ಕೃಷಿ
ಸಾಲ
ಮನ್ನಾ:ಮೂರು ರಾಜ್ಯಗಳ
ಬೊಕ್ಕಸ
ಖಾಲಿ
ನವದೆಹಲಿ:
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢ
ಈ
ಮೂರು
ರಾಜ್ಯಗಳಲ್ಲಿ
ಹೊಸದಾಗಿ ರಚನೆಯಾಗಿರುವ ಕಾಂಗ್ರೆಸ್ ಸರ್ಕಾರಗಳು
ಅಧಿಕಾರಕ್ಕೆ
ಬಂದೊಡನೆಯೇ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೃಷಿಸಾಲಮನ್ನಾ
ಘೋಷಿಸಿದ
ಬಳಿಕ
ಬೊಕ್ಕಸ
ಬರಿದಾಗಿದ್ದು,
ಇತರ
ಚುನಾವಣಾ
ಭರವಸೆಗಳ
ಈಡೇರಿಕೆಗೆ
ಅಗತ್ಯವಾದ
ಸಂಪನ್ಮೂಲ
ಹೊಂದಿಲ್ಲ
ಎಂದು
ಮೂರೂ
ರಾಜ್ಯಗಳ
ಅಧಿಕಾರಿಗಳು ತಿಳಿಸಿರುವುದಾಗಿ ‘ಹಿಂದುಸ್ಥಾನ್ ಟೈಮ್ಸ್’ ವರದಿ ಮಾಡಿದೆ.ಮೂರೂ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದ 10 ದಿನಗಳ ಒಳಗೆ ರೈತರ 2 ಲಕ್ಷ ರೂಪಾಯಿಗಳವರೆಗಿನ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನೀಡಿದ್ದ ಭರವಸೆಯಂತೆ ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದ ಕಾಂಗ್ರೆಸ್ ಸರ್ಕಾರಗಳು ಹಿಂದಿನ ವಾರ ಅಧಿಕಾರಕ್ಕೆ ಬಂದೊಡನೆಯೇ 2018ರ ಡಿಸೆಂಬರ್ 17ರಂದು ಸಾಲಮನ್ನಾ ಜಾರಿಯ ಘೋಷಣೆ ಮಾಡಿದವು. ರಾಜಸ್ಥಾನದ ಮುಖ್ಯಮಂತ್ರಿ ಎರಡು ದಿನದ ಬಳಿಕ ಸಾಲಮನ್ನಾ ಜಾರಿಯ ಘೋಷಣೆ ಮಾಡಿದರು.
ಮಧ್ಯಪ್ರದೇಶ ಮತ್ತು ರಾಜಸ್ಥಾನ ಎಲ್ಲಾ ಅಲ್ಪಾವಧಿಯ ಬೆಳೆ ಸಾಲಗಳನ್ನು ಮನ್ನಾ ಮಾಡಿವೆ. ರಾಜ್ಯದ ಗ್ರಾಮೀಣ ಬ್ಯಾಂಕುಗಳಿಂದ ರೈತರು ಪಡೆದ ಸಾಲವನ್ನು ಚತ್ತೀಸ್ ಗಢ ಸರ್ಕಾರ ಪಾವತಿಸಲಿದೆ. ಸಾಲ ಮನ್ನಾದಿಂದ ಮಧ್ಯಪ್ರದೇಶದಲ್ಲಿ ೩೫,೦೦೦ ರಿಂದ ೩೮,೦೦೦ ಕೋಟಿ ರೂ., ರಾಜಸ್ಥಾನದಲ್ಲಿ ೧೮,೦೦೦ ಕೋಟಿ ಮತ್ತು ಛತ್ತೀಸ್ ಗಢದಲ್ಲಿ ೬,೧೦೦ ಕೋಟಿ ರೂ.ಗಳನ್ನು ಹೊರೆ ಖಜಾನೆಯ ಮೇಲೆ ಬೀಳುವುದು.
ಬೊಕ್ಕಸ ಬರಿದಾಗಿರುವ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ಮಾರುಕಟ್ಟೆ ಸಾಲ ಸೇರಿದಂತೆ ಈಗ ವಿವಿಧ ಆಯ್ಕೆಗಳನ್ನು ಪರಿಶೀಲಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. "ನಾವು ನಿಧಿ ಕ್ರೋಢೀಕರಣದ ಮಾರ್ಗ ಹುಡುಕುತ್ತಿದ್ದೇವೆ “ ಎಂದು ಮಧ್ಯಪ್ರದೇಶ ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಅಧಿಕಾರಿಗಳು ಸೂಚಿಸಿರುವ ನಿಧಿ ಸಂಪನ್ಮೂಲ ಮಾರ್ಗಗಳು ಸೀಮಿತವಾಗಿರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಇತರ ಪ್ರಮುಖ ಚುನಾವಣಾ ಭರವಸೆಗಳನ್ನು ಜಾರಿಗೆ ತರುವುದು ಕಷ್ಟ ಎನ್ನಲಾಗಿದೆ. 2019ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ಫೆಬ್ರುವರಿ- ಮಾರ್ಚ್ ತಿಂಗಳುಗಳಲ್ಲಿ ಈ ಮೂರೂ ರಾಜ್ಯಗಳಲ್ಲಿ ಮುಂದಿನ ಸಾಲಿನ ಮುಂಗಡಪತ್ರಗಳ ಮಂಡನೆಯಾಗಲಿದೆ.
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಕಾಂಗ್ರೆಸ್ ನೀಡಿರುವ ಇತರ ಪ್ರಮುಖ ಭರವಸೆಗಳಲ್ಲಿ ಪ್ರತಿ ಕುಟುಂಬಕ್ಕೆ 10,000 ರೂಪಾಯಿ ಮತ್ತು ಕುಟುಂಬದ ಪ್ರತಿ ಸದಸ್ಯನಿಗೆ 3500 ರೂ. ನಿರುದ್ಯೋಗ ಭತ್ಯೆ ಸೇರಿದೆ. ಛತ್ತೀಸ್ ಗಢದಲ್ಲಿ ಅನಿರ್ದಿಷ್ಟ ಮೊತ್ತದ ಒಂದು ವೇತನವನ್ನು ನೀಡುವ ಭರವಸೆಯನ್ನು ಕಾಂಗ್ರೆಸ್ ಕೊಟ್ಟಿದೆ.
ಜೊತೆಗೆ ಮೂರೂ ರಾಜ್ಯಗಳಲ್ಲಿ ಬಡವರಿಗೆ ವಿದ್ಯುತ್ ಬಿಲ್ಲುಗಳ ಮನ್ನಾ ಮತ್ತು ಇತರರಿಗೆ ಅರ್ಧದಷ್ಟು ವಿದ್ಯುತ್ ಬಿಲ್ ಕಡಿತದ ಭರವಸೆ ನೀಡಲಾಗಿದ್ದು, ಉಚಿತ ಶಿಕ್ಷಣ ಮತ್ತು ಉಚಿತ ಔಷಧ, ರೈತರಿಗೆ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಕೂಡಾ ಭರವಸೆಗಳಲ್ಲಿ ಸೇರಿವೆ. ಛತ್ತೀಸ್ ಗಢದಲ್ಲಿ ಪಾನ ನಿಷೇಧದ ಭರವಸೆಯನ್ನೂ ಪಕ್ಷ ಕೊಟ್ಟಿದೆ. ಇದು ಕೂಡಾ ಬೊಕ್ಕಸಕ್ಕೆ ಬರುವ ಆದಾಯಕ್ಕೆ ಕತ್ತರಿ ಹಾಕುತ್ತದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ ನಾಥ್ ಮತ್ತು ಅವರ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಹಿಂದಿನ ಬಿಜೆಪಿ ಸರ್ಕಾರಗಳು ಬೊಕ್ಕಸಗಳನ್ನು ಬರಿದು ಮಾಡಿ ಹೋಗಿವೆ ಎಂದು ಆಪಾದಿಸಿದ್ದು, ಆದಾಯಸೃಷ್ಟಿಗೆ ಹೊಸ ಮಾರ್ಗ ಹುಡುತ್ತಿರುವುದಾಗಿ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಕೃಷಿ ಸಾಲ ಮನ್ನಾ ಹೊರೆ ೨೦೧೮-೧೯ರ ಒಟ್ಟಾರೆ ವೆಚ್ಚ 1,86,683 ಕೋಟಿ ರೂಪಾಯಿಗಳ ಐದನೇ ಒಂದು ಭಾಗದಷ್ಟು ಆಗುತ್ತದೆ. ಬಿಜೆಪಿ ಸರ್ಕಾರ ಈಗಾಗಲೇ ಸುಮಾರು 1,25,000 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ.
ಸಾಲದ ನಿಧಿಗೆ ಪಡೆಯಲು ಸಾಧ್ಯವಿದ್ದ ೬೦,೦೦೦ ಕೋಟಿ ರೂಪಾಯಿಯಲ್ಲಿ ಶೇಕಡಾ ೯೦% ರಷ್ಟನ್ನು ಸರ್ಕಾರ ಚುನಾವಣೆಗೆ ಮುನ್ನವೇ ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ, ಕೃಷಿ ಸಾಲದ ಮನ್ನಾ ಹೊರೆ ರೂ.1,07,865 ಖೋಟಿ ರೂಪಾಯಿಯಾಗಿದ್ದು ಇದು ಒಟ್ಟು ಮುಂಗಡಪತ್ರದ ಆರನೇ ಒಂದು ಭಾಗದಷ್ಟಾಗುತ್ತದೆ. ಇದರಲ್ಲಿ ಸುಮಾರು ೭೭,೦೦೦ ಕೋಟಿ ರೂಪಾಯಿಗಳನ್ನು ಈಗಾಗಲೇ ವೆಚ್ಚ ಮಾಡಲಾಗಿದೆ.
ರಾಜಸ್ಥಾನದ ಆರ್ಥಿಕ ಪ್ರಾಧ್ಯಾಪಕ ವಿ.ವಿ. ಸಿಂಗ್ ಅವರು ಈ ಚುನಾವಣಾ ಭರವಸೆಯನ್ನು ಈಡೇರಿಸಲು ಮುಂಗಡಪತ್ರದ ೨೫% ರಷ್ಟು ಹಣ ಬೇಕಾಗುತ್ತದೆ ಎಂದು ನುಡಿದರು.
ಯಾವುದೇ ಹೆಚ್ಚುವರಿ ಖರ್ಚು ಹಣಕಾಸಿನ ಕೊರತೆಯ ಹೆಚ್ಚಳಕ್ಕೆ ಕಾರಣವಾಗಲಿದೆ, ಇದು ಒಟ್ಟು ರಾಜ್ಯ ದೇಶೀಯ ಉತ್ಪನ್ನದ (ಜಿಎಸ್ ಡಿಪಿ) ಶೇಕಡಾ ೩.೦೧ ಷ್ಟು ಆಗುತ್ತದೆ.
ಪಸ್ತುತ ಸಾಲಿನ ಮುಂಗಡಪತ್ರದ ಪ್ರಕಾರ ರಾಜ್ಯ ಸರ್ಕಾರಕ್ಕೆ ೩೬,೦೦೦ ಕೋಟಿ ರೂಪಾಯಿಗಳ ಸಾಲ ಪಡೆಯುವ ಸಾಮರ್ಥ್ಯ ಇದೆ. ಆದರೆ ರಾಜ್ಯ ಈಗಾಗಲೇ ರಾಜ್ಯ ಈಗಾಗಲೇ 25 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ತೆಗೆದುಕೊಂಡಿದೆ ಎಂದು . ಗೆಹ್ಲೋಟ್ ಒಪ್ಪಿಕೊಂಡರು.
ಛತ್ತೀಸ್ ಗಢದಲ್ಲಿ ಕೃಷಿ ಸಾಲದ ಮನ್ನಾ ಮತ್ತು ಭತ್ತ ಮತ್ತು ಮೆಕ್ಕೆ ಜೋಳದ ಕನಿಷ್ಠ ಬೆಂಬಲ ಬೆಲೆಯು ಕ್ವಿಂಟಲಿಗೆ 2,500 ರೂಪಾಯಿಗಳಷ್ಟು ಹೆಚ್ಚಾಗುವುದರಿಂದ ರಾಜ್ಯದ ಮುಂಗಡಪತ್ರದ 83,179 ಕೋಟಿ ರೂಪಾಯಿಯ ಹತ್ತನೇ ಒಂದರಷ್ಟು ಹಣ ಸರ್ಕಾರಕ್ಕೆ ನಷ್ಟವಾಗುತ್ತದೆ.
ಚತ್ತೀಸ್ಗಢ ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರು ಹಣಕಾಸಿನ ಕೊರತೆಯ ಗುರಿಯನ್ನು ಉಲ್ಲಂಘಿಸದೆ ಭರವಸೆಗಳನ್ನು ಜಾರಿಗೆ ತರಲು ಸಾಧ್ಯವಾಗಬಹುದು ಎಂದು ಹಾರೈಸಿದರು.
"ಕೆಲವು ಭರವಸೆಗಳು ಮುಂದಿನ ಮುಂದಿನ ಮುಂಗಡಪತ್ರದ ಮೇಲೆ ಪರಿಣಾಮ ಬೀರಬಹುದು. ಈ ಬಗ್ಗೆ ರಾಜಕೀಯ ನಾಯಕತ್ವ ನಿರ್ಧಾರ ತೆಗೆದುಕೊಳ್ಳುತ್ತದೆ. " ಎಂದು ಅವರು ನುಡಿದರು.
ಪಾನ ನಿಷೇಧವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಜಾರಿಗೆ ತರಲು ಸಾಧ್ಯವಾಗದು. ಅದಕ್ಕೆ ಗುಜರಾತ್ ಮತ್ತು ಬಿಹಾರ ಮಾದರಿಯ ಹೊಸ ಕಾನೂನು ಚೌಕಟ್ಟು ರೂಪಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಅರ್ಥಶಾಸ್ತ್ರಜ್ಞರು ಕೃಷಿ-ಸಾಲದ ಮನ್ನಾ ವಿರುದ್ಧವಾಗಿ ಮಾತನಾಡಿದ್ದಾರೆ. ಸಾಲಮನ್ನಾದಿಂದ ಕಾರ್ಯ ನಿರ್ವಹಿಸದ ಬ್ಯಾಂಕಿಂಗ್ ಸ್ವತ್ತುಗಳು ಹೆಚ್ಚುತ್ತವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
೨೦೧೯ ರಲ್ಲಿ ಚುನಾವಣೆ ನಡೆಯಲಿರುವ ಆಂಧ್ರಪ್ರದೇಶ, ಒಡಿಶಾ ಮತ್ತು ಹರಿಯಾಣ ರಾಜ್ಯಗಳೂ ಕೃಷಿ ಸಾಲ ಮನ್ನಾ ತೀರ್ಮಾನ ಕೈಗೊಂಡರೆ ಬೊಕ್ಕಸದ ಮೇಲೆ 60,000 ಕೋಟಿಯಿಂದ 70,000 ಕೋಟಿ ರೂಪಾಯಿಗಳಷ್ಟು ಆರ್ಥಿಕ ಹೊರೆ ಬೀಳುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಆರ್ಥಿಕ ಸಲಹೆಗಾರ್ತಿ ಸೌಮ್ಯ ಕಾಂತಿ ಘೋಷ್ ಅಂದಾಜು ಮಾಡಿದ್ದಾರೆ.
No comments:
Post a Comment