Wednesday, September 26, 2018

‘ಆಧಾರ್’ ಸಂವಿಧಾನ ಬದ್ಧ, ಖಾಸಗಿ ಸೌಲಭ್ಯಕ್ಕೆ ಕಡ್ಡಾಯವಲ್ಲ

‘ಆಧಾರ್’ ಸಂವಿಧಾನ ಬದ್ಧ, ಖಾಸಗಿ ಸೌಲಭ್ಯಕ್ಕೆ ಕಡ್ಡಾಯವಲ್ಲ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅತಿ ಪ್ರಮುಖ ಯೋಜನೆಯಾದಆಧಾರ್ವಿಶಿಷ್ಟ ಗುರುತು ಸಂಖ್ಯೆ ಯೋಜನೆಯನ್ನು ಸಂವಿಧಾನ ಬದ್ಧ ಎಂಬುದಾಗಿ 2018 ಸೆಪ್ಟೆಂಬರ್ 26 ಬುಧವಾರ  ಸುಪ್ರೀಂಕೋರ್ಟಿನ ಪಂಚ ಸದಸ್ಯ ಸಂವಿಧಾನ ಪೀಠವು ತನ್ನ 4:1 ಬಹುಮತದ ತೀರ್ಪಿನಲ್ಲಿ ಘೋಷಿಸಿತು.ಆದರೆ ಅದಕ್ಕೆ ಕೆಲವು ಶರತ್ತುಗಳನ್ನು ವಿಧಿಸಿತು.

ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ  ಎ.ಕೆ. ಸಿಕ್ರಿ, ಎ.ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ್ ಮತ್ತು ಅಶೋಕ ಭೂಷಣ್ ಅವರನ್ಜು ಒಳಗೊಂಡ ಪಂಚ ಸದಸ್ಯ ಪೀಠವು ಆಧಾರ್ ಯೋಜನೆಯ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದು, ಖಾಸಗಿ ಸೌಲಭ್ಯಕ್ಕೆ ಆಧಾರ್ ಕಡ್ಡಾಯವಲ್ಲ,ಸರ್ಕಾರಿ ಸೌಲಭ್ಯಗಳಿಗೆ ಮಾತ್ರ ಆಧಾರ್ ಸಂಖ್ಯೆ ಕಡ್ಡಾಯ ಎಂದು ಹೇಳಿತು.


‘ಆಧಾರ್ ದೇಶದ ಬಡವರಿಗೆ ಅಸ್ತಿತ್ವವನ್ನು ತಂದು ಕೊಟ್ಟಿದೆ. ಆದರೆ ಅದಕ್ಕೆ ದತ್ತಾಂಶ ಸುರಕ್ಷೆಯನ್ನು ಜಾರಿ ಮಾಡಿ’ ಎಂದು ಪೀಠವು ನಿರ್ದೇಶನ ನೀಡಿತು.


ಬ್ಯಾಂಕ್ ಖಾತೆ ಮತ್ತು ಮೊಬೈಲ್ ಫೋನ್ ಗಳಿಗೆ ಆಧಾರ್ ಜೋಡಣೆ ಅಗತ್ಯವಿಲ್ಲ, ಆದರೆ ಹಣಕಾಸು ಮಸೂದೆಯಾಗಿ ಅದನ್ನು ಅಂಗೀಕರಿಸಬಹುದು ಎಂದು ಪೀಠ ಹೇಳಿತು.

ವಿಶಿಷ್ಟ ಗುರುತು ಸಂಖ್ಯೆ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ 27 ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ್ದ ಸುಪ್ರೀಂ ಸಾಂವಿಧಾನಿಕ ಪೀಠದ ನ್ಯಾಯಾಧೀಶರು ಈದಿನ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿತು.

ಯಾವುದಕ್ಕೆ ಆಧಾರ್ ಕಡ್ಡಾಯ?
*ಪ್ಯಾನ್ ನಂಬರ್ ಗೆ ಆಧಾರ್ ಜೋಡಣೆ ಕಡ್ಡಾಯ
*ಸರ್ಕಾರಿ ಸೌಲಭ್ಯಗಳಿಗೆ ಮಾತ್ರ ಕಡ್ಡಾಯ.
*ಐಟಿ ರಿಟರ್ನ್ಸ್ ಸಲ್ಲಿಸಲು ಆಧಾರ್ ಕಡ್ಡಾಯ.

ಯಾವುದಕ್ಕೆ ಆಧಾರ್ ಕಡ್ಡಾಯವಲ್ಲ?
*ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯವಲ್ಲ.
*ಪೇಟಿಯಂ, ಫೋನ್ ಪೇ, ಡಿಜಿಟಲ್ ಆ್ಯಪ್ ಗಳಿಗೆ ಕಡ್ಡಾಯವಲ್ಲ.
* ಮೊಬೈಲ್ ನಂಬರ್ ಗಳಿಗೆ ಆಧಾರ್ ಕಡ್ಡಾಯವಲ್ಲ.
*ಹಣಕಾಸು ಉದ್ದೇಶಕ್ಕಾಗಿ ಆಧಾರ್ ಬಳಸುವಂತಿಲ್ಲ.
*ಮೊಬೈಲ್ ಸಿಮ್ ಖರೀದಿಗೆ ಕಡ್ಡಾಯವಲ್ಲ.
*ಖಾಸಗಿ ಶಾಲಾ, ಕಾಲೇಜು ಸೇರ್ಪಡೆಗೆ ಆಧಾರ್ ಕಡ್ಡಾಯವಲ್ಲ.
*6 ತಿಂಗಳಿಗಿಂತ ಹೆಚ್ಚು ಕಾಲ ಆಧಾರ್ ಮಾಹಿತಿ ಸಂಗ್ರಹಿಸಿ ಇಟ್ಟುಕೊಳ್ಳುವಂತಿಲ್ಲ.

No comments:

Post a Comment