ನಾನು ಮೆಚ್ಚಿದ ವಾಟ್ಸಪ್

Sunday, August 18, 2019

ಇಂದಿನ ಇತಿಹಾಸ History Today ಆಗಸ್ಟ್ 18

2019: ನವದೆಹಲಿ:  ನವದೆಹಲಿ ಮತ್ತು ಇಸ್ಲಾಮಾಬಾದ್ ಮಧ್ಯೆ ಮಾತುಕತೆ ನಡೆದರೆ ಅದು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ (ಪಿಒಕೆ) ಎಂಬುದಾಗಿ ಘೋಷಿಸುವ ಮೂಲಕ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಈದಿನ  ಪಾಕಿಸ್ತಾನಕ್ಕೆ ಪ್ರಬಲ ಪ್ರಹಾರ ನಡೆಸಿದರು. ಹರಿಯಾಣದ ಕಲ್ಕಾದಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಸಂಘಟಿಸಲಾದ ಜನ ಆಶೀರ್ವಾದ ಯಾತ್ರಕ್ಕೆ ಹಸಿರು ನಿಶಾನೆ ತೋರಿಸಿದ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರುಈಗ ನವದೆಹಲಿ ಮತ್ತು ಇಸ್ಲಾಮಾಬಾದ್ ಮಧ್ಯೆ ಮಾತುಕತೆಗಳು ಏನಾದರೂ ನಡೆದರೆ ಅದು ಪಿಒಕೆ ಬಗ್ಗೆ ಮಾತ್ರಎಂದು ಖಡಕ್  ಹೇಳಿಕೆ ನೀಡಿದರು. ರಾಜನಾಥ ಸಿಂಗ್ ಅವರು ಭಾರತದ ಅಣ್ವಸ್ತ್ರ ನೀತಿ ಬದಲಾವಣೆ ಬಗ್ಗೆ  ಹಿಂದಿನ ದಿನ ಸುಳಿವು ನೀಡಿದ್ದರು. ಅಣ್ವಸ್ತ್ರಗಳಿಗೆ ಸಂಬಂಧಿಸಿದಂತೆ  ಮೊದಲು ಪ್ರಯೋಗ ಇಲ್ಲನೀತಿಯನ್ನು ಭಾರತ ಸನ್ನಿವೇಶಕ್ಕೆ ಅನುಗುಣವಾಗಿ ಬದಲಾಯಿಸಬಹುದು ಎಂದು ರಾಜನಾಥ ಸಿಂಗ್ ಹೇಳಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಭಾರತೀಯ ಸಂವಿಧಾನದ ೩೭೦ನೇ ವಿಧಿಯನ್ನು ಭಾರತವು ರದ್ದು ಪಡಿಸಿದ್ದಕ್ಕೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಇತರ ನಾಯಕರು ವಿರೋಧ ವ್ಯಕ್ತ ಪಡಿಸಿ ಮಾತನಾಡಿದ್ದರು. ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಸಲುವಾಗಿ ೩೭೦ನೇ ವಿಧಿಯನ್ನು ರದ್ದು ಪಡಿಸಲಾಗಿದೆ ಎಂದು ರಾಜನಾಥ ಸಿಂಗ್ ಹೇಳಿದರು.  ನಮ್ಮ ನೆರೆ ರಾಷ್ಟ್ರವು ಭಾರತವು ತಪ್ಪು ಮಾಡಿದೆ ಎಂದು ಹೇಳುತ್ತಾ ಅಂತಾರಾಷ್ಟ್ರೀಯ ಸಮುದಾಯದ ಬಾಗಿಲುಗಳನ್ನು ಬಡಿಯುತ್ತಿದೆ. ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿದರೆ ಮಾತ್ರವೇ ಅದರ ಜೊತೆಗೆ ಭಾರತ ಮಾತುಕತೆ ನಡೆಸುತ್ತದೆ. ಅದು ಕೂಡಾ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರಎಂದು ಅವರು ದೃಢವಾಗಿ ಹೇಳಿದರು. ಪಂಚಕುಲದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ ಸಿಂಗ್ ಅವರುಕೆಲವುದಿನಗಳ ಹಿಂದೆ ಪಾಕಿಸ್ತಾನದ ಪ್ರಧಾನಿಯವರು ಭಾರತವು ಬಾಲಾಕೋಟ್ಗಿಂತಲೂ ದೊಡ್ಡ ಪ್ರಮಾಣದ ದಾಳಿಗೆ ಯೋಜಿಸುತ್ತಿದೆ ಎಂದು ಹೇಳಿದ್ದರು.  ಬಾಲಾಕೋಟ್ನಲ್ಲಿ ಭಾರತ ಮಾಡಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ ಎಂಬುದು ಇದರ ಅರ್ಥಎಂದು ನುಡಿದರು.  ಪುಲ್ವಾಮದಲ್ಲಿ ೪೦ ಮಂದಿ ಸಿಆರ್ಪಿಎಫ್ ಯೋಧರನ್ನು ಭಯೋತ್ಪಾದಕ ದಾಳಿಯು ಬಲಿತೆಗೆದುಕೊಂಡ ಎರಡು ವಾರಗಳ ಬಳಿಕ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಫೆಬ್ರುವರಿ ೨೬ರಂದು ಬಾಲಾಕೋಟ್ನಲ್ಲಿ ಜೈಶ್--ಮೊಹಮ್ಮದ್ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿದ್ದವು. ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ಫೆಬ್ರುವರಿ ೨೭ರಂದು ದಾಳಿ ನಡೆಸಲು ಯತ್ನಿಸುವ ಮೂಲಕ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನ ಯತ್ನಿಸಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ಸಂವಿಧಾನದ ೩೭೦ನೇ ವಿಧಿ ರದ್ದು ಮತ್ತು ರಾಜ್ಯವನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ನಿರ್ಧಾರ ಕೈಗೊಂಡಂದಿನಿಂದ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಪ್ರಕ್ಷುಬ್ಧತೆ ಹೆಚ್ಚಾಗಿದೆ.  ಭಾರತದ ಕ್ರಮವನ್ನು ಟೀಕಿಸಿ, ಪಾಕಿಸ್ತಾನವು ಭಾರತದ ಜೊತೆಗಿನ ರಾಜತಾಂತ್ರಿಕ ಬಾಂಧವ್ಯವನ್ನು ಕಡಿದುಕೊಂಡು ಭಾರತೀಯ ಹೈ ಕಮೀನರ್ ಅಜಯ್ ಬಿಸಾರಿಯಾ ಅವರನ್ನು ಉಚ್ಚಾಟಿಸಿತ್ತು. ಸಂಜೌತಾ ಎಕ್ಸ್ಪ್ರೆಸ್ ರೈಲುಸೇವೆಯನ್ನೂ ರದ್ದು ಪಡಿಸಿದ ಪಾಕಿಸ್ತಾನ ಭಾರತದ ಜೊತೆಗಿನ ವಾಣಿಜ್ಯ ಬಾಂಧವ್ಯವನ್ನೂ ಸ್ಥಗಿತಗೊಳಿಸಿತ್ತು.  ಅಷ್ಟಕ್ಕೂ ನಿಲ್ಲದೆ, ವಿಶ್ವಸಂಸ್ಥೆ ಭದ್ರತಾ ಮಂಡಳಿಗೂ ಭಾರತದ ವಿರುದ್ಧ ದೂರು ನೀಡಿತ್ತು.  ಏನಿದ್ದರೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ರಹಸ್ಯ ಸಮಾಲೋಚನೆ ನಡೆಸಿತ್ತು. ಸಭೆಯಲ್ಲಿ ಚೀನಾ ಬಿಟ್ಟು ಉಳಿದ ಎಲ್ಲ ರಾಷ್ಟ್ರಗಳೂ ಭಾರತದ ನಿಲುವನ್ನೇ ಬೆಂಬಲಿಸಿ, ಉಭಯ ರಾಷ್ಟ್ರಗಳೂ ದ್ವಿಪಕ್ಷೀಯವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ಮಾಡಿದ್ದವು.
ರಾಜನಾಥ ಸಿಂಗ್ ಅವರು ಪಾಕಿಸ್ತಾನದ ವಿರುದ್ಧ ಖಡಕ್ ಮಾತನಾಡಿರುವುದು ಇದೇ ಮೊದಲಲ್ಲ. ಹಿಂದೆ ಬಾಲಾಕೋಟ್ ವಾಯುಪಡೆ ದಾಳಿ ಕಾರ್ಯಾಚರಣೆಯ ಬಳಿಕ ಅವರುಜಮ್ಮು ಮತ್ತು ಕಾಶ್ಮೀರದ ಮೇಲೆ ಕೆಟ್ಟ ದೃಷ್ಟಿ ಇಟ್ಟುಕೊಂಡಿರುವ ಪಾಕಿಸ್ತಾನವು ಪುಲ್ವಾಮಾ ಮಾದರಿಯ ದಾಳಿಗಳನ್ನು ಯೋಜಿಸಿರುವ ಸಾಧ್ಯತೆಯಿದೆ ಎಂದು ಹೇಳಿದ್ದ ಅವರು ಇದನ್ನು ಗಮನದಲ್ಲಿಟ್ಟೇ ಮುನ್ನ ಗಡಿಯುದ್ದಕ್ಕೂ ನಿರ್ಮಿಸಲಾಗಿದ್ದ ಭಯೋತಾದಕ ಉಡಾವಣಾ ಶಿಬಿರಗಳನ್ನು ಧ್ವಂಸಗೊಳಿಸಲು ಬಾಲಾಕೋಟ್ ಕಾರ್ಯಾಚರಣೆ ನಡೆಸಲಾಯಿತುಎಂದು ಹೇಳಿದ್ದರು.  ನಮ್ಮ ನೆರೆರಾಷ್ಟವು ನಿರಂತರವಾಗಿ ಜಮ್ಮು ಮತ್ತು ಕಾಶ್ಮೀರದ ಮೇಲೆ ಕೆಟ್ಟ ದೃಷ್ಟಿಇಟ್ಟುಕೊಂಡಿದ್ದು, ಕಣಿವೆಯ ಶಾಂತಿ ಹಾಳುಗಡೆವಲು ನಮ್ಮ ಪ್ರದೇಶಗಕ್ಕ ಭಯೋತ್ಪಾದಕರನ್ನು ಅಟ್ಟುತ್ತಿದೆಎಂದು ಸಿಂಗ್ ಹೇಳಿದ್ದರು. ಫೆಬ್ರುವರಿ ೧೪ರಂದು ನಮ್ಮ ೪೦ ಮಂದಿ ದಿಟ್ಟ ಸಿಆರ್ಪಿಎಫ್ ಯೋಧರು ಆತ್ಮಹತ್ಯಾ ದಾಳಿಯಲ್ಲಿ ಹುತಾತ್ಮರಾದರು. ಪಾಕಿಸ್ತಾನವು ಇನ್ನೊಂದು ಪುಲ್ವಾಮ ಮಾದರಿ ದಾಳಿ ನಡೆಸುವುದಕ್ಕೆ ಮುನ್ನವೇ  ನಮ್ಮ ಸಶಸ್ತ್ರ ಪಡೆಗಳು ಪಾಕ್ ಗಡಿಯಲ್ಲಿನ ಭಯೋತ್ಪಾದನೆ ಉಡಾವಣಾ ಶಿಬಿರಗಳನ್ನು ನಾಶಪಡಿಸಿದವು ಎಂದು ಅವರು ತಿಳಿಸಿದ್ದರು.  ಬಹಿರಂಗ ಮತ್ತು ಮುಕ್ತ ಮಾತುಕತೆಗೆ ಆಗ್ರಹಿಸಿದ್ದ ಪಾಕಿಸ್ತಾನಕ್ಕೆ ಅವಕಾಶವನ್ನು ನಿರಾಕರಿಸಿದ್ದ ವಿಶ್ವಸಂಸ್ಥೆ ಭದ್ರತಾ ಮಂಡಳಿಯು  ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಹಸ್ಯ ಸಮಾಲೋಚನೆಗಳನ್ನು ನಡೆಸಿತ್ತು. ಭದ್ರತಾ ಮಂಡಳಿಯಲ್ಲಿ ಮುಕ್ತ ಸಮಾಲೋಚನೆ ನಡೆಸಬೇಕು ಎಂಬ ಪಾಕಿಸ್ತಾನದ ಬೇಡಿಕೆಗೆ ೧೫ ಸದಸ್ಯರ ಮಂಡಳಿಯಲ್ಲಿ ಚೀನಾ ಮಾತ್ರವೇ ಬೆಂಬಲ ವ್ಯಕ್ತ ಪಡಿಸಿತ್ತು. ಪಾಕಿಸ್ತಾನದ ಜೊತೆಗಿನ ವಿಷಯಗಳನ್ನು ದ್ವಿಪಕ್ಷಿಯವಾಗಿಯೇ ಬಗೆ ಹರಿಸಿಕೊಳ್ಳಬೇಕು ಎಂಬ ಭಾರತದ ಬದ್ಧತೆಗೆ ಜಾಗತಿಕ ಸಮುದಾಯದಿಂದ ವ್ಯಾಪಕ ಅಂಗೀಕಾರ ಲಭಿಸಿದೆ ಎಂದು ಭಾರತ ಹೇಳಿದೆ. ’ದ್ವಿಪಕ್ಷೀಯವಾಗಿ ವಿಷಯಗಳನ್ನು ಇತ್ಯರ್ಥ ಪಡಿಸಿಕೊಳ್ಳಬೇಕು ಭಾರತದ ನಿಲುವಿಗೆ ಜಾಗತಿಕ ಅಂಗೀಕಾರ ಲಭಿಸಿದೆ. ನಮ್ಮ ಬದುಕನ್ನು ಹೇಗೆ ನಿಭಾಯಿಸಬೇಕು ಎಂಬುದಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳು ನಮಗೆ ಹೇಳಬೇಕಾದ ಅಗತ್ಯ ಇಲ್ಲಎಂದು ವಿಶ್ವ ಸಂಸ್ಥೆಯಲ್ಲಿನ ಭಾರತೀಯ ರಾಯಭಾರಿ ಸೈಯದ್ ಅಕ್ಬರುದ್ದೀನ್ ಹೇಳಿದರು. ಪಾಕಿಸ್ತಾನದ ನಾಗರಿಕ ಮತ್ತು ಸೇನಾ ನಾಯಕತ್ವವು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಯುದ್ಧೋನ್ಮಾದ ಪ್ರದರ್ಶಿಸುತ್ತಿವೆ. ಭಾರತವು ಏನಾದರೂ ಕ್ರಮ ಕೈಗೊಂಡಲ್ಲಿ ಕೊನೆಯವರೆಗೂ ಹೋರಾಟ ನಡೆಸುವುದಾಗಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು.  ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕ್ರಮ ಕೈಗೊಳ್ಳುವ ಯೋಜನೆಗಳು ಇರುವ ಬಗ್ಗೆ ಪಾಕಿಸ್ತಾನಿ ಸೇನೆಗೆ ಮಾಹಿತಿ ಲಭಿಸಿದೆ ಎಂದು ಹೇಳಿದ ಖಾನ್, ’ಅಂತಹ ಕ್ರಮ ಕ್ರಮ ಕೈಗೊಂಡಲ್ಲಿ ಪಾಕಿಸ್ತಾನವು ಸೂಕ್ತವಾಗಿಯೇ ಪ್ರತಿಕ್ರಿಯಿಸುವುದುಎಂದು ಹೇಳಿದ್ದರು.  ಪಾಕಿಸ್ತಾನಿ ಸೇನೆಯ ಮುಖ್ಯಸ್ಥ ಜನರಲ್ ಖಮರ್ ಬಜ್ವಾ ಅವರುಕಾಶ್ಮೀರ ಪ್ರಶ್ನೆಗಾಗಿ ನಮ್ಮ ರಾಷ್ಟ್ರೀಯ ಕರ್ತವ್ಯಕ್ಕೆ ಅನುಗುಣವಾಗಿ ನಮ್ಮ ಕಾರ್ ನಿರ್ವಹಿಸಲು ಸೇನೆಯು ಸಂಪೂರ್ಣವಾಗಿ ಸಜ್ಜಾಗಿದೆಎಂದು ಹೇಳಿದ್ದರು.

2019: ಬೆಂಗಳೂರು: ಎಚ್. ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ನಡೆದಿತ್ತೆನ್ನಲಾದ ಫೋನ್ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಬಿಐಗೆ ವಹಿಸಲು ತೀರ್ಮಾನಿಸಿತು. ಇದು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲವನ್ನುಂಟು ಮಾಡಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಸಂಕಷ್ಟ ಎದುರಾಯಿತು. ಸಿದ್ದರಾಮಯ್ಯ. ಸೇರಿದಂತೆ ಹಲವು ನಾಯಕರು ಪೋನ್ ಕದ್ದಾಲಿಕೆ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯ ಮಾಡಿದ್ದರು. ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸಲು ಆದೇಶ ಮಾಡಲಾಗಿದೆ. ನಾಳೆ ಸಂಬಂಧ ಆದೇಶ ಹೊರಡಿಸಲಾಗುವುದು. ಬಗ್ಗೆ ಸಮಗ್ರ ತನಿಖೆ ನಡೆದು ಸತ್ಯಾಂಶ ಹೊರ ಬರಬೇಕು ತಪ್ಪಿತಸ್ಥರ ವಿರುದ್ದ ಕ್ರಮವಾಗಬೇಕು. ಹೀಗಾಗಿ ಪೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಟೆಲಿಫೋನ್ ಕದ್ದಾಲಿಕೆ ಪ್ರಕರಣದ ಸಿಬಿಐ ತನಿಖೆಗೆ ವಹಿಸಿರುವುದನ್ನು ಸ್ವಾಗತಿಸಿರುವ ಅನರ್ಹ ಶಾಸಕ ವಿಶ್ವನಾಥ್, ಕೇಂದ್ರದಲ್ಲಿ ಯಾವ ಸರ್ಕಾರ ಇದೆ ಎಂಬುದು ಮುಖ್ಯವಲ್ಲ. ತನಿಖೆಯಿಂದ ಸತ್ಯಾಂಶ ಹೊರ ಬರಬೇಕು ಹಾಗೂ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮವಾಗಲೇಬೇಕು ಎಂದರು. ಟೆಲಿಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧಾರ ಸ್ವಾಗತಾರ್ಹ. ಪೋನ್ ಕದ್ದಾಲಿಕೆ ಅಕ್ಷಮ್ಯ ಅಪರಾಧ. ಇದರಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು. ಇದರಲ್ಲಿ ಸೇಡಿನ ರಾಜಕಾರಣದ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ನಾಯಕರು ಸಹ ಸೂಕ್ತ ತನಿಖೆಗೆ ಒತ್ತಾಯಿಸಿದ್ದರು. ಇದೊಂದು ಗಂಭೀರ ಪ್ರಕರಣವಾಗಿರುವ ಕಾರಣ ಸಿಬಿಐ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ಬಿಜೆಪಿ ಸರ್ಕಾರದ ನಿರ್ಧಾರಕ್ಕೆ ಕಿಡಿಕಾರಿದ್ದ ಕಾಂಗ್ರೆಸ್ ಟ್ವಿಟರ್ನಲ್ಲಿ ತಾನು ಕಳ್ಳ ಪರರ ನಂಬ ಎಂಬಂತೆ ನಿಮ್ಮ ವರ್ತನೆ ಎಂದು ಜರಿದಿತ್ತು. ಆದರೆ ತನಿಖೆ ನಿರ್ಧಾರವನ್ನು ಸ್ವಾಗತಿಸಿ ಸಿದ್ದರಾಮಯ್ಯನವರು ಟ್ವೀಟ್ ಮಾಡುತ್ತಿದ್ದಂತೆ ಟ್ವೀಟ್ ಡಿಲೀಟ್ ಆಯಿತು.
2019: ನವದೆಹಲಿ: ಹರಿಯಾಣ ಕಾಂಗ್ರೆಸ್ಸಿನ ನಾಯಕ, ರಾಜ್ಯದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಅಚ್ಚರಿಯ ಬೆಳವಣಿಗೆ ಒಂದರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಬೆಂಬಲ ಘೋಷಿಸುವ ಮೂಲಕ  ಎಲ್ಲರ ಹುಬ್ಬೇರಿಸಿದರು. ರಾಜ್ಯ ವಿಭಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಕಾಂಗ್ರೆಸ್ ನಿಲುವಿಗೆ ವಿರುದ್ಧವಾದ ಹೇಳಿಕೆ ನೀಡಿರುವ ಹೂಡಾ ಅವರುಕಾಂಗ್ರೆಸ್ಸಿಗೆ ದಿಕ್ಕುಗಾಣದಂತಹ ಪರಿಸ್ಥಿತಿ ಬಂದಿದೆಎಂಬುದಾಗಿಯೂ ಟೀಕಿಸಿದರು.  ಪಕ್ಷವನ್ನು ಕಟುವಾಗಿ ಟೀಕಿಸುವ ಮೂಲಕ ಪಕ್ಷದ ಹಿರಿಯ ನಾಯಕ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ತಾವು ಸೇವೆ ಸಲ್ಲಿಸುತ್ತಿದ್ದ ಪಕ್ಷದಿಂದ ಹೊರಹೋಗುವ ಸೂಚನೆ ನೀಡಿದ್ದಾರೆ ಎಂದು ರಾಜಕೀಯ ವಲಯಗಳು ಭಾವಿಸಿದವು. ಏನಿದ್ದರೂ, ೭೧ರ ಹರೆಯದ ನಾಯಕ, ತಾವು ಪಕ್ಷ ತ್ಯಜಿಸುವುದಿಲ್ಲ, ಬದಲಿಗೆ ೧೩ ಮಂದಿ ಶಾಸಕರ ಸಮಿತಿಯೊಂದನ್ನು ರಚಿಸುವುದಾಗಿಯೂ, ಸಮಿತಿಯು ಮುಂದಿನ ಕ್ರಮವನ್ನು ನಿರ್ಧರಿಸಲಿದೆ ಎಂದೂ ಹೇಳಿದರು.  ೩೭೦ನೇ ವಿಧಿಯನ್ನು ರದ್ದು ಪಡಿಸಲಾಗಿದೆ ಮತ್ತು ನನ್ನ ಹಲವಾರು ಪಕ್ಷ ಸಹೋದ್ಯೋಗಿಗಳು ಅದನ್ನು ವಿರೋಧಿಸಿದ್ದಾರೆ. ನನ್ನ ಪಕ್ಷಕ್ಕೆ ದಿಕ್ಕುಗಾಣದಂತಾಗಿದೆ. ಅದೀಗ ಹಳೆಯ ಕಾಂಗ್ರೆಸ್ ಆಗಿ ಉಳಿದಿಲ್ಲ. ರಾಷ್ಟ್ರಭಕ್ತಿ ಮತ್ತು ಸ್ವಾಭಿಮಾನದ ಪ್ರಶ್ನೆ ಬಂದಾಗ ನಾನು ಎಂದಿಗೂ ರಾಜಿ ಮಾಡಿಕೊಳ್ಳಲಾರೆಎಂದು ಹರಿಯಾಣದ ರೋಹ್ಟಕ್ನಲ್ಲಿ ರಾಜಕೀಯ  ಸಭೆಯೊಂದರಲ್ಲಿ  ಮಾತನಾಡುತ್ತಾ ಹೂಡಾ ಹೇಳಿದರು.  ಭೂಪೀಂದರ್ ಸಿಂಗ್ ಹೂಡಾ ಅವರ ಪುತ್ರ ದೀಪೇಂದರ್ ಸಿಂಗ್ ಹೂಡಾ ಅವರು ಕೂಡಾ ಅಪ್ಪನ ಧಾಟಿಯಲ್ಲೇ ಮಾತನಾಡಿದ್ದಾರೆ. ’ನಾನು ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಯನ್ನು ರಾಜಕೀಯಕ್ಕಿಂತ ಮೇಲೆ ಇಟ್ಟಿದ್ದೇನೆ. ೩೭೦ನೇ ವಿಧಿಯ ಬಗ್ಗೆ ಮಾತನಾಡೋಣ. ಅದು ತಾತ್ಕಾಲಿಕ ವ್ಯವಸ್ಥೆ.. ಅದನ್ನು ರದ್ದು ಪಡಿಸಿದ ವಿಧಾನವನ್ನು ನಾನು ವಿರೋಧಿಸುತ್ತೇನೆ. ಆದರೆ ೩೭೦ನೇ ವಿಧಿ ರದ್ದನ್ನು ನಾನು ಬೆಂಬಲಿಸುತ್ತೇನೆ. ನಾನು ಯಾವತ್ತೂ ಇದನ್ನು ಬೆಂಬಲಿಸುತ್ತೇನೆ. ಆದರೆ ಇದನ್ನು ಉಪಯೋಗಿಸಿಕೊಳ್ಳುತ್ತಿರುವ ಜನರು ರಾಜಕೀಯ ಲಾಭಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ನಾನು ಅವರ ಜೊತೆಗೆ ಇಲ್ಲಎಂದು ಮಾಜಿ ಸಂಸದ ಕಿರಿಯ ಹೂಡಾ ಹೇಳಿದರು.  ದಿಢೀರನೆ ಹೂಡಾ ಅವರು ಪಕ್ಷದ ನಿಲುವಿನಿಂದ ದೂರ ಸರಿದಿರುವುದು ಪಕ್ಷದ ತೋಳು ತಿರುಚುವ ಕ್ರಮ ಇರಲೂ ಬಹುದು ಎಂದೂ ಹೇಳಲಾಯಿತು. ಕಳೆದ ಕೆಲವು ದಿನಗಳಿಂದ ಹಾಲಿ ಮುಖ್ಯಸ್ಥ ಅಶೋಕ ತನ್ವರ್ ಅವರನ್ನು ಬದಲಾಯಿಸಿ ಮಾಜಿ ಮುಖ್ಯಮಂತ್ರಿಯನ್ನು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ಮಾಡಬೇಕು ಎಂದು ಹೂಡಾ ಬೆಂಬಲಿಗರು ಆಗ್ರಹಿಸುತ್ತಿದ್ದರು. ಕಳೆದ ಒಂದು ವಾರದಿಂದ ತಂದೆ ಮತ್ತು ಮಗ ಯಾವುದೇ ಸಮಯದಲ್ಲಿ ಪಕ್ಷ ತ್ಯಾಗದ ಘೋಷಣೆ ಮಾಡಬಹುದು ಎಂಬ ವದಂತಿಗಳು ವ್ಯಾಪಕವಾಗಿ ಹರಡಿದ್ದವು. ಆದರೆ ಸೋನಿಯಾ ಗಾಂಧಿಯವರನ್ನು ಪಕ್ಷದ ಹಂಗಾಮೀ ಅಧ್ಯಕ್ಷರಾಗಿ ಹೆಸರಿಸಿದ ಬಳಿಕ, ಪರಿಸ್ಥಿತಿ ಸ್ಥಿರಗೊಂಡಿತ್ತು ಬಣಗಳಾಗಿ ವಿಭಜಿಸಿರುವ ಪಕ್ಷದ ಆಂತರಿಕ ಮೂಲಗಳು ಹೇಳಿದವು.  ಬಣಗಳು ಮತ್ತು ಹೂಡಾ ಸರ್ಕಾರದ ವಿರುದ್ಧದ  ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿ ಕಾಂಗ್ರೆಸ್ ಪಕ್ಷವು ಬಿಜೆಪಿಯ ಎದುರು ಸೋತಿದ್ದು,  ಕಳೆದ ಐದು ವರ್ಷಗಳಿಂದ ಅಧಿಕಾರದಿಂದ ಹೊರಗಿದೆ. ಈಗ ರಾಜ್ಯ ವಿಧಾನಸಭೆಯ ಚುನಾವಣೆಗೆ ಇನ್ನು ಕೇವಲ ಎರಡು ತಿಂಗಳುಗಳು ಇರುವಾಗ ರಾಷ್ಟ್ರೀಯ ಮಟ್ಟದ ನಾಯಕತ್ವದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಚಾರವನ್ನೂ ಆರಂಭಿಸದೆ, ಪಕ್ಷವು ಸೊರಗಿತ್ತು.
2019: ಶಿಮ್ಲಾ/ ಧರ್ಮಶಾಲಾ: ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ೩೬ ಗಂಟೆಗಳಿಂದ ಸುರಿದ ಕುಂಭದ್ರೋಣ ಮಳೆ, ಮೇಘಸ್ಫೋಟಕ್ಕೆ ಹಿಮಾಚಲ ಪ್ರದೇಶದಲ್ಲಿ ೨೫ ಮಂದಿ ಸಾವನ್ನಪ್ಪಿದ್ದರೆ, ಉತ್ತರಾಖಂಡದಲ್ಲಿ ಹಲವಾರು ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿ, ೨೦ ಮಂದಿ ಕಣ್ಮರೆಯಾದರು. ಉಭಯ ರಾಜ್ಯಗಳಲ್ಲೂ ಮಳೆ-ಪ್ರವಾಹದಿಂದಾಗಿ ರಸ್ತೆಗಳು ಹಾನಿಗೀಡಾಗಿ, ಕಟ್ಟಡಗಳು ಜಲಾವೃತಗೊಂಡವು. ಶಿಮ್ಲಾದಲ್ಲಿ ಜನರು ಸಾವನ್ನಪ್ಪಿದರೆ, ಸೋಲನ್ನಲ್ಲಿ ಐವರು ಮೃತರಾದರು.  ಶಿಮ್ಲಾದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ ಟಿಒ) ಬಳಿಕ ಭೂಕುಸಿತ ಉಂಟಾಗಿ ಒಂದೇ ಕುಟುಂಬದ ದಂಪತಿಜೋಡಿ ಮತ್ತು ಅವರ ಇಬ್ಬರು ಪುತ್ರಿಯರು ಸೇರಿ ಮಂದಿ ಸಾವನ್ನಪ್ಪಿದರು. ಹದಿ ಹರೆಯದ ಬಾಲಕಿಯರು ಮತ್ತು ಅವರ ತಂದೆಯನ್ನು ಕುಸಿದ ಮಣ್ಣಿನ ಅವಶೇಷದ ಅಡಿಯಿಂದ ಹೊರತೆಗೆದು ಇಂದಿರಾಗಾಂಧಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಯಿತು. ಬಾಲಕಿಯರು ಆಸ್ಪತ್ರೆಗೆ ಬಂದಾಗಲೇ ಮೃತರಾಗಿರುವುದಾಗಿ ಘೋಷಿಸಲಾಯಿತು. ತಂದೆ ಚಿಕಿತ್ಸೆ ಪಡೆಯುವಾಗ ಸಾವನ್ನಪ್ಪಿದರೆ, ಸ್ವಲ್ಪ ಸಮಯದ ಬಳಿಕ ಮಣ್ಣಿನ ಅವಶೇಷದ ಅಡಿಯಲ್ಲಿ ತಾಯಿಯ ಮೃತದೇಹ ಪತ್ತೆಯಾಯಿತು ಎಂದು ವರದಿಗಳು ಹೇಳಿವೆ. ಕುಸಿದ ಅವಶೇಷಗಳ ಅಡಿ ಸಿಲುಕಿದ್ದ ಇನ್ನೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಕಿತ್ಸೆ ನೀಡಲಾಯಿತು. ಇನ್ನೊಂದು ಗೋಡೆ ಕುಸಿತದ ಘಟನೆಯಲ್ಲಿ ಒಬ್ಬ ಕಾರ್ಮಿಕ ಮೃತನಾಗಿ ಇತರ ಮಂದಿ ಗಾಯಗೊಂಡರು. ತಾವಿದ್ದ ಕೊಠಡಿಯ ಗೋಡೆ ಕುಸಿದ ಪರಿಣಾಮವಾಗಿ ಅವರೆಲ್ಲರೂ ಮಣಿನ ಅವಶೇಷದ ಅಡಿ ಸಿಲುಕಿದರು ಎಂದು ವರದಿ ತಿಳಿಸಿತು. ಉತ್ತರಾಖಂಡದ ಉತ್ತರಕಾಶಿಯಲ್ಲಿ ಮೇಘಸ್ಫೋಟದ ಪರಿಣಾಮವಾಗಿ ಉಂಟಾದ ಪವಾಹದಿಂದ ಮನೆಗಳು ಕುಸಿದರೆ, ಹಲವರು ನೀರಿನಲ್ಲಿ ಕೊಚ್ಚಿ ಹೋದರು ಎಂದು ವರದಿಗಳು ಹೇಳಿದವು.  ರಾಜ್ಯದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದೂ ವರದಿಗಳು ತಿಳಿಸಿದವು. ಯಮುನಾ ನದಿ ಉಕ್ಕಿ ಹರಿಯುತ್ತಿರುವುದರಿಂದ ದೆಹಲಿ, ಹರಿಯಾಣ, ಪಂಜಾಬಿನಲ್ಲಿ ಕಟ್ಟೆಚ್ಚರ ನೀಡಲಾಯಿತು.
2019: ಡಾಕಾ: ಬಾಂಗ್ಲಾದೇಶದ ರಾಜಧಾನಿ ಡಾಕಾದ ಕೊಳೆಗೇರಿ ಪ್ರದೇಶವೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ, ಸುಮಾರು ೫೦,೦೦೦ ಜನರು ನಿರಾಶ್ರಿತರಾದರು. ಹಿಂದಿನ ದಿನ  ತಡ ರಾತ್ರಿ ಸಂಭವಿಸಿದ ದುರಂತದಲ್ಲಿ ಚಾಲಾನಾಟಿಕಾ ಕೊಳೆಗೇರಿ ಪ್ರದೇಶದ ಸುಮಾರು ೧೫ ಸಾವಿರ ಮನೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ ಎಂದು ಬಿಬಿಸಿ ವರದಿ ಮಾಡಿತು. ಅನೇಕ ಮನೆಗಳ ಛಾವಣಿಗೆ ಪ್ಲ್ಯಾಸ್ಟಿಕ್ ಬಳಕೆ ಮಾಡಿದ ಕಾರಣ ಬೆಂಕಿ ವೇಗವಾಗಿ ಹರಡಿತು ಎಂದು ಅಧಿಕಾರಿಗಳು ತಿಳಿಸಿದರು.  ಭೀಕರ ದುರ್ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡರು.  ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಬಗ್ಗೆ ವರದಿಯಾಗಲಿಲ್ಲ.
2019: ಕಾಬೂಲ್: ವಿವಾಹ ಸಮಾರಂಭದಲ್ಲಿ ಆತ್ಮಾಹುತಿ  ಬಾಂಬ್ ದಾಳಿ ನಡೆದ ಪರಿಣಾಮವಾಗಿ ೬೩ ಮಂದಿ ಮೃತರಾಗಿ, ೧೮೨ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಕಾಬೂಲ್ ನಲ್ಲಿ ಶನಿವಾರ ಸಂಭವಿಸಿತು. ೨೦ ಮಂದಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆ ಗಳಿಗೆ ದಾಖಲಿಸಲಾಯಿತು. ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ ಎಂದು ಮೂಲಗಳು ತಿಳಿಸಿದವು. ಇದು ಕಾಬೂಲ್ನಲ್ಲಿ ವರ್ಷ ನಡೆದ ದೊಡ್ಡ ದಾಳಿ ಎನ್ನಲಾಯಿತು.  ತಾಲಿಬಾನ್ ಮತ್ತು ಇಸ್ಲಾಮಿಕ್ ರಾಜ್ಯ ಎರಡೂ ಕಾಬೂಲ್ನಲ್ಲಿ ದಾಳಿ ನಡೆಸುತ್ತಲೇ ಇರುತ್ತವೆ. ಆದರೆ ಘಟನೆಗೂ ನಮಗೂ ಸಂಬಂಧವಿಲ್ಲ ಎಂದು ತಾಲಿಬಾನಿ ಉಗ್ರ ಸಂಘಟನೆ ಘೋಷಿಸಿತು.  ಬೇರೆ ಯಾವುದೇ ಉಗ್ರ ಸಂಘಟನೆಯೂ ಘಟನೆಯ ಹೊಣೆ ಹೊತ್ತು ಕೊಂಡಿಲ್ಲ. ಹಿಂದಿನ  ರಾತ್ರಿ ಸುಮಾರು ೧೦: ೪೦ ಅಂದಾಜಿಗೆ ಈ ಘಟನೆ ನಡೆದಿದ್ದು, ಗಾಯಗೊಂಡವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಲಾಯಿತು.  ತುಂಬಾ ಜನ ಸೇರಿದ್ದ ವಿವಾಹವೊಂದರ ಆರತಕ್ಷತೆಯ ಸಮಯದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಯಿತು.   ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರಸಂಘಟನೆ ನಿರಾಕರಿಸಿದ್ದು, ಇದುವರೆಗೂ ದಾಳಿಯ ಹೊಣೆಯನ್ನು ಯಾವ ಉಗ್ರ ಸಂಘಟನೆ ಹೊರಲಿಲ್ಲ.

2019: ನವದೆಹಲಿ: ರಾಜಧಾನಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಏಮ್ಸ್) ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರದ ಮಾಜಿ ವಿತ್ತ ಸಚಿವ, ಬಿಜೆಪಿ ನಾಯಕ ಅರುಣ್ ಜೇಟ್ಲಿ (೬೬) ಅವರ ಆರೋಗ್ಯ ವಿಷಮಿಸಿತು.  ವಿವಿಧ ಪಕ್ಷಗಳ ಗಣ್ಯರು ಆಸ್ಪತ್ರೆಗೆ ಧಾವಿಸಿದರು. ಕೇಂದ್ರ ಸಚಿವರಾದ ರಾಜನಾಥ ಸಿಂಗ್, ಜಿತೇಂದ್ರ ಸಿಂಗ್, ಸ್ಮೃತಿ ಇರಾನಿ, ರಾಮ ವಿಲಾಸ್ ಪಾಸ್ವಾನ್, ಪೂರ್ವ ದೆಹಲಿ ಸಂಸದ ಗೌತಮ್ ಗಂಭೀರ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್  ಮತ್ತಿತತರು ಆಸ್ಪತ್ರೆಗೆ ಆಗಮಿಸಿದರು.

No comments:

Post a Comment