Sunday, December 2, 2018

ನೂತನ ಸಿಇಸಿ ಸುನೀಲ್ ಅರೋರಾ ಅಧಿಕಾರ ಸ್ವೀಕಾರ

ನೂತನ ಸಿಇಸಿ ಸುನೀಲ್ ಅರೋರಾ ಅಧಿಕಾರ ಸ್ವೀಕಾರ

ನವದೆಹಲಿ:  ಸುನೀಲ್ ಅರೋರಾ ಅವರು ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ೨೦೧೮ ಡಿಸೆಂಬರ್ ಭಾನುವಾರ ಅಧಿಕಾರ ವಹಿಸಿಕೊಂಡರು. ಹಾಲಿ ಸಿಇಸಿ, ಓಂ ಪ್ರಕಾಶ್ ರಾವತ್ ಅವರು ೨೦೧೮ ಡಿಸೆಂಬರ್ ಶನಿವಾರ  ನಿವೃತ್ತರಾಗಿದ್ದರು.
೨೦೧೯ ಸಾರ್ವತ್ರಿಕ ಚುನಾವಣೆಯನ್ನು ಚುನಾವಣಾ ಆಯೋಗವು  ಅರೋರಾ ನೇತೃತ್ವದಲ್ಲಿ ನಿರ್ವಹಿಸಲಿದೆ. ಅಲ್ಲದೆ  ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂಗಳಲ್ಲಿ ವಿಧಾನಸಭೆ ಚುನಾವಣೆಗಳು ಮುಂದಿನ ವರ್ಷ ನಡೆಯಲಿದೆ.

ಸಿಇಸಿ ಅಥವಾ ಇಸಿ ಅವರ ಅಧಿಕಾರಾವಧಿ 6 ವರ್ಷ  ಅಥವಾ ಅವರಿಗೆ ೬೫ ವರ್ಷ ವಯಸ್ಸು ಆಗುವವರೆಗೆ ಇರುತ್ತದೆ. ಹಿರಿಯ ಚುನಾವಣಾ ಆಯುಕ್ತರನ್ನು  ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ ಮಾಡಲಾಗುತ್ತದೆ.
ನಿವೃತ್ತ ಅಧಿಕಾರಿ ಅರೋರಾ ಅವರನ್ನು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಚುನಾವಣಾ ಆಯುಕ್ತರಾಗಿ ನೇಮಿಸಲಾಗಿತ್ತು. ಅದಕ್ಕೆ ಮುನ್ನ ಅವರು ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ, ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಕಾರ್ಯದರ್ಶಿಯಾಗಿದ್ದರು.

ರಾಜಸ್ಥಾನ್ ಕೇಡರಿನ ೧೯೮೦ ತಂಡದ ಐಎಎಸ್ ಅಧಿಕಾರಿಯಾದ ಅರೋರಾ ಹಣಕಾಸು, ಜವಳಿ ಮತ್ತು ಯೋಜನಾ ಆಯೋಗದಂತಹ ಸಚಿವಾಲಯಗಳಲ್ಲಿ ಕೆಲಸ ಮಾಡಿದ್ದರು.

ಅವರು ೧೯೯೯-೨೦೦೨ ರಿಂದ ನಾಗರಿಕ ವಿಮಾನಯಾನ (ಸಿವಿಲ್ ಏವಿಯೇಶನ್) ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಮತ್ತು ಐದು ವರ್ಷಗಳ ಕಾಲ ಭಾರತೀಯ  ಏರ್ ಲೈನ್ಸನಿನ  ಮುಖ್ಯ ಆಡಳಿತ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ರಾಜಸ್ಥಾನದಲ್ಲಿ, ಧೋಲ್ಪುರ್,  ಆಳ್ವಾರ್, ನಗೌರ್ ಮತ್ತು ಜೋಧ್ ಪುರ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುವುದರ ಜೊತೆಗೆ ಅವರು ೧೯೯೩-೧೯೯೮ರ ಅವಧಿಯಲ್ಲಿ ಮುಖ್ಯಮಂತ್ರಿಯ ಕಾರ್ಯದರ್ಶಿಯಾಗಿ ಹಾಗೂ ಮುಖ್ಯಮಂತ್ರಿಗಳ  ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ (ಐಪಿಆರ್), ಕೈಗಾರಿಕೆಗಳು ಮತ್ತು ಹೂಡಿಕೆ ಇಲಾಖೆಗಳನ್ನೂ ನಿರ್ವಹಿಸಿದ್ದರು.

No comments:

Post a Comment