ಇಂದಿನ ಇತಿಹಾಸ History Today ಸೆಪ್ಟೆಂಬರ್ 19
2018: ನವದೆಹಲಿ: ಒಂದೇ ಉಸಿರಿಗೆ ತ್ರಿವಳಿ ತಲಾಖ್ ಪಠಿಸುವ ಮೂಲಕ ವಿಚ್ಛೇದನ
ನೀಡುವ ಪದ್ಧತಿಯನ್ನು ದಂಡನೀಯ ಅಪರಾಧವನ್ನಾಗಿ ಮಾಡುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟವು ಮಂಜೂರಾತಿ
ನೀಡಿದೆ ಎಂದು ಕಾನೂನು ಸಚಿವ ರವಿ ಶಂಕರ ಪ್ರಸಾದ್ ಅವರು ಇಲ್ಲಿ ತಿಳಿಸಿದರು. ಸದರಿ ವಿಚ್ಛೇದನ ಪದ್ಧತಿಯನ್ನು
ಸುಪ್ರೀಂಕೋರ್ಟ್ ನಿಷೇಧಿಸಿದ ಬಳಿಕವೂ ಪದ್ಧತಿ ಎಗ್ಗಿಲ್ಲದೆ
ಮುಂದುವರೆಯುತ್ತಿರುವುದರಿಂದ ಸುಗೀವಾಜ್ಞೆ ತರುವ ಪರಿಸ್ಥಿತಿ ಎದುರಾಯಿತು ಎಂದು ಸಚಿವರು ತಿಳಿಸಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ’ರಾಜ್ಯ ಸಭೆಯಲ್ಲಿ ಅಂಗೀಕಾರಕ್ಕಾಗಿ ಬಾಕಿ ಉಳಿದಿರುವ
ಮುಸ್ಲಿಮ್ ಮಹಿಳಾ ಮದುವೆ ಹಕ್ಕುಗಳ ಸಂರಕ್ಷಣೆ ಮಸೂದೆಯ ಅಂಗೀಕಾರಕ್ಕೆ ಕಾಂಗ್ರೆಸ್ ಪಕ್ಷವು ಮತಬ್ಯಾಂಕ್
ರಾಜಕಾರಣಕ್ಕಾಗಿ ಸಹಕಾರ ನೀಡುತ್ತಿಲ್ಲ’ ಎಂದು ಆಪಾದಿಸಿದರು. ಸುಗ್ರೀವಾಜ್ಞೆಯ
ವಿವರಗಳನ್ನು ಉಲ್ಲೇಖಿಸಿದ ಸಚಿವರು ಅಪರಾಧವನ್ನು ಶಿಕ್ಷಾರ್ಹವನ್ನಾಗಿ ಮಾಡಲು ಮಹಿಳೆ ಅಥವಾ ಆಕೆಯ ರಕ್ತ
ಸಂಬಂಧಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಹೇಳಿದರು. ಅಪರಾಧಕ್ಕೆ ಸಂಬಂಧಿಸಿದಂತೆ ಸಂತ್ರಸ್ಥ
ಮಹಿಳೆ ಒಪ್ಪಿಗೆ ನೀಡಿದ ಬಳಿಕ ಮ್ಯಾಜಿಸ್ಟ್ರೇಟ್ ಮುಂದೆ ರಾಜಿಯನ್ನೂ ಮಾಡಿಕೊಳ್ಳಬಹುದು ಎಂದು ಸಚಿವರು
ನುಡಿದರು. ಕಾಂಗ್ರೆಸ್ ಪಕ್ಷವನ್ನು ಮಹಿಳೆಯೇ ಮುನ್ನಡೆಸುತ್ತಿರುವುದರ ಹೊರತಾಗಿಯೂ ಆ ಪಕ್ಷವು ಮಸೂದೆ
ಅಂಗೀಕಾರಕ್ಕೆ ಬೆಂಬಲ ನೀಡಿಲ್ಲ ಎಂಬುದು ನನ್ನ ಗಂಭೀರ ಆರೋಪ ಎಂದು ಸಚಿವ ರವಿ ಶಂಕರ ಪ್ರಸಾದ್ ಹೇಳಿದರು.
ಒಂದೇ ಉಸಿರಿಗೆ ತ್ರಿವಳಿ ತಲಾಖ್ ಉಸುರಿ ವಿಚ್ಛೇದನ ನೀಡುವ ಪದ್ಧತಿ ’ಬರ್ಬರ ಮತ್ತು ಅಮಾನವೀಯ’ ಎಂದು ಬಣ್ಣಿಸಿದ ಸಚಿವರು ಸುಮಾರು ೨೨ ರಾಷ್ಟ್ರಗಳು
ತ್ರಿವಳಿ ತಲಾಖ್ ಪದ್ಧತಿಯನ್ನು ನಿಯಂತ್ರಣಕ್ಕೆ ಒಳಪಡಿಸಿವೆ. ಏನಿದ್ದರೂ ಭಾರತದಂತಹ ಜಾತ್ಯತೀತ ರಾಷ್ಟ್ರದಲ್ಲಿ
ಮತಬ್ಯಾಂಕ್ ರಾಜಕೀಯಕ್ಕಾಗಿ ಲಿಂಗ ನ್ಯಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿತ್ತು ಎಂದು ನುಡಿದರು.
’ನಾನು ಸೋನಿಯಾಜಿ ಅವರಿಗೆ ಮತ್ತೊಮ್ಮೆ ಮನವಿ ಮಾಡುತ್ತೇನೆ-
ಈ ಸುಗ್ರೀವಾಜ್ಞೆಯನ್ನು ಲಿಂಗ ನ್ಯಾಯ ವ್ಯವಸ್ಥೆಯ ಜಾರಿಗಾಗಿ ರಾಷ್ಟ್ರದ ಹಿತವನ್ನು ಗಮನದಲ್ಲಿ ಇರಿಸಿಕೊಂಡು
ಈ ಸುಗ್ರೀವಾಜ್ಞೆಯನ್ನು ತರಲಾಗಿದೆ, ಮತ ಬ್ಯಾಂಕ್ ರಾಜಕಿಯದಿಂದ ಮೇಲೆದ್ದು ಮಹಿಳೆಯರ ನ್ಯಾಯದ ಹಿತ
ರಕ್ಷಣೆಗಾಗಿ ಇದನ್ನು ಅಂಗೀಕರಿಸಲು ನೆರವಾಗಿ’ ಎಂದು ಕಾನೂನು ಸಚಿವರು
ಸಂಪುಟ ಸಭೆಯ ಬಳಿಕ ಹೇಳಿದರು. ರಾಜ್ಯಸಭೆಯಲ್ಲಿ ನನೆಗುದಿಗೆ ಬಿದ್ದಿರುವ ಮಸೂದೆಯ ಅಂಗೀಕಾರಕ್ಕೆ ನೆರವಾಗುವಂತೆ
ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರಿಗೂ
ಸಚಿವರು ಮನವಿ ಮಾಡಿದರು. ಲೋಕಸಭೆಯು ಈಗಾಗಲೇ ಮಸೂದೆಯನ್ನು ಅಂಗೀಕರಿಸಿದ್ದು, ರಾಜ್ಯಸಭೆಯಲ್ಲಿ ಅದನ್ನು
ಅಂಗೀಕರಿಸಲು ಸರ್ಕಾರಕ್ಕೆ ಸಂಖ್ಯಾ ಕೊರತೆ ಕಾಡುತ್ತಿದೆ. ಸುಪ್ರೀಂಕೋಟ್ ಕಳೆದ ವರ್ಷ ಒಂದೇ ಉಸಿರಿನ
ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಿತ್ತು. ಆದರೂ ಈ ಪದ್ಧತಿ ಮುಂದುವರೆಯುತ್ತಿರುವುದರಿಂದ ಅದನ್ನ
ದಂಡನೀಯ ಅಪರಾಧವನ್ನಾಗಿ ಮಾಡಲು ಮಸೂದೆಯನ್ನು ತರಲಾಗಿತ್ತು.
2017:
ಮುಂಬಯಿ : ಮುಂಬಯಿ ಮಹಾ ನಗರದಲ್ಲಿ ಈದಿನ ಮಧ್ಯಾಹ್ನದಿಂದ ಜಡಿ ಮಳೆ ಸುರಿಯಲು ಆರಂಭವಾಯಿತು. ಮಳೆಯ ಜತೆಗೆ ಗುಡುಗು, ಸಿಡಿಲಿನ ಆರ್ಭಟ ಕೂಡ ಮೇಳೈಸಿದ್ದು ಜನರಲ್ಲಿ ಅನಾಹುತಗಳ
ಬಗ್ಗೆ ಭಯ, ಆತಂಕ ಆವರಿಸಿತು. ಬಿಎಂಸಿ ಮಹಾ ನಗರದ ಆದ್ಯಂತ ಕಟ್ಟೆಚ್ಚರ ವಹಿಸಿತು. ಜಡಿ ಮಳೆ ಸುರಿಯುತ್ತಿರುವ ಹೊರತಾಗಿಯೂ ಎಲ್ಲಿಯ ಮಳೆ ನೀರು ತುಂಬಿಕೊಂಡ ಅಥವಾ ಸಾರಿಗೆ ಸೇವೆಗಳು ಬಾಧಿತವಾದ ವರದಿಗಳು ರಾತ್ರಿಯವರೆಗೆ ಬಂದಿರಲಿಲ್ಲ. ಕಳೆದ ಆಗಸ್ಟ್ 29ರಂದು ಮುಂಬಯಿ ಮಹಾ ನಗರದಲ್ಲಿ 300 ಎಂಎಂ ಮಳೆ ಸುರಿದಿತ್ತು. ಪರಿಣಾಮವಾಗಿ ಸಾರಿಗೆ ಸೇವೆಗಳು ತೀವ್ರ ಅಡಚಣೆಗೆ ಗುರಿಯಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು. ಕಳೆದ
ಭಾನುವಾರ, ಸೆಪ್ಟೆಂಬರ್ 17ರಂದು ಹವಾಮಾನ
ಇಲಾಖೆಯು ಮುಂಬಯಿ ಮತ್ತು ಕರಾವಳಿ ಕೊಂಕಣ ಪ್ರದೇಶದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿತ್ತು. ಹಾಗಿದ್ದರೂ ಸೆ.18ರಂದು ಮಹಾನಗರದಲ್ಲಿ ಭಾರೀ ಮಳೆಯೇನೂ ಸುರಿದಿರಲಿಲ್ಲ. ಈದಿನ ಬೆಳಗಾಗುತ್ತಲೇ ಮುಂಬಯಿಗರು ದಟ್ಟನೆಯ ಮೋಡ ಕವಿದ ವಾತಾವರಣಕ್ಕೆ ಸಾಕ್ಷಿಯಾದರು. ಮಧ್ಯಾಹ್ನದ ವೇಳೆಗೆ ಜಡಿ ಮಳೆ ಸುರಿಯಲಾರಂಭಿಸಿ ಅದರೊಂದಿಗೆ ಗುಡುಗು, ಸಿಡಿಲಿನ ಆರ್ಭಟ ಕೂಡ ಮೇಳೈಸಿತು. ದಕ್ಷಿಣ
ಮುಂಬಯಿ, ಬೊರಿವಿಲಿ, ಕಾಂದಿವಿಲಿ, ಅಂಧೇರಿ ಮತ್ತು ಭಾಂಡೂಪ್ ಸೇರಿದಂತೆ ಮಹಾನಗರದ ಹಲವು ಭಾಗಗಳಲ್ಲಿ ಮಧ್ಯಾಹ್ನದಿಂದ ಭಾರೀ ಮಳೆಯಾಯಿತು.
2017:
ಆಸ್ಟ್ರೇಲಿಯಾ: ಒಂಟಿ ಜೀವಿಗಳು ಎಂದು ಕರೆಯಲಾಗುವ ಮಬ್ಬು ಕವಿದಂತೆ ಕಾಣುವ ಅಷ್ಟಪಾದಿ (ಆಕ್ಟೋಪಸ್)ಗಳು ತನ್ನದೇ ನಗರವನ್ನು ನಿರ್ಮಿಸಿಕೊಂಡಿವೆ. ಸಂಶೋಧಕರು ಈ ಆಕ್ಟೋಪಸ್ ನಗರಗಳನ್ನು ಪತ್ತೆ ಮಾಡಿದ್ದಾರೆ. ಪೂರ್ವ ಆಸ್ಟ್ರೇಲಿಯಾದ ಜೆರ್ವಿಸ್ ಕೊಲ್ಲಿಯಲ್ಲಿ ಆಕ್ಟೋಪಸ್ ಟೆರಿಕಸ್ಗಳು ರೂಪಿಸಿಕೊಂಡ ಸಾಗರದ ತಳದ ವಿಶೇಷ ವಲಯವನ್ನು ಸಂಶೋಧಕರು ‘ಆಕ್ಟ್ಲಾಂಟಿಸ್’ ಎಂದು ಹೆಸರಿಸಿದ್ದಾರೆ. ಒಂಟಿ ಜೀವಿಗಳೆಂದೇ ಗುರುತಿಸಿಕೊಂಡ ಇವು ಗುಂಪು ಗೂಡಿ ನಡೆಸುತ್ತಿದ್ದ ಕಾರ್ಯವನ್ನು ಸಮುದ್ರ ಜೀವಶಾಸ್ತ್ರಜ್ಞರು ಗಮನಿಸಿದ್ದಾರೆ. ಮರಳು ರಾಶಿ ಹಾಗೂ ಕಪ್ಪೆಚಿಪ್ಪುಗಳನ್ನು ಬಳಸಿ ಗವಿಗಳನ್ನು ನಿರ್ಮಿಸಿಕೊಂಡಿವೆ. ಈ ಆಕ್ಟ್ಲಾಂಟಿಸ್ ವಲಯದಲ್ಲಿ 15 ಆಕ್ಟೋಪಸ್ಗಳು ಆಶ್ರಯ ಪಡೆಯಬಹುದು ಎನ್ನುತ್ತಾರೆ ಜೀವಶಾಸ್ತ್ರಜ್ಞರು. ಸಮುದ್ರದ 33–49
ಅಡಿ ಆಳದಲ್ಲಿ 59*13 ಅಡಿ
ವಲಯದಲ್ಲಿನ ಆಕ್ಟೋಪಸ್ಗಳ ಕಾರ್ಯಚಟುವಟಿಕೆಯನ್ನು ಅಂತರರಾಷ್ಟ್ರೀಯ ಸಂಶೋಧಕರ ತಂಡ 10 ಗಂಟೆ ವಿಡಿಯೊ ರೆಕಾರ್ಡ್ ಮಾಡಿದೆ. ಮರಳು ಗವಿಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಲ್ಲದ ಇತರೆ ಆಕ್ಟೋಪಸ್ಗಳು ಇಲ್ಲಿ ಪ್ರವೇಶಿಸಲು ಆಕ್ಟ್ಲಾಂಟಿಸ್ನ ಆಕ್ಟೋಪಸ್ಗಳು ಬಿಡುವುದಿಲ್ಲ.
2017:
ನವದೆಹಲಿ: ವಿವಾದಿತ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮಿತ್ ರಾಮ ರಹೀಮ್ ಸಿಂಗ್ಗೆ ಅತ್ಯಾಚಾರ ಅಪರಾಧಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಯ ತೀರ್ಪಾದ ದಿನದಿಂದ ಇಂದಿನವರೆಗೂ ತಲೆಮರೆಸಿಕೊಂಡಿರುವ ಆತನ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ನೆರೆಯ ನೇಪಾಲ ದೇಶದಲ್ಲಿ ಕಂಡು
ಬಂದಿರುವುದಾಗಿ ವರದಿಗಳು ತಿಳಿಸಿದವು. ಗುರ್ಮಿತ್ಗೆ ಜೈಲು ಶಿಕ್ಷೆಯ ತೀರ್ಪಾದ ದಿನ ಆತನನ್ನು ಕೋರ್ಟ್ ರೂಮಿನಿಂದಲೇ ಅಪಹರಿಸಿ ಒಯ್ಯುವ ಸಂಚು ರೂಪಿಸಿದ್ದ ಹನಿಪ್ರೀತ್ ಇನ್ಸಾನ್ ವಿರುದ್ಧ ಪೊಲೀಸರು ಅಪಹರಣ ಯತ್ನದ ಕೇಸನ್ನು ಮಾತ್ರವಲ್ಲದೆ, ಪಂಚಕುಲದಲ್ಲಿ ಆ.28ರಂದು ಹಿಂಸೆಯನ್ನು ಪ್ರಚೋದಿಸಿದ ಕೇಸನ್ನು ಕೂಡ ಹಾಕಿದ್ದರು. ನೇಪಾಲದ ಪೋಖರಾ ಎಂಬಲ್ಲಿ ಹನಿಪ್ರೀತ್ ಇತರ ಮೂವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದುದು ಪತ್ತೆಯಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿದವು. ಹರಿಯಾಣ ಮತ್ತು ನೇಪಾಲ ಪೊಲೀಸರು, ಗುರ್ಮಿತ್ಗೆ ಕಳೆದ ಆ.28ರಂದು ಜೈಲು ಶಿಕ್ಷೆಯ ತೀರ್ಪಾದ ದಿನದಿಂದ ಭೂಗತಳಾಗಿರುವ ಆತನ ದತ್ತು ಪುತ್ರಿ ಹನಿಪ್ರೀತ್ ಗಾಗಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳಿದವು.
2017:
ನ್ಯೂಯಾರ್ಕ್: ಎರಡು ದಿನಗಳ ಹಿಂದೆ ಫೇಸ್ಬುಕ್ನಲ್ಲಿ ಕಪ್ಪು ವರ್ಣೀಯರನ್ನು ಹೀಗಳೆದು ಜನಾಂಗೀಯ ನಿಂದನೆಗೆ ಗುರಿಯಾಗಿದ್ದ ಅಗ್ನಿಶಾಮಕ ದಳ ಇಲಾಖೆಯ ಸ್ವಯಂ ಸೇವಕನನ್ನು ಅಮಾನತು ಮಾಡಲಾಯಿತು. ಸ್ವಯಂಸೇವಕ ಟೈಲೇರ್ ರಾಯ್ಸನ್ ಫ್ರಾಂಕ್ಲಿನ್ ಪಟ್ಟಣ ನಿವಾಸಿ. ಇವರು ಕಟ್ಟಡದ ಬೆಂಕಿ ದುರಂತದಲ್ಲಿ ಕಪ್ಪು ವರ್ಣೀಯರು ಹಾಗೂ ನಾಯಿ ಈ ಎರಡಲ್ಲಿ ಯಾವುದನ್ನು ರಕ್ಷಿಸುವೆ ಎಂದು ಕೇಳಿದರೆ ನಾನು ನಾಯಿಯನ್ನು ರಕ್ಷಿಸುತ್ತೇನೆ ಎಂದು ಹೇಳುತ್ತೇನೆ. ಏಕೆಂದರೆ ‘ಒಂದು ನಾಯಿಯ ಜೀವ ಒಂದು ಮಿಲಿಯನ್ ಕಪ್ಪುವರ್ಣೀಯರ ಜೀವಕ್ಕಿಂತ ಮುಖ್ಯ’ ಎಂದು ಫೇಸ್ಬುಕ್ನಲ್ಲಿ ಬರೆದಿದ್ದರು. ಇವರ ಈ ಹೇಳಿಕೆ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಫೇಸ್ಬುಕ್ ಖಾತೆಯಿಂದ ಹೇಳಿಕೆಯನ್ನು ತೆಗೆದುಹಾಕಿದ್ದರು. ಆದರೆ ಸ್ಕ್ರೀನ್ ಶಾಟ್ ಎಲ್ಲರಿಗೂ ಲಭ್ಯವಾಗಿತ್ತು. ಅಧಿಕಾರಿಗಳಿಗೆ ಹೇಳಿಕೆಯ ಪೋಸ್ಟ್ ದೊರೆತ ಕೂಡಲೇ ಅನಿರ್ದಿಷ್ಟವಾಗಿ ವೃತ್ತಿಯಿಂದ ಅಮಾನತು ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮ ಸಂಸ್ಥೆ ಡಬ್ಲ್ಯೂಎಚ್ಐಒ ಟಿವಿ ವರದಿ ಮಾಡಿತು.
2016:
ನವದೆಹಲಿ: ಕರ್ನಾಟಕದ ಗಾಯದ ಮೇಲೆ ಬರೆ ಎಳೆದಂತೆ, ತಮಿಳುನಾಡಿಗೆ
ಸೆಪ್ಟೆಂಬರ್ 21ರಿಂದ 30ರವರೆಗೆ, 10 ದಿನಗಳ ಕಾಲ 3 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ಆದೇಶ ನೀಡಿತು. ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಕಾರ್ಯದರ್ಶಿ ಶಶಿಶೇಖರ್ ಅಧ್ಯಕ್ಷತೆಯಲ್ಲಿ ಶ್ರಮಶಕ್ತಿ ಭವನದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಪ್ರತಿ ದಿನ 3 ಸಾವಿರ ಕ್ಯೂಸೆಕ್ನಂತೆ ಒಟ್ಟು 30 ಸಾವಿರ ಕ್ಯೂಸೆಕ್ ನೀರು ಹರಿಸಲು ಸಮಿತಿ ಆದೇಶಿಸಿತು. ಮೇಲುಸ್ತುವಾರಿ ಸಮಿತಿ ಬೆಳಗ್ಗೆಯಿಂದ ಸಾಯಂಕಾಲದ ತನಕ ಸುದೀರ್ಘ ಚರ್ಚೆ ನಡೆಸಿ ಈ ತೀರ್ಮಾನ ಪ್ರಕಟಿಸಿತು.
2016: ಮಂಡ್ಯ: ಕಾವೇರಿ ಮೇಲುಸ್ತುವಾಗಿ ಸಮಿತಿ ಮತ್ತೆ ನೀರು ಹರಿಸುವಂತೆ ಆದೇಶಿದ ಬೆನ್ನಲ್ಲೇ
ಮಂಡ್ಯದಲ್ಲಿ ರೈತರು ರಸ್ತೆಗಿಳಿದು ಹೋರಾಟ ಆರಂಭಿಸಿದರು. ಮೈಸೂರು, ಬೆಂಗಳೂರಿನಲ್ಲಿಯೂ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಸಿದ್ಧತೆ ನಡೆಸಿದವು. ಪ್ರತಿ ದಿನ 3 ಸಾವಿರ ಕ್ಯೂಸೆಕ್ನಂತೆ 10 ದಿನಗಳ ಕಾಲ ಒಟ್ಟು 30 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಬೇಕೆನ್ನುವ ಆದೇಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಪರಮೇಶ್ವರ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.. ಸರ್ಕಾರದ ಮುಂದಿನ ಕ್ರಮ ಏನಾಗಿರುತ್ತದೆನ್ನುವುದು ಎಲ್ಲರಲ್ಲೂ ಕುತೂಹಲ ಮೂಡಿಸಿತು.2016: ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ
2016: ಚೆನ್ನೈ: ಕುಡಿದು ಚಾಲನೆ ಮಾಡುತ್ತಿದ್ದ ಕಾನೂನು ವಿದ್ಯಾರ್ಥಿ ಮನಸೋ ಇಚ್ಛೆ ಕಾರು
ಚಲಾಯಿಸಿದ ಪರಿಣಾಮ ಓರ್ವ ಆಟೋ ಡ್ರೖೆವರ್ ಸಾವನ್ನಪ್ಪಿರುವ ಘಟನೆ ಚೆನ್ನೈಯಲ್ಲಿ ಘಟಿಸಿತು. ಕಾರು ಚಾಲಕ, ಕಾನೂನು ವಿದ್ಯಾರ್ಥಿ ವಿಕಾಸ್ ವಿಜಯಾನಂದ (22) ಅವರನ್ನು ಪೊಲೀಸರು ಬಂಧಿಸಿದರು. ಘಟನೆಯಲ್ಲಿ ಇನ್ನೂ ಮೂರ್ನಾಲ್ಕು ಆಟೊ ಚಾಲಕರು ಗಂಭೀರವಾಗಿ ಗಾಯಗೊಂಡರು. ಘಟನೆ ಬೆಳಗಿನಜಾವ 3.30ರ ಸುಮಾರಿಗೆ ಚೆನ್ನೈಯ ಕ್ಯಾಥೆಡ್ರಾಲ್ ರಸ್ತೆಯಲ್ಲಿ ಘಟಸಿತು.. ಹತ್ತಕ್ಕೂ ಹೆಚ್ಚು ರಾತ್ರಿ ಪಾಳಿಯ ಆಟೋಗಳು ಈ ರಸ್ತೆಯ ಬದಿಯಲ್ಲಿ ನಿಂತಿದ್ದವು.. ಕುಡಿದು ಅತಿವೇಗವಾಗಿ ಕಾರು ಚಲಾಯಿಸಿದ ವಿಕಾಸ್ ಏಕಾಏಕಿ ನಿಯಂತ್ರಿಸಲಾಗದೇ ಆಟೋಗಳಿಗೆ ಗುದ್ದಿದ್ದು, ಪರಿಣಾಮ 29 ವರ್ಷದ ಜಿ.ಅಮುಗಮ್ ಸಾವನ್ನಪ್ಪಿದರು. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಕಾನೂನು ವಿದ್ಯಾರ್ಥಿ ಓಡಿಸುತ್ತಿದ್ದ ದುಬಾರಿ ಬೆಲೆಯ ಪೋರ್ಷೆ ಕಾರು ಹಾಗೂ ಮೂರು ಆಟೋಗಳು ಬಹುತೇಕ ಜಖಂಗೊಂಡವು.
2016: ನವದೆಹಲಿ: ದೆಹಲಿಯ
ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮೇಲೆ ಮಸಿ
ದಾಳಿ ನಡೆಸಿದ ಘಟನೆ ವರದಿಯಾಯಿತು. ಫಿನ್ಲೆಂಡ್ನಿಂದ ಮರಳಿದ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಹಿಂದಿರುಗುವ ವೇಳೆ ಎದುರಿಗೆ ಸಿಕ್ಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದಾಗ ಈ ಘಟನೆ ಘಟಿಸಿತು. ಇದಕ್ಕೂ ಮೊದಲು ಸಿಸೋಡಿಯಾ ಹಿಂದಿನ
ದಿನವಷ್ಟೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನೂ ಭೇಟಿ ಮಾಡಿ, ಕಳೆದ ಕೆಲದಿನಗಳ ವಿದ್ಯಮಾನಗಳ ಬಗ್ಗೆ ಬಗ್ಗೆ ಚರ್ಚಿಸಿದರು.2016: ನ್ಯೂಯಾರ್ಕ್: ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ರಘುರಾಂ ರಾಜನ್ ಅವರು ಮತ್ತೆ ತಮ್ಮ ಈ ಹಿಂದಿನ ಬೋಧನಾ ವೃತ್ತಿಗೆ ಮರಳಿದರು. ಇನ್ನು ಮುಂದೆ ಅವರು, ಷಿಕಾಗೊ
2008: ಒರಿಸ್ಸಾದಲ್ಲಿ ಭಾರಿ ಮಳೆಯಿಂದಾಗಿ ಮಹಾನದಿಯಲ್ಲಿ ಉಕ್ಕೇರಿದ ಪ್ರವಾಹದಲ್ಲಿ 19ಮಂದಿ ಕೊಚ್ಚಿ ಹೋದರು.
2008: ಮಲೇಷ್ಯಾದ ಸರವಾಕ್ ಮತ್ತು ಪೆರಾಕ್ ಪ್ರಾಂತ್ಯದಲ್ಲಿ ಪ್ರಾಚ್ಯವಸ್ತು ಸಂಶೋಧಕರು ನವ ಶಿಲಾಯುಗದ ಕಾಲದಲ್ಲಿ ಬದುಕಿದ್ದ ಮನುಷ್ಯರ ಅಸ್ಥಿ ಪಂಜರಗಳನ್ನು ಪತ್ತೆಹಚ್ಚಿದರು.
2007: ಶ್ರೀರಾಮ ಐತಿಹಾಸಿಕ ವ್ಯಕ್ತಿಯೇ ಅಲ್ಲ ಎಂಬ ತಮ್ಮ ಮುಂಚಿನ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ, ತಮ್ಮ ವಾದ ವಿರೋಧಿಸುವವರು ಸೂಕ್ತ ದಾಖಲೆಗಳನ್ನು ತೋರಿಸಲಿ ಎಂದು ಸವಾಲು ಹಾಕಿದರು. ಟಿವಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಿದ ಅವರು, ರಾಮ ಬದುಕಿದ್ದ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ, ಅದೇ ರೀತಿ ಸಮುದ್ರಕ್ಕೆ ಸೇತುವೆ ಕಟ್ಟಬಲ್ಲ ಎಂಜಿನಿಯರಿಂಗ್ ಪರಿಣಿತಿಯನ್ನು ಹೊಂದಿರುವ ಕುರಿತೂ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದರು.
2007: ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಕಡಿಮೆ ಮಾಡಿದ್ದರಿಂದ ಉತ್ತೇಜನಗೊಂಡ ಷೇರುಪೇಟೆ ಸೂಚ್ಯಂಕವು 653 ಅಂಶಗಳಷ್ಟು ಏರಿಕೆಯೊಂದಿಗೆ ಇನ್ನೊಂದು ಸಾರ್ವಕಾಲಿಕ ದಾಖಲೆ ಬರೆಯಿತು. ಮುಂಬೈ ಷೇರುಪೇಟೆ ವಹಿವಾಟಿನ ಅಳತೆ ಗೋಲಾಗಿರುವ ಸಂವೇದಿ ಸೂಚ್ಯಂಕವು ಮಾಂತ್ರಿಕ ಸಂಖ್ಯೆ 16 ಸಾವಿರ ಅಂಶಗಳನ್ನು ದಾಟಿ ಹೊಸ ಮೈಲಿಗಲ್ಲು ಸ್ಥಾಪಿಸಿತು. ಷೇರುಪೇಟೆಯಲ್ಲಿ ಹಣ ಹೂಡಿದವರು ಕಳೆದ ಎರಡು ತಿಂಗಳಲ್ಲಿ ರೂ 5 ಲಕ್ಷ ಕೋಟಿಗಳಷ್ಟು ಶ್ರೀಮಂತರಾದರು. ಸೂಚ್ಯಂಕವು 15 ಸಾವಿರ ಅಂಶಗಳಿಂದ 16 ಸಾವಿರ ಅಂಶಗಳವರೆಗೆ ಸಾಗಿ ಬಂದ ಹಿನ್ನೆಲೆಯಲ್ಲಿ ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆಯಾದ ಹಣದ ಒಟ್ಟು ಮೊತ್ತ ರೂ 49,17,402 ಕೋಟಿಗಳಷ್ಟಾಯಿತು.
2007: ವಿಫಾ ಹೆಸರಿನ ಚಂಡಮಾರುತ ಚೀನದ ಝೆಜಿಯಾಂಗ್ ಪ್ರಾಂತವನ್ನು ಅಪ್ಪಳಿಸಿದ ಪರಿಣಾಮವಾಗಿ 50 ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾದರು. ಕಳೆದ ವರ್ಷ ಇದೇ ಭಾಗಕ್ಕೆ ಅಪ್ಪಳಿಸಿದ್ದ ಸೊಮಾಯ್ ಚಂಡಮಾರುತ ನೂರಾರು ಜನರನ್ನು ಬಲಿತೆಗೆದುಕೊಂಡಿತ್ತು.
2007: ಷೇರುಪೇಟೆ ವಹಿವಾಟನ್ನು ಮನೆ ಅಥವಾ ಕಚೇರಿಯಲ್ಲಿ ಕುಳಿತೇ ಇಂಟರ್ನೆಟ್ ನೆರವಿನಿಂದ ನಿರ್ವಹಿಸಬಹುದಾದ ಇ-ಟ್ರೇಡಿಂಗ್ ಸೇವೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್ಬಿಎಂ) ಬೆಂಗಳೂರಿನಲ್ಲಿ ಆರಂಭಿಸಿತು.
2007: ಎಸ್ಬಿಎಂ ಜೈನ್ ಕಾಲೇಜಿನ ಜೈಪ್ರಕಾಶ್ ಶೆಟ್ಟಿ ಬೆಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜ್ 43ನೇ ವಾರ್ಷಿಕ ಅಂತರ ಕಾಲೇಜ್ ಅಥ್ಲೆಟಿಕ್ ಕೂಟದ ಪುರುಷರ 400 ಮೀ. ಓಟದ ಸ್ಪರ್ಧೆಯಲ್ಲಿ ಕೂಟದ ನೂತನ ದಾಖಲೆ ಸ್ಥಾಪಿಸಿದ ಕೀರ್ತಿಗೆ ಪಾತ್ರರಾದರು. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮೂರು ದಿನಗಳ ಅಥ್ಲೆಟಿಕ್ ಕೂಟದ ಎರಡನೇ ದಿನ, ಜೈಪ್ರಕಾಶ್ ಶೆಟ್ಟಿ 400 ಮೀ ಓಟದ ಸ್ಪರ್ಧೆಯನ್ನು 48.2 ಸೆಕೆಂಡುಗಳಲ್ಲಿ ಕ್ರಮಿಸಿ 2005ರಲ್ಲಿ ಅಲ್ ಅಮೀನ್ ಕಾಲೇಜಿನ ಅಯ್ಯಪ್ಪ ಹೆಸರಿನಲ್ಲಿದ್ದ 48.8 ಸೆಕೆಂಡು ಹಳೆ ದಾಖಲೆಯನ್ನು ಅಳಿಸಿ ಹಾಕಿದರು.
2006: `ಜೋಗಿ' ಚಿತ್ರದ ಶ್ರೇಷ್ಠ ಅಭಿನಯಕ್ಕಾಗಿ ನಟ ಶಿವರಾಜ್ ಕುಮಾರ್, `ನಾಯಿ ನೆರಳು' ಚಿತ್ರದ ಅದ್ಭುತ ನಟನೆಗಾಗಿ ಪವಿತ್ರಾ ಲೋಕೇಶ್ ಅವರು 2005-06 ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದರು. ಗಿರೀಶ್ ಕಾಸರವಳ್ಳಿ ನಿರ್ದೇಶನದ `ನಾಯಿ ನೆರಳು' ಶ್ರೇಷ್ಠ ಚಿತ್ರ ಪ್ರಶಸ್ತಿ ಪಡೆಯಿತು. `ಕೇರಾಫ್ ಫುಟ್ ಪಾತ್' ನ ಮಾಸ್ಟರ್ ಕಿಶನ್ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದುಕೊಂಡರು.
2006: 1993ರಲ್ಲಿ ಮುಂಬೈಯ ವರ್ಲಿ ಸೆಂಚುರಿ ಬಜಾರಿನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಆರೋಪಿ `ಅಬ್ದುಲ್ ಗನಿ ಟರ್ಕ್ ತಪ್ಪಿತಸ್ಥ' ಎಂದು ವಿಶೇಷ ಟಾಡಾ ನ್ಯಾಯಾಧೀಶ ಪಿ.ಡಿ. ಕೋಡೆ ತೀರ್ಪು ನೀಡಿದರು. 47 ವರ್ಷದ ಟರ್ಕ್ ನನ್ನು ಸ್ಫೋಟ ಸಂಭವಿಸಿದ ಕೆಲವೇ ಸಮಯದಲ್ಲಿ ಬಂಧಿಸಲಾಗಿತ್ತು. ಈತನು ಪ್ರಮುಖ ಆರೋಪಿ ಟೈಗರ್ ಮೆಮನ್ ನ ವಾಹನ ಚಾಲಕನಾಗಿದ್ದ. 1993ರ ಮಾರ್ಚರ್್ 12ರಂದು ಈತ ಸೆಂಚುರಿ ಬಜಾರಿನಲ್ಲಿ ಆರ್ಡಿಎಕ್ಸ್ ತುಂಬಿದ್ದ ಜೀಪ್ ನಿಲ್ಲಿಸಿ ಭಾರಿ ಸ್ಫೋಟಕ್ಕೆ ಕಾರಣನಾಗಿದ್ದ.
2006: ಬ್ರಿಟನ್ನಿನ ವರ್ತಮಾನ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾದ ಶತಮಾನದ ಸ್ಥಳೀಯ ಹಗರಣಗಳು, ಅಂತಾರಾಷ್ಟ್ರೀಯ ಪ್ರಮುಖ ಘಟನಾವಳಿಗಳು, ಜಾಗತಿಕ ಮಟ್ಟದ ದುರಂತಗಳ ಸಂಗ್ರಹವನ್ನು ಒಳಗೊಂಡ `ಸುದ್ದಿಮನೆ'ಸುದ್ದಿಮನೆ' ಲಂಡನ್ನಿನಲ್ಲಿ ಅನಾವರಣಗೊಂಡಿತು. ಖಾಸಗಿಯವರಿಂದ ಸಂಗ್ರಹಿಸಲಾದ ಒಂದು ಲಕ್ಷ ಪತ್ರಿಕೆಗಳ ಮುಖಪುಟಗಳು ಇಲ್ಲಿ ಪ್ರದರ್ಶಿತವಾಗಿವೆ. 1909ರಲ್ಲಿ ನಡೆದ ಪ್ರಪ್ರಥಮ ವಿಮಾನ ಹಾರಾಟ, 1953ರಲ್ಲಿ ಪ್ರಥಮ ಬಾರಿಗೆ ಮೌಂಟ್ ಎವರೆಸ್ಟ್ ಏರಿದ ಘಟನೆಯಿಂದ ಹಿಡಿದು, ಲಂಡನ್ನಿನಲ್ಲಿ ಇತ್ತೀಚೆಗೆ ಸಂಭವಿಸಿದ ಮಾನವ ಬಾಂಬ್ ಸ್ಫೋಟದವರೆಗಿನ ಸುದ್ದಿಗಳನ್ನು ಒಳಗೊಂಡ ಪತ್ರಿಕೆಗಳ ಮುಖಪುಟಗಳು ಇಲ್ಲಿವೆ. 1969ರ ಜುಲೈ 21ರಂದು ಮಾನವ ಚಂದ್ರನ ಮೇಲೆ ಕಾಲಿಟ್ಟ ಸುದ್ದಿಯನ್ನು ಮೊದಲಿಗೆ ಪ್ರಕಟಿಸಿದ `ಈವ್ನಿಂಗ್ ಸ್ಟ್ಯಾಂಡರ್ಡ್' ಮುಖಪುಟ, 1963ರ ನವೆಂಬರ್ 25ರಂದು ಪ್ರಥಮ ಬಾರಿಗೆ ವಿಧಿಸಲಾದ ಮರಣದಂಡನೆ (ಓಸ್ವಾಲ್ಡ್ ಹಾರ್ವೆ ಹತ್ಯೆಯ ಆರೋಪಿ ಜಾಕ್ ರೂಬಿ) ಪ್ರಕರಣದ ವರದಿ ಕೂಡಾ ಈ ಪ್ರದರ್ಶನದಲ್ಲಿದೆ.
2006: ಪ್ರಧಾನಿ ತಕ್ ಸಿನ್ ಶಿನವಾತ್ರ ಅವರು ನ್ಯೂಯಾರ್ಕಿನಲ್ಲಿ ವಿಶ್ವಸಂಸ್ಥೆ ಶೃಂಗಸಬಯಲ್ಲಿ ಪಾಲ್ಗೊಂಡಿದ್ದಾಗ ಅವರ ಅನುಪಸ್ಥಿತಿಯಲ್ಲಿ ಥಾಯ್ಲೆಂಡ್ ಸೇನೆ ಕ್ಷಿಪ್ರ ಕ್ರಾಂತಿಗೆ ಯತ್ನಿಸಿದ ಹಿನ್ನೆಲೆಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಶಿನವಾತ್ರ ಅವರು ಸೇನಾ ಮುಖ್ಯಸ್ಥರನ್ನು ವಜಾ ಮಾಡಿ ತುರ್ತು ಪರಿಸ್ಥಿತಿ ಘೋಷಿಸಿದರು.
2001: ಪಂಜಾಬಿನ ಗುರುಪ್ರೀತ್ ಸಿಂಗ್ ಅವರು ಲಖ್ನೋದಲ್ಲಿ ನಡೆದ 41ನೇ ಅಂತರ್ ರಾಜ್ಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 110 ಮೀಟರ್ ಹರ್ಡಲ್ಸನ್ನು 14.07 ಸೆಕೆಂಡುಗಳಲ್ಲಿ ಓಡುವ ಮೂಲಕ ಭಾರತೀಯ ಓಟಗಾರರ ಹಳೆಯ ದಾಖಲೆಯನ್ನು ಅಳಿಸಿ ಹಾಕಿದರು. 1964ರ ಟೋಕಿಯೊ ಒಲಿಪಿಂಕ್ಸಿನಲ್ಲಿ ಜಿ.ಎಸ್. ರಾಂಧವಾ ಅವರು ಮಾಡಿದ್ದ ದಾಖಲೆಯನ್ನು ಅವರು ಮುರಿದರು. ಈ ದಾಖಲೆ ಮುರಿಯುವ ಯತ್ನವನ್ನು ಜಿ.ಎಸ್. ರಾಂಧವಾ ಅವರೂ ವೀಕ್ಷಿಸಿದರು.
2000: ಸಿಡ್ನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರ ಎತ್ತುವ ಸ್ಪರ್ಧೆಯ (ವೆಯ್ಟ್ ಲಿಫ್ಟಿಂಗ್) 69 ಕಿ.ಗ್ರಾಂ. ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕರ್ಣಂ ಮಲ್ಲೇಶ್ವರಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1965: ಭಾರತೀಯ ಸ್ವಾತಂತ್ರ್ಯ ಯೋಧ, ಗುಜರಾತಿನ ಮುಖ್ಯಮಂತ್ರಿ ಬಲವಂತರಾಯ್ ಮೆಹ್ತಾ ಅವರು ಭಾರತ - ಪಾಕ್ ಘéರ್ಷಣೆಯ ಸಂದರ್ಭದಲ್ಲಿ ಕಛ್ ಗಡಿಯಲ್ಲಿ ಅವರ ವಿಮಾನಕ್ಕೆ ಪಾಕ್ ವಿಮಾನವು ಗುಂಡು ಹೊಡೆದು ಉರುಳಿಸಿದ ಪರಿಣಾಮವಾಗಿ ಮೃತರಾದರು. ಅವರ ಬದುಕಿನಲ್ಲಿನಂಬರ್ 19 ಮಹತ್ವ ಪಡೆದಿದೆ. ಅವರು ಹುಟ್ಟಿದ್ದು 1899ರ ಫೆಬ್ರುವರಿ 19ರಂದು. ಮದುವೆಯಾದದ್ದು 1936ರ ಏಪ್ರಿಲ್ 19ರಂದು. ಮೃತರಾದದ್ದು 1965ರ ಸೆಪ್ಟೆಂಬರ್ 19ರಂದು.
1961: ಸಾಹಿತಿ ಅನುರಾಧ ಕೆ.ವಿ. ಜನ್ಮದಿನ.
1958: ಅಮೆರಿಕದ ಮಿಲಿಟರಿಯೇತರ ಬಾಹ್ಯಾಕಾಶ ಯಾನಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುವ ವಿಚಾರದಲ್ಲಿ ಸಮನ್ವಯ ಸಾಧಿಸುವ ಸಲುವಾಗಿ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಎಂಬ ಸರ್ಕಾರಿ ಸಂಸ್ಥೆಯನ್ನು ಸ್ಥಾಪಿಸಲಾಯಿತು.
1929: ಖ್ಯಾತ ನಾಟಕಕಾರ ಬಿ.ವಿ. ಕಾರಂತ (19-9-1929ರಿಂದ 1-9-2002) ಅವರು ಬಾಬುಕೋಡಿ ನಾರಣಪ್ಪಯ್ಯ- ಲಕ್ಷ್ಮಮ್ಮ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಚಿ ಗ್ರಾಮದ ಬಾಬುಕೋಡಿಯಲ್ಲಿ ಜನಿಸಿದರು. ಒಟ್ಟು 52 ನಾಟಕಗಳನ್ನು ನಿರ್ದೇಶಿದ ಅವರು 15 ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದರು. ಏವಂ ಇಂದ್ರಜಿತ, ಹಯವದನ, ಸಂಕ್ರಾಂತಿ, ಈಡಿಪಸ್, ಜೋಕುಮಾರಸ್ವಾಮಿ ಅವರ ನಿರ್ದೇಶಿಸಿದ ನಾಟಕಗಳಲ್ಲಿ ಹೆಸರುವಾಸಿಯಾದವು. ಮಕ್ಕಳಿಗಾಗಿಯೂ ಹಲವಾರು ನಾಟಕಗಳನ್ನು ರಚಿಸಿದ ಕಾರಂತ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
1704: ಗುರುಗೋವಿಂದ ಸಿಂಗ್ ನಿಧನ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment