ನಾನು ಮೆಚ್ಚಿದ ವಾಟ್ಸಪ್

Wednesday, August 21, 2019

ದೆಹಲಿ–ಮುಂಬೈ: ರಾಜಧಾನಿ ರೈಲು ಪಯಣದ ಅವಧಿ ಇನ್ನು ಹತ್ತೇ ಗಂಟೆ

ದೆಹಲಿಮುಂಬೈ: ರಾಜಧಾನಿ ರೈಲು

ಪಯಣದ ಅವಧಿ ಇನ್ನು ಹತ್ತೇ ಗಂಟೆ
ನವದೆಹಲಿ: ರಾಜಧಾನಿ ದೆಹಲಿ ಮತ್ತು ಮುಂಬೈ ನಡುವೆ ಸಂಚರಿಸುವ ರಾಜಧಾನಿ ಎಕ್ಸ್ ಪ್ರೆಸ್ ರೈಲು ಇನ್ನು ಮುಂದೆ ಹಿಂದಿಗಿಂತ ಅತೀ ವೇಗವಾಗಿ ಸಂಚರಿಸಲಿದ್ದು, ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಪಶ್ಚಿಮ  ರೈಲ್ವೇ ತಿಳಿಸಿದೆ.

ದೆಹಲಿ-ಮುಂಬೈ ನಡುವೆ ಸಂಚರಿಸುವ ರಾಜಧಾನಿ ಎಕ್ಸ್ ಪ್ರೆಸ್ ಮೊದಲು ಗಂಟೆಗೆ 130 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ಇನ್ನು ಮುಂದೆ  ವೇಗದ ಪ್ರಮಾಣವನ್ನು 160 ಕಿಲೋ ಮೀಟರುಗಳಿಗೆ  ಹೆಚ್ಚಿಸಲಾಗಿದೆ. ಇದರಿಂದಾಗಿ 5 ಗಂಟೆ ಮುಂಚಿತವಾಗಿ ಮುಂಬೈ ತಲುಪಲಿದೆ ಎಂದು ಇಲಾಖೆ ತಿಳಿಸಿದೆ.

ಮೊದಲು ದೆಹಲಿಯಿಂದ ಮುಂಬೈ ತಲುಪಲು ರಾಜಧಾನಿ ರೈಲು 15.5 ಗಂಟೆ  ಕಾಲವನ್ನು ತೆಗೆದುಕೊಳ್ಳುತ್ತಿತ್ತು.. ಇನ್ನು ಮುಂದೆ ಗಂಟೆಗೆ 160 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವುದರಿಂದ ಕೇವಲ 10 ಗಂಟೆಯಲ್ಲಿ ಮುಂಬೈ ತಲುಪಲಿದೆ.

ಕೇಂದ್ರ ಸರ್ಕಾರದ  ಅನುಮತಿ ನೀಡಿದ ನಂತರ ಮುಂಬೈ-ದೆಹಲಿ ಮಧ್ಯೆ  ನಡುವೆ ಸಂಚರಿಸುವ ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ವೇಗವನ್ನು 160 ಕಿ.ಮೀಗೆ ಹೆಚ್ಚಿಸಿದೆ ಎಂದು ಪಶ್ಚಿಮ ರೈಲ್ವೆ ವಲಯ ಟ್ವೀಟ್ ಮೂಲಕ ಪ್ರಕಟಿಸಿದೆ.

No comments:

Post a Comment