ನಾನು ಮೆಚ್ಚಿದ ವಾಟ್ಸಪ್

Thursday, August 8, 2019

ಇಂದಿನ ಇತಿಹಾಸ History Today ಆಗಸ್ಟ್ 08

2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸುವ ಚಾರಿತ್ರಿಕ ನಿರ್ಧಾರವನ್ನು ದೇಶವು ಕೈಗೊಳ್ಳುವುದರೊಂದಿಗೆ ರಾಜ್ಯದಲ್ಲಿಹೊಸ ಯುಗಆರಂಭವಾಗಲಿದ್ದು, ಜನರಿಂದ ಜನರಿಗಾಗಿ ಜನರಾಡಳಿತ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದರು. ೩೭೦ನೇ ವಿಧಿ ರದ್ದು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಐತಿಹಾಸಿಕ ಕ್ರಮಕ್ಕೆ ಸಂಸತ್ತು ಅನುಮೋದನೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಬಹಿರಂಗವಾಗಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿಜಮ್ಮು ಮತ್ತು ಕಾಶ್ಮೀರದಲ್ಲಿ ೩೭೦ನೇ ವಿಧಿಯ ರದ್ಧತಿ ಮತ್ತು ನವ ಯುಗದ ಆರಂಭ ಸರ್ದಾರ್ ವಲ್ಲಭ ಭಾಯಿ ಪಟೇಲ್ ಮತ್ತು ಬಿಆರ್ ಅಂಬೇಡ್ಕರ್ ಅವರ ಕನಸಾಗಿತ್ತು, ಅದು ಈಗ ಈಡೇರಿದೆ ಎಂದು ಹೇಳಿದರು. ಸಂವಿಧಾನದ ೩೭೦ನೇ ವಿಧಿ ಮತ್ತು ೩೫ ವಿಧಿಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಲು ಪಾಕಿಸ್ತಾನವು ಬಳಸಿಕೊಂಡಿತ್ತು. ರಾಜ್ಯದ ಅಭಿವೃದ್ಧಿಗೆ ವಿಧಿಗಳೇ ಪ್ರಮುಖ ಅಡ್ಡಿಗಳಾಗಿದ್ದವು. ರಾಜ್ಯದ ಭಯೋತ್ಪಾದನೆ ಹಾವಳಿಗೆ ವಿಧಿಗಳು ಅನುಕೂಲಕರವಾಗಿದ್ದವು ಎಂದು ಪ್ರಧಾನಿ ವಿವರಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರಾಡಳಿತವನ್ನು ತಂದಿರುವ ಯೋಜನೆಯು ತಾತ್ಕಾಲಿಕವಾದದ್ದು ಎಂದು ಸ್ಪಷ್ಟ ಪಡಿಸಿದ ಮೋದಿ ಜಮ್ಮು ಮತ್ತು ಕಾಶ್ಮೀರ ಇನ್ನು ತಮ್ಮ ಆಯ್ಕೆಯ ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರನ್ನು ಹೊಂದಲಿದೆ. ಜನರೇ ತಮ್ಮ ಪ್ರತಿನಿಧಿಗಳ ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದರು. ಸಂವಿಧಾನದ ೩೭೦ನೇ ವಿಧಿಯ ಪರಿಣಾಮವಾಗಿ ಜಮ್ಮು ಮತ್ತು ಕಾಶ್ಮೀರದ ಜನರು ಸವಲತ್ತು ವಂಚಿತರಾಗಿದ್ದರು. ಆರೋಗ್ಯ ಯೋಜನೆಗಳೂ, ಶೈಕ್ಷಣಿಕ ಮತ್ತು ಆರ್ಥಿಕ ಯೋಜನೆಗಳು ಜಮ್ಮು ಮತ್ತು ಕಾಶ್ಮೀರದ ಜನತೆಗೆ ತಲುಪುತ್ತಿರಲಿಲ್ಲ. ಎಲ್ಲ ನೌಕರರೂ ಈಗ ಉದ್ಯೋಗದ ಅನುಕೂಲಗಳನ್ನು ಪಡೆಯಲಿದ್ದಾರೆ ಎಂದು ಪ್ರಧಾನಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಐಐಟಿಗಳು ಮತ್ತು ಐಐಎಂಗಳು ಬರಲಿವೆ. ರಾಜ್ಯದಲ್ಲಿ ಸಂಪರ್ಕವನ್ನು ಸುಧಾರಿಸುವಂತಹ ಯೋಜನೆಗಳು ಬರಲಿವೆ ಎಂದು ಅವರು ನುಡಿದರು.  ಕೇಂದ್ರವು ಜಮ್ಮು ಮತ್ತು ಕಾಶ್ಮೀರದ ಆರ್ಥಿಕ ಕೊರತೆಯನ್ನು ನಿಭಾಯಿಸಲಿದೆ ಮತ್ತು ರಾಜ್ಯದ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಮೋದಿ ಭರವಸೆ ನೀಡಿದರು. ಇದುವರೆಗೆ ಕೇವಲ ಕಾಗದದಲ್ಲಿ ಉಳಿದಿದ್ದ ಯೋಜನೆಗಳು ಈಗ ಅನುಷ್ಠಾನಗೊಳ್ಳಲಿವೆ ಎಂದೂ ಪ್ರಧಾನಿ ಭರವಸೆ ಕೊಟ್ಟರು.  ಮಹಿಳೆಯರ ಭವಿಷ್ಯ ಭದ್ರ: ಸಂವಿಧಾನದ ೩೭೦ನೇ ವಿಧಿಯ ಪರಿಣಾಮವಾಗಿ ದೇಶದಲ್ಲಿ ಜಾರಿಗೊಳಿಸಿದ ಯಾವುದೇ ಕಾನೂನುಗಳೂ ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ಲ. ದೇಶದ ಇತರ ಕಡೆಗಳಲ್ಲಿ ಇದ್ದಂತಹ ಹಕ್ಕುಗಳು ರಾಜ್ಯದ ಮಹಿಳೆಯರಿಗೆ ಇರಲಿಲ್ಲ. ೩೭೦ನೇ ವಿಧಿ ರದ್ದಾದ ಕಾರಣ ಈಗ ಮಹಿಳೆಯ ಭವಿಷ್ಯ ಸುರಕ್ಷಿತವಾಗಿದೆ ಎಂದು ಪ್ರಧಾನಿ ಹೇಳಿದರು. ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವು ಜನರನ್ನು ಹಿಂಸೆಗೆ ಪ್ರಚೋದಿಸುತ್ತಿತ್ತು. ಪರಿಣಾಮವಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿಯೂ ಆಗಲಿಲ್ಲ. ೪೨,೦೦೦ ಮುಗ್ದ ಜನರು ಹತರಾದರು ಎಂದು ಪ್ರಧಾನಿ ವಿವರಿಸಿದರು.  ದಶಕಗಳ ಕಾಲ ರಾಜ್ಯದ ಲಕ್ಷಾಂತರ ಜನರಿಗೆ ಲೋಕಸಭಾ ಚುನಾವಣೆಯಲ್ಲಿ ಮತಚಲಾಯಿಸುವ ಇಲ್ಲವೇ ವಿಧಾನಸಭೆ/ ಸ್ಥಳೀಯ ಸಂಸ್ಥೆಗಳಲ್ಲಿ ಮತದಾನ ಮಾಡು ಹಕ್ಕು ಇರಲಿಲ್ಲ  ಎಂಬುದನ್ನು ಕೇಳಿದರೆ ನಿಮಗೆ ಆಘಾತವಾದೀತು. ಇವರೆಲ್ಲಾ ೧೯೪೭ರಲ್ಲಿ ಭಾರತದ ವಿಭಜನೆಯ ಬಳಿಕ ಭಾರತಕ್ಕೆ ಬಂದ ಜನರಾಗಿದ್ದರು. ಅವರಿಗೆ ಆಗುತ್ತಿದ್ದ ಅನ್ಯಾಯ ಮುಂದುವರೆಯಬೇಕಾಗಿತ್ತೆ ಎಂದು ಪ್ರಧಾನಿ ಪ್ರಶ್ನಿಸಿದರು.  ಪರಿಸ್ಥಿತಿ ಶೀಘ್ರದಲ್ಲೇ ಸಹಜಗೊಳ್ಳಲಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಈದ್ ಸಂಭ್ರಮಾಚರಣೆಯಲ್ಲಿ ಯಾವುದೇ ತೊಂದರೆಗಳಾಗದಂತೆ ನೋಡಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ. ದಶಕಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಇದ್ದ ವಂಶಾಡಳಿತಗಳು ಯುವಕರನ್ನು ರಾಜಕೀಯ ನಾಯಕತ್ವ ವಹಿಸದಂತೆ ತಡೆದಿದ್ದವು. ಈಗ ಜಮ್ಮು ಮತ್ತು ಕಾಶ್ಮೀರದ ಯುವಕರು ಅಭಿವೃದ್ಧಿ ಕಾರ್ಯದಲ್ಲಿ ನಾಯಕತ್ವ ವಹಿಸಿ ಪ್ರದೇಶವನ್ನು ಹೊಸ ಎತ್ತರಕ್ಕೆ ಒಯ್ಯಬಲ್ಲರು ಎಂದು ಮೋದಿ ನುಡಿದರು. ಈಗ ಲಡಾಖ್ನಲ್ಲಿ ಕೂಡಾ ಯಾವುದೇ ತಾರತಮ್ಯ ರಹಿತವಾಗಿ ಅಭಿವೃದ್ಧಿ ಕೆಲಸಗಳು ಆಗಲಿವೆ. ಲಡಾಖ್ ಸೌರ ಶಕ್ತಿಯ ಕೇಂದ್ರವಾಗಿದ್ದು, ಅದು ಅದ್ಭುತವಾದ ಸೌರಶಕ್ತಿ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಿ ಹೇಳಿದರು.  ಶೀಘ್ರದಲ್ಲೇ ಬಾಲಿವುಡ್ ಕಾಶ್ಮೀರ ಕಣಿವೆಗೆ ಛಾಯಾಗ್ರಹಣಕ್ಕೆ ಆಗಮಿಸಲಿದೆ. ಚಿತ್ರ ನಿರ್ಮಾಪಕರಿಗೆ ಕಾಶ್ಮೀರವು ಅತ್ಯಂತ ಪ್ರಿಯವಾದ ತಾಣ. ಭವಿಷ್ಯದಲ್ಲಿ ಇಲ್ಲಿ ಅಂತಾರಾಷ್ಟ್ರೀಯ ಚಿತ್ರಗಳ ಚಿತ್ರೀಕರಣವೂ ಆಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ನುಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ತಂತ್ರಜ್ಞಾನವನ್ನು ವಿಸ್ತರಿಸುವಂತೆ ಪ್ರಧಾನಿಯವರು ಖಾಸಗಿ ರಂಗವನ್ನು ಆಗ್ರಹಿಸಿದರು. ತಂತ್ರಜ್ಞಾನ ವಿಸ್ತರಣೆಗೊಂಡಾಗ ಯುವಕರು ಸಮೃದ್ಧರಾಗುತ್ತಾರೆ ಎಂದು ಪ್ರಧಾನಿ ಹೇಳಿದರು. ಜಮ್ಮು  ಮತ್ತು ಕಾಶ್ಮೀರ ಮತ್ತು ಲಡಾಖ್ ವಿಶ್ವದ ಪ್ರವಾಸೀ ಆಡುಂಬೊಲವಾಗುವ ಸಾಮರ್ಥ್ಯವನ್ನು ಹೊಂದಿವೆ ಎಂದು ಪ್ರಧಾನಿ ನುಡಿದರು. ದೇಶವು ದಲಿತರ ರಕ್ಷಣೆಗೆ ಕಾನೂನುಗಳನ್ನು ಹೊಂದಿದೆ. ಆದರೆ ಜಮ್ಮು ಮತ್ತು ಕಾಶ್ಮೀರಕ್ಕೆ ಕಾನೂನುಗಳು ಅನ್ವಯವೇಆಗುತ್ತಿರಲಿಲ್ಲ ಎಂದು ಮೋದಿ ಹೇಳಿದರು. ಪೌರ ಕಾರ್ಮಿಕರು ವಿವಿಧ ರಾಜ್ಯಗಳಲ್ಲಿ ಸಫಾಯಿ ಕರ್ಮಚಾರಿ ಕಾಯ್ದೆಯ ವ್ಯಾಪ್ತಿಗೆ ಬಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪೌರ ಕಾರ್ಮಿಕರು ಕಾಯ್ದೆಯ ಸವಲತ್ತಿನಿಂದ ವಂಚಿತರಾಗಿದ್ದಾರೆ. ದಲಿತರ ದೌರ್ಜನ್ಯ ತಡೆಗೆ ಹಲವಾರು ರಾಜ್ಯಗಳಲ್ಲ ಇರುವ ಪ್ರಬಲ ಕಾಯ್ದೆಗಳು ಕೂಡಾ ರಾಜ್ಯಕ್ಕೆ ಅನ್ವಯವಾಗಿರಲಿಲ್ಲ ಎಂದು ಪ್ರಧಾನಿ ಹೇಳಿದರು. ಜಮ್ಮು ಮತ್ತು ಕಾಶ್ಮೀರವು ಪ್ರತ್ಯೇಕತಾವಾದಿಗಳನ್ನು ಪರಾಭವಗೊಳಿಸಲಿದ್ದಾರೆ ಮತ್ತು ಅಭಿವೃದ್ಧಿಯನ್ನು ಸ್ವಾಗತಿಸುತ್ತಾರೆ ಎಂಬ ಪೂರ್ಣ ವಿಶ್ವಾಸ ನನಗಿದೆ. ಶೀಘ್ರದಲ್ಲೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಪಂಚಾಯತ್ ನಾಯಕರು ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀದ ಜನರು ಉತ್ತಮ ಆಡಳಿತ ಮತ್ತು ಪಾರದರ್ಶಕತೆಯನ್ನು ಬಯಸುತ್ತಾರೆ ಎಂಬ ವಿಶ್ವಾಸವೂ ನನಗಿದೆ ಎಂದು ಪ್ರಧಾನಿ ನುಡಿದರು.

2019: ನವದೆಹಲಿ: ಮಾಜಿ ರಾಷ್ಟ್ರಪತಿ, ಹಿರಿಯ ಕಾಂಗ್ರೆಸ್ ನಾಯಕ ಪ್ರಣಬ್ ಮುಖರ್ಜಿ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಈದಿನ  ಸಂಜೆಭಾರತ ರತ್ನಪ್ರಶಸ್ತಿ ಪ್ರದಾನ ಮಾಡಿದರು.  ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದಭಾರತ ರತ್ನವನ್ನು ಪ್ರಣಬ್ ಮುಖರ್ಜಿ, ಖ್ಯಾತ ಗಾಯಕ ಭೂಪೇನ್ ಹಜಾರಿಕಾ ಮತ್ತು ಭಾರತೀಯ ಜನಸಂಘದ ಸ್ಥಾಪಕ -ಸಾಮಾಜಿಕ ಕಾರ್ಯಕರ್ತ ನಾನಾಜಿ ದೇಶಮುಖ್ ಅವರಿಗೆ ಜನವರಿ ತಿಂಗಳಲ್ಲಿ ಪ್ರಕಟಿಸಲಾಗಿತ್ತು. ೮೩ರ ಹರೆಯದ ಪ್ರಣಬ್ ಮುಖರ್ಜಿ ಅವರು ೨೦೧೨ರ ಜುಲೈಯಿಂದ ಐದು ವರ್ಷಗಳ ಕಾಲ ೧೩ನೇ ರಾಷ್ಟ್ರಪತಿಯಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದರು ಮತ್ತು ಎಲ್ಲರಿಂದ ದಕ್ಷ ಆಡಳಿತಗಾರ ಎಂಬ ಮೆಚ್ಚುಗೆ ಸಂಪಾದಿಸಿದ್ದರು. ಅವರ ಮಾತುಗಳನ್ನು ಎಲ್ಲರೂ ಅತ್ಯಂತ ಆಸಕ್ತಿಯಿಂದ ಆಲಿಸುತ್ತಿದ್ದರು.  ರಾಷ್ಟ್ರಪತಿ ಭವನದಲ್ಲಿ ಮುಖರ್ಜಿಯವರು ಮನಮೊಹನ್ ಸಿಂಗ್ ಮತ್ತು ನರೇಂದ್ರ ಮೋದಿ ಇಬ್ಬರು ಪ್ರಧಾನ ಮಂತ್ರಿಗಳ ಜೊತೆಗೆ ಕೆಲಸ ಮಾಡಿದ್ದರು. ತಮ್ಮ ರಾಜಕೀಯ ಜೀವನವನ್ನು ಪ್ರಬಲವಾಗಿ ವಿರೋಧಿಸಿದ್ದ ರಾಜಕೀಯ ಪಕ್ಷಕ್ಕೆ ಸೇರಿದ ನರೇಂದ್ರ ಮೋದಿ ಅವರ ಜೊತೆಗೆ ಮುಖರ್ಜಿ ಅತ್ಯಂತ ಸಹಜ ಬಾಂಧವ್ಯ ಇಟ್ಟುಕೊಂಡಿದ್ದರು.  ಅಧಿಕಾರಾವಧಿ ಮುಗಿದ ಬಳಿಕ ರಾಷ್ಟ್ರಪತಿ ಭವನದಿಂದ ಹೊರಬಂದಿದ್ದ ಮಾಜಿ ರಾಷ್ಟ್ರಪತಿ ಮುಖರ್ಜಿಯವರು   ಸಂಜೆ ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದಭಾರತ ರತ್ನಪ್ರಶಸ್ತಿ ಪಡೆಯುವ ಸಲುವಾಗಿ ರಾಷ್ಟ್ರಪತಿ ಭವನಕ್ಕೆ ಹಿಂದಿರುಗಿದ್ದರು. ಪ್ರಶಸ್ತಿ ಸ್ವೀಕಾರದ ಬಳಿಕ ಮುಖರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಅಭಿನಂದಿಸಿದರು. ಕಳೆದ ವರ್ಷ ೨೦೧೫ರಲ್ಲಿ ಶಿಕ್ಷಣ ತಜ್ಞ ರಾಜಕಾರಣಿ ಮದನಮೋಹನ ಮಾಳವೀಯ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ಮ ಪ್ರದಾನ ಮಾಡಲಾಗಿತ್ತು.  ೧೯೫೪ರಲ್ಲಿ ಪ್ರಶಸ್ತಿ ಸ್ಥಾಪನೆಯಾದಂದಿನಿಂದ ಈವರೆಗೆ ಒಟ್ಟು ೪೮ ಮಂದಿ ಗಣ್ಯರಿಗೆಭಾರತ ರತ್ನನೀಡಲಾಗಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿ, ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಮತ್ತು ವಿಜ್ಞಾನಿ ಸಿವಿ ರಾಮನ್ ಅವರು ಮೊತ್ತ ಮೊದಲಭಾರತ ರತ್ನಪ್ರಶಸ್ತಿ ಪುರಸ್ಕೃತರಾಗಿದ್ದರು.  ಪ್ರಣಬ್ ಮುಖರ್ಜಿ ಅವರನ್ನುಭಾರತ ರತ್ನಪ್ರಶಸ್ತಿಗೆ ಸರ್ಕಾರ ಆಯ್ಕೆ ಮಾಡಿದ್ದು ವಿರೋಧ ಪಕ್ಷ ಸೇರಿದಂತೆ ಹಲವರನ್ನು ಅಚ್ಚರಿಯಲ್ಲಿ ಕೆಡವಿತ್ತು. ಕಾಂಗ್ರೆಸ್ ಪಕ್ಷವು ಗಾಂಧಿ ಕುಟುಂಬದ ಹೊರತಾಗಿ ಪಕ್ಷದಲ್ಲಿನ ಇತರ ಸಾಧಕರನ್ನು ಗುರುತಿಸುವುದಿಲ್ಲ ಎಂಬ ಅಂಶವನ್ನು ಒತ್ತಿ ಹೇಳಲು ಪ್ರಧಾನಿ ಮೋದಿ ಮತ್ತು ಆಡಳಿತಾರೂಢ ಮೈತ್ರಿಕೂಟದ ಇತರರು ನಿರ್ಧಾರವನ್ನು ಉಲ್ಲೇಖಿಸುತ್ತಿದೂ ಉಂಟು. ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮಾಡಿದ ಭಾಷಣಕ್ಕಾಗಿ ಧನ್ಯವಾದ ಹೇಳುವ ಸಂದರ್ಭದಲ್ಲಿ ಮೋದಿ ಅವರುಪ್ರಣಬ್ ಮುಖರ್ಜಿ ಅವರನ್ನುಭಾರತ ರತ್ನಪ್ರದಾನದ ಮೂಲಕ ಗೌರವಿಸಿದ್ದು ತಮ್ಮ ಸರ್ಕಾರ ಎಂಬುದಾಗಿ ಒತ್ತಿ ಹೇಳಿದ್ದರು.

2019: ನವದೆಹಲಿ:  ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಭಾರತ ವಿರೋಧಿ ಕ್ರಮಗಳನ್ನು ಮುಂದುವರೆಸುತ್ತಿರುವ ಪಾಕಿಸ್ತಾನವು ಭಾರತ- ಪಾಕಿಸ್ತಾನ ನಡುವಣ ಸಂಜೌತಾ ಎಕ್ಸ್ಪ್ರೆಸ್ ರೈಲುಸೇವೆಯನ್ನು ರದ್ದು ಪಡಿಸಿತು. ಪಾಕಿಸ್ತಾನದ ರೈಲ್ವೇ ಸಚಿವ ಶೇಖ್ ರಶೀದ್ ಅವರು ಸಂಜೌತಾ ಎಕ್ಸ್ಪ್ರೆಸ್ ಸೇವೆ ರದ್ದು ವಿಚಾರವನ್ನು ಇಲ್ಲಿ ಪ್ರಕಟಿಸಿದರು. ಏನಿದ್ದರೂ ಪಾಕಿಸ್ತಾನವು ಸಂಬಂಧ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ ಎಂದು ಭಾರತೀಯ ರೈಲ್ವೇ ಅಧಿಕಾರಿಗಳು  ಹೇಳಿದರು. ರೈಲುಗಾಡಿಯು ವಾಘಾ ಗಡಿಯಲ್ಲಿ ನಿಂತಿತು. ರೈಲಿನಲ್ಲಿ ಸಿಕ್ಕಿಹಾಕಿಕೊಂಡಿರುವ ಪ್ರಯಾಣಿಕರನ್ನು ಭಾರತಕ್ಕೆ ಕರೆತರಲು ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಭಾರತೀಯ ರೈಲ್ವೇ ಹೇಳಿತು. ಸಂಜೌತಾ ಎಕ್ಸ್ಪ್ರೆಸ್ ರೈಲುಗಾಡಿಯು ಓಡುತ್ತದೆ. ರೈಲಗಾಡಿಯನ್ನು ವಾಘಾದಿಂದ ತರಲಾಗುವುದು. ಅದು ಅಟ್ಟಾರಿಗೆ ಬರಲಿದೆ ಎಂದು ಭಾರತೀಯ ರೈಲ್ವೇ ಸಚಿವಾಲಯದ ಅಧಿಕೃತ ಟ್ವೀಟ್ ತಿಳಿಸಿತು.  ‘ಸಂಜೌತಾ ಎಕ್ಸ್ಪ್ರೆಸ್ನ್ನು ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ. ಶೀಘ್ರದಲ್ಲಿ ಸೇವೆ ಆರಂಭವಾಗುವುದಿಲ್ಲಎಂದು ಪಾಕಿಸ್ತಾನಿ ಸಚಿವ ಶೇಖ್ ರಶೀದ್ ಅವರನ್ನು ಉಲ್ಲೇಖಿಸಿದ ವರದಿಗಳು ಹೇಳಿದವು. ‘ನಾನು ರೈಲ್ವೇ ಸಚಿವನಾಗಿರುವವರೆಗಂತೂ ಸಂಜೌತಾ ಎಕ್ಸ್ ಪ್ರೆಸ್ ಕಾರ್ಯಾಚರಿಸಲು ಸಾಧ್ಯವಿಲ್ಲಎಂದು ರಶೀದ್ ಅವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದನ್ನು ಸುದ್ದಿ ಸಂಸ್ಥೆ ಉಲ್ಲೇಖಿಸಿತು.. ಸಂಜೌತಾ ಎಕ್ಸ್ಪ್ರೆಸ್ ವಾರದಲ್ಲಿ ಎರಡು ಬಾರಿ ಓಡುತ್ತದೆ.   ಪಾಕಿಸ್ತಾನಿ ಸಚಿವರ ಟ್ವೀಟ್ ಪ್ರಕಟಗೊಳ್ಳುವುದಕ್ಕೆ ಮುನ್ನ ಭಾರತೀಯ ರೈಲ್ವೇ ಮೂಲಗಳುಪಾಕಿಸ್ತಾನವು ಪ್ರಯಾಣಿಕರು ಮತು ಗಾರ್ಡ್ಗಳ ಭದ್ರತೆಗೆ ಸಂಬಂಧಿಸಿದಂತೆ ಸ್ವಲ್ಪ ಆತಂಕ ವ್ಯಕ್ತಪಡಿಸಿದೆಎಂದು ಹೇಳಿದವು. ಏನಿದ್ದರೂ ಭಾರತದ ಕಡೆಯಲ್ಲಿ ಪರಿಸ್ಥಿತಿ ಮಾಮೂಲಿಯಾಗಿದೆ . ರೈಲುಗಾಡಿಯನ್ನು ವಾಘಾದಿಂದ ಅಟ್ಟಾರಿಗೆ ತರಲು ನಾವು ನಮ್ಮ ಸಿಬ್ಬಂದಿ ಮತ್ತು ಎಂಜಿನನ್ನು ಕಳುಹಿಸುತ್ತಿದ್ದೇವೆ ಎಂದು ಭಾರತೀಯ ರೈಲ್ವೇ ಮೂಲಗಳು ಹೇಳಿದವು.  ಪಾಕಿಸ್ತಾನದ ಗಡಿಗೆ ಸಮೀಪದಲ್ಲಿರುವ ಅಟ್ಟಾರಿ ರೈಲ್ವೇ ನಿಲ್ದಾಣದ ಸ್ಟೇಷನ್ ಮಾಸ್ಟರ್ ಅರವಿಂದ ಕುಮಾರ ಗುಪ್ತ ಅವರುಸಂಜೌತಾ ಎಕ್ಸ್ಪ್ರೆಸ್ಸಿನ ಸಿಬ್ಬಂದಿ ಮತ್ತು ಗಾರ್ಡ್ಗಳು ಭಾರತೀಯ ಪ್ರದೇಶಕ್ಕೆ ರೈಲುಗಾಡಿಯನ್ನು ಒಯ್ಯಲು ನಿರಾಕರಿಸಿದರು ಎಂಬ ಸಂದೇಶ ನಮಗೆ ಪಾಕಿಸ್ತಾನ ರೈಲ್ವೇಯಿಂದ ಬಂದಿದೆಎಂದು ಹೇಳಿದರು.  ರೈಲುಗಾಡಿಯನ್ನು ವಾಘಾದಿಂದ ತರಲು ಅವರು ನಮಗೆ ಅವಕಾಶ ನೀಡಿದ್ದಾರೆ ಎಂದು ಗುಪ್ತ ನುಡಿದರು. ಉದ್ದೇಶಕ್ಕಾಗಿ ಅಮೃತಸರ ರೈಲ್ವೇ ನಿಲ್ದಾಣದಿಂದ ಒಂದು ಎಂಜಿನ್, ಚಾಲಕ ಮತ್ತು ಇತರ ಸಿಬ್ಬಂದಿಯನ್ನು ನಾವು ಕರೆಸುತ್ತಿದ್ದೇವೆ. ಸಿಬ್ಬಂದಿ ರೈಲುಗಾಡಿಯನ್ನು ಭಾರತಕ್ಕೆ ತರುವ ಸಲುವಾಗಿ ವಾಘಾಕ್ಕೆ ಹೋಗಲಿದ್ದಾರೆ ಎಂದು ಅವರು ಹೇಳಿದರು. ಮಾಹಿತಿಯ ಪ್ರಕಾರ  ಸಂಜೌತಾ ಎಕ್ಸ್ ಪ್ರೆಸ್ ಪಾಕಿಸ್ತಾನದ ವಾಘಾ ರೈಲ್ವೇ ನಿಲ್ದಾಣದಲ್ಲಿ ಬೆಳಗ್ಗೆ .೩೦ ಗಂಟೆಯಿಂದ ನಿಂತುಕೊಂಡಿತ್ತು. ರೈಲುಗಾಡಿಯಲ್ಲಿ ಸುಮಾರು ೧೧೦ ಪ್ರಯಾಣಿಕರಿದ್ದು, ಅವರೆಲ್ಲರೂ ವಾಘಾದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಮತ್ತು ಸುಮಾರು ೭೦ ಮಂದಿ ಪಾಕಿಸ್ತಾನಕ್ಕೆ ಮರುಪಯಣಕ್ಕಾಗಿ ಕಾಯುತ್ತಿದ್ದಾರೆ ಎಂದು ರೈಲ್ವೇ ಮೂಲ ಹೇಳಿತು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿ ರದ್ದು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ನಿರ್ಧಾರಕ್ಕೆ ಭಾರತದ ಸಂಸತ್ತು ಒಪ್ಪಿಗೆ ನೀಡಿದ ಬಳಿಕ ಪಾಕಿಸ್ತಾನ ಸಂಜೌತಾ ಎಕ್ಸ್ಪ್ರೆಸ್ ಸೇವೆ ರದ್ದು ಪಡಿಸಿತು. ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಕೈಗೊಂಡಿರುವ ಕ್ರಮವನ್ನು ಪ್ರಬಲವಾಗಿ ಟೀಕಿಸಿದ ಪಾಕಿಸ್ತಾನವು ತನ್ನ ಸಂಸತ್ತಿನ ವಿಶೇಷ ಅಧಿವೇಶನವನ್ನು ನಡೆಸಿದ ವಿಷಯವನ್ನು ಖಂಡಿಸಿತ್ತು  ಮತ್ತು ಬಳಿಕ ಭಾರತದ ರಾಯಭಾರಿಯನ್ನು ಉಚ್ಚಾಟಿಸಲು ಹಾಗೂ ದ್ವಿಪಕ್ಷೀಯ ವ್ಯಾಪಾರ ಸಂಬಂಧವನ್ನು ಅಮಾನತುಗೊಳಿಸಲು ನಿರ್ಧರಿಸಿತ್ತು.

2019: ನವದೆಹಲಿ:  ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿದ ವಿಭಜನೆ ಅವಳಿ ಕ್ರಮಗಳನ್ನುಸಾರಾ ಸಗಟು ಖಂಡಿಸುವುದನ್ನುತಾವು ಒಪ್ಪುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಕರಣ್ ಸಿಂಗ್ ಅವರು ಘೋಷಿಸಿದರು. ಕ್ರಮಗಳಲ್ಲಿ ಹಲವಾರು ಧನಾತ್ಮಕ ಅಂಶಗಳೂ ಇವೆ ಎಂದು ಕರಣ್ ಸಿಂಗ್ ಹೇಳಿದರು. ವಿಸ್ತೃತವಾದ ಹೇಳಿಕೆಯೊಂದನ್ನು ನೀಡಿದ ಹಿರಿಯ ಕಾಂಗ್ರೆಸ್ ನಾಯಕ ಸಂಸತ್ತಿನಲ್ಲಿ ಕೈಗೊಳ್ಳಲಾಗುವಅಸಾಮಾನ್ಯ ತ್ವರಿತ ನಿರ್ಧಾರಗಳುನಿಶ್ಚಿತವಾಗಿ ಹಲವಾರು ಹಂತಗಳಲ್ಲಿ ದೂರಗಾಮೀ ಪರಿಣಾಮಗಳನ್ನು ಹೊಂದಿರುತ್ತದೆಎಂದು ತಿಳಿಸಿದರು. ಜಮ್ಮು ಮತ್ತು ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆ ಮಾಡುವ ಒಪ್ಪಂದಕ್ಕೆ ಸಹಿಹಾಕಿದ್ದ ಮಹಾರಾಜ ಹರಿ ಸಿಂಗ್ ಅವರ ಪುತ್ರನಾಗಿರುವ ಕರಣ್ ಸಿಂಗ್ ಅವರು ಲಡಾಖ್ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಕ್ರಮವನ್ನು ಸ್ವಾಗತಿಸಿದರು. ತಾವು ಇನ್ನೂ  ಜಮ್ಮು ಮತ್ತು ಕಾಶ್ಮೀರದಸದರ್--ರಿಯಾಸತ್ನಲ್ಲಿ ಇದ್ದಾಗಲೇ ೧೯೬೫ರಷ್ಟು ಹಿಂದೆಯೇ ರಾಜ್ಯ ಪುನರ್ ವಿಂಗಡಣೆಗೆ ತಾವು ಸಲಹೆ ಮಾಡಿದ್ದುದಾಗಿ ಸಿಂಗ್ ಹೇಳಿದರು. ವಿಧಿ ೩೫ಎ ಯಲ್ಲಿನ ಲಿಂಗ ತಾರತಮ್ಯವನ್ನು ನಿವಾರಿಸಬೇಕಾದ ಅಗತ್ಯವಿತ್ತು. ಪಶ್ಚಿಮ ಪಾಕಿಸ್ತಾನ ಲಕ್ಷಾಂತರ ಮಂದಿ ನಿರಾಶ್ರಿತರಿಗೆ ಪೌರ ಹಕ್ಕು ನೀಡಿಕೆ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಸ್ವಾಗತಾರ್ಹಎಂದು ಕರಣ್ ಸಿಂಗ್ ಹೇಳಿದರು. ಮೊತ್ತ ಮೊದಲನೇ ಬಾರಿಗೆ ಗಡಿ ನಿರ್ಧಾರ ಮಾಡುತ್ತಿರುವುದು ಜಮ್ಮು ಮತ್ತು ಕಾಶ್ಮೀರ ಪ್ರದೇಶಗಳಲ್ಲಿ ರಾಜಕೀಯ ಅಧಿಕಾರದ ನ್ಯಾಯೋಚಿತ ವಿಭಜನೆಯ ಖಾತರಿ ನೀಡುವುದು ಎಂದು ಅವರು ನುಡಿದರು.  ಶಾಸನಬದ್ಧ ರಾಜಕೀಯ ಪಕ್ಷಗಳ ಹಿರಿಯ ನಾಯಕರನ್ನು ಬಿಡುಗಡೆಮಾಡಬೇಕು. ಪ್ರದೇಶದ ಎರಡು ಪ್ರಮುಖ ಪಕ್ಷಗಳನ್ನು ರಾಷ್ಟ್ರವಿರೋಧಿ ಎಂಬಂಥೆ ಬಿಂಬಿಸುವುದು ಸರಿಯಲ್ಲ ಎಂದು ಕರಣ್ ಸಿಂಗ್ ಹೇಳಿದರು ಪಕ್ಷಗಳ ಕಾರ್ಯಕರ್ತರು ಕಳೆದ ಹಲವಾರು ವರ್ಷಗಳಲ್ಲಿ ಭಾರೀ ಬಲಿದಾನ ಮಾಡಿದ್ದಾರೆ. ಪಕ್ಷಗಳು ಕಾಲ ಕಾಲಕ್ಕೆ ವಿವಿಧ ರಾಜಕೀಯ ಪಕ್ಷಗಳ ಜೊತೆ ಮೈತ್ರಿಯನ್ನೂ ಮಾಡಿಕೊಂಡಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಭಾಗಿಯಾಗಿದ್ದವು ಎಂದು ಅವರು ನುಡಿದರು.
2019: ಬೆಂಗಳೂರು: ಕರ್ನಾಟಕದ ಅರ್ಧಕ್ಕೂ ಹೆಚ್ಚು ಭಾಗಗಳಲ್ಲಿ 2-3 ದಿನಗಳಿಂದ  ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.. ಉತ್ತರ ಕರ್ನಾಟಕ,  ಕರಾವಳಿ ಹಾಗೂ ಮಲೆನಾಡಿನಲ್ಲೂ ವರುಣನ ಅಬ್ಬರ ತೀವ್ರಗೊಂಡಿತು.  ಎನ್ಡಿಆರ್ಎಫ್ಸೇರಿದಂತೆ ರಕ್ಷಣಾ ಪಡೆಗಳು ಜನರನ್ನು ಸುರಕ್ಷಿತ ಸ್ಥಳಗಳತ್ತ ಒಯ್ಯುವ ಕಾರ್ಯಾಚರಣೆ ನಡೆಸಿದವು.  ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟ ರಾಷ್ಟ್ರೀಯ ಹೆದ್ದಾರಿ-73 ಚಾರ್ಮಾಡಿ ಘಾಟ್ ಭಾಗದಲ್ಲಿ ಸಂಭವಿಸಿದ ಗುಡ್ಡ ಕುಸಿತ ತೆರವು ಕಾರ್ಯಾಚರಣೆ ಭರದಿಂದ ನಡೆಯಿತು. ಹಿನ್ನೆಲೆಯಲ್ಲಿ ರಸ್ತೆ ಸಂಚಾರ ನಿಷೇಧವನ್ನು ಒಂದು ದಿನ (.9 ಮಧ್ಯರಾತ್ರಿಯವರೆಗೆ)ಮಟ್ಟಿಗೆ ವಿಸ್ತರಣೆ ಮಾಡಲಾಯಿತು. ಬಾಗಲಕೋಟೆ ಜಿಲ್ಲೆಯಲ್ಲಿ ಸಂತ್ರಸ್ತರನ್ನು ಶಾಶ್ವತ ಸ್ಥಳಾಂತರಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನ ಕಲ್ಪಿಸುವುದಾಗಿ ನಂದಗಾಂವ ಗ್ರಾಮಸ್ಥರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾದರು. ಬಾಗಲಕೋಟ ಜಿಲ್ಲೆ ಮುಧೋಳ ತಾಲ್ಲೂಕಿನ ರೂಗಿ ಗ್ರಾಮದ ಹೋಲಗಳಲ್ಲಿ ಪ್ರವಾಹ ಸಿಲುಕಿದ ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿದರು. ಧಾರಾಕಾರ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡವು. ಸೇತುವೆಗಳು ಕುಸಿದವು.. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಕೊಡಗು ಜಿಲ್ಲಾಡಳಿತ ಸೂಚನೆ ನೀಡಿತು.  ದಕ್ಷಿಣ ಕನ್ನಡ: ಅಪಾಯ ಮಟ್ಟದಲ್ಲಿ ನೇತ್ರಾವತಿ: ಘಟ್ಟ ಪ್ರದೇಶದಲ್ಲಿ ಬೆಳಗ್ಗಿನ ಅವಧಿಯಲ್ಲಿ ಭಾರಿ ಮಳೆಯಾಗಿದ್ದರಿಂದ ನೇತ್ರಾವರಿ, ಕುಮಾರಧಾರಾ ನದಿಗಳಲ್ಲಿ  ನೀರಿನ ಮಟ್ಟ ಹೆಚ್ಚಿತು.. ಬಂಟ್ವಾಳದಲ್ಲಿ ನದಿ ನೀರು ಅಪಾಯದ ಮಟ್ಟದಲ್ಲಿ ಹರಿಯಿತು. ಮಧ್ಯಾಹ್ನದ ವೇಳೆಗೆ 8.7 ಮೀಟರ್ನಲ್ಲಿ ಹರಿಯುತ್ತಿತ್ತು. (ಅಪಾಯದ ಮಟ್ಟ 8.5). ರಾಜ್ಯದ ಭಾರೀ ಮಳೆಯ ಹಿನ್ನೆಲೆಯಲ್ಲಿ ಪರಿಹಾರ ಪುನರ್ ವಸತಿಗೆ 5000 ಕೋಟಿ ರೂಪಾಯಿಗಳು ಬೇಕಾಗಿದ್ದು ನೆರವಿಗೆ ಮುಂದೆ ಬರುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರು.
 2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿದ್ದರ
ವಿರುದ್ಧ ಭಾರತದ ರಾಜತಾಂತ್ರಿಕ ಬಾಂಧವ್ಯ ರದ್ದು, ದ್ವಿಪಕ್ಷೀಯ ವ್ಯಾಪಾರೀ ಬಾಂಧವ್ಯ ಅಮಾನತಿನಂತಹ ಸಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿರುವ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ  ಭಾರತಹುಯಿಲೆಬ್ಬಿಸುವುದರಿಂದ ಪ್ರಯೋಜನವಿಲ್ಲ, ನಿಮ್ಮ ನಿಲುವನ್ನು ಮರುವಿಮರ್ಶೆ ಮಾಡಿಕೊಳ್ಳಿಎಂದು ಸೂಚಿಸಿತು.  ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮಗಳು ಅಲ್ಲಿನ ಅಭಿವೃದ್ಧಿಯ ಸಲುವಾಗಿ ಕೈಗೊಳ್ಳಲಾಗಿರುವ ಕ್ರಮಗಳಾಗಿದ್ದು, ಇವು ಭಾರತದ ಆಂತರಿಕ ವಿಚಾರಗಳಾಗಿವೆ. ಭಾರತದ ಸಂವಿಧಾನವು ಹಿಂದೆ, ಈಗ ಮತ್ತು ಎಂದೆಂದೂ ಸಾರ್ವಭೌಮ ವಿಚಾರ. ಪ್ರದೇಶಕ್ಕೆ ಸಂಬಂಧಿಸಿದಂತೆ ಹುಯಿಲೆಬ್ಬಿಸುವ ಕ್ರಮಗಳು ಎಂದಿಗೂ ಯಶಸ್ವಿಯಾಗವುಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ ಕುಮಾರ್ ಅವರು ಹೇಳಿಕೆಯೊಂದರಲ್ಲಿ ತಿಳಿಸಿದರು.  ‘ಮಾಮೂಲಿ ರಾಜತಾಂತ್ರಿಕ ಸಂಪರ್ಕಗಳ ರಕ್ಷಣೆಯಾಗುವಂತೆ ನೋಡಿಕೊಳ್ಳಲು ನಿಮ್ಮ ನಿರ್ಧಾರವನ್ನು ಮರುವಿಮರ್ಶೆ ಮಾಡಿಕೊಳ್ಳಿಎಂದೂ ಅವರು ಪಾಕಿಸ್ತಾನಕ್ಕೆ ಸೂಚಿಸಿದರು. ಕಾಶ್ಮೀರ ಕುರಿತ ಭಾರತದ ನಿರ್ಧಾರಕ್ಕೆ ಪ್ರತಿಕ್ರಿಯಿಸುವಂತೆ ಬಂದ ಒತ್ತಡವನ್ನು ಅನುಸರಿಸಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್  ಅವರು ಭಾರತದ ರಾಯಭಾರಿ ಉಚ್ಚಾಟನೆ, ದ್ವಿಪಕ್ಷೀಯ ವ್ಯಾಪಾರ ಅಮಾನತು ಮತ್ತು ದ್ವಿಪಕ್ಷೀಯ ಬಾಂಧವ್ಯಗಳ ಮರುವಿಮರ್ಶೆಯಂತಹ ಹಲವಾರು ಕ್ರಮಗಳನ್ನು  ಹಿಂದಿನ ದಿನ ಪ್ರಕಟಿಸಿದ್ದರು.   ನಮ್ಮ ದ್ವಿಪಕ್ಷೀಯ ಬಾಂಧವ್ಯಗಳ ಬಗ್ಗೆ ಹುಯಿಲೆಬ್ಬಿಸಿ ಜಗತ್ತಿನ ಮುಂದೆ ದಿಗಿಲು ಹುಟ್ಟಿಸುವ ಚಿತ್ರ ಇಡುವ ಉದ್ದೇಶ ಕ್ರಮಗಳ ಹಿಂದಿದೆ ಎಂಬುದು ಸುಸ್ಪಷ್ಟಎಂದು ಭಾರತ ಹೇಳಿತು. ಸರ್ಕಾರವು ಇತ್ತೀಚೆಗೆ ಕೈಗೊಂಡ ನಿರ್ಧಾರಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಅಭಿವೃದ್ಧಿ ಅವಕಾಶಗಳನ್ನು ವಿಸ್ತರಿಸುವ ಬದ್ಧತೆಯಿಂದ ಪ್ರೇರಿತವಾದವುಗಳು. ಸಂವಿಧಾನದ ತಾತ್ಕಾಲಿಕ ವಿಧಿಯ (ವಿಧಿ ೩೭೦) ಮೂಲಕ ಇವುಗಳನ್ನು ನಿರಾಕರಿಸಲಾಗಿತ್ತು ಎಂದು ಭಾರತ ಒತ್ತಿ ಹೇಳಿತು. ಭಾರತವು ಕೈಗೊಂಡಿರುವ ಕ್ರಮಗಳು ಲಿಂಗ ಹಾಗೂ ಸಾಮಾಜಿಕ ಆರ್ಥಿಕ ತಾರತಮ್ಯಗಳನ್ನು ನಿವಾರಿಸುವುದು. ಎಲ್ಲ ಜನರ ಬದುಕು ಮತ್ತು ಭವಿಷ್ಯವನ್ನು ಸಮೃದ್ಧಗೊಳಿಸುವುದು ಮತ್ತು ಆರ್ಥಿಕ ಚಟುವಟಿಕೆಗೆ ವೇಗ ನೀಡುವುದು ಎಂದು ಭಾರತ ವಿವರಿಸಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಅಸಮಾಧಾನವನ್ನು ಉಂಟು ಮಾಡದ ಇಂತಹ ಅಭಿವೃದ್ಧಿ ಕ್ರಮಗಳನ್ನು ಪಾಕಿಸ್ತಾನವು ನಕಾತಾತ್ಮಕವಾಗಿ ಗ್ರಹಿಸಿರುವುದು ಅಚ್ಚರಿಯೇನಲ್ಲ. ಏಕೆಂದರೆ ಅದು ಇಂತಹ ಭಾವನೆಗಳನ್ನು ತನ್ನ ಗಡಿಯಾಚೆಯ ಭಯೋತ್ಪಾದನೆಯನ್ನು ಸಮರ್ಥಿಕೊಳ್ಳಲು ಬಳಸಿಕೊಂಡಿದೆಎಂದು ವಿದೇಶಾಂಗ ಸಚಿವಾಲಯ ಹೇಳಿತು. ಪಾಕಿಸ್ತಾನವು ಕೈಗೊಂಡಿರುವ ಕ್ರಮಗಳಿಗಾಗಿ ಭಾರತ ಸರ್ಕಾರವು ವಿಷಾದ ವ್ಯಕ್ತ ಪಡಿಸುತ್ತದೆ ಎಂದೂ ಸಚಿವಾಲಯ ಹೇಳಿತು.

No comments:

Post a Comment