ನಾನು ಮೆಚ್ಚಿದ ವಾಟ್ಸಪ್

Saturday, September 15, 2018

ಭೂಮಿಯ ಮಂಜುಗಡ್ಡೆ ಪದರ ನಷ್ಟ ಪತ್ತೆ ಹಚ್ಚುವ ಬಾಹ್ಯಾಕಾಶ ಲೇಸರ್ ಉಪಗ್ರಹ


ಭೂಮಿಯ ಮಂಜುಗಡ್ಡೆ ಪದರ ನಷ್ಟ ಪತ್ತೆ
ಹಚ್ಚುವ ಬಾಹ್ಯಾಕಾಶ ಲೇಸರ್
ಉಪಗ್ರಹ

ಲಾಸ್ ಏಂಜೆಲಿಸ್: ಭೂಮಿಯ ಮೇಲಿನ ಮಂಜುಗಡ್ಡೆ ಪದರ ಕರಗುವಿಕೆಯನ್ನು ಪತ್ತೆ ಹಚ್ಚಬಲ್ಲಂತಹ ಅತ್ಯಾಧುನಿಕ ಬಾಹ್ಯಾಕಾಶ ಲೇಸರ್ ಉಪಗ್ರಹವನ್ನು ನಾಸಾ ಸಂಸ್ಥೆಯು 2018ರ ಸೆಪ್ಟೆಂಬರ್ 15ರ ಶನಿವಾರ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿತು. ಅತ್ಯಾಧುನಿಕ ಉಪಗ್ರಹವು ಭೂಮಿಯಾದ್ಯಂತ ಮಂಜುಗಡ್ಡೆ ಪದರ ಕರಗುವಿಕೆಯನ್ನು ಪತ್ತೆ ಹಚ್ಚಿ ನಿಖರ ಮಾಹಿತಿ ಒದಗಿಸಲಿದೆ.

ಮಂಜುಗಡೆ ಪದರಗಳ ನಷ್ಟದಿಂದ ಸಮುದ್ರದ ನೀರಿನ ಮಟ್ಟ ಏರಿಕೆ ಹಾಗೂ ಹವಾಮಾನ ವ್ಯತಾಸದ ಬಗ್ಗೆ ಮುನ್ಸೂಚನೆ ನೀಡಲು ಇದರಿಂದ ಸಾಧ್ಯವಾಗಲಿದೆ.

ಈದಿನ ಬೆಳಗ್ಗೆ ಸೂರ್ಯೋದಯಕ್ಕೂ ಮುಂಚೆ .೦೨ ಗಂಟೆಗೆ, ಬಿಲಿಯನ್ (೧೦೦ ಕೋಟಿ) ಡಾಲರ್ ವೆಚ್ಚದ, ಅರ್ಧ ಟನ್ ತೂಕದ ಐಸ್ ಸ್ಯಾಟ್ - ಉಪಗ್ರಹವನ್ನು ಕ್ಯಾಲಿಫೋರ್ನಿಯಾದ ವಾಂಡೆನ್ಬರ್ಗ್ ವಾಯುಪಡೆ ನೆಲೆಯಿಂದ ಡೆಲ್ಟಾ ರಾಕೆಟ್ ಮೂಲಕ ಭೂ ಕಕ್ಷೆಗೆ ಉಡಾವಣೆ ಮಾಡಲಾಯಿತು ಎಂದು ನಾಸಾ ತಿಳಿಸಿತು.

‘ಐಸ್
ಸ್ಯಾಟ್- ಉಡಾವಣೆ ಮೂಲಕ ನಮ್ಮ ಭೂಮಿಯಲ್ಲಿ ಬದಲಾಗುತ್ತಿರುವ ಮಂಜುಗಡೆ ಪದರದ ಬಗ್ಗೆ ನಿರಂತರ ನಿಖರ ಮಾಹಿತಿ ಪಡೆಯುವುದು, ವಿಶೇಷವಾಗಿ ಉತ್ತರ ಮತ್ತು ದಕ್ಷಿಣ ಧ್ರುವಗಳ ಹಿಮ ಪದರಗಳ ನಷ್ಟ ಬಗ್ಗೆ ಕಣ್ಣಿಡುವುದು ಸಾಧ್ಯವಾಗಲಿದೆ ಎಂದು ವಿಜ್ಞಾನಿಗಳು ಹೇಳಿದರು.

ಕಳೆದ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ನಾಸಾ ಭೂಮಿಯ ಮೇಲಿನ ಮಂಜುಗಡ್ಡೆ ಪದರವನ್ನು ಅಳೆಯುವಂತಹ ಇಂತಹ ಉಪಕರಣವನ್ನು ಹೊಂದಿದ ಉಪಗ್ರಹವನ್ನು ಭೂ ಕಕ್ಷೆಗೆ ಕಳುಹಿಸಿತ್ತು.

ಹಿಂದೆ, ೨೦೦೩ರಲ್ಲಿ ಐಸ್ ಸ್ಯಾಟ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ಇದು ೨೦೦೯ರಲ್ಲಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತ್ತು.

ಮೊದಲ ಐಸ್ಸ್ಯಾಟ್ ಉಪಗ್ರಹವು ಸಮುದ್ರದ ಮೇಲಿನ ಮಂಜುಗಡ್ಡೆ ತೆಳ್ಳಗಾಗುತ್ತಿರುವ ಬಗ್ಗೆ ಮತ್ತು ಗೀನ್ ಲ್ಯಾಂಡ್ ಮತ್ತು ಅಂಟಾರ್ಕ್ಟಿಕಾದಲ್ಲಿ ಮಂಜುಗಡ್ಡೆ ಪದರ ಕರಗುತ್ತಿರುವುದನ್ನು ಪತ್ತೆ ಹಚ್ಚಿ ಮಾಹಿತಿ ನೀಡಿತ್ತು.

ಕಳೆದ ವರ್ಷಗಳಲ್ಲಿ ಆಪರೇಷನ್ ಐಸ್ ಬ್ರಿಜ್ ಹೆಸರಿನ ವಿಮಾನಯಾನ ಸಾಹಸದ ಮೂಲಕ ಉತ್ತರ ಮತ್ತು ದಕ್ಷಿಣ ಧ್ರುವಗಳ (ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್) ಮೇಲೆ ಹಾರಾಡಿ ಬದಲಾಗುತ್ತಿರುವ ಮಂಜುಗಡ್ಡೆಗಳ ಪದರದ ಅಳತೆ ಮಾಡುವ ಯತ್ನ ನಡೆಸಲಾಗಿತ್ತು.

ಆದರೆ ಬಾಹ್ಯಾಕಾಶದಿಂದ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಭೂಮಿಯ ಮೇಲಿನ ಮಂಜುಗಡ್ಡೆ ಪದರವನ್ನು ಅಳೆಯುವುದು ಅತ್ಯಂತ ಹೆಚ್ಚು ನಿಖರವಾಗಿರುತ್ತದೆ.

ಹೊಸ ಲೇಸರ್ ಉಪಕರಣವು ಒಂದು ಸೆಕೆಂಡ್ ನಲ್ಲಿ ೧೦,೦೦೦ ಸಲ ಲೇಸರ್ ಬೆಳಕನ್ನು ಹೊಮ್ಮ ಬಲ್ಲುದು. ಮೂಲ ಐಸ್ ಸ್ಯಾಟ್ ಉಪಗ್ರಹದ ಉಪಕರಣ ಸೆಕೆಂಡ್ ಗೆ ೪೦ ಬಾರಿ ಮಾತ್ರ ಲೇಸರ್ ಬೆಳಕನ್ನು ಹೊಮ್ಮುವ ಸಾಮರ್ಥ್ಯ ಹೊಂದಿತ್ತು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:


No comments:

Post a Comment