ನಾನು ಮೆಚ್ಚಿದ ವಾಟ್ಸಪ್

Tuesday, September 4, 2018

ರೂಪಾಯಿ ಬೆಲೆ ಕುಸಿತ, ಚಿನ್ನಕ್ಕೆ ಬಂತು ಬೆಲೆ!


ರೂಪಾಯಿ ಬೆಲೆ ಕುಸಿತ, ಚಿನ್ನಕ್ಕೆ ಬಂತು ಬೆಲೆ!

ಮುಂಬೈ:  ಡಾಲರ್ ಎದುರು ರೂಪಾಯಿಯ ಬೆಲೆ ನಿರಂತರ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಇದೀಗ ಚಿನ್ನಕ್ಕೆ ಬೆಲೆ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ) ಹೆಚ್ಚು ಕಡಿಮೆ 9 ವರ್ಷಗಳ ಬಳಿಕ ಇದೆ ಮೊದಲ ಬಾರಿಗೆ 2017-18ರ ವಿತ್ತ ವರ್ಷದಲ್ಲಿ 8.46 ಟನ್ ಚಿನ್ನವನ್ನು ಖರೀದಿಸಿದೆ.

2018ರ ಜೂನ್
30 ವೇಳೆಗೆ ಭಾರತೀಯ ರಿಸರ್ವ್ ಬ್ಯಾಂಕ್ 566.23 ಟನ್ ಚಿನ್ನವನ್ನು ಹೊಂದಿತ್ತು. 2017 ಜೂನ್ 30 ವೇಳೆಗೆ ಆರ್ ಬಿ ಹೊಂದಿದ್ದ ಚಿನ್ನದ ಪ್ರಮಾಣ 557.77 ಟನ್ ಮಾತ್ರ.

ಅಂದರೆ ಒಂದು ವರ್ಷದ ಅವಧಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಚಿನ್ನದ ಸಂಗ್ರಹವನ್ನು 8.46 ಟನ್ನಿನಷ್ಟು ಹೆಚ್ಚಿಸಿಕೊಂಡಿದೆ ಎಂದು ಬ್ಯಾಂಕಿನ 2017-18 ವಾರ್ಷಿಕ ವರದಿ 2018 ಸೆಪ್ಟೆಂಬರ್ 4 ಮಂಗಳವಾರ ತಿಳಿಸಿದೆ.

ಹಿಂದೆ, 2009 ನವೆಂಬರಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನ ಖರೀದಿಸಿತ್ತು. ಆಗ  ಅದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (ಐಎಂಎಫ್) 200 ಟನ್ ಹಳದಿ ಲೋಹವನ್ನು ಖರೀದಿಸಿತ್ತು.

ಬ್ಯಾಂಕಿಂಗ್ ಇಲಾಖೆ  ಆಸ್ತಿಯ ರೂಪದಲ್ಲಿ ಹೊಂದಿರುವ ಚಿನ್ನದ ಮೌಲ್ಯ  2018 ಜೂನ್ 30 ವೇಳೆಗೆ ಶೇಕಡಾ 11.12 ರಷ್ಟು ಅಂದರೆ 69,674 ಕೋಟಿ ರೂಪಾಯಿಗಳಿಗೆ ಏರಿದೆ. 2017 ಜೂನ್ 30 ವೇಳೆಗೆ ಇದು 62,702 ಕೋಟಿ ರೂಪಾಯಿ ಆಗಿತ್ತು.ಮೂಲತಃ ಡಾಲರ್ ಎದುರು ರೂಪಾಯಿ ಬೆಲೆ ಕುಸಿದ ಪರಿಣಾಮವಾಗಿ ಮತ್ತು  ವರ್ಷದಲ್ಲಿ 8.44 ಟನ್ ಚಿನ್ನದ ಸೇರ್ಪಡೆಯ ಪರಿಣಾಮವಾಗಿ ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿರುವ ಆಸ್ತಿ ರೂಪದ ಚಿನ್ನದ ಮೌಲ್ಯ ಹೆಚ್ಚಿದೆ  ಎಂದು ವರದಿ ಹೇಳಿದೆ.
ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿ:




No comments:

Post a Comment