ನಾನು ಮೆಚ್ಚಿದ ವಾಟ್ಸಪ್

Sunday, September 23, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 23

ಇಂದಿನ ಇತಿಹಾಸ History Today ಸೆಪ್ಟೆಂಬರ್  23

2018: ನವದೆಹಲಿ: ಸುಳ್ಳುಸುದ್ದಿ ಹರಡುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ತೀವ್ರ ಒತ್ತಡಕ್ಕೆ ಒಳಗಾಗಿರುವ ವಾಟ್ಸಪ್, ಭಾರತದ ಸಲುವಾಗಿಯೇಕುಂದುಕೊರತೆ ಅಧಿಕಾರಿಯಾಗಿಕೋಮಲ್ ಲಾಹಿರಿ ಅವರನ್ನು ನೇಮಕ ಮಾಡಿತು. ಭಾರತದ ವಾಟ್ಸಪ್ ಬಳಕೆದಾರರು ಸುಳ್ಳು ಸುದ್ದಿಗಳು ಸೇರಿದಂತೆ ತಮ್ಮ ಆತಂಕ, ಸಮಸ್ಯೆಗಳ ಬಗ್ಗೆ ಕೋಮಲ್ ಲಾಹಿರಿ ಅವರಿಗೆ ತಮ್ಮ ಕಳವಳ, ದೂರುಗಳನ್ನು ಸಲ್ಲಿಸಬಹುದು.  ಗುಂಪು ಹತ್ಯೆಗಳಿಗೆ ಕಾರಣವಾಗುವ ಸಂದೇಶಗಳನ್ನು ವಾಟ್ಸಪ್ ಮೂಲಕ ಕಳುಹಿಸುವುದರ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಭಾರತ ಮುಂದಿಟ್ಟಿದ್ದ ಪ್ರಮುಖ ಬೇಡಿಕೆಗಳಲ್ಲಿ ಒಂದನ್ನು ಈಡೇರಿಸಿದ ಫೇಸ್ ಬುಕ್ ಮಾಲೀಕತ್ವದ ಕಂಪೆನಿಯು ಕುಂದುಕೊರತೆ ಅಧಿಕಾರಿಯನ್ನು ನೇಮಿಸಿರುವ ಬಗ್ಗೆ ತನ್ನ ವೆಬ್ ಸೈಟಿನಲ್ಲಿ ತಿಳಿಸಿತು. ಬಳಕೆದಾರರು ತಮ್ಮ ಮೊಬೈಲ್ ಆಪ್ ಮೂಲಕ ಅಮೆರಿಕದಲ್ಲಿ ಇರುವಕೋಮಲ್ ಲಾಹಿರಿ ಅವರಿಗೆ ಮಿಂಚಂಚೆ (ಇಮೇಲ್) ಕಳುಹಿಸಬಹುದು ಅಥವಾ ವಿವರವಾಗಿ ಬರೆಯಬಹುದು ಎಂದು ವೆಬ್ ಸೈಟ್ ವಿವರಿಸಿತು. ಲಾಹಿರಿ ಅವರ ಲಿಂಕ್ಡ್ ಇನ್ ಪ್ರೊಫೈಲ್ ಪ್ರಕಾರ ಅವರು ಜಾಗತಿಕ ಗ್ರಾಹಕ ಕಾರ್ಯಾಚರಣೆಗಳ ಹಿರಿಯ ನಿರ್ದೇಶಕಿ ಯಾಗಿದ್ದಾರೆ.  ಸಂಪರ್ಕಿಸಿದಾಗ ವಾಟ್ಸಪ್ ವಕ್ತಾರರು ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಲು ನಿರಾಕರಿಸಿದರು. ಆದರೆ ಕಂಪೆನಿಯ ವೆಬ್ ಸೈಟಿನ ಪಬ್ಲಿಕ್ ಎಫ್ ಕ್ಯೂನಲ್ಲಿ ಮಾಹಿತಿ ಇದೆ ಎಂದು ಬೊಟ್ಟು ಮಾಡಿದರುಮೂಲಗಳ ಪ್ರಕಾರ ಆಗಸ್ಟ್ ಕೊನೆಯ ವಾರ ಕುಂದುಕೊರತೆ ಅಧಿಕಾರಿಯನ್ನು ನೇಮಿಸಲಾಗಿದೆವಾಟ್ಸಪ್ ವೆಬ್ ಸೈಟ್ ಬಳಕೆದಾರರು ಸೆಟ್ಟಿಂಗ್ಸ್ ಗುಂಡಿಯನ್ನು ಬಳಸಿ ನೇರವಾಗಿ ಕಂಪೆನಿಯ ಸಪೋರ್ಟ್ ತಂಡವನ್ನು ಸಂಪರ್ಕಿಸಬಹುದು, ಕುಂದುಕೊರತೆ ಅಧಿಕಾರಿಯನ್ನು ನೇರವಾಗಿಯೂ ಸಂಪರ್ಕಿಸಬಹುದು.  ನಕಲಿ ಮತ್ತು ಸುಳ್ಳು ಸಂದೇಶಗಳ ಹಾವಳಿಯನ್ನು ನಿಗ್ರಹಿಸುವ ಸಲುವಾಗಿ ಅಗತ್ಯ ಟೂಲ್ ಗಳನ್ನು ಅಭಿವೃದ್ಧಿ ಪಡಿಸುವಂತೆ ಭಾರತ ಸರ್ಕಾರ ವಾಟ್ಸಪ್ ಕಂಪೆನಿ ಮೇಲೆ ಒತ್ತಡ ಹೇರಿತ್ತು. ಭಾರತದ ವಿಷಯಗಳಿಗೆ ಸಂಬಂಧಿಸಿದಂತೆ ವ್ಯವಹರಿಸಲು ಕುಂದು ಕೊರತೆ ಅಧಿಕಾರಿಯನ್ನು ನೇಮಿಸಬೇಕು ಎಂಬುದೂ ಭಾರತದ ಬೇಡಿಕೆಗಳಲ್ಲಿ ಒಂದು ಪ್ರಮುಖ ಬೇಡಿಕೆಯಾಗಿತ್ತು. ಭಾರತವು ವಾಟ್ಸಪ್ ಅತಿದೊಡ್ಡ ಮಾರುಕಟ್ಟೆ ಯಾಗಿದ್ದು ೨೦೦ ಮಿಲಿಯನ್ (೨೦ ಕೋಟಿ) ಬಳಕೆದಾರರನ್ನು ಅದು ಹೊಂದಿದೆ.  ವಾಟ್ಸಪ್ ಕಂಪೆನಿಯು ಕುಂದುಕೊರತೆ ಅಧಿಕಾರಿಯ ನೇಮಕ ಸೇರಿದಂತೆ ಭಾರತೀಯ ಕಾನೂನುಗಳನ್ನು ಪಾಲಿಸುತ್ತಿಲ್ಲ ಎಂಬುದಾಗಿ ಆಪಾದಿಸಿದ್ದ ಅರ್ಜಿಯೊಂದನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಕಳೆದ ತಿಂಗಳು ಒಪ್ಪಿದ ಹಿನ್ನೆಲೆಯಲ್ಲಿ ಕುಂದು ಕೊರತೆ ಅಧಿಕಾರಿಯನ್ನು ವಾಟ್ಸಪ್ ನೇಮಿಸಿರುವುದು ಮಹತ್ವದ ವಿಚಾರವಾಗಿದೆವಿಷಯಕ್ಕೆ ಸಂಬಂಧಿಸಿದಂತೆ ನಾಲ್ಕು ವಾರಗಳ ಒಳಗೆ ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಮುಂದಿನ ವರ್ಷ ಭಾರತದಲ್ಲಿ ಮಹಾಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಾದ ಫೇಸ್ ಬುಕ್, ಟ್ವಿಟ್ಟರ್ ಮತ್ತು ವಾಟ್ಸಪ್ ಗಳು ತಪ್ಪು ಮಾಹಿತಿ ಹರಡದಂತೆ ಭಾರತ ಸರ್ಕಾರ ಕಠಿಣ ನಿಲುವನ್ನು ತಾಳಿದೆ. ನಕಲಿ ಸಂದೇಶ, ತಪ್ಪು ಮಾಹಿತಿ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸರ್ಕಾರ ವಾಟ್ಸಪ್ಗೆ ಎಚ್ಚರಿಕೆ ನೀಡಿತ್ತು.

2018: ಲಕ್ನೋ: ತಮ್ಮ ಸಹೋದರ ಶಿವಪಾಲ್ ಯಾದವ್ ಅವರು ಪ್ರತ್ಯೇಕ ಪಕ್ಷ ಸ್ಥಾಪನೆ ಮಾಡಿದ ಬಳಿಕ ಸಮಾಜವಾದಿ ಪಕ್ಷದ (ಎಸ್ಪಿ) ಹಿರಿಯ ಮುಲಯಂ ಸಿಂಗ್ ಯಾದವ್ ಅವರು ಮತ್ತೊಮ್ಮೆ ಪಕ್ಷದ ಚಟುವಟಕೆಗಳಲ್ಲಿ ಸಕ್ರಿಯರಾಗಿದ್ದು ದೆಹಲಿಯ ಜಂತರ್ ಮಂತರ್ ನಲ್ಲಿಪ್ರಜಾಪ್ರಭುತ್ವ ರಕ್ಷಣೆಗಾಗಿ ಅಖಿಲೇಶ್ ಯಾವ್ ಸಂಘಟಿಸಿದ್ದ  ಸೈಕಲ್ ಯಾತ್ರೆ ಬಳಿಕ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರುಪುತ್ರ ಹಾಗೂ ಎಸ್ಪಿ ಮುಖ್ಯಸ್ಥರಾಗಿರುವ ಅಖಿಲೇಶ್ ಯಾದವ್ ಅವರ ಪಕ್ಕದಲ್ಲೇ ನಿಂತುಕೊಂಡು ಭಾಷಣ ಮಾಡುವ ಮೂಲಕ ಮುಲಾಯಂ ಸಿಂಗ್ ಯಾದವ್ ಅವರು ಕಳೆದ ವರ್ಷ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕಾಲದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಇತ್ಯರ್ಥಗೊಂಡಿದೆ ಎಂಬ ಸುಳಿವು ನೀಡಿದರು. ಪುತ್ರ ಅಖಿಲೇಶ್ ಯಾದವ್ ಸಂಘಟಿಸಿದ್ದ ಸೈಕಲ್  ರಾಲಿಯಲ್ಲಿ ಮುಲಾಯಂ ಸಿಂಗ್ ಅವರು ಪಾಲ್ಗೊಂಡದ್ದು ಶಿವಪಾಲ್ ಅವರಿಗೆ ದೊಡ್ಡ ಹೊಡೆತವಾಗಿದೆ. ಕುಟುಂಬ ಕಲಹದಲ್ಲಿ  ಮುಲಾಯಂ ಸಿಂಗ್ ಅವರು ತಮ್ಮ ಕಡೆಗೆ ವಾಲುತ್ತಾರೆ ಎಂದು ಶಿವಪಾಲ್ ಆಶಯ ಇಟ್ಟುಕೊಂಡಿದ್ದಾರೆ. ತಮ್ಮ ರಂಗವು ಕುಟುಂಬದಲ್ಲಿನೇತಾಜಿ ಒಬ್ಬರನ್ನು ಹೊರತು ಪಡಿಸಿ ಎಲ್ಲರನ್ನೂ ವಿರೋಧಿಸುವುದು ಎಂದು ಶಿವಪಾಲ್  ಹೇಳಿದ್ದರುಭದ್ರತಾ ವಿಷಯಗಳನ್ನು ಉಲ್ಲೇಖಿಸಿ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದರೂ, ಅಖಿಲೇಶ್ ಅವರು ಗಾಜಿಯಾಬಾದಿನಿಂದ ದೆಹಲಿಗೆ ಸೈಕಲ್ ರ್ಯಾಲಿ ಸಂಘಟಿಸಿದ್ದರುಗಾಜಿಯಾಬಾದ್ ಗಡಿಯಲ್ಲಿನ ಯುಪಿ ಗೇಟಿನಲ್ಲಿ ಪೊಲೀಸರ ಜೊತೆ ಘರ್ಷಿಸಿದ ಎಸ್ಪಿ ಕಾರ್ಯಕರ್ತರು ಸೈಕಲ್ ತುಳಿಯುತ್ತಾ ಜಂತರ್ ಮಂತರ್ ತಲುಪಿದ್ದರು. ಅಲ್ಲಿ ಬೃಹತ್ ಸನ್ಮಾನ ಸಮಾರಂಭವನ್ನು ನಡೆಸಲು ಯೋಜಿಸಲಾಗಿತ್ತು. ಸಮಾಜವಾದಿ ಪಕ್ಷದ ಕೆಂಪು ಟೋಪಿಯನ್ನು ಧರಿಸಿ ಪುತ್ರನ ಜೊತೆಗೆ ವೇದಿಕೆಯ ಮೇಲೆ ನಿಂತು ಮುಲಾಯಂ ಭಾಷಣ ಮಾಡಿದರು. ಯುವಕರಿಗೆ ಧನ್ಯವಾದ ಅರ್ಪಿಸಿದ ಮುಲಾಯಂ, ಹೆಚ್ಚಿನ ಸಂಖ್ಯೆಯ ಜನರನ್ನು ಪಕ್ಷಕ್ಕೆ ಸೇರಿಸುವಂತೆ ಕರೆ ಕೊಟ್ಟರು. ಬಡವರು ಮತ್ತು ಹಿಂದುಳಿದವರಿಗೆ ನೆರವು ನೀಡುವಂತೆ ಯುವಕರನ್ನು ಆಗ್ರಹಿಸಿದ ಮುಲಾಯಂ, ಆಗ ಮಾತ್ರ ಅವರನ್ನು ನಾಯಕ ಎಂಬುದಾಗಿ ಪರಿಗಣಿಸಬಹುದು. ಸಮಾಜವಾದಿ ಪಕ್ಷವು ಎಂದಿಗೂ ಹಳೆಯ ಪಕ್ಷವಾಗಬಾರದು. ಇಂದು ಇಷ್ಟೊಂದು ಯುವಕರನ್ನು ಕಂಡು ನನ್ನ ಆಶಯ ಈಡೇರಿದ ಖುಷಿಯಾಯಿತು ಎಂದು ಹೇಳಿದರು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜವಾದಿ ಪಕ್ಷವನ್ನು ಸೇರಲು ಮುಂದೆ ಬರಬೇಕು. ಏಕೆಂದರೆ ನಾವು ಬಿಜೆಪಿಯಂತೆ ಸುಳ್ಳು ಹೇಳುವುದಿಲ್ಲ ಅಥವಾ ಬಿಜೆಪಿ ಸರ್ಕಾರದಂತೆ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ ಎಂದು ಮುಲಾಯಂ ನುಡಿದರುಅಖಿಲೇಶ್ ಅವರು ನರೇಂದ್ರ ಮೋದಿ ಸರ್ಕಾರ ಮೇಲೆ ನೇರವಾಗಿಯೇ ದಾಳಿ ನಡೆಸಿದರು. ರಫೇಲ್ ವ್ಯವಹಾರವು ಈಗ ಜಾಗತಿಕ ವಿಷಯವಾಗಿದ್ದು, ಅದರ ಕುರಿತು ತನಿಖೆಗೆ ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕು ಎಂದು ಸರ್ಕಾರವನ್ನು ಅವರು ಆಗ್ರಹಿಸಿದರುಸರ್ಕಾರವು ಸುಳ್ಳು ಭರವಸೆಗಳ ಮೂಲಕ ಜನರು ಮತ್ತು ರಾಷ್ಟ್ರವನ್ನು ವಂಚಿಸಿದೆ. ಇಂದು ಪ್ರತಿಯೊಬ್ಬರಿಗೂ ಸರ್ಕಾರ ಮತ್ತು ಅದರ ನೀತಿಗಳ ಬಗ್ಗೆ ಭ್ರಮ ನಿರಸನವಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯುವಕರಿಗೆ ಕೆಲಸವಿಲ್ಲ. ಜಿಎಸ್ ಟಿ ಮತ್ತು ನೋಟು ಅಮಾನ್ಯೀಕರಣವು ಸಣ್ಣ ವರ್ತಕರಲ್ಲಿ ಹಾಹಾಕಾರವನ್ನು ಉಂಟು ಮಾಡಿದೆ ಎಂದು ಅಖಿಲೇಶ್ ನುಡಿದರು. ಪಕ್ಷದ ಹಿರಿಯ ನಾಯಕರಾದ ರಾಮ್ ಗೋಪಾಲ್ ಯಾದವ್ ರ್ಯಾಲಿಯಲ್ಲಿ ಹಾಜರಿದ್ದರು.
.
2018: ನವದೆಹಲಿ: ಮನೋಹರ ಪರಿಕ್ಕರ್ ಅವರು ಗೋವಾ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂಬುದಾಗಿ ಪ್ರಕಟಿಸುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಗೋವಾ ಮುಖ್ಯಮಂತ್ರಿ ಬದಲಾವಣೆ ಕುರಿತ ವದಂತಿಗಳಿಗೆ ತೆರೆ ಎಳೆದರು. ಏನಿದ್ದರೂ, ಪರಿಕ್ಕರ್ ಅವರ ಸಚಿವ ಸಂಪುಟ ಮತ್ತು ಇತರ ಸರ್ಕಾರಿ ಇಲಾಖೆಗಳಲ್ಲಿ ಶೀಘ್ರವೇ ಕೆಲವು ಬದಲಾವಣೆ ಗಳಾಗಲಿವೆ ಎಂದು ಬಿಜೆಪಿ ಅಧ್ಯಕ್ಷರು ಹೇಳಿದರು.  ಬಿಜೆಪಿಯಆಂತರಿಕ ತಂಡ (ಕೋರ್ ಟೀಮ್) ಜೊತೆಗೆ ಚರ್ಚಿಸಿದ ಬಳಿಕ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮನೋಹರ ಪರಿಕ್ಕರ್ ಅವರನ್ನು ಗೋವಾ ಮುಖ್ಯಮಂತ್ರಿಯಾಗಿ ಮುಂದುವರೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಾ ಟ್ವಿಟ್ಟರ್ ಸಂದೇಶದಲ್ಲಿ ತಿಳಿಸಿದರು. ಪರಿಕ್ಕರ್ ಅವರನ್ನು ಸೆಪ್ಟೆಂಬರ್ ೧೫ರಂದು ದೆಹಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಆಸ್ಪತ್ರೆಗೆ ಚಿಕಿತ್ಸೆಯ ಸಲುವಾಗಿ ವಿಮಾನದಲ್ಲಿ ಒಯ್ಯಲಾಗಿತ್ತು. ಪರಿಕ್ಕರ್ ಅವರನ್ನು ದೆಹಲಿಗೆ ಸ್ಥಳಾಂತರಿಸಿದ ಲಾಗಾಯ್ತಿನಿಂದಲೂ  ಗೋವಾದ ರಾಜಕೀಯದಲ್ಲಿ, ನಿರ್ದಿಷ್ಟವಾಗಿ ಬಿಜೆಪಿಯ ಮಿತ್ರ ಪಕ್ಷಗಳಲ್ಲಿ ಉದ್ವಿಗ್ನತೆ ತಲೆದೋರಿತ್ತು. ಸಂದರ್ಭವನ್ನು ಬಳಸಿಕೊಂಡ ವಿರೋಧಿ ಕಾಂಗ್ರೆಸ್ ನಾಲ್ಕನೇ ಬಾರಿಗೆ ಅಧಿಕಾರಕ್ಕಾಗಿ ಹಕ್ಕು ಮಂಡನೆ ಮಾಡಲು ಯತ್ನಿಸಿತ್ತು.
ಬಿಜೆಪಿ ಮಿತ್ರ ಪಕ್ಷ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವು (ಎಂಜಿಪಿ) ಕಳೆದ ವಾರದ ಆದಿಯಲ್ಲಿತಮ್ಮ ಗೈರುಹಾಜರಿಯಲ್ಲಿ ಅತ್ಯಂತ ಹಿರಿಯ ಸಚಿವರಿಗೆ ಉಸ್ತುವಾರಿ ವಹಿಸಲು ಮುಖ್ಯಮಂತ್ರಿಗಳಿಗೆ ಇದು ಸಕಾಲ ಎಂಬುದಾಗಿ ಹೇಳಿಕೆ ನೀಡುವ ಮೂಲಕ ರಾಜ್ಯದ ಆಡಳಿತ ನಿರ್ವಹಣೆಗೆ ಸಂಬಂಧಿಸಿದ ಅಸಮಾಧಾನವನ್ನು ಹೊರ ಹಾಕಿತ್ತು.  ಅಮಿತ್ ಶಾ ಅವರು ಇತ್ತೀಚೆಗೆ ಕೇಂದ್ರದ ಪಕ್ಷ ನಾಯಕರ ನಿಯೋಗವೊಂದನ್ನು ಕರಾವಳಿಯ ಮಿತ್ರ ಪಕ್ಷಗಳ ಜೊತೆ ಚರ್ಚಿಸಿ ರಾಜಕೀಯ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಕಾಂಗ್ರೆಸ್ ಪಕ್ಷವು ರಾಜ್ಯಪಾಲರನ್ನು ಭೇಟಿ ಮಾಡಿ ಗೋವಾ ಮುಖ್ಯಮಂತ್ರಿಯವರು ಸದನದಲ್ಲಿ ಬಹುಮತ ಸಾಬೀತು ಪಡಿಸುವಂತೆ ನಿರ್ದೇಶನ ನೀಡಬೇಕು ಎಂಬುದಾಗಿ ಕೋರಿದ್ದಲ್ಲದೆ ತಮಗೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಬೇಕು ಎಂದು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.
2018: ಹಿಸ್ಸಾರ್: ಹರಿಯಾಣದಲ್ಲಿ ಸಿಬಿಎಸ್ ಪರೀಕ್ಷೆಗಳಲ್ಲಿ ಅತ್ಯುನ್ನತ ಅಂಕ ಗಳಿಸಿದ್ದ ಯುವತಿಯ ಮೇಲೆ ನಡೆಸಿದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಭಾರತದ ಸೇನಾ ಯೋಧ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹರಿಯಾಣ ರಾಜ್ಯ ಪೊಲೀಸರು ತಿಳಿಸಿದರು. ಆರೋಪಿತ ಸೇನಾ ಯೋಧ ಪಂಕಜ್ ಮತ್ತು ಮನಿಶ್ ನನ್ನು ಹರಿಯಾಣ ಪೊಲೀಸ್ ವಿಶೇಷ ತನಿಖಾ ತಂಡವು ಸೆಪ್ಟೆಂಬರ್ ೧೨ರಂದು ರೇವಾರಿಯಲ್ಲಿ ೨೦ರ ಹರೆಯದ ತರುಣಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿತ್ತು. ಆರೋಪಿಯನ್ನು ಎಲ್ಲಿ ಬಂಧಿಸಲಾಯಿತು ಎಂಬ ಬಗ್ಗೆ ವಿವರಗಳನ್ನು ಶೀಘ್ರ ಬಹಿರಂಗ ಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಶ್ರೀಕಾಂತ ಜಾಧವ್ ನುಡಿದರು. ಇನ್ನೊಬ್ಬ ಆರೋಪಿ ನಿಶು ಮತ್ತು ಇತರ ಇಬ್ಬರನ್ನು ಹಿಂದೆಯೇ ಬಂಧಿಸಲಾಗಿತ್ತು. ಯುವತಿಯನ್ನು ಆಕೆ ಮಹೇಂದ್ರಗಢ ಜಿಲ್ಲೆಯ ಕನೀನಾ ಪಟ್ಟಣದಲ್ಲಿ ಕೋಚಿಂಗ್ ಕೇಂದ್ರಕ್ಕೆ ಹೋಗುತ್ತಿದಾಗ ಅಪಹರಿಸಿ ಸಾಮೂಹಿಕ ಅತ್ಯಾಚಾರಕ್ಕೆ ಗುರಿ ಪಡಿಸಲಾಗಿತ್ತು.  ತನಗೆ ಮಾದಕದ್ರವ್ಯ ಬೆರೆಸಿದ ನೀರನ್ನು ಕುಡಿಯಲು ಕೊಟ್ಟು, ಹೊಲವೊಂದರ ಸಮೀಪದ ಕೊಠಡಿ ಒಂದಕ್ಕೆ ಒಯ್ದು ಸಂಪೂರ್ಣ ಪ್ರಜ್ಞೆ ತಪ್ಪುವವರೆಗೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು ಎಂದು ಯುವತಿ ಆಪಾದಿಸಿದ್ದಳು. ಆರೋಪಿಗಳು ಬಳಿಕ ಆಕೆಯನ್ನು ಗ್ರಾಮಕ್ಕೆ ಸಮೀಪದ ಬಸ್ ನಿಲ್ದಾಣದ ಬಳಿ ಎಸೆದು ಪರಾರಿಯಾಗಿದ್ದರುಪ್ರಕರಣದ ತನಿಖೆಗಾಗಿ ಹರಿಯಾಣ ಪೊಲೀಸರು ಭಾಸಿನ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಶ್ರೀಕಾಂತ್ ಜಾಧವ್ ಅವರು ಕೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆಯ ಪ್ರಗತಿ ಬಗ್ಗೆ ನಿಗಾ ಇಟ್ಟರು.


2017: ನವದೆಹಲಿ: ಪಾಕಿಸ್ಥಾನದಲ್ಲಿ ನೆಲೆ ಹೊಂದಿರುವ ಜಮಾತ್ಉದ್ದಾವಾ (ಜೆಯುಡಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ಸಯೀದ್ಜತೆಗೆ ಸಂಪರ್ಕ ಹೊಂದಿರುವ ಕಾಶ್ಮೀರದ ಪ್ರತ್ಯೇಕತಾ ನಾಯಕ ಶಬ್ಬೀರ್ಶಾ ನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈದಿನ ಬಂಧಿಸಿದರು. ಜಾರಿ ನಿರ್ದೇಶನಾಲಯದ ಚಾರ್ಜ್ಶೀಟ್ಪ್ರಕಾರ ಕಾಶ್ಮೀರೀ ಪ್ರತ್ಯೇಕತಾ ನಾಯಕ ಶಬ್ಬೀರ್ಶಾ, ಪಾಕಿಸ್ಥಾನದ ಜೆಯುಡಿ ಮುಖ್ಯಸ್ಥನಾಗಿರುವ ಉಗ್ರ ಹಫೀಜ್ಸಯೀದ್ಜತೆಗೆ ಫೋನಿನಲ್ಲಿ ಕಾಶ್ಮೀರ ವಿಷಯವನ್ನು ಚರ್ಚಿಸುತ್ತಿದ್ದ ಮತ್ತು 2008 ಮುಂಬಯಿ ದಾಳಿಯ ಸೂತ್ರಧಾರನಾಗಿರುವ ಆತನ (ಹಫೀಜ್‌) ಜತೆಗೆ 2017 ಜನವರಿಯಲ್ಲಿ ಟೆಲಿಫೋನ್ನಲ್ಲಿ ಸಂಭಾಷಣೆ ನಡೆಸಿದ್ದಾನೆ ಎಂದು ಎಎನ್ ಸುದ್ದಿ ಸಂಸ್ಥೆ ವರದಿ ಮಾಡಿತು. ಚಾರ್ಜ್ಶೀಟ್ನಲ್ಲಿ ಹೇಳಲಾಗಿರುವಂತೆ ಶಬ್ಬೀರ್ಶಾ ಕಾಶ್ಮೀರ ಮತ್ತು ಭಾರತದ ಇತರ ಭಾಗಗಳಲ್ಲಿ ಉಗ್ರ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಪಾಕಿಸ್ಥಾನದ ಉಗ್ರ ಸಂಘಟನೆಯಿಂದ ಹಣ ಪಡೆದುಕೊಂಡಿದ್ದಾನೆ. ಉಗ್ರ ನಿಧಿಗೆ ಹವಾಲಾ ಮೂಲಕ ಹಣವನ್ನು ಪಡೆದುಕೊಳ್ಳುವಲ್ಲಿ ಶಬ್ಬೀರ್ಪತ್ನಿ ಡಾ. ಬಿಲ್ಕಿಸ್ಕೂಡ ಶಾಮೀಲಾಗಿದ್ದಾಳೆ. ಈಗ ನ್ಯಾಯಾಂಗ ಬಂಧನದಲ್ಲಿರುವ ಮೊಹಮ್ಮದ್ಅಸ್ಲಾಂ ವಾನಿ, ತಾನು ದಿಲ್ಲಿಯಲ್ಲಿ  ಶಬ್ಬೀರ್ಶಾ ಪರವಾಗಿ ಹವಾಲಾ ಹಣವನ್ನು ಉಗ್ರ ನಿಧಿಗಾಗಿ ಪಡೆದುಕೊಳ್ಳುತ್ತಿದ್ದೆ; ಅದನ್ನು ತನಗೆ ಪಾಕ್ಹವಾಲಾ ನಿರ್ವಾಹಕ ಶಫಿ ಶಹರ್ಯಾರ್ಪೂರೈಸುತ್ತಿದ್ದ  ಎಂದು ತನಿಖಾಧಿಕಾರಿಗಳಲ್ಲಿ ಬಾಯಿ ಬಿಟ್ಟಿದ್ದಾನೆ ಎಂದು ವರದಿ ತಿಳಿಸಿದೆ.
2017: ಚೆನ್ನೈ: ‘ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಆರೋಗ್ಯ ಸಮಸ್ಯೆಯಿಂದ ಬಳಲಿ, ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿದ್ದಾಗ ಅವರ ಆರೋಗ್ಯದ ಬಗ್ಗೆ ನಾವು ಸಾರ್ವಜನಿಕರಿಗೆ ಸುಳ್ಳು ಹೇಳಿದ್ದೆವು. ಕುರಿತು ಜನರ ಬಳಿ ಕ್ಷಮೆ ಕೇಳುತ್ತೇವೆಎಂದು ಆರಣ್ಯ ಸಚಿವ ಸಿ. ಶ್ರೀನಿವಾಸನ್ತಿಳಿಸಿದರು. ಚೆನ್ನೈಯಿಂದ  500 ಕಿ.ಮೀ ದೂರದ ಮಧುರೈಯಲ್ಲಿ ಹಿಂದಿನ  ರಾತ್ರಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿ. ಶ್ರೀನಿವಾಸನ್‌, ‘ಜಯಲಲಿತಾ ಅವರು ಆಸ್ಪತ್ರೆಯಲ್ಲಿರುವಾಗ ಆರೋಗ್ಯವಾಗಿದ್ದಾರೆ. ನಾವೆಲ್ಲಾ ಭೇಟಿ ಮಾಡಿದ್ದೆವು ಎಂದು ಹೇಳಿದ್ದೆವು. ಆದರೆ, ವಾಸ್ತವ ಸಂಗತಿ ಬೇರೆಯೇ ಇದೆ. ನಾವು ಯಾರು ಜಯಲಲಿತಾ ಅವರನ್ನು ಭೇಟಿ ಮಾಡಿರಲಿಲ್ಲ. ಹಾಗಾಗಿ, ಅಂದು ನಾವು ಸುಳ್ಳು ಹೇಳಿದಕ್ಕೆ ಇಂದು ಜನರ ಬಳಿ ಕ್ಷಮೆ ಕೇಳುತ್ತೇನೆಎಂದರು.  ಜಯಲಲಿತಾ 2016 ಸೆ. 22ರಂದು ಚೆನ್ನೈಯ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಹಲವು ಪ್ರಮುಖ ಮುಖಂಡರು ಅವರನ್ನು ಭೇಟಿ ಮಾಡಿದ್ದು, ಅವರು ಮಾತನಾಡುತ್ತಿದ್ದಾರೆ, ಆರೋಗ್ಯವಾಗಿದ್ದಾರೆ ಎಂದು ಎಐಡಿಎಂಕೆ ಪಕ್ಷದವರು ಹೇಳಿದ್ದೆಲ್ಲಾ ಸುಳ್ಳುಎಂದರು. ‘ಅಪೊಲೊ ಆಸ್ಟತ್ರೆಯ ಮುಖ್ಯಸ್ಥ ಪ್ರತಾಪ್ರೆಡ್ಡಿ ಅವರನ್ನು ಭೇಟಿಯಾಗಿ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಚರ್ಚಿಸುತ್ತಿದ್ದೆವು. ಆದರೆ, ಆಸ್ಪತ್ರೆಯಿಂದ ಹೊರ ಬಂದ ಮೇಲೆ ಮಾಧ್ಯಮಗಳಿಗೆ ನೀಡುತ್ತಿದ ಮಾಹಿತಿಯೇ ಬೇರೆಯಾಗಿತ್ತು. ಪಕ್ಷದ ಗೌಪ್ಯ ವಿಚಾರ ಜನರಿಗೆ ತಿಳಿಸಬಾರದು ಎಂಬುದು ಪ್ರಮುಖ ಉದ್ದೇಶವಾಗಿತ್ತುಎಂದು ಶ್ರೀನಿವಾಸನ್ಹೇಳಿದರು. ಜಯಲಲಿತಾ ಅವರು ಆಸ್ಪತ್ರೆಯಲ್ಲಿರುವಾಗ ವಿ.ಕೆ. ಶಶಿಕಲಾ ಅವರನ್ನು ಬಿಟ್ಟು ಇತರರನ್ನು ಭೇಟಿ ಮಾಡುತ್ತಿರಲಿಲ್ಲಎಂದು ಅವರು ಹೇಳಿದರು. ಶ್ರೀನಿವಾಸನ್ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಶಶಿಕಲಾ ಅವರ ಸೋದರಳಿಯ ಟಿಟಿವಿ ದಿನಕರನ್‌, ‘2016 ಅಕ್ಟೋಬರ್‌ 1 ಬಳಿಕ ಶಶಿಕಲಾ ಅವರನ್ನು ಕೂಡ ಜಯಲಲಿತಾ ಅವರ ಕೋಣೆಗೆ ಬಿಡುತ್ತಿರಲಿಲ್ಲ. ಅಲ್ಲಿವರೆಗೆ ಶಶಿಕಲಾ ಜಯಲಲಿತಾ ಅವರ ಕೋಣೆಗೆ ಕೇವಲ ಎರಡು ನಿಮಿಷ ಮಾತ್ರ ಭೇಟಿ ನೀಡುತ್ತಿದ್ದರುಎಂದು ಹೇಳಿದರು. ಸದ್ಯ ಜಯಲಲಿತಾ ಸಾವಿನ ಕುರಿತು ತನಿಖೆ ನಡೆಸಲು ತಮಿಳುನಾಡು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಯೋಗ ರಚಿಸುವುದಾಗಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ತಿಳಿಸಿದ್ದಾರೆ.
2017: ಮೊಹಾಲಿ : ಪಂಜಾಬಿನ ಹಿರಿಯ ಪತ್ರಕರ್ತ ಕೆ ಜೆ ಸಿಂಗ್ಮತ್ತು ಅವರ ತಾಯಿ ಗುರುಚರಣ್ಕೌರ್ಅವರನ್ನು ಈದಿನ ಮೊಹಾಲಿಯಲ್ಲಿನ ತಮ್ಮ ನಿವಾಸದಲ್ಲೇ ಕೊಲೆಗೈಯಲಾಗಿದೆ  ಎಂದು ಪೊಲೀಸರು ತಿಳಿಸಿದರು. ಮೊಹಾಲಿಯ ಫೇಸ್‌ 3ಬಿ2 ನಲ್ಲಿನ ನಿವಾಸದಲ್ಲಿ ಅವಳಿ ಕೊಲೆ ನಡೆದಿರುವುದನ್ನು ಮೊಹಾಲಿ ಹಿರಿಯ ಪೊಲೀಸ್ಸುಪರಿಂಟೆಂಡೆಂಟ್ಕುಲ್ದೀಪ್ಚಹಾಲ್ಅವರು ದೃಢೀಕರಿಸಿದರು.  ಪತ್ರಕರ್ತ ಕೆ ಜೆ ಸಿಂಗ್ಅವರನ್ನು ಕತ್ತು ಸೀಳಿ ಕೊಲ್ಲಲಾಗಿದೆ; ಅವರ ತಾಯಿ ಗುರುಚರಣ್ಕೌರ್ಅವರನ್ನು ಕುತ್ತಿಗೆ ಹಿಸುಕಿ ಕೊಲ್ಲಲಾಗಿದೆ ಎಂದು ಪೊಲೀಸ್ಮೂಲಗಳು ಹೇಳಿದವು. ಸಿಂಗ್ಅವರ ಫೋರ್ಡ್ಐಕಾನ್ಕಾರು ನಾಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು. ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಸಂದರ್ಶಕರೊಬ್ಬರು ಸಿಂಗ್ಅವರ ನಿವಾಸದ ಗೇಟಿನಲ್ಲಿದ್ದು ಕರೆ ನೀಡಿದಾಗ ಒಳಗಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದುನ್ನು ಅನುಸರಿಸಿ ಮನೆಯೊಳಗೆ ಇಣುಕಿ ನೋಡಿದಾಗ ಕೊಲೆ ನಡೆದಿರುವುದು ಗೊತ್ತಾಯಿತುಸಿಂಗ್ಅವರು ಚಂಡೀಗಢದಲ್ಲಿ ಇಂಡಿಯನ್ಎಕ್ಸ್ಪ್ರೆಸ್‌, ದಿ ಟ್ರಬ್ಯೂನ್ಹಾಗೂ ದಿ ಟೈಮ್ಸ್ಆಫ್ ಇಂಡಿಯಾ ಇದರ ಮಾಜಿ ಸುದ್ದಿ ಸಂಪಾದಕರು. ಸಿಂಗ್ಅವರು ಈಚಿನ ದಿನಗಳಲ್ಲಿ ಕೊಲೆಗೀಡಾಗಿರುವ ಮೂರನೇ ಪತ್ರಕರ್ತರಾಗಿದ್ದಾರೆ. ಕರ್ನಾಟಕದ ಗೌರೀ ಲಂಕೇಶ್ಮತ್ತು ತ್ರಿಪುರದಲ್ಲಿ ಕೊಲೆಗೀಡಾದ ಶಂತನು ಭೌಮಿಕ್ಇನ್ನಿಬ್ಬರು ಪತ್ರಕರ್ತರು. ಆದರೆ ಮೂರೂ ಕೊಲೆ ಪ್ರಕರಣಗಳು ಒಂದಕ್ಕೊಂದು ಸಂಬಂಧಿತವಲ್ಲ ಎಂದು ಪೊಲೀಸ್ಮೂಲಗಳು ಹೇಳಿದವು.
2017: ಆಳ್ವಾರ್‌ : ಲಾಹಾರಿ ಬಾಬಾ ಎಂದೇ ಖ್ಯಾತನಾದ ಸ್ವಘೋಷಿತ ದೇವಮಾನವ ಕುಶಲೇಂದ್ರ ಪ್ರಪಣ್ಣಾಚಾರಿ ಎಂಬಾತನನ್ನು ಅತ್ಯಾಚಾರ ಎಸಗಿದ ಆರೋಪದ ಮೇಲೆ ರಾಜಸ್ಥಾನದ ಆಳ್ವಾರ್ಪೊಲೀಸರು ಬಂಧಿಸಿದರು. ಖಾಸಗಿ ಆಸ್ಪತ್ರೆಯಲ್ಲಿದ್ದ ಆತನನ್ನು ಪೊಲೀಸರು ಅಲ್ಲಿಂದಲೇ ಬಂಧಿಸಿ ಸರಕಾರಿ ಆಸ್ಪತ್ರೆಗೆ ಒಯ್ದು ಅಲ್ಲಿ ಆತನನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿದರುಲಾಹಾರಿ ಬಾಬಾ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಬಿಲಾಸ್ಪುರ ಕಾನೂನು ವಿದ್ಯಾರ್ಥಿನಿಯೋರ್ವಳು ಆಳ್ವಾರ್ಪೊಲೀಸರಲ್ಲಿ ದೂರು ದಾಖಲಿಸಿದ್ದಳು. ಪ್ರಕಾರ ಪೊಲೀಸರು ಬಾಬಾನನ್ನು ಬಂಧಿಸಿದರು. ಆತನ ಮೇಲೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದಕ್ಕಾಗಿ ಪೊಲೀಸರು ಪರಿಣತ ವೈದ್ಯರನ್ನು ಒಳಗೊಂಡ ವೈದ್ಯಕೀಯ ಮಂಡಳಿಯೊಂದನ್ನು ರಚಿಸಿದರು. ಹರಿಯಾಣದ ಸಿರ್ಸಾದಲ್ಲಿನ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮಿತ್ರಾಮ್ರಹೀಮ್ಸಿಂಗ್‌ 15 ವರ್ಷಗಳ ಹಿಂದೆ ಎಸಗಿದ್ದ ಅತ್ಯಾಚಾರ ಅಪರಾಧಕ್ಕಾಗಿ ನ್ಯಾಯಾಲಯವು ಆತನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕಳೆದ .28ರಂದು ನೀಡಿದ್ದ ತೀರ್ಪಿನಿಂದ ಪ್ರೇರಿತಳಾದ ಕಾನೂನು ವಿದ್ಯಾರ್ಥಿನಿಯು ತನ್ನ ಮೇಲೆ ಲಾಹಾರಿ ಬಾಬಾ ಅತ್ಯಾಚಾರ ಎಸಗಿದ್ದ ಬಗ್ಗೆ  ಧೈರ್ಯದಿಂದ ಪೊಲೀಸರಿಗೆ ದೂರು ನೀಡಿ ಆತನ ಬಂಧನಕ್ಕೆ ಕಾರಣಳಾಗಿದ್ದಾಳೆಅತ್ಯಾಚಾರದ ದೂರು ಕೊಟ್ಟಿರುವ ಕಾನೂನು ವಿದ್ಯಾರ್ಥಿನಿಯ ಹೆತ್ತವರು ಕಳೆದ ಅನೇಕ ವರ್ಷಗಳಿಂದ ಲಾಹಾರಿ ಬಾಬಾನ ಅನುಯಾಯಿಗಳಾಗಿದ್ದರುಲಾಹಾರಿ ಬಾಬಾ ತನ್ನ ಮೇಲೆ ಕಳೆದ ಆಗಸ್ಟ್‌ 7ರಂದು ಆತನ ಆಳ್ವಾರ್ಆಶ್ರಮದಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಹುಡುಗಿ ದೂರಿನಲ್ಲಿ ಹೇಳಿದ್ದಳು. ಕಳೆದ 25 ವರ್ಷಗಳಿಂದ ತಾನು ಕೇವಲ ಲಾಹಾರದಲ್ಲೇ ಬದುಕುತ್ತಿರುವುದಾಗಿ ಸ್ವಘೋಷಿತ ದೇವಮಾನವ ಬಾಬಾ ಹೇಳಿಕೊಂಡಿದ್ದು ಕಾರಣಕ್ಕಾಗಿ ಆತನನ್ನು ಆತನ ಅನುಯಾಯಿಗಳು "ಲಾಹಾರಿ ಬಾಬಾ' ಎಂದೇ ಕರೆಯುತ್ತಾರೆ.  ಅತ್ಯಾಚಾರದ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಲಾಹಾರಿ ಬಾಬಾ ವಿರುದ್ಧ ಐಪಿಸಿ ಸೆ.376, ಸೆ.506 ಅಡಿ ತಾವು ಕೇಸು ದಾಖಲಿಸಿಕೊಂಡಿರುವುದಾಗಿ ಆಳ್ವಾರ್ಹೆಚ್ಚುವರಿ ಎಸ್ಪಿ ಪಾರಸ್ಜೈನ್ಹೇಳಿದರು. ತನ್ನ ಮೇಲೆ ಅತ್ಯಾಚಾರದ ದೂರು ದಾಖಲಾದ ಬೆನ್ನಿಗೇ ಲಾಹಾರಿ ಬಾಬಾ ಅಲಿಯಾಸ್ಕುಶಲೇಂದ್ರ ಪ್ರಪಣ್ಣಾಚಾರಿ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದ. ಆತ ಆರೋಗ್ಯದಿಂದ ಇದ್ದು ಬಿಡುಗಡೆಗೆ ಯೋಗ್ಯನಿದ್ದಾನೆ ಎಂದು ವೈದ್ಯರು ಘೋಷಿಸಿದ ಬೆನ್ನಿಗೇ ಆತನನ್ನು ಪೊಲೀಸರು ಬಂಧಿಸಿದರು

2016: ಬೆಂಗಳೂರು: 2016-17ನೇ ಜಲವರ್ಷದಲ್ಲಿ ಗಂಭೀರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಕೆಆರ್ಎಸ್, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳಿಂದ ಬೆಂಗಳೂರು ಮತ್ತು ಕಾವೇರಿ ಕೊಳ್ಳದ ಕುಡಿಯುವ ಉದ್ದೇಶ ಹೊರತಾಗಿ ಬೇರಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲ ಎಂಬ ಸರ್ವಾನುಮತದ ಐತಿಹಾಸಿಕ ನಿರ್ಣಯಕ್ಕೆ ಕರ್ನಾಟಕ ವಿಧಾನ ಮಂಡಲದ ಎಲ್ಲ ಪಕ್ಷಗಳ ಸದಸ್ಯರೂ ಒಕ್ಕೊರಲ ಬೆಂಬಲ ನೀಡಿದರು. ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಕರೆಯಲಾದ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಐತಿಹಾಸಿಕ ವಿಶೇಷ ಅಧಿವೇಶನದಲ್ಲಿ ನಿರ್ಣಯವನ್ನು ಮಂಡಿಸಿ, ಚರ್ಚೆಯ ಬಳಿಕ ಅಂಗೀಕರಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚೆಗೆ ಉತ್ತರ ನೀಡಿದ ಬಳಿಕ ಸಂಜೆ ವಿಧಾನಸಭೆ ನಿರ್ಣಯವನ್ನು ಅಂಗೀಕರಿಸಿತು. ವಿಧಾನಪರಿಷತ್ತು ಮಧ್ಯಾಹ್ನದ ವೇಳೆಗೇ ಅದನ್ನು ಅಂಗೀಕರಿಸಿತು. ವಂದೇ ಮಾತರಂ ಗೀತೆಯೊಂದಿಗೆ ಆರಂಭಗೊಂಡ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಣಯ ಮಂಡನೆ, ಅನುಮೋದನೆಗೆ ವಿರೋಧ ಪಕ್ಷಗಳಿಗೆ ಅವಕಾಶ ಕಲ್ಪಿಸಿದ್ದರು. ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ನಿರ್ಣಯವನ್ನು ಮಂಡಿಸಿದರು. ವೈಎಸ್ವಿ ದತ್ತ ಅವರು ಅನುಮೋದಿಸಿದರು. 2016-17ನೇ ಜಲವರ್ಷದಲ್ಲಿ ಗಂಭೀರ ಪರಿಸ್ಥಿತಿ ಇದೆ. ಕೆಆರ್ಎಸ್, ಹೇಮಾವತಿ, ಹಾರಂಗಿ, ಕಬಿನಿ ನಾಲ್ಕು ಜಲಾಶಯಗಳಲ್ಲಿ ಇರುವುದು 27.6 ಟಿಎಂಸಿ ನೀರು ಮಾತ್ರ, ನೀರಿನ ಮಟ್ಟ ಅತ್ಯಂತ ಕೆಳಕ್ಕೆ ತಲುಪಿದೆ. ಹೀಗಾಗಿ 4 ಜಲಾಶಯಗಳ ನೀರನ್ನು ಬೆಂಗಳೂರು ಮತ್ತು ಕಾವೇರಿ ಕೊಳ್ಳದ ಹಳ್ಳಿಗಳಿಗೆ ಕುಡಿಯುವ ಸಲುವಾಗಿ ಮಾತ್ರ ಬಳಸಬೇಕು, ಬೇರೆ ಯಾವುದೇ ಕಾರಣಕ್ಕೂ ನೀರು ಒದಗಿಸಲು ಸಾಧ್ಯವಿಲ್ಲ ಎಂಬ ನಿರ್ಣಯವನ್ನು ಸದನ ಸರ್ವಾನುಮತದಿಂದ ಅಂಗೀಕರಿಸುತ್ತದೆ ಎಂದು ನಿರ್ಣಯ ಹೇಳಿತು. ನಿರ್ಣಯವನ್ನು ಬೆಂಬಲಿಸಿ ಎಚ್.ಡಿ. ಕುಮಾರ ಸ್ವಾಮಿ, ಈಶ್ವರಪ್ಪ ಸೇರಿದಂತೆ ಎಲ್ಲ ಪಕ್ಷಗಳ ಸದಸ್ಯರೂ ಮಾತನಾಡಿದರು. ಸಂತಾಪ ಸೂಚನೆ ನಿರ್ಣಯ ಅಂಗೀಕಾರದ ಬಳಿಕ ನಿರ್ಣಯದ ಮಂಡನೆಯಾಯಿತು. ಐತಿಹಾಸಿಕ ನಿರ್ಣಯ ಅಂಗೀಕಾರದ ಬಳಿಕ ಉಭಯ ಸದನಗಳ ಕಲಾಪವನ್ನು ಅನಿರ್ಧಿಷ್ಟ ಅವಧಿಗೆ ಮುಂದೂಡಲಾಯಿತು. ಅಧಿವೇಶನಕ್ಕೆ ಮುನ್ನ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರ ಜೊತೆಗೆ ಸಮಾಲೋಚನೆ ನಡೆಸಿ ಸಲಹೆಗಳನ್ನು ಪಡೆದಿದ್ದರು.

2016: ನವದೆಹಲಿ: ಸಹಾರಾ ಮುಖ್ಯಸ್ಥ ಸುಬ್ರತೊ ರಾಯ್ ಅವರನ್ನು ವಾಪಸ್ ಬಂಧಿಸಿ ತಿಹಾರ್ ಸೆರೆಮನೆಗೆ ಕಳುಹಿಸುವಂತೆ ನೀಡಿದ ತನ್ನ ಆದೇಶಕ್ಕೆ ಸುಪ್ರೀಂಕೋರ್ಟ್ ಸೆಪ್ಟೆಂಬರ್ 30ರವರೆಗೆ ತಡೆಯಾಜ್ಞೆ ನೀಡಿ, ಮಧ್ಯಂತರ ಪೆರೋಲ್ ವಿಸ್ತರಣೆ ಕೋರಿದ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 28ರಂದು ನಡೆಸಲು ತೀರ್ಮಾನಿಸಿತು. ತನ್ನ ವಕೀಲ ರಾಜೀವ್ ಧವನ್ ಅವರ ಅಂಕೆಯಿಲ್ಲದ ಭಾಷಾ ಬಳಕೆಗಾಗಿ ಸಹಾರಾ ಕಂಪೆನಿಯು ಭೇಷರತ್ ಕ್ಷಮೆ ಕೇಳಿದ ಬಳಿಕ ಸುಬ್ರತೊ ರಾಯ್ ಮತ್ತು ಕಂಪೆನಿಯ ಇಬ್ಬರು ನಿರ್ದೇಶಕರ ಜಾಮೀನು ಮುಂದುವರಿಕೆ ಕೋರಿದ ಸಹಾರಾ ಮನವಿಯನ್ನು ಮರು ಪರಿಶೀಲಿಸಲು ಕೋರ್ಟ್ ಒಪ್ಪಿತು. ‘ಧವನ್ ಅವರ ಹೇಳಬಾರದಾಗಿದ್ದ ಹೇಳಿಕೆಗಾಗಿ ನಾನು ವಿಷಾದಿಸುತ್ತೇನೆ ಮತ್ತು ಭೇಷರತ್ ಕ್ಷಮೆ ಕೋರುತ್ತೇನೆಎಂದು ರಾಯ್ ನ್ಯಾಯಾಲಯಕ್ಕೆ ತಿಳಿಸಿದರು. ಸಹಾರಾ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಕಪಿಲ್ ಸಿಬಲ್ ಅವರೂ ವೈಯಕ್ತಿಕ ಕ್ಷಮೆ ಯಾಚನೆ ಮಾಡಿಇನ್ನೆಂದೂ ಹೀಗೆ ಆಗದುಎಂದು ಭರವಸೆ ನೀಡಿದರು. ಇದಕ್ಕೆ ಮುನ್ನ ಸುಪ್ರೀಂಕೋರ್ಟ್ ಪೀಠವು ಸಹಾರಾ ಮುಖ್ಯಸ್ಥ ಮತ್ತು ಇತರ ಇಬ್ಬರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ರದ್ದು ಪಡಿಸಿ, ಮೂವರನ್ನೂ ತಿಹಾರ್ ಸೆರೆಮನೆಗೆ ಕಳುಹಿಸುವಂತೆ ಆಜ್ಞಾಪಿಸಿತ್ತು.

2016: ಜಿನೇವಾ: ಬಲೂಚಿಸ್ತಾನದಲ್ಲಿ ಪಾಕಿಸ್ತಾನ ನಡೆಸುತ್ತಿರುವ ನಿರಂತರ ದೌರ್ಜನ್ಯ ಬಗ್ಗೆ ವಿಶ್ವದ ಗಮನ ಸೆಳೆಯುವ ಸಲುವಾಗಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ (ಯುಎನ್ಎಚ್ಆರ್ಸಿ) ಮುಂದೆ ಬಲೂಚಿಸ್ತಾನ ಚಳವಳಿಗಾರರು ಹಮ್ಮಿಕೊಂಡ ಕ್ಯಾಂಡಲ್ ದೀಪ ಪ್ರತಿಭಟನೆಯಲ್ಲಿ ಭಾರತೀಯ ಪ್ರವಾಸಿಗರೂ ಪಾಲ್ಗೊಂಡರು.

2016: ನವದೆಹಲಿ: ತಮ್ಮ ಖಾತೆಯನ್ನು ಕಿತ್ತು ಹಾಕಲು ನಿರ್ಧರಿಸುವ ಬಳಕೆದಾರರ
ಮಾಹಿತಿಯನ್ನು ತೆಗೆದುಹಾಕುವಂತೆ ಮತ್ತು ಫೇಸ್ ಬುಕ್ನಲ್ಲಿ ಹಂಚಿಕೊಳ್ಳದಂತೆ ವಾಟ್ಸ್ ಆಪ್ಗೆ ದೆಹಲಿ ಹೈಕೋರ್ಟ್ ಆದೇಶ ನೀಡುವ ಮೂಲಕ ವಾಟ್ಸ್ ಆ್ಯಪ್ ನೂತನ ನೀತಿಗೆ ಅನುಮತಿ ನೀಡಿತು. ವಾಟ್ಸ್ ಆಪ್ ನಂತಹ ಸಂದೇಶವಾಹಕ ಸಂಸ್ಥೆಗಳನ್ನು ನಿಯಂತ್ರಿತ ಚೌಕಟ್ಟಿನ ಒಳಗೆ ತರುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವಂತೆಯೂ ಹೈಕೋರ್ಟ್ ಸರ್ಕಾರ ಮತ್ತು ಭಾರತೀಯ ಟೆಲಿಕಾಂ ನಿಯಂತ್ರಣ ಮಂಡಳಿಗೂ (ಟ್ರಾಯ್) ನಿರ್ದೇಶನ ನೀಡಿತುಬಳಕೆದಾರನು ತನ್ನ ಖಾತೆಯನ್ನು ಕಿತ್ತು ಹಾಕಿದ ಬಳಿಕ ವ್ಯಕ್ತಿಯ ಯಾವುದೇ ಮಾಹಿತಿ ತನ್ನ ಸರ್ವರ್ಗಳಲ್ಲಿ ಉಳಿಯುವುದಿಲ್ಲ ಎಂದು ವಾಟ್ಸ್ ಆಪ್ ಸೆಪ್ಟೆಂಬರ್ 21ರಂದು ಹೈಕೋರ್ಟ್ಗೆ ತಿಳಿಸಿತ್ತು. ಖಾತೆ ರದ್ದು ಪಡಿಸಿದ ಬಳಿಕ ಬಳಕೆದಾರರ ಮಾಹಿತಿಯನ್ನು ವಾಟ್ಸ್ ವ್ಯಾಪ್ ಉಳಿಸಿಕೊಳ್ಳುತ್ತದೆಯೇ ಎಂದು ನ್ಯಾಯಮೂರ್ತಿಗಳಾದ ಜಿ. ರೋಹಿಣಿ ಮತ್ತು ಸಂಗೀತಾ ಧೀಂಗ್ರಾ ಸೆಹಗಲ್ ಅವರ ಪೀಠವು ಪ್ರಶ್ನಿಸಿತ್ತು. ವಾಟ್ಸ್ ಆಪ್ ನೂತನ ನೀತಿಯು ದೀರ್ಘ ಕಾಲ ಮಾಹಿತಿಯನ್ನು ಉಳಿಸಿಕೊಳ್ಳುವುದಾಗಿ ಕಂಪೆನಿಯು ನೀಡಿದ್ದ ಪ್ರಮಾಣ ಪತ್ರಕ್ಕೆ ವ್ಯತಿರಿಕ್ತವಾದುದು ಎಂದು ಹೇಳಿ ಅರ್ಜಿದಾರರು ಅದನ್ನು ವಿರೋಧಿಸಿದ್ದರು. ವಿಚಾರಣೆ ಬಳಿಕ ಪೀಠವು ತೀರ್ಪನ್ನು ಸೆ.23ಕ್ಕೆ ಕಾಯ್ದಿರಿಸಿತ್ತು.

2016: ನವದೆಹಲಿ: ಭಾರತ ಮತ್ತು ಫ್ರಾನ್ಸ್ ದೇಶಗಳು 36 ರಾಫೇಲ್ ಯುದ್ಧ ವಿಮಾನ ವ್ಯವಹಾರ ಒಪ್ಪಂದಕ್ಕೆ ಸಹಿ ಹಾಕಿದವು. ವ್ಯವಹಾರದ ಮೊತ್ತ 7.8 ಬಿಲಿಯನ್ (780 ಕೋಟಿ) ಯೂರೋಗಳು ಅಂದರೆ ಸುಮಾರು 58,000 ಕೋಟಿ ರೂಪಾಯಿಗಳು. ಅವರು ಹಲವಾರು ವರ್ಷಗಳ ಮಾತುಕತೆಗಳ ಬಳಿಕ ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವ ಜಿಯಾನ್ ವೈವೆಸ್ ಲೆಡ್ರಿಯನ್ ದೆಹಲಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು ಒಪ್ಪಂದದ ಪ್ರಕಾರ ಭಾಋತ ಫ್ರಾನ್ಸ್ಗೆ ಶೆಲ್ಪ್ ಡಸ್ಸಾಲ್ಟ್ ರಫೇಲ್ ಅವಳಿ ಎಂಜಿನ್ ಯುದ್ಧ ವಿಮಾನಗಳಿಗಾಗಿ ಅಂದಾಜು 58,000 ರೂಪಾಯಿಗಳನ್ನು ಪಾವತಿ ಮಾಡಲಿದೆ. ಮೊತ್ತದ ಶೇಕಡಾ 15ರಷ್ಟು ಹಣವನ್ನು ಮುಂಗಡವಾಗಿ ಪಾವತಿ ಮಾಡಲಿದೆಒಪ್ಪಂದ ಪ್ರಕಾರ ಭಾರತವು ಮೆಟೆಯೊರ್ ಕ್ಷಿಪಣಿ ಸೇರಿದಂತೆ ಬಿಡಿಭಾಗಗಳು ಹಾಗೂ ಶಸ್ತ್ರಾಸ್ತ್ರಗಳನ್ನೂ ಪಡೆಯಲಿದೆ. ಯುದ್ಧ ವಿಮಾನಗಳು ವಿಶ್ವದಲ್ಲೇ ಅತ್ಯಾಧುನಿಕ ಎಂದು ಖ್ಯಾತಿ ಪಡೆದಿವೆ.

2016: ನವದೆಹಲಿ: ಪತ್ರಕರ್ತ ರಾಜ್ದೇವ್ ರಂಜನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಪುತ್ರ, ಸಚಿವ ತೇಜ್ ಪ್ರತಾಪ್ ಮತ್ತು ಆರ್ಜೆಡಿ ಸದಸ್ಯ ಶಹಾಬುದ್ದೀನ್ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತು. ಕೊಲೆ ಪ್ರಕರಣದ ತನಿಖೆಯನ್ನು ಮುಂದುವರೆಸುವಂತೆ ಮತ್ತು ಅಕ್ಟೋಬರ್ 17ರಂದು ವಸ್ತುಸ್ಥಿತಿ ವರದಿಯನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿತು. ಪ್ರಕರಣವನ್ನು ಬಿಹಾರದಿಂದ ದೆಹಲಿಗೆ ವರ್ಗಾಯಿಸುವಂತೆ ಕೋರಿ ಪತ್ರಕರ್ತ ರಂಜನ್ ಅವರ ಪತ್ನಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಸುಪ್ರೀಂಕೋರ್ಟ್ ಅರ್ಜಿಯ ವಿಚಾರಣೆ ನಡೆಸಿತು.

2016: ನವದೆಹಲಿ: ಮುಂಬೈ ಸಮೀಪದ ಉರಾನ್ ನೌಕಾ ನೆಲೆಯ ಬಳಿ ಐದಾರು ಮಂದಿ ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡ ಬಗ್ಗೆ ಶಾಲಾ ಮಕ್ಕಳು ನೀಡಿದ ವರದಿ ಹಾಗೂ ಅವರ ವಿವರಣೆಗಳ ಆಧಾರದಲ್ಲಿ ನವೀ ಮುಂಬೈ ಪೊಲೀಸರು ಶಂಕಿತರಲ್ಲಿ ಒಬ್ಬ ವ್ಯಕ್ತಿಯ ರೇಖಾ ಚಿತ್ರವನ್ನು ಬಿಡುಗಡೆ ಮಾಡಿದರು. ಮಹತ್ವದ ಬೆಳವಣಿಗೆಯೊಂದರಲ್ಲಿ ಉರಾನ್ ಸಮೀಪ ಸೆಪ್ಟೆಂಬರ್ 7ರಂದು ಯಾರೋ ಬಿಟ್ಟುಹೋಗಿರುವ ದೋಣಿಯೊಂದು ಪತ್ತೆಯಾಗಿದ್ದು ಅದನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಗೃಹ ಇಲಾಖೆಯು ದೃಢ ಪಡಿಸಿತು. ಅನುಮಾನಾಸ್ಪದ ವ್ಯಕ್ತಿಗಳ ಪತ್ತೆಗಾಗಿ ಉರಾನ್ ಆಸುಪಾಸಿನಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಮಹಾರಾಷ್ಟ್ರಾದ್ಯಂತ ಕಟ್ಟೆಚ್ಚರ ವಹಿಸಲಾಯಿತು. ಉರಾನ್ ಸಮೀಪದ ಶಾಲೆಯೊಂದರ ಬಾಲಕನೊಬ್ಬನ ಪ್ರಕಾರ ನೌಕಾನೆಲೆಯ ಸಮೀಪ ಅನುಮಾನಾಸ್ಪದ ವ್ಯಕ್ತಿ ಕಾಣಿಸಿದ್ದು, ಇನ್ನೊಬ್ಬ ಬಾಲಕಿಯ ಹೇಳಿಕೆಯ ಪ್ರಕಾರ 5-6 ಮಂದಿ ಪಠಾಣ್ ಶೈಲಿಯ ಉಡುಪು ಧರಿಸಿ, ಮುಖ ಮುಚ್ಚಿಕೊಂಡು ಕೈಯಲ್ಲಿ ಬಂದೂಕು ಹಿಡಿದಿದ್ದ ವ್ಯಕ್ತಿಗಳು ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡುತ್ತಿದ್ದರು ಎಂದು ಹೇಳಲಾಗಿತ್ತು.
2014: ಇಂಚೋನ್: ಭಾರತದ ಜನಪ್ರಿಯ ಶೂಟರ್, ಒಲಿಂಪಿಕ್ ಸ್ವರ್ಣ ವಿಜೇತ ಅಭಿನವ್ ಬಿಂದ್ರಾ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಇದು ಅಭಿನವ್ ಬಿಂದ್ರಾ ಅವರಿಗೆ ವೃತ್ತಿಜೀವನದ ಏಷ್ಯನ್ ಗೇಮ್ಸ್​ನಲ್ಲಿ ಸಂಪಾದಿಸಿದ ಚೊಚ್ಚಲ ವೈಯಕ್ತಿಕ ಪದಕ’ ಈಗಾಗಲೇ ಶೂಟಿಂಗ್ ವಿದಾಯ ಪ್ರಕಟಿಸಿರುವ ಅಭಿನವ್ ಬಿಂದ್ರಾಗೆ ಇದೇ ಕಡೆಯ ಕ್ರೀಡಾಕೂಟ. ಒನ್ಗೆಯಾನ್ ಅಂತಾರಾಷ್ಟ್ರೀಯ ಶೂಟಿಂಗ್ ರೇಂಜ್​ನಲ್ಲಿ ಈದಿನ ಬೆಳಗ್ಗೆ ನಡೆದ ಸ್ಪರ್ಧೆಯಲ್ಲಿ ಅಭಿನವ್ 187.1 ಅಂಕಗಳನ್ನು ಗಳಿಸಿ ಕಂಚು ಸಂಪಾದಿಸಿದರೆ, ಚೀನಾದ ಹೌರಾನ್ ಯಾಂಗ್ 209.6 ಅಂಕಗಳೊಂದಿಗೆ ಸ್ವರ್ಣ ಪದಕವನ್ನು, ರಿಫೀ ಕಾವೊ 208.9 ಅಂಕಗಳೊಂದಿಗೆ ಬೆಳ್ಳಿ ಪದಕವನ್ನೂ ಸಂಪಾದಿಸಿದರು.

2014:  ಮುಂಬೈ: ಭೂಗತ ಪಾತಕಿ ರವಿ ಪೂಜಾರಿ ಮೂರು ಕೋಟಿ ರೂಪಾಯಿ ಹಣಕ್ಕಾಗಿ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿತು. ಈ ಹಿನ್ನೆಲೆಯಲ್ಲಿ ಅವರ ಜುಹುನಲ್ಲಿರುವ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಯಿತು. ಈ ಸಂಬಂಧ ಮುಂಬೈ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಹಣಕ್ಕಾಗಿ ಎರಡು ಬಾರಿ ಕುಂದ್ರಾ ಮೊಬೈಲ್​ಗೆ ಕರೆ ಬಂದಿತ್ತು ಎನ್ನಲಾಯಿತು. ಮೊದಲ ಕರೆಯಲ್ಲೆ 3 ಕೋಟಿ ರೂ. ಬೇಡಿಕೆ ಇಟ್ಟಿದ್ದ ಎಂದು ದೂರಿನಲ್ಲಿ ಹೇಳಲಾಯಿತು. ಬಾಲಿವುಡ್​ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿಯಾಗಿರುವ ರಾಜ್ ಕುಂದ್ರಾ ಖ್ಯಾತ ಉದ್ಯಮಿಗಳಲ್ಲಿ ಒಬ್ಬರು. ಐಪಿಎಲ್​ನಲ್ಲಿ ಆಡುವ ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕರೂ ಹೌದು. ಪ್ರಕರಣ ದಾಖಲಿಸಿಕೊಂಡ ಮುಂಬೈ ಪೋಲಿಸರು ತನಿಖೆ ಮುಂದುವರಿಸಿದರು.

2014: ನವದೆಹಲಿ: ಗೀತು ಮೋಹನ್​ದಾಸ್ ನಿರ್ದೇಶನದ ಚೊಚ್ಚಲ ಹಿಂದಿ ಚಿತ್ರ 'ಲಯರ್ಸ್ ಡೈಸ್' ವಿಶ್ವದ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳಲ್ಲಿ ಒಂದಾದ ಆಸ್ಕರ್ ಅಂಗಣ ಪ್ರವೇಶಿಸಿತು. ಮಲೆಯಾಳಂ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿಕೊಂಡಿರುವ ಗೀತು ಮೋಹನ್ ದಾಸ್ ಅವರ 'ಲಯರ್ಸ್ ಡೈಸ್' ಆಯ್ಕೆ ಮಾಡಲಾಗಿದೆ ಎಂದು ಎಫ್​ಎಫ್​ಐನ ಪ್ರಧಾನ ಕಾರ್ಯದರ್ಶಿ ಸುಪ್ರಾಣ್ ಸೇನ್ ಹೇಳಿದರು. ಆಸ್ಕರ್​ಗಾಗಿ ನಡೆದ ಅಂತಿನ ಸುತ್ತಿನಲ್ಲಿ 30ಕ್ಕೂ ಹೆಚ್ಚು ಚಿತ್ರಗಳನ್ನು ವೀಕ್ಷಿಸಿದ ಫೆಡರೇಷನ್ ಆಫ್ ಇಂಡಿಯಾದ 12 ಸದಸ್ಯರ ತಂಡ 'ಲಯರ್ಸ್ ಡೈಸ್' ಚಿತ್ರವನ್ನು ಆಯ್ಕೆ ಮಾಡಿಕೊಂಡಿದೆ. ಹಿಮಾಚಲ ಪ್ರದೇಶದ ಬುಡಕಟ್ಟು ಜನಾಂಗದ ಮಹಿಳೆ ತನ್ನ 3 ವರ್ಷದ ಮಗಳ ಜೊತೆ ಕಾಣೆಯಾದ ಪತಿಗಾಗಿ ಅರಸುವ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನವಾಜುದ್ದೀನ್ ಸಿದ್ಧಿಕಿ ಮತ್ತು ಗೀತಾಂಜಲಿ ಥಾಪಾ ನಟಿಸಿದ್ದು, ಈ ಮೊದಲೇ 2 ಬಾರಿ ರಾಷ್ಟ್ರೀಯ ಪ್ರಶಸ್ತಿಯನ್ನೂ ಸಂಪಾದಿಸಿತ್ತು.

2013: ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದರು. ಎಚ್​ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ವಜೂಬಾಯಿ ವಾಲಾ ಭವ್ಯ ಸ್ವಾಗತ ಕೋರಿದರು. ಮೋದಿ ಆಗಮನ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಪ್ರಧಾನಿ ಆದ ಬಳಿಕ ಮೋದಿ ಅವರ ಕರ್ನಾಟಕಕ್ಕೆ ಇದೇ ಮೊದಲ ಬಾರಿಗೆ ಆಗಮಿಸಿದರು. ಬಿಜೆಪಿಯ ಪ್ರಮುಖ ನಾಯಕರು ಉಪಸ್ಥಿತರಿದ್ದರು.

2014:  ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವಿನ ಸೀಟು ಹಂಚಿಕೆ ಬಿಕಟ್ಟು ಶಮನವಾಗಿದ್ದು, ಶಿವಸೇನೆ 151 ಕ್ಷೇತ್ರಗಳಲ್ಲಿ ಮತ್ತು ಬಿಜೆಪಿ 130 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ಬರಲಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ನಡೆಸಿದ ಸಂಧಾನ ಕೊನೆಗೂ ಸಫಲವಾಗಿದ್ದು, ಶಿವಸೇನೆ ಮತ್ತು ಬಿಜೆಪಿಯ ಎರಡೂವರೆ ದಶಕದ ಮೈತ್ರಿ ಪ್ರಸಕ್ತ ಚುನಾವಣೆಯಲ್ಲಿಯೂ ಮುಂದುವರೆಯಲಿದೆ. ನಾಮಪತ್ರ ಸಲ್ಲಿಕೆಗೆ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಇದ್ದು, ಈ ಹಂತದಲ್ಲಿ ಯಾವುದೇ ಗೊಂದಲಗಳು ಸೃಷ್ಟಿಯಾಗುವುದು ಬೇಡ ಎನ್ನುವ ನಿರ್ಧಾರಕ್ಕೆ ಉಭಯ ನಾಯಕರು ಬಂದರು. ಹೀಗಾಗಿ ಸೀಟು ಹಂಚಿಕೆ ಸಂಬಂಧ ಈದಿನ ಮುಂಬೈನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಉಭಯ ನಾಯಕರು ಚರ್ಚಿಸಿದರು. ಬಿಜೆಪಿಗೆ 130 ಸ್ಥಾನಗಳನ್ನು ಬಿಟ್ಟು ಕೊಡಲು ಶಿವಸೇನೆ ಸಿದ್ಧವಿದೆ. ಅಂತೆಯೇ ತಾನು 151 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಶಿವಸೇನೆ ಸ್ಪಷ್ಟಪಡಿಸಿದ್ದು, ಉಳಿದ 7 ಸ್ಥಾನಗಳಲ್ಲಿ ಮೈತ್ರಿಕೂಟದ ಸಣ್ಣ ಪಕ್ಷಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು. ಇದಕ್ಕೂ ಮೊದಲು 2009ರ ಸೀಟು ಹಂಚಿಕೆಯನ್ನೇ ಮುಂದುವರೆಸಬೇಕು ಎಂದು ಪಟ್ಟು ಹಿಡಿದಿದ್ದ ಶಿವಸೇನೆ ನಾಯಕರು, ಬಿಜೆಪಿಗೆ 119 ಸ್ಥಾನ, ಮೈತ್ರಿಕೂಟದಲ್ಲಿರುವ ಇತರೆ ಪಕ್ಷಗಳಿಗೆ 18 ಸ್ಥಾನ ಮತ್ತು ತನಗೆ 151 ಸ್ಥಾನ ಬೇಕು ಎಂದು ಒತ್ತಡ ಹೇರಿದ್ದರು. ಈ ಸೂತ್ರಕ್ಕೆ ಒಪ್ಪದೇ ಇದ್ದರೆ ತಾನು ಸ್ವತಂತ್ರವಾಗಿ ಸ್ಪರ್ಧಿಸಲು ಸಿದ್ಧ ಎಂದು ಶಿವಸೇನೆ ಖಾರವಾಗಿ ಪ್ರತಿಕ್ರಿಯಿಸಿತ್ತು. ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಸಲಹೆಯ ಮೇರೆಗೆ ನೂತನ ಸೂತ್ರಕ್ಕೆ ಶಿವಸೇನೆ ಒಪ್ಪಿಗೆ ಸೂಚಿಸಿತು.

2014: ನವದೆಹಲಿ: ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಅಮಾನತಿನಲ್ಲಿದ್ದ ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್. ಕೆ. ಜೈನ್ ಅವರನ್ನು ಸೇವೆಯಿಂದ ವಜಾಗೊಳಿಸಲಾಯಿತು. ಜೈನ್ ಅವರನ್ನು ಹಿಂದಿನ ದಿನ ನ್ಯಾಯಾಲಯ ಸಿಬಿಐ ಕಸ್ಟಡಿಗೊಪ್ಪಿಸಿದ ಬಳಿಕ ಸೇವೆಯಿಂದ ವಜಾಗೊಳಿಸಲಾಯಿತು. ಲಂಚ ವ್ಯವಹಾರದ ದಲ್ಲಾಳಿ ಪುರುಷೋತ್ತಮ್ ತೋತ್ಲಾನಿಗೆ ಜೈನ್ರನ್ನು ಮುಖಾಮುಖೀಯಾಗಿಸಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತು. ಎಸ್ .ಕೆ. ಜೈನ್, ಪ್ರಕಾಶ್ ಇಂಡಸ್ಟ್ರೀಸ್ನ ಸಿಎಂಡಿ ವೇದ್ ಪ್ರಕಾಶ್ ಅಗರ್ವಾಲ್, ಭೂಷಣ್ ಸ್ಟೀಲ್ ಲಿಮಿಟೆಡ್ನ ಉಪಾಧrಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ನೀರಜ್ ಸಿಂಘಲ್, ದಲ್ಲಾಳಿ ವಿನೀತ್ ಗೋಧ ಸಹಿತ ಕೆಲವು ಮಂದಿಯನ್ನು ಸಿಬಿಐ ಸಾಲ ಮಂಜೂರು ಮಾಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಂಧಿಸಿತ್ತು.

2014; ದುಬೈ: ಧ್ವನಿ ಪ್ರತಿಷ್ಠಾನದಿಂದ ಪ್ರತಿ ವರ್ಷ ನೀಡುವ ಧ್ವನಿ ಶ್ರೀರಂಗ ಅಂತಾರಾಷ್ಟ್ರೀಯ ರಂಗ ಪ್ರಶಸ್ತಿಗೆ ಖ್ಯಾತ ಸಾಹಿತಿ ಪ್ರೊ.ಎಚ್.ಎಸ್.ಶಿವಪ್ರಕಾಶ್ ಆಯ್ಕೆಯಾದರು. ಸೆ.26ರಂದು ದುಬೈನ ಸರ್ಕಾರಿ ಸ್ವಾಮ್ಯದ ಆಲ್ ನಾಸರ್ ಲೀಜರ್ ಲ್ಯಾಂಡ್​ನ ಅಲ್ ನಶ್ವನ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯರ್ ತಿಳಿಸಿದರು.

2014: ನವದೆಹಲಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಜೋಧಪುರದಲ್ಲಿ ಜೈಲಿನಲ್ಲಿ ಇರುವ ಸ್ವಯಂ ಘೋಷಿತ ದೇವಮಾನವ ಅಸರಾಮ್​ ಬಾಪುಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಅನಾರೋಗ್ಯದ ಕಾರಣ ನೀಡಿ 72 ವರ್ಷ ವಯಸ್ಸಿನ ಅಸರಾಮ್​ಬಾಪು ಜಾಮೀನು ನೀಡುವಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಪೀಠ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. 2013ರಲ್ಲಿ ಜೋಧಪುರದ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಅಸರಾಮ್​ ಬಂಧನಕ್ಕೊಳಗಾಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡುವ ತುರ್ತ ಏನಿಲ್ಲ ಎಂದಿದೆ.

2014: ನವದೆಹಲಿ: ಜನಪ್ರಿಯ ಕ್ರಿಕೆಟ್ ಇತಿಹಾಸಕಾರ ಮತ್ತು ಅಂಕಿ-ಅಂಶ ತಜ್ಞ ಆನಂದಜೀ ದೊಸ್ಸಾ ಹಿಂದಿನ ದಿನ (ಸೆಪ್ಟೆಂಬರ್ 22) ನಿಧನರಾದರು. ಮೃತರಿಗೆ 98 ವರ್ಷ ವಯಸ್ಸಾಗಿತ್ತು. ಆನಂದಜೀ ಮತ್ತು ಅವರ ಪತ್ನಿ ಕಳೆದೊಂದು ವರ್ಷದಿಂದ ತಮ್ಮ ಮಗಳ ಜತೆ ನ್ಯೂಯಾರ್ಕ್​ನಲ್ಲೇ ವಾಸವಿದ್ದರು. ಆನಂದಜೀ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಆನಂದಜೀ ಸ್ವತಃ ಕ್ರಿಕೆಟಿಗರಾಗಿದ್ದು, ಶಾಲಾ, ಕಾಲೇಜು ಜೀವನದಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ ಅನುಭವ ಕೂಡ ಹೊಂದಿದ್ದರು. ಬ್ಯಾಟ್ಸ್​ಮನ್ ಆಗಿದ್ದ ಆನಂದಜೀ ಹಿಂದೂ ಜಮಖಾನ ಪರ ಕೂಡ ಆಡಿದ್ದರು. ಕ್ರಿಕೆಟ್ ಕುರಿತ ಪತ್ರಿಕೆಗಳಿಗೆ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದ ಹೆಗ್ಗಳಿಕೆ ಅವರದ್ದಾಗಿತ್ತು.

2008: ದೆಹಲಿಯಲ್ಲಿ ನಡೆದ ಸರಣಿ ಸ್ಫೋಟ ಸಂಚಿನಲ್ಲಿ ಭಾಗಿಯಾಗಿದ್ದ ಶಂಕಿತ ಉಗ್ರಗಾಮಿಯೊಬ್ಬನ ಬ್ಯಾಂಕ್ ಖಾತೆ ಮೂಲಕ ಕೇವಲ ಆರು ತಿಂಗಳ ಅವಧಿಯಲ್ಲಿ 3 ಕೋಟಿ ರೂಪಾಯಿಯ ಭಾರಿ ಮೊತ್ತದ ವ್ಯವಹಾರ ನಡೆದಿರುವುದು ಪತ್ತೆಯಾಯಿತು. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಇದನ್ನು ಪತ್ತೆಹಚ್ಚಿತು..ದೆಹಲಿ ಪೊಲೀಸ್ ಹಾಗೂ ಎಟಿಎಸ್ ಜಂಟಿ ತಂಡವು ಖ್ಯಾತ ವೈದ್ಯರೊಬ್ಬರನ್ನೂ ಈ ಸಂಬಂಧ ಪ್ರಶ್ನಿಸಿದ್ದಲ್ಲದೆ, ದೆಹಲಿ ಗುಂಡಿನ ಚಕಮಕಿಯಲ್ಲಿ ಹತರಾದ ಇಬ್ಬರು ಉಗ್ರರ ಸ್ವಂತ ಊರಾದ ಸಂಜಾರ್ ಪುರಕ್ಕೆ ತೆರಳಿ ಕೆಲವು ಸಿ.ಡಿ.ಗಳು ಹಾಗೂ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿತು..

2008: ಭಾರತ ಅಂಚೆ ಇಲಾಖೆಯು `ಹಾರುತ್ತಿರುವ ಪಕ್ಷಿ'ಯ ಹೊಸ ಲಾಂಛನವನ್ನು (ಲೋಗೊ) ಪಡೆದುಕೊಂಡಿತು. ಲಾಂಛನದಲ್ಲಿನ ದಟ್ಟ ಗೆರೆಗಳು ಸ್ವತಂತ್ರ  ಹಾರಾಟವನ್ನು ಬಿಂಬಿಸುತ್ತವೆ.  ಬಣ್ಣಗಳು- ಕೆಂಪು, ಹಳದಿ. ಕೆಂಪು  - ಅಂಚೆ ಸೇವೆಯೊಂದಿಗಿನ  ಪಾರಂಪರಿಕ  ಬಾಂಧವ್ಯವನ್ನು ಮತ್ತೆ ಬೆಸೆಯುತ್ತದೆ. ಸೇವೆ, ಶಕ್ತಿ ಹಾಗೂ ಬದ್ಧತೆಗಳನ್ನು ಇದು ಧ್ವನಿಸುತ್ತದೆ. ಹಳದಿ ಬಣ್ಣ ಭರವಸೆ, ಖುಷಿ, ಸಂತೋಷವನ್ನು ಬಿಂಬಿಸುತ್ತದೆ. ಈ ಲಾಂಛನವನ್ನು ಅಂಚೆ ಸಿಬ್ಬಂದಿ ಸಹಕಾರದೊಂದಿಗೆ ಆಗ್ಲಿವಿ ಅಂಡ್ ಮಾಥರ್ ವಿನ್ಯಾಸಗೊಳಿಸಿದೆ. ಮೊದಲ ನೋಟಕ್ಕೆ ಇದೊಂದು ಲಕೋಟೆ. ಅಲ್ಲಿ `ಹಾರುತ್ತಿರುವ ಪಕ್ಷಿ' ಅಂಚೆ ಸೇವೆಗೆ ಕಾಪರ್ೊರೆಟ್ ರೂಪ ಹಾಗೂ ಬಿಸಿನೆಸ್ ಬಗ್ಗೆ ಹೊಂದಿರುವಂತಹ ಹೊಸ ದೃಷ್ಟಿಕೋನವನ್ನು ಧ್ವನಿಸಲಿದೆ ಎಂಬುದು ಕೇಂದ್ರ ಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಎ.ರಾಜ ಅವರ ಅಭಿಪ್ರಾಯ..

2008: ಬಣ್ಣ, ಬಣ್ಣದ ಬಲೂನುಗಳೆಂದರೆ ಮಕ್ಕಳಿಗೆ ಪಂಚಪ್ರಾಣ. ದೊಡ್ಡವರಿಗೂ ಇಷ್ಟ. ಹತ್ತಾರು ಜನರನ್ನು ಆಕಾಶದಲ್ಲಿ ತೇಲಾಡಿಸುವ ಗಾಳಿ ಬುಗ್ಗೆ ಸಹ ಬಲೂನಿನ ದೈತ್ಯ ರೂಪ. ಈಗ ವಿಜ್ಞಾನಿಗಳು ವಿಶ್ವದಲ್ಲೇ ಅತಿ ಚಿಕ್ಕದಾದ ಬಲೂನ್ ಕಂಡುಹಿಡಿದಿರುವುದನ್ನು ಪ್ರಕಟಿಸಿದರು. ಈ ಬಲೂನು ಎಷ್ಟು ಚಿಕ್ಕದು ಅಂದರೆ ಇದರ ಪದರಗಳ ದಪ್ಪ  ಕೇವಲ ಒಂದು ಪರಮಾಣುವಿನಷ್ಟು...! ಗ್ರಾಫೈಟ್ ಹಾಗೂ ಸಿಲಿಕಾನ್ ಬಳಸಿ ಅಮೆರಿಕದ ಕಾರ್ನೆಲ್ ವಿವಿ ವಿಜ್ಞಾನಿಗಳು ವಿಶ್ವದಲ್ಲೇ ಅತಿ ಚಿಕ್ಕದಾದ ಈ ಬಲೂನ್ ರೂಪಿಸಿದ್ದು, ಇದು ಭಾರಿ ಒತ್ತಡವನ್ನು ತಡೆದುಕೊಳ್ಳಬಲ್ಲುದು. ಈ ಅತಿ ಚಿಕ್ಕ ಬಲೂನ್ ಸಂಶೋಧನೆಯಿಂದ ಹತ್ತು ಹಲವು ತಂತ್ರಜ್ಞಾನ ರೂಪಿಸಬಹುದಾಗಿದೆ ಎಂದು ವಿಜ್ಞಾನಿಗಳು ನ್ಯೂಯಾರ್ಕಿನಲ್ಲಿ ಪ್ರಕಟಿಸಿದರು.

 2008: ಬೆಂಗಳೂರು ನಗರದಲ್ಲಿ ಹೊಸದಾಗಿ ಸ್ಥಾಪಿಸಿದ `ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ'ಕ್ಕೆ ವಿಶೇಷ ಅಧಿಕಾರಿಯಾಗಿ ಹಂಪಿ ಕನ್ನಡ ವಿ.ವಿ. ಪ್ರಾಧ್ಯಾಪಕ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿತು. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ವಿಶ್ವೇಶ್ವರಪುರದವರಾದ ಮಲ್ಲೇಪುರಂ, ಸಿದ್ದಲಿಂಗೇಶ್ವರ ಸಂಸ್ಕೃತ ಪಾಠಶಾಲಯಲ್ಲಿ ಕನ್ನಡ ಪಂಡಿತ, ಹಂಪಿ ವಿ.ವಿ.ಯಲ್ಲಿ ಕುಲಸಚಿವ, ಭಾಷಾ ನಿಕಾಯ ಡೀನ್, ಪ್ರಸಾರಾಂಗ, ಅಧ್ಯಯನಾಂಗ ನಿರ್ದೇಶಕರು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು.

2007: ಶ್ರೀರಾಮನನ್ನು ನಿಂದಿಸಿದ್ದಕ್ಕಾಗಿ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ತಲೆ ತೆಗೆಯಬೇಕು ಎಂದು ಬಿಜೆಪಿಯ ಮಾಜಿ ಸಂಸದರೊಬ್ಬರು ಹೊರಡಿಸಿದ್ದ `ಫತ್ವಾ'ದಿಂದ ಕುಪಿತಗೊಂಡ ಆಡಳಿತ ಡಿಎಂಕೆ ಪಕ್ಷದ 300ಕ್ಕೂ ಹೆಚ್ಚು ಕಾರ್ಯಕರ್ತರು ಚೆನ್ನೈಯಲ್ಲಿ ವೈದ್ಯರಾಮನ್ ಬೀದಿಯಲ್ಲಿನ ಬಿಜೆಪಿ, ವಿಎಚ್ಪಿ ಮತ್ತು ಹಿಂದೂ ಮುನ್ನಣಿ ಕಚೇರಿಗಳ ಮೇಲೆ ದಾಳಿ ನಡೆಸಿದರು. ಈ ದಾಳಿಯಲ್ಲಿ ಪಕ್ಷದ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ತಮಿಳಿಸೈ ಸೌಂದರ್ ರಾಜನ್ ಸೇರಿ 8 ಮಂದಿ ಗಾಯಗೊಂಡರು. ಕೆಲ ಪೊಲೀಸರಿಗೂ ಪೆಟ್ಟಾಯಿತು. ಕಾರೈಕುಡಿಯಲ್ಲಿ ಮಾಜಿ ಸಂಸದ, ಬಿಜೆಪಿಯ ಎಚ್.ರಾಜಾ ಅವರ ಮನೆ ಕೂಡ ದಾಳಿಗೆ ತುತ್ತಾಯಿತು. ಟಿವಿ ಕ್ಯಾಮರಾಗಳ ಸಮ್ಮುಖದಲ್ಲಿಯೇ ಇಡಿ ದಾಳಿ ನಡೆಯಿತು. ಆದರೆ ಪೊಲೀಸರು ಮಾತ್ರ ಅಕ್ಷರಶಃ ಮೂಕಪ್ರೇಕ್ಷರಾಗಿದ್ದರು. ಬಿಜೆಪಿ ಕಚೇರಿ ಮೇಲಿನ ದಾಳಿಯ ನೇತೃತ್ವವನ್ನು ದಕ್ಷಿಣ ಚೆನ್ನೈನ ಡಿಎಂಕೆ ಘಟಕದ ಕಾರ್ಯದರ್ಶಿ ಅನ್ಬಳಗನ್ ವಹಿಸಿದ್ದರು. ರಾಮ ನಿಂದನೆ ಮಾಡಿದ ಕರುಣಾನಿಧಿ ಅವರ ತಲೆ ತೆಗೆಯುವವರಿಗೆ ಅಷ್ಟೇ ತೂಕದ ಚಿನ್ನ ಕೊಡುವುದಾಗಿ ಬಿಜೆಪಿ ಮಾಜಿ ಸಂಸದ ಹಾಗೂ ವಿಎಚ್ಪಿ ನಾಯಕ ರಾಮ್ ವಿಲಾಸ್ ವೇದಾಂತಿ ಅಯೋಧ್ಯೆಯಲ್ಲಿ ನೀಡಿದ ಪ್ರಚೋದನಕಾರಿ ಫತ್ವಾ ಈ ಎಲ್ಲ ರಾದ್ಧಾಂತಕ್ಕೆ ಕಾರಣವಾಯಿತು. ಇದನ್ನು ಹಿಂತೆಗೆದುಕೊಳ್ಳದಿದ್ದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಡಿಎಂಕೆ ಧುರೀಣ ಹಾಗೂ ರಾಜ್ಯದ ವಿದ್ಯುತ್ ಖಾತೆ ಸಚಿವ ಅರ್ಕಾಟ್ ಎನ್.ವೀರಾಸ್ವಾಮಿ ಎಚ್ಚರಿಸಿದ ಬೆನ್ನಲ್ಲೇ ಈ ದಾಳಿ ನಡೆಯಿತು.

2007: ರಾಮಸೇತು ವಿಚಾರದಲ್ಲಿ ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಮತ್ತು ಮೂವರು ಕೇಂದ್ರ ಸಚಿವರ ವಿರುದ್ಧ ಭಾರತೀಯ ಜನಶಕ್ತಿ ಪಕ್ಷದ ನಾಯಕಿ ಉಮಾ ಭಾರತಿ ಅವರು ನವದೆಹಲಿಯ ಸಂಸತ್ ಭವನ ರಸ್ತೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ರಾಮಸೇತು ವಿಚಾರದಲ್ಲಿ ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ವಿರುದ್ಧ ವಿಎಚ್ ಪಿ ಕಾರ್ಯಕರ್ತರು ಮತ್ತು ಸಮಾನಮನಸ್ಕರು ದೂರು ದಾಖಲಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಕರೆ ನೀಡಿತು.

2007: ಭಾರತೀಯ ಸಂಗೀತ ಲೋಕಕ್ಕೆ ಮೊಟ್ಟ ಮೊದಲ ಸಲ ಲತಾ ಮಂಗೇಶ್ಕರ್ ಅವರ ಮಧುರ ಧ್ವನಿಯನ್ನು ಪರಿಚಯಿಸಿದ್ದ ಮರಾಠಿಯ ಹೆಸರಾಂತ ಸಂಗೀತ ನಿರ್ದೇಶಕ ದತ್ತಾ ದವಜೇಕರ್ (90)ಅವರು ಮುಂಬೈಯಲ್ಲಿ ನಿಧನರಾದರು.

2007: ಉದಾರವಾದಿ ಮುಖಂಡ ಯಸುವೊ ಫುಕುಡಾ (71) ಅವರು ಜಪಾನಿನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷರಾಗಿ ಭಾರಿ ಬಹುಮತದಿಂದ ಆಯ್ಕೆಯಾದರು. ಹೀಗಾಗಿ ಇತ್ತೀಚೆಗೆ ರಾಜೀನಾಮೆ ನೀಡಿದ ಶಿಂಜೊ ಅಬೆ ಸ್ಥಾನದಲ್ಲಿ ಅವರು ಪ್ರಧಾನಿ ಹುದ್ದೆಗೆ ಏರಲು ಹಾದಿ ಸುಗಮಗೊಂಡಿತು.

2007: ಬಂಗಾಳ ಕೊಲ್ಲಿಯಲ್ಲಿ ಎದ್ದ ಚಂಡಮಾರುತಕ್ಕೆ ಸಿಲುಕಿ ಬಾಂಗ್ಲಾದೇಶದ ಸುಮಾರು 1 ಸಾವಿರಕ್ಕೂ ಹೆಚ್ಚು ಮೀನುಗಾರರು ನಾಪತ್ತೆಯಾದರು. ಬರಿಸಾಲ್, ಬರ್ಗುನ, ಪತುಖೊಲಿ, ಬಗೇರ್ ಹತ್ ಹಾಗೂ ಕಾಕ್ಸ್ ಬಜಾರ್ ಕರಾವಳಿಯಲ್ಲಿ ಸುಮಾರು 91 ಮಂದಿಯನ್ನು ರಕ್ಷಿಸಲಾಯಿತು.

2007: ಭಾರತೀಯ ಗೋರಕ್ಷೆಯ ಆಂದೋಲನ ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮ. ಗೋವಿನ ಹಾಲುಂಡ ಎಲ್ಲರೂ ಜಾತಿಭೇದ, ಪಕ್ಷ ಭೇದವಿಲ್ಲದೆ ಈ ಸಂಗ್ರಾಮದಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀ  ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಎಚ್.ಬಿ.ಆರ್. ಬಡಾವಣೆಯ ಕಾಚರಕನಹಳ್ಳಿ ಕೋದಂಡರಾಮ ದೇವಸ್ಥಾನದ ಸಮೀಪ ನಡೆದ ಯಲಹಂಕ ವಲಯ ಗೋಸಂಧ್ಯಾ ಕಾರ್ಯಕ್ರಮದಲ್ಲಿ ಕರೆ ನೀಡಿದರು. ಸ್ವಾತಂತ್ರ್ಯ ಲಭಿಸಿದ್ದರೂ ನಾವು ಇಂದಿಗೂ ಉಡುಗೆ, ತೊಡುಗೆ, ಶಿಕ್ಷಣ, ವ್ಯವಹಾರ, ಹಾಲಿನ ವಿಚಾರದಲ್ಲಿ ಕೂಡಾ ಬ್ರಿಟಿಷರ ದಾಸರಾಗಿ ಉಳಿದಿದ್ದೇವೆ. ಹಾಲು-ತುಪ್ಪದ ಹೊಳೆ ಹರಿಸಿ, `ಗೋರಾಷ್ಟ್ರ' ಎಂಬ ಹೆಸರಿಗೆ ಪಾತ್ರವಾಗಿದ್ದ ಈ ಭಾರತದಲ್ಲಿ ಗೋವಿಗೆ ಅಪಚಾರ, ಗೋವಧೆ ಮಾಡುತ್ತಿದ್ದೇವೆ ಎಂದು ಅವರು ವಿಷಾದಿಸಿದರು. ನಮ್ಮ ದೇಹದ ಬಿಂದು ಬಿಂದು ರಕ್ತದ ಹಿಂದೆ ಹಂಡೆ ಹಂಡೆ ಗೋವಿನ ಹಾಲು ಇದೆ. ಗೋಮೂತ್ರ, ಗೋಮಯದಿಂದ ಬೆಳೆದ ಅನ್ನ ಉಂಡು ನಮ್ಮ ದೇಹ ಬೆಳೆದಿದೆ. ಗೋವಿನಿಂದ ಬಂದ ಈ ದೇಹವನ್ನು ಗೋವಿಗಾಗಿ ತೆರಲೂ ಸಿದ್ಧವಿರಬೇಕು. ಮುಂದಿನ ಪೀಳಿಗೆಗಾಗಿ ಗೋರಕ್ಷೆಯ ಮಹಾ ಸಂಕಲ್ಪ ತೊಡಬೇಕು ಎಂದು ಅವರು ಹೇಳಿದರು. ಕೃಷ್ಣರಾಜಪುರ ಭಾರತಮಾತಾ ಆಶ್ರಮದ ಸಾಧು ರಂಗರಾಜನ್, ಮಾರತ್ ಹಳ್ಳಿ ವಿಭೂತಿಪುರ ಮಠದ ಮಹಂತಲಿಂಗ ಶಿವಾಚಾರ್ಯ ಸ್ವಾಮೀಜಿ,  ಪಾರ್ವತಮ್ಮ ರಾಜಕುಮಾರ್ ಮಾತನಾಡಿ ಭಾರತೀಯ ಗೋತಳಿ ರಕ್ಷಣೆಯ ಕಾರ್ಯ ಎಲ್ಲೆಡೆಗೆ ಹರಡಲಿ ಎಂದು ಹಾರೈಸಿದರು. ಖ್ಯಾತ ಕಲಾವಿದ ಬಿ.ಕೆ.ಎಸ್. ವರ್ಮ ಅವರು ಸಾಕ್ಷಾತ್ಕಾರ ಶಾಲೆಯ ಮಕ್ಕಳು ಗೋವಿನ ಹಾಡು ಹಾಡುತ್ತಿದ್ದಂತೆಯೇ ಗೋವಿನ ಸುಂದರ ಚಿತ್ರ ರಚಿಸಿದರು.

2006: ಕೇಂದ್ರದ ಯುಪಿಎ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ತೆಲಂಗಾಣ ರಾಷ್ಟ್ರೀಯ ಸಮಿತಿಯು (ಟಿಆರ್ ಎಸ್) ಹಿಂತೆಗೆದುಕೊಂಡಿತು.

2001: ಗೀತ್ ಸೇಥಿ ಅವರು ನ್ಯೂಜಿಲೆಂಡಿನ ಕ್ರೈಸ್ಟ್ ಚರ್ಚಿನಲ್ಲಿ ನಡೆದ ಸ್ಪರ್ಧೆಯಲ್ಲಿ ಅಶೋಕ ಶಾಂಡಿಲ್ಯ ಅವರನ್ನು 3484-1289 ಅಂತರದಲ್ಲಿ ಪರಾಭವಗೊಳಿಸಿ ವಿಶ್ವ ಪ್ರೊಫೆಷನಲ್ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಗೆದ್ದುಕೊಂಡರು. ಇದರೊಂದಿಗೆ ಈ ಜಾಗತಿಕ ಪ್ರಶಸ್ತಿಯನ್ನು ಏಳನೇ ಬಾರಿಗೆ ಗೆದ್ದ ಹೆಗ್ಗಳಿಕೆ ಅವರದಾಯಿತು.

2000: ರೋವರ್ ಸ್ಟೀವನ್ ರೆಡ್ ಗ್ರೇವ್ ಅವರು  ಸಿಡ್ನಿ ಒಲಿಂಪಿಕ್ಸಿನ ಕಾಕ್ಸ್ ಲೆಸ್ ಪೇರ್ಸಿನಲ್ಲಿಸ್ವರ್ಣಪದಕ ಗೆಲ್ಲುವುದರೊಂದಿಗೆ ಒಲಿಂಪಿಕ್ಸಿನಲ್ಲಿ ನಿರಂತರವಾಗಿ ಐದು ಬಾರಿ ಸ್ವರ್ಣ ಪದಕ ಗೆದ್ದ ಪ್ರಥಮ ಬ್ರಿಟಿಷ್ ಅಥ್ಲೆಟ್ ಎಂಬ ಕೀರ್ತಿಗೆ ಭಾಜನರಾದರು. ಎಂಡ್ಯೂರೆನ್ಸ್ ಕ್ರೀಡೆಯಲ್ಲಿ ಸತತವಾಗಿ ಐದು ಬಾರಿ ಪದಕ ಗೆದ್ದ ವಿಶ್ವದ ಮೊದಲ ಅಥ್ಲೆಟ್ ಎಂಬ ಹೆಗ್ಗಳಿಕೆ ಕೂಡಾ ಇವರದೇ.

1997: ವೇಲ್ಸಿನ ರಾಜಕುಮಾರಿ ಡಯಾನಾಳ ಅಂತ್ಯಸಂಸ್ಕಾರ ಕಾಲದಲ್ಲಿ ಎಲ್ಟನ್ ಜಾನ್ ಅವರು ಸ್ವತಃ ಬರೆದು ಹಾಡಿದ  `ಕ್ಯಾಂಡಲ್ ಇನ್ ದಿ ವಿಂಡ್ 1997' ಹಾಡಿನ ರೆಕಾರ್ಡ್  ನ್ಯೂಯಾರ್ಕ್   ನಗರದಲ್ಲಿ ಮಾರಾಟಕ್ಕೆ ಬಿಡುಗಡೆಯಾಯಿತು. 37 ದಿನಗಳ ನಂತರ ಈ ಹಾಡಿನ ಸಿಡಿ ಮಾರಾಟದಲ್ಲಿ ದಾಖಲೆ ಸ್ಥಾಪಿಸಿತು. ಅದರ ಸುಮಾರು 3.20 ಕೋಟಿ ಪ್ರತಿಗಳು ಮಾರಾಟವಾದವು.

1952: ಭಾರತದ ಮಾಜಿ ಕ್ರಿಕೆಟ್ ಆಟಗಾರ ಮತ್ತು ಕೋಚ್ ಅಂಶುಮಾನ್ ಗಾಯಕವಾಡ್ ಜನ್ಮದಿನ.

1939: `ಮನೋವಿಶ್ಲೇಷಣೆ'ಯ ಸ್ಥಾಪಕ ಸಿಗ್ಮಂಡ್ ಫ್ರಾಯ್ಡ್ ಅವರು ಲಂಡನ್ನಿನಲ್ಲಿ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. `ಕೊಪರ್ನಿಕಸ್ ಆಫ್ ಮೈಂಡ್' ಎಂದೇ ಅವರು ಖ್ಯಾತಿ ಪಡೆದಿದ್ದರು.

1934: ಪ್ರಕಾಶಕಿ, ಲೇಖಕಿ, ಅಧ್ಯಾಪಕಿ ಬಿ.ಎಸ್. ರುಕ್ಕಮ್ಮ ಅವರು ಬಿ.ಟಿ. ಶ್ರೀನಿವಾಸ ಅಯ್ಯಂಗಾರ್- ಸೀತಮ್ಮ ದಂಪತಿಯ ಮಗಳಾಗಿ ಜನಿಸಿದರು.

1862: ಚಂದಮ ದೇಶಭಕ್ತ ಶ್ರೀನಿವಾಸ ಶಾಸ್ತ್ರಿ ಜನನ.

1848: ಜಾನ್ ಕರ್ಟಿಸ್ ಅವರು `ಚ್ಯೂಯಿಂಗ್ ಗಮ್'ನ್ನು ಮೊತ್ತ ಮೊದಲ ಬಾರಿಗೆ ಮಾರಾಟದ ಸಲುವಾಗಿ ಉತ್ಪಾದಿಸಿದರು. ಮೈನ್ ನ  ಬ್ಯಾಂಗೋರಿನ ತಮ್ಮ ಮನೆಯಲ್ಲಿ ಸ್ಟೌವಿನಲ್ಲಿ ಇದನ್ನು ಉತ್ಪಾದಿಸಿದ ಅವರು `ಸ್ಟೇಟ್ ಆಫ್ ಮೈನ್ ಪ್ಯೂರ್ ಸ್ಪ್ರೂಸ್ ಗಮ್' ಎಂಬ ಹೆಸರಿನಲ್ಲಿ ಮಾರಾಟ ಮಾಡಿದರು.

1846: ಜರ್ಮನ್ ಖಗೋಳ ತಜ್ಞ ಜೊಹಾನ್ ಗೊಟ್ ಫ್ರೈಡ್ ಗ್ಯಾಲ್ ಅವರು ನೆಪ್ಚೂನ್ ಗ್ರಹವನ್ನು ಕಂಡು ಹಿಡಿದರು.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment