Sunday, September 9, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 09

ಇಂದಿನ ಇತಿಹಾಸ History Today ಸೆಪ್ಟೆಂಬರ್ 09

2018: ನವದೆಹಲಿ: ೨೦೨೨ರ ವೇಳೆಗೆ ’ನವ ಭಾರತ’ ನಿರ್ಮಿಸುವ ಪಕ್ಷದ ಬದ್ಧತೆಯನ್ನು ಮತ್ತೆ ದೃಢಪಡಿಸುವ ನಿರ್ಣಯವನ್ನು ಇಲ್ಲಿ ಅಂಗೀಕರಿಸಿದ ಬಿಜೆಪಿ, ‘ವಿರೋಧ ಪಕ್ಷದ ಬಳಿ ನಾಯಕನೂ ಇಲ್ಲ, ನೀತಿಯೂ ಇಲ್ಲ, ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದಲ್ಲಿ ಅತ್ಯಂತ ಜನಪ್ರಿಯ ನಾಯಕ ರಾಗಿದ್ದಾರೆ’ ಎಂದು ಹೇಳಿತು. ಪಕ್ಷದ ಹಿರಿಯ ನಾಯಕ ಮತ್ತು ಗೃಹ ಸಚಿವರಾದ ರಾಜನಾಥ್ ಸಿಂಗ್ ಅವರು ರಾಜಧಾನಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್‍ಯಕಾರಿಣಿ ಸಭೆಯಲ್ಲಿ ರಾಜಕೀಯ ನಿರ್ಣಯವನ್ನು ಮಂಡಿಸಿದರು. ಕೇಸರಿ ಪಕ್ಷವನ್ನು ಸೋಲಿಸಲು ವಿರೋಧ ಪಕ್ಷಗಳು ರೂಪಿಸುತ್ತಿರುವ ಯೋಜನೆಯನ್ನು ’ಹಗಲುಗನಸು’ ಎಂದು ಬಿಜೆಪಿ ಬಣ್ಣಿಸಿತು. ರಾಷ್ಟ್ರೀಯ ಕಾರ್‍ಯಕಾರಿಣಿ ನಿರ್ಣಯದ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ’ಕಳೆದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್‍ಯಗಳು ನಡೆದಿವೆ, ೨೦೨೨ರ ವೇಳೆಗೆ ನವಭಾರತ ನಿರ್ಮಾಣವಾಗಲಿದೆ’ ಎಂದು ನುಡಿದರು. ’ಈ ಸರ್ಕಾರಕ್ಕೆ ದೂರದೃಷ್ಟಿ ಇದೆ, ಅನುರಾಗ ಇದೆ ಮತ್ತು ಕಲ್ಪನಾ ಶಕ್ತಿ ಇದೆ. ಜೊತೆಗೆ ಈ ಸರ್ಕಾರದ ಕೆಲಸಗಳನ್ನು ನೋಡಬಹುದು. ೨೦೨೨ರ ವೇಳೆಗೆ, ಭಾರತವು ಭಯೋತ್ಪಾದನೆ, ಜಾತೀಯತೆ, ಕೋಮುವಾದ ಮುಕ್ತವಾಗುತ್ತದೆ ಮತ್ತು ಯಾರೊಬ್ಬರೂ ವಸತಿ ರಹಿತರಾಗಿರುವುದಿಲ್ಲ’ ಎಂದು ಜಾವಡೇಕರ್ ಹೇಳಿದರು. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಜಾವಡೇಕರ್ ’ಏನಿದ್ದರೂ ರಫೇಲ್ ಯುದ್ಧ ವಿಮಾನ ವ್ಯವಹಾರ ಕುರಿತು ನಿರ್ಣಯದಲ್ಲಿ ಪ್ರಸ್ತಾಪಿಸಲಾಗಿಲ್ಲ’ ಎಂದು ನುಡಿದರು.  ’ಅದರ ಅಗತ್ಯ ಇಲ್ಲ. ಭ್ರಷ್ಟಾಚಾರದ ಆಪಾದನೆ ಮಾಡುತ್ತಿರುವ ಜನರು ಈ ವ್ಯವಹಾರದಲ್ಲಿ ಮಧ್ಯವರ್ತಿ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯ ಇದೆ. ಇದರಲ್ಲಿ ಕ್ವಟ್ರೋಚಿ ಇಲ್ಲ’ ಎಂದು ಅವರು ಕುಖ್ಯಾತ ಬೊಫೋರ್‍ಸ್ ವ್ಯವಹಾರದಲ್ಲಿದ್ದ ಮಧ್ಯವರ್ತಿಯ  ಹೆಸರನ್ನು ಉಲ್ಲೇಖಿಸುತ್ತ ಹೇಳಿದರು.  ೨೦೧೯ರ ಚುನಾವಣೆಗೆ ಬಿಜೆಪಿ ಬತ್ತಳಿಕೆಯ ಮುಖ್ಯ ವಿಷಯಗಳಲ್ಲಿ ಒಂದು ಆಗಿರುತ್ತದೆ ಎಂಬುದಾಗಿ ವ್ಯಾಪಕವಾಗಿ ನಂಬಲಾದ ರಾಮ ಮಂದಿರ ವಿಷಯ ಕೂಡಾ ನಿರ್ಣಯದಲ್ಲಿ ಪ್ರಸ್ತಾಪಗೊಂಡಿಲ್ಲ ಎಂದು ಜಾವಡೇಕರ್ ಸ್ಪಷ್ಟ ಪಡಿಸಿದರು. ವಿರೋಧ ಪಕ್ಷಗಳ ಬಗ್ಗೆ ಪ್ರಸ್ತಾಪಿಸಿರುವ ನಿರ್ಣಯವು ’ವಿಪಕ್ಷಗಳಿಗೆ ಕಾರ್‍ಯಸೂಚಿಯಾಗಲೇ, ನೀತಿಯಾಗಲಿ, ಕಾರ್‍ಯತಂತ್ರವಾಗಲೀ ಇಲ್ಲ. ವಿಪಕ್ಷವು ಭ್ರಮನಿರಸನಗೊಂಡಿದೆ ಮತ್ತು ಅದಕ್ಕೆ ನಾಯಕನಾಗಲೀ, ನೀತಿಯಾಗಲೀ ಇಲ್ಲ. ಅದರ ಏಕೈಕ ಕಾರ್‍ಯಸೂಚಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಡೆಯುವುದು’ ಎಂದು ಹೇಳಿರುವುದಾಗಿ ಜಾವಡೇಕರ್ ವಿವರಿಸಿದರು. ಮೋದಿಯವರು ರಾಷ್ಟ್ರದಲ್ಲಿ ಅತ್ಯಂತ ಜನಪ್ರಿಯರಾಗಿರುವ ವ್ಯಕ್ತಿಯಾಗಿದ್ದು, ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿ ಇದ್ದ ಬಳಿಕವೂ ಮೋದಿಯವರ ಅನುಮೋದನಾ ರೇಟಿಂಗ್ ಶೇಕಡಾ ೭೦ಕ್ಕಿಂತಲೂ ಹೆಚ್ಚಿದೆ ಎಂದು ನುಡಿದರ ಸಚಿವರು, ೨೦೧೯ರಲ್ಲಿ ಬಿಜೆಪಿಯು ಇನ್ನೂ ಹೆಚ್ಚಿನ ಬಹುಮತದೊಂದಿಗೆ ಜಯಗಳಿಸುವುದು ಎಂದು ಹೇಳಿದರು. ’ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರದ್ದು ವಿಶಿಷ್ಟ ಜೋಡಿ. ಇಂದು ೧೯ ರಾಜ್ಯಗಳಲ್ಲಿ ಬಿಜೆಪಿಯು ೩೫೦ಕ್ಕೂ ಹೆಚ್ಚು ಸಂಸತ್ ಸದಸ್ಯರನ್ನು ಮತ್ತು ೧೫೦೦ಕ್ಕೂ ಹೆಚು ಶಾಸಕರನ್ನು ಹೊಂದಿದೆ’ ಎಂದು ಅವರು ನುಡಿದರು.  ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಲೋಕಸಭೆಯ ೫೪೩ ಸ್ಥಾನಗಳ ಪೈಕಿ ೨೮೨ ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು.

2018: ನವದೆಹಲಿ: ದ್ವೇಷ ಮತ್ತು ಗುಂಪು ಹತ್ಯೆ ಘಟನೆಗಳಲ್ಲಿ ಶಾಮೀಲಾದವರು ತಮ್ಮನ್ನು ತಾವೇ ರಾಷ್ಟ್ರೀಯತಾವಾದಿಗಳು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ಇಲ್ಲಿ ಹೇಳಿದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಇಂತಹ ಪ್ರಕರಣಗಳನ್ನು ತಡೆಯಲು ಶಾಸನಗಳಿಂದ ಮಾತ್ರ ಸಾಧ್ಯವಿಲ್ಲ, ಸಾಮಾಜಿಕ ವರ್ತನೆಯಲ್ಲೂ ಬದಲಾವಣೆ ಆಗಬೇಕಾದ ಅಗತ್ಯ ಇದೆ ಎಂದು ನುಡಿದರು.  ಗುಂಪು ಹತ್ಯೆಯ ಪ್ರಕರಣಗಳನ್ನು ರಾಜಕೀಯ ಗೊಳಿಸುವುದರ ಬಗೆಗೂ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ ಉಪರಾಷ್ಟ್ರಪತಿ ’ಇಂತಹ ಪ್ರಕರಣಗಳನ್ನು ರಾಜಕೀಯ ಪಕ್ಷಗಳ ಜೊತೆ ತಳಕು ಹಾಕಬಾರದು’ ಎಂದು ಹೇಳಿದರು. ’ಸಾಮಾಜಿಕ ಬದಲಾವಣೆಯ ಅಗತ್ಯವಿದೆ. ಇದು (ಗುಂಪು ಹತ್ಯೆ) ನಡೆಯುವುದು ಈ ಪಕ್ಷ ಆ ಪಕ್ಷ ಎಂಬ ಕಾರಣಕ್ಕಾಗಿ ಅಲ್ಲ. ಈ ವಿಷಯವನ್ನು ರಾಜಕೀಯ ಪಕ್ಷಕ್ಕೆ ತಳಕು ಹಾಕಿದ ಕ್ಷಣದಲ್ಲೇ ಅದರ ಕಾರಣ ನಷ್ಟವಾಗುತ್ತದೆ. ಈಗ ಸಂಭವಿಸುತ್ತಿರುವುದು ಇದೇ’ ಎಂದು ನಾಯ್ಡು ಅಭಿಪ್ರಾಯಪಟ್ಟರು. ದ್ವೇಷ ಮತ್ತು ಗುಂಪುಹತ್ಯೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ’ಇದು ಹೊಸ ಪ್ರವೃತ್ತಿ ಅಲ್ಲ. ಹಿಂದೆ ಕೂಡಾ ಇಂತಹ ಘಟನೆಗಳು ಸಂಭವಿಸಿವೆ’ ಎಂದು ಹೇಳಿದರು.  ’ಸಾಮಾಜಿಕ ವರ್ತನೆ ಬದಲಾಗಬೇಕು. ನೀವು ಇನ್ನೊಬ್ಬ ವ್ಯಕ್ತಿಯನ್ನು ಕೊಂದಾಗ, ನೀವು ನಿಮ್ಮನ್ನು ರಾಷ್ಟ್ರೀಯತಾವಾದಿ ಎಂಬುದಾಗಿ ಕರೆದುಕೊಳ್ಳಲು ಹೇಗೆ ಸಾಧ್ಯ? ಧರ್ಮದ ಆಧಾರದಲ್ಲಿ, ಜಾತಿಯ ಆಧಾರದಲ್ಲಿ, ವರ್ಣದ ಆಧಾರದಲ್ಲಿ ಅಥವಾ ಲಿಂಗದ ಆಧಾರದಲ್ಲಿ ನೀವು ತಾರತಮ್ಯ ಮಾಡುತ್ತೀರಿ. ರಾಷ್ಟ್ರೀಯತೆ, ಭಾರತ್ ಮಾತಾ ಕೀ ಜೈಗಳಿಗೆ ವಿಶಾಲ ಅರ್ಥ ಇದೆ’ ಎಂದು ನಾಯ್ಡು ನುಡಿದರು. ಇವುಗಳಲ್ಲಿ ಕೆಲವನ್ನು ಕೇವಲ ಶಾಸನದಿಂದಲೇ ನಿಭಾಯಿಸಲು ಸಾಧ್ಯವಿಲ್ಲ.. ಇವುಗಳ ನಿಗ್ರಹಕ್ಕೆ ಸಾಮಾಜಿಕ ವರ್ತನೆಯಲ್ಲಿ ಬದಲಾವಣೆ ಆಗ ಬೇಕಾದ ಅಗತ್ಯವಿದೆ’ ಎಂದು ಅವರು ಹೇಳಿದರು. ರಾಷ್ಟ್ರದ ವಿವಿಧ ಭಾಗಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಸಂಭವಿಸುತ್ತಿರುವ ಗುಂಪು ಹತ್ಯೆಗಳಿಗಾಗಿ ಸರ್ಕಾರವು ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.  ಗೃಹ ಸಚಿವಾಲಯದ ಮಾಹಿತಿಯ ಪ್ರಕಾರ ಕಳೆದ ಒಂದು ವರ್ಷದಲ್ಲಿ ೯ ರಾಜ್ಯಗಳಲ್ಲಿ ೪೦ ಮಂದಿ ಗುಂಪು ದಾಳಿಗಳಲ್ಲಿ ಹತರಾಗಿದ್ದಾರೆ. ಇಂತಹ ಘಟನೆಗಳಲ್ಲಿ ಶಾಮೀಲಾದವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿರೋಧ ಪಕ್ಷಗಳು ಮತ್ತು ನಾಗರಿಕ ಹಕ್ಕುಗಳ ಸಮೂಹಗಳು ಆಪಾದಿಸಿವೆ. ಜುಲೈ ೧೭ರಂದು ಸುಪ್ರೀಂಕೋರ್ಟ್ ’ಗುಂಪುಗಳ ಭಯಾನಕ ಕೃತ್ಯಗಳು’ ನಾಡಿನ ಕಾನೂನನ್ನು ಮೂಲೆಗುಂಪು ಮಾಡಲು ಅವಕಾಶ ನೀಡಲಾಗದು ಎಂದು ಹೇಳಿ, ಗುಂಪು ಹತ್ಯೆಗಳು ಮತ್ತು ಗೋಸಂರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಗುಂಪು ದಾಳಿಗಳನ್ನು ಹೇಗೆ ನಿಭಾಯಿಸಬಹುದು ಎಂಬುದಾಗಿ ಸಲಹೆ ಮಾಡಿ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿತ್ತು. ಗುಂಪು ಹತ್ಯೆಗಳ ಬಗ್ಗೆ ಕಠಿಣವಾಗಿ ವ್ಯವಹರಿಸಲು ಸಾಧ್ಯವಾಗುವಂತೆ ಹೊಸ ಕಾನೂನು ರೂಪಿಸುವ ಬಗ್ಗೆ ಪರಿಶೀಲಿಸುವಂತೆಯೂ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಇಂತಹ ಘಟನೆಗಳ ನಿಗ್ರಹಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಪರಿಶೀಲಿಸಲು ರಚಿಸಲಾದ ಸರ್ಕಾರದ ಸಮಿತಿಯು ಹೊಸ ಶಾಸನ ರಚಿಸಲು ಶಿಫಾರಸು ಮಾಡಿದೆ ಎಂದು ಹೇಳಲಾಯಿತು. ’ನಿರ್ಭಯ ಪ್ರಕರಣ ವಿಷಯ ಬಂದಾಗ ನಿರ್ಭಯ ಕಾಯ್ದೆಗಾಗಿ ಕೂಗೆದ್ದಿತು. ನಿರ್ಭಯ ಕಾಯ್ದೆ ಬಂತು. ಆದರೆ ಇಂತಹ ಘಟನೆಗಳು ನಿಲ್ಲಲಿಲ್ಲ. ನಾನು ರಾಜಕೀಯಕ್ಕೆ ಇಳಿಯುವುದಿಲ್ಲ. ರಾಜಕೀಯ ಪಕ್ಷಗಳಿಗೆ ವಿಷಯಗಳತ್ತ ಬೆಳಕು ಚೆಲ್ಲುವ ತಮ್ಮದೇ ಮಾರ್ಗಗಳವೆ. ಕೇವಲ ಮಸೂದೆಯಲ್ಲ, ಇಂತಹ ಸಾಮಾಜಿಕ ಕೆಡುಕುಗಳ ನಿವಾರಣೆಗೆ ರಾಜಕೀಯ ಇಚ್ಛಾಶಕ್ತಿ, ಆಡಳಿತಾತ್ಮಕ ಕೌಶಲದ ಅಗತ್ಯವಿದೆ. ನಾನು ಇದನ್ನು ಸಂಸತ್ತಿನಲ್ಲೇ ಹೇಳಿದ್ದೇನೆ’ ಎಂದು ನಾಯ್ಡು ನುಡಿದರು. ಷ್ಟ್ರೀಯತೆಯ ಬಗ್ಗೆ ರಾಷ್ಟ್ರದಲ್ಲಿ ಚರ್ಚೆ ನಡೆದಿದೆ ಎಂದು ನುಡಿದ ಅವರು ’ರಾಷ್ಟ್ರೀಯತೆ ಎಂದರೆ ಏನು ಎಂಬುದನ್ನು ಸಮರ್ಪಕವಾಗಿ ವಿವರಿಸಬೇಕಾದ ಅಗತ್ಯವಿದೆ’ ಎಂದರು. ’ನನ್ನ ಪ್ರಕಾರ ರಾಷ್ಟ್ರೀಯತೆ ಅಥವಾ ’ಭಾರತ್ ಮಾತಾ ಕೀ ಜೈ’ ಅಂದರೆ ೧೩೦ ಕೋಟಿ ಜನರಿಗೆ ಜೈ ಹೋ ಎಂದು ಅರ್ಥ. ಜಾತಿ, ಜನಾಂಗ, ಲಿಂಗ, ಧರ್ಮ ಅಥವಾ ಪ್ರದೇಶದ ಆಧಾರದಲ್ಲಿ ಯಾವುದೇ ತಾರತಮ್ಯ ಎಸಗುವುದು ರಾಷ್ಟ್ರೀಯತೆಗೆ ವಿರುದ್ಧ’ ಎಂದು ಉಪ ರಾಷ್ಟ್ರಪತಿ ಹೇಳಿದರು. ೨೦೧೨ರ ಡಿಸೆಂಬರ್ ೧೬-೧೭ರ ನಡುವಣ ರಾತ್ರಿ ದಕ್ಷಿಣದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ಮಹಿಳೆಯೊಬ್ಬಳ ಮೇಲೆ ಐವರು ವ್ಯಕ್ತಿಗಳು ಮತ್ತು ಒಬ್ಬ ಅಪ್ರಾಪ್ತ ಬಾಲಕ ಅಮಾನುಷವಾಗಿ ದಾಳಿ ನಡೆಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆಕೆ ೨೦೧೨ರ ಡಿಸೆಂಬರ್ ೨೯ರಂದು ಗಾಯಗಳ ಪರಿಣಾಮವಾಗಿ ಸಿಂಗಾಪುರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.

2018: ಲಕ್ನೋ:  ‘ಸುಪ್ರೀಂಕೋರ್ಟ್ ನಮ್ಮದು. ಆದ್ದರಿಂದ  ಅಯೋಧ್ಯೆಯಲ್ಲಿ ಖಚಿತವಾಗಿ ರಾಮ ಮಂದಿರ ನಿರ್ಮಿಸಲಾಗುವುದು’ ಎಂಬ ಹೇಳಿಕೆ ನೀಡುವ ಮೂಲಕ  ಉತ್ತರ ಪ್ರದೇಶದ ಸಚಿವ ಮುಕುಟ್ ಬಿಹಾರಿ ವರ್ಮಾ ಅವರು ವಿವಾದ ಹುಟ್ಟು ಹಾಕಿದರು. ಮಂದಿರ್ ಹಮಾರಾ ಆರಾಧ್ಯ ಹೈ.. ಮಂದಿರ್ ಬನೇಗಾ.. ಮಂದಿರ್ ಬನಾನೇ ಕಿ ಲಿಯೆ ಹಮ್ ಲೋಗ್ ಸಂಕಲ್ಪ ಬದ್ಧ ಹೈ. (ಮಂದಿರ ನಮ್ಮ ಗುರಿ. ಅದು ಖಂಡಿತವಾಗಿ ನಿರ್ಮಾಣವಾಗುತ್ತದೆ. ನಾವೆಲ್ಲರೂ ಇದಕ್ಕೆ ಬದ್ಧರಾಗಿದ್ದೇವೆಎಂದು ವರ್ಮಾ ಅವರು ಬಹರಿಚ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು. ದೇವಾಲಯ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇನ್ನೂ ತೀರ್ಪು ನೀಡಬೇಕಷ್ಟೆಎಂಬುದಾಗಿ ಪತ್ರಕರ್ತರೊಬ್ಬರು ನೆನಪಿಸಿದಾಗ, ಸಚಿವರುಸುಪ್ರೀಂಕೋರ್ಟ್ ಮೇ ಹೈ ತಬೀ ತೊ!.. ಸುಪ್ರೀಂ ಭಿ ತೊ ಹಮಾರಾ ಹೈ , ಸುಪ್ರೀಂಕೋರ್ಟ್ ಭಿ ಹಮಾರಾ ಹೈ.. ನ್ಯಾಯಪಾಲಿಕಾ ಭೀ ಹಮಾರಾ ಹೈ. ವಿಧಾನ ಪಾಲಿಕಾ ಭಿ ಹಮಾರಾ ಹೈ , ಯಹ್ ದೇಶ್ ಭಿ ಹಮಾರಾ ಹೈ.. ಮಂದಿರ್ ಭೀ ಹಮಾರಾ ಹೈ (ಹೌದು, ನಿಶ್ಚಿತವಾಗಿ ವಿಷಯ ಸುಪ್ರೀಂಕೋರ್ಟಿನಲ್ಲಿದೆ. ಸುಪ್ರೀಂ ಕೋರ್ಟ್ ನಮ್ಮದು, ಅಲ್ಲವೇ? ನ್ಯಾಯಾಂಗ ನಮ್ಮದು, ದೇಶವೂ ನಮ್ಮದು, ದೇವಾಲಯವೂ ನಮ್ಮದೇ) ಎಂದು ಸಚಿವರು ಹೇಳಿದರು. ಬಹರಿಚ್ ನಿಂದ ನಾಲ್ಕು ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿರುವ ವರ್ಮಾ ಪ್ರಸ್ತುತ  ಉತ್ತರ ಪ್ರದೇಶದ ಸಹಕಾರ ಸಚಿವರಾಗಿದ್ದಾರೆ.2019 ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮಂದಿರ ವಿಚಾರವು ಚಾಲ್ತಿಗೆ ಬರುವಂತೆ ಮಾಡಿ ಮತಗಳ ಧ್ರುವೀಕರಣವಾಗುವಂತೆ ಮಾಡುವ ಉದ್ದೇಶದಿಂದಲೇ ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಹೇಳಿದವು. ವರ್ಮಾ ಅವರ ಹೇಳಿಕೆಗಳು ಸುದ್ದಿ ವಾಹಿನಿಗಳಲ್ಲಿ ಬಿತ್ತರಗೊಂಡು ಟೀಕೆಗಳು ವ್ಯಕ್ತವಾಗಲು ಆರಂಭವಾದೊಡನೆಯೇ ಸ್ಪಷ್ಟನೆ ನೀಡಿದ ಸಚಿವರುತಮ್ಮ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆಎಂದು ಹೇಳಿದರು. ‘ಸುಪ್ರೀಂ ಕೋರ್ಟ್ ಕೂಡಾ ನಮ್ಮ ದೇಶದ ಭಾಗವಾಗಿದ್ದು, ನಮಗೆ ಸೇರಿದ್ದು ಎಂಬುದು ನನ್ನ ಮಾತಿನ ಅರ್ಥವಾಗಿತ್ತು. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ  ಖಚಿತ ಎಂದೂ ನಾನು ಹೇಳಿದ್ದೆಎಂದು ಸಚಿವರು ನುಡಿದರು. ‘ನಾನೇನು ತಪ್ಪು ಹೇಳಿದ್ದೇನೆದೇಶವು ನಮ್ಮದಾಗಿದ್ದರೆ  ಸುಪ್ರೀಂಕೋರ್ಟ್ ಕೂಡಾ ನಮ್ಮದೇ, ಇತರ ಸಂಸ್ಥೆಗಳೂ ನಮ್ಮವೇ ಅಲ್ಲವೇ?’ ಎಂದು ಸಚಿವರು ಪ್ರಶ್ನಿಸಿದರು. ‘ನ್ಯಾಯಾಂಗವು  ತಟಸ್ಥವಾದುದು. ನಿಮ್ಮ ಮಾತುಗಳನ್ನು  ತಪ್ಪಾಗಿ ಭಾವಿಸುವ ಸಾಧ್ಯತೆಗಳಿವೆಎಂದು ಹೇಳಿದಾಗ, ‘ನಮಗೆಲ್ಲರಿಗೂ  ನ್ಯಾಯಾಲಯಗಳ ಬಗ್ಗೆ ಅಪಾರವಾದ ಗೌರವ  ಇದೆನಾನು ವಕೀಲನಾಗಿಯೂ ಇದ್ದೆ. ಹಾಗಾಗಿ ನನಗೆ ಇದು ಗೊತ್ತಿದೆಎಂದು ಅವರು ನುಡಿದರು. ಸಚಿವ ವರ್ಮಾ ಅವರ ಜೊತೆಗಿದ್ದ ಉತ್ತರ ಪ್ರದೇಶದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ ಮೌರ್ಯ  ಅವರು ವಿವಾದದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸಚಿವರ ಹೇಳಿಕೆಗಾಗಿ ಬಿಜೆಪಿ ಮೇಲೆ ಹರಿ ಹಾಯ್ದವು.ಸಚಿವರು ಎಷ್ಟೊಂದು ಸೊಕ್ಕಿನವರೂ, ನ್ಯಾಯಾಲಯಗಳ ಬಗ್ಗೆ ಅಗೌರವ ಉಳ್ಳವರೂ ಆಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆಎಂದು ಅವು ಹೇಳಿದವು. ‘ನಾವೆಲ್ಲರೂ ನ್ಯಾಯಾಲಯಗಳನ್ನು ಅತ್ಯಂತ ಗೌರವದಿಂದ ಕಾಣುತ್ತೇವೆ. ಸಚಿವರು ಬೇರೇನನ್ನೋ ಹೇಳಲು ಹೊರಟಿರಬಹುದು ಎಂದು ನಾವು ಭಾವಿಸಿದರೂ, ಅವರು ಹೇಳಿಕೆ ನೀಡಿರುವ ಧೋರಣೆಯು ಈಗ ಉತ್ತರ ಪ್ರದೇಶದ ಸಚಿವರು ಹೇಳಿಕೆ ನೀಡುವ ಮುನ್ನ ಯೋಚಿಸುವುದಿಲ್ಲ ಎಂಬುದನ್ನು ತೋರಿಸಿದೆ.ಸಚಿವರು  ನ್ಯಾಯಾಂಗದ ಮೇಲೆ ಅಪಾರ ಗೌರವ ಇಟ್ಟುಕೊಂಡಿರುವ ರಾಷ್ಟ್ರದ  ಕ್ಷಮೆಯಾಚನೆ ಮಾಡುವ ಅಗತ್ಯ ಇದೆಎಂದು ಸಮಾಜವಾದಿ ಪಕ್ಷದ ತಾರಿಖ್ ಸಿದ್ದಿಕಿ ಹೇಳಿದರು. ‘ಹೇಳಿಕೆಯು ಅಪಾಯಕಾರಿಯಾದುದು ಮತ್ತು ಬಿಜೆಪಿ ಸಚಿವರ ಹೆಚ್ಚುತ್ತಿರುವ ದರ್ಪವನ್ನು ಹಾಗೂ ಸಾಂವಿಧಾನಿಕ ಸಂಸ್ಥೆಗಳ ಬಗೆಗಿನ ಅವರ ಅಗೌರವವನ್ನು ತೋರಿಸುತ್ತದೆಎಂದು ಕಾಂಗ್ರೆಸ್ ನಾಯಕ ದೇವೇಂದ್ರ ಪ್ರತಾಪ್ ಸಿಂಗ್ ನುಡಿದರು.ಹಿಂದಿನ ತಿಂಗಳು ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ  ಅವರುನ್ಯಾಯಾಲಯದಲ್ಲಿ ವಿವಾದ  ಇತ್ಯರ್ಥವಾಗದೇ ಇದ್ದಲ್ಲಿ ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ಶಾಸನ ರೂಪಿಸುವ ಬಗ್ಗೆ ಪರಿಶೀಲಿಸಬಹುದುಎಂದು ಹೇಳಿದ್ದರು


2016: ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತ ಮತ್ತು ಕನ್ನಡಪರ ಸಂಘಟನೆಗಳು ಕರೆನೀಡಿದ್ದ ರಾಜ್ಯ ಬಂದ್ಶಾಂತಿಯುತವಾಗಿ ನಡೆಯಿತು. ಬೆಂಗಳೂರು ಮತ್ತು ಕಾವೇರಿ ಕಣಿವೆ ಜಿಲ್ಲೆಗಳಲ್ಲಿ ಬಂದ್ಸಂಪೂರ್ಣ ಯಶಸ್ವಿಯಾದರೆ, ಉತ್ತರ ಕರ್ನಾಟ ಮತ್ತು ಮಂಗಳೂರು ಭಾಗದಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.  ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಲಿಲ್ಲ. ಮೈಸೂರು: ಕಾವೇರಿ ಕಣಿವೆ ಭಾಗದಲ್ಲಿ ಬಂದ್ಗೆ  ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಕೊಡಗು ಹೊರತುಪಡಿಸಿ ಇಡೀ ಕಾವೇರಿ ಕಣಿವೆ  ಸಂಪೂರ್ಣ ಸ್ತಬ್ಧವಾಗಿತ್ತುಸಾರಿಗೆ, ಖಾಸಗಿ ಬಸ್‌, ಆಟೊ, ಟ್ಯಾಕ್ಸಿಗಳು ರಸ್ತೆಗೆ ಇಳಿಯಲಿಲ್ಲ. ಸರ್ಕಾರಿ ಶಾಲೆ, ಕಾಲೇಜು ಬಾಗಿಲು ತೆರೆಯಲಿಲ್ಲ. ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆ ಇತ್ತು. ಚಿತ್ರಮಂದಿರಗಳು ಮೊದಲ ಎರಡು ಪ್ರದರ್ಶನಗಳನ್ನು ರದ್ದು ಮಾಡಿದ್ದವು. ಪೆಟ್ರೋಲ್ಬಂಕ್ಗಳು ಸಂಜೆಯವರೆಗೆ ಸೇವೆ ಒದಗಿಸಲಿಲ್ಲ. ಕೆಆರ್ಎಸ್ಅಣೆಕಟ್ಟೆಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದರು. ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಅಶ್ರವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿದರು. ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಮೂವರು ನದಿಗೆ ಬಿದ್ದು ಅಸ್ತಸ್ಥಗೊಂಡರು. ಚಾಮರಾಜನಗರದ ಕೆಎಸ್ಆರ್ಟಿಸಿ, ಖಾಸಗಿ ಬಸ್ನಿಲ್ದಾಣ ಭಣಗುಡುತ್ತಿದ್ದವು. ಅಂತರರಾಜ್ಯ ಬಸ್ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಜನನಿಬೀಡ ಸ್ಥಳಗಳಾದ ದೊಡ್ಡಅಂಗಡಿ, ಚಿಕ್ಕ ಅಂಗಡಿ ಬೀದಿ, ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ವ್ಯಾಪಾರವಹಿವಾಟು ಸ್ಥಗಿತಗೊಂಡಿತ್ತು. ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ದ್ವಿಚಕ್ರ ವಾಹನಕ್ಕೆ ಬೆಂಕಿ ಹಾಕಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಹೋಟೆಲ್ಗಳು ಬಾಗಿಲು ಮುಚ್ಚಿದ್ದವು. ಬಂದ್ಬೆಂಬಲಿಸಿ ಬೀದಿಗೆ ಇಳಿದಿದ್ದ ಪ್ರತಿಭಟನಾಕಾರರು ಟೈರುಗಳಿಗೆ ಬೆಂಕಿ ಹಾಕಿದ್ದರು. ಉಳಿದಂತೆ ಎಲ್ಲೆಡೆ ಬಂದ್ಶಾಂತಿಯುತವಾಗಿ ನಡೆಯಿತು. ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಖಾಸಗಿ ಬಸ್‌, ಆಟೊ ಸಂಚಾರ ಸಹಜವಾಗಿತ್ತು. ಅಂಗಡಿಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಶಾಲೆಕಾಲೇಜುಗಳಿಗೆ ಮಾತ್ರ ರಜೆ ಘೋಷಿಸಲಾಗಿತ್ತು. ಉತ್ತರ ಕರ್ನಾಟಕ  ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
2016: ಕಯಂಕುಳಂ (ಕೇರಳ): ಬೆಡ್ಶೀಟ್ನಂತೆ ದುಪ್ಪಟ್ಟುಗೊಳಿಸಬಹುದಾದ ನುಸಿಬಲೆಯನ್ನು (ಸೊಳ್ಳೆ ಪರದೆ)ಹವ್ಯಾಸಿ ವಿಜ್ಞಾನಿಯೊಬ್ಬರು ವಿನ್ಯಾಸಗೊಳಿಸಿರುವುದಾಗಿ ಬಹಿರಂಗ ಪಡಿಸಿದರು. ತಮ್ಮ ಸೊಳ್ಳೆ ಪರದೆಗಾಗಿ ಹವ್ಯಾಸಿ ವಿಜ್ಞಾನಿ ಎಂ.ಸಿ. ಡೇವಿಡ್ (60) ಮೂರನೇ ಪೇಟೆಂಟ್ ಪಡೆದುಕೊಂಡಿದ್ದಾರೆ. ಸೊಳ್ಳೆ ಪರದೆಯನ್ನು ಬೇಕೆಂದ ಕಡೆಗೆ ಒಯ್ಯಬಹುದಾಗಿದ್ದು, ಹೋದಲ್ಲಿ ಜೋಡಿಸಲು ಬೇಕಾದ ಪರಿಕರಗಳೂ ಜೊತೆಗೇ ಲಭ್ಯವಿರುತ್ತವೆ.  ‘ನನಗೆ ಸೊಳ್ಳೆ ಪರದೆಗಾಗಿ ಭಾರತದ ಪೇಟೆಂಟ್ ಲಭಿಸಿದೆ. ದೊಡ್ಡ ಪ್ರಮಾಣದಲ್ಲಿ ಇದನ್ನು ತಯಾರಿಸುವ ಬಗ್ಗೆ ಕೆಲವರ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ. ಬೆಡ್ ಶೀಟ್ನಂತೆ ಮಡಚಿ ಒಯ್ಯಬಹುದಾದ ಮತ್ತು ಅಂದಾಜು ಒಂದು ಕಿ.ಗ್ರಾಂ.ನಷ್ಟು ಮಾತ್ರ ತೂಕ ಇರುವ ಸೊಳ್ಳೆ ಪರದೆಯನ್ನು ಸುಮಾರು 1000 ರೂಪಾಯಿಗಳಷ್ಟು ಅಗ್ಗದ ದರದಲ್ಲಿ ನೀಡಬಹುದು ಎಂದು ಡೇವಿಡ್ ಹೇಳಿದರು. ಸೊಳ್ಳೆ ಪರದೆಯಲ್ಲಿ ಯಾವುದೇ ಲೋಹ ಅಥವಾ ಕಡಿದಾದ ಬದಿ ಇರುವುದಿಲ್ಲ. ಇದನ್ನು ಅತ್ಯಂತ ಕ್ಷಿಪ್ರವಾಗಿ ಜೋಡಿಸಬಹುದು ಮತ್ತು ಬಿಚ್ಚಬಹುದು ಎಂದು ಅವರು ನುಡಿದರು. ಉತ್ಪನ್ನ ಒಂದು ಸೊಳ್ಳೆಪರದೆ, ಅದನ್ನು ನಿಲ್ಲಿಸಲು ಎರಡು ರಬ್ಬರ್ ಟ್ಯೂಬ್ಗಳು, ಮತ್ತು ಮಂಚ ಅಥವಾ ನೆಲದ ಮೇಲೆ ಮಲಗಿದ ಮನುಷ್ಯನನ್ನು ಪೂರ್ಣವಾಗಿ ಆವರಿಸುವಂತೆ ಮಾಡುವ ಹೊದಿಕೆ ಇರುತ್ತದೆ. ನೀರು ಅಥವಾ ಗಾಳಿ ತುಂಬಿಸಿ ರಬ್ಬರ್ ಟ್ಯೂಬ್ ಬಳಸಿ ಸೊಳ್ಳೆ ಪರದೆಯನ್ನು ನಿಲ್ಲಿಸಬಹುದು. ಬಳಿಕ ನೀರು, ಗಾಳಿ ತೆಗೆದು ಪರದೆಯನ್ನು ಮಡಚಿ ಬೇಕೆಂದ ಕಡೆಗೆ ಒಯ್ಯಬಹುದು ಎಂದು ಡೇವಿಡ್ ವಿವರಿಸಿದರು.

2016: ನವದೆಹಲಿ: ತನ್ನ ಎಲ್ಲ ವಿಮಾನಗಳಲ್ಲೂ ಸ್ಯಾಮ್ಂಗ್ ಗ್ಯಾಲಕ್ಸಿ ನೋಟ್ 7 ಫೋನನ್ನು ಭಾರತ ನಿಷೇಧಿಸಿತು. ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಫೋನ್ ಬ್ಯಾಟರಿ ಸಮಸ್ಯೆಗಳಿಂದ ಸ್ಪೋಟಿಸುತ್ತಿರುವ ಬಗ್ಗೆ ಬರುತ್ತಿರುವ ವರದಿಗಳನ್ನು ಅನುಸರಿಸಿ ಭಾರತ ಕ್ರಮ ಕೈಗೊಂಡಿತು. ಈಗಾಗಲೇ ಹಲವಾರು ರಾಷ್ಟ್ರಗಳು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಫೋನನ್ನು ನಿಷೇಧಿಸಿದ್ದು, ಆ ಸಾಲಿಗೆ ಭಾರತವೂ ಸೇರಿತು. ಭಾರತದ ನಾಗರಿಕ ವಿಮಾನಯಾನ ಸಚಿವಾಲಯವು  ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿ ವಿಮಾನ ಹಾರಾಟ ಕಾಲದಲ್ಲಿ ಮೊಬೈಲ್ ಫೋನ್ ಚಾರ್ಜ್ ಮಾಡದಂತೆ ಹಾಗೂ ಬಳಸದಂತೆ ವಿಮಾನ ಯಾನ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಸಲಹೆ ಮಾಡಿತು.

2016: ಅಂಬೇಡ್ಕರ್ ನಗರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ರಾಹುಲ್ ಗಾಂಧಿ ಅವರಕಿಸಾನ್ ಮಹಾಯಾತ್ರೆಕಾಲದ ಖಾತ್ ಸಭಾ ಮುಗಿಯುತ್ತಿದ್ದಂತೆಯೇ ಸ್ಥಳೀಯರು ತಮಗೆ ಕುಳಿತುಕೊಳ್ಳಲು ಒದಗಿಸಲಾಗಿದ್ದಖತಿಯಾಸ್’ (ಮರದ ಮಂಚಗಳು) ಹೊತ್ತೊಯ್ದರು.
ದೇವರಿಯಾದಲ್ಲೂ ರಾಹುಲ್ ಗಾಂಧಿ ಅವರ ಖಾತ್ ಸಭಾ ಮುಗಿಯುತ್ತಿದ್ದಂತೆಯೇ ಸ್ಥಳೀಯರು ಮರದ ಮಂಚಗಳನ್ನು ತಮ್ಮಿಷ್ಟ ಬಂದಂತೆ ತೆಗೆದುಕೊಂಡು ಹೋಗಿದ್ದರು. ಸ್ಥಳೀಯರ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರೂ ಮಂಚಗಳನ್ನು ಒಯ್ದ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

2016: ನವದೆಹಲಿ: ಕೇವಲ 12 ಗಂಟೆಗಳಲ್ಲಿ ಮುಂಬೈಯಿಂದ ದೆಹಲಿ ತಲುಪಬಹುದು. ಅಂತಹ ಒಂದು ರೈಲು
ದೇಶದ ರಾಜಧಾನಿ ದೆಹಲಿಗೆ ವಾಣಿಜ್ಯ ರಾಜಧಾನಿ ಮುಂಬೈಯಿಂದ ಸಂಚರಿಸಲಿದೆ. ಸ್ಪಾನಿಶ್ ನಿರ್ಮಿತ ಟಾಲ್ಗೊ ಹೆಸರಿನ ಸೂಪರ್ ಫಾಸ್ಟ್ ರೈಲುಗಾಡಿ ಮುಂಬೈ- ದೆಹಲಿ ನಡುವೆ ಸಂಚರಿಸಲು ಸಜ್ಜಾಗಿದ್ದು, ಸೆಪ್ಟೆಂಬರ್ 10ರ ಶನಿವಾರ ಅದರ ಓಡಾಟದ ಅಂತಿಮ ಪರೀಕ್ಷೆ ನಡೆಯಲಿದೆ. ಅತ್ಯಂತ ಹಗುರವಾದ ಬೋಗಿಗಳಿರುವ ರೈಲುಗಾಡಿಯ ಮೂರನೇ ಸುತ್ತಿನ ಪರೀಕ್ಷೆಯನ್ನು ಗುರುವಾರ ನಡೆಸಲಾಗಿದ್ದು, ಇದು ಮುಂಬೈ- ದೆಹಲಿ ಪಯಣವನ್ನು 16 ಗಂಟೆಗಳಿಂದ 12 ಗಂಟೆಗಳಿಗೆ ಅಂದರೆ ಸುಮಾರು 4 ತಾಸಿನಷ್ಟು ಇಳಿಸಲಿದೆ. ಗಂಟೆಗೆ 200 ಕಿಮೀ ವೇಗದಲ್ಲಿ ಸಾಗಬಲ್ಲ ರೈಲುಗಾಡಿಯ ಅತಿ ಹಗುರವಾದ 9 ಬೋಗಿಗಳನ್ನು ಸ್ಪೇನ್ನಿಂದ ಮುಂಬೈಗೆ ಏಪ್ರಿಲ್ನಲ್ಲಿ ಆಮದು ಮಾಡಿಕೊಳ್ಳಲಾಗಿದೆಶನಿವಾರ ದೆಹಲಿಯಿಂದ ಮಧ್ಯಾಹ್ನ 2.45ಕ್ಕೆ ಹೊರಡುವ ರೈಲು ಗಂಟೆಗೆ 150 ಕಿ.ಮೀ. ವೇಗದಲ್ಲಿ ಚಲಿಸಿ 11 ಗಂಟೆ 45 ನಿಮಿಷದಲ್ಲಿ ಮುಂಬೈ ತಲುಪಲಿದೆ.

2016: ನವದೆಹಲಿ: ದಿವಂಗತ ಪ್ರಧಾನಿ ಇಂದಿರಾಗಾಂಧಿ ಹತ್ಯೆಯ ಬಳಿಕ ಸಂಭವಿಸಿದ ಸಿಖ್ ವಿರೋಧಿ ದಂಗೆಗಳಿಗೆ ಸಂಬಂಧಿಸಿದಂತೆ ಶುಕ್ರವಾರ ದೆಹಲಿಯ ಸಿಬಿಐ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ನಾಯಕ ಜಗದೀಶ ಟೈಟ್ಲರ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಿಚಾರಣೆಗೆ ಒಳಪಡಿಸಿತು .

2016: ಭುವನೇಶ್ವರ: ಒಡಿಶಾದ ಅಂಗುಲ್ ಜಿಲ್ಲೆಯಲ್ಲಿ ಖಾಸಗಿ ಬಸ್ಸೊಂದು ಬೆಳಗ್ಗೆ ಸೇತುವೆಯಿಂದ ಕೆಳಕ್ಕೆ
ಉರುಳಿದ ಪರಿಣಾಮವಾಗಿ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಭೀತಿ ಪಡಲಾಗಿದ್ದು, ಇತರ ಹಲವರು ಗಾಯಗೊಂಡರು.. ಸುಮಾರು 50 ಜನರಿದ್ದ ಬಸ್ಸು ಬೌಧನಿಂದ ಅಂಗುಲ್ ಜಿಲ್ಲೆಯ ಅಥಮಲ್ಲಿಕ್ನತ್ತ ಹೋಗುತ್ತಿದ್ದಾಗ ಅಪಘಾತ ಸಂಭವಿಸಿತು. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮವಾಗಿ ಬಸ್ಸು ಸೇತುವೆಯಿಂದ 50 ಅಡಿ ಆಳಕ್ಕೆ ಬಿದ್ದು ದುರಂತ ಸಂಭವಿಸಿತು. ಗಾಯಾಳುಗಳನ್ನು ಜಿಲ್ಲಾ ಪೊಲೀಸರು ಮತ್ತು ಸ್ಥಳೀಯರು ಅಥಮಲ್ಲಿಕ್ ಉಪವಿಭಾಗೀಯ ಆಸ್ಪತ್ರೆಗೆ ಸೇರಿಸಿದರು. ಇತರ ಕೆಲವರನ್ನು ಅಂಗುಲ್ ಜಿಲ್ಲಾ ಆಸ್ಪತ್ರೆ ಮತ್ತು ಕಟಕ್ನ ಎಸ್ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು.

2016: ನೈನಿತಾಲ್: ನೈನಾದೇವಿಯ ದೇವಾಲಯದ ಒಳಕ್ಕೆ ಸಮರ್ಪಿತ ಮೇಕೆಗಳನ್ನು ಒಯ್ಯಲು ಅವಕಾಶ
ನೀಡಬೇಕು ಎಂಬ ಮನವಿಗೆ ಉತ್ತರಾಖಂಡ ಹೈಕೋರ್ಟ್ ಕಡೆಗೂ ತನ್ನ ಒಪ್ಪಿಗೆ ನೀಡಿತು. ಆದರೆ ದೇಗುಲದೊಳಗೆ ಮೇಕೆ ಬಲಿ ನೀಡುವುದರ ಮೇಲಿನ ನಿಷೇಧವನ್ನು ಮುಂದುವರೆಸಿತುಧರ್ಮದ ಹೆಸರಿನಲ್ಲಿ ದೇವಾಲಯದ ಒಳಗೆ ನಡೆಯುವ ಪ್ರಾಣಿಬಲಿ ನಿಷೇಧವನ್ನು ಮುಂದುವರೆಸಿ ಹೈಕೋರ್ಟ್ ಪೀಠ ನೀಡಿದ ಆದೇಶವು ಸಮರ್ಪಿತ ಮೇಕೆಗಳನ್ನು ದೇವಾಲಯದ ಒಳಕ್ಕೆ ಒಯ್ಯಲು ಅನುಮತಿ ನೀಡುವುದರೊಂದಿಗೆ ದೇವಾಲಯದ ವಿಧಿಗಳಿಗೆ ಅಡ್ಡಿಯಾಗಬಾರದು ಎಂಬುದಾಗಿ ಆಗ್ರಹಿಸುತ್ತಿದ್ದ ಭಕ್ತರಿಗೆ ಸ್ವಲ್ಪ ಮಟ್ಟಿನ ನಿರಾಳತೆಯನ್ನು ನೀಡಿತು. ಅರ್ಜಿದಾರರು ಇನ್ನೊಂದು ಅರ್ಜಿಯನ್ನು ನ್ಯಾಯಮೂರ್ತಿ ವಿಕೆ. ಬಿಸ್ತ್ ಪೀಠದ ಮುಂದೆ ಸಲ್ಲಿಸಿ, ಅಧಿಕೃತ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಶ್ನಾರ್ಹ ಅಂಶಗಳನ್ನು ಉದ್ದೇಶಪೂರ್ವಕವಾಗಿ ತರಲಾಗಿದೆ ಎಂದು ವಾದಿಸಿದ್ದರು.

2016: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು  ‘ಚೀಫ್ ಮಿನಿಸ್ಟರ್ ಸ್ಕೂಟಿ ಸ್ಕೀಮ್ ಗೆ (ಮುಖ್ಯಮಂತ್ರಿ ಸ್ಕೂಟಿ ಯೋಜನೆ) ಚಾಲನೆ ನೀಡಿದರು. ಯೋಜನೆಗೆ ಚಾಲನೆ ನೀಡಿದ ಬಳಿಕ ಮೆಹಬೂಬಾ ಅವರು ಸ್ವತಃ ಸ್ಕೂಟಿಯಲ್ಲಿ ಸಂಚರಿಸಿದರು. ಯೋಜನೆಯ ಅಡಿಯಲ್ಲಿ ಎರಡು ಕಾಲೇಜುಗಳ 300 ವಿದ್ಯಾರ್ಥಿನಿಯರಿಗೆ ಮುಖ್ಯಮಂತ್ರಿ ಸ್ಕೂಟಗಳನ್ನು ವಿತರಿಸಿದರು. ಬಿಹಾರದಲ್ಲಿ ಹಿಂದೆ ನಿತೀಶ್ ಕುಮಾರ್ ಅವರ ಬೈಸಿಕಲ್ ಯೋಜನೆಗೆ ಪ್ರತಿಯಾಗಿ ಬಿಜೆಪಿಸ್ಕೂಟಿ ಸ್ಕೀಮ್ ನ್ನು ಪ್ರಕಟಿಸಿತ್ತು.

2016: ಅಯೋಧ್ಯಾ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಕಿಸಾನ್ ಮಹಾಯಾತ್ರಾದ ಅಂಗವಾಗಿ
ಅಯೋಧ್ಯೆಗೆ ಭೇಟಿ ನೀಡಿ ಹನುಮಾನ್ ಗಡಿ ದೇವಾಲಯವನ್ನು ಸಂದರ್ಶಿಸಿದರು. ದೇವಾಲಯದಲ್ಲಿ ಮಹಂತ ಗ್ಯಾನದಾಸ್ ಅವರನ್ನು ರಾಹುಲ್ ಭೇಟಿ ಮಾಡಿದರು. 1992ರಲ್ಲಿ ವಿವಾದಾತ್ಮಕ ಬಾಬರಿ ಮಸೀದಿ ಕಟ್ಟಡ ನೆಲಸಮವಾದ ಬಳಿಕ ಇಂದಿರಾಗಾಂಧಿ ಕುಟುಂಬದ ಸದಸ್ಯರು ಅಯೋಧ್ಯೆಗೆ ಭೇಟಿ ನೀಡಿದ್ದು ಇದೇ ಪ್ರಥಮ. ಮಧ್ಯೆ ರಾಹುಲ್ ಗಾಂಧಿಯವರು ಉತ್ತರ ಪ್ರದೇಶದಲ್ಲಿನ ತಮ್ಮ ಎರಡು ತಿಂಗಳ ಕಿಸಾನ್ ಮಹಾಯಾತ್ರೆಗೆ ಈದ್ ಹಬ್ಬದ ನಿಮಿತ್ತ ಸೆಪ್ಟೆಂಬರ್ 12 ಮತ್ತು 13ರಂದು ವಿರಾಮ ನೀಡಿದರು.. ಸೆಪ್ಟೆಂಬರ್ 6ರಂದು ದೇವರಿಯಾದಿಂದ ಪ್ರಾರಂಭವಾದ ಕಿಸಾನ್ ಮಹಾಯಾತ್ರದಲ್ಲಿ ರಾಹುಲ್ ಗಾಂಧಿ ಅವರು ರೈತರನ್ನು ಭೇಟಿ ಮಾಡಿ ಅವರಿಂದ ಕಷ್ಟ ನಷ್ಟಗಳ ಬಗ್ಗೆ ಮನವಿ ಪತ್ರಗಳನ್ನು ಸಂಗ್ರಹಿಸಿದರು.

2016: ಮಂಡ್ಯ: ಕಾವೇರಿ ನೀರು ಬಿಡುವಂತೆ ಆದೇಶ ನೀಡಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹಾಗೂ ತಮಿಳುನಾಡು, ಕರ್ನಾಟಕ ಮುಖ್ಯಮಂತ್ರಿಗಳ ವಿರುದ್ಧ ಈಗ ಮಂಡ್ಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಯಿತು. ಮುಖ್ಯ ಕಾರ್ಯದರ್ಶಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಯಿತು. ಸಾಮಾಜಿಕ ಹೋರಾಟಗಾರ ಎಂ.ಡಿ.ರಾಜಣ್ಣ ಪ್ರಕರಣ ದಾಖಲಿಸಿದ್ದು, ಮುಂದಿನ ತಿಂಗಳ 14ಕ್ಕೆ ವಿಚಾರಣೆಗೆ ದಿ ನಿಗದಿಪಡಿಸಿತು.
 2016: ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ರಾಷ್ಟ್ರದ ರಾಜಧಾನಿಯ
ಆಡಳಿತಾತ್ಮಕ ಮುಖ್ಯಸ್ಥರು ಎಂಬುದಾಗಿ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ದೆಹಲಿ ಸರ್ಕಾರವು ಸಲ್ಲಿಸಿದ ಆರು ಮೇಲ್ಮನವಿಗಳ ಸಂಬಂಧವಾಗಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು. ಆದರೆ ಹೈಕೋರ್ಟ್ ತೀರ್ಪಿನ ಜಾರಿ ಮತ್ತು ಆಪ್ ಸರ್ಕಾರದ ಹಿಂದಿನ ನಿರ್ಣಯಗಳ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸುವಂತೆ ಲೆಫ್ಟಿನೆಂಟ್ ಗವರ್ನರ್ ನೀಡಿರುವ ನಿರ್ದೇಶನಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಸಧ್ಯಕ್ಕೆ ನಿರಾಕರಿಸಿತು. ಉತ್ತರ ನೀಡಲು ಕೇಂದ್ರ ಸರ್ಕಾರಕ್ಕೆ 6 ವಾರಗಳ ಕಾಲಾವಕಾಶ ನೀಡಿದ ಸುಪ್ರೀಂಕೋರ್ಟ್ ನವೆಂಬರ್ 15ರಂದು ಅಂತಿಮ ವಿಚಾರಣೆಗೆ ದಿನಾಂಕ ನಿಗದಿ ಪಡಿಸಿತು.

2016: ಪ್ಯೋಂಗ್ಯಾಂಗ್ (ಉತ್ತರ ಕೊರಿಯಾ): ಸಮರ ರಾಕೆಟ್ಗಳಲ್ಲಿ ಕೂರಿಸಬಹುದಾದ ಪರಮಾಣು ಸಿಡಿತಲೆಯನ್ನು ತಾನು ಯಶಸ್ವಿಯಾಗಿ ಪರೀಕ್ಷಿಸಿರುವುದಾಗಿ ಉತ್ತರ ಕೊರಿಯಾ ಪ್ರತಿಪಾದಿಸಿತು. 2006ರಿಂದ ನಡೆಸಿರುವ ಐದು ಪ್ರಬಲ ಪರಮಾಣು ಪರೀಕ್ಷೆಗಳ ಬಳಿಕ ತಾನು ಪರಮಾಣು ಸಿಡಿತಲೆಯ ಪರೀಕ್ಷೆ ನಡೆಸಿರುವುದಾಗಿ ಅದು ಹೇಳಿತು. ಪರಮಾಣು ಸಿಡಿತಲೆಯ ಯಶಸ್ವೀ ಪರೀಕ್ಷೆಯೊಂದಿಗೆ ಸಣ್ಣ, ಹಗುರ, ವೈವಿಧ್ಯಮಯ ಪರಮಾಣು ಸಿಡಿತಲೆ ನಿರ್ಮಾಣದ ಸಾಮರ್ಥ್ಯ ವನ್ನು ತಾನೀಗ ಪಡೆದಿರುವುದಾಗಿ ಉತ್ತರ ಕೊರಿಯಾ ಪ್ರತಿಪಾದಿಸಿತು. ಉತ್ತರ ಕೊರಿಯಾವು ಪರಮಾಣು ಸಿಡಿತಲೆ ಪರೀಕ್ಷೆ ನಡೆಸಿರುವುದನ್ನು ದಕ್ಷಿಣ ಕೊರಿಯಾ ಖಂಡಿಸಿತು. ಇದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ ಉಲ್ಲಂಘನೆ ಅದು ಟೀಕಿಸಿತು.  ಉತ್ತರ ಕೊರಿಯಾವು 4 ಇತರ ಪರೀಕ್ಷೆಗಳನ್ನು ನಡೆಸಿದ್ದ ಸ್ಥಳದಲ್ಲಿಯೇ ಸ್ಥಳೀಯ ಕಾಲಮಾನ 9 ಗಂಟೆ ವೇಳೆಗೆ (ಇಟಿ ಕಾಲಮಾನ ರಾತ್ರಿ 8.30) ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆಯ ಕಂಪನ ದಾಖಲಾಗಿತ್ತು. ಕಳೆದ ಜನವರಿಯಲ್ಲಿ ಉತ್ತರ ಕೊರಿಯಾ ತನ್ನ ಇತ್ತೀಚೆಗಿನ ಪರಮಾಣು ಪರೀಕ್ಷೆಯನ್ನು ನಡೆಸಿತ್ತು.

2016: ನವದೆಹಲಿ: ಅರವಿಂದ ಕೇಜ್ರಿವಾಲ್ನೇತೃತ್ವದ ದೆಹಲಿ ಸರ್ಕಾರವು ಮಾಡಿದ್ದ  21 ಸಂಸದೀಯ ಕಾರ್ಯದರ್ಶಿಗಳ ನೇಮಕವನ್ನು ಹೈಕೋರ್ಟ್ರದ್ದು  ಮಾಡಿತು. ಲೆಫ್ಟಿನೆಂಟ್ಗವರ್ನರ್ಅವರ ಒಪ್ಪಿಗೆ ಅಥವಾಅಭಿಪ್ರಾಯ ಪಡೆಯದೆಯೇ ಸಂಸದೀಯ ಕಾರ್ಯದರ್ಶಿಗಳನ್ನು ನೇಮಿಸುವ ಆದೇಶವನ್ನು 2015 ಮಾರ್ಚ್‌ 13ರಂದು ಕೈಗೊಳ್ಳಲಾಗಿತ್ತು ಎಂಬುದನ್ನು ದೆಹಲಿ ಸರ್ಕಾರದ ಪರ ವಕೀಲ ಸುಧೀರ್ನಂದರ್ಜೋಗ್ಹೈಕೋರ್ಟ್ನಲ್ಲಿ ಒಪ್ಪಿಕೊಂಡರು. ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಮತ್ತು ನ್ಯಾಯಮೂರ್ತಿ ಸಂಗೀತಾ ಧಿಂಗ್ರಾ ಸೆಹಗಲ್ಅವರನ್ನೊಳಗೊಂಡ ಪೀಠ ಆದೇಶವನ್ನು ರದ್ದು ಮಾಡಿತು. ಲೆಫ್ಟಿನೆಂಟ್ಗವರ್ನರ್ಅವರ ಒಪ್ಪಿಗೆ ಇಲ್ಲದೆ ದೆಹಲಿ ಸರ್ಕಾರ ಕೈಗೊಂಡ ಹಲವು ನಿರ್ಧಾರಗಳನ್ನು ಆಗಸ್ಟ್‌ 4ರಂದು ದೆಹಲಿ ಹೈಕೋರ್ಟ್ವಜಾ ಮಾಡಿರುವುದನ್ನು ನಂದರ್ಜೋಗ್ಉಲ್ಲೇಖಿಸಿದರು. ದೆಹಲಿ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಲೆಫ್ಟಿನೆಂಟ್ಜನರಲ್ಅವರೇ ಇಲ್ಲಿನ ಆಡಳಿತದ ಮುಖ್ಯಸ್ಥರು ಎಂದು ಆಗಸ್ಟ್‌ 4ರಂದು ದೆಹಲಿ ಹೈಕೋರ್ಟ್ತೀರ್ಪು ನೀಡಿತ್ತು.
21
ಸಂಸದೀಯ ಕಾರ್ಯದರ್ಶಿಗಳ ನೇಮಕದ ಬಗ್ಗೆ ಚುನಾವಣಾ ಆಯೋಗವೂ ಪರಿಶೀಲನೆ ನಡೆಸುತ್ತಿದೆ ಎಂಬುದನ್ನು ಹೆಚ್ಚುವರಿ ಸಾಲಿಸಿಟರ್ಜನರಲ್ಸಂಜಯ್ಜೈನ್ ಪೀಠದ ಗಮನಕ್ಕೆ ತಂದರು. ಸಂಸದೀಯ ಕಾರ್ಯದರ್ಶಿಗಳ ನೇಮಕವನ್ನು ಜುಲೈ 13ರಂದು ಕೇಂದ್ರ ಸರ್ಕಾರ ವಿರೋಧಿಸಿತ್ತು. ಇಂತಹ ನೇಮಕಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಅಲ್ಲದೆ, ದೆಹಲಿ ವಿಧಾನಸಭೆ ಸದಸ್ಯರ (ಅನರ್ಹತೆ ಮೂಲಕ ವಜಾ) ಕಾಯ್ದೆ 1997ರಲ್ಲಿಯೂ ಇದಕ್ಕೆ ಅವಕಾಶ ಇಲ್ಲ. ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿಯಾಗಿ ಒಬ್ಬರನ್ನು ಮಾತ್ರ

 2008: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿನ ನ್ಯಾಯಮೂರ್ತಿ ನಿರ್ಮಲ್ ಜಿತ್ ಕೌರ್ ಅವರ ಮನೆಗೆ 15 ಲಕ್ಷ ರೂಪಾಯಿ ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೌರ್ ಮತ್ತು ನ್ಯಾಯಮೂರ್ತಿ ನಿರ್ಮಲಾ ಯಾದವ್ ಅವರ ವಿರುದ್ಧ ಸಿಬಿಐನಿಂದ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ಸಮ್ಮತಿ ನೀಡಿದರು. ದೆಹಲಿಯ ಹೊಟೇಲ್ ಉದ್ಯಮಿ ರವೀಂದ್ರ ಸಿಂಗ್ ಎಂಬವರು ಹೈಕೋರ್ಟಿನ ಇನ್ನೊಬ್ಬ ನ್ಯಾಯಮೂರ್ತಿ ನಿರ್ಮಲಾ ಯಾದವ್ ಅವರಿಗಾಗಿ ಈ 15 ಲಕ್ಷ ರೂಪಾಯಿ ಕಳುಹಿಸಿಕೊಟ್ಟ್ದಿದರು. ಆದರೆ ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಸಂಜೀವ್ ಬನ್ಸಲ್ ಅವರ ಸಹಾಯಕ ಪ್ರಕಾಶ್ ರಾಮ್ ಅವರು `ತಪ್ಪಿ' ಈ ಹಣವನ್ನು ಆಗಸ್ಟ್ 13ರಂದು ನಿರ್ಮಲ್ ಜಿತ್ ಕೌರ್ ಅವರ ಮನೆಗೆ ರವಾನಿಸಿದ್ದರು.

2008: ಪಾಕಿಸ್ಥಾನದ ನೂತನ ಅಧ್ಯಕ್ಷರಾಗಿ ಆಸಿಫ್ ಆಲಿ ಜರ್ದಾರಿ ಇಸ್ಲಾಮಾಬಾದಿನಲ್ಲಿ ಅಧ್ಯಕ್ಷರ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು. 53 ವರ್ಷದ ಜರ್ದಾರಿ ಅವರಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಅಬ್ದುಲ್ ಹಮೀದ್ ದೊಗಾರ್ ಪ್ರಮಾಣ ವಚನ ಬೋಧಿಸಿದರು. ಸಭಾಂಗಣದಲ್ಲಿ ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಜರ್ದಾರಿ ಅವರ ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಕಾರ್ಯಕರ್ತರು ಜೀಯೊ ಭುಟ್ಟೊ (ಭುಟ್ಟೊ ಚಿರಾಯುವಾಗಲಿ), ಜಿಂದಾ ಹೈ ಬೀಬಿ (ಬೆನಜೀರ್ ಬದುಕಿದ್ದಾರೆ ಎಂಬ ಘೋಷಣೆಗಳನ್ನು ಕೂಗಿದರು.

2007: ಜಮೈಕಾದ ಅಸಫಾ ಪೊವೆಲ್ ಪುರುಷರ 100 ಮೀ. ಓಟದ ಸ್ಪರ್ಧೆಯಲ್ಲಿ ನೂತನ ವಿಶ್ವದಾಖಲೆ ಸ್ಥಾಪಿಸಿದರು. ಇಟಲಿಯ ರೀಟಿಯಲ್ಲಿ ನಡೆದ ಐಎಎಫ್ ಗ್ರ್ಯಾನ್ ಪ್ರಿ ಸ್ಪರ್ಧೆಯಲ್ಲಿ ಮಿಂಚಿನ ವೇಗದಲ್ಲಿ ಓಡಿದ ಪೊವೆಲ್ 100 ಮಿ. ದೂರವನ್ನು 9.74 ಸೆಕೆಂಡುಗಳಲ್ಲಿ ಕ್ರಮಿಸಿ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಪೊವೆಲ್ 2005 ರಲ್ಲಿ ಅಥೆನ್ಸಿನಲ್ಲಿ ಈ ದೂರವನ್ನು 9.77 ಸೆಕೆಂಡುಗಳಲ್ಲಿ ಕ್ರಮಿಸಿದ್ದು ಈವರೆಗಿನ ವಿಶ್ವದಾಖಲೆಯಾಗಿತ್ತು. 24ರ ಹರೆಯದ ಪೊವೆಲ್ ಆಗಸ್ಟ್ ತಿಂಗಳ ಆರಂಭದಲ್ಲಿ `ಈ ವರ್ಷ ವಿಶ್ವದಾಖಲೆ ಮುರಿಯಲಿದ್ದೇನೆ' ಎಂದು ಭವಿಷ್ಯ ನುಡಿದಿದ್ದರು. ಒಸಾಕದಲ್ಲಿ ಇತ್ತೀಚೆಗೆ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪೊವೆಲ್ ಚಿನ್ನದ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು.

2007: ಕುತೂಹಲದ ಘಟ್ಟ, ಮುಗಿಲು ಮುಟ್ಟಿದ ಕ್ರೀಡಾಭಿಮಾನಿಗಳ ಕೇಕೆ ಹಾಗೂ ನಾಟಕೀಯ ಬೆಳವಣಿಗೆಯ ನಡುವೆ ಚೆನ್ನೈಯ ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ನಡೆದ ಹಾಕಿ ಪಂದ್ಯದಲ್ಲಿ ಕೊರಿಯಾ ವಿರುದ್ಧ ಭಾರತವು ಅದ್ಭುತವಾದ ಗೆಲುವು ಪಡೆದು ಏಷ್ಯಾ ಕಪ್ ಗೆದ್ದುಕೊಂಡಿತು. ರೋಚಕ ಫೈನಲ್ ಪಂದ್ಯದಲ್ಲಿ ಭಾರತ ತಂಡದವರು 7-1 ಗೋಲುಗಳ ಭಾರಿ ಅಂತರದಿಂದ ಕೊರಿಯಾ ತಂಡವನ್ನು ಸೋಲಿಸಿದರಲ್ಲದೆ ಎರಡನೇ ಅತೀ ಹೆಚ್ಚು ಅಂತರದ ಗೆಲುವನ್ನು ದಾಖಲಿಸಿದರು. ಇದಕ್ಕೆ ಮೊದಲು ಭಾರತ ತಂಡದವರು 1985ರಲ್ಲಿ ಢಾಕಾದಲ್ಲಿ ನಡೆದ ಎರಡನೇ ಚಾಂಪಿಯನ್ ಶಿಪ್ ನಲ್ಲಿ 8-1 ಗೋಲುಗಳ ಗೆಲುವು ಪಡೆದುಕೊಂಡಿದ್ದರು. ಇದು ಯಾವುದೇ ಏಷ್ಯಾ ಕಪ್ ಚಾಂಪಿಯನ್ ಶಿಪ್ ನ ಫೈನಲಿನಲ್ಲಿ ಅತೀ ಹೆಚ್ಚು ಅಂತರದ ಗೆಲುವು ಕೂಡಾ. ಇದು 2003ರ ಏಷ್ಯಾ ಕಪ್ ಹಾಕಿ ಚಾಂಪಿಯನ್ ಶಿಪ್ ನಂತರ ಭಾರತಕ್ಕೆ ಮೊಟ್ಟ ಮೊದಲ ಪ್ರಶಸ್ತಿ.

2007: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಚುನಾವಣೆಯ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿಜಯ ಸಾಧಿಸಿದರು.  ಅವರು ಮಾಜಿ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯದರು. ಪ್ರತಿಸ್ಪರ್ಧಿ ಬಣದ ಬ್ರಿಜೇಶ್ ಪಟೇಲ್ ಕಾರ್ಯದರ್ಸಿ ಸ್ಥಾನಕ್ಕೆ ಪುನರಾಯ್ಕೆಯಾದರು.

2007: ಬೆಲ್ಜಿಯಂನ ಬೆಡಗಿ ಜಸ್ಟಿನ್ ಹೆನಿನ್ ಹಾರ್ಡಿನ್ ಅವರು ನ್ಯೂಯಾರ್ಕಿನಲ್ಲಿ ನಡೆದ ಅಮೆರಿಕಾ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು. ಚಾಣಾಕ್ಷ ಆಟ ಪ್ರದರ್ಶಿಸಿದ 25ರ ಹರೆಯದ ಹೆನಿನ್ ಫೈನಲ್ ಪಂದ್ಯದಲ್ಲಿ 6-1, 6-3 ರಲ್ಲಿ ರಷ್ಯಾದ ಸ್ವೆಟ್ಲಾನಾ ಕುಜ್ನೆಟ್ಸೋವಾ ಅವರನ್ನು ಮಣಿಸಿದರು. ವಿಶ್ವದ ಅಗ್ರ ರ್ಯಾಂಕಿಂಗ್ ಆಟಗಾರ್ತಿ ಹೆನಿನ್ ಗೆ ಇದು ಈ ವರ್ಷದ ಎರಡನೇ ಮತ್ತು ವೃತ್ತಿ ಜೀವನದ ಏಳನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ. ಈ ಮೊದಲು ಅವರು ಫ್ರೆಂಚ್ ಓಪನ್ನಿನಲ್ಲಿ ಕಿರೀಟ ಮುಡಿಗೇರಿಸಿದ್ದರು. ಅದೇ ರೀತಿ ಅಮೆರಿಕಾ ಓಪನ್ ಗೆದ್ದದ್ದು ಇದು ಎರಡನೇ ಬಾರಿ. 2003ರಲ್ಲಿ ಅವರು ಇಲ್ಲಿ ಕೊನೆಯದಾಗಿ ಪ್ರಶಸ್ತಿ ಗೆದ್ದಿದ್ದರು.

2007: ಹೈದರಾಬಾದಿನ ಪಂಜಗುಟ್ಟ ಕ್ರಾಸ್ ಬಳಿ ನಿರ್ಮಾಣ ಹಂತದಲ್ಲಿದ್ದ ಮೇಲು ಸೇತುವೆಯ (ಫ್ಲೈಓವರ್) ಒಂದು ಭಾಗ ರಾತ್ರಿ ಕುಸಿದು 15 ಮಂದಿ ಮೃತರಾದರು. ಫ್ಲೈ ಓವರ್ ಕೆಳಗೆ ನಿಲ್ಲಿಸಿದ್ದ ಸುಮಾರು 25 ಕಾರುಗಳು ಜಖಂಗೊಂಡು, 25 ಮಂದಿ ಗಾಯಗೊಂಡರು. ಈ ಮೇಲುಸೇತುವೆ 800 ಮೀಟರ್ ಉದ್ದವಿದ್ದು ಸುಮಾರು 20 ಅಡಿ ಎತ್ತರದಲ್ಲಿದೆ. (ಈ ಘಟನೆಯಲ್ಲ್ಲಿ ಸತ್ತವರ ಸಂಖ್ಯೆ ಕೇವಲ 2, ಗಾಯಗೊಂಡವರು 9 ಜನ ಎಂದು ಪೊಲೀಸ್ ಆಯುಕ್ತ ಬಲ್ವಿಂದರ್ ಸಿಂಗ್ ಮರುದಿನ ಸ್ಪಷ್ಟಪಡಿಸಿದರು.)

2007: ಮನುಷ್ಯನಂತೆ ಗೋವುಗಳಿಗೂ ಸಹಜವಾಗಿ ಹುಟ್ಟುವ, ಬೆಳೆಯುವ ಮತ್ತು ಸಾಯುವ ಹಕ್ಕು ಇದೆ. ರಾಜಧಾನಿಯಿಂದಲೇ ಈ ಪ್ರಜ್ಞೆ ಬೆಳೆದರೆ ಹಳ್ಳಿಗಳಿಗೆ ತಲುಪುವುದು ಸುಲಭ ಎಂಬ ಕಾರಣಕ್ಕೆ ಬೆಂಗಳೂರು ನಗರದಲ್ಲಿ ಗೋ ಸಂರಕ್ಷಾ ಕಾರ್ಯಕ್ರಮ ಹಮ್ಮಿಕೊಂಡುದಾಗಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು. ಸಂಜಯನಗರದಲ್ಲಿ ನಡೆದ ಗೋಸಂಧ್ಯಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ, ಗೋವುಗಳ ಮೂಲಕ ಸಮಸ್ತ ಜೀವ ಸಂಕುಲದ ಬದುಕುವ ಹಕ್ಕನ್ನು ಸಂರಕ್ಷಿಸುವುದು ತಮ್ಮ ಗುರಿ. ಇದರಲ್ಲಿ ಯಾವುದೇ ರಾಜಕೀಯ ದ್ವೇಷ ಇಲ್ಲ, ಕೋಮು ಭಾವನೆ ಘಾಸಿಗೊಳಿಸುವ ಹುನ್ನಾರ ಇಲ್ಲ ಎಂದು ಅವರು ಹೇಳಿದರು.

2006: ಹಿರಿಯ ಚಿತ್ರನಟಿ, ಸಮಾಜ ಸೇವಕಿ ಶಬಾನಾ ಆಜ್ಮಿ ಅವರು ಲಂಡನ್ ಮೂಲದ ಗಾಂಧಿ ಪ್ರತಿಷ್ಠಾನ ನೀಡುವ ಪ್ರತಿಷ್ಠಿತ `ಗಾಂಧಿ ಶಾಂತಿ ಪ್ರಶಸ್ತಿ'ಗೆ ಆಯ್ಕೆಯಾದರು.

2006: ಆರು ಮಂದಿ ಗಗನಯಾತ್ರಿಗಳನ್ನು ಹೊತ್ತ ಅಮೆರಿಕದ ಅಟ್ಲಾಂಟಿಸ್ ಬಾಹ್ಯಾಕಾಶ ನೌಕೆ ಕೇಪ್ ಕೆನವೆರಾಲ್ನಿಂದ ಬೆಳಿಗ್ಗೆ ಗಗನಕ್ಕೆ ಹಾರಿತು. ತಾಂತ್ರಿಕ ತೊಂದರೆಯಿಂದ ಈ ನೌಕೆಯ ಉಡಾವಣೆ ವಿಳಂಬವಾಗಿತ್ತು. ಅಟ್ಲಾಂಟಿಸ್ ಗಗನಯಾತ್ರಿಗಳು 11 ದಿನಗಳ ವಾಸ್ತವ್ಯ ಕಾಲದ್ಲಲಿ 3 ಬಾಹ್ಯಾಕಾಶ ನಡಿಗೆ ಕೈಗೊಂಡು ಬಾಹ್ಯಾಕಾಶ ಅಟ್ಟಣಿಗೆ ನಿರ್ಮಾಣ ಮುಂದುವರೆಸುವರು. 3 ವರ್ಷಗಳ ಹಿಂದೆ ಕೊಲಂಬಿಯಾ ಗಗನನೌಕೆ ದುರಂತದ ಬಳಿಕ ಈ ಕಾರ್ಯ ಸ್ಥಗಿತಗೊಂಡಿತ್ತು.

2006: ಲೋಕಸಭಾ ಅಧ್ಯಕ್ಷ ಸೋಮನಾಥ ಚಟರ್ಜಿ, ಸಮಾಜವಾದಿ ಮುಖಂಡ ಅಮರಸಿಂಗ್, ಸೇರಿದಂತೆ ಅನೇಕ ಸಂಸದರ ವಿರುದ್ಧ ಸಲ್ಲಿಸಲಾಗಿದ್ದ ದೂರುಗಳನ್ನು ತಿರಸ್ಕರಿಸುವ ಮೂಲಕ ಚುನಾವಣಾ ಆಯೋಗವು `ಲಾಭದಾಯಕ ಹುದ್ದೆ' ವಿವಾದಕ್ಕೆ ತೆರೆ ಎಳೆಯಿತು. ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು 50 ಪ್ರಮುಖ ಹುದ್ದೆಗಳನ್ನು ಲಾಭದಾಯಕ ಹುದ್ದೆ ವ್ಯಾಪ್ತಿಯಿಂದ ಹೊರಗಿಡುವ ಮಸೂದೆಗೆ ಸಹಿ ಹಾಕಿದ ಮೂರು ವಾರಗಳ ಬಳಿಕ ಚುನಾವಣಾ ಆಯೋಗವು ಮೂವರು ಸಚಿವರು ಸೇರಿ 13 ಮಂದಿ ಸಂಸದರ ವಿರುದ್ಧದ ದೂರುಗಳನ್ನು ತಿರಸ್ಕರಿಸಿತು.

2006: ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯವು ಸಿದ್ಧಪಡಿಸಿದ ಕಂಪ್ಯೂಟರ್ ಮೂಲಕ ಎಂಜಿನಿಯರಿಂಗ್ ನಕ್ಷೆ ಬಿಡಿಸಲು ಮಾರ್ಗದರ್ಶನ ಮಾಡಬ್ಲಲ ದೇಶದ ಮೊದಲ ಪಠ್ಯಪುಸ್ತಕ `ಪ್ರೀಮಿಯರ್ ಆನ್ ಕಂಪ್ಯೂಟರ್ ಏಯ್ಡೆಡ್ ಎಂಜಿನಿಯರಿಂಗ್'ನ್ನು ರಕ್ಷಣಾ ಸಚಿವರ ಮಾಜಿ ವೈಜ್ಞಾನಿಕ ಸಲಹೆಗಾರ ವಿ.ಕೆ. ಆತ್ರೆ ಬಿಡುಗಡೆ ಮಾಡಿದರು.

2006: ರತ್ನಜ ನಿರ್ದೇಶನದ `ನೆನಪಿರಲಿ' ಚಿತ್ರವು ಕನ್ನಡ ಚಿತ್ರಗಳಿಗೆ ಮೀಸಲಿಡಲಾದ ಎಲ್ಲ ಐದು `ಫಿಲಂಫೇರ್' ಪ್ರಶಸ್ತಿಗಳನ್ನು ಬಾಚಿಕೊಂಡಿತು. ನಿರ್ದೇಶಕ ರತ್ನಜ, ಸಂಗೀತ ನಿರ್ದೇಶಕ ಹಂಸಲೇಖಾ, ನಾಯಕ ಪ್ರೇಮ್ ಕುಮಾರ್, ನಾಯಕಿ ವಿದ್ಯಾ ವೆಂಕಟೇಶ್ ಅವರು ಶ್ರೇಷ್ಠ ನಿರ್ದೇಶಕ, ಸಂಗೀತ ನಿರ್ದೇಶಕ, ನಾಯಕ, ನಾಯಕಿ ಪ್ರಶಸ್ತಿಗಳನ್ನು ಪಡೆದರು. ಚಿತ್ರಕ್ಕೆ ನೀಡಲಾಗುವ ಶ್ರೇಷ್ಠ ಪ್ರಶಸ್ತಿಯೂ ಈ ಚಿತ್ರಕ್ಕೇ ಲಭಿಸಿತು.

1997: ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಘಟನೆಯ ಹಿನ್ನೆಲೆಯಲ್ಲಿ ಪ್ರಮುಖ ನಾಯಕರು ಸೇರಿದಂತೆ 47 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ನಿಯೋಜಿತ ನ್ಯಾಯಾಲಯ ನಿರ್ಧರಿಸಿತು. 1992ರ ಡಿಸೆಂಬರ್ 6ರಂದು ನಡೆದ ಅಯೋಧ್ಯೆಯ ಬಾಬ್ರಿ ಮಸೀದಿಯ ಧ್ವಂಸ ಘಟನೆಗೆ ಸಂಬಂಧಿಸಿದಂತೆ ದಾಖಲಿಸಲಾದ ಈ ಪ್ರಕರಣದಲ್ಲಿ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ, ಅಂದಿನ ಬಿಜೆಪಿ ಅಧ್ಯಕ್ಷ ಎಲ್. ಕೆ. ಅಡ್ವಾಣಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣಸಿಂಗ್ ಆರೋಪಿಗಳಲ್ಲಿ ಪ್ರಮುಖರು.

1976: ಚೀನೀ ಧುರೀಣ ಅಧ್ಯಕ್ಷ ಮಾವೋ ತ್ಸೆ ತುಂಗ್ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು.

1960: ಬ್ರಿಟಿಷ್ ನಟ ಹಫ್ ಗ್ರಾಂಟ್ ಜನ್ಮದಿನ.

1949: ಭಾರತದ ರಾಷ್ಟ್ರೀಯ ಗೀತೆಯಾಗಿ ಹಿಂದಿಯನ್ನು ಅಂಗೀಕರಿಸಲಾಯಿತು.

1948: ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕೊರಿಯಾ (ಉತ್ತರ ಕೊರಿಯಾ) ರಚನೆಯಾಯಿತು.

1946: ಸಾಹಿತಿ ಬಿ.ಆರ್. ಲಕ್ಷ್ಮಣ ರಾವ್ ಜನನ.

1944: ಸಾಹಿತಿ ಪದ್ಮಜ ಕೆ.ಆರ್. ಜನನ.

1941: ಮಾಜಿ ಕ್ರಿಕೆಟ್ ಆಟಗಾರ ಸೈಯದ್ ಅಬಿದ್ ಆಲಿ (1960) ಜನ್ಮದಿನ.

1937: ಸಾಹಿತಿ ಜ್ಯೋತಿ ಹೊಸೂರ ಜನನ.

1934: ಸಾಹಿತಿ ಶಿವಲಿಂಗಮ್ಮ ಕಟ್ಟಿ ಜನನ.

1933: ಸಾಹಿತಿ ಶೇಖರ ಇಡ್ಯ ಜನನ.

1910: ಖ್ಯಾತ ಸಾಹಿತಿ ಎಂ.ವಿ. ಸೀತಾರಾಮಯ್ಯ (9-9-1910ರಿಂದ 12-3-1990) ಅವರು ವೆಂಕಟದಾಸಪ್ಪ- ಸಾವಿತ್ರಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ರಾಘವ, ಮೈ.ವೆಂ.ಸೀ. ಇತ್ಯಾದಿ ಕಾವ್ಯನಾಮಗಳಿಂದ ಖ್ಯಾತರಾದ ಸೀತಾರಾಮಯ್ಯ 100ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿದವರು. ದೇವರಾಜ ಬಹ್ದದೂರ್ ಬಹುಮಾನ, ರಾಜ್ಯ ಸರ್ಕಾರದ ಬಹುಮಾನ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಬಹುಮಾನ ಇತ್ಯಾದಿ ಗೌರವಗಳಿಗೆ ಅವರು ಪಾತ್ರರಾಗಿದ್ದರು.

1893: ಅಮೆರಿಕದ ಅಧ್ಯಕ್ಷ ಕ್ಲೀವ್ ಲೆಂಡ್ ಅವರ ಪತ್ನಿ ಫ್ರಾನ್ಸೆಸ್ ಕ್ಲೀವ್ ಲೆಂಡ್ ಅವರು ಶ್ವೇತಭವನದಲ್ಲಿ ಪುತ್ರಿ ಎಸ್ತೆರ್ ಗೆ ಜನ್ಮ ನೀಡಿದರು. ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸದಲ್ಲಿ ಮಗು ಹುಟ್ಟಿದ ಘಟನೆ ಇದೇ ಮೊದಲು.

1850: ಆಧುನಿಕ ಹಿಂದಿ ಸಾಹಿತ್ಯದ ಪಿತಾಮಹರೆಂದೇ ಖ್ಯಾತರಾದ ಭರತೇಂದು ಹರಿಶ್ಚಂದ್ರ (1850-1885) ಜನನ.

1776: `ಯುನೈಟೆಡ್ ಕಾಲೋನಿ' ಎಂಬ ಹೆಸರನ್ನು ಕಾಂಟಿನೆಂಟಲ್ ಕಾಂಗ್ರೆಸ್ `ಯುನೈಟೆಡ್ ಸ್ಟೇಟ್ಸ್' ಎಂಬುದಾಗಿ ಬದಲಾಯಿಸಿತು. ಇದರೊಂದಿಗೆ `ಯುನೈಟೆಡ್ ಸ್ಟೇಟ್ಸ್' ಜನನವಾಯಿತು.

1659: ತನ್ನ ಸಿಂಹಾಸನಾರೋಹಣಕ್ಕೆ ಅಡ್ಡಿಯಾಗಬಾರದೆಂದು ಔರಂಗಜೇಬನು  ಸಹೋದರ ದಾರಾ ಶಿಖೋಹ್ ನನ್ನು ಕೊಲೆಗೈಯುವುದರೊಂದಿಗೆ ಮೊಘಲ್ ಕುಟುಂಬದ ಸದಸ್ಯರೊಳಗಿನ ಅಧಿಕಾರದ ಪೈಪೋಟಿ ಗಂಭೀರ ಹಂತ ತಲುಪಿತು. ಸಹೋದರನ ಕೊಲೆಯ ಬಳಿಕ ಔರಂಗಜೇಬನು ಆತನ ತಲೆಯನ್ನು ಕಡಿದು ಅದನ್ನು ಆಗ್ರಾಕೋಟೆಯಲ್ಲಿ ಬಂಧನದಲ್ಲಿದ್ದ ತಂದೆ ಶಹಜಹಾನ್ ಗೆ ಕಳುಹಿಸಿದ.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment