೭೫೦ ಕೆ.ಜಿ. ಈರುಳ್ಳಿಗೆ ೧,೦೬೪ ರೂ.: ಪ್ರಧಾನಿ
ಪರಿಹಾರ ನಿಧಿಗೆ ರೈತನ ದಾನ
ಪರಿಹಾರ ನಿಧಿಗೆ ರೈತನ ದಾನ
ಮುಂಬಯಿ: ಮಹಾರಾಷ್ಟ್ರದ ಒಬ್ಬ ಈರುಳ್ಳಿ ಬೆಳೆಗಾರ ಈರುಳ್ಳಿಯನ್ನು ಕೆಜಿಗೆ ೧ ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗಿ ಬಂದ ದುರವಸ್ಥೆಗೆ
ಪ್ರತಿಭಟನೆಯಾಗಿ ಅದರ ಮಾರಾಟ ಮೂಲಕ ಬಂದ ತನ್ನ ಆದಾಯವನ್ನು ಪೂರ್ತಿಯಾಗಿ ‘ಪ್ರಧಾನಿ ಪರಿಹಾರ ನಿಧಿ’ಗಾಗಿ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ.
ನಾಸಿಕ್ ಜಿಲ್ಲೆಯ ನಿಫಡ್ ತೆಹ್ಸಿಲ್ ನಿವಾಸಿ ಸಂಜಯ್ ಸಾಥಿ ಅವರು ೨೦೧೦ ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗಿನ ಸಂವಾದಕ್ಕಾಗಿ ಕೇಂದ್ರ ಕೃಷಿ ಸಚಿವಾಲಯದಿಂದ ಆರಿಸಲ್ಪಟ್ಟ ಪ್ರಗತಿಪರ ರೈತರ ಪೈಕಿ ಒಬ್ಬರಾಗಿದ್ದಾರೆ.
.
೨೦೧೮ ರ ಡಿಸೆಂಬರ್ ೨ ರ ಭಾನುವಾರ ಪಿಟಿಐ ಜೊತೆ ಮಾತನಾಡಿದ ಅವರು, "ಈ ಋತುವಿನಲ್ಲಿ ನಾನು ೭೫೦ ಕೆ.ಜಿ. ಈರುಳ್ಳಿಯನ್ನು ಉತ್ಪಾದಿಸಿದ್ದೇನೆ.
ಆದರೆ ಕಳೆದ ವಾರ ನಿಫಡ್ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ ೧ ರೂಪಾಯಿಗೆ ಖರೀದಿಸಲು
ಮುಂದಾದರು. ಅಂತಿಮವಾಗಿ
ನಾನು ಪ್ರತಿ ಕೆಜಿಗೆ ೧.೪೦ ರೂಪಾಯಿಗೆ ಒಪ್ಪಂದ ಮಾಡಿಕೊಂಡು ೭೫೦ ಕೆಜಿಗೆ ೧,೦೬೪ ರೂ. ಆದಾಯ ಪಡೆದೆ. ನಾಲ್ಕು ತಿಂಗಳ ಶ್ರಮದಲ್ಲಿ ಇಂತಹ ನಿಕೃಷ್ಟ ಆದಾಯವನ್ನು ನೋಡುವುದು ಮನಸ್ಸಿಗೆ ನೋವುಂಟು ಮಾಡಿದೆ. ಹಾಗಾಗಿ ಈ ೧,೦೬೪ ರೂಪಾಯಿಗಳನ್ನು ಪ್ರಧಾನಿಯವರ ವಿಪತ್ತು ಪರಿಹಾರ ನಿಧಿಗೆ ಪ್ರತಿಭಟನೆಯಾಗಿ ದಾನ
ಮಾಡಿದ್ದೇನೆ. ಈ ಹಣವನ್ನು ಕಳುಹಿಸರಲು ಮನಿಯಾರ್ಡರ್ ಗೆ ಹೆಚ್ಚುವರಿ ರೂ ೫೪ ಪಾವತಿಸಬೇಕಾಯಿತು’ ಎಂದು ವಿವರಿಸಿದರು.
"ನಾನು ಯಾವುದೇ ರಾಜಕೀಯ ಪಕ್ಷವನ್ನು ಪ್ರತಿನಿಧಿಸುತ್ತಿಲ್ಲ.
ಆದರೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರದ ಬಗ್ಗೆ ಸಿಟ್ಟಿಗೆದ್ದಿದೇನೆ’
ಎಂದು ಅವರು ನುಡಿದರು.
ಮನಿಯಾರ್ಡರನ್ನು ನವೆಂಬರ್ ೨೯ ರಂದು ಭಾರತೀಯ ಅಂಚೆ ಕಚೇರಿಯ ನಿಫಡ್ ಕಚೇರಿಯಿಂದ "ನರೇಂದ್ರ ಮೋದಿ, ಭಾರತದ ಪ್ರಧಾನ ಮಂತ್ರಿ" ಹೆಸರಿಗೆ ಕಳುಹಿಸಲಾಗಿದೆ.
ಭಾರತದಲ್ಲಿ
ಉತ್ಪಾದನೆಯಾಗುವ ಈರುಳ್ಳಿಯ ಶೇಕಡಾ 50ರಷ್ಟು ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ
ಉತ್ಪಾದನೆಯಾಗುತ್ತದೆ.
ಎಂಟು ವರ್ಷಗಳ ಹಿಂದೆ ಒಬಾಮಾ ಅವರೊಂದಿಗಿನ ಭೇಟಿ ಬಗ್ಗೆ ಕೇಳಿದಾಗ, "ನಾನು ದೀರ್ಘಕಾಲದವರೆಗೆ ಟೆಲಿಕಾಂ ಆಪರೇಟರ್ ನಡೆಸುತ್ತಿದ್ದ ರೈತರಿಗೆ ಧ್ವನಿ ಆಧಾರಿತ ಸಲಹಾ ಸೇವೆಯನ್ನು ಬಳಸಿಕೊಂಡು ಹವಾಮಾನದ ಬದಲಾವಣೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ, ಮತ್ತು ನನ್ನ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದೆ’ ಎಂದು
ಸಂಜಯ್ ಸಾಥಿ ನುಡಿದರು.
"ಆಲ್ ಇಂಡಿಯಾ ರೇಡಿಯೋದ
(ಎಐಆರ್) ಸ್ಥಳೀಯ ರೇಡಿಯೊ ಕೇಂದ್ರಗಳಲ್ಲಿ ಕೃಷಿಯಲ್ಲಿನ ನನ್ನ ಪ್ರಯೋಗಗಳ ಬಗ್ಗೆ ಮಾತನಾಡಲು ನನಗೆ ಆಹ್ವಾನಿಸಲಾಗುತ್ತಿತ್ತು.
ಹಾಗಾಗಿ ಒಬಾಮಾಗೆ ಭೇಟಿ ನೀಡಿದಾಗ ಮುಂಬೈಯ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಒಂದು ಮಳಿಗೆ ಸ್ಥಾಪಿಸಲು ಕೃಷಿ ಸಚಿವಾಲಯ ನನ್ನನ್ನು ಆಯ್ಕೆ ಮಾಡಿತು. ಮಧ್ಯವರ್ತಿ ಮೂಲಕ ನಾನು ಒಂದೆರಡು ನಿಮಿಷಗಳ ಕಾಲ ಒಬಾಮಾ ಅವರ ಜೊತೆಗೆ ಮಾತನಾಡಿದ್ದೆ’ ಎಂದು ಅವರು ಹೇಳಿದರು.
No comments:
Post a Comment