Wednesday, August 7, 2019

ಇಂದಿನ ಇತಿಹಾಸ HistoryToday ಆಗಸ್ಟ್ 07


2019: ಇಸ್ಲಾಮಾಬಾದ್:  ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಭಾರತದ ಕ್ರಮಕ್ಕೆ ಸಿಟ್ಟಿಗೆದ್ದಿರುವ ಪಾಕಿಸ್ತಾನವು ಭಾರತೀಯ ರಾಯಭಾರಿಯನ್ನು ತನ್ನ ನೆಲದಿಂದ ಉಚ್ಚಾಟಿಸುವ ಮೂಲಕ ಭಾರತದ ಜೊತೆಗಿನ ರಾಜತಾಂತ್ರಿಕ ಸಂಬಂಧ ಮತ್ತು ವ್ಯಾಪಾರ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿತು. ಇಸ್ಲಾಮಾಬಾದಿನಲ್ಲಿರುವ ಭಾರತೀಯ ಹೈ ಕಮೀಷನರ್ ಅವರನ್ನು ಉಚ್ಚಾಟಿಸಲು ಮತ್ತು ಭಾರತದ ಜೊತೆಗಿನ ದ್ವಿಪಕ್ಷೀಯ ವ್ಯಾಪಾರವನ್ನು ಅಮಾನತುಗೊಳಿಸಲು ಪಾಕಿಸ್ತಾನದ ನಾಗರಿಕ ಮತ್ತು ಸೇನಾ ನಾಯಕತ್ವ ತೀರ್ಮಾನಿಸಿತು. ಪ್ರಧಾನಿ ಇಮ್ರಾನ್ ಖಾನ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಸಮಿತಿಯ (ಎನ್ ಎಸ್ ಸಿ) ಎರಡನೇ ಸಮಾವೇಶದಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಕಾಶ್ಮೀರಕ್ಕೆ ಸಂಬಂಧಿಸಿದಂತೆ  ಭಾರತ ಸರ್ಕಾರ ಕೈಗೊಂಡ ಕ್ರಮದ ಹಿನ್ನೆಲೆಯಲ್ಲಿನ ಪರಿಸ್ಥಿತಿಯ ಪರಿಶೀಲನೆಗಾಗಿ ಸಮಿತಿಯ ಸಭೆ ನಡೆದಿತ್ತು.  ‘ನಮ್ಮ ರಾಯಭಾರಿಗಳು ಇನ್ನು ನವದೆಹಲಿಯಲ್ಲಿ ಇರುವುದಿಲ್ಲ ಮತ್ತು ಭಾರತದ ರಾಯಭಾರಿಗಳು ನಮ್ಮಲ್ಲಿ ಇರುವುದಿಲ್ಲ. ತತ್ಸಮಾನ ಅಧಿಕಾರಿಗಳೆಲ್ಲರನ್ನೂ ವಾಪಸ್ ಕಳುಹಿಸಲಾಗುವುದುಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಎನ್ಎಸ್ಸಿ ಸಭೆಯ ಬಳಿಕ ನೀಡಲಾದ ಹೇಳಿಕೆಯ ಪ್ರಕಾರ, ಸಮಿತಿಯು ಭಾರತದ ಜೊತೆಗಿನ ರಾಜತಾಂತ್ರಿಕ ಬಾಂಧವ್ಯವನ್ನು ತಗ್ಗಿಸಲು ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಅಮಾನತುಗೊಳಿಸಲು ನಿರ್ಧರಿಸಿತು. ಹಾಗೆಯೇ ಎಲ್ಲ ದ್ವಿಪಕ್ಷೀಯ ವ್ಯವಸ್ಥೆಗಳನ್ನೂ ಪುನರ್ ಪರಿಶೀಲಿಸಲು ಹಾಗೂ ವಿಷಯವನ್ನು ವಿಶ್ವಸಂಸ್ಥೆಗೆ ಒಯ್ಯಲು ಸಮಿತಿ ತೀರ್ಮಾನಿಸಿತು. ಆಗಸ್ಟ್ ೧೪ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಕಾಶ್ಮೀರಿಗಳ ಜೊತೆಗೆ ಐಕ್ಯಮತ್ಯ ದಿನವಾಗಿ ಆಚರಿಸಲೂ ಸಮಿತಿ ತೀರ್ಮಾನಿಸಿತು.   ‘ಕ್ರೂರವಾದ ಭಾರತೀಯ ಜನಾಂಗವಾದೀ ಆಡಳಿತ, ಸಂಚು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಎಲ್ಲ ರಾಜತಾಂತ್ರಿಕ ವೇದಿಕೆಗಳಲ್ಲಿ ಅನಾವರಣಗೊಳಿಸಿವಂತೆ ಪ್ರಧಾನಿಯವರು ನಿರ್ದೇಶಿಸಿದರುಎಂದು ಸಭೆಯ ಬಳಿಕ ಬಿಡುಗಡೆ ಮಾಡಲಾದ ಹೇಳಿಕೆ ತಿಳಿಸಿತು. ರಕ್ಷಣಾ ಸಚಿವ ಪರ್ವೇಜ್ ಖಟ್ಟಕ್, ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ, ಜಂಟಿ ಮುಖ್ಯಸ್ಥರ ಸಿಬ್ಬಂದಿ ಸಮಿತಿಯ ಅಧ್ಯಕ್ಷ ಜನರಲ್ ಜುಬೈರ್ ಹಯಾತ್, ಸೇನಾ ಮುಖ್ಯಸ್ಥ ಜನರಲ್ ಖಮರ್ ಬಜ್ವಾ, ನೌಕಾ ಮುಖ್ಯಸ್ಥ ಅಡ್ಮಿರಲ್ ಝಾಫರ್ ಮೆಹಮೂದ್ ಅಬ್ಬಾಸಿ, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಮುಜಾಹಿದ್ ಅನ್ವರ್ ಖಾನ್, ಐಎಸ್ ಆಡಳಿತ ನಿರ್ದೇಶಕ ಜನರಲ್ ಲೆಫ್ಟಿನೆಂಟ್ ಜನರಲ್ ಫಯಾಜ್ ಹಮೀದ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.  ‘ ಆಗಸ್ಟ್ ೧೪ರ ಸ್ವಾತಂತ್ರ್ಯ ದಿನವನ್ನು ಕಾಶ್ಮೀರಿಗಳ ಜೊತೆ ಮತ್ತು ಅವರ ಸ್ವಯಂ ನಿರ್ಣಯಾಧಿಕಾರ ಹಕ್ಕಿನ ಹೋರಾಟದ ಜೊತೆ ಐಕ್ಯಮತ್ಯ ದಿನವಾಗಿ ಆಚರಿಸಲಾಗುವುದು ಮತ್ತು ಆಗಸ್ಟ್ ೧೫ರ ದಿನವನ್ನು ಕರಾಳ ದಿನವಾಗಿ ಆಚರಿಸಲಾಗುವುದುಎಂದು ಹೇಳಿಕೆ ತಿಳಿಸಿತುಹಿಂದಿನ ದಿನ  ಇಮ್ರಾನ್ ಖಾನ್ ಅವರು ನ್ಯಾಷನಲ್ ಅಸೆಂಬ್ಲಿಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾ  ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಿನ ಪರಿಣಾಮವಾಗಿ ಪುಲ್ವಾಮ ಮಾದರಿಯ ದಾಳಿಗಳು ನಡೆಯಬಹುದು, ಇದು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸಮರಕ್ಕೂ ಕಾರಣವಾಗಬಹುದು ಎಂದು ಹೇಳಿದ್ದರು.  ‘ಇದು ಸಂಭವಿಸಬಹುದು ಎಂದು ನಾನು ಈಗಾಗಲೇ ಭವಿಷ್ಯ ನುಡಿಯುತ್ತಿದ್ದೇನೆ. ಅವರು ಪುನಃ ನಮ್ಮ ಮೇಲೆ ದೂಷಿಸಲು ಯತ್ನಿಸಬಹದು. ಅವರು ಪುನಃ ನಮ್ಮ ಮೇಲೆ ದಾಳಿ ನಡೆಸಬಹುದು. ಮತ್ತು ನಾವು ಪ್ರತಿದಾಳಿ ನಡೆಸುತ್ತೇವೆಎಂದು ರಾಜಕಾರಣಿಯಾಗಿ ಪರಿವರ್ತನೆಗೊಂಡ ಕ್ರಿಕೆಟಿಗೆ ತಮ್ಮ ರಾಷ್ಟ್ರದ ಸಂಸತ್ತಿಗೆ ಹೇಳಿದ್ದರು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದನ್ನು ಖಂಡಿಸಿದ ಖಾನ್ಭಾರತ ಆಡಳಿತವಿರುವ ಕಾಶ್ಮೀರದಜನರ ಪರವಾಗಿ ಜಗತ್ತು ತನ್ನ ಸ್ವರವನ್ನು ಏರಿಸಬೇಕುಎಂದೂ ಹೇಳಿದ್ದರು.  ಎನ್ ಎಸ್ ಸಿಯ ಹಿಂದಿನ ಸಭೆ ಆಗಸ್ಟ್ ೪ರಂದು ನಡೆದಿತ್ತು. ಸಭೆಯ ಪಾಕಿಸ್ತಾನಿ ಕಡೆಯ ಕಾಶ್ಮೀರದಲ್ಲಿ ಜನವಸತಿಯನ್ನು ಗುರಿಯಾಗಿಟ್ಟು ಕ್ಲಸ್ಟರ್ ಮದ್ದುಗುಂಡನ್ನು ಭಾರತ ಬಳಸಿದ್ದ ಆರೋಪದ ಬಗ್ಗೆ ಸಭೆ  ಚರ್ಚಿಸಿತ್ತು.

2019: ನವದೆಹಲಿ:  ಲಷ್ಕರ್--ತೊಯ್ಬಾ ಸ್ಥಾಪಕ ೨೦೦೮ರ ಮುಂಬೈ ಭಯೋತ್ಪಾದಕ ದಾಳಿಯ ಪಾತಕಿ ಹಫೀಜ್ ಸಯೀದ್ ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುತ್ತಿದ್ದ ಎಂದು ಪಾಕಿಸ್ತಾನದ ಗುಜ್ರನವಾಲಾ ಭಯೋತ್ಪಾದನಾ ನಿಗ್ರಹ ನ್ಯಾಯಾಲಯಕ್ಕೆ ಪಾಕಿಸ್ತಾನಿ ತನಿಖಾ ಸಂಸ್ಥೆಯು ದೋಷಾರೋಪ ಪಟ್ಟಿಯನ್ನು  (ಚಾರ್ಜ್ಶೀಟ್) ಅಧಿಕೃತವಾಗಿ ಸಲ್ಲಿಸಿತು. ನ್ಯಾಯಾಂಗ ವ್ಯಾಪ್ತಿಯ ಕಾರಣಕ್ಕಾಗಿ ಪ್ರಕರಣವನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವುದಕ್ಕೆ ಸ್ವಲ್ಪ ಸಮಯ ಮುಂಚಿತವಾಗಿ ತನಿಖಾ ಸಂಸ್ಥೆಯು ಸಯೀದ್ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತು ಎಂದು ಸುದ್ದಿ ಮೂಲಗಳು ತಿಳಿಸಿದವು. ಲಾಹೋರಿನಿಂದ ೮೦ ಕಿಮೀ ದೂರದ ಗುಜ್ರನವಾಲಾ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ (ಎಟಿಸಿ) ಮುಂದೆ, ವಿಶ್ವಸಂಸ್ಥೆಯ ಜಾಗತಿಕ ಭಯೋತ್ಪಾದಕರ ಪಟ್ಟಿಯಲ್ಲಿ ಇರುವ ಹಫೀಜ್ ಸಯೀದನನ್ನು ಬುಧವಾರ ಹಾಜರು ಪಡಿಸಲಾಯಿತು. ಆತ ಇನ್ನೂ ತನಿಖಾ ಸಂಸ್ಥೆಯ ವಶದಲ್ಲೇ ಇದ್ದು, ಬಿಡುಗಡೆ ಮಾಡಲಾಗಿಲ್ಲ ಎಂದು ಸುದ್ದಿ ಮೂಲಗಳು ಹೇಳಿದವು. ಪ್ರಕರಣವು ಪಂಜಾಬ್ ಜಿಲ್ಲೆಯ ಮಂಡಿ ಭೌವುದ್ದೀನ್ ಜಿಲ್ಲೆಗೆ ಸಂಬಂಧ ಪಟ್ಟದ್ದಾಗಿರುವುದರಿಂದ ಅದನ್ನು ಗುಜರಾತ್ ಎಟಿಸಿ ನ್ಯಾಯಾಲಯಕ್ಕೆ (ಲಾಹೋರಿನಿಂದ ೨೦೦ ಕಿಮೀ ದೂರ) ವರ್ಗಾಯಿಸುವಂತೆ ಪ್ರಾಸೆಕ್ಯೂಷನ್ ಮನವಿ ಮಾಡಿತು ಎಂದು ಭಯೋತ್ಪಾದನಾ ನಿಗ್ರಹ ಇಲಾಖೆಯ ಅಧಿಕಾರಿ ತಿಳಿಸಿದರು. ಪ್ರಕರಣದ ಮುಂದಿನ ವಿಚಾರಣೆ ಗುಜರಾತ್ ಎಟಿಸಿಯಲ್ಲಿ ನಡೆಯಲಿದೆ.  ೨೦೦೮ರ ಮುಂಬೈ ದಾಳಿಯ ಸೂತ್ರಧಾರಿಯಾದ ಹಫೀಜ್ ಸಯೀದನನ್ನು ಜುಲೈ ೧೭ರಂದು ಭಯೋತ್ಪಾದನೆಗೆ ಹಣಕಾಸು ನೆರವು ನೀಡುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು. ಸಯೀದನನ್ನು ಬಿಗಿ ಭದ್ರತೆಯ ಲಾಹೋರಿನ ಕೋಟ್ ಲಖ್ಪತ್ ಸೆರೆಮನೆಯಲ್ಲಿ ಇರಿಸಲಾಗಿತ್ತು. ಅಮೆರಿಕದ ಖಜಾನೆ ಇಲಾಖೆಯು ಸಯೀದನನ್ನು ವಿಶೇಷವಾಗಿ ನಿಯೋಜಿತನಾದ ಜಾಗತಿಕ ಭಯೋತ್ಪಾದಕ ಎಂಬುದಾಗಿ ಘೋಷಿಸಿದ್ದು, ಲಷ್ಕರ್ ಮುಖ್ಯಸ್ಥನನ್ನು ಶಿಕ್ಷಿಸಲು ಸಾಧ್ಯವಾಗುವಂತಹ ಬಗ್ಗೆ ಮಾಹಿತಿ ನೀಡಿದವರಿಗೆ ೧೦ ದಶಲಕ್ಷ ಅಮೆರಿಕನ್ ಡಾಲರ್ ಬಹುಮಾನ ನೀಡುವುದಾಗಿ  ೨೦೧೨ರಲ್ಲೇ ಘೋಷಿಸಿತ್ತು.  ಸಯೀದ್ ನೇತೃತ್ವದ ಜೆಯುಡಿಯು ೨೦೦೮ರಲ್ಲಿ ೧೬೬ ಮಂದಿಯನ್ನು ಬಲಿ ತೆಗೆದುಕೊಂಡ ಮುಂಬೈ ಭಯೋತ್ಪಾದಕ ದಾಳಿ ನಡೆಸಿದ್ದ ಲಷ್ಕರ್ --ತೊಯ್ಬಾದ ಮುಂಚೂಣಿ ಸಂಘಟನೆ ಎಂಬುದಾಗಿ ನಂಬಲಾಗಿದೆ. ೨೦೦೮ರ ಡಿಸೆಂಬರಿನಲ್ಲಿ ಸಯೀದನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ ೧೨೬೭ಕ್ಕೆ ಸೇರ್ಪಡೆ ಮಾಡಿಜಾಗತಿಕ ಭಯೋತ್ಪಾದಕಎಂಬುದಾಗಿ ಘೋಷಿಸಲಾಗಿತ್ತು. ಸಿಟಿಡಿಯು ಜುಲೈ ೩ರಂದು ೨೩ ಪ್ರಥಮ ಮಾಹಿತಿ ವರದಿಗಳನ್ನು (ಎಫ್ಐಆರ್) ಸಯೀದ್ ಸೇರಿದಂತೆ ೧೩ ಮಂದಿ ಜೆಯುಡಿ ನಾಯಕರ ವಿರುದ್ಧ ದಾಖಲಿಸಿತ್ತು. ಎಲ್ಲರ ವಿರುದ್ಧ ಪಂಜಾಬ್ ಪ್ರಾಂತದ ವಿವಿಧ ನಗರಗಳಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸಿದ ಆರೋಪವನ್ನು ಅದು ಹೊರಿಸಿತ್ತು.  ಭಾರತದ ಪುಲ್ವಾಮದಲ್ಲಿ ೪೪ ಮಂದಿ ಭಾರತೀಯ ಯೋಧರನ್ನು ಬಲಿಪಡೆದ ಆತ್ಮಹತ್ಯಾ ಭಯೋತ್ಪಾದಕ ದಾಳಿಯ ಬಳಿಕ ಹೆಚ್ಚಿದ ಅಂತಾರಾಷ್ಟ್ರೀಯ ಒತ್ತಡದ ಪರಿಣಾಮವಾಗಿ ಇಮ್ರಾನ್ ಖಾನ್ ಸರ್ಕಾರವು ಅಧಿಕಾರಕ್ಕೆ ಬಂದಂದಿನಿಂದ ಜೆಯುಡಿ ಮತ್ತು ಅದರ ದತ್ತಿ ವಿಭಾಗ್ವಾದ ಫಲಾಹ್--ಇನ್ಸಾನಿಯತ್ ಫೌಂಡೇಷನ್ಗೆ(ಎಫ್ಐಎಫ್) ಸೇರಿದ ಸೆಮಿನರಿಗಳು ಮತ್ತು ಮಸೀದಿ ಸಹಿತವಾದ ಆಸ್ತಿಪಾಸ್ತಿಗಳ ಮೇಲೆ ಹದ್ದುಗಣ್ಣು ಇಟ್ಟಿತ್ತು. ಪಾಕಿಸ್ತಾನಿ ಸರ್ಕಾರವು ಜೆಯುಡಿಯ ಎರಡನೇ ಹಂತದ ನಾಯಕನಾದ ಸಯೀದ್ ಭಾವ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಕೂಡಾ ಬಹಿರಂಗ ಭಾಷಣ ಮತ್ತು ಭಯೋತ್ಪಾದನೆಗೆ ಹಣ ಒದಗಿಸಿದ ಆರೋಪದಲ್ಲಿ ಬಂಧಿಸಿತ್ತು. ಹಫೀಜ್ ಸಯೀದ್ ಮತ್ತು ಆತನ ೧೨ ಮಂದಿ ನಿಕಟವರ್ತಿಗಳ ವಿರುದ್ಧ ೨೩ ಪ್ರಕರಣಗಳಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸಿದ ಪ್ರಕರಣಗಳನ್ನು ದಾಖಲಿಸಿದ್ದು, ಇದಕ್ಕೆ ನಿಖರ್ ದಾಖಲೆಗಳು ಪತ್ತೆಯಾಗಿವೆ ಎಂದು ಸಿಟಿಡಿ ಹೇಳಿತ್ತು. ವಿವಿಧ ಆಸ್ತಿಗಳನ್ನು ಟ್ರಸ್ಟ್/ ಲಾಭರಹಿತ ಸಂಘಟನೆಗಳ (ಎನ್ ಪಿಒ) ಹೆಸರಿನಲ್ಲಿ ಮಾಡಿ ಅವುಗಳ ಮೂಲಕ ಭಯೋತ್ಪಾದನೆಗಾಗಿ ಹಣಕಾಸು ಸಂಗ್ರಹಿಸಿದ್ದಕ್ಕಾಗಿ ಲಾಹೋರ್, ಗುಜ್ರನವಾಲ ಮತ್ತು ಮುಲ್ತಾನ್ ನಾಯಾಲಯಗಳಲ್ಲಿ  ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್-ಅನ್ಫಾಲ್ ಟ್ರಸ್ಟ್, ದಾವತುಲ್ ಇರ್ಶಾದ್ ಟ್ರಸ್ಟ್, ಮುವಾಜ್ ಬಿಜ್ ಜಬಲ್ ಟ್ರಸ್ಟ್ ಇತ್ಯಾದಿ ಇವುಗಳಲ್ಲಿ ಸೇರಿವೆ.  ೨೦೧೯ರ ಜನವರಿಯಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯ ನೀಡಿದ ನಿರ್ದೇಶನದ ಅಡಿಯಲಿ ಜೆಯುಡಿ ಮತ್ತು ಎಲ್ಇಟಿ ಮತ್ತಿತರ ಸಂಘಟನೆಗಳ ವಿರುದ್ಧರಾಷ್ಟ್ರೀಯ ಕ್ರಿಯಾ ಯೋಜನೆಅನುಷ್ಠಾನಗೊಳಿಸಲಾಗಿದೆ.  ವಿಶ್ವಸಂಸ್ಥೆಯ ದಿಗ್ಬಂಧನ ಹಿನ್ನೆಲೆಯಲ್ಲಿ ಸಂಘಟನೆಗಳ ವಿರುದ್ಧ ತನಿಖೆ ನಡೆಸಲಾಗಿದೆ ಎಂದು ಸಿಟಿಡಿ ಹೇಳಿತು.  ‘ಭಯೋತ್ಪಾದನೆಗೆ ಹಣ ಒದಗಿಸಲು ಸಂಗ್ರಹಿಸಿದ ಹಣದ ಮೂಲಕ ಶಂಕಿತರು ಆಸ್ತಿಪಾಸ್ತಿ ಮಾಡಿಕೊಂಡಿದ್ದಾರೆ. ಭಯೋತ್ಪಾದನೆಗೆ ಇನ್ನಷ್ಟು ಹಣ ಒದಗಿಸಲು ಅವರು ಆಸ್ತಿಗಳನ್ನು ಬಳಸುತ್ತಿದ್ದಾರೆ. ಭಯೋತ್ಪಾದನೆಗೆ ಹಣಕಾಸು ಒದಗಿಸುವುದು, ಹಣ ವರ್ಗಾವಣೆ ಸೇರಿದಂತೆ ಬಹು ಅಪರಾಧಗಳನ್ನು ೧೯೯೭ರ ಭಯೋತ್ಪಾದನೆ ನಿಗ್ರಹ ಕಾಯ್ದೆಯ ಅಡಿಯಲ್ಲಿ ಅವರು ಮಾಡಿದ್ದಾರೆ. ಅವರ ವಿರುದ್ಧ ಭಯೋತ್ಪಾದನೆ ನಿಗ್ರಹ ನ್ಯಾಯಾಲಯಗಳಲ್ಲಿ (ಎಟಿಸಿ) ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಟಿಡಿ ತಿಳಿಸಿತು. ಮಕ್ಕಿ, ಮಲಿಕ್ ಜಾಫರ್ ಇಕ್ಬಾಲ್, ಅಮೀರ್ ಹಮ್ಜ, ಮುಹಮಮ್ಮದ ಯಾಹ್ಯಾ ಅಜೀಜ್, ಮುಹಮ್ಮದ್ ನಯೀಮ್ ಎಸ್ ಎಚ್, ಮೊಹ್ಸಿನ್ ಬಿಲಾ, ಅಬ್ದುಲ್ ರಖೀಬ್, ಅಹ್ಮದ್ ದೌದ್, ಮುಹಮ್ಮದ್ ಅಯೂಬ್, ಅಬ್ದುಲ್ಲ ಉಬೈದ್, ಮುಹಮ್ಮದ ಅಲಿ ಮತ್ತು ಅಬ್ದುಲ್ ಗಫಾರ್ ಅವರು ಇತರ ಶಂಕಿತರು. ಇತರ ಶಂಕಿತರು ಸರ್ಕಾರವು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಬಳಿಕ ತಲೆಮರೆಸಿಕೊಂಡಿದ್ದಾರೆ ಎಂದು ವರದಿ ತಿಳಿಸಿತು.

2019: ನವದೆಹಲಿ: ಪಾಕಿಸ್ತಾನ ಮೂಲದ ಜೈಶ್--ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ  ಭದ್ರತಾಪಡೆಗಳು ಮತ್ತು ದೇಶದ ಆರ್ಥಿಕ ರಾಜಧಾನಿಯಾಗಿರುವ ಮುಂಬೈ ಸೇರಿದಂತೆ ಆರ್ಥಿಕವಾಗಿ ಪ್ರಮುಖವಾಗಿರುವ ನಗರಗಳನ್ನು ತನ್ನ ದಾಳಿಗೆ ಗುರಿಮಾಡಿಕೊಂಡಿದೆ ಎಂದು ಭಾರತದ ಗುಪ್ತಚರ ಸಂಸ್ಥೆಗಳು ಸರ್ಕಾರಕ್ಕೆ ಸುಳಿವು ನೀಡಿದವು.  ‘ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿ ಭಾರತದ ಸರ್ಕಾರದ ನಿರ್ಧಾರದ ಪರಿಣಾಮವಾಗಿ ಪುಲ್ವಾಮ ಮಾದರಿಯ ಘಟನೆಗಳು ಘಟಿಸಬಹುದು, ಅಷ್ಟೇ ಅಲ್ಲ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸಮರಕ್ಕೂ ಇದು ನಾಂದಿಯಾಗಬಹುದು ಎಂಬುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಘೋಷಿಸಿದ ಕೆಲವೇ ದಿನಗಳಲ್ಲಿ ಗುಪ್ತಚರ ಸಂಸ್ಥೆಗಳು ಸೂಚನೆ ನೀಡಿದವು. ಇಮ್ರಾನ್ ಖಾನ್ ಅವರ ಹೇಳಿಕೆಯನ್ನು ಪಾಕಿಸ್ತಾನವು ಭಯೋತ್ಪಾದಕ ಗುಂಪುಗಳಿಗೆ ತನ್ನ ಬೆಂಬಲವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವುದರ ಸೂಚನೆ ಎಂಬುದಾಗಿ ಭಾವಿಸಲಾಗಿದೆ. ಭಯೋತ್ಪಾದಕ ಗುಂಪುಗಳನ್ನು ಭಾರತಕ್ಕೆ ಕಳುಹಿಸಲೂ ಅದು ಪ್ರಯತ್ನಿಸುವ ಸಾಧ್ಯತೆಗಳಿವೆ ಎಂದು ಗುಪ್ತಚರ ಮೂಲಗಳು ಹೇಳಿದವು. ಇಮ್ರಾನ್ ಖಾನ್ ಅವರು ಹೇಳಿಕೆ ನೀಡುತ್ತಿದ್ದ ವೇಳೆಯಲ್ಲೇ ಜೈಶ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರನ ಕಿರಿಯ ಸಹೋದರ ರೌಫ್ ಅಜ್ಗರ್ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ತೆರಳಿ ಸಭೆಗಳನ್ನೂ ನಡೆಸಿದ್ದಾನೆ ಎಂದು ಹಿರಿಯ ಭದ್ರತಾ ಅಧಿಕರಿಯೊಬ್ಬರು ಹೇಳಿದರು. ರೌಫ್ ಅಜ್ಗರನನ್ನು ಎರಡು ನೆರೆರಾಷ್ಟ್ರಗಳ ನಡುವಣ ಗಡಿಯ ಸಮೀಪಕ್ಕೆ ಕಳುಹಿಸಿರುವುದು ಮತ್ತು ಪಂಜಾಬಿನ ಶಿಬಿರಗಳಿಂದ ಹೊಸದಾಗಿ ನೇಮಕ ಮಾಡಲಾಗಿದ್ದ ಹಲವಾರು ಜೈಶ್ ಉಗ್ರರನ್ನು ಪಂಜಾಬ್ ಗಡಿಯತ್ತ ರವಾನಿಸಿರುವ ಬಗೆಗಿನ ವರದಿಗಳು ಪಾಕ್ ಆಕ್ರಮಿತ ಕಾಶ್ಮೀರದಿಂದ ಬಂದಿರುವುದು ಭಯೋತ್ಪಾದಕ ದಾಳಿ ಶಂಕೆಯನ್ನು ಇನ್ನಷ್ಟು ಹೆಚ್ಚಿತು. ಮೂಲ ಸವಲತ್ತು ಮತ್ತು ಆರ್ಥಿಕ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಗುಪ್ತಚರ ಸಂಸ್ಥೆ ಅಂದಾಜು ಮಾಡಿದೆ ಎಂದು ಉನ್ನತ ಸರ್ಕಾರಿ ಅಧಿಕಾರಿ ತಿಳಿಸಿದರು.  ಜೈಶ್ --ಮೊಹಮ್ಮದ್ ಕಣ್ಣಿಟ್ಟಿರುವ ಗುರಿಗಳಲ್ಲಿ ಮುಂಬೈ ಒಂದಾಗಿರುವ ಸಾಧ್ಯತೆ ಇದೆ ಇರುವ ಬಗ್ಗೆ ತನಗೆ ಸುಳಿವುಗಳು ಲಭಿಸಿವೆ ಎಂದು ಗುಪ್ತಚರ ದಳ ಶಂಕಿಸಿತು. ತ್ರಿಸದಸ್ಯ ಜೈಶ್ ತಂಡವೊಂದಕ್ಕೆ ಮುಂಬೈ ಮೇಲೆ ದಾಳಿ ನಡೆಸುವ ಕೆಲಸವನ್ನು ಅನುಷ್ಠಾನಗೊಳಿಸುವ ಹೊಣೆ ವಹಿಸಲಾಗಿದೆ ಮತ್ತು ಸ್ಥಳೀಯನಿದ್ರಾ ಘಟಕಗಳನ್ನು ಇದಕ್ಕಾಗಿ ಸಕ್ರಿಯಗೊಳಿಸುವ ಹೊಣೆಗಾರಿಕೆಯನ್ನೂ ಇದೇ ತಂಡಕ್ಕೆ ವಹಿಸಲಾಗಿದೆ ಎಂದು ಮೂಲಗಳು ಹೇಳಿದವು. ಈ ಪರಿಸ್ಥಿತಿಯ ಸಾಧ್ಯತೆಯನ್ನು ಭದ್ರತಾಸಂಸ್ಥೆಗಳೂ ನಿರೀಕ್ಷಿಸಿದ್ದು, ಹಿನ್ನೆಲೆಯಲ್ಲೇ ಗಡಿ ನಿಯಂತ್ರಣ ರೇಖೆ ಮತ್ತು ಅದರಾಚೆಯ ಪ್ರದೇಶದಲ್ಲಿ ಸೇನೆ ಮತ್ತು ಅರೆ ಸೇನಾ ಪಡೆಗಳ ಕೊನೆಗಳಿಗೆಯ ಭದ್ರತಾ ಸಿದ್ದತೆಯ ಪರಿಶೀಲನೆಗಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಧಾವಿಸಿದರು.  ಪ್ರಮುಖ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಕೇಂದ್ರವು ರಜ್ಯ ಪೊಲೀಸ್ ಸಂಸ್ಥೆಗಳಿಗೂ ಸೂಚನೆ ನೀಡಿದೆ ಎಂದು ಮೂಲಗಳು ಹೇಳಿದವು.

ನವದೆಹಲಿ: ತೀವ್ರ ಹೃದಯಾಘಾತದಿಂದ  ಹಿಂದಿನ ರಾತ್ರಿ ಕೊನೆಯುಸಿರೆಳೆದಿದ್ದ ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಹಾಗೂ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನವದೆಹಲಿಯ ಲೋಧಿ ರಸ್ತೆಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ  ಈದಿನ ಸಂಜೆ ನಡೆಯಿತು. ಇದರೊಂದಿಗೆ ಭಾರತದ ಧೀಮಂತ ಮಹಿಳೆ ಪಂಚಭೂತಗಳಲ್ಲಿ ಲೀನವಾದರು. ಲೋಧಿ ಚಿತಾಗಾರದಲ್ಲಿ ಪುತ್ರಿ ಬಾನ್ಸುರಿ ಸ್ವರಾಜ್ ಅಂತಿಮ ವಿಧಾನಗಳನ್ನು ನೆರವೇರಿಸಿದರು.. ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ಮುಖಂಡರಾದ ಅಮಿತ್ ಶಾ, ಜೆಪಿ ನಡ್ಡಾ, ರಾಜನಾಥ್ ಸಿಂಗ್ ಸುಷ್ಮಾ ಅವರಿಗೆ ಅಂತಿಮ ಗೌರವ ಸಲ್ಲಿಸಿದರು. ಬೆಳಗ್ಗೆ ನವದೆಹಲಿಯ ನಿವಾಸದಲ್ಲಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಮಧ್ಯಾಹ್ನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಹಿರಿಯ ಮುಖಂಡರು, ಗಣ್ಯರು ಅಂತಿಮ ದರ್ಶನ ಪಡೆದಿದ್ದರು. ಬಳಿಕ ಲೋಧಿ ಚಿತಾಗಾರಕ್ಕೆ ಪಾರ್ಥೀವ ಶರೀರವನ್ನು ತರಲಾಯಿತು ಎಂದು ವರದಿ ತಿಳಿಸಿತು.

ಇಂದಿನ ಇತಿಹಾಸ HistoryToday ಆಗಸ್ಟ್ 07 (2018+ ಹಿಂದಿನದಕ್ಕೆ ಇಲ್ಲಿ ಕ್ಲಿಕ್ ಮಾಡಿರಿ)

-  (ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment