ನಾನು ಮೆಚ್ಚಿದ ವಾಟ್ಸಪ್

Sunday, December 16, 2018

1984ರ ಸಿಖ್ – ವಿರೋಧಿ ದಂಗೆ: ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಗೆ ಜೀವಾವಧಿ ಸಜೆ


1984 ಸಿಖ್ವಿರೋಧಿ ದಂಗೆ: ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಗೆ ಜೀವಾವಧಿ ಸಜೆ

ನವದೆಹಲಿ:  ೧೯೮೪ ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರನ್ನು ತಪ್ಪಿತಸ್ಥರೆಂದು ಹೇಳಿರುವ ದೆಹಲಿ ಹೈಕೋರ್ಟ್ ೨೦೧೮ ಡಿಸೆಂಬರ್ ೧೭ ಸೋಮವಾರ ವಿಚಾರಣಾ ನ್ಯಾಯಾಲಯವು ಅವರನ್ನು ಖುಲಾಸೆಪಡಿಸಿದ ತೀರ್ಪನ್ನು  ರದ್ದುಪಡಿಸಿ, ಅವರಿಗೆ ಜೀವಾವಧಿ ಸಜೆ ವಿಧಿಸಿದೆ.

2019 ಲೋಕಸಭಾ ಚುನಾವಣೆಗಳಿಗೆ ಮುಂಚೆ ಬಂದಿರುವ ತೀರ್ಪು  ಕಾಂಗ್ರೆಸ್ ಮೇಲೆ ದಾಳಿ ನಡೆಸಲು ಬಿಜೆಪಿ ಬತ್ತಳಿಕೆಗೆ ಹೊಸ ಬಾಣಗಳನ್ನು  ಒದಗಿಸಿದೆ.

ನ್ಯಾಯಮೂರ್ತಿಗಳಾದ ಎಸ್ ಮುರಳೀಧರ್ ಮತ್ತು ವಿನೋದ್ ಗೋಯಲ್ ಅವರನ್ನು ಒಳಗೊಂಡ ಹೈಕೋರ್ಟ್  ಪೀಠವು ಅಕ್ಟೋಬರ್ ೨೯ ರಂದು ಸಿಬಿಐ, ಗಲಭೆ ಸಂತ್ರಸ್ತರು ಮತ್ತು ಶಿಕ್ಷಿತ ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಬಳಿಕ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

೧೯೮೪ ನವೆಂಬರ್ ರಂದು, ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ಬಳಿಕ  ದೆಹಲಿ ಕಂಟೋನ್ಮೆಂಟಿನ  ರಾಜ್ ನಗರ ಪ್ರದೇಶದಲ್ಲಿ ಒಂದು ಕುಟುಂಬದ ಐವರು ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ ಮಾಜಿ ಕಾಂಗ್ರೆಸ್ ನಗರಪಾಲಿಕೆ ಸದಸ್ಯ ಬಲ್ವಾನ್ ಖೋಖರ್, ನಿವೃತ್ತ ನೌಕಾ ಅಧಿಕಾರಿ ಕ್ಯಾಪ್ಟನ್ ಭಾಗ್ಮಲ್, ಗಿರಿಧಾರಿ ಲಾಲ್ ಮತ್ತು ಇತರ ಇಬ್ಬರನ್ನು ಅಪರಾಧಿಗಳು ಎಂದು ನ್ಯಾಯಾಲಯ ತೀರ್ಮಾನಿಸಿತ್ತು.

ಪ್ರಕರಣದಲ್ಲಿ  ಸಜ್ಜನ್ ಕುಮಾರ್ ಅವರನ್ನು ಖುಲಾಸೆಗೊಳಿಸಿದ್ದ  ನ್ಯಾಯಾಲಯ  ಖೋಖರ್, ಭಾಗ್ಮಲ್, ಗಿರಿಧಾರಿ ಲಾಲ್ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಮಾಜಿ ಶಾಸಕ ಮಹೇಂದರ್ ಯಾದವ್ ಮತ್ತು ಕಿಶನ್ ಖೋಖರ್ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

2013 ಮೇ ತಿಂಗಳಲ್ಲಿ ನೀಡಲಾಗಿದ್ದ ತೀರ್ಪನ್ನು ಶಿಕ್ಷೆಗೆ ಒಳಗಾಗಿದ್ದ ಅಪರಾಧಿಗಳು ಪ್ರಶ್ನಿಸಿದ್ದರು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:


No comments:

Post a Comment