ನಾನು ಮೆಚ್ಚಿದ ವಾಟ್ಸಪ್

Saturday, August 17, 2019

ಇಂದಿನ ಇತಿಹಾಸ History Today ಆಗಸ್ಟ್ 17

2019: ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ವಿಭಾಗದಲ್ಲಿ ಪಾಕಿಸ್ತಾನವು ಶೆಲ್ ದಾಳಿ ನಡೆಸಿ ಕದನವಿರಾಮ ಉಲ್ಲಂಘಿಸಿದ ಪರಿಣಾಮವಾಗಿ ಭಾರತೀಯ ಸೇನಾಯೋಧನೊಬ್ಬ ಹುತಾತ್ಮನಾದ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ರಾಜೌರಿ ವಿಭಾಗಕ್ಕೆ ಎದುರು ಇರುವ ಪಾಕಿಸ್ತಾನಿ ಸೈನಿಕ ಠಾಣೆ, ಮತ್ತು ನೌಶೇರಾ ವಿಭಾಗದಲ್ಲಿ ಪಾಕಿಸ್ತಾನಿ ಸೈನಿಕ ಠಾಣೆಗಳ ಮೇಲೆ ದಾಳಿ ನಡೆಸಿ ಪಾಕ್ ಸೇನೆಗೆ ಭಾರೀ ಹಾನಿ ಉಂಟುಮಾಡಿತು. ಇದೇ ವೇಳೆಗೆ, ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಕಾಶ್ಮೀರ ಬಗ್ಗೆ ದೂರು ನೀಡಿ ರಹಸ್ಯ ಸಭೆಯ ಮೂಲಕ ಭಾರತದ ವಿರುದ್ಧ ಇತರ ರಾಷ್ಟ್ರಗಳನ್ನು ಪ್ರಚೋದಿಸುವ ಯತ್ನದಲ್ಲಿ ಮುಖಭಂಗಕ್ಕೆ ಈಡಾಗಿರುವ ಪಾಕಿಸ್ತಾನವುಕಾಶ್ಮೀರವು ಪರಮಾಣು ಸ್ಫೋಟ ಬಿಂದು’ (ನ್ಯೂಕ್ಲಿಯರ್ ಫ್ಲಾಶ್ ಪಾಯಿಂಟ್) ಎಂದು ಹೇಳಿತು. ಜೊತೆಗೇ ತನ್ನ ವಿದೇಶಾಂಗ ಕಚೇರಿಯಲ್ಲಿ  ಕಾಶ್ಮೀರ ಸೆಲ್ಸ್ಥಾಪನೆ ಮತ್ತು ರಾಯಭಾರ ಕಚೇರಿಗಳಲಿಕಾಶ್ಮೀರ ಡೆಸ್ಕ್ರಚಿಸಲು ನಿರ್ಧರಿಸುವ ಮೂಲಕ ಇನ್ನಷ್ಟು ಕಾಲು ಕೆರೆಯಿತು. ಪಾಕ್ ದಾಳಿಯಲ್ಲಿ ಹುತಾತ್ಮನಾದ ಯೋಧನನ್ನು ಡೆಹ್ರಾಡೂನಿನ ೩೫ರ ಹರೆಯದ ಲಾನ್ಸ್ ನಾಯ್ಕ್ ಸಂದೀಪ್ ಥಾಪಾ ಎಂಬುದಾಗಿ ಗುರುತಿಸಲಾಯಿತು. ಥಾಪಾ ಅವರು ಸೇನೆಯಲ್ಲಿ ಕಳೆದ ೧೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಹೇಳಿದರು. ’ಥಾಪಾ ಅವರು ಅತ್ಯಂತ ಧೈರ್ಯಶಾಲಿ ಯೋಧರಾಗಿದ್ದರು. ಪರಮೋಚ್ಛ ಬಲಿದಾನ ಮಾಡಿದ ಅವರ ಸಮರ್ಪಣಾ ಭಾವದ ಕರ್ತವ್ಯಕ್ಕೆ ರಾಷ್ಟ್ರವು ಅವರಿಗೆ ಋಣಿಯಾಗಿರುತ್ತದೆಎಂದು ವಕ್ತಾರ ನುಡಿದರು. ಬೆಳಗ್ಗೆ .೩೦ರ ವೇಳೆಗೆ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸುವುದರ ಜೊತೆಗೆ ಫಿರಂಗಿ ಮೂಲಕ ಶೆಲ್ ದಾಳಿ ನಡೆಸುತ್ತಾ ಪಾಕಿಸ್ತಾನಿ ಪಡೆಗಳು ಕದನವಿರಾಮ ಉಲ್ಲಂಘನೆ ಆರಂಭಿಸಿದವು. ಪಾಕ್ ಸೇನೆಯ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿದೆ. ತೀವ್ರವಾದ ಗುಂಡಿನ ಘರ್ಷಣೆ ಮುಂದುವರೆಯಿತು ಎಂದು ಅವರು ಹೇಳಿದರು. ಪೂಂಚ್ ಜಿಲ್ಲೆಯ ಕೆಜಿ ವಿಭಾಗದಲ್ಲಿ ಭಾರತವು ನಡೆಸಿದ ಸೇಡಿನ ದಾಳಿಯಲ್ಲಿ ನಾಲ್ವರು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂಬುದಾಗಿ ಪಾಕಿಸ್ತಾನ ಮಾಡಿದ ಪ್ರತಿಪಾದನೆಯನ್ನು ಭಾರತ ತಿರಸ್ಕರಿಸಿದ ಎರಡು ದಿನಗಳ ಬಳಿಕ ಪಾಕಿಸ್ತಾನಿ ಸೈನ್ಯದಿಂದ ಕದನವಿರಾಮ ಉಲ್ಲಂಘನೆ ನಡೆಯಿತು. ಈಮಧ್ಯೆ, ಜಮ್ಮು ಮತ್ತು ಕಾಶ್ಮೀರದ ರಾಜೌರಿ ವಿಭಾಗಕ್ಕೆ ಎದುರಾಗಿ ಇರುವ ಪಾಕಿಸ್ತಾನಿ ಸೈನಿಕ ಠಾಣೆಯ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ ಎಂದು ಸೇನಾ ಮೂಲಗಳು ಹೇಳಿದವು. ಪಾಕಿಸ್ತಾನದ ಕದನವಿರಾಮ ಉಲ್ಲಂಘನೆಗೆ ಪ್ರತಿಯಾಗಿ ನೌಶೇರಾದಲ್ಲಿ ಪಾಕಿಸ್ತಾನಿ ಸೈನಿಕ ಠಾಣೆಗಳ ಮೇಲೆ ಭಾರತೀಯ ಸೇನಾ ಪಡೆಗಳು ದಾಳಿ ನಡೆಸಿ ಪಾಕಿಸ್ತಾನಿ ಸೇನೆಗೆ ಭಾರೀ ನಷ್ಟದ ಜೊತೆಗೆ ಪಾಕ್ ಸೈನಿಕರಿಗೆ ಜೀವಹಾನಿಯನ್ನೂ ಉಂಟು ಮಾಡಿವೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ್ ಆನಂದ್ ಹೇಳಿದರು. ‘ಪಾಕಿಸ್ತಾನದ ನೌಶೇರಾ ವಿಭಾಗದಲಿ ಪಾಕಿಸ್ತಾನಿ ಸೈನಿಕರು ನಡೆಸಿದ ಕದನ ವಿರಾಮ ಉಲ್ಲಂಘನೆಗೆ ಪ್ರತಿಯಾಗಿ ಪಾಕಿಸ್ತಾನಿ ಸೇನಾ ಠಾಣೆಗಳ ಮೇಲೆ ದಾಳಿ ನಡೆಸಿರುವ ಭಾರತೀಯ ಸೇನಾ ಪಡೆಗಳು ಪಾಕಿಸ್ತಾನಿ ಸೇನೆಗೆ ಭಾರೀ ನಷ್ಟ ಮತ್ತು ಪಾಕ್ ಸೈನಿಕರಿಗೆ ಸಾವು ನೋವು ಉಂಟು ಮಾಡಿವೆ ಎಂದು ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು. ಈಮಧ್ಯೆ, ಭಾರತದ ಅಣ್ವಸ್ತ್ರ ನೀತಿ ಬದಲಾಗಬಹುದು ಎಂಬುದಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ನೀಡಿದ ಸುಳಿವಿಗೆ ಪ್ರತಿಯಾಗಿ ಪಾಕಿಸ್ತಾನದ ಐಎಸ್ಪಿಆರ್ ಮೇಜರ್ ಜನರಲ್ ಅಸಿಫ್ ಗಫೂರ್ ಅವರುಕಾಶ್ಮೀರವು ಖಂಡಿತವಾಗಿ ಪರಮಾಣು ಸ್ಫೋಟ ಬಿಂದುವಾಗಿದೆ (ನ್ಯೂಕ್ಲಿಯರ್ ಫ್ಲಾಶ್ ಪಾಯಿಂಟ್)’ ಎಂದು ಹೇಳಿದರು. ಭಾರತದಿಂದ ನಡೆಯುವ ಯಾವುದೇ ದಾಳಿಯನ್ನು ಹಿಮ್ಮೆಟ್ಟಿಸಲು ಪಾಕಿಸ್ತಾನಿ ಸಶಸ್ತ್ರ ಪಡೆಗಳು ಸಂಪೂರ್ಣ ಸಜ್ಜಾಗಿವೆ. ಕಾಶ್ಮೀರ ವಿವಾದವು ದೀರ್ಘಕಾಲದ ಹೋರಾಟವಾಗಲಿದೆಎಂದೂ ಗಫೂರ್ ಹೇಳಿದರು. ಏತನ್ಮಧ್ಯೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರು ಪಾಕಿಸ್ತಾನವು ತನ್ನ ವಿದೇಶಾಂಗ ಕಚೇರಿಯಲ್ಲಿಕಾಶ್ಮೀರ ಸೆಲ್ಸ್ಥಾಪನೆ ಮಾಡಲಿದೆ ಎಂದು ಪ್ರಕಟಿಸಿದರು. ‘ಪ್ರಮುಖ ರಾಜಧಾನಿಗಳನ್ನು ಗುರುತಿಸಲಾಗುವುದು ಮತ್ತು ಎಲ್ಲ ರಾಯಭಾರ ಕಚೇರಿಗಳಲ್ಲೂಕಾಶ್ಮೀರ ಡೆಸ್ಕ್ರಚಿಸಲಾಗುವುದು ಎಂದು ಅವರು ನುಡಿದರು. ’ಇನ್ನಷ್ಟು ಕಪಟ ಧ್ವಜ ಕಾರ್ಯಾಚರಣೆಗಳು ನಡೆಯುವ ಶಂಕೆ ಪಾಕಿಸ್ತಾನಕ್ಕೆ ಇದೆಎಂದು ಅವರು ನುಡಿದರು. ಇತ್ತ, ಭಾರತದ ಕೇಂದ್ರ ಕಾನೂನು ಸಚಿವ ರವಿ ಶಂಕರ ಪ್ರಸಾದ್ ಅವರುಜಮ್ಮು ಮತ್ತು ಕಾಶ್ಮೀರದ ಜನರಿಗೆ ಅನುಕೂಲ ಮಾಡಿಕೊಡುವ ಸಲುವಾಗಿಯೇ ೩೭೦ನೇ ವಿಧಿಯನ್ನು ರದ್ದು ಪಡಿಸಲಾಗಿದೆ ಎಂದು ಪ್ರತಿಪಾದಿಸಿದರು.’೩೭೦ನೇ ವಿಧಿಯು ಭಯೋತ್ಪಾದಕರು ಮತ್ತು ಅವರಲ್ಲಿನ ಮುಖ್ಯಸ್ಥರನ್ನು ರಕ್ಷಿಸಲು ಗುರಾಣಿಯಾಗಿ ಬಳಕೆಯಾಗುತ್ತಿತ್ತು. ಇದನ್ನು ರದ್ದು ಪಡಿಸಿದ್ದು ಜನರ ಹಿತದ ಸಲುವಾಗಿಯೇ. ಜಮ್ಮು ಮತ್ತು ಕಾಶ್ಮೀರದ ಜನರಿಗೆ ನೆರವು ನೀಡಲು ನಾವು ಸದಾ ಲಭ್ಯಎಂದು ಅವರು ನುಡಿದರು. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿನ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೆಲಸ ಮಾಡುತ್ತಿದೆ ಎಂದು ಪ್ರಸಾದ್ ಹೇಳಿದರು. ’ಭಾರತವು ತನ್ನ ಭದ್ರತೆ ವಿಚಾರದಲ್ಲಿ ಎಚ್ಚರದಿಂದಿದೆ. ಪಾಕಿಸ್ತಾನದ ಕಡೆಯಲ್ಲಿ ಏನಾದರೂ ಚಟುವಟಿಕೆ ನಡೆದರೆ, ಆಗ ಭಾರತವು ಅದಕ್ಕೆ ತಕ್ಕ ಉತ್ತರ ನೀಡುವುದುಎಂದು ಸಚಿವರು ಹೇಳಿದರು.

2019: ಶ್ರೀನಗರ: ಕಾಶ್ಮೀರದ ೧೭ ದೂರವಾಣಿ ವಿನಿಯಮ ಕೇಂದ್ರಗಳಲ್ಲಿ ಮತ್ತು ಜಮು ಪ್ರದೇಶದ ಐದು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆಯನ್ನು ಪುನಃಸ್ಥಾಪನೆ ಮಾಡಿದ ಸರ್ಕಾರವು ೧೨ ದಿನಗಳಿಂದ ಚಾಲ್ತಿಯಲ್ಲಿದ್ದ ಸಂಪರ್ಕ ನಿರ್ಬಂಧಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತದ ಉನ್ನತ ಅಧಿಕಾರಿಯೊಬ್ಬರು ಶ್ರೀನಗರದಲ್ಲಿ ಹೇಳಿದರು. ಕಾಶ್ಮೀರ ಕಣಿವೆಯ ೧೭ ದೂರವಾಣಿ ವಿನಿಮಯ ಕೇಂದ್ರಗಳಲ್ಲಿ ಸೇವೆ ಪುನಃಸ್ಥಾಪನೆಯ ಬಳಿಕ ೫೦,೦೦೦ಕ್ಕೂ ಹೆಚ್ಚು ಸ್ಥಿರ ದೂರವಾಣಿ ಮಾರ್ಗಗಳು (ಲೈನುಗಳು) ಕೆಲಸ ಮಾಡಲು ಆರಂಭಿಸಿವೆ ಎಂದು ಸುದ್ದಿ ಸಂಸ್ಥೆಯ ವರದಿ ತಿಳಿಸಿತು. ಕಾಶ್ಮೀರ ಕಣಿವೆಯ ಬಹುತೇಕ ದೂರವಾಣಿ ವಿನಿಯಮ ಕೇಂದ್ರಗಳು ಆಗಸ್ಟ್ .18ರ ಭಾನುವಾರ ಸಂಜೆಯ ವೇಳೆಗೆ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲಿವೆ. ಇತರ ನಿರ್ಬಂಧಗಳ ಸಡಿಲಿಕೆ ಮತ್ತು ರದ್ದು ಪ್ರಕ್ರಿಯೆ ಈಗಾಗಲೇ ಪ್ರಗತಿಯಲ್ಲಿದೆ ಎಂದು ಸರ್ಕಾರಿ ವಕ್ತಾರ ರೋಹಿತ್ ಕಂಸಲ್ ಪತ್ರಿಕಾಗೋಷ್ಠಿಯಲಿ ಹೇಳಿದರು. ೧೭ ದೂರವಾಣಿ ವಿನಿಮಯ ಕೇಂದ್ರಗಳನ್ನು ಈಗಾಗಲೇ ಚಾಲ್ತಿಗೆ ತರಲಾಗಿದೆ. ಬಹುತೇಕ ವಿನಿಮಯಗಳು ಭಾನುವಾರ ಸಂಜೆಯ ವೇಳೆಗೆ ಪುನಾರಂಭವಾಗುತ್ತವೆ ಎಂದು ಕಂಸಲ್ ನುಡಿದರು. ಕೇಂದ್ರ ಕಾಶ್ಮೀರದ ಬಡಗಮ್, ಸೋನಾಮಾರ್ಗ್ ಮತ್ತು ಮಣಿಗಂ ಪ್ರದೇಶಗಳಲ್ಲಿ ದೂರವಾಣಿ ವಿನಿಮಯ ಕೇಂದ್ರಗಳ ಪುನಸ್ಥಾಪನೆಯಿಂದ ಸ್ಥಿರ ದೂರವಾಣಿಗಳೂ ಕಾರ್ಯ ನಿರ್ವಹಣೆ ಆರಂಭಿಸಿವೆ. ಉತ್ತರ ಕಾಶ್ಮೀರದಲ್ಲಿ ಗುರೆಜ್, ತಂಗ್ಮಾರ್ಗ್, ಉರಿ, ಕೇರನ್, ಕರ್ನಾಹ್ ಮತ್ತು ತಂಗಧರ್ ಪ್ರದೇಶಗಳಲ್ಲಿ ಸೇವೆ ಆರಂಭವಾಗಿದೆ. ದಕ್ಷಿಣ ಕಾಶ್ಮೀರದಲ್ಲಿ ಖಾಜಿಗುಂಡ ಮತ್ತು ಪಹಲ್ಗಾಮ್ ಪ್ರದೇಶಗಳಲ್ಲಿ ಸ್ಥಿರ ದೂರವಾಣಿ ಸೇವೆ ಶುರುವಾಗಿದೆ ಎಂದು ಅಧಿಕಾರಿಗಳು ನುಡಿದರು. ಜಮ್ಮು ವಿಭಾಗದಲ್ಲಿ  ಸ್ಥಿರ ದೂರವಾಣಿ ಸೇವೆಗಳು ಮಾಮೂಲಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು , ಪ್ರದೇಶದ ಐದು ಜಿಲ್ಲೆಗಳಲ್ಲಿ ಮೊಬೈಲ್ ಸೇವೆ ಪುನಃಸ್ಥಾಪನೆ ಮಾಡಲಾಗಿದೆ ಎಂದು ವಕ್ತಾರರು ಹೇಳಿದರು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ೩೭೦ನೇ ವಿಧಿ ರದ್ದು ಪಡಿಸುವುದಕ್ಕೆ ಮುಂಚಿತವಾಗಿ ಕೇಂದ್ರ ಸರ್ಕಾರವು ಆಗಸ್ಟ್ ೫ರಂದು ನಸುಕಿನ ವೇಳೆಯಲ್ಲಿ ಮೊಬೈಲ್, ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸುವ ಮೂಲಕ ಸಂಪರ್ಕಗಳನ್ನು ಮುಚ್ಚಿದ್ದಲ್ಲದೆ, ವ್ಯಾಪಕ ನಿರ್ಬಂಧಗಳನ್ನೂ ಹೇರಿತ್ತು.೩೫ ಪೊಲೀಸ್ ಠಾಣೆಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗಿದೆ ಮತ್ತು ಆಡಳಿತವು ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇಟ್ಟಿದೆ. ಕಣಿವೆಯಾದ್ಯಂತ ಪರಿಸ್ಥಿತಿ ಬಹುತೇಕ ಶಾಂತವಾಗಿದ್ದು, ನಿರ್ಬಂಧ ತೆರವುಗೊಳಿಸದ ಪ್ರದೇಶಗಳಲ್ಲಿ ಸಣ್ಣ ಪುಟ್ಟ ಘಟನೆಗಳಲ್ಲಿ ಏಳೆಂಟು ಜನರಿಗೆ ಗಾಯಗಳಾಗಿರುವ ವರದಿಗಳು ಬಂದಿವೆ ಎಂದು ಕಂಸಲ್ ಹೇಳಿದರು. ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳು ಓಡಾಟ ಆರಂಭಿಸಿರುವುದು ಉತ್ತಮ ಸಂಕೇತ. ಗ್ರಾಮೀಣ ಪ್ರದೇಶಗಳಲ್ಲೂ ಪರಿಸ್ಥಿತಿ ರೀತಿಯಲ್ಲೇ ಇದೆ ಎಂದು ಅವರು ನುಡಿದರು.ಪ್ರಾಥಮಿಕ ಹಂತದ ಶಾಲೆಗಳು ಆ.19ರ ಸೋಮವಾರ ಆರಂಭವಾಗಲಿದೆ, ಇದರ ಹೊರತಾಗಿ ಎಲ್ಲ ಸರ್ಕಾರಿ ಕಚೇರಿಗಳೂ ಅದೇ ದಿನದಿಂದ ಮಾಮೂಲಿಯಾಗಿ ಕಾರ್ ನಿರ್ವಹಿಸಲಿವೆ ಎಂದು ವಕ್ತಾರ ಹೇಳಿದರು.ಜಮ್ಮು ಪ್ರದೇಶದಲ್ಲಿ ಶಾಲೆಗಳು ವಾರಾರಂಭದಲ್ಲೇ ಶುರುವಾಗಿದ್ದವು.  ಆಡಳಿತವು ಪರಿಸ್ಥಿತಿಯ ವಿಶ್ಲೇಷಣೆ ಮಾಡುತ್ತಿದ್ದು, ನಿರ್ಬಂಧಗಳನ್ನು ಹಂತ ಹಂತವಾಗಿ ತೆರವುಗೊಳಿಸುತ್ತಿದೆ ಎಂದು ಕಾಶ್ಮೀರದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಸ್ವಯಂ ಪ್ರಕಾಶ್ ಪಾಣಿ ಹೇಳಿದರು. ಉತ್ತರ, ದಕ್ಷಿಣ ಮತ್ತು ಕೇಂದ್ರ ಕಾಶ್ಮೀರದ ೨೫ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಪಾಣಿ ಹೇಳಿದರು.ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿಸಲಾಗಿರುವ ನಿರ್ಬಂಧಗಳಿಗೆ ಸಂಬಂಧಿಸಿದಂತೆ ಹಸ್ತಕ್ಷೇಪ ನಡೆಸಲು ಶುಕ್ರವಾರ ನಿರಾಕರಿಸಿದ್ದ ಸುಪ್ರೀಂಕೋರ್ಟ್ ಪ್ರದೇಶದಲ್ಲಿ ಸಹಜಸ್ಥಿತಿ ಪುನಃಸ್ಥಾಪನೆಗೆ ಇನ್ನಷ್ಟು ಸಮಯ ನೀಡಲು ತಾನು ಇಚ್ಛಿಸಿರುವುದಾಗಿ ಹೇಳಿತ್ತು.ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ತಮ್ಮ ಕಚೇರಿಗಳಿಂದ ವಾಪಸಾಗಲು ಸರ್ಕಾರಿ ನೌಕರರಿಗೆ ಶುಕ್ರವಾರ ವಿಶೇಷ ಬಸ್ಸು ಸೇವೆಯನ್ನು ಆರಂಭಿಸಲಾಗಿತ್ತು  ಜಿಲ್ಲಾಧಿಕಾರಿ ಜಿ ಎನ್ ಇಟೂ ಅವರು ಕಚೇರಿಗಳಲ್ಲಿ ನೌಕರರ ಹಾಜರಾತಿಯ ಕುರಿತು ನಡೆಸಿದ ಪರಿಶೀಲನಾ ಸಭೆಯಲ್ಲಿ ನೌಕರರಿಗಾಗಿ ವಿಶೇಷ ಬಸ್ಸು ಒದಗಿಸುವ ಬಗ್ಗೆ ನಿರ್ದೇಶನಗಳನ್ನು ನೀಡಿದ್ದರು.ಯೋಜನೆಯ ಪ್ರಕಾರ ಶ್ರೀನಗರದ ಎಸ್ಎಂಎಚ್ಎಸ್ ಆಸ್ಪತ್ರೆ, ಸೊಪೋರ್, ವಾಟರ್ಗಾಮ್, ಉರಿ, ತಂಗ್ಮಾರ್ಗ್ ಸೇರಿದಂತೆ ವಿವಿಧ ಸ್ಥಳಗಳಿಂದ ಬಾರಾಮುಲ್ಲಾದ ಮುಖ್ಯ ಬಸ್ಸು ನಿಲ್ದಾಣಕ್ಕೆ ಎಸ್ಆರ್ಟಿಸಿ ಬಸ್ಸುಗಳು ನೌಕರರಿಗೆ ಲಭಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಗಳು ಹೇಳಿದವು.

2019:  ನವದೆಹಲಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ  (ಯುಎನ್ಎಸ್ ಸಿ ) ಚೀನಾ ಮಾತ್ರ ಪಾಕಿಸ್ತಾನವನ್ನು "ಬಹಿರಂಗವಾಗಿ ಬೆಂಬಲಿಸುತ್ತಿದೆ" ಎಂದು ಪಾಕಿಸ್ತಾನದ ಪ್ರಮುಖ ಪತ್ರಿಕೆಡಾನ್  ಹೇಳಿದ್ದು, ವಿಶ್ವ ಸಂಸ್ಥೆಯ ಉನ್ನತ ಸಂಸ್ಥೆಯಾಗಿರುವ ಪ್ರಸ್ತುತ ಭದ್ರತಾ ಮಂಡಳಿಯ ಇಸ್ಲಾಮಾಬಾದಿಗೆ ಅನುಕೂಲಕರವಾಗಿ ಕಾಣುತ್ತಿಲ್ಲ ಎಂಬುದಾಗಿ ಹೇಳುವ ಮೂಲಕ ವಾಸ್ತವ ಸ್ಥಿತಿಯ ಬಗ್ಗೆ ಪ್ರಧಾನಿ ಇಮ್ರಾನ್ಖಾನ್ ಸರ್ಕಾರಕ್ಕೆ ಕನ್ನಡಿ ಹಿಡಿಯಿತು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಪಡಿಸಿದ ನಂತರ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಆಗಸ್ಟ್ ೧೬ರ ಶುಕ್ರವಾರ  ಕಾಶ್ಮೀರ ಬೆಳವಣಿಗೆಗೆ ಸಂಬಂಧಿಸಿದಂತೆ  ಅಪರೂಪದ ರಹಸ್ಯ ಸಭೆ ನಡೆಸಿತ್ತು.  ಜಮ್ಮು ಮತ್ತು ಕಾಶ್ಮೀರಕ್ಕೆ  ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮೂಲಕ ಭಾರತವು ಪಾಕಿಸ್ತಾನದ ಜೊತೆ ಹೊಸ ತಕರಾರು ಸೃಷ್ಟಿಸಿದೆ ಎಂದು ಆಪಾದಿಸಿ ಪಾಕಿಸ್ತಾನವು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಮನವಿ ಪತ್ರ ಬರೆದಿತ್ತು.ಮುಚ್ಚಿದ ಬಾಗಿಲುಗಳ ಹಿಂದೆ ನಡೆz ರಹಸ್ಯ ಸಭೆಯಲ್ಲಿ ಕೇವಲ ಐದು ಕಾಯಂ ಸದಸ್ಯರು ಮತ್ತು ೧೦ ಕಾಯಮೇತರ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ  ವಿಶೇಷ ಸ್ಥಾನಮಾನವನ್ನು  ನೀಡಿದ್ದ ಭಾರತೀಯ  ಸಂವಿಧಾನದ ೩೭೦ ನೇ ವಿಧಿಯನ್ನು ರದ್ದುಪಡಿಸಿದ ಕ್ರಮವು ಆಂತರಿಕ ವಿಷಯವಾಗಿದೆ ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಖಂಡತುಂಡವಾಗಿ ಹೇಳಿದ್ದ ಭಾರತ ವಾಸ್ತವವನ್ನು ಒಪ್ಪಿಕೊಳ್ಳುವಂತೆ ಪಾಕಿಸ್ತಾನಕ್ಕೆ ಸಲಹೆ ನೀಡಿತ್ತು.ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಭಾರತದ ನಿರ್ಧಾರವು ದಕ್ಷಿಣ ಏಷ್ಯಾದ ಶಾಂತಿ ಮತ್ತು ಸ್ಥಿರತೆಗೆ ಹೇಗೆ ಧಕ್ಕೆ ತರುತ್ತದೆ ಎಂಬುದಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯರಿಗೆ ನಾಟುವಂತೆ ತಿಳಿಹೇಳಲು ಪಾಕಿಸ್ತಾನದ  ವಿಶ್ವಸಂಸ್ಥೆಯಲ್ಲಿನ ರಾಯಭಾರಿ ಮಲೀಹಾ ಲೋಧಿ ಮತ್ತು ಅವರ ತಂಡವು ತಿಂಗಳ ಆರಂಭದಿಂದಲೂ ಬಿಡುವಿಲ್ಲದೆ   ಕೆಲಸ ಮಾಡಿತ್ತು ಎಂದು ವಿಶ್ವಸಂಸ್ಥೆ ಕೇಂದ್ರ ಕಚೇರಿಯಿಂದ  ಮಾಡಲಾದ ತನ್ನ ವರದಿಯಲಿಡಾನ್ತಿಳಿಸಿತು."ಆದರೆ ಮಂಡಳಿಯ ಪ್ರಸ್ತುತ ಘಟಕವು ಪಾಕಿಸ್ತಾನಕ್ಕೆ ಒಲವು ತೋರುತ್ತಿಲ್ಲ" ಎಂದು ಪತ್ರಿಕೆ ಬರೆಯಿತು. ಜಮ್ಮು ಮತ್ತು ಕಾಶ್ಮೀರದ ಹಾಲಿ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಇಸ್ಲಾಮಾಬಾದ್  ಮಾಡಿದ ಮನವಿಯ ಮೇರೆಗೆ ಮಂಡಳಿಯ ರಹಸ್ಯ ಸಭೆಗೆ ಪಾಕಿಸ್ತಾನದ  ಸಾರ್ವಕಾಲಿಕ  ಮಿತ್ರ ಚೀನಾ  ಮಂಡಳಿಯು ಆಗ್ರಹಿಸಿತ್ತು."ಐವರು ಕಾಯಂ ಸದಸ್ಯರಲಿ ಒಂದಾದಚೀನಾ ಬಹಿರಂಗವಾಗಿ ಪಾಕಿಸ್ತಾನವನ್ನು ಬೆಂಬಲಿಸಿತು  ಎಂದು ಡಾನ್ ವರದಿ  ಹೇಳಿತು.ಉಳಿದ ನಾಲ್ಕು ಕಾಯಂ ಸದಸ್ಯರಾದ ಬ್ರಿಟನ್, ಫ್ರಾನ್ಸ್, ರಶ್ಯಾ ಮತ್ತು ಅಮೆರಿಕ ಕಾಶ್ಮೀರ ವಿವಾದವನ್ನು  ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಮೂಲಕ  ಬಗೆಹರಿಸಿಕೊಳ್ಳಬೇಕು ಎಂದು ಬಯಸಿದವು  ಎಂದುಡಾನ್ಹೇಳಿತು.ಭಾರತವೂ ಇದೇ ನಿಲುವು ತಾಳಿದ್ದರೂ, ಕಾಶ್ಮೀರದ ಬಗ್ಗೆ ಯಾವುದೇ ಮಾತುಕತೆ ನಡೆಸಲು ನಿರಾಕರಿಸುತ್ತಿದೆ. ಕಾಶ್ಮೀರ ಸಮಸ್ಯೆಯನ್ನುಆಂತರಿಕ ವಿಷಯವೆಂದು ಅದು ಹೇಳುತ್ತಿದೆ  ಎಂದು ವರದಿ ತಿಳಿಸಿತು. ಬೆಲ್ಜಿಯಂ, ಕೋಟ್ ಡಿ ಐವೊಯಿರ್, ಡೊಮಿನಿಕನ್ರಿಪಬ್ಲಿಕ್, ಈಕ್ವಟೋರಿಯಲ್ ಗಿನಿಯಾ, ಜರ್ಮನಿ, ಇಂಡೋನೇಷ್ಯಾ, ಕುವೈತ್, ಪೆರು, ಪೋಲೆಂಡ್ ಮತ್ತು ದಕ್ಷಿಣ ಆಫ್ರಿಕಾ- ಇವು ವಿಶ್ವಸಂಸ್ಥೆ ಸಾಮಾನ್ಯ ಸಭೆಯಿಂದ ಎರಡು ವರ್ಷಗಳ ಅವಧಿಗೆ ಆಯ್ಕೆಯಾಗಿರುವ ಭದ್ರತಾ ಮಂಡಳಿಯ  ೧೦ ಕಾಯಮೇತರ ಸದಸ್ಯ ರಾಷ್ಟ್ರಗಳಾಗಿವೆ.ಇವುಗಳ ಪೈಕಿ  ಇಂಡೋನೇಷ್ಯಾ ಮತ್ತು ಕುವೈತ್ ಹಿಂದೆ ಪಾಕಿಸ್ತಾನದ ಬಗ್ಗೆ ಸಹಾನುಭೂತಿ  ಹೊಂದಿದ್ದರೂ,  ಚೀನಾದ ಕೋರಿಕೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಇತರರನ್ನು ಮನವೊಲಿಸುವುದು ಕಷ್ಟಕರ ಎಂದು ಡಾನ್ ವರದಿ ತಿಳಿಸಿತು. ಈಮಧ್ಯೆ, ಪಾಕಿಸ್ತಾನ ಸರ್ಕಾರ ಜಾಗತಿಕ ಬೆಂಬಲವನ್ನು ಕ್ರೋಡೀಕರಿಸಲು  ಹೊರಟಿದ್ದರೂ, ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋ-ಆಪರೇಷನ್ (ಒಐಸಿ) ಮತ್ತು ಮುಸ್ಲಿಮ್  ರಾಷ್ಟ್ರಗಳಿಂದ ಪ್ರತ್ಯೇಕವಾಗಿ  ಲಭ್ಯವಾದ  ಪ್ರತಿಕ್ರಿಯೆಗಳು ಮತ್ತು ಬೆಂಬಲ ದುರ್ಬಲವಾಗಿವೆ ಎಂದುದಿ ನ್ಯೂಸ್ ಇಂಟರ್ನ್ಯಾಷನಲ್  ಪತ್ರಿಕೆ  ವರದಿ ಮಾಡಿತು.  ಸುಮಾರು ೫೦ ವರ್ಷದ ಒಐಸಿಯು ಬಿಡುಗಡೆ ಮಾಡಿರುವ ರಾಜತಾಂತ್ರಿಕ ಪರಿಭಾಷೆಯ ಕೆಲವು ಹೇಳಿಕೆಗಳು ಯಾವುದೇ ಬದ್ಧತೆಯನ್ನೂ ವ್ಯಕ್ತ ಪಡಿಸಿಲ್ಲ ಎಂದು  ಪತ್ರಿಕೆಯಲ್ಲಿನ ಲೇಖನವೊಂದು ತಿಳಿಸಿತು. ಒಐಸಿ ಸದಸ್ಯ ರಾಷ್ಟ್ರಗಳ ಜೊತೆಗಿನ  ಭಾರತೀಯ ವ್ಯಾಪಾರ ಮತ್ತು ವ್ಯವಹಾರದ ಶಕ್ತಿಯು, ಅದರ ವ್ಯಾಪಾರ ಪಾಲುದಾರರು ನಿರ್ಲಕ್ಷಿಸಲಾಗದಷ್ಟು ಪ್ರಬಲವಾಗಿದೆ, ಅವರಲ್ಲಿ ಯಾರೂ ಪಾಕಿಸ್ತಾನದ  ಪ್ರಸ್ತುತ ಮನವಿಯತ್ತ ಯಾವುದೇ ಗಮನವನ್ನೂ ಹರಿಸುತ್ತಿಲ್ಲ ಎಂದು ಪತ್ರಿಕೆ ಹೇಳಿತು.
2019: ನವದೆಹಲಿ: ಪ್ರತಿಷ್ಠಿತರಾಜೀವ್ ಗಾಂಧಿ ಖೇಲ್ ರತ್ನಪ್ರಶಸ್ತಿಗೆ ಭಜರಂಗ್ ಪೂನಿಯ ಜತೆಗೆ ಮತ್ತೋರ್ವ ಕ್ರೀಡಾ ಸಾಧಕರ ಹೆಸರು ಸೇರ್ಪಡೆಯಾಗಲೂಬಹುದು ಎಂಬ ನಿರೀಕ್ಷೆ ನಿಜವಾಯಿತು. ಈದಿನ ಯಾದಿಗೆ ಪ್ಯಾರಾ ಆ್ಯತ್ಲೀಟ್ ದೀಪಾ ಮಲಿಕ್ ಹೆಸರನ್ನು ಆಯ್ಕೆ ಮಾಡಲಾಯಿತು. ಇದೇ ವೇಳೆ ಕ್ರೀಡಾ ಸಾಧಕರಿಗೆ ನೀಡಲಾಗುವಅರ್ಜುನ ಪ್ರಶಸ್ತಿಗೆ 19 ಮಂದಿಯನ್ನು ಆರಿಸಲಾಯಿತು. ಕ್ರೀಡಾ ತರಬೇತುದಾರರಿಗೆ ನೀಡಲಾಗುವ ದ್ರೋಣಾಚಾರ್ಯ ಪ್ರಶಸ್ತಿಗೆ ಮೂವರನ್ನು ಆಯ್ಕೆ ಮಾಡಲಾಯಿತು.ಪ್ಯಾರಾಲಿಂಪಿಕ್ ಸಾಧಕಿ- 48 ಹರೆಯದ ದೀಪಾ ಮಲಿಕ್ 2016 ರಿಯೋ ಪ್ಯಾರಾಲಿಂಪಿಕ್ಸ್ ಎಫ್53 ವಿಭಾಗದ ಶಾಟ್ಪುಟ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಪ್ಯಾರಾಲಿಂಪಿಕ್ನಲ್ಲಿ ಪದಕ ಗೆದ್ದ ಭಾರತದ ಪ್ರಪ್ರಥಮ ವನಿತಾ ಕ್ರೀಡಾಳು ಎಂಬ ಹಿರಿಮೆ ದೀಪಾ ಅವರದಾಯಿತು.  ಬೆನ್ನುಹುರಿಯಲ್ಲಿ ಎದ್ದ ಗಡ್ಡೆಯಿಂದಾಗಿ ಕಳೆದ 17 ವರ್ಷಗಳಿಂದ ದೀಪಾ ಮಲಿಕ್ ವೀಲ್ಚೇರ್ನಲ್ಲೇ ಬದುಕು ಸಾಗಿಸುತ್ತಿದ್ದಾರೆ. ಆವರಿಗೆ 2012ರಲ್ಲಿ ಅರ್ಜುನ, 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ಒಲಿದಿತ್ತು. ಕಳೆದ ವರ್ಷವಷ್ಟೇ ದೀಪಾ ಶಾಟ್ಪುಟ್ ಬಿಟ್ಟು ಜಾವೆಲಿನ್ ಮತ್ತು ಡಿಸ್ಕಸ್ ತ್ರೋ ಸ್ಪರ್ಧೆಯಲ್ಲಿ ತೊಡಗಿಸಿಕೊಂಡಿದ್ದರು. ಸತತ 3 ಏಶ್ಯನ್ ಪ್ಯಾರಾ ಗೇಮ್ಸ್ನಲ್ಲಿ ಪದಕ ಗೆದ್ದ ಭಾರತದ ಏಕೈಕ ವನಿತಾ ಕ್ರೀಡಾಳು ಎಂಬ ಗರಿಮೆಯನ್ನೂ ಹೊಂದಿದ್ದರು. ನಿವೃತ್ತ ನ್ಯಾಯಮೂರ್ತಿ ಮುಕುಂದಕಂ ಶರ್ಮ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿ ಶುಕ್ರವಾರ ಖ್ಯಾತ ಕುಸ್ತಿಪಟು ಭಜರಂಗ್ ಪೂನಿಯ ಅವರನ್ನು ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಜತೆಗೆ, ಯಾದಿಗೆ ಇನ್ನೊಬ್ಬರ ಹೆಸರು ಕೂಡ ಸೇರ್ಪಡೆಯಾಗಬಹುದು ಎಂಬ ಸುಳಿವು ನೀಡಿತ್ತು. 19 ಮಂದಿ ಅರ್ಜುನರು:  ಕ್ರಿಕೆಟಿಗರಾದ ರವೀಂದ್ರ ಜಡೇಜ, ಪೂನಂ ಯಾದವ್, ಟ್ರ್ಯಾಕ್ ಆ್ಯಂಡ್ ಫೀಲ್ಡ್ ಸ್ಟಾರ್ಗಳಾದ ತೇಜಿಂದರ್ ಪಾಲ್ ಸಿಂಗ್ ತೂರ್, ಮೊಹಮ್ಮದ್ ಅನಾಸ್, ಸ್ವಪ್ನಾ ಬರ್ಮನ್, ುಟ್ಬಾಲರ್ ಗುರುಪ್ರೀತ್ ಸಿಂಗ್ ಸಂಧು, ಹಾಕಿಪಟು ಚಿಂಗ್ಲೆನ್ಸಾನ ಸಿಂಗ್ ಕಂಗುಜಮ್, ಶೂಟರ್ ಅಂಜುಮ್ ಮೌದ್ಗಿಲ್ ಇವರಲ್ಲಿ ಪ್ರಮುಖರು. ರಾಷ್ಟ್ರೀಯ ಕ್ರೀಡಾದಿನವಾದ . 29ರಂದು ರಾಷ್ಟ್ರಪತಿಯವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಸಭೆ ತ್ಯಜಿಸಿದ ಮೇರಿ ಕೋಮ್:  ಸ್ವಹಿತಾಸಕ್ತಿ ಸಂಘರ್ಷ ಬಿಸಿ ಪ್ರಶಸ್ತಿ ಆಯ್ಕೆ ಸಮಿತಿಗೂ ತಟ್ಟಿದ್ದು ಈದಿನ ಬೆಳವಣಿಗೆಯಾಗಿತ್ತು. ಇದರಿಂದ ಆಯ್ಕೆ ಸಮಿತಿ ಸದಸ್ಯರಲ್ಲಿ ಒಬ್ಬರಾಗಿದ್ದ ಖ್ಯಾತ ಬಾಕ್ಸರ್ ಎಂ.ಸಿ. ಮೇರಿ ಕೋಮ್ ಸಭೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರು. ಅವರ ವೈಯಕ್ತಿಕ ಕೋಚ್ ಚೋಟೆಲಾಲ್ ಯಾದವ್ ಹೆಸರು ದ್ರೋಣಾಚಾರ್ಯ ಪ್ರಶಸ್ತಿ ಯಾದಿಯಲ್ಲಿದ್ದುದೇ ಇದಕ್ಕೆ ಕಾರಣ.ಕ್ರೀಡಾ ಪ್ರಶಸ್ತಿ ಪುರಸ್ಕೃತರು -
ಖೇಲ್ ರತ್ನ:  ಭಜರಂಗ್ ಪೂನಿಯ (ಕುಸ್ತಿ, ದೀಪಾ ಮಲಿಕ್ (ಪ್ಯಾರಾ ಆ್ಯತ್ಲೀಟ್‌. ಅರ್ಜುನ ಪ್ರಶಸ್ತಿ: ತೇಜಿಂದರ್ಪಾಲ್ ಸಿಂಗ್ ತೂರ್ (ಆ್ಯತ್ಲೆಟಿಕ್ಸ್‌, ಮೊಹಮ್ಮದ್ ಅನಾಸ್ (ಆ್ಯತ್ಲೆಟಿಕ್ಸ್),ಎಸ್. ಭಾಸ್ಕರನ್ (ಬಾಡಿ ಬಿಲ್ಡಿಂಗ್‌, ಸೋನಿಯಾ ಲಾಥರ್ (ಬಾಕ್ಸಿಂಗ್), ರವೀಂದ್ರ ಜಡೇಜ (ಕ್ರಿಕೆಟ್), ಚಿಂಗ್ಲೆನ್ಸಾನ ಸಿಂಗ್ (ಹಾಕಿ), ಅಜಯ್ ಠಾಕೂರ್ (ಕಬಡ್ಡಿ), ಗೌರವ್ ಸಿಂಗ್ ಗಿಲ್ (ಮೋಟಾರ್ ನ್ಪೋರ್ಟ್ಸ್, ಪ್ರಮೋದ್ ಭಗತ್ (ಪ್ಯಾರಾ ಬ್ಯಾಡ್ಮಿಂಟನ್‌, ಅಂಜುಮ್ ಮೌದ್ಗಿಲ್ (ಶೂಟಿಂಗ್), ಹರ್ಮೀತ್ ರಜುಲ್ ದೇಸಾಯಿ (ಟೇಬಲ್ ಟೆನಿಸ್‌, ಪೂಜಾ ಧಂಡಾ (ಕುಸ್ತಿ, ಫೌವಾದ್ ಮಿರ್ಜಾ (ಈಕ್ವೆಸ್ಟ್ರಿಯನ್), ಗುರುಪ್ರೀತ್ ಸಿಂಗ್ ಸಂಧು (ಫುಟ್ಬಾಲ್), ಪೂನಂ ಯಾದವ್ (ಕ್ರಿಕೆಟ್‌, ಸ್ವಪ್ನಾ ಬರ್ಮನ್ (ಆ್ಯತ್ಲೆಟಿಕ್ಸ್‌, ಸುಂದರ್ ಸಿಂಗ್ ಗುರ್ಜರ್ (ಪ್ಯಾರಾ ಆ್ಯತ್ಲೆಟಿಕ್ಸ್‌, ಬಿ. ಸಾಯಿ ಪ್ರಣೀತ್ (ಬ್ಯಾಡ್ಮಿಂಟನ್), ಸಿಮ್ರಾನ್ ಸಿಂಗ್ ಶೆರ್ಗಿಲ್ (ಪೋಲೊ.
ಧ್ಯಾನ್ಸಿಂಗ್ ಪ್ರಶಸ್ತಿ: ಮ್ಯಾನ್ಯುಯೆಲ್ ಫ್ರೆಡ್ರಿಕ್ಸ್ (ಹಾಕಿ), ಅರೂಪ್ ಬಸಾಕ್ (ಟೇಬಲ್ ಟೆನಿಸ್), ಮನೋಜ್ ಕುಮಾರ್ (ಕುಸ್ತಿ), ನಿತಿನ್ ಕೀರ್ತನೆ (ಟೆನಿಸ್‌, ಲಾಲ್ರೆಮ್ಸಂಗ (ಆರ್ಚರಿ). ದ್ರೋಣಾಚಾರ್ಯ ಪ್ರಶಸ್ತಿ: ವಿಮಲ್ ಕುಮಾರ್ (ಬ್ಯಾಡ್ಮಿಂಟನ್),ಸಂದೀಪ್ ಗುಪ್ತಾ (ಟೇಬಲ್ ಟೆನಿಸ್), ಮೊಹಿಂದರ್ ಸಿಂಗ್ ಧಿಲ್ಲೋನ್ (ಆ್ಯತ್ಲೆಟಿಕ್ಸ್ . ಜೀವಮಾನ ಸಾಧನೆ ಪ್ರಶಸ್ತಿ: ಮೆರ್ಜ್ಬಾನ್ ಪಟೇಲ್ (ಹಾಕಿ), ರಾಮ್ಬೀರ್ ಸಿಂಗ್ ಖೋಕರ್ (ಕಬಡ್ಡಿ), ಸಂಜಯ್ ಭಾರದ್ವಜ್ (ಕ್ರಿಕೆಟ್). 19 ಮಂದಿ ಅರ್ಜುನರು: ಕ್ರಿಕೆಟಿಗರಾದ ರವೀಂದ್ರ ಜಡೇಜ, ಪೂನಂ ಯಾದವ್, ಟ್ರ್ಯಾಕ್ ಆ್ಯಂಡ್ ಫೀಲ್ಡ್ ಸ್ಟಾರ್ಗಳಾದ ತೇಜಿಂದರ್ ಪಾಲ್ ಸಿಂಗ್ ತೂರ್, ಮೊಹಮ್ಮದ್ ಅನಾಸ್, ಸ್ವಪ್ನಾ ಬರ್ಮನ್, ುಟ್ಬಾ ಲರ್ ಗುರುಪ್ರೀತ್ ಸಿಂಗ್ ಸಂಧು, ಶೂಟರ್ ಅಂಜುಮ್ ಮೌದ್ಗಿಲ್ ಇವರಲ್ಲಿ ಪ್ರಮುಖರು.

2019: ನವದೆಹಲಿ: ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಆಸ್ಪತ್ರೆಯಲ್ಲಿ ಈದಿನ ಭಾರೀ ಬೆಂಕಿ ಅವಘಡ ಸಂಭವಿಸಿತು. ಅಗ್ನಿ ಅವಘಡದಲ್ಲಿ ವೈದ್ಯಕೀಯ ವರದಿಗಳು, ಸ್ಯಾಂಪಲ್ಳು ಬೆಂಕಿಗಾಹುತಿಯಾದವು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಬೆಂಕಿ ವ್ಯಾಪಿಸಿದ ಹಿನ್ನೆಲೆಯಲ್ಲಿ ಕೆಲವು ರೋಗಿಗಳನ್ನು ಸ್ಥಳಾಂತರ ಮಾಡಲಾಯಿತು. ಸಂಜೆ 5 ಗಂಟೆ ವೇಳೆಗೆ ಮೈಕ್ರೋಬಯಾಲಜಿ ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು. ಕೂಡಲೇ 34 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿ, 2 ಗಂಟೆಯಲ್ಲಿ ಬೆಂಕಿಯನ್ನು ನಂದಿಸಿದವು. ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಅವರೂ ಏಮ್ಸ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಬೇರೆ ಕಟ್ಟಡದಲ್ಲಿ ದಾಖಲಾದ ಕಾರಣ ಯಾವುದೇ ಸಮಸ್ಯೆಯಾಗಿಲ್ಲ ಎಂದು ಮೂಲಗಳು ತಿಳಿಸಿದವು.

2019: ವಾಷಿಂಗ್ಟನ್:ಕಾಶ್ಮೀರದ 370ನೇ ವಿಧಿ ರದ್ದುಗೊಳಿಸಿದ್ದನ್ನು ವಿರೋಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮೊರೆ ಹೋಗಿ ಮುಖಭಂಗಕ್ಕೆ ಈಡಾಗಿದ್ದ ಪಾಕಿಸ್ತಾನಕ್ಕೆ ಇದೀಗ ಅಮೆರಿಕದಿಂದ ಮತ್ತೊಂದು ಭಾರೀ ಹೊಡೆತ ಬಿದ್ದಿತು. ಪಾಕಿಸ್ತಾನಕ್ಕೆ ನೀಡುತ್ತಿದ್ದ 440 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ಅಮೆರಿಕ ಕಡಿತಗೊಳಿಸಿತು. ನಿಟ್ಟಿನಲ್ಲಿ ಅಮೆರಿಕದಿಂದ ಪಾಕಿಸ್ತಾನಕ್ಕೆ ದೊರೆಯುತ್ತಿದ್ದ ಹಣಕಾಸಿನ ನೆರವು 4.1 ಶತಕೋಟಿ ಡಾಲರ್ ಗೆ ಇಳಿದಂತಾಯಿತು. ಪಾಕಿಸ್ತಾನ ಸಹಭಾಗಿತ್ವ ವೃದ್ದಿ ಒಪ್ಪಂದ(ಪಿಇಪಿಎ) 2010 ಪ್ರಕಾರ ಅಮೆರಿಕ ಪಾಕಿಸ್ತಾನಕ್ಕೆ ಹಣಕಾಸಿನ ನೆರವು ನೀಡುತ್ತಿತ್ತು ಎಂದು ಎಕ್ಸ್ ಪ್ರೆಸ್ ಟ್ರೈಬ್ಯೂನ್ ವರದಿ ಮಾಡಿತು. ಪಾಕಿಸ್ತಾನ ಅಧ್ಯಕ್ಷ ಇಮ್ರಾನ್ ಖಾನ್ ವಾಷಿಂಗ್ಟನ್ ಗೆ ಭೇಟಿ ನೀಡಲು ಮೂರು ವಾರ ಇರುವಾಗಲೇ ಅಮೆರಿಕ ಆರ್ಥಿಕ ನೆರವು ಕಡಿತಗೊಳಿಸಿರುವ ಬಗ್ಗೆ ಮಾಹಿತಿ ನೀಡಿದೆ ಎಂದು ವರದಿ ವಿವರಿಸಿತು. 2010ರಲ್ಲಿ ಪಿಇಪಿಎ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದರನ್ವಯ ಪಾಕಿಸ್ತಾನಕ್ಕೆ ಅಮೆರಿಕ 5 ವರ್ಷಗಳ ಕಾಲದಲ್ಲಿ 7.5 ಶತಕೋಟಿ ಡಾಲರ್ ಆರ್ಥಿಕ ನೆರವು ನೀಡಬೇಕಾಗಿತ್ತು. 2009ರಲ್ಲಿ ಕೆರ್ರಿ ಲುಗಾರ್ ಬೆರ್ಮನ್(ಕೆಎಲ್ ಬಿ) ನಿರ್ಣಯವನ್ನು ಅಮೆರಿಕ ಕಾಂಗ್ರೆಸ್ ನಲ್ಲಿ ಅಂಗೀಕಾರಗೊಂಡಿತ್ತು. ಕೆಎಲ್ ಬಿ ಪ್ರಕಾರ ಪಾಕಿಸ್ತಾನಕ್ಕೆ 4.5 ಶತಕೋಟಿ ಡಾಲರ್ ಹಣಕಾಸು ನೆರವು ಸಿಗಬೇಕಾಗಿದ್ದು, ಇದೀಗ ಕಡಿತಗೊಂಡ ಪರಿಣಾಮ 4.1 ಶತಕೋಟಿ ಡಾಲರ್ ಗೆ ಇಳಿಕೆಯಾಗಿದೆ ಎಂದು ವರದಿ ತಿಳಿಸಿತು.



No comments:

Post a Comment