ನಾನು ಮೆಚ್ಚಿದ ವಾಟ್ಸಪ್

Monday, August 5, 2019

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು
ಐತಿಹಾಸಿಕ ನಿರ್ಧಾರ, ಇಡೀ ದೇಶಕ್ಕೆ ಒಂದೇ ಸಂವಿಧಾನ, ಧ್ವಜ
ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಕಳೆದ ಒಂದು ವಾರದ ಬೆಳವಣಿಗೆಗೆ ೨೦೧೯ ಆಗಸ್ಟ್ ೫ರ ಸೋಮವಾರ ತೆರೆ ಬಿದ್ದಿದ್ದು, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಲು ಸರ್ಕಾರ ತೀರ್ಮಾನಿಸಿರುವುದಾಗಿ  ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆಇದೇ ಘೋಷಣೆಯನ್ನು ಅವರು ಬಳಿಕ ಲೋಕಸಭೆಯಲ್ಲೂ ಮಾಡಿದರು.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಆದೇಶಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಹಿ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣಾ ಮಸೂದೆಯನ್ನು ಶಾ ಅವರು ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಯ ಮಧ್ಯೆ ಸದನದಲ್ಲಿ ಮಂಡಿಸಿದರು. ಕಾಶ್ಮೀರಕ್ಕೆ ಸಂಬಂಧಿಸಿದಂತೆ  4 ನಿರ್ಣಯಗಳನ್ನು ಮಂಡಿಸಲಾಗಿದ್ದು ಈದಿನವೇ ಅಂಗೀಕಾರಗೊಳ್ಳುವ ನಿರೀಕ್ಷೆ ಇದೆ.

ಶಾ ಹೇಳಿದ್ದೇನು?
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಲಾಗಿದೆ. ೩೭೦ನೇ ವಿಧಿಯನ್ನು ಹಾಗೂ  ೩೫ಎ ವಿಧಿಯನ್ನು ಕೂಡಾ ರದ್ದುಪಡಿಸಲಾಗಿದೆ ಎಂದು ಅಮಿತ್ ಶಾ ರಾಜ್ಯಸಭೆಯಲ್ಲಿ ಘೋಷಿಸಿದ್ದಾರೆ.

 ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ  ೩೭೦ನೇ ವಿಧಿಯನ್ನು ಸಂವಿಧಾನಬದ್ಧವಾಗಿ ರದ್ದುಪಡಿಸಲು ತೀರ್ಮಾನಿಸಲಾಗಿದೆ  ಎಂದು ಅಮಿತ್ ಶಾ ರಾಜ್ಯಸಭೆಯಲ್ಲಿ ಪ್ರಕಟಿಸಿದರು..

ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಮಹತ್ವದ ಸಭೆ ನಡೆದಿತ್ತು. ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಭಾಗವಹಿಸಿದ್ದರು.

 ಪರಿಣಾಮ ಏನು?
·     
  ಇಡೀ ರಾಷ್ಟ್ರಕ್ಕೆ ಒಂದೇ ಸಂವಿಧಾನ. ಒಂದೇ ಧ್ವಜ. ಜಮ್ಮು ಕಾಶ್ಮೀರ ರಾಜ್ಯಕ್ಕಿದ್ದ ವಿಶೇಷಾಧಿಕಾರ ರದ್ದು. ಇನ್ಮುಂದೆ ಸಾಮಾನ್ಯ ರಾಜ್ಯಗಳಂತೆ  ಜಮ್ಮು ಕಾಶ್ಮೀರ.  ಒಂದೇ ಬಾವುಟ ಹಾರಾಟ,  ೨ನೇ ಧ್ವಜ ಹಾರಾಟಕ್ಕೆ ಬ್ರೇಕ್ .  ಜಮ್ಮುಕಾಶ್ಮೀರ ಭೌಗೋಳಿಕವಾಗಿ ವಿಭಜನೆ.  ಜಮ್ಮು ಕಾಶ್ಮೀರ  2 ಭಾಗಗಳಾಗಿ ವಿಭಜನೆ.  ಜಮ್ಮು ಮತ್ತು  ಕಾಶ್ಮೀರ ಕೇಂದ್ರಾಡಳಿತ ಪ್ರದೇಶ. ವಿಧಾನಸಭೆ ಸಹಿತ ಕೇಂದ್ರಾಡಳಿತ ಪ್ರದೇಶ.  ಲಡಾಖ್ ಕೂಡಾ ಕೇಂದ್ರಾಡಳಿತ ಪ್ರದೇಶ.  ಶಿಕ್ಷಣ, ವಿದ್ಯಾರ್ಥಿವೇತನ, ಉದ್ಯೋಗ ಎಲ್ಲರೂ ಅರ್ಹ. ಮಹಿಳೆಯರು ಬೇರೆ ರಾಜ್ಯದವರನ್ನು ವಿವಾಹವಾಗಬಹುದು.  ಜಮ್ಮು-ಕಾಶ್ಮೀರದಲ್ಲಿ ಮುಂದಿನ ದಿನಗಳಲ್ಲಿ ಭಾರತದ ಸಂವಿಧಾನವೇ ಅನ್ವಯವಾಗಲಿದೆ.

ಸರ್ಕಾರ
ಮಹತ್ವದ ಆದೇಶ ಹೊರಡಿಸುವ ಉದ್ದೇಶದಿಂದ ಕಣಿವೆ ರಾಜ್ಯದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು

No comments:

Post a Comment