Showing posts with label Bihar. Show all posts
Showing posts with label Bihar. Show all posts

Friday, November 14, 2025

PARYAYA: ಬಿಹಾರ ವಿಧಾನಸಭಾ ಚುನಾವಣೆ -2025: ಅಂತಿಮ ಫಲಿತಾಂಶ

 ಬಿಹಾರ ವಿಧಾನಸಭಾ ಚುನಾವಣೆ -2025: ಅಂತಿಮ ಫಲಿತಾಂಶ

ಬಿಹಾರ ವಿಧಾನಸಭೆ ಮತ್ತು ಇತರ ವಿಧಾನಸಭಾ ಚುನಾವಣೆಗಳ  ಫಲಿತಾಂಶಕ್ಕಾಗಿ ಮೇಲಿನ ಚಿತ್ರ ಕ್ಲಿಕ್‌ ಮಾಡಿ. ಅಥವಾ ಮೇಲಿನ ʼಬಲ್ಲಿರೇನಯ್ಯಾʼ ಪುಟ ಕ್ಲಿಕ್‌ ಮಾಡಿರಿ. ಮೇಲಿನ ಚಿತ್ರದ ಸಮೀಪ ನೋಟಕ್ಕೆ ಚಿತ್ರವನ್ನು ಕ್ಲಿಕ್‌ ಮಾಡಿರಿ.

ಇದನ್ನೂ ಓದಿರಿ:
ಬಿಹಾರ ಅಸೆಂಬ್ಲಿ ಚುನಾವಣಾ ಫಲಿತಾಂಶ
ಲೋಕಸಭಾ ಚುನಾವಣೆ 2029 ?

PARYAYA: ಬಿಹಾರ ವಿಧಾನಸಭಾ ಚುನಾವಣೆ -2025: ಅಂತಿಮ ಫಲಿತಾಂಶ:   ಬಿಹಾರ ವಿಧಾನಸಭಾ ಚುನಾವಣೆ -2025: ಅಂತಿಮ ಫಲಿತಾಂಶ ಬಿ ಹಾರ ವಿಧಾನಸಭೆ ಮತ್ತು ಇತರ ವಿಧಾನಸಭಾ ಚುನಾವಣೆಗಳ ವಿವರವಾದ   ಫಲಿತಾಂಶ ಕ್ಕಾಗಿ ಮೇಲಿನ ಚಿತ್ರ ಕ್ಲಿಕ್‌ ಮಾಡಿ...

Thursday, November 13, 2025

PARYAYA: ಬಿಹಾರ ಅಸೆಂಬ್ಲಿ ಚುನಾವಣಾ ಫಲಿತಾಂಶ

ಬಿಹಾರ ಅಸೆಂಬ್ಲಿ ಚುನಾವಣಾ ಫಲಿತಾಂಶ

ಬಿಹಾರ ವಿಧಾನಸಭೆ ಮತ್ತು ಇತರ ವಿಧಾನಸಭಾ ಚುನಾವಣೆಗಳ ಕ್ಷಣ ಕ್ಷಣದ ಫಲಿತಾಂಶಕ್ಕಾಗಿ ಮೇಲಿನ ಚಿತ್ರ ಕ್ಲಿಕ್‌ ಮಾಡಿ. ಅಥವಾ paryaya.com ವೆಬ್‌ ಸೈಟಿನ ʼಬಲ್ಲಿರೇನಯ್ಯಾʼ ಪುಟದ ಚಿತ್ರ ಕ್ಲಿಕ್‌ ಮಾಡಿರಿ.

ಇದನ್ನೂ ಓದಿರಿ:
ಲೋಕಸಭಾ ಚುನಾವಣೆ 2029 ?

PARYAYA: ಬಿಹಾರ ಅಸೆಂಬ್ಲಿ ಚುನಾವಣಾ ಫಲಿತಾಂಶ: ಬಿಹಾರ ಅಸೆಂಬ್ಲಿ ಚುನಾವಣಾ ಫಲಿತಾಂಶ ಬಿ ಹಾರ ವಿಧಾನಸಭೆ ಮತ್ತು ಇತರ ವಿಧಾನಸಭಾ ಚುನಾವಣೆಗಳ ಕ್ಷಣ ಕ್ಷಣದ ಫಲಿತಾಂಶಕ್ಕಾಗಿ ಮೇಲಿನ ಚಿತ್ರ ಕ್ಲಿಕ್‌ ಮಾಡಿ. ಅಥವಾ ಮೇಲಿನ ʼ ...

Tuesday, January 23, 2024

PARYAYA: ಕರ್ಪೂರಿ ಠಾಕೂರ್ ಗೆ ಮರಣೋತ್ತರ ಭಾರತ ರತ್ನ

ಕರ್ಪೂರಿ ಠಾಕೂರ್ ಗೆ ಮರಣೋತ್ತರ ಭಾರತ ರತ್ನ 


ವದೆಹಲಿ: ಬಿಹಾರದ ಪ್ರಮುಖ ಸಮಾಜವಾದಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ 2024 ಜನವರಿ 23ರ ಮಂಗಳವಾರ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನವನ್ನು ಮರಣೋತ್ತರವಾಗಿ ಘೋಷಿಸಲಾಯಿತು.

ಕರ್ಪೂರಿ ಠಾಕೂರ್ ಅವರು ಹಿಂದುಳಿದ ವರ್ಗಗಳ ಏಳಿಗೆಗೆ ದುಡಿದ ಕಾರಣಕ್ಕಾಗಿ ವ್ಯಾಪಕವಾಗಿ ಹೆಸರುವಾಸಿಯಾಗಿದ್ದರು. ಅವರು "ಜನನಾಯಕ" ಎಂದೇ ಖ್ಯಾತರಾಗಿದ್ದರು.

 ಕರ್ಪೂರಿ ಠಾಕೂರ್ ಅವರು ಜನವರಿ 24, 1924 ರಂದು ಬಿಹಾರದ ಅತ್ಯಂತ ಹಿಂದುಳಿದ ವರ್ಗಗಳಲ್ಲಿ ಒಂದಾದ ನಾಯ್ ಸಮಾಜದಲ್ಲಿ ಜನಿಸಿದರು. ಅವರು ಬ್ರಿಟಿಷ್ ಆಡಳಿತದ ವಿರುದ್ಧ ಮಹಾತ್ಮಾ ಗಾಂಧಿಯವರು ಕರೆ ನೀಡಿದ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಜೈಲುವಾಸ ಅನುಭವಿಸಿದರು.

ಅವರು 1952 ರಲ್ಲಿ ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರುಅಂದಿನಿಂದ ಅವರು ತಮ್ಮ ರಾಜಕೀಯ ಜೀವನದಲ್ಲಿ ಒಂದೇ ಒಂದು ಬಾರಿಯೂ ಚುನಾವಣೆಯಲ್ಲಿ ಸೋಲಲಿಲ್ಲ.

ಠಾಕೂರ್ ಅವರು ಡಿಸೆಂಬರ್ 1970 ರಿಂದ ಜೂನ್ 1971 ರವರೆಗೆ ಮತ್ತು ಡಿಸೆಂಬರ್ 1977 ರಿಂದ ಏಪ್ರಿಲ್ 1979 ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.

ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯೊಂದಿಗೆ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರ 1977 ರಿಂದ 1979 ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದ ತಮ್ಮ ಆರಂಭಿಕ ಅಧಿಕಾರಾವಧಿಯಲ್ಲಿ ಜನತಾ ಪಕ್ಷದೊಂದಿಗೆ ಸೇರಿಕೊಂಡರು.

ಕರ್ಪೂರಿ ಠಾಕೂರ್ ಫೆಬ್ರವರಿ 17, 1988 ರಂದು ನಿಧನರಾದರು.

ಕರ್ಪೂರಿ ಠಾಕೂರ್‌ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ, ಬಿಹಾರ್‌ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸೇರಿದಂತೆ ಹಲವಾರು ಗಣ್ಯರು ಸ್ವಾಗತಿಸಿದ್ದಾರೆ.

ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ

1. ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಕಾರಣಿಬರಹಗಾರವಕೀಲ ಮತ್ತು ಸ್ವಾತಂತ್ರ್ಯ ಹೋರಾಟಗಾರ) - 1954

2. ಸರ್ವಪಲ್ಲಿ ರಾಧಾಕೃಷ್ಣನ್ (ತತ್ತ್ವಶಾಸ್ತ್ರಜ್ಞರಾಜಕಾರಣಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ) - 1954

3. ಚಂದ್ರಶೇಖರ ವೆಂಕಟ ರಾಮನ್ (ಭೌತಶಾಸ್ತ್ರಜ್ಞ)- 1954

4. ಭಗವಾನ್ ದಾಸ್ (ಸ್ವಾತಂತ್ರ್ಯ ಕಾರ್ಯಕರ್ತತತ್ವಜ್ಞಾನಿ ಮತ್ತು ಶಿಕ್ಷಣತಜ್ಞ)- 1955

5. ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಸಿವಿಲ್ ಇಂಜಿನಿಯರ್ರಾಜನೀತಿಜ್ಞಮತ್ತು ಮೈಸೂರಿನ ದಿವಾನ್) - 1955

6. ಜವಾಹರಲಾಲ್ ನೆಹರು (ಸ್ವಾತಂತ್ರ್ಯ ಕಾರ್ಯಕರ್ತಲೇಖಕ ಮತ್ತು ಭಾರತದ ಮಾಜಿ ಪ್ರಧಾನಿ)- 1955

7. ಗೋವಿಂದ ಲ್ಲಭ್ ಪಂತ್ (ಸ್ವಾತಂತ್ರ್ಯ ಕಾರ್ಯಕರ್ತ) - 1957

8. ಧೋಂಡೋ ಕೇಶವ್ ಕರ್ವೆ (ಸಮಾಜ ಸುಧಾರಕ ಮತ್ತು ಶಿಕ್ಷಣತಜ್ಞ)- 1958

9. ಬಿಧನ್ ಚಂದ್ರ ರಾಯ್ (ವೈದ್ಯರಾಜಕೀಯ ನಾಯಕಲೋಕೋಪಕಾರಿಶಿಕ್ಷಣತಜ್ಞ ಮತ್ತು ಸಮಾಜ ಸೇವಕ)- 1961

10. ಪುರುಷೋತ್ತಮ್ ದಾಸ್ ಟಂಡನ್ (ಸ್ವಾತಂತ್ರ್ಯ ಕಾರ್ಯಕರ್ತ) - 1961

11. ರಾಜೇಂದ್ರ ಪ್ರಸಾದ್ (ಸ್ವಾತಂತ್ರ್ಯ ಕಾರ್ಯಕರ್ತವಕೀಲರಾಜಕಾರಣಿವಿದ್ವಾಂಸ ಮತ್ತು ಭಾರತದ ಮಾಜಿ ರಾಷ್ಟ್ರಪತಿ)- 1962

12. ಜಾಕಿರ್ ಹುಸೇನ್ (ಸ್ವಾತಂತ್ರ್ಯ ಕಾರ್ಯಕರ್ತ)- 1963

13. ಪಾಂಡುರಂಗ್ ವಾಮನ್ ಕೇನ್ (ಇಂಡಾಲಜಿಸ್ಟ್ ಮತ್ತು ಸಂಸ್ಕೃತ ವಿದ್ವಾಂಸ) -1963

14. ಲಾಲ್ ಬಹದ್ದೂರ್ ಶಾಸ್ತ್ರಿ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ಭಾರತದ ಮಾಜಿ ಪ್ರಧಾನಿ) - 1966

15. ಇಂದಿರಾ ಗಾಂಧಿ (ರಾಜಕಾರಣಿ ಮತ್ತು ಭಾರತದ ಮಾಜಿ ಪ್ರಧಾನಿ) -1971

16. ವರಾಹಗಿರಿ ವೆಂಕಟ ಗಿರಿ (ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ಭಾರತದ ಮಾಜಿ ರಾಷ್ಟ್ರಪತಿ) -1975

17. ಕುಮಾರಸ್ವಾಮಿ ಕಾಮರಾಜ್ (ಮರಣೋತ್ತರ) (ರಾಜಕಾರಣಿ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ) 1976

18. ಮದರ್ ಮೇರಿ ತೆರೇಸಾ ಬೊಜಾಕ್ಸಿಯು (ಮದರ್ ತೆರೇಸಾ) (ಮಿಷನರೀಸ್ ಆಫ್ ಚಾರಿಟಿಯ ಸ್ಥಾಪಕರು) - 1980

19. ವಿನೋಬಾ ಭಾವೆ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತೆಸಮಾಜ ಸುಧಾರಕ) -1983

20. ಖಾನ್ ಅಬ್ದುಲ್ ಗಫಾರ್ ಖಾನ್ (ಸ್ವಾತಂತ್ರ್ಯ ಕಾರ್ಯಕರ್ತ) -1987

21. ಮರುದೂರು ಗೋಪಾಲನ್ ರಾಮಚಂದ್ರನ್ (ಮರಣೋತ್ತರ) (ರಾಜಕಾರಣಿಯಾಗಿ ಮಾರ್ಪಟ್ಟ ನಟ) -1988

22. ಭೀಮ್ ರಾವ್ ರಾಮ್‌ಜಿ ಅಂಬೇಡ್ಕರ್ (ಮರಣೋತ್ತರ) (ಸಮಾಜ ಸುಧಾರಕ) -1990

23. ನೆಲ್ಸನ್ ರೋಲಿಹ್ಲಾ ಮಂಡೇಲಾ (ವರ್ಣಭೇದ ನೀತಿ ವಿರೋಧಿ ಕಾರ್ಯಕರ್ತ) - 1990

24. ರಾಜೀವ್ ಗಾಂಧಿ (ಮರಣೋತ್ತರ) (ರಾಜಕಾರಣಿ ಮತ್ತು ಭಾರತದ ಮಾಜಿ ಪ್ರಧಾನಿ) -1991

25. ಸರ್ದಾರ್ ವಲ್ಲಭಭಾಯಿ ಪಟೇಲ್ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತ) - 1991

26. ಮೊರಾರ್ಜಿ ರಾಂಚೋಡ್ಜಿ ದೇಸಾಯಿ (ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ಭಾರತದ ಪ್ರಧಾನ ಮಂತ್ರಿ) - 1991

27. ಮೌಲಾನಾ ಅಬುಲ್ ಕಲಾಂ ಆಜಾದ್ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತ) -1992

28. ಜಹಾಂಗೀರ್ ರತನ್‌ಜಿ ದಾದಾಭಾಯಿ ಟಾಟಾ (ಕೈಗಾರಿಕೋದ್ಯಮಿ) - 1992

29. ಸತ್ಯಜಿತ್ ರೇ (ಚಲನಚಿತ್ರ ನಿರ್ಮಾಪಕ) - 1992

30. ಗುಲ್ಜಾರಿ ಲಾಲ್ ನಂದಾ (ಸ್ವಾತಂತ್ರ್ಯ ಕಾರ್ಯಕರ್ತ) - 1997

31. ಅರುಣಾ ಅಸಫ್ ಅಲಿ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತೆ) - 1997

32. ಎ.ಪಿ.ಜೆ. ಅಬ್ದುಲ್ ಕಲಾಂ (ಏರೋಸ್ಪೇಸ್ರಕ್ಷಣಾ ವಿಜ್ಞಾನಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ) -1997

33. ಮಧುರೈ ಷಣ್ಮುಖವಡಿವು ಸುಬ್ಬುಲಕ್ಷ್ಮಿ (ಕರ್ನಾಟಿಕ್ ಶಾಸ್ತ್ರೀಯ ಗಾಯಕಿ) -1998

34. ಚಿದಂಬರಂ ಸುಬ್ರಮಣ್ಯಂ (ಸ್ವಾತಂತ್ರ್ಯ ಕಾರ್ಯಕರ್ತ) - 1998

35. ಜಯಪ್ರಕಾಶ್ ನಾರಾಯಣ್ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತಸಮಾಜ ಸುಧಾರಕ) - 1999

36. ಅಮರ್ತ್ಯ ಸೇನ್ (ಅರ್ಥಶಾಸ್ತ್ರಜ್ಞ) - 1999

37. ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ (ಮರಣೋತ್ತರ) (ಸ್ವಾತಂತ್ರ್ಯ ಕಾರ್ಯಕರ್ತೆ) - 1999

38. ರವಿಶಂಕರ್ (ಸಿತಾರ್ ವಾದಕ) - 1999

39. ಲತಾ ದೀನಾನಾಥ್ ಮಂಗೇಶ್ಕರ್ (ಹಿನ್ನೆಲೆ ಗಾಯಕಿ) - 2001

40. ಉಸ್ತಾದ್ ಬಿಸ್ಮಿಲ್ಲಾ ಖಾನ್ (ಹಿಂದೂಸ್ತಾನಿ ಶಾಸ್ತ್ರೀಯ ಶೆಹನಾಯಿ ವಾದಕ) - 2001

41. ಭೀಮಸೇನ್ ಗುರುರಾಜ್ ಜೋಶಿ (ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ) - 2009

42. C. N. R. ರಾವ್ (ರಸಾಯನಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ) - 2014

43. ಸಚಿನ್ ರಮೇಶ್ ತೆಂಡೂಲ್ಕರ್ (ಕ್ರಿಕೆಟರ್) - 2014

44. ಅಟಲ್ ಬಿಹಾರಿ ವಾಜಪೇಯಿ (ರಾಜಕಾರಣಿ ಮತ್ತು ಭಾರತದ ಮಾಜಿ ಪ್ರಧಾನಿ) 2015

45. ಮದನ್ ಮೋಹನ್ ಮಾಳವೀಯ (ಮರಣೋತ್ತರ) (ವಿದ್ವಾಂಸ ಮತ್ತು ಶೈಕ್ಷಣಿಕ ಸುಧಾರಕ) - 2015

46. ನಾನಾಜಿ ದೇಶಮುಖ್ (ಮರಣೋತ್ತರ) (ಸಾಮಾಜಿಕ ಕಾರ್ಯಕರ್ತ) - 2019

47. ಭೂಪೇಂದ್ರ ಕುಮಾರ್ ಹಜಾರಿಕಾ (ಮರಣೋತ್ತರ) (ಹಿನ್ನೆಲೆ ಗಾಯಕಗೀತರಚನೆಕಾರಸಂಗೀತಗಾರಕವಿ ಮತ್ತು ಚಲನಚಿತ್ರ ನಿರ್ಮಾಪಕ) - 2019

48. ಪ್ರಣಬ್ ಮುಖರ್ಜಿ (ರಾಜಕಾರಣಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ) 2019

49. ಕರ್ಪೂರಿ ಠಾಕೂರ್ (ಮರಣೋತ್ತರ) (ರಾಜಕಾರಣಿ ಮತ್ತು ಮಾಜಿ ಬಿಹಾರ ಮುಖ್ಯಮಂತ್ರಿ) - 2024

PARYAYA: ಕರ್ಪೂರಿ ಠಾಕೂರ್ ಗೆ ಮರಣೋತ್ತರ ಭಾರತ ರತ್ನ: ಕರ್ಪೂರಿ ಠಾಕೂರ್ ಗೆ ಮರಣೋತ್ತರ ಭಾರತ ರತ್ನ  ನ ವದೆಹಲಿ: ಬಿಹಾರದ ಪ್ರಮುಖ ಸಮಾಜವಾದಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ 2024 ಜನವರ...

Sunday, December 23, 2018

೧೭-೧೭-೬: ಬಿಹಾರ ಸೀಟ್ ಹಂಚಿಕೆ ಒಪ್ಪಂದ ಪ್ರಕಟಿಸಿದ ಅಮಿತ್ ಶಾ

೧೭-೧೭-: ಬಿಹಾರ ಸೀಟ್ ಹಂಚಿಕೆ ಒಪ್ಪಂದ ಪ್ರಕಟಿಸಿದ ಅಮಿತ್ ಶಾ
ಪಾಟ್ನಾ: ಬಿಜೆಪಿ ಮತ್ತು ಜೆಡಿ (ಯು) ಗೆ ೧೭ ಸ್ಥಾನಗಳು ಮತ್ತು ಲೋಕ ಜನಶಕ್ತಿ ಪಕ್ಷಕ್ಕೆ ಆರು ಸ್ಥಾನಗಳನ್ನು ನಿಗದಿ ಪಡಿಸಿ, ಬಿಹಾರದ ಎನ್ ಡಿ ಎ ಅಂಗ ಪಕ್ಷಗಳ  ಅಂತಿಮ ಸ್ಥಾನ ಹಂಚಿಕೆ ಒಪ್ಪಂದವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಿಹಾರ ಮುಖ್ಯಮಂತ್ರಿ, ಜನತಾದಳ (ಯು) ಮುಖ್ಯಸ್ಥ   ನಿತೀಶ್ ಕುಮಾರ್ ಮತ್ತು ಲೋಕಜನಶಕ್ತಿ ಪಕ್ಷದ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರು 2018ರ ಡಿಸೆಂಬರ್ 23ರ ಭಾನುವಾರ ಇಲ್ಲಿ ಪ್ರಕಟಿಸಿದರು.

ಲೋಕಜನಶಕ್ತಿ ಪಕ್ಷವು ಬಿಹಾರದ ಆರು ಲೋಕಸಭಾ ಕ್ಷೇತ್ರಗಳಲ್ಲದೆ,ಉತ್ತರ ಪ್ರದೇಶ ಅಥವಾ ಜಾರ್ಖಂಡ್ ನಲ್ಲಿ ಒಂದು ಲೋಕಸಭಾ ಕ್ಷೇತ್ರ ಮತ್ತು ರಾಜ್ಯಸಭೆಯ ಒಂದು ಕ್ಷೇತ್ರ ಪಡೆಯುವ ಸಾಧ್ಯತೆಯಿದೆ.ರಾಜ್ಯಸಭಾ ಸ್ಥಾನವನ್ನು ಪ್ರಸ್ತುತ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಪಾಸ್ವಾನ್ ಅವರು ಪಡೆಯುವ ಸಾಧ್ಯತೆ ಇದೆ.

ಪಾಸ್ವಾನ್ ಮತ್ತು ಬಿಜೆಪಿಯೊಂದಿಗಿನ ತಮ್ಮ ಪಕ್ಷದ ಭಿನ್ನಾಭಿಪ್ರಾಯಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದ  ಪಾಸ್ವಾನ್ ಪುತ್ರ ಚಿರಾಗ್ ಅವರು ಶುಕ್ರವಾರ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ ಬಳಿಕ ಈ ಒಪ್ಪಂದವನ್ನು ರೂಪಿಸಲಾಯಿತು. ಸ್ಥಾನಗಳನ್ನು ಹಂಚಿಕೆಯಲ್ಲದೆ ಇತರ ಸಮಸ್ಯೆಗಳೂ ಇವೆ ಎಂದು ಚಿರಾಗ್ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದರು.
ಉಭಯ ಪಕ್ಷಗಳ ನಡುವಣ ಭಿನ್ನಮತ ನಿವಾರಣೆಯಾಗಿದೆ ಎಂದು ಬಳಿಕ ಮೂಲಗಳು ಹೇಳಿದವು..

2014ರ ಲೋಕಸಭಾ ಚುನಾವಣೆಯಲ್ಲಿ 31 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ನೇತೃತ್ವದ  ಎನ್ ಡಿಎ, ರಾಜಕೀಯವಾಗಿ ನಿರ್ಣಾಯಕ ರಾಜ್ಯವಾಗಿರುವ ಬಿಹಾರದಲ್ಲಿ ಮಿತ್ರ ಪಕ್ಷ ಜೆಡಿಯು ಜೊತೆಗೆ ಈ ಬಾರಿ ಸಮಾನ ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಈ ಮುನ್ನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಕಟಿಸಿದ್ದರು.

ಲೋಕಜನಶಕ್ತಿ ಪಕ್ಷದ (ಎಲ್ ಜೆಪಿ) ಜೊತೆಗೆ ಮೈತ್ರಿ ಗಟ್ಟಿಗೊಳಿಸುವ ಕಾರ್ಯವನ್ನು ಪಕ್ಷವು ವಿವಿಧ ಪಕ್ಷಗಳ ನಾಯಕರ ಜೊತೆಗೆ  ಉತ್ತಮ ಸ್ನೇಹ ಸಂಬಂಧ ಹೊಂದಿರುವ ಜೇಟ್ಲಿ ಅವರಿಗೆ ಬಿಜೆಪಿ ವಹಿಸಿತ್ತು. ಎಲ್ ಜೆಪಿಯು ದಲಿತ ವರ್ಗದ ಪ್ರಬಲ ಬೆಂಬಲವನ್ನು ಹೊಂದಿರುವುದು ಇಲ್ಲಿ ಗಮನಾರ್ಹ.

ಬಿಜೆಪಿಯ ಅಧ್ಯಕ್ಷ ಶಾ ಮತ್ತು ಜೇಟ್ಲಿ ಅವರು ರಾಮ್ ವಿಲಾಸ್ ಪಾಸ್ವಾನ್ ಮತ್ತು ಅವರ ಪುತ್ರ ಚಿರಾಗ್ ಜೊತೆಗೆ ಗುರುವಾರ ಒಂದು ಗಂಟೆಗೂ ಹೆಚ್ಚಿನ ಮಾತುಕತೆ ನಡೆಸಿದ್ದರು.

ಇದಕ್ಕೆ ಮುನ್ನ ಜೇಟ್ಲಿ ಅವರಿಗೆ ಪತ್ರ ಬರೆದಿದ್ದ ಚಿರಾಗ್ ಪಾಸ್ವಾನ್ ಅವರು ನೋಟು ಅಮಾನ್ಯೀಕರಣದಿಂದ ದೇಶಕ್ಕೆ ಏನು ಪ್ರಯೋಜನವಾಗಿದೆ ಎಂದು ವಿವರಿಸುವಂತೆ ಆಗ್ರಹಿಸಿದ್ದರು.

ಸ್ಥಾನ ಹಂಚಿಕೆ ಪ್ರಕಟಣೆಯ ವಿಳಂಬದಿಂದ ಆಡಳಿತಾರೂಢ ಮೈತ್ರಿಕೂಟಕ್ಕೆ ಹಾನಿಯಾಗಬಹುದು ಎಂದೂ ಅವರು ಟ್ವೀಟ್ ಮಾಡಿದ್ದರು.

Monday, December 10, 2018

ಮೋದಿ ಸಂಪುಟಕ್ಕೆ ಉಪೇಂದ್ರ ಕುಶವಾಹ ರಾಜೀನಾಮೆ


ಮೋದಿ ಸಂಪುಟಕ್ಕೆ ಉಪೇಂದ್ರ ಕುಶವಾಹ ರಾಜೀನಾಮೆ

ನವದೆಹಲಿ: ಕೇಂದ್ರ ಸಚಿವ ಮತ್ತು ಆರ್ಎಲ್ ಎಸ್ ಪಿ ಮುಖ್ಯಸ್ಥ ಉಪೇಂದ್ರ ಕುಶವಾಹ  ಅವರು ಪ್ರಧಾನಿ ಮಂತ್ರಿ ನರೇಂದ್ರ ಮೋದಿ  ಸಚಿವ ಸಂಪುಟಕ್ಕೆ 2018 ಡಿಸೆಂಬರ್ 10 ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಬಿಹಾರದಲ್ಲಿ ಸ್ಥಾನ ಹಂಚಿಕೆ ವಿಚಾರವಾಗಿ ಕುಶವಾಹಜ ಮತ್ತು  ಬಿಜೆಪಿಯ ನಡುವೆ ಕೆಲವು ತಿಂಗಳುಗಳಿಂದ ನಡೆಯತ್ತಿರುವ ಉದ್ಭವಿಸಿದ  ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ  ಒಂದು ದಿನ ಮುಂಚಿತವಾಗಿ ಬೆಳವಣಿಗೆ ನಡೆದಿದೆ.

"ಕುಶವಾಹ ಅವರು ದೆಹಲಿಯಲ್ಲಿ ಗಂಟೆಗೆ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ," ಎಂದು ಆರ್ಎಲ್ ಎಸ್ ಪಿ ವಕ್ತಾರ ಫಜಲ್ ಇಮಾಮ್ ಮಲಿಕ್ ತಿಳಿಸಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ  ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ಎನ್ ಡಿಎ ಮೈತ್ರಿಕೂಟದ ಅಂಗಪಕ್ಷಗಳ ಸಭೆ ದೆಹಲಿಯಲ್ಲಿ ಕುಶವಾಹ ಅವರು ಭಾಗವಹಿಸುವುದಿಲ್ಲ  ಎಂದು  ಅವರು ಹೇಳಿದರು.

ಸೀಟು ಹಂಚಿಕೆ ವಿಷಯದಲ್ಲಿ ನಿಲುವು ಸ್ಪಷ್ಟ ಪಡಿಸಲು ನವೆಂಬರ್ ೩೦ ರಂದು ಗಡುವನ್ನು ಪಕ್ಷವು  ಬಿಜೆಪಿಗೆ ನೀಡಿತ್ತು ಎಂದು ಫಜಲ್ ಸ್ಪಷ್ಟಪಡಿಸಿದರು.

"ಸೀಟು ಹಂಚಿಕೆ ಕುರಿತು ಶೀಘ್ರ  ನಿರ್ಧಾರ ತೆಗೆದುಕೊಳ್ಳದಿದ್ದರೆ ಅದು  ಎನ್ ಡಿಎಗೆ  ತುಂಬಾ ಹಾನಿಕಾರಕವಾಗಲಿದೆಎಂದು ನಾವು ಎಚ್ಚರಿಸಿದ್ದೆವು.. ನಮಗೆ  ನಾವು ಗೌರವಾನ್ವಿತ ಸಂಖ್ಯೆಯ ಸ್ಥಾನಗಳನ್ನು ಪಡೆಯಬೇಕಾಗಿದೆ ಎಂದು ಅವರು ನುಡಿದರು.
೨೦೧೪ ಚುನಾವಣೆಯಲ್ಲಿ ಎನ್ ಡಿ ಯಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿದ್ದ ಆರ್ಎಲ್ಎಸ್ ಪಿ ಮೂರು ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ ೨೨ ಸ್ಥಾನಗಳನ್ನು ಮತ್ತು ಎಲ್ ಜೆಪಿ  ಆರು ಸ್ಥಾನಗಳನ್ನು ಪಡೆದಿದ್ದವು.  ಆದರೆ, ಮಹಾಮೈತ್ರಿಯು ವಿಘಟಿತಗೊಂಡ ಬಳಿಕ ಕಳೆದ ವರ್ಷ ಜೆಡಿ (ಯು) ಎನ್ ಡಿಎ ಗೆ ವಾಪಸಾದ ಬಳಿಕ  ಸಮೀಕರಣ ಬದಲಾಯಿತು.

೨೦೧೯ ಲೋಕಸಭೆ ಚುನಾವಣೆಯಲ್ಲಿ ಆರ್ಎಲ್ಎಸ್ಪಿಗೆ ಎರಡು ಸ್ಥಾನಗಳನ್ನೂ ನೀಡಲಾಗಿಲ್ಲ  ಎಂದು ಕುಶವಾಹ  ಬಿಜೆಪಿಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿ(ಯು) ಸಮಾನ ಸಂಖ್ಯೆಯ ಸ್ಥಾನಗಳನ್ನು ಹಂಚಿಕೊಳ್ಳಲು ನಿರ್ಧರಿಸಿವೆ.
ಆರ್ಎಲ್ಎಸ್ ಪಿ ಈಗ ವಿರೋಧೀ ಕಾಂಗ್ರೆಸ್ ಜೊತೆ  ಕೈ ಜೋಡಿಸಬಹುದು. ಲಾಲು ಪ್ರಸಾದ್ ಅವರ ಆರ್ ಜೆ ಡಿ ಮತ್ತು ಕಾಂಗ್ರೆಸ್ ಈಗಾಗಲೇ ಕಾಂಗ್ರೆಸ್ ಜೊತೆ ಸೇರಿವೆ.
ಲೋಕಸಭೆಗೆ ಬಿಹಾರ ೪೦ ಎಂಪಿಗಳನ್ನು ಕಳುಹಿಸುತ್ತದೆ.