ನಾನು ಮೆಚ್ಚಿದ ವಾಟ್ಸಪ್

Thursday, August 1, 2019

ಇಂದಿನ ಇತಿಹಾಸ History Today ಆಗಸ್ಟ್ 01

2019: ನವದೆಹಲಿವಿವಾದಾತ್ಮಕ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥ ಪಡಿಸುವ ಯತ್ನವಾಗಿ ಸುಪ್ರೀಂಕೋರ್ಟ್ ರಚಿಸಿದ್ದ ಅಯೋಧ್ಯಾ ಸಂಧಾನ ಸಮಿತಿಯ ತನ್ನ ಬಹು ನಿರೀಕ್ಷಿತ ವರದಿಯನ್ನು ಮೊಹರು ಮಾಡಲಾದ ಲಕೋಟೆಯಲ್ಲಿಟ್ಟು ರಾಷ್ಟ್ರದ ಅತ್ಯುನ್ನತ ನ್ಯಾಯಾಲಯಕ್ಕೆ ಸಲ್ಲಿಸಿತುಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನಪೀಠವು  2019 ಜುಲೈ 2ರ ಶುಕ್ರವಾರ ಮಧ್ಯಾಹ್ನ  ಗಂಟೆಗೆ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದ್ದು ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಿದೆಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಫ್ಎಂಐ ಕಲೀಫುಲ್ಲಾ ನೇತ್ವತ್ವದ ತ್ರಿಸದಸ್ಯ ಸಮಿತಿಗೆ  ಮುನ್ನ ಆಗಸ್ಟ್ ೧೫ರ ಗಡುವಿನ ಒಳಗೆ ತನ್ನ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು.  ಏನಿದ್ದರೂಸಮಿತಿಯ ಸಂಧಾನ ಪ್ರಕ್ರಿಯೆಯಲ್ಲಿ ಯಾವುದೇ ಪ್ರಗತಿಯಾಗುತ್ತಿಲ್ಲ ಎಂಬುದಾಗಿ ಮೂಲ ಅರ್ಜಿದಾರರ ಪೈಕಿ ಒಬ್ಬರು ತಿಳಿಸಿದ ಬಳಿಕ ’ಸ್ಥಿತಿಗತಿ ವರದಿಯನ್ನು ಬೇಗನೇ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸಂಧಾನ ಸಮಿತಿಗೆ ನಿರ್ದೇಶಿಸಿತ್ತು ವರ್ಷ ಮಾರ್ಚ್ ತಿಂಗಳಲ್ಲಿ ಸುಪ್ರೀಂಕೋರ್ಟಿನ ಐವರು ನ್ಯಾಯಮೂರ್ತಿಗಳುಸಮುದಾಯಗಳ ನಡುವಣ  ಬಾಂಧವ್ಯಗಳನ್ನು ಸುಧಾರಿಸುವ ಪ್ರಯತ್ನವಾಗಿ ಸಂಧಾನ ಸಾಧ್ಯತೆಯನ್ನು ಅನ್ವೇಷಿಸಲು ನಿರ್ಧರಿಸಿದ್ದರುಉತ್ತರ ಪ್ರದೇಶ ಸರ್ಕಾರ ಮತ್ತು ಬಹುತೇಕ ಹಿಂದೂ ಕಕ್ಷಿದಾರರು  ಉಪಕ್ರಮವನ್ನು ವಿರೋಧಿಸಿದ್ದರುಆದರೆ ಮುಸ್ಲಿಮ್ ಕಡೆಯಿಂದ ಅದಕ್ಕೆ ಸ್ವಾಗತ ಲಭಿಸಿತ್ತುವಿವಾದಿತ .೭೭ ಎಕರೆ ನಿವೇಶನವನ್ನು ನಿರ್ಮೋಹಿ ಅಖಾರಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಮತ್ತು ರಾಮಲಲ್ಲಾ ಮಧ್ಯೆ ಮೂರು ಸಮಾನ ಭಾಗವಾಗಿ ಮಾಡಿ ಹಂಚಬೇಕು ಎಂಬುದಾಗಿ ೨೦೧೦ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಪೀಠವು ನಡೆಸುತ್ತಿದೆ  ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸುಪ್ರೀಂಕೋರ್ಟ್ ಪೀಠವು ಅಯೋಧ್ಯಾ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳಲಿದ್ದು ತನ್ನ ಮುಂದಿನ ನಡೆಯನ್ನು ನಿರ್ಧರಿಸಲಿದೆನ್ಯಾಯಮೂರ್ತಿಗಳಾದ ಎಸ್  ಬೊಬ್ಡೆಡಿವೈ ಚಂದ್ರಚೂಡ್ಅಶೋಕ ಭೂಷಣ್ ಮತ್ತು ಅಬ್ದುಲ್ ನಜೀರ್ ಪಂಚ ಸದಸ್ಯ ಸಂವಿಧಾನ ಪೀಠದ ಇತರ ಸದಸ್ಯರಾಗಿದ್ದಾರೆಸಂಧಾನ ಪ್ರಕ್ರಿಯೆವಿಫಲಗೊಂಡಲ್ಲಿಸಂವಿಧಾನ ಪೀಠದ ಮುಂದೆ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ತಾನು ಪುನಾರಂಭ ಮಾಡುವುದಾಗಿ ನ್ಯಾಯಮೂರ್ತಿಗಳು  ಹಿಂದೆ ಸುಳಿವು ನೀಡಿದ್ದರುಪ್ರಕರಣದ ವಿಚಾರಣೆಯನ್ನು ಪ್ರತಿದಿನವೂ ನಡೆಸಲಾಗುವುದು ಎಂದೂ ಪೀಠ ತಿಳಿಸಿತ್ತುಅಯೋಧ್ಯಾ ಪ್ರಕರಣದ ಹಿಂದು ಮತ್ತು ಮುಸ್ಲಿಮ್ ಕಕ್ಷಿದಾರರ ಜೊತೆ ಮಾರ್ಚ್ ೧೩ರಂದು ಸಂಧಾನ ಪ್ರಕ್ರಿಯೆ ಆರಂಭಿಸಿದ್ದ ಸಂಧಾನ ಸಮಿತಿಯು ಅಂತಿಮ ಸುತ್ತಿನ ಮಾತುಕತೆಯನ್ನು ನವದೆಹಲಿಯಲ್ಲಿ ಜುಲೈ ೨೯ರಿಂದ ಮೂರು ದಿನಗಳ ಕಾಲ ನಡೆಸಿತ್ತು.  ‘ಲಕ್ನೋದಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮಗಳು ಇದ್ದ ಕಾರಣ ದೆಹಲಿಯಲ್ಲಿ ನಡೆದ ಕೊನೆಯ ಸುತ್ತಿನ ಸಂಧಾನ ಮಾತುಕತೆಗಳಲ್ಲಿ ಪಾಲ್ಗೊಳ್ಳಲು ನನಗೆ ಸಾಧ್ಯವಾಗಿಲ್ಲಆದರೆ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ ಎಂಬುದು ನನಗೆ ತಿಳಿದು ಬಂದಿದೆಅಂತಿಮ ಸುತ್ತಿನ ಮಾತುಕತೆಯಲ್ಲಿ ಆರು ಮಂದಿ ಮುಸ್ಲಿಮ್ ಕಕ್ಷಿದಾರರ ಪೈಕಿ ನಾಲ್ವರು ಪ್ರತಿನಿಧಿಗಳು ಪಾಲ್ಗೊಂಡಿದ್ದರು’ ಎಂದು ಬಾಬರಿ ಮಸೀದಿ ಆಕ್ಷನ್ ಕಮಿಟಿಯ ವಕೀಲ ಜಾಫರ್ಯಾಬ್ ಜಿಲಾನಿ ಹೇಳಿದರುಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಂಧಾನ ಮಾತುಕತೆಗಳ ಫಲಶ್ರುತಿ ಬಗ್ಗೆ ಮಾತನಾಡಲು ಅವರು ನಿರಾಕರಿಸಿದರು.  ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಕಲೀಫುಲ್ಲ ಹೊರತಾಗಿವಕೀಲರಾದ ಶ್ರೀರಾಮ್ ಪಂಚು ಮತ್ತು ಆರ್ಟ್ ಆಫ್ ಲಿವಿಂಗ್ ಸ್ಥಾಪಕ ಹಾಗೂ ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ ಅವರು ಸಮಿತಿಯ ಸದಸ್ಯರಾಗಿದ್ದರುಸಮಿತಿಯ ಜುಲೈ ೧೩ರಂದು ತನ್ನ ಮಧ್ಯಂತರ ವರದಿಯನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿತ್ತುಆದರೆ ಸುಪ್ರೀಂಕೋರ್ಟ್ ಸಂಧಾನ ಸಮಿತಿಯ ಕಲಾಪಗಳು ರಹಸ್ಯವಾಗಿರಬೇಕು ಆದೇಶ ನೀಡಿತ್ತುಮಾರ್ಚ್ ೮ರಂದು ರಚನೆಯಾದ ಸಮಿತಿಗೆ ಮೊದಲು ನ್ಯಾಯಾಲಯ  ವಾರಗಳ ಕಾಲಾವಕಾಶ ನೀಡಿತ್ತುಮೇ ೭ರಂದು ಸಮಿತಿಯ ತನ್ನ ಕಲಾಪ ಪೂರ್ಣಗೊಳಿಸಲು ಕಾಲಾವಕಾಶ ವಿಸ್ತರಿಸುವಂತೆ ಮನವಿ ಮಾಡಿತ್ತು ಪೀಠವು ಆಗಸ್ಟ್ ೧೫ರವರೆಗೆ ಕಾಲಾವಕಾಶ ನೀಡಿತ್ತುಆದರೆ ಬಳಿಕ  ಗಡುವನ್ನು ಬದಲಾಯಿಸಿ ಆಗಸ್ಟ್ ೧ರ ಗಡುವನ್ನು ನಿಗದಿ ಪಡಿಸಿತ್ತು.



2019: ನವದೆಹಲಿ ಅಂತಾರಾಷ್ಟ್ರೀಯ ನ್ಯಾಯಾಲಯವು (ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ಐಸಿಜೆಭಾರತದ ಪ್ರಜೆ ಕುಲಭೂಷಣ್ ಜಾಧವ್ ಅವರಿಗೆ ದೂತಾವಾಸ ಸಂಪರ್ಕವನ್ನು ಒದಗಿಸುವಂತೆ ಪಾಕಿಸ್ತಾನಕ್ಕೆ ಆಜ್ಞಾಪಿಸಿದ ೧೦ ದಿನಗಳ ಬಳಿಕ ಪಾಕಿಸ್ತಾನವು ಜಾಧವ್ ಅವರಿಗೆ ರಾಯಭಾರ ಕಚೇರಿ ಸಂಪರ್ಕ ಒದಗಿಸಲು ಈದಿನ ಮುಂದೆ ಬಂದಿತು.  ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ ಕುಮಾರ್ ಅವರು ಭಾರತಕ್ಕೆ ಪಾಕಿಸ್ತಾನದ ಪ್ರಸ್ತಾಪವು ತಲುಪಿದೆ ಎಂದು ದೃಢಪಡಿಸಿದರು.  ಆದರೆ ಭಾರತ ಇನ್ನೂ ತನ್ನ ಪ್ರತಿಕ್ರಿಯೆಯನ್ನು ನೀಡಿಲ್ಲ.  ‘ನಾವು ಐಸಿಜೆ ತೀರ್ಪಿನ ಬೆಳಕಿನಲ್ಲಿ ಪಾಕಿಸ್ತಾನದ ಪ್ರಸ್ತಾಪವನ್ನು ಪರಿಶೀಲಿಸುತ್ತಿದ್ದೇವೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜತಾಂತ್ರಿಕ ಮಾರ್ಗದ ಮೂಲಕ ನಾವು ಪಾಕಿಸ್ತಾನದ ಜೊತೆಗೆ ಸಂಪರ್ಕ ಇಟ್ಟುಕೊಂಡಿದೇವೆ’ ಎಂದು ರವೀಶ ಕುಮಾರ್ ಅವರು ತಮ್ಮ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.   ‘ವಿಧಿ ವಿಧಾನಗಳ ಬಗ್ಗೆ ಚರ್ಚಿಸಲು ಇದು ಸೂಕ್ತವಾದ ವೇದಿಕೆ ಅಲ್ಲ’ ಎಂದು ಅವರು ನುಡಿದರು.  ೪೯ರ ಹರೆಯದ ಭಾರತದ ನಿವೃತ್ತ ನೌಕಾ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನಿ ಅಧಿಕಾರಿಗಳು ೨೦೧೬ರ ಮಾರ್ಚ್ ತಿಂಗಳಲ್ಲಿ ಬಂಧಿಸಿದ್ದುಸೇನಾ ನ್ಯಾಯಾಲಯವು  ೨೦೧೭ರ ಏಪ್ರಿಲ್ ತಿಂಗಳಲ್ಲಿ ಅವರಿಗೆ ’ಬೇಹುಗಾರಿಕೆ ಮತ್ತು ಭಯೋತ್ಪಾದನೆ’ ಆರೋಪದಲ್ಲಿ ಮರಣದಂಡನೆ ವಿಧಿಸಿತ್ತುಸೇನಾ ನ್ಯಾಯಾಲಯವು ರಹಸ್ಯ ವಿಚಾರಣೆ ಬಳಿಕ ಅವರಿಗೆ ಗಲ್ಲು ಶಿಕ್ಷೆಯನ್ನು  ಪ್ರಕಟಿಸಿತ್ತುಜಾಧವ್ ಅವರಿಗೆ ಭಾರತೀಯ ದೂತಾವಾಸದ ಜೊತೆಗೆ ಸಂಪರ್ಕ ಸಾಧಿಸುವ ಹಕ್ಕು ಇದೆ ಎಂಬುದನ್ನು ತಿಳಿಸಲು ವಿಫಲಗೊಂಡಿರುವ ಪಾಕಿಸ್ತಾನವು ದೂತಾವಾಸ ಬಾಂಧವ್ಯಗಳಿಗೆ ಸಂಬಂಧಿಸಿದಂತೆ ೧೯೬೩ರ ವಿಯೆನ್ನಾ ಸಮಾವೇಶದ ನಿರ್ಣಯಗಳನ್ನು  ಉಲ್ಲಂಘಿಸಿದೆ ಎಂದು ೨೦೧೯ರ ಜುಲೈ ೧೭ರಂದು ನೆದರ್ ಲ್ಯಾಂಡ್ಸ್ ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ತಿಳಿಸಿತ್ತು.  ತೀರ್ಪಿನ ಬಳಿಕ ಪಾಕಿಸ್ತಾನವು ತಾನು ಅದನ್ನು ಪಾಲಿಸುವುದಾಗಿ ಭರವಸೆ ನೀಡಿಮರಣದಂಡನೆ ಜಾರಿಯನ್ನು ತಡೆ ಹಿಡಿದಿತ್ತುಐಸಿಜೆ ತೀರ್ಪು ಬಂದ ಒಂದು ದಿನದ ಬಳಿಕ ಪಾಕಿಸ್ತಾನವು  ವಿಯೆನ್ನಾ ಸಮಾವೇಶದ ೩೬ವಿಧಿಯ (ಬಿಪ್ಯಾರಾದ ಅಡಿಯಲ್ಲಿ ಇರುವ ಹಕ್ಕುಗಳ ಬಗ್ಗೆ ಜಾಧವ್ ಅವರಿಗೆ ತಿಳಿಸಿತ್ತುಜಾಧವ್ ಅವರಿಗೆ ದೂತಾವಾಸ ಸಂಪರ್ಕ ಕಲ್ಪಿಸುವ ನಿಟ್ಟಿನ ವಿಧಿವಿಧಾನಗಳನ್ನು ರೂಪಿಸಲಾಗುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿತ್ತು.   ‘ಇಸ್ಲಾಮಾಬಾದಿನ ಭಾರತೀಯ ಹೈಕಮೀಷನ್ಗೆ ಔಪಚಾರಿಕವಾಗಿ ತಿಳಿಸಿದ ಬಳಿಕ ಪಾಕಿಸ್ತಾನವು ಭಾರತದ ಪ್ರತಿಕ್ರಿಯೆಗಾಗಿ ಕಾಯುತ್ತಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ತಮ್ಮ ಸಾಪ್ತಾಹಿಕ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.  ಭಾರತವು  ಹಿಂದೆ ೨೦೧೭ರ ಏಪ್ರಿಲ್ನಲ್ಲಿ ಜಾಧವ್ ಅವರಿಗೆ ದೂತಾವಾಸ ಸಂಪರ್ಕ ಒದಗಿಸುವಂತೆ ಪಾಕಿಸ್ತಾನಕ್ಕೆ ಮನವಿ ಮಾಡಿತ್ತು.  ಇದಕ್ಕೂ ಮುನ್ನ ಭಾರತವು ಇದೇ ಮಾದರಿಯ ೧೬ ಮನವಿಗಳನ್ನು ಸಲ್ಲಿಸಿತ್ತುಇದೆಲ್ಲಕ್ಕೂ ಪಾಕಿಸ್ತಾನ ಪ್ರತಿಕ್ರಿಯಿಸಲು ವಿಫಲವಾದ ಬಳಿಕ ೨೦೧೭ರ ಮೇ ತಿಂಗಳಲ್ಲಿ ಭಾರತವು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತುಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ದೂತಾವಾಸ ಸಂಪರ್ಕ ಪಡೆಯಲು ಅವಕಾಶ ನಿರಾಕರಿಸುವ ಮೂಲಕ ಪಾಕಿಸ್ತಾನವು ವಿಯೆನ್ನಾ ಸಮಾವೇಶದ ನಿರ್ಣಯವನ್ನು ಉಲ್ಲಂಘಿಸಿದೆ ಎಂದು ಹೇಳಿದ್ದ ಐಸಿಜೆ ’ಸೇನಾ ನ್ಯಾಯಾಲಯ ಅಥವಾ ಇಸ್ಲಾಮಾಬಾದಿನ ಆಯ್ಕೆಯ ಸೂಕ್ತ ವೇದಿಕೆಯಲ್ಲಿ ಮರಣದಂಡನೆಯನ್ನು ಪುನರ್ ಪರಿಶೀಲನೆ ಮಾಡುವಂತೆ ’ ಪಾಕಿಸ್ತಾನಕ್ಕೆ ನಿರ್ದೇಶನ ನೀಡಿತ್ತು.   ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪು ತನ್ನ ೪೯ರ ಹರೆಯದ ಮಾಜಿ ನೌಕಾ ಅಧಿಕಾರಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಅವರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು  ತಡೆಹಿಡಿಯಲು ನಡೆಸಿದ ಭಾರತದ ಯತ್ನಗಳಿಗೆ ಲಭಿಸಿದ ಮಹತ್ವದ ವಿಜಯ ಎಂದು ಪರಿಗಣಿಸಲ್ಪಟ್ಟಿತ್ತುಮರಣದಂಡನೆಯ ಮರುಪರಿಶೀಲನೆಯು ಭೇಷರತ್ ಆಗಿರಬೇಕು ಮತ್ತು  ಫಲಿತಾಂಶ ನೀಡಬೇಕು ನಿಟ್ಟಿನಲ್ಲಿ ಸೂಕ್ತ ಶಾಸನ ರಚನೆ ಸೇರಿದಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಅಂತಾರಾಷ್ಟ್ರೀಯ ನ್ಯಾಯಾಲಯ ಹೇಳಿತ್ತು.  ೨೦೧೭ರ ಮೇ ತಿಂಗಳಲ್ಲಿ ಲ್ಲಿ ಭಾರತ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಜಾಧವ್ ಅವರ ಮರಣದಂಡನೆಗೆ ಐಸಿಜೆ ತಡೆಯಾಜ್ಞೆ ನೀಡಿತ್ತುಜಾಧವ್ ಅವರನ್ನು ಪಾಕಿಸ್ತಾನದ ಭದ್ರತಾ ಸಂಸ್ಥೆಗಳು ೨೦೧೬ರ ಮಾಚ್ ೩ರಂದು ಬಲೂಚಿಸ್ಥಾನದಲ್ಲಿ ಬಂಧಿಸಿಅವರ ವಿರುದ್ಧ ಬೇಹುಗಾರಕೆ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ಶಾಮೀಲಾದ ಆರೋಪ ಹೊರಿಸಿದ್ದವು೨೦೧೭ರ ಏಪ್ರಿಲ್ನಲ್ಲಿ ಸೇನಾ ನ್ಯಾಯಾಲಯವೊಂದು ಜಾಧವ್ ಅವರಿಗೆ ಮರಣದಂಡನೆ ವಿಧಿಸಿದೆ ಎಂದು ಪಾಕಿಸ್ತಾನ ಪ್ರಕಟಿಸಿತ್ತುಭಾರತವು ಪಾಕಿಸ್ತಾನದ ಆರೋಪಗಳನ್ನು ನಿರಾಕರಿಸಿದ್ದಲ್ಲದೆನಿವೃತ್ತಿಯ ಬಳಿಕ ತಾವು ನಡೆಸುತ್ತಿದ್ದ ಉದ್ಯಮದ ನಿಮಿತ್ತ ಇರಾನಿನ ಛಬಹಾರ್ ಬಂದರಿಗೆ ಭೇಟಿ ನೀಡಿದ್ದ ವೇಳೆಯಲ್ಲಿ ಪಾಕಿಸ್ತಾನಿಗಳು ಅವರನ್ನು ಅಪಹರಿಸಿದ್ದರು ಎಂದು ಹೇಳಿತ್ತು.

2019: ನವದೆಹಲಿ: ರಾಯ್ ಬರೇಲಿ ಅಪಘಾತ ಪ್ರಕರಣ ಸೇರಿದಂತೆ  ವಿವಿಧ ಪ್ರಕರಣಗಳಲ್ಲಿ ಉನ್ನಾವೋ ಅತ್ಯಾಚಾರ ಸಂತ್ರಸ್ಥೆಗೆ ೨೫ ಲಕ್ಷ ರೂ ಪರಿಹಾರಸಿಆರ್ಪಿಎಫ್ ಭದ್ರತೆ ಒದಗಿಸಲುಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಐದೂ ಪ್ರಕರಣಗಳಲ್ಲಿ ಒಗ್ಗೂಡಿಸಿ ದೆಹಲಿ ಸಿಬಿಐ ಕೋರ್ಟಿಗೆ ವರ್ಗಾಯಿಸಲು ಮತ್ತು ಪ್ರಕರಣಗಳ ತನಿಖೆಯನ್ನು ೪೫ ದಿನಗಳ ಗಡುವಿನ ಒಳಗೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಆಜ್ಞಾಪಿಸಿತು.  ದೆಹಲಿಯ ತೀಸ್ ಹಜಾರಿ (ಪಶ್ಚಿಮಜಿಲ್ಲಾ ನ್ಯಾಯಾಧೀಶ ಧರ್ಮೇಶ ಶರ್ಮ ಅವರನ್ನು ಉನ್ನಾವೋ ಅತ್ಯಾಚಾರ ಸಂಬಂಧಿತ ಪ್ರಕರಣಗಳ ವಿಚಾರಣೆಗೆ ಸುಪ್ರೀಂ ಪೀಠ ನೇಮಿಸಿತು. ಈ ಮಧ್ಯೆ ವಿಪಕ್ಷಗಳ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷವು ಉನ್ನಾವೋ ಅತ್ಯಾಚಾರ ಆರೋಪಕ್ಕೆ ಗುರಿಯಾಗಿರುವ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ಪಕ್ಷದಿಂದ ಉಚ್ಚಾಟಿಸಿತುಅಪಘಾತ ಪ್ರಕರಣದ ತನಿಖೆಯನ್ನು ಬುಧವಾರದಿಂದ ಏಳು ದಿನಗಳ ಒಳಗೆ ಪೂರ್ಣಗೊಳಿಸಬೇಕು ಎಂದೂ ಸುಪ್ರೀಂಕೋರ್ಟ್ ಆಜ್ಞಾಪಿಸಿತುಏನಿದ್ದರೂತನಿಖೆಯನ್ನು ಅಸಾಧಾರಣ ಸನ್ನಿವೇಶದಲ್ಲಿ ಸುಪ್ರೀಂಕೋರ್ಟಿನ ಅನುಮತಿ ಮೇರೆಗೆ ಗರಿಷ್ಠ  ದಿನಗಳ ಕಾಲ ವಿಸ್ತರಿಸಲು ತನಿಖಾಧಿಕಾರಿಗೆ ಕೋರ್ಟ್ ಅನುಮತಿ ನೀಡಿತುಪ್ರಕರಣಗಳ ವಿಚಾರಣೆಯನ್ನು ಪ್ರತಿದಿನವೂ ೪೫ ದಿನದಲ್ಲಿ ಪೂರ್ಣಗೊಳಿಸಬೇಕು ಎಂದೂ ಸುಪ್ರೀಂ ಕೋರ್ಟ್ ಆದೇಶ ನೀಡಿತುಉನ್ನಾವೋ ಸಂತ್ರಸ್ಥೆಯ ಕುಟುಂಬವು ಸಂತ್ರಸ್ಥೆಯನ್ನು ಲಕ್ನೋ ಆಸ್ಪತ್ರೆಯಿಂದ ಉತ್ತಮ ಹಾಗೂ ಅತ್ಯಾಧುನಿಕ ಚಿಕಿತ್ಸೆ ಒದಗಿಸಲು ದೇಶದ ಬೇರೆ ಯಾವುದಾದರೂ ಆಸ್ಪತ್ರೆಗೆ ವರ್ಗಾಯಿಸಲು ಬಯಸಿದೆಯೇ ಎಂಬುದಾಗಿ ವಿಚಾರಿಸುವಂತೆ ಸಂತ್ರಸ್ಥೆಯ ವಕೀಲರಿಗೆ ಕೋರ್ಟ್ ಸೂಚಿಸಿತು.  ಆಗಸ್ಟ್ ೨ರ ಶುಕ್ರವಾರದ ಒಳಗಾಗಿ ಸಂತ್ರಸ್ಥೆಗೆ ೨೫ಲಕ್ಷ ರೂಪಾಯಿಗಳ ಮಧ್ಯಂತರ ಪರಿಹಾರವನ್ನು ಪಾವತಿ ಮಾಡುವಂತೆಯೂ ನ್ಯಾಯಾಲಯವು ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶ ನೀಡಿತುಸಂತ್ರಸ್ಥೆಆಕೆಯ ವಕೀಲರು ಮತ್ತು ಆಕೆಯ ತಾಯಿ ಮತ್ತು  ಮಂದಿ ಸಹೋದರಸಹೋದರಿಯರುಚಿಕ್ಕಪ್ಪ ಮಹೇಶ ಸಿಂಗ್ ಮತ್ತು ಅವರ ಪುತ್ರ ಸೇರಿದಂತೆ ಕುಟುಂಬ ಸದಸ್ಯರಿಗೆ ರಕ್ಷಣೆ ಒದಗಿಸುವ ಕೆಲಸವನ್ನು ಸುಪ್ರೀಂಕೋರ್ಟ್ ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್ಪಿಎಫ್ವಹಿಸಿತುಭದ್ರತೆ ಒದಗಿಸುವಂತೆ ನೀಡಲಾದ ಆದೇಶದ ಪಾಲನೆಯಾಗಿರುವ ಬಗ್ಗೆ ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಬೇಕುಸಂತ್ರಸ್ಥೆಯ ಚಿಕ್ಕಪ್ಪನನ್ನು ಭದ್ರತೆಯ ಹಿನ್ನೆಲೆಯಲ್ಲಿ ರಾಯ್ ಬರೇಲಿ ಜೈಲಿನಿಂದ ತಿಹಾರ್ ಜೈಲಿಗೆ ಕಳುಹಿಸುವಂತೆ ಸಲ್ಲಿಸಲಾದ ಮನವಿಯನ್ನು ಕೂಡಾ ಸುಪ್ರೀಂಕೋರ್ಟ್ ಆಲಿಸಲಿದೆ ಎಂದು ಪೀಠ ಹೇಳಿತುಏನಿದ್ದರೂತನ್ನ ಆದೇಶದಲ್ಲಿ ಏನಾದರೂ ಬದಲಾವಣೆ ಬೇಕಿದ್ದರೆ ಅರ್ಜಿ ಸಲ್ಲಿಸಲು ಐದೂ ಪ್ರಕರಣಗಳ ಆರೋಪಿಗಳಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿತುವಿಶೇಷ ಸನ್ನಿವೇಶದಲ್ಲಿ ಆರೋಪಿಗಳ ಅನುಪಸ್ಥಿತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿರುವುದರಿಂದ ಆರೋಪಿಗಳಿಗೆ  ಅವಕಾಶ ನೀಡಲಾಗಿದೆ ಎಂದು ಪೀಠ ತಿಳಿಸಿತುಸಂತ್ರಸ್ಥೆಯ ಕುಟುಂಬವು ಕಳುಹಿಸಿದ್ದ ಪತ್ರವನ್ನು ಭಾರತದ ಮುಖ್ಯನ್ಯಾಯಮೂರ್ತಿ (ಸಿಜೆಐಅವರ ಮುಂದೆ ಇಡುವಲ್ಲಿ ವಿಳಂಬವಾದದಕ್ಕೆ ಕಾರಣವೇನು ಎಂಬುದಾಗಿ ತನಿಖೆ ನಡೆಸುವಂತೆಯೂ ಸುಪ್ರೀಂಕೋರ್ಟ್ ಆದೇಶ ನೀಡಿತುಸುಪ್ರೀಂಕೋರ್ಟಿನ ಸೆಕ್ರೆಟರಿ ಜನರಲ್ ಅವರು ಸುಪ್ರೀಂಕೋರ್ಟ್ ರಿಜಿಸ್ಟ್ರಿಯ ಪ್ರಕ್ರಿಯೆ ಬಗ್ಗೆ ತನಿಖೆ ನಡೆಸಲಿದೆ ತನಿಖೆಯ ಮೇಲ್ವಿಚಾರಣೆಯನ್ನು ಹಾಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯೊಬ್ಬರು ನೋಡಿಕೊಳ್ಳುವರು ತನಿಖೆಯು  ದಿನಗಳ ಒಳಗೆ ಪೂರ್ಣಗೊಳ್ಳಬೇಕು ಎಂದೂ ಸುಪ್ರೀಂಕೋರ್ಟ್ ಆದೇಶ ತಿಳಿಸಿತು೨೦೧೭ರ ಜೂನ್ ೪ರಂದು ಉತ್ತರ ಪ್ರದೇಶದ ಬಿಜೆಪಿ ಶಾಸಕರ ಕುಲದೀಪ್ ಸಿಂಗ್ ಸೆಂಗರ್ ಅವರು ಸಂತ್ರಸ್ಥೆಯು ಅಪ್ರಾಪ್ತ ವಯಸ್ಕಳಾಗಿದ್ದಾಗ ನಡೆಸಿದ ಅತ್ಯಾಚಾರ ಪ್ರಕರಣವು ಸಿಬಿಐ ತನಿಖೆ ನಡೆಸಲಿರುವ ಮೊದಲ ಪ್ರಕರಣವಾಗಿದ್ದರೆಆಕೆ ಮಾರಣಾಂತಿಕವಾಗಿ ಗಾಯಗೊಂಡ ೨೦೧೯ರ ಜುಲೈ ೨೮ರಂದು ಘಟಿಸಿದ ರಾಯ್ ಬರೇಲಿ ಅಪಘಾತ ಪ್ರಕರಣ ಸಿಬಿಐ ನಡೆಸಲಿರುವ ಎರಡನೇ ಪ್ರಕರಣವಾಗಿದೆ ಅಪಘಾತ ಪ್ರಕರಣದಲ್ಲಿ ಸಂತ್ರಸ್ಥೆಯ ಜೊತೆಗೆ ಆಕೆಯ ವಕೀಲರು ಕೂಡಾ ಗಾಯಗೊಂಡಿದ್ದುಮೂಲ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಒಬ್ಬರು ಸೇರಿದಂತೆ ಇಬ್ಬರು ಚಿಕ್ಕಮ್ಮಂದಿರು ಸಾವನ್ನಪ್ಪಿದ್ದರುಉನ್ನಾವೋ ಸಂತ್ರಸ್ಥೆ ಮತ್ತು ಆಕೆಯ ವಕೀಲರಿಗೆ ಪ್ರಸ್ತುತ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದುಇಬ್ಬರ ಆರೋಗ್ಯ ಸ್ಥಿತಿಯೂ ಸ್ಥಿರವಾಗಿದೆ ಎಂದು ಆಸ್ಪತ್ರೆಯು ತಿಳಿಸಿತ್ತುಶಾಸಕನ ಉಚ್ಚಾಟನೆಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿಆರೋಪ ಎದುರಿಸುತ್ತಿರುವ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿಪಕ್ಷದಿಂದ ಉಚ್ಚಾಟಿಸಿತುಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪ ಎದುರಿಸುತ್ತಿದ್ದ ಶಾಸಕ ಕುಲದೀಪ್ ಸಿಂಗ್ ಅವರನ್ನು ಪಕ್ಷವು ಈ ಮುನ್ನ ಪಕ್ಷದಿಂದ ಅಮಾನತುಗೊಳಿಸಿತ್ತುಏತನ್ಮಧ್ಯೆ ಉನ್ನಾವೋ ಅತ್ಯಾಚಾರ ಪ್ರಕರಣ ಈಗಾಗಲೇ ಸಿಬಿಐಗೆ ಹಸ್ತಾಂತರವಾಗಿದ್ದುಬಿಜೆಪಿ ಶಾಸಕ ಕುಲದೀಪ್ ಸೆಂಗರ್ ಮತ್ತು ಇತರ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಅಲ್ಲದೇ ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಬರೆದಿರುವ ಪತ್ರ ತಮಗೆ ಸಿಕ್ಕಿಲ್ಲ ಎಂಬುದಾಗಿ ಬೆಳಗ್ಗೆ ಆಕ್ಷೇಪಿಸಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು  ಬಗ್ಗೆ ಸುಪ್ರೀಂಕೋರ್ಟ್ ರಿಜಿಸ್ಟ್ರಿ ವಿವರಣೆ ನೀಡಬೇಕು ಎಂದು ನಿರ್ದೇಶಿಸಿದ್ದರು.

2019: ಶ್ರೀನಗರಕಾಶ್ಮೀರಕ್ಕೆ ಮತ್ತೆ 25 ಸಾವಿರ ಸೈನಿಕರನ್ನು ಕಳುಹಿಸಲಾಯಿತು.  ವಾರದ ಹಿಂದೆಯಷ್ಟೇ 10 ಸಾವಿರ ಅರೆಸೇನಾ ಪಡೆಗಳನ್ನು ಕಾಶ್ಮೀರಕ್ಕೆ ಕಳುಹಿಸಿಕೊಡಲಾಗಿತ್ತುವಾರಗಳ ಹಿಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ 2 ದಿನಗಳ ಕಾಶ್ಮೀರ ಭೇಟಿಯಲ್ಲಿದ್ದರುದೋವಲ್ ಹಿಂದಿರುಗಿದ ಬಳಿಕ  ಬೆಳವಣಿಗೆಗಳು ನಡೆದಿದ್ದುಕುತೂಹಲ ಕೆರಳಿಸಿತು. ಆದರೆ ಇದಕ್ಕೆ ಯಾವುದೇ ಕಾರಣಗಳನ್ನು ಸೇನೆಯಾಗಲಿಸರ್ಕಾರವಾಗಲಿ ನೀಡಲಿಲ್ಲಕೆಲವು ಮೂಲಗಳ ಪ್ರಕಾರ ಯಾತ್ರಾರ್ಥಿಗಳ ರಕ್ಷಣೆಗಾಗಿ  ಕ್ರಮ ಕೈಗೊಳ್ಳಲಾಗಿದೆಆದರೆ ಇಷ್ಟೊಂದು ಸೈನಿಕರನ್ನು  ಹಿಂದೆ ನಿಯೋಜಿಸಲಾಗಿಲ್ಲ ಎಂದು ತಿಳಿದುಬಂದಿದೆಇನ್ನು ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ  ಕ್ರಮ ಕೈಗೊಳ್ಳಲಾಗಿದೆ ಎಂಬ ಮಾತುಗಳೂ ಕೇಳಿಬಂದಿತು.  ಈಮಧ್ಯೆ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಭೇಟಿ ವೇಳೆ ಕಾಶ್ಮೀರದ ರಾಜ್ಯ ವಿಧಾನ ಸಭೆಯ ಚುನಾವಣೆಯನ್ನು ಆದಷ್ಟು ಬೇಗ ನಡೆಸುವಂತೆ ಮನವಿ ಮಾಡಿಕೊಂಡರು.  ನ್ಯಾಶನಲ್ ಕಾನ್ಫರೆನ್ಸಿನ ಫಾರೂಕ್ ಅಬ್ದುಲ್ಲಾ ಅವರೂ ಒಮರ್ ಅಬ್ದುಲ್ಲಾ ಜತೆ ತೆರಳಿದ್ದರು.

2019: ನವದೆಹಲಿ:  ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹಣೆ ಮೊತ್ತ 1.2 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಯಿತು.  ಇದರಿಂದ ಕೇಂದ್ರ ಸರ್ಕಾರ ಗೆಲುವಿನ ನಗೆ ಬೀರಿತು. ಜುಲೈ ತಿಂಗಳ ಲೆಕ್ಕಾಚಾರದ ಪ್ರಕಾರಜಿ.ಎಸ್‌.ಟಿಸಂಗ್ರಹಣೆಯಲ್ಲಿ ಶೇ.5.8ರಷ್ಟು ಏರಿಕೆಯಾಗಿದ್ದುಇದು ಕಳೆದ ವರ್ಷದ ಸಂಗ್ರಹಣೆಗಿಂತ ಹೆಚ್ಚಾಗಿದೆ ಎಂದು ತಿಳಿಸಲಾಯಿತು. ಕಳೆದ ವರ್ಷ ಇದೇ ಅವಧಿಯಲ್ಲಿ ಜಿಎಸ್ಟಿ ಸಂಗ್ರಹಣೆ ಮೊತ್ತ 96,483 ಕೋಟಿ ರೂಆಗಿತ್ತುಆದರೆ ಜೂನ್‌ ನಲ್ಲಿ 1 ಲಕ್ಷ ಕೋಟಿ ರೂಗಡುವು ಮುಟ್ಟಲು ಜಿ.ಎಸ್‌.ಟಿವಿಫಲವಾಗಿತ್ತು ತಿಂಗಳು ಸಂಗ್ರಹಣೆ ಒಟ್ಟು 99,939 ಕೋಟಿ ರೂ.ಗಳಷ್ಟೇ ಆಗಿತ್ತುಇನ್ನು ಜುಲೈನಲ್ಲಿ ಕೇಂದ್ರೀಯ ಜಿ.ಎಸ್‌.ಟಿಸಂಗ್ರಹಣೆ 17,912 ಕೋಟಿ ರೂಆಗಿದ್ದರೆರಾಜ್ಯ ಜಿಎಸ್ಟಿ 25,008 ರೂಆಗಿದೆಏಕೀಕೃತ ಜಿಎಸ್ಟಿ ಸಂಗ್ರಹಣೆ ಪ್ರಮಾಣ 50, 612 ಕೋಟಿ ರೂಆಗಿದೆಇದರಲ್ಲಿ 24, 246 ಕೋಟಿ ರೂಆಮದು ಮೇಲಿನ ಜಿ.ಎಸ್‌.ಟಿಆಗಿತ್ತು.

2018: ನವದೆಹಲಿಗಾಜಿಯಾಬಾದ್ಗೋಲ್ಡನ್ ಬಾಬಾ ಎಂದೇ ಖ್ಯಾತರಾಗಿರುವ ಬಂಗಾರದ ಬಾಬಾ ಸುಧೀರ್ ಮಕ್ಕರ್ ಮತ್ತೆ ತಮ್ಮ ಸುಪ್ರಸಿದ್ದ ಕನ್ವರ್ ಯಾತ್ರೆಗೆ ಸಜ್ಜಾದರು ಬಾರಿ ಬಾಬಾ ಅಂದಾಜು  ಕೋಟಿ ರೂಪಾಯಿ ಮೌಲ್ಯದ ೨೦ ಕಿ.ಗ್ರಾಂಚಿನ್ನಾಭರಣ ಧರಿಸಿಕೊಂಡು ಕನ್ವರ್ ಯಾತ್ರೆ ನಡೆಸಲಿದ್ದು,  ಇದು ಅವರ ೨೫ನೆಯ ಹಾಗೂ ಕೊನೆಯ ಕನ್ವರ್ ಯಾತ್ರೆ.  ವರ್ಷದಿಂದ ವರ್ಷಕ್ಕೆ ಬಾಬಾ ಅವರು ಯಾತ್ರೆ ಕಾಲದಲ್ಲಿ ಧರಿಸುವ ಚಿನ್ನಾಭರಣದ ಪ್ರಮಾಣ ಏರುತ್ತಲೇ ಇದೆ೨೦೧೬ರಲ್ಲಿ ಅವರು ೧೨ ಕಿಲೋ ಗ್ರಾಂ ಚಿನ್ನಾಭರಣ ಧರಿಸಿ ಕನ್ವರ್ ಯಾತ್ರೆ ನಡೆಸಿದ್ದರುಕಳೆದ ವರ್ಷ ಅವರು ೧೪. ಕಿ.ಗ್ರಾಂ ಚಿನ್ನಾಭರಣ ಧರಿಸಿ ಯಾತ್ರೆ ನಡೆಸಿದ್ದರು ಚಿನ್ನಾಭರಣದಲ್ಲಿ ೨೧ ಚಿನ್ನದ ನಾಣ್ಯಗಳು೨೧ ದೇವತೆಗಳ ಲಾಕೆಟ್ ಗಳುಕೈ ಕಡಗಗಳುಚಿನ್ನದ ಜಾಕೆಟ್ ಇತ್ಯಾದಿ ಸೇರಿವೆ.  ಬಾಬಾ ಎಸ್ ಯುವಿ ಕಾರಿನಲ್ಲಿ ಕುಳಿತು ತಮ್ಮ ಯಾತ್ರೆ ನಡೆಸುತಾರೆಅವರ  ಯಾತ್ರೆಯಲ್ಲಿ ಪೊಲೀಸರಲ್ಲದೆ ಅಂಗರಕ್ಷಕರೂ ಇರುತ್ತಾರೆ.   ಬಾರಿ ಬಾಬಾ ಅವರು ಧರಿಸಲಿರುವ ಹೊಸ ಚಿನ್ನದ ಸರ  ಕಿಗ್ರಾಂ ತೂಕವಿದ್ದು ಶಿವನ ಲಾಕೆಟ್ ಹೊಂದಿದೆಕತ್ತು ನೋವು ಬರುವುದರ ಜೊತೆಗೆ ಒಂದು ಕಣ್ಣಿನ ದೃಷ್ಟಿ ಮಂದವಾಗಿರುವುದರಿಂದ ನಾನು  ಬಾರಿ ಹೆಚ್ಚು ಚಿನ್ನ ಧರಿಸುವುದಿಲ್ಲಇದು ನನ್ನ ೨೫ನೆಯ ವರ್ಷದ ಹಾಗೂ ಕೊನೆಯ ಕನ್ವರ್ ಯಾತ್ರೆ ಎಂದು ಬಾಬಾ ಹೇಳುತ್ತಾರೆಚಿನ್ನಾಭರಣಗಳ ಜೊತೆಗೆ ಅಂದಾಜು ೨೭ ಲಕ್ಷ ರೂಪಾಯಿ ಬೆಲೆಯ ರೊಲೆಕ್ಸ್ ವಾಚನ್ನೂ  ಬಾಬಾ ಧರಿಸುತ್ತಾರೆಹರದ್ವಾರದಿಂದ ದೆಹಲಿಯವರೆಗೆ ೨೦೦ ಕಿಮೀ ದೂರ ಸಾಗುವ ಕನ್ವರ್ ಯಾತ್ರೆಯಲ್ಲಿಬಾಬಾ ಅವರ ಸ್ವಂತ ವಾಹನಗಳಾದ ಬಿಎಂಡಬ್ಲ್ಯೂಮೂರು ಪಾರ್ಚುನರ್ಗಳುಎರಡು ಆಡಿ ಮತ್ತು ಎರಡು ಇನ್ನೋವಾ ಕಾರುಗಳೂ ಸಾಗುತ್ತವೆಯಾತ್ರೆಗಾಗಿ ಅವರು ಹಲವಾರು ಬಾರಿ ಹಮ್ಮರ್ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಗಳನ್ನು ಬಾಡಿಗೆಗೆ ಪಡೆದು ಬಳಸಿದ್ದಾರೆ.  ‘ನನ್ನ ಚಿನ್ನ ಮತ್ತು ಕಾರುಗಳ ವ್ಯಾಮೋಹ ಸಾಯುವುದಿಲ್ಲ೧೯೭೨-೭೩ರಲ್ಲಿ ಚಿನ್ನದ ಬೆಲೆ ತೊಲೆಗೆ (೧೦ ಗ್ರಾಮ್೨೦೦ ರೂ ಇದ್ದಾಗ ನಾನು ಚಿನ್ನಾಭರಣಗಳನ್ನು ಧರಿಸಲು ಆರಂಭಿಸಿದೆ ಎಂಬುದು ನನ್ನ ನೆನಪುಆಗ ನಾನು  ತೊಲೆಯಷ್ಟು ಚಿನ್ನಾಭರಣ ಧರಿಸಿ ಯಾತ್ರೆ ಗೈದಿದ್ದೆಕ್ರಮೇಣ ನನ್ನ ಬಳಿ ಬಂಗಾರ ಹೆಚ್ಚಿತುನಾನು ಸಾಯುವವರೆಗೂ ಚಿನ್ನಾಭರಣಗಳನ್ನು ನನ್ನ ಬಳಿಯೇ ಇಟ್ಟುಕೊಳ್ಳುವೆ ಜಗತ್ತನ್ನು ತ್ಯಜಿಸುವಾಗ ನನ್ನ ಯಾರಾದರೂ ಒಬ್ಬ ಪ್ರಿಯ ಶಿಷ್ಯನಿಗೆ ಅವುಗಳನ್ನು ಹಸ್ತಾಂತರಿಸುವೆ’ ಎಂದು ಮಕ್ಕರ್ ಹೇಳುತ್ತಾರೆ.  ಆಧ್ಯಾತ್ಮದೆಡೆಗೆ ವಾಲುವ ಮುನ್ನ ಮಕ್ಕರ್ ಅವರು ದೆಹಲಿಯ ಗಾಂಧಿ ನಗರ ಮಾರುಕಟ್ಟೆಯಲ್ಲಿ ಒಬ್ಬ ಯಶಸ್ವೀ ಬಟ್ಟೆ ಹಾಗೂ ಆಸ್ತಿ ವ್ಯವಹಾರಗಾರರಾಗಿದ್ದರು.

2018: ನವದೆಹಲಿಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐತನ್ನ ನೀತಿ ರೆಪೋದರವನ್ನು ಎರಡನೇ ನೇರ ಸಭೆಯಲ್ಲೂ ಹೆಚ್ಚಿಸಿದ್ದುಪರಿಣಾಮವಾಗಿ ಗೃಹಸಾಲಗಳು ದುಬಾರಿಯಾಗುವ ಸಾಧ್ಯತೆಗಳಿವೆನಿರೀಕ್ಷೆಯಂತೆ ರಿಸರ್ವ್ ಬ್ಯಾಂಕಿನ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ತನ್ನ ಎರಡನೇ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಹಣದುಬ್ಬರವನ್ನು ಉಲ್ಲೇಖಿಸಿ ರಿವರ್ಸ್ ರೆಪೋ ದರವನ್ನು ೨೫ ಮೂಲ ಪಾಯಿಂಟ್ ಗಳಷ್ಟು ಅಂದರೆ ಶೇಕಡಾ .೫೦ಕ್ಕೆ ಏರಿಸಲು ನಿರ್ಧರಿಸಿತುಆದರೆ ತನ್ನ ’ತಟಸ್ಥ’ ನಿಲುವನ್ನು ಕಾಯ್ದುಕೊಂಡಿತು

2018: ನವದೆಹಲಿ: ಸುಪ್ರೀಂ ಕೋರ್ಟ್ ಕೊಲೀಜಿಯಂ ವ್ಯವಸ್ಥೆಯಲ್ಲೂ ನ್ಯಾಯಾಧೀಶರನ್ನು ನೇಮಿಸುವಾಗ ಸ್ವಜನ ಪಕ್ಷಪಾತ ನಡೆಯುತ್ತದೆ ಎಂಬುದಕ್ಕೆ ಕೇಂದ್ರ ಸರ್ಕಾರ ಸಾಕ್ಷ್ಯಾಧಾರ ನೀಡಿದೆಹೈಕೋರ್ಟ್ಗಳು ಮತ್ತು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಿಗೂ ಹಾಲಿ ನ್ಯಾಯಮೂರ್ತಿಗಳಿಗೂ ಸಂಬಂಧಗಳಿರುವ ಪ್ರಕರಣಗಳನ್ನು ಕೇಂದ್ರ ಸರ್ಕಾರ ಉಲ್ಲೇಖಿಸಿತುಅಲಹಾಬಾದ್ ಹೈಕೋರ್ಟಿಗೆ ನ್ಯಾಯಮೂರ್ತಿಗಳ ನೇಮಕಕ್ಕೆ ಮಾಡಲಾದ ೩೩ ಶಿಫಾರಸುಗಳ ಪೈಕಿ ೧೧ ಪ್ರಕರಣಗಳಲ್ಲಿ  ರೀತಿಯ ಸಂಬಂಧಗಳಿರುವುದು ಬಹಿರಂಗಕ್ಕೆ ಬಂದಿತುಅಲಹಾಬಾದ್ ಹೈಕೋರ್ಟ್ ಕೊಲೀಜಿಯಂ ಕಳೆದ ಫೆಬ್ರವರಿಯಲ್ಲಿ ೩೩ ವಕೀಲರನ್ನು ನ್ಯಾಯಮೂರ್ತಿಗಳ ಹುದ್ದೆಗೆ ನೇಮಿಸುವ ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು

2018: ನವದೆಹಲಿ: ಪರಿಶಿಷ್ಟ ಜಾತಿಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ದಲಿತ ಸಂಘಟನೆಗಳು ಕರೆಕೊಟ್ಟಿರುವ ರಾಷ್ಟ್ರವ್ಯಾಪಿ ಬಂದ್ ಗೆ ಮುಂಚಿತವಾಗಿಯೇ ಕೇಂದ್ರ ಸಚಿವ ಸಂಪುಟವು ಸುಪ್ರೀಂಕೋರ್ಟ್ ತೀರ್ಪನ್ನು ತಿರಸ್ಕರಿಸಿ ಕಾನೂನನ್ನು ಕಠಿಣ ಮೂಲ ವಿಧಿಗಳ ಸಹಿತವಾಗಿ ಊರ್ಜಿತಗೊಳಿಸುವ ತಿದ್ದುಪಡಿ ಮಸೂದೆಗೆ ತನ್ನ ಒಪ್ಪಿಗೆ ನೀಡಿತುಮಸೂದೆಯನ್ನು ಸಂಸತ್ತಿನ ಹಾಲಿ ಮುಂಗಾರು ಅಧಿವೇಶನದಲ್ಲಿಯೇ ಮಂಡಿಸಲಾಗುವುದುಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠವು  ವರ್ಷ ಮಾರ್ಚ್ ತಿಂಗಳಲ್ಲಿ ಪರಿಶಿಷ್ಟ ಜಾತಿಪರಿಶಿಷ್ಟ ಪಂಗಡ ಕಾಯ್ದೆಯ ಅಡಿಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ತತ್ ಕ್ಷಣ ಬಂಧಿಸುವ ವಿಧಿಯನ್ನು ರದ್ದು ಪಡಿಸಿತ್ತುಇದು ದಲಿತ ಸಮೂಹಗಳ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿತ್ತು

2018: ಲಕ್ನೋ: ದೇಶದ ಅತಿ ಉದ್ದದ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅತಿ ಕಡಿಮೆ ಅವಧಿಯಲ್ಲಿ ನಿರ್ಮಾಣಗೊಂಡಿದ್ದ ಆಗ್ರಾ-ಲಕ್ನೋ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಎಸ್ ಯುವಿಯಲ್ಲಿ ಪ್ರಯಾಣ ಮಾಡುತ್ತಿದ್ದ ನಾಲ್ಕು ಮಂದಿ ತಮ್ಮ ಕಾರು ಬುಧವಾರ ಬೆಳಗ್ಗೆ ಹೆದ್ದಾರಿಯಲ್ಲಿ ಬಾಯ್ದೆರೆದು ನಿಂತಿದ್ದ ೫೦ ಅಡಿ ಆಳದ ಹೊಂಡಕ್ಕೆ ಬಿದ್ದು ಅಪಾಯದಲ್ಲಿ ಸಿಲುಕಿಕೊಂಡರೂಅದೃಷ್ಟವಶಾತ್ ಪಾರಾದರುಆಗ್ರಾದಿಂದ ೧೬  ಕಿಮೀ ದೂರದಲ್ಲಿರುವ ಆಗ್ರಾ-ಲಕ್ನೋ ಎಕ್ಸ್ ಪ್ರೆಸ್ ಹೆದ್ದಾರಿಯ ಡೌಕಿ ಪ್ರದೇಶದ ವಾಜಿದ್ ಪುರ ಪುಲಿಯಾ ಸಮೀಪ  ದುರ್ಘಟನೆ ಘಟಿಸಿತು.  

2018: ನವದೆಹಲಿಅಸ್ಸಾಮಿನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿಕರಡು ಮತು ೨೦೧೯ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ದೆಹಲಿಗೆ ಬಂದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಪ್ರಮುಖರಾದ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಲವಾರು ವಿಪಕ್ಷ ನಾಯಕರನ್ನು ಭೇಟಿ ಮಾಡಿದರು.  ಎನ್ ಆರ್ ಸಿ ವಿಚಾರದಲ್ಲಿ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ಮಾಡಿದ ಮಮತಾಆಡಳಿತಾರೂಢ ಪಕ್ಷವು ೨೦೧೯ರಲ್ಲಿ ತಾನು ಗೆಲ್ಲುವ ಅವಕಾಶಗಳ ಬಗ್ಗೆ ಚಿಂತಿತವಾಗಿದೆ ಏಕೆಂದರೆ ಇಡಿ ವಿಪಕ್ಷ ಸಮುದಾಯವು ಅವರನ್ನು ಪರಾಭವಗೊಳಿಸಲು ಒಂದಾಗುತ್ತಿವೆ ಎಂದು ಹೇಳಿದರು.  

2018: 
ನವದೆಹಲಿ: ಇಮ್ರಾನ್ ಖಾನ್ ಅವರು ಆಗಸ್ಟ್ ೧೧ರಂದು ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಮಾರಂಭಕ್ಕೆ ಭಾರತದ ಕೆಲವು ಪ್ರಮುಖ ಕ್ರಿಕೆಟಿಗರನ್ನು ಆಹ್ವಾನಿಸಲಾಗಿದೆ ಎಂದು ಪಾಕಿಸ್ತಾನ್ ತೆಹ್ರೀಕ್  ಇನ್ಸಾಫ್ ಪಕ್ಷದ ವಕ್ತಾರ ಫವಾದ್ ಚೌಧರಿ ಅವರು ಇಲ್ಲಿ ಹೇಳಿದರುಮಾಜಿ ಕ್ರಿಕೆಟಿಗರಾದ ಸುನಿಲ್ ಗಾವಸ್ಕರ್ಕಪಿಲ್ ದೇವ್ನವಜೋತ್ ಸಿಂಗ್ ಸಿಧು ಮತ್ತು ಬಾಲಿವುಡ್ ನಟ ಆಮೀರ್ ಖಾನ್ ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ಪಾಕಿಸ್ತಾನ ಸುಪ್ರೀಂಕೋರ್ಟಿನ ಹೊರಭಾಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಚೌಧರಿ ನುಡಿದರು.  

 2017:  ಇಸ್ಲಾಮಾಬಾದ್‌ : ಪಾಕಿಸ್ಥಾನದ ಮಾಜಿ ಪೆಟ್ರೋಲಿಯಂ ಸಚಿವ ಶಾಹೀದ್‌ ಖಾನ್‌ ಅಬ್ಟಾಸಿ ಅವರು ನವಾಜ್‌ ಷರೀಫ್ ಅವರ ಉತ್ತರಾಧಿಕಾರಿಯಾಗಿಪಾಕಿಸ್ಥಾನದ 18ನೇ ಪ್ರಧಾನಿಯಾಗಿ ಆಯ್ಕೆಯಾದರುಪನಾಮಾ ಗೇಟ್‌ ಹಗರಣದಲ್ಲಿ ಭ್ರಷ್ಟರೆಂದು ಸುಪ್ರೀಂ ಕೋರ್ಟ್‌ ನಿಂದ ಘೋಷಿಸಲ್ಪಟ್ಟ  ಪ್ರಧಾನಿ ನವಾಜ್‌ ಷರೀಫ್ ಹುದ್ದೆಗೆ ಅನರ್ಹರಾದ ನಾಲ್ಕು ದಿನಗಳ ಬಳಿಕ ಪಾಕ್‌ ಸಂಸದರು ಅಬ್ಟಾಸಿ ಅವರನ್ನು ನೂತನ ಪ್ರಧಾನಿಯನ್ನಾಗಿ ಈದಿನ ಆಯ್ಕೆ ಮಾಡಿದರುಪಿಎಂಎಲ್ಎನ್‌ ನಾಯಕ ಶಾಹೀದ್‌ ಅಬ್ಟಾಸಿ ಅವರು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆದ ಮತದಾನದಲ್ಲಿ 221 ಮತಗಳನ್ನು ಪಡೆದು ಪ್ರಧಾನಿ ಹುದ್ದೆಗೆ ಆಯ್ಕೆಯಾದರುಹಾಗಿದ್ದರೂ ಅಬ್ಟಾಸಿ ಅವರು ತತ್ಕಾಲೀನ ಪ್ರಧಾನಿ ಆಗಿದ್ದಾರೆ

2017: 
ಮುಂಬಯಿ : ಕಾರು ಉತ್ಪಾದನೆಯ  ಭಾರತದ ಅತೀ ದೊಡ್ಡ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಎಲ್ಲರ ನಿರೀಕ್ಷೆಗೂ ಮೀರಿ ಜುಲೈ ತಿಂಗಳ ಮಾರಾಟದಲ್ಲಿ  ಶೇ.20.6 ವೃದ್ಧಿಯನ್ನು ಸಾಧಿಸುವ ಮೂಲಕ ಹೊಸ ವಿಕ್ರಮವನ್ನೇ ದಾಖಲಿಸಿತುಅಂತೆಯೇ ಈದಿನದ ವಹಿವಾಟಿನಲ್ಲಿ ಮೋಟಾರು ವಾಹನ ಉತ್ಪಾದಕ ಕಂಪೆನಿಗಳು ಬಹುವಾಗಿ ವಿಜೃಂಭಿಸಿದವುಇಂದಿನ ವಹಿವಾಟಿನ ಕೊನೇ ತಾಸಿನಲ್ಲಿ ನಡೆದ ಬಿರುಸಿನ ಖರೀದಿಯ ಬಲದಲ್ಲಿ  ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ದಿನಾಂತ್ಯದ ಹೊಸ ಎತ್ತರದ ದಾಖಲೆಯನ್ನು ಮಾಡಿದವುಸೆನ್ಸೆಕ್ಸ್‌  60.23 ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ಹೊಸ ಎತ್ತರವಾಗಿ 32,575.17 ಅಂಕಗಳ ಮಟ್ಟವನ್ನು ತಲುಪಿದರೆನಿಫ್ಟಿ ಸೂಚ್ಯಂಕ 37.55 ಅಂಕಗಳ ಏರಿಕೆಯೊಂದಿಗೆ 10,114.65 ಅಂಕಗಳ ದಿನಾಂತ್ಯದ ಹೊಸ ಎತ್ತರವನ್ನು ತಲುಪಿತು

2017: ಹೈದರಾಬಾದ್‌: ಅಣ್ವಿಕ ಜೀವಶಾಸ್ತ್ರಜ್ಞ ಡಾ.ಪುಷ್ಪ ಮಿತ್ರ ಭಾರ್ಗವ(89) ತಮ್ಮ ಹೈದರಾಬಾದ್‌ ನಿವಾಸದಲ್ಲಿ ನಿಧನರಾದರುಹತ್ತಿಯಿಂದ ಬದನೆವರೆಗಿನ ಕುಲಾಂತರಿ ಬೆಳೆಯನ್ನು ದೇಶದಲ್ಲಿ ಪರಿಚಯಿಸಿದ್ದರ  ವಿರುದ್ಧ ಭಾರ್ಗವ ಅವರು ದನಿ ಎತ್ತಿದ್ದರು ಬೆಳೆಗಳಿಂದ ಆರೋಗ್ಯಕ್ಕೆ ಹಾನಿಯಾಗುವ ಸಂಭವವಿದ್ದು ಕನಿಷ್ಠ 10 ವರ್ಷಗಳ ಪರೀಕ್ಷೆ ಅಗತ್ಯ ಎಂದಿದ್ದರುಕುಲಾಂತರಿ ಬೀಜ ಪೂರೈಸುವ ಬಹುರಾಷ್ಟ್ರೀಯ ಕಂಪನಿಗಳನ್ನು ವಿರೋಧಿಸುತ್ತಿದ್ದರುದೇಶದಲ್ಲಿ ಸರ್ಕಾರ ಕುಲಾಂತರಿ ಬೆಳೆಗೆ ಸಮ್ಮತಿ ನೀಡುವುದಕ್ಕೆ ಸುಮಾರು 15 ವರ್ಷಗಳ ಕಾಲ ವಿರೋಧ ವ್ಯಕ್ತಪಡಿಸಿದ್ದರು. ’ಇತ್ತೀಚೆಗೆ ಮೂತ್ರಪಿಂಡ ಸಮಸ್ಯೆಗೆ ಒಳಗಾಗಿದ್ದ ಡಾ.ಪಿಎಂ ಭಾರ್ಗವ ಅವರು ಈದಿನ ಬೆಳಗ್ಗೆಯಿಂದ  ಜ್ವರದಿಂದ ನರಳುತ್ತಿದ್ದರುಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದ ಅವರು ನಿಧನರಾಗಿದ್ದಾರೆ’ ಎಂದು ಸಿಸಿಎಂಬಿ ನಿರ್ದೇಶಕ ರಾಕೇಶ್‌ ಮಿಶ್ರಾ ತಿಳಿಸಿದರುಜೀವವಿಜ್ಞಾನದಲ್ಲಿನ ಸಂಶೋಧನೆ ಹಾಗೂ ಸಮಾಜಕ್ಕೆ ಅದರ ಪ್ರಯೋಜನ ವಿಸ್ತರಿಸಲು ಅನುವಾಗುವ ನಿಟ್ಟಿನಲ್ಲಿ 1977ರಲ್ಲಿ ಕೋಶ ಮತ್ತು ಅಣ್ವಿಕ ಜೀವ ವಿಜ್ಞಾನ ಕೇಂದ್ರ(Cellular and Molecular Biology –CCMB) ಸ್ಥಾಪಿಸಿದರುರಾಷ್ಟ್ರದಲ್ಲಿ ವಿಜ್ಞಾನವನ್ನು ಪಸರಿಸುವಲ್ಲಿ ಡಾ.ಪಿಎಂ ಭಾರ್ಗವ ಅವರ ಕಾರ್ಯ ಪ್ರಾಮುಖ್ಯತೆ ಪಡೆದಿದೆ.  ಭಾರತ ಸರ್ಕಾರದಿಂದ ಪದ್ಮಭೂಷಣ ಸೇರಿದಂತೆ ನೂರಾರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಗೌರವಕ್ಕೆ ಪಾತ್ರರಾಗಿದ್ದಾರೆರಾಜಸ್ತಾನದ ಅಜ್ಮೀರ್ನಲ್ಲಿ ಜನಿಸಿದ ಭಾರ್ಗವ ಅವರು ಲಖನೌ ಹಾಗೂ ವಾರಣಸಿಯಲ್ಲಿ ವ್ಯಾಸಂಗ ನಡೆಸಿದ್ದರುಇಂಗ್ಲೆಂಡ್‌ ಹಾಗೂ ಫ್ರಾನ್ಸ್ ಪ್ರಮುಖ ಸಂಸ್ಥೆಗಳಲ್ಲಿ ಸಂಶೋಧನೆ ನಡೆಸಿದ್ದರು.

2017:  ನವದೆಹಲಿ: ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಅರವಿಂದ್ ಪನಗರಿಯಾ ಅವರು  ರಾಜೀನಾಮೆ ನೀಡಿದರುಮತ್ತೆ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದಾಗಿ ಅವರು ಪ್ರಕಟಿಸಿದರುಇದೇ ತಿಂಗಳ 31ರವರೆಗೆ ನೀತಿ ಆಯೋಗದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿರುವ ಅವರುಸೆಪ್ಟೆಂಬರ್ನಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಮತ್ತೆ ಕಾರ್ಯಾರಂಭ ಮಾಡಲಿದ್ದಾರೆ. ‘ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನನ್ನ ರಜೆ ಮುಗಿದಿದೆಸೆಪ್ಟೆಂಬರ್ 5ರಂದು ಮತ್ತೆ ಸೇರಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು ಅವರು ತಿಳಿಸಿದರು.
2016: ನವದೆಹಲಿ: ಮಾಜಿ ಮುಖ್ಯಮಂತ್ರಿಗಳಿಗೆ ಜೀವನ ಪರ್ಯಂತ ಸರ್ಕಾರಿ ಬಂಗಲೆ ಹೊಂದುವ ಹಕ್ಕು ಇಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪರಿಣಾಮವಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಉತ್ತರ ಪ್ರದೇಶದ 6 ಮಂದಿ ಮಾಜಿ ಮುಖ್ಯಮಂತ್ರಿಗಳು ಎರಡು ತಿಂಗಳ ಒಳಗಾಗಿ ತಮ್ಮ ಸರ್ಕಾರಿ ಬಂಗಲೆಗಳನ್ನು ತೆರವುಗೊಳಿಸಬೇಕಾಗಿ ಬಂದಿತುಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಸೇರಿದಂತೆ ಆರು ಮಂದಿ ಮಾಜಿ ಮುಖ್ಯಮಂತ್ರಿಗಳಿಗೆ 2 ತಿಂಗಳ ಒಳಗಾಗಿ ಸರ್ಕಾರಿ ಬಂಗಲೆ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತು

 2016: ನವದೆಹಲಿಸೋಹ್ರಾಬುದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಗೊಳಿಸಿತುನಿವೃತ್ತ ಸರ್ಕಾರಿ ಅಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತ ಹರ್ಷ್ ಮಂದಿರ್ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರುಜಸ್ಟೀಸ್ ಎಸ್..ಬೋಬಡೆ ಮತ್ತು ಜಸ್ಟೀಸ್ ಅಶೋಕ್ ಭೂಷಣ್ ಅವರಿದ್ದ ಪೀಠವು ಅರ್ಧ ಗಂಟೆ ವಿಚಾರಣೆ ನಡೆಸಿದ ನಂತರ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು

 2016: ನವದೆಹಲಿಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ತಾತ್ಕಾಲಿಕವಾಗಿ ಅಮಾನತಿನಲ್ಲಿದ್ದ ಕುಸ್ತಿಪಟು ನರಸಿಂಗ್ ಯಾದವ್ಗೆ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ (ನಾಡಾ) ಶಿಸ್ತು ಸಮಿತಿ ಕ್ಲೀನ್ ಚಿಟ್ ನೀಡಿತು ಮೂಲಕ ನರಸಿಂಗ್ ರಿಯೋ ಕನಸು ಜೀವಂತವಾಯಿತುಪ್ರಕರಣದ ವಿಚಾರಣೆ ನಡೆಸಿದ ನಾಡಾದ ಶಿಸ್ತು ಸಮಿತಿ ಈದಿನ ತನ್ನ ತೀರ್ಪು ಪ್ರಕಟಿಸಿನರಸಿಂಗ್ ಯಾದವ್ ಯಾವುದೇ ತಪ್ಪೆಸಗಿಲ್ಲ ಅವರು ಪಿತೂರಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿತು.
2016: ಬೆಂಗಳೂರು/ಮೈಸೂರು: ರಾಕೇಶ್ ಸಿದ್ದರಾಮಯ್ಯ ಅವರ ಅಂತ್ಯಸಂಸ್ಕಾರವನ್ನು ನಿರಂಜನಾನಂದ ಸ್ವಾಮಿ ನೇತೃತ್ವದಲ್ಲಿ ಕುರುಬ ಸಂಪ್ರದಾಯದಂತೆ ರಾಕೇಶ್ ಸಿದ್ದರಾಮಯ್ಯ ಅವರ ಪುತ್ರ ಧವನ್ ರಾಕೇಶ್ ನೆರವೇರಿಸಿದರುಟಿಕಾಟೂರಿನ ಫಾರ್ಮ್ ​ಹೌಸ್ನಲ್ಲಿ ಅಂತ್ಯಸಂಸ್ಕಾರ ನೆರವೇರಿತುಬೆಲ್ಜಿಯಂ ಪ್ರವಾಸದಲ್ಲಿರುವ ವೇಳೆ ಅನಾರೋಗ್ಯದಿಂದ ನಿಧನರಾದ ರಾಕೇಶ್ ಸಿದ್ದರಾಮಯ್ಯ ಅವರ ಪಾರ್ಥಿವ ಶರೀರ ಬೆಳಗ್ಗೆ 9.05 ಸುಮಾರಿಗೆ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿತುಬಳಿಕ ಅಲ್ಲಿಂದ ವಿಶೇಷ ವಿಮಾನದಲ್ಲಿಯೇ ಮೈಸೂರಿಗೆ ತರಲಾಯಿತುರಾಕೇಶ್ ಪತ್ನಿ ಸ್ಮಿತಾತಾಯಿ ಪಾರ್ವತಿ ಹಾಗೂ ಸಿಎಂ ಸಿದ್ದರಾಮಯ್ಯ ನವರು ಜೊತೆಯಲ್ಲೇ ಆಗಮಿಸಿದರುವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಸಿದ್ದರಾಮಯ್ಯನವರು ಬಿಕ್ಕಳಿಸಿ ಅತ್ತರು.
2016: 
ಕೊಲ್ಹಾಪುರಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸಾಹಸಿ ಜೋಡಿಯೊಂದು 1000 ಅಡಿ ಎತ್ತರದಲ್ಲಿ ರೋಪ್ವೇಗೆ ಜೋತು ಬಿದ್ದು  ಜೋಡಿ ಮದುವೆಯಾದರು ಮೂಲಕ ವಿಭಿನ್ನವಾಗಿ ತಮ್ಮ ಮದುವೆ ಸಂಭ್ರಮವನ್ನು ಆಚರಿಸಿಕೊಂಡರು ಘಟನೆ ನಡೆದದ್ದುಮಹಾರಾಷ್ಟ್ರದ ಕೊಲ್ಹಾಪುರದಲ್ಲಿಪರ್ವತಾರೋಹಿಯಾಗಿರುವ ಜೈದೀಪ್ ಜಾಧವ್ (30) ವಿಶೇಷವಾಗಿ ಮದುವೆಯಾಗಬೇಕುಅದು ಹೆಚ್ಚು ದಿನ ನೆನಪಿನಲ್ಲುಳಿಯಬೇಕು ಎಂದು ಬಯಸಿದ್ದರುಹಾಗಾಗಿ ಕಣಿವೆಯಲ್ಲಿ ಎರಡು ಬೆಟ್ಟಗಳ ನಡುವೆ ಕಟ್ಟಿದ್ದ ರೋಪ್ ವೇಗೆ ಜೋತು ಬಿದ್ದು ಜೈದೀಪ್ ಜಾಧವ್ ರೇಷ್ಮಾ ಪಾಟೀಲ್ ಅವರನ್ನು ವರಿಸಿದರು
  
2016: ಅಹಮದಾಬಾದ್: ಅನಿರೀಕ್ಷಿತ ಬೆಳವಣಿಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿಬಿಜೆಪಿ ಅಧ್ಯಕ್ಷ ಅಮಿತ್ ಷಾಗೆ ಪತ್ರ ಬರೆದರುಆನಂದಿ ಬೆನ್ ಅವರ ಪತ್ರ ತಲುಪಿದ್ದುಪಕ್ಷದ ಸಂಸದೀಯ ಮಂಡಳಿಯ ಸಭೆಯಲ್ಲಿ ಆನಂದಿ ಬೆನ್ ಅವರ ಇಂಗಿತದ ಕುರಿತು ಚರ್ಚೆ ನಡೆಸಿ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಪತ್ರಿಕ್ರಿಯೆ ನೀಡಿದರು

2016: ನ್ಯೂಯಾರ್ಕ್ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಕಾವು ಜೋರಾಗಿದ್ದುಇದೀಗ ನಿಯತಕಾಲಿಕೆ ನ್ಯೂಯಾರ್ಕ್ ಟೈಮ್ಸ್ ತನ್ನ ಮುಖಪುಟದಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲೇನಿಯಾ ಅವರ ನಗ್ನ ಪೋಟೋವನ್ನು ಪ್ರಕಟಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರೀ ಸುದ್ದಿ ಮಾಡಿತುಚಿತ್ರದ ಜತೆಗೆ ‘ಇಂತಹ ರಾಷ್ಟ್ರದ ಸಂಭಾವ್ಯ ಪ್ರಥಮ ಮಹಿಳೆಯನ್ನು ನೀವೆಂದೂ ನೋಡಿರಲಾರಿರಿ’ ಎನ್ನುವ ಅಡಿ ಬರಹ ನೀಡಲಾಗಿತ್ತು

2015 ಲಂಡನ್ಚಿಟ್ಟೆಗಳು ಹಾರುವ ಮುನ್ನ ತಮ್ಮ ‘ಯಾನ ಸ್ನಾಯುಗಳನ್ನು 'ವಿ' (V) ಆಕಾರಕ್ಕೆ ತಂದುಕೊಳ್ಳುವುದನ್ನು ಗಮನಿಸಿದ್ದೀರಾ ತಂತ್ರವನ್ನು ಬಳಸಿ ಸೌರ ಫಲಕಗಳಿಂದ ಪಡೆಯುವ ವಿದ್ಯುಚ್ಚಕ್ತಿಯನ್ನು ಶೇಕಡಾ 50ರಷ್ಟು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಪತ್ತೆ ಹಚ್ಚಿರುವುದಾಗಿ ಭಾರತೀಯ ಮೂಲದ ವಿಜ್ಞಾನಿ ತಪಸ್ ಮಲಿಕ್ ಪ್ರಕಟಿಸಿದರುಸೌರ ಇಂಧನ ಉತ್ಪಾದನೆ ಹೆಚ್ಚಿಸುವ  ನೂತನ ತಂತ್ರಜ್ಞಾನವು ಸೌರವಿದ್ಯುತ್ ಉತ್ಪಾದನೆ ವೆಚ್ಚವನ್ನೂ ಗಣನೀಯ ಪ್ರಮಾಣದಲ್ಲಿ ಇಳಿಸಬಲ್ಲುದುಚಿಟ್ಟೆಗಳು ಹಾರುವ ಮುನ್ನ ಬಿಸಿ ಮಾಡಿಕೊಳ್ಳುವ ಸಲುವಾಗಿ ತಮ್ಮ ‘ಯಾನ ಸ್ನಾಯುಗಳನ್ನು ‘ವಿ’ ಅಕಾರಕ್ಕೆ ತಂದುಕೊಳ್ಳುತ್ತವೆ.  ‘ಎಂಜಿನಿಯರಿಂಗ್ನಲ್ಲಿ ಬಯೋಮಿಮಿಕ್ರಿ ಹೊಸದೇನಲ್ಲಆದರೆ  ಸಂಶೋಧನೆಯು ಸೌರ ವಿದ್ಯುತ್ ವೆಚ್ಚವನ್ನು  ಹಿಂದೆಂದೂ ಆಗದ ಪ್ರಮಾಣದಲ್ಲಿ ಇಳಿಸುವಂತಹ ಮಾರ್ಗವನ್ನು ತೋರಿಸಿಕೊಟ್ಟಿದೆ’ ಎಂದು  ನಿಟ್ಟಿನಲ್ಲಿ ಅಧ್ಯಯನ ನಡೆಸಿದ ಬ್ರಿಟನ್ ವಿಜ್ಞಾನಿ ತಪಸ್ ಮಲಿಕ್ ಹೇಳಿದರುಮೋಡಭರಿತ ವಾತಾವರಣದಲ್ಲಿ ’ಕ್ಯಾಬೇಜ್ ಬಿಳಿ ಚಿಟ್ಟೆಗಳು’ ಇತರ ಚಿಟ್ಟೆಗಳಿಗಿಂತ ಮೊದಲೇ ಆಕಾಶದಲ್ಲಿ ಹಾರುತ್ತವೆಹೀಗೆ ಹಾರಲು  ಕೀಟವು ಸೂರ್ಯನ ಬಿಸಿಲಿನಿಂದ ತನ್ನ ’ಯಾನ ಸ್ನಾಯುವನ್ನು ಹೆಚ್ಚು ಬಿಸಿಮಾಡಿಕೊಳ್ಳಲು  ತಂತ್ರವನ್ನು ಬಳಸುತ್ತದೆಮೊದಲೇ ಹೆಚ್ಚು ಮೋಡವಿದ್ದಾಗ ಇತರ ಚಿಟ್ಟೆಗಳಿಗಿಂತ ಹೆಚ್ಚು ಬೇಗನೇ ಹಾರುವ ಸಾಮರ್ಥ್ಯ  ಜಾತಿಯ ಚಿಟ್ಟೆಗಳಿಗೆ ಬರುವುದು  ವಿಶಿಷ್ಟ ತಂತ್ರದಿಂದಲೇ ಎಂಬುದನ್ನು ಭಾರತೀಯ ವಿಜ್ಞಾನಿ ತಮ್ಮ ಅಧ್ಯಯನದಿಂದ ಕಂಡುಕೊಂಡಿದ್ದಾರೆ

2015: ಒಟ್ಟಾವಭೂಮಿಯಿಂದ ಸಾವಿರಾರು ಅಡಿ ಎತ್ತರದಲ್ಲಿ ಕೆನಡಾದ  ಒಟ್ಟಾವ ನಗರದ ಬಾನಂಗಳಲ್ಲಿಪಕ್ಷಿಗಿಂತ ತಾನೇನು ಕಡಿಮೆ ಎನ್ನುವಂತೆಅದೂ ಕೈ ಕೈ ಹಿಡಿದು ಗುಂಪು ಗುಂಪಾಗಿ ಜೇಡನ ಬಲೆಯಂತೆ ತಲೆಕೆಳಗಾಗಿ ‘ಡೈವ್’ ಮಾಡುವ ಮೂಲಕ 164 ಮಂದಿ ಅಂತಾರಾಷ್ಟ್ರೀಯ ಡೈವರ್ ಗಳ ತಂಡ  2015 ಜುಲೈ 31 ಶುಕ್ರವಾರ ವಿಶ್ವದಾಖಲೆ ನಿರ್ಮಿಸಿತು.  ಡೈವರ್ ಗಳು  ಬಾನಂಗಳದಿಂದ ಭೂಮಿಯ ಕಡೆಗೆ ತಲೆಕೆಳಗಾಗಿಒಬ್ಬರಿಗೊಬ್ಬರು ಕೈ ಕೈ ಹಿಡಿದುಕೊಂಡು ಸಾಗುವ ಮೂಲಕ ಅಪೂರ್ವ ಸಾಹಸವನ್ನು ಪ್ರದರ್ಶಿಸಿದರು.

2015: ಸ್ಯಾಂಟಿಯಾಗೊಮನುಷ್ಯರಲ್ಲಿ ಗಡ್ಡೆ ನಿರೋಧಿ ಸ್ಪಂದನೆಯನ್ನು ಹೆಚ್ಚಿಸುವ ಮೂಲಕ ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ನಡೆಸುವಂತಹ ಹೊಸ ‘ಪ್ರತಿರಕ್ಷಾ ಚಿಕಿತ್ಸೆಯನ್ನು (ಇಮ್ಯೂನೊಲಾಜಿಕಲ್ ಥೆರೆಪಿಚಿಲಿಯ ಸ್ಯಾಂಟಿಯಾಗೊ ನಗರದಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಸಂಶೋಧಕರು ಪ್ರಕಟಿಸಿದರು. ‘ಚಿಕಿತ್ಸೆಯು ಇನ್ನೂ ಕ್ಲಿನಿಕ್ಪೂರ್ವ ಹಂತದಲ್ಲಿದೆ’ ಎಂದು ಇದನ್ನು ಕಂಡು ಹಿಡಿದಿರುವ ಸ್ಯಾಂಟಿಯಾಗೊ ವಿಶ್ವವಿದ್ಯಾಲಯದ ಸಂಶೋಧಕ ಕ್ಲಾಡಿಯೊ ಅಕ್ಯುನಾ ಹೇಳಿದರುಶೀಘ್ರದಲ್ಲೇ  ಚಿಕಿತ್ಸೆಗೆ ಅಮೆರಿಕದಲ್ಲಿ ಪೇಟೆಂಟ್ ಪಡೆಯಲಾಗುವುದು ಎಂದು ಅವರು ಹೇಳಿರುವುದಾಗಿ ಕ್ಷಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿತು. ‘ಕ್ಯಾನ್ಸರ್ ಲಕ್ಷಣಗಳು ಕಂಡು ಬಂದ ವ್ಯಕ್ತಿಗಳಿಗಾಗಿ ಲಸಿಕೆ ತಯಾರಿಸುವುದು  ಚಿಕಿತ್ಸೆಯ ಗುರಿಇದು ಕ್ಯಾನ್ಸರ್ ಲಕ್ಷಣಗಳು ಕಂಡು ಬಂದ ವ್ಯಕ್ತಿಗಳ ಕ್ಯಾನ್ಸರ್ ಗಡ್ಡೆಗಳ ವಿರುದ್ಧ ಪ್ರತಿರಕ್ಷಾ ಸ್ಪಂದನೆಯನ್ನು ವರ್ಧಿಸಲು ಅನುಕೂಲ ಮಾಡಿಕೊಡುತ್ತದೆಕ್ಯಾನ್ಸರ್ ಸ್ಥಿತಿಯಿಂದ ಹಿಂದಕ್ಕೆ ತರಲಾದೀತು ಎಂದು ನಾವು ನಿರೀಕ್ಷಿಸುವುದಿಲ್ಲ ಆದರೆ ಪರ್ಯಾಯದ ಕೊಡುಗೆ ನೀಡುತ್ತಿದ್ದೇವೆ’ ಎಂದು ಅಕ್ಯುನಾ ಹೇಳಿದರು.
2015: ಮುಂಬೈಯಾಕುಬ್ ಮೆಮನ್ ಪತ್ನಿಯನ್ನು ರಾಜ್ಯಸಭೆಗೆ ನಾಮಕರಣ ಮಾಡಬೇಕು ಎಂಬುದಾಗಿ ಒತ್ತಾಯಿಸಿದ್ದಕ್ಕಾಗಿ ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ ಮೊಹಮ್ಮದ್ ಫರೂಖ್ ಘೋಸಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಯಿತುಗಲ್ಲಿಗೇರಿಸಲ್ಪಟ್ಟ 1993 ಮುಂಬೈ ಸರಣಿ ಸ್ಪೋಟದ ಅಪರಾಧಿ ಯಾಕುಬ್ ಮೆಮನ್ ಪತ್ನಿಯನ್ನು ರಾಜ್ಯಸಭೆಯ ಸದಸ್ಯರಾಗಿ ನಾಮಕರಣ ಮಾಡಬೇಕು ಎಂಬುದಾಗಿ ಪಕ್ಷಾಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರನ್ನು ಆಗ್ರಹಿಸುವ ಮೂಲಕ ಘೋಸಿ ವಿವಾದ ಹುಟ್ಟುಹಾಕಿದ್ದರುನಾಗಪುರ ಕೇಂದ್ರೀಯ ಸೆರೆಮನೆಯಲ್ಲಿ ಯಾಕುಬ್ನನ್ನು ಗಲ್ಲಿಗೇರಿಸಿದ ಎರಡು ದಿನಗಳ ಬಳಿಕ  ಹೇಳಿಕೆ ನೀಡಿದ ಘೋಸಿ ‘ಮೆಮನ್ ಪತ್ನಿ ರಹೀನ್ ಅಸಹಾಯಕಳಾಗಿದ್ದಾಳೆ’ ಎಂದು ಬಣ್ಣಿಸಿದ್ದರು.
2015: ಕೋಲ್ಕತಬಂಗಾಳ ಕೊಲ್ಲಿಯಲ್ಲಿ ಎದ್ದ ‘ಕೊಮೆನ್’ ಚಂಡಮಾರುತದ ಪರಿಣಾಮವಾಗಿ ಹಿಂದಿನ ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಕೋಲ್ಕತ ನಗರದ ಹಲವಾರು ಪ್ರದೇಶಗಳು ಜಲಾವೃತಗೊಂಡುವಾಹನ ಸಂಚಾರಜನಜೀವನ ಅಸ್ತವ್ಯಸ್ತಗೊಂಡಿತುಹಿಂದಿನ ದಿನ ರಾತ್ರಿಯಿಂದ ಈದಿನ ಬೆಳಗಿನ 8.30 ಗಂಟೆಯವರೆಗೆ 117.4 ಮಿ.ಮೀಮಳೆ ಬಿದ್ದಿರುವುದನ್ನು ಹವಾಮಾನ ಕಚೇರಿ ದಾಖಲಿಸಿತು.
2015: ನವದೆಹಲಿಮುಂಬೈ ಸರಣಿ ಸ್ಪೋಟದ ಪಾತಕಿ ಯಾಕುಬ್ ಮೆಮನ್ನನ್ನು ಗಲ್ಲಿಗೇರಿಸಿದ್ದಕ್ಕೆ ಪ್ರತೀಕಾರವಾಗಿ ಭಾರತದ ಮೇಲೆ ದಾಳಿ ನಡೆಸುವುದಾಗಿ ಭೂಗತಪಾತಕಿ ದಾವೂದ್ ಇಬ್ರಾಹಿಂನ ಬಂಟ ಛೋಟಾ ಶಕೀಲ್ ಬಹಿರಂಗ ಬೆದರಿಕೆ ಹಾಕಿರುವುದಾಗಿ ವರದಿಗಳು ತಿಳಿಸಿದವುಯಾಕುಬ್ ಕುಣಿಕೆಗೆ ಕೊರಳೊಡ್ಡಿದ ಬಳಿಕ ದೆಹಲಿಯ ಆಂಗ್ಲಪತ್ರಿಕೆಯೊಂದಕ್ಕೆ ಶಕೀಲ್ ಕರೆ ಮಾಡಿಯಾಕುಬ್ ಓರ್ವ ಮುಗ್ಧಆತನ ಸೋದರ ಮಾಡಿದ ಅಪರಾಧಕ್ಕಾಗಿ ನೀವು ಶಿಕ್ಷೆ ನೀಡಿದ್ದನ್ನು ಖಂಡಿಸುತ್ತೇವೆಇದು ಕಾನೂನಿನ ಹತ್ಯೆಯೂ ಹೌದುಇದರ ಪರಿಣಾಮ ನೀವು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ ಎಂದು ವರದಿಗಳು ತಿಳಿಸಿದವು
2015: ಇಂಪಾಲಮ್ಯಾನ್ಮಾರ್ ಗಡಿ ಪ್ರದೇಶವಾದ ಮಣಿಪುರದ ಖೇಂಜಾಯ್ ವಲಯದಲ್ಲಿ ಭೂಕುಸಿತ ಸಂಭವಿಸಿ,ಕನಿಷ್ಠ  21ಕ್ಕೂ ಹೆಚ್ಚು ಮಂದಿಸಾವನ್ನಪ್ಪಿದರು.  ಪರ್ವತ ತಪ್ಪಲು ಪ್ರದೇಶಗಳಲ್ಲಿ ವಾಸವಿದ್ದ ಮನೆಗಳ ಮೇಲೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದರಿಂದಾಗಿ 21ಕ್ಕೂ ಹೆಚ್ಚು ಮಂದಿ ಪ್ರಾಣಕಳೆದುಕೊಂಡರು.
2015: ನವದೆಹಲಿಭಾರತದ ಜನಪ್ರಿಯ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ದೇಶದ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ ನೀಡುವ ಬಗ್ಗೆ ಕೇಂದ್ರ ಕ್ರೀಡಾ ಸಚಿವಾಲಯ ಶಿಫಾರಸು ಮಾಡಿದೆ. 2014ರಲ್ಲಿ ನಡೆದ ಇಂಚಾನ್ ಏಷ್ಯನ್ ಗೇಮ್ಸ್ನಲ್ಲಿ ಸಾನಿಯಾ ಮಿಕ್ಸೆಡ್ ಡಬಲ್ಸ್ನಲ್ಲಿ ಸಾಕೆತ್ ಮೈನಿ ಜತೆಗೂಡಿ ಆಡುವ ಮೂಲಕ ಸ್ವರ್ಣ ಪದಕವನ್ನೂಮಹಿಳಾ ಡಬಲ್ಸ್ನಲ್ಲಿ ಪ್ರಾರ್ಥನಾ ಥೋಂಬ್ರೆ ಜತೆಗೂಡಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದರು.
2015: 
ವಾಷಿಂಗ್ಟನ್ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಡ್ರೋನ್ ಒಂದನ್ನು ಸಾಮಾಜಿಕ ಅಂತರ್ಜಾಲ ತಾಣ ಫೇಸ್ಬುಕ್ ಅಭಿವೃದ್ಧಿಪಡಿಸಿದ್ದುಅಂತರ್ಜಾಲ ಲಭ್ಯವಿಲ್ಲದ ಪ್ರದೇಶಗಳಲ್ಲಿ  ಸೌಲಭ್ಯ ಕಲ್ಪಿಸಲು ಬಳಸಲು ನಿರ್ಧರಿಸಿದೆಲೇಸರ್ ಕಿರಣಗಳ ಮೂಲಕ ಭೂಮಿಗೆ ಅಂತರ್ಜಾಲವನ್ನು ‘ಅಖಿಲಾ’ ಎಂಬ ಡ್ರೋನ್ ರವಾನಿಸಲಿದೆಇದು ಭೂಮಿಯಿಂದ 60 ಸಾವಿರದಿಂದ 90 ಸಾವಿರ ಅಡಿ ದೂರದಲ್ಲಿ ಹಾರಾಡುತ್ತದೆಹೀಗಾಗಿ ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಸೇವೆಯ ಮೇಲೆ ಪರಿಣಾಮ ಉಂಟಾಗುವುದಿಲ್ಲ ಯೋಜನೆಯನ್ನು ಹಲವು ತಿಂಗಳುಗಳ ಹಿಂದೆಯೇ ಘೋಷಿಸಿದ್ದ ಫೇಸ್ಬುಕ್ಈಗ ಡ್ರೋನ್ ನಿರ್ಮಾಣವನ್ನು ಪೂರೈಸಿದೆ ವರ್ಷಾಂತ್ಯಕ್ಕೆ ಪ್ರಾಯೋಗಿಕ ಸೇವೆಬೋಯಿಂಗ್ 737 ವಿಮಾನದ ರೀತಿಯ ರೆಕ್ಕೆಗಳನ್ನೇ ಹೊಂದಿರಲಿದ್ದುಒಂದು ಕಾರ್ಗಿಂತಲೂ ಕಡಿಮೆ ತೂಕವಿರಲಿದೆಒಮ್ಮೆ ಹಾರಾಟ ಆರಂಭಿಸಿದರೆ ಮೂರು ತಿಂಗಳು ಸತತವಾಗಿ ಇಂಟರ್ನೆಟ್ ಸೇವೆ ಒದಗಿಸಲಿದೆಪ್ರತಿ ಸೆಕೆಂಡಿಗೆ 10 ಗಿಗಾಬೈಟ್ಗಳವರೆಗಿನ ಬ್ಯಾಂಡ್ವಿಡ್ತ್ ವೇಗದಲ್ಲಿ ದತ್ತಾಂಶ ವರ್ಗಾವಣೆ  ಡ್ರೋನ್ ಮೂಲಕ ಸಾಧ್ಯವಿದೆಇನ್ನೂ ಅಂತರ್ಜಾಲ ಲಭ್ಯವಿಲ್ಲದ ಹಿಂದುಳಿದ ಪ್ರದೇಶಗಳಿಗೆ ಉಚಿತವಾಗಿ ಇಂಟರ್ನೆಟ್ ಒದಗಿಸುವುದು ಫೇಸ್ಬುಕ್ ಉದ್ದೇಶವಾಗಿದೆ ವರ್ಷಾಂತ್ಯದಲ್ಲಿ ಅಮೆರಿಕದಲ್ಲಿ ಡ್ರೋನ್ ಪ್ರಾಯೋಗಿಕ ಹಾರಾಟ ನಡೆಸಲಾಗುತ್ತದೆ.

2008: ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯಲ್ಲಿ ಈದಿನ ಬೆಳಗಿನ ಜಾವ ಚಲಿಸುತ್ತಿದ್ದ ಸಿಕಂದರಾಬಾದ್-ಕಾಕಿನಾಡ ಗೌತಮಿ ಎಕ್ಸ್ ಪ್ರೆಸ್ಸಿನ ಎಸ್-9 ಮತ್ತು 10 ಬೋಗಿಗಳಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿ ಕನಿಷ್ಠ 32 ಮಂದಿ ಸಜೀವ ದಹನಗೊಂಡರುಅನೇಕ ಪ್ರಯಾಣಿಕರು ಗಾಯಗೊಂಡರು.

2007: 1998 ಕೊಯಮತ್ತೂರು ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯ ಈದಿನ ತೀರ್ಪು ಪ್ರಕಟಿಸಿನಿಷೇಧಿತ ಅಲ್ಉಮ್ಮಾ ಸಂಘಟನೆಯ ಸ್ಥಾಪಕ ಎಸ್ಬಾಷಾ ತಪ್ಪಿತಸ್ಥ ಎಂದು ಘೋಷಿಸಿತುಪ್ರಕರಣದ 166 ಆರೋಪಿಗಳ ಬಗ್ಗೆ ತೀರ್ಪು ನೀಡಿದ ನ್ಯಾಯಾಧೀಶ ಕೆಉತ್ತರಾಪತಿ ಕೇರಳ ಮೂಲದ ಸಂಘಟನೆ ಪಿಡಿಪಿಯ ಮುಖ್ಯಸ್ಥ ಅಬ್ದುಲ್ ನಾಸರ್ ಮದನಿಯನ್ನು ಆರೋಪಗಳಿಂದ ಮುಕ್ತಗೊಳಿಸಿದರುಬಾಷಾ ಜೊತೆಗೆ ಅಲ್ಉಮ್ಮಾದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅನ್ಸಾರಿಬಾಷಾನ ಪುತ್ರ ಸಿದ್ದಿಕ್ ಅಲಿ ಮೇಲಿನ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶರು ಹೇಳಿದರು

2007: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿಕಾಯ್ದೆ ತಿದ್ದುಪಡಿ ವಿರೋಧಿಸಿ ಕರೆ ನೀಡಲಾಗಿದ್ದ ಬಂದ್ ಗೆ ಕರ್ನಾಟಕದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತುರಾಜ್ಯದ ಎಲ್ಲ ಜಿಲ್ಲೆಗಳ ಎಪಿಎಂಸಿ ಯಾರ್ಡ್ಡುಗಳು ಬಂದ್ ಆಚರಿಸಿದವುರಾಜ್ಯ ವಿಧಾನ ಮಂಡಲದ ಉಭಯ ಸದನಗಳು ಸೂಕ್ತ ರೀತಿಯಲ್ಲಿ ಚರ್ಚೆ ಮಾಡದೇ ಎಪಿಎಂಸಿ ತಿದ್ದುಪಡಿ ಮಸೂದೆ ಅಂಗೀಕರಿಸಿವೆತಿದ್ದುಪಡಿಯು ರೈತರಿಗೆ ಮಾರಕವಾಗಲಿದೆ ಎಂದು ಆರೋಪಿಸಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ ಕೆ ಸಿ ಸಿ ಅನಿರ್ದಿಷ್ಟ ಕಾಲದ ಬಂದ್ ಗೆ ಕರೆ ನೀಡಿತ್ತುಒಟ್ಟು 144 ಬೃಹತ್ ಮಾರುಕಟ್ಟೆ, 350 ಉಪ ಮಾರುಕಟ್ಟೆ ಮತ್ತು 700ಕ್ಕೂ ಅಧಿಕ ಚಿಲ್ಲರೆ ಮಾರುಕಟ್ಟೆಗಳು ಬಂದ್ ಆಚರಿಸಿದವು.

2007: ಗಣಪತಿಭಟ್ ಹಾಸಣಗಿಬಿ.ಪಿರಾಜಮ್ಮಎಂ.ಎಸ್ಶೀಲಾಎಂವೆಂಕಟೇಶ ಕುಮಾರ್ಚಿತ್ರನಟ ಶ್ರೀಧರ್ ಸೇರಿದಂತೆ 17 ಮಂದಿ ಕಲಾವಿದರು ಮತ್ತು ಬೆಂಗಳೂರಿನ ರಾಜಾಜಿನಗರದ ಕುಮಾರವ್ಯಾಸ ಮಂಟಪ ಸಂಸ್ಥೆಯನ್ನು 2007-08ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತುಬೆಂಗಳೂರಿನಲ್ಲಿ ಅಕಾಡೆಮಿಯ ಅಧ್ಯಕ್ಷ ರಾಜಶೇಖರ ಮನ್ಸೂರ್ ಅವರು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದರು

2007: ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ತುತ್ತಾದ ಕರ್ನಾಟಕದ ಕರ್ನಲ್ ವಿ.ವಸಂತ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸೇನಾ ಗೌರವದೊಂದಿಗೆ ಬೆಂಗಳೂರಿನಲ್ಲಿ ನೆರವೇರಿತು.

2007: ಡೇರಾ ಸಚ್ಚಾ ಸೌದಾ ಧಾರ್ಮಿಕ ಪಂಗಡದ ಗುರು ಬಾಬಾ ಗುರ್ಮಿತ್ ರಾಮ್ ಸಿಂಗ್ ಅವರ ವಿರುದ್ಧ ಎರಡು ಕೊಲೆ ಹಾಗೂ ಒಂದು ಮಾನಭಂಗ ಮೊಕದ್ದಮೆಯನ್ನು ಕೇಂದ್ರ ತನಿಖಾ ದಳ (ಸಿಬಿಐದಾಖಲಿಸಿತುಡೇರಾದ ವ್ಯವಸ್ಥಾಪಕ ರಂಜಿತ್ ಸಿಂಗ್ ಮತ್ತು ಸಿರ್ಸಾ ಮೂಲದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಪ್ರಕರಣ ಹಾಗೂ ಶಿಷ್ಯೆಯೊಬ್ಬಳ ಮಾನಭಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆಗಳನ್ನು ಹೂಡಲಾಗಿದೆ ಎಂದು ಸಿಬಿಐ ವಕೀಲ ರಾಜನ್ ಗುಪ್ತಾ ಪ್ರಕಟಿಸಿದರು

2007: ಗಿನ್ನೆಸ್ ಪುಸ್ತಕದಲ್ಲಿ ಸ್ಥಾನ ಪಡೆಯುವ ಸಲುವಾಗಿ ಒರಿಸ್ಸಾದ `ಭುವನೇಶ್ವರದ ಸ್ಟ್ರಾಂಗ್ ಮ್ಯಾನ್ಎಂದೇ ಹೆಸರು ಪಡೆದ ಕೇಶವ್ ಸ್ವೇನ್ ಭುವನೇಶ್ವರದಲ್ಲಿ ತನ್ನ ಬಲ ಮೊಣಕೈಯ ಸಹಾಯದಿಂದ ಒಂದು ನಿಮಿಷದಲ್ಲಿ 72 ತೆಂಗಿನಕಾಯಿಗಳನ್ನು ಒಡೆದು ನೂತನ ದಾಖಲೆ ನಿರ್ಮಿಸಿದರುಮಣ್ಣು ಮತ್ತು ಸಿಮೆಂಟಿನಿಂದ ನಿರ್ಮಿಸಿದ 3 ಅಡಿ ಎತ್ತರ ಮತ್ತು 20 ಅಡಿ ಉದ್ದದ ಗೋಡೆಯಲ್ಲಿ ಸಾಲಾಗಿ ತೆಂಗಿನಕಾಯಿಗಳನ್ನು ಇರಿಸಲಾಗಿತ್ತುಕೇಶವ್ ಒಂದು ನಿಮಿಷದಲ್ಲಿ ಒಟ್ಟು 72 ತೆಂಗಿನಕಾಯಿಗಳನ್ನು ಒಡೆಯುವಲ್ಲಿ ಯಶಸ್ವಿಯಾದರು.

2006: ಅಮೆರಿಕಕ್ಕೆ ಸಡ್ಡು ಹೊಡೆದು ನಿಂತ ಕ್ಯೂಬಾದ ಕಮ್ಯೂನಿಸ್ಟ್ ನಾಯಕ ಫಿಡೆಲ್ ಕ್ಯಾಸ್ಟ್ರೋ 47 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿಯನ್ನು ಸಹೋದರ ರೌಲ್ ಅವರಿಗೆ ತಾತ್ಕಾಲಿಕವಾಗಿ ಬಿಟ್ಟುಕೊಟ್ಟರುಕರುಳಿನ ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ಅವರು  ನಿರ್ಧಾರಕ್ಕೆ ಬಂದರು.

2006: ಅರಿಶಿಣ ಮತ್ತು ಈರುಳ್ಳಿಯ ರಸಾಯನಗಳಿಂದ ಸಿದ್ಧಪಡಿಸಿದ ಗುಳಿಗೆ ಕರುಳು ಕ್ಯಾನ್ಸರ್ ನಿಯಂತ್ರಣಕ್ಕೆ ಉತ್ತಮ ಔಷಧ ಎಂಬುದು ಬೆಳಕಿಗೆ ಬಂದಿದೆ ಎಂದು ಹ್ಯೂಸ್ಟನ್ ಜಾನ್ ಕಾಪ್ ಕಿನ್ಸ್ ವಿಶ್ವವಿದ್ಯಾಲಯ ಔಷಧ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಫ್ರಾನ್ಸಿಸ್ ಪ್ರಕಟಿಸಿದರು ಔಷಧವನ್ನು 6 ತಿಂಗಳ ಕಾಲ ರೋಗಿಗಳ ಮೇಲೆ ಪ್ರಯೋಗಿಸಲಾಗಿದೆ ಎಂದು ಅವರು ಹೇಳಿದರು.

2006: ಮಾಹಿತಿ ತಂತ್ರಜ್ಞಾನದಲ್ಲಿ ಉತ್ತಮ ಸಾಧನೆ ಮಾಡಿರುವ ಬೆಂಗಳೂರಿನ ವಿಪ್ರೊ ಸಂಸ್ಥೆಗೆ 2004-05 ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ರಫ್ತು ಪ್ರಶಸ್ತಿ ಲಭಿಸಿತು.

2001: ಕಲ್ಯಾಣ ಕುಮಾರ್ ನಿಧನ.

1997: `ವಿಮಾನಯಾನ ದೈತ್ಯರುಎಂದೇ ಹೆಸರಾಗಿದ್ದ ಬೋಯಿಂಗ್ ಕಂಪೆನಿ ಮತ್ತು ಮೆಕ್ ಡೊನ್ನೆಲ್ ಡಗ್ಲಾಸ್ ಕಾರ್ಪೊರೇಷನ್ನುಗಳು ಪರಸ್ಪರ ವಿಲೀನಗೊಂಡು ಜಗತ್ತಿನ ಅತಿದೊಡ್ಡ ವಿಮಾನಯಾನ ಸಂಸ್ಥೆಯನ್ನು ಹುಟ್ಟುಹಾಕಿದವು.

1996: ಅಟ್ಲಾಂಟಾ ಒಲಿಂಪಿಕ್ಸ್ ನಲ್ಲಿ 200 ಮೀಟರ್ ಓಟದ ಸ್ವರ್ಣಪದಕವನ್ನು ಅಮೆರಿಕದ ಮೈಕೆಲ್ ಜಾನ್ಸನ್ ಗೆದ್ದುಕೊಂಡರು ಸಾಧನೆಯಿಂದ ಒಂದೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 200 ಮತ್ತು 400 ಮೀಟರ್ ಓಟಗಳೆರಡರಲ್ಲೂ ಸ್ವರ್ಣಗೆದ್ದ ಪ್ರಪ್ರಥಮ ಅಥ್ಲೆಟ್ ಎಂಬ ಕೀರ್ತಿ ಅವರಿಗೆ ಲಭಿಸಿತು.

1981: ನಡುರಾತ್ರಿ 12.01 ಗಂಟೆಗೆ ಎಮ್ ಟಿವಿ (ಮ್ಯೂಸಿಕ್ ಟೆಲಿವಿಷನ್ತನ್ನ ಚೊಚ್ಚಲ ಪ್ರಸಾರ ಆರಂಭಿಸಿತು.

1957: ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಎಂಬ ಸ್ವತಂತ್ರ ಸಂಸ್ಥೆಯನ್ನು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಈದಿನ ಉದ್ಘಾಟಿಸಿದರುನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಭಾರತೀಯ ಪ್ರಕಾಶನ ಸಂಸ್ಥೆಯಾಗಿದ್ದುಇತರ ಪ್ರಕಾಶಕರ ನಡುವೆ ಸ್ಪರ್ಧೆ ಏರ್ಪಡದಂತೆ ಮಾಡುವ ಸಲುವಾಗಿ ಪ್ರಾರಂಭಗೊಂಡಿತು.

1936: ಅಡಾಲ್ಫ್ ಹಿಟ್ಲರನಿಂದ ಬರ್ಲಿನ್ನಿನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಉದ್ಘಾಟನೆಗೊಂಡಿತುಗ್ರೀಸಿನಿಂದ ಒಲಿಂಪಿಕ್ ಕ್ರೀಡಾಜ್ಯೋತಿಯನ್ನು ತಂದ ಮೊತ್ತ ಮೊದಲ ಒಲಿಂಪಿಕ್ ಕ್ರೀಡಾಕೂಟ ಇದಾಗಿತ್ತು.

1932: ಭಾರತೀಯ ಚಿತ್ರನಟಿ ಮೇಹ್ಜಬೀನ್ ಬಕ್ಸ್ (1932-1972) ಜನ್ಮದಿನಮೀನಾಕುಮಾರಿ ಎಂದೇ ಜನಪ್ರಿಯರಾಗಿದ್ದ ಇವರಿಗೆ `ಪಾಕೀಜಾಸಿನಿಮಾದ ಪಾತ್ರ ಅದ್ಭುತ ಖ್ಯಾತಿಯನ್ನು ತಂದುಕೊಟ್ಟಿತು.

1931: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮಹಾತ್ಮಾ ಗಾಂಧೀಜಿಯವರ ರಾಷ್ಟ್ರಧ್ವಜದ ವಿನ್ಯಾಸವನ್ನು ಕೆಲವು ಬದಲಾವಣೆಗಳೊಂದಿಗೆ ಅಂಗೀಕರಿಸಿತು. ( ತ್ರಿವರ್ಣ ಧ್ವಜದ ಕೇಸರಿ ಬಣ್ಣವು ಶೌರ್ಯ ಹಾಗೂ ಬಲಿದಾನ, ಬಿಳಿ ಬಣ್ಣವು ಶಾಂತಿ ಹಾಗೂ ಸತ್ಯ, ಹಸಿರು ಬಣ್ಣವು ವಿಶ್ವಾಸ ಹಾಗೂ ಶಕ್ತಿಯನ್ನು ಮತ್ತು ಚಕ್ರವು ಜನ ಸಮೂಹದ ಕಲ್ಯಾಣವನ್ನು ಸಂಕೇತಿಸುತ್ತವೆ.)

1914: ಖ್ಯಾತ ಕನ್ನಡ ಸಾಹಿತಿ ನಂಜುಂಡಾರಾಧ್ಯ (ಅಮರವಾಣಿ) ಅವರು ಗಂಗಾಧರಯ್ಯ- ವೀರಮ್ಮ ದಂಪತಿಯ ಪುತ್ರನಾಗಿ ಕೋಲಾರ ಜಿಲ್ಲೆಯ ಗೌರಿ ಬಿದನೂರು ತಾಲ್ಲೂಕಿನ ಗುಂಡ್ಲ ಹಳ್ಳಿಯಲ್ಲಿ ಜನಿಸಿದರು. ಕನ್ನಡ, ಹಿಂದಿ, ತೆಲುಗು, ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ನಂಜುಂಡಾರಾಧ್ಯ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

1882: ಭಾರತದ ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಪುರುಷೋತ್ತಮದಾಸ್ ಟಂಡನ್ (1882-1962) ಜನ್ಮದಿನ.

1849: ಬ್ರಿಟಿಷ್ ಸಂಸತ್ತು ಕಾನೂನಿನ ಮೂಲಕ `ಗ್ರೇಟ್ ಇಂಡಿಯನ್ ಪೆನಿನ್ ಸ್ಯುಲರ್ ರೈಲ್ವೇ'ಯನ್ನು (ಜಿಐಪಿ) ಸ್ಥಾಪಿಸಿತು. ಈಗ ಇದು `ಸೆಂಟ್ರಲ್ ರೈಲ್ವೇ' ಆಗಿದೆ.

1833: ಇಂಗ್ಲೆಂಡಿನಲ್ಲಿ `ಗುಲಾಮೀ ಪದ್ಧತಿ' ರದ್ದುಗೊಂಡಿತು. ಇದು ವಿಲಿಯಂ ವಿಲ್ಬೆರ್ ಫೋರ್ಸ್ ನಡೆಸಿದ 40 ವರ್ಷಗಳ ಹೋರಾಟದ ಫಲಶ್ರುತಿ.

1790: ಅಮೆರಿಕದ ಮೊದಲ ಜನಗಣತಿ.

1774: ಜೋಸೆಫ್ ಪ್ರೀಸ್ಲೆ ಅವರಿಂದ ಪ್ರಾಣವಾಯು ಆಮ್ಲಜನಕದ ಸಂಶೋಧನೆ


No comments:

Post a Comment