ಪಾಕ್ ಸಚಿವನಿಗೆ ಪಂಜಾಬ್ ಸಿಎಂ ಗುದ್ದು!
ನವದೆಹಲಿ: ಭಾರತೀಯ ಸೇನೆಯ ಪಂಜಾಬೀ ಯೋಧರು ಕಾಶ್ಮಿರದಲ್ಲಿ ಕಾರ್ಯನಿರ್ವಹಿಸಲು ನಿರಾಕರಿಸಬೇಕು ಎಂಬುದಾಗಿ ಪಾಕಿಸ್ತಾನೀ ಸಚಿವ ಫವಾದ್ ಚೌಧರಿ ನೀಡಿದ್ದ ಹೇಳಿಕೆ ಇದೀಗ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದ್ದು, ಪಾಕ್ ಸಚಿವನ
ಹೇಳಿಕೆಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೂಡಾ ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.
‘ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಪಂಜಾಬಿ ಯೋಧರಲ್ಲಿ ನಾನು ಮನವಿ ಮಾಡಿಕೊಳ್ಳುವುದು ಏನೆಂದರೆ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸಲು ನಿರಾಕರಿಸಬೇಕು’ ಎಂದು ಫವಾದ್ ಚೌಧರಿ ಟ್ವೀಟ್ ಮಾಡಿದ್ದರು.
ಚೌಧರಿ ಟ್ವೀಟಿಗೆ ಪ್ರತಿಕ್ರಿಯಿಸಿದ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀದರ್
ಸಿಂಗ್ ಅವರು , ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿದರೆ ಜಾಗ್ರತೆ ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.
ಕ್ಯಾಪ್ಟನ್ ಅಮರೀಂದರ್ ಸಿಂಗ್
ಅವರು ಸೇನೆಯಲ್ಲಿ ಸೇವೆ ಸಲ್ಲಿಸಿರುವ ಯೋಧರಾಗಿದ್ದು ಇದೀಗ ಪಂಜಾಬಿನ
ಮುಖ್ಯಮಂತ್ರಿಯಾಗಿದ್ದಾರೆ.
ಪವಾದ್ ಚೌಧರಿ ಮನವಿಯು ಭಾರತೀಯ ಸೇನೆಯ ಯಾವುದೇ ಯೋಧರ ಮೇಲೆ ಪರಿಣಾಮವನ್ನೂ ಬೀರುವುದಿಲ್ಲ. ನಮ್ಮ ಸೇನೆ ಶಿಸ್ತು ಮತ್ತು ದೇಶಪ್ರೇಮಕ್ಕೆ ಬದ್ಧವಾಗಿದೆ ಎಂದು ಪಾಕ್ ಸಚಿವನಿಗೆ ಕ್ಯಾಪ್ಟನ್ ಸಿಂಗ್ ಎದಿರೇಟು ಕೊಟ್ಟರು.
No comments:
Post a Comment