Wednesday, August 28, 2019

ಇಂದಿನ ಇತಿಹಾಸ History Today ಆಗಸ್ಟ್ 28

2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಸಂವಿಧಾನದ ೩೭೦ನೇ ವಿಧಿ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟಿನ ಐವರು ನ್ಯಾಯಮೂರ್ತಿಗಳ ಪೀಠವು ಅಕ್ಟೋಬರ್ ಆರಂಭದಲ್ಲಿ ವಿಚಾರಣೆ ನಡೆಸಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಪ್ರಕಟಿಸಿದರು.ಸಂವಿಧಾನದ  ೩೭೦ ನೇ ವಿಧಿಯನ್ನು ರದ್ದುಪಡಿಸುವುದರ ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಧ್ಯಮಗಳ ಮೇಲಿನ ನಿರ್ಬಂಧಗಳ ಕುರಿತು ಸಲ್ಲಿಸಲಾಗಿರುವ ಅರ್ಜಿಗಳಿಗೆ ಉತ್ತರ ನೀಡುವಂತೆಯೂ ಮುಖ್ಯ ನ್ಯಾಯಮೂರ್ತಿ ಗೊಗೋಯಿ, ನ್ಯಾಯಮೂರ್ತಿ ಎಸ್ ಬೊಬ್ಡೆ ಮತ್ತು ಎಸ್ ಅಬ್ದುಲ್ ನಜೀರ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ದಿನಗಳ ಒಳಗಾಗಿ ಉತ್ತರಿಸುವಂತೆ ನಿರ್ದೇಶನ ನೀಡಿತು.ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ನಿಟ್ಟಿನ ಕೇಂದ್ರದ ನಡೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆಯಲ್ಲಿಇದು ಅತ್ಯಂತ ಸೂಕ್ಷ್ಮ ವಿಚಾರ ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಪೀಠದ ಗಮನಕ್ಕೆ ತಂದರು  
ಕೇಂದ್ರದ ಎರಡನೇ ಉನ್ನತ ಹಿರಿಯ ಕಾನೂನು ಅಧಿಕಾರಿ ತುಷಾರ್ ಮೆಹ್ತ ಅವರು ಸರ್ಕಾರಕ್ಕೆ ಔಪಚಾರಿಕ ನೋಟಿಸ್ ನೀಡದಂತೆ ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಪೀಠಕ್ಕೆ ಮನವಿ ಮಾಡಿದರು.ಸುಪ್ರೀಂಕೋರ್ಟಿನ ನೋಟಿಸ್ ಗಡಿಯಾಚೆಗೂ ಪರಿಣಾಮಗಳನ್ನು ಬೀರುತ್ತಿದೆ. ಮತ್ತು ಅದರ ದುರುಪಯೋಗವಾಗಬಹುದು ಎಂದು ಮೆಹ್ತ ವಾದಿಸಿದರು. ರಾಜಕೀಯ ಧುರೀಣರು ಸರ್ಕಾರವನ್ನು ಗುರಿಯಾಗಿಸಲು ನ್ಯಾಯಾಲಯದ ನೋಟಿಸನ್ನು ಬಳಸಬಹುದು ಎಂದೂ ಮೆಹ್ತ ಪ್ರತಿಪಾದಿಸಿದರು. " ವಿಷಯಕ್ಕೆ ಸಂಬಂಧಿಸಿದಂತೆ ಏನೇ ಘಟಿಸಿದರೂ  ಇತರ ರಾಜಕೀಯ ಮುಖಂಡರು ಅದನ್ನುದೊಡ್ಡ ವಿಷಯವನ್ನಾಗಿ ಮಾಡಲು ಯೋಜಿಸುತ್ತಾರೆ" ಎಂದು ಅವರು ಹೇಳಿದರು.ಆದರೆ ಪೀಠವು ಮನವಿಯನ್ನು ನಿರಾಕರಿಸಿತು. "ನಾವು ಆದೇಶವನ್ನು ನೀಡಿದ್ದಾಗಿದೆ..ಅದನ್ನು ಬದಲಾಯಿಸುವುದಿಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ಗೊಗೋಯಿ ಹೇಳಿದರು.ಸಂವಿಧಾನದ ೩೭೦ ನೇ ವಿಧಿಯನ್ನು ರದ್ದು ಪಡಿಸಿದ ಸಂಸತ್ತಿನ ಮೂರು ವಾರಗಳ ಹಿಂದಿನ ನಿರ್ಧಾರವನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿರುವ  ಅರ್ಜಿಗಳು ಪ್ರಶ್ನಿಸಿವೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ್ದನ್ನು ಪ್ರಶ್ನಿಸಿದ್ದ ವಕೀಲ ಎಂ ಎಲ್ ಶರ್ಮ ಅವರು ೩೭೦ನೇ ವಿಧಿಯನ್ನು ರದ್ದು ಪಡಿಸಲು ಕೇಂದ್ರ ಸರ್ಕಾರವು ಸಂಸತ್ ಮಾರ್ಗ ಬಳಸಿದ್ದು ಹೇಗೆ ಸರಿ ಎಂಬುದಾಗಿ ಪ್ರಶ್ನಿಸಿದ್ದರು.  ಕಾಶ್ಮೀರ ಟೈಮ್ಸ್ ಪತ್ರಿಕೆಯ ಸಂಪಾದಕಿ ಅನುರಾಧ ಬಸ್ಸಿನ್ ಅವರು ನಿರ್ಬಂಧಗಳ ಪರಿಣಾಮವಾಗಿ ಮಾಧ್ಯಮಗಳು ಕಾರ್ಯ ನಿರ್ವಹಿಸಲು ಕಷ್ಟವಾಗುತ್ತಿದೆ, ನಿರ್ಬಂಧಗಳನ್ನು ತತ್ ಕ್ಷಣ ರದ್ದು ಪಡಿಸಬೇಕು ಎಂದು ಕೋರಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮತ್ತು ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ  ಬಳಿಕ  ಅರ್ಜಿಗಳನ್ನು ಸಲ್ಲಿಸಲಾಗಿತ್ತು.ಜಮ್ಮು-ಕಾಶ್ಮೀರ ಮತ್ತು ಲಡಾಖ್ -  ಎರಡು ಕೇಂದ್ರಾಡಳಿತ ಪ್ರದೇಶಗಳು ಅಕ್ಟೋಬರ್ ೩೧ ರಂದು ಅಸ್ತಿತ್ವಕ್ಕೆ ಬರಲಿವೆ.ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನರದ್ದು ಪಡಿಸಿದ ಆಗಸ್ಟ್ ೫ರ ನಸುಕಿನಿಂದ ಸಂಚಾರ ನಿರ್ಬಂಧಜಾರಿ ಹಾಗೂ ದೂರವಾಣಿ, ಅಂತರ್ಜಾಲ  ಸ್ಥಗಿತಗೊಳ್ಳುವುದರೊಂದಿಗೆ ಅಸಮಾಧಾನ ಆರಂಭವಾಗಿತ್ತು.ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಸೇರಿದಂತೆ ನೂರಾರು ರಾಜಕೀಯ ಕಾರ್ಯಕರ್ತರನ್ನು ಸರ್ಕಾರ ಅಡ್ಡಗಟ್ಟಿ ವಶಕ್ಕೆ ತೆಗೆದುಕೊಂಡಿತ್ತು. ರಾಜಕೀಯ ನಾಯಕರು ಜನರನ್ನು ಪ್ರಚೋದಿಸದಂತೆ ನೋಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದರು. ಬಳಿಕ ಮೂರು ವಾರಗಳಲ್ಲಿ, ಕಾನೂನಿನ ವಿವಿಧ ಅಂಶಗಳನ್ನು ಪ್ರಶ್ನಿಸಿ ಸುಮಾರು ೧೦ ಅರ್ಜಿಗಳನ್ನು ಸುಪ್ರೀಂಕೋರ್ಟಿನಲ್ಲಿ  ಸಲ್ಲಿಸಲಾಗಿತ್ತು. ಕಾಶ್ಮೀರದ ಜಾಮಿಯಾ ವಿದ್ಯಾರ್ಥಿಯೊಬ್ಬ ತನ್ನ ಕುಟುಂಬದ ಸ್ಥಿತಿಗತಿ ಪರಿಶೀಲಿಸಲು  ಮನೆಗೆ ಹೋಗಲು ಅನುಮತಿ ನೀಡಬೇಕೆಂದು ಅರ್ಜಿ ಸಲ್ಲಿಸಿದರೆ, ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಅವರು  ಕಾಶ್ಮೀರಿ ರಾಜಕಾರಣಿ ಮತ್ತು ಪಕ್ಷದ ಮಾಜಿ ಶಾಸಕ ಮೊಹಮ್ಮದ್ ಯೂಸುಫ್ ತಾರಿಗಾಮಿ ಅವರನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದರು. ಇತರ ಹಲವರು  ೩೭೦ ನೇ ವಿಧಿ ರದ್ಧತಿಯನ್ನು ಪ್ರಶ್ನಿಸಿ ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದರು. ಅವುಗಳಲ್ಲಿ ನಿವೃತ್ತ ಸೇನಾ  ಅಧಿಕಾರಿ ಮತ್ತು ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಸೇರಿದಂತೆ ಅಧಿಕಾರಿ ವರ್ಗದವರು ಸಲ್ಲಿಸಿದ್ದ ಅರ್ಜಿಗಳೂ ಸೇರಿದ್ದವು. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರಿಗೆ ಜಮ್ಮು ಕಾಶ್ಮೀರಕ್ಕೆ ತೆರಳಿ ಪಕ್ಷ ಸಹೋದ್ಯೋಗಿ ಯೂಸುಫ್ ತಾರಿಗಾಮಿ ಅವರನ್ನು ಭೇಟಿ ಮಾಡಲು ಸುಪ್ರೀಂಕೋರ್ಟ್ ಶರತ್ತಿನ ಅನುಮತಿ ನೀಡಿತು. ಯೆಚೂರಿ ಅವರು ತಾರಿಗಾಮಿ ಅವರ ಭೇಟಿಯನ್ನು ಮಾತ್ರವೇ ಮಾಡಬಹುದು, ಅವಕಾಶವನ್ನು ಯಾವುದೇ ರಾಜಕೀಯ ಉದ್ದೇಶಕ್ಕೆ ಬಳಸುವಂತಿಲ್ಲ ಎಂದೂ ಪೀಠವು ಶರತ್ತು ವಿಧಿಸಿತು. ಯೆಚೂರಿ ಅವರು ಏನಾದರೂ ರಾಜಕೀಯ ಚಟುವಟಿಕೆ ನಡೆಸಿದರೆ, ಅಧಿಕಾರಿಗಳು ಬಗ್ಗೆ ಸುಪ್ರೀಂಕೋರ್ಟಿಗೆ ವರದಿ ಮಾಡಲು ಮುಕ್ತರಾಗಿದ್ದಾರೆ ಎಂದು ಪೀಠ ಹೇಳಿತುಜಾಮಿಯಾ ವಿದ್ಯಾರ್ಥಿಗೂ ತನ್ನ ಮನೆಗೆ ಭೇಟಿ ನೀಡುವಂತೆಯೂ, ಬಳಿಕ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆಯೂ ಪೀಠ ನಿರ್ದೇಶಿಸಿತು. ವಿದ್ಯಾರ್ಥಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆಡಳಿತಕ್ಕೆ ನಿರ್ದೇಶನವನ್ನೂ ಪೀಠ ನೀಡಿತು.

2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ್ದಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಗೆ ಪಾಕಿಸ್ತಾನವು ಬರೆದ ಪತ್ರ ಒಂದರಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೆಸರನ್ನು ಉಲ್ಲೇಖಿಸಿರುವುದು ಬೆಳಕಿಗೆ ಬರುವುದರೊಂದಿಗೆ ದೇಶದಲ್ಲಿ ರಾಜಕೀಯ ಬಿರುಗಾಳಿ ಎದ್ದಿತು. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಪಾಕ್ ವರ್ತನೆಗೆ ಕೆಂಡಾಮಂಡಲವಾಗಿದ್ದರೆ, ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿತು. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರ ಟ್ವೀಟ್ಗಳನ್ನು ಪಾಕಿಸ್ತಾನವು ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ ಘಟನೆಯಿಂದ ರಾಷ್ಟ್ರವು ನಾಚಿಕೆ ಪಡುವಂತೆ ಆಗಿದೆ. ಇದಕ್ಕಾಗಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಆಗ್ರಹಿಸಿದರು. ರಾಹುಲ್ ಗಾಂಧಿಯವರು ಕಾಶ್ಮೀರವು ಭಾರತದ ಆಂತರಿಕ ವಿಷಯ ಮತ್ತು ಹಿಂಸಾಚಾರಕ್ಕೆ ಪಾಕಿಸ್ತಾನದ ಸಂಬಂಧ ಇದೆ ಎಂಬುದಾಗಿ ಈದಿನ ಹೇಳಿದ್ದಾರೆ. ಇದು ಸಂಪೂರ್ಣ ಉಲ್ಟಾ (ಯು ಟರ್ನ್). ಏಕೆ? ಏಕೆಂದರೆ ದೇಶ ಸಿಟ್ಟಿಗೆದ್ದಿದೆ. ರಾಹುಲ್ ಕ್ಷಮೆ ಕೇಳಬೇಕೆಂದು ಅವರು ಬಯಸಿದ್ದಾರೆ ಎಂದು ಜಾವಡೇಕರ್ ಹೇಳಿದರು. ಪಾಕಿಸ್ತಾನವು ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ತನ್ನ ಮಾತುಗಳನ್ನು ಸಮರ್ಥಿಸಲು ರಾಹುಲ್ ಗಾಂಧಿಯವರು ಇತರ ವಿರೋಧಿ ನಾಯಕರ ಜೊತೆಗೆ ಕಾಶ್ಮೀರ ಭೇಟಿಗೆ ವಿಫಲ ಯತ್ನ ನಡೆಸಿ ವಾಪಸಾದ ಬಳಿಕ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ್ದು ಬೆಳಕಿಗೆ ಬರುತ್ತಿದ್ದತೆಯೇ ರಾಹುಲ್ ಗಾಂಧಿಯವರುನಾನು ಸರ್ಕಾರದ (ಕೇಂದ್ರ) ಜೊತೆ ಹಲವಾರು ವಿಷಯಗಳನ್ನು ಒಪ್ಪುವುದಿಲ್ಲ, ಆದರೆ ಕಾಶ್ಮೀರವು ಭಾರತದ ಆಂತರಿಕ ವಿಷಯ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ವಿಶ್ವಾದ್ಯಂತ ಭಯೋತ್ಪಾದನೆಗೆ ಬಂಬಲ ನೀಡುತ್ತಿರುವ ಪಾಕಿಸ್ತಾನವೇ ಪ್ರಚೋದನೆ ನೀಡಿದೆ ಎಂಬುದಾಗಿ ಸ್ಪಷ್ಟ ಪಡಿಸಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದರು.ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನವಾಗಲೀ ಬೇರೆ ಯಾವುದೇ ವಿದೇಶವಾಗಲೀ ಹಸ್ತಕ್ಷೇಪ ನಡೆಸಬೇಕಾದ ಅಗತ್ಯವಿಲ್ಲ ಎಂದೂ ರಾಹುಲ್ ಇನ್ನೊಂದು ಟ್ವೀಟಿನಲ್ಲಿ ತಿಳಿಸಿದರು.ಪಾಕಿಸ್ತಾನದ ಕ್ರಮಕ್ಕೆ ಕೆಂಡಾಮಂಡಲ ಸಿಟ್ಟು ವ್ಯಕ್ತ ಪಡಿಸಿದ ಕಾಂಗ್ರೆಸ್ಪಾಕಿಸ್ತಾನವು ವಿಶ್ವಸಂಸ್ಥೆಗೆ ಬರೆದ ಪತ್ರದಲಿ ತನ್ನ ಸುಳ್ಳುಗಳನ್ನು ಸಮರ್ಥಿಸಲು ದುರುದ್ದೇಶದಿಂದ ರಾಹುಲ್ ಅವರ ಹೆಸರನ್ನು ಎಳೆಯುವ ಯತ್ನ ಮಾಡಿದೆ ಎಂದು ಆಪಾದಿಸಿತು.ಪಾಕ್ ವರ್ತನೆ ಕುರಿತ ವರದಿಗಳಿಗೆ ಪ್ರತಿಕ್ರಿಯಿಸಿದ ಸಚಿವ ಜಾವಡೇಕರ್ ಅವರುರಾಹುಲ್ ಗಾಂಧಿಯವರು ಜಮ್ಮು ಮತ್ತು ಕಾಶ್ಮೀರ ತಪ್ಪು ಹಾದಿಯಲ್ಲಿ ಸಾಗುತ್ತಿದೆ. ಜನರು ಸಾಯುತ್ತಿರುವ ವರದಿಗಳು ಬರುತ್ತಿವೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ರಾಹುಲ್ ಗಾಂಧಿಯವರೇ ನಿಮ್ಮ ಎಣಿಕೆ ತಪ್ಪು. ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಚೆನ್ನಾಗಿದೆ. ಅಲ್ಲಿ ನೀವು ಎಣಿಸಿದಂತೆ ಯಾವುದೇ ಹಿಂಸಾಚಾರ ನಡೆಯುತ್ತಿಲ್ಲ. ಜನರು ಸತ್ತಿಲ್ಲ ಎಂದು ಹೇಳಿದರು. ಪಾಕಿಸ್ತಾನವು ಅವರ ಹೇಳಿಕೆಯನ್ನು ಬಳಸಿಕೊಂಡಿದೆ. ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ ಹೇಳಿಕೆಯನ್ನು ಉಲ್ಲೇಖಿಸಿದೆ. ಹಿಂಸೆಯ ಕೃತ್ಯಗಳನ್ನು ಮುಖ್ಯ ಪಕ್ಷದ ರಾಹುಲ್ ಗಾಂಧಿಯವರಂತಹ ನಾಯಕರೇ ಒಪ್ಪಿಕೊಂಡಿದ್ದಾರೆ ಎಂದು ಹೇಳಿದೆ ಎಂಬುದಾಗಿ ಜಾವಡೇಕರ್ ನುಡಿದರು. ಪಾಕಿಸ್ತಾನಿ ಸಚಿವ ಶಿರೀನ್ ಮಝಾರಿ ಅವರು ವಿಶ್ವಸಂಸ್ಥೆಗೆ ಜಮ್ಮು ಕಾಶ್ಮೀರದ ಕುರಿತ ಬರೆದ ಪತ್ರದಲ್ಲಿ ಶನಿವಾರ ಶ್ರೀನಗರಕ್ಕೆ ಭೇಟಿ ನೀಡಲು ಯತ್ನಿಸಿ ವಿಮಾನ ನಿಲ್ದಾಣದಿಂದಲೇ ವಾಪಸಾದ ತನ್ನ ಹೇಳಿಕೆಯನ್ನು ಉಲ್ಲೇಖಿಸಿದ್ದರು. ’ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಮಾಮೂಲಿಯಾಗಿಲ್ಲ ಎಂಬುದು ಸ್ಪಷ್ಟ ಎಂಬುದಾಗಿ ಕಾಂಗ್ರೆಸ್ ನಾಯಕ ಹೇಳಿದ್ದನ್ನು ಶಿರೀನ್ ಪತ್ರದಲ್ಲಿ ಉಲ್ಲೇಖಿಸಿದ್ದರು ಕುರಿತ ವರದಿಗಳಿಗೆ ಪ್ರತಿಕ್ರಿಯೆಯಾಗಿ ರಾಹುಲ್ ಗಾಂಧಿ ಅವರು ಈದಿನ ಟ್ವೀಟ್ಗಳನ್ನು ಮಾಡಿದ್ದರು. ಕಾಂಗ್ರೆಸ್ ಪಕ್ಷ ಕೂಡಾ ಮುನ್ನ ಟ್ವೀಟ್ ಮಾಡಿಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರವು ಪ್ರತಿಪಾದಿಸುವಂತೆ ಪರಿಸ್ಥಿತಿ ಮಾಮೂಲಿಯಾಗಿದ್ದರೆ ರಾಹುಲ್ ಗಾಂಧಿ ನೇತೃತ್ವದ ವಿಪಕ್ಷ ನಾಯಕರ ನಿಯೋಗವನ್ನು ಶ್ರೀನಗರ ವಿಮಾನ ನಿಲ್ದಾಣದಿಂದಲೇ ಹಿಂದಕ್ಕೆ ಕಳುಹಿಸಿದ್ದು ಏಕೆ ? ಮೋದಿ ಸರ್ಕಾರವು ಏನನ್ನು ಮುಚ್ಚಿಡಲು ಯತ್ನಿಸುತ್ತಿದೆ?’ ಎಂದು ಪ್ರಶ್ನಿಸಿತ್ತು. ಕಾಂಗ್ರೆಸ್ ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲ ಅವರು ಈದಿನಪಾಕಿಸ್ತಾನ ಸರ್ಕಾರವು ವಿಶ್ವಸಂಸ್ಥೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿಯವರ ಹೆಸರನ್ನು ಎಳೆದಿರುವುದನ್ನು ಉಲ್ಲೇಖಿಸಿದ ಪತ್ರಿಕಾ ವರದಿಗಳನ್ನು ಪಕ್ಷವು ಗಮನಿಸಿದೆ. ಪಾಕಿಸ್ತಾನವು ತಾನು ಹರಡುತ್ತಿರುವ ಸುಳ್ಳುಗಳು ಮತ್ತು ತಪ್ಪು ಮಾಹಿತಿಗಳನ್ನು ಸಮರ್ಥಿಸಲು ದುರುದ್ದೇಶದಿಂದ ರಾಹುಲ್ ಅವರ ಹೆಸರನ್ನು ಎಳೆದಿದೆ ಎಂದು ಹೇಳಿದ್ದರು.
ರಾಷ್ಟ್ರದ ತಪ್ಪು ಮಾಹಿತಿ ಸಚಿವ ಪ್ರಕಾಶ ಜಾವಡೇಕರ್ ಅವರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದೂ ಸುರ್ಜೆವಾಲ ಟೀಕಿಸಿದರು. ಜಮ್ಮು ಮತ್ತು ಕಾಶ್ಮೀರವು ಯಾವತ್ತೂ ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತದೆ. ಪಾಕಿಸ್ತಾನದ ಯಾವುದೇ ಕುತ್ಸಿತ ಪ್ರಚಾರಗಳು ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸುರ್ಜೆವಾಲ ನುಡಿದರು. 
ಪಾಕಿಸ್ತಾನವು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ), ಗಿಲ್ಗಿಟ್, ಹಮ್ಜಾ ಬಾಲ್ಟಿಸ್ತಾನದಲ್ಲಿ ಕ್ಷಮಿಸಲಾಗದಂತಹ ಅಮಾನವೀಯವಾದ  ಮಾನವ ಹಕ್ಕುಗಳ ಉಲ್ಲಂಘನೆ ನಡೆಸುತ್ತಿದ್ದು ಇದಕ್ಕಾಗಿ ವಿಶ್ವಕ್ಕೆ ಉತ್ತರ ನೀಡಬೇಕು. ಪಾಕಿಸ್ತಾನಿ ಪಡೆಗಳು ೭೦ದಶಲಕ್ಷ ಮೊಹಜೀರ್ ಗಳಿಗೆ ಕಿರುಕುಳ ನೀಡುತ್ತಿರುವುದಕ್ಕಾಗಿ ಮತ್ತು ೨೫,೦೦೦ಕ್ಕೂ ಹೆಚ್ಚು ಮೊಹಜೀರ್ಗಳನ್ನು ಪಾಕಿಸ್ತಾನಿ ಸೇನೆ ಮೂಲಕ ಕೊಲ್ಲಿಸಿದ್ದಕ್ಕಾಗಿ ಜಗತ್ತಿಗೆ ಉತ್ತರ ನೀಡಬೇಕು ಎಂದೂ ಸುರ್ಜೆವಾಲ ತಮ್ಮ ಹೇಳಿಕೆಯಲ್ಲಿ ಆಗ್ರಹಿಸಿದರು.ಜಮ್ಮು- ಕಾಶ್ಮೀರ ಮತ್ತು ಲಡಾಖ್ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯುತ್ತದೆ ಎಂಬ ಬಗ್ಗೆ ಯಾರೂ ಸಂಶಯಪಡಬೇಕಾದ ಅಗತ್ಯವಿಲ್ಲ ಎಂದೂ ಸುರ್ಜೆವಾಲ ಹೇಳಿದರು. ಕಾಶ್ಮೀರದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುವುದಕ್ಕೆ ಬದಲಾಗಿ, ಪಾಕಿಸ್ತಾನವು ಮೇಲೆ ತಿಳಿಸಿದ ವಿಷಯಗಳಿಗೆ ಆಂತರಿಕವಾಗಿ ತನ್ನ ಜನರಿಗೆ ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಉತ್ತರ ನೀಡಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಸುರ್ಜೆವಾಲ ನುಡಿದರು. ಕಾಂಗ್ರೆಸ್ ಪಕ್ಷದ ಇತರ ನಾಯಕರಾದ ಶಶಿ ತರೂರ್ ಮತ್ತಿತರರೂ ಪಾಕ್ ವರ್ತನೆಯನ್ನು ಟೀಕಿಸಿದರು. ಮಧ್ಯೆ, ಬಿಜೆಪಿಯ ನಾಯಕರಾದ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರುರಾಹುಲ್ ಗಾಂಧಿಯವರ ಅಪ್ರಬುದ್ಧತೆಯು ಪಕ್ಷಕ್ಕೆ ಶಾಪವಾಗಿದೆ ಎಂದು ಟೀಕಿಸಿದರೆ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರುಇದು ಡಿಸ್ಪೆನ್ಸರಿಯಿಂದ ಬ್ಯಾಂಡ್-ಏಡ್ ನ್ನು ಕದ್ದು ಗುಂಡೇಟಿನ ಗಾಯಕ್ಕೆ ಅಂಟಿಸಿದಂತೆ ಎಂದು ವ್ಯಂಗ್ಯವಾಡಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯದ ಮೂಲೆ ಮೂಲೆಯಲ್ಲೂ ಬಾಗಿಲು ಬಡಿದ ಬಳಿಕ ಪಾಕಿಸ್ತಾನವು ಈಗ ಕಡೆಯದಾಗಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನೇ ನೆಚ್ಚಿಕೊಂಡಿದೆ ಎಂದೂ ಅವರು ಟೀಕಿಸಿದರು. .

2019: ನವದೆಹಲಿ: ಕಾಶ್ಮೀರ ವಿಷಯವು ಭಾರತದ ಆಂತರಿಕ ವಿಷಯವಾಗಿದ್ದು, ಅದು ದ್ವಿಪಕ್ಷೀಯವಾಗಿ ಇತ್ಯರ್ಥಗೊಳ್ಳಬೇಕಾದ ಅಗತ್ಯವಿದೆ ಎಂದು ರಶ್ಯಾವು ಸ್ಪಷ್ಟ ಪಡಿಸಿದ್ದು, ಇದರೊಂದಿಗೆ ಕಾಶ್ಮೀರ ವಿಚಾರದಲ್ಲಿ ಅಂತಾರಾಷ್ಟ್ರೀಯ ಬೆಂಬಲ ಕ್ರೋಡೀಕರಣಕ್ಕೆ ಯತ್ನಿಸುತ್ತಿರುವ ಪಾಕಿಸ್ತಾನಕ್ಕೆ ಇನ್ನೊಂದು ಮುಖಭಂಗವಾಯಿತು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಭಾರತದ ರಾಷ್ಟ್ರಪತಿ ಅಧಿಸೂಚನೆ ವಿರುದ್ಧ ಜಾಗತಿಕ ಬೆಂಬಲ ಕ್ರೋಡೀಕರಿಸಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿರುವ ಪಾಕಿಸ್ತಾನಕ್ಕೆ ರಶ್ಯಾವು ನೀಡಿರುವ ಪ್ರಕಟಣೆಯು ಇನ್ನೊಂದು ಹೊಡೆತವಾಯಿತು.  ಇದು ಭಾರತ ಸರ್ಕಾರದ ಸಾರ್ವಭೌಮ ನಿರ್ಧಾರ. ಇದು ಭಾರತದ ಆಂತರಿಕ ವಿಷಯ. ಭಾರತ ಮತ್ತು ಪಾಕಿಸ್ತಾನ ನಡುವಣ ಎಲ್ಲ ವಿಷಯಗಳು ಶಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣೆಯ ಆಧಾರದಲ್ಲಿ ಮಾತುಕತೆಯ ಮೂಲಕ ಇತ್ಯರ್ಥಗೊಳ್ಳಬೇಕು ಎಂದು ಭಾರತದಲ್ಲಿನ ರಶ್ಯಾದ ರಾಯಭಾರಿ ನಿಕೋಲಾಯ್ ಕುದಾಶೆವ್ ಹೇಳಿದರು. ರಶ್ಯಾ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ರೋಮನ್ ಬಾಬುಶ್ಕಿನ್ ಅವರುವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ದೇಶವು ವಹಿಸುವಂತಹ ಪಾತ್ರವೇನೂ ಇಲ್ಲ ಎಂದು ಸ್ಪಷ್ಟ ಪಡಿಸಿದರು.ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ (ಯುಎನ್ಎಸ್ಸಿ) ನಡೆದ ರಹಸ್ಯ ಸಭೆಯ ಕಾಲದಲ್ಲಿ ನಾವು ಕಾಶ್ಮೀರ ವಿಚಾರವು ಭಾರತದ ಆಂತರಿಕ ವಿಷಯ ಎಂಬುದಾಗಿ ಪುನರುಚ್ಚರಿಸಿದ್ದೇವೆ ಎಂದು ಬಾಬುಶ್ಕಿನ್ ನುಡಿದರು. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯ ರಾಷ್ಟ್ರಗಳ ಪೈಕಿ ಫ್ರಾನ್ಸ್, ಇಂಗ್ಲೆಂಡ್, ರಶ್ಯಾ ಮತ್ತು ಅಮೆರಿಕ ನಾಲ್ಕು ಕಾಯಂ ಸದಸ್ಯ ರಾಷ್ಟ್ರಗಳು ಭಾರತದ ನಿಲುವನ್ನು ಸಮರ್ಥಿಸಿದ್ದು, ಚೀನಾ ಮಾತ್ರ ತನ್ನ ಸಾರ್ವಕಾಲಿಕ ಮಿತ್ರ ಪಾಕಿಸ್ತಾನವನ್ನು ಸಮರ್ಥಿಸಿತ್ತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಇಂಗ್ಲೆಂಡ್ ಮೊದಲಿಗೆ ಪಾಕಿಸ್ತಾನವನ್ನು ಬೆಂಬಲಿಸಿದರೂ ಬಳಿಕ ತನ್ನ ನಿಲುವಿನಿಂದ ಹಿಂದೆ ಸರಿದಿತ್ತು. ’ಪ್ರಕಾಂಡ ಬುದ್ಧಿಮತ್ತೆಯ ವಿಲಕ್ಷಣ ಶಿಶು ಮತ್ತು ಅದರ ಮಾರ್ಗದರ್ಶಿ ಕೈ ಕೈ ಹಿಸುಕಿಕೊಂಡಿದ್ದರು ಎಂದು ಪರಿಸ್ಥಿತಿಯನ್ನು ಭಾರತೀಯ ಅಧಿಕಾರಿಯೊಬ್ಬರು ವರ್ಣಿಸಿದ್ದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ರಶ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರ ಬಲಗೈ ಬಂಟನಾಗಿರುವ ರಶ್ಯಾದ ಭದ್ರತಾ ಸಲಹೆಗಾರ ನಿಕೋಲಾಯ್ ಪಟ್ರುಶೆವ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ರಶ್ಯಾ ಸ್ಪಷ್ಟನೆಯನ್ನು ನೀಡಿದೆ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ರಶ್ಯಾದ ವಿದೇಶಾಂಗ ಸಚಿವ ಸೆರ್ಗೆ ಲವ್ರೋವ್ ಅವರನ್ನು ಭೇಟಿ ಮಾಡುವುದಕ್ಕೆ ಮುನ್ನ ಹೇಳಿಕೆ ಬಂದಿರುವುದು ಗಮನಾರ್ಹವಾಗಿದೆ. ಜಾಗತಿಕ ಪ್ರತಿಕ್ರಿಯೆಗಳ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಭ್ರಮ ನಿರಸನವಾಗಿರುವುದು ಇತ್ತೀಚೆಗೆ ಅಲ್ಲಿನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರು ಪಾಕಿಸ್ತಾನದಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಆಡಿರುವ ಮಾತುಗಳಲ್ಲಿ ಕೂಡಾ ಪ್ರತಿಫಲಿಸಿತ್ತು.
ಭಾವಾವೇಶಕ್ಕೆ ಒಳಗಾಗುವುದು ಸುಲಭ ಮತ್ತು ಆಕ್ಷೇಪಗಳನ್ನು ಎತ್ತುವುದು ಇನ್ನೂ ಸುಲಭ. ಏನಿದ್ದರೂ, ವಿಷಯವನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಮುಂದಕ್ಕೆ ಸಾಗುವುದು ಕಷ್ಟದ ಕೆಲಸ. ಅವರು ನಿಮಗಾಗಿ ಹೂವಿನ ಹಾರಗಳನ್ನು ಹಿಡಿದುಕೊಂಡು ಕಾಯುತ್ತಿಲ್ಲ.  ಪಿ- ರಾಷ್ಟ್ರಗಳ ಪೈಕಿ ಯಾರೇ ಸದಸ್ಯರು ಅಡಚಣೆಯಾಗಬಹುದು. ಮೂರ್ಖರ ಸ್ವರ್ಗದಲ್ಲಿ ಬದುಕಬೇಡಿ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಆದ ಹಿನ್ನಡೆಯ ಬಗ್ಗೆ ಮಾತನಾಡುತ್ತಾ ಖುರೇಶಿ ಹೇಳಿದ್ದರು.

2019: ನವದೆಹಲಿ: ಸರ್ಕಾgದಿಂದ ನೇಮಕಗೊಂಡಿದ್ದ ಅಖಿಲೇಶ್ ರಂಜನ್ ನೇತೃತ್ವದ ಉನ್ನತ ಸಮಿತಿಯ ಶಿಫಾರಸುಗಳನ್ನು ಕೇಂದ್ರವು ಅಂಗೀಕರಿಸಿದರೆ, ವೈಯಕ್ತಿಕ ತೆರಿಗೆ ಇಳಿಕೆಯಾಗಲಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು. ವೈಯಕ್ತಿಕ ತೆರಿಗೆಯನ್ನು ಇಳಿಸುವ ಮೂಲಕ ಮಧ್ಯಮ ವರ್ಗದ ಕೈಯಲ್ಲಿ ಇನ್ನಷ್ಟು ಹಣ ಉಳಿಯುವಂತೆ ಮಾಡಿ, ವಹಿವಾಟು ಹೆಚ್ಚಳದ ಗುರಿ ಹೊಂದಲು ಸಮಿತಿ ಉದ್ದೇಶಿಸಿದೆ ಎನ್ನಲಾಯಿತು. ಸಮಿತಿಯ ಶಿಫಾರಸಿನ ಪ್ರಕಾರ ಲಕ್ಷ ರೂ.ಗಳಿಂದ ೧೦ ಲಕ್ಷ ರೂ.ವರೆಗೆ ಆದಾಯ ಹೊಂದಿದವರು ಶೇ.೧೦ರಷ್ಟು ತೆರಿಗೆ ಪಾವತಿ ಮಾಡಬೇಕು ಮತ್ತು ೧೦ರಿಂದ ೨೦ ಲಕ್ಷ ರೂ.ವರೆಗೆ ಆದಾಯ ಹೊಂದಿದವರು ಶೇ.೨೦ರಷ್ಟು ತೆರಿಗೆ ಪಾವತಿ ಮಾಡಬೇಕು ಎಂದು ವರದಿ ತಿಳಿಸಿತು. ಸದ್ಯ . ಲಕ್ಷ ರೂ.ಗಳಿಂದ ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.೫ರಷ್ಟು ತೆರಿಗೆ ವಿಧಿಸಲಾಗುತ್ತಿದೆ. (೨೦೧೯ರ ಬಜೆಟ್ ಪ್ರಕಾರ, ಲಕ್ಷ ರೂ.ವರೆಗಿನ ಆದಾಯ ಹೊಂದಿದವರಿಗೆ ಆದಾಯ ತೆರಿಗೆ ವಿನಾಯಿತಿ ಇರಲಿದೆ.) ಲಕ್ಷ ರೂ.ಗಳಿಂದ ೧೦ ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.೨೦ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ೧೦ ಲಕ್ಷ ರೂ. ಮೇಲ್ಪಟ್ಟ ಆದಾಯಕ್ಕೆ ಶೇ.೩೦ರಷ್ಟು ತೆರಿಗೆ ವಿಧಿಸಲಾಗುತ್ತಿದೆ.ಮೂಲಗಳ ಪ್ರಕಾರ, ಐದು ಹಂತದ ತೆರಿಗೆ ಸ್ಲಾಬ್ಗಳನ್ನು ಸಮಿತಿ ಶಿಫಾರಸು ಮಾಡಿದೆ. ಇದರಲ್ಲಿ ಶೇ., ಶೇ.೧೦, ಶೇ.೨೦ ಮತ್ತು ಶೇ.೩೦ ಮತ್ತು ಶೇ.೩೫ರಷ್ಟು ಎಂಬುದಾಗಿ ಸ್ಲಾಬ್ಗಳು ಇರಲಿವೆ. ಅಂದರೆ, ೨೦ ಲಕ್ಷ ರೂ.ಗಳಿಂದ ಕೋಟಿ ರೂ.ವರೆಗೆ ಆದಾಯ ಹೊಂದಿವರಿಗೆ ಶೇ.೩೦ರಷ್ಟು ತೆರಿಗೆ ಇರಲಿದ್ದು, ಕೋಟಿ ರೂ. ಮೇಲ್ಪಟ್ಟ ಆದಾಯಕ್ಕೆ ಶೇ.೩೫ರಷ್ಟು ತೆರಿಗೆ ಇರಲಿದೆಸರ್ಕಾರವು ನೇಮಿಸಿದ್ದ ಕೇಂದ್ರೀಯ ನೇರ ತೆರಿಗೆ ಮಂಡಳಿ ಸದಸ್ಯ ಅಖೀಲೇಶ್ ರಂಜನ್ ಅವರ ನೇತೃತ್ವದ ಸಮಿತಿ ವರದಿ ತಯಾರು ಮಾಡಿದ್ದು ತನ್ನ ಶಿಫಾರಸುಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಆಗಸ್ಟ್ ೧೯ರಂದು ಸಲ್ಲಿಸಿತ್ತು. ಯಾರಿಗೆ ಎಷ್ಟು ತೆರಿಗೆ.೨೫ ಲಕ್ಷ ರೂ. - ತೆರಿಗೆ ಇಲ್ಲ, ೫ ಲಕ್ಷ ರೂ.ವರೆಗೆ - ತೆರಿಗೆ ವಿನಾಯ್ತಿ, ೧೦ ಲಕ್ಷ ರೂ.ವರೆಗೆ - ಶೇ.೧೦,  ೧೦-೨೦ ಲಕ್ಷ ರೂ.- ಶೇ.೨೦, ೨೦ ಲಕ್ಷ - ಕೋಟಿ ರೂ. - ಶೇ.೩೦, ೨ ಕೋಟಿ ರೂ. ಗಳಿಗೂ ಹೆಚ್ಚು - ಶೇ.೩೫.

No comments:

Post a Comment