Tuesday, August 13, 2019

ಇಂದಿನ ಇತಿಹಾಸ History Today ಆಗಸ್ಟ್ 13

2019: ನವದೆಹಲಿ: ರಾತ್ರಿ ಬೆಳಗಾಗುವುದರ ಒಳಗಾಗಿ ಪರಿಸ್ಥಿತಿ ಸಹಜಗೊಳ್ಳಲು ಸಾಧ್ಯವಿಲ್ಲ, ಸರ್ಕಾರಕ್ಕೆ ಸಮಂಜಸ ಕಾಲಾವಕಾಶ ನೀಡಬೇಕಾಗುತ್ತದೆ ಎಂದು ಈದಿನ  ಹೇಳಿದ ಸುಪ್ರೀಂಕೋರ್ಟ್, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿ ರದ್ದು ಬಳಿಕ ವಿಧಿಸಲಾದ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಕೇಂದ್ರ ಸರ್ಕಾರ ಮತ್ತು ಕಾಶ್ಮೀರ ಸರ್ಕಾರಕ್ಕೆ ನಿರ್ದೇಶನ ನೀಡಲು ನಿರಾಕರಿಸಿತು.  ೩೭೦ನೇ ವಿಧಿ ರದ್ದು ಪಡಿಸಿದ ಬಳಿಕ ಹೇರಲಾಗಿರುವ ಎಲ್ಲ ನಿಬಂಧಗಳನ್ನು, ಇತರ ಪ್ರತಿಗಾಮೀ ಕ್ರಮಗಳನ್ನು ರದ್ದು ಪಡಿಸುವಂತೆ ಕೇಂದ್ರ ಸರ್ಕಾರ ಹಾಗ್ತೂ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದ ಕಾಂಗ್ರೆಸ್ ಕಾರ್ಯಕರ್ತರಾದ ತೆಹ್ಸೀನ್ ಪೂನಾವಲ್ಲ ಅವರ ಅರ್ಜಿಯ ವಿಚಾರಣೆಯನ್ನು ಎರಡು ವಾರಗಳ ಬಳಿಕ ಕೈಗೆತ್ತಿಕೊಳ್ಳುವಂತೆ ಪೀಠವು ನಿರ್ದೇಶಿಸಿತು.  ನ್ಯಾಯಮೂರ್ತಿ ಅರುಣ್ ಮಿಶ್ರ ನೇತೃತ್ವದ ತಿಸದಸ್ಯ ಪೀಠವುರಾತ್ರಿ ಬೆಳಗಾಗುವುದರ ಒಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜಗೊಳ್ಳಲು ಸಾಧ್ಯವಿಲ್ಲ, ಪ್ರಾಣನಷ್ಟವಾಗದಂತೆ ಕಣಿವೆಯನ್ನು ಶಾಂತ ಸ್ಥಿತಿಗೆ ತರಲು ಸಮಂಜಸವಾದ ಕಾಲಾವಕಾಶ ಸರ್ಕಾರಕ್ಕೆ ಬೇಕಾಗುತ್ತದೆಎಂದು ಹೇಳಿತು.   ಕನಿಷ್ಠ ಆಸ್ಪತ್ರೆಗಳು, ಪೊಲೀಸ್ ಠಾಣೆಗಳು ಮತ್ತು ಶಾಲೆಗಳಂತಹ ಅಗತ್ಯ ಸೇವೆಗಳನ್ನಾದರೂ ಪುನಃಸ್ಥಾಪಿಸುವಂತೆ ಅದೇಶ ನೀಡಿಎಂಬುದಾಗಿ ಅರ್ಜಿದಾರರಾದ ತೆಹ್ಸೀನ್ ಪೂನಾವಲ್ಲ ಕೋರಿದಾಗಏನಾದರೂ ಘಟಿಸಿದರೆ ಯಾರನ್ನು ದೂಷಿಸುವುದು?’ ಎಂದು ಪೀಠ ಪ್ರಶ್ನಿಸಿತು.  ಯಾರು ಕೂಡಾ ಶೇಕಡಾ ಒಂದರಷ್ಟೂ ಅವಕಾಶ ತೆಗೆದುಕೊಳ್ಳಲು ಸಾಧ್ಯವಿಲ್ಲಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ, ಎಂ.ಆರ್. ಶಾ ಮತ್ತು ಅಜಯ್ ರಾಸ್ಟೋಗಿ ಅವರನ್ನು ಒಳಗೊಂಡ ಪೀಠ ಹೇಳಿತು. ಸಧ್ಯದ ಪರಿಸ್ಥಿತಿಯಲ್ಲಿ ಕಣಿವೆಯ ಬೆಳವಣಿಗೆಗಳನ್ನು ಎರಡು ವಾರಗಳ ಕಾಲ ಕಾದು ನೋಡಲು ಪೀಠ ಒಪ್ಪಿತು.  ತತ್ ಕ್ಷಣ ನ್ಯಾಯಾಲಯದ ಹಸ್ತಕ್ಷೇಪಕ್ಕೆ ಒಪ್ಪದ ಪೀಠವಿಷಯ ಅತ್ಯಂತ ಸೂಕ್ಷ್ಮವಾದದ್ದುಎಂದು ಅಭಿಪ್ರಾಯಪಟ್ಟಿತು. ಆಗಸ್ಟ್ ೫ರಂದು ರಾಷ್ಟ್ರಪತಿ ಅಧಿಸೂಚನೆಯ ಮೂಲಕ ೩೭೦ನೇ ವಿಧಿ ರದ್ದಿಗೂ ಮುನ್ನವೇ ಕಣಿವೆಯಲ್ಲಿ ವಿಧಿಸಲಾದ ಕರ್ಫ್ಯೂ, ಮಾಹಿತಿ ತಡೆ (ಬ್ಲಾಕ್ ಔಟ್) ಇತ್ಯಾದಿ ತಿರೋಗಾಮಿ ಕ್ರಮಗಳನ್ನು ಪೂನಾವಲ್ಲ ಅವರು ವಿಶೇಷವಾಗಿ ಪ್ರಸ್ತಾಪಿಸಿದರು.  ರಾಷ್ಟ್ರಪತಿ ಅಧಿಸೂಚನೆಯನ್ನು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಕೇಂದ್ರವು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮಸೂದೆಯನ್ನು ಮಂಡಿಸಿ ಸಂಸತ್ತಿನ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿತ್ತು.  ಕರ್ಫ್ಯೂ ತೆರವು ಮತ್ತು ದೂರವಾಣಿ ಹಾಗೂ ಅಂತರ್ಜಾಲ ಸೇರಿದಂತೆ ಸಂಪರ್ಕಗಳನ್ನು ಪುನಸ್ಥಾಪಿಸುವ ಸಂಬಂಧದ ನಿರ್ಧಾರವು ಅಂತಿಮವಾಗಿ ಸರ್ಕಾರವನ್ನು ಅವಲಂಬಿಸಿದ್ದು, ಅವುಗಳನ್ನು ಪ್ರತಿದಿನವೂ ಸಡಿಲಗೊಳಿಸಲಾಗುತ್ತಿದೆ. ದಿನ ದಿನದ ವಿದ್ಯಮಾನಗಳನ್ನು ಆಧರಿಸಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ನ್ಯಾಯಾಲಯಕ್ಕೆ ತಿಳಿಸಿದರು.  ೨೦೧೬ರ ಹಿಂಸಾಚಾರ: ೨೦೧೬ರಲ್ಲಿ ಹಿಜ್ಬುಲ್ ಮುಜಾಹಿದೀನ್ಕಮಾಂಡರ್ಬುರ್ಹಾನ್ ವನಿಯನ್ನು ಭದ್ರತಾ ಪಡೆಗಳು ಕಾಶ್ಮೀರದಲ್ಲಿ ಕೊಂದು ಹಾಕಿದ ಬಳಿಕ ಹೇಗೆ ವ್ಯಾಪಕ ಹಿಂಸಾಚಾರಗಳು ಸಂಭವಿಸಿದವು ಎಂಬುದನ್ನು ವೇಣುಗೋಪಾಲ್ ಅವರು ಪೀಠಕ್ಕೆ ವಿವರಿಸಿದರು. ಆಗ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ತಿಂಗಳುಗಳೇ ಬೇಕಾಗಿ ಬಂದಿದ್ದವು. ಇದಕ್ಕೆ ವ್ಯತಿರಿಕ್ತವಾಗಿ ಹಾಲಿ ಪರಿಸ್ಥಿತಿಯುಯ ಕೆಲವೇ ದಿನಗಳಲ್ಲಿ ಸಹಜಗೊಳ್ಳುವ ನಿರೀಕ್ಷೆ ಇದೆ. ಆದರೆ ಇದು ಕೂಡಾ ಮುಂದೆ ಸಂಭವಿಸಬಹುದಾದ ವಿದ್ಯಮಾನಗಳನ್ನು ಅವಲಂಬಿಸಿದೆ ಎಂದು ಅಟಾರ್ನಿ ಜನರಲ್ ಹೇಳಿದರು. ಪೂನಾವಲ್ಲ ಅವರ ಪರ ಹಾಜರಾಗಿದ್ದ ಹಿರಿಯ ವಕೀಲರಾದ ಮೇನಕಾ ಗುರುಸ್ವಾಮಿ ಅವರು ಕಾಶ್ಮೀರದಲ್ಲಿ ಮಾಹಿತಿ ನಿರ್ಬಂಧದ ಪರಿಣಾಮವಾಗಿ ಸೈನಿಕರಿಗೆ ಕೂಡಾ ತಮ್ಮ ಮನೆಯವರ ಜೊತೆಯೂ ಸಂಪರ್ಕಿಸಲು ಹೇಗೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ವಿವರಿಸುತ್ತಾ ತಮ್ಮ ವಾದ ಮಂಡಿಸಿದರು. ’ನಿಮಗೆ ನಿಮ್ಮ ತಾಯಿಗೆ ಕರೆ ಮಾಡಲಾಗದೇ ಇದ್ದಲ್ಲಿ ದೀಪಾವಳಿ ಹೇಗಿರುತ್ತದೆ ಎಂದು ಕಲ್ಪಿಸಿಕೊಳ್ಳಿಎಂದು ಮೇನಕಾ ನುಡಿದರು.   ಸೈನಿಕರು ಕೂಡಾ ಶಿಸ್ತಿಗೆ ಒಳಪಟ್ಟವರೇ. ಅವರು ಯಾವುದಕ್ಕಿಂತಲೂ ಮೇಲೆ ಅಲ್ಲ. ನೀವು ಸೈನಿಕರತ್ತ ಏಕೆ ನೋಡುತ್ತಿದ್ದೀರಿ? ವ್ಯವಸ್ಥೆಯು ಕೆಲವರಿಗಷ್ಟೇ ನ್ಯಾಯ ಒದಗಿಸುವಂತೆ ನಡೆಯಬಲ್ಲದೇ?’ ಎಂದು ನ್ಯಾಯಮೂರ್ತಿ ಶಾ ಪ್ರಶ್ನಿಸಿದರು.  ಜನರಿಗೆ ಆಸ್ಪತ್ರೆಗಳನ್ನು ತಲುಪಲೂ ಸಾಧ್ಯವಾಗುತ್ತಿಲ್ಲ ಎಂದು ಗುರುಸ್ವಾಮಿ ಹೇಳಿದರು.  ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಮತ್ತು ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ನಿರ್ಬಂಧಗಳನ್ನು ವಿಧಿಸಲಾಗಿದೆಎಂದು ಹೇಳಿದ ನ್ಯಾಯಮೂರ್ತಿ ಮಿಶ್ರ ಅವರುಆದರೆ, ಎಷ್ಟು ಸಮಯ ಇದು ಮುಂದುವರೆಯುತ್ತದೆ?’ ಎಂದು ವೇಣುಗೋಪಾಲ್ ಅವರತ್ತ ತಿರುಗಿ ಪ್ರಶ್ನಿಸಿದರು.  ಪರಿಸ್ಥಿತಿಯನ್ನು ಮಾಮೂಲಿಗೆ ತರಲು ಸರ್ಕಾರ ಬದ್ಧವಾಗಿದೆ. ಯಾವುದೇ ಅಹಿತಕರ ಘಟನೆಗಳನ್ನು ತಡೆಯುವ ಸಲುವಾಗಿ ಅರೆಸೇನಾ ಪಡೆಗಳನ್ನು ಕಳುಹಿಸಲಾಗಿದೆ ಎಂದು ವೇಣುಗೋಪಾಲ್ ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದರು.  ಪರಿಸ್ಥಿತಿ ಮಾಮೂಲಿಗೆ ಹಿಂತಿರುಗುವುದು ರಾಜ್ಯ ಮತ್ತು ಕೇಂದ್ರದ ಹಿತಾಸಕ್ತಿಗೆ ಒಳ್ಳೆಯದೇ. ಸಾರ್ವಜನಿಕರಿಗೆ ಆಗುವ ಅನಾನುಕೂಲತೆ ಅತ್ಯಂತ ಕನಿಷ್ಠವಾಗುವಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುವುದುಎಂದು ವೇಣುಗೋಪಾಲ್ ನುಡಿದರು.  ೨೦೧೬ರಲ್ಲಿ (ವನಿಯ ಸಾವಿನ ಬಳಿಕ) ಪ್ರತ್ಯೇಕತಾವಾದಿಗಳು ಗಡಿಯಾಚೆಯಿಂದ ಬಂದ ಸೂಚನೆಗಳನ್ನು ಅನುಸರಿಸಿ ಕಾಶ್ಮೀರದ ಯುವಕರನ್ನು ನೇಮಕಾತಿ ಮಾಡಿಕೊಂಡು ಅಶಾಂತಿ ಹರಡಿದ್ದನ್ನು ಅವರು ಉಲ್ಲೇಖಿಸಿದರು.
ವೇಣುಗೋಪಾಲ್ ಅವರ ಮಾತುಗಳನ್ನು ಕೇಳಿದ ಬಳಿಕ ನ್ಯಾಯಮೂರ್ತಿ ಶಾ ಅವರು ಮೇನಕಾ ಗುರುಸ್ವಾಮಿಯವರತ್ತ ತಿರುಗಿ, ’ಇದನ್ನು ಮೆಚ್ಚಿಕೊಳ್ಳಿ. ಏನಾಗಬಹುದು ಎಂಬುದು ಯಾರಿಗೂ ಗೊತ್ತಿಲ್ಲ, ಸ್ವಲ್ಪ ಸಮಯವನ್ನು ಕೊಡಬೇಕಾಗುತ್ತದೆ. ನಾಳೆ ಏನಾದರೂ ಘಟಿಸಿದರೆ, ಯಾರನ್ನು ದೂಷಿಸುವಿರಿ? ಕೇಂದ್ರವನ್ನು. ಯಾರೊಬ್ಬರೂ ಶೇಕಡಾ ಒಂದರಷ್ಟು ಅವಕಾಶವನ್ನು ಪಡೆಯಲಾಗದುಎಂದು ಹೇಳಿದರು.  ರಾತ್ರಿ ಬೆಳಗಾಗುವುದರ ಒಳಗೆ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಇದು ಗಂಭೀರ ವಿಷಯ. ಸ್ಥಿತಿ ಸಹಜಗೊಳ್ಳಬಹುದು. ಅದಾಗಲಿ ಎಂದು ನಾವು ನಿರೀಕ್ಷಿಸುತ್ತೇವೆ. ಯಾವುದೇ ಪ್ರಾಣಹಾನಿಯಾಗದಂತೆ ನಾವು ಖಾತರಿ ನೀಡಬೇಕಾಗಿದೆ. ಇದು ಹೆಚ್ಚು ಮಹತ್ವದ ವಿಷಯ. ಈಗ ನ್ಯಾಯಾಲಯ ಹಸ್ತಕ್ಷೇಪ ಮಾಡಿದರೆ, ಇದು ಅತ್ಯಂತ ಸೂಕ್ಷ್ಮ ವಿಷಯ. ನಮಗೆ ಏನೂ ಗೊತ್ತಿಲ್ಲ. ನಾವು ಈಗ ವೃತ್ತ ಪತ್ರಿಕೆಗಳನ್ನು ಓದಲು ಆಗುವುದಿಲ್ಲಎಂದು ನ್ಯಾಯಮೂರ್ತಿ ಮಿಶ್ರ ಅವರು ಗುರುಸ್ವಾಮಿ ಅವರಿಗೆ ಹೇಳಿದರು. ಕಾಶ್ಮೀರ ಕಣಿವೆಯಲ್ಲಿ ಏನಾಗುತ್ತಿದೆ ಎಂಬ ಪೂರ್ಣ ಚಿತ್ರ ಪೂನಾವಲ್ಲ ಅವರಿಗೆ ಇಲ್ಲದಿರಬಹುದು ಎಂದೂ ಪೀಠ ಹೇಳಿತು.  ಯಾರು ಕೂಡಾ ಪರಿಸ್ಥಿತಿಯ ಪರಿಪೂರ್ಣ ಚಿತ್ರವನ್ನು ಹೊಂದಿಲ್ಲಎಂದೂ ನ್ಯಾಯಮೂರ್ತಿ ಶಾ ಹೇಳಿದರು. ಪರಿಸ್ಥಿತಿಯನ್ನು ನಿಕಟವಾಗಿ ಪರಿಶೀಲಿಸಿದ ಬಳಿಕ ಸಂಬಂಧಪಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟರು ಜಿಲ್ಲಾವಾರು ಕರ್ಫ್ಯೂ ವಿಧಿಸಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಹೇಳಿದರು. ’ಇವು ಜಿಲ್ಲಾವಾರು ನಿರ್ಣಯಗಳು. ಪರಿಸ್ಥಿತಿಯ ಅಧ್ಯಯನದ ಬಳಿಕ ವಿಧಿಸಲಾಗಿರುವ ನಿರ್ಣಯಗಳುಎಂದು ಮೆಹ್ತ ನುಡಿದರು.   ಸ್ವಲ್ಪ ಕಾಲ ಕಾಯೋಣ. ಪರಿಸ್ಥಿತಿಯನ್ನು ಮಾಮೂಲಿಗೆ ತರಲು ಸಮಂಜಸವಾದ ಕಾಲಾವಕಾಶವನ್ನು ನೀಡಬೇಕು. ಯಾವುದೇ ಬದಲಾವಣೆ ಆಗದಿದ್ದರೆ, ಪೂರ್ಣ ಮಾಹಿತಿಯೊಂದಿಗೆ ಬನ್ನಿಎಂದು ನ್ಯಾಯಮೂರ್ತಿ ಮಿಶ್ರ ಅವರು ಮೇನಕಾ ಗುರುಸ್ವಾಮಿ ಅವರಿಗೆ ಹೇಳುತ್ತಾ ಅರ್ಜಿಯನ್ನು ಎರಡು ವಾರಗಳ ಕಾಲ ಬಾಕಿ ಇಡಲು ನಿರ್ಧರಿಸಿದರು.  ಸರ್ಕಾರದ ಕ್ರಮಗಳ ಬಗ್ಗೆ ತನಿಖೆಗೆ ನ್ಯಾಯಾಂಗ ಆಯೋಗವನ್ನು ರಚಿಸಬೇಕು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲ ಮತ್ತು ಮೆಹಬೂಬಾ ಮುಫ್ತಿ ಅವರಂತಹ ನಾಯಕರುನ್ನು ಬಿಡುಗಡೆ ಮಾಡಬೇಕು ಎಂದೂ ಪೂನಾವಲ್ಲ ಕೋರಿದ್ದರು.  ನಿರೀಕ್ಷಿತವಾಗಿ, ಕರ್ಫ್ಯೂ ಮತ್ತು ಅಪರಾಧ ದಂಡ ಸಂಹಿತೆ, ೧೯೭೩ರ ಅಡಿಯಲ್ಲಿ ಸೆಕ್ಷನ್ ೧೪೪ರ ಹೇರಿಕೆ, ಮುಂಜಾಗರೂಕತಾ ಬಂಧನಗಳು, ದೂರವಾಣಿ ಸಂಪರ್ಕ ಕಡಿತ, ಇಂಟರ್ ನೆಟ್ ಸೇವೆ ಕಡಿತ, ಮಾಧ್ಯಮಗಳಿಗೆ ದಿಗ್ಬಂಧನ, ಆರೋಗ್ಯಕಾಳಜಿ, ಶಿಕ್ಷಣ ಸಂಸ್ಥೆಗಳು, ಬ್ಯಾಂಕುಗಳು, ಸರ್ಕಾರಿ ಕಚೇರಿಗಳು ಮತ್ತು ಇತರ ಅಂಗಡಿ ಮತ್ತಿತರ ಸಂಸ್ಥೆಗಳ ಮೂಲಸವಲತ್ತು ರದ್ದಿನಿಂದ ಸಾರ್ವಜನಿಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ ಎಂದು ಪೂನಾವಲ್ಲ ಅರ್ಜಿ ಹೇಳಿತ್ತು.

2019: ಕೋಲ್ಕತ: ಹಿಂದಿನ ವರ್ಷಹಿಂದು ಪಾಕಿಸ್ತಾನಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸತ್ ಸದಸ್ಯ ಶಶಿ ತರೂರ್ ಅವರ ವಿರುದ್ಧ ಕೋಲ್ಕತ ನ್ಯಾಯಾಲಯವೊಂದು ಬಂಧನ ವಾರಂಟ್ ಜಾರಿ ಮಾಡಿತು. ನಗರದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತಿರುವನಂತಪುರಂ ಲೋಕಸಭಾ ಸದಸ್ಯ ತರೂರ್ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿತು. ವಕೀಲ ಸುಮೀತ ಚೌಧರಿ ಅವರು ಪ್ರಕರಣ ದಾಖಲಿಸಿದ್ದರು.  ಕಳೆದ ವರ್ಷ ಜುಲೈ ತಿಂಗಳಲ್ಲಿ ತರೂರ್ ಅವರು ಭಾರತೀಯ ಜನತಾ ಪಕ್ಷವು (ಬಿಜೆಪಿ) ೨೦೧೯ರ ಲೋಕಸಭಾ ಚುನಾವಣೆಗಳಲ್ಲಿ ಗೆದ್ದರೆ, ಅದುಹಿಂದೂ ಪಾಕಿಸ್ತಾನನಿರ್ಮಾಣಕ್ಕೆ ಹಾದಿಯಾಗುವಂತಹ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂದು ಹೇಳಿದ್ದರು. ತಿರುವಂತಪುರಂನಲ್ಲಿ ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಿದ್ದ ತರೂರ್, ’ಬಿಜೆಪಿಯು  ಹೊಸ ಸಂವಿಧಾನವನ್ನು ಬರೆಯಲಿದ್ದು ಅದು ಬಹುತೇಕ ಪಾಕಿಸ್ತಾನದಂತಹ ಅಲ್ಪಸಂಖ್ಯಾತರ ಹಕ್ಕುಗಳನ್ನು ಮನ್ನಿಸದ ರಾಷ್ಟ್ರದ ನಿರ್ಮಾಣಕ್ಕೆ ದಾರಿ ಮಾಡಲಿದೆ’  ಎಂದು ಹೇಳಿದ್ದರು.

2019: ನವದೆಹಲಿ: ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ ಉತ್ತರ ಪ್ರದೇಶದ ಶಾಸಕ ಕುಲದೀಪ್ ಸೆಂಗರ್ ವಿರುದ್ಧ, ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ತಂದೆಯನ್ನು ಹತ್ಯೆಗೈದ ಆರೋಪವನ್ನು ಹೊರಿಸಲಾಯಿತು. ಸೆಂಗರ್ ಮತ್ತು ಸಹೋದರ ಅತುಲ್ ಸೆಂಗರ್ ವಿರುದ್ಧ ದೆಹಲಿಯ ನ್ಯಾಯಾಲಯವು ದೋಷಾರೋಪವನ್ನು ಹೊರಿಸಿತು.  ಪ್ರಕರಣಕ್ಕೆ ಸಂಬಂಧಿಸಿದ ಮೂವರು ಪೊಲೀಸರ ವಿರುದ್ಧ ಕೂಡಾ ಕೊಲೆಯ ದೋಷಾರೋಪ ಹೊರಿಸಲಾಯಿತು. ಬಿಜೆಪಿಯಿಂದ ಇತ್ತೀಚೆಗೆ ಉಚ್ಚಾಟನೆಗೊಂಡಿರುವ ಕುಲದೀಪ್ ಸೆಂಗರ್ ತನ್ನ ವಿರುದ್ಧದ ಎಲ್ಲ ಆರೋಪಗಳನ್ನೂ ನಿರಾಕರಿಸಿರುವುದಾಗಿ ವರದಿಗಳು ಹೇಳಿದವು. ಕಳೆದ ತಿಂಗಳು ಬಾಲಕಿಯು ರಾಯ್ ಬರೇಲಿಗೆ ಹೋಗುತ್ತಿದ್ದಾಗ ಅಪಘಾತಕ್ಕೆ ಈಡಾಗಿದ್ದಳು. ಬಾಲಕಿಯ ಇಬ್ಬರು ಚಿಕ್ಕಮ್ಮಂದಿರು ದುರ್ಘಟನೆಯಲ್ಲಿ ಸಾವನ್ನಪ್ಪಿದ್ದರು. ಬಾಲಕಿ ಮತ್ತು ಆಕೆಯ ವಕೀಲ ತೀವ್ರವಾಗಿ ಗಾಯಗೊಂಡಿದ್ದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇವರಿಬ್ಬರ ಸ್ಥಿತಿ ಈಗಲೂ ಚಿಂತಾಜನಕವಾಗಿದ್ದು, ಜೀವ ರಕ್ಷಕ ವ್ಯವಸ್ಥೆಯಲ್ಲಿ ಇರಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

2019: ನವದೆಹಲಿ: ಕರ್ನಾಟಕ ವಿಧಾನಸಭೆಯಿಂದ ತಮ್ಮನ್ನು ಅನರ್ಹಗೊಳಿಸಿದ ವಿಧಾನಸಭಾಧ್ಯಕ್ಷರ ಕ್ರಮವನ್ನು  ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ತುರ್ತು ವಿಚಾರಣೆ ಕೋರಿ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಮೆಮೋ (ಮನವಿ) ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕರ್ನಾಟಕದ ಕಾಂಗ್ರೆಸ್ - ಜೆಡಿ(ಎಸ್) ಬಂಡಾಯ ಶಾಸಕರಿಗೆ ಸೂಚಿಸಿತು. ನ್ಯಾಯಮೂರ್ತಿ ಅರುಣ್ ಮಿಶ್ರ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಬಂಡಾಯ ಶಾಸಕರ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರಿಗೆ ಸೂಚನೆ ನೀಡಿತು.  ರೋಹ್ಟಗಿ ಅವರು ಶಾಸಕರನ್ನು ವಿಧಾನಸಭೆಯಿಂದ ಅನರ್ಹಗೊಳಿಸಲಾಗಿದ್ದು ಅವರು ಅದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಆಗಸ್ಟ್ ೧೯ರಂದು ವಿಚಾರಣೆಗೆ ಪಟ್ಟಿಗೆ ಸೇರಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ಜುಲೈ ೧೯ರಂದು ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ವಿಶ್ವಾಸ ಮತ ಯಾಚನೆ ಮಾಡುವುದಕ್ಕೆ ಮುಂಚಿತವಾಗಿ ಒಟ್ಟು ೧೭ ಮಂದಿ ಬಂಡಾಯ ಶಾಸಕರನ್ನು ಸಭಾಧ್ಯಕ್ಷ ಕೆ.ಆರ್. ರಮೇಶ ಕುಮಾರ್ ಅವರು ಅನರ್ಹಗೊಳಿಸಿದ್ದರು. ಕುಮಾರ ಸ್ವಾಮಿಯವರು ಸದನ ಬಲಾಬಲ ಪರೀಕ್ಷೆಯಲ್ಲಿ ಸೋತಿದ್ದರು. ಇದರಿಂದಾಗಿ ಬಿ.ಎಸ್. ಯಡಿಯೋರಪ್ಪ ಅವರಿಗೆ ಬಿಜೆಪಿ ನೇತೃತ್ವದ ಸರ್ಕಾರ ರಚಿಸಲು ಮಾರ್ಗ ಸುಗಮವಾಗಿತ್ತು. ಜುಲೈ ೨೫ರಂದು ವಿಧಾನಸಭೆಯಿಂದ ಅನರ್ಹಗೊಂಡಿದ್ದ ಇಬ್ಬರು ಅತೃಪ್ತ ಕಾಂಗ್ರೆಸ್ ನಾಯಕರಾದ ರಮೇಶ ಎಲ್. ಜಾರಕಿಹೊಳಿ ಮತ್ತು ಮಹೇಶ ಕುಮಠಳ್ಳಿ ಹಾಗೂ ಪಕ್ಷೇತರ ಸದಸ್ಯ ಆರ್. ಶಂಕರ್ ಅವರು ಜುಲೈ ೨೯ರಂದು ಸುಪ್ರೀಂಕೋರ್ಟ್ ಕದ ತಟ್ಟಿದ್ದರು. ಇತರ ೧೪ ಮಂದಿ ಬಂಡಾಯ ಶಾಸಕರನ್ನು ವಿಧಾನಸಭಾಧ್ಯಕ್ಷ ರಮೇಶ ಕುಮಾರ್ ಅವರು ಜುಲೈ ೨೮ರಂದು ಅನರ್ಹಗೊಳಿಸಿದ್ದರು. ಜುಲೈ ೨೯ರಂದು ಕಾಂಗ್ರೆಸ್-ಜೆಡಿ(ಎಸ್) ಮೈತ್ರಿ ಸರ್ಕಾರದ ಪತನದ ಬಳಿಕ ರಮೇಶ ಕುಮಾರ್ ಅವರು ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅನರ್ಹಗೊಂಡಿರುವ ಜೆಡಿ(ಎಸ್) ಶಾಸಕರಾದ ಎಎಚ್ ವಿಶ್ವನಾಥ್, ಕೆ. ಗೋಪಾಲಯ್ಯ ಮತ್ತು ನಾರಾಯಣ ಗೌಡ ಅವರು ತಮ್ಮನ್ನು ಅನರ್ಹಗೊಳಿಸಿದ ಸಭಾಧ್ಯಕ್ಷರ ಜುಲೈ ೨೮ರ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಜಂಟಿ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಮೆಟ್ಟಿಲು ಏರಿರುವ ಕಾಂಗ್ರೆಸ್ ಶಾಸಕರು: ಪ್ರತಾಪ ಗೌಡ ಪಾಟೀಲ್, ಬಿಸಿ ಪಾಟೀಲ್, ಶಿವರಾಮ ಹೆಬ್ಬಾರ್, ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ್ ಮತ್ತು ಮುನಿರತ್ನ. ವಿಧಾನಸಭೆಯಿಂದ ಅನರ್ಹಗೊಂಡಿರುವ ಇತರ ಕಾಂಗ್ರೆಸ್ ನಾಯಕರು: ರೋಷನ್ ಬೇಗ್, ಆನಂದ ಸಿಂಗ್, ಎಂಟಿಬಿ ನಾಗರಾಜ್, ಸುಧಾಕರ್ ಮತ್ತು ಎಸ್. ಶ್ರೀಮಂತ ಪಾಟೀಲ್. ತಮ್ಮ ರಾಜೀನಾಮೆಗಳನ್ನು ತಿರಸ್ಕರಿಸಿ ಸಭಾಧ್ಯಕ್ಷರು ಮಾಡಿರುವ ಆದೇಶವನ್ನು ರದ್ದು ಪಡಿಸುವಂತೆ ಅತೃಪ್ತ ಶಾಸಕರು ತಮ್ಮ ಅರ್ಜಿಯಲ್ಲಿ ಕೋರಿದ್ದರು.  ಬಂಡಾಯ ಶಾಸಕರು ತಮ್ಮ ಅರ್ಜಿಯಲ್ಲಿ ತಮ್ಮ ಅನರ್ಹತೆಗೆ ಕಾರಣವಾದ ಘಟನಾವಳಿಗಳನ್ನು ವಿವರಿಸಿ, ಸಭಾಧ್ಯಕ್ಷರ ಕಲಾಪ ದಾಖಲೆಗಳನ್ನು ಮುಖ್ಯವಾಗಿ  ತಮ್ಮ ವಿರುದ್ಧದ ರಾಜೀನಾಮೆ ಮತ್ತು ಅನರ್ಹತೆ ಕ್ರಮಗಳ ದಾಖಲೆಗಳನ್ನು ತರಿಸಲು ನಿರ್ದೇಶನ ನೀಡುವಂತೆ ಕೋರಿದ್ದರು. ರಮೇಶ ಕುಮಾರ್ ಅವರು ತಾವು ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಮುನ್ನ  ಸಂವಿಧಾನದ ೧೦ನೇ ಶೆಡ್ಯೂಲಿನ ಅಡಿಯಲ್ಲಿ ತಮಗಿರುವ ಅಧಿಕಾರ ಚಲಾಯಿಸಿ ಕೈಗೊಂಡಿರುವ ನಿರ್ಧಾರವು ಸಂಪೂರ್ಣವಾಗಿಅಕ್ರಮ, ನಿರಂಕುಶ ಮತ್ತು ದುರುದ್ದೇಶಪೂರಿತವಾದದ್ದುಎಂದು ಬಂಡಾಯ ಶಾಸಕರು ಆಪಾದಿಸಿದ್ದರು. ತಾವು ನೀಡಿದ್ದ ರಾಜೀನಾಮೆಗಳನ್ನುಸ್ವ ಇಚ್ಛೆಯವು ಅಲ್ಲ ಮತ್ತು ನೈಜವೂ ಅಲ್ಲ್ಲಎಂಬುದಾಗಿ ಹೇಳಿ ತಿರಸ್ಕರಿಸಿದ ಸಭಾಧ್ಯಕ್ಷರ ನಿರ್ಧಾರವನ್ನೂ ಬಂಡಾಯ ಶಾಸಕರು ಪ್ರಶ್ನಿಸಿದ್ದರು.  ತಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿ ತಮ್ಮ ಪಕ್ಷದಿಂದ ಬಂದ ಪತ್ರವನ್ನು ಅನುಸರಿಸಿ ಸಭಾಧ್ಯಕ್ಷರು ಅವಸರ ಅವಸರವಾಗಿ ಕ್ರಮ ಕೈಗೊಂಡಿದ್ದಾರೆ.. ಅವರ ಕ್ರಮವು ಅರ್ಜಿದಾರರಿಗೆ ಸಂವಿಧಾನದ ೧೯ ಮತ್ತು ೨೧ನೇ ವಿಧಿಗಳ ಅಡಿಯಲ್ಲಿ ಖಾತರಿ ನೀಡಲಾಗಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ  ಎಂದು ಶಾಸಕರು ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.

2019: ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಭಾರತದ ನಿರ್ಣಯಕ್ಕೆ ಸಂಬಂಧಿಸಿದಂತೆಮೂರ್ಖರ ಸ್ವರ್ಗದಲ್ಲಿ ತೇಲಾಡಬೇಡಿ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮತ್ತು ಮುಸ್ಲಿಮ್ ಜಗತ್ತಿನಲ್ಲಿ ಪಾಕಿಸ್ತಾನದ ನಿಲುವಿಗೆ ಬೆಂಬಲಗಳಿಕೆ ಸುಲಭವಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ತಮ್ಮ ರಾಷ್ಟ್ರದ ಜನರಿಗೆ ಹೇಳಿದರು. ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫ್ಫರಾಬಾದಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಖುರೇಶಿವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯರಿಂದ ಬೆಂಬಲ ಪಡೆಯಲು ಹೊಸ ಹೋರಾಟನಡೆಸುವಂತೆ ಪಾಕಿಸ್ತಾನಕ್ಕೆ ಸೂಚಿಸಿದರು.  ನೀವು ಮೂರ್ಖರ ಸ್ವರ್ಗದಲ್ಲಿ ತೇಲಾಡಬಾರದು. ಅಲ್ಲಿ (ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ) ಯಾರೂ ಹಾರ ಹಿಡಿದುಕೊಂಡು ನಿಂತಿರುವುದಿಲ್ಲ.. ನಿಮಗಾಗಿ ಅಲ್ಲಿ ಯಾರೂ ಕಾಯುತ್ತಿರುವುದಿಲ್ಲಎಂದು ಖುರೇಶಿ ನುಡಿದರು.  ಭಾರತವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬೆನ್ನಲ್ಲೇ ಪಾಕಿಸ್ತಾನವು ಭಾರತದ ನಿರ್ಧಾರದ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನು ಸಂಪರ್ಕಿಸುವುದಾಗಿ ಪ್ರಕಟಿಸಿತ್ತು.  ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಿದ ತನ್ನ ಕ್ರಮವು ಆಂತರಿಕ ವಿಷಯ ಎಂಬುದಾಗಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಖಂಡತುಂಡವಾಗಿ ಹೇಳಿರುವ ಭಾರತವಾಸ್ತವವನ್ನು ಅಂಗೀಕರಿಸುವಂತೆಪಾಕಿಸ್ತಾನಕ್ಕೆ ಸಲಹೆ ಮಾಡಿತ್ತು.   ಉಮ್ಮಾಹ್ (ಇಸ್ಲಾಮಿಕ್ ಸಮುದಾಯ) ರಕ್ಷಕರು ತಮ್ಮ ಆರ್ಥಿಕ ಹಿತಾಸಕ್ತಿಗಳ ಕಾರಣಕ್ಕಾಗಿ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನವನ್ನು ಬೆಂಬಲಿಸದಿರಬಹುದುಎಂದು ಖುರೇಶಿ ಅವರು ಯಾವುದೇ ಮುಸ್ಲಿಮ್ ರಾಷ್ಟ್ರವನ್ನೂ ಹೆಸರಿಸದೆಯೇ ಹೇಳಿದರು.   ವಿಶ್ವದ ವಿವಿಧ ಜನರಿಗೆ ತಮ್ಮದೇ ಆದ ಹಿತಾಸಕ್ತಿಗಳಿವೆ. ಭಾರತವು ಬಿಲಿಯನ್ (ಶತಕೋಟಿ) ಜನರಿಗೂ ಹೆಚ್ಚಿನ ಮಾರುಕಟ್ಟೆಯಾಗಿದೆ. ಬಹಳಷ್ಟು ಮಂದಿ ಅಲ್ಲಿ (ಭಾರತದಲ್ಲಿ) ಹಣ ಹೂಡಿಕೆ ಮಾಡಿದ್ದಾರೆ. ನಾವು ಆಗಾಗ ಉಮ್ಮಾಹ್ ಮತ್ತು ಇಸ್ಲಾಮ್ ಬಗ್ಗೆ ಮಾತನಾಡುತ್ತೇವೆ. ಆದರೆ ಉಮ್ಮಾಹ್ ರಕ್ಷಕರು ಕೂಡಾ ಅಲ್ಲಿ (ಭಾರತ) ಹೂಡಿಕೆ ಮಾಡಿದ್ದಾರೆ. ಅವರಿಗೆ ಅವರ ಸ್ವಂತ ಹಿತಾಸಕ್ತಿಗಳಿವೆಎಂದು ಪಾಕ್ ವಿದೇಶಾಂಗ ಸಚಿವ ನುಡಿದರು.  ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಭಾರತವನ್ನು ರಶ್ಯಾವು ಬೆಂಬಲಿಸಿದ ಎರಡು ದಿನಗಳ ಬಳಿಕ ಖುರೇಶಿ ಹೇಳಿಕೆ ಬಂದಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯನಾಗಿರುವ ರಶ್ಯಾ ಭಾರತದ ಪರವಾಗಿ ಹೇಳಿಕೆ ನೀಡಿರುವ ಮೊದಲ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯನಾಗಿದ್ದು ಕಾಶ್ಮೀರದ ಸ್ಥಾನಮಾನ ಬದಲಾವಣೆಯು ಭಾರತೀಯ ಸಂವಿಧಾನದ ಚೌಕಟ್ಟಿನ ಒಳಗೇ ಇದೆ ಎಂದು ಹೇಳಿತ್ತು.   ಭಾರತ ಗಣರಾಜ್ಯದ ಸಂವಿಧಾನದ ಚೌಕಟ್ಟಿನ ವ್ಯಾಪ್ತಿಯಲ್ಲಿಯೇ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸ್ಥಾನಮಾನವನ್ನು ಬದಲಾಯಿಸಲಾಗಿದ್ದು, ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿದೆ ಎಂಬ ವಾಸ್ತವಾಂಶಕ್ಕೆ ಅನುಗುಣವಾಗಿ ನಾವು ಮುಂದುವರೆಯುತ್ತೇವೆಎಂದು ರಶ್ಯಾ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಪ್ರಶ್ನೆಗಳಿಗೆ ಉತ್ತರವಾಗಿ ತಿಳಿಸಿತ್ತು. ಅಮೆರಿಕ ಕೂಡಾ ವಿಷಯಕ್ಕೆ ಸಂಬಂಧಿಸಿದಂತೆ ತಟಸ್ಥ ಧೋರಣೆಯನ್ನು ತಾಳಿದೆ. ಕಾಶ್ಮೀರಕ್ಕೆ ಸಂಬಂಧಿಸಿದಂತೆ ತನ್ನ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ ಅಮೆರಿಕ, ಸಂಯಮ ವಹಿಸುವಂತೆ ಮತ್ತು ನೇರ ಮಾತುಕತೆ ಮೂಲಕ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಳ್ಳುವಂತೆ ಭಾರತ ಮತ್ತು ಪಾಕಿಸ್ತಾನಕ್ಕೆ ಕರೆ ನೀಡಿತ್ತು. ಪಾಕಿಸ್ತಾನದ ಸರ್ವಋತು ಮಿತ್ರರಾಷ್ಟವಾಗಿರುವ ಚೀನಾವು ಲಡಾಖ್ನ್ನು ಭಾರತದ ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಿದ್ದನ್ನು ಆಕ್ಷೇಪಿಸಿತ್ತು.  ಏನಿದ್ದರೂ ತಾನು ಭಾರತ ಮತ್ತು ಪಾಕಿಸ್ತಾನವನ್ನು ಮೈತ್ರಿಯುತ ನೆರೆಹೊರೆಯವರು ಎಂಬುದಾಗಿ ಪರಿಗಣಿಸಿರುವುದಾಗಿ ಖುರೇಶಿ ಅವರಿಗೆ ಅದು ತಿಳಿಸಿತ್ತು. ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆ ನಿರ್ಣಯ ಮತ್ತು ಶಿಮ್ಲಾ ಒಪ್ಪಂದಕ್ಕೆ ಅನುಗುಣವಾಗಿ ಇತ್ಯರ್ಥ ಪಡಿಸಿಕೊಳ್ಳಬೇಕೆಂದು ತಾನು ಬಯಸುವುದಾಗಿ ಚೀನಾ ಹೇಳಿತ್ತು.  ಭಾರತವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ನಿರ್ಣಯ ಕೈಗೊಂಡದ್ದನ್ನು ಅನುಸರಿಸಿ ತನ್ನ ನಿಲುವಿಗೆ ಚೀನಾದ ಬೆಂಬಲ ಪಡೆಯುವ ಸಲುವಾಗಿ ಖುರೇಶಿಯವರು  ಬೀಜಿಂಗಿಗೆ ದೌಡಾಯಿಸಿದ್ದರು.


No comments:

Post a Comment