Monday, August 5, 2019

ಇಂದಿನ ಇತಿಹಾಸ History Today ಆಗಸ್ಟ್ 05

2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ೩೭೦, ೩೫ಎ ವಿಧಿಯನ್ನು ಹಿಂತೆಗೆದುಕೊಳ್ಳುವ ಮತ್ತು ಲಡಾಖ್ನ್ನು ಜಮ್ಮು ಮತ್ತು ಕಾಶ್ಮೀರದಿಂದ  ಬೇರ್ಪಡಿಸಿ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಸರ್ಕಾರವು ಕೈಗೊಂಡಿತು.  ಇದರೊಂದಿಗೆ ಒಂದು ದೇಶ, ಒಂದು ಕಾನೂನು, ಒಂದು ಸಂವಿಧಾನದ ತನ್ನ ವಚನವನ್ನು ಬಿಜೆಪಿ ಸರ್ಕಾರ ಈಡೇರಿಸಿತು. ಜಮ್ಮು ಮತ್ತು ಕಾಶ್ಮೀರ ಇನ್ನು ಮುಂದೆ ವಿಧಾನಸಭೆಯನ್ನು ಒಳಗೊಂಡ ಕೇಂದ್ರಾಡಳಿತ ಪ್ರದೇಶವಾಗಲಿದೆ. ಜಮ್ಮು ಮತ್ತು ಕಾಶ್ಮೀರದಿಂದ ಪ್ರತ್ಯೇಕಗೊಳ್ಳುವ ಲಡಾಖ್, ವಿಧಾನಸಭೆ ರಹಿತವಾದ ಪೂರ್ಣ ಕೇಂದ್ರಾಡಳಿತ ಪ್ರದೇಶವಾಗಲಿದೆ. ವರೆಗೆ ಜಮ್ಮು-ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ತಾರತಮ್ಯದ ಕಾನೂನುಗಳು ಈಗ ಸಂಪೂರ್ಣ ರದ್ದಾಗಿ,. ಕೇಂದ್ರದ ಎಲ್ಲ ಕಾನೂನುಗಳೂ ರಾಜ್ಯಕ್ಕೆ ಅನ್ವಯವಾಗುತ್ತವೆ.    ನಿಟ್ಟಿನಲ್ಲಿಜಮ್ಮು ಮತ್ತು ಕಾಶ್ಮೀರ ಆದೇಶ ೧೯೫೪ನ್ನು ರದ್ದು ಪಡಿಸಿ, ಅದರ ಬದಲಿಗೆಸಂವಿಧಾನ (ಜಮ್ಮು ಕಾಶ್ಮೀರಕ್ಕೆ ಅನ್ವಯ) ಆದೇಶ ೨೦೧೯ನ್ನು ಜಾರಿಗೆ ತರುವ ರಾಷ್ಟ್ರಪತಿ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದ್ದು, ನಿಟ್ಟಿನ ಗೊತ್ತುವಳಿಯನ್ನು ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಂಡಿಸಿದರು. ಜಮ್ಮು ಮತ್ತು ಕಾಶ್ಮೀರ ಆದೇಶ ೧೯೫೪ರ ಅಡಿಯಲ್ಲಿ ಸಂವಿಧಾನದ ೩೭೦ನೇ ವಿಧಿಯನ್ನು ಅಳವಡಿಸಲಾಗಿದ್ದು ತನ್ಮೂಲಕ ಜಮ್ಮು ಮತ್ತು ಕಾಶ್ಮೀರವು ವಿಶೇಷ ಸ್ಥಾನಮಾನವನ್ನು ನೀಡಲಾಗಿತ್ತು.  ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸಿದ ಅಧಿಸೂಚನೆಗೆ ಸಹಿ ಹಾಕಿರುವ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಕಟಿಸಿದರು ಮತ್ತು ರಾಜ್ಯ ಪುನರ್ ವಿಂಗಡಣೆಗೆ ಸಂಬಂಧಿಸಿದ  ಗೊತ್ತುವಳಿಯನ್ನು ಸದನದಲ್ಲಿ ಮಂಡಿಸಿದರು. ಬಳಿಕ ಇದೇ ಪ್ರಕಟಣೆಯನ್ನು ಶಾ ಅವರು ಲೋಕಸಭೆಯಲ್ಲೂ ಮಾಡಿದರು. ಇದಕ್ಕೂ ಮುನ್ನ ಈದಿನ  ಬೆಳಗ್ಗಿನಿಂದಲೇ ನಡೆದ ಮಿಂಚಿನ ಬೆಳವಣಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸುವ ನಿರ್ಣಯ ಕೈಗೊಂಡಿತು.  ರಾಷ್ಟ್ರಪತಿ ಅಧಿಸೂಚನೆಯ ಪ್ರಕಾರ ಜಮ್ಮು ಮತ್ತು ಕಾಶ್ಮೀರದ ಸಂವಿಧಾನವನ್ನು ಇನ್ನು ಮುಂದೆಸಂವಿಧಾನಎಂಬುದಾಗಿ ಕರೆಯಲಾಗುವುದು. ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರವೇ ವಿಶೇಷವಾಗಿ ಜಾರಿಯಲ್ಲಿ ಇರುವ ರಣಬೀರ್ ದಂಡ ಸಂಹಿತೆಯನ್ನು ರದ್ದು ಪಡಿಸಿ, ಜಮ್ಮು ಮತ್ತು ಕಾಶ್ಮೀರವನ್ನು ಸಂಪೂರ್ಣವಾಗಿ ಭಾರತೀಯ ಸಂವಿಧಾನದ ವ್ಯಾಪ್ತಿಗೆ ತರುವ ಬಗೆಗೂ ಸರ್ಕಾರ ಸುಳಿವು ನೀಡಿತು. ಅಧಿಸೂಚನೆಯ ಪ್ರಕಾರ ಜಮ್ಮು ಮತ್ತು ಕಾಶ್ಮೀರವ ಶಾಸನ ಸಭೆ ಸಹಿತವಾದ ಕೇಂದ್ರಾಡಳಿತ ಪ್ರದೇಶವಾಗಿ ಮುಂದುವರೆಯುವುದು ಮತ್ತು ರಾಜ್ಯ ಸರ್ಕಾರವನ್ನು ಉದ್ದೇಶಿಸಿ ಮಾಡಲಾಗುವ ಎಲ್ಲ ಉಲ್ಲೇಖ/ ಶಿಫಾರಸುಗಳನ್ನು ಇನ್ನು ಮುಂದೆ ದೆಹಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಇರುವಂತೆ ರಾಜ್ಯಪಾಲರನ್ನು ಉಲ್ಲೇಖಿಸಿ ಮಾಡಲಾಗುವುದು. ಲಡಾಖ್ ಇನ್ನು ಮುಂದೆ ರಾಜ್ಯ ವಿಧಾನಸಭೆ ರಹಿತವಾದ ಕೇಂದ್ರಾಡಳಿತ ಪ್ರದೇಶವಾಗಿ ಇರುತ್ತದೆ. ಸಂವಿಧಾನದ ೩೭೦ನೇ ವಿಧಿಯ ರದ್ಧತಿಯನ್ನು ರಾಷ್ಟ್ರಪತಿ ಅಧಿಸೂಚನೆ ಮೂಲಕ ಮಾಡಲಾಗಿದ್ದು ಅದಕ್ಕೆ ಸಂಸತ್ತಿನ ಒಪ್ಪಿಗೆ ಪಡೆಯಬೇಕಾದ ಅಗತ್ಯವಿಲ್ಲ.  ಸಂವಿಧಾನದ ೩೭೦ನೇ ವಿಧಿ ರದ್ಧತಿಗೆ ಸರ್ಕಾರವು ಸಂಸತ್ತಿನ ಒಪ್ಪಿಗೆಯನ್ನು ಪಡೆಯಬೇಕಾಗಿಲ್ಲವಾದರೂ, ಜಮ್ಮು ಮತ್ತು ಕಾಶ್ಮೀರವನ್ನ ಎರಡು ಪ್ರತ್ಯೇಕ ರಾಜ್ಯಗಳಾಗಿ ಮರುವಿಂಗಡಣೆ ಮಾಡಸಲು ಸಂಸತ್ತಿನ ಒಪ್ಪಿಗೆ ಪಡೆಯಬೇಕಾಗಿದೆ. ಕಾರಣದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನ ಉಭಯ ಸದನಗಳಲ್ಲೂ ಮರುವಿಂಗಡಣಾ ಮಸೂದೆಯನ್ನು ಮಂಡಿಸಿದರು. ಆಂದ್ರಪ್ರದೇಶವನ್ನು ವಿಭಜಿಸಿದಂತೆ ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಲಾಯಿತು.  ಸಂವಿಧಾನದ ಹಿಂದಿನ ೩೭೦() ವಿಧಿ ಮೂಲಕ ಹಾಲಿ ರಾಷ್ಟ್ರಪತಿ ಅಧಿಸೂಚನೆಯು ಕಾನೂನು ಬದ್ಧತೆ ಮತ್ತು ಅಧಿಕಾರವನ್ನು ಪಡೆದಿದೆ. ರಾಷ್ಟ್ರಪತಿಯವರು ಬಹಿರಂಗ ಅಧಿಸೂಚನೆಯ ಮೂಲಕ ಸಂವಿಧಾನದ ೩೭೦ನೇ ವಿಧಿಯು ರದ್ದಾಗಿದೆ ಎಂಬುದಾಗಿ ಘೋಷಿಸಬಹುದು ಎಂದು ಸಂವಿಧಾನದ ೩೭೦() ವಿಧಿ ಹೇಳಿದೆ. ಆದರೆ ಇಂತಹ ಅದೇಶವನ್ನು ಅಂಗೀಕರಿಸಲು ರಾಜ್ಯ ವಿಧಾನಸಭೆಯ ಒಪ್ಪಿಗೆ ಅಗತ್ಯ ಎಂದೂ ಅದೇ ನಿಯಮ ಹೇಳಿದೆ. ಏನಿದ್ದರೂ ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ರಾಜ್ಯವು ರಾಷ್ಟ್ರಪತಿ ಆಳ್ವಿಕೆಯಲ್ಲಿದ್ದು, ರಾಜ್ಯ ವಿಧಾನಸಭೆ ಅಸ್ತಿತ್ವದಲ್ಲಿ ಇಲ್ಲ. ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ ೩೭೦ನೇ ವಿಧಿಯನ್ನು ರದ್ದುಪಡಿಸಿದ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಸರ್ಕಾರದ ನಿರ್ಧಾರವನ್ನು ಆಡಳಿತಾರೂಢ ಬಿಜೆಪಿಯ ನಾಯಕರು ಸ್ವಾಗತಿಸಿ ಸಂಭ್ರಮಿಸಿದರೆ, ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ನಾಯಕರು ತೀವ್ರವಾಗಿ ವಿರೋಧಿಸಿದರು. ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ ಅಂಗಪಕ್ಷವಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾದಳ  (ಯು) ಮತ್ತು ಬಿಜೆಪಿಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿರುವ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಕೇಂದ್ರದ ಕ್ರಮವನ್ನು ಬೆಂಬಲಿಸಿವೆ.  ಜಮ್ಮು ಮತ್ತು ಕಾಶ್ಮೀರ ಕುರಿತ ಸರ್ಕಾರದ ನಿರ್ಣಯಗಳನ್ನು ಬೆಂಬಲಿಸುವುದಾಗಿ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕ್ರಮದಿಂದ ಶಾಂತಿ ಮತ್ತು ಅಭಿವೃದ್ಧಿ ಸಾಧ್ಯವಾಗುವುದಾಗಿ ಹಾರೈಸುವುದಾಗಿಹೇಳಿದರು.  ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್), ಬಿಜೆಪಿಯ ಹಿರಿಯ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ, ರಾಮಮಾಧವ್ ಹರ್ಷ ವ್ಯಕ್ತ ಪಡಿಸಿದರು. ೩೭೦ನೇ ವಿಧಿ ರದ್ದು ಪ್ರಸ್ತಾವಕ್ಕೆ ರಾಜ್ಯಸಭೆಯಲ್ಲಿ ಜೆಡಿಯು, ಬಿಜೆಡಿ, ಬಿಎಸ್ಪಿ, ಎಐಎಡಿಎಂಕೆ, ವೈಎಸ್ಸಾರ್ ಕಾಂಗ್ರೆಸ್, ಟಿಡಿಪಿ, ಆಮ್ ಆದ್ಮಿ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದವು. ಸಿಪಿಐ, ಟಿಎಂಸಿ, ಆರ್ಜೆಡಿ, ಎಂಡಿಎಂಕೆ ವಿರೋಧ ವ್ಯಕ್ತ ಪಡಿಸಿದವು. ಎನ್ಸಿಪಿ ತಾನು ಮತದಾನದಿಂದ ಹೊರಗೆ ಉಳಿಯುವುದಾಗಿ ಪ್ರಕಟಿಸಿತು. ರಾಜ್ಯಸಭೆಯಲ್ಲಿ ಸಂವಿಧಾನದ ಪ್ರತಿ ಹರಿದುಹಾಕಲು ಯತ್ನಿಸಿದ ಪಿಡಿಪಿಯ ಮೀರ್ ಫಯಾಜ್ ಮತ್ತು ನಾಸಿರ್ ಅಹಮದ್ ಸದನದಿಂದ ಉಚ್ಚಾಟನೆ ಮಾಡಲಾಯಿತು. ಸಂವಿಧಾನವನ್ನು ಹರಿಯಲು ನಡೆಸಿದ ಯತ್ನವನ್ನು ಖಂಡಿಸಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರುನಾವು ಸಂವಿಧಾನದ ಪರ ನಿಲ್ಲುತ್ತೇವೆ. ಬಿಜೆಪಿ ಇಂದು ಸಂವಿಧಾನದ ಕೊಲೆ ಮಾಡಿದೆಎಂದು ಹೇಳಿದರುಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸ್ವಂತ ಸಂವಿಧಾನ ಹೊಂದಲು ಅವಕಾಶ ನೀಡಿರುವ ಸಂವಿಧಾನದ ೩೭೦ನೇ ವಿಧಿಯನ್ನು ರಾಷ್ಟ್ರಪತಿಯವರು ೨೦೧೯ರ ಆಗಸ್ಟ್ ೫ರಿಂದ ಜಾರಿಯಾಗುವಂತೆ ರದ್ದು ಪಡಿಸಿದ್ದಾರೆ ಎಂದು ರಾಜ್ಯಸಭೆಯಲ್ಲಿ ಪ್ರಕಟಿಸಿದ ಅಮಿತ್ ಶಾ ಅವರು ರಾಜ್ಯದ ಮರುವಿಂಗಡಣೆಗೆ ಸಂಬಂಧಿಸಿದ ಗೊತ್ತುವಳಿಗೆ ಬೆಂಬಲ ಕೋರಿದರು. ಜಮ್ಮು ಮತ್ತು ಕಾಶ್ಮೀರ ಮರುವಿಂಗಡಣಾ ಮಸೂದೆಯ ಪ್ರಕಾರ ಕೇಂದ್ರಾಡಳಿತ ಪ್ರದೇಶ ಚಂಡೀಗಢದಂತೆ ಲಡಾಖ್ ಕೂಡಾ ಶಾಸನ ಸಭೆಯನ್ನು ಹೊಂದಿರುವುದಿಲ್ಲ. ಅದರೆ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ದೆಹಲಿ ಮತ್ತು ಪುದುಚೆರಿಯಂತೆ ಶಾಸನಸಭೆಯನ್ನು ಹೊಂದಿರುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೃಷ್ಟಿಯಾಗಿದ್ದ ಅನಿಶ್ಚಿತತೆಗೆ ಮಂಗಳಹಾಡಿದ ಗೃಹ ಸಚಿವರ ಪ್ರಕಟಣೆ ಸಂಸತ್ತಿನ ಉಭಯ ಸದನಗಳಲ್ಲೂ ಭಾರೀ ಕೋಲಾಹಲ ಸೃಷ್ಟಿಸಿತು. ಅಡಳಿತಾರೂಢ ಬಿಜೆಪಿ ಸದಸ್ಯರು ಹರ್ಷೋದ್ಘಾರ ಮಾಡಿದರೆ, ಕಾಂಗ್ರೆಸ್, ಪಿಡಿಪಿ ಸೇರಿದಂತೆ ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿದವು. ಸದನದ ಹೊರಗೆ ಕೂಡಾ ವಿರೋಧ ಪಕ್ಷಗಳಿಂದ ತೀವ್ರ ವಿರೋಧ, ಆಡಳಿತ ಪಕ್ಷದ ಕಡೆಯಿಂದ ಬೆಂಬಲ ವ್ಯಕ್ತವಾದವುಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸಿದ ಸರ್ಕಾರದ ಕ್ರಮವು ರಾಷ್ಟ್ರೀಯ ಸಮಗ್ರತೆಯ ನಿಟ್ಟಿನಲ್ಲಿ ಸ್ಮರಣಾರ್ಹ ನಿರ್ಧಾರ ಎಂದು ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ಹೇಳಿದರೆ, ಪಕ್ಷದ ಸಹೋದ್ಯೋಗಿ ರಾಮ್ ಮಾಧವ್ ಅವರುಚರಿತ್ರಾರ್ಹ ದಿನ. ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಪೂರ್ಣವಾಗಿ ಸೇರ್ಪಡೆ ಮಾಡಲು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಸೇರಿದಂತೆ ಸಹಸ್ರಾರು ಮಂದಿಯ ಬಲಿದಾನಕ್ಕೆ ಅಂತಿಮವಾಗಿ ಬೆಲೆ ಸಿಕ್ಕಿತು. ಏಳು ದಶಕಗಳ ಕನಸು ನಮ್ಮ ಜೀವಿತಾವಧಿಯಲ್ಲಿ ನಮ್ಮ ಕಣ್ಣೆದುರಲ್ಲೇ ಈಡೇರಿತುಎಂದು ಟ್ವೀಟ್ ಮಾಡಿದರು. ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯ ಮಾರ್ಗ ತೆರೆಯಿತು ಎಂದು ಬಿಜೆಪಿ ವಕ್ತಾರ ಶಾನವಾಜ್ ಹುಸೈನ್ ಹೇಳಿದರುಭಾರತವು ತನ್ನ ವಚನ ಈಡೇರಿಸುವಲ್ಲಿ ವಿಫಲಗೊಂಡಿತು ಎಂದು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರು ಟ್ವೀಟ್ ಮಾಡಿದರು. ೩೭೦ ವಿಧಿ ರದ್ದತಿಯು ಅಕ್ರಮ ಮತ್ತು ಸಂವಿಧಾನಬಾಹಿರ ಎಂದು ಅವರು ನುಡಿದರು. ಸರ್ಕಾರದ ಕ್ರಮ ಏಕಪಕ್ಷೀಯ ಎಂಬುದಾಗಿ ಟೀಕಿಸಿದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಭಾರತ ಸರ್ಕಾರದ ಏಕಪಕ್ಷೀಯವಾದ ಆಘಾತಕಾರಿ ನಿರ್ಣಯವು ಜಮ್ಮು ಮತ್ತು ಕಾಶ್ಮೀರದ ಜನತೆ ೧೯೪೭ರಲ್ಲಿ ವಿಲೀನ ಕಾಲದಲ್ಲಿ ಇಟ್ಟ ವಿಶ್ವಾಸಕ್ಕೆ ಬಗೆದ ದ್ರೋಹಎಂದು ಖಂಡಿಸಿದರು. ಕೇಂದ್ರ ಸರ್ಕಾರದ ನಿರ್ಧಾರದ ಪರಿಣಾಮವಾಗಿ ಭಾರತ ಸ್ವತಂತ್ರವಾದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಎಲ್ಲ ಕಾನೂನುಗಳೂ ತತ್ ಕ್ಷಣದಿಂದ ರದ್ದಾಗಿವೆ. ಇನ್ನು ಮುಂದೆ ಭಾರತದ  ಇತರೆಡೆಗಳಲ್ಲಿ ಅನ್ವಯವಾಗುವ ಕಾನೂನು ಜಮ್ಮು – ಕಾಶ್ಮೀರ ಲಡಾಖ್ ಪ್ರದೇಶಕ್ಕೂ ಅನ್ವಯಿಸುತ್ತದೆ. ಯಾವುದೇ ನಾಗರಿಕ ಇಲ್ಲಿ ಜಮೀನು ಖರೀದಿಸುವ ಅವಕಾಶವನ್ನು ಪಡೆಯುತ್ತಾನೆ. ಕೇಂದ್ರ ಸರ್ಕಾರದ ಹಣಕಾಸು, ನಾಗರಿಕ ವಿಮಾನಯಾನ, ಗೃಹ, ವಿದೇಶಾಂಗ ವ್ಯವಹಾರ ಸೇರಿದಂತೆ ಎಲ್ಲ ಕಾನೂನುಗಳೂ ಅನ್ವಯವಾಗಲಿವೆ. ಈವರೆಗೆ ವರ್ಷಗಳ ಅವಧಿಯನ್ನು ಹೊಂದಿದ್ದ ಜಮ್ಮು ಮತ್ತು ಕಾಶ್ಮೀರದ ಅವಧಿ ಇನ್ನು ಮುಂದೆ ಇತರ ರಾಜ್ಯಗಳಂತೆಯೇ ಐದು ವರ್ಷಗಳಿಗೆ ಇಳಿಯಲಿದೆ. ಚುನಾವಣೆಗೆ ಮುನ್ನ ನೀಡಿದ್ದ ವಾಗ್ದಾನವನ್ನು ನರೇಂದ್ರ ಮೋದಿ ಸರ್ಕಾರ ಈಡೇರಿಸಿದಂತಾಯಿತು.
2019: ನವದೆಹಲಿ: ಏಳು ದಶಕಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ ವಿಧಿ ರದ್ದು ಪಡಿಸುವ ನಿರ್ಣಯ ಮತ್ತು ರಾಜ್ಯವನ್ನು ಲಡಾಖ್ ಹಾಗೂ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಾಗಿ ಮರುವಿಂಗಡಿಸುವ ಮಸೂದೆಗೆ ಸುಮಾರು ಗಂಟೆಗಳ ಚರ್ಚೆಯ ಬಳಿಕ ರಾಜ್ಯಸಭೆ ತನ್ನ ಅನುಮೋದನೆಯನ್ನು ನೀಡಿತು. ಮಸೂದೆಯ ಪರವಾಗಿ 125 ಮತ್ತು ವಿರುದ್ಧವಾಗಿ 61 ಮತಗಳು ಚಲಾವಣೆಯಾದವು. ರಾಜ್ಯಕ್ಕೆ  ವಿಶೇಷ ಸ್ಥಾನಮಾನ ಒದಗಿಸಿದ್ದ 370ನೇ ವಿಧಿಯನ್ನು ರದ್ದು ಪಡಿಸುವ ನಿರ್ಣಯವನ್ನು ಸದನವು ಧ್ವನಿಮತದಿಂದ ಅಂಗೀಕರಿಸಿತು. ಸದನದಲ್ಲಿ ಮಸೂದೆಯನ್ನು ಮಂಡಿಸಿದ ಗೃಹ ಸಚಿವ ಅಮಿತ್ ಶಾ ಅವರುಮಸೂದೆಗೆ ಅನುಮೋದನೆ ನೀಡಿದ್ದನ್ನು ಐತಿಹಾಸಿಕಎಂಬುದಾಗಿ ಬಣ್ಣಿಸಿದರು.  ಬಿಜೆಪಿಯ ಸ್ಪಷ್ಟ ಬಹುಮತವನ್ನು ಹೊಂದದೇ ಇರುವ ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಿದ ಅಮಿತ್ ಶಾ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳಿಂದ ತೀವ್ರ ಆಕ್ರೋಶಕ್ಕೆ ಗುರಿಯಾಗಿ, ಟೀಕಾ ಪ್ರಹಾರವನ್ನು ಎದುರಿಸಬೇಕಾಯಿತು. ಸರ್ಕಾರದ ಕ್ರಮದ ಪರಿಣಾಮಗಳ ಬಗ್ಗೆ ವಿರೋಧ ಪಕ್ಷಗಳು ತೀವ್ರ ಆತಂಕ ವ್ಯಕ್ತ ಪಡಿಸಿದವು. ಭಾರೀ ಹಿಂಸಾಚಾರ ಸಂಭವಿಸಬಹುದು ಎಂಬುದಾಗಿ ವಿರೋಧ ಪಕ್ಷಗಳು ವ್ಯಕ್ತ ಪಡಿಸಿದ ಆತಂಕವನ್ನು ತಳ್ಳಿಹಾಕಿದ ಗೃಹ ಸಚಿವರುಅಂತಹದ್ದೇನೂ ಘಟಿಸುವುದಿಲ್ಲಎಂದು ಚರ್ಚೆಗೆ ನೀಡಿದ ತಮ್ಮ ಉತ್ತರದಲ್ಲಿ ಭರವಸೆ ನೀಡಿದರು.  ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಣುತ್ತಿರುವಂತಹ ಭಯೋತ್ಪಾದನೆಗೆ ಸಂವಿಧಾನದ ೩೭೦ನೇ ವಿಧಿ ಮುಖ್ಯ ಕಾರಣ. ಅಲ್ಲಿನ ಹಾಲಿ ನೀತಿಗಳ ಪರಿಣಾಮವಾಗಿ ಏನಿಲ್ಲವೆಂದರೂ ೪೧,೦೦೦ ಜೀವಗಳು ಬಲಿಯಾಗಿವೆಎಂದು ಅವರು ನುಡಿದರು.  ಜಮ್ಮು ಮತ್ತು ಕಾಶ್ಮೀರದಲ್ಲಿನ ಬಡತನ ಮತ್ತು ಭ್ರಷ್ಟಾಚಾರಕ್ಕೆ ಭಾರತ ಒಕ್ಕೂಟದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ ೩೭೦ನೇ ವಿಧಿಯೇ ಕಾರಣ. ಚರ್ಚೆಯಲ್ಲಿ ಪಾಲ್ಗೊಂಡ ಬಹುತೇಕ ವಿರೋಧ ಪಕ್ಷಗಳ ನಾಯಕರು ತಾಂತ್ರಿಕತೆಗಳ ಬಗ್ಗೆ ಮಾತನಾಡಿದ್ದಾರೆ. ಕಾಶ್ಮೀರವು ಭಾರತ ಒಕ್ಕೂಟದ ಭಾಗವಾದಾಗ ಅಲ್ಲಿನ ಜನರಿಗೆ ಅದರಿಂದ ಏನು ಉಪಯೋಗವಾಗಿದೆ ಎಂಬುದಾಗಿ ಚಿಂತಿಸಬೇಕಾದ್ದು ಭಾರತದ ಬದ್ಧತೆಯಾಗಿದೆ. ಆದರೆ ಯಾರೂ ಬಗ್ಗೆ ಚರ್ಚಿಸಿಲ್ಲಎಂದು ಶಾ ಹೇಳಿದರು.  ಇದು ಯಾರಿಗೂ ಅನುಕೂಲ ಮಾಡಿಕೊಟ್ಟಿಲ್ಲ... ಕಾಶ್ಮೀರ ಕಣಿವೆಯ ಜನರಿಗೆ ಕೂಡಾಎಂದು ಶಾ ನುಡಿದರು. ಕೇಂದ್ರವು ಪ್ರತಿವರ್ಷವೂ ಲಕ್ಷಾಂತರ ಕೋಟಿ ರೂಪಾಯಿಗಳನ್ನು ರಾಜ್ಯಕ್ಕೆ ನೀಡಿದೆ. ಆದರೆ ಅದು ಕೃಷ್ಣರಂದ್ರದ ಹಾಗೆ ಕಾಣುತ್ತಿದೆ. ಹಣವು ಜನರಿಗೆ ತಲುಪಲಿಲ್ಲ. ಉದಾಹರಣೆಗೆ- ಸರ್ಕಾರವು ದೇಶದ ಇತರ ಕಡೆಗಳಲ್ಲಿ ತಲಾ ,೨೦೦ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ ೨೭,೦೦೦ ರೂಪಾಯಿಗಳಿಗೂ ಹೆಚ್ಚಿನ ವೆಚ್ಚ ಮಾಡಲಾಗುತ್ತಿದೆ ಎಂದು ಗೃಹ ಸಚಿವರು ನುಡಿದರು. ‘ಕಾಶ್ಮೀರ ಕಣಿವೆಯಲ್ಲಿನ ಜನರ ದಾರಿದ್ರ್ಯವು ಕಣ್ಣೀರನ್ನು ತರುತ್ತದೆಎಂದು ಅಮಿತ್ ಶಾ ಹೇಳಿದರು.

2019: ನವದೆಹಲಿ: ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ ಸಂವಿಧಾನದ ೩೭೦ನೇ ವಿಧಿಯನ್ನು ತಿರಸ್ಕರಿಸಿದ್ದರು, ಆದರೂ ಅದನ್ನು ರೂಪಿಸಿ ಸಂವಿಧಾನಕ್ಕೆ ಸೇರ್ಪಡೆ ಮಾಡಲಾಗಿತ್ತು. ಕೆಲಸವನ್ನು ಮಾಡಿದವರು ಯಾರು ಎಂಬುದು ಗೊತ್ತೆ?  ಕೆಲಸವನ್ನು ಮಾಡಲು ಆಗಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ತಮ್ಮ ಸಂಪುಟದ ಸದಸ್ಯ ಎನ್. ಗೋಪಾಲಸ್ವಾಮಿ ಅಯ್ಯಂಗಾರ್ ಅವರನ್ನು, ಡಾ. ಅಂಬೇಡ್ಕರ್ ಅವರು ನಿರಾಕರಿಸಿದ ಬಳಿಕ ನಿಯೋಜಿಸಿದ್ದರು. ಅಂಬೇಡ್ಕರ್ ಅವರು ನಿರಾಕರಿಸಿದ್ದ ವಿಚಾರವನ್ನು ಆಗ ಇತರ ಹಲವರು ಕೂಡಾ ತಿರಸ್ಕರಿಸಿದ್ದರೂ, ಕೆಲವು ಇತಿಹಾಸಕಾರರು ಮತ್ತು ತಜ್ಞರು ಅದನ್ನು ಬೆಂಬಲಿಸಿದ್ದರು.  ೧೯೪೯ರಲ್ಲಿ, ಆಗಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಕಾಶ್ಮೀರಿ ನಾಯಕ ಶೇಖ್ ಅಬ್ದುಲ್ಲ ಅವರಿಗೆ ಕಾಶ್ಮೀರಕ್ಕೆ  ಸೂಕ್ತವಾಗುವಂತಹ ಕರಡು ರೂಪಿಸುವ ಬಗ್ಗೆ ಭಾರತದ ಮೊದಲ ಕಾನೂನು ಸಚಿವ ಮತ್ತು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಳಿ ಸಮಾಲೋಚಿಸುವಂತೆ ನಿರ್ದೇಶನ ನೀಡಿದ್ದರು. ಆದರೆ ಡಾ. ಅಂಬೇಡ್ಕರ್ ಅವರು ತಾವು ಇದಕ್ಕೆ ಖಡಾ ಖಂಡಿತ ವಿರೋಧಿ ಎಂಬುದಾಗಿ ಹೇಳಿ ೩೭೦ನೇ ವಿಧಿಯ ಕರಡನ್ನು ತಿರಸ್ಕರಿಸಿದ್ದರು ಎಂದುಲಾ ಕಾರ್ನರ್ಬ್ಲಾಗ್ ಬರೆಯಿತು. ತಾತ್ಕಾಲಿಕ ವಿಧಿಯಾದ ಸಂವಿಧಾನದ ೩೭೦ನೇ ವಿಧಿಯು ಜಮ್ಮು ಮತ್ತು ಕಾಶ್ಮೀರಕ್ಕೆ ತನ್ನದೇ ಸಂವಿಧಾನ, ಪ್ರತ್ಯೇಕ ಧ್ವಜ ಮತ್ತು ರಕ್ಷಣೆ, ವಿದೇಶಾಂಗ ವ್ಯವಹಾರಗಳು ಹಾಗೂ ಸಂಪರ್ಕಗಳು ಸೇರಿದಂತೆ ಎಲ್ಲ ವಿಷಯಗಳಲ್ಲಿ ಸ್ವಾತಂತ್ರ್ಯವನ್ನು ನೀಡಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸೋಮವಾರ ವಿಧಿಯನ್ನು ರದ್ದು ಪಡಿಸಿತು. ಅಂತರ್ಜಾಲ ಬರಹಗಳ ಪ್ರಕಾರ, ಅಂಬೇಡ್ಕರ್ ಅವರುಸಂಸತ್ತು ರೂಪಿಸುವ ಕಾನೂನುಗಳನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯವೊಂದಕ್ಕೆ ಪೂರ್ಣವಾಗಿ ಜಾರಿಗೊಳಿಸದೆ, ಸೀಮಿತವಾಗಿ ಅನ್ವಯಿಸುವುದರಿಂದ ಸಮಸ್ಯೆಗಳು ಇತ್ಯರ್ಥವಾಗುವ ಬದಲು ಹಲವಾರು ಸಮಸ್ಯೆಗಳು ಉದ್ಭವವಾಗುತ್ತವೆಎಂದು ಅಭಿಪ್ರಾಯ ಪಟ್ಟಿದ್ದರು.  ನೀವು ಭಾರತವು ನಿಮ್ಮ ಗಡಿಯನ್ನು ರಕ್ಷಿಸಬೇಕು ಎಂದು ಬಯಸುತ್ತೀರಿ. ಭಾರತವು ನಿಮ್ಮ ಪ್ರದೇಶಗಳಲ್ಲಿ ರಸ್ತೆಗಳನ್ನು ನಿರ್ಮಿಸಬೇಕು, ಭಾರತವು ನಿಮಗೆ ಆಹಾರ, ಧಾನ್ಯಗಳನ್ನು ಒದಗಿಸಬೇಕು ಮತ್ತು ಕಾಶ್ಮೀರವು ಭಾರತಕ್ಕೆ ಸಮಾನವಾದ ಸ್ಥಾನಮಾನ ಪಡೆಯಬೇಕು. ಆದರೆ ಭಾರತ ಸರ್ಕಾರಕ್ಕೆ ಸೀಮಿತ ಅಧಿಕಾರಗಳು ಇರಬೇಕು ಮತ್ತು ಭಾರತೀಯ ಜನರಿಗೆ ಕಾಶ್ಮೀರದಲ್ಲಿ  ಯಾವುದೇ ಹಕ್ಕು ಇರಬಾರದು. ನಿಮ್ಮ ಪ್ರಸ್ತಾವಕ್ಕೆ ಒಪ್ಪಿಗೆ ನೀಡುವುದು ಎಂದರೆ ಭಾರತದ ಹಿತಾಸಕ್ತಿಗಳಿಗೆ ದ್ರೋಹ ಬಗೆಯುವುದೆಂದೇ ಅರ್ಥ. ಭಾರತದ ಕಾನೂನು ಸಚಿವರಾಗಿ ನಾನು ಎಂದಿಗೂ ಇದನ್ನು ಮಾಡಲಾರೆಎಂಬುದಾಗಿ ಡಾ. ಅಂಬೇಡ್ಕರ್ ಹೇಳಿದ್ದರು ಎಂಬುದಾಗಿ ಅಂತರ್ಜಾಲ ಬರಹ ಹೇಳಿತು. ಅಂಬೇಡ್ಕರ್ ಅವರು ತಿರಸ್ಕರಿಸಿದ ಬಳಿಕ ಶೇಖ್ ಅಬ್ದುಲ್ಲ ಅವರು ನೆಹರೂ ಅವರನ್ನು ಸಂಪರ್ಕಿಸಿದರು ಮತ್ತು ಪ್ರಧಾನಿಯ ನಿರ್ದೇಶನದಂತೆ ಸಂವಿಧಾನ ರಚನಾ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದ ಗೋಪಾಲಸ್ವಾಮಿ ಅಯ್ಯಂಗಾರ್ ಅವರನ್ನು ಸಂಪರ್ಕಿಸಿದರು. ಆಗ ರಾಜ್ಯಸಭೆಯ ನಾಯಕ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಹರಿಸಿಂಗ್ ಅವರಿಗೆ ಮಾಜಿ ದಿವಾನರಾಗಿದ್ದ ಅಯ್ಯಂಗಾರ್ ಅವರು ಬಳಿಕ ೩೭೦ನೇ ವಿಧಿಯನ್ನು ರಚಿಸಿದರು.  ಆದರೆ ಅದರ ಮಾರ್ಗ ಸುರಳೀತವೇನೂ ಆಗಿರಲಿಲ್ಲ. ೧೯೪೯ರ ಅಕ್ಟೋಬರಿನಲ್ಲಿ ಅಬ್ದುಲ್ಲ ಮತ್ತು ಅಯ್ಯಂಗಾರ್ ಅವರ ಮಧ್ಯೆ ವಿಧಿಯ ಕೆಲವು ಅಂಶಗಳ ಬಗ್ಗೆ ಬಿಸಿ ಬಿಸಿ ಮಾತುಕತೆಗಳಾಗಿದ್ದವು. ’ ಬೆಳಗ್ಗೆ ನಡೆದ ನಮ್ಮ ಮಾತುಕತೆಯು, ನಾನು ನಿಮಗೆ ತಿಳಿಸಿದಂತೆ, ಶ್ರಿನಗರದಿಂದ ನಿಮ್ಮ ಪತ್ರ ಲಭಿಸಿದಂದಿನಿಂದ ನನಗಿದ್ದ ಚಿಂತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಪಂಡಿತ್ ಜಿಯವರು ಅಮೆರಿಕಕ್ಕೆ ತೆರಳಿದ ಬಳಿಕ ಸೃಷ್ಟಿಯಾಗಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಜವಾಬ್ದಾರಿಯು ನನಗೆ ಹೊರೆಯಾಗಿರುವಂತೆ ಅನ್ನಿಸುತ್ತಿದೆಎಂದು ಅಯ್ಯಂಗಾರ್ ಅವರು ಅಬ್ದುಲ್ಲ ಅವರಿಗೆ ಅಕ್ಟೋಬರ್ ೧೫ರಂದು ಪತ್ರ ಬರೆದಿದ್ದರು. ಸಂವಿಧಾನ ಸಭೆಗೆ ರಾಜೀನಾಮೆ ನೀಡುವುದಾಗಿಯೂ ಅವರು ಬೆದರಿಕೆ ಹಾಕಿದ್ದರು.  ಪತ್ರದಲ್ಲಿ ತಿಳಿಸಿದ್ದಂತೆ ಸಮಯದಲ್ಲಿ ನೆಹರೂ ಅವರು ಅಮೆರಿಕದಲ್ಲಿ ಇದ್ದರು. ಅಮೆರಿಕ ಕಾಂಗ್ರೆಸ್ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರುಸ್ವಾತಂತ್ರ್ಯವು ಭೀತಿಗೆ ಒಳಗಾದ, ನ್ಯಾಯವು ಬೆದರಿಕೆಗೆ ಒಳಗಾದ ಅಥವಾ ದಾಳಿ ನಡೆಯುವ ಸ್ಥಳದಲ್ಲಿ ನಾವುತಟಸ್ಥರಾಗಿ ಇರಲು ಸಾಧ್ಯವಿಲ್ಲಎಂದು ಹೇಳಿದ್ದರು.   ನೆಹರೂ ಅವರು ವಿದೇಶದಲ್ಲಿ ಇದ್ದುದರಿಂದ ಅಯ್ಯಂಗಾರ್ ಅವರು ನೆರವಿಗಾಗಿ ವಲ್ಲಭಭಾಯಿ ಪಟೇಲ್ ಅವರ ಬಳಿಗೆ ತೆರಳಿದರು. ಆದರೆ ಸರ್ದಾರ್ ಮತ್ತು ಅಬ್ದುಲ್ಲ ನಡುವಣ ಬಾಂಧವ್ಯ ಹಳಸಿತ್ತು. ’ಶೇಖ್ ಸಾಹೇಬರು ಬಯಸಿದಾಗ ಹಿಂದೆ ಸರಿಯುತ್ತಾರೆ, ಜನರ ಬಗೆಗಿನ ತಮ್ಮ ಕರ್ತವ್ಯಕ್ಕಾಗಿ ನಮ್ಮೊಂದಿಗೆ ಯಾವಾಗಲೂ ಘರ್ಷಿಸುತ್ತಾರೆಎಂದು ಪಟೇಲ್ ಅವರು ಅಯ್ಯಂಗಾರ್ ಅವರಿಗೆ ಹೇಳಿದ್ದರು.  ನೆಹರೂ ಅವರು ಹಿಂತಿರುಗಿದ ಬಳಿಕ, ಪಟೇಲರು ಅವರಿಗೆ ಪತ್ರ ಬರೆದರು: ’ಭಾರೀ ಮಾತುಕತೆಗಳ ಬಳಿಕ ಕಾಂಗ್ರೆಸ್ ಪಕ್ಷವನ್ನು ಅಂಗೀಕರಿಸುವಂತೆ ಒಪ್ಪಿಸಲು ನನಗೆ ಸಾಧ್ಯವಾಯಿತು.  ಅಯ್ಯಂಗಾರ್ ಅವರು ೧೮೮೨ರ ಮಾರ್ಚ್ ೩೧ರಂದು ಈಗ ತಮಿಳುನಾಡಿನಲ್ಲಿ ಇರುವ ತಂಜಾವೂರಿನಲ್ಲಿ ಜನಿಸಿದ್ದರು. ವೆಸ್ಲೆ ಸ್ಕೂಲ್ನಲ್ಲಿ ಅಧ್ಯಯನ ಮಾಡಿದ ಬಳಿಕ ಆಗಿನ ಮದ್ರಾಸ್ ರಾಜ್ಯದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿದ್ದರು. ೧೯೦೫ರಲ್ಲಿ ಅವರು ಮದ್ರಾಸ್ ನಾಗರಿಕ ಸೇವೆಯನ್ನು ಸೇರಿ, ಡೆಪ್ಯುಟಿ ಕಲೆಕ್ಟರ್ ಮತ್ತು ಕಂದಾಯ ಮಂಡಳಿ ಸದಸ್ಯ ಸೇರಿದಂತೆ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಅಯ್ಯಂಗಾರ್ ಅವರು ೧೯೩೭-೧೯೪೩ರ ಅವಧಿಯಲ್ಲಿ ಕಾಶ್ಮೀರದ ಪ್ರಧಾನಿಯಾಗಿದ್ದರು. ೧೯೪೩-೧೯೪೭ರ ಅವಧಿಯಲ್ಲಿ ಅವರು ಕೌನ್ಸಿಲ್ ಆಫ್ ಸ್ಟೇಟ್ಸ್ ಸದಸ್ಯರಾಗಿದ್ದರು. ಅಲ್ಲದೆ, ಸಂವಿಧಾನ ಸಭೆ ಮತ್ತು ೧೩ ಸದಸ್ಯರ ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದರು.  ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಭಾರತವನ್ನು ಪ್ರತಿನಿಧಿಸಿದ ನಿಯೋಗದ ಮುಖ್ಯಸ್ಥರಾಗಿಯೂ ಅವರು ಸೇವೆ ಸಲ್ಲಿಸಿದ್ದರು.  ಅಯ್ಯಂಗಾರ್ ಅವರನ್ನು ೧೯೩೭ರಲ್ಲಿದಿವಾನ್ ಬಹಾದುರ್ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಬ್ರಿಟಿಶ್ ವೈಸ್ ರಾಯ್ ಅವರು ನೀಡುತ್ತಿದ್ದ ಅತ್ಯುನ್ನತ ಪ್ರಶಸ್ತಿ ಅದಾಗಿತ್ತು. ೧೯೪೧ರಲ್ಲಿ ಅವರು ಕಿಂಗ್ ಜಾರ್ಜ್ ಅವರಿಂದ ನೈಟ್ ಹುಡ್ ಕೂಡಾ ಪಡೆದಿದ್ದರು. ಅಯ್ಯಂಗಾರ್ ಅವರು ೧೯೫೩ರಲ್ಲಿ ಮದ್ರಾಸಿನಲ್ಲಿ ನಿಧನರಾಗಿದ್ದರು.


No comments:

Post a Comment