ನಾನು ಮೆಚ್ಚಿದ ವಾಟ್ಸಪ್

Tuesday, August 6, 2019

ಇಂದಿನ ಇತಿಹಾಸ History Today ಆಗಸ್ಟ್ 06

2019: ನವದೆಹಲಿ: ಮಾಜಿ ವಿದೇಶಾಂಗ ಸಚಿವೆ, ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ (67) ಅವರು  ಹೃದಯಾಘಾತದಿಂದ ಏಮ್ಸ್ ಆಸ್ಪತೆಯಲ್ಲಿ ಈದಿನ ರಾತ್ರಿ ವಿಧಿವಶರಾದರು.ಅವರು ಕೆಲವು ತಿಂಗಳುಗಳಿಂದ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ರಾತ್ರಿ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದ್ದು, ತತ್ ಕ್ಷಣ  ಅವರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2014 ಲೋಕಸಭಾ ಚುನಾವಣೆಯ ಬಳಿಕ ರಚನೆಯಾದ ಬಿಜೆಪಿ ನೇತೃತ್ವದ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ ಡಿಎ) ಸರ್ಕಾರದಲ್ಲಿ ಸುಷ್ಮಾ ಸ್ವರಾಜ್  ಅವರು ವಿದೇಶಾಂಗ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. 2018  ಚುನಾವಣೆಗೆ ನಿಲ್ಲಲು ಅವರು ಮನಸ್ಸು ಮಾಡಿರಲಿಲ್ಲ. ಆದರೂ ಎನ್ ಡಿಎ ಎರಡನೇ ಸರ್ಕಾರದಲ್ಲಿ ಮಂತ್ರಿಸ್ಥಾನ ಅಲಂಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸಹಿತ ಹಿರಿಯ ನಾಯಕರು ಮನವೊಲಿಸಲು ಯತ್ನಿಸಿದರೂ, ತಮ್ಮ ಅನಾರೋಗ್ಯದ ಕಾರಣವನ್ನು ನೀಡಿ ದೂರ ಉಳಿದಿದ್ದರು. ನಿಧನ ಹೊಂದುವ 3 ಗಂಟೆಗಳಿಗೆ ಮೊದಲು ಅಂತಿಮ ಟ್ವೀಟುಗಳನ್ನು  ಮಾಡಿದ್ದ ಸುಷ್ಮಾ ಅವರು, ‘ನಾನು ನನ್ನ ಜೀವನದಲ್ಲಿ ದಿನಕ್ಕಾಗಿ ಕಾಯುತ್ತಿದ್ದೆಎಂದು ತಿಳಿಸಿ, ( ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದು ಕ್ರಮಕ್ಕಾಗಿ). ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯಸಭೆಯ ಸದಸ್ಯರಿಗೆ ಅಭಿನಂದನೆಹಾಗೂ ಧನ್ಯವಾದಗಳನ್ನು ಸಲ್ಲಿಸಿದ್ದರು. 1952 ಫೆಬ್ರುವರಿ 14ರಂದು ಜನಿಸಿದ್ದ ಸುಷ್ಮಾ ಸ್ವರಾಜ್ ಅವರು ವೃತ್ತಿಯಿಂದ ಸುಪ್ರೀಂಕೋರ್ಟ್  ವಕೀಲರಾಗಿದ್ದರು. ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾಗಿದ್ದ ಅವರು ನರೇಂದ್ರ ಮೋದಿ ನೇತೃತ್ವದ ಮೊದಲ ಕೇಂದ್ರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದರು. ದಿವಂಗತ ಇಂದಿರಾ ಗಾಂಧಿ ಅವರ ಬಳಿಕ ಹುದ್ದೆಯಗೇರಿದ ಎರಡನೇ ಮಹಿಳೆ  ಅವರಾಗಿದ್ದರು. 7 ಬಾರಿ ಲೋಕಸಭಾ ಸದಸ್ಯ ಹಾಗೂ 3 ಬಾರಿ ವಿಧಾನಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದ ಸುಷ್ಮಾ ಸ್ವರಾಜ್, 1977ರಲ್ಲಿ ತಮ್ಮ 25ನೇ ವಯಸ್ಸಿನಲ್ಲಿ ಹರಿಯಾಣ ಸಚಿವ ಸಂಪುಟದಲ್ಲಿ ಅತ್ಯಂತ ಕಿರಿಯ ಸಂಪುಟ ಸಚಿವೆಯಾಗಿದ್ದರು. 1998ರಲ್ಲಿ ಅಲ್ಪಾವಧಿಗೆ ದೆಹಲಿಯ ಮುಖ್ಯಮಂತ್ರಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು. 2014 ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ ವಿದಿಶಾ ಕ್ಷೇತ್ರದಿಂದ ಎರಡನೇ ಅವಧಿಗೆ ಗೆದ್ದಿದ್ದ ಅವರು 4 ಲಕ್ಷ ಮತಗಳ ಅಂತರದಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಿದ್ದರು. ಅಮೆರಿಕದವಾಲ್ ಸ್ಟ್ರೀಟ್ ಜರ್ನಲ್ದೈನಿಕವು ಸುಷ್ಮಾ ಅವರನ್ನುಅತ್ಯಂತ ಹೆಚ್ಚು ಪ್ರೀತಿಸಲ್ಪಟ್ಟ ರಾಜಕಾರಣಿಎಂಬುದಾಗಿ ಬಣ್ಣಿಸಿತ್ತು. ಕೇಂದ್ರದಲ್ಲಿ ವಾರ್ತೆ ಮತ್ತು ಪ್ರಸಾರ ಮತ್ತು ದೂರಸಂಪರ್ಕ ಸಚಿವೆ, ಆರೋಗ್ಯ ಸಚಿವೆ, 15ನೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿ ಕೂಡಾ ಅವರು ಸೇವೆ ಸಲ್ಲಿಸಿದ್ದರು. ವಿದೇಶಾಂಗ ಸಚಿವೆಯಾಗಿ ತಮ್ಮ ಸೇವಾಮನೋಭಾವದಿಂದ ದೇಶವಿದೇಶಗಳಲ್ಲಿ ಅತ್ಯಂತ ದಕ್ಷ ಹಾಗೂ ಮಾನವೀಯ ನಾಯಕಿ ಎಂಬ ಹೆಗ್ಗಳಿಕಗೆ ಸುಷ್ಮಾ ಪಾತ್ರರಾಗಿದ್ದರು.

2019
: ನವದೆಹಲಿ: ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ
ಸಂವಿಧಾನದ ೩೭೦ನೇ ವಿಧಿ ರದ್ದು ಹಾಗೂ ಲಡಾಕ್ನ್ನು ಪ್ರತ್ಯೇಕಿಸುವ ಮೂಲಕ ರಾಜ್ಯವನ್ನು ಎರಡಾಗಿ ವಿಭಜಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲು ಲೋಕಸಭೆ ಒಪ್ಪಿಗೆ ನೀಡುವುದರೊಂದಿಗೆ ಕೇಂದ್ರ ಸರ್ಕಾರದ ಚಾರಿತ್ರಿಕ ನಿರ್ಧಾರಕ್ಕೆ ಈದಿನ ಸಂಸತ್ತಿನ ಮೊಹರು ಬಿದ್ದು, ಉಭಯ ತೀರ್ಮಾನಗಳೂ ಕಾನೂನಾಗಿ ಜಾರಿಗೆ ಬಂದವು. ಇದಕ್ಕೆ ಮುನ್ನ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಅಮಿತ್ ಶಾ ಅವರು ಪಾಕ್ ಆಕ್ರಮಿತ ಕಾಶ್ಮೀರವೂ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಗುಡುಗಿದರು.ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಧ್ವಜ ಹಾಗೂ ರಕ್ಷಣೆ, ಸಂಪರ್ಕ ಹಾಗೂ ವಿದೇಶಾಂಗ ವ್ಯವಹಾರಗಳನ್ನು ಹೊರತುಪಡಿಸಿ ಎಲ್ಲ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸುವ ಸಂಬಂಧ ಮಂಡಿಸಲಾಗಿದ್ದ ನಿರ್ಣಯವನ್ನು ಸದನ ಧ್ವನಿ ಮತದಿಂದ ಅಂಗೀಕರಿಸಿತು.ಲಡಾಖ್ನ್ನು ಪ್ರತ್ಯೇಕಿಸಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡಾಗಿ ವಿಭಜಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಜಮ್ಮು ಮತ್ತು ಕಾಶ್ಮೀರ ವಿಭಜನಾ ಮಸೂದೆ, ೨೦೧೯ ಅನ್ನು ಲೋಕಸಭೆಯು ೩೫೧ ಪರ ಹಾಗೂ ೭೨ ವಿರುದ್ಧ ಮತಗಳನ್ನು ಚಲಾಯಿಸುವ ಮೂಲಕ ಅಂಗೀಕರಿಸಿತು. ರಾಷ್ಟ್ರಪತಿ ಅಧಿಸೂಚನೆ ಹೊರಡಿಸುವ ಮೂಲಕ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸೋಮವಾರವೇ ಕೇಂದ್ರದ ಕ್ರಮಕ್ಕೆ ಸಮ್ಮತಿ ನೀಡಿದ್ದಾರೆ. ಈಗ ಜಮ್ಮು ಮತ್ತು ಕಾಶ್ಮೀರವು ವಿಧಾನಸಭೆಯನ್ನು ಒಳಗೊಂಡ ಕೇಂದ್ರಾಡಳಿತ ಪ್ರದೇಶವಾಗಿದ್ದರೆ, ಲಡಾಖ್ ವಿಧಾನಸಭೆ ರಹಿತವಾದ ಕೇಂದ್ರಾಡಳಿತ ಪ್ರದೇಶವಾಗಲಿದೆ. ರಾಜ್ಯಕ್ಕೆ ಇದ್ದ ವಿಶೇಷ ಸ್ಥಾನಮಾನ ರದ್ದಾಗಿದ್ದು, ಇಡೀ ದೇಶಕ್ಕೆ ಅನ್ವಯವಾಗುವ ಎಲ್ಲ ಕಾನೂನುಗಳು ಇಲ್ಲಿಗೂ ಅನ್ವಯವಾಗುತ್ತವೆ. ಸದನವು ಕೇಂದ್ರದ ಕ್ರಮಕ್ಕೆ ತನ್ನ ಒಪ್ಪಿಗೆ ನೀಡುವ ಮುನ್ನ ಕಳೆದ ಎರಡು ದಿನಗಳಿಂದ ನಡೆದ ಚರ್ಚೆಗೆ ಉತ್ತರ ನೀಡಿದ ಗೃಹ ಸಚಿವ ಅಮಿತ್ ಶಾ ಅವರುಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವ ಕ್ರಮ ತಾತ್ಕಾಲಿಕವಾಗಿದ್ದು, ಪರಿಸ್ಥಿತಿ ಸುಧಾರಿಸಿದ ಬಳಿಕ ಮತ್ತೆ ರಾಜ್ಯ ಸ್ಥಾನಮಾನ ಲಭಿಸಲಿದೆಎಂದು ಭರವಸೆ ನೀಡಿದರು. ಸಂವಿಧಾನದ ೩೭೦ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಪ್ರಮುಖ ಅಡ್ಡಿಯಾಗಿತ್ತು, ಭಯೋತ್ಪಾದನೆ ಸೇರಿದಂತೆ ರಾಜ್ಯದ ಹಲವಾರು ಸಮಸ್ಯೆಗಳಿಗೆ ವಿಧಿಯೇ ಕಾರಣವಾಗಿತ್ತು ಎಂದು ನುಡಿದ ಅಮಿತ್ ಶಾ, ’ರಾಷ್ಟ್ರದ ಪರಿಸರ ರಕ್ಷಣೆಗಾಗಿ ಇರುವ ಕಾನೂನುಗಳೇ ಜಮ್ಮು ಮತ್ತು ಕಾಶ್ಮೀರಕ್ಕೂ ಅನ್ವಯವಾಗಲಿದೆ ಎಂದು ಸುಪ್ರಿಯಾ ಸುಳೆ ಅವರ ಪ್ರಶ್ನೆಗೆ ಉತ್ತರಿಸಿದರು.’ಜಮ್ಮು ಮತ್ತು ಕಾಶ್ಮೀರ ಭೂಮಿಯ ಮೇಲಿನ ಸ್ವರ್ಗವಾಗಿದೆ, ಅದು ಭೂಮಿಯ ಮೇಲಿನ ಸ್ವರ್ಗ ಮತ್ತು ಹಾಗೆಯೇ ಉಳಿಯಲಿದೆಎಂದು ಶಾ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಪರಿಸರ ಮತ್ತು ಸೌಂದರ್ಯಕ್ಕೆ ಏನಾಗಲಿದೆ ಎಂದು ಸುಪ್ರೀಯಾ ಪ್ರಶ್ನಿಸಿದ್ದರು.’ಜಮ್ಮು ಮತ್ತು ಕಾಶ್ಮೀರದ ಪಂಚಾಯತಿ ರಾಜ್ ಮೂರು ಕುಟುಂಬಗಳ ಹಿಡಿತದಲ್ಲಿ ಇತ್ತು, ರಾಜೀವ ಗಾಂಧಿ ಅವರು ತಂದ ಕಾನೂನು ರಾಜ್ಯದಲ್ಲಿ ವಿಧಿಸಲಾಗಿರುವ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂತೆಗೆದುಕೊಂಡ ಬಳಿಕ ಪುನಃ ಜಾರಿಗೆ ಬರಲಿದೆಎಂದು ಅಮಿತ್ ಶಾ ಹೇಳಿದರು.ಶಾ ಮಾತಿಗೆ ಅಡ್ಡಿ ಪಡಿಸಿದ ವಿರೋಧ ಪಕ್ಷಗಳು ಮೂರು ಕುಟುಂಬಗಳು ಯಾವುವು ಎಂದು ಪ್ರಶ್ನಿಸಿದವು. ’ಪೀಠವು ಅಡ್ಡಿ ಪಡಿಸದೇ ಇದ್ದರೆ ಹೇಳುವೆಎಂದು ಉತ್ತರಿಸಿದ ಶಾಆಡಳಿತ ಪಕ್ಷದ ಸದಸ್ಯರ ಕಡೆಗೆ ತಿರುಗಿ ಮೂರು ಕುಟುಂಬಗಳು ಯಾವುವು ಎಂಬುದು ನಿಮಗೆ ಗೊತ್ತೇ?’ ಎಂದು ಪ್ರಶ್ನಿಸಿದರು.  ಇಡೀ ದೇಶಕ್ಕೆ ಗೊತ್ತುಎಂದು ಆಡಳಿತ ಪಕ್ಷದ ಕಡೆಯಿಂದ ಉತ್ರರ ಬಂತು. ಹೆಸರುಗಳನ್ನು  ಹೇಳದೆಯೇ ಶಾ ತಮ್ಮ ಮಾತು ಮುಂದುವರೆಸಿದರು.’ಸಂವಿಧಾನದ ೩೭೦ನೇ ವಿಧಿಯು ರಾಜ್ಯಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ. ಬದಲಿಗೆ ಭಯೋತ್ಪಾದಕ ಚಟುವಟಿಕೆ ಮತ್ತು ರಾಜ್ಯದ ಜನರ ಬಡತನವನ್ನು ಹೆಚ್ಚಿಸಿತು.  ೩೭೦ನೇ ವಿಧ ರದ್ದಿನ ಬಳಿಕ ರಾಜ್ಯದಲ್ಲಿ ಅಭಿವೃದ್ಧಿಯಾಗಲಿದೆ, ಉದ್ಯೋಗ ಲಭಿಸಲಿದೆ ಎಂದು ಗೃಹ ಸಚಿವರು ಹೇಳಿದರು.’೭೦ ವರ್ಷಗಳ ಕಾಲ ನೀವು ಆಗ್ರಹಿಸುತ್ತಿರುವ ದಾರಿಯನ್ನು ಅನುಸರಿಸಲಾಗಿದೆ. ಇದರ ಪರಿಣಾಮವಾಗಿ ೪೧,೦೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಇದೇ ದಾರಿಯಲ್ಲಿ ಸಾಗಬೇಕೇ? ಎಂದು ಶಾ ಪ್ರಶ್ನಿಸಿದರು.ವಂಶಾಡಳಿತಗಳು ತಮ್ಮ ಲಾಭಕ್ಕಾಗಿ ೩೭೦ನೇ ವಿಧಿಯನ್ನು ಬಳಸಿಕೊಂಡವು ಎಂದು ಶಾ ಆಪಾದಿಸಿದರು. ೩೭೦ನೇ ವಿಧಿಯ ರದ್ಧತಿಯನ್ನು ಕೋಮು ಕಾರ್ಯಸೂಚಿ ಎಂದು ಹೇಳಲಾಗುತ್ತಿದೆ. ಹಿಂದುಗಳು ಬಿಡಿ, ಕ್ರೈಸ್ತರು, ಬೌದ್ಧರು, ಸಿಕ್ಖರು ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುತ್ತಿಲ್ಲವೇ? ೩೭೦ನೇ ವಿಧಿಯ ಕಾರಣದಿಂದ ಅಲ್ಲಿ ಅಲ್ಪಸಂಖ್ಯಾತ ಆಯೋಗವನ್ನು ರಚಿಸದೇ ಇದ್ದುದು ಅಲ್ಪಸಂಖ್ಯಾತರಿಗೆ ಮಾಡಲಾದ ಅನ್ಯಾಯ ಎಂದು ಅಮಿತ್ ಶಾ ಹೇಳಿದರು.೬ರಿಂದ ೧೪ ವರ್ಷಗಳ ನಡುವಣ ಎಲ್ಲ ಮಕ್ಕಳಿಗೂ ಓದುವ ಹಕ್ಕಿದೆ. ಆದರೆ ಜಮ್ಮು ಮತ್ತು ಕಾಶ್ಮೀರದ ಮಕ್ಕಳಿಗೆ ಹಕ್ಕು ಇಲ್ಲ. ೩೭೦ನೇ ವಿಧಿ ಏನು ಮಾಡಿದೆ? ನೀವು ಎಂದಾದರೂ ಇದನ್ನು ಆಳವಾಗಿ ಅಧ್ಯಯನ ಮಾಡಿದ್ದೀರಾ? ಎಂದು ಪ್ರಶ್ನಿಸಿದ ಗೃಹ ಸಚಿವರು೩೭೦ನೇ ವಿಧಿಯು ನಿಮ್ಮ (ಜಮ್ಮು ಮತ್ತು ಕಾಶ್ಮೀರ) ಎಲ್ಲ ಹಕ್ಕುಗಳನ್ನೂ ಕಸಿದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಲೂ ಬಾಲ್ಯ ವಿವಾಹ ನಡೆಯುತ್ತಿದೆಎಂದು ನುಡಿದರು.’ನಾವು ಚಾರಿತ್ರಿಕ ತಪ್ಪು ಮಾಡುತ್ತಿಲ್ಲ, ಚಾರಿತ್ರಿಕ ತಪ್ಪನ್ನು ಸರಿಪಡಿಸುತ್ತಿದ್ದೇವೆಎಂದು ಅವರು ಹೇಳಿದರು.ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ತರಲು ಬದ್ಧವಾಗಿದೆ. ಏಕೆಂದರೆ ಜಮ್ಮು ಮತ್ತು ಕಾಶ್ಮೀರದ ಜನರು ನಮ್ಮ ಹೃದಯದಲ್ಲಿದ್ದಾರೆಎಂದು ಶಾ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಮಧ್ಯೆ ಕಾಂಗ್ರೆಸ್ ಪಕ್ಷದ ನಾಯಕ ಜ್ಯೋತಿರಾದಿತ್ಯ ಎಂಸಿಂಧಿಯಾ ಅವರು ಟ್ವೀಟ್ ಮಾಡಿ, ತಾವು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮವನ್ನು ಬೆಂಬಲಿಸುವುದಾಗಿಯೂ, ಅವುಗಳನ್ನು ಪೂರ್ತಿಯಾಗಿ ಭಾರತ ಒಕ್ಕೂಟಕ್ಕೆ ಸೇರ್ಪಡೆ ಮಾಡುವ ಕ್ರಮವನ್ನು ಬೆಂಬಲಿಸುವುದಾಗಿ ತಿಳಿಸಿದರು.ಇದಕ್ಕೆ ಮುನ್ನ  ಚರ್ಚೆ ವೇಳೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಕಾಶ್ಮೀರ ವಿಷಯ ಆಂತರಿಕವೇ ಅಥವಾ ದ್ವಿಪಕ್ಷೀಯವೇ ಎಂಬುದಾಗಿ ಪ್ರಶ್ನಿಸಿ ಸದನದ ಬಹಳಷ್ಟು ಸದಸ್ಯರು ತಲೆ ಕೆರೆದುಕೊಳ್ಳುವಂತೆ ಮಾಡಿದ್ದರು. ಸಂದರ್ಭದಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ ಅವರುಪಾಕ್ ಆಕ್ರಮಿತ ಕಾಶ್ಮೀರವೂ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗಎಂದು ಗುಡುಗಿದರು.


2019: ನವದೆಹಲಿ:ಕಾಶ್ಮೀರ ವಿಷಯ ಆಂತರಿಕವೇ ಅಥವಾ ದ್ವಿಪಕ್ಷೀಯವೇ?’ ಎಂಬ ಪ್ರಶ್ನೆ ಕೇಳುವ ಮೂಲಕ ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು ಲೋಕಸಭೆಯಲ್ಲಿ ಬಹಳಷ್ಟು ಸದಸ್ಯರು ತಲೆ ಕೆರೆದುಕೊಳ್ಳುವಂತೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಶಾ ಅವರುಪಾಕ್ ಆಕ್ರಮಿತ ಕಾಶ್ಮೀರವೂ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗಎಂದು ಗುಡುಗಿದರು.ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿ ರದ್ದು ಸಂಬಂಧ ಸರ್ಕಾರ ಸೋಮವಾರ ಮಂಡಿಸಿದ ನಿರ್ಣಯ ಮತ್ತು ಜಮ್ಮು-ಕಾಶ್ಮೀರ ಮರುವಿಂಗಡಣಾ ಮಸೂದೆ ೨೦೧೯ರ ಮೇಲೆ ಮಂಗಳವಾರ ಸದನದಲ್ಲಿ ಮುಂದುವರೆದ ಚರ್ಚೆ ವೇಳೆಯಲ್ಲಿ ಘಟನೆ ಘಟಿಸಿತು. ರಾಜ್ಯಸಭೆ ಇವುಗಳಿಗೆ ಹಿಂದಿನ ದಿನ ತನ್ನ ಅನುಮೋದನೆ ನೀಡಿತ್ತು. ಕಾಂಗ್ರೆಸ್ ಪಕ್ಷದ ಸದನದ ನಾಯಕ ಅಧೀರ್ ರಂಜನ್ ಚೌಧರಿ ಅವರು ಕಾಶ್ಮೀರವು ಆಂತರಿಕ ವಿಷಯವೇ ಎಂಬುದಾಗಿ ಚರ್ಚೆಯ ಮಧ್ಯೆ ಸರ್ಕಾರವನ್ನು ಪ್ರಶ್ನಿಸಿದರು. ಭಾರತವು ನಿರಂತರವಾಗಿ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದಾಗಿ ಪ್ರತಿಪಾದಿಸುತ್ತಾ ಬಂದಿದೆ. ‘ನನಗೆ ಗೊಂದಲವಾಗಿದೆ, ಇದು ಆಂತರಿಕ ವಿಚಾರ ಎಂದು ನೀವು ಹೇಳುತ್ತೀರಿ, ನೀವು ರಾಜ್ಯವನ್ನು ವಿಭಜಿಸಿದೀರಿ. ಆದರೆ ೧೯೪೮ರಿಂದಲೇ ವಿಶ್ವಸಂಸ್ಥೆಯು ವಿಷಯದ ಮೇಲೆ ನಿಗಾ ಇಟ್ಟಿರುವುದರಿಂದ ಇದು ಆಂತರಿಕ ವಿಷಯ ಹೇಗಾಗುತ್ತದೆ? ಶಿಮ್ಲಾ ಒಪ್ಪಂದ, ಲಾಹೋರ್ ಘೋಷಣೆ ಇವೆಲ್ಲಾ ಆಂತರಿಕ ವಿಷಯಗಳೇ ಅಥವಾ ದ್ವಿಪಕ್ಷೀಯವೇ? ಕೆಲವು ದಿನಗಳ ಹಿಂದೆ (ವಿದೇಶಾಂಗ ವ್ಯವಹಾರಗಳ ಸಚಿವ) ಜೈಶಂಕರ್ ಜಿ ಅವರು (ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್) ಪಾಂಪೆಯೋ ಜಿ ಅವರಿಗೆ ಇದು ದ್ವಿಪಕ್ಷೀಯ ವಿಚಾರ, ದಯವಿಟ್ಟು ಹಸ್ತಕ್ಷೇಪ ನಡೆಸಬೇಡಿ ಎಂಬುದಾಗಿ ಹೇಳಿದ್ದರುಎಂದು ಚೌಧರಿ ಹೇಳಿದರು.ಆಡಳಿತ ಪಕ್ಷದ ಕಡೆಯಿಂದ ಇದಕ್ಕೆ ತೀವ್ರ ಪ್ರತಿಭಟನೆ ಎದುರಾಯಿತು.’ಆದ್ದರಿಂದ ಬಳಿಕ ಕೂಡಾ, ಜಮ್ಮು ಮತ್ತು ಕಾಶ್ಮೀರವು ಆಂತರಿಕ ವಿಷಯವಾಗುತ್ತದೆಯೇ?’ ಎಂದು ಚೌಧರಿ ಕೇಳಿದರು. ಚೌಧರಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗಎಂದು ಘೋಷಿಸಿದರು. ವಿಷಯದಲ್ಲಿ ಕಾಂಗ್ರೆಸ್ಸಿನ ನಿಲುವು ಏನು ಎಂದು ಶಾ ಪ್ರಶ್ನಿಸುವ ಮೂಲಕ ಶಾ ಕಾಂಗ್ರೆಸ್ಸಿಗೆ ಚಾಟಿ ಬೀಸಿದರು.ಸಚಿವರಿಗೆ ಉತ್ತರ ನೀಡಿದ ಚೌಧರಿನೀವು ರಾತ್ರೋರಾತ್ರಿ ಸಂವಿಧಾನದಲ್ಲಿ ವಿವರಿಸಲಾಗಿರುವ ನಿಯಮಗಳಿಗೆ ವಿರುದ್ಧವಾಗಿ ಹೋಗಿದ್ದೀರಿ. ನೀವು ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ಬಗ್ಗೆ ಯೋಚಿಸುತ್ತಿಲ್ಲ, ನೀವು ಎಲ್ಲ ನಿಯಮಗಳನ್ನೂ ಉಲ್ಲಂಘಿಸಿದ್ದೀರಿ ಮತ್ತು ರಾತ್ರೋರಾತ್ರಿ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದೀರಿಎಂದು ಹೇಳಿದರು.’ಪಿಒಕೆ ಮತ್ತು ಅಕ್ಸಾಯ್ ಚಿನ್ ಕೂಡಾ ಭಾರತದ ಭಾಗಗಳೇಎಂಬುದಾಗಿ ಗುಡುಗಿದ ಅಮಿತ್ ಶಾಜಾನ್ ದೇ ದೇಂಗೆ ಇಸ್ ಕೆ ಲಿಯೇ’ (ಇದಕ್ಕಾಗಿ ನನ್ನ ಪ್ರಾಣಕೊಡಲೂ ಸಿದ್ಧ) ಎಂದು ಹೇಳಿದರು.ಇನ್ನೊಬ್ಬ ಕಾಂಗ್ರೆಸ್ ನಾಯಕ ಮನಿಶ್ ತಿವಾರಿ ಅವರು ಇಎಲ್ ಜೇಮ್ಸ್ ಅವರಫಿಫ್ಟಿ ಶೇಡ್ಸ್ ಆಫ್ ಗ್ರೇಕಾದಂಬರಿಯನ್ನು ಉಲ್ಲೇಖಿಸಿದರು. ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಲುವು ಏನು ಎಂಬುದಾಗಿ ಅಮಿತ್ ಶಾ ಅವರು ಪ್ರಶ್ನಿಸಿದಾಗ ತಿವಾರಿ ಇದನ್ನು ಉಲ್ಲೇಖಿಸಿದರು.’ಮನಿಶ್ಜಿ ಅವರಿಂದ ನಾನು ಸ್ವಲ್ಪ ಸ್ಪಷ್ಟನೆ ಬಯಸುತ್ತೇನೆ. ಅವರು ಕಾಂಗ್ರೆಸ್ ಪಕ್ಷವು ವಿಧಿ ೩೭೦ರ ರದ್ಧತಿಯನ್ನು ಬೆಂಬಲಿಸುತ್ತದೆಯೇ ಅಥವಾ ಇಲ್ಲವೇ ಎಂಬುದಾಗಿ ಹೇಳಿಲ್ಲ. ದಯವಿಟ್ಟು ಇದನ್ನು ಸ್ಪಷ್ಟ ಪಡಿಸಿಎಂದು ಶಾ ಕೇಳಿದರು.ಇದಕ್ಕೆ ಉತ್ತರಿಸಿದ ತಿವಾರಿ, ’ಅಂಗ್ರೇಜಿ ಕಿ ಏಕ್ ಕಿತಾಬ್ ಹೈ.. ಹರ್ ಚೀಜ್ ಕಾಲಿ ಯಾ ಸಫೇದ್ ನಹಿ ಹೋತಿ (ಇಂಗ್ಲಿಷ್ನಲ್ಲಿ ಒಂದು ಪುಸ್ತಕವಿದೆ.. ಪ್ರತಿಯೊಂದೂ ಕಪ್ಪು ಅಥವಾ ಬಿಳುಪು ಆಗಿರುವುದಿಲ್ಲ). ಇವುಗಳ ಮಧ್ಯೆ ೫೦ ಛಾಯೆಗಳಿರುತ್ತವೆಎಂದು ನುಡಿದರು.ಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸಿದ ಸರ್ಕಾರದ ಕ್ರಮದ ವಿರುದ್ಧ ಏಕತೆ ಪ್ರದರ್ಶಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಹಳೆಯ ಪಕ್ಷದ ಕೆಲವು ನಾಯಕರು ವಿಷಯಕ್ಕೆ ಸಂಬಂಧಿಸಿದಂತೆ ವಿಭಿನ್ನ ನಿಲುವುಗಳನ್ನು ತಳೆದಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್, ಪಿ. ಚಿದಂಬರಂ ಮತ್ತು ಕಪಿಲ್ ಸಿಬಲ್ ಅವರು ರಾಜ್ಯಸಭೆಯಲ್ಲಿ ಸರ್ಕಾರದ ಕ್ರಮವನ್ನು ವಿರೋಧಿಸಿದರೆ, ಸದನದ ಹೊರಗೆ ಪಕ್ಷದಲ್ಲಿ ಭಿನ್ನ ಸ್ವರಗಳು ಕೇಳಿ ಬಂದವು. ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ನಾಯಕತ್ವ ಬಿಕ್ಕಟ್ಟು ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ವಿಭಿನ್ನ ಸ್ವರಗಳು ಮುಜುಗರ ಉಂಟು ಮಾಡಿದವು

2019: ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಭಾರತದ ಕ್ರಮವನ್ನು ಖಂಡಿಸಿ, ಕೈಗೊಳ್ಳಬೇಕಾದ ಮುಂದಿನ ಕ್ರಮವನ್ನು ನಿರ್ಧರಿಸಲು ಅಧ್ಯಕ್ಷ ಆರಿಫ್ ಅಲ್ವಿ ಕರೆದಿದ್ದ ಪಾಕಿಸ್ತಾನ ಸಂಸತ್ತಿನ ಜಂಟಿ ಅಧಿವೇಶನವು ಪ್ರಧಾನಿ ಇಮ್ರಾನ್ ಖಾನ್ ಗೈರುಹಾಜರಿ, ಮತ್ತು ನಿರ್ಣಯದಲ್ಲಿ ವಿಧಿ ೩೭೦ರ ಪ್ರಸ್ತಾಪ ಇಲ್ಲದ್ದರಿಂದ ತೀವ್ರ ಕೋಲಾಹಲದ ಮಧ್ಯೆ ಮುಂದೂಡಿಕೆಯಾಯಿತು ಭಾರತದ ಕ್ರಮವನ್ನು ಖಂಡಿಸಿ ಮಂಡಿಸಲಾದ ನಿರ್ಣಯದಲ್ಲಿ ವಿಧಿ ೩೭೦ರ ಪ್ರಸ್ತಾಪ ಇಲ್ಲದೇ ಇದ್ದುದು ಮತ್ತು ಸಂಸತ್ತಿನ ಜಂಟಿ ಅಧಿವೇಶನಕ್ಕೆ ಪ್ರಧಾನಿ ಇಮ್ರಾನ್ ಖಾನ್ ಗೈರುಹಾಜರಾದುದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪರಿಣಾಮವಾಗಿ ಪಾಕಿಸ್ತಾನದ ಸಂಸತ್ತಿನಲ್ಲಿ ಮಂಗಳವಾರ ತೀವ್ರ ಕೋಲಾಹಲ ಉಂಟಾಯಿತು.ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಭಾರತೀಯ ಸಂವಿಧಾನದ ೩೭೦ನೇ ವಿಧಿಯನ್ನು ನಿರ್ಣಯದಲ್ಲಿ ಪ್ರಸ್ತಾಪ ಮಾಡಲಾಗಿಲ್ಲ ಎಂಬುದಾಗಿ ವಿರೋಧ ಪಕ್ಷಗಳು ತೀವ್ರವಾಗಿ ಆಕ್ಷೇಪಿಸಿದಾಗ ಸಂಸತ್ತಿನ ಕೆಳಮನೆಯಾದ ನ್ಯಾಷನಲ್ ಅಸೆಂಬ್ಲಿಯ ಸ್ಪೀಕರ್ ಅಸದ್ ಖೈಸೆರ್ ಅವರು ಸದನ ಕಲಾಪವನ್ನು ೨೦ ನಿಮಿಷಗಳ ಕಾಲ ಮುಂದೂಡಿದರು.ವಿರೋಧಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸೆನೇಟರ್ ರಜಾ ರಬ್ಬಾನಿ ಅವರು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಭಾರತದ ಕ್ರಮಕ್ಕೆ ಸಂಬಂಧಿಸಿದ ನಿರ್ಣಯದಲ್ಲಿ ಮಹತ್ವ  ಪೂರ್ಣವಾಗಿ ಬೆಳಕು ಚೆಲ್ಲಬೇಕಾಗಿದ್ದ ಮೂಲಭೂತ ವಿಷಯವನ್ನೇ ಪ್ರಸ್ತಾಪಿಸಲಾಗಿಲ್ಲ ಎಂದು ಹೇಳಿದರು.ವಿರೋಧೀ ಸದಸ್ಯರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಮಾನವ ಹಕ್ಕುಗಳ ಸಚಿವ ಶಿರೀನ್ ಮ್ಜಾಜಾರಿ ಅವರುವಿರೋಧ ಪಕ್ಷಗಳು ಗದ್ದಲ ಮಾಡುವುದಕ್ಕಾಗಿ ಇವೆ ಹೊರತು ಕಾಶ್ಮೀರ ವಿಷಯದಲ್ಲಿ ಚರ್ಚೆ ಮಾಡುವುದಕ್ಕಾಗಿ ಅಲ್ಲಎಂದು ಟೀಕಿಸಿದರು.ರೈಲ್ವೇ ಸಚಿವ ಶೇಖ್ ರಶೀದ್ ಅವರು ವಿಧಿ ೩೭೦ನ್ನು ಪ್ರಸ್ತಾಪಿಸಬೇಕಾದ ಅಗತ್ಯವನ್ನು ಎತ್ತಿ ಹಿಡಿದರು. ಇದು ಸದನದಲ್ಲಿ ಚರ್ಚೆ ಆಗಬೇಕಾಗಿರುವ ಅತ್ಯಂತ ಮಹತ್ವದ ವಿಷಯ ಎಂದು ಅವರು ಪ್ರತಿಪಾದಿಸಿದರು.ಸದಸ್ಯರ ಬೇಡಿಕೆಗೆ ಮಣಿದ ಸ್ಪೀಕರ್ ಆಜಮ್ ಸ್ವಾತಿ ಅವರು ನಿರ್ಣಯದಲ್ಲಿ ತಿದ್ದುಪಡಿ ಮಾಡಿ ವಿಧಿ ೩೭೦ರ ಉಲ್ಲೇಖವನ್ನು ಸೇರ್ಪಡೆ ಮಾಡಿದರು. ಇಷ್ಟಕ್ಕೂ ತಮ್ಮ ಪ್ರತಿಭಟನೆಯನ್ನು ನಿಲ್ಲಿಸದ ವಿರೋಧ ಪಕ್ಷಗಳು ಪ್ರಧಾನಿ ಇಮ್ರಾನ್ ಖಾನ್ ಅವರು ಜಂಟಿ ಅಧಿವೇಶನಕ್ಕೆ ಗೈರುಹಾಜರಾದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೋಲಾಹಲ ಸೃಷ್ಟಿಸಿದವು. ಗದ್ದಲದ ಮಧ್ಯೆ  ವಿಷಯ ಚರ್ಚೆ ಆರಂಭಕ್ಕೆ ಮುನ್ನವೇ ಸ್ಪೀಕರ್ ಅವರು ಎದ್ದು ತಮ್ಮ ಕೊಠಡಿಗೆ ತೆರಳಿದ್ದರಿಂದ ಅಧಿವೇಶನ ಆರಂಭಕ್ಕೂ ಮೊದಲೇ ಅಂತ್ಯಗೊಂಡಿತು ಎಂದುಡಾನ್ವರದಿ ಮಾಡಿತು.ಭಾರತೀಯ ಪಡೆಗಳು ಪಾಕ್ ಆಕ್ರಮಿತ ಪ್ರದೇಶದಲ್ಲಿ ಜನವಸತಿ ಪ್ರದೇಶದಲ್ಲಿ ಅಪ್ರಚೋದಿತ ಗುಂಡಿನ ದಾಳಿ ಮತ್ತು ಕ್ಲಸ್ಟರ್ ಬಾಂಬ್ ಬಳಸುತ್ತಿದೆ ಎಂಬ ಆಪಾದನೆಯ ಬಗ್ಗೆ ಚರ್ಚಿಸಲು ಅಧ್ಯಕ್ಷ ಆರಿಫ್ ಅಲ್ವಿ ಸಂಸತ್ತಿನ ವಿಶೇಷ ಜಂಟಿ ಅಧಿವೇಶನವನ್ನು ಕರೆದಿದ್ದರು. ಪಾಕಿಸ್ತಾನದ ಆಪಾದನೆಯನ್ನು ಭಾರತವು ಈಗಾಗಲೇ ನಿರಾಕರಿಸಿದೆ.ಭಾರತದ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮತ್ತು ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸುವ ಸಂಬಂಧ ನಾಲ್ಕು ಪ್ರಸ್ತಾಪಗಳನ್ನು ಮಂಡಿಸುವ ಮೂಲಕ ಸಂಸತ್ತನ್ನು ದಿಗ್ಭ್ರಮೆಗೊಳಿಸಿದ್ದರು. ಸಂವಿಧಾನದ ೩೭೦ನೇ ವಿಧಿಯು ರಾಜ್ಯಕ್ಕೆ ತನ್ನದೇ ಸಂವಿಧಾನ ಹೊಂದುವ ಮತ್ತು ರಕ್ಷಣೆ, ಸಂಪರ್ಕ ಮತ್ತು ವಿದೇಶಾಂಗ ವ್ಯವಹಾರಗಳನ್ನು ಹೊರತು ಪಡಿಸಿ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಹಕ್ಕನ್ನು ನೀಡಿತ್ತು.ಭಾರತದ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನವುಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸುವ ನಿರ್ಣಯವನ್ನು ಸ್ಥಗಿತಗೊಳಿಸಿ ಹಿಮ್ಮೊಗವಾಗಿ ತಿರುಗಿಸುವಂತೆ ಆಗ್ರಹಿಸಿತ್ತು. ಭಾರತದ ಏಕಪಕ್ಷೀಯ ಕ್ರಮವು ಅಂತಾರಾಷ್ಟ್ರೀಯವಾಗಿ ವಿವಾದಿತ ಪ್ರದೇಶವೆಂದು ಗುರುತಿಸಲಾದ ರಾಜ್ಯದ ಸ್ಥಿತಿಗತಿಯನ್ನು ಬದಲಾಯಿಸುವುದಿಲ್ಲ ಎಂದು ಪಾಕಿಸ್ತಾನ ಪ್ರತಿಪಾದಿಸಿತ್ತು.

2019: ನವದೆಹಲಿ: ಮುಂಗಾರು ಮಳೆ ದೇಶಾದ್ಯಂತ ಪ್ರಬಲಗೊಂಡಿತು. ವರುಣಾರ್ಭಟಕ್ಕೆ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ ತತ್ತರಿಸಿದವು. ಮಹಾರಾಷ್ಟ್ರದಲ್ಲಿ ಮಂದಿಯನ್ನು ಮಳೆ ಬಲಿತೆಗೆದುಕೊಂಡರೆ, ಕರ್ನಾಟಕ, ಗುಜರಾತ್ ಮತ್ತು ಆಂಧ್ರಪ್ರದೇಶದಲ್ಲಿ ಪ್ರಳಯ ಸ್ಥಿತಿ ಉಂಟಾಗಿ ಜನರನ್ನು ಕಂಗೆಡಿಸಿತು. ಪಶ್ಚಿಮ ಭಾರತದಲ್ಲಿ ಮುಂದಿನ ೨೪  ಗಂಟೆಗಳಲ್ಲಿ ಮಳೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ವರದಿಗಳು ತಿಳಿಸಿದವು. ಮಹಾರಾಷ್ಟ್ರ, ಕರ್ನಾಟಕದಲ್ಲಿ ಬಿರುಮಳೆಯನ್ನು ಅನುಸರಿಸಿ ಹಲವೆಡೆ ಶಾಲೆಗಳಿಗೆ ರಜೆ ಘೋಷಿಸಿ, ಹಲವಾರು ಜಿಲ್ಲೆಗಳಲ್ಲಿ ಮನೆಯಿಂದ ಹೊರಬರದಂತೆ ಸಲಹೆ ಮಾಡಲಾಯಿತು.  ಗೋದಾವರಿ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿ, ಆಂಧ್ರಪ್ರದೇಶದ ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳ ೭೪,೦೦೦ ಮಂದಿ ತೀವ್ರ ತೊಂದರೆಗೆ ಒಳಗಾದರು. ಮಹಾರಾಷ್ಟ್ರದಲ್ಲಿ ಬಿರುಸಾದ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡು,  ಮುಂಬೈ ಮತ್ತು ಸತಾರದಲ್ಲಿ ಕನಿಷ್ಠ ಮಂದಿ ಸಾವನ್ನಪ್ಪಿದರು. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ರೈಲುಸೇವೆ ಅಸ್ತವ್ಯಸ್ತಗೊಂಡಿತು. ಥಾಣೆಯಲ್ಲಿ ನೀರಿನ ಮಧ್ಯೆ ಸಿಕ್ಕಿಹಾಕಿಕೊಂಡ ೫೮ ಮಂದಿಯನ್ನು ಭಾರತೀಯ ವಾಯುಪಡೆ ಹೆಲಿಕಾಪ್ಟರುಗಳ ಮೂಲಕ ರಕ್ಷಿಸಲಾಯಿತು. ಮುಂಬೈ ಹೊರವಲಯದಲ್ಲಿ ನೀರಿನ ಮಧ್ಯೆ ಸಿಕ್ಕಿಹಾಕಿಕೊಂಡ ೪೦೦ಕ್ಕೂ ಹೆಚ್ಚು ಮಂದಿಯ ರಕ್ಷಣೆಗೆ ದೋಣಿಗಳನ್ನು ಬಳಸಲಾಯಿತು. ಮುಂಬೈ ರೈಲು ನಿಲ್ದಾಣಗಳಲ್ಲಿ ಅಸಂಖ್ಯತ ಜನರು ನೀರಿನ ಮಧ್ಯೆ ಸಿಕ್ಕಿಹಾಕಿಕೊಂಡಿದ್ದು, ರೈಲು ಸಂಚಾರ ಸ್ಥಗಿತಗೊಂಡಿತು. ಥಾಣೆ - ಮುಂಬೈ ರೈಲು ಸಂಚಾರವೂ ಸ್ಥಗಿತಗೊಂಡಿತು.  ಬಿಹಾರದಲ್ಲಿ ಮಳೆಯ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು. ನಾಲ್ಕು ನದಿಗಳಲ್ಲಿ ಪ್ರವಾಹದ ಮಟ್ಟ ಇಳಿಯಿತು.. ಪ್ರವಾಹ ಸಂತ್ರಸ್ಥ ೧೩ ಜಿಲ್ಲೆಗಳಿಂದ ಯಾವುದೇ ಹೊಸ ಸಾವು ನೋವಿನ ವರದಿಗಳು ಬರಲಿಲ್ಲ. ಪುಣೆಯಲ್ಲಿ ಹಿಂದಿನ ದಿನ ವಿಪರೀತ ಮಳೆ ಸುರಿದಿದ್ದು, ದಿನವೂ ಪರಿಸ್ಥಿತಿ ಹಾಗೆಯೇ ಮುಂದುವರೆದಿತ್ತು. ಕರ್ನಾಟಕದ ಕರಾವಳಿ ಮತ್ತು ಉತ್ತರ ಭಾಗಗಳಲ್ಲಿ ವ್ಯಾಪಕ ಮಳೆಯಾಗಿ, ಶಾಲಾ ಮಕ್ಕಳಿಗೆ ಹಲವೆಡೆ ರಜೆ ಘೋಷಿಸಲಾಯಿತು.


No comments:

Post a Comment