2019: ನವದೆಹಲಿ: ಗಡಿಯ ಮೂಲಕ ಭಾರತದೊಳಕ್ಕೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನ ಸೇನೆಯ ಯೋಧರು ಇದ್ದ ಉಗ್ರರ ತಂಡವೊಂದನ್ನು ಭಾರತೀಯ ಸೇನೆ ಹೊಡೆದುರುಳಿಸಿತು. ಕುಪ್ವಾರಾ ಜಿಲ್ಲೆಯ ಕೇರನ್ ಸೆಕ್ಟರ್‌ನಲ್ಲಿ ನಡೆದ ಈ ಘಟನೆಯಲ್ಲಿ ಕನಿಷ್ಠ ಏಳು ಉಗ್ರರು ಹತರಾಗಿದ್ದಾರೆ ಎಂದು ಭಾರತೀಯ ಸೇನೆಯ ವಕ್ತಾರರಾದ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದರು. ನುಸುಳುಕೋರರ ಈ ತಂಡವು ಪಾಕಿಸ್ತಾನದ ಸೇನೆಯ ಗಡಿ ಕಾರ್ಯಾಚರಣೆ ಪಡೆಯ (ಬ್ಯಾಟ್) ಸಿಬ್ಬಂದಿ ಹಾಗೂ ಉಗ್ರವಾದಿ ತಂಡಗಳ ಸದಸ್ಯರನ್ನು ಒಳಗೊಂಡಿತ್ತು. ಜು. 31 ಮತ್ತು ಆ. 1ರ ಮಧ್ಯರಾತ್ರಿಯೂ ಬ್ಯಾಟ್ ವತಿಯಿಂದ ನಡೆಸಲಾಗಿದ್ದ ಒಳನುಸುಳುವಿಕೆ ಪ್ರಯತ್ನವನ್ನು ಇದೇ ರೀತಿ ನಿಗ್ರಹಿಸಲಾಗಿತ್ತು ಎಂದು ಕಾಲಿಯಾ ವಿವರಿಸಿದರು.
2019: ನವದೆಹಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಹಿಂದಿನ ವಾರ ಅಮೆರಿಕ ಭೇಟಿಗೆ ಹೋಗುವ ಮುನ್ನ ದೇಶದ ಗಡಿಗಳಿಂದ ಕಣ್ಮರೆಯಾಗಿದ್ದ ಭಯೋತ್ಪಾದಕರು, ಪಾಕ್ ಪ್ರಧಾನಿ ಸ್ವದೇಶಕ್ಕೆ ವಾಪಸಾದ ಬಳಿಕ ಗಡಿಯ ’ಉಗ್ರ ಉಡಾವಣಾ ಶಿಬಿರಗಳಲ್ಲಿ’ ಭಾರೀ
ಸಂಖ್ಯೆಯಲ್ಲಿ ಪ್ರತ್ಯಕ್ಷರಾದರು! ಉಪಗ್ರಹಗಳು ಸೆರೆ ಹಿಡಿದಿರುವ
ಚಿತ್ರಗಳು ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಪಾಕಿಸ್ತಾನದ ಪ್ರಧಾನಿ ಅಮೆರಿಕಕ್ಕೆ ತೆರಳುವ ಮುನ್ನ ಭಯೋತ್ಪಾದಕರ ಎಲ್ಲ ಶಿಬಿರಗಳು ಖಾಲಿಯಾಗಿದ್ದುದನ್ನು ತೋರಿಸಿದರೆ, ಅವರು ಪಾಕಿಸ್ತಾನಕ್ಕೆ ವಾಪಸಾದ ಬಳಿಕ ಗಡಿಯಲ್ಲಿನ ಶಿಬಿರಗಳಲ್ಲಿ ಭಯೋತ್ಪಾದಕರು ಪ್ರತ್ಯಕ್ಷರಾಗಿರುವುದನ್ನು ತೋರಿಸಿವೆ ಎಂದು ಗುಪ್ತಚರ ವರದಿಗಳು ಹೇಳಿದವು. ಹಲವಾರು ದಿನಗಳ ಕಾಲ ಭಾರತ - ಪಾಕ್ ಗಡಿ ನಿಯಂತ್ರಣ ರೇಖೆಯಲ್ಲಿನ ಶಿಬಿರಗಳಲ್ಲಿ ಯಾರೇ ಭಯೋತ್ಪಾದಕರು ಇಲ್ಲ ಎಂಬ ವರದಿಗಳು ನಮಗೆ ಲಭಿಸಿದ್ದವು. ಸಾಮಾನ್ಯವಾಗಿ ಮೇ ಮತ್ತು ಅಕ್ಟೋಬರ್
ನಡುವಣ ಅವಧಿಯಲ್ಲಿ ಭಾರತಕ್ಕೆ ಭಯೋತ್ಪಾದಕರ ನುಸುಳುವಿಕೆ ಪ್ರಮಾಣ ಹೆಚ್ಚಾಗಿ ಇರುತ್ತಿದ್ದುದರಿಂದ ಅಲ್ಲಿ ಭಯೋತ್ಪಾದಕರ ಸುಳಿವೇ ಇಲ್ಲದಿದ್ದದು ಅಚ್ಚರಿದಾಯಕವಾಗಿತ್ತು’ ಎಂದು
ಗುಪ್ತಚರ ವರದಿಯನ್ನು ನೋಡಿರುವ ಹೆಸರು ಹೇಳಲು ಇಚ್ಛಿಸದ ಹಿರಿಯ ಸೇನಾ ಅಧಿಕಾರಿ ನುಡಿದರು. ಇಮ್ರಾನ್ ಖಾನ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಿಂದಿನ ವಾರ ಜುಲೈ ೨೨ರಂದು ಭೇಟಿ ಮಾಡಿದ್ದರು. ಇದೇ ಮೊತ್ತ ಮೊದಲ ಬಾರಿಗೆ ಪಾಕಿಸ್ತಾನಿ ಪ್ರಧಾನಿಯ ಜೊತೆಗೆ ರಾಷ್ಟ್ರದ ಸೇನಾ ಮುಖ್ಯಸ್ಥ ಜನರಲ್ ಖಮರ್ ಬಜ್ವಾ ಮತ್ತು
ಗುಪ್ತಚರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟಲಿಜೆನ್ಸ್ (ಐಎಸ್‌ಐ) ಮುಖ್ಯಸ್ಥ ಫೈಜ್
ಹಮೀದ್ ಅವರೂ ಇದ್ದರು. ೨೦೧೫ರ ಬಳಿಕ ನಡೆದ ಮೊತ್ತ ಮೊದಲ ಅಮೆರಿಕ ಜೊತೆಗಿನ ಉನ್ನತ ಮಟ್ಟದ ಮಾತುಕತೆಗಳ ವೇಳೆಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಯಾವುದೇ ಘರ್ಷಣೆ ನಡೆಯಬಾರದು ಎಂಬುದಾಗಿ ಪಾಕಿಸ್ತಾನ ಬಯಸಿತ್ತು ಎಂದು ಭಾರತೀಯ ಅಧಿಕಾರಿಗಳು ಅಂದಾಜು ಮಾಡಿದರು. ಇದೀಗ ಬಂದಿರುವ ತಾಜಾ ಗುಪ್ತಚರ ವರದಿಗಳ ಪ್ರಕಾರ ಸುಮಾರು ೨೦೦ರಿಂದ ೨೫೦ ಮಂದಿ ಭಯೋತ್ಪಾದಕರು ಗಡಿ ಪ್ರದೇಶದ ಶಿಬಿರಗಳಲ್ಲಿ ಜಮಾಯಿಸಿದ್ದು ಭಾರತಕ್ಕೆ ನುಸುಳಲು ಕಾಯುತ್ತಿದ್ದಾರೆ ಎಂದು ಸೇನಾ ಅಧಿಕಾರಿ ನುಡಿದರು. ಕಣಿವೆಯ ಗುರೆಜ್ ವಿಭಾಗದಲ್ಲಿ ನಡೆದ ಕದನವಿರಾಮ ಉಲ್ಲಂಘನೆಯು ಭಯೋತ್ಪಾದಕರನ್ನು ನುಸುಳುವಂತೆ ಮಾಡುವ ಯತ್ನವಾಗಿತ್ತು ಎಂದು ಸೇನಾ ಅಧಿಕಾರಿ ದೃಢ ಪಡಿಸಿದರು. ’ಇಬ್ಬರು ಭಯೋತ್ಪಾದಕರ ಶವಗಳು ಅಲ್ಲಿ ಬಿದ್ದಿದ್ದುದನ್ನು ನಾವು ನೋಡಬಹುದಾಗಿತ್ತು’ ಎಂದು
ಅವರು ಹೇಳಿದರು. ಎರಡು
ವಾರಗಳ ಅವಧಿಗೆ ಉಗ್ರ ಉಡಾವಣಾ ಶಿಬಿರಗಳನ್ನು ಖಾಲಿ ಮಾಡಲಾಗಿತ್ತು ಮತ್ತು ಭಯೋತ್ಪಾದಕರನ್ನು ಗಡಿ ನಿಯಂತ್ರಣ ರೇಖೆಗೆ ಸಮೀಪದ ಗ್ರಾಮಗಳಿಗೆ ಸ್ಥಳಾಂತರ ಮಾಡಲಾಗಿತ್ತು ಎಂದು ಗುಪ್ತಚರ ಅಧಿಕಾರಿಯೊಬ್ಬರು ದೃಢ ಪಡಿಸಿದರು. ’ಈಗ ಗಡಿ ಮತ್ತೆ
ಸಕ್ರಿಯಗೊಂಡಿದೆ. ಹೀಗಾಗಿ ಇನ್ನಷ್ಟು ಕದನ ವಿರಾಮ ಉಲ್ಲಂಘನೆಗಳನ್ನು ನಾವು ನಿರೀಕ್ಷಿಸಿದ್ದೇವೆ’ ಎಂದು
ಅಪರಿಚಿತರಾಗಿ ಉಳಿಯ ಬಯಸಿದ ಈ ಅಧಿಕಾರಿ ನುಡಿದರು. ಪ್ರಸ್ತುತ
ವಾರ ತಂಗ್ಧರ್ ಮತ್ತು ಕೇರನ್ ವಿಭಾಗಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಭಾರೀ ಪ್ರಮಾಣದಲ್ಲಿ ಫಿರಂಗಿ ದಾಳಿ-ಪ್ರತಿದಾಳಿ ನಡೆದು ಗಡಿ ಪ್ರದೇಶ ಪ್ರಕ್ಷುಬ್ಧಗೊಂಡಿತ್ತು. ಸುಂದರಬನಿ ವಿಭಾಗದಲ್ಲಿ ಸಂಭವಿಸಿದ ಇನ್ನೊಂದು ಕದನವಿರಾಮ ಉಲ್ಲಂಘನೆಯಲ್ಲಿ ಭಾರತದ ಒಬ್ಬ ಯೋಧ ಹುತಾತ್ಮನಾಗಿದ್ದ. ಶ್ರೀನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿನಾರ್ ಕೋರ್ ಕಮಾಂಡರ್, ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಸಂಧು ಅವರು ಪಾಕಿಸ್ತಾನವು ತನ್ನ ನುಸುಳುವಿಕೆ ಪ್ರಯತ್ನವನ್ನು ಮುಂದುವರೆಸುತ್ತಿದ್ದು, ಕಣಿವೆಯಲ್ಲಿ ಶಾಂತಿ ಕದಡಲು ಯತ್ನಿಸುತ್ತಿದೆ ಎಂದು ಹೇಳಿದ್ದರು. ಪುಲ್ವಾಮದಲ್ಲಿ
ಸ್ಫೋಟಕ ತುಂಬದ್ದ ವಾಹನ ಗುದ್ದಿಸುವ ಮೂಲಕ ನಡೆದ ಭಯೋತ್ಪಾದಕ ದಾಳಿಯಲ್ಲಿ ೪೦ ಮಂದಿ ಸಿಆರ್ಪಿಎಫ್ ಯೋಧರು ಹುತಾತ್ಮರಾದ ಬೆನ್ನಲ್ಲೇ ಫೆಬ್ರುವರಿಯಲ್ಲಿ ಭಾರತದ ವಾಯುಪಡೆಯು ಪಾಕಿಸ್ತಾನದ ಬಾಲಾಕೋಟ್ಗೆ ನುಗ್ಗಿ ಜೈಶ್-ಇ-ಮೊಹಮ್ಮದ್ ಸಂಘಟನೆಯ
ತರಬೇತಿ ಶಿಬಿರದ ಮೇಲೆ ಗುಂಡಿನ ದಾಳಿ ನಡೆಸಿದ ಬಳಿಕ ಕದನ ವಿರಾಮ ಉಲ್ಲಂಘನೆಗಳು ಸ್ಥಗಿತಗೊಂಡಿದ್ದವು. ಇದೀಗ ಗಡಿ ಪ್ರದೇಶ ಮತ್ತೆ ಸಕ್ರಿಯಗೊಂಡಿದ್ದು, ಪಾಕಿಸ್ತಾನವು ಮತ್ತೆ ದಾಳಿಯ ಯತ್ನ ನಡೆಸಬಹುದು ಎಂಬುದಾಗಿ ಭಾರತೀಯ
ಭದ್ರತಾ ಪಡೆ ನಿರೀಕ್ಷಿಸಿತು. ‘ಪ್ರಧಾನಿ ಇಮ್ರಾನ್ ಖಾನ್
ಅವರ ಅಮೆರಿಕ ಯಾತ್ರೆ ಫಲಪ್ರದವಾಗಿದೆ ಎಂಬ ಭಾವನೆ ಪಾಕಿಸ್ತಾನದಲ್ಲಿ ಮೂಡಿದ್ದು, ಕಾಶ್ಮೀರ ವಿಚಾರದಲ್ಲಿ ಸಂಧಾನದ ಕೊಡುಗೆಯನ್ನು ಅಮೆರಿಕದ ಅಧ್ಯಕ್ಷ ಮುಂದಿಟ್ಟದ್ದರಿಂದ ಪಾಕಿಸ್ತಾನೀಯರು ಖುಷಿಯಾಗಿದ್ದಾರೆ’ ಎಂದು
ಹೆಸರು ಹೇಳಲು ಇಚ್ಛಿಸದ ಇನ್ನೊಬ್ಬ ಭಾರತೀಯ ಅಧಿಕಾರಿ ತಿಳಿಸಿದರು.
2019: ನವದೆಹಲಿ: ಪಾಕಿಸ್ತಾನ
ಮೂಲದ ಭಯೋತ್ಪಾದಕ ಗುಂಪುಗಳು ಅದರಲ್ಲೂ ಮುಖ್ಯವಾಗಿ ಜೈಶ್-ಇ-ಮೊಹಮ್ಮದ್ (ಜೆಇಎಂ)
ಸಂಘಟನೆಯು ಸೊಪೋರ್ ಪ್ರದೇಶದಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ)
ಬಳಸಿ ಭದ್ರತಾ ಪಡೆಗಳ ಮೇಲೆ ಹಲವಾರು ಆತ್ಮಹತ್ಯಾ ದಾಳಿಗಳನ್ನು ನಡೆಸಲು ಯೋಜಿಸಿರುವ ಬಗ್ಗೆ ಭಾರತೀಯ ಗುಪ್ತಚರ ವರದಿಗಳು ಸುಳಿವು ನೀಡಿದ್ದನ್ನು ಅನುಸರಿಸಿ ಸರ್ಕಾರವು ಅಮರನಾಥ ಯಾತ್ರೆಯನ್ನು ಮೊಟಕುಗೊಳಿಸಲು ಮತ್ತು ಕಾಶ್ಮೀರದಲ್ಲಿ ಹೊಸದಾಗಿ ಪಡೆಗಳನ್ನು ನಿಯೋಜಿಸಿ ಉಗ್ರ ನಿಗ್ರಹ ಜಾಲ ಬಲ ಪಡಿಸಲು ಸರ್ಕಾರ
ನಿರ್ಧರಿಸಿತು. ಬೆಳವಣಿಗೆಗಳ ಬಗ್ಗೆ ಖಚಿತ ಮಾಹಿತಿ ಇರುವ ಇಬ್ಬರು ವ್ಯಕ್ತಿಗಳು ಈ ವಿಚಾರವನ್ನು ಇಲ್ಲಿ
ತಿಳಿಸಿದರು. ರಾಷ್ಟ್ರೀಯ ಭದ್ರತಾ ಸಂಸ್ಥೆಗೆ ತಲುಪಿರುವ ವರ್ತಮಾನಗಳ ಪ್ರಕಾರ ಜೆಇಎಂ ಮುಖ್ಯಸ್ಥ
ಮಸೂದ್ ಅಜ್ಹರ್ ಸಹೋದರ ಇಬ್ರಾಹಿಂ ಅಜ್ಹರ್ ಕಳೆದ ತಿಂಗಳು ಪಾಕ್ ಆಕ್ರಮಿತ ಪ್ರದೇಶದ ಮುಜಾಫ್ಫರಾಬಾದಿನಲ್ಲಿ ಕಾಣಿಸಿಕೊಂಡಿದ್ದ. ೧೯೯೯ರಲ್ಲಿ
ಐಸಿ-೮೧೪ ವಿಮಾನ ಅಪಹರಣ ಪ್ರಕರಣದ ಮುಖ್ಯ ಸೂತ್ರಧಾರಿಯಾಗಿದ್ದ ಇಬ್ರಾಹಿಂ ಅಜ್ಹರ್ ಕಣಿವೆಗೆ ನುಸುಳಿ ಭಾರತೀಯ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವ ಮೂಲಕ ತನ್ನ ಪುತ್ರ ಉಸ್ಮಾನ್ ಹೈದರನ ಸಾವಿನ ಸೇಡು ತೀರಿಸಲು ಬಯಸಿದ್ದ ಎಂದು ಮೂಲಗಳು ತಿಳಿಸಿವೆ. ಉಸ್ಮಾನ್ ಹೈದರ್ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆ ನಡೆಸಿದ್ದ ಕಾರ್ಯಾಚರಣೆಯಲ್ಲಿ ಅಸುನೀಗಿದ್ದ. ಗುಪ್ತಚರ ಮಾಹಿತಿಗಳು ಹೇಳುವಂತೆ ಜೆಇಎಂ ಗಡಿ ಕಾರ್‍ಯ ತಂಡಗಳನ್ನು ಕೂಡಾ
ಇಬ್ರಾಹಿಂ ಅಜ್ಹರ್ ನೇತೃತ್ವದಲ್ಲಿ ರಚಿಸಿತ್ತು ಮತ್ತು ಅವುಗಳನ್ನು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನಿ ಸೇನಾ ನೆಲೆಗಳಿಗೆ ಕಳುಹಿಸಿತ್ತು. ಇಬ್ರಾಹಿಂ ಅಜ್ಹರನ ಪುತ್ರ ೨೦೧೮ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿದ್ದ ಮತ್ತು ೨೦೧೮ರ ಅಕ್ಟೋಬರ್ ೩೦ರಂದು ಪುಲ್ವಾಮದ ಅವಂತಿಪೋರ ಪ್ರದೇಶದಲ್ಲಿ ಭಾರತೀಯ ಭದ್ರತ ಪಡೆಗಳ ಗುಂಡೇಟಿಗೆ ಬಲಿಯಾಗಿದ್ದ. ಇಬ್ರಾಹಿಂ ಅಜ್ಹರನ ಇನ್ನೊಬ್ಬ ಸಂಬಂಧಿ ಅಬ್ದುಲ್ ರಶೀದನ ಪುತ್ರ ಹಾಗೂ
ಮಸೂದ್ ಅಜ್ಹರನ ಭಾವ ತಲ್ಹಾ ರಶೀದ್ ಕೂಡಾ ೨೦೧೭ರ ನವೆಂಬರ್ ೬ರಂದು ಪುಲ್ವಾಮದ ಕಂಡಿ ಅಗ್ಲರ್ನಲ್ಲಿ ಹತನಾಗಿದ್ದ. ಈ ಸಾವುಗಳಿಗಾಗಿ ಇಬ್ರಾಹಿಂ
ಅಜ್ಹರ್ ಜೈಶ್-ಇ-ಮೊಹಮ್ಮದ್ ಸಂಘಟನೆಯ
ಸದಸ್ಯರ ಮೇಲೆ ಕೂಗಾಡಿದ್ದ ಇಬ್ರಾಹಿಂ ಅಜ್ಹರ್ ’ನನ್ನ ಮಗ ಭಾರತೀಯ ಸೇನೆಯ
ಜೊತೆಗೆ ಹೋರಾಡುತ್ತಾ ಹೇಗೆ ಮಡಿದನೊ ಅದೇ ರೀತಿಯಾಗಿ ನಿವೆಲ್ಲಾ ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆಗಳ ಜೊತೆ ಹೋರಾಡುತ್ತಾ ಸಾಯಬೇಕು ಎಂಬುದಾಗಿ ನಾನು ಬಯಸಿದ್ದೇನೆ’ ಎಂದು
ಹೇಳಿದ್ದ ಎಂದು ಗುಪ್ತಚರ ಮೂಲಗಳು ಹೇಳಿದವು.
2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚುವರಿ ಸೇನೆಯನ್ನು ನಿಯೋಜಿಸುವ ವೇಳೆಯಲ್ಲೇ ಭಾರತವು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಒಳಗೆ, ಭಯೋತ್ಪಾದಕರ ಅಡಗುತಾಣಗಳನ್ನು ಗುರಿಯಾಗಿಟ್ಟುಕೊಂಡು ’ಸರ್ಜಿಕಲ್ ದಾಳಿ’ ನಡೆಸಿದೆ ಎಂದು ಪಾಕಿಸ್ತಾನಿ ಪತ್ರಿಕೆಗಳು ವರದಿ ಮಾಡಿದವು. ಸರ್ಜಿಕಲ್ ದಾಳಿ ನಡೆಸಿರುವ
ಬಗ್ಗೆ ಭಾರತ ಸರ್ಕಾರ ಅಥವಾ ಸೇನೆ ಅಧಿಕೃತವಾಗಿ ಏನನ್ನೂ ಹೇಳಿಲ್ಲವಾದರೂ, ದಾಳಿ ವರದಿಗಳನ್ನು ಸಮರ್ಥಿಸುವಂತಹ ವರದಿಯನ್ನು ಪಾಕಿಸ್ತಾನದ ’ಡಾನ್’ ಪತ್ರಿಕೆ ಪ್ರಕಟಿಸಿತು. ಆದರೆ
ಭಾರತವು ಜಿನೇವಾ ಸಮಾವೇಶ ಮತ್ತು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿ ಗಡಿ ನಿಯಂತ್ರಣ ರೇಖೆಯಲ್ಲಿ ’ಕ್ಲಸ್ಟರ್ ಬಾಂಬ್’ದಾಳಿ ನಡೆಸಿದೆ ಎಂದು ಪತ್ರಿಕೆ ಹೇಳಿತು. ಪಾಕ್ ಆಕ್ರಮಿತ ಕಾಶ್ಮೀರ ೩೦ ಕಿಮೀ ದೂರದಲ್ಲಿ
ಭಯೋತ್ಪಾದಕರ ಅಡಗುತಾಣಗಳು ಇರುವ ಬಗ್ಗೆ ಭಾರತದ ಗುಪ್ತಚರ ಸಂಸ್ಥೆ ಖಚಿತ ಸುಳಿವು ನೀಡಿತ್ತು ಮತ್ತು ಭಯೋತ್ಪಾದಕರು ಭಾರತದ ಒಳಕ್ಕೆ ನುಸುಳಿ ಭೀಕರ ದಾಳಿಗಳನ್ನು ನಡೆಸುವ ಸಾಧ್ಯತೆಗಳು ಇವೆ ಎಂದು ಎಚ್ಚರಿಕೆ ನೀಡಿತ್ತು ಎನ್ನಲಾಯಿತು. ಈ ಹಿನ್ನೆಲೆಯಲ್ಲೇ, ಭಯೋತ್ಪಾದಕರ ದಾಳಿಗೂ ಮುನ್ನವೇ, ಭಾರತೀಯ ಸೇನೆಯು ಹೆಚ್ಚುವರಿ ಸೈನಿಕರನ್ನು ನಿಯೋಜಿಸುವುದರ ಜೊತೆಗೆ ಫಿರಂಗಿ ಬಳಸಿ ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ ಎಂದು ವರದಿಗಳು ಹೇಳಿದವು. ವರದಿಗಳ
ಪ್ರಕಾರ ದಾಳಿಯಲ್ಲಿ ಪಾಕಿಸ್ತಾನದ ಜಲ ವಿದ್ಯುತ್ ಸ್ಥಾವರವಾದ
ನೀಲಂ-ಜೇಲಂಗೆ ಹಾನಿಯಾಗಿದೆ ಎಂದು ಹೇಳಲಾಯಿತು. ಇದರ ಜೊತೆಗೆ ಪಂಜಾಬ್ ಗಡಿಭಾಗದಲ್ಲಿ ಪಾಕ್ ನುಸುಳುಕೋರನೊಬ್ಬನನ್ನು ಬಂಧಿಸಲಾಗಿದೆ ಎಂದೂ ವರದಿ ಹೇಳಿತು. ಪಾಕಿಸ್ತಾನದ ’ಡಾನ್’ ವರದಿಯ ಪ್ರಕಾರ ಜುಲೈ ೩೦ ಮತ್ತು ೩೧ರ
ನಡುವಣ ರಾತ್ರಿ ಈ ದಾಳಿ ನಡೆಯಿತು.
ಕ್ಲಸ್ಟರ್ ಬಾಂಬ್ ದಾಳಿಯಿಂದ ೪ ವರ್ಷದ ಒಬ್ಬ
ಬಾಲಕ ಸೇರಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು, ಇತರ ೧೧ ಮಂದಿ ಗಾಯಗೊಂಡಿದ್ದಾರೆ.
ಭಾರತೀಯ ಸೇನೆಯ ’ಕ್ಲಸ್ಟರ್ ಮದ್ದುಗುಂಡನ್ನು’ ಬಳಸಿ
ಜನವಸತಿ ಪ್ರದೇಶದ ಮೇಲೆ ಫಿರಂಗಿದಾಳಿ ನಡೆಸಿದೆ ಎಂದು ’ಡಾನ್’ ವರದಿ
ಹೇಳಿತು. ಈ ಹಿಂದೆ ಪಾಕ್ ಆಕ್ರಮಿತ ಪ್ರದೇಶಕ್ಕೆ ನುಗ್ಗಿ ಭಾರತೀಯ ಸೈನಿಕರು ಸರ್ಜಿಕಲ್ ದಾಳಿ ನಡೆಸಿದ್ದರು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ೪೦ ಮಂದಿ ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದ ಭಯೋತ್ಪಾದಕ ಆತ್ಮಹತ್ಯಾ ದಾಳಿಗೆ ಪ್ರತಿಯಾಗಿ ಭಾರತದ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ ಪ್ರದೇಶಕ್ಕೆ ನುಗ್ಗಿ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ
ಸಂಘಟನೆಯ ತರಬೇತಿ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿತ್ತು.
2019: ನವದೆಹಲಿ: ಸಂವಿಧಾನದ
೩೫ಎ ವಿಧಿಯನ್ನು ರದ್ದು ಪಡಿಸುವ ಅಥವಾ ರಾಜ್ಯವು ಎರಡು ಅಥವಾ ಮೂರು ಭಾಗವಾಗಿ ವಿಭಜಿಸುವ ಯಾವುದೇ ಉಪಕ್ರಮ ಇಲ್ಲ ಎಂಬುದಾಗಿ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ತಮಗೆ ಭರವಸೆ ನೀಡಿದ್ದಾರೆ, ಆದರೆ ರಾಜ್ಯಕ್ಕೆ ಹೆಚ್ಚವರಿ ಸೇನೆ ನಿಯೋಜಿಸಿದ್ದು ಏಕೆ ಎಂದು ಕೇಂದ್ರ ಉತ್ತರ ನೀಡಬೇಕು ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲ ಆಗ್ರಹಿಸಿದರು.
ಈ
ಮಧ್ಯೆ ಸರ್ಕಾರವು ಕಿಶ್ತವಾರದ ೨ನೇ ಯಾತ್ರೆಯನ್ನುಮೊಟಕು ಗೊಳಿಸಿದ್ದು, ವಿಶ್ವ ಹಿಂದೂ ಪರಿಷತ್ ಆಗಸ್ಟ್ ೬ರಿಂದ ಆರಂಭವಾಗಬೇಕಾಗಿದ್ದ ತನ್ನ ಬುಧ ಅಮರನಾಥ ಯಾತ್ರೆಯನ್ನು ರದ್ದು ಪಡಿಸಿತು. ಪ್ರವಾಸಿಗರು ಮತ್ತು ಯಾತ್ರಾರ್ಥಿಗಳನ್ನು ತತ್ ಕ್ಷಣ ರಾಜ್ಯ ತ್ಯಜಿಸುವಂತೆ ಸರ್ಕಾರ ನೀಡಿರುವ ಆದೇಶದಿಂದ ಜಮ್ಮು ಮತ್ತು ಕಾಶ್ಮೀರದ ಜನ ಭಯಭೀತರಾಗಿದ್ದಾರೆ. ಸ್ಥಳೀಯರು ಪೆಟ್ರೋಲ್
ಪಂಪ್ಗಳ ಮುಂದೆ ಕ್ಯೂ
ನಿಲ್ಲುತ್ತಿದ್ದಾರೆ. ನಾನು ಸತ್ಯ ಏನೆಂದು ತಿಳಿಯಲು ರಾಜ್ಯಪಾಲರನ್ನು ಭೇಟಿ ಮಾಡಿದ್ದೇನೆ. ಏನಿದ್ದರೂ, ೩೫ಎ ವಿಧಿಯ ರದ್ಧತಿ, ರಾಜ್ಯವನ್ನು ಎರಡು ಅಥವಾ ಮೂರಾಗಿ ವಿಭಜಿಸುವ ಯಾವುದೇ ಉಪಕ್ರಮ ಇಲ್ಲ ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದು ಒಮರ್ ಹೇಳಿದರು. ಅಮರನಾಥ
ಯಾತ್ತೆ ಮೊಟಕುಗೊಳಿಸಿದ ಕ್ರಮ ಹಿಂದೆಂದೂ ನಡೆಯದಂತಹ ಕ್ರಮವಾಗಿದೆ. ಜೊತೆಗೆ ರಾಜ್ಯಕ್ಕೆ ೧೦೦ ಕಂಪನಿಗಳಷ್ಟು ಹೆಚ್ಚುವರಿ ಸೇನೆಯನ್ನು ನಿಯೋಜಿಸಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ ಎಂದು ಅಬ್ದುಲ್ಲ ಹೇಳಿದರು. ‘ಏನಾಗುತ್ತಿದೆ
ಎಂದು ನಮಗೆ ಆರ್ಥವಾಗುತ್ತಿಲ್ಲ. ಆದ್ದರಿಂದ ನಾವು ನಿಯೋಗ ಒಂದನ್ನು ರಾಜ್ಯಪಾಲರ ಬಳಿಗೆ ಒಯ್ದಿದ್ದೆವು ಮತ್ತು ಹೀಗೇಕೆ ಆಗುತ್ತಿದೆ ಎಂದು ಪ್ರಶ್ನಿಸಿದ್ದೆವು. ಸಂವಿಧಾನದ ೩೫ಎ ಮತ್ತು ೩೭೦ನೇ ವಿಧಿಗಳ ರದ್ದು ಬಗೆಗಿನ ವದಂತಿಗಳ ಬಗೆಗೂ ನಾವು ಅವರನ್ನು ಕೇಳಿದೆವು. ಅದಕ್ಕೆ ಅವರು ಅಂತಹದ್ದೇನೂ ಆಗುತ್ತಿಲ್ಲ ಎಂದು ಭರವಸೆ ಕೊಟ್ಟರು ಎಂದು ಒಮರ್ ಅಬ್ದುಲ್ಲ ಭೇಟಿಯ ಬಳಿಕ ಶ್ರೀನಗರದಲ್ಲಿ ರಾಜಭವನದಿಂದ ಹೊರಬರುತ್ತಾ ಹೇಳಿದರು. ಭಯೋತ್ಪಾದನೆ ದಾಳಿ ಹಿನ್ನೆಲೆಯಲ್ಲಿ ಸರ್ಕಾರವು ಅಮರನಾಥ ಯಾತ್ರೆಯನ್ನು ಮೊಟಕುಗೊಳಿಸಿ, ಯಾತ್ರಾರ್ಥಿಗಳಿಗೆ ರಾಜ್ಯದಿಂದ ವಾಪಸಾಗುವಂತೆ ಸರ್ಕಾರ ಆದೇಶ ನೀಡಿದ ಒಂದು ದಿನದ ಬಳಿಕ ಅಬ್ದುಲ್ಲ ಅವರು ಈ ಹೇಳಿಕೆ ಬಿಡುಗಡೆ
ಮಾಡಿದ್ದಾರೆ. ಏನಿದದ್ದರೂ ಅಂತಿಮ ನಿರ್ಧಾರ ಕೇಂದ್ರದ್ದಾದ ಕಾರಣ ಹೆಚ್ಚುವರಿ ಪಡೆಗಳ ನಿಯೋಜನೆ ಏಕೆ ಎಂದು ಕೇಂದ್ರ ಸ್ಪಷ್ಟ ಪಡಿಸಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯ ಗೃಹ ಇಲಾಖೆಯು ’ಆದಷ್ಟೂ ಬೇಗನೆ ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ ವಾಪಸಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ’ ಸೂಚನೆ
ನೀಡಿದ್ದು, ಭಾರೀ ಸಂಖ್ಯೆಯಲ್ಲಿರುವ ಯಾತ್ರಾರ್ಥಿಗಳು, ಪ್ರವಾಸಿಗರು ಮತ್ತು ನಿವಾಸಿಗಳ ಎದೆ ಢವಗುಟ್ಟಿಸಿತು. ಈಮಧ್ಯೆ, ವಿಶ್ವ
ಹಿಂದೂ ಪರಿಷತ್ (ವಿಎಚ್ ಪಿ) ಕೂಡಾ ಮುಂಬರುವ ತನ್ನ ವಾರ್ಷಿಕ ಬುಧ ಅಮರನಾಥ ಯಾತ್ರೆಯನ್ನು ರದ್ದು ಪಡಿಸಿರುವುದಾಗಿ ಪ್ರಕಟಿಸಿತು. ಪ್ರವಾಸಿಗರು ಮತ್ತು ಯಾತ್ರಾರ್ಥಿಗಳ ಮೇಲೆ ಪಾಕ್ ಪ್ರಾಯೋಜಿತ ದಾಳಿ ಬೆದರಿಕೆಯನ್ನು ವಿಶ್ವ ಹಿಂದೂ ಪರಿಷತ್ ಉಲ್ಲೇಖಿಸಿತು. ೧೦ ದಿನಗಳ ಈ
ಯಾತ್ರೆಯನ್ನು ಜಮ್ಮು ಪ್ರದೇಶದ ಪೂಂಚ್ ಜಿಲ್ಲೆಯಿಂದ ವಿಎಚ್ಪಿ ಸಂಘಟಿಸಿತ್ತು. ಯಾತ್ರೆ
ಆಗಸ್ಟ್ ೬ರಂದು ಆರಂಭವಾಗಬೇಕಿತ್ತು. ಭದ್ರತಾ ಪರಿಸ್ಥಿತಿಮತ್ತು ಕಾಶ್ಮೀರದ ಅಮರನಾಥ ಯಾತ್ರಾ ಮಾರ್ಗದಲ್ಲಿ ಅಮೆರಿಕ ನಿರ್ಮಿತ ಸ್ನೈಪರ್ ರೈಫಲ್ ಮತ್ತು ಭೂಸ್ಫೋಟಕಗಳು ಪತ್ತೆಯಾಧ ಹಿನ್ನೆಲೆಯಲ್ಲಿ ನಾವು ಬುಧ ಅಮರನಾಥಕ್ಕೆ ನಿಗದಿಯಾಗಿರುವ ಯಾತ್ರೆಯನ್ನು ರದ್ದು ಪಡಿಸಲು ನಿರ್ಧರಿಸಿದೇವೆ ಎಂದು ವಿಎಚ್ಪಿ ರಾಜ್ಯ ಅಧ್ಯಕ್ಷರಾದ
ಲೀಲಾ ಕರಣ್ ಶರ್ಮ ತಿಳಿಸಿದರು. ಈದಿನ ೩೬೩
ಅಮರನಾಥ ಯಾತ್ರಾರ್ಥಿಗಳ ಕೊನೆಯ ತಂಡವನ್ನು ಬಲ್ಟಾಲ್ ಮಾರ್ಗದಿಂದ ಜಮ್ಮುವಿಗೆ ಸ್ಥಳಾಂತರಿಸಲಾಯಿತು. ಇದೇ ವೇಳೆಗೆ ಕಿಶ್ತವಾರದಲ್ಲಿ ಮಚೈಲ್ ಮಾತಾ ಯಾತ್ರೆಯನ್ನು ಅಮಾನತುಪಡಿಸಿದೆ ಸರ್ಕಾರ, ಭಕ್ತರನ್ನು ಉಧಾಂಪುರದಲ್ಲಿಯೇ ತಡೆಯಿತು. ಈ ಮಧ್ಯೆ, ಭಾರತೀಯ
ವಾಯುಪಡೆಯ ಲೊಕ್ಹೀಡ್ ಮಾರ್ಟಿನ್ ಸಿ-೧೩೦ ವಿಮಾನಗಳು
ಬೆಳಗ್ಗೆ
ಹೆಚ್ಚುವರಿ ಪಡೆಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕರೆತಂದವು. ೨೫,೦೦೦ ಮಂದಿ ಹೆಚ್ಚುವರಿ ಯೋಧರನ್ನು ಕಣಿವೆಗೆ ಕರೆಸಲಾಗಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿದವು. ಆದರೆ
ಕೇಂದ್ರೀಯ ಮೀಸಲು ಪೊಲೀಸ್ ಪಡೆ ಇಂತಹ ವರದಿಗಳನ್ನು ನಿರಾಕರಿಸಿತು. ಇನ್ನೊಂದು ಅನಿರೀಕ್ಷಿತ ಕ್ರಮವಾಗಿ ರಾಜ್ಯ ಪೊಲೀಸರು ಹಲವಾರು ಮಂದಿರ, ಮಸೀದಿ ಮತ್ತು ಕೆಲವು ನ್ಯಾಯಾಲಯಗಳಿಗೆ ಒದಗಿಸಲಾಗಿದ್ದ ಭದ್ರತೆಯನ್ನೂ ಹಿಂಪಡೆದಿದೆ ಎಂದು ವರದಿಗಳು ಹೇಳಿದವು. ಭಾರೀ ಪ್ರಮಾಣದಲ್ಲಿ ಸೈನಿಕರನ್ನು ನಿಯೋಜಿಸುತ್ತಿರುವ
ಕ್ರಮವು ಸರ್ಕಾರವು ವಿವಾದಾತ್ಮಕವಾದ ಸಂವಿಧಾನದ ೩೫ಎ ವಿಧಿಯ ರದ್ಧತಿಗೆ ಸಿದ್ಧತೆ ನಡೆಸಿದೆ ಎಂಬ ವದಂತಿಗಳನ್ನು ಹುಟ್ಟು ಹಾಕಿತು. ಕಳೆದ ವಾರ ೧೦೦ ಹೆಚ್ಚುವರಿ ಕಂಪನಿ ಪಡೆಗಳನ್ನು ನಿಯೋಜಿಸಿದ ಕ್ರಮವನ್ನು ಸಮರ್ಥಿಸಿಕೊಂಡಿರುವ ಗೃಹ ಸಚಿವಾಲಯವು ಭದ್ರತಾ ಪರಿಸ್ಥಿತಿಯನ್ನು ಆಧರಿಸಿ ಮತ್ತು ಯೋಧರ ರೊಟೇಷನ್ ಅಗತ್ಯಗಳನ್ನು ಗಮನಿಸಿ ಹೆಚ್ಚುವರಿ ಸೈನಿಕರನ್ನು ಕಳುಹಿಸಲಾಗಿದೆ ಎಂದು ಹೇಳಿದೆ.
2019: ಬೆಂಗಳೂರು: ನಟ ದರ್ಶನ್ ಅಭಿನಯದ
೫೦ನೇ ಸಿನಿಮಾ ’ಮುನಿರತ್ನ ಕುರುಕ್ಷೇತ್ರ’ ಆಗಸ್ಟ್
೯ರಂದು ಕನ್ನಡ ಮತ್ತು ತೆಲುಗಿನಲ್ಲಿ ಮಾತ್ರ ಬಿಡುಗಡೆಯಾಗಲಿದೆ. ಆಗಸ್ಟ್ ೧೫ರಂದು ತಮಿಳು ಮತ್ತು ಮಲಯಾಳಂ ಅವತರಣಿಕೆ ತೆರೆ ಕಾಣಲಿದೆ. ಪ್ರಸ್ತುತ
ಮುಂಬೈಯಲ್ಲಿ ಮಳೆ ಆರ್ಭಟಿಸುತ್ತಿದೆ. ಹಾಗಾಗಿ, ಮೂರು ವಾರಗಳ ಬಳಿಕ ಹಿಂದಿ ಅವತರಣಿಕೆಯ ಬಿಡುಗಡೆಗೆ ನಿರ್ಧರಿಸಲಾಗಿದೆ. ಕನ್ನಡ ಸೇರಿದಂತೆ ಐದು ಭಾಷೆಯ ಒಟ್ಟು ೩ ಸಾವಿರ ಚಿತ್ರಮಂದಿರದಲ್ಲಿ
ಈ ಚಿತ್ರ ತೆರೆ ಕಾಣಲಿದೆ.
2019: ಮಂಡ್ಯ: ಒಳ್ಳೆಯದೋ ಕೆಟ್ಟದ್ದೋ ಒಂದೂವರೆ ವರ್ಷ ಮೈತ್ರಿ ಸರ್ಕಾರದಲ್ಲಿ ಅಧಿಕಾರ
. ಮುಂದೆಯೂ ಮೈತ್ರಿ ಮಾಡಿಕೊಂಡರೂ ನಮ್ಮ ಅಸಮಾಧಾನವಿಲ್ಲ. ಯಾವುದೇ ವಿರೋಧವಿಲ್ಲ. ನಾವು ಮಧ್ಯ ಪ್ರವೇಶ ಮಾಡಿ ಬೇಡ ಎಂದು ಹೇಳುವುದು ಸೂಕ್ತವಲ್ಲ. ಮೈತ್ರಿ ಮಾಡಿಕೊಳ್ಳುವುದು ದೊಡ್ಡವರಿಗೆ ಬಿಟ್ಟ ವಿಚಾರ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಇಲ್ಲಿ
ಹೇಳಿದರು. ಮಂಡ್ಯದಲ್ಲಿ
ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆ.ಆರ್.ಪೇಟೆ
ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ
ತಾವು ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕಗೊಂಡಿದ್ದು, ಒಂದು ವಾರದಲ್ಲಿ ಕೆ.ಆರ್.ಪೇಟೆಗೆ
ಭೇಟಿ ನೀಡಿ ಸ್ಥಳೀಯ ಮುಖಂಡರ ಅಭಿಪ್ರಾಯ ಸಂUಹ ಮಾಡಲಾಗುವುದು
ಎಂದು ತಿಳಿಸಿದರು.
ಅನುಭವಿಸಿದ್ದೇವೆ
2019: ನವದೆಹಲಿ: ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದ ಹೆಗ್ಗಳಿಕೆಗೆ
ಸಂಸತ್‌ನ ಮುಂಗಾರು ಅಧಿವೇಶನ ಸಾಕ್ಷಿಯಾಯಿತು.
ಜೂ.17 ರಂದು ಶುರುವಾದ ಸಂಸತ್ ಅಧಿವೇಶನದಲ್ಲಿ ಒಟ್ಟು 30 ಮಸೂದೆಗಳು ಅನುಮೋದನೆ
ಪಡೆದವು. ಲೋಕಸಭೆಯಲ್ಲಿ 30 ಮಸೂದೆಗಳು ಅನುಮೋದನೆ ಪಡೆದಿದ್ದರೆ, ರಾಜ್ಯಸಭೆಯಲ್ಲಿ 25 ಮಸೂದೆಗಳಿಗೆ ಒಪ್ಪಿಗೆ ಸಿಕ್ಕಿತು. ಆಡಳಿತ ಪಕ್ಷಕ್ಕೆ ಮೇಲ್ಮನೆಯಲ್ಲಿ ಸರಿಯಾದ ಬಹುಮತ ಇಲ್ಲದಿದ್ದರೂ, ವಿಪಕ್ಷಗಳನ್ನು ಮನವೊಲಿಕೆ ಮಾಡಿ ಮಸೂದೆಗಳಿಗೆ ಒಪ್ಪಿಗೆ ಪಡೆದ ಕೀರ್ತಿಯೂ ಆಡಳಿತ ಪಕ್ಷಕ್ಕೆ ಸಂದಿತು.
ವಿಶೇಷವೆಂದರೆ, 1952ರಲ್ಲಿ ಮಾತ್ರ ಅಧಿವೇಶನವೊಂದರಲ್ಲಿ ಈ ಪ್ರಮಾಣದ ಮಸೂದೆಗಳು ಅನುಮೋದನೆ ಪಡೆದಿದ್ದವು. ಜವಾಹರ್ ಲಾಲ್ ನೆಹರು ಅವರು ಆಗ ಪ್ರಧಾನಿಯಾಗಿದ್ದು, ಒಟ್ಟು 27 ಮಸೂದೆಗಳಿಗೆ ಅಂಗೀಕಾರ ಸಿಕ್ಕಿತ್ತು. ಇದನ್ನು ಬಿಟ್ಟರೆ, ಈಗಲೇ ಈ ಪ್ರಮಾಣದ ಮಸೂದೆಗಳು ಪಾಸ್ ಆದವು. ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರು, ಆಗಸ್ಟ್ 7ರ ಒಳಗೆ ಉಳಿದ ಮಸೂದೆಗಳಿಗೂ ಅನುಮೋದನೆ ಪಡೆಯಲು ಯತ್ನಿಸುತ್ತೇವೆ. ಸಂಸತ್‌ನ ಇತಿಹಾಸದಲ್ಲಿ ಹೊಸ ಅಧ್ಯಾಯ ಶುರು ಮಾಡುತ್ತೇವೆ ಎಂದು ಹೇಳಿದ್ದರು. ಪ್ರತಿಪಕ್ಷಗಳ ಆಕ್ಷೇಪ: ತರಾತುರಿಯಲ್ಲಿ ಮಸೂದೆಗಳು ಅನುಮೋದನೆ
ಪಡೆಯುತ್ತಿರುವ ಬಗ್ಗೆ ಪ್ರತಿಪಕ್ಷಗಳ ನಾಯಕರು ತೀವ್ರ ಆಕ್ಷೇಪವೆತ್ತಿದರು. ಇದುವರೆಗೆ ಈ ಅಧಿವೇಶನದಲ್ಲಿ ಯಾವುದೇ ಮಸೂದೆಗಳು ಆಯ್ಕೆ ಸಮಿತಿಗೆ ಹೋಗಿಲ್ಲ ಎಂಬುದು ಈ ನಾಯಕರ ಆಕ್ಷೇಪ. ಈ ಬಗ್ಗೆ ರಾಜ್ಯಸಭೆಯಲ್ಲಿನ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮತ್ತು ಟಿಎಂಸಿ ನಾಯಕ ಡೆರಿಕ್ ಒ ಬ್ರಿಯಾನ್ ತಮ್ಮ ಆಕ್ರೋಶವನ್ನೂ ಹೊರಹಾಕಿದ್ದರು. ಕ್ರಿಯಾಶೀಲ ಸಭಾಧ್ಯಕ್ಷರು:
ಈ ಪ್ರಮಾಣದ ಮಸೂದೆಗಳು ಅನುಮೋದನೆ
ಪಡೆಯುವುದರಲ್ಲಿ ಸ್ಪೀಕರ್ ಓಂ ಬಿರ್ಲಾ ಅವರ ಪಾತ್ರವೂ ಹೆಚ್ಚಿದೆ ಎಂದು ಕೇಂದ್ರದ ಸಚಿವರೊಬ್ಬರು ಹೇಳಿದರುಉ. ಬೆಳಗ್ಗೆ 9.30ಕ್ಕೇ ಸಂಸತ್ಗೆ ಆಗಮಿಸುವ ಸ್ಪೀಕರ್ ಅವರು, ಅಂದು ಮಂಡನೆಯಾಗಬೇಕಾಗಿರುವ ಮಸೂದೆಗಳ ಮಾಹಿತಿ ಪಡೆಯುತ್ತಾರೆ. ಬಳಿಕ ಅತ್ಯಂತ ಸುಲಲಿತವಾಗಿ ಸದನವನ್ನು ನಡೆಸಿಕೊಂಡು ಹೋಗುತ್ತಾರೆ ಎಂದು ಹೇಳಿದರು.
ಬಿಜೆಪಿ ನೇತೃತ್ವದ ಎನ್ಡಿಎಗೆ ಲೋಕಸಭೆಯಲ್ಲಿ 352 ಸದಸ್ಯರ ಬಲವುಂಟು. ಹೀಗಾಗಿ ಇಲ್ಲಿ ಯಾವುದೇ ಮಸೂದೆ ಒಪ್ಪಿಗೆ
ಪಡೆಯಲು ಪ್ರತಿಪಕ್ಷಗಳ ನೆರವು ಬೇಕಾಗಿಲ್ಲ. ಹೀಗಾಗಿಯೇ ಇಲ್ಲಿ 30 ಮಸೂದೆಗಳು ಅನುಮೋದನೆ ಪಡೆದುಕೊಂಡವು. ಆದರೆ, ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲ. ಇಲ್ಲಿ ಪ್ರತಿಪಕ್ಷಗಳಿಗೇ ಹೆಚ್ಚಿನ ಸ್ಥಾನವುಂಟು. ಇಂಥ ಪರಿಸ್ಥಿತಿಯಲ್ಲೂ ಪ್ರತಿಪಕ್ಷ ನಾಯಕರ ಜತೆಗೆ ಮಾತುಕತೆ ನಡೆಸಿ 25 ಮಸೂದೆಗಳಿಗೆ ಒಪ್ಪಿಗೆ ಪಡೆಯಲಾಯಿತು.
ಇಂದಿನ ಇತಿಹಾಸ HistoryToday ಆಗಸ್ಟ್ 03 (2018+ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ.
No comments:
Post a Comment