Tuesday, August 20, 2019

ಇಂದಿನ ಇತಿಹಾಸ History Today ಆಗಸ್ಟ್ 20

2019: ಬೆಂಗಳೂರು:ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ನೂತನ ಸಚಿವರಾಗಿ ಮೊದಲ ಹಂತದಲ್ಲಿ 17 ಮಂದಿ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜಭವನದ ಗಾಜಿನಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯ್ ವಾಲಾ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನೂತನ ಸಚಿವರು: ಗೋವಿಂದ ಕಾರಜೋಳ,  ಡಾ.ಅಶ್ವಥ ನಾರಾಯಣ, ಸಿ.ಲಕ್ಷ್ಮಣ ಸವದಿ, ಕೆಎಸ್ ಈಶ್ವರಪ್ಪ,  ಆರ್.ಅಶೋಕ್,  ಜಗದೀಶ್ ಶೆಟ್ಟರ,  ಬಿ.ಶ್ರೀರಾಮುಲು, ಎನ್.ಸುರೇಶ್ ಕುಮಾರ್, ವಿ.ಸೋಮಣ್ಣ, ಸಿಟಿ ರವಿ, ಬಸವರಾಜ ಬೊಮ್ಮಾಯಿ, ಕೋಟ ಶ್ರೀನಿವಾಸ ಪೂಜಾರಿ, ಜೆಸಿ ಮಾಧುಸ್ವಾಮಿ, ಚಂದ್ರಕಾಂತ್ ಗೌಡ ಚನ್ನಪ್ಪಗೌಡ ಪಾಟೀಲ್, ಹೆಚ್.ನಾಗೇಶ್, ಪ್ರಭು ಚೌಹಾಣ್, ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ.  ಜಾತಿ ಹಾಗೂ ಪ್ರದೇಶ ಆಧಾರದ ಮೇಲೆ ಸಂಪುಟ ರಚನೆ ಕಸರತ್ತನ್ನು ವರಿಷ್ಠರು ಪೂರ್ಣಗೊಳಿಸಿದ್ದಾರೆ, ಆದರೆ, ಯಡಿಯೂರಪ್ಪ ಅತ್ಯಾಪ್ತರು ಎಂದೆನಿಸಿಕೊಂಡ ಕೆಲವರು ಬಾರಿ ಸಂಪುಟದಿಂದ ಹೊರಗುಳಿದಿದ್ದು, ‘ಕ್ಲೀನ್ ಕ್ಯಾಬಿನೆಟ್ ರಚನೆಗೆ ಹೈಕಮಾಂಡ್ ವಿಶೇಷ ಒತ್ತು ನೀಡಿದೆ ಎನ್ನಲಾಯಿತು. ಲಿಂಗಾಯತ, ಒಕ್ಕಲಿಗ, ದಲಿತ ಸಮುದಾಯಕ್ಕೆ ಪ್ರಾಶಸ್ತ್ಯ ನೀಡಲಾಗಿದ್ದು, ಸಿಂಪಹಾಲು ಲಿಂಗಾಯತರಿಗೆ ಸಿಕ್ಕಿತು.

2019: ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ 2ನೇ ಚಂದ್ರ ಪರ್ಯಟಣೆ 'ಚಂದ್ರಯಾನ-2' ಯಶಸ್ವಿಯಾಗಿ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತು. ಬೆಂಗಳೂರಿನಲ್ಲಿ ಮಂಗಳವಾರ (ಆಗಸ್ಟ್ 20) ಸುದ್ದಿಗೋಷ್ಠಿ ನಡೆಸಿದ ಇಸ್ರೋ ಅಧ್ಯಕ್ಷ ಕೆ. ಶಿವನ್ 'ಬಾಹುಬಲಿ' ಚಂದ್ರನ ಕಕ್ಷೆ ಪ್ರವೇಶಿಸಿದ ಖಚಿತ ಮಾಹಿತಿ ನೀಡಿದರು. ಚಂದ್ರನ ಅಂಗಳದ ಅಧ್ಯಯನಕ್ಕೆ ಪ್ರಯಾಣ ಬೆಳೆಸಿರುವ ಇಸ್ರೋದ ಚಂದ್ರಯಾನ-2 ನೌಕೆ ಇಂದು ಚಂದ್ರನ ಕಕ್ಷೆಗೆ ಸೇರಿದೆ. ಅತ್ಯಂತ ನಿಖರವಾಗಿ ಚಂದ್ರನ ಕಕ್ಷೆಗೆ ಸೇರಿಸಲಾಗಿದೆ. ಯೋಜನೆಯ ಮಹತ್ವದ ಘಟ್ಟ ಯಶಸ್ವಿಯಾಗಿದೆ ಎಂದು ಕೆ.ಶಿವನ್ ತಿಳಿಸಿದರು. 'ಚಂದ್ರಯಾನ-2'ಗೆ ಚಂದ್ರನ ಮೇಲೆ ಇಳಿಯಲು ಕೆಲವೇ ದಿನಗಳಷ್ಟೇ ಬಾಕಿಯಿದೆ. ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವ ಮೂಲಕ ಅಮೆರಿಕ, ರಷ್ಯಾ ಮತ್ತು ಚೀನಾಗಳ ಸಾಲಿಗೆ ಭಾರತ ಸೇರ್ಪಡೆಗೊಳ್ಳಲಿದೆ.ಚಂದ್ರಯಾನ ನೌಕೆಯು ಸೆಪ್ಟೆಂಬರ್ 6 ರಂದು ಚಂದ್ರನಿಗೆ ಬಹಳ ಸಮೀಪ ಅಂದರೆ 30 ಕಿ.ಮೀ, ದೂರ ತಲುಪಲಿದೆ. ಚಂದ್ರನನ್ನು ತಲುಪುವ 30 ಕಿ.ಮೀ. ಕೊನೆಯ ಹಂತ ಇಸ್ರೋ ತಂಡದವರಿಗೆ ಅತ್ಯಂತ ಕ್ಲಿಷ್ಟಕರ ಕ್ಷಣಗಳಾಗಿದ್ದು, ರೀತಿಯ ಸಂಕೀರ್ಣ ಕಾರ್ಯಾಚರಣೆಯನ್ನು ಇಸ್ರೋ ತಂಡ ಮೊದಲ ಬಾರಿಗೆ ಮಾಡಲಿದೆ. ಕೊನೆಯ 30 ಕಿ. ಮೀ ಅನ್ನು 15 ನಿಮಿಷದಲ್ಲಿ ತಲುಪಬೇಕಿದ್ದು, ಹಿನ್ನೆಲೆ ಉಪಗ್ರಹದ ವೇಗವನ್ನು ಮತ್ತಷ್ಟು ತಗ್ಗಿಸಬೇಕಿದೆ. ಸೆಪ್ಟೆಂಬರ್ 7 ನಸುಕಿನಲ್ಲಿ ಕಾರ್ಯ ನಡೆಯಬೇಕಿದ್ದು, ಮಹತ್ವದ ಕಾರ್ಯ ಯಶಸ್ವಿಯಾದಲ್ಲಿ ಭಾರತ ಚಂದ್ರನನ್ನು ತಲುಪಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ.

2019: ನವದೆಹಲಿ: ಭಾರತೀಯ ಜನತಾ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ದಕ್ಷಿಣ ಕನ್ನಡದ ಮಂಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ನಳಿನ್ ಕುಮಾರ್ ಕಟೀಲು ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಂಗಳವಾರ ನೇಮಕ ಮಾಡಿದರು. ಕಟೀಲು ಅವರನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನೇಮಕ ಮಾಡಿದ್ದಾರೆ ಎಂದು ಬಿಜೆಪಿ ಕೇಂದ್ರ ಕಚೇರಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಪ್ರಕಟಣೆ ತಿಳಿಸಿತು. ಸತತ ಮೂರು ಬಾರಿ ದಕ್ಷಿಣ ಕನ್ನಡದ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ನಳಿನ್ ಕುಮಾರ್ ಕಟೀಲು ಅವರಿಗೆ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಸ್ಥಾನದಂತಹ ಮಹತ್ವದ ಹುದ್ದೆ ಸಿಗುತ್ತಿರುವುದು ಇದೇ ಮೊದಲು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ಸ್ಥಾನಕ್ಕೆ ಈಗ ಕಟೀಲು ಅವರನ್ನು ನೇಮಕ ಮಾಡಲಾಯಿತು.
2019: ನವದೆಹಲಿ: ಕರ್ನಾಟಕಕ್ಕೆ ಕಳೆದ ವರ್ಷದ ಬರಹಾನಿ ಪರಿಹಾರವಾಗಿ ,೦೨೯.೩೯ ಕೋಟಿ ರೂಪಾಯಿ ಸೇರಿದಂತೆ ನೈಸರ್ಗಿಕ ವಿಕೋಪಗಳಿಗೆ ತುತ್ತಾಗಿರುವ ಮೂರು ರಾಜ್ಯಗಳಿಗೆ ಕೇಂದ್ರದ ಗೃಹ ವ್ಯವಹಾರಗಳ ಸಚಿವಾಲಯವು ಒಟ್ಟು ,೪೩೨.೧೦ ಕೋಟಿ ರೂಪಾಯಿಗಳ ಹೆಚ್ಚುವರಿ ಪರಿಹಾರವನ್ನು ಬಿಡುಗಡೆ ಮಾಡಿತು. ಜೊತೆಗೆ ಪ್ರಸ್ತುತ ಸಾಲಿನಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳನ್ನು ಕಂಗೆಡಿಸಿರುವ ಅತಿವೃಷ್ಠಿ, ಪ್ರವಾಹದಿಂದ ತೊಂದರೆಗೆ ಒಳಗಾಗಿರುವ ರಾಜ್ಯಗಳಲ್ಲಿ, ಅವುಗಳ ಮನವಿಗೆ ಕಾಯದೇ, ತತ್ ಕ್ಷಣ ಭೇಟಿ ನೀಡಿ ಪರಿಶೀಲಿಸಲು ಅಂತರ್ ಸಚಿವಾಲಯ ಕೇಂದ್ರ ತಂಡವನ್ನು ತುರ್ತಾಗಿ ರಚಿಸಲಾಯಿತು. ಅಂತರ್ ಸಚಿವಾಲಯ ಕೇಂದ್ರ ತಂಡವನ್ನು ತತ್ ಕ್ಷಣವೇ ಪ್ರವಾಹದಿಂದ ತತ್ತರಿಸಿದ ಕರ್ನಾಟಕ, ಅಸ್ಸಾಂ, ಮೇಘಾಲಯ, ತ್ರಿಪುರ, ಬಿಹಾರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಗೆ ಭೇಟಿ ನೀಡಲು ನಿಯೋಜಿಸಲಾಯಿತು. ನೈಋತ್ಯ ಮುಂಗಾರು ಮಳೆ-ಪ್ರವಾಹದಿಂದ ಸಂಕಷ್ಟಕ್ಕೆ ಈಡಾಗಿರುವ ರಾಜ್ಯಗಳಲ್ಲಿ ಉದ್ಭವಿಸಿರುವ ಪರಿಸ್ಥಿತಿ ನಿಭಾವಣೆ ಮತ್ತು ಎಲ್ಲ ಅಗತ್ಯ ನೆರವು ಒದಗಿಸಲು ಸಾಧ್ಯವಿರುವ ಸರ್ವ ಕ್ರಮಗಳನ್ನೂ ಕೈಗೊಳ್ಳುವಂತೆ ಗೃಹ ಸಚಿವ ಅಮಿತ್ ಶಾ ಅವರು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ೨೦೧೮-೧೯ರ ಸಾಲಿನ ಬರಕ್ಕೆ ಪರಿಹಾರವಾಗಿ ಹೆಚ್ಚುವರಿ ನೆರವನ್ನು ಪಡೆದಿರುವ ಕರ್ನಾಟಕದ ಹೊರತಾಗಿ, ಒಡಿಶಾ ರಾಜ್ಯಕ್ಕೆ ಫನಿ ಚಂಡಮಾರುತದಿಂದ ಆದ ಹಾನಿಗೆ ಪರಿಹಾರವಾಗಿ ,೩೩೮.೨೨ ಕೋಟಿ ರೂಪಾಯಿಗಳ ಹೆಚ್ಚುವರಿ ನೆರವನ್ನು, ಬಿರುಗಾಳಿ, ನೀರ್ಗಲ್ಲ ಪ್ರವಾಹ ಮತ್ತಿತರ ಪ್ರಾಕೃತಿಕ ವಿಕೋಪಗಳಿಗಾಗಿ ಹಿಮಾಚಲ ಪ್ರದೇಶಕ್ಕೆ ೬೪.೪೯ ಕೋಟಿ ರೂಪಾಯಿಗಳ ಹೆಚ್ಚುವರಿ ನೆರವನ್ನು ಬಿಡುಗಡೆ ಮಾಡಲಾಯಿತು. ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ 2019 ಆಗಸ್ಟ್  19ರ ಸೋಮವಾರ ಸಂಬಂಧ ನಿರ್ಧಾರ ಕೈಗೊಳ್ಳಲಾಗಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಸಭೆಯಲ್ಲಿ ಹಾಜರಿದ್ದರು. ಗೃಹ ವ್ಯವಹಾರ, ಹಣಕಾಸು, ಕೃಷಿ ಸಚಿವಾಲಯಗಳು ಮತ್ತು ನೀತಿ ಆಯೋಗದ ಹಿರಿಯ ಅಧಿಕಾರಿಗಳೂ ಸಭೆಯಲ್ಲಿ ಪಾಲ್ಗೊಂಡಿದ್ದರು. ’ರಾಜ್ಯ ವಿಕೋಪ ಸ್ಪಂದನಾ ನಿಧಿಯಿಂದ (ಎಸ್ಡಿಆರ್ಎಫ್) ಈಗಾಗಲೇ ಕೇಂದ್ರದಿಂದ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿರುವ ಹಣಕಾಸು ನೆರವನ್ನು ಹೊರತುಪಡಿಸಿ, ಹೆಚ್ಚುವರಿಯಾಗಿ ಈಗಿನ ನೆರವು ಬಿಡುಗಡೆ ಮಾಡಲಾಗಿದೆ. ೨೦೧೮-೧೯ರಲ್ಲಿ ಕೇಂದವು ಎಲ್ಲ ರಾಜ್ಯಗಳಿಗೆ ,೬೫೮ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ೨೦೧೯-೨೦ರ ಸಾಲಿನಲ್ಲಿ ಈವರೆಗೆ ಕೇಂದ್ರವು ,೧೦೪ ಕೋಟಿ ರೂಪಾಯಿಗಳನ್ನು ಎಸ್ಡಿಆರ್ಎಫ್ನಿಂದ ೨೪ ರಾಜ್ಯಗಳಿಗೆ ಬಿಡುಗಡೆ ಮಾಡಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಹೇಳಿಕೆ ತಿಳಿಸಿತು. ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ರಾಜ್ಯದಿಂದ ಸಲ್ಲಿಕೆಯಾಗುವ ಮನವಿ ಪತ್ರವು ಬಂದ ಬಳಿಕ ಅಂತರ್ -ಸಚಿವಾಲಯ ಕೇಂದ್ರೀಯ ತಂಡವನ್ನು (ಐಎಂಸಿಟಿ) ನಿಯೋಜಿಸುವ ಕ್ರಮದ ಪುನರ್ ಪರಿಶೀಲನೆ ನಡೆಸಿದ ಗೃಹ ವ್ಯವಹಾರಗಳ ಸಚಿವಾಲಯವು, ಈಗ ಐಎಂಸಿಟಿಯು ಸಂತ್ರಸ್ಥ ಪ್ರದೇಶಗಳಿಗೆ ತತ್ ಕ್ಷಣವೇ ಭೇಟಿ ನೀಡಿ ಹಾನಿ ಮತ್ತು ರಾಜ್ಯ ಆಡಳಿತವು ನಡೆಸುವ ಪರಿಹಾರ ಕಾಮಗಾರಿ ಬಗ್ಗೆ ಪ್ರಥಮ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ತೀರ್ಮಾನಿಸಿತು ಎಂದು ಹೇಳಿಕೆ ತಿಳಿಸಿತು. ರಾಜ್ಯದಿಂದ ಮನವಿ ಪತ್ರ ಸಲ್ಲಿಕೆಯಾದ ಬಳಿಕ ಹಾನಿ ಮತ್ತು ಪರಿಹಾರ ಕಾರ್ಯಗಳ  ವಿಸ್ತೃತ ಅಂದಾಜು ನಡೆಸಲು ಐಎಂಸಿಟಿಯು ಪುನಃ ಸಂತ್ರಸ್ಥ ಪ್ರದೇಶಗಳಿಗೆ ಭೇಟಿ ನೀಡುವುದು ಮತ್ತು ಹೆಚ್ಚುವರಿ ನೆರವು ಹಂಚಿಕೆಗೆ ಅಂತಿಮ ಶಿಫಾರಸು ಮಾಡುವುದು ಎಂದು ಹೇಳಿಕೆ ತಿಳಿಸಿತು.ಹಾಲಿ ವ್ಯವಸ್ಥೆಯಂತೆ ಐಎಂಸಿಟಿಯು ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ರಾಜ್ಯಕ್ಕೆ ಮಾತ್ರ ರಾಜ್ಯದಿಂದ ಮನವಿ ಬಂದ ಬಳಿಕ ಭೇಟಿ ನೀಡುವ ಪರಿಪಾಠ ಇದೆ.

2019: ಜಮ್ಮು: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರನ್ನು ಈದಿನ ಮಧ್ಯಾಹ್ನ ಜಮ್ಮು ವಿಮಾನ ನಿಲ್ದಾಣದಲ್ಲಿಯೇ ಸುಮಾರು ಗಂಟೆಗಳ ಕಾಲ ತಡೆದು ಬಳಿಕ ಸಂಜೆ .೧೦ರ ಸುಮಾರಿಗೆ ದೆಹಲಿಗೆ ವಾಪಸ್ ಕಳಹಿಸಲಾಯಿತು.ಗುಲಾಂ ನಬಿ ಆಜಾದ್ ಅವರು ಬಳಿಕ ಸ್ಥಳೀಯ ಆಡಳಿತದ ಕ್ರಮವನ್ನು ಅಸಹನೆಯ ಸಂಕೇತ ಎಂದು ಟೀಕಿಸಿದರು. ‘ಇದು ಪ್ರಜಾಪ್ರಭುತ್ವದಲ್ಲಿ ಸರಿಯಲ್ಲ. ಮುಖ್ಯ ಪ್ರವಾಹದ ರಾಜಕೀಯ ಪಕ್ಷಗಳು ಭೇಟಿ ನೀಡಲು ಸಾಧ್ಯವಿಲ್ಲ ಎಂದಾದರೆ, ಯಾರು ಅಲ್ಲಿಗೆ ಹೋಗಲು ಸಾಧ್ಯ? ಜಮ್ಮು - ಕಾಶ್ಮೀರದ ಮೂವರು ಮಾಜಿ ಮುಖ್ಯಮಂತ್ರಿಗಳು ಈಗಾಗಲೇ ಗೃಹ ಬಂಧನದಲ್ಲಿ ಇದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಗೆ ಜಮ್ಮು-ಕಾಶ್ಮೀರ ರಾಜ್ಯ ಪ್ರವೇಶಕ್ಕೇ ಅನುಮತಿ ನೀಡುತ್ತಿಲ್ಲ. ಇದು ಅಸಹನೆಯ ಸಂಕೇತಎಂದು ಆಜಾದ್ ಅವರನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ವರದಿ ತಿಳಿಸಿತು. ಜಮ್ಮು -ಕಾಶ್ಮೀರ ಪ್ರವೇಶಿಸದಂತೆ ಆಜಾದ್ ಅವರನ್ನು ಆಗಸ್ಟ್ ೮ರಿಂದೀಚೆಗೆ ಇದು ಎರಡನೇ ಬಾರಿ ತಡೆಯಲಾಯಿತು. ಆಗಸ್ಟ್ ೮ರಂದು ಅವರನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ತಡೆದು ದೆಹಲಿಗೆ ವಾಪಸ್ ಕಳುಹಿಸಲಾಗಿತ್ತು. ಆಗಸ್ಟ್ ೮ರ ಪ್ರವಾಸದ ಸಮಯದಲಿ ಆಜಾದ್ ಅವರು ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸಂವಹನ ನಡೆಸಿ, ಕೇಂದ್ರ ಸರ್ಕಾರವು ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕದ ಕಣಿವೆಯ ಪರಿಸ್ಥಿತಿಯ ಅಂದಾಜು ಮಾಡಬಯಸಿದ್ದರು.

2019: ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರಾಷ್ಟ್ರಪತಿ ಅಧಿಸೂಚನೆ ಮೂಲಕ ಭಾರತ ಸರ್ಕಾರವು ರದ್ದು ಪಡಿಸಿದ್ದರ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ  (ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ -ಐಸಿಜೆ) ದೂರು ನೀಡಲು ಪಾಕಿಸ್ತಾನ ತೀರ್ಮಾನಿಸಿದೆ ಎಂದು ಸುದ್ದಿ ಸಂಸ್ಥೆ ವರದಿಯೊಂದು ತಿಳಿಸಿತು.  ಕಾಶ್ಮೀರ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಒಯ್ಯಲು ನಾವು ನಿರ್ಧರಿಸಿದ್ದೇವೆಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಅವರನ್ನು ಉಲ್ಲೇಖಿಸಿ ಸಂಸ್ಥೆ ವರದಿ ಮಾಡಿತು. ‘ಕಾನೂನಿನ ಎಲ್ಲ ಅಂಶಗಳನ್ನೂ ಪರಿಶೀಲಿಸಿದ ಬಳಿಕ ನಿರ್ಧಾರವನ್ನು ಕೈಗೊಳ್ಳಲಾಯಿತುಎಂದು ಖುರೇಶಿ ಹೇಳಿದರು. ಜಮ್ಮು ಮತ್ತು ಕಾಶ್ಮೀರಕ್ಕೆ  ಸಂಬಂಧಿಸಿದಂತೆ ಭಾರತ ಸರ್ಕಾರವು ಕೈಗೊಂಡ ನಿರ್ಧಾರದ ವಿರುದ್ಧ ಪಾಕಿಸ್ತಾನವು ಈಗಾಗಲೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಚರ್ಚಿಸುವಂತೆ  ಮಾಡಿ ಕೋಲಾಹಲ ಎಬ್ಬಿಸಲು ಯತ್ನಿಸಿತ್ತು.  ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಬಗ್ಗೆ ನಡೆಸಿದ ರಹಸ್ಯ ಸಭೆಯು ಯಾವುದೇ ನಿರ್ಣಯವನ್ನೂ ಕೈಗೊಳ್ಳದೆ ಕೊನೆಗೊಂಡಿತ್ತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಡೆದ ರಹಸ್ಯ ಸಭೆಯಲ್ಲಿ ಪಾಕಿಸ್ತಾನದ ಪರವಾಗಿ ಚೀನಾ ಮಾತ್ರವೇ ದನಿ ಎತ್ತಿದ್ದು, ಉಭಯ ರಾಷ್ಟ್ರಗಳಿಗೆ ಆದ ಮುಖಭಂಗ ಎಂದು ಅಂತಾರಾಷ್ಟ್ರೀಯ ವಲಯದಲ್ಲಿ ಭಾವಿಸಲಾಗಿತ್ತು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಅವಹೇಳನಕಾರಿಯಾದ ಸರಣಿ ಟ್ವೀಟ್ಗಳನ್ನು ಮಾಡಿ, ಭಾರತ ಸರ್ಕಾರವನ್ನುಫ್ಯಾಸಿಸ್ಟ್’, ’ರೇಸಿಸ್ಟ್ಎಂಬುದಾಗಿ ಬಣ್ಣಿಸಿ ಅದರ ಬಳಿ ಇರುವ ಅಣ್ವಸ್ತ್ರಗಳ ಬಗ್ಗೆ ಗಮನ ಹರಿಸುವಂತೆ ಆಗ್ರಹಿಸಿದ ಬಳಿಕ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ರಹಸ್ಯ ಸಭೆ ನಡೆದಿತ್ತು.

2019: ನವದೆಹಲಿ: ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಕೇಂದ್ರ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತು.  ಹೈಕೋರ್ಟ್ ತೀರ್ಪಿನೊಂದಿಗೆ ಚಿದಂಬರಂ ಅವರಿಗೆ ಹೊಸ ಸಂಕಷ್ಟ ಎದುರಾಗಿದ್ದು, ಯಾವುದೇ ಸಮಯದಲ್ಲಿ ಅವರನ್ನು ಬಂಧಿಸುವ ಸಾಧ್ಯತೆಗಳಿವೆ. ಮಧ್ಯೆ, ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿನ ಹಸ್ತಕ್ಷೇಪಕ್ಕಾಗಿ ಚಿದಂಬರಂ ಅವರು ಆಗಸ್ಟ್  21ರ ಬುಧವಾರದವರೆಗೆ ಕಾಯಬೇಕಾಗಿದ್ದು, ಬಂಧನ ವಿರುದ್ಧ ಯಾವುದೇ ರಕ್ಷಣೆಯೂ ಲಭಿಸಲಿಲ್ಲ.  ‘ಎರಡೂ ಅರ್ಜಿಗಳನ್ನು ವಜಾಗೊಳಿಸಲಾಗಿದೆಎಂದು ಹೈಕೋರ್ಟಿನ ನ್ಯಾಯಮೂರ್ತಿ ಸುನಿಲ್ ಗೌರ್ ಅವರ ಪೀಠವು ಘೋಷಿಸಿತು. ನ್ಯಾಯಾಲಯವು ಜನವರಿ ೨೫ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಬಂಧನದ ವಿರುದ್ಧ ಮಧ್ಯಂತರ ರಕ್ಷಣೆಗಾಗಿ ಮನವಿ ಸಲ್ಲಿಸಲು ಮೂರು ದಿನಗಳ ಕಾಲಾವಕಾಶ ನೀಡುವಂತೆ ಹಿರಿಯ ಕಾಂಗ್ರೆಸ್ ನಾಯಕ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ, ನ್ಯಾಯಾಲಯ ಅದಕ್ಕೂ ನಿರಾಕರಿಸಿತು. ಚಿದಂಬರಂ ಜಾಮೀನು ಮನವಿ ತಿರಸ್ಕರಿಸಲು ನ್ಯಾಯಾಲಯವು ಎರಡು ಅಂಶಗಳನ್ನು ಉಲ್ಲೇಖಿಸಿತು. ನ್ಯಾಯಾಲಯಕ್ಕೆ ನೀಡಿದ ಉತ್ತರದಲ್ಲಿ ಚಿದಂಬರಂ ಅವರುಜಾರಿಕೊಳ್ಳುವ ವರ್ತನೆತೋರಿದ್ದಾರೆ ಎಂದು ಹೇಳಿದ ನ್ಯಾಯಾಲಯ ಪ್ರಕರಣದ ಗಂಭೀರತೆಯ ಕಡೆಗೂ ಬೊಟ್ಟು ಮಾಡಿತು.ಜಾಮೀನು ಪಡೆದಿರುವ ಇತರ ಆರೋಪಿಗಳ ಪ್ರಕರಣಕ್ಕೂ ಚಿದಂಬರಂ ಪ್ರಕರಣಕ್ಕೂ ಯಾವುದೇ ಹೋಲಿಕೆ ಇಲ್ಲ. ಏಕೆಂದರೆ ವಿದೇಶೀ ನೇರ ಹೂಡಿಕೆಗೆ (ಎಫ್ಡಿಐ) ಒಪ್ಪಿಗೆ ನೀಡುವಾಗ ಅವರು ವಿತ್ತ ಸಚಿವರಾಗಿದ್ದರು ಎಂದು ನ್ಯಾಯಮೂರ್ತಿ ನುಡಿದರು.ಸುಪ್ರೀಂಗೆ ಮೇಲ್ಮನವಿ: ದೆಹಲಿ ಹೈಕೋರ್ಟ್ ಆದೇಶದ ಬಳಿಕ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಚಿದಂಬರಂ ಅವರನ್ನು ಭೇಟಿ ಮಾಡಿ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದು, ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಯಿತು. ಹಿರಿಯ ವಕೀಲರಾದ ಸಲ್ಮಾನ್ ಖುರ್ಶಿದ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರು ಸುಪ್ರೀಂಕೋರ್ಟ್ ಕಲಾಪದಲ್ಲಿ ಸಿಬಲ್ ಅವರ ಜೊತೆಗೂಡಿದರು. ದೆಹಲಿ ಹೈಕೋರ್ಟ್ ತೀರ್ಪಿನ ಜಾರಿಯವನ್ನು ಮೂರು ದಿನಗಳ ಅವಧಿಗೆ ತಡೆ ಹಿಡಿಯುವಂತೆ ಕೋರಿದ ಚಿದಂಬರಂ ಅವರ ಮನವಿಯನ್ನು ಕೂಡಾ ಹೈಕೋರ್ಟ್ ತಿರಸ್ಕರಿಸಿದ್ದರಿಂದ ಯಾವುದೇ ಸಮಯದಲ್ಲಿ ಚಿದಂಬರಂ ಅವರನ್ನು ಬಂಧಿಸಬಹುದು.ಬಂಧನದಿಂದ ಚಿದಂಬರಂ ಅವರಿಗೆ ರಕ್ಷಣೆ ಒದಗಿಸಲು ನಿರಾಕರಿಸಿದ ನ್ಯಾಯಮೂರ್ತಿ ಸುನಿಲ್ ಗೌರ್ ಅವರುಸಂಸತ್ ಸದಸ್ಯನಾಗಿರುವುದು ಮತ್ತು ವಕೀಲ ವೃತ್ತಿಯಲ್ಲಿ ಇರುವುದು ಪ್ರಕರಣದ ಮೇಲೆ ಯಾವುದೇ ಪ್ರಭಾವವನ್ನೂ ಬೀರುವುದಿಲ್ಲಎಂದು ಹೇಳಿದರು.’ಅರ್ಜಿದಾರರು ಇಡೀ ಪ್ರಕರಣದ ಮುಖ್ಯಸ್ಥ (ಕಿಂಗ್ ಪಿನ್ ) ಆಗಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತದೆ ಮತ್ತು ಅವರು ತನಿಖೆಗೆ ಸಹಕರಿಸಿಲ್ಲಎಂದು ಹೈಕೋರ್ಟ್ ತೀರ್ಪು ತಿಳಿಸಿದೆ. ’ಹಾಜರು ಪಡಿಸಲಾಗಿರುವ ವಿಷಯಗಳ ಬೃಹತ್ ಸ್ವರೂಪವು ಯಾವುದೇ ನಿರೀಕ್ಷಣಾ ಜಾಮೀನು ಪಡೆಯಲು ಅವರನ್ನು ಅನರ್ಹರನ್ನಾಗಿಸಿದೆಎಂದೂ ಹೈಕೋರ್ಟ್ ಹೇಳಿತು.’ಆರ್ಥಿಕ ಅಪರಾಧವನ್ನು ಬಿಗಿಮುಷ್ಠಿಯೊಂದಿಗೆ ನಿಭಾಯಿಸಬೇಕು. ಇಂತಹ ಬೃಹತ್ ಆರ್ಥಿಕ ಅಪರಾಧದಲ್ಲಿ ತನಿಖಾ ಸಂಸ್ಥೆಗಳ ಕೈಗಳನ್ನು ಕಟ್ಟಿಹಾಕಲಾಗದುಎಂದೂ ನ್ಯಾಯಾಲಯ ಹೇಳಿತು.ಪಿ.ಚಿದಂಬರಂ ಅವರು ಕೇಂದ್ರ ವಿತ್ತ ಸಚಿವರಾಗಿದ್ದಾಗ ಸುಮಾರು ೩೦೭ ಕೋಟಿ ರೂಪಾಯಿ ಮೊತ್ತದ ವಿದೇಶೀ ನೇರ ಹೂಡಿಕೆ ಮೂಲಕ ಸಾಗರದಾಚೆಯ ಹಣ ಪಡೆಯಲು ಮಾಧ್ಯಮ ಸಮೂಹಕ್ಕೆ ಒಪ್ಪಿಗೆ ನೀಡುವಲ್ಲಿ ವಿದೇಶೀ ಹೂಡಿಕೆ ಅಭಿವೃದ್ಧಿ ಮಂಡಳಿಯಲ್ಲಿ (ಎಫ್ಐಪಿಬಿ) ನಡೆದಿದೆ ಎಂದು ಆಪಾದಿಸಲಾದ ಅಕ್ರಮಗಳಿಗೆ ಐಎನ್ಎಕ್ಸ್ ಮೀಡಿಯಾ ಪ್ರಕರಣ ಸಂಬಂಧಿಸಿದೆ.ವಿದೇಶೀ ಹೂಡಿಕೆ ಅಭಿವೃದ್ಧಿ ಮಂಡಳಿ (ಎಫ್ಐಪಿಬಿ) ಒಪ್ಪಿಗೆ ನೀಡುವಲ್ಲಿ ಅಕ್ರಮಗಳು ನಡೆದಿವೆ ಎಂದು ಆಪಾದಿಸಿ ೨೦೧೭ರ ಮೇ ೧೫ರಂದು ಸಿಬಿಐ ಎಫ್ಐಆರ್ ದಾಖಲಿಸಿತ್ತು. ಜಾರಿ ನಿರ್ದೇಶನಾಲಯ ಕೂಡಾ ಅದೇ ವರ್ಷ ತಡವಾಗಿ ಪ್ರಕರಣ ದಾಖಲಿಸಿತ್ತು.೨೦೦೭ರಲ್ಲಿ ಐಎನ್ಎಕ್ಸ್ ಮೀಡಿಯಾವನ್ನು ಹುಟ್ಟು ಹಾಕಿದ್ದ ಇಂದ್ರಾಣಿ ಮುಖರ್ಜಿ ಮತ್ತು ಅವರ ಪತಿ ಪೀಟರ್ ಮುಖರ್ಜಿ ಅವರ ವಿರುದ್ಧ ಆಗಿನ ವಿತ್ತ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಜೊತೆಗೆ ಸೇರಿ ವಿದೇಶೀ ಬಂಡವಾಳ ಪಡೆಯಲು ಮತ್ತು ವಿದೇಶೀ ಹೂಡಿಕೆ ಅಭಿವೃದ್ಧಿ ಮಂಡಳಿಯಿಂದ (ಎಫ್ಐಪಿಬಿ) ಅಗತ್ಯ ಒಪ್ಪಿಗೆ ಪಡೆಯದೇ ಇದ್ದುದಕ್ಕಾಗಿ ಶಿಕ್ಷಾ ಕ್ರಮಗಳನ್ನು ತಪ್ಪಿಸಿಕೊಳ್ಳಲು ಕ್ರಿಮಿನಲ್ ಸಂಚು ರೂಪಿಸಿದ ಆರೋಪವಿದೆ.೨೦೧೮ರ ಮಾರ್ಚ್ ತಿಂಗಳಲ್ಲಿ ಇಂದ್ರಾಣಿ ಮುಖರ್ಜಿಯವರು ಸಿಬಿಐಗೆ ನೀಡಿದ ಹೇಳಿಕೆಯಲ್ಲಿ ಕಾರ್ತಿ ಚಿದಂಬರಂ ಮತ್ತು ಮುಖರ್ಜಿದ್ವಯರು ಐಎನ್ಎಕ್ಸ್ ಮೀಡಿಯಾ ಪರವಾಗಿ ಎಫ್ಐಪಿಬಿಯಿಂದ ಒಪ್ಪಿಗೆ ಪಡೆಯಲು ೧೦ ಲಕ್ಷ ಡಾಲರುಗಳ ಒಪ್ಪಂದ ಮಾಡಿಕೊಳ್ಳಲಾಗಿತ್ತು ತಿಳಿಸಿದ್ದರು. ಹೇಳಿಕೆಯನ್ನು ಅಪರಾಧ ದಂಡ ಸಂಹಿತೆಯ (ಸಿಆರ್ಪಿಸಿ) ೧೬೪ನೇ ಸೆಕ್ಷನ್ ಅಡಿಯಲ್ಲಿ ಸಿಬಿಐ ಹೇಳಿಕೆ ದಾಖಲಿಸಿಕೊಂಡಿತ್ತು.ಕಳೆದ ತಿಂಗಳು, ತನ್ನ ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿ ಅವರಿಗೆ ಐಎಸ್ಎಕ್ಸ್ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು (ಅಪ್ರೂವರ್) ದೆಹಲಿ ನ್ಯಾಯಾಲಯವು ಅನುಮತಿ ನೀಡಿತ್ತು. ಮಾಫಿಸಾಕ್ಷಿಯಾಗಲು ಕೋರಿ ಸಲ್ಲಿಸಲಾಗಿದ್ದ ತನ್ನ ಅರ್ಜಿಯಲ್ಲಿ ಇಂದ್ರಾಣಿ ಮುಖರ್ಜಿಯವರು ಪ್ರಕರಣದಲ್ಲಿ ತಮಗೆ ಕ್ಷಮೆ ನೀಡುವಂತೆ ಮನವಿ ಮಾಡಿದ್ದು, ಇದಕ್ಕೆ ಬದಲಿಯಾಗಿ ಪ್ರಕರಣದ ಪೂರ್ಣ ಮತ್ತು ನೈಜ ವಿವರಗಳನ್ನು ಒದಗಿಸುವುದಾಗಿ ಹೇಳಿದ್ದರು.ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ಕಳೆದ ವರ್ಷ ಫೆಬ್ರುವರಿಯಲಿ ಬಂಧಿಸಿತ್ತು. ಮಾರ್ಚ್ ತಿಂಗಳಲ್ಲಿ ಅವರನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕಾರ್ತಿ ಚಿದಂಬರಂ ಅವರನ್ನು ಹಲವಾರು ಬಾರಿ ಪ್ರಶ್ನಿಸಿತ್ತು. ಪ್ರಸ್ತುತ ವರ್ಷ ಜನವರಿ ಮತ್ತು ಕಳೆದ ವರ್ಷ ಡಿಸೆಂಬರ್ ೧೯ರಂದು ಪಿ. ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯವು ಪ್ರಶ್ನಿಸಿತ್ತು.ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಅವರಿಗೆ ಸೇರಿದ ೫೪ ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಯನ್ನು ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿಕೊಂಡಿತ್ತು. ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿ ಅವರಿಗೆ ಸೇರಿದ ಆಸ್ತಿಪಾಸ್ತಿಯನ್ನೂ ಸಂಸ್ಥೆಯು ಮುಟ್ಟುಗೋಲು ಹಾಕಿಕೊಂಡಿತ್ತು.ತುರ್ತು ಹಸ್ತಕ್ಷೇಪಕ್ಕೆ ಸುಪ್ರೀಂ ನಕಾರ: ಮಧ್ಯೆ, ದೆಹಲಿ ಹೈಕೋರ್ಟಿ ತೀರ್ಪಿನಲ್ಲಿ ತತ್ ಕ್ಷಣ ಹಸ್ತಕ್ಷೇಪ ಮಾಡಲು ನಿರಾಕರಿಸಿರುವ ಸುಪ್ರೀಂಕೋರ್ಟ್. ಆಗಸ್ಟ್ 21ರ ಬುಧವಾರ ಬೆಳಗಿನವರೆಗೆ ಕಾಯಲು ಸಲಹೆ ಮಾಡಿತು. ವಿಷಯವನ್ನು ಪ್ರಸ್ತಾಪಿಸಲು ನಾಳೆ (ಬುಧವಾರ) ಅತ್ಯಂತ ಹಿರಿಯ ನ್ಯಾಯಮೂರ್ತಿಯನ್ನು ಸಂಪರ್ಕಿಸುವಂತೆ ನಮಗೆ ಸಲಹೆ ಮಾಡಲಾಗಿದೆಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಚಿದಂಬರಂ ಅವರ ವಕೀಲರ ತಂಡದ ಮುಖ್ಯಸ್ಥ ಕಪಿಲ್ ಸಿಬಲ್ ವರದಿಗಾರರಿಗೆ ತಿಳಿಸಿದರು. ಪಿ. ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ ಬಳಿಕ, ಹಿರಿಯ ವಕೀಲರಾದ ಸಿಬಲ್ ಅವರು ಸುಪ್ರೀಂಕೋರ್ಟಿನ ರಿಜಿಸ್ಟ್ರಾರ್ ಅವರಿಗೆ. ಆದಷ್ಟೂ ಬೇಗನೆ ವಿಚಾರಣೆಗೆ ವ್ಯವಸ್ಥೆ ಮಾಡುವಂತೆ ಕೋರಿದರು. ಮೇಲ್ಮನವಿ ಸಲ್ಲಿಸಲು ದಿನಗಳ ಕಾಲಾವಕಾಶ ಕೋರಿದ ಸಿಬಲ್ ಅರ್ಜಿಯನ್ನೂ ಹೈಕೋರ್ಟ್ ತಿರಸ್ಕರಿಸಿತ್ತು.

2019: ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ನಡೆದಿತ್ತು ಎನ್ನಲಾದ ಫೋನ್ ಕದ್ದಾಲಿಕೆ ಪ್ರಕರಣದ ಬೆನ್ನಲ್ಲೇ ಬಹುಕೋಟಿ ವಂಚನೆಯ ಐಎಂಎ ಹಗರಣದ ತನಿಖೆಯನ್ನೂ ರಾಜ್ಯ ಸರ್ಕಾರ ಸಿಬಿಐಗೆ ವಹಿಸಿತು. ರಾಜ್ಯ ಪೊಲೀಸ್ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ (ಎಸ್ಐಟಿ) ಐಎಂಎ ಪ್ರಕರಣದ ಕುರಿತು ತನಿಖೆ ನಡೆಸುತ್ತಿತ್ತು.  ಪ್ರಕರಣ ಕುರಿತು ಎಸ್ಐಟಿ ತನಿಖೆ ಪ್ರಗತಿ ವರದಿಯನ್ನು ರಾಜ್ಯ ಸರಕಾರ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಸಿತು. ಐಎಂಎ ವಂಚನೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿರುವ ಕುರಿತು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು ಹೈಕೋರ್ಟ್ಗೆ ಮಾಹಿತಿ ನೀಡಿದರು. ಸೆಪ್ಟೆಂಬರ್ 12 ರೊಳಗೆ ಸಿಬಿಐ ತನಿಖಾ ಪ್ರಗತಿ ವರದಿ ನೀಡಬೇಕು ಎಂದು ಸಿಬಿಐಗೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿತು. ಐಎಂಎ ಹಗರಣದಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಐಪಿಎಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿತ್ತು. ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ ಬಿಜೆಪಿ ನಾಯಕರು ಒತ್ತಾಯಿಸಿದ್ದರು. ಈಗ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದಿರುವ ಕಾರಣ ಪ್ರಕರಣವನ್ನು ಸಿಬಿಐಗೆ ನೀಡಲಾಯಿತು. ಬಹುಕೋಟಿ ಐಎಂಎ ಹಗರಣದಲ್ಲಿಕೇರಳ ಮತ್ತು ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 50 ಸಾವಿರ ಹೂಡಿಕೆದಾರರು ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡಿದ್ದರು.

2019: ಮುಂಬಯಿ: ಹೋಟೆಲ್ ಉದ್ದಮಿ ಬಿ.ಆರ್. ಶೆಟ್ಟಿ ಕೊಲೆ ಯತ್ನ ಪ್ರಕರಣ ಸಂಬಂಧ ಭೂಗತ ಪಾತಕಿ ಛೋಟಾ ರಾಜನ್ಗೆ 8 ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. 2013ರಲ್ಲಿ ಮುಂಬೈನ ಅಂಬೋಲಿಯಲ್ಲಿ ಉದ್ಯಮಿ ಬಿ.ಆರ್. ಶೆಟ್ಟಿ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಆದರೆ ಶೆಟ್ಟಿ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. 
ಪ್ರಕರಣದಲ್ಲಿ ಛೋಟಾ ರಾಜನ್ ಮತ್ತವರ ಗ್ಯಾಂಗ್ ಅಪರಾಧ ಸಾಬೀತಾಗಿತ್ತು ಪ್ರಕರಣದ ವಿಚಾರಣೆ ನಡೆಸಿದ ಮಹಾರಾಷ್ಟ್ರದ ಕೋಕಾ ನ್ಯಾಯಾಲಯ ಛೋಟಾ ರಾಜನ್ ಸೇರಿದಂತೆ 6 ಮಂದಿಗೆ 8 ವರ್ಷ ಜೈಲು ಶಿಕ್ಷೆ ವಿಧಿಸಿತು. ಈಗಾಗಲೇ ಎರಡು ಪ್ರಕರಣದಲ್ಲಿ ತಪ್ಪಿತಸ್ಥನಾದ ಛೋಟಾ ರಾಜನ್ ದೆಹಲಿಯ  ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. 

No comments:

Post a Comment