗುವನ್ನು ತಮ್ಮ ಜೀಪ್ನಲ್ಲಿ ಆಸ್ಪತ್ರೆಗೆ ದಾಖಲಿಸಿದರು. ಸರ್ವೆಶ ಅವರ ಪತಿ ಸೆಪ್ಟೆಂಬರ್ ತಿಂಗಳಿನಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ಅಪಘಾತದ ಪರಿಹಾರವಾಗಿ ಮೊದಲ ಕಂತಿನಲ್ಲಿ 2.75 ಲಕ್ಷ ರೂ.ಗಳನ್ನು ಪಾವತಿಸಲಾಗಿತ್ತು. ಹಾಗಾಗಿ ಆಕೆ ಹಣವನ್ನು ಪಡೆಯಲು ಬ್ಯಾಂಕಿಗೆ ಆಗಮಿಸಿದ್ದರು ಎಂದು ಆಕೆಯ ಅತ್ತೆ ತಿಳಿಸಿದರು..

2016: ಅಹಮದಾಬಾದ್: ತಮ್ಮ ಬಳಿ 13,000 ಕೋಟಿ ರೂಪಾಯಿಗೂ ಹೆಚ್ಚಿನ ಕಾಳಧನ ಇರುವುದಾಗಿ ಅಕ್ಟೋಬರ್ ತಿಂಗಳಲ್ಲಿ ಆದಾಯ ಘೋಷಣೆ ಯೋಜನೆಯ ಅಡಿಯಲ್ಲಿ ಘೋಷಿಸಿದ ಬಳಿಕ ವಾರದ ಹಿಂದೆ ಕಣ್ಮರೆಯಾಗಿದ್ದ ಅಹಮದಾಬಾದ್ ಮೂಲದ ಉದ್ಯಮಿ ಮಹೇಶ್ ಷಾ ಸಂಜೆ ವೇಳೆಗೆ ಪ್ರತ್ಯಕ್ಷರಾದರು. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು ತಾವು ಕಮಿಷನ್ ಸಲುವಾಗ ಕಾಳಧನ ಇರುವುದಾಗಿ ಘೋಷಿಸಿರುವುದಾಗಿ ಹೇಳಿದರು.. ಘೋಷಿತ ಕಪ್ಪು ಹಣದ ಶೇಕಡಾ 25ರಷ್ಟು ಹಣವನ್ನು ನವೆಂಬರ್ 30 ಗಡುವಿನ ಸರ್ಕಾರಕ್ಕೆ ಪಾವತಿ ಮಾಡಬೇಕಾಗಿದ್ದು, ಈದಿನಾಂಕಕ್ಕೆ ಸ್ವಲ್ಪ ದಿನ ಮುಂಚಿತವಾಗಿ ಮಹೇಶ್ ಷಾ ಕಣ್ಮರೆಯಾಗಿದ್ದರು. ಆದಾಯ ತೆರಿಗೆ ಅಧಿಕಾರಿಗಳು ಮಹೇಶ್ ಷಾ ಅವರಿಗಾಗಿ ತೀವ್ರ ಶೋಧ ನಡೆಸಿದ್ದರು. ಸ್ವಯಂ ಘೋಷಣೆಯ ಅಡಿಯಲ್ಲಿ ಷಾ ಕಾಳಧನ ಘೋಷಣೆಗೆ ನೆರವಾಗಿದ್ದ ಲೆಕ್ಕ ಪರಿಶೋಧಕ ತೆಹ್ಮುಲ್ ಸೇತ್ನಾ ಅವರ ಜೊತೆಗೆ ಅದಾಯ ತೆರಿಗೆ ಅಧಿಕಾರಿಗಳು ಷಾ ಅವರ ಮನೆ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಿದ್ದರು. ಷಾ ಅವರು ಎಲ್ಲಿದ್ದಾರೆ ಎಂಬ ಬಗೆಗಾಗಲೇ, ಅವರ ವ್ಯವಹಾರ ಹೂಡಿಕೆಗಳ ಬಗೆಗಾಗಲೇ ತಮಗೆ ಏನೂ ಗೊತ್ತಿಲ್ಲ ಎಂದಿದ್ದ ಸೇತ್ನಾ ಓದಿದ್ದು ಕೇವಲ 12ನೇ ತರಗತಿಯಾಗಿದ್ದರೂ ಷಾ ತುಂಬಾ ಬುದ್ಧಿವಂತ ಎಂದು ಹೇಳಿದ್ದರು.  ದೊಡ್ಡ ದೊಡ್ಡ ವ್ಯವಹಾರಗಳನ್ನು ನಡೆಸುತ್ತಿರುವ ಷಾ ವಿಶ್ವಾಸಾರ್ಹತೆ ಬಗ್ಗೆ ಸಂಶಯ ಪಡೆಲು ನನಗೇನೂ ಕಾರಣಗಳಿಲ್ಲ ಎಂದೂ ಸೇತ್ನಾ ಹೇಳಿದ್ದರು. ಷಾ ಅವರು ಕಳೆದ 15 ದಿನಗಳಿಂದ ಸಂಪರ್ಕಕ್ಕೆ ಸಿಕ್ಕಿಲ್ಲ. ಆದರೆ ಅವರು ತಲೆಮರೆಸಿಕೊಂಡಿಲ್ಲ. ಬಂದ ಬಳಿಕ ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತಾರೆ ಎಂದು ಷಾ ಕುಟುಂಬ ತಿಳಿಸಿತ್ತು.

2008: ಮುಂಬೈ ದಾಳಿ ಹಿನ್ನೆಲೆಯಲ್ಲಿ ಲಷ್ಕರ್-ಎ- ತೊಯ್ಬಾ ಮುಖ್ಯಸ್ಥ ಸೇರಿದಂತೆ 20 ಪ್ರಮುಖ ಉಗ್ರರನ್ನು ತನ್ನ ಸುಪರ್ದಿಗೆ ಒಪ್ಪಿಸಬೇಕೆಂಬ ಭಾರತದ ಬೇಡಿಕೆಯನ್ನು ಪಾಕಿಸ್ಥಾನ ಸಾರಾಸಗಟು ತಳ್ಳಿಹಾಕಿತು. ಈ ಮಧ್ಯೆ ಮುಂಬೈ ಘಟನೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಒಂದು ದಿನದ ಭೇಟಿಗಾಗಿ ಆಗಮಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಸಾ ರೈಸ್, ಭಯೋತ್ಪಾದನೆ ನಿಗ್ರಹಿಸಲು ಪಾಕಿಸ್ಥಾನ ಪಾರದರ್ಶಕ ನೀತಿ ಅನುಸರಿಸಬೇಕು, ತುರ್ತಾಗಿ ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯ ಪಟ್ಟರು.
2008: ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಖರ್ಚು-ವೆಚ್ಚ ತಗ್ಗಿಸುವ ದೃಷ್ಟಿಯಿಂದ ಅಮೆರಿಕದ ಪ್ರಸಿದ್ಧ ಉಕ್ಕು ಕಾರ್ಖಾನೆ ಆಲ್ಟೋಸ್ ಹಾರ್ನೋಸ್ 12000 ಹುದ್ದೆಗಳನ್ನು ಕಡಿತಗೊಳಿಸಿದೆ ಎಂದು ಪ್ರಕಟಿಸಿತು. ಜಾಗತಿಕ ಅರ್ಥ ವ್ಯವಸ್ಥೆಯ ಕುಸಿತ ಹಾಗೂ ಅಂತಾರಾಷ್ಟ್ರೀಯ ಹಣಕಾಸು ಮಾರುಕಟ್ಟೆಯಲ್ಲಿ ಉಕ್ಕಿಗೆ ಬೇಡಿಕೆ ಕುಸಿದ ಕಾರಣ ಮೂರು ಘಟಕಗಳಲ್ಲಿ ಉಕ್ಕಿನ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಅಮೆರಿಕ ಸಂಯುಕ್ತ ಸಂಸ್ಥಾನದ ಸ್ಟೀಲ್ ಕಾರ್ಪೊರೇಷನ್ ಘೋಷಿಸಿತು. ಸಂಸ್ಥೆಯ ಈ ನಿರ್ಧಾರದಿಂದ ಅಮೆರಿಕ ಸ್ಟೀಲ್ಸ್ ಕೀವ್ಯಾಟಿನ್, ಡೆಟ್ರಾಯಿಟ್ ಮತ್ತು ಸೇಂಟ್ ಲೂಯಿಸ್ ಘಟಕದಲ್ಲಿನ ಕನಿಷ್ಠ 3,500 ನೌಕರರು ಉದ್ಯೋಗ ಕಳೆದುಕೊಳ್ಳುವರು ಎಂದು ಕಂಪೆನಿ ಹೇಳಿತು.

2008: ಕ್ವಾಲಾಂಲಪುರ ನಗರಾಡಳಿತವು ಸುಮಾರು 15 ವರ್ಷಗಳಷ್ಟು ಹಳೆಯ ಹಿಂದೂ ದೇವಾಲಯವನ್ನು ಮಲೇಷ್ಯಾ ಸರ್ಕಾರದ ಆದೇಶದ ಮೇರೆಗೆ ಧ್ವಂಸ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು. ಆದರೆ ದೇವಾಲಯ ಸ್ಥಳಾಂತರಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಈ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದ ಹಿಂದೂ ಸಮುದಾಯದವರು, ಕಟ್ಟಡ ಕೆಡಹುವ ಕಾಯಿದೆಯಲ್ಲಿ ಏನಿದೆ ಎಂದು ವಿವರಣೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

2008: ಸ್ವರ್ಣ ಮಯೂರ ಸೇರಿದಂತೆ ಎರಡು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಕಜಕಿಸ್ಥಾನಿ ನಿರ್ದೇಶಕ ಸರ್ಜಿ ಡ್ವೊರ್ಟ್‌ಸೆವೊಯ್ ಭಾಜನರಾದರು. ಪಣಜಿ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ತುಲಿಪ್' ಸಿನಿಮಾಕ್ಕೆ ಈ ಗೌರವ ಲಭಿಸಿತು. ಭರವಸೆ ನಿರ್ದೇಶಕ ಪ್ರಶಸ್ತಿ ರೂಪದಲ್ಲಿ 15 ಲಕ್ಷ ರೂಪಾಯಿ ಬಹುಮಾನ ಸಂದರೆ, ಶ್ರೇಷ್ಠ ಚಿತ್ರ ಎಂಬ ಕಾರಣಕ್ಕೆ ಸ್ವರ್ಣ ಮಯೂರ ಲಭಿಸಿತು. ಈ ಪ್ರಶಸ್ತಿಯ ಮೊತ್ತ 50 ಲಕ್ಷ ರೂ. ಆಯ್ಕೆ ಸಮಿತಿ ನೀಡುವ ವಿಶೇಷ ಪ್ರಶಸ್ತಿಯು ಶ್ರೀಲಂಕಾ ನಟಿ ಮಾಲಿನಿ ಪೌನ್ಸೆಕಾ ಅವರಿಗೆ ಸಂದಿತು. 'ಆಕಾಶ ಕುಸುಮ್' ಚಿತ್ರದ ನಟನೆಗೆ ಈ ಸಮ್ಮಾನ ಲಭಿಸಿತು.. ರಜತ ಮಯೂರ ಸ್ಮರಣಿಕೆ ಹಾಗೂ 15 ಲಕ್ಷ ರೂ. ಮೊತ್ತ ಅವರಿಗೆ ಸೇರಿತು.

2008: ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಸಲ್ಲಿಸಿದ ರಾಜೀನಾಮೆ ಪತ್ರವನ್ನು ಅಂಗೀಕರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಎ.ಕೆ.ಆಂಟನಿ ಅವರು ನವದೆಹಲಿಯಲ್ಲಿ ಪ್ರಕಟಿಸಿದರು. ಯುಪಿಎ ಸರ್ಕಾರದಲ್ಲಿನ ಕಾಂಗ್ರೆಸ್ ಮಿತ್ರ ಪಕ್ಷಗಳ ಒತ್ತಡದ ಕಾರಣ ದೇಶ್‌ಮುಖ್ ಅವರನ್ನು ಪದಚ್ಯುತಿಗೊಳಿಸಲಾಯಿತು.

2008: ಮುಂಬೈಯಲ್ಲಿ ಉಗ್ರರ ವಿರುದಟ ಸೆಣಸಾಡಿ ವೀರಮರಣವನ್ನಪ್ಪಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಬೆಂಗ ಳೂರಿನ ಮನೆಗೆ ಭೇಟಿ ನೀಡಿದ ನಂತರ ಅವಮಾನಕರ ಹೇಳಿಕೆ ನೀಡಿ ತೀವ್ರ ವಿವಾದಕ್ಕೆ ಒಳಗಾಗಿದ್ದ ಕೇರಳ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಈದಿನ ತಿರುವನಂತಪುರದಲ್ಲಿ ಕ್ಷಮೆಯಾಚಿಸಿದರು.. ಆದರೆ ಈ ಕ್ಷಮೆಯಾಚನೆ ಹೇಳಿಕೆಯಲ್ಲೂ ಅವರು ತಮ್ಮ ಚೌಕಾಸಿತನ ಮೆರೆಯುವ ಮೂಲಕ ಮತ್ತೊಮ್ಮೆ ವಿರೋಧಿಗಳ ಕೆಂಗಣ್ಣಿಗೆ ಗುರಿಯಾದರು.

2008: ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತ ಸವಿ ನೆನಪಿಗಾಗಿ ಹಾಗೂ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಸಂಗೀತ ಶಿಕ್ಷಕ, ಅಂಧ ಸ್ಕೇಟಿಂಗ್‌ ಪಟು ನಾನೂ ಪಾಟೀಲ ಈದಿನ ಗದಗದಿಂದ ಕೊಪ್ಪಳದವರೆಗೆ ಯಶಸ್ವಿ ಸ್ಕೇಟಿಂಗ್ ಯಾತ್ರೆ ಕೈಗೊಂಡರು. ಗದಗ ತೋಂಟದಾರ್ಯ ಮಠದ ಆವರಣದಲ್ಲಿ ಬೆಳಗಿನ ಜಾವ ನಾನೂ ಪಾಟೀಲರ ಯಾತ್ರೆಗೆ ತೋಂಟದ ಡಾ.ಸಿದ್ಧಲಿಂಗ ಸ್ವಾಮೀಜಿ ಹಾಗೂ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹಸಿರು ನಿಶಾನೆ ತೋರಿದರು. ಈದಿನ ಸಂಜೆ 4.25ಕ್ಕೆ ಕೊಪ್ಪಳ ತಲುಪಿದ ನಾನೂ ಪಾಟೀಲ ಅವರಿಗೆ ಮಾರ್ಗ ಮಧ್ಯದ ಗ್ರಾಮಗಳಲ್ಲಿ ಅದೂಟರಿಯ ಸ್ವಾಗತ ದೊರೆಯಿತು. ಯಲಬುರ್ಗಾ ತಾಲ್ಲೂಕಿನ ತಳಕಲ್‌ನಲ್ಲಿ ಶಿಕ್ಷಕರಾಗಿರುವ ಪಾಟೀಲರಿಗೆ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳು ಸಂಭ್ರಮದಿಂದ ಸ್ವಾಗತಿಸಿ ಹುರಿದುಂಬಿಸಿದರು. 1999ರಿಂದ ಸ್ಕೇಟಿಂಗ್ ಗೀಳು ಅಂಟಿಸಿಕೊಂಡ ನಾನೂ ಪಾಟೀಲ್, 2000ನೇ ಇಸ್ವಿಯ ಜನವರಿಯಲ್ಲಿ ಸ್ಕೇಟಿಂಗ್ ಗುರು ಹುಬ್ಬಳ್ಳಿಯ ಈರಣ್ಣ ಕಾಡಪ್ಪನವರ ಮಾರ್ಗದರ್ಶನದಲ್ಲಿ ಕಾರವಾರದವರೆಗೆ ಹೆದ್ದಾರಿಯಲ್ಲಿ ಸ್ಕೇಟಿಂಗ್ ಯಾನ ಮಾಡಿದ ದಾಖಲೆ ಸ್ಥಾಪಿಸಿದ್ದರು. ಕೆಲದಿನಗಳ ಹಿಂದೆ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಕನ್ನಡ ಧ್ವಜದ ಸಮೇತ ಮತ್ತೊಂದು ಯಾತ್ರೆ ಕೈಗೊಂಡಿದ್ದರು.

2008: 94 ವರ್ಷದ ವಯೋವೃದ್ಧ ಸ್ವಾಮೀಜಿಗೆ ಶಸ್ತ್ರಚಿಕಿತ್ಸೆ ನಡೆಸಿ ಮುರಿದ ಮೂಳೆ ಜೋಡಿಸುವಲ್ಲಿ ಹುಬ್ಬಳ್ಳಿ ನಗರದ ಲೈಫ್‌ಲೈನ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾದರು. ಶಿವಮೊಗ್ಗ ಸಮೀಪದ ಕೂಡ್ಲಿ ಅಕ್ಷೋಭ್ಯತೀರ್ಥ ಮಠದ ಪೀಠಾಧಿಪತಿ ರಘುತೀರ್ಥ ಸ್ವಾಮೀಜಿ ಕಾಲು ಜಾರಿ ಬಿದ್ದು ಬಲತೊಡೆಯ ಮೂಳೆ ಮುರಿದಿತ್ತು. ಇವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಡಾ.ಕಲಮದಾನಿ, ಡಾ.ಹರೀಶ ಕನಕಾಪೂರ, ಡಾ.ನಾಗರಾಜ, ಡಾ.ರಾಜೇಶ, ಡಾ. ಶ್ರೀನಿವಾಸ ದೇಶಪಾಂಡೆ ಮೂಳೆ ಜೋಡಿಸುವ ಅಪೂರ್ವ ಸಾಧನೆ ಮಾಡಿದರು.

2007: ಇಂಗ್ಲೆಂಡ್ ತಂಡದ ವಿರುದ್ಧ ಕ್ಯಾಂಡಿಯಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದ ಮೂರನೇ ದಿನದ ಆಟದಲ್ಲಿ ಪಾಲ್ ಕಾಲಿಂಗ್ ವುಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ 709ನೇ ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಧಿಕ ವಿಕೆಟ್ ಪಡೆದ ಹಿರಿಮೆಯೊಂದಿಗೆ 'ವಿಶ್ವದಾಖಲೆ' ನಿರ್ಮಿಸಿದರು. ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೆಸರಿನಲ್ಲಿ ಇದ್ದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. 35ರ ಹರೆಯದ ಮುರಳಿ ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸಿನ 89ನೇ ಓವರಿನ (ದಿನದ 10ನೇ ಓವರ್) ನಾಲ್ಕನೇ ಎಸೆತದಲ್ಲಿ ತಮ್ಮ ಫೇವರಿಟ್ ದೂಸ್ರಾ ಎಸೆತ ಪ್ರಯೋಗಿಸಿ ಇಂಗ್ಲೆಂಡ್ ತಂಡದ ಬ್ಯಾಟ್ಸ್ ಮನ್ ಪಾಲ್ ಕಾಲಿಂಗ್ ವುಡ್ ಅವರನ್ನು ಬೌಲ್ಡ್ ಮಾಡಿ ಚರಿತ್ರೆಯೆಡೆಗೆ ಹೆಜ್ಜೆಯಿಟ್ಟರು. ವಿಶ್ವದಾಖಲೆ ಸ್ಥಾಪಿಸಿದ ಬಳಿಕ ಮ್ಯಾಥ್ಯೂ ಹೊಗಾರ್ಡ್ ಅವರನ್ನು ಔಟ್ ಮಾಡಿದ ಮುರಳಿ ಒಟ್ಟು ವಿಕೆಟ್ಟುಗಳ ಸಂಖ್ಯೆಯನ್ನು 710ಕ್ಕೆ ಹೆಚ್ಚಿಸಿದರು. ಲಂಕಾ ಬೌಲರಿಗೆ ಇದು 116ನೇ ಟೆಸ್ಟ್ ಪಂದ್ಯ. ಶೇನ್ ವಾರ್ನ್ ಅವರು 709 ವಿಕೆಟ್ ಪಡೆಯಲು 145 ಟೆಸ್ಟುಗಳನ್ನು ಆಡಿದ್ದರು. ಇಂಗ್ಲೆಂಡಿನ ಮೊದಲ ಇನಿಂಗ್ಸಿನಲ್ಲಿ 55 ರನ್ನುಗಳಿಗೆ 6 ವಿಕೆಟ್ ಪಡೆದ ಮುರಳಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು 61ನೇ ಬಾರಿ ಮಾಡಿದರು. ಅದೇ ರೀತಿ ಟೆಸ್ಟ್ ಪಂದ್ಯದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಅವರು 20 ಬಾರಿ ಮಾಡಿದರು. ಕಳೆದ 15 ವರ್ಷಗಳಿಂದ ಬ್ಯಾಟ್ಸ್ ಮನ್ನರ ನಿದ್ದೆಗೆಡಿಸುತ್ತಿರುವ ಮುರಳಿ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಿರುವುದು ಇದು ಮೂರನೇ ಬಾರಿ. 2004ರಲ್ಲಿ ಮೊದಲ ಬಾರಿ ವೆಸ್ಟ್ ಇಂಡೀಸಿನ ವೇಗದ ಬೌಲರ್ ಕರ್ಟ್ನಿ ವಾಲ್ಷ್ ಅವರನ್ನು ಹಿಂದಿಕ್ಕಿ ವಿಶ್ವದ ಅತಿಹೆಚ್ಚು ವಿಕೆಟ್ ಪಡೆದ ಗೌರವಕ್ಕೆ ಪಾತ್ರರಾಗಿದ್ದರು. ಆ ಬಳಿಕ ವಾರ್ನ್, ಮುರಳಿಯನ್ನು ಹಿಂದಿಕ್ಕಿ ಮುನ್ನಡೆದಿದ್ದರು. ವಾರ್ನ್ ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತಿ ಹೊಂದಿರುವ ಕಾರಣ ಮುರಳಿಯ ದಾಖಲೆಯನ್ನು ಮುರಿಯಲು ಇನ್ನು ಯಾರಿಗೂ ಸುಲಭದಲ್ಲಿ ಸಾಧ್ಯವಿಲ್ಲ. ಚೆಂಡನ್ನು ಮಾರಕ ರೀತಿಯಲ್ಲಿ ತಿರುಗುವಂತೆ ಮಾಡುವ ತಮ್ಮ ಸಾಮರ್ಥ್ಯದಿಂದ ಸ್ಪಿನ್ ಬೌಲಿಂಗಿಗೆ ಹೊಸ ರೂಪವನ್ನೇ ನೀಡಿದ ಮುರಳಿ ಈ ಹಿಂದೆ `ಚಕ್ಕಿಂಗ್' ಆರೋಪಕ್ಕೂ ಗುರಿಯಾಗಿದ್ದರು. 1995ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬೌಲಿಂಗ್ ವೇಳೆ ಚೆಂಡನ್ನು ಥ್ರೋ ಮಾಡುತ್ತಿದ್ದಾರೆ ಎಂದು ಅಂಪೈರ್ ಡೆರೆಲ್ ಹೇರ್ ಏಳು ಬಾರಿ ಮುರಳಿಗೆ ನೋಬಾಲ್ ನೀಡಿದ್ದರು. ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಜಾನ್ ಹೊವಾರ್ಡ್ ಮುರಳಿಯನ್ನು `ಚಕ್ಕರ್' ಎಂದೂ ಕರೆದಿದ್ದರು. ಆದರೆ ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಮುರಳಿ ತಮ್ಮ ವಿಕೆಟ್ `ಬೇಟೆ'ಯ ಕಾಯಕ ಮುಂದುವರೆಸಿದ್ದರು.

2007: ತೈವಾನಿನ `ದಿ ವಾಲ್' ಚಿತ್ರಕ್ಕೆ ಪಣಜಿಯಲ್ಲಿ ನಡೆದ 38ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸ್ವರ್ಣ ಮಯೂರ ಪ್ರಶಸ್ತಿ ಲಭಿಸಿತು. ಪಣಜಿಯ ಕಲಾ ಅಕಾಡೆಮಿ ಸಭಾಂಗಣದಲ್ಲಿ ಜರುಗಿದ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಹಂಗೇರಿಯ ಮಾರ್ತಾ ಮಿಜಾರೋಸ್ ಅಧ್ಯಕ್ಷತೆಯ ತೀರ್ಪುಗಾರರ ಮಂಡಳಿ (ಜ್ಯೂರಿ) ಪ್ರಶಸ್ತಿ ವಿಜೇತ ಚಿತ್ರಗಳ ಹೆಸರು ಪ್ರಕಟಿಸಿತು. ಹಿಂದಿನ ವರ್ಷ ಚೀನಾದ `ದಿ ಓಲ್ಡ್ ಬಾರ್ಬರ್' ಚಿತ್ರ ಸ್ವರ್ಣ ಮಯೂರ ಪಡೆದಿತ್ತು.

2007: ಬೆಂಗಳೂರಿನ `ನಮ್ಮ ಮೆಟ್ರೊ' ಯೋಜನೆಗಾಗಿ ಭೂಮಿ ಕಳೆದುಕೊಂಡ ಭೂ ಮಾಲೀಕರಿಗೆ ಪರಿಹಾರ ನೀಡುವ ಕಾರ್ಯವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸದ್ದಿಲ್ಲದೆ ಆರಂಭಿಸಿತು. ಇಂದಿರಾನಗರದ 100 ಅಡಿ ರಸ್ತೆಯ ನಿವಾಸಿ ನಿವೃತ್ತ ಕಂದಾಯ ಆಯುಕ್ತ ಎಸ್. ವೆಂಕಟೇಶ್ ಅವರು ಪರಿಹಾರ ಪಡೆದ ಮೊದಲ ಭೂಮಾಲೀಕರೆನಿಸಿದರು. ಅವರಿಗೆ ಕೆಐಎಡಿಬಿ 2.69 ಕೋಟಿ ರೂಪಾಯಿ ಚೆಕ್ ನೀಡಿತು. ವೆಂಕಟೇಶ್ ಅವರ 2009 ಚದರ ಅಡಿ ಜಾಗವನ್ನು ಮೆಟ್ರೊ ರೈಲು ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು.

2007: ಅಖಿಲ ಭಾರತ ವೈದ್ಯಕೀಯ ಸಂಸ್ಥೆಯ (ಏಮ್ಸ್) ನಿರ್ದೇಶಕ ಪಿ. ವೇಣುಗೋಪಾಲ್ ಅವರನ್ನು ಆ ಸ್ಥಾನದಿಂದ ಕಿತ್ತೊಗೆದ ಸರ್ಕಾರದ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ಅಸಮಾಧಾನ ವ್ಯಕ್ತಪಡಿಸಿತು. ನ್ಯಾಯಮೂರ್ತಿ ತರುಣ್ ಚಟರ್ಜಿ ಮತ್ತು ದಲ್ವೀರ್ ಭಂಡಾರಿ ಅವರಿದ್ದ ಪೀಠವು `ವೇಣುಗೋಪಾಲ್ ಅವರಂತಹ ಗಣ್ಯ ವ್ಯಕ್ತಿಯನ್ನು ಈ ರೀತಿ ಹೀನಾಯವಾಗಿ ನಡೆಸಿಕೊಳ್ಳುವ ಅಗತ್ಯವಿತ್ತೇ' ಎಂದೂ ಪ್ರಶ್ನಿಸಿತು. `ಮುಂದಿನ ಆರು ತಿಂಗಳ ಒಳಗೆ ವೇಣುಗೋಪಾಲ್ ಅವರ ಅಧಿಕಾರವಧಿ ಮುಕ್ತಾಯಗೊಳ್ಳಲಿತ್ತು. ವಾಸ್ತವ ಹೀಗಿರುವಾಗ ಅವರನ್ನು ತತ್ ಕ್ಷಣವೇ ಆ ಹುದ್ದೆಯಿಂದ ಕಿತ್ತೊಗೆಯಲಿಕ್ಕಾಗಿಯೇ `ಏಮ್ಸ್' ಮಸೂದೆಗೇ ತಿದ್ದುಪಡಿ ತಂದದ್ದು ಎಷ್ಟು ಸರಿ ಎಂದೂ ಪೀಠವು ಪ್ರಶ್ನಿಸಿತು.

2007: ಲೇಬರ್ ಪಕ್ಷದ ನಾಯಕ ಕೆವಿನ್ ರುಡ್ ಆಸ್ಟ್ರೇಲಿಯಾದ 26ನೇ ಪ್ರಧಾನಿಯಾಗಿ ಮೆಲ್ಬೋರ್ನಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಒಂಬತ್ತು ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷ, ಜಾನ್ ಹೊವರ್ಡ್ ನೇತೃತ್ವದ ಕನ್ಸರ್ವೇಟಿವ್ ಪಕ್ಷವನ್ನು ಸಂಪೂರ್ಣವಾಗಿ ನೆಲ ಕಚ್ಚಿಸಿತ್ತು. ಹನ್ನೊಂದುವರೆ ವರ್ಷಗಳ ನಂತರ ಲೇಬರ್ ಪಕ್ಷ ಆಸ್ಟ್ರೇಲಿಯಾದಲ್ಲಿ ಅಧಿಕಾರಕ್ಕೆ ಬಂದಿತು. ಕ್ಯಾನ್ ಬೆರಾದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗವರ್ನರ್ ಜನರಲ್ ಮೈಕೆಲ್ ಜೆಫ್ರಿ ಅವರ ಸಮ್ಮುಖದಲ್ಲಿ ಕೆವಿನ್ ರುಡ್ ಹಾಗೂ ಉಪ ಪ್ರಧಾನಿ ಜುಲಿಯಾ ಗಿಲಾರ್ಡ್ ಪ್ರಮಾಣ ವಚನ ಸ್ವೀಕರಿಸಿದರು.

2007: ಚುನಾವಣಾ ಅಧಿಕಾರಿಯೂ ಆದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕಮರ್ ಉಝ್ ಜಮಾನ್ ಅವರು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ನಾಮಪತ್ರವನ್ನು ತಿರಸ್ಕರಿಸಿದರು. 2000ನೇ ಇಸ್ವಿಯ ಹೈಜಾಕ್ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದ್ದು ಷರೀಫ್ ನಾಮಪತ್ರ ತಿರಸ್ಕರಿಸಲು ಕಾರಣ ಎಂದು ಹೇಳಲಾಯಿತು. ಹಿಂದಿನ ವಾರ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಕಾರಣ ನೀಡಿ ನವಾಜ್ ಷರೀಫ್ ಸಹೋದರನ ನಾಮಪತ್ರವನ್ನೂ ತಿರಸ್ಕರಿಸಲಾಗಿತ್ತು.

2007: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ `ಯುನೈಟೆಡ್ ರಷ್ಯಾ ಪಾರ್ಟಿ' ಸಂಸದೀಯ ಚುನಾವಣೆಯಲ್ಲಿ ಭಾರಿ ಬಹುಮತ ಗಳಿಸಿತು. ರಷ್ಯಾ ರಾಜಕೀಯದಲ್ಲಿ `ಕಿಂಗ್ ಮೇಕರ್' ಎಂಬ ಬಿರುದು ಪಡೆದ ಪುಟಿನ್ ಈ ಸ್ಥಾನ ಉಳಿಸಿಕೊಂಡರು. ಚುನಾವಣೆಯಲ್ಲಿ ಯುನೈಟೆಡ್ ರಷ್ಯಾ ಪಾರ್ಟಿ, ಸಂಸತ್ತಿನ ಕೆಳಮನೆ (ಡ್ಯೂಮಾ) 450 ಸ್ಥಾನಗಳಲ್ಲಿ 313 ಸ್ಥಾನಗಳನ್ನು ಗೆದ್ದು, ಶೇ 64.1ರಷ್ಟು ಮತಗಳನ್ನು ಪಡೆಯಿತು. ಕಮ್ಯುನಿಸ್ಟ್ ಪಾರ್ಟಿ ಕೇವಲ ಶೇ 11.6ರಷ್ಟು ಮತಗಳನ್ನು ಪಡೆದು, ಅರ್ಧದಷ್ಟು ಸ್ಥಾನಗಳಲ್ಲಿ ಸೋಲನ್ನಪ್ಪಿತು.

2007: ತಾತ್ಕಾಲಿಕ ಸಂಚಾರಿ ಪೀಠ ಸ್ಥಾಪನೆಗೆ ಧಾರವಾಡದ ಕಲಾಭವನದ ಸಮೀಪ ಇರುವ ಜಿಲ್ಲಾ ನ್ಯಾಯಾಲಯವು ಪ್ರಶಸ್ತವಾಗಿದೆ ಎಂದು `ತಾತ್ಕಾಲಿಕ ಪೀಠ ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಿದ ನ್ಯಾಯಮೂರ್ತಿಗಳ ಸಮಿತಿ'ಯು ಮುಖ್ಯ ನ್ಯಾಯಮೂರ್ತಿ ಅವರಿಗೆ ವರದಿ ಸಲ್ಲಿಸಿತು. ಇದರೊಂದಿಗೆ ಉತ್ತರ ಕರ್ನಾಟಕ ಭಾಗದ ಜನತೆಗೆ `ಮರೀಚಿಕೆ'ಯಾಗಿದ್ದ ತಾತ್ಕಾಲಿಕ ಸಂಚಾರಿ ಪೀಠದ ಕನಸು ಬಹುತೇಕ ನನಸಾದಂತಾಯಿತು.

2006: ದೋಹಾ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಭಾರತದ ಮಹಿಳಾ ಆಥ್ಲೀಟ್ ಸೀಮಾ ಅಂಟಿಲ್ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಾ ಕಣದಲ್ಲಿ ಕಾಣಿಸಿಕೊಳ್ಳುವ ಮೊದಲೇ ಉದ್ದೀಪನ ಮದ್ದು ತೆಗೆದುಕೊಂಡದ್ದು ಸಾಬೀತಾಗಿದ್ದು, ಆಕೆಯನ್ನು ಕೂಟದಿಂದಲೇ ವಾಪಸ್ ಕಳುಹಿಸಲು ತಂಡದ ಆಡಳಿತ ತೀರ್ಮಾನಿಸಿತು.

2006: ಭಾರತದ ಖ್ಯಾತ ಚಿತ್ರಕಾರ ರಾಜಾ ರವಿವರ್ಮ ನಿಧನದ ಶತಮಾನದ ಬಳಿಕ ಅವರ ಅಪರೂಪದ ಚಿತ್ರಪಟ (ಸ್ಕೆಚ್ ಬುಕ್) ತಿರುವನಂತಪುರದಲ್ಲಿ ಪತ್ತೆಯಾಯಿತು. ಹಿಂದೂ ದೇವಾನುದೇವತೆಗಳು ಹಾಗೂ ಪೌರಾಣಿಕ ಪ್ರಸಂಗಗಳ ಬಗ್ಗೆ ರವಿವರ್ಮ ಬರೆದ ಚಿತ್ರಗಳು ಇಂದಿಗೂ ಅತ್ಯುತ್ತಮ ಎಂಬ ಹೆಗ್ಗಳಿಕೆಯನ್ನು ಹೊಂದಿವೆ.

2005: ಅಂತಾರಾಷ್ಟ್ರೀಯ ಖ್ಯಾತಿಯ ಪೊಗೊ ಟಿವಿ ಚಾನೆಲಿನ ಪ್ರತಿಷ್ಠಿತ `ಅಮೇಜಿಂಗ್ ಕಿಡ್ಸ್ ಪ್ರಶಸ್ತಿ'ಗೆ ಕನ್ನಡಿಗ ಬಾಲಕ ಶಶಾಂಕ ಎಂ. ಕಾಶಿ ಆಯ್ಕೆಯಾದ. ಬೆಂಗಳೂರಿನ ನಂದಿನಿ ಬಡಾವಣೆಯ ಪ್ರೆಸಿಡೆನ್ಸಿ ಶಾಲೆಯ 4ನೇ ತರಗತಿ ವಿದ್ಯಾಥರ್ಿ ಶಶಾಂಕ ಮೂಲತಃ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಹೊಡಬಟ್ಟೆ ಗ್ರಾಮದವನು. ಪೊಗೊ ಚಾನೆಲ್ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ಪೈಕಿ ಯಕ್ಷಗಾನ ನೃತ್ಯವನ್ನು ಪ್ರದರ್ಶಿಸಿ ಶಶಾಂಕ್ ಈ ಪ್ರಶಸ್ತಿಯನ್ನು ಗೆದ್ದುಕೊಂಡ.

2005: ಹಿರಿಯ ರಾಜಕಾರಣಿ, ಮಾಜಿ ಸಂಸದ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ವಿ. ಕೃಷ್ಣರಾವ್ (82) ಬೆಂಗಳೂರಿನಲ್ಲಿ ನಿಧನರಾದರು. 1972ರಲ್ಲಿ ಗೌರಿ ಬಿದನೂರು ಕ್ಷೇತ್ರದಿಂದ ವಿಧಾನಸಭೆಗೆ ಗೆದ್ದ ಅವರು ನಂತರ ಲೋಕಸಭೆಗೆ 1984-1996ರ ನಡುವಣ ಅವಧಿಯಲ್ಲಿ ಸತತ ಮೂರುಬಾರಿ ಗೆದ್ದಿದ್ದರು. ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹರಾವ್ ಅವರ ನಿಕಟವರ್ತಿ. 1992-95ರ ಅವಧಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಆರ್. ಎಲ್. ಜಾಲಪ್ಪ ಅವರನ್ನು ಎರಡು ಬಾರಿ ಪರಾಭವಗೊಳಿಸಿದ್ದರು. 1941-1976ರವರೆಗಿನ ಅವಧಿಯಲ್ಲಿ 35 ವರ್ಷ ಸ್ಥಳೀಯ ಗ್ರಾಮಪಂಚಾಯತ್ ಅಧ್ಯಕ್ಷರಾಗಿ, ಬಳಿಕ ಎಪಿಎಂಸಿ ಅಧ್ಯಕ್ಷರಾಗಿ, ಭೂ ಬ್ಯಾಂಕ್ ನಿರ್ದೇಶಕರಾಗಿ, ಗೌರಿಬಿದನೂರು ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

2005: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಅವರು ಏಷ್ಯಾ ಕ್ರಿಕೆಟ್ ಮಂಡಳಿ (ಎಸಿಸಿ) ಹಾಗೂ ಏಷ್ಯಾ ಕ್ರಿಕೆಟ್ ಕಾರ್ಪೊರೇಷನ್ನಿಗೆ (ಎಎಪಿಸಿ) ರಾಜೀನಾಮೆ ನೀಡಿದರು.

2005: ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರು ವಿಜಯ ಕರ್ನಾಟಕ ಪತ್ರಿಕೆಯ ಅತಿಥಿ ಸಂಪಾದಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಮೂಲಕ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗ ಒಂದಕ್ಕೆ ನಾಂದಿ ಹಾಡಿದರು. ಬ್ರಿಟಿಷ್ ಪತ್ರಿಕೋದ್ಯಮದಲ್ಲಿ ಇಂತಹ ಪ್ರಯೋಗ ನೂರಾರು ವರ್ಷಗಳಿಂದ ಇದ್ದರೂ ಭಾರತದಲ್ಲಿ ಜಾರಿಗೆ ಬಂದದ್ದು ಕಡಿಮೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಸಾನಿಯಾ ಮಿರ್ಜಾ, ಕಾದಂಬರಿಕಾರ ವಿಕ್ರಂ ಸೇಠ್. ಇನ್ಫೋಸಿಸ್ಸಿನ ನಾರಾಯಣಮೂರ್ತಿ ಅವರನ್ನು ಅತಿಥಿ ಸಂಪಾದಕರನ್ನಾಗಿ ಕರೆಸಿ ಅವರಿಂದ ಆಯಾ ದಿನದ ಸಂಚಿಕೆಗಳನ್ನು ಮಾಡಿಸಿತ್ತು. ಎಕನಾಮಿಕ್ ಟೈಮ್ಸ್ ನಂತರ ಹಣಕಾಸು ಸಚಿವ ಚಿದಂಬರಂ ಅವರನ್ನು ಅತಿಥಿ ಸಂಪಾದಕರನ್ನಾಗಿ ಆಹ್ವಾನಿಸಿತ್ತು.

1999: ಅಮೆರಿಕಾದ ಟೋರಿ ಮರ್ಡನ್ ಅಟ್ಲಾಂಟಿಕ್ ಸಾಗರವನ್ನು ಏಕಾಂಗಿಯಾಗಿ ದಾಟಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಭಾಜನರಾದರು. ಆಫ್ರಿಕಾ ಸಮೀಪದ ಕ್ಯಾನರಿ ದ್ವೀಪಗಳಿಂದ ಹೊರಟು 81 ದಿನಗಳ ಬಳಿಕ ಆಕೆ ಫ್ರೆಂಚ್ ಕ್ಯಾರಿಬಿಯನ್ ದ್ವೀಪವಾದ ಗುವಾಡೆಲೊಪ್ ನ್ನು ತಲುಪಿದರು.

1984: ಈದಿನ ಭಾರತದ ಪಾಲಿಗೆ ಹೃದಯ ವಿದ್ರಾವಕ ದುರಂತದ ದಿನ. ಭೋಪಾಲಿನ ಯೂನಿಯನ್ ಕಾರ್ಬೈಡ್ ಕೀಟನಾಶಕ ತಯಾರಿ ಕಾರ್ಖಾನೆಯ ಘಟಕದಿಂದ ಮಿಥೈಲ್- ಐಸೊಸಯನೇಟ್ ವಿಷಾನಿಲ ಸೋರಿಕೆಯಾಯಿತು. ಸೋರಿಕೆಯಾದ 40 ಟನ್ನಿಗೂ ಹೆಚ್ಚಿನ ವಿಷಾನಿಲ 40 ಚದರ ಕಿ.ಮೀ.ವರೆಗೆ ವ್ಯಾಪಿಸಿತು. 4000 ಮಂದಿ ಅದನ್ನು ಸೇವಿಸಿ ತತ್ ಕ್ಷಣವೇ ಅಸು ನೀಗಿದರು. ಇತರ 5 ಲಕ್ಷ ಮಂದಿ ವಿವಿಧ ಕಾಯಿಲೆಗಳಿಗೆ ತುತ್ತಾಗಿ ನರಳಿದರು. 1989ರಲ್ಲಿ ಯೂನಿಯನ್ ಕಾರ್ಬೈಡ್ 47ಕೋಟಿ ಡಾಲರುಗಳನ್ನು ಭಾರತ ಸರ್ಕಾರಕ್ಕೆ ಪರಿಹಾರ ರೂಪದಲ್ಲಿ ನೀಡುವುದಾಗಿ ಒಪ್ಪಿತು. ಇದಕ್ಕೆ ಪ್ರತಿಯಾಗಿ ಸರ್ಕಾರವು ಕಂಪೆನಿ ಹಾಗೂ ಅದರ ಅಧ್ಯಕ್ಷರ ವಿರುದ್ಧ ಹೂಡಲಾಗಿದ್ದ ಎಲ್ಲ ಕ್ರಿಮಿನಲ್ ಖಟ್ಲೆಗಳನ್ನು ಹಿಂತೆಗೆದುಕೊಳ್ಳಲು ಒಪ್ಪಿತು.

1967: ದಕ್ಷಿಣ ಆಫ್ರಿಕಾದ ಕೇಪ್ ಟೌನಿನಲ್ಲಿ ಡಾ. ಕ್ರಿಸ್ಟಿಯನ್ ಬರ್ನಾರ್ಡ್ ನೇತೃತ್ವದಲ್ಲಿ ಸರ್ಜನ್ ಗಳು ಮೊತ್ತ ಮೊದಲ ಮಾನವ ಹೃದಯ ಕಸಿ ಮಾಡಿದರು. ಹೃದಯ ಕಸಿ ಮಾಡಿಸಿಕೊಂಡ ಲೂಯಿ ವಾಶ್ಖನ್ ಸ್ಕಿ ಹೊಸ ಹೃದಯದೊಂದಿಗೆ 18 ದಿನಗಳ ಕಾಲ ಬದುಕಿದರು. ಅಪಘಾತದಲ್ಲಿ ಮೃತರಾದ ಡೆನಿಸ್ ದರ್ವಾಲಿ ಎಂಬವರ ಹೃದಯವನ್ನು ಈ ಕಸಿಗಾಗಿ ಪಡೆದುಕೊಳ್ಳಲಾಗಿತ್ತು.

1936: ಸಾಹಿತಿ ಲೀಲಾವತಿ ತೋರಣಗಟ್ಟಿ ಜನನ.

1934: ಸಾಹಿತಿ ಸೋಮಶೇಖರರಾವ್ ಎಚ್. ಜಿ. ಜನನ.

1934: ನಟ, ನಾಟಕಕಾರ, ಕಾದಂಬರಿಕಾರ ನವರತ್ನರಾಂ (3-12-1934ರಿಂದ 17-101991) ಅವರು ನವರತ್ನ ರಾಮರಾವ್ ಮತ್ತು ಪುಟ್ಟಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1926: ಅಗಾಥಾ ಕ್ರಿಸ್ಟೀ ತಮ್ಮ ಬೆರ್ಕ್ಷೈರಿನ ನಿವಾಸದಿಂದ ನಾಪತ್ತೆಯಾದರು. 10 ದಿನಗಳ ಬಳಿಕ ಯಾರ್ಕ್ ಷೈರಿನ ಆರೋಗ್ಯ ಕೇಂದ್ರವೊಂದರಲ್ಲಿ ಬೇರೆ ಹೆಸರಿನಲ್ಲಿ ಆಕೆ ಪತ್ತೆಯಾದರು. ತಾನು ಮರೆವಿಗೆ ಒಳಗಾದುದಾಗಿ ಆಕೆ ಹೇಳಿಕೊಂಡರು. ಆದರೆ ತನ್ನ ಪತಿ ಬೇರೊಬ್ಬ ಮಹಿಳೆಯ ಮನೆಗೆ ಆಗಾಗ ಹೋಗುತ್ತಿದ್ದುದನ್ನು ಗಮನಿಸಿ ಪ್ರತೀಕಾರ ತೀರಿಸಿಕೊಳ್ಳಲು ಆಕೆ ನಾಪತ್ತೆಯಾದಳು ಎಂದು ಶಂಕಿಸಲಾಯಿತು. ಈ ಘಟನೆಗೆ ಸಮರ್ಪಕ ವಿವರಣೆ ಲಭಿಸಲೇ ಇಲ್ಲ.

1923: ಸಾಹಿತಿ ವಿ.ಜಿ. ಭಟ್ಟ ಜನನ.

1889: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧ ಖುದೀರಾಮ್ ಬೋಸ್ (1889-1908) ಅವರು 1889ರ ಈ ದಿನ ಜನಿಸಿದರು. ಮ್ಯಾಜಿಸ್ಟ್ರೇಟ್ ಕಿಂಗ್ಸ್ ಫೋರ್ಡ್ ಮೇಲೆ ಬಾಂಬ್ ದಾಳಿ ನಡೆಸಿದ್ದಕ್ಕಾಗಿ ಬೋಸ್ ಅವರನ್ನು 1908ರಲ್ಲಿ ಗಲ್ಲಿಗೇರಿಸಲಾಯಿತು.

1884: ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ (1884-1963) ಹುಟ್ಟಿದ ದಿನ.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment