ನಾನು ಮೆಚ್ಚಿದ ವಾಟ್ಸಪ್

Monday, August 12, 2019

ಕುಂಭದ್ರೋಣ ಮಳೆ ಪ್ರವಾಹಕ್ಕೆ ಕೊಚ್ಚಿಹೋದ ಮನೆ

ಕುಂಭದ್ರೋಣ ಮಳೆ ಪ್ರವಾಹಕ್ಕೆ ಕೊಚ್ಚಿಹೋದ ಮನೆ

ನವದೆಹಲಿ: ದಕ್ಷಿಣ ಭಾರತವನ್ನು ನಲುಗಿಸಿರುವ ಕುಂಭದ್ರೋಣ ಮಳೆ ಇದೀಗ ಉತ್ತರಾಖಂಡಕ್ಕೂ ಕಾಲಿರಿಸಿದ್ದು, ಚಮೋಲಿ ಜಿಲ್ಲೆಯಲ್ಲಿ 2019 ಆಗಸ್ಟ್ 12ರ ಸೋಮವಾರ ಬೆಳಗ್ಗೆ ಎರಡು ಮನೆಗಳನ್ನು ಬಲಿತೆಗೆದುಕೊಂಡಿದೆ.

ಮೇಘಸ್ಫೋಟದೊಂದಿಗೆ ಸುರಿದ ಮಳೆಗೆ ಉಂಟಾದ ದಿಢೀರ್ ಪ್ರವಾಹದಲ್ಲಿ ಮನೆ ಕುಸಿದು ಕೊಚ್ಚಿ ಹೋದಾಗ ಒಬ್ಬ ಮಹಿಳೆ ಮತ್ತು ಒಂಬತ್ತು ವರ್ಷದ  ಆಕೆಯ ಪುತ್ರಿ ಸಾವನ್ನಪ್ಪಿದರು ಮತ್ತು ಇನ್ನೊಬ್ಬ ವ್ಯಕ್ತಿ ಪ್ರವಾಹದಲ್ಲಿ ಕೊಚ್ಚಿಹೋದ ಎಂದು ಸುದ್ದಿ ಸಂಸ್ಥೆ ವರದಿ ತಿಳಿಸಿದೆ.

ಮನೆ ಕುಸಿದು ಕೊಚ್ಚಿ ಹೋದ ಪರಿಣಾಮವಾಗಿ ಸಾವನ್ನಪ್ಪಿದ ಮಹಿಳೆಯನ್ನು ರೂಪಾದೇವಿ (35) ಎಂಬುದಾಗಿ ಗುರುತಿಸಲಾಗಿದೆ. ಸೋಮವಾರ ನಸುಕಿನಲ್ಲಿ ಈ ದುರ್ಘಟನೆ ಸಂಭವಿಸಿತು.
ಉತ್ತರಾಖಂಡದ ಚಮೋಲಿ ಜಿಲ್ಲೆಯ ಲಂಖಿ ಗ್ರಾಮದ ವಿಕಾಸ್ ಖಂಡ್ ಘಟ್ಟದಲ್ಲಿ ಪ್ರವಾಹಕ್ಕೆ ತುತ್ತಾಗಿ ಮನೆ ಕೊಚ್ಚಿ ಹೋಗುತ್ತಿರುವ  ಈ ವಿಡಿಯೋ ಇದೀಗ ವೈರಲ್ ಆಗಿದೆ.

ಸ್ಥಳೀಯ ನಿವಾಸಿಗಳು ಮತ್ತು  ವಿಕೋಪ ಸ್ಪಂದನಾ ಪಡೆ (ಎಸ್ ಡಿಆರ್ ಎಫ್) ತಂಡ ಸ್ಥಳಕ್ಕೆ ಧಾವಿಸಿದ್ದು, ಶೋಧ, ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ವರದಿಗಳು ಹೇಳಿವೆ.

ವಿಡಿಯೋ ವೀಕ್ಷಿಸಲು ಕೆಳಗಿನ ಕೊಂಡಿ ಚಿತ್ರ  ಕ್ಲಿಕ್ ಮಾಡಿರಿ:


No comments:

Post a Comment