Sunday, August 4, 2019

ಇಂದಿನ ಇತಿಹಾಸ History Today ಆಗಸ್ಟ್ 04

2019: ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ ಮತ್ತು ಓಹಿಯೋದ ಡೇಟನ್ ನಗರದಲ್ಲಿ ೨೪ ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಸಾಮೂಹಿಕ ಹತ್ಯಾಕಾಂಡದ ಎರಡು ಪ್ರತ್ಯೇಕ ಘಟನೆಗಳು ಘಟಿಸಿದ್ದು ಒಟ್ಟು ೩೦ ಮಂದಿ ಸಾವನ್ನಪ್ಪಿ, ೪೦ಕ್ಕೂ ಹೆಚ್ಚು ಮಂದಿ ಗಾಯಗೊಂಡರು.  ಟೆಕ್ಸಾಸ್ ಎಲ್ ಪಾಸೋ ಶಾಪಿಂಗ್ ಪ್ರದೇಶದಲ್ಲಿನ ಜನ ನಿಬಿಡ ವಾಲ್ ಮಾರ್ಟ್ ಮಳಿಗೆಯಲ್ಲಿ ಸ್ಥಳೀಯ ಕಾಲಮಾನ 2019 ಆಗಸ್ಟ್ 3ರ ಶನಿವಾರ ಬೆಳಗ್ಗೆ ೧೦.೩೦ರ ಸುಮಾರಿಗೆ ೨೧ರ ಯುವಕನೊಬ್ಬ ಯದ್ವಾತದ್ವ ಗುಂಡು ಹಾರಿಸಿದಾಗ ೨೦ ಮಂದಿ ಹತರಾಗಿ ಡಜನ್ಗೂ ಹೆಚ್ಚು ಸಂಖ್ಯೆಯ ಜನ ಗಾಯಗೊಂಡರು. ಪೊಲೀಸರು ಅಲೆನ್ ಡಲ್ಲಾಸ್ ೨೧ರ ಹರೆಯದ ಯುವಕನನ್ನು ಬಂಧಿಸಿದರು. ಟೆಕ್ಸಾಸ್ ನಗರದ ಎಲ್ ಪಾಸೋ ಶಾಪಿಂಗ್ ಪ್ರದೇಶದ ಹತ್ಯಾಕಾಂಡದ ಘಟನೆಯ ಬೆನ್ನಲ್ಲೇ ಕೆಲವೇ ಗಂಟೆಗಳ ಅಂತರದಲ್ಲಿ ಅಮೆರಿಕದ ಓಹಿಯೋದ ಡೇಟನ್ ನಗರದಲ್ಲಿ 2019 ಆಗಸ್ಟ್ 4ರ ಭಾನುವಾರ ನಸುಕಿನ ಗಂಟೆ ವೇಳೆಗೆ ಶಸ್ತ್ರಧಾರಿಯೊಬ್ಬ ನಡೆಸಿದ ಸಾಮೂಹಿಕ ಹತ್ಯಾಕಾಂಡದಲ್ಲಿ ೧೦ ಮಂದಿ ಮೃತರಾಗಿ ಇತರ ೧೬ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಯದ್ವಾತದ್ವ ಗುಂಡು ಹಾರಿಸುತ್ತಿದ್ದ ಹಂತಕನನ್ನು ಅಧಿಕಾರಿಗಳು ಗುಂಡಿಟ್ಟು ಕೊಂದು ಹಾಕಿದರು.  ಎರಡು ಹತ್ಯಾಕಾಂಡಗಳಿಗೆ ಮುನ್ನ ಜುಲೈ ೨೮ರಂದು ೧೯ರ ಹರೆಯದ ವ್ಯಕ್ತಿಯೊಬ್ಬ ಉತ್ತರ ಕ್ಯಾಲಿಫೋರ್ನಿಯಾದ ಗಿರ್ಲೋವ್ ಗಾರ್ಲಿಕ್ ಫೆಸ್ಟಿವಲ್ನಲ್ಲಿ ಗುಂಡು ಹಾರಿಸಿ ಇಬ್ಬರು ಮಕ್ಕಳು ಸೇರಿದಂತೆ ಮೂವರನ್ನು ಕೊಂದು ಹಾಕಿದ ಘಟನೆ ಘಟಿಸಿತ್ತು. ನಸುಕಿನ ಗಂಟೆ ವೇಳೆಯಲ್ಲಿ ಓಹಿಯೋದ ಓರೆಗಾನ್ ಜಿಲ್ಲೆಯಲ್ಲಿನ ಡೇಟನ್ ನಗರದ ಜನಪ್ರಿಯು ಬಾರ್ ಮತ್ತು ನೈಟ್ ಲೈಫ್ ಕ್ಲಬ್ಬಿನಲ್ಲಿ ಈದಿನದ ಘಟನೆ ಘಟಿಸಿದೆ ಎಂದು ಪೊಲೀಸ್ ಲೆಫ್ಟಿನೆಂಟ್ ಕರ್ನಲ್ ಮ್ಯಾಟ್ ಕಾರ್ಪರ್ ಹೇಳಿದರು. ಸ್ಥಳದಲ್ಲಿ ಗುಂಡು ಹಾರಿಸುತ್ತಿದ್ದ ಒಬ್ಬ ಹಂತಕಕನಿದ್ದ ಮತ್ತು ಹಲವಾರು ಮಂದಿ ಆತನ ಗುಂಡೇಟಿಗೆ ಬಲಿಯಾಗಿದ್ದರು ಎಂದು ಅವರು ವರದಿಗಾರರಿಗೆ ತಿಳಿಸಿದರು.  ‘ಘಟನೆಗೆ ಸ್ಪಂದಿಸಿದ ಅಧಿಕಾರಿಗಳ ಗುಂಡೇಟಿನಿಂದಾಗಿ ಹಂತಕ ಸಾವನ್ನಪ್ಪಿದಎಂದು ಅವರು ನುಡಿದರು. ಯಾರೇ ಪೊಲೀಸರು ಗಾಯಗೊಂಡಿಲ್ಲ ಎಂದು ಅವರು ಹೇಳಿದರು.  ಗುಂಡೇಟಿನಿಂದಾಗಿ ಮಂದಿ ಸಾವನ್ನಪ್ಪಿದ್ದಾರೆ. ೧೬ಕ್ಕೂ ಹೆಚ್ಚು ಮಂದಿಗೆ ಗುಂಡೇಟಿನ ಗಾಯಗಳಾಗಿದ್ದು ಅವರನ್ನು ತತ್ ಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆಎಂದು ಅವರು ನುಡಿದರು.  ಶಂಕಿತ ವ್ಯಕ್ತಿ ಬೀದಿಯಿಂದಲೇ ಹಲವಾರು ಸುತ್ತು ಮದ್ದು ಗುಂಡು ಇದ್ದ ಗನ್ ಮೂಲಕ ಗುಂಡು ಹಾರಿಸಿದ್ದ. ಪೊಲೀಸರು ಹಂತಕನನ್ನು ಗುರುತಿಸುವ ನಿಟ್ಟಿನಲ್ಲಿ ಕಾರ್ಯಮಗ್ನರಾಗಿದ್ದಾರೆ. ಎಫ್ಬಿಐ ಸ್ಥಳಕ್ಕೆ ಧಾವಿಸಿದ್ದು ಅಗತ್ಯ ನೆರವು ಒದಗಿಸುತ್ತಿದೆಎಂದು ಅವರು ಹೇಳಿದರು.  ಓರೇಗಾನ್ ಡೌನ್ ಟೌನಿನ ಅತ್ಯಂತ ಸುರಕ್ಷಿತ ಭಾಗವಾಗಿದ್ದು, ಡೇಟನ್ ಪ್ರವಾಸಿಗಳಿಗಾಗಿ ಖ್ಯಾತಿ ಪಡೆದಿರುವ ಜಾಗವಾಗಿದೆ ಎಂದು ಕಾರ್ಪರ್ ನುಡಿದರು.  ಘಟನೆ ಸಂಭವಿಸಿದ ಸ್ಥಳದ ಸಮೀಪದಲ್ಲೇ ಹಲವಾರು ಅಧಿಕಾರಿಗಳು ಇದ್ದುದು ನಮ್ಮ ಅದೃಷ್ಟ. ಹಿಂಸಾಚಾರ ಆರಂಭವಾದ ತತ್ ಕ್ಷಣವೇ ಅವರು ಘಟನಾ ಸ್ಥಳಕ್ಕೆ ಧಾವಿಸಿದರು ಎಂದು ಕಾರ್ಪರ್ ಹೇಳಿದರು.  ಇದು ಅತ್ಯಂತ ದುರಂತ ಘಟನೆ. ಘಟನೆಯ ತನಿಖೆ ನಿಟ್ಟಿನಲ್ಲಿ ನಾವು ಮಗ್ನರಾಗಿದ್ದೇವೆ. ಕೃತ್ಯದ ಹಿಂದಿನ ಉದ್ದೇಶ ತಿಳಿಯಲು ನಾವು ಯತ್ನಿಸುತ್ತಿದ್ದೇವೆ ಎಂದು  ಅವರು ನುಡಿದರು. ಸಾಕಷ್ಟು ಮಂದಿ ಸಾಕ್ಷಿಗಳ ಮತ್ತು ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದೇವೆ ಮತ್ತು ಘಟನೆಯಲ್ಲಿ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.  ಗುಂಡು ಹಾರಾಟ ನಸುಕಿನ ಗಂಟೆಗೆ ಆರಂಭವಾಯಿತು. ತತ್ ಕ್ಷಣವೇ ಅದಕ್ಕೆ ಕೊನೆಹಾಡಲಾಯಿತುಎಂದು ಡೇಟನ್ ಪೊಲೀಸರ ಟ್ವೀಟ್ ತಿಳಿಸಿತು. ಇದ್ದದ್ದು ಒಬ್ಬನೇ ಹಂತಕ ಎಂಬುದಾಗಿ ಪೊಲೀಸರು ನಂಬಿದ್ದಾರೆ. ಆತನ ಉದ್ದೇಶ ಏನಿತ್ತು ಎಂಬುದು ಗೊತ್ತಾಗಿಲ್ಲ ಎಂದು ಅವರು ಹೇಳಿದರು. ಕನಿಷ್ಠ ೧೬ ಮಂದಿಯನ್ನು ಆಸ್ಪತ್ರೆಗೆ ಕರೆತರಲಾಗಿದೆ ಎಂದು ಮಿಯಾಮಿ ಕಣಿವೆ ಆಸ್ಪತ್ರೆಯ ವಕ್ತಾರೆ ಟೆರ್ರಿಯಾ ಲಿಟ್ಲ್ ಹೇಳಿದರು. ಏನಿದ್ದರೂ ಅವರ  ಪರಿಸ್ಥಿತಿ ಹೇಗಿದೆ ಎಂದು ಅವರು ತಿಳಿಸಲಿಲ್ಲ. ಓಹಿಯೋದ ಪಶ್ಚಿಮದಲ್ಲಿರುವ ಡೇಟನ್ ನಗರ ,೪೦,೦೦೦ ಜನಸಂಖ್ಯೆಯನ್ನು ಹೊಂದಿದ್ದು, ಸಿನ್ ಸಿನಾಟಿಯಿಂದ ೯೦ ಕಿಮೀ ಈಶಾನ್ಯಕ್ಕೆ, ಕೊಲಂಬಸ್ ನಿಂದ ೧೨೦ ಕಿಮೀ ಪಶ್ಚಿಮಕ್ಕೆ, ಇಂಡಿಯಾನಾಪೊಲಿಸ್ ನಿಂದ ೧೯೫ ಕಿಮೀ ಪೂರ್ವಕ್ಕೆ ಇದೆ.  ಬಾರ್ ಗಳು, ರೆಸ್ಟೋರೆಂಟ್ ಗಳು ಮತ್ತು ಥಿಯೇಟರುಗಳಿಂದ ತುಂಬಿರುವ ಡೇಟನ್ ನಗರದದ ಪೂರ್ವದ ೫ನೇ ರಸ್ತಯ ೪೦೦ನೇ ಬ್ಲಾಕ್ ಹೊರಭಾಗದಲ್ಲಿ ಗುಂಡೇಟಿನ ಘಟನೆ ಘಟಿಸಿತು.   ‘ಯಾವುದೇ ಸಮುದಾಯಕ್ಕಾದರೂ ಇದು ಅತ್ಯಂತ ಅಸಹಜ. ನಮ್ಮ ಓರೇಗಾನ್ ಜಿಲ್ಲೆ ಇಂತಹದ್ದನ್ನು ಕೇಳಿದ್ದೇ ಇಲ್ಲಎಂದು ಕಾರ್ಪರ್ ಹೇಳಿದರು.  ಟೆಕ್ಸಾಸ್ ಜನನಿಬಿಡ ವಾಲ್ ಮಾರ್ಟ್ ಮಳಿಗೆಯಲ್ಲಿ ಶನಿವಾರ ಅಸಾಲ್ಟ್ ರೈಫಲ್ ಮೂಲಕ ಗುಂಡು ಹಾರಿಸಿ ೨೦ ಮಂದಿಯನ್ನು ಕೊಂದ ಘಟನೆ ಅಮೆರಿಕದಲ್ಲಿ ನಡೆದ ಇತ್ತೀಚಿನ ಭಾರೀ ಹತ್ಯಾಕಾಂಡವಾಗಿದೆ. ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹತ್ಯಾಕಾಂಡವು ೨೦೧೯ರಲ್ಲಿ ಅಮೆರಿಕದಲ್ಲಿ ನಡೆದ ೨೧ನೇ ಸಾಮೂಹಿಕ ಹತ್ಯಾಕಾಂಡವಾಗಿದೆ. ಟೆಕ್ಸಾಸ್ ನಗರದ ಅತಿಭೀಕರ ಘಟನೆ ಎಂಬುದಾಗಿ ಹತ್ಯಾಕಾಂಡವನ್ನು ಗವರ್ನರ್ ಗ್ರೆಗ್ ಅಬ್ಬೋಟ್ ಹೇಳಿದರು. ಹತ್ಯಾಕಾಂಡಗಳನ್ನು ಹೇಡಿತನದ ಕೃತ್ಯ ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಬಣ್ಣಿಸಿದರು.
2019: ನವದೆಹಲಿ: ಭದ್ರತಾ ಬೆದರಿಕೆಯ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆ ಮೊಟಕುಗೊಳಿಸಿ, ಪ್ರವಾಸಿಗರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳು ಮತ್ತು ಕ್ರಿಕೆಟಿಗರನ್ನು ರಾಜ್ಯದಿಂದ ಹೊರಕ್ಕೆ ಕಳುಹಿಸಿ ಭಾರೀ ಪ್ರಮಾಣದಲ್ಲಿ ಸೇನೆ ರವಾನಿಸಿರುವ ವಿದ್ಯಮಾನಗಳು ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿರುವಂತೆಯೇ ಗೃಹ ಸಚಿವ ಅಮಿತ್ ಶಾ ಅವರು ಈದಿನ  ಉನ್ನತ ಭದ್ರತಾ ಅಧಿಕಾರಿಗಳ ಜೊತೆ ಸಭೆ ನಡೆಸಿ ಜಮ್ಮು ಮತ್ತು ಕಾಶ್ಮೀರದ ಹಾಲಿ ಪರಿಸ್ಥಿತಿ ಬಗ್ಗೆ ಚರ್ಚಿಸಿದರು. ಇದೇ ವೇಳೆಗೆ ಶ್ರೀನಗರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫರೂಕ್ ಅಬ್ದುಲ್ಲ ಅವರ ನಿವಾಸದಲ್ಲಿ ಕಾಶ್ಮೀರದ ರಾಜಕೀಯ ಪಕ್ಷಗಳು ಸರ್ವ ಪಕ್ಷ ಸಭೆ ನಡೆಸಿ, ಕಾಶ್ಮೀರದಆತಂಕಕಾರಿವಿದ್ಯಮಾನಗಳ ಬಗ್ಗೆ ಚರ್ಚಿಸಿದವು. ಕಾಶ್ಮೀರದಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸುವಂತಹ ಯಾವುದೇ ಕ್ರಮಗಳನ್ನೂ ಕೈಗೊಳ್ಳಬೇಡಿ ಎಂದು ಸಭೆಯ ಬಳಿಕ ಫರೂಕ್ ಅಬ್ದುಲ್ಲ ಅವರು ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳಿಗೆ ಮನವಿ ಮಾಡಿದರು. ಕಾಶ್ಮೀರದ ಬೆಳವಣಿಗೆಗಳಿಗೆ ಪಾಕಿಸ್ತಾನವೂ ಪ್ರತಿಕ್ರಿಯಿಸಿದ್ದು, ಪ್ರಧಾನಿ ಇಮ್ರಾನ್ ಖಾನ್ ಅವರು ಕಾಶ್ಮೀರ ವಿಚಾರದಲ್ಲಿ ಸಂಧಾನದ ಕೊಡುಗೆ ಮುಂದಿಟ್ಟ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೊಡುಗೆಯನ್ನು ಭಾರತಕ್ಕೆ ನೆನಪಿಸಿ ಟ್ವೀಟ್ ಮಾಡಿದರು. ಇನ್ನೂ ಒಂದು ಬೆಳವಣಿಗೆಯಲ್ಲಿ ಭಾರತೀಯ ಸೇನೆಯು ಕಾಶ್ಮೀರದ ಕೇರನ್ ವಿಭಾಗದಲ್ಲಿ ಹತರಾಗಿರುವ ಪಾಕಿಸ್ತಾನಿ ಮೂಲದ ಭಯೋತ್ಪಾದಕ ಕಮಾಂಡರ್ ಮತ್ತು ಇತರ ಭಯೋತ್ಪಾದಕರ ಶವಗಳನ್ನು ಒಯ್ದು ಅಂತ್ಯಕ್ರಿಯೆ ನಡೆಸುವಂತೆ ಪಾಕಿಸ್ತಾನಕ್ಕೆ ಸೂಚಿಸಿತು.  ಆದರೆ ಪಾಕಿಸ್ತಾನವು ಭಾರತದ ಪ್ರತಿಪಾದನೆಯನ್ನು ತಿರಸ್ಕರಿಸಿ, ಭಯೋತ್ಪಾದಕರ ಶವಗಳನ್ನು ಒಯ್ಯಲು ನಿರಾಕರಿಸಿತು.  ಅಮಿತ್ ಶಾ ಸಭೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು  ಉನ್ನತ ಭದ್ರತಾ ಆಧಿಕಾರಿಗಳ ಜೊತೆ ಸಭೆ ನಡೆಸಿ ಜಮ್ಮು ಮತ್ತು ಕಾಶ್ಮೀರದ ಹಾಲಿ ಪರಿಸ್ಥಿತಿ ಬಗ್ಗೆ ಚರ್ಚಿಸಿದರು ಎಂದು ಅಧಿಕಾರಿಗಳು ತಿಳಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರುಜಮ್ಮು ಮತ್ತು ಕಾಶ್ಮೀರದ ಹಾಲಿ ಪರಿಸ್ಥಿತಿ ಬಗ್ಗೆ ಸಭೆ ಚರ್ಚಿಸಿತೆಂದು ನಂಬಲಾಗಿದೆ ಎಂದು ಅಧಿಕಾರಿಯೊಬ್ಬರು ನುಡಿದರುಏನಿದ್ದರೂ ಸಭೆಯಲ್ಲಿ ನಿರ್ದಿಷ್ಟವಾಗಿ ಏನು ನಡೆಯಿತು ಎಂಬುದು ತತ್ ಕ್ಷಣಕ್ಕೆ ತಿಳಿದು ಬಂದಿಲ್ಲ. ಕಳೆದ ವಾರ ಭಾರೀ ಪ್ರಮಾಣದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ರವಾನಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.  ಪ್ರಸ್ತುತ ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಆಡಳಿತವು ಭಯೋತ್ಪಾದನಾ ಬೆದರಿಕೆಯನ್ನು ಉಲ್ಲೇಖಿಸಿ ವಾರ್ಷಿಕ ಅಮರನಾಥ ಯಾತ್ರೆಯನ್ನು ಮೊಟಕುಗೊಳಿಸಿ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರನ್ನು ಕಾಶ್ಮೀರ ಕಣಿವೆಯಿಂದ ವಾಪಸ್ ಕಳುಹಿಸಿದೆ. ಇದೇ ವೇಳೆಗೆ ಶ್ರೀನಗರ ಎನ್ಐಟಿಯಲ್ಲಿ ಅಧ್ಯಯನ ಮಾಡುತ್ತಿರುವ ಹೊರಗಿನ ವಿದ್ಯಾರ್ಥಿಗಳಿಗೂ ಕಾಲೇಜು ಆವರಣವನ್ನು ತ್ಯಜಿಸಿ ತಮ್ಮ ಮನೆಗಳಿಗೆ ತೆರಳುವಂತೆ ಹಾಗೂ ಮುಂದಿನ ಆದೇಶದವರೆಗೆ ವಾಪಸ್ ಬಾರದೇ ಇರುವಂತೆ ಸೂಚನೆ ನೀಡಲಾಗಿದೆ. ಇನ್ನೊಂದು ಬೆಳವಣಿಗೆಯಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗ ಇರ್ಫಾನ್ ಪಠಾಣ್ ಮತ್ತು ಇತರ ೧೦೦ ಮಂದಿ ಕ್ರಿಕೆಟಿಗರಿಗೂ ಜಮ್ಮು ಮತ್ತು ಕಾಶ್ಮೀರ ಬಿಟ್ಟು ತೆರಳುವಂತೆ ಭಾರತೀಯ ಸೇನೆ ಸೂಚಿಸಿದೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ವಿಧ್ವಂಸಕ ಕೃತ್ಯಗಳನ್ನು ಎಸಗುವ ಸಲುವಾಗಿ ಗಡಿದಾಟಿ ಬರಲು ಉಗ್ರರು ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗಿದ್ದು, ಈಗಾಗಲೇ ಹಲವರು ನುಸುಳಿದ್ದಾರೆ ಎಂಬ ವರದಿಗಳನ್ನು ಅನುಸರಿಸಿ ಸೇನೆ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದೆ ಎನ್ನಲಾಯಿತು. ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ ೩೫ ವಿಧಿಯನ್ನು ರದ್ದು ಪಡಿಸಲು ಕೇಂದ್ರ ಉದ್ದೇಶಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೆಚ್ಚುವರಿ ಪಡೆಗಳ ನಿಯೋಜನೆ ಮತ್ತು ಇತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯದ ವಿಪಕ್ಷಗಳು ಶಂಕಿಸಿವೆಸರ್ವ ಪಕ್ಷ ಸಭೆ: ಮಧ್ಯೆ ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫರೂಕ್ ಅಬ್ದುಲ್ಲ ಅವರ ನಿವಾಸದಲ್ಲಿ ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ಚರ್ಚಿಸಿದವು.  ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಮನೆಯಲ್ಲಿ ನಡೆಯಬೇಕಾಗಿದ್ದ ಸಭೆ, ಫರೂಕ್ ಅಬ್ದುಲ್ಲ ಅಸ್ವಸ್ಥತೆ ಹಿನ್ನೆಲೆಯಲ್ಲಿ ಫರೂಕ್ ಅಬ್ದುಲ್ಲ ಮನೆಯಲ್ಲೇ ನಡೆಯಿತು. ಇದಕ್ಕೆ ಮುನ್ನ ಗುರುವಾರ ಫರೂಕ್ ಅಬ್ದುಲ್ಲ ನೇತೃತ್ವದಲ್ಲಿ ಸರ್ವ ಪಕ್ಷಗಳ ನಿಯೋಗವೊಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡಿ ಬಂದಿತ್ತು. ಸಂವಿಧಾನದ ೩೫ಎ ಮತ್ತು ೩೭೦ನೇ ವಿಧಿಗಳ ರದ್ಧತಿಯಿಂದ ಸಂಭವಿಸಿಬಹುದಾದ ಪರಿಣಾಮಗಳ ಬಗ್ಗೆ ರಾಷ್ಟ್ರದ ಜನರಿಗೆ ತಿಳಿಸಲು ನಾವು ಯತ್ನಿಸಿದ್ದೇವೆ. ಮನವಿಯನ್ನೂ ಮಾಡಿದ್ದೇವೆ. ಆದರೆ ನಮಗೆ ಕೇಂದ್ರದಿಂದ ಯಾವುದೇ ಭರವಸೆ ಲಭಿಸಿಲ್ಲ ಎಂದು ಮೆಹಬೂಬಾ ನುಡಿದರು. ಗಡಿ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿ ಬಗ್ಗೆ ಕೇಳಲಾದ ಪ್ರಶ್ನೆಗೆ ಪಿಡಿಪಿ ಅಧ್ಯಕ್ಷೆನಾಗರಿಕ ಸಾವುನೋವು ಖಂಡನೀಯ. ಕ್ಲಸ್ಟರ್ ಬಾಂಬ್ ಬಳಸಲಾಗುತ್ತಿರುವ ಬಗ್ಗೆ ನಾವು ಕೇಳಿದ್ದೇವೆ. ಇದು ತಪ್ಪು. ಇಸ್ರೇಲ್ ಹೀಗೆ ಮಾಡಿತ್ತು. ನಮ್ಮದು ಗಾಂಧಿಯವರ ನಾಡು ಮತ್ತು ಇದೇನಾದರೂ ಸಂಭವಿಸುತ್ತಿದ್ದರೆ ಅದು ಅತ್ಯಂತ ತಪ್ಪುಎಂದು ಹೇಳಿದರುಕೇಂದ್ರವು ಕಣಿವೆಯ ಪ್ರಮುಖ ಪಕ್ಷಗಳ ನಾಯಕರ ವಿರುದ್ಧ ಭ್ರಷ್ಟಾಚಾರವನ್ನುಆಯುಧವಾಗಿ ಬಳಸುತ್ತಿದೆ ಎಂದು ಮೆಹಬೂಬಾ ಟೀಕಿಸಿದರು. ಪ್ರಮುಖ ಪಕ್ಷಗಳ ನಾಯಕರ ಭದ್ರತೆಗಳನ್ನು ತೆಗೆದುಹಾಕಿದ್ದಾರೆ. ಅಂತರ್ ಯುದ್ಧದ ಸ್ಥಿತಿ ನಿರ್ಮಿಸುತ್ತಿದ್ದಾರೆ. ಬದುಕು ಅಸಹನೀಯವಾಗುವಂತೆ ಮಾಡಿದ್ದಾರೆ. ನಾಳೆ ಏನಾದರೂ ಆದರೆ ಜನರು ಸಿಟ್ಟಿಗೇಳುತ್ತಾರೆ ಎಂದು ಅವರು ಹೇಳಿದರುಇಮ್ರಾನ್ ಖಾನ್ ಟ್ವೀಟ್: ಮಧ್ಯೆ ಟ್ವೀಟ್ ಒಂದನ್ನು ಮಾಡಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾಶ್ಮೀರ ವಿಷಯದಲ್ಲಿ ಸಂಧಾನದ ಕೊಡುಗೆ ಮುಂದಿಟ್ಟದ್ದನ್ನು ನೆನಪಿಸಿದ್ದಾರೆ. ಭಾರತವು ಆಕ್ರ್ರಮಣಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದು ಪ್ರಾದೇಶಿಕ ಬಿಕ್ಕಟ್ಟು ಹುಟ್ಟು ಹಾಕುವ ಸಾಧ್ಯತೆಗಳಿವೆ ಎಂದು ಹೇಳಿದ ಅವರುಕಾಶ್ಮೀರ ವಿಚಾರದಲ್ಲಿ ಸಂಧಾನದ ಕೊಡುಗೆಯನ್ನು ಅಧ್ಯಕ್ಷ ಟ್ರಂಪ್ ಅವರು ನೀಡಿದ್ದಾರೆ. ಗಡಿಯಲ್ಲಿ ಪರಿಸ್ಥಿತಿ ಹದಗೆಡದಂತೆ ನೋಡಿಕೊಳ್ಳಲು, ಹಾಗೆ ಮಾಡುವುದಕ್ಕೆ (ಸಂಧಾನ) ಇದು ಸಕಾಲಎಂದು ಖಾನ್ ಟ್ವೀಟ್ ಮಾಡಿದರು. ಟ್ರಂಪ್ ಹೇಳಿಕೆಯ ಬೆನ್ನಲ್ಲೇ ಭಾರತ ಅವರ ಹೇಳಿಕೆಯನ್ನು ನಿರಾಕರಿಸಿ ತಳ್ಳಿಹಾಕಿದ್ದಲ್ಲದೆ, ಕಾಶ್ಮೀರ ವಿಚಾರದಲ್ಲಿ ಮೂರನೇ ವ್ಯಕ್ತಿಯ ಸಂಧಾನದ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿತ್ತು.
2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕೇರನ್ ವಿಭಾಗದಲ್ಲಿ ಕಳೆದ ವಾರ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ಹತರಾದ ಪಾಕಿಸ್ತಾನಿ ಕಮಾಂಡೋ ಮತ್ತು ಭಯೋತ್ಪಾದಕರ ಶವಗಳನ್ನು ಒಯ್ಯುವಂತೆ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಸೂಚಿಸಿತು.  ‘ಶ್ವೇತಧ್ವಜ ಹಿಡಿದುಕೊಂಡು ಬನ್ನಿ ಮತ್ತು ಅಂತ್ಯಕ್ರಿಯೆ ಸಲುವಾಗಿ ಸತ್ತ ಉಗ್ರಗಾಮಿಗಳ ಶವಗಳನ್ನು ತೆಗೆದುಕೊಂಡು ಹೋಗಿಎಂದು ಪಾಕಿಸ್ತಾನಿ ಸೇನೆಗೆ ಸೂಚಿಸಲಾಗಿದೆ ಎಂದು ಭಾರತೀಯ ಸೇನಾ ಮೂಲಗಳು ಹೇಳಿದವು. ಆದರೆ ಪಾಕಿಸ್ತಾನಿ ಸೈನಿಕರು ಮತ್ತು ಉಗ್ರಗಾಮಿಗಳು ಗಡಿ ನಿಯಂತ್ರಣ ರೇಖೆ ದಾಟಿ ಭಾರತದೊಳಕ್ಕೆ ಅತ್ರಿಕ್ರಮ ಪ್ರವೇಶ ಮಾಡಿದೆ ಎಂಬ ಭಾರತದ ಪ್ರತಿಪಾದನೆಯನ್ನು ಪಾಕಿಸ್ತಾನಿ ಸೇನೆ ನಿರಾಕರಿಸಿತು  ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಕಡೆಯಲ್ಲಿ ಬಿದ್ದಿರುವ ಶವಗಳನ್ನು  ಒಯ್ಯುವಂತೆ  ನೀಡಿದ ಸೂಚನೆಯನ್ನು ತಿರಸ್ಕರಿಸಿತು. ಭಾರತದ ಪ್ರತಿಪಾದನೆಯನ್ನು ಕೇವಲಪ್ರಚಾರಎಂಬುದಾಗಿ ಹೇಳಿದ ಪಾಕಿಸ್ತಾನಿ ಸೇನಾ ವಕ್ತಾರ ಮೇಜರ್ ಜನರಲ್ ಅಸಿಫ್ ಗಫೂರ್ಭಾರತವು ವಿಶ್ವದ ಗಮನವನ್ನು ಕಾಶ್ಮೀರದ ಪರಿಸ್ಥಿತಿಯಿಂದ  ಬೇರೆ ಕಡೆಗೆ ತಿರುಗಿಸುವ ಯತ್ನ ನಡೆಸುತ್ತಿದೆಎಂದು ಹೇಳಿದರು. ಪಾಕ್ ವಿದೇಶಾಂಗ ಕಚೇರಿ ಕೂಡಾ ಭಾರತದ ಪ್ರತಿಪಾದನೆಯನ್ನು ನಿರಾಕರಿಸಿ ಹೇಳಿಕೆ ನೀಡಿತು.  ‘ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತವನ್ನು ಪ್ರವೇಶಿಸಿತ್ತು. ಮತ್ತು ಭಾರತೀಯ ಸೇನೆ ಪಾಕ್ ಪ್ರಾಯೋಜಿತ ಭಯೋತ್ಪಾದಕರನ್ನು ಕೊಂದುಹಾಕಿದೆ ಎಂಬ ಹೇಳಿಕೆ ಸರಿಯಲ್ಲಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿತು.  ‘ಪಾಕಿಸ್ತಾನಿ ಭಯೋತ್ಪಾದಕರ ಶವಗಳು ತಮ್ಮ ವಶದಲ್ಲಿವೆಎಂಬ ಭಾರತದ ಪ್ರತಿಪಾದನೆಯನ್ನು ನಾವು ತಿರಸ್ಕರಿಸುತ್ತೇವೆಎಂದು ಪಾಕ್ ವಿದೇಶಾಂಗ ಕಚೇರಿ ತಿಳಿಸಿತು. ಜಮ್ಮು ಮತ್ತು ಕಾಶ್ಮೀರದ ಕೇರನ್ ವಿಭಾಗದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಸೈನಿಕರು ಮತ್ತು ಭಯೋತ್ಪಾದಕರ ಗುಂಪೊಂದು ಸೇನೆಯ ಮೇಲೆ ದಾಳಿ ನಡೆಸಿದ್ದು ಸಂದರ್ಭದಲ್ಲಿ ನಾಲ್ವರು ಉಗ್ರಗಾಮಿಗಳನ್ನು ಕೊಲ್ಲಲಾಗಿದೆ ಎಂದು ಭಾರತ ತಿಳಿಸಿತು. ಸಾವನ್ನಪ್ಪಿದ ಕಮಾಂಡೋ ಪಾಕಿಸ್ತಾನದ ವಿಶೇಷ ಸೇವಾ ಗುಂಪಿನ ಸದಸ್ಯ ಎಂದು ಹೇಳಲಾಗಿತ್ತು. ದಾಳಿಕೋರರು ಪಾಕಿಸ್ತಾನದ ಗಡಿ ಕಾರ್ಯ ತಂಡದ (ಬಾರ್ಡರ್ ಆಕ್ಷನ್ ಟೀಮ್- ಬ್ಯಾಟ್) ಭಾಗವಾಗಿದ್ದಾರೆ ಎಂದು ಸೇನೆ ಶಂಕಿಸಿತು.   ತಂಡವು ಹಿಂದೆ ಗಡಿಯಲ್ಲಿ ಹಠಾತ್ ದಾಳಿ ನಡೆಸಿ, ಪಾಕಿಸ್ತಾನಿ ಪಡೆಗಳ ಗುಂಡಿನ ದಾಳಿಯ ಆಶ್ರಯದಲ್ಲಿ ಪಾಕಿಸ್ತಾನಕ್ಕೆ ವಾಪಸಾಗಿತ್ತು ಎನ್ನಲಾಗಿತ್ತು. ಸರ್ಕಾರವು ಭದ್ರತಾ ಬೆದರಿಕೆಗಳ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಗಡಿ ಸೇನಾ ಠಾಣೆಯ ಮೇಲೆ ದಾಳಿ ನಡೆದ ವಿಷಯವನ್ನು ಸೇನೆ ಬಹಿರಂಗ ಪಡಿಸಿತ್ತು. ಎಲ್ಲ ಯಾತ್ರಾರ್ಥಿಗಳಿಗೂ ಕಣಿವೆಯಿಂದ ಆದಷ್ಟೂ ಶೀಘ್ರ ವಾಪಸಾಗುವಂತೆ ಸರ್ಕಾರ  ಸೂಚನೆ ನೀಡಿತ್ತು.


No comments:

Post a Comment