Sunday, August 25, 2019

ಇಂದಿನ ಇತಿಹಾಸ History Today ಆಗಸ್ಟ್ 25

2019: ಬಾಸೆಲ್: ಬಿ.ಡಬ್ಲ್ಯು.ಎಫ್. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಪಿ.ವಿ. ಸಿಂಧು ಅವರು ಭಾರತಕ್ಕೆ ಮೊತ್ತ ಮೊದಲ ಸ್ವರ್ಣ ಪದಕವನ್ನು ಗೆದ್ದು ತಂದುಕೊಡುವ ಮೂಲಕ ಇತಿಹಾಸ ಸೃಷ್ಟಿಸಿದರು.  ಈದಿನ ನಡೆದ ಫೈನಲ್ ಕಾದಾಟದಲ್ಲಿ ವಿಶ್ವದ 5ನೇ ಶ್ರೇಯಾಂಕಿತ ಆಟಗಾರ್ತಿಯಾಗಿರುವ ಸಿಂಧು ಅವರು ವಿಶ್ವದ ನಾಲ್ಕನೇ ಶ್ರೇಯಾಂಕಿತೆ ಜಪಾನಿನ ನೊಜೊಮಿ ಒಕುಹರಾ ಅವರನ್ನು ಸೋಲಿಸುವ ಮೂಲಕ ಸಾಧನೆಯನ್ನು ಮಾಡಿದರು.ಸಿಂಧು ಅವರು ಹಿಂದಿನ ದಿನವಷ್ಟೇ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಚೀನದ ಚೆನ್ ಯು ಫೀ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಭಾರತೀಯರಲ್ಲಿ ಚಿನ್ನದ ಆಶಾಕಿರಣವನ್ನು ಮೂಡಿಸಿದ್ದರು. ಇದು ಭಾರತೀಯ ಆಟಗಾರರೊಬ್ಬರು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಗೆದ್ದ ಮೊತ್ತ ಮೊದಲ ಸ್ವರ್ಣವಾಗಿದೆ.

2019: ನವದೆಹಲಿ:  ಇಡೀ ದೇಶವನ್ನು ಸದೃಢವಾಗಿರಿಸಲುಫಿಟ್ ಇಂಡಿಯಾಚಳವಳಿಗೆ ಚಾಲನೆ ನೀಡುವ ಸುಳಿವನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರುಮಹಾತ್ಮಾ ಗಾಂಧಿಯವರ ೧೫೦ನೇ ಜನ್ಮದಿನವಾದ ಅಕ್ಟೋಬರ್ ೨ರಿಂದ ದೇಶವನ್ನುಪ್ಲಾಸ್ಟಿಕ್ ಮುಕ್ತ ರಾಷ್ಟ್ರವನ್ನಾಗಿಮಾಡುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಪ್ರಕಟಿಸಿದರು.ತಮ್ಮ ಮಾಸಿಕಮನ್ ಕಿ ಬಾತ್’ (ಮನದಾಳ) ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಪ್ರಧಾನಿಯವರು  ದೇಶದ ಪ್ರತಿಯೊಬ್ಬರೂ ಸದೃಢವಾಗಿರಬೇಕು. ಹೀಗಾಗಿ ಕೇಂದ್ರವುಫಿಟ್ ಇಂಡಿಯಾಆಂದೋಲನ ಆರಂಭಿಸಲಿದೆ ಎಂದು ಹೇಳಿದರು.ಅಕ್ಟೋಬರ್ ೨ರಂದು ಮಹಾತ್ಮ ಗಾಂಧಿ ಅವರ ೧೫೦ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಬಾರಿ ನಾವು ಕೇವಲ ಬಯಲು ಮುಕ್ತ ಶೌಚಾಲಯ ಮಾಡುವುದು ಮಾತ್ರವಲ್ಲ, ಪ್ಲಾಸ್ಟಿಕ್ ಮುಕ್ತ ರಾಷ್ಟ್ರವನ್ನಾಗಿ ಮಾಡುವ ಧ್ಯೇಯದೊಂದಿಗೆ ಮಹಾತ್ಮಾ ಗಾಂಧಿ ಅವರ ಜನ್ಮದಿನವನ್ನು ಆಚರಿಸಬೇಕುಎಂದು ಪ್ರಧಾನಿ ಕರೆ ನೀಡಿದರು.ಪ್ಲಾಸ್ಟಿಕ್ ತಾಜ್ಯದ ಸುರಕ್ಷಿತ ವಿಲೇವಾರಿಗೆ ಇರುವ ಮಾರ್ಗಗಳನ್ನು ದೀಪಾವಳಿ ಹಬ್ಬದ ಒಳಗೆ ಸೂಚಿಸುವಂತೆ ನಗರಸಭೆ, ಎನ್ ಜಿಒ ಹಾಗೂ ಕಾರ್ಪೊರೇಟ್ ವಲಯಕ್ಕೆ ಪ್ರಧಾನಿ ಸೂಚಿಸಿದರು. ’ಅಕ್ಟೋಬರ್ ೨ರ ಗಾಂಧೀಜಿ ಜನ್ಮದಿನದಂದು ಬಹಿರ್ದೆಸೆ ಮುಕ್ತ ಭಾರತವನ್ನು ಮಹಾತ್ಮರಿಗೆ ಅರ್ಪಿಸುವುದರ ಜತೆಗೆ ಪ್ಲಾಸ್ಟಿಕ್ ಬಳಕೆ ವಿರುದ್ಧ ದೇಶದಾದ್ಯಂತ ಹೊಸ ಜನಾಂದೋಲನಕ್ಕೆ ಅಡಿಪಾಯ ಹಾಕಬೇಕು. ಮೂಲಕ ಪ್ಲಾಸ್ಟಿಕ್ ಮುಕ್ತ ಭಾರತ ಮಾತೆಯ ದಿನವನ್ನು ಅಚರಿಸಬೇಕುಎಂದು ಮೋದಿ ಹೇಳಿದರು. ಜಿಲ್ಲಾಡಳಿತಗಳು, ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಹಾಗೂ ದಾಸ್ತಾನಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ಮರುಬಳಕೆ, ಅದನ್ನು ಇಂಧನವಾಗಿ ಪರಿವರ್ತಿಸುವ ಸಾಧ್ಯತೆಗಳನ್ನು ಕಾರ್ಪೊರೇಟ್ ಸಂಸ್ಥೆಗಳು ಸೂಚಿಸಬಹುದು. ಎಲ್ಲವೂ ಸಾಕಾರಗೊಂಡಲ್ಲಿ, ಅಕ್ಟೋಬರ್ ೨೭ರ ಒಳಗೆ ಪ್ಲಾಸ್ಟಿಕ್ ಕಸದ ಸುರಕ್ಷಿತ ವಿಲೇವಾರಿಯ ಗುರಿ ಈಡೇರಲಿದೆಎಂದು ಮೋದಿ ಹೇಳಿದರು. ’ ಚಳವಳಿ ಈಗಾಗಲೇ ಶುರುವಾಗಿದೆ. ಕೆಲವು ವ್ಯಾಪಾರಿ ಸ್ನೇಹಿತರು ಕೈಚೀಲಗಳನ್ನು ತರುವಂತೆ ಗ್ರಾಹಕರಿಗೆ ಸೂಚಿಸುವ ಫಲಕಗಳನ್ನು ತಮ್ಮ ಅಂಗಡಿಗಳಲ್ಲಿ ಹಾಕಿದ್ದಾರೆ. ಇದು ಹಣಕಾಸಿನ ಉಳಿತಾಯವಷ್ಟೇ ಅಲ್ಲ, ಪರಿಸರಕ್ಕೆ ನೀಡುವ ಕೊಡುಗೆಯೂ ಹೌದುಎಂದು ಪ್ರಧಾನಿ ವಿವರಿಸಿದರು. ಮುನ್ನ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕುರಿತು ಮಾತನಾಡಿದ್ದ ಪ್ರಧಾನಿ, ಪರಿಸರವನ್ನು ಸಂರಕ್ಷಿಸಲು  ಒಂದು ಬಾರಿ ಉಪಯೋಗಿಸಿ ಎಸೆಯುವ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯಿಂದ ದೂರವಿರುವಂತೆ ಜನರಲ್ಲಿ ಮನವಿ ಮಾಡಿದ್ದರು. ಪರಿಸರಸ್ನೇಹಿ ಕೈಚೀಲಗಳನ್ನು ಗ್ರಾಹಕರಿಗೆ ಒದಗಿಸುವಂತೆ ವ್ಯಾಪಾರಿಗಳಿಗೆ  ಅವರು ಸೂಚಿಸಿದ್ದರು. ಸೆಪ್ಟೆಂಬರ್ ೧೧ರಿಂದ ಆರಂಭವಾಗಲಿರುವಸ್ವಚ್ಛತೆಯೇ ಸೇವೆಕಾರ್ಯಕ್ರಮದಲ್ಲಿ ಭಾಗಿಯಾಗುವಂತೆಯೂ ಪ್ರಧಾನಿ ಜನರಿಗೆ ಮನವಿ ಮಾಡಿದರು. ಅರಣ್ಯ, ವನ್ಯಜೀವಿ ಸಂರಕ್ಷಣೆಯ ಜೊತೆಗೆ ಅವುಗಳ ಏಳಿಗೆಗೆ ಪೂರಕ ವಾತಾವರಣ ಸೃಷ್ಟಿಸಿಬೇಕಾದ ಸಮಯ ಬಂದಿದೆ. ವಿಚಾರದಲ್ಲಿ ಧರ್ಮಗ್ರಂಥಗಳು ಮಾರ್ಗದರ್ಶನ ನೀಡಿವೆ ಎಂದು ಹೇಳಿದ ಪ್ರಧಾನಿ, ಸೂಕ್ತಿಯೊಂದರ ಸಾರಾಂಶವನ್ನು ಉಲ್ಲೇಖಿಸಿ  ಅರಣ್ಯಗಳು ನಾಶವಾದರೆ, ಅಲ್ಲಿನ ಹುಲಿಗಳು ನಾಡಿಗೆ ಬರುತ್ತವೆ. ಆಗ ಮನುಷ್ಯ ಅವುಗಳನ್ನು ಕೊಲ್ಲುತ್ತಾನೆ. ಹುಲಿಗಳಿಲ್ಲದ ಕಾಡನ್ನು ಕಡಿದು ನಾಶಗೊಳಿಸುತ್ತಾನೆ. ನಿಜವಾಗಿಯೂ ಕಾಡನ್ನು ರಕ್ಷಿಸುತ್ತಿರುವುದು ಹುಲಿಗಳೇ ಹೊರತು, ಕಾಡು ಅವುಗಳನ್ನು ರಕ್ಷಿಸುತ್ತಿಲ್ಲ. ನಮ್ಮ ಹಿಂದಿನವರು ಸತ್ಯವನ್ನು ಹೇಳಿಹೋಗಿದ್ದಾರೆ. ನಾವು ಕಾಡು, ಕಾಡುಪ್ರಾಣಿಗಳನ್ನು ಸಂರಕ್ಷಣೆ ಮಾಡುವುದಷ್ಟೇ ಅಲ್ಲದೇ, ಅವುಗಳು ಬದುಕಿ ಬಾಳುವ ಪೂರಕ ವಾತಾವರಣ ನಿರ್ಮಿಸಬೇಕುಎಂದು ಹೇಳಿದರು.ದೇಶದಲ್ಲಿ ಈಗ ,೯೬೭ ಹುಲಿಗಳಿವೆ. ಕೆಲ ವರ್ಷಗಳ ಹಿಂದೆ ಸಂಖ್ಯೆಯ ಅರ್ಧದಷ್ಟೂ ಹುಲಿಗಳು ಇರಲಿಲ್ಲ. ಹುಲಿಗಳ ಜೊತೆ ರಕ್ಷಿತಾರಣ್ಯಗಳ ಸಂಖ್ಯೆಯೂ ಹೆಚ್ಚಳವಾಗಿದೆ ಎಂದು ಮೋದಿ ನುಡಿದರು.ಡಿಸ್ಕವರಿ ಚಾನೆಲಿನಲ್ಲಿ ಪ್ರಸಾರವಾದಮ್ಯಾನ್ ವರ್ಸಸ್ ವೈಲ್ಡ್ಕಾರ್ಯಕ್ರಮದಲ್ಲಿ ಬೇರ್ ಗ್ರಿಲ್ಸ್ ಹಾಗೂ ಪ್ರಧಾನಿ ಮೋದಿ ನಡುವಿನ ಸಂಭಾಷಣೆ ಬಗ್ಗೆ ಸಾಕಷ್ಟು ಜನರಿಗೆ ಕುತೂಹಲ ಇದ್ದ ಬಗ್ಗೆ ಪ್ರಸ್ತಾಪಿಸಿದ ಮೋದಿನನ್ನ ಹಿಂದಿ ಭಾಷೆ ಗ್ರಿಲ್ ಅವರಿಗೆ ಅರ್ಥವಾಗುತ್ತಾ ಎಂದು ಹಲವರು ಪ್ರಶ್ನಿಸಿದ್ದರು. ಇದನ್ನು ಸಾಧ್ಯವಾಗಿಸಿದ್ದು ತಂತ್ರಜ್ಞಾನ  ಎಂದು ಹೇಳಿದರು.”ನನ್ನ ಮಾತುಗಳು ತತ್ ಕ್ಷಣವೇ ಇಂಗ್ಲಿಷಿಗೆ ತರ್ಜುಮೆಯಾಗುತ್ತಿದ್ದವು. ಗ್ರಿಲ್ಸ್ ಅವರ ಕಿವಿಗೆ ಪುಟ್ಟ ಉಪಕರಣವೊಂದನ್ನು ಅಳವಡಿಸಲಾಗಿತ್ತು. ನಾನು ಹಿಂದಿಯಲ್ಲಿ ಮಾತನಾಡಿದರೆ, ಅವರಿಗೆ ಇಂಗ್ಲಿಷಿನಲ್ಲಿ ಕೇಳಿಸುತ್ತಿತ್ತು. ಹೀಗಾಗಿ ಸಂವಹನ ಸುಲಭವಾಯಿತು. ಇದು ತಂತ್ರಜ್ಞಾನದ ಅದ್ಭುತಎಂದು ಮೋದಿ ವಿವರಿಸಿದರು.

2019: ನವದೆಹಲಿ:  ಬಿಜೆಪಿಯ ಹಿರಿಯ ನಾಯಕ, ಮಾಜಿ ವಿತ್ತ ಸಚಿವ ದಿವಂಗತ ಅರುಣ್ ಜೇಟ್ಲಿ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ, ವಿವಿಧ ಪಕ್ಷಗಳ ಹಲವಾರು ರಾಜಕೀಯ ಗಣ್ಯರು ಮತ್ತು ಸಹಸ್ರಾರು ಮಂದಿ ಅಭಿಮಾನಿಗಳು ಹಾಗೂ ಪಕ್ಷ ಕಾರ್ಯಕರ್ತರ ಸಮ್ಮುಖದಲ್ಲಿ ದೆಹಲಿಯಲ್ಲಿನ ಯಮುನಾ ನದಿ ದಂಡೆಯಲ್ಲಿರುವ ನಿಗಮ್ ಬೋಧ್ ಘಾಟ್ನಲ್ಲಿ  ಮಧ್ಯಾಹ್ನ ನೆರವೇರಿತು. ಇದರೊಂದಿಗೆ ಜೇಟ್ಲಿಯವರು ಪಂಚಭೂತಗಳಲ್ಲಿ ಲೀನರಾದರು. ಅರುಣ್ ಜೇಟ್ಲಿ ಪುತ್ರ ರೋಹನ್ ಜೇಟ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತಿಮ ಸಂಸ್ಕಾರ  ನೆರವೇರಿಸಿದರು. ಅರುಣ್ ಜೇಟ್ಲಿ ಕುಟುಂಬಸ್ಥರು, ಸಂಬಂಧಿಕರು, ಆಪ್ತರು, ಬಿಜೆಪಿಯ ಹಿರಿಯ ಮುಖಂಡರು ಹಾಗೂ ಕೇಂದ್ರ ಸಚಿವರು ಅಂತಿಮ ಸಂಸ್ಕಾರದ ವೇಳೆ ಹಾಜರಿದ್ದರು.೬೬ರ ಹರೆಯದ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರು ಆಗಸ್ಟ್ ೯ರಿಂದ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಙಾನಗಳ ಸಂಸ್ಥೆಯಲ್ಲಿ (ಏಮ್ಸ್) ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಯೇ ಶನಿವಾರ ಮಧ್ಯಾಹ್ನ ಅವರು ಬಹುಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದರು.ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಕ್ಷದ ಕಾರ್ಯಾಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಮತ್ತು ಅನುರಾಗ ಠಾಕೂರ್, ಬಿಜೆಪಿ ಸಂಸದರಾದ ವಿಜಯ್ ಗೋಯಲ್,   ವಿನಯ ಸಹಸ್ರಬುದ್ಧೆ, ಕಾಂಗ್ರೆಸ್ ನಾಯಕರಾದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕಪಿಲ್ ಸಿಬಲ್ ಚಿತಾಗಾರದಲ್ಲಿ ಹಾಜರಿದ್ದ ಪ್ರಮುಖರಲ್ಲಿ ಸೇರಿದ್ದರು.ಕ್ರಮವಾಗಿ ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಬಿಹಾರ ಮತ್ತು ಉತ್ರರಾಖಂಡದ ಮುಖ್ಯಮಂತ್ರಿಗಳಾದ ದೇವೇಂದ್ರ ಫಢ್ನವಿಸ್, ವಿನಯ್ ರೂಪಾನಿ, ಬಿ.ಎಸ್. ಯಡಿಯೂರಪ್ಪ, ನಿತೀಶ್ ಕುಮಾರ್ ಮತ್ತು ತ್ರಿವೇಂದ್ರ ಸಿಂಗ್ ರಾವತ್ ಅವರೂ ಅಂತ್ಯಕ್ರಿಯೆ ಸಂದರ್ಭದಲ್ಲಿ ಹಾಜರಿದ್ದರು. ಇದಕ್ಕೆ ಮುನ್ನ ಅರುಣ್ ಜೇಟ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಈದಿನ ಬೆಳಗ್ಗೆ ಬಿಜೆಪಿ ಕೇಂದ್ರ ಕಚೇರಿಗೆ ಒಯ್ದು ಇರಿಸಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಲ್ಲಿಗೆ ಆಗಮಿಸಿ ಸರತಿಯ ಸಾಲಿನಲ್ಲಿ ನಿಂತು ನೆಚ್ಚಿನ ನಾಯಕನಿಗೆ ಭಾಷ್ಪಾಂಜಲಿ ಸಲ್ಲಿಸಿದರು.ಕರ್ನಾಟಕದ ಬಿಜೆಪಿ ನಾಯಕರಾದ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೇಂದ್ರ ಸಚಿವರಾದ ಪೀಯೂಷ್ ಗೋಯಲ್ ಹಾಗೂ ಹರ್ಷ ವರ್ಧನ್ ಅವರು ದಿವಂಗತ ನಾಯಕನ ಅಂತಿಮ ದರ್ಶನ ಪಡೆದು ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಜೇಟ್ಲಿ ಅವರ ಪಾರ್ಥಿವ ಶರೀರವನ್ನು ಬಿಜೆಪಿ ಪ್ರಧಾನ ಕಚೇರಿಯಿಂದ ನಿಗಮ್ ಬೋಧ್ ಘಾಟ್ಗೆ ಪುಷ್ಪಾಲಂಕೃತವಾದ ವಿಶೇಷ ವಾಹನದಲ್ಲಿ ಕೊಂಡೊಯ್ಯಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರುಜೇಟ್ಲಿ ಜಿ ಅಮರ್ ರಹೆಘೋಷಣೆ ಮೊಳಗಿಸಿದರು.ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಲು ಪಕ್ಷದ ಪ್ರಧಾನ ಕಚೇರಿ ಆವರಣಕ್ಕೆ ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ಪಾರ್ಥಿವ ಶರೀರದ ವಾಹನವನ್ನು ಹಿಂಬಾಲಿಸಿ ಚಿತಾಗಾರದತ್ತ ನಡೆದರು. ಅಂತ್ಯಕ್ರಿಯೆಯ ಸ್ಥಳಕ್ಕೆ ತೆರಳುವ ಹಾದಿಯುದ್ದಕ್ಕೂ ಜೇಟ್ಲಿ ಅವರನ್ನು ನೆನಪಿಸಿಕೊಳ್ಳುವ ಭಿತ್ತಿ ಚಿತ್ರಗಳು ರಾರಾಜಿಸುತ್ತಿದ್ದವು.

2019: ಮನಾಮ: ಗಡಿಯಾಚೆಯಿಂದ ಭಯೋತ್ಪಾದನೆಗೆ ಇಂಬು ಕೊಡುತ್ತಿರುವ ಪಾಕಿಸ್ತಾನದ ವಿರುದ್ಧ ಈದಿನ ಇಲ್ಲಿ ಪರೋಕ್ಷ ದಾಳಿ ನಡೆಸಿದ ಭಾರತ ಮತ್ತು ಬಹರೇನ್, ಇತರ ರಾಷ್ಟ್ರಗಳ ವಿರುದ್ಧ ಭಯೋತ್ಪಾದನೆ ಬಳಕೆಯನ್ನು ತಿರಸ್ಕರಿಸುವಂತೆ ಜಾಗತಿಕ ಸಮುದಾಯಕ್ಕೆ, ಪ್ರಧಾನಿ ನರೇಂದ್ರ ಮೋದಿ ಅವರ ಕೊಲ್ಲಿ ರಾಜಪ್ರಭುತ್ವ ದೇಶಕ್ಕೆ ನೀಡಿದ ಭೇಟಿ ಕಾಲದಲ್ಲಿ ಕರೆ ನೀಡಿದವು.ಇದೇ ವೇಳೆಗೆ ಭದ್ರತೆ, ಭಯೋತ್ಪಾದನೆ ನಿಗ್ರಹ ಕ್ಷೇತ್ರಗಳಲ್ಲಿ ಗುಪ್ತಚರ ಮತು ಮಾಹಿತಿ ವಿನಿಮಯ ನಿಟ್ಟಿನಲ್ಲಿ ಸಹಕಾರ ವರ್ಧನೆಗೂ ಉಭಯ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡವು.ಭಾರತದ ಪ್ರಧಾನಿಯೊಬ್ಬರು ಬಹರೇನ್ಗೆ ನೀಡಿದ ತಮ್ಮ ಎರಡು ದಿನಗಳ ಚೊಚ್ಚಲ ಭೇಟಿ ಇದಾಗಿದ್ದು, ಸಂದರ್ಭದಲ್ಲಿ ಮೋದಿಯವರು ಬಹರೇನ್ ದೊರೆ ಹಮದ್ ಬಿನ್ ಇಸಾ ಅಲ್ ಖಲೀಫ ಮತ್ತು ರಾಜಕುಮಾರ ಹಾಗೂ ಪ್ರಧಾನಿ ಖಲೀಫ ಬಿನ್ ಸಲ್ಮಾನ್ ಅಲ್ ಖಲೀಫ ಅವರ ಜೊತೆಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದರು.ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಬಹುರಾಷ್ಟ್ರೀಯ ವಿಷಯಗಳ ಬಗ್ಗೆ ಮಾತುಕತೆಗಳ ವೇಳೆಯಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು ಎಂದು ಜಂಟಿ ಹೇಳಿಕೆ ಮಾತುಕತೆಯ ಬಳಿಕ ತಿಳಿಸಿತು.ಉಭಯ ರಾಷ್ಟ್ರಗಳು ಎಲ್ಲ ದೇಶಗಳಿಗೂ ಇತರ ರಾಷ್ಟ್ರಗಳ ವಿರುದ್ಧ ಭಯೋತ್ಪಾದನೆ ಬಳಸುವುದನ್ನು ತಿರಸ್ಕರಿಸುವಂತೆಯೂ,  ಭಯೋತ್ಪಾದನಾ ಮೂಲಸವಲತ್ತುಗಳಿದ್ದರೆ ಅವುಗಳನ್ನು ನಿರ್ನಾಮಗೊಳಿಸುವಂತೆಯೂ ಕರೆ ನೀಡಿದವು. ಇತರ ದೇಶಗಳ ವಿರುದ್ಧ ಭಯೋತ್ಪಾದನೆಗೆ ಪ್ರಚೋದನೆ ನೀಡುವುದನ್ನು ಮತ್ತು ಯಾವುದೇ ರೀತಿಯ ಹಣಕಾಸು ಮತ್ತಿತರ ಬೆಂಬಲ ಒದಗಿಸುವುದನ್ನು ಕಡಿದುಹಾಕುವಂತೆ ಹಾಗೂ ಭಯೋತ್ಪಾದನೆ ಕೃತ್ಯ ಎಸಗುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆಯೂ ಜಂಟಿ ಹೇಳಿಕೆ ಯಾವುದೇ ರಾಷ್ಟ್ರದ ಹೆಸರನ್ನೂ ಉಲ್ಲೇಖಿಸದೆಯೇ ಆಗ್ರಹಿಸಿತು. ಗಡಿಯಾಚೆಯಿಂದ ಭಯೋತ್ಪಾದನೆಗೆ ಬೆಂಬಲ ನೀಡುವ ಮತ್ತು ತನ್ನ ನೆಲದಲ್ಲಿನ ಭಯೋತ್ಪಾದಕ ಗುಂಪುಗಳಿಗೆ ನೆರವು ನೀಡುವ ತನ್ನ ನೀತಿಗೆ ಕೊನೆ ಹಾಡುವಂತೆ ಪಾಕಿಸ್ತಾನವನ್ನು ಭಾರತ ನಿರಂತರವಾಗಿ ಒತ್ತಾಯಿಸುತ್ತಲೇ ಬಂದಿತ್ತು. ಸಾಮಾಜಿಕ ಸಾಮರಸ್ಯವನ್ನು ಹದಗೆಡಿಸುವ ಸಲುವಾಗಿ, ಭಯೋತ್ಪಾದನೆಗೆ ಸೈಬರ್ ಕ್ಷೇತ್ರದ ಬಳಕೆ ಮಾಡುವುದು ಮತ್ತು ತೀವ್ರವಾದವನ್ನು ಬೆಳೆಸುವುದನ್ನು ತಡೆಯುವ ನಿಟ್ಟಿನಲ್ಲಿ ಸೈಬರ್ ಕ್ಷೇತ್ರದಲ್ಲಿ ಸಹಕಾರ ವರ್ಧನೆಯ ಮಾರ್ಗಗಳ ಬಗೆಗೂ ಭಾರತ ಮತ್ತು ಬಹರೇನ್ ಚರ್ಚಿಸಿದವು.ಭದ್ರತೆ, ಭಯೋತ್ಪಾದನೆ ನಿಗ್ರಹ ಕ್ಷೇತ್ರದಲ್ಲಿ ಸಹಕಾರ ವಿಸ್ತರಣೆ ಮತ್ತು ಗೂಢಚರ್ಯೆ ಹಾಗೂ ಮಾಹಿತಿ ವಿನಿಮಯ ಮಾಡಿಕೊಳ್ಳಲೂ ಉಭಯ ರಾಷ್ಟ್ರಗಳು ಒಪ್ಪಿದವು.ಭಯೋತ್ಪಾದನೆಯ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯದಿಂದ ಕೇಂದ್ರೀಕೃತ ಕ್ರಮದ ಅಗತ್ಯವಿದೆ ಎಂದು ಹೇಳಿದ ಉಭಯ ನಾಯಕರು, ವಿಶ್ವ ಸಂಸ್ಥೆಯಿಂದ ಭಯೋತ್ಪಾದಕರು ಮತ್ತು ಅವರ ಸಂಘಟನೆಗಳವಿರದ್ಧ ಸಮಗ್ರ ದಿಗ್ಬಂಧನದ ಅಗತ್ಯವನ್ನು ಒತ್ತಿ ಹೇಳಿದರು.ಪ್ರಾದೇಶಿಕ ಸಂಪರ್ಕ ಯೋಜನೆಗಳು ದೇಶಗಳ ಸಾರ್ವಭೌಮತ್ವಕ್ಕೆ ಗೌರವ ನೀಡುವುದು ಸೇರಿದಂತೆ ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಇರಬೇಕು ಎಂಬುದಾಗಿ ಯಾವುದೇ ರಾಷ್ಟ್ರದ ಹೆಸರು ಹೇಳದೆಯೇ ಆಗ್ರಹಿಸುವ ಮೂಲಕ,  ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ ಗೆ (ಬಿಆರ್) ಚೀನಾ ಒತ್ತು ನೀಡುತ್ತಿರುವ ಪರೋಕ್ಷವಾಗಿ ಉಲ್ಲೇಖಿಸಿದವು. ಉಭಯ ರಾಷ್ಟ್ರಗಳ ಮಧ್ಯೆ ದ್ವಿಪಕ್ಷೀಯ ವ್ಯಾಪಾರ ಹೆಚ್ಚಳದ ಪ್ರವೃತ್ತಿಯನ್ನು ಮಾತುಕತೆಗಳ ವೇಳೆಯಲ್ಲಿ ಗಮನಿಸಿದ ಉಭಯ ರಾಷ್ಟ್ರಗಳು ವ್ಯಾಪಾರ ಮತ್ತು ಹೂಡಿಕೆಗೆ ಅನುಕೂಲಕರವಾದ ಪರಿಸರ ಒದಗಿಸುವ ತಮ್ಮ ಇಚ್ಛೆಯನ್ನು ದೃಢಪಡಿಸಿದವು. ಇಂಧನ ಕ್ಷೇತ್ರದಲ್ಲಿ ಸಹಕಾರ ವಿಸ್ತರಣೆ, ಮಾನವ ಸಂಪನ್ಮೂಲಗಳ ಶೋಧ ಮತ್ತು ತರಬೇತಿಯ ಕ್ಷೇತ್ರದಲ್ಲಿ ಹೆಚ್ಚಿನ ಬೆಳಕು ಚೆಲಲ್ಲು ಉಭಯ ರಾಷ್ಟ್ರಗಳು ಒಪ್ಪಿದವು. ರಕ್ಷಣೆ ಮತ್ತು ಉನ್ನತ ಶಿಕ್ಷಣದಲ್ಲಿ ಸಹಕಾರ, ಆರ್ಥಿಕ ಬಾಂಧವ್ಯ ಹಾಗೂ ಜನರ ಮಧ್ಯೆ ಸಂಪರ್ಕ ನಿಟ್ಟಿನಲ್ಲಿ ಉನ್ನತ ಮಟ್ಟದ ರಾಜಕೀಯ ವಿನಿಮಯ ವಿಸ್ತರಣೆಯ ಮಹತ್ವವನ್ನು ಉಭಯ ದೇಶಗಳು ಒತ್ತಿ ಹೇಳಿದವು.ಕೊಲ್ಲಿ ಪ್ರದೇಶದಲ್ಲಿ ಸಾಗರಯಾನ ಭದ್ರತೆಯನ್ನು ಬಲಪಡಿಸುವ ನಿಟಿನಲ್ಲಿ ಸಹಕಾರ ವಿಸ್ತರಣೆಗೆ ಉಭಯ ನಾಯಕರು ಒಪ್ಪಿದರು.ಅಂತಾರಾಷ್ಟ್ರೀಯ ಸೌರ ಮೈತ್ರಿಗೆ ಸೇರ್ಪಡೆಯಾಗುವ ಬಹರೇನ್ ಆಸಕ್ತಿಯನ್ನು ಭಾರತ ಸ್ವಾಗತಿಸಿತು. ಸೌರ ಶಕ್ತಿಯ ಬಳಕೆ ನಿಟ್ಟಿನಲ್ಲಿ ಅಂತಾರಾಜ್ಯ ಅಂತರ್ ಸರ್ಕಾರಗಳ ಸಂಘಟನೆಯ ಮಹತ್ವವನ್ನು ಉಭಯ ರಾಷ್ಟ್ರಗಳು ಗುರುತಿಸಿದವು.ಜಾಗತಿಕ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯತ್ವ ಹೆಚ್ಚಿಸುವ ಮೂಲಕ ವಿಶ್ವಸಂಸ್ಥೆಯನ್ನು ಹೆಚ್ಚು ಪ್ರಾತಿನಿಧಿಕಗೊಳಿಸುವ ತುರ್ತು ಅಗತ್ಯವನ್ನು ಉಭಯರಾಷ್ಟ್ರಗಳು ಒತ್ತಿ ಹೇಳಿದವು.ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ, ಬಾಹ್ಯಾಕಾಶ ತಂತ್ರಜ್ಞಾನ, ಸೌರ ಶಕ್ತಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ತಿಳಿವಳಿಕೆ ಪತ್ರಗಳಿಗೆ (ಎಂಒಯು) ಕೂಡಾ ಉಭಯ ರಾಷ್ಟ್ರಗಳು ಸಹಿ ಮಾಡಿದವು ಎಂದು ಹೇಳಿಕೆ ತಿಳಿಸಿತು.

ಇಂದಿನ  ಇತಿಹಾಸ History Today ಆಗಸ್ಟ್ 25  (2018+ ಹಿಂದಿನವುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ)


No comments:

Post a Comment