Tuesday, December 25, 2018

ಇಂದಿನ ಇತಿಹಾಸ History Today ಡಿಸೆಂಬರ್ 25

ಇಂದಿನ ಇತಿಹಾಸ History Today ಡಿಸೆಂಬರ್  25
2018: ಬೋಗಿಬೀಲ್ (ದೀಬ್ರುಗಢ, ಅಸ್ಸಾಂ): ವ್ಯೂಹಾತ್ಮಕ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದಿರುವ ಬ್ರಹ್ಮಪುತ್ರ್ತ ನದಿಯ ಮೇಲೆ ನಿರ್ಮಿಸಲಾಗಿರುವ ಭಾರತದ ಅತ್ಯಂತ ಉದ್ದದ ರೈಲು-ರಸ್ತೆ ಸೇತುವೆಯನ್ನು ಅಸ್ಸಾಮಿನ ದೀಬ್ರುಗಢ ಸಮೀಪದ ಬೋಗಿಬೀಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಲೋಕಾರ್ಪಣೆ ಮಾಡಿದರು.  ನವದೆಹಲಿಯಿಂದ ಮಧ್ಯಾಹ್ನ ದೀಬ್ರುಗಢಕ್ಕೆ ಆಗಮಿಸಿದ ಪ್ರಧಾನಿ ನೇರವಾಗಿ ಹೆಲಿಕಾಪ್ಟರ್ ಮೂಲಕ ಬೋಗಿಬೀಲ್ ಗೆ ಆಗಮಿಸಿ .೯೪ ಕಿಮೀ ಉದ್ದದ ಡಬಲ್ ಡೆಕರ್ ಸೇತುವೆಯನ್ನು ನದಿಯ ದಕ್ಷಿಣ ದಂಡೆಯ ಕಡೆಯಲ್ಲಿ ಉದ್ಘಾಟಿಸುವ ಮೂಲಕ ಅಸ್ಸಾಮಿಗೆ ಕ್ರಿಸ್ಮಸ್ ಕೊಡುಗೆ ನೀಡಿದರು. ೧೯೯೨ರ ಜನವರಿ ೨೨ರಂದು ಆಗಿನ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಶಿಲಾನ್ಯಾಸ ನೆರವೇರಿಸಿದ್ದ ಮಹತ್ವದ ಯೋಜನೆಯ ಕಾಮಗಾರಿಗೆ ೨೦೦೨ರ ಏಪ್ರಿಲ್ ೨೧ರಂದು ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಚಾಲನೆ ನೀಡಿತ್ತು. ಬಳಿಕ ಯೋಜನೆಯ ಕಾಮಗಾರಿ ಪೂರ್ಣಗೊಳ್ಳಲು ೧೬ ವರ್ಷ ಹಿಡಿಯಿತು. ಕಡೆಗೂ ಪೂರ್ಣಗೊಂಡ ಯೋಜನೆಯನ್ನು ಅಟಲ್ ಬಿಹಾರಿ ವಾಜಪೆಯಿ ಅವರ ಜನ್ಮದಿನದಂದೇ ಲೋಕಾರ್ಪಣೆ ಮಾಡುವ ಮೂಲಕ ಪ್ರಧಾನಿಯವರು ಯೋಜನೆಗೆ ಚಾಲನೆ ನೀಡಿದ್ದ ಅಟಲ್ ಅವರಿಗೆ ಸೂಕ್ತ ಗೌರವ ಸಲ್ಲಿಸಿದರುರಸ್ತೆಯ ಕೆಳಭಾಗದಲ್ಲಿರುವ ರೈಲ್ವೇ ಸೇತುವೆಯಲ್ಲಿ ಸಂಚರಿಸುವ ಮೊದಲ ಮೊದಲ ಪ್ಯಾಸೆಂಜರ್ ರೈಲುಗಾಡಿಗೆ ಪ್ರದಾನಿ ಹಸಿರು ನಿಶಾನೆ ತೋರಿಸಿದರು. ಉದ್ಘಾಟನೆ ಬಳಿಕ ಅವರು ಅಸ್ಸಾಂ ರಾಜ್ಯಪಾಲ ಜಗದೀಶ್ ಮುಖಿ, ಮುಖ್ಯಮಂತ್ರಿ ಸರಬಾನಂದ ಸೋನೋವಾಲ್ ಅವರ ಜೊತೆಗೆ ಸೇತುವೆಯ ಮೇಲೆ ಕೆಲವು ಮೀಟರುಗಳಷ್ಟು ದೂರ ನಡೆದರು. ಬೃಹತ್ ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಿಸಲಾಗಿರುವ ಸೇತುವ ಅರುಣಾಚಲ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಸಂಪರ್ಕ ಅಡೆತಡೆಗಳನ್ನು ನಿವಾರಿಸಲಿದೆದಕ್ಷಿಣದ ದೀಬ್ರುಗಢದಲ್ಲಿ ಆರಂಭವಾಗುವ ಸೇತುವೆ ಉತ್ತರದಲ್ಲಿ ಅಸ್ಸಾಮಿನ ಧೇಮಜಿ ಜಿಲ್ಲೆಯಲ್ಲಿ ಕೊನೆಗೊಳ್ಳುತ್ತದೆ. ಅದು ಅರುಣಾಚಲ ಪ್ರದೇಶದ ಹಲವು ಭಾಗಗಳನ್ನು ರಸ್ತೆ ಹಾಗೂ ರೈಲ್ವೆ ಮೂಲಕ ಸಂಪರ್ಕಿಸುತ್ತದೆ. ಚೀನಾದ ಗಡಿಯಲ್ಲಿ ರಕ್ಷಣಾ ಸಾಮಗ್ರಿ ಸಾಗಣೆಗೆ ಅನುಕೂಲ ಕಲ್ಪಿಸುತ್ತದೆ. ಮತ್ತು ರಸ್ತೆ ಹಾಗೂ ರೈಲು ಪ್ರಯಾಣಿಕರಿಗೆ ಪ್ರಯಾಣದ ಅವಧಿಯನ್ನು ಗಣನೀಯವಾಗಿ ತಗ್ಗಿಸುತ್ತದೆ. ಸರಕು ಸಾಗಣೆ ರೈಲುಗಳ ಪಯಣದ ಅವಧಿಯನ್ನು ಸೇತುವೆಯು ಸುಮಾರು ಮೂರು ಗಂಟೆಗಳಷ್ಟು ತಗ್ಗಿಸುತ್ತದೆ. ರೈಲು-ರಸ್ತೆ ಸೇತುವೆಯು ಅದೆಷ್ಟು ಗಟ್ಟಿಮುಟ್ಟಾಗಿದೆ ಎಂದರೆ ಫೈಟರ್ ಜೆಟ್ ವಿಮಾನವು ಬಂದು ಇದರ ಮೇಲೆ
ಇಳಿದರೂ ಅದನ್ನು ತಾಳಿಕೊಳ್ಳಬಲ್ಲುದು. ಸೇತುವೆಯು ಕೇವಲ ಸೇತುವೆಯಲ್ಲ, ಜೀವರೇಖೆ ಎಂದು ಮೋದಿ ಹೇಳಿದರು. ೧೯೯೭-೯೮ ರಲ್ಲಿ ಅಸ್ಸಾಂ ಒಪ್ಪಂದದ ಭಾಗವಾಗಿ ಮಂಜೂರು ಮಾಡಲಾಗಿದ್ದ ಬೋಗಿಬೀಲ್ ಸೇತುವೆಯು ಅರುಣಾಚಲ ಪ್ರದೇಶದಲ್ಲಿ ಭಾರತ ಚೀನಾ ಗಡಿಯುದ್ದಕ್ಕೂ ರಕ್ಷಣಾ ಪಡೆಗಳ ಚಲನವಲನದಲ್ಲಿ ನಿರ್ಣಾಯಕವಾಗಲಿದೆ. ಅನುಷ್ಠಾನದಲ್ಲಿ ಅತಿಯಾದ ವಿಳಂಬವಾದ ಪರಿಣಾಮವಾಗಿ ಯೋಜನೆಯ ವೆಚ್ಚ ಶೇಕಡಾ ೮೫ರಷ್ಟು ಅಂದರೆ ಅಂದಾಜು ,೨೩೦.೦೨ ಕೋಟಿ ರೂಪಾಯಿಗಳಿಂದ ,೯೬೦ ಕೋಟಿ ರೂಪಾಯಿಗಳಷ್ಟಕ್ಕೆ ಏರಿತ್ತು. ಸೇತುವೆಯ ಒಟ್ಟು ಉದ್ದವನ್ನು ಕೂಡಾ ಪರಿಷ್ಕರಿಸಿ .೩೧ ಕಿಮೀಯಿಂದ .೯೪ ಕಿಮೀಗಳಿಗೆ ಏರಿಸಲಾಗಿತ್ತು. ಯೋಜನೆಯ ಆಯಕಟ್ಟಿನ ಮಹತ್ವವನ್ನು ಪರಿಗಣಿಸಿ, ಕೇಂದ್ರ ಸರ್ಕಾರವು ಸೇತುವೆ ನಿರ್ಮಾಣವನ್ನು ೨೦೦೭ರಲ್ಲಿ ರಾಷ್ಟ್ರೀಯ ಯೋಜನೆ ಎಂಬುದಾಗಿ ಘೋಷಿಸಿ, ತನ್ಮೂಲಕ ಅದರ ತ್ವರಿತ ನಿರ್ಮಾಣಕ್ಕೆ ನಿಧಿ ಲಭ್ಯತೆಯ ಭರವಸೆ ನೀಡಿತ್ತು. ಬ್ರಹ್ಮಪುತ್ರ ನದಿಯ ಉತ್ತರದ ಕಡೆಯ ಜನರು ಅನುಭವಿಸುತ್ತಿರುವ ಸಂಚಾರ ಸಮಸ್ಯೆಯನ್ನು ಸೇತುವೆಯು ಗಣನೀಯವಾಗಿ ನಿವಾರಿಸುವುದಾದರೂ, ಸೇತುವೆ ರಚನೆ ಮತ್ತು ವಿನ್ಯಾಸಕ್ಕೆ ಅನುಮೋದನೆ ನೀಡುವ ವೇಳೆಯಲ್ಲಿ ರಕ್ಷಣಾ ಅಗತ್ಯ ಮಹತ್ವದ ಪಾತ್ರ ವಹಿಸಿತ್ತು ಎಂದು ಅಧಿಕಾರಿಗಳು ನುಡಿದರು. ರಕ್ಷಣಾ ಪಡೆಗಳ ಕ್ಷಿಪ್ರ ಸಂಚಾರಕ್ಕೆ ಅವಕಾಶ ಕಲ್ಪಿಸುವ ಮೂಲಕ ಸೇತುವೆಯ ಪೂರ್ವ ಪ್ರದೇಶದಲ್ಲಿ ರಾಷ್ಟ್ರೀಯ ಭದ್ರತೆಯನ್ನು ವಿಸ್ತರಿಸಲಿದೆ. ಹೀಗಾಗಿಯೇ ಯುದ್ಧ ವಿಮಾನ ಕೂಡಾ ಇಳಿಯಲು ಸಾಧ್ಯವಾಗುವಂತೆ ಸೇತುವೆಯನ್ನು ನಿರ್ಮಿಸಲಾಗಿದೆ ಎಂದು ರಕ್ಷಣಾ ಮೂಲ ತಿಳಿಸಿತು. ವಿಮಾನ ಇಳಿಸುವ ಮೂರು ತಾಣಗಳು ಇರುವಂತಹ ತಂತ್ರಜ್ಞಾನವನ್ನು ಸೇತುವೆ ನಿರ್ಮಿಸುವಾಗ ಬಳಸಲಾಗಿದೆ. ಸೇತುವೆ ಅತಿದೊಡ್ಡ ಅನುಕೂಲ ಏನೆಂದರೆ ಪಡೆಗಳಿಗೆ ದಕ್ಷಿಣದ ಕಡೆಯಿಂದ ಉತ್ತರದ ಕಡೆಗೆ ಸುಲಭವಾಗಿ ಸಂಚರಿಸಲು ಸಾಧ್ಯವಾಗುವುದು. ಅಂದರೆ ಚೀನಾ ಗಡಿಗೆ ಸೇನೆಯ ಸಂಚಾರದ ದೂರವನ್ನು ಸೇತುವೆಯ ಹಲವು ನೂರು ಕಿಲೋಮೀಟರುಗಳಷ್ಟು ಇಳಿಸಿದೆ. ಮೊದಲಿಗೆ ಧೋಲಾ-ಸಡಿಯಾ ಸೇತುವೆ ಮತ್ತು ಈಗ ಬೋಗಿಬೀಲ್- ಇವು ಭಾರತದ ರಕ್ಷಣಾ ಸಾಮರ್ಥ್ಯವನ್ನು ಅಪಾರವಾಗಿ ಹೆಚ್ಚಿಸಲಿದೆ ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದರುಅರುಣಾಚಲ ಪ್ರದೇಶದಲ್ಲಿ ಭಾರತದ ಮತ್ತು ಚೀನಾ ನಡುವಣ ೪೦೦೦ ಕಿಮೀ ಗಡಿಯಲ್ಲಿ ಶೇಕಡಾ ೭೫ರಷ್ಟು ಅರುಣಾಚಲ ಪ್ರದೇಶದಲ್ಲಿದೆ ಮತ್ತು ಸೇತುವೆಯು ಗಡಿಯಲ್ಲಿನ ಸೇತೆಗೆ ಸಂಚಾರ-ಸರಕು ಸಾಗಣೆಗೆ ಸಂಪರ್ಕಕ್ಕೆ ಅಪಾರವಾಗಿ ಅನುಕೂಲ ಮಾಡಿಕೊಡುವುದು ಎಂದು ಈಶಾನ್ಯ ಗಡಿ ರೈಲ್ವೇ (ಎನ್ ಎಫ್ ಆರ್) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಣವ್ ಜ್ಯೋತಿ ಶರ್ಮ ಹೇಳಿದರು. ಸೇತುವೆಯು ರಾಷ್ಟ್ರದ ಈಶಾನ್ಯ ಭಾಗದ ಜೀವರೇಖೆಯಾಗಿದ್ದು ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಬ್ರಹ್ಮಪುತ್ರ ನದಿಯ ಉತ್ತರ ಮತ್ತು ದಕ್ಷಿಣ ಭಾಗಗಳ ನಡುವಣ ಸಂಪರ್ಕಕ್ಕೆ ಅಪಾರ ಅನುಕೂಲ ಒದಗಿಸುವುದು. ಅರುಣಾಚಲ ಪ್ರದೇಶದ ದೂರದ ಜಿಲ್ಲೆಗಳಾದ ಅಂಜಾ, ಚಂಗ್ಲಂಗ್, ಲೋಹಿತ್, ಕೆಳ ದಿಬಂಗ್ ಕಣಿವೆ, ದಿಬಂಗ್ ಕಣಿವೆ ಮತ್ತು ತಿರಪ್ಗಳು ಅಪಾರವಾಗಿ ಅನುಕೂಲವಾಗಲಿದೆ ಎಂದು ಶರ್ಮ ನುಡಿದರು.  ರೈಲು-ರಸ್ತೆ ಸೇತುವೆ ಪರಿಣಾಮವಾಗಿ ದೀಬ್ರುಗಢ ಮತ್ತು ಇಟಾನಗರ ನಡುವಣ ದೂರ ೧೫೦ ಕಿಮೀಯಷ್ಟು ಇಳಿಯುವುದು ಮತ್ತು ರೈಲ್ವೇ ಪಯಣ ೭೦೫ ಕಿಮೀಯಷ್ಟು ಕಡಿಮೆಯಾಗುವುದು. ಬ್ರಹ್ಮಪುತ್ರ ಉತ್ತರ ದಂಡೆಯ ಮೂಲಕ ರಂಗಿಯಾ ಮಾರ್ಗವಾಗಿ ದೆಹಲಿ-ಕೋಲ್ಕತ ನಡುವೆ ಕಡಿಮೆ ಅವಧಿಯ ಮಾರ್ಗವೂ ಲಭ್ಯವಾಗುವುದು ಎಂದು ಶರ್ಮ ವಿವರಿಸಿದರು.

2018: ಬೋಗಿಬೀಲ್ (ದೀಬ್ರುಗಢ, ಅಸ್ಸಾಂ): ೧೪ ಬೋಗಿಗಳ ಪ್ರಯಾಣಿಕ ರೈಲುಗಾಡಿಗೆ ಹಸಿರು ನಿಶಾನೆ ತೋರಿಸುವ ಮೂಲಕ ವ್ಯೂಹಾತ್ಮಕವಾಗಿ ಮಹತ್ವ ಪಡೆದಿರುವ ದೇಶದ ಅತಿ ಉದ್ದದ ಬೋಗಿಬೀಲ್ ರೈಲು-ಸೇತುವೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ದಿನವನ್ನುಚಾರಿತ್ರಿಕ ದಿನ ಎಂದು ಬಣ್ಣಿಸಿದರು.  ‘ಅಸ್ಸಾಂ ಮತ್ತು ಅರುಣಾಚಲ ಪ್ರದೇಶವನ್ನು ಸಂಪರ್ಕಿಸುವ ಸೇತುವೆಯು ಕೇವಲ ಸೇತುವೆಯಲ್ಲ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಕೋಟ್ಯಂತರ ಜನರಿಗೆ ಜೀವರೇಖೆ. ಇದು ಪ್ರದೇಶಕ್ಕೆ ಅಪಾರ ಅಭಿವೃದ್ಧಿಯನ್ನು ತಂದು ಕೊಡಲಿದೆ ಎಂದು ಹೇಳಿದರು.  ‘ಸುಮಾರು ೧೬ ವರ್ಷಗಳ ಹಿಂದೆ, ಅಟಲ್ ಜಿ ಇಲ್ಲಿಗೆ ಬಂದಿದ್ದರು. ಅವರಿಗೆ ಬೋಗಿಬೀಲ್ ಸೇತುವೆ ಅಭಿವೃದ್ಧಿಯ ದೂರದೃಷ್ಟಿ ಇತ್ತು. ಸೇತುವೆ ಅವರ ದೂರದೃಷ್ಟಿಗೆ ಕೊಟ್ಟಿರುವ ಗೌರವ ಕೂಡಾ. ೨೦೦೪ರಲ್ಲಿ ವಾಜಪೇಯಿಜಿ ಅವರ ಸರ್ಕಾರ ಅಧಿಕಾರ ಕಳೆದುಕೊಂಡಾಗ ಅವರ ಯುಗದ ಹಲವಾರು ಮಹತ್ವದ ಮೂಲ ಸವಲತ್ತು ಯೋಜನೆಗಳು ಅಪೂರ್ಣವಾಗಿ ಉಳಿದವು ಎಂದು ಮೋದಿ ವಿವರಿಸಿದರು. ವಾಜಪೇಯಿ ಅವರಿಗೆ ಇನ್ನೊಂದು ಅವಧಿ ಲಭಿಸಿದ್ದರೆ ೨೦೦೮-೦೯ರ ವೇಳೆಗೆ ಬೋಗಿಬಿಲ್ ಸೇತುವೆ ಪೂರ್ಣಗೊಳ್ಳುತ್ತಿತ್ತು ಎಂದು ಹೇಳಿದ ಮೋದಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದರು. ’ನಾವು ಹಿಂದಿನ ಲಟಕ್ ನೆ ಬಟಕ್ ನೆ (ಎಳೆದಾಡುವ) ಕಾರ್ಯಶೈಲಿಯನ್ನು ಬದಲಾಯಿಸಿದ್ದೇವೆ. ಕಾಲಮಿತಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸುವುದು ಈಗ ಕೇವಲ ಕಾಗದದಲ್ಲಿ ಉಳಿದಿಲ್ಲ, ವಾಸ್ತವ ಸಂಗತಿಯಾಗಿದೆ ಎಂದು ಮೋದಿ ಹೇಳಿದರುಹಿಂದಿನ ಸರ್ಕಾರಗಳು ಕೇವಲ ಮೂರು ಸೇತುವೆಗಳನ್ನು ನಿರ್ಮಿಸಲು ಶಕ್ತವಾದವು. ಏನಿದ್ದರೂ ನಾವು ಕಾಮಗಾರಿಯನ್ನು ತೀವ್ರಗೊಳಿಸಿ ಬೋಗಿಬೀಲ್ ಸೇತುವೆಯನ್ನು - ವರ್ಷಗಳಲ್ಲಿ ಪೂರ್ಣಗೊಳಿಸಿದೆವು ಎಂದು ಪ್ರಧಾನಿ ಹೇಳಿದರುಅಸ್ಸಾಂ ಮತ್ತು ಅರುಣಾಚಲ ಪ್ರದೇಶವನ್ನು ಸಂಪರ್ಕಿಸುವ ಬೋಗಿಬೋಲ್ ಸೇತುವೆಯು ವ್ಯಾಪಾರ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಕಾರಣವಾಗಲಿದ್ದು, ಆರ್ಥಿಕತೆಗೆ ಒತ್ತು ನೀಡಲಿದೆ ಎಂದು ಪ್ರಧಾನಿ ನುಡಿದರುರಾಷ್ಟ್ರದ ಈಶಾನ್ಯ ಭಾಗದಲ್ಲಿ ೭೦,೦೦೦ ಕೋಟಿ ರೂಪಾಯಿ ವೆಚ್ಚದಲ್ಲಿ ,೫೦೦ ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು೨೦೧೪ರ ಮೇ ತಿಂಗಳ ಬಳಿಕ ಸಾಕಷ್ಟು ಬದಲಾವಣೆಗಳಾಗಿವೆ. ಪ್ರಮುಖ ಯೋಜನೆಗಳಿಗೆ ಅಗ್ರ ಪ್ರಾಶಸ್ತ್ಯ ನೀಡಲಾಗುತ್ತಿದೆ. ಮೂಲಸವಲತ್ತು ಯೋಜನೆಗಳ ವಿಳಂಬದಿಂದ ಭಾರತದ ಅಭಿವೃದ್ಧಿಯ ಮಾರ್ಗದಲ್ಲಿ ಪ್ರತಿಕೂಲ ಪರಿಣಾಮಗಳಾಗುತ್ತಿದೆ. ನಾವು ಅಧಿಕಾರ ವಹಿಸಿಕೊಂಡಾಗ, ಪ್ರಮುಖ ಯೋಜನೆಗಳಿಗೆ ವೇಗ ಒದಗಿಸುವ ಹಾಗೂ ಅವುಗಳನ್ನು ಕ್ಷಿಪ್ರವಾಗಿ ಪೂರ್ಣಗೊಳಿಸುವ ಬಗ್ಗೆ ಗಮನ ಹರಿಸಿದೆವು ಎಂದು ಪ್ರಧಾನಿ ಮೋದಿ ವಿವರಿಸಿದರು.  ಮೂಲಸವಲತ್ತು ಕ್ಷೇತ್ರದಲ್ಲಿನ ಅಭಿವೃದ್ಧಿ ಅಸ್ಸಾಮಿನಲ್ಲಿ ಮಾತ್ರವೇ ಅಗುತ್ತಿರುವುದಲ್ಲ, ಇಡೀ ಈಶಾನ್ಯ ಪ್ರದೇಶದಲ್ಲಿ ಆಗುತ್ತಿದೆ ಎಂದು ಪ್ರಧಾನಿ ನುಡಿದರುಈಶಾನ್ಯ ಪ್ರದೇಶವು ಇನ್ನು ಕೆಲವೇ ವರ್ಷಗಳಲ್ಲಿ ರೈಲ್ವೇ ಜಾಲದ ಮೂಲಕ ಸಂಪರ್ಕ ಹೊಂದಲಿದೆ. ೧೫ ಹೊಸ ರೈಲುಗಳನ್ನು ಉದ್ದೇಶಕ್ಕಾಗಿ ರೂಪಿಸಲಾಗುತ್ತಿದೆ ಎಂದು ಮೋದಿ ನುಡಿದರು


2018 ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಅಟಲ್ಬಿಹಾರಿ ವಾಜಪೇಯಿ ಸ್ಮರಣಾರ್ಥ ಇಲ್ಲಿ ನಿರ್ಮಿಸಿರುವ 'ಸದೈವ ಅಟಲ್‌' ಸ್ಮಾರಕ ಅವರ 94ನೇ ಜನ್ಮದಿನದ ಅಂಗವಾಗಿ ಲೋಕಾರ್ಪಣೆಗೊಂಡಿತು. ರಾಷ್ಟ್ರಪತಿ ರಾಮನಾಥ ಕೋವಿಂದ್‌, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ಮೃತಿ ಸ್ಥಳ ಸಮೀಪದ 'ಸದೈವ ಅಟಲ್‌' ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ, ಧೀಮಂತ ನಾಯಕನನ್ನು ಸ್ಮರಿಸಿದರು.  ಮಾಜಿ ಪ್ರಧಾನಿ ಮನಮೋಹನ್ಸಿಂಗ್‌, ಬಿಜೆಪಿ ಅಧ್ಯಕ್ಷ ಅಮಿತ್ಶಾ ಮತ್ತು ವಾಜಪೇಯಿ ಕುಟುಂಬ ಸದಸ್ಯರು ಸ್ಮಾರಕ ಸ್ಥಳಕ್ಕೆ ತೆರಳಿ ಗೌರವ ಸಲ್ಲಿಸಿದರು. ವೇಳೆ, ಖ್ಯಾತ ಗಾಯಕ ಪಂಕಜ್ಉಧಾಸ್ಭಕ್ತಿಗೀತೆಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.  ದೀರ್ಘ ಕಾಲದ ಅನಾರೋಗ್ಯದ ಬಳಿಕ ಅಟಲ್ಬಿಹಾರಿ ವಾಜಪೇಯಿ ಕಳೆದ ಆಗಸ್ಟ್‌ 16ರಂದು ದಿಲ್ಲಿಯಲ್ಲಿ ನಿಧನರಾಗಿದ್ದರು. ವದೆಹಲಿಯ ಹೃದಯ ಭಾಗದಲ್ಲಿರುವ ಸ್ಮೃತಿ ಸ್ಥಳದಲ್ಲಿ ಅಟಲ್ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಸ್ಮಾರಕ ನಿರ್ಮಾಣದೊಂದಿಗೆ ಭಾರತೀಯ ಜನತಾ ಪಕ್ಷದ ಅಗ್ರಗಣ್ಯ ನಾಯಕನೋರ್ವನಿಗೆ ನವದೆಹಲಿಯಲ್ಲಿ ರಾಷ್ಟ್ರೀಯ ಸ್ಮಾರಕ ದೊರಕಿದಂತಾಗಿದೆ. ಜೊತೆಗೆ ಭವ್ಯ ಸ್ಮಾರಕವು ಮುಂದಿನ ದಿನಗಳಲ್ಲಿ ಬಿಜೆಪಿ ಪಾಲಿಗೆರಾಜ್ ಘಾಟ್ನಂತಾಗಲಿದೆ. ಇದೇ ಸೆಪ್ಟೆಂಬರ್ ಹದಿನೈದರಂದು ನಿರ್ಮಾಣ ಕಾರ್ಯವು ಪ್ರಾರಂಭವಾಗಿತ್ತು. ಅಜಾತ ಶತ್ರುವಿನ ಅಂತಿಮ ಸಂಸ್ಕಾರವನ್ನು ಅತ್ಯಂತ ಗೌರವಯುತವಾಗಿ ಮೋದಿ ಸರ್ಕಾರ ನಡೆಸಿಕೊಟ್ಟಿತ್ತು. ವಾಜಪೇಯಿಯವರ ಘನತೆಗೆ ಯಾವುದೇ ಚ್ಯುತಿ ಬರದಂತೆ ಅವರನ್ನು ಬೀಳ್ಕೊಡಲಾಗಿತ್ತು. ಇದೀಗ ಅವರಿಗೊಂದು ಭವ್ಯ ಸ್ಮಾರಕವನ್ನು ನಿರ್ಮಿಸಿ ಪ್ರಧಾನಿ ಮೋದಿ ತಮ್ಮ ಕರ್ತವ್ಯವನ್ನು ಅಚ್ವುಕಟ್ಟಾಗಿ ನಿರ್ವಹಿಸಿದರು. ಅತಿ ಕಡಿಮೆ ಸಮಯದಲ್ಲಿ ವಾಜಪೇಯಿಯವರ ಸಮಾಧಿ ಸ್ಥಳದಲ್ಲಿ ಭವ್ಯವಾದ ಸ್ಮಾರಕ ಸಿದ್ಧವಾಯಿತು. ಸ್ಮಾರಕಕ್ಕಾಗಿ ಒಂದೇ ಒಂದು ಮರವನ್ನೂ ಕಡಿದಿಲ್ಲ ಎನ್ನುವುದು ಗಮನಾರ್ಹ ಸಂಗತಿಯಾಗಿದೆ. ಒಟ್ಟು 10.5 ಕೋಟಿ ವೆಚ್ಚದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದ್ದು, ಕೇಂದ್ರ ಸರ್ಕಾರದ ಲೋಕೋಪಯೋಗಿ ಇಲಾಖೆಯೇ ನೋಡಿಕೊಂಡಿದೆ. ಅತ್ಯಲ್ಪ ಅವಧಿಯಲ್ಲಿ ನಿರ್ಮಾಣವಾಗಿರುವ ಸ್ಮಾರಕಕ್ಕೆಸದೈವ ಅಟಲ್ಎಂದು ಹೆಸರಿಡಲಾಗಿದೆ. ಒಟ್ಟಾರೆ ಒಂದೂವರೆ ಎಕರೆಯಷ್ಟು ಪ್ರದೇಶದಲ್ಲಿ ಸ್ಮಾರಕ ನಿರ್ಮಾಣವಾಗಿದ್ದು, ಬಿಜೆಪಿ ಪಾಲಿನ ರಾಜ್ ಘಾಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


2018: ನವದೆಹಲಿ: ತಮ್ಮ ಮನೆಯನ್ನು ಮೊದಲು ಸರಿಪಡಿಸಿಕೊಳ್ಳುವಂತೆ ಭಾರತದ ರಾಜಕೀಯ ವಲಯಗಳಿಂದ ಬಂದ ಸಲಹೆಯನ್ನು ಧಿಕ್ಕರಿಸಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಮತ್ತೆ ಭಾರತದ ಬಗ್ಗೆ ಕ್ಯಾತೆ ತೆಗೆದರು.  ಭಾರತದಲ್ಲಿ ಅಲ್ಪಸಂಖ್ಯಾತರಿಗೆಉಪದ್ರವ ನೀಡಲಾಗುತ್ತಿದೆ ಎಂದು ಆಪಾದಿಸಿದ ಖಾನ್, ಮುಸ್ಲಿಂ ಬಾಹುಳ್ಯವಿರುವ ಪಾಕಿಸ್ತಾನದಲ್ಲಿ ಹಿಂದುಗಳು ಮತ್ತು ಕ್ರೈಸ್ತರಿಗೆ ಸಮಾನ ನಾಗರಿಕರಾಗಿ ನೋಡಿಕೊಳ್ಳುವ ಖಾತರಿಯನ್ನು  ತಾವು ನೀಡುವುದಾಗಿ ಹೇಳಿಕೊಂಡರು. ಮಹಮ್ಮದ್ ಅಲಿ ಜಿನ್ನಾ ಜನ್ಮದಿನದ ಸಂದರ್ಭದಲ್ಲಿ ಮಾಡಿದ ಟ್ವೀಟಿನಲ್ಲಿ ಇಮ್ರಾನ್ ಖಾನ್ ಅವರುಅವರು (ಜಿನ್ನಾ) ಹಿಂದು ಬಹುಸಂಖ್ಯಾತರು ಮುಸ್ಲಿಮರನ್ನು ಸಮಾನ ನಾಗರಿಕರಾಗಿ ನೋಡಿಕೊಳ್ಳುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡ ಬಳಿಕ ಪ್ರತ್ಯೇಕ ಪಾಕಿಸ್ತಾನ ರಾಷ್ಟ್ರಕ್ಕಾಗಿಹೋರಾಡಿದರು ಎಂದು ಬರೆದರು. ಭಾರತದಲ್ಲಿ ಸಂಭವಿಸುತ್ತಿರುವುದಕ್ಕೆ ವ್ಯತಿರಿಕ್ತವಾಗಿ ತಾವು ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಮಾನತೆಯ ಖಾತರಿ ನೀಡುವುದಾಗಿಯೂ ಅವರು ಬರೆದುಕೊಂಡರು. ಚಿತ್ರನಟ ನಾಸಿರುದ್ದೀನ್ ಶಾ ಅವರು ಬುಲಂದಶಹರ್ ಹಿಂಸಾಚಾರದ ಬಗ್ಗೆ ಮಾಡಿದ ಟೀಕೆ ಮೇಲೆ ಉದ್ಭವಿಸಿದ ವಿವಾದಕ್ಕೆ ಪ್ರತಿಕ್ರಿಯಿಸಿದ್ದ ಇಮ್ರಾನ್ ಖಾನ್, ಆಗಲೂ ಇಂತಹುದೇ ಹೇಳಿಕೆ ನೀಡಿದ್ದರುಪೊಲೀಸರ ಸಾವಿಗಿಂತ ದನದ ಸಾವಿಗೆ ಹೆಚ್ಚು ಮಹತ್ವ ನೀಡುವ ರಾಷ್ಟ್ರದಲ್ಲಿ ತನ್ನ ಮಕ್ಕಳ ಭವಿಷ್ಯದ ಬಗ್ಗೆ ತಮಗೆ ಭೀತಿಯಾಗುತ್ತಿದೆ ಎಂದು ಶಾ ಹೇಳಿದ್ದರು. ಹೇಳಿಕೆ ತೀವ್ರ ವಿವಾದವನ್ನು ಎಬ್ಬಿಸಿ, ಇಮ್ರಾನ್ ಖಾನ್ ಕೂಡಾ ಅದಕ್ಕೆ ಪ್ರತಿಕ್ರಿಯಿಸಿದಾಗ, ನಾಸಿರುದ್ದೀನ್ ಶಾತನಗೆ ಸಂಬಂಧಿಸದ ವಿಷಯಗಳ ಬಗ್ಗೆ ಟೀಕಿಸುವ ಬದಲು ಖಾನ್ ಅವರು ತಮ್ಮ ರಾಷ್ಟ್ರದ ಬಗ್ಗೆ ಮಾತನಾಡಬೇಕು ಎಂದು ನಾನು ಯೋಚಿಸುತ್ತೇನೆ. ನಾವು ೭೦ ವರ್ಷಗಳಿಂದ ಪ್ರಜಾಪ್ರಭುತ್ವವನ್ನು ಹೊಂದಿದ್ದೇವೆ. ನಮ್ಮನ್ನು ನಾವು ಹೇಗೆ ನೋಡಿಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ ಎಂದು  ಟ್ವೀಟ್ ಮಾಡಿದ್ದರು. ಶಾ ಹೇಳಿಕೆಯನ್ನು ಟೀಕಿಸಿದ ಬಿಜೆಪಿ ನಾಯಕರು, ’ನಿಮ್ಮ ರಾಷ್ಟ್ರಟೆರರಿಸ್ತಾನ್ ಆಗಿದೆ. ನೀವು ಭಾರತಕ್ಕೆ ಉಪನ್ಯಾಸ ನೀಡಬೇಕಿಲ್ಲ ಎಂದು ಎದಿರೇಟು ಕೊಟ್ಟಿದ್ದರು.

 2018: ನವದೆಹಲಿ: ತೆರಿಗೆ ನೀತಿಯಿಂದಾಗಿ ತೊಂದರೆಗೆ ಒಳಗಾಗಿರುವ ಮಧ್ಯಮವರ್ಗದ ಜನರ ಹೋರಾಟ ಕುರಿತ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಪ್ರಶ್ನೆಯನ್ನುನಿರ್ಲಕ್ಷಿಸಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಪತ್ರಿಕಾಗೋಷ್ಠಿಯನ್ನು ಮರೆತುಬಿಡಿ, ಪ್ರಧಾನಿಯವರು ಮತಗಟ್ಟೆ ಕಾರ್ಯಕರ್ತರ ಸಭೆಯನ್ನು ಕೂಡಾ ನಡೆಸುವುದಿಲ್ಲ ಎಂದು ರಾಹುಲ್ ಟೀಕಿಸಿದರು. ತಮಿಳುನಾಡು ಮತ್ತು ಪುದುಚೆರಿಯ ಉತ್ರರಭಾಗದ ಜಿಲ್ಲೆಗಳ ಬಿಜೆಪಿ ಮತಗಟ್ಟೆ ಕಾರ್ಯಕರ್ತರ ಜೊತೆಗಿನ ಮೋದಿ ಅವರ ಸಂವಾದದ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಅವರು ಟೀಕೆ ಮಾಡಿದರು. ’ಬಿಜೆಪಿಯ ಪರಿಶೀಲಿತ ಪ್ರಶ್ನೆಗಳು ಒಂದು ಸೂಪರ್ಬ್ ಐಡಿಯಾ, ಆದರೆಪರಿಶೀಲಿತ ಉತ್ತರಗಳನ್ನು ಕೂಡಾ ಪಕ್ಷವು ಪರಿಗಣಿಸಬೇಕು ಎಂದು ರಾಹುಲ್ ಹೇಳಿದರುತಮಿಳುನಾಡಿನ ಬಿಜೆಪಿ ಕಾರ್ಯಕರ್ತರ ಜೊತೆಗಿನ ಸಂವಾದದ ವೇಳೆಯಲ್ಲಿ ಕಾರ್ಯಕರ್ತನೊಬ್ಬ ಮೋದಿ ಅವರ ಆಡಳಿತವು ಮಧ್ಯಮ ವರ್ಗದವರಿಂದ ತೆರಿಗೆ ಸಂಗ್ರಹದಲ್ಲಿ ಕಾರ್ಯನಿರತವಾಗಿದೆ, ಆದರೆ ಅವರ ಬಗ್ಗೆ ಕಾಳಜಿ ವಹಿಸಲು ಆಸಕ್ತಿ ಹೊಂದಿಲ್ಲ ಏಕೆ ಎಂಬುದಾಗಿ ಪ್ರಶ್ನಿಸಿದಾಗ ಮೋದಿ ಅವರು ಮುಜುಗರದ ಕ್ಷಣಗಳನ್ನು ಎದುರಿಸಿದ ಕುರಿತ ಮಾಧ್ಯಮ ವರದಿಯನ್ನು ರಾಹುಲ್ ಉಲ್ಲೇಖಿಸಿದರು. ಕಾರ್ಯಕರ್ತನು ವಿಡಿಯೋ ಸಂವಹನ ಕಾಲದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸದೇ ಇರುವ ಆಯ್ಕೆಯನ್ನು ಆಯ್ದುಕೊಂಡ ಪ್ರಧಾನಿಯವರು ಪುದುಚೆರಿಯ ಕಾರ್ಯಕರ್ತರ ಪ್ರಶ್ನೆಗಳತ್ತ ಗಮನ ಹರಿಸಿದರು ಎಂದು ವರದಿ ಪ್ರತಿಪಾದಿಸಿತ್ತು. ಪತ್ರಿಕಾ ವರದಿಯ ಹಿನ್ನೆಲೆಯಲ್ಲಿ ಮೋದಿ ಅವರನ್ನು ಅಣಕಿಸಿದ ರಾಹುಲ್ ಗಾಂಧಿವಣಕಂ ಪುದುಚೆರಿ!’ ಇದು ಹೋರಾಡುತ್ತಿರುವ ಮಧ್ಯಮ ವರ್ಗಕ್ಕೆ ನಮೋ ಅವರ ಉತ್ತರ. ಪತ್ರಿಕಾಗೋಷ್ಠಿಯನ್ನು ಮರೆತುಬಿಡಿ, ಅವರು ಮತಗಟ್ಟೆ ಕಾರ್ಯಕರ್ತರ ಸಮ್ಮೇಳನವನ್ನೂ ನಡೆಸಲಾರರು ಎಂದು ಟ್ವೀಟ್ ಮಾಡಿದರುಬಿಜೆಪಿಯು ಮೋದಿಯವರಿಗೆ ಕಾರ್ಯಕರ್ತರು ಕೇಳುವ ಪ್ರಶ್ನೆಗಳನ್ನುಜರಡಿ ಹಿಡಿಯುತ್ತದೆ (ಫಿಲ್ಟರ್ ಮಾಡುತ್ತದೆ)’ ಎಂಬ ವರದಿಯನ್ನು ಉಲ್ಲೇಖಿಸಿದ ರಾಹುಲ್ಬಿಜೆಪಿಯ ಪರಿಶೀಲಿತ ಪ್ರಶ್ನೆ ಒಂದು ಸೂಪರ್ಬ್ ಐಡಿಯಾ. ಪರಿಶೀಲಿತ ಉತ್ತರಗಳನ್ನೂ ಪರಿಗಣಿಸಿ ಎಂದು ಅಣಕಿಸಿದರು. ತಮ್ಮ ಅಧಿಕಾರಾವಧಿಯುದ್ದಕ್ಕೂ ಪತ್ರಿಕಾಗೋಷ್ಠಿಗಳನ್ನು ನಡೆಸದೇ ಇರುವುದಕ್ಕಾಗಿ ಪ್ರಧಾನಿ ಮೋದಿಯವರನ್ನು ಟೀಕಿಸುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ತಿಂಗಳ ಆದಿಯಲ್ಲಿ ತಾವು ನಡೆಸಿದ ಪತ್ರಿಕಾಗೋಷ್ಠಿಗಳ ಚಿತ್ರಗಳನ್ನು ಟ್ವೀಟ್ ಮಾಡಿದ್ದರು. ’ಪ್ರಶ್ನೆಗಳನ್ನು ಕೇಳಿಸಿಕೊಳ್ಳುವುದು ಒಂದು ಮೋಜು. ಪ್ರಧಾನಿಯವರು ಎಂದಾದರೂ ಒಂದು ದಿನ ಇದನ್ನು ಪ್ರಯತ್ನಿಸಬಹುದು ಎಂದು ರಾಹುಲ್ ಟ್ವೀಟ್ ಮಾಡಿದ್ದರು.
 
2018: ತಿರುವಳ್ಳೂರು: ತಾನು ಮೈಸೂರಿನಲ್ಲಿ ಐಟಿ ಉದ್ಯೋಗಿ ಎಂಬುದಾಗಿ ಪ್ರತಿಪಾದಿಸಿಕೊಂಡಿದ್ದ ವ್ಯಕ್ತಿಯ ಪ್ರೇಮಪಾಶಕ್ಕೆ ಸಿಲುಕಿನ ಹದಿಹರೆಯದ ಬಾಲಕಿಯೊಬ್ಬಳು ಬುದ್ಧಿ ಹೇಳಿದ ತಾಯಿಯನ್ನೇ ಕೊಂದ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ ಘಟಿಸಿತು. ತಮಿಳುನಾಡು ಪೊಲೀಸರು ೧೯ರ ಹರೆಯದ ಕಾಲೇಜು ವಿದ್ಯಾರ್ಥಿನಿ, ಆಕೆಯ ಫೇಸ್ ಬುಕ್ ಗೆಳೆಯ ಎಸ್. ಸುರೇಶ್ ಮತ್ತು ಕೊಲೆಗೆ ಸಹಕರಿಸಿದ ೧೬ ಮತ್ತು ೧೭ ವರ್ಷದ ಇಬ್ಬರು ಅಪ್ರಾಪ್ತರನ್ನು ಬಂಧಿಸಿದರು. ಬಾಲಕಿಯನ್ನು ತಿರುವಳ್ಳೂರಿನ ಆಂಜನೇಯಪುರಂನ ನಿವಾಸಿ ಎಸ್. ದೇವಿಪ್ರಿಯ ಎಂಬುದಾಗಿ ಗುರುತಿಸಲಾಗಿದ್ದು, ಆಕೆ ಆವಡಿಯ ವಾಣಿಜ್ಯ ಪದವೀಧರ ಕಾಲೇಜಿನ ವಿದ್ಯಾರ್ಥಿನಿ ಎಂದು ಪೊಲೀಸರು ಹೇಳಿದರು. ಫೇಸ್ ಬುಕ್ ಗೆಳೆಯ ಸುರೇಶ್ ಜೊತೆಗಿನ ತನ್ನ ಸಂಬಂಧವನ್ನು ವಿರೋಧಿಸಿದ್ದಕ್ಕಾಗಿ ದೇವಿಪ್ರಿಯ ತನ್ನ ೫೦ರ ಹರೆಯದ ತಾಯಿ ಭಾನುಮತಿಯನ್ನು ಕೊಲೆಗೈದಳು.  ‘ದೇವಿಪ್ರಿಯ ೧೯ರ ಹರೆಯದ ಎಸ್. ಸುರೇಶ ಎಂಬ ತಂಜಾವೂರು ಜಿಲ್ಲೆಯ ಕುಂಬಕೋಣಂ ನಿವಾಸಿಯನ್ನು ಕಳೆದ ವರ್ಷ ಫೇಸ್ ಬುಕ್ ಗೆಳೆಯನನ್ನಾಗಿ ಪರಿಚಯಿಸಿಕೊಂಡಿದ್ದಳು. ಮುಖತಃ ಭೇಟಿಯಾಗದೇ ಇದ್ದರೂ ಪ್ರಬಲ ಸಂಪರ್ಕವನ್ನು  ಫೇಸ್ ಬುಕ್ ಮೂಲಕ ಅವರು ಬೆಳೆಸಿಕೊಂಡಿದ್ದರು. ಸುರೇಶ ತಾನು ಮೈಸೂರಿನಲ್ಲಿ ಐಟಿ ಉದ್ಯೋಗಿಯಾಗಿರುವುದಾಗಿ ಹೇಳಿಕೊಂಡಿದ್ದ. ದೇವಿಪ್ರಿಯ ತನ್ನ ಫೇಸ್ ಬುಕ್ ಪ್ರೇಮದ ಕಥೆಯನ್ನು ತಾಯಿಗೆ ಹೇಳಿದಾಗ, ಆಕೆ ಫೇಸ್ ಬುಕ್ ಪ್ರೇಮಪ್ರಸ್ತಾಪ ನಂಬಬೇಡ, ಓದಿನ ಬಗ್ಗೆ ಗಮನ ಹರಿಸು ಎಂದು ಬುದ್ದಿವಾದ ಹೇಳಿದ್ದಳು ಎಂದು ಪೊಲೀಸರು ತಿಳಿಸಿದರು. ಭಾನುಮತಿ ಮೊಬೈಲ್ ಫೋನ್ ಬಳಸದಂತೆಯೂ ದೇವಿಪ್ರಿಯಳನ್ನು ನಿರ್ಬಂಧಿಸಿದ್ದಳು. ಇದರಿಂದ ಸಿಟ್ಟಿಗೆದ್ದ ದೇವಿಪ್ರಿಯ, ಸುರೇಶನನ್ನು ಸಂಪರ್ಕಿಸಿ ತಾಯಿಯನ್ನು ಕೊಲ್ಲಲು ಆತನ ನೆರವು ಕೋರಿದಳು. ಆತ ಅರ್ಧಕ್ಕೆ ಓದನ್ನು ನಿಲ್ಲಿಸಿದ್ದ ಇಬ್ಬರು ಅಪ್ರಾಪ್ತರನ್ನು ಆಕೆಗೆ ನೆರವಾಗುವಂತೆ ಸೂಚಿಸಿ ಕಳುಹಿಸಿಕೊಟ್ಟಿದ್ದ. ದೇವಿಪ್ರಿಯ ಅಪ್ರಾಪ್ತರಿಬ್ಬರನ್ನೂ ತನ್ನ ಗೆಳೆಯರು ಎಂಬುದಾಗಿ ತಾಯಿಗೆ ಪರಿಚಯಿಸಿದ್ದಳು. ಸೋಮವಾರ ಭಾನುಮತಿ ಮನೆಯಲ್ಲಿ ಒಬ್ಬಳೇ ಇದ್ದಾಗ ದೇವಿಪ್ರಿಯ ಮತ್ತು ಅಪ್ರಾಪ್ತರಿಬ್ಬರೂ ಸೇರಿ ಕುಡುಗೋಲುಗಳಿಂದ ದಾಳಿ ನಡೆಸಿ ಭಾನುಮತಿಯನ್ನು ಕೊಂದರು ಎಂದು ಪೊಲೀಸರು ಹೇಳಿದರು. ಭಾನುಮತಿಯ ಚೀರಾಟದಿಂದ ಅಲ್ಲಿಗೆ ಬಂದ ನೆರೆಹೊರೆಯವರು ಅಟ್ಟಿಸಿಕೊಂಡು ಹೋಗಿ ಅಪ್ರಾಪ್ತರಿಬ್ಬರನ್ನೂ ಹಿಡಿದರು. ಅವರಿಬ್ಬರೂ ವಿಚಾರಣೆ ಕಾಲದಲ್ಲಿ ತಪ್ಪೊಪ್ಪಿಕೊಂಡು ಪೂರ್ತಿ ಕಥೆ ಹೇಳಿದರು. ಅದನ್ನು ಅನುಸರಿಸಿ ಪೊಲೀಸರು ಮಂಗಳವಾರ ಸುರೇಶನನ್ನು ಬಂಧಿಸಿದರು. ಪ್ರಾಥಮಿಕ ತನಿಖೆಯಿಂದ ಸುರೇಶ ಐಟಿ ಉದ್ಯೋಗಿಯಲ್ಲ, ಆಂಧ್ರಪ್ರದೇಶದ ಶ್ರೀ ಸಿಟಿಯ ಫ್ಯಾಕ್ಟರಿ ಒಂದರ ಕೆಲಸಗಾರ ಎಂಬುದು ಬೆಳಕಿಗೆ ಬಂದಿತು. ಆತ ತನ್ನ ಹಿನ್ನೆಲೆ ಬಗ್ಗೆ ದೇವಿಪ್ರಿಯಳಿಗೆ ಸುಳ್ಳು ಹೇಳಿದ್ದ ಎಂಬುದೂ ತಿಳಿದು ಬಂತು. ದೇವಿಪ್ರಿಯ ಮತ್ತು ಸುರೇಶ ಇಬ್ಬರನ್ನೂ ನಗರದ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ಅವರನ್ನು ಪೊಲೀಸ್ ವಶಕ್ಕೆ ಒಪ್ಪಿಸಿದೆ.

2018: ಬೆಂಗಳೂರು: ಪದ್ಮಶ್ರೀ ಪುರಸ್ಕೃತೆ ಡಾ.ಸೂಲಗಿತ್ತಿ ನರಸಮ್ಮ(೯೮) ವಿಧಿವಶರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲು ತ್ತಿದ್ದ ಅವರು ಬೆಂಗಳೂರಿನ ಬಿಜಿಎಸ್ ಆಸ್ಪ ತ್ರೆಯಲ್ಲಿ ಕೊನೆಯುಸಿರೆಳೆದರು.  ಸೋಮವಾರ ರಾತ್ರಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಆರಂಭಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ೩ ಗಂಟೆಗೆ ನರಸಮ್ಮ ಅವರು ನಿಧನ ಹೊಂದಿದ್ದಾರೆ. ಸೂಲಗಿತ್ತಿ ನರಸಮ್ಮ ಮೂಲತಃ ತುಮ ಕೂರಿನ ಪಾವಗಡದವರು, ಅವರ ಈ ಕೆಲಸವನ್ನು ಪರಿಗಣಿಸಿ ಭಾರತ ಸರ್ಕಾರ ೨೦೧೮ರಲ್ಲಿ ಪದ್ಮಶ್ರೀ ಹಾಗೂ ೨೦೧೩ರಲ್ಲಿ ವಯೋಶ್ರಷ್ಠ ಸಮ್ಮಾನ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿತ್ತು. ಇವರು ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಅನ್ನು ಪಡೆದಿದ್ದರು.  ನರಸಮ್ಮ ಅವರು ಅಲೆಮಾರಿ ಜನಾಂಗಕ್ಕೆ ಸೇರಿದವರು. ಗರ್ಭಿಣಿಯರಿಗೆ ನೈಸರ್ಗಿಕ ಆಯುರ್ವೇದ ಔಷಧಗಳನ್ನು ಕೂಡ ತಯಾರಿಸಿ ಕೊಡುತ್ತಿದ್ದರು. ಗರ್ಭಿಣಿ ಯರ ಭ್ರೂಣದ ನಾಡಿಮಿಡಿತ ಅರ್ಥ ಮಾಡಿಕೊಂಡು, ಅದರ ಆರೋಗ್ಯ, ಮಗುವಿನ ತಲೆ ಯಾವ ಕಡೆಗಿದೆ, ೮-೯ ತಿಂಗಳಲ್ಲಿ ಮಗು ಗಂಡೊ-ಹೆಣ್ಣೊ ಎಂದು ಕೂಡ ಹೇಳುವಷ್ಟು ನಿಪುಣರು.  ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಕೃಷ್ಣಪುರದ ಮೂಲದವರಾದ ಸೂಲಗಿತ್ತಿ ನರಸಮ್ಮ ಆಸ್ಪತ್ರೆ ಹಾಗೂ ವೈದ್ಯರಿಲ್ಲದ ಕಾಲದಲ್ಲಿ ಹೆರಿಗೆ ತಜ್ಞೆಯಾಗಿದ್ದರು.  ಗರ್ಭಿಣಿಯರ ಪಾಲಿನ ದೇವರು ಅಂತಲೇ ಕರೆಸಿಕೊಳ್ಳುವ ನರಸಮ್ಮ ೧,೫೦೦ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದಾರೆ. ನರಸ ಮ್ಮನವರ ಸೇವೆಯನ್ನು ಗುರುತಿಸಿರುವ ಹಲವು ಸಂಘ ಸಂಸ್ಥೆ ಗಳು, ಈಗಾಗಲೇ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ದೇವ ರಾಜು ಅರಸು ಪ್ರಶಸ್ತಿ, ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ, ವಯೋಶ್ರೇಷ್ಠ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿಗಳು ಸೂಲಗಿತ್ತಿ ನರಸಮ್ಮನವರಿಗೆ ಲಭಿಸಿದ್ದವು.

2018: ನವದೆಹಲಿ: ಶಾಲೆಗೆ ಮಕ್ಕಳನ್ನು ಸೇರಿಸಿಕೊಳ್ಳುವಾಗ ಆಧಾರ್ ಸಂಖ್ಯೆ ಕೊಡಲೇಬೇಕು ಎಂದು ಕಡ್ಡಾಯಗೊ ಳಿಸುವುದು ತಪ್ಪು. ಹೀಗೆ ಮಾಡುವುದು ಸುಪ್ರೀಕೋರ್ಟ್ ನೀಡಿದ ತೀರ್ಪಿನ ಉಲ್ಲಂಘನೆ ಎಂದು ಆಧಾರ್ ಸಂಖ್ಯೆ ಕೊಡುವಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐ ಡಿಎಐ) ಎಚ್ಚರಿಸಿತು. ದೆಹಲಿಯ ೧೫೦೦ಕ್ಕೂ ಹೆಚ್ಚು ಖಾಸಗಿ ಶಾಲೆಗ ಳಲ್ಲಿ ನರ್ಸರಿ ಮತ್ತು ಪ್ರಾಥಮಿಕ ತರಗತಿಗ ಳಿಗೆ ಪ್ರವೇಶ ಆರಂಭ ವಾಗುವ ಸಮಯದಲ್ಲಿಯೇ ಯುಐಡಿಎಐ ಎಚ್ಚರಿಕೆ ನೀಡಿತು. ಕೆಲ ಶಾಲೆಗಳು ಮಕ್ಕಳನ್ನು ಸೇರಿಸಿಕೊಳ್ಳಲು ಆಧಾರ್ ಸಂಖ್ಯೆಯನ್ನು ಕಡ್ಡಾಯ ದಾಖಲೆ ಎಂದು ಬಿಂಬಿಸುತ್ತಿ ರುವುದು ನಮ್ಮ ಗಮನಕ್ಕೆ ಬಂದಿದೆ. ಇದು ತಪ್ಪು. ಶಾಲೆ ಅಥವಾ ಯಾವುದೇ ಸಂಸ್ಥೆಗೆ ಮಕ್ಕಳಿಂದ ಆಧಾರ್ ಸಂಖ್ಯೆಯನ್ನು ಪಡೆಯುವುದು ಕಡ್ಡಾಯ ಎಂದು ಹೇಳುವ ಅಧಿಕಾರವಿಲ್ಲ ಎಂದು ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆಆಧಾರ್ ಇಲ್ಲ ಎನ್ನುವುದು ಯಾವುದೇ ಮಗುವಿಗೆ ಪ್ರವೇಶ ನಿರಾಕರಿಸಲು ಒಂದು ನೆಪವಾಗಬಾರದು. ಹೀಗೆ ಮಾಡುವುದು ನ್ಯಾಯಾಂಗ ನಿಂದನೆಯಾಗುತ್ತದೆ. ಮಕ್ಕಳು ಶಾಲೆಗೆ ಸೇರಿದ ನಂತರ ವಿಶೇ? ಕ್ಯಾಂಪ್ಗಳನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ಆಧಾರ್ ಸಂಖ್ಯೆ ಪಡೆದುಕೊಳ್ಳಲು ನೆರವಾಗಬೇಕು ಎಂದು ಸಲಹೆ ಮಾಡಿದರು.

2017: ನವದೆಹಲಿ: ಭಾರತಕ್ಕಾಗಿ ಗೂಢಚರ್ಯೆ ನಡೆಸಿದ ಆಪಾದನೆಗಾಗಿ ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತದ ಮಾಜಿ ನೌಕಾ ಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರು ಈದಿನ ಮಧ್ಯಾಹ್ನ ಇಸ್ಲಾಮಾಬಾದಿನಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು. ಭೇಟಿ ಸುಮಾರು ೪೦ ನಿಮಿಷ ಕಾಲ ನಡೆಯಿತು. ಆದರೆ ಜಾಧವ್ ಮತ್ತು ಅವರ ಪತ್ನಿ ಚೇತನ್ ಕುಲ್ ಹಾಗೂ ತಾಯಿ ಅವಂತಿ ಅವನ್ನು ಗಾಜಿನ ಪರದೆ ಮೂಲಕ ಪ್ರತ್ಯೇಕಿಸಲಾಗಿತ್ತು. ಇಂಟರ್ ಕಾಮ್ ಸಾಧನದ ಮೂಲಕ ಅವರಿಗೆ ಪರಸ್ಪರ ಮಾತನಾಡಲು ಅವಕಾಶ ಕಲ್ಪಿಸಲಾಗಿತ್ತು. ಭದ್ರತಾ ಕಾರಣಗಳಿಗಾಗಿ ನೇರ ಭೇಟಿಗೆ ಅವಕಾಶ ನೀಡಲು ಸಾಧ್ಯವಿರಲಿಲ್ಲ ಎಂದು ಪಾಕಿಸ್ತಾನ ತಿಳಿಸಿತು.  ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಬಂಧನಕ್ಕೆ ಒಳಗಾದ ಬಳಿಕ ತಮ್ಮ ಕುಟುಂಬದ ಜೊತೆ ಜಾಧವ್ ಅವರ ಮೊದಲ ಭೇಟಿ ಇದಾಗಿತ್ತು, ವಿದೇಶಾಂಗ ವ್ಯವಹಾರಗಳ ಕಟ್ಟಡದಲ್ಲಿ ಭಾರಿ ಭದ್ರತಾ ವ್ಯವಸ್ಥೆಯ ನಡುವೆ ಭೇಟಿ ನಡೆಯಿತು. ಕುಟುಂಬ ಸದಸ್ಯರ ಭೇಟಿಗೆ ಅವಕಾಶ ಕಲ್ಪಿಸುವಂತೆ ಭಾರತ ಮತ್ತು ಜಾಧವ್ ಕುಟುಂಬದ ಹಲವಾರು ತಿಂಗಳುಗಳ ಮನವಿ ಹಾಗೂ ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯವು ಜಾಧವ್ ಮರಣದಂಡನೆ ಜಾರಿಗೆ ತಡೆಯಾಜ್ಞೆ ನೀಡಿದ ಬಳಿಕ ಪಾಕಿಸ್ತಾನ ಜಾಧವ್-ಕುಟುಂಬ ಸದಸ್ಯರ ಭೇಟಿಗೆ ಅವಕಾಶ ಕಲ್ಪಿಸಿತ್ತು. ರಾಷ್ಟ್ರದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಜನ್ಮದಿನದ ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ಜಾಧವ್ ಮತ್ತು ಕುಟುಂಬದ ಭೇಟಿಗೆ ಅವಕಾಶ ನೀಡಲಾಗಿದೆ ಎಂದು ಪಾಕಿಸ್ತಾನ ಹೇಳಿತು. ಆದರೆ ಮರುಕ್ಷಣದಲ್ಲೇ ಜಾಧವ್ ಅವರನ್ನುಭಾರತೀಯ ಭಯೋತ್ಪಾದನೆಯ ಮುಖ ಎಂದು ಬಣ್ಣಿಸಿ ರಾಷ್ಟ್ರದಲ್ಲಿ ಹಲವಾರು ದಾಳಿಗಳನ್ನು ನಡೆಸುವ ಬಗ್ಗೆ ಜಾಧವ್ ಅವರು ನೀಡಿದ್ದೆನ್ನಲಾದತಪ್ಪೊಪ್ಪಿಗೆಯ ಇನ್ನೊಂದು ವಿಡಿಯೋವನ್ನೂ ಬಿಡುಗಡೆ ಮಾಡಿತು.ರಾಷ್ಟ್ರಪಿತ ಕ್ವುವಾಯಿದ್ --ಆಜಂ ಮೊಹಮ್ಮದ್ ಅಲಿ ಜಿನ್ನಾ ಅವರ ಜನ್ಮದಿನದ ಅಂಗವಾಗಿ ಮಾನವೀಯತೆಯ ಸಂಕೇತವಾಗಿ ಪಾಕಿಸ್ತಾನವು ಕಮಾಂಡರ್ ಜಾಧವ್ ಜೊತೆ ಪತ್ನಿ ಮತ್ತು ತಾಯಿಯ ಭೇಟಿಗೆ ಅನುಮತಿ ನೀಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್ ಟ್ವೀಟ್ ಮಾಡಿದರು.  ಟ್ವೀಟ್ ಸಂದೇಶದಲ್ಲಿ ಜಾಧವ್ ಅವರನ್ನು ಮಾಜಿ ಭಾರತೀಯ ನೌಕಾಧಿಕಾರಿ ಎಂದು ಪಾಕಿಸ್ತಾನ  ಬಣ್ಣಿಸಿತು. ತನ್ನ ಭದ್ರತಾ ಪಡೆಗಳು ಜಾಧವ್ ಅವರನ್ನು ಗಲಭೆ ಪೀಡಿತ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ಅವರು ಇರಾನಿನಿಂದ ಪ್ರವೇಶಿಸಿದ ಬಳಿಕ ಬಂಧಿಸಿತು ಎಂದು ಪಾಕಿಸ್ತಾನ ಪ್ರತಿಪಾದಿಸಿತು. ಜಾಧವ್ ಬಳಿ ಅವರನ್ನು ಹುಸೈನ್ ಮುಬಾರಕ್ ಪಟೇಲ್ ಎಂಬುದಾಗಿ ಗುರುತಿಸುವ ಭಾರತೀಯ ಪಾಸ್ ಪೋರ್ಟ್ ಇತ್ತು ಎಂದೂ ಪಾಕ್ ಪ್ರತಿಪಾದಿಸಿತು. ಆದರೆ, ಭಾರತೀಯ ನೌಕಾಪಡೆಯಿಂದ ನಿವೃತ್ತರಾದ ಬಳಿಕ ವೈಯಕ್ತಿಕ ವ್ಯವಹಾರ ಸಲುವಾಗಿ ಇರಾನಿಗೆ ಹೋಗಿದ್ದ ಜಾಧವ್ ಅವರನ್ನು ಅಪಹರಿಸಲಾಗಿದೆ ಎಂದು ಭಾರತ ಹೇಳಿತ್ತು.ಇಸ್ಲಾನಿಕ್ ಸಂಪ್ರದಾಯಗಳಿಗೆ ಅನುಗುಣವಾಗಿ ಸಂಪೂರ್ಣ ಮಾನವೀಯ ನೆಲೆಯಲ್ಲಿ ಭೇಟಿಯ ವ್ಯವಸ್ಥೆ ಮಾಡಲಾಗಿತ್ತು ಎಂದೂ ಫೈಸಲ್ ಟ್ವೀಟ್ ಸಂದೇಶದಲ್ಲಿ ತಿಳಿಸಿದರು. ಜಾಧವ್ ಅವರ ತಾಯಿ ಅವಂತಿ ಮತ್ತು ಪತ್ನಿ ಚೇತನ್ ಕುಲ್ ಅವರು ಆಘಾಶಾಹಿ ಬ್ಲಾಕಿನ ಸಚಿವಾಲಯ ಕಟ್ಟಡದ ಒಳಕ್ಕೆ ಭಾರತದ ಡೆಪ್ಯುಟಿ ಹೈಕಮೀಷನರ್  ಜೆ.ಪಿ. ಸಿಂಗ್ ಮತ್ತು ಪಾಕಿಸ್ತಾನಿ ಮಹಿಳಾ ಅಧಿಕಾರಿಯೊಬ್ಬರ ಜೊತೆಗೆ ಪ್ರವೇಶಿಸುವುದನ್ನು ಟಿವಿ ವಿಡಿಯೋ ತೋರಿಸಿದೆ. ಒಳಕ್ಕೆ ಹೋದೊಡನೆಯೇ ಕಟ್ಟಡದ ಬಾಗಿಲುಗಳನ್ನು ಮುಚ್ಚಲಾಯಿತು.  ಜಾಧವ್ ಅವರು ಗಾಜಿನ ಪರದೆಯಾಚೆಯಿಂದ ತಮ್ಮ ಪತ್ನಿ ಮತ್ತು ತಾಯಿ ಜೊತೆಗೆ ಮಾತನಾಡುವ ಚಿತ್ರಗಳನ್ನು ಪಾಕಿಸ್ತಾನದ ವಿದೇಶಾಂಗ ಕಚೇರಿಯು ಬಳಿಕ ಬಿಡುಗಡೆ ಮಾಡಿತು. ಮಧ್ಯಾಹ್ನ .೩೫ಕ್ಕೆ ಆರಂಭವಾದ ಭೇಟಿ ೪೫ ನಿಮಿಷ ಕಾಲ ನಡೆಯಿತು. ಬಳಿಕ ಜಾಧವ್ ಕುಟುಂಬ ಸದಸ್ಯರು ಮತ್ತು ಇತರರನ್ನು ಬಿಳಿಯ ಎಸ್ ಯುವಿ ಮೂಲಕ ಕರೆದುಕೊಂಡು ಹೋಗಲಾಗಿತ್ತು.ಜಾಧವ್ ತಾಯಿ ಮತ್ತು ಪತ್ನಿ ಇಸ್ಲಾಮಾಬಾದಿಗೆ ಈದಿನ ವಾಣಿಜ್ಯ ವಿಮಾನದಲ್ಲಿ ದುಬೈ ಮೂಲಕ ಬಂದಿದ್ದರು. ವಿದೇಶಾಂಗ ಸಚಿವಾಲಯ ಕಟ್ಟಡಕ್ಕೆ ತೆರಳುವ ಮುನ್ನ ೩೦ ನಿಮಿಷ ಕಾಲ ಅವರು ಭಾರತೀಯ ರಾಯಭಾರಿ ಕಚೇರಿಯಲ್ಲಿ ತಂಗಿದ್ದರು. ಭೇಟಿಯ ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ ಪಾಕಿಸ್ತಾನಿ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್  ನಾವು ನಮ್ಮ ಬದ್ಧತೆಗಳನ್ನು ಗೌರವಿಸಿದ್ದೇವೆ ಎಂದು ಬರೆದರು. ಭೇಟಿಯಲ್ಲಿ ಪಾಕಿಸ್ತಾನದ ಕಡೆಯಿಂದ ಭಾರತದಲ್ಲಿನ ವಿದೇಶಾಂಗ ಕಚೇರಿ ನಿರ್ದೇಶಕ ಡಾ. ಫರೇಹಾ ಬಗ್ತಿ ಹಾಜರಿದ್ದರು. ಜಾಧವ್ ಪತ್ನಿ ಮತ್ತು ತಾಯಿ ಸಚಿವಾಲಯಕ್ಕೆ ಬರುತ್ತಿದ್ದಂತೆಯೇ ಎದುರಾದ ಮಾಧ್ಯಮ ಮಂದಿಗೆ ನಮಸ್ಕರಿಸಿದರು. ಆದರೆ ಏನೂ ಮಾತನಾಡಲಿಲ್ಲ. ವಾಪಸ್ ಹೊರಟಾಗಲೂ ಏನೂ ಮಾತನಾಡದೆ ಮುಂದುವರೆದರು. ಕುಟುಂಬ ಸದಸ್ಯರು ಬರುವ ಮುನ್ನವೇ ಜಾಧವ್ ಅವರನ್ನು ವಿದೇಶಾಂಗ ಸಚಿವಾಲಯ ಕಟ್ಟಡಕ್ಕೆ ಕರೆತರಲಾಗಿತ್ತು. ಆದರೆ ಅಲ್ಲಿಗೆ ಕರೆತರುವ ಮುನ್ನ ಜಾಧವ್ ಅವರನ್ನು ಎಲ್ಲಿ ಇರಿಸಲಾಗಿತ್ತು ಎಂಬುದನ್ನು ರಹಸ್ಯವಾಗಿ ಇರಿಸಲಾಗಿತ್ತು. ‘ಜಾಧವ್ ಮತ್ತು ಕುಟುಂಬ ಸದಸ್ಯರು ಸಂತಸದಿಂದಿದ್ದರು. ಮುಕ್ತವಾಗಿ ಮಾತನಾಡಿದರು. ಜಾಧವ್ ಆರೋಗ್ಯ ಉತ್ತಮವಾಗಿತ್ತು ಎಂದು ಬಳಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಪಾಕಿಸ್ತಾನ, ಭೇಟಿಯು ರಾಜತಾಂತ್ರಿಕ ಸಂಪರ್ಕವಾಗುವುದಿಲ್ಲ ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇರುವ ಪ್ರಕರಣದ ಮೇಲೆ ಯಾವುದೇ ಪರಿಣಾಮವನ್ನೂ ಬೀರುವುದಿಲ್ಲ ಎಂದು ಹೇಳಿತು. ಭಾರತ ಇದಕ್ಕೆ ಯಾವುದೇ ಪ್ರತಿಕ್ರಿಯ ನೀಡಲಿಲ್ಲ.

 2017: ನೋಯಿಡಾ: ಇಂಧನ ವೆಚ್ಚ ಮತ್ತು ಪೆಟ್ರೋಲಿಯಂ ಆಮದು ಸಂಬಂಧಿತ ವೆಚ್ಚ ಉಳಿತಾಯದ ಸಲುವಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಜನರಿಗೆ ಸಲಹೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವುದುಪ್ರತಿಷ್ಠೆಯ ವಿಷಯ ಆಗಬೇಕು ಎಂದು ಹೇಳಿದರು. ದೆಹಲಿ ಮೆಟ್ರೋದ ೧೨ ಕಿಮೀ ಉದ್ದದ ಮಗೆಂಟಾ ಮಾರ್ಗವನ್ನು ಮೆಟ್ರೋ ರೈಲಿನಲ್ಲಿ ಸಂಚರಿಸುವ ಮೂಲಕ ಇಲ್ಲಿ ಉದ್ಘಾಟಿಸಿದ ಅವರುಮೂಲ ಸವಲತ್ತು ಕಲ್ಪಿಸಲು ಸರ್ಕಾರಕ್ಕೆ ದೊಡ್ಡ ಪ್ರಮಾಣದ ವೆಚ್ಚವಾಗುತ್ತದೆ. ಆದರೆ ಅದು ಸಿದ್ಧವಾದಾಗ ಅದರ ಲಾಭ ಮುಂಬರುವ ತಲೆಮಾರುಗಳಿಗೆ ಲಭಿಸುತ್ತದೆ ಎಂದು ನುಡಿದರು. ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ೨೦೨೨ರಲ್ಲಿ ಭಾರತ ತನ್ನ ಸ್ವಾತಂತ್ರ್ಯದ ೭೫ನೇ ವರ್ಷ ಆಚರಣೆಯ ವೇಳೆಗೆ ಪೆಟ್ರೋಲಿಯಂ ಉತ್ಪನ್ನಗಳ ಆಮದು ಗಣನೀಯವಾಗಿ ಕಡಿತವಾಗಬೇಕು ಎಂದು ತಾವು ಬಯಸುವುದಾಗಿ ಹೇಳಿದರು. ಬಹುಮಾದರಿ ಸಾರಿಗೆ ವ್ಯವಸ್ಥೆಯು ಇಂಧನ ಕಡಿತದ ಖಾತರಿ ನೀಡಬಲ್ಲುದು. ಇದು ಜನ ಸಾಮಾನ್ಯರಿಗೆ ಹಣ ಉಳಿಸಲೂ ನೆರವಾಗುವುದು ಮತ್ತು ಪರಿಸರಕ್ಕೂ ಉಪಯುಕ್ತ ಎಂದು ಅವರು ನುಡಿದರು. ೨೦೦೨ರ ಡಿಸೆಂಬರ್ ೨೪ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮೆಟ್ರೋ ಮೂಲಕ ಸಂಚರಿಸಿದ್ದರು ಎಂದು ನೆನಪಿಸಿದ ಮೋದಿ, ’ಅದೊಂದು ಚಾರಿತ್ರಿಕ ಕ್ಷಣವಾಗಿತ್ತು. ಅಂದಿನಿಂದ ಎನ್ ಸಿಆರ್ ನಲ್ಲಿ ಮೆಟ್ರೋ ಜಾಲ ಗಣನೀಯವಾಗಿ ವಿಸ್ತರಣೆಗೊಂಡಿದೆ ಎಂದು ಹೇಳಿದರು. ‘ನಾವು ಸಂಪರ್ಕವು ಅತ್ಯಂತ ಪ್ರಾಮುಖ್ಯತೆ ಗಳಿಸಿರುವ ಯುಗದಲ್ಲಿ ಬದುಕುತ್ತಿದ್ದೇವೆ. ಸಂಪರ್ಕ ಇಲ್ಲದೇ ಹೋದರೆ ಬದುಕೇ ಸ್ಥಗಿತಗೊಳ್ಳುತ್ತದೆ. ಮೆಟ್ರೋ ವರ್ತಮಾನಕ್ಕೆ ಮಾತ್ರವೇ ಅಲ್ಲ ಭವಿಷ್ಯದ ತಲೆಮಾರುಗಳಿಗಾಗಿ ಇರುವಂತಹುದು ಎಂದು ಪ್ರಧಾನಿ ನುಡಿದರು. ಜನರ ಮನೋಭಾವ ಬದಲಾಗಬೇಕಾದ ಅಗತ್ಯ ಇದೆ. ತಮ್ಮ ಖಾಸಗಿ ವಾಹನಗಳನ್ನು ಬಳಸುವ ಬದಲಿಗೆ ಜನರು ಸಾರ್ವಜನಿಕ ಸಾರಿಗೆಯನ್ನು ಬಳಸಲು ಆದ್ಯತೆ ನೀಡುವಂತಾಗಬೇಕು. ಮೆಟ್ರೋದಲ್ಲಿ ಪ್ರಯಾಣ ಮಾಡುವುದು ಪ್ರತಿಷ್ಠೆಯ ವಿಷಯವಾಗಬೇಕು ಎಂದು ಅವರು ಹೇಳಿದರು. ಮೆಟ್ರೋದಲ್ಲೇ ಪಯಣ: ಬೊಟಾನಿಕಲ್ ಗಾರ್ಡನ್ ಮತ್ತು ಓಕ್ಲಾ ಪಕ್ಷಿಧಾಮ ನಿಲ್ಧಾಣಗಳ ನಡುವಣ ಮಾರ್ಗದಲ್ಲಿ ಸಂಚರಿಸುವ ಮೂಲಕ ಪ್ರಧಾನಿ ಮೋದಿ ಅವರು ದೆಹಲಿ ಮೆಟ್ರೋದ ೧೨ ಕಿಮೀ ಉದ್ದದ ಮಗೆಂಟಾ ಮಾರ್ಗವನ್ನು ಉದ್ಘಾಟಿಸಿದರು. ಉತ್ತರ ಪ್ರದೇಶದ ರಾಜ್ಯಪಾಲ ರಾi ನಾಯ್ಕ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪ್ ಸಿಂಗ್ ಪುರಿ ಮತ್ತು ದೆಹಲಿ ಮೆಟ್ರೋ ರೈಲು ನಿಗಮದ ಮುಖ್ಯಸ್ಥ ಮಂಗು ಸಿಂಗ್ ಅವರು ಮೆಟ್ರೋ ಪಯಣದಲ್ಲಿ ಪ್ರಧಾನಿ ಜೊತೆಗಿದ್ದರು. ಮಗೆಂಟಾ ಮಾರ್ಗದ ಟರ್ಮಿನಲ್ ನಿಲ್ದಾಣವಾದ ಬೊಟಾನಿಕಲ್ ಗಾರ್ಡನ್ನಲ್ಲಿ ಮಧ್ಯಾಹ್ನ .೦೫ ಗಂಟೆಗೆ ಮೆಟ್ರೋ ರೈಲು ಏರಿದ ಮೋದಿ, ನಾಲ್ಕು ನಿಮಿಷಗಳ ಪಯಣದ ಬಳಿಕ ಓಕ್ಲಾ ಪಕ್ಷಿಧಾಮ ನಿಲ್ದಾಣದಲ್ಲಿ ರೈಲಿನಿಂದ ಇಳಿದರು. ಎರಡೂ ನಿಲ್ದಾಣಗಳು ನವದೆಹಲಿಯ ಗಡಿಯಲ್ಲಿರುವ ಉತ್ತರ ಪ್ರದೇಶದ ನೋಯಿಡಾದಲ್ಲಿ ಬರುತ್ತವೆ. ಮಾರ್ಗದ ಇನ್ನೊಂದು ಕೊನೆಯು ಪ್ರಸ್ತುತ ದಕ್ಷಿಣ ದೆಹಲಿಯ ಕಲ್ಕಾಜಿ ಮಂದಿರದಲ್ಲಿ ಇದೆ. ಏಪ್ರಿಲ್ ವೇಳೆಗೆ ಜನಕಪುರಿ ಪಶ್ಚಿಮವರೆಗೆ ಸಂಪೂರ್ಣ ಮಾರ್ಗ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ. ಮೆಟ್ರೋ ನಿಲ್ದಾಣದಿಂದ ಸೆಕ್ಟರ್ ೧೨೫ರಲ್ಲಿನ ಅಮಿಟಿ ಯುನಿವರ್ಸಿಟಿಯ ಮೈದಾನದಲ್ಲಿ ಏರ್ಪಾಡಾಗಿದ್ದ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲು ಮೋದಿ  ತೆರಳಿದರು.

2017: ಪ್ಯಾಂಗ್ಯಾಂಗ್: ತಾನು ಅಣ್ವಸ್ತ್ರ ಕಾರ್ಯಕ್ರಮವನ್ನು ಬಿಟ್ಟು ಬಿಡಬಹುದು ಎಂಬ ಅಮೆರಿಕದ ಯೋಚನೆ ಕೇವಲಪೈಲ್ ಲೈನ್ ಕನಸು ಎಂದು ಉತ್ತರ ಕೊರಿಯಾ ಹೇಳಿತು. ತನ್ನನ್ನು ಗುರಿಯಾಗಿಸಿ ವಿಶ್ವಸಂಸ್ಥೆಯು ಇತ್ತೀಚೆಗೆ ಅಂಗೀಕರಿಸಿರುವ ದಿಗ್ಬಂಧನವು ತನ್ನ ಸಾರ್ವಭೌಮತ್ವವನ್ನು ಉಲ್ಲಂಘಿಸುವಂತಹಸಮರ ಎಂದು ಅದು ಬಣ್ಣಿಸಿತು.
ಉತ್ತರ ಕೊರಿಯಾವು ಅಮೆರಿಕದ ಯಾವುದೇ ಸ್ಥಳವನ್ನೂ ತಲುಪಬಹುದಾದ ಸಮರ ಕ್ಷಿಪಣಿಯನ್ನು ಇತ್ತೀಚೆಗೆ ಉಡಾಯಿಸಿದ್ದಕ್ಕಾಗಿ 22 ಡಿಸೆಂಬರ್ 2017ರ ಶುಕ್ರವಾರ  ವಿಶ್ವ ಸಂಸ್ಥೆ ಭದ್ರತಾ ಮಂಡಳಿಯು ಉತ್ತರ ಕೊರಿಯಾ ವಿರುದ್ದ ಹೊಸದಾಗಿ ದಿಗ್ಬಂಧನಗಳನ್ನು ವಿಧಿಸಿತ್ತು. ಉತ್ತರ ಕೊರಿಯಾದ ನಿಕಟ ಮಿತ್ರ ಚೀನಾದ ಜೊತೆಗೆ ಸಮಾಲೋಚಿಸಿದ ಬಳಿಕ ಅಮೆರಿಕವು ನಿರ್ಣಯವನ್ನು ರೂಪಿಸಿತ್ತು. ಅಮೆರಿಕವು ಸಿದ್ಧ ಪಡಿಸಿದ ದಿಗ್ಬಂಧನ ನಿರ್ಣಯವನ್ನು ನಾವು ನಮ್ಮ ಸಾರ್ವಭೌಮತ್ವವನ್ನು ಉಲ್ಲಂಘಿಸುವಂತಹ ಸಮರ ಕೃತ್ಯ ಎಂದು ಬಣ್ಣಿಸುತ್ತೇವೆ. ಇದು ಕೊರಿಯಾ ಪರ್ಯಾಯ ದ್ವೀಪದ ಪ್ರದೇಶದ ಶಾಂತಿ ಮತ್ತು ಸ್ಥಿರತೆಯನ್ನು ಭಂಗಗೊಳಿಸುತ್ತದೆ ಎಂದು ಕೊರಿಯಾ ಹೇಳಿತು. ನಿರ್ಣಯವನ್ನು ಸಾರಾಸಗಟು ತಿರಸ್ಕರಿಸುವುದಾಗಿ ಕೊರಿಯಾದ ವಿದೇಶಾಂಗ ಸಚಿವಾಲಯ ಹೇಳಿತು. ಈ ನಿರ್ಣಯವು ಉತ್ತರ ಕೊರಿಯಾದ ಮೇಲೆ ವಿಧಿಸಲಾದ ಸಂಪೂರ್ಣ ಆರ್ಥಿಕ ದಿಗ್ಬಂಧನಕ್ಕೆ ಸಮವಾಗಿದೆ. ಅಮೆರಿಕವು ಸುರಕ್ಷಿತವಾಗಿ ಬದುಕಬಯಸುವುದಿದ್ದರೆ ಅದು ದ್ವೇಷ ನೀತಿಯನ್ನು ಬಿಟ್ಟು, ಅಣ್ವಸ್ತ್ರ ಇರುವ ರಾಷ್ಟ್ರಗಳ ಜೊತೆ ಸಹಬಾಳ್ವೆ ನಡೆಸುವುದನ್ನು ಕಲಿಯಬೇಕು. ನಾವು ಅಣ್ವಸ್ತ್ರಗಳನ್ನು ಬಿಟ್ಟು ಬಿಡುತ್ತೇವೆ ಎಂಬದು ಅದರ ಪೈಪ್ ಲೈನ್ ಡ್ರೀಮ್ ಮಾತ್ರ ಎಂದು ಹೇಳಿಕೆ ಬಣ್ಣಿಸಿತು.

2017: ರೋಮ್: ಜಗತ್ತಿನಾದ್ಯಂತಸಮರ ಗಾಳಿ ಬೀಸುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿರುವ ಪೋಪ್ ಫ್ರಾನ್ಸಿಸ್ ಅವರು ಕೊರಿಯಾ ಪರ್ಯಾಯ ದ್ವೀಪದಲ್ಲಿನ ಘರ್ಷಣೆ ಕೊನೆಗೊಳ್ಳಲಿ ಮತ್ತು ಪರಸ್ಪರ ವಿಶ್ವಾಸ ಹೆಚ್ಚಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.
ತಮ್ಮ ಪರಂಪರಾಗತ ಕ್ರಿಸ್ ಮಸ್ ಸಂದೇಶದಲ್ಲಿ ಉತ್ತರ ಕೊರಿಯಾ ಬಿಕ್ಕಟ್ಟನ್ನು ಪ್ರಸ್ತಾಪಿಸಿದ ಪೋಪ್, ಮಧ್ಯಪ್ರಾಚ್ಯದಲ್ಲಿ ದ್ವಿರಾಷ್ಟ್ರ ಪರಿಹಾರ ನಿರ್ಣಯಕ್ಕೆ ಕರೆ ನೀಡಿದ್ದಲ್ಲದೆ ಕೊರಿಯಾದಲ್ಲಿ ಘರ್ಷಣೆ ಕೊನೆಗೊಳ್ಳಲಿ ಎಂದು ಪ್ರಾರ್ಥಿಸಿದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಖ್ಯಪಾತ್ರ ವಹಿಸಿರುವ ಜಾಗತಿಕ ಪ್ರಕ್ಷುಬ್ಧತೆಯ ಪ್ರದೇಶಗಳನ್ನು ಮುಖ್ಯವಾಗಿ ಪ್ರಸ್ತಾಪಿಸಿದ ಪೋಪ್ ಜಾಗತಿಕ ಶಾಂತಿಗೆ ಮನವಿ ಮಾಡಿದರು. ಜೆರುಸಲೇಮ್ ನ್ನು ಇಸ್ರೇಲ್ ರಾಜಧಾನಿಯಾಗಿ ಮಾನ್ಯತೆ ಮಾಡಿ ಟ್ರಂಪ್ ಅವರು ಹೊರಡಿಸಿರುವ ಪ್ರಕಟಣೆಯು ಮಧ್ಯಪ್ರಾಚ್ಯದಲ್ಲಿ ಅಸಮಾಧಾನದ ಕಿಡಿಯನ್ನು ಹಾರಿಸಿದ್ದರೆ, ಇನ್ನೊಂದೆಡೆಯಲ್ಲಿ ಉತ್ತರ ಕೊರಿಯಾದ ಅಣ್ವಸ್ತ್ರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಮೆರಿಕ ನಡೆಸುತ್ತಿರುವ ಘರ್ಷಣೆಯೂ ಪ್ರಕ್ಷುಬ್ಧತೆಯನ್ನು ಹೆಚ್ಚಿಸಿದೆ. ‘ನಮ್ಮ ಜಗತ್ತಿನಲ್ಲಿ ಸಮರದ ಗಾಳಿ ಬೀಸುತ್ತಿದೆ. ಅಭಿವೃದ್ಧಿಯ ಹಳಸಲು ಮಾದರಿಯು ಮಾನವೀಯತೆ, ಸಾಮಾಜಿಕ ಕಾಳಜಿ ಮತ್ತು ಪರಿಸರವನ್ನು ಹಾಳುಗೆಡವುತ್ತಿದೆ ಎಂದು ಅವರು ನುಡಿದರು.

2017: ಮುಂಬೈ: ಕಿಂಗ್ ಫಿಶರ್ ಏರ್ ಲೈನ್ಸ್ ಸ್ಥಾಪಕ ವಿಜಯ್ ಮಲ್ಯ ಅವರು ಯಾವುದೇ ರಾಜಕೀಯ ಷಡ್ಯಂತ್ರದ ಬಲಿಪಶುವಲ್ಲ, ಬದಲಿಗೆ ತಮ್ಮದೇ ಆಡಂಬರ ಮತ್ತು ಸೊಕ್ಕಿನ ಬಲಿಪಶುವಾಗಿದ್ದಾರೆ ಎಂದು ಏರ್ ಡೆಕ್ಕನ್ ಅಧ್ಯಕ್ಷ ಜಿ.ಆರ್. ಗೋಪಿನಾಥ್ ಹೇಳಿದರು. ಯಾವುದೇ ಅಲಂಕಾರಗಳಿಲ್ಲದ ವಿಮಾನಯಾನ ಮೂಲಕ ವಿಮಾನಯಾನವನ್ನು ಕೈಗೆಟಕುವಂತೆ ಮಾಡಿದ್ದ ಗೋಪೀನಾಥ್ ಅವರು ಹಾಲಿ ನಿಯಮಾವಳಿಗಳ ಪರಿಣಾಮವಾಗಿ ತಮ್ಮ ವಿಮಾನಯಾನ ಕಂಪೆನಿಯನ್ನು ಕಿಂಗ್ ಫಿಶರ್ ಏರ್ ಲೈನ್ಸ್ಗೆ ಮಾರಬೇಕಾಯಿತು ಎಂದು ಹೇಳಿದರು. ತಮ್ಮ ಏರ್ ಡೆಕ್ಕನ್ ವಿಮಾನಯಾನ ಕಂಪೆನಿಯನ್ನು ಗೋಪೀನಾಥ್ ಅವರು ೨೦೦೭ರಲ್ಲಿ ಒಟ್ಟು ೧೦೦೦ ಕೋಟಿ ರೂಪಾಯಿಗಳಿಗೆ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಮಾರಾಟ ಮಾಡಿದ್ದರು. ‘ಯಾವುದೇ ರಾಜಕೀಯ ಷಡ್ಯಂತ್ರಕ್ಕಿಂತಲೂ ಹೆಚ್ಚಾಗಿ ಅವರು (ಮಲ್ಯ) ತಮ್ಮ ಆಡಂಬರ ಮತ್ತು ಸೊಕ್ಕಿನ ಬಲಿಪಶುವಾಗಿದ್ದಾರೆ ಎಂದು ನನಗೆ ಅನ್ನಿಸುತ್ತಿದೆ ಎಂದು ಗೋಪೀನಾಥ್ ಹೇಳಿದರು.
 
2016: ಶಬರಿಮಲೆ: ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆಯ ಅಯ್ಯಪ್ಪ ದೇವಾಲಯದಲ್ಲಿ ಈದಿನ ಸಂಜೆ ನೂಕು ನುಗ್ಗಲು ಮತ್ತು ಕಾಲ್ತುಳಿತ ಸಂಭವಿಸಿ, 40 ಭಕ್ತಾದಿಗಳು ಗಾಯಗೊಂಡರು. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಎಂದು ವರದಿಗಳು ತಿಳಿಸಿದವು. ಗಂಭೀರವಾಗಿ ಗಾಯಗೊಂಡಿರುವವರನ್ನು ಪಂಪಾದಲ್ಲಿರುವ ಆಸ್ಪತ್ರೆಗೆ ರವಾನಿಸಲಾಯಿತು.  ಉಳಿದ ಗಾಯಾಳುಗಳಿಗೆ ಶಬರಿಮಲೆಯಲ್ಲಿ ಚಿಕಿತ್ಸೆ ನೀಡಲಾಯಿತು. ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಸಾವಿರಾರು ಭಕ್ತಾದಿಗಳು ಆಗಮಿಸಿದ್ದರು. ಪೂಜೆಯ ನಂತರ ದರ್ಶನಕ್ಕೆ ಭಕ್ತಾದಿಗಳು ತೆರಳುವಾಗ ಕೆಲವರು ಸಾಲು ಬದಲಿಸಲು ಮುಂದಾದರು. ಹಂತದಲ್ಲಿ ಉಂಟಾದ ಗೊಂದಲದಿಂದ ಕಾಲ್ತುಳಿತ ಸಂಭವಿಸಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿತು. ಈದಿನ ಶಬರಿಮಲೆ ಕ್ಷೇತ್ರದಲ್ಲಿ  ವಿಶೇಷ ದಿನವಾಗಿದ್ದು, ಅಯ್ಯಪ್ಪ ಸ್ವಾಮಿಗೆ ಬಂಗಾರದ ಅಂಗಿ (ತಂಗ ಅಂಗಿ) ತೊಡಿಸುವ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಸಂಜೆ ಪೂಜೆಯ ವೇಳೆಗೆ ಭಕ್ತರು ನೂಕು ನುಗ್ಗಲು ಮಾಡಿದ್ದು, ದುರ್ಘಟನೆಗೆ ಕಾರಣ ಎನ್ನಲಾಯಿತು..ಸಂಜೆಯ ಪೂಜೆ ಮುಗಿದು ದೇವರ ದರ್ಶನಕ್ಕಾಗಿ ಭಕ್ತರು ಕಾದು ನಿಂತಿದ್ದಾಗ, ಕೆಲವರು ಸರತಿ ಸಾಲನ್ನು ತಪ್ಪಿಸಿ ಮುಂದೆ ನುಗ್ಗಿದ್ದೇ ನೂಕು ನುಗ್ಗಲಿಗೆ ಕಾರಣ ಎಂದು ಹೇಳಲಾಯಿತು. ನೂಕು ನುಗ್ಗಲಿನಲ್ಲಿ ಅಡ್ಡಗಟ್ಟೆ ಕೆಳಗೆ ಬಿದ್ದದ್ದು ನೂಕು ನುಗ್ಗಲಿಗೆ ಕಾರಣವಾಯಿತು ಎಂದೂ ಹೇಳಲಾಯಿತು. 2011 ರಲ್ಲಿ ಮಕರ ಜ್ಯೋತಿ ದಿನದಂದು ಶಬರಿಮಲೆಯಲ್ಲಿ ನಡೆದ ಕಾಲ್ತುಳಿತದಲ್ಲಿ 106 ಭಕ್ತರು ಸಾವನ್ನಪ್ಪಿ,100ಕ್ಕಿಂತಲೂ ಹೆಚ್ಚು ಮಂದಿ ಗಾಯಗೊಂಡಿದ್ದರು.

2016: ನವದೆಹಲಿ: ಭ್ರಷ್ಟಾಚಾರಕ್ಕೆ ದೊಡ್ಡ ಮಟ್ಟದಲ್ಲಿ ಕಡಿವಾಣ ಹಾಕಲು ನಗದುರಹಿತ (ಕ್ಯಾಷ್ಲೆಸ್) ವಹಿವಾಟಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಎರಡು ನೂತನ ಯೋಜನೆಗಳಿಗೆ ಚಾಲನೆ ನೀಡಿದರು. ಗ್ರಾಹಕರಿಗಾಗಿ ಲಕ್ಕಿ ಗ್ರಾಹಕ ಯೋಜನೆ ಮತ್ತು ವ್ಯಾಪಾರಸ್ಥರಿಗಾಗಿ ಡಿಜಿ-ಧನ್ ವ್ಯಾಪಾರ್ ಯೋಜನೆಗಳಿಗೆ ಅವರು ಚಾಲನೆ ನೀಡಿದರು. ವ್ಯಾಪಾರಸ್ಥರು ಮತ್ತು ಗ್ರಾಹಕರು ಹೆಚ್ಚಿನ ವ್ಯವಹಾರಗಳನ್ನು ಡಿಜಿಟಲ್ ಮೂಲಕ ನಡೆಸಲು ಉತ್ತೇಜನ ನೀಡುವ ದೃಷ್ಟಿಯಿಂದ ನೂತನ ಯೋಜನೆಗಳನ್ನು ಚಾಲ್ತಿಗೆ ತರಲಾಯಿತು. ಭಾರತದ ರಾಷ್ಟ್ರೀಯ ಪೇಮೆಂಟ್ ಸಹಕಾರ ಸಂಘ ನೂತನ ಯೋಜನೆಗಳನ್ನು ರೂಪಿಸಿದೆ. ರುಪೇ ಕಾರ್ಡ್, ಯುಎಸ್ಎಸ್ಡಿ, ಯುಪಿಐ ಮತ್ತು ಎಇಪಿಎಸ್ ಮೂಲಕ ವ್ಯವಹಾರ ನಡೆಸುವ ಗ್ರಾಹಕರು ಮತ್ತು ವ್ಯಾಪಾರಸ್ಥರು ಮಾತ್ರ ನೂತನ ಯೋಜನೆಗಳ ಫಲಾನುಭವಿಗಳಾಗಿರುತ್ತಾರೆ.  ಡಿಜಿಧನ ಮೇಳ: ಲಕ್ಕಿ ಗ್ರಾಹಕ ಯೋಜನೆಯಡಿ ಪ್ರತಿದಿನ, ಡಿಜಿ ಧನ್ ವ್ಯಾಪಾರ್ ಯೋಜನೆಯಡಿ ಪ್ರತಿ ವಾರ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಡಿಜಿಧನ ಮೇಳ ಎಂಬ ಹೆಸರಿನಲ್ಲಿ ರಾಷ್ಟ್ರದ 100 ವಿವಿಧ ನಗರಗಳಲ್ಲಿ ವಿಜೇತರ ಆಯ್ಕೆ ಕಾರ್ಯಕ್ರಮಗಳು ನಡೆಯಲಿವೆ. ಮುಂದಿನ ಏಪ್ರಿಲ್ 14 ವರೆಗೆ ವಿಜೇತರ ಆಯ್ಕೆ ಪ್ರಕ್ರಿಯೆ ನಡೆಯಲಿವೆ. ಡಿಸೆಂಬರ್ 25ರಿಂದ ಆರಂಭಗೊಂಡಂತೆ ಮುಂದಿನ 100 ದಿನಗಳಲ್ಲಿ 15,000 ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. 50-3000 ರೂ. ವರೆಗೆ ಡಿಜಿಟಲ್ ಮೂಲಕ ವಹಿವಾಟು ನಡೆಸುವ ಗ್ರಾಹಕರಿಗೆ ಮತ್ತು ವ್ಯಾಪಾಸ್ಥರು ಯೋಜನೆಗಳ ಫಲಾನುಭವಿಗಳು. ಆಯ್ಕೆಯಾದ ಗ್ರಾಹಕರಿಗೆ ರೂ.1 ಕೋಟಿವರೆಗೆ ಬಹುಮಾನ ಸಿಗಲಿದೆ. ಡಿಜಿ-ಧನ್ ವ್ಯಾಪಾರಿ ಯೋಜನೆಯಡಿ ವಿಜೇತರಿಗೆ ವಾರಕ್ಕೆ ರೂ. 7000ದಿಂದ ಗರಿಷ್ಠ 50,000 ರೂ.ವರೆಗೆ ಬಹುಮಾನ ಸಿಗಲಿದೆ. ನೂತನ ಯೋಜನೆಗಳಿಗಾಗಿ ಕೇಂದ್ರ ಸರ್ಕಾರ ಅಂದಾಜು 340 ಕೋಟಿ ರೂ. ವ್ಯಹಿಸಿದೆ.
2016: ನವದೆಹಲಿ: ಕಪ್ಪುಕುಳಗಳ ಬಗ್ಗೆ ಸಾಮಾನ್ಯ ಜನರೇ ಗುಪ್ತ ಮಾಹಿತಿ ನೀಡುತ್ತಿದ್ದಾರೆ. ಇದರಿಂದ ರಾಷ್ಟ್ರಾದ್ಯಂತ ಭ್ರಷ್ಟರು ತೆರಿಗೆ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬೀಳುತ್ತಿದ್ದಾರೆ. ಭ್ರಷ್ಟರನ್ನು ಮಟ್ಟಹಾಕಲು ಮತ್ತಷ್ಟು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವಂತೆ ಜನಸಾಮಾನ್ಯರೇ ಸಲಹೆ ನೀಡುತ್ತಿದ್ದಾರೆ. ನೋಟು ನಿಷೇಧದಿಂದ ಉಂಟಾದ ಕಷ್ಟಗಳನ್ನು ಸಹಿಸಿಕೊಂಡು ಭ್ರಷ್ಟಾಚಾರ ನಿಗ್ರಹ ಯೋಜನೆಗೆ ಬೆಂಬಲಿಸುತ್ತಿರುವ ಸಾಮಾನ್ಯ ಜನರಿಗೆ ಧನ್ಯವಾದಗಳು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಪ್ರಧಾನಿ ಮೋದಿ ರಾಷ್ಟ್ರವನ್ನು ಉದ್ದೇಶಿಸಿ 2016 ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಸರ್ಕಾರ ರಾಷ್ಟ್ರದ ಅಭಿವೃದ್ದಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಮೊದಲ ಆಧ್ಯತೆ ನೀಡುತ್ತದೆ. ಭ್ರಷ್ಟರ ವಿರುದ್ಧದ ಹೋರಾಟ ನೋಟು ನಿಷೇಧಕ್ಕೆ ಅಂತ್ಯಗೊಳ್ಳುವುದಿಲ್ಲ, ಇದು ಕೇವಲ ಪ್ರಾರಂಭವಷ್ಟೇ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು, ಬೇನಾಮೀ ಆಸ್ತಿಗಳ ವಿರುದ್ಧ ಕಾನೂನು ಬರಲಿದೆ ಎಂದು ಕಾಳಧನಿಕರಿಗೆ ಎಚ್ಚರಿಕೆ ನೀಡಿದರು.  ರಾಷ್ಟ್ರದ ಜನತೆಗೆ 2017ನೇ ವರ್ಷ ಸಂತೋಷವನ್ನು ಹೊತ್ತು ತರಲಿ, ಎಲ್ಲರ ಆಸೆಗಳು ನೆರವೇರಲಿ, ಎಲ್ಲರಿಗೂ ಹೊಸ ವರ್ಷದ ಶುಭ ಹಾರೈಕೆಗಳು. ಕ್ರಿಶ್ಚಿಯನ್ ಬಂಧುಗಳಿಗೆ ಕ್ರಿಸ್ವುಸ್ ಹಬ್ಬದ ಶುಭಾಶಯಗಳು ಎಂದರು. ಭಾರತದ ಕ್ರೀಡಾಳುಗಳು ರಾಷ್ಟ್ರದ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. 15 ವರ್ಷಗಳ ನಂತರ ಹಾಕಿ ವಿಶ್ವಕಪ್ ಗೆದ್ದ ಕಿರಿಯ ಆಟಗಾರರಿಗೆ ಧನ್ಯವಾದ. ತ್ರಿಶತಕ ಸಿಡಿಸಿದ ಕನ್ನಡಿಗ ಕರುಣ್ ನಾಯರ್, ಅತಿಹೆಚ್ಚು ವಿಕೆಟ್ಗಳಿಸಿದ ಆರ್ ಅಶ್ವಿನ್ ಅವರ ಶ್ರೇಷ್ಠ ಪ್ರದರ್ಶನ ಮೆಚ್ಚುಗೆಗೆ ಅರ್ಹ. 5 ದಿನಗಳ ಟೆಸ್ಟ್ ಪಂದ್ಯದಲ್ಲಿ 4-0 ಅಂತರದಿಂದ ಇಂಗ್ಲೆಂಡ್ ತಂಡವನ್ನು ಮಣಿಸಿದ ನಾಯಕ ವಿರಾಟ್ ಕೊಹ್ಲಿ ಪಡೆಗೆ ಅಭಿನಂದನೆಗಳು ಎಂದು ಮನ್ ಕಿ ಬಾತ್ನಲ್ಲಿ ತಿಳಿಸಿದರು. ನೋಟು ನಿಷೇಧದ ಬಗ್ಗೆ ರಾಜಕೀಯ ಬಣ್ಣ ಹಚ್ಚಿ ಜನಸಾಮಾನ್ಯರ ದಿಕ್ಕು ತಪ್ಪಿಸಲು ಯತ್ನಿಸಿದ ಕೆಲವರಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ಇದಕ್ಕಾಗಿ ರಾಷ್ಟ್ರದ ನಾಗರಿಕರಿಗೆ ಕೃತಜ್ಞ. ಸಾಕಷ್ಟು ಜನ ತಮ್ಮ ಸಮಸ್ಯೆಗಳ ಬಗ್ಗೆ ಪತ್ರ ಬರೆದಿದ್ದಾರೆ. ಜತೆಗೆ ಭ್ರಷ್ಟರನ್ನು ಶಿಕ್ಷಿಸುವುದಾದರೆ ಎಂತಹ ಕಷ್ಟಗಳನ್ನು ಸಹಿಸಿಕೊಳ್ಳಲು ಸಿದ್ಧ ಎಂದು ತಿಳಿಸಿದ್ದಾರೆ ಎಂದರು. ಪ್ರಸ್ತುತ ನಗದುರಹಿತ ವ್ಯವಹಾರ ಶೇ.200ರಿಂದ 300ಕ್ಕೆ ಏರಿಕೆಯಾಗಿದೆ. ಜನಸಾಮಾನ್ಯರಿಗೆ ಡಿಜಿಟಲ್ ವ್ಯವಹಾರಗಳ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಬೇಕು. ನಗದುರಹಿತ ರಾಜ್ಯವನ್ನಾಗಿಸಲು ಅಸ್ಸಾಂ ಸರ್ಕಾರ ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ. ಯುವಜನತೆಗೆ ಡಿಜಿಟಲೀಕರಣ ಚಿನ್ನದಂತಹ ಅವಕಾಶ. ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಸ್ಟಾರ್ಟ್ ಅಪ್ಗಳಂತಹ ಯೋಜನೆಗಳು ಪರಿಣಾಮಕಾರಿ. ರಾಷ್ಟ್ರದಲ್ಲಿ ಪ್ರಸ್ತುತ 30 ಕೋಟಿ ರೂಪೇ ಕಾರ್ಡ್ ಬಳಕೆದಾರರಿದ್ದಾರೆ. ಅದರಲ್ಲಿ 20 ಕೋಟಿ ಬಳಕೆದಾರರು ಜನಧನ ಖಾತೆ ಹೊಂದಿರುವ ಬಡವರು ಎಂದರು ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನಿಸಿದ ದಿನ, ಅವರ ಜನ್ಮದಿನೋತ್ಸವದ ಶುಭಾಯಗಳು. ಸಮಾಜ ಸುಧಾರಕ ಮದನ ಮೋಹನ ಮಾಳವೀಯ ಅವರ ಜಯಂತಿ. ಆಧುನಿಕ ತಂತ್ರಜ್ಞಾನದತ್ತ ನಮ್ಮ ರಾಷ್ಟ್ರ ಹೊರಳಲು ಮಾಳವೀಯ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದರು.

2016: ನವದೆಹಲಿ: ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರಳತೆ ಮತ್ತು ಹೃದಯವಂತಿಕೆಯನ್ನು ಬಿಂಬಿಸುವ ವಿಡಿಯೊವೊಂದನ್ನು ಶೇರ್ ಮಾಡಿ, ಪ್ರಧಾನಿ ನರೇಂದ್ರ ಮೋದಿಯವರು ಅಟಲ್ ಅವರಿಗೆ ಜನ್ಮದಿನದ ಶುಭ ಕೋರಿದರು. 92ನೇ ಹುಟ್ಟುಹಬ್ಬ ಆಚರಿಸುತ್ತಿರುವ ಹಿರಿಯ ರಾಜಕಾರಣಿ ವಾಜಪೇಯಿ ಅವರಿಗೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಸಾಮಾಜಿಕ  ಜಾಲತಾಣದಲ್ಲಿ ಶುಭ ಹಾರೈಸಿದರು. ಅಟಲ್ಜೀ ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯಸ್ಸಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿರುವ ಮೋದಿ, ಅಟಲ್ಜೀ ಅವರ ನಾಯಕತ್ವ ಮತ್ತು ಸೇವೆಯ ಗುಣಗಾನ ಮಾಡಿದರು. ಕವಿ ಹೃದಯದ ಅಟಲ್ಜೀಗೆ ಆರೋಗ್ಯ ಮತ್ತು ಸಂತೋಷ ಸಿಗಲಿ ಎಂದು ವೆಂಕಯ್ಯ ನಾಯ್ಡು ಶುಭ ಹಾರೈಕೆ ಮಾಡಿದರು. ವಾಜಪೇಯಿ ಅವರು ಅಭಿವೃದ್ಧಿಯ ಹರಿಕಾರರಾಗಿದ್ದು, ತಮ್ಮ ಕೆಲಸಗಳ ಮೂಲಕ ಅವರು ದೇಶದ ಜನರ ಹೃದಯ ಗೆದ್ದಿದ್ದಾರೆ ಎಂದು ವಿಜಯ್ ಗೋಯಲ್ ಟ್ವೀಟ್ ಮಾಡಿದರು.
2016: ನವದೆಹಲಿ: ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ಪರಿಸರ ಮಾಲಿನ್ಯವಾಗುತ್ತಿದೆ. ಆದುದರಿಂದ
ಚುನಾವಣೆ ಸಂದರ್ಭದಲ್ಲಿ ಪಾಸ್ಟಿಕ್ ಧ್ವಜ ಮತ್ತು ಬ್ಯಾನರ್ ಬಳಕೆ ನಿಯಂತ್ರಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ  ಪರಿಸರ ಮತ್ತು ಅರಣ್ಯ ಇಲಾಖೆ ಸಚಿವಾಲಯಕ್ಕೆ  ಸೂಚಿಸಿತು. ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಬಳಸುವ ಪ್ಲಾಸ್ಟಿಕ್ ಉತ್ಪನ್ನಗಳಿಗೆ ನಿಯಂತ್ರಣ ಅಥವಾ ನಿಷೇಧ ಹೇರುವ ಬಗ್ಗೆ ಆರು ತಿಂಗಳೊಳಗೆ ತೀರ್ಮಾನ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಅಧ್ಯಕ್ಷ ನ್ಯಾಯಮೂರ್ತಿ ಸ್ವಂತೇರ್ಕರ್ ಕುಮಾರ್ ನೇತೃತ್ವದ ಪೀಠ ಸಚಿವಾಲಯಕ್ಕೆ ನೊಟೀಸ್ ನೀಡಿತು. ಬಳಕೆ ನಿಯಂತ್ರಣ ಮತ್ತು ಬ್ಯಾನರ್, ಧ್ವಜ, ಹೋರ್ಡಿಂಗ್ ಮೊದಲಾದವುಗಳಿಗೆ ಬಳಸಲ್ಪಡುವ ಕ್ಲೋರಿನೇಟೆಡ್ ಪ್ಲಾಸ್ಟಿಕ್ಮೊದಲಾದವುಗಳನ್ನು ನಿಷೇಧ ಅಥವಾ ನಿಯಂತ್ರಣಕ್ಕೊಳ ಪಡಿಸಬೇಕು ಎಂದು ಪೀಠ  ನಿರ್ದೇಶಿಸಿತು. ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳು ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು. ರಾಜಕೀಯ ಪಕ್ಷಗಳು ಪ್ಲಾಸ್ಟಿಕ್ ಧ್ವಜ ಅಥವಾ ಪಿವಿಸಿ ಬ್ಯಾನರ್ ಬಳಕೆ ಮಾಡುತ್ತಿದ್ದರೆ ಪಕ್ಷಗಳಿಗೆ ದೊಡ್ಡ ಮೊತ್ತದ ದಂಡ ವಿಧಿಸಬೇಕು ಎಂದು ಆಂಧ್ರ ಪ್ರದೇಶದ ರವಿಶಂಕರ್ ಸಿಂಗ್ ಎಂಬವರು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.
2016: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ  ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಅವರಿಗೆ
ಟ್ವಿಟರ್ನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದರು. 67ನೇ ಹುಟ್ಟುಹಬ್ಬ ಆಚರಿಸುತ್ತಿರುವ ಪಾಕ್ ಪ್ರಧಾನಿಯವರ ಆರೋಗ್ಯ ಮತ್ತು ದೀರ್ಘಾಯಸ್ಸಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದರು. ಕಳೆದ ವರ್ಷ ಮೋದಿಯವರು ಲಾಹೋರ್ ಗೆ ದಿಢೀರ್ ಭೇಟಿ ನೀಡಿ ಶರೀಫ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದರು. ಯಾವುದೇ ಮುನ್ಸೂಚನೆ ನೀಡದೆ ಪ್ರಧಾನಿ ಮೋದಿಯವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಟೀಕೆಗೊಳಗಾಗಿತ್ತು. ಉಭಯ ದೇಶಗಳ ನಡುವಿನ ಸಂಬಂಧವನ್ನು ಗಟ್ಟಿ ಮಾಡುವ ಉದ್ದೇಶದಿಂದ ಮೋದಿ, ಪಾಕಿಸ್ತಾನಕ್ಕೆ ಸ್ನೇಹದ ಹಸ್ತ ಚಾಚಿದ್ದರು. ಆದರೆ ನಂತರದ ದಿನಗಳಲ್ಲಿ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಿ ವೈರತ್ವ ಕಟ್ಟಿಕೊಂಡಿದ್ದು ಮಾತ್ರವಲ್ಲದೆ ಭಾರತ ನಡೆಸಿದ ಪ್ರತಿದಾಳಿಗೆ ಬೆಲೆ ತೆರಬೇಕಾಗಿ ಬಂದಿತ್ತು.
2016: ಕರಾಚಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಬಿರುಕುಂಟಾಗಿರುವ ಸಂದರ್ಭದಲ್ಲಿ ಪಾಕಿಸ್ತಾನ 220 ಭಾರತೀಯ ಮೀನುಗಾರರನ್ನು  ಬಿಡುಗಡೆ ಮಾಡಿತು. ಪಾಕಿಸ್ತಾನದ ಜಲಗಡಿ ಉಲ್ಲಂಘಿಸಿದ ಆರೋಪದ ಮೇರೆಗೆ ಬಂಧಿಸಲ್ಪಟ್ಟು ಪಾಕಿಸ್ತಾನದ ಮಲೀರ್ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದ 220 ಮೀನುಗಾರರನ್ನು ಈದಿನ ಬಿಡುಗಡೆ ಮಾಡಲಾಗಿದೆ ಎಂದು ಜೈಲಿನ ಅಧೀಕ್ಷಕ ಹಸನ್ ಸೆಂಟೋ ತಿಳಿಸಿದರು. ಬಿಡುಗಡೆಯಾಗಿರುವ ಮೀನುಗಾರರು ಲಾಹೋರ್ಗೆ ರೈಲಿನಲ್ಲಿ ತೆರಳದರು. ವಾಘಾ ಗಡಿಯ ಮೂಲಕ ಭಾರತೀಯ ಅಧಿಕಾರಿಗಳಿಗೆ ಮೀನುಗಾರರನ್ನು ಹಸ್ತಾಂತರಿಸಲಾಗುವುದು. ಜೈಲಿನಲ್ಲಿ ಇನ್ನೂ 219 ಭಾರತೀಯ ಮೀನುಗಾರರು ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರ ಬಿಡುಗಡೆ ಸಂಬಂಧ ಪಾಕ್ ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸೆಂಟೋ ಮಾಹಿತಿ ನೀಡಿದರು. ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನದ ಉಗ್ರರು ದಾಳಿ ನಡೆಸಿದ ನಂತರ ಭಾರತೀಯ ಸೇನೆ ಉಗ್ರರ ನೆಲೆಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿತ್ತು. ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿಯಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು, ಜತೆಗೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಬಿರುಕುಂಟಾಗಿತ್ತು.
2016: ಮಾಸ್ಕೋ: ರಷ್ಯಾದ ರಕ್ಷಣಾ ಸಚಿವಾಲಯದ ವಿಮಾನ ಈದಿನ ಬೆಳಗ್ಗೆ ಕಪ್ಪು ಸಮುದ್ರದಲ್ಲಿ ಪತನಗೊಂಡಿದ್ದು, ಅವಶೇಷಗಳು ಕಪ್ಪು ಸಮುದ್ರದಲ್ಲಿ ಕಂಡು ಬಂದಿವೆ ಎಂದು ಮಾಧ್ಯಮ ವರದಿಗಳು ತಿಳಿಸಿದವು. ದುರಂತದಲ್ಲಿ ವಿಮಾನದಲ್ಲಿದ್ದ 92 ಜನರ ಪೈಕಿ ಯಾರೂ ಬದುಕಿ ಉಳಿದಿರುವ ಬಗ್ಗೆ ಮಾಹಿತಿಗಳಿಲ್ಲ. ನಾಲ್ಕು ಶವಗಳು ಪತ್ತೆಯಾಗಿವೆ ಎಂದೂ ವರದಿಗಳು ಹೇಳಿದವು. 83 ಪ್ರಯಾಣಿಕರು ಮತ್ತು 8 ಮಂದಿ ಸಿಬ್ಬಂದಿ ಸಹಿತ 92 ಜನರನ್ನು ಹೊತ್ತ ಟು-154 ವಿಮಾನವು ಸೋಚಿ ಜಿಲ್ಲೆಯ ಅಡ್ಲೆರ್ ಸಿಟಿಯಿಂದ ಗಗನಕ್ಕೆ ಏರಿದ ಬಳಿಕ ನಾಪತ್ತೆಯಾಗಿತ್ತು. ವರದಿಗಳ ಪ್ರಕಾರ ಸಮುದ್ರ ತೀರದಿಂದ ಒಂದೂವರೆ ಕಿಮೀ ದೂರಲದಲ್ಲಿ ವಿಮಾನ ಪತನಗೊಂಡಿದೆ ಎನ್ನಲಾಯಿತು. ವಿಮಾನ ಕಣ್ಮರೆಯಾದ ಸ್ವಲ್ಪ ಹೊತ್ತಿನ ಬಳಿಕ ರೇಡಾರ್ಗೆ ವಿಮಾನದ ಸುಳಿವು ಸಿಗುತ್ತಿಲ್ಲ ಎಂದು ರಷ್ಯಾದ ತುರ್ತು ನಿಗಾ ಸಚಿವಾಲಯ ತಿಳಿಸಿತ್ತು. ವಿಮಾನ ರಷ್ಯಾದ ದಕ್ಷಿಣ ನಗರ ಸೋಚಿಯಿಂದ ಸಿರಿಯಾದ ಲಟಾಕಿಯಾ ಪ್ರದೇಶಕ್ಕೆ ಪ್ರಯಾಣ ಬೆಳೆಸಿತ್ತು. ವಿಮಾನ ಕಪ್ಪು ಸಮುದ್ರದ ಮೇಲೆ ಹಾರುವ ಸಂದರ್ಭ ಕಾಣೆಯಾಯಿತು ಎಂದು ರಷ್ಯಾ ಸೇನೆ ತಿಳಿಸಿತು. ಬೆಳಗ್ಗೆ 5.20ಕ್ಕೆ ಪ್ರಯಾಣ ಆರಂಭಿಸಿದ್ದ ವಿಮಾನ 20 ನಿಮಿಷಗಳ ನಂತರ ರೇಡಾರ್ ಸಂಪರ್ಕ ಕಳೆದುಕೊಂಡಿತ್ತು. . ಕ್ರಾಸ್ನೊಡರ್ ಕ್ರಾಯ್ ಪ್ರದೇಶದಲ್ಲಿ ಪತನಗೊಂಡಿರುವ ವಿಮಾನಕ್ಕಾಗಿ ಸುತ್ತಲಿನ ಪ್ರದೇಶಗಳಲ್ಲಿ ರಕ್ಷಣಾ ಪಡೆ ಹುಡುಕಾಟ ನಡೆಸಿತು.
2016: ಮಂಗಳೂರು: ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆ ಐಸಿಸ್ ಜತೆ ಸಂಬಂಧ ಹೊಂದಿರುವ ಸಂಶಯದ ಮೇಲೆ ಕೇರಳದ ತಲಶ್ಯೇರಿ ಮೂಲದ ಕ್ರಾಕರಿ ವ್ಯಾಪಾರಿಯೊಬ್ಬನನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಿಂದಿನ ರಾತ್ರಿ ವಶಕ್ಕೆ ಪಡೆದರು. ತಲಶೇರಿಯ ಮುನಾಫ್ ರಹ್ಮಾನ್ ಬಂಧಿತ ವ್ಯಕ್ತಿ. ಈತ ಮೂರು ವರ್ಷಗಳಿಂದ ಮಂಗಳೂರಿನ ಪಾಂಡೇಶ್ವರದ ಅಪಾಟರ್ವೆುಂಟ್ ಒಂದರಲ್ಲಿ ವಾಸಿಸುತ್ತಿದ್ದ. ಕ್ರಾಕರಿ ವ್ಯಾಪಾರಕ್ಕಾಗಿ ಕೇರಳ, ಮಂಗಳೂರು ಮಧ್ಯೆ ಆಗಾಗ ಓಡಾಡಿಕೊಂಡಿದ್ದ ರೆಹ್ಮಾನ್ ಕಳೆದ ಕೆಲ ತಿಂಗಳಿಂದ ಐಸಿಸ್ ಜಾಲದತ್ತ ಸೆಳೆಯಲ್ಪಟ್ಟಿದ್ದ. ಆತನಿಗೆ ಟೋಕಿಯೋದಲ್ಲಿ ಐಸಿಸ್ ನೇಮಕಾತಿ ಉಸ್ತುವಾರಿ ಹೊಂದಿರುವ ಫಾಜಿದಾ ವಡಕರ ಎಂಬ ವ್ಯಕ್ತಿ ಜತೆ ಸಂಪರ್ಕ ಇತ್ತು. ಸಂಪರ್ಕದ ಮೇಲೆ ಎನ್ಐಎ ಅಧಿಕಾರಿಗಳು ನಿಗಾ ವಹಿಸಿದ್ದರು. ಅದರಂತೆ ಕೇರಳ ಪೊಲೀಸರು ಈತನ ಮೇಲೆ ಲುಕ್ಔಟ್ ನೊಟೀಸ್ ಕೂಡಾ ಕೂಡಾ ಹೊರಡಿಸಿದ್ದರು. ಹಿಂದಿನ ದಿನ ಆತ ಪತ್ನಿ, ಮೂವರು ಮಕ್ಕಳೊಂದಿಗೆ ಶಾಜರಾಕ್ಕೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಲುಕ್ಔಟ್ ನೊಟೀಸ್ ಆಧಾರದಲ್ಲಿ ಆತನನ್ನು ಇಮ್ಮಿಗ್ರೇಶನ್ ವಿಭಾಗದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು. ಶಂಕಿತನನ್ನು ವಶಕ್ಕೆ ಪಡೆದಿರುವ ಎನ್ ಐಎ ಅಧಿಕಾರಿಗಳು ಕೇರಳಕ್ಕೆ ತೆರಳಿದರು.
2016: ನ್ಯೂಯಾರ್ಕ್: ವೆಬ್ಸೈಟ್ ಒಂದರಲ್ಲಿ ಪ್ರಕಟವಾದ ಸುಳ್ಳು ಸುದ್ದಿಯನ್ನು ನಂಬಿ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಮೊಹಮ್ಮದ್ ಆಸಿಫ್ ಅವರು ಇಸ್ರೇಲ್ ಮೇಲೆ ಅಣ್ವಸ್ತ್ರ ಪ್ರಯೋಗ ಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ಘಟಿಸಿತು. ಸಿರಿಯಾಕ್ಕೆ ಪಾಕಿಸ್ತಾನದ ಸೇನೆ ಆಗಮಿಸಿದರೆ ನಾವು ಪಾಕ್ ವಿರುದ್ಧ ಅಣ್ವಸ್ತ್ರ ಬಳಸುತ್ತೇವೆ ಎಂದು ಇಸ್ರೇಲ್ ರಕ್ಷಣಾ ಸಚಿವರು ತಿಳಿಸಿದ್ದಾರೆ ಎಂದು ಡಿಸೆಂಬರ್ 20 ರಂದು awdnews.com ವೆಬ್ಸೈಟ್ ವರದಿ ಮಾಡಿತ್ತು. ಸುದ್ದಿಯ ಸತ್ಯಾಸತ್ಯತೆಯ ಕುರಿತು ಪರಾಮರ್ಶೆ ನಡೆಸದೆ ಪಾಕ್ ರಕ್ಷಣಾ ಸಚಿವರು ತಮ್ಮ ಅಧಿಕೃತ ಟ್ವೀಟ್ ಖಾತೆಯಲ್ಲಿ ಇಸ್ರೇಲ್ಗೆ ಬೆದರಿಕೆ ಹಾಕಿದ್ದಾರೆ. ನಮ್ಮ ಬಳಿಯೂ ಅಣ್ವಸ್ತ್ರಗಳಿದ್ದು, ದಾಳಿ ನಡೆದರೆ ನಾವು ಸುಮ್ಮನಿರುವುದಿಲ್ಲ ಎಂದು ಟ್ವೀಟ್ ಮಾಡಿದರು. awdnews.com ವೆಬ್ಸೈಟ್ನಲ್ಲಿ ಪ್ರಕಟವಾಗಿದ್ದ ಸುದ್ದಿಯಲ್ಲಿ ಸಾಕಷ್ಟು ಸುಳ್ಳು ಮಾಹಿತಿಗಳಿದ್ದವು. ವರದಿಯಲ್ಲಿ ಇಸ್ರೇಲ್ ಮಾಜಿ ರಕ್ಷಣಾ ಸಚಿವ ಮೋಸೆ ಯಾಲೂನ್ ಪಾಕ್ ವಿರುದ್ಧ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ಪ್ರಸ್ತುತ ಇಸ್ರೇಲ್ ರಕ್ಷಣಾ ಸಚಿವರಾಗಿ ಅವಿಗಡೋರ್ ಲಿಬೆರ್ವುನ್ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಷಯದ ಕುರಿತು ಸ್ಪಷ್ಟನೆ ನೀಡಿರುವ ಇಸ್ರೇಲ್ ರಕ್ಷಣಾ ಸಚಿವಾಲಯ ಮಾಜಿ ರಕ್ಷಣಾ ಸಚಿವರು ಹೇಳಿಕೆಯನ್ನು ನೀಡಿಲ್ಲ ಎಂದು ಆಸಿಫ್ ಟ್ವೀಟ್ಗೆ ಉತ್ತರಿಸಿದೆ. ಜತೆಗೆ ವೆಬ್ಸೈಟ್ ಪ್ರಕಟಿಸಿರುವ ವರದಿ ಸುಳ್ಳು ಎಂದು ಸ್ಪಷ್ಟಪಡಿಸಿತು.

2016: ಕೋಲ್ಕತ: ಶಂಕಿತ ಐಸಿಸ್ ಉಗ್ರ ಅಬು ಮೂಸಾ ಕೋಲ್ಕತದ ಮದರ್ ಹೌಸ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂಬುದು ತನಿಖೆ ವೇಳೆ ಬಹಿರಂಗಗೊಂಡಿತು. ಸಿರಿಯಾ ಮತ್ತು ಲಿಬಿಯಾದಲ್ಲಿ ಐಸಿಸ್ ಉಗ್ರರ ವಿರುದ್ಧ ಜಂಟಿ ಕಾರ್ಯಾಚರಣೆಗೆ ಪ್ರತಿರೋಧವಾಗಿ ಮದರ್ ಹೌಸ್ ಮೇಲೆ ದಾಳಿ ನಡೆಸುವುದು ಮೂಸಾ ಉದ್ದೇಶವಾಗಿತ್ತು. ಅಮೆರಿಕ, ಬ್ರಿಟನ್ ಮತ್ತು ರಷ್ಯಾದ ಜನ ಹೆಚ್ಚಾಗಿ ಭೇಟಿ ನೀಡುವ ಮದರ್ ಹೌಸ್ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದಾಗಿ ಮೂಸಾ ಕೋಲ್ಕತಾದಲ್ಲಿ ಎಫ್ಬಿಐ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಮಿತಿ(ಎನ್ಐಎ) ತಿಳಿಸಿತು. ಜಮತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ ಸಂಘಟನೆಗೆ ಸೇರಿದ ಮೊಹಮ್ಮದ್ ಮಸುದ್ದೀನ್ ಅಲಿಯಾಸ್ ಅಬು ಮೂಸಾ ಸಿರಿಯಾ ಮೂಲದ ಐಸಿಸ್ ಉಗ್ರ ಸುಲ್ತಾನ್ ಅಬ್ದುಲ್ ಖಾದಿರ್ ಅರ್ಮರ್ ಜತೆ ಸೇರಿ ಅಮೆರಿಕದ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಸಂಚು ರೂಪಿಸಿದ್ದಾಗಿ ತಿಳಿಸಿದ.
2008: ಪಾಕಿಸ್ಥಾನ ಒಂದು ಜವಾಬ್ದಾರಿಯುತ ರಾಷ್ಟ್ರವಾಗಿದ್ದು ಭಾರತದೊಂದಿಗೆ ಯುದ್ಧ ನಡೆಸಲು ಬಯಸಿಲ್ಲ ಎಂದು ಪಾಕ್ ಪ್ರಧಾನಿ ಯೂಸುಫ್ ರಾಜಾ ಜಿಲಾನಿ ಇಸ್ಲಾಮಾಬಾದಿನಲ್ಲಿ ಪ್ರಕಟಿಸಿದರು. ಉಭಯ ದೇಶಗಳ ಗಡಿಯಲ್ಲಿ ಯುದ್ಧದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ದೇಶವನ್ನು ಅಸ್ಥಿರಗೊಳಿಸಲು ಬಯಸಿರುವ ಮತ್ತು ತನ್ನ ನೆಲವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸುವ ರಾಷ್ಟ್ರ-ವಿರೋಧಿ ಶಕ್ತಿಗಳಿಗೆ ಪಾಕ್ ಸರ್ಕಾರ ಅವಕಾಶ ನೀಡುವುದಿಲ್ಲ' ಎಂದೂ ಘೋಷಿಸಿದರು. 'ನಮಗೆ ಪಾಕ್ ಜೊತೆ ಯುದ್ಧ ಬೇಕಿಲ್ಲ, ಉಗ್ರರ ವಿರುದ್ಧ ಕ್ರಮ ಕೈಗೊಂಡರೆ ಸಾಕು' ಎಂದು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಹೇಳಿರುವುದಕ್ಕೆ ಅವರು ಈ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು.

2008: ದೀರ್ಘಕಾಲದ ಗಿನಿಯಾದ ಸರ್ವಾಧಿಪತ್ಯ ವಹಿಸಿದ್ದ ಲಾಂಸಾನಾ ಕಾಂಟೆ ನಿಧನದ ಹಿನ್ನೆಲೆಯಲ್ಲಿ ತಾನು ಅಧ್ಯಕ್ಷ ಎಂದು ಕ್ಯಾಪ್ಟನ್ ಮೌಸ್ಸಾ ದಡಿಸ್ ಕಮರಾ ಸ್ವಯಂ ಘೋಷಣೆ ಮಾಡಿಕೊಂಡರು. 24 ಗಂಟೆಗಳಲ್ಲಿ ಸರ್ಕಾರದ ಸದಸ್ಯರು ತಮ್ಮ ಸ್ಥಾನ ಬಿಡಬೇಕೆಂದೂ ಅವರು ಆದೇಶ ನೀಡಿದರು. 1984ರಿಂದ ಅಧಿಕಾರದಲ್ಲಿದ್ದ ಕಾಂಟೆ ಈಚೆಗೆ ನಿಧನರಾಗಿದ್ದರು.

2008: 1984ರ ದೆಹಲಿ ಸಿಖ್ ನರಮೇಧಕ್ಕೆ ಸಂಬಂಧಿಸಿ ಪ್ರಮುಖ ಸಾಕ್ಷಿಗಳಿಂದ ಮಾಹಿತಿ ಸಂಗ್ರಹಿಸಲು ನ್ಯೂಯಾರ್ಕಿಗೆ ಆಗಮಿಸಿದ ಸಿಬಿಐ ಅಧಿಕಾರಿಗಳ ತಂಡ, ಮುಖ್ಯ ಸಾಕ್ಷಿ ಜಸ್ಬಿಂದರ್ ಸಿಂಗ್ ಹೇಳಿಕೆಯನ್ನು ದಾಖಲಿಸಿಕೊಂಡಿತು. ನಂತರ ತಂಡವು ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಜಸ್ಬೀರ್ ಸಿಂಗ್ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಸ್ಯಾನ್‌ಫ್ರಾನ್ಸಿಸ್ಕೊಗೆ ತೆರಳಿತು. ಸಿಖ್ ನರಮೇಧದಲ್ಲಿ ಕೇಂದ್ರದ ಮಾಜಿ ಸಚಿವ ಜಗದೀಶ್ ಟೈಟ್ಲರ್ ಕೈವಾಡವಿದೆ ಎಂದು ಇವರು ಆರೋಪಿಸಿದ್ದರು.

2007: ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಅಪರೂಪದ ತೀರ್ಪು ನೀಡಿದ ಸುಪ್ರೀಂಕೋರ್ಟ್, ವಿಮೆ ಹಣ ತುಂಬಿರದಿದ್ದರೂ, ನೊಂದ ಕುಟುಂಬಕ್ಕೆ ಪರಿಹಾರ ನೀಡಿ, ಆ ಮೊತ್ತವನ್ನು ವಾಹನ ಮಾಲೀಕನಿಂದ ವಸೂಲು ಮಾಡಿಕೊಳ್ಳುವಂತೆ ನ್ಯಾಶನಲ್ ಇನ್ಸೂರೆನ್ಸ್ ಕಂಪೆನಿಗೆ ಆದೇಶಿಸಿತು. ಕರ್ನಾಟಕ ರಾಜ್ಯ ಕೊಪ್ಪಳದ ಗಂಗಾವತಿ ತಾಲ್ಲೂಕಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಟೆಂಪೊ ಒಂದು ಗುಡಿಸಲಿಗೆ ನುಗ್ಗಿದ್ದರಿಂದ ಶಾಂತಮ್ಮ ಎಂಬಾಕೆ ಸ್ಥಳದಲ್ಲಿಯೇ ಮೃತಳಾಗಿದ್ದಳು. ಪ್ರಕರಣದ ವಿಚಾರಣೆಯಲ್ಲಿ ಟೆಂಪೊ ಮಾಲೀಕ ಗೋಕುರ್ ಸಾಬ್ ಎಂಬಾತ ವಾಹನ ವಿಮೆ ನವೀಕರಣ ಮಾಡಿಸಿರಲಿಲ್ಲ ಎಂಬುದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಅಪಘಾತದಲ್ಲಿ ಮಡಿದ ಮಹಿಳೆಯ ತಂದೆ, ದೊಡ್ಡಪ್ಪನಿಗೆ ಪರಿಹಾರದ ಹಣ ನೀಡಲು ವಿಮಾ ಕಂಪೆನಿ ನಿರಾಕರಿಸಿತು. ಆದರೆ ವಾಹನ ಅಪಘಾತ ನ್ಯಾಯಮಂಡಳಿ ಹಾಗೂ ರಾಜ್ಯ ಹೈಕೋರ್ಟ್ ಮೃತರ ಕುಟುಂಬಕ್ಕೆ ರೂ 1.58 ಲಕ್ಷ ಪರಿಹಾರ ನೀಡುವಂತೆ ನ್ಯಾಶನಲ್ ಇನ್ಸೂರೆನ್ಸ್ ಕಂಪೆನಿಗೆ ಆದೇಶಿಸಿದವು. ಇದನ್ನು ಪ್ರಶ್ನಿಸಿ ಕಂಪೆನಿ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಸಂತ್ರಸ್ತ ಕುಟುಂಬದ ಸದಸ್ಯರು ಸಮಾಜದ ಕೆಳ ಹಂತದವರು ಎಂಬುದನ್ನು ಗಮನಿಸಿ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಪ್ರಕರಣದ ಹಿನ್ನೆಲೆ ಆಧಾರದ ಮೇಲೆ ಹಾಗೂ ನ್ಯಾಯಾಲಯಕ್ಕೆ 142ನೇ ಅಧಿನಿಯಮದಡಿ ಇರುವ ಅಧಿಕಾರ ಬಳಸಿ, ಪರಿಹಾರ ನೀಡುವಂತೆ ಆದೇಶಿಸುತ್ತಿರುವುದಾಗಿ ತಿಳಿಸಿತು. ಈ ಹಣವನ್ನು ವಾಹನದ ಮಾಲೀಕನಿಂದ ವಸೂಲು ಮಾಡಿಕೊಳ್ಳುವಂತೆಯೂ ಅದು ಆದೇಶಿಸಿತು.

2007: ಹಿಂದಿನ ದಿನ ರಾತ್ರಿ ನಿಧನರಾದ ಬಾಲಿವುಡ್ಡಿನ ಹಿರಿಯ ನಿರ್ಮಾಪಕ - ನಿರ್ದೇಶಕ ಜಿ.ಪಿ.ಸಿಪ್ಪಿ (93) ಅವರ ಅಂತ್ಯಕ್ರಿಯೆ ಮುಂಬೈಯ ಚಂದನವಾಡಿಯಲ್ಲಿ ನಡೆಯಿತು. ವಯೋ ಸಹಜವಾದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಪ್ಪಿ ಅವರು ಹಿಂದಿನ ರಾತ್ರಿ ನಿಧನರಾಗಿದ್ದರು. ಅಗರ್ಭ ಶ್ರೀಮಂತ ಸಿಂಧಿ ಕುಟುಂಬದಲ್ಲಿ ಜನಿಸಿದ ಸಿಪ್ಪಿ ಅವರು 1955ರಲ್ಲಿ `ಮರೈನ್ ಡ್ರೈವ್' ಚಿತ್ರ ನಿರ್ಮಿಸುವ ಮೂಲಕ ಬಾಲಿವುಡ್ಡಿಗೆ ಪದಾರ್ಪಣೆ ಮಾಡಿದ್ದರು. ಹಲವು ವರ್ಷಗಳವರೆಗೆ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದ ಅವರು ಮನೆಮಾತಾದದ್ದು 1975ರಲ್ಲಿ `ಶೋಲೆ' ಚಿತ್ರ ನಿರ್ಮಾಣದ ಮೂಲಕ. ಈ ಚಿತ್ರವನ್ನು ಅವರ ಮಗ ರಮೇಶ್ ನಿರ್ದೇಶಿಸಿದ್ದು ಮತ್ತೊಂದು ವಿಶೇಷ. `ಶೋಲೆ' ಭಾರತೀಯ ಚಿತ್ರರಂಗದಲ್ಲಿಯೇ ಹಲವು ದಾಖಲೆಗಳನ್ನು ನಿರ್ಮಿಸಿತು. ಪ್ರಮುಖ ಚಿತ್ರನಟರನ್ನು ಹಾಕಿಕೊಂಡು ಚಿತ್ರ ನಿರ್ಮಿಸುತ್ತಿದ್ದ ಅವರು, ಅದ್ದೂರಿತನಕ್ಕೆ ವಿಶೇಷ ಗಮನ ನೀಡುತ್ತಿದ್ದರು. ಶ್ರೀಮತಿ 420, ಅಂದಾಜ್, ಸೀತಾ ಔರ್ ಗೀತಾ, ಶಾನ್, ಸಾಗರ್, ರಾಜು ಬನ್ ಗಯಾ ಜಂಟಲ್ ಮ್ಯಾನ್ ಸೇರಿದಂತೆ 19 ಚಿತ್ರಗಳನ್ನು ನಿರ್ಮಿಸಿದರು. ಫಿಲ್ಮಫೇರ್ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಅವರ ಹೆಗಲಿಗೇರಿದ್ದವು.

2007: ಅಹಮದಾಬಾದಿನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಬಿಜೆಪಿಯ ನರೇಂದ್ರ ಮೋದಿ ಸತತ 3ನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಲಕ್ಷಾಂತರ ಜನರ ಜಯ ಘೋಷಗಳ ನಡುವೆ ಸಮಾರಂಭ ನಡೆಯಿತು. ಸಾಂಪ್ರದಾಯಿಕ ಕೇಸರಿ ವರ್ಣದ ಕುರ್ತಾ ಹಾಗೂ ಬಿಳಿ ಬಣ್ಣದ ಪೈಜಾಮ ಧರಿಸಿದ್ದ 57 ವರ್ಷ ವಯಸ್ಸಿನ ಮೋದಿ ಮಧ್ಯಾಹ್ನ 1.50ಕ್ಕೆ ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ನವಲ್ ಕಿಶೋರ್ ಶರ್ಮಾ ಪ್ರಮಾಣ ವಚನ ಬೋಧಿಸಿದರು. ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ, ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ಸಾಧುಗಳು, ಹಾಗೂ ಪಕ್ಷ ಕಾರ್ಯಕರ್ತರು ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಜನರು ಸಮಾರಂಭದಲ್ಲಿ ಪಾಲ್ಗೊಂಡರು. ಮೋದಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬಿಜೆಪಿ ಗುಜರಾತಿನಲ್ಲಿ ಸತತ ನಾಲ್ಕನೇ ಬಾರಿಗೆ ಸರ್ಕಾರ ರಚಿಸಿತು. ಇದಕ್ಕೂ ಮುಂಚೆ 1995, 1998 ಹಾಗೂ 2002ರಲ್ಲಿ ಬಿಜೆಪಿ ಸರ್ಕಾರ ರಚಿಸಿತ್ತು.

2007: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ರಘುವಂಶ ಪ್ರಸಾದ್ ಸಿಂಗ್ ಯಾದವ್ ಅವರ ಹಿರಿಯ ಸೋದರ ಬಾಲ ಕಾರ್ಮಿಕರನ್ನು ಬಳಸಿಕೊಂಡು ಕೃಷಿ ಚಟುವಟಿಕೆ ಕೈಗೊಂಡಿರುವುದು ನಿಜವೆಂದು ತನಿಖಾ ತಂಡ ಪಟ್ನಾದಲ್ಲಿ ಬಹಿರಂಗಪಡಿಸಿತು. ಬಿಹಾರದ ಎನ್ ಡಿ ಎ ಸರ್ಕಾರ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯಲು ಈ ತನಿಖಾ ತಂಡವನ್ನು ರಚಿಸಿತ್ತು. ಕಾರ್ಮಿಕ ಇಲಾಖೆಯ ಆಯುಕ್ತ ವಿಮ್ಲಾನಂದ ಝಾ ನೇತೃತ್ವದ ಉನ್ನತ ಮಟ್ಟದ ತಂಡ ಶಹಾಪುರಕ್ಕೆ ತೆರಳಿ ತನಿಖೆ ನಡೆಸಿತು. ಕೇಂದ್ರ ಸಚಿವರ ಸಹೋದರ ಬಾಲಕಾರ್ಮಿಕರನ್ನು ಬಳಸಿಕೊಂಡು ಕೃಷಿ ಚಟುವಟಿಕೆ ನಡೆಸಿರುವ ಬಗ್ಗೆ ಟಿವಿ ಚಾನೆಲ್ ಮಾಡಿದ ವರದಿ ನಿಜವೆಂದು ತಂಡ ವರದಿ ನೀಡಿದೆ ಎಂದು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸುದ್ದಿಗಾರರಿಗೆ ತಿಳಿಸಿದರು.

2007: ಕ್ರಿಸ್ಮಸ್ ದಿನಾಚರಣೆ ದಿನ ಒರಿಸ್ಸಾದ ರೂರ್ಕೆಲಾ ವಿಭಾಗದ ಚಿಕಿತಾ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ (ವಿ ಎಚ್ ಪಿ) ಏರ್ಪಡಿಸಿದ್ದ ಕಾರ್ಯಕ್ರಮ ಒಂದರಲ್ಲಿ ಕ್ರೈಸ್ತ ಧರ್ಮಕ್ಕೆ ಸೇರಿದ್ದ 187 ಮಂದಿ ಹಿಂದೂ ಧರ್ಮಕ್ಕೆ ಮರುಮತಾಂತರ ಹೊಂದಿದರು. ಮರುಮತಾಂತರ ಹೊಂದಿದವರಲ್ಲಿ 103 ಮಂದಿ ಪುರುಷರು ಮತ್ತು 84 ಮಂದಿ ಮಹಿಳೆಯರು. ಕಾರ್ಯಕ್ರಮದಲ್ಲಿ ರೂರ್ಕೆಲಾ ವಿಭಾಗದ ವಿ ಎಚ್ ಪಿ ಅಧ್ಯಕ್ಷ ಮಿತ್ರಭಾನು ಪಾಂಡಾ, ಧರ್ಮ ಪ್ರಚಾರಕ ಮಕರಧ್ವಜ ಮೊಹಾಂತೊ, ಗಧಾದರ್ ಸಾಹು ಮತ್ತಿತರರು ಹಾಜರಿದ್ದರು.

2007: ಏಷ್ಯಾ ಮೋಟಾರ್ ವರ್ಕ್ಸ್ ಲಿಮಿಟೆಡ್ (ಎಎಂಡಬ್ಲ್ಯು), ಭಾರಿ ತೂಕದ ಸರಕು ಸಾಗಣೆ ವಿಭಾಗದಲ್ಲಿ ಹೊಸ `4930 ಟ್ರಕ್'ನ್ನು ಮುಂಬೈಯಲ್ಲಿ ಮಾರುಕಟ್ಟೆಗೆ ಪರಿಚಯಿಸಿತು.

2007: ಇತರ ಬ್ಯಾಂಕುಗಳ ಎಟಿಎಂ ಬಳಕೆಗೆ ಗ್ರಾಹಕರಿಗೆ ವಿಧಿಸಲಾಗುತ್ತಿರುವ ದುಬಾರಿ ಸೇವಾ ಶುಲ್ಕ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ), ವಾಣಿಜ್ಯ ಬ್ಯಾಂಕುಗಳಿಗೆ ಆದೇಶ ನೀಡಿತು. ಇತರ ಬ್ಯಾಂಕುಗಳ ಎಟಿಎಂ ಕೇಂದ್ರಗಳಿಂದ ಸ್ವಂತ ಖಾತೆಯ ಹಣ ಪಡೆಯುವುದೂ ಸೇರಿದಂತೆ, ಖಾತೆಯಲ್ಲಿನ ಹಣದ ವಿವರ ಪಡೆಯುವುದಕ್ಕೆ ಮುರಿದುಕೊಳ್ಳುವ ಗರಿಷ್ಠ ಪ್ರಮಾಣದ ಸೇವಾ ಶುಲ್ಕ ವಸೂಲಿ ನಿಲ್ಲಿಸಲು ಆರ್ ಬಿ ಐ ಸೂಚಿಸಿತು.

2007: ತಮಿಳಿನ ಉದಯೋನ್ಮುಖ ಚಲನಚಿತ್ರ ನಟ ಪ್ರವೀಣ್ ಕುಮಾರ್ (26) ಚೆನ್ನೈಯ ತಮ್ಮ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರು. ತಮ್ಮ 36 ವರ್ಷದ ಪತ್ನಿ ನಿಷಾ ಜತೆ ವೈಮನಸ್ಸು ಉಂಟಾದದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡರು ಎಂದು ಪೊಲೀಸರು ತಿಳಿಸಿದರು. ಪ್ರವೀಣ್ ತಾಯಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷಾ ವಿರುದ್ಧ ನೀಡಿದ ದೂರನ್ನು ಪೊಲೀಸರು ದಾಖಲಿಸಿಕೊಂಡರು.

2006: ಸ್ವಯಂಘೋಷಿತ `ಆತ್ಮರಕ್ಷಕ' (ಗಾಡ್ಫಾದರ್ ಆಫ್ ಸೋಲ್) ಗಾಯಕ ಜೇಮ್ಸ್ ಬ್ರೌನ್ (73) ಅಟ್ಲಾಂಟಾದಲ್ಲಿ ನಿಧನರಾದರು. ತೀವ್ರ ವಿಷಮಶೀತ ಜ್ವರದಿಂದ ಬಳಲುತ್ತಿದ್ದ ಬ್ರೌನ್ ಅವರನ್ನು ಕಳೆದ ವಾರಾಂತ್ಯದಲ್ಲಿಅಟ್ಲಾಂಟಾದ ಎಮೊರಿ ಕ್ರಾಫರ್ಡ್ ಲಾಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. `ಮಿಸ್ಟರ್ ಡೈನಮೈಟ್' ಎಂದೇ ಖ್ಯಾತರಾಗಿದ್ದ ಬ್ರೌನ್, ಸಂಗೀತದಲ್ಲಿ ಹೊಸ ತಲೆಮಾರಿನ ಮೇಲೆ ಪ್ರಭಾವ ಬೀರಿದ ಹಾಡುಗಾರ. ಬ್ರೌನ್ ಅವರ `ಸೇ ಇಟ್ ಲೌಡ್ (ಐ ಆ್ಯಮ್ ಬ್ಲ್ಯಾಕ್ ಅಂಡ್ ಐ ಆ್ಯಮ್ ಪ್ರೌಡ್) ಹಾಡಂತೂ 1960ರಲ್ಲಿ ನಾಗರಿಕ ಹಕ್ಕುಗಳ ಹಾಡಾಗಿ ಜನಪ್ರಿಯಗೊಂಡಿತ್ತು. 1968ರಲ್ಲಿ ಬ್ರೌನ್ ಅವರು ಈ ಹಾಡನ್ನು ರಿಚರ್ಡ್ ನಿಕ್ಸನ್ ಸಮ್ಮುಖದಲ್ಲೂ ಹಾಡಿದ್ದರು. 1990ರಲ್ಲಿ ಜೀವಮಾನದ ಸಾಧನೆಗಾಗಿ ಪ್ರತಿಷ್ಠಿತ `ಗ್ರಾಮ್ಮಿ' ಪ್ರಶಸ್ತಿಯನ್ನು ಪಡೆದ ಬ್ರೌನ್ ಅವರು, 119ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು, 50 ಆಲ್ಬಂಗಳು ಪ್ರಕಟಗೊಂಡಿವೆ.

2006: ಬಿಜೆಪಿ ಜೊತೆ ಮೈತ್ರಿಗೆ ಕಾಂಗ್ರೆಸ್ ಪಕ್ಷದ ದುಷ್ಟ ಸಂಚು ಕಾರಣ ಎಂಬುದಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು 38 ಸದಸ್ಯರು ನೀಡಿದ ವಿವರಣೆಗೆ ತೃಪ್ತಿ ವ್ಯಕ್ತಪಡಿಸಿದ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಅವರ ವಿರುದ್ಧದ ಅಮಾನತನ್ನು ಹಿಂದೆ ಪಡೆಯಿತು.

2006: ವಿಶ್ವ ಗೋ ಸಮ್ಮೇಳನದ ಪ್ರಯುಕ್ತ ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಕಾಮಧೇನು ಮಹಾಯಾಗದ ಆರಂಭಕ್ಕೆ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಚಾಲನೆ ನೀಡಿದರು.

2006: ಹಿರಿಯ ಪತ್ರಕರ್ತ ಟಿಂಗರ ಬುಡ್ಡಣ್ಣ ಖ್ಯಾತಿಯ ಜಿ.ಎಚ್. ರಾಘವೇಂದ್ರ (59) ಅವರು ಹುಬ್ಬಳ್ಳಿಯಲ್ಲಿ ನಿಧನರಾದರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿ ನಿವೃತ್ತಿ ಹೊಂದಿದ್ದ ರಾಘವೇಂದ್ರ ನಾಟಕಕಾರ ಹಾಗೂ ಹಾಸ್ಯ ಸಾಹಿತಿಯಾಗಿ ಖ್ಯಾತಿ ಪಡೆದವರು. ಚುಚ್ಚೇಂದ್ರ ಹೆಸರಿನಲ್ಲಿ ಅವರು ಬರೆಯುತ್ತಿದ್ದ `ಟಿಂಗರ ಬುಡ್ಡಣ್ಣ' ಸಂಯುಕ್ತ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಅಂಕಣವಾಗಿತ್ತು.

2005: ಪಾಕಿಸ್ಥಾನದ ಇಸ್ಲಾಮಾಬಾದ್, ಉತ್ತರ ಪಾಕಿಸ್ಥಾನದ ನಗರಗಳು ಮತ್ತು ಭಾರತದ ಶ್ರೀನಗರದಲ್ಲಿ ಈದಿನ ಮಧ್ಯಾಹ್ನ 1 ಗಂಟೆಗೆ ರಿಕ್ಟರ್ ಮಾಪಕದಲ್ಲಿ 5.2ರಷ್ಟು ತೀವ್ರತೆಯ ಭೂಕಂಪ ಸಂಭವಿಸಿ ಜನರನ್ನು ದಿಕ್ಕೆಡಿಸಿತು. ಅಕ್ಟೋಬರ್ 8ರಂದು ಸಂಭವಿಸಿದ ಭೀಕರ ಭೂಕಂಪದಲ್ಲಿ ಪಾಕಿಸ್ಥಾನದ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರಾಬಾದ್, ಬಾಲ್ ಕೋಟ್ ಸೇರಿದಂತೆ ಪಾಕಿಸ್ಥಾನ ವಾಯವ್ಯ ಪ್ರಾಂತ್ಯದಲ್ಲಿ 80,000ಕ್ಕೂ ಹೆಚ್ಚು ಜನ ಮೃತರಾಗಿ 35 ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದರು.

2005: ಅಸ್ಸಾಂನ ಮಾಜಿ ಮುಖ್ಯಮಂತ್ರಿ ರಾಷ್ಟ್ರೀಯ ಕಾಂಗ್ರೆಸ್ಸಿನ ಹಿರಿಯ ನಾಯಕ ಶರತ್ ಚಂದ್ರ ಸಿನ್ಹ (92) ಗುವಾಹಟಿಯಲ್ಲಿ ನಿಧನರಾದರು.

1997: ಇಂದೋರಿನಲ್ಲಿ ನಡೆಯಬೇಕಿದ್ದ ಭಾರತ ಮತ್ತು ಶ್ರೀಲಂಕಾ ನಡುವಣ ಎರಡನೇ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವು ಮೂರು ಓವರುಗಳ ನಂತರ ಕೆಟ್ಟ ಪಿಚ್ ಕಾರಣಕ್ಕಾಗಿ ರದ್ದಾಯಿತು. ಕ್ರಿಕೆಟ್ ಇತಿಹಾಸದಲ್ಲೇ ಈ ಕಾರಣಕ್ಕಾಗಿ ಪಂದ್ಯ ರದ್ದಾದ ಪ್ರಕರಣ ಇದೇ ಮೊತ್ತ ಮೊದಲನೆಯದು.

1994: ಭಾರತದ ಮಾಜಿ ರಾಷ್ಟ್ರಪತಿ ಗಿಯಾನಿ ಜೈಲ್ ಸಿಂಗ್ (1916-1994) ಅವರು ತಮ್ಮ 78ನೇ ವಯಸಿನಲ್ಲಿ ಚಂಡೀಗಢದಲ್ಲಿ ನಿಧನರಾದರು. ಅವರು ನವೆಂಬರಿನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಇವರು ಭಾರತದ ಮೊತ್ತ ಮೊದಲ ಸಿಖ್ ರಾಷ್ಟ್ರಪತಿ.

1991: ಸೋವಿಯತ್ ಅಧ್ಯಕ್ಷ ಮಿಖಾಯಿಲ್ ಗೊರ್ಬಚೆವ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಸೋವಿಯತ್ ಯೂನಿಯನ್ ಇತಿಹಾಸ ಗರ್ಭದಲ್ಲಿ ಸೇರಿ ಹೋಯಿತು. 1991ರ ಡಿಸೆಂಬರ್ 31ರಂದು ಕಾನೂನುಬದ್ಧವಾಗಿ ಸೋವಿಯತ್ ಯೂನಿಯನ್ ಅಂತ್ಯಗೊಂಡಿತು.

1989: ಜನರ ದಂಗೆಯಲ್ಲಿ ಪದಚ್ಯುತಿಗೊಂಡ ರೊಮೇನಿಯಾದ ಅಧ್ಯಕ್ಷ ನಿಕೋಲಾಯ್ ಸಿಯಾಸ್ಕು ಮತ್ತು ಅವರ ಪತ್ನಿ ಎಲೆನಾ ಅವರನ್ನು ಮರಣದಂಡನೆಗೆ ಗುರಿಪಡಿಸಲಾಯಿತು.

1977: ಸಿನಿಮಾ ರಂಗದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಹಾಸ್ಯ-ನಿರ್ದೇಶಕ ಸರ್ ಚಾರ್ಲ್ಸ್ ಚಾಪ್ಲಿನ್ (ಚಾರ್ಲಿ ಚಾಪ್ಲಿನ್ 1889-1977) ಸ್ವಿಟ್ಸರ್ ಲ್ಯಾಂಡಿನ ಕೊರ್ಸೀರ್-ಸುರ್-ವಿವೀಯಲ್ಲಿ ತಮ್ಮ 88ನೇ ವಯಸ್ಸಿನಲ್ಲಿ ಮೃತರಾದರು. (1978ರಲ್ಲಿ ಪೋಲ್ ಮತ್ತು ಬಲ್ಗೇರಿಯಾದ ವ್ಯಕ್ತಿ ಸೇರಿಕೊಂಡು ಚಾಪ್ಲಿನ್ ಅವರ ಪಾರ್ಥಿ ಶರೀರವನ್ನು ಸ್ಮಶಾನದಿಂದ ಕದ್ದು 60,000 ಫ್ರಾಂಕುಗಳಿಗೆ ಮಾರಿದರು. ಅವರಿಗೆ ಗ್ಯಾರೇಜ್ ವ್ಯವಹಾರಕ್ಕೆ ಹಣಬೇಕಾಗಿದ್ದ ಕಾರಣ ಈ ಕೃತ್ಯ ಎಸಗಿದ್ದಾಗಿನಂತರ ಅವರು ಹೇಳಿದರು.)

1972: ಭಾರತದ ಸ್ವಾತಂತ್ರ್ಯ ಯೋಧ ಚಕ್ರವರ್ತಿ ರಾಜಗೋಪಾಲಾಚಾರಿ `ರಾಜಾಜಿ' (1879-1972) ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು. ಸ್ವತಂತ್ರ ಭಾರತದ ಏಕೈಕ ಗವರ್ನರ್ ಜನರಲ್ ಆಗಿದ್ದ ಇವರು ಸ್ವತಂತ್ರ ಪಕ್ಷವನ್ನು ಸ್ಥಾಪಿಸಿದವರು.

1924: ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹುಟ್ಟಿದ ದಿನ. 1996ರಲ್ಲಿ ಕೇವಲ 13 ದಿನಗಳ ಅವಧಿಗೆ ಭಾರತದ ಪ್ರಧಾನಿಯಾದ ಅವರು 1998ರಿಂದ 2004ರ ಅವಧಿಯಲ್ಲಿ ಎರಡು ಬಾರಿ ಚುನಾವಣೆಯಲ್ಲಿ ಗೆದ್ದು ಮತ್ತೆ ಪ್ರಧಾನಿಯಾಗಿದ್ದರು.

1643: ಭೌತತಜ್ಞ ಹಾಗೂ ಗಣಿತ ತಜ್ಞ ಸರ್ ಐಸಾಕ್ ನ್ಯೂಟನ್ (1643-1727) ಹುಟ್ಟಿದ ದಿನ. ಇವರ ಚಲನೆಯ ನಿಯಮಗಳು ಮುಂದೆ ವಿಶ್ವದ ಗುರುತ್ವಾಕರ್ಷಣೆಯ ನಿಯಮ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು.

1861: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಪಂಡಿತ್ ಮದನ ಮೋಹನ ಮಾಳವೀಯ (1861-1946) ಅವರು ಜನಿಸಿದರು. ಬನಾರಸ್ ಹಿಂದೂ ವಿಶ್ವ ವಿದ್ಯಾಲಯ ಸ್ಥಾಪನೆಗೆ ನೆರವಾದವರಲ್ಲಿ ಇವರು ಪ್ರಮುಖರು.

1876: ಪಾಕಿಸ್ಥಾನದ ಸ್ಥಾಪಕ ಮಹಮ್ಮದ್ ಅಲಿ ಜಿನ್ನಾ (1876-1948) ಹುಟ್ಟಿದ ದಿನ.

No comments:

Post a Comment