Friday, September 28, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 28

ಇಂದಿನ ಇತಿಹಾಸ History Today ಸೆಪ್ಟೆಂಬರ್ 28
2018: ನವದೆಹಲಿ: ಕೇರಳದ ಶಬರಿಮಲೈ ಅಯಪ್ಪಸ್ವಾಮಿ ದೇವಾಲಯದ ಪ್ರವೇಶಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೂ ಅವಕಾಶ ಕಲ್ಪಿಸುವ ಮೂಲಕ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಸುಪ್ರೀಂಕೋರ್ಟ್ ಪಂಚ ಸದಸ್ಯ ಸಂವಿಧಾನ ಪೀಠವು ಮತ್ತೊಮ್ಮೆ ಇತಿಹಾಸ ಸೃಷ್ಟಿಸಿತು. ತನ್ನ ಸಮಾಜ ಸುಧಾರಣೆಯ ಕಾರ್ಯಸೂಚಿಯಲ್ಲಿ ಇನ್ನೊಂದು ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್ ಪೀಠವು ೧೦ರಿಂದ ೫೦ ವರ್ಷಗಳವರೆಗಿನ ವಯೋಮಾನದ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಇದ್ದ ಶತಕಗಳಷ್ಟು ಹಿಂದಿನ ನಿರ್ಬಂಧವನ್ನು : ಬಹುಮತದಿಂದ ರದ್ದು ಪಡಿಸಿತುಮಹಿಳೆಯರ ಪ್ರಾರ್ಥನೆಯ ಸಮಾನ ಹಕ್ಕನ್ನು ಎತ್ತಿ ಹಿಡಿದ ನ್ಯಾಯಾಲಯ, ದೇಗುಲದಲ್ಲಿ ಅನುಸರಿಸುತ್ತಾ ಬಂದಿರುವ ಪದ್ಧತಿಯ ಸಂವಿಧಾನದ ೧೪, ೧೫ ಮತ್ತು ೨೧ನೇ ಅನುಚ್ಛೇದಗಳ ಅಡಿಯಲ್ಲಿ ನೀಡಲಾಗಿರುವ ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿತು. ಜೈವಿಕ ಪ್ರಕ್ರಿಯೆಯ ಏಕೈಕ ನೆಲೆಯಲ್ಲಿ ಮಹಿಳೆಯರನ್ನು ದೇವಾಲಯ ಪ್ರವೇಶಿಸದಂತೆ ನಿರ್ಬಂಧಿಸಿರುವ ಪದ್ಧತಿಯು ಸಂವಿಧಾನ ಬಾಹಿರ ಎಂಬ ನೆಲೆಯಲ್ಲಿ ಅದನ್ನು ಹಲವಾರು ಅರ್ಜಿಗಳ ಮೂಲಕ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತುದೇವಾಲಯದ ಆಡಳಿತ ಮಂಡಳಿಯು, ಪದ್ಧತಿಯ ತಮ್ಮ ಧಾರ್ಮಿಕ ಪಂಗಡದ ಅತ್ಯಂತ ಅಗತ್ಯವಾದ ಧಾರ್ಮಿಕ ಪದ್ಧತಿ ಎಂದು ಪ್ರತಿಪಾದಿಸಿತ್ತು.  ‘ಆದರೆ ಪ್ರಾರ್ಥನೆಯ ಮೂಲಭೂತ ಹಕ್ಕನ್ನು ನಿರಾಕರಿಸಲು ಧರ್ಮವು ರಕ್ಷಣಾ ಕವಚವಾಗಲಾರದು ಇಲ್ಲವೇ ಶರೀರಶಾಸ್ತ್ರ ಕೂಡಾ ಮೂಲಭೂತ ಹಕ್ಕು ನಿರಾಕರಣೆಗೆ ಕಾರಣವಾಗಲಾರದು ಎಂದು ಪಂಚ ಸದಸ್ಯ ಪೀಠವು ತನ್ನ ತೀರ್ಪಿನಲ್ಲಿ ಹೇಳಿತು. ಮಹಿಳೆಯರಿಗೆ ದೇವಾಲಯ ಪ್ರವೇಶ ನಿಷೇಧಿಸಿದ ಪ್ರಾಚೀನ ಪದ್ಧತಿಯು ಪ್ರತಿಯೊಬ್ಬ ಮಹಿಳೆಯ ನೈಸರ್ಗಿಕ ಜೈವಿಕ ಪ್ರಕ್ರಿಯೆಗೆ ವಿರುದ್ಧವಾದ ತಾರತಮ್ಯ ಮತ್ತು ಲಿಂಗ ಅಸಮಾನತೆಯ ರೂಪ ಎಂದು ಕೋರ್ಟ್ ಹೇಳಿತು. ಗುಂಪು ನೈತಿಕತೆಯು ಮಹಿಳೆಯರ ಸಾಂವಿಧಾನಿಕ ಹಕ್ಕಿಗೆ ಧಕ್ಕೆ ಉಂಟು ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ನಾರಿಮನ್ ಹೇಳಿದರು. ಪದ್ಧತಿಯೊಂದರ ಸಿಂಧುತ್ವವನ್ನು ನಿರ್ಧರಿಸುವಾಗ ಸಾಂವಿಧಾನಿಕ ನೈತಿಕತೆಯು ನ್ಯಾಯಾಲಯಗಳಿಗೆ ಮಾರ್ಗದರ್ಶಿಯಾಗಬೇಕು ಎಂದು ಪೀಠವು ಒತ್ತಿ ಹೇಳಿತು.  ಮಹಿಳೆಯರನ್ನು ದೂರತಳ್ಳುವಂತಹ ಧಾರ್ಮಿಕ ಪದ್ಧತಿಗಳಿಗೆ ನ್ಯಾಯಾಲಯಗಳು ಕಾನೂನು ಬದ್ಧತೆಯನ್ನು ನೀಡಬಾರದು ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು. ದಕ್ಷಿಣ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ೮೦೦ ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿಯು ಬ್ರಹ್ಮ್ಮಚಾರಿ ಎಂಬ ಕಾರಣಕ್ಕಾಗಿ ಋತುಮತಿಯರಾಗುವ ಮಹಿಳೆಯರ ಪ್ರವೇಶವನ್ನು ಪ್ರಾಚೀನ ಕಾಲದಿಂದಲೇ ನಿಷೇಧಿಸಲಾಗಿತ್ತು. ಸಾಂಪ್ರದಾಯಿಕ ನಿಷೇಧವು ಕಾನೂನಿನ ಮುಂದಿನ ಸಮಾನತೆಯ ಸಾಂವಿಧಾನಿಕ ಹಕ್ಕಿಗೆ ವಿರುದ್ಧವೇ ಎಂಬುದಾಗಿ ಪರಿಶೀಲಿಸಿದ ಸುಪ್ರೀಂಕೋರ್ಟ್ ಪದ್ಧತಿಯು ಧಾರ್ಮಿಕ ನಂಬಿಕೆಯ ಅತ್ಯಗತ್ಯ ಮತ್ತು ಅವಿಭಾಜ್ಯ ಅಂಗ ಎಂಬುದನ್ನು ಸಾಬೀತು ಪಡಿಸುವಂತೆ ಆಡಳಿತ ಮಂಡಳಿಗೆ ಸೂಚಿಸಿತ್ತು. ಆಡಳಿತ ಮಂಡಳಿಯ ವಾದ ಮಂಡನೆಯಿಂದ ನ್ಯಾಯಾಲಯಕ್ಕೆ ಸಮಾಧಾನವಾಗಲಿಲ್ಲ.  ‘ಹೊರಗಿಡುವ ಪದ್ಧತಿಯು ಉಪಶಾಸನದ ಬೆಂಬಲ ಪಡೆದಿರಬೇಕು ಅಥವಾ ಧರ್ಮದ ಆಚರಣೆಗೆ ಅತ್ಯಗತ್ಯವಾಗಿರಬೇಕು ಇಲ್ಲವೇ ಧರ್ಮದ ಅವಿಭಾಜ್ಯ ಅಂಗವಾಗಿರಬೇಕು. ನಿಯಮವನ್ನು ಅಸಿಂಧು ಎಂಬುದಾಗಿ ನಾವು ಘೋಷಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರ ಹೇಳಿದರು.  ನ್ಯಾಯಮೂರ್ತಿಗಳಾದ ರೊಹಿಂಟನ್ ಫಾಲಿ ನಾರಿಮನ್, .ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ್ ಮತ್ತು ಇಂದು ಮಲ್ಹೋತ್ರ ಅವರು ಪಂಚ ಸದಸ್ಯ ಪೀಠದ ಇತರ ನ್ಯಾಯಮೂರ್ತಿಗಳಾಗಿದ್ದರು. ನ್ಯಾಯಮೂರ್ತಿಗಳ ಪೈಕಿ ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರು ಮಾತ್ರ ಭಿನ್ನಮತದ ತೀರ್ಪು ನೀಡಿದರು. ಆಡಳಿತ ಮಂಡಳಿ ಮತ್ತು ಇತರ ಕಕ್ಷಿದಾರರ ವಾದಗಳನ್ನು ಆಲಿಸಿದ ಬಳಿಕ ಪೀಠವುಪದ್ಧತಿಯು ಪಿತೃಪ್ರಭುತ್ವ ನಂಬಿಕೆಯನ್ನು ಆಧರಿಸಿರುವಂತೆ ಕಾಣುತ್ತದೆ. ಪಿತೃಪ್ರಭುತ್ವ ವ್ಯವಸ್ಥೆಯ ಸಮಾಜದಲ್ಲಿ ಪ್ರಧಾನವಾಗಿರುವ ಪುರುಷನು ಕಟ್ಟುಕಟ್ಟಳೆ ನಿಯಂತ್ರಿಸುತ್ತಾನೆ ಎಂದು ಅಭಿಪ್ರಾಯ ಪಟ್ಟಿತು.   ‘ದೇವಾಲಯದಲ್ಲಿ ಪೂಜಿಸಲ್ಪಡುವ ದೇವರು ಕೆಲವು ವಿಧಿಗಳಿಗೆ ಸಂಬಂಧಿಸಿದಂತೆ ಖಾಸಗಿತನದ ಹಕ್ಕು ಸೇರಿದಂತೆ ಕೆಲವು ಹಕ್ಕುಗಳನ್ನು ಹೊಂದಿರುತ್ತಾನೆ ಎಂಬುದನ್ನು ಒಪ್ಪಿದ ಸಿಜೆಐ ಮಿಶ್ರ ಅವರುಆದರೆ ಖಾಸಗಿತನದ ಹಕ್ಕು ಖಾಸಗಿತನವನ್ನು ಮೂಲಭೂತ ಹಕ್ಕಾಗಿ ಮಾನ್ಯ ಮಾಡಿದ ತೀರ್ಪನ್ನು ಪ್ರತಿಫಲಿಸಿದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ ಎಂದು ಹೇಳಿದರು. ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಮಹತ್ವದ ಸ್ಥಾನವಿದೆ. ಮಹಿಳೆಯರನ್ನು ದೇವತೆಯಂತೆ ನೋಡಲಾಗುತ್ತದೆ. ಮಹಿಳೆಯರು ಪುರುಷರಿಗೆ ಸಮಾನ. ಆದರೆ ಮಹಿಳೆಯರನ್ನು ತಾರತಮ್ಯದಿಂದ ನೋಡಲಾಗುತ್ತದೆ. ಸಮಾಜದಲ್ಲಿ ಮಹಿಳೆಯರ ಬಗೆಗಿನ ಗ್ರಹಿಕೆ ಬದಲಾಗಬೇಕು. ಮಹಿಳೆ ಪುರುಷನ ಅಡಿಯಾಳಲ್ಲ. ದೇವರ ಪ್ರಾರ್ಥನೆಗೆ ಯಾವುದೇ ಭೇದ ಭಾವ ಇಲ್ಲ ಎಂದು ಅವರು ನುಡಿದರುಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಶನ್ ಪರವಾಗಿ ವಾದ ಮಂಡಿಸಿದ್ದ ವಕೀಲರಾದ ಇಂದಿರಾ ಜೈಸಿಂಗ್ ಅವರು ದೇಗುಲ ಪ್ರವೇಶಕ್ಕೆ ಸಂಬಂಧಿಸಿದ ದೇವಾಲಯದ ನಿಯಮಗಳು ಕೇವಲ ಲಿಂಗವನ್ನು ಆಧರಿಸಿರುವುದರಿಂದ ತಾರತಮ್ಯದ್ದಾಗಿವೆ ಎಂದು ಪ್ರತಿಪಾದಿಸಿದ್ದರು. ಸಂವಿಧಾನವನ್ನು ಉಲ್ಲೇಖಿಸಿದ ಅವರು  ಸಮಾನತೆಗೆ ಸಂಬಂಧಿಸಿದ ಅನುಚ್ಛೇದ ೧೪ ಮತ್ತು ೧೫ನ್ನು ಉಲ್ಲಂಘಿಸುವ ಯಾವುದೇ ವಿಧಿ ವಿಧಾನವು ರದ್ದು ಪಡಿಸಲು ಯೋಗ್ಯ ಎಂದು ಹೇಳಿದ್ದರು. ದೇವಾಲಯದಲ್ಲಿ ಮಹಿಳೆಯರ ಪ್ರವೇಶ ನಿರ್ಬಂಧವನ್ನು ಮೊತ್ತ ಮೊದಲಿಗೆ ಕೇರಳ ಹೈಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು. ಅದು ಪುರಾತನ ಪದ್ಧತಿಯ ಭಾಗ ಮತ್ತು ತಾರತಮ್ಯವಲ್ಲ ಎಂಬುದಾಗಿ ಕೇರಳ ಹೈಕೋರ್ಟ್ ೧೯೯೧ರಲ್ಲಿ ನಿರ್ಧರಿಸಿತ್ತುಸುಮಾರು ೧೫ ವರ್ಷಗಳ ಬಳಿಕ, ಪದ್ಧತಿಯು ತಾರತಮ್ಯ ಮತ್ತು ಲಿಂಗನ್ಯಾಯಕ್ಕೆ ವಿರುದ್ಧ ಎಂದು ಹೇಳಿ ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಶನ್ ಸುಪ್ರೀಂಕೋರ್ಟಿನಲ್ಲಿ ಅದನ್ನು ಪ್ರಶ್ನಿಸಿತ್ತು. ೨೦೧೭ರ ಅಕ್ಟೋಬರಿನಲ್ಲಿ ಪ್ರಕರಣವನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಗಿತ್ತು. ಪೀಠವು ಸುದೀರ್ಘ ವಿಚಾರಣೆಯ ಬಳಿಕ ಕಳೆದ ಪೀಠವು ಆಗಸ್ಟ್ ೧ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಪಶ್ಚಿಮ ಘಟ್ಟ ವಲಯದಲ್ಲಿರುವ ಶಬರಿಮಲೈ ಯಾತ್ರೆಯು ಹಲವಾರು ರೀತಿಯಿಂದ ವಿಶಿಷ್ಟವಾದುದು. ಅಯ್ಯಪ್ಪ ದರ್ಶನ ಮಾಡುವ ಭಕ್ತರು ೪೧ ದಿನಗಳ ಉಪವಾಸ ಮಾಡಬೇಕು, ಅವಧಿಯಲ್ಲಿ ಪ್ರಾಪಂಚಿಕ ಸುಖ ಜೀವನ ಬಿಡಬೇಕು ಮತ್ತು ಮತ್ತು ಬರಿಗಾಲಿನ ನಡಿಗೆಯ ಮೂಲಕ ಅಯ್ಯಪ್ಪ ದರ್ಶನಕ್ಕೆ ಬರಬೇಕು ಇತ್ಯಾದಿ ಕಠಿಣ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅಯ್ಯಪ್ಪ ಸ್ವಾಮಿಯ ಅತ್ಯಂತ ಒಲವಿನ ಭಕ್ತ ಒಬ್ಬ ಮುಸ್ಲಿಂ ಸಂತವಾವರ್ ಸ್ವಾಮಿ ಆಗಿದ್ದು, ಭಕ್ತರು ಬೆಟ್ಟದ ಮೇಲಿನ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಬರುವ ಮುನ್ನ ವಾವರ್ ಸ್ವಾಮಿಯನ್ನು ಪೂಜಿಸಿ ಮುಂದಕ್ಕೆ ಬರಬೇಕು. ೧೦ರಿಂದ ೫೦ ವರ್ಷಗಳ ನಡುವಣ ವಯೋಮಾನದ ಮಹಿಳೆಯರಿಗೆ ಮೂಲ ಶಿಬಿರಕ್ಕೆ ಮೊದಲಿನ ಕಿಮೀ ದೂರದ ಪಂಬಾದವರೆಗೆ ಮಾತ್ರ ಬರಲು ಅವಕಾಶವಿದೆ. ಅಲ್ಲಿಂದ ಬೆಟ್ಟವನ್ನು ಬರಿಗಾಲಿನಲ್ಲೇ ಏರಬೇಕು. ಇಲ್ಲಿ ಮಹಿಳಾ ಪೊಲೀಸರು ಮಹಿಳಾ ಭಕ್ತರನ್ನು ಪರಿಶೀಲಿಸುತ್ತಾರೆ. ಪೊಲೀಸರಿಗೆ ಅನುಮಾನ ಬಂದಲ್ಲಿ ಮಹಿಳಾ ಭಕ್ತರು ತಮ್ಮ ವಯಸ್ಸನ್ನು ಖಚಿತ ಪಡಿಸಲು ದಾಖಲೆ ನೀಡಬೇಕಾಗುತ್ತದೆ.  ಋತುಸ್ರಾವದ ಹಿನ್ನೆಲೆಯಲ್ಲಿಪಾವಿತ್ರ್ಯ ಕಾಪಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ನಿರ್ದಿಷ್ಟ ವಯಸ್ಸಿನ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ಸುಪ್ರೀಂಕೋರ್ಟಿಗೆ ತಿಳಿಸಿತ್ತು.

2018: ನವದೆಹಲಿ: ಪಂಚ ಸದಸ್ಯ ಸಂವಿಧಾನ ಪೀಠದ ಏಕೈಕ ಮಹಿಳಾ ನ್ಯಾಯಮೂರ್ತಿ ಯವರಾದ ಇಂದು ಮಲ್ಹೋತ್ರ ಅವರು ಶಬರಿ ಮಲೈ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ನಿಷೇಧಿಸುವ ಪದ್ಧತಿಗೆ ಸಂಬಂಧಿಸಿದಂತೆ ಭಿನ್ನ ಮತದ ತೀರ್ಪು ನೀಡಿದರುಧಾರ್ಮಿಕ ಪದ್ಧತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳು ನೀಡಿರುವ ವೈಯಕ್ತಿಕ ಅಭಿಪ್ರಾಯಗಳು ಅಪ್ರಸ್ತುತವಾಗಿದ್ದು ಸಮರ್ಥನೀಯವಲ್ಲ ಎಂದು ಮಹಿಳಾ ನ್ಯಾಯಮೂರ್ತಿ ಹೇಳಿದರು.  ‘ಜಾತ್ಯತೀತ ವ್ಯವಸ್ಥೆಯಲ್ಲಿ ಆಳವಾದ ಧಾರ್ಮಿಕ ನಂಬಿಕೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಬಾರದು. ಪದ್ಧತಿ ಆಚರಿಸುವ ಹಕ್ಕು ಮೂಲಭೂತ ಹಕ್ಕು. ಧಾರ್ಮಿಕ ಆಚರಣೆಗಳು ಸಂರಕ್ಷಿತವಾಗಿವೆ ಎಂದು ನ್ಯಾಯಮೂರ್ತಿ ಮಲ್ಹೋತ್ರ ಹೇಳಿದರು. ಇತರ ಇಬ್ಬರು ನ್ಯಾಯಮೂರ್ತಿಗಳು ಸಂವಿಧಾನದ ೨೫ನೇ ಅನುಚ್ಛೇದವು ಎಲ್ಲ ವ್ಯಕ್ತಿಗಳ ಮುಕ್ತ ಧರ್ಮಾಚರಣೆಯಲ್ಲಿ ಸಮಾನತೆಯನ್ನು ರಕ್ಷಿಸುತ್ತದೆ ಎಂದು ಹೇಳಿದರೆ, ನ್ಯಾಯಮೂರ್ತಿ ಮಲ್ಹೋತ್ರ ಅವರು೨೫ನೇ ಅನುಚ್ಛೇದವು ಅತ್ಯಗತ್ಯ ಪದ್ಧತಿಯನ್ನು ರಕ್ಷಿಸುತ್ತದೆ ಎಂದು ನುಡಿದರು. ನ್ಯಾಯಾಲಯಗಳೂ ಸಾಮಾನ್ಯವಾಗಿ ಧಾರ್ಮಿಕ ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದೂ ಅವರು ಬೊಟ್ಟು ಮಾಡಿದರು. ಧರ್ಮದ ಸಮಾನತೆಯ ವಿಷಯಗಳನ್ನು ಹಕ್ಕಿನ ಮೇಲೆ ನಿರ್ಧರಿಸಲು ಸಾಧ್ಯವಿಲ್ಲ. ಸತಿ ಪದ್ಧತಿಯಂತಹ ಕೆಡುಕಿನ ಪದ್ಧತಿಗಳ ಹೊರತಾಗಿ, ನಂಬಿಕೆಯ ಆಚರಣೆಗಳನ್ನು ನಿರ್ಧರಿಸುವುದು ಮತ್ತು ರದ್ದು ಪಡಿಸುವುದು ನ್ಯಾಯಾಲಯಗಳ ಕೆಲಸವಲ್ಲ ಎಂದು ಅವರು ನುಡಿದರು. ಧಾರ್ಮಿಕ ಆಚರಣೆಯಲ್ಲಿ ಅತ್ಯಗತ್ಯವಾದುದು ಯಾವುದು ಎಂಬುದನ್ನು ನಿರ್ಧರಿಸುವುದು ಧಾರ್ಮಿಕ ಸಮಿತಿಗಳಿಗೆ ಬಿಟ್ಟ ವಿಷಯ ಎಂದು ನ್ಯಾಯಮೂರ್ತಿ ಮಲ್ಹೋತ್ರ ನುಡಿದರು. ಭಾರತದಲ್ಲಿ ವೈವಿಧ್ಯಮಯವಾದ ಧಾರ್ಮಿಕ ಆಚರಣೆಗಳಿವೆ. ಪ್ರತಿಯೊಂದು ಧರ್ಮವೂ ಅದು ನಂಬಿದ ಧಾರ್ಮಿಕ ಆಚರಣೆಗಳಿಗೆ ಗೌರವ ನೀಡುವುದನ್ನು ಬಯಸುತ್ತದೆ. ಇಂತಹ ವಿಷಯಗಳಲ್ಲಿ ಕೋರ್ಟಿನ ಹಸ್ತಕ್ಷೇಪ ಸರಿಯಲ್ಲ ಎಂದು ಅವರು ಹೇಳಿದರು.

2018: ನವದೆಹಲಿ: ಭೀಮಾ -ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ
ಪೊಲೀಸರು ಐವರು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿರುವುದು ನಿಷೇಧಿತ ಮಾವೋವಾದಿ ಗುಂಪಿನ ಜೊತೆ ಸಂಬಂಧ ಇರುವುದಕ್ಕಾಗಿಯೇ ಎಂಬುದು ದಾಖಲೆಗಳಿಂದ ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂಬುದಾಗಿ ಹೇಳಿದ ಸುಪ್ರೀಂಕೋರ್ಟ್ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ ಐಟಿ) ರಚಿಸುವಂತೆ ಬಂಧಿತರು ಸಲ್ಲಿಸಿದ ಮನವಿಯನ್ನು ವಜಾಗೊಳಿಸಿತು. ಇದರೊಂದಿಗೆ ಮಹಾರಾಷ್ಟ್ರ ಪೊಲೀಸರಿಗೆ ಭಾರೀ ಬೆಂಬಲ ಲಭಿಸಿದಂತಾಗಿದೆ. ಕಾರ್ಯಕರ್ತರವನ್ನು ಬಂಧಿಸಿರುವುದು ಭಿನ್ನಮತ ವ್ಯಕ್ತ ಪಡಿಸುತ್ತಿರುವ ಕಾರಣಕ್ಕಾಗಿ ಅಲ್ಲ ಎಂದು ಸುಪ್ರೀಂಕೋರ್ಟಿನ ಮೂವರು ಸದಸ್ಯರ ಪೀಠವು : ಬಹುಮತದ ತೀರ್ಪಿನಲ್ಲಿ ಹೇಳಿತು.  ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿ .ಎಂ. ಖಾನ್ವಿಲ್ಕರ್ ಅವರು ತಮ್ಮ ಬಹುಮತದ ತೀರ್ಪಿನಲ್ಲಿ ತನಿಖೆ ಮುಂದುವರೆಸಲು ಮಹಾರಾಷ್ಟ್ರ ಪೊಲೀಸರಿಗೆ ಅನುಮತಿ ನೀಡಿದರು. ಕಾರ್ಯಕರ್ತರನ್ನು ಗೃಹಬಂಧನದಲ್ಲಿ ಇರಿಸಬೇಕು ಮತ್ತು ಸೆರೆಮನೆಗೆ ತಳ್ಳಬಾರದು ಎಂದು ನಿರ್ದೇಶಿಸುವ ಮೂಲಕ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಮಧ್ಯಂತರ ಪರಿಹಾರವನ್ನು ಪೀಠವು ನೀಡಿತು. ತನಿಖೆಯನ್ನು ಪೊಲೀಸರ ಕೈಯಿಂದ ತೆಗೆಯಬೇಕು ಎಂಬುದಾಗಿ ಬಂಧಿತ ಕಾರ್ಯಕರ್ತರು ಮಾಡಿದ ಮನವಿಯನ್ನೂ ವಜಾಗೊಳಿಸಿದ ಪೀಠ, ಕ್ರಿಮಿನಲ್ ತನಿಖೆಯ ಶರತ್ತುಗಳನ್ನು ಆರೋಪಿಗಳು ವಿಧಿಸುವಂತಿಲ್ಲ ಎಂದು ಹೇಳಿತು. ಬಹುಮತದ ತೀರ್ಪು ಸಾಮಾಜಿಕ ಕಾರ್ಯಕರ್ತರ ಗೃಹ ಬಂಧನದ ಆದೇಶವನ್ನು ನಾಲ್ಕು ವಾರಗಳ ಅವಧಿಗೆ ವಿಸ್ತರಿಸಿ, ಕಾರ್ಯಕರ್ತರಿಗೆ ಜಾಮೀನು ಮತ್ತಿತರ ಪರಿಹಾರ ಪಡೆಯಲು ವಿಚಾರಣೆ ನಡೆಸುವ ನ್ಯಾಯಾಧೀಶರನ್ನು ಸಂಪರ್ಕಿಸಲು ಕಾಲಾವಕಾಶ ಕಲ್ಪಿಸಿತು.  ಪೀಠದ ಮೂರನೇ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಭಿನ್ನಮತದ ಅಭಿಪ್ರಾಯವನ್ನು ನೀಡಿದರುವೈಯಕ್ತಿಕ ಸ್ವಾತಂತ್ರ್ಯದ  ರಕ್ಷಣೆಯ ಮಾರ್ಗದಲ್ಲಿ ತಾಂತ್ರಿಕ ವಾದಗಳು ಅಡ್ಡಿಯಾಗಬಾರದು ಎಂದು ನ್ಯಾಯಮೂರ್ತಿ ಹೇಳಿದರು. ಬಂಧನ ಮತ್ತು ಸಂಗ್ರಹಿಸಲಾದ ಸಾಕ್ಷ್ಯಾಧಾರಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಪತ್ರಿಕಾಗೋಷ್ಠಿ ನಡೆಸಿದ್ದಕ್ಕೆ ಅವರು ಅಸಮಾಧಾನ ವ್ಯಕ್ತ ಪಡಿಸಿದರು. ನ್ಯಾಯಾಲಯದ ನಿಗಾದಲ್ಲಿ ತನಿಖೆ ನಡೆಯುವ ಅಗತ್ಯವಿದೆ ಎಂದು ಅವರು ಹೇಳಿದರು. ಏನಿದ್ದರೂ, ಪೀಠದ ಬಹುಮತದ ಅಭಿಪ್ರಾಯದ ಪರಿಣಾಮವಾಗಿ ಈಗ ಮಹಾರಾಷ್ಟ್ರ ಪೊಲೀಸರಿಗೆ ಆನೆ ಬಲ ಲಭಿಸಿದಂತಾಗಿದ್ದು, ಅವರು ತಮ್ಮ ತನಿಖೆಯನ್ನು ಮುಂದುವರೆಸಲು ಅನುಮತಿ ಲಭಿಸಿದಂತಾಯಿತು.  ಹೈದರಾಬಾದಿನಲ್ಲಿ ಖ್ಯಾತ ತೆಲುಗು ಕವಿ ವರವರ ರಾವ್, ಮುಂಬೈಯ ಕಾರ್ಯಕರ್ತರಾದ ವೆರ್ನೋನ್ ಗೋನ್ಸಾಲ್ವೆಸ್ ಮತ್ತು ಅರುಣ್ ಫರೇರಿಯಾ, ಫರೀದಾಬಾದಿನಲ್ಲಿ ಕಾರ್ಮಿಕ ನಾಯಕಿ ಸುಧಾ ಭಾರದ್ವಾಜ್ ಮತ್ತು ನವದೆಹಲಿಯಲ್ಲಿ ಪೌರ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರನ್ನು ಏಕಕಾಲದಲ್ಲಿ ನಡೆಸಿದ ದಾಳಿಯಲ್ಲಿ ಬಂಧಿಸಲಾಗಿತ್ತು. ರಾವ್, ಭಾರದ್ವಾಜ್, ಫರೇರಿಯಾ, ಗೋನ್ಸಾಲ್ವೆಸ್ ಮತ್ತು ನವಲಖಾ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೫೩ () ಅಡಿಯಲ್ಲಿ ವಿವಿಧ ಗುಂಪುಗಳ ಮಧ್ಯೆ ಧರ್ಮ, ಜನಾಂಗ, ಜನ್ಮಸ್ಥಳ, ವಸತಿ, ಭಾಷೆ ನೆಲೆಯಲ್ಲಿ ವೈರತ್ವ ಹರಡುವುದಕ್ಕಾಗಿ ಮತ್ತು ಸೌಹಾರ್ದ ಪಾಲನೆಗೆ ವಿರುದ್ಧವಾದ ಕೃತ್ಯಗಳನ್ನು ಎಸಗುತ್ತಿರುವುದಕ್ಕಾಗಿ ಬಂಧಿಸಲಾಗಿತ್ತು. ಬಳಿಕ ಖ್ಯಾತ ಇತಿಹಾಸಕಾರ ರೊಮಿಲಾ ಥಾಪರ್ ಮತ್ತು ಇತರ ನಾಲ್ವರು ಗಣ್ಯ ವ್ಯಕ್ತಿಗಳುಭಿನ್ನಮತವನ್ನು ವ್ಯಕ್ತ ಪಡಿಸುತ್ತಿರುವುದಕ್ಕಾಗಿ ಶಿಕ್ಷಿಸಲು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪ್ರತಿಪಾದಿಸಿ ರಿಟ್ ಅರ್ಜಿ ದಾಖಲಿಸಿದ್ದರು. ಆಗಸ್ಟ್ ಕೊನೆಯ ವಾರ ನಡೆದ ವಿಚಾರಣೆ ಕಾಲದಲ್ಲಿ ಸುಪ್ರೀಂಕೋರ್ಟ್ಭಿನ್ನಮತವು ಪ್ರಜಾಪ್ರಭುತ್ವದ ಸುರಕ್ಷಾ ಕವಾಟ (ಸೇಫ್ಟಿ ವಾಲ್ವ್). ಭಿನ್ನಮತಕ್ಕೆ ಅವಕಾಶ ನೀಡದೇ ಇದ್ದಲ್ಲಿ ಪ್ರಜಾಪ್ರಭುತ್ವದ ಪ್ರೆಷರ್ ವಾಲ್ವ್ ಸ್ಫೋಟಗೊಳ್ಳುತ್ತದೆ ಎಂದು ಹೇಳಿತ್ತು.  ಐವರು ಕಾರ್ಯಕರ್ತರನ್ನು ಭಿನ್ನಮತ ಅಥವಾ ತಮ್ಮ ರಾಜಕೀಯ ಅಥವಾ ತಾತ್ವಿಕ ಸಿದ್ಧಾಂತಗಳಲ್ಲಿನ ಭಿನಾಭಿಪ್ರಾಯಕ್ಕಾಗಿ ಬಂಧಿಸಲಾಗಿದೆ ಎಂಬುದನ್ನು ಮಹಾರಾಷ್ಟ್ರ ಸರ್ಕಾರವು ಸುಪ್ರೀಂಕೋರ್ಟಿಗೆ ಸಲ್ಲಿಸಿದ ತನ್ನ ಉತ್ತರ ರೂಪದ ಪ್ರಮಾಣಪತ್ರದಲ್ಲಿ ನಿರಾಕರಿಸಿತ್ತು.

2018: ನವದೆಹಲಿ: ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನುಸಮರ್ಥಿಸಿರುವುದಕ್ಕೆ ಪ್ರತಿಭಟನೆಯಾಗಿ  ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ) ಪ್ರಧಾನ ಕಾರ್ಯದರ್ಶಿ ತಾರಿಖ್ ಅನ್ವರ್ ಅವರು ಪಕ್ಷ ಹಾಗೂ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು. ತಮ್ಮ ಲೋಕಸಭಾ ಕ್ಷೇತ್ರದಲ್ಲಿ ವಿಚಾರವನ್ನು ಪ್ರಕಟಿಸಿದ ಅನ್ವರ್, ಪಕ್ಷದ ಎಲ್ಲ ಹುದ್ದೆಗಳಿಗೂ ತಾವು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದರು. ಅನ್ವರ್ ಅವರು ಎನ್ ಸಿಪಿಯ ಸ್ಥಾಪಕ ಸದಸ್ಯರೂ ಆಗಿದ್ದು, ಸಂಸತ್ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದರು. ವಾರ ಮರಾಠಿ ಸುದ್ದಿ ಚಾನಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪವಾರ್ ಅವರು ರಫೇಲ್ ಯುದ್ಧ ವಿಮಾನ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶಗಳು ತಪ್ಪಲ್ಲ ಎಂಬುದಾಗಿ ಹೇಳಿರುವುದು ನನ್ನ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಅನ್ವರ್ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ಬಳಿಕ ಸ್ಪಷ್ಟನೆ ನೀಡಿದ್ದ ಪಕ್ಷವು ಪವಾರ್ ಅವರ  ಹೇಳಿಕೆಯು ಪ್ರಧಾನಿಗೆ ನೀಡಿದ ಕ್ಲೀನ್ ಚಿಟ್ ಅಲ್ಲ  ಎಂದು ಪ್ರತಿಪಾದಿಸಿತ್ತು. ಮಾಜಿ ಕೇಂದ್ರ ಸಚಿವರೂ ಆದ ಅನ್ವರ್ ಅವರು ರಫೇಲ್ ಹಗರಣಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಯಬೇಕು ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಶ್ವೇತಪತ್ರ ಪ್ರಕಟಿಸಬೇಕು ಎಂಬ ಕಾಂಗ್ರೆಸ್ ಬೇಡಿಕೆಯನ್ನು ಬೆಂಬಲಿಸುತ್ತಾ ಬಂದಿದ್ದರು. ನನ್ನ ಮುಂದಿನ ರಾಜಕೀಯ ಕ್ರಮದ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬೆಂಬಲಿಗರ ಜೊತೆ ಸಮಾಲೋಚಿಸಿದ ಬಳಿಕ ಬಗ್ಗೆ ನಾನು ನಿರ್ಧರಿಸುವೆ ಎಂದು ಅವರು ನುಡಿದರು. ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕ ಪ್ರೇಮ್ ಚಂದ್ರ ಮಿಶ್ರ ಅವರುಅನ್ವರ್ ಅವರು ಉತ್ತಮ ನಾಯಕ. ಅವರ ರಾಜಕೀಯ ಹೆಜ್ಜೆ ಬಗ್ಗೆ ನಾವು ಕಾತರದಿಂದ ನೋಡುತ್ತಿದ್ದೇವೆ ಎಂದು ಹೇಳಿದರು. ಪಕ್ಷದ ಹಿರಿಯ ನಾಯಕ ರಾಜ್ಯಸಭಾ ಸದಸ್ಯ ಡಿ.ಪಿ. ತ್ರಿಪಾಠಿ ಅವರು ಬೆಳವಣಿಗೆಯನ್ನು ದೆಹಲಿಯಲ್ಲಿ ದೃಢ ಪಡಿಸಿದರು.  ಕಾಂಗ್ರೆಸ್ಸಿನ ಬಿಹಾರ ಘಟಕದ ಮಾಜಿ ಅಧ್ಯಕ್ಷ ಅನ್ವರ್ ಅವರು ೧೯೯೦ರಲ್ಲಿ ಪವಾರ್ ಮತ್ತು ದಿವಂಗತ ಪಿ.. ಸಂಗ್ಮಾ ಅವರ ಜೊತೆಗೂಡಿ ಎನ್ ಸಿಪಿ ಸ್ಥಾಪಿಸಿದ್ದರು. ಸೋನಿಯಾ ಗಾಂಧಿ ಅವರು ಎಐಸಿಸಿ ಅಧ್ಯಕ್ಷತೆ ವಹಿಸುವುದನ್ನು ಅವರವಿದೇಶೀ ನೆಲೆಯಲ್ಲಿ ವಿರೋಧಿಸಿ ಅನ್ವರ್ ಮತ್ತು ಇತರ ನಾಯಕರು ಪಕ್ಷದಿಂದ ಹೊರನಡೆದಿದ್ದರು.

2018: ಜಕಾರ್ತ: ಇಂಡೋನೇಷ್ಯದ ಸುಲವೇಸಿ ದ್ವೀಪದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ಬಳಿಕ ಎದ್ದ ಬೃಹತ್ ಸುನಾಮಿ ಅಲೆಗಳು ಮನೆಗಳನ್ನು ಕೊಚ್ಚಿಕೊಂಡು ಹೋಗಿವೆ ಎಂದು ಅಧಿಕಾರಿಗಳು ತಿಳಿಸಿದರು. ರಿಕ್ಟರ್ ಮಾಪಕದಲ್ಲಿ . ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದನ್ನು ಅನುಸರಿಸಿ ಇಂಡೋನೇಷ್ಯ ಸರ್ಕಾರವು ಸುನಾಮಿ ಎಚ್ಚರಿಕೆ ನೀಡಿತ್ತು. ಆದರೆ ಅರ್ಧ ಗಂಟೆಯ ಬಳಿಕ ಸುನಾಮಿ ಎಚ್ಚರಿಕೆಯನ್ನು ಹಿಂತೆಗೆದುಕೊಂಡಿತ್ತು. ಆದರೆ ಬೆನ್ನಲ್ಲೇ ರಿಕ್ಟರ್ ಮಾಪಕದಲ್ಲಿ . ತೀವ್ರತೆಯ ಭೂಕಂಪ ಸೇರಿದಂತೆ ಭೂಕಂಪದ ಪ್ರಬಲ ಕಂಪನಗಳ ಪರಿಣಾಮವಾಗಿ ಸಮುದ್ರದಲ್ಲಿ ಎದ್ದ ರಕ್ಕಸ ಅಲೆಗಳು ದ್ವೀಪದಲ್ಲಿನ ಮನೆಗಳನ್ನು ಕೊಚ್ಚಿಕೊಂಡು ಹೋದವು ಎಂದು ವರದಿ ತಿಳಿಸಿತು. ಕೇಂದ್ರ ಸುಲವಾಸಿ ಪ್ರಾಂತ್ಯದ ರಾಜಧಾನಿ ಪಲು ಮತ್ತು ಸಣ್ಣ ನಗರ ದೊಂಗ್ಗಲಗಳಿಗೆ ಸುನಾಮಿ ಅಲೆಗಳು ಅಪ್ಪಳಿಸಿವೆ ಎಂದು ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಸುಟೊಪೊ ಪುರ್ವೊ ನುಗ್ರೊಹೊ ಟಿವಿ ಸಂದರ್ಶನದಲ್ಲಿ ತಿಳಿಸಿದರು. ಹಲವಾರು ಮನೆಗಳು ಕೊಚ್ಚಿಹೋಗಿದ್ದು, ಕುಟುಂಬಗಳು ಕಣ್ಮರೆಯಾಗಿವೆ. ಇಡೀ ಪ್ರದೇಶದ ಸಂಪರ್ಕ ಅಸ್ತವ್ಯಸ್ತಗೊಂಡಿದೆ ಎಂದು ಅವರು ನುಡಿದರುಸಂಪರ್ಕ ಕಡಿತ ಮತ್ತು ಕತ್ತಲಿನ ಪರಿಣಾಮವಾಗಿ ಯಾವ ಮಾಹಿತಿಯೂ ಲಭ್ಯವಾಗುತ್ತಿಲ್ಲ ಎಂದು ಅವರು ಹೇಳಿದರು. ರಕ್ಕಸ ಅಲೆಗಳು ಪಲು ನಗರಕ್ಕೆ ಅಪ್ಪಳಿಸುತ್ತಿದ್ದ ಹಾಗೂ ಜನ ಭೀತಿಯಿಂದ ಅರಚುತ್ತಾ ಓಡುತ್ತಿದ್ದ ಸ್ಮಾರ್ಟ್ ಫೋನ್ ವಿಡಿಯೋವನ್ನು ಇಂಡೋನೇಷ್ಯನ್ ಟಿವಿ ಪ್ರಸಾರ ಮಾಡಿತು. ಪಲು ವಿಮಾನ ನಿಲ್ದಾಣವು ೨೪ ಗಂಟೆಗಳ ಅವಧಿಗೆ ವಿಮಾನಯಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು.


2016: ನವದೆಹಲಿ: ಉರಿ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಸಿಂಧೂ (ಇಂಡಸ್) ಜಲ
ಒಪ್ಪಂದವನ್ನು ಭಾರತ ಮರು ಪರಿಶೀಲಿಸುತ್ತಿದೆ ಎಂಬ ವರದಿಗಳಿಂದ ದಿಕ್ಕೆಟ್ಟ ಪಾಕಿಸ್ತಾನ ಅಂತಹ ಸಾಧ್ಯತೆಯನ್ನು ತಡೆಯುವ ಸಲುವಾಗಿ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ ಮತ್ತು ವಿಶ್ವ ಬ್ಯಾಂಕ್ನ್ನು ಸಂರ್ಪರ್ಕಿಸಿತು.  ನೆತ್ತರು ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲಎಂಬುದಾಗಿ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ, ಸಿಂಧೂ ಜಲ ಒಪ್ಪಂದ ಮರುಪರಿಶೀಲನೆ ಹಾಗೂ ಭಾರತದಿಂದ ಪಾಕಿಸ್ತಾನಕ್ಕೆ ಹರಿಯುತ್ತಿರುವ ಸಿಂಧೂ ಮತ್ತು ಉಪನದಿಗಳ ನೀರನ್ನು ಗರಿಷ್ಠ ಪ್ರಮಾಣದಲ್ಲಿ ಬಳಸುವ ಬಗ್ಗೆ ಪರಿಶೀಲಿಸಲು ಸೂಚಿಸಿದ್ದರು. ಭಾರತದ ಸಂಭಾವ್ಯ ಕ್ರಮದ ವಿರುದ್ಧ ಪಾಕಿಸ್ತಾನದ ಅಧಿಕಾರಿಗಳ ತಂಡವೊಂದು ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ನ್ನು ಸಂರ್ಪರ್ಕಿಸಿದೆ ಎಂದು ವರದಿಗಳು ಹೇಳಿದವು. 1960ರಲ್ಲಿ ಒಪ್ಪಂದವನ್ನು ರೂಪಿಸಿದ ವಿಶ್ವಬ್ಯಾಂಕನ್ನೂ ಪಾಕಿಸ್ತಾನ ಸಂರ್ಪರ್ಕಿಸುತ. ಒಪ್ಪಂದದ ಪ್ರಕಾರವೇ ಉಭಯ ರಾಷ್ಟ್ರಗಳು ಸಿಂಧೂಕೊಳ್ಳದ ನೀರನ್ನು ಹಂಚಿಕೊಳ್ಳುತ್ತಾ ಬಂದಿದ್ದವು.
 2016: ಬೆಂಗಳೂರು:  ಬೃಹತ್ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ಸ್ಥಾನಕ್ಕೆ
ಪ್ರಕಾಶನಗರದ ಕಾಂಗ್ರೆಸ್ಸದಸ್ಯೆ ಜಿ. ಪದ್ಮಾವತಿ ಆಯ್ಕೆಯಾದರು.  ಬಿಬಿಎಂಪಿ ಕಚೇರಿಯಲ್ಲಿ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪದ್ಮಾವತಿ ಅವರು 142  ಮತ ಗಳಿಸಿ ಆಯ್ಕೆಯಾದರು. ಇವರ ಪ್ರತಿಸ್ಪರ್ಧಿ ಲಕ್ಷ್ಮಿ ಅವರಿಗೆ ಒಟ್ಟು 120 ಮತ ಲಭಿಸಿತು.  ಪ್ರಕಾಶ ನಗರದ ಸದಸ್ಯೆ ಕಾಂಗ್ರೆಸ್ ಅಭ್ಯರ್ಥಿ  ಪದ್ಮಾವತಿ  ಅವರ ವಿರುದ್ಧ ಗಣೇಶ ಮಂದಿರ ವಾರ್ಡ್ ಸದಸ್ಯೆ ಬಿಜೆಪಿ ಅಭ್ಯರ್ಥಿ ಡಿ.ಎಚ್. ಲಕ್ಷ್ಮಿ ಸ್ಪರ್ಧಿಸಿದ್ದರು.   ಉಪಮೇಯರ್  ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ. ಆನಂದ್ ಅವರು 142 ಮತಗಳನ್ನು ಪಡೆದು ಆಯ್ಕೆಯಾದರು. ಅವರು ಹೆಚ್ಎಸ್ಆರ್ ಲೇಔಟ್ ವಾರ್ಡ್ ಸದಸ್ಯ ಗುರುಮೂರ್ತಿ ರೆಡ್ಡಿ ಅವರನ್ನು ಪರಾಭವಗೊಳಿಸಿದರು.
2008: ಪರ ವಿರೋಧಿ ಚರ್ಚೆಯ ನಂತರ ಜನಪ್ರತಿನಿಧಿಗಳ ಸಭೆಯು ಭಾರತ - ಅಮೆರಿಕ ಪರಮಾಣು ಒಪ್ಪಂದದ ಮಸೂದೆಗೆ ಒಪ್ಪಿಗೆ ನೀಡುವ ಮೂಲಕ, ಅದಕ್ಕೆ ಇದ್ದ ದೊಡ್ಡ ಆತಂಕ ನಿವಾರಣೆಯಾಯಿತು. ಕುತೂಹಲಕರ ನಾಟಕೀಯ ಬೆಳವಣಿಗೆಯ ನಂತರ ಜನಪ್ರತಿನಿಧಿಗಳ ಸಭೆಯು ನಿಗದಿತ ಕಾಲಾವಧಿಗಿಂತ ಒಂದು ದಿನ ಹೆಚ್ಚಿಗೆ ಕಲಾಪ ನಡೆಸಿ ಕೊನೆಗೂ ಮಸೂದೆಗೆ ಒಪ್ಪಿಗೆ ನೀಡಿತು. ಆದರೂ ಡೆಮಾಕ್ರೆಟಿಕ್ ಪಕ್ಷದ ಅನೇಕ ಸದಸ್ಯರು  ಒಪ್ಪಂದವನ್ನು ವಿರೋಧಿಸುವ ತಮ್ಮ ನಿಲುವು ಬದಲಿಸಲಿಲ್ಲ. ಮಸೂದೆಯ ಪರ 298 ಸದಸ್ಯರು ಮತ ಚಲಾಯಿಸಿದರೆ, 117 ಸದಸ್ಯರು ವಿರೋಧಿಸಿ ಮತ ಚಲಾಯಿಸಿದರು. ಡೆಮಾಕ್ರೆಟಿಕ್ ಪಕ್ಷದಲ್ಲಿಯೇ ಮಸೂದೆಯ ಬಗ್ಗೆ ಭಿನ್ನಮತ ಮೂಡಿತ್ತು. ಈ ಪಕ್ಷದ 107 ಸದಸ್ಯರು ಪರವಾಗಿ ಇದ್ದರೆ, 120 ಸದಸ್ಯರು ವಿರೋಧ ವ್ಯಕ್ತಪಡಿಸಿದರು. ರಿಪಬ್ಲಿಕನ್ ಪಕ್ಷದ 178 ಮಂದಿ ಮಸೂದೆ ಪರವಾಗಿ ಮತ ಚಲಾಯಿಸಿದರೆ 10 ಮಂದಿ ವಿರುದ್ಧ ಮತ ಹಾಕಿದರು..

2008: ಸಂಪೂರ್ಣ ಉಕ್ಕಿನಿಂದ ನಿರ್ಮಿಸಲಾದ ಬೃಹತ್ ದೋಣಿಯನ್ನು ಚಲಾಯಿಸುವ ಮೂಲಕ 136 ಮಂದಿ ಹುಟ್ಟು ಹಾಕುವವರು ಮತ್ತು ಐವರು ನಾವಿಕರು ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಯಾದರು. ದೋಣಿಗಳನ್ನು ಸಾಮಾನ್ಯವಾಗಿ ಮರದ ದಿಮ್ಮಿಯಿಂದ ತಯಾರಿಸುತ್ತಾರೆ. ಆದರೆ, ಕೋಚಿಯಲ್ಲಿ ಈ `ಚುಂದಾನ್' ವಿಶೇಷ ದೋಣಿಯನ್ನು  `ಆಟೋಶಿಪ್' ಸಾಫ್ಟ್ ವೇರ್ ಬಳಸಿ ವಿನ್ಯಾಸ ಸಂಪೂರ್ಣ ಉಕ್ಕಿನಿಂದ ತಯಾರಿಸಲಾಗಿತ್ತು. ಇದರ ಉದ್ದ 143.25 ಅಡಿ, ಅಗಲ  5.74 ಅಡಿ ಹಾಗೂ ತೂಕ 8 ಟನ್.

2008: ಜರ್ಮನಿ ರಾಜಧಾನಿ ಬರ್ಲಿನ್ನಿನಲ್ಲಿ `35ನೇ ಬರ್ಲಿನ್ ಮ್ಯಾರಥಾನ್' ಓಟ ಆರಂಭವಾಯಿತು. ಈ ಮ್ಯಾರಥಾನ್ ಓಟದಲ್ಲಿ 100 ದೇಶಗಳ 40,000 ಓಟಗಾರರು ಪಾಲ್ಗೊಂಡರು.

2008: ಹನ್ನೆರಡು ಸಲ ಯೋಗ ಚಿಕಿತ್ಸೆಗೆ ಒಳಪಟ್ಟಲ್ಲಿ ಸಂಧಿವಾತದಿಂದ ನರಳುವ ರೋಗಿಗಳು ಸಾಕಷ್ಟು ಗುಣಮುಖರಾಗಬಹುದು ಎಂದು ಅಧ್ಯಯನವೊಂದು ಬಹಿರಂಗಪಡಿಸಿತು. ಯುಎಇಯ `ಎಮಿರೇಟ್ಸ್ ಅರ್ಥರೈಟಿಸ್ ಫೌಂಡೇಷನ್' ತಜ್ಞರ ತಂಡ ಈ ಸಂಶೋಧನೆ ಕೈಗೊಂಡಿದ್ದು, ಕೀಲು ರೋಗಗಳ ಕುರಿತು ಜಪಾನಿನಲ್ಲಿ ನಡೆದ ಸಮಾವೇಶದಲ್ಲಿ ಪ್ರಬಂಧ ಮಂಡಿಸಿತು. ಸಂಧಿವಾತದ ರೋಗಿಗಳ ಮೇಲೆ ಯೋಗ ಚಿಕಿತ್ಸೆ ಸಾಕಷ್ಟು ದೈಹಿಕ ಹಾಗೂ ಮಾನಸಿಕ ಪರಿಣಾಮ ಬೀರುತ್ತದೆ ಎಂದು  ದುಬೈಯ ಎಲುವು ಹಾಗೂ ಕೀಲು ಕೇಂದ್ರದ ತಜ್ಞ ಡಾ. ಹುಮೈರಾ ಬಾದಷಾ ಹೇಳಿದರು. ಸಂಧಿವಾತದಿಂದ ಬಳಲುತ್ತಿದ್ದ 47 ರೋಗಿಗಳನ್ನು ಈ ಅಧ್ಯಯನಕ್ಕಾಗಿ ಆಯ್ದುಕೊಳ್ಳಲಾಗಿತ್ತು. ಇವರಲ್ಲಿ 26 ಜನರಿಗೆ ಯೋಗ ಚಿಕಿತ್ಸೆ ನೀಡಲಾಯಿತು. 21 ಜನರಿಗೆ ಮಾಮೂಲಿ ಚಿಕಿತ್ಸೆ ನೀಡಲಾಯಿತು. ಯೋಗ ಚಿಕಿತ್ಸೆಗೆ ಒಳಗಾದ 26 ಜನ ರೋಗಿಗಳಲ್ಲಿಮೂರು ಜನ ಸ್ಟಿರಾಯ್ಡ್ಗಳನ್ನು ಸೇವಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಇನ್ನಿತರರ ಆರೋಗ್ಯವೂ ಗಣನೀಯವಾಗಿ ಸುಧಾರಿಸಿತು.

2008: ನೂತನ ಪ್ರಧಾನಿ ತರೋ ಅಸೋ ಅವರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದ ಸಾರಿಗೆ ಸಚಿವ ನಾರೈಕಿ ನಕಯಾಮ ಅವರು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಿದರು. ಹಲವಾರು ವಿಷಯಗಳ ಬಗ್ಗೆ ವಿವೇಚನೆಯಿಲ್ಲದೆ ಮಾತನಾಡಿದ ನಾರೈಕಿ ತಮ್ಮ ಮೊದಲ ಸಂದರ್ಶನದಲ್ಲಿ `ಜಪಾನ್ ಸಮಾನ ಜಾತಿಯ ದೇಶ' ಎಂದು ಹೇಳಿ, ಪ್ರಾದೇಶಿಕತೆ ಬಗ್ಗೆ ಒಲವು ಹೊಂದಿರುವವರ ಕೆಂಗಣ್ಣಿಗೆ ಗುರಿಯಾಗಿದ್ದರು.

2007: ಬೆಂಗಳೂರಿನಲ್ಲಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ರಾಜ್ಯ ಸರ್ಕಾರ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ 2006ನೇ ಸಾಲಿನ 'ಬಸವ ಪುರಸ್ಕಾರ' ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.

2007: ಕರ್ನಾಟಕದ 209 ನಗರ ಸ್ಥಳೀಯ ಸಂಸ್ಥೆ, ನಗರಸಭೆ, ನಗರಪಾಲಿಕೆಗಳಿಗೆ ಚುನಾವಣೆ ನಡೆಯಿತು.

2007: ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೆ ರಾಮಸೇತು ಒಡೆದು ಹಾಕುವುದರಿಂದ ಜೀವ ವೈವಿಧ್ಯತೆಗೆ ಹಾಗೂ ಪರಿಸರಕ್ಕೆ ಕುತ್ತು ಬರುವ ಸಾಧ್ಯತೆಗಳಿವೆ. ರಾಮಸೇತು ಕೇವಲ ಒಂದು ಮರಳಿನ ದಿಬ್ಬವಷ್ಟೇ ಅಲ್ಲ, ಅದು ಸಮುದ್ರದ ಆಳದಲ್ಲಿ ಉಷ್ಣತೆಯ ಹರಿವಿಗೆ ಸಾಕಷ್ಟು ತಡೆ ಒಡ್ಡುತ್ತಿದೆ. ಕಡಲಾಳದಲ್ಲಿ ಸಂಭವಿಸುವ ಭೂ ಕಂಪನಕ್ಕೂ ತಡೆ ನೀಡುತ್ತದೆ. ಅಲ್ಲದೇ ಪರಿಸರಕ್ಕೆ ಸಾಕಷ್ಟು ಅನುಕೂಲಗಳಿವೆ. ವ್ಯಾವಹಾರಿಕ ಲಾಭಕ್ಕಾಗಿ ಅದನ್ನು ಒಡೆದು ಹಾಕಿದರೆ ಮುಂದೊಂದು ದಿನ ಅಪಾಯ ಖಚಿತ. ರಾಮಸೇತು ಸಮುದ್ರದ ಒಳಗೆ ಭೂಕುಸಿತದಿಂದ ಜಲಾಂತರ್ಗಾಮಿಗಳು ಮುಳುಗದಂತೆಯೂ ಕಡಿವಾಣ ಹಾಕುತ್ತಿದೆ. ಕೆಲವು ಅಧ್ಯಯನಗಳು ಇದನ್ನು ದೃಢಪಡಿಸಿವೆ ಎಂದು ಭಾರತೀಯ ಸರ್ವೇಕ್ಷಣಾ ಇಲಾಖೆಯ ಮಾಜಿ ನಿರ್ದೇಶಕ ಗೋಪಾಲಕೃಷ್ಣನ್ ಹೇಳಿದರು. `ವೈಜ್ಞಾನಿಕವಾಗಿ ಹಾಗೂ ರಾಜಕೀಯವಾಗಿ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿರುವ ಈ ಯೋಜನೆ ಅನುಷ್ಠಾನದ ಕುರಿತು ಕೇಂದ್ರ ಸರ್ಕಾರ ಪ್ರಾಮಾಣಿಕ ಚರ್ಚೆ ನಡೆಸುತ್ತಿಲ್ಲ. ಹಾಗಾಗಿ ಸರ್ಕಾರ ಇದರ ಸಮಗ್ರ ಅಧ್ಯಯನಕ್ಕೆ ಸಮಿತಿ ರಚಿಸಬೇಕು' ಎಂದು ಗೋಪಾಲಕೃಷ್ಣನ್ ಆಗ್ರಹಿಸಿದರು.

2007: ಅಂತರ್ ಗ್ರಹ ಸಾರಿಗೆಗೆ ಮಾದರಿ ಎಂದು ಹೇಳಲಾದ ಗಗನನೌಕೆಯೊಂದನ್ನು ಕೇಪ್ ಕೆನವರಾಲಿನಿಂದ ಹಾರಿ ಬಿಡಲಾಯಿತು. 'ಡಾನ್' ಎಂದು ಕರೆಯಲಾಗುವ ಈ ಮಾನವ ರಹಿತ ನೌಕೆ ಮಂಗಳ ಮತ್ತು ಗುರು ಗ್ರಹದ ನಡುವೆ ಸಂಚರಿಸಲಿದೆ. ಕಡಿಮೆ ಇಂಧನದಲ್ಲಿ ಹೆಚ್ಚು ದೂರ ಕ್ರಮಿಸುವ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ ಎಂದು ನಾಸಾ ಪ್ರಕಟಿಸಿತು. ಭೂ ಕಕ್ಷೆಯನ್ನು ಬಿಟ್ಟ ನಂತರ ಡಾನ್ ತನ್ನ ರೆಕ್ಕೆಗಳನ್ನು ಬಿಡಿಸಿಕೊಂಡು ಸೌರಶಕ್ತಿಯೊಂದಿಗೆ ಮುಂದಿನ ಪ್ರಯಾಣ ಬೆಳೆಸುವುದು.  ಪ್ರಯಾಣದ ಅವಧಿಯಲ್ಲಿ ಡಾನ್, ಮಂಗಳ ಮತ್ತು ಗುರು ಗ್ರಹಗಳ ಲಕ್ಷಣಗಳ ಮೇಲೆ ಇನ್ನಷ್ಟು ಬೆಳಕು ಚೆಲ್ಲುವುದು. ನಾಲ್ಕು ವರ್ಷಗಳ ಬಳಿಕ ನೌಕೆ ಈ ಎರಡು ಗ್ರಹಗಳ ನಡುವೆ ಇರುವ ಭೂಮಿಯ ಉಪಗ್ರಹ ಚಂದ್ರನನ್ನು ಹೋಲುವ ವೆಸ್ಟಾ ಆಕಾಶಕಾಯದ ಮೇಲೆ ಇಳಿದು ಆರು ತಿಂಗಳ ಕಾಲ ಅಲ್ಲಿ ಶೋಧ ನಡೆಸಲಿದೆ. ನಂತರ ಕಿರು ಆಕಾಶಕಾಯ ಸೆರೆಸ್ ನತ್ತ ಪಯಣ ಬೆಳೆಸುವುದು.

2007: 1998ರ ಸರಣಿ ಬಾಂಬ್ ಸ್ಫೋಟ ಪ್ರಕರಣದ ಎಲ್ಲಾ ಆರೋಪಗಳಿಂದ  ಕೇರಳ ಮೂಲದ ಪಿಡಿಪಿ ನಾಯಕ ಅಬ್ಬುಲ್ ನಾಸಿರ್ ಮದನಿ ಸೇರಿ ಎಂಟು ಮಂದಿ ಖುಲಾಸೆಗೊಂಡರು. ಪ್ರಕರಣದಲ್ಲಿ ಷಾಮೀಲಾದ  ಆರೋಪ ಸಾಬೀತಾಗದ ಕಾರಣ ಎಂಟು ಮಂದಿಯನ್ನು  ಖುಲಾಸೆ ಮಾಡಲಾಗಿದೆ ಎಂದು ಸ್ಫೋಟ ಪ್ರಕರಣದ ವಿಶೇಷ  ನ್ಯಾಯಾಧೀಶ ಕೆ. ಉಥಿರಪತಿ ಅವರು ಕೊಯಮತ್ತೂರಿನಲ್ಲಿ ತೀರ್ಪು ನೀಡಿದರು. 1998ರ ಫೆಬ್ರುವರಿ 14ರಂದು ಕೊಯಮತ್ತೂರಿನಲ್ಲಿ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂಭವಿಸಿದ ಸ್ಫೋಟಗಳಿಗೆ 58ಮಂದಿ ಬಲಿಯಾಗಿ, ಸುಮಾರು 250 ಮಂದಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದನಿ ಸೇರಿ 166 ಜನರನ್ನು ಒಳಸಂಚು ಹಾಗೂ ಕೊಲೆ ಆರೋಪದ  ಮೇಲೆ ಬಂಧಿಸಲಾಗಿತ್ತು.

2007: ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ವೈ.ಕೆ.ಸಬರ್ವಾಲ್ ವಿರುದ್ಧ ಅವಹೇಳನಕಾರಿ ವರದಿ ಪ್ರಕಟಿಸಿದ ಆರೋಪದಲ್ಲಿ `ಮಿಡ್ ಡೇ' ಪತ್ರಿಕೆ ನಾಲ್ವರು ಪತ್ರಕರ್ತರಿಗೆ ದೆಹಲಿ ಹೈಕೋರ್ಟ್ ವಿಧಿಸಿದ ನಾಲ್ಕು ತಿಂಗಳು ಜೈಲು ಶಿಕ್ಷೆಗೆ  ಸುಪ್ರೀಂಕೋರ್ಟ್ ತಡೆ ನೀಡಿತು. ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಹಾಗೂ ಪಿ.ಸದಾಶಿವಂ ಅವರನ್ನೊಳಗೊಂಡ ಪೀಠವು ಸೆಪ್ಟೆಂಬರ್ 21 ರಂದು ದೆಹಲಿ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಪತ್ರಿಕೆಯು ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸಿತು.

2007: ಶೈಕ್ಷಣಿಕ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಶೇ 4ರಷ್ಟು ಮೀಸಲಾತಿ ಕಲ್ಪಿಸುವ ವಿವಾದಾತ್ಮಕ ಕಾಯ್ದೆಯನ್ನು ಅನುಷ್ಠಾನಕ್ಕೆ ತರದಂತೆ ಸುಪ್ರೀಂ ಕೋರ್ಟ್ ಆಂಧ್ರ ಪ್ರದೇಶ ಸರ್ಕಾರಕ್ಕೆ ತಡೆಯಾಜ್ಞೆ ನೀಡಿತು. ಧರ್ಮದ ಆಧಾರದ ಮೇರೆಗೆ ಹಿಂದುಳಿದ ವರ್ಗಗಳನ್ನು ಗುರುತಿಸುವುದು ಸಂವಿಧಾನ ವಿರೋಧಿ ಎಂದು ಹೇಳಿ ಟಿ. ಮುರಳೀಧರ ರಾವ್ ಹಾಗೂ ಕೆ. ಶ್ರೀತೇಜಾ ಅವರು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಆಂಧ್ರ ಪ್ರದೇಶ ಸರ್ಕಾರ ಶೈಕ್ಷಣಿಕ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡುವ ಕುರಿತು 2007ರ ಜುಲೈ 6ರಂದು ಸುಗ್ರೀವಾಜ್ಞೆ ಹೊರಡಿಸಿತ್ತು. ಈ ಸುಗ್ರೀವಾಜ್ಞೆಗೆ ತಡೆ ನೀಡುವಂತೆ ಕೋರಿ ಈ ಮೊದಲು ಸಲ್ಲಿಸಿದ್ದ ಅರ್ಜಿಯನ್ನು ಆಂಧ್ರ ಹೈಕೋರ್ಟ್ ತಳ್ಳಿಹಾಕಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಕೋರ್ಟಿಗೆ ಮೊರೆಹೋಗಿದ್ದರು.

2007: ಪಾಕಿಸ್ಥಾನದ ಮಾಜಿ ಪ್ರಧಾನಿ ಮತ್ತು ಮುಸ್ಲಿಂ ಲೀಗ್-ಎನ್ ಪಕ್ಷದ ಮುಖಂಡ ನವಾಜ್ ಷರೀಫ್ ಅವರನ್ನು ಸೆ.10ರಂದು ಪುನಃ ಸೌದಿ ಅರೇಬಿಯಾಕ್ಕೆ ಗಡೀಪಾರು ಮಾಡಿದ ಬಗ್ಗೆ ವಿವರಣೆ ನೀಡುವಂತೆ ಪ್ರಧಾನಿ ಶೌಕತ್ ಅಜೀಜ್ ಸೇರಿ ಹಲವು ಉನ್ನತ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತು. ಇದು ನ್ಯಾಯಾಲಯ ಆದೇಶದ ಸ್ಪಷ್ಟ ಉಲ್ಲಂಘನೆೆ ಎಂದೂ ನ್ಯಾಯಾಲಯ ಹೇಳಿತು.ನ್ಯಾಯಾಲಯದ ಆದೇಶದ ಹೊರತಾಗಿಯೂ ಷರೀಫ್ ಅವರನ್ನು ದೇಶದೊಳಗೆ ಪ್ರವೇಶಿಸದಂತೆ ತಡೆದು ಸರ್ಕಾರ ಪುನಃ ಗಡೀಪಾರು ಮಾಡಿತು ಎಂದು ಆಪಾದಿಸಿದ ಷರೀಫ್ ಸಂಬಂಧಿ ಹಮ್ಜಾ ಷರೀಫ್ ನ್ಯಾಯಾಲಯದ ಮೊರೆ ಹೋಗಿದ್ದರು.

2007: ಭಾರತೀಯ  ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ರವಿ ಶಾಸ್ತ್ರಿ  ಅವರನ್ನು ಬಿಸಿಸಿಐ  ಸರ್ವ ಸದಸ್ಯರ  ವಾರ್ಷಿಕ ಸಭೆಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್ಸಿಎ) ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಬಂಡಾಯ ಕ್ರಿಕೆಟ್ ಲೀಗ್ (ಐಸಿಎಲ್) ಜೊತೆಗೆ ಸೇರಿಕೊಂಡದ್ದಕ್ಕಾಗಿ  ಕಪಿಲ್ ದೇವ್  ಅವರನ್ನು ಅಧ್ಯಕ್ಷಸ್ಥಾನದಿಂದ ವಜಾ ಮಾಡಿದ ಬಳಿಕ ಉಸ್ತುವಾರಿ ಅಧ್ಯಕ್ಷರಾಗಿ  ನೇಮಕಗೊಂಡ ಅಜಯ್ ಶಿರ್ಕೆ ಅವರಿಂದ ರವಿ ಶಾಸ್ತ್ರಿ ಅಧಿಕಾರ ವಹಿಸಿಕೊಳ್ಳುವರು.

2007: ಸೇನಾ ಮುಖ್ಯಸ್ಥರಾಗಿದ್ದುಕೊಂಡೇ ಅಧ್ಯಕ್ಷ ಸ್ಥಾನಕ್ಕೆ  ಸ್ಪರ್ಧಿಸಲು ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಗೆ ಪಾಕಿಸ್ಥಾನಿ ಸುಪ್ರೀಂಕೋರ್ಟ್ ಅನುಮತಿ ನೀಡಿತು. ಸೇನಾ ಮುಖ್ಯಸ್ಥರಾಗಿದ್ದುಕೊಂಡೇ ಮುಷರಫ್ ಪುನರಾಯ್ಕೆಗೊಳ್ಳುವುದನ್ನು  ವಿರೋಧಿಸಿ ಸಲ್ಲಿಸಲಾದ ಅರ್ಜಿಗಳನ್ನು ಕೋರ್ಟ್ ತಳ್ಳಿ ಹಾಕಿತು. 9 ಸದಸ್ಯರ ಪೀಠದ 6 ಮಂದಿ ನ್ಯಾಯಮೂರ್ತಿಗಳು ತಮ್ಮ ನಾಮಪತ್ರ ಸಲ್ಲಿಸಿದ ಜನರಲ್ ಮುಷರಫ್ ಅವರು ಅಕ್ಟೋಬರ್ 6ರ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತೀರ್ಪು ನೀಡಿದರು. ಆದರೆ ಪೀಠದ ಮುಖ್ಯಸ್ಥ ನ್ಯಾಯಮೂರ್ತಿ ರಾಣಾ ಭಗವಾನ್ ದಾಸ್ ಸೇರಿದಂತೆ ಮೂವರು ನ್ಯಾಯಮೂರ್ತಿಗಳು ಮುಷರಫ್  ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಗಳ ಪರವಾಗಿ ತೀರ್ಪು ನೀಡಿದರು.

2006: ದಲಿತರು ಮತ್ತು ಕೊಳೆಗೇರಿ ಮಹಿಳೆಯರ ಕಲ್ಯಾಣ ಹಾಗೂ ಹಕ್ಕುಗಳ ಹೋರಾಟಗಾರ್ತಿ ಬೆಂಗಳೂರಿನ ರೂತ್ ಮನೋರಮಾ ಅವರು ಪರ್ಯಾಯ ನೊಬೆಲ್ ಪ್ರಶಸ್ತಿ ಎಂದೇ ಖ್ಯಾತಿ ಪಡೆದಿರುವ `ರೈಟ್ ಲೈವ್ಲಿಹುಡ್' ಪ್ರಶಸ್ತಿಗೆ ಆಯ್ಕೆಯಾದರು. ಬ್ರೆಜಿಲಿನ ಚಿಕೋ ವಿಟೇಕರ್ ಫೆರೀರಾ, ಅಮೆರಿಕದ ಡೇನಿಯಲ್ ಎಲ್ಸ್ ಬರ್ಗ್ ಅವರೂ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾದರು.

2006: ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಟಿ.ಎನ್. ಚತುರ್ವೇದಿ ಭಾಷಣ ಮಾಡಿದರು. ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗಾಗಿ ಆಡಳಿತವನ್ನು ಚುರುಕುಗೊಳಿಸುವಂತೆ ಅವರು ಸಲಹೆ ಮಾಡಿದರು.

2006: ಹೈಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾಗಿ ನಡೆದುದಕ್ಕಾಗಿ ಹಿರಿಯ ಐಎಎಸ್ ಅಧಿಕಾರಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ಜೈಕರ್ ಜೆರೋಮ್ ಅವರಿಗೆ 10,000 ರೂಪಾಯಿ ದಂಡ ವಿಧಿಸಲಾಯಿತು.

1989: ಫಿಲಿಪ್ಪೀನ್ಸಿನ ಪದಚ್ಯುತ ಅಧ್ಯಕ್ಷ ಫರ್ಡಿನಾಂಡ್ ಇ ಮಾರ್ಕೋಸ್ ಅವರು ಗಡೀಪಾರಾಗಿದ್ದಾಗ ಹವಾಯಿಯಲ್ಲಿ ತಮ್ಮ 72ನೇ ವಯಸಿನಲ್ಲಿ ಮೃತರಾದರು.

1978: ಪೋಪ್ ಒಂದನೆಯ ಜಾನ್ ಪಾಲ್ ಅವರು ಪೋಪ್ ಗುರುಗಳಾದ 34 ದಿನಗಳಲ್ಲೇ ನಿಧನರಾದರು. ಇವರು ಪೋಪ್ ಗುರುಗಳಾಗಿದ್ದ ಅವಧಿ ಆಧುನಿಕ ಕಾಲದಲ್ಲಿಯೇ ಅತ್ಯಂತ ಸಂಕ್ಷಿಪ್ತವಾದುದು. ಎರಡು ಹೆಸರುಗಳನ್ನು ಇಟ್ಟುಕೊಂಡ ಮೊದಲ ಪೋಪ್ ಇವರಾಗಿದ್ದರು. ತಮ್ಮ ಹಿಂದಿನ ಪೋಪ್ ಗುರುಗಳಾಗಿದ್ದ 23ನೆಯ ಜಾನ್ ಮತ್ತು 6ನೆಯ ಪಾಲ್ ಅವರ ನೆನಪಿಗಾಗಿ ಎರಡು ಹೆಸರುಗಳನ್ನು ಇವರು ಇಟ್ಟುಕೊಂಡಿದ್ದರು. ಗ್ರಾಮೀಣ ಹಿನ್ನೆಲೆಯಿಂದ ಬಂದು ಈ ಪದವಿಗೆ ಏರಿದ ಮೊದಲ ವ್ಯಕ್ತಿ ಕೂಡಾ ಇವರಾಗಿದ್ದರು.

1970: ಈಜಿಪ್ಟಿನ ಅಧ್ಯಕ್ಷರಾಗಿದ್ದ ಗಮೆಲ್ ಅಬ್ದುಲ್ ನಾಸ್ಸೇರ್ ಅವರು ತಮ್ಮ 52ನೇ ವಯಸಿನಲ್ಲಿ ಮೃತರಾದರು. ಅವರು 1956ರಿಂದ ಈಜಿಪ್ಟಿನ ಅಧ್ಯಕ್ಷರಾಗಿದ್ದರು.

1960: ಸಾಹಿತಿ ಶಾರದಾ ಗೋಪಾಲ ಜನನ.

1959: ಭಾರತದ ಆರತಿ ಸಹಾ ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಮೊದಲ ಏಷ್ಯನ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಫ್ರಾನ್ಸಿನಿಂದ ಇಂಗ್ಲೆಂಡ್ವರೆಗಿನ ದೂರವನ್ನು 16 ಗಂಟೆ 20 ನಿಮಿಷಗಳಲ್ಲಿ ಕ್ರಮಿಸಿದರು.

1942: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯನ್ನು (ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್ -ಸಿಎಸ್ ಐ ಆರ್) ಭಾರತದಲ್ಲಿ ಸ್ಥಾಪಿಸಲಾಯಿತು. ಶಾಂತಿ ಸ್ವರೂಪ್ ಭಟ್ನಾಗರ್ ಅವರು ಅದರ ಮೊದಲ ನಿರ್ದೇಶಕರಾದರು. ಅವರ ಪ್ರಯತ್ನದ ಫಲವಾಗಿ ಸಿಎಸ್ ಐಆರ್ ವಿವಿಧ ರಂಗಗಳಿಗೆ ಸಂಬಂಧಿಸಿದಂತೆ ಐದು ಸಂಶೋಧನಾ ಪ್ರಯೋಗಾಲಯಗಳನ್ನು ಸ್ಥಾಪಿಸಿತು.

1936: ಖ್ಯಾತ ಕಥೆಗಾರ ಎನ್.ಎಸ್. ಚಿದಂಬರರಾವ್ (28-9-1936ರಿಂದ 6-1-2002) ಅವರು ಎನ್. ಶಂಕರಪ್ಪ ಮಾಲೇನೂರು- ಸೀತಮ್ಮ ದಂಪತಿಯ ಮಗನಾಗಿ ದಾವಣಗೆರೆ ಬಳಿಯ ಹದಡಿಯಲ್ಲಿ ಜನಿಸಿದರು. ಸಾಹಿತ್ಯದ ಅಭಿರುಚಿಯಿಂದ ಅವರು ಬರೆದ ಮೊದಲ ಕಥೆ `ಶಾಂತಿ' ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಈ ಸ್ಫೂರ್ತಿಯಿಂದ ಕತೆಗಳನ್ನು ಬರೆಯಲಾರಂಭಿಸಿದ ಅವರು ಬರೆದ ಸಣ್ಣ ಕಥೆಗಳ ಸಂಖ್ಯೆ 512. ಸಣ್ಣ ಕಥಾ ಕ್ಷೇತ್ರದಲ್ಲಿ ಇದೊಂದು ದಾಖಲೆ. ಗಮಕ ವಾಚನ, ಗಾಯನ, ನಾಟಕಾಭಿನಯ ಇತ್ಯಾದಿ ಕಲೆಗಳಲ್ಲೂ ಅವರು ಖ್ಯಾತರಾಗಿದ್ದರು.

1934: ಸಾಹಿತಿ ಪಾ.ಶ. ಶ್ರೀನಿವಾಸ ಜನನ.

1929: ಭಾರತದ ಸಂಗೀತ ಕ್ಷೇತ್ರದ ಕೋಗಿಲೆ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಜನನ. ಸುಮಾರು 50,000 ಗೀತೆಗಳನ್ನು ಹಾಡಿರುವ ಲತಾ ಸಂಗೀತ ಕ್ಷೇತ್ರದಲ್ಲಿ ಐದೂವರೆ ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ತಮ್ಮ ಛಾಪನ್ನು ಒತ್ತಿದ್ದಲ್ಲದೆ ತಮ್ಮ ಜೀವನವನ್ನೇ ಸಂಗೀತಕ್ಕಾಗಿ ಮುಡುಪಿಟ್ಟವರು. 1962ರಲ್ಲಿ ಭಾರತ - ಚೀನಾ ಸಮರದ ಸಂದರ್ಭದಲ್ಲಿ ಲತಾ ಅವರು ಹಾಡಿದ `ಆಯ್ ಮೇರೆ ವತನ್ ಕೇ ಲಗಾನ್', `ಜರಾ ಆಂಖ್ ಮೇ ಭರ್ ಲೋ ಪಾನಿ' ಕವನಗಳನ್ನು ಕೇಳಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಕಣ್ಣುಗಳಲ್ಲಿ ನೀರು ತುಂಬಿತ್ತು. 2001ರಲ್ಲಿ ಲತಾಗೆ ಭಾರತ ರತ್ನ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಯಿತು.

1901: ಇದು ರೇಜéರ್ ಹಾಗೂ ಬ್ಲೇಡುಗಳು ಹುಟ್ಟಿದ ದಿನ. ಕಿಂಗ್ ಕ್ಯಾಂಪ್ ಗಿಲ್ಲೆಟ್ ಅವರು ಅಮೆರಿಕನ್ ಸೇಫ್ಟಿ ರೇಜéರ್ ಕಂಪೆನಿಯನ್ನು ಸ್ಥಾಪಿಸಿದರು. ಮೆಸಾಚ್ಯುಸೆಟ್ಸ್ ಬೋಸ್ಟನ್ನಿನಲ್ಲಿ ಮೀನಿನ ಅಂಗಡಿಯೊಂದರಲ್ಲಿ ಈ ಕಂಪೆನಿಯ ವ್ಯವಹಾರ ಆರಂಭವಾಯಿತು. 1902ರಲ್ಲಿ ಇದು ಗಿಲ್ಲೆಟ್ ಸೇಫ್ಟಿ ರೇಜéರ್ ಕಂಪೆನಿ ಎಂಬ ಹೆಸರು ಪಡೆಯಿತು. 1903ರ ವೇಳೆಗೆ 51 ರೇಜರುಗಳು ಮತ್ತು 168 ಬ್ಲೇಡುಗಳು ಮಾರಾಟವಾದವು. 1904ರ ವೇಳೆಗೆ ಮಾರಾಟ 10 ಲಕ್ಷದ ಗಡಿ ದಾಟಿತು. 1973ರಲ್ಲಿ ಅದರ ಮಾರಾಟ ಮೊತ್ತ ಮೊದಲ ಬಾರಿಗೆ 100 ಕೋಟಿ ಡಾಲರುಗಳನ್ನು ದಾಟಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment