Sunday, September 16, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 16

ಇಂದಿನ ಇತಿಹಾಸ History Today ಸೆಪ್ಟೆಂಬರ್ 16

2018: ಪಟ್ನಾ: ಚುನಾವಣಾ ವ್ಯೂಹ ನಿಪುಣ ಪ್ರಶಾಂತ ಕಿಶೋರ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅನ್ನೆ ಮಾರ್ಗದ ನಂ ಅಧಿಕೃತ ಬಂಗಲೆಯಲ್ಲಿ ನಡೆದ ಆಡಳಿತಾರೂಢ ಜನತದಳ (ಸಂಯುಕ್ತ) ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜನತಾದಳ(ಸಂಯುಕ್ತ)ವನ್ನು ಸೇರಿದರು. ನಿತೀಶ್ ಕುಮಾರ್ ಸೇರಿದಂತೆ ಜನತಾದಳದ ಎಲ್ಲ ಉನ್ನತ ನಾಯಕರೂ ಕಿಶೋರ್ ಅವರು ಅಧಿಕೃತವಾಗಿ ಪಕ್ಷ ಸೇರುವ ಹೊತ್ತಿನಲ್ಲಿ ಹಾಜರಿದ್ದರು. ಈದಿನ ಇದಕ್ಕೆ ಮುನ್ನ ಕಿಶೋರ್ ಅವರು ತಾವು ಬಿಹಾರದಿಂದ ಹೊಸ ಪಯಣ ಆರಂಭಿಸುವ ಬಗ್ಗೆ ಅತ್ಯಂತ ಸಂಭ್ರಮಗೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದರುಕಳೆದ ವಾರ ಹೈದರಾಬಾದಿನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕಿಶೋರ್, ವ್ಯಕ್ತಿಗಳಿಗಾಗಿ ಮತ್ತು ಪಕ್ಷಗಳಿಗಾಗಿ ಪ್ರಚಾರ ನಡೆಸುವ ತಮ್ಮ ವೃತ್ತಿಯನ್ನು ಬದಲಾಯಿಸಲು ಮತ್ತು ಈಗಚುನಾವಣಾ ರಾಜಕೀಯಕ್ಕೆ ಧುಮುಕಲು ತಾವು ಸಜ್ಜಾಗಿರುವುದಾಗಿ ಹೇಳಿದ್ದರು. ಗುಜರಾತ್ ಅಥವಾ ಬಿಹಾರದಿಂದಬೇರುಮಟ್ಟಕ್ಕೆ ಹಿಂದಿರುಗಲು ತಾವು ಬಯಸಿರುವುದಾಗಿ ಅವರು ಹೇಳಿದ್ದರು. ಆದರೆ ಹೆಚ್ಚಿನ ವಿವರ ನೀಡಿರಲಿಲ್ಲ.  ಶನಿವಾರ ತಡರಾತ್ರಿಯವರೆಗೆ ನಿತೀಶ್ ಕುಮಾರ್ ಜೊತೆಗೆ ಸರಣಿ ಸಭೆಗಳನ್ನು ನಡೆಸಿದ್ದ ಪ್ರಶಾಂತ ಕಿಶೋರ್ ಅವರು ಜೆಡಿ(ಯು)ವನ್ನು ತಮ್ಮ ಪಕ್ಷವಾಗಿ ಆಯ್ಕೆ ಮಾಡಿಕೊಂಡಿರಬಹುದು ಎಂಬ ವದಂತಿಗಳನ್ನು ಹುಟ್ಟು ಹಾಕಿದ್ದರು. ಕಿಶೋರ್ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ತಾಯ್ನಾಡು ಕ್ಷೇತ್ರವಾದ ಬಕ್ಸರ್ನಿಂದ ಸ್ಪರ್ಧಿಸಬಹುದು ಎಂದು ಹೇಳಲಾಗಿದೆಇದಕ್ಕೆ ಮುನ್ನ ಕಿಶೋರ್ ಅವರು ೨೦೧೫ರ ಬಿಹಾರ  ವಿಧಾನಸಭಾ ಚುನಾವಣೆಯಲ್ಲಿ ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್ ಜೆಡಿ ಜೊತೆಗೂಡಿ ಬಿಜೆಪಿಯ ವಿರುದ್ಧ ವಿಜಯ ಸಾಧಿಸಲು ಜೆಡಿ(ಯು)ಗೆ ನೆರವಾಗಿದ್ದರು. ರಾಜಕೀಯ ಬದ್ಧ ವೈರಿಗಳಾಗಿದ್ದ ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ಅವರನ್ನು ಒಗ್ಗೂಡಿಸಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಪರಾಭವಗೊಳಿಸಲುಮಹಾಮೈತ್ರಿ ರಚಿಸುವಲ್ಲಿ ಪ್ರಶಾಂತ ಕಿಶೋರ್ ಪ್ರಮುಖ ಪಾತ್ರ ವಹಿಸಿದ್ದರು. ಏನಿದ್ದರೂ, ವಾಸ್ತವವಾಗಿ ಕಿಶೋರ್ ಅವರ ಚುನಾವಣಾ ವ್ಯೂಹಗಳಿಗೂ ಮಿಗಿಲಾಗಿ, ಜನರ ಒಲವು ಆರ್ಜೆಡಿ ಕಡೆಗಿದ್ದುದುಮಹಾಮೈತ್ರಿ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂಬುದು ಟೀಕಾಕಾರರ ಅಭಿಪ್ರಾಯವಾಗಿತ್ತು. ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಪ್ರಶಾಂತ ಕಿಶೋರ್ ಅವರು ಮೋದಿಯವರಿಗೆ ಅತ್ಯಂತ ನಿಕಟವಾಗಿದ್ದರು ಮತ್ತು ೨೦೧೪ರ ಲೋಕಸಭಾ ಚುನಾವಣೆ ಕಾಲದಲ್ಲಿ ಅವರ ಪ್ರಚಾರ ತಂತ್ರದ ಮುಖ್ಯ ರೂವಾರಿಯಾಗಿದ್ದರು. ಬಳಿಕ ಬಿಜೆಪಿಯಿಂದ ಹೊರಬಿದ್ದ ಪ್ರಶಾಂತ ಕಿಶೋರ್ ಅವರು ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (-ಪಿಎಸಿ) ಎಂಬ ತಮ್ಮದೇ ಸಂಘಟನೆಯನ್ನು ಕಟ್ಟಿ ವಿವಿಧ ರಾಜ್ಯಗಳಲ್ಲಿ ವಿವಿಧ ಪಕ್ಷಗಳ ಪರವಾಗಿ. ಚುನಾವಣೆಯಲ್ಲಿ ವಿಜಯ ದೊರಕಿಸುವ ಸಲುವಾಗಿ ಶ್ರಮಿಸಿದ್ದರು. ರಾಜಕೀಯ ಕ್ಷೇತ್ರವನ್ನು ಚುನಾವಣಾ ವ್ಯೂಹ ನಿಪುಣನಾಗಿ ಸೇರುವ ಮುನ್ನ ಪ್ರಶಾಂತ ಕಿಶೋರ್ ಅವರು ಎಂಟು ವರ್ಷಗಳ ಕಾಲ ವಿಶ್ವ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರು ತರಬೇತಿ ಪಡೆದ ಸಾರ್ವಜನಿಕ ಆರೋಗ್ಯ ತಜ್ಞರಾಗಿದ್ದಾರೆ. ಪ್ರಸ್ತುತ ಆಂಧ್ರಪ್ರದೇಶದಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿರುವ ಕಿಶೋರ್ ಅವರು ದಕ್ಷಿಣಕ್ಕೆ ತಮ್ಮ ನೆಲೆಯನ್ನು ಬದಲಾಯಿಸುವ ಮುನ್ನ ಪಂಜಾಬ್ ಮತ್ತು ಉತ್ತರ ಪ್ರದೇಶ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದರುಕಿಶೋರ್ ಅವರು ಬಿಹಾರದ ಬಕ್ಸರ್ ಜಿಲ್ಲೆಯವರಾಗಿದ್ದು ಅಲ್ಲಿ ಅವರ ತಂದೆ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

2018: ನವದೆಹಲಿ: ದೇಶಾದ್ಯಂತ ಹೆಚ್ಚುತ್ತಿರುವ ಬೆಲೆ ಏರಿಕೆಯನ್ನು ನಿಯಂತ್ರಿಸದೇ ಇದ್ದಲ್ಲಿ ಅದು ಮೋದಿ ಸರ್ಕಾರಕ್ಕೆ ಮುಂದಿನ ಮಹಾ ಚುನಾವಣೆಯಲ್ಲಿ ತುಟ್ಟಿಯಾಗಿ ಪರಿಣಮಿಸುವ ಸಾದ್ಯತೆ ಇದೆ ಎಂದು ಯೋಗ ಗುರು ಬಾಬಾ ರಾಮದೇವ್ ಅವರು ಇಲ್ಲಿ ಎಚ್ಚರಿಕೆ ನೀಡಿದರು೨೦೧೪ರ ಚುನಾವಣೆಯಂತೆ, ೨೦೧೯ರ ಚುನಾವಣೆಯಲ್ಲಿ ತಾವು ಬಿಜೆಪಿ ಪರ ಪ್ರಚಾರ ಮಾಡುವುದಿಲ್ಲ ಎಂದೂ ಅವರು ನುಡಿದರು. ೨೦೧೪ರ ಚುನಾವಣೆಯಲ್ಲಿ ರಾಮದೇವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಸಕ್ರಿಯವಾಗಿ ಕೆಲಸ ಮಾಡಿದ್ದರು. ‘ಬಹಳಷ್ಟು ಮಂದಿ ಮೋದಿ ಸರ್ಕಾರದ ನೀತಿಗಳನ್ನು ಹೊಗಳುತ್ತಾರೆ, ಆದರೆ ಈಗ ತಿದ್ದಿಕೊಳ್ಳಬೇಕಾದ ಅಗತ್ಯವಿದೆ. ಬೆಲೆ ಏರಿಕೆ ಅತ್ಯಂತ ದೊಡ್ಡ ವಿಷಯವಾಗಿದ್ದು, ಮೋದಿ ಅವರು ಶೀಘ್ರವೇ ಇದನ್ನು ಸರಿಪಡಿಸಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು. ವಿಫಲರಾದಲ್ಲಿಮೆಹಂಗೀ ಕೀ ಆಗ್ ತೊ ಮೋದಿ ಸರ್ಕಾರ್ ಕೊ ಬಹುತ್ ಮೆಹಂಗೀ ಪಡೇಗಿ (ಬೆಲೆ ಏರಿಕೆಯ ಬೆಂಕಿ ಮೋದಿ ಸರ್ಕಾರಕ್ಕೆ ಅತ್ಯಂತ ತುಟ್ಟಿಯಾಗಬಹುದು  ಎಂದು ಅವರು ಟಿವಿ ಚಾನೆಲ್ ಒಂದರ ಯುವ ಸಮಾವೇಶದಲ್ಲಿ ನುಡಿದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸೇರಿದಂತೆ ಬೆಲೆಗಳನ್ನು ಇಳಿಸಲು ಪ್ರಧಾನಿಯವರು ಶೀಘ್ರವೇ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.

2018: ಚಂಡೀಗಢ (ಹರಿಯಾಣ): ಹರಿಯಾಣದ ಮಂಡಳಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದ ಹದಿ ಹರೆಯದ ತರುಣಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿನ ವೈಫಲ್ಯದಿಂದ ಮುಜುಗರಕ್ಕೆ ಈಡಾಗಿರುವ ಹರಿಯಾಣ ಸರ್ಕಾರ ಭಾನುವಾರ ರೇವಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾಯಿಸಿ ಬೇರೊಬ್ಬ ಅಧಿಕಾರಿಯನ್ನು ಅಲ್ಲಿಗೆ ನೇಮಿಸಿತು.
ರಾಜೇಶ್ ದುಗ್ಗಲ್ ಸ್ಥಾನಕ್ಕೆ ರಾಹುಲ್ ಶರ್ಮ ಅವರನ್ನು ರೇವಾರಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಯಿತು. ಇದೇ ವೇಳೆಗೆ ಸಾಮೂಹಿಕ ಅತ್ಯಾಚಾರ ಸಂತ್ರಸ್ಥೆಯ ಕುಟುಂಬವು ಹರಿಯಾಣ ಸರ್ಕಾರವು ಕಳುಹಿಸಿದ ಲಕ್ಷ ರೂಪಾಯಿಗಳ ಪರಿಹಾರದ ಚೆಕ್ಕನ್ನು ತಿರಸ್ಕರಿಸಿತು. ಪೊಲೀಸರು ಮಹೇಂದ್ರಗಢ ಜಿಲ್ಲೆಯಲ್ಲಿ ಅತ್ಯಾಚಾರ ಘಟನೆ ಸಂಭವಿಸಿದ ಟ್ಯೂಬ್ ವೆಲ್ ಕೊಠಡಿಯ ಮಾಲೀಕ ದೀನದಯಾಳನನ್ನು ಬಂಧಿಸಿದ್ದಾರೆ. ದೀನದಯಾಳ್ ಅಪರಾಧ ಘಟಿಸಿದ ಸೆಪ್ಟೆಂಬರ್ ೧೨ರಂದು ಆರೋಪಿತ ಯುವಕನಿಗೆ ಕೊಠಡಿಯ ಕೀಲಿಕೈಗಳನ್ನು ಕೊಟ್ಟಿದ್ದ ಎಂದು ಪೊಲೀಸರು ಹೇಳಿದರು. ೧೯ರ ಹರೆಯದ ಅತ್ಯಾಚಾರ ಸಂತ್ರಸ್ಥೆ ಲೈಂಗಿಕ ದಾಳಿಯ ಬಳಿಕ ಅಸ್ವಸ್ಥಳಾದಾಗ ಆರೋಪಿಯ ಕರೆಯ ಮೇರೆಗೆ ಅಲ್ಲಿಗೆ ಬಂದಿದ್ದ ವೈದ್ಯನೊಬ್ಬನನ್ನೂ ಪೊಲೀಸರು ಬಂಧಿಸಿದರು. ಸದರಿ ವೈದ್ಯ ಸಂತ್ರಸ್ಥೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದ. ಆದರೆ ಆತ ಯುವತಿಯ ಮೇಲೆ ಲೈಂಗಿಕ ಹಲ್ಲೆ ನಡೆದ ಬಗ್ಗೆ ಗೊತ್ತಾಗಿದ್ದರೂ ಪೊಲೀಸರಿಗೆ ತಿಳಿಸಿರಲಿಲ್ಲ. ಆರೋಪಿಗಳು ತನ್ನನ್ನು ಬೆದರಿಸಿದ್ದರು ಎಂದು ಆತ ಪ್ರತಿಪಾದಿಸಿರುವುದಾಗಿ ಪೊಲೀಸರು ಹೇಳಿದರು. ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಘಟನಾ ಸ್ಥಳದ ವ್ಯಾಪ್ತಿ ಬಗ್ಗೆ ತಕರಾರು ಮಾಡಿಕೊಂಡು ನಿರ್ಲಕ್ಷಿಸಿದ್ದಕ್ಕಾಗಿ ಹರಿಯಾಣ ಪೊಲೀಸರು ಕಟು ಟೀಕೆಗೆ ಒಳಗಾದರು. ಮೂಲಕ ಆರೋಪಿಗಳನ್ನು ಬಂಧಿಸಲು ಸಿಗಬಹುದಾದ ನಿರ್ಣಾಯಕ ಸಾಕ್ಷ್ಯ ಹಾಗೂ ಸಮಯವನ್ನು ಅವರು ನಷ್ಟ ಮಾಡಿದರು ಎಂದು ಟೀಕಿಸಲಾಯಿತು. ಇನ್ನೊಂದು ಬೆಳವಣಿಗೆಯಲ್ಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ಥೆಯ ಕುಟುಂಬವು ಹರಿಯಾಣ ಸರ್ಕಾರವು ಕಳುಹಿಸಿದ ಲಕ್ಷ ರೂಪಾಯಿಗಳ ಪರಿಹಾರದ ಚೆಕ್ಕನ್ನು ತಿರಸ್ಕರಿಸಿತು.   ‘ಇದು ನನ್ನ ಪುತ್ರಿಯ ಮೇಲೆ ನಡೆದ ಭಯಾನಕ ಅಪರಾಧಕ್ಕೆ ಹರಿಯಾಣ ಸರ್ಕಾರವು ಲೆಕ್ಕ ಹಾಕಿರುವ ಮೌಲ್ಯವೇ? ನಾವು ಪರಿಹಾರದ ಕೊಡುಗೆಯನ್ನು ತಿರಸ್ಕರಿಸಿದ್ದೇವೆ. ನಾವು ನಮ್ಮ ಪುತ್ರಿಗೆ ನ್ಯಾಯವನ್ನು ಬಯಸುತ್ತೇವೆ ಎಂದು ಇಲ್ಲಿಂದ ೩೫೦ ಕಿಮೀ ದೂರದ ರೇವಾರಿಯಲ್ಲಿ ಅತ್ಯಾಚಾರ ಸಂತ್ರಸ್ಥೆಯ ತಾಯಿ ಹೇಳಿದರು. ಹರಿಯಾಣ ಪೊಲೀಸರು ಅತ್ಯಾಚಾರಿಗಳಿಗಾಗಿ ತಮ್ಮ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದರು. ಅಪರಾಧದಲ್ಲಿ ಶಾಮೀಲಾದ ಮೂವರು ಆರೋಪಿಗಳನ್ನು ಬಂಧಿಸಲು ವಿವಿಧ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದವು. ಆರೋಪಿಗಳ ಚಲನವಲನಗಳನ್ನು ತಿಳಿಯುವ ಸಲುವಾಗಿ ಪೊಲೀಸರು ಬಂಧುಗಳು, ಗೆಳೆಯರು ಮತ್ತು ಗ್ರಾಮದ ಜನರನ್ನು ಪ್ರಶ್ನಿಸಿದರು.  ಸುಮಾರು ೧೦೦ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿಯಿತು.  ‘ಯುವತಿಯ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ವಿಶೇಷ ತನಿಖಾ ತಂಡದ (ಎಸ್ ಐಟಿ) ಮುಖ್ಯಸ್ಥ ನಜ್ನೀನ್ ಭಾಸಿನ್ ರೇವಾರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದರುಆರೋಪಿಗಳ ಬಗ್ಗೆ ಮಾಹಿತಿ ನೀಡುವ ಯಾರೇ ವ್ಯಕ್ತಿಗೆ ಲಕ್ಷ ರೂಪಾಯಿಗಳ ಬಹುಮಾನ ನೀಡಲಾಗುವುದು ಎಂದು ಆಕೆ ನುಡಿದರುಸೈನಿಕ ಪಂಕಜ್ ಮತ್ತು ಮನಿಶ್ ಹಾಗೂ ನಿಶು ಎಂಬ ಇಬ್ಬರು ಯುವಕರು ಕೃತ್ಯದಲ್ಲಿ ಶಾಮೀಲಾಗಿದ್ದರು ಎಂದು ಹೇಳಲಾಯಿತು.   ಮೂವರೂ ಕನೀನ ಗ್ರಾಮದವರು ಎಂದು ಹೇಳಲಾಯಿತು. ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹರಿಯಾಣ ಪೊಲೀಸ್ ಮಹಾನಿರ್ದೇಶಕರು ಭರವಸೆ ನೀಡಿದ್ದರೂ, ಪೊಲೀಸರು ಹಾಗೆ ಮಾಡುವಲ್ಲಿ ವಿಫಲರಾಗಿದ್ದಾರೆ. ದಾಳಿಕೋರರನ್ನು ಗುರುತಿಸಿರುವ ಸಂತ್ರಸ್ಥೆ ಮತ್ತು ಆಕೆಯ ಪಾಲಕರುಪೊಲೀಸರು ವಿಷಯಕ್ಕೆ ಸಂಬಂಧಿಸಿದಂತೆ ಮೊದಲಿನಿಂದಲೂ ಸಮರ್ಪಕ ಕ್ರಮ ಕೈಗೊಂಡಿಲ್ಲ. ಇದನ್ನೊಂದು ಮಾಮೂಲಿ ಪ್ರಕರಣ ಎಂಬಂತೆ ಪರಿಗಣಿಸಿದ್ದಾರೆ ಎಂದು ದೂರಿದರು. ಈ ಕೃತ್ಯದಲ್ಲಿ ಹೆಚ್ಚಿನ ಮಂದಿ ಶಾಮೀಲಾಗಿರುವ ಸಾಧ್ಯತೆ ಇದೆ ಎಂದೂ ಕುಟುಂಬ ಹೇಳಿತು. ಸಂತ್ರಸ್ಥೆಯ ಗ್ರಾಮದವರೇ ಆಗಿದ್ದು, ಆಕೆಯ ಪರಿಚಯ ಇದ್ದ ಆರೋಪಿಗಳು ಕನೀನಾ ಬಸ್ ನಿಲ್ದಾಣದಿಂದ ಸಂತ್ತಸ್ಥೆಯು ಕೋಚಿಂಗ್ ತರಗತಿಗೆ ಹೋಗುವ ಮಾರ್ಗದಲ್ಲಿ ಇದ್ದಾಗ ಅಪಹರಿಸಿದ್ದಾರೆ. ಅವರು ಆಕೆಯ ಕುಡಿಯುವ ನೀರಿನಲ್ಲಿ ನಿದ್ದೆ ಬರಿಸುವ ಮದ್ದು ನೀಡಿ, ಸಮೀಪದ ಹೊಲದಲ್ಲಿದ್ದ ಕೊಠಡಿಯೊಂದಕ್ಕೆ ಒಯ್ದು ಆಕೆ ಪ್ರಜ್ಞಾಹೀನಳಾಗುವವರೆಗೂ ಒಬ್ಬರ ಬಳಿಕ ಒಬ್ಬರಂತೆ ಅತ್ಯಾಚಾರ ಎಸಗಿದ್ದರು. ಬಳಿಕ ಆಕೆಯನ್ನು ಗ್ರಾಮದ ಸಮೀಪವಿದ್ದ ಬಸ್ ನಿಲುಗಡೆ ಸ್ಥಳದಲ್ಲಿ ಎಸೆದುಹೋಗಿದ್ದರುಆರೋಪಿಗಳಲ್ಲಿ ಒಬ್ಬನಾದ ಮನೀಶ್ ಎಂಬಾತ ಸಂತ್ರಸ್ಥೆಯ ತಂದೆಗೆ ದೂರವಾಣಿ ಕರೆ ಮಾಡಿ ಬಸ್ ಸ್ಟಾಪ್ ನಿಂದ  ಆಕೆಯನ್ನು ಕರೆದುಕೊಂಡು ಹೋಗುವಂತೆಯೂ ಹೇಳಿದ್ದಸ್ಥಳೀಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾದ ಸಂತ್ರಸ್ಥೆ ಬೋರ್ಡ್ ಪರೀಕ್ಷೆಯಲ್ಲಿ ಉನ್ನತ ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದು, ಸರ್ಕಾರದ ಸನ್ಮಾನಕ್ಕೂ ಪಾತ್ರಳಾಗಿದ್ದಳು.

2018: ನವದೆಹಲಿ: ಮದ್ಯ ಉದ್ಯಮಿ ವಿಜಯ್ ಮಲ್ಯ ಅವರ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಕೊಟ್ಟ ಬ್ಯಾಂಕ್ ಸಾಲಗಳಿಗೆ ಸಂಬಂಧಿಸಿದಂತೆ ಸಿಬಿಐ ಒಂದು ತಿಂಗಳ ಒಳಗೆ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸುವ ನಿರೀಕ್ಷೆಯಿದ್ದು, ಸಾಲ ನೀಡಿಕೆಗೆ ಸಹಕರಿಸಿದ ಹಲವಾರು ಹಿರಿಯ ಬ್ಯಾಂಕ್ ಅಧಿಕಾರಿಗಳನ್ನೂ ಆರೋಪಿಗಳಾಗಿ ಹೆಸರಿಸುವ ಸಾಧ್ಯತೆಗಳು ಇವೆ ಎಂದು ಮೂಲಗಳು ತಿಳಿಸಿದವು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ೧೭ ಬ್ಯಾಂಕುಗಳ ಒಕ್ಕೂಟವು ಕಿಂಗ್ ಫಿಶರ್ ಏರ್ ಲೈನ್ಸ್ ಗೆ ನೀಡಿದ ೬೦೦೦ ಕೋಟಿ ರೂಪಾಯಿಗಳ ಸಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಲ್ಲಿಸಲಾಗುತ್ತಿರುವ ಮೊತ್ತ ಮೊದಲ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಇದಾಗಲಿದೆ. ಸಾಲದಲ್ಲಿ ೧೬೦೦ ಕೋಟಿ ರೂಪಾಯಿಗಳ ಸಾಲವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಒಂದೇ ನೀಡಿದೆ. ಏಜೆನ್ಸಿಯು ಈಗಾಗಲೇ ಕಳೆದ ವರ್ಷ ಮಲ್ಯ ವಿರುದ್ಧ ಐಡಿಬಿಐ ಬ್ಯಾಂಕ್ ನೀಡಿದ ೯೦೦ ಕೋಟಿ ರೂಪಾಯಿಗಳ ಸಾಲಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿ ದಾಖಲಿಸಿದೆ. ಪ್ರಕರಣದಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಐಡಿಬಿಐ ಸಾಲಗಳಿಗೆ ಸಂಬಂಧಿಸಿದಂತೆ ೨೦೧೫ರಲ್ಲಿ ಒಂದು ಪ್ರಕರಣ ಮತ್ತು ೨೦೧೬ರಲ್ಲಿ ಬ್ಯಾಂಕುಗಳ ಒಕ್ಕೂಟದ ಸಾಲಗಳಿಗೆ ಸಂಬಂಧಿಸಿದಂತೆ ಒಂದು ಪ್ರಕರಣ ಹೀಗೆ ಎರಡು ಪ್ರಕರಣಗಳನ್ನು ಸಿಬಿಐ ದಾಖಲಿಸಿದೆ. ಅಧಿಕಾರಿಗಳ ಹೆಸರು ಹೇಳಲು ನಿರಾಕರಿಸಿರುವ ಮೂಲಗಳು, ಬ್ಯಾಂಕುಗಳ ಒಕ್ಕೂಟದಿಂದ ನೀಡಲಾಗಿರುವ ಸಾಲಗಳಿಗೆ ಸಂಬಂಧಿಸಿದ ತನಿಖೆಯ ಮೊದಲ ಹಂತ ಪೂರ್ಣಗೊಂಡಿದ್ದು, ತನಿಖೆಯನ್ನು ಮುಕ್ತವಾಗಿ ಇರಿಸಿಕೊಂಡೇ ಒಂದು ತಿಂಗಳ ಒಳಗಾಗಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಬಹುದು ಎಂದು ಹೇಳಿದವು.  ಕಿಂಗ್ ಫಿಶರ್ ಸಾಲ ನೀಡಿಕೆ ವಿಚಾರವನ್ನು ನಿಭಾಯಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕುಗಳ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ಹಿರಿಯ ಅಧಿಕಾರಿಗಳನ್ನು ದೋಷಾರೋಪ ಪಟ್ಟಿಯಲ್ಲಿ ಆರೋಪಿಗಳಾಗಿ ಹೆಸರಿಸಬಹುದು. ಅಧಿಕಾರಿಗಳು ತಮ್ಮ ಹುದ್ದೆಯನ್ನು ದುರುಪಯೋಗ ಮಾಡಿಕೊಂಡದ್ದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಏಜೆನ್ಸಿಯು ಸಂಗ್ರಹಿಸಿದೆ ಎಂದು ಮೂಲಗಳು ಹೇಳಿದವು. ಹಿಂದಿನ ಕಿಂಗ್ ಫಿಶರ್ ಏರ್ ಲೈನ್ಸಿನ ಮುಖ್ಯಸ್ಥ ವಿಜಯ್ ಮಲ್ಯ, ಅದರ ಸಿಎಫ್ . ರಘುನಾಥನ್ ಮತ್ತು ಹಿಂದಿನ ಹಿರಿಯ ಎಕ್ಸಿಕ್ಯೂಟಿವ್ ಗಳನ್ನು ಕೂಡಾ ಆರೋಪಿಗಳಾಗಿ ಪ್ರಕರಣದಲ್ಲಿ ಹೆಸರಿಸಲಾಗುವುದು ಎಂದು ಮೂಲಗಳು ತಿಳಿಸಿದವು. ಬ್ಯಾಂಕರುಗಳ ನಿರ್ಧಾರದ ಮೇಲೆ ಪ್ರಭಾವ ಬೀರಿರಬಹುದಾದ ವಿತ್ತ ಸಚಿವಾಲಯದ ಅಧಿಕಾರಿಗಳ ಪಾತ್ರದ ಬಗ್ಗೆ ಕೂಡಾ ಏಜೆನ್ಸಿಯು ಪರಿಶೀಲಿಸುತ್ತಿದೆ. ಆದರೆ ಅವರ ಪಾತ್ರದ ಮೌಲ್ಯಮಾಪನವನ್ನು ಇನ್ನೂ ಮಾಡಿಲ್ಲ ಎಂದು ಮೂಲಗಳು ಹೇಳಿವೆತನಿಖೆಯ ವೇಳೆಯಲ್ಲಿ ಏಜೆನ್ಸಿಯು ಮಲ್ಯ ಅವರು ಬ್ಯಾಂಕಿನಿಂದ ಪಡೆದ ಸಾಲವನ್ನು ನೀಡಿದ ಉದ್ದೇಶಕ್ಕೆ ಬದಲಾಗಿ ಬೇರೆ ಉದ್ದೇಶಕ್ಕೆ ಬಳಸಿಕೊಂಡದ್ದಕ್ಕೆ ಸಂಬಂಧಿಸಿದಂತೆಯೂ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಒಕ್ಕೂಟದ ಇತರ ಬ್ಯಾಂಕುಗಳು ೨೦೦೫ ಮತ್ತು ೨೦೧೦ ನಡುವಣ ಅವಧಿಯಲ್ಲಿ ಕಿಂಗ್ ಫಿಶರ್ ಏರ್ ಲೈನ್ಸ್ ಲಿಮಿಟೆಡ್ ಗೆ ವಿವಿಧ ಸಾಲ ಸವಲತ್ತುಗಳನ್ನು ನೀಡಿದ್ದವು. ೨೦೦೯-೧೦ರಲ್ಲಿ ಮತ್ತು ನಂತರ ಬ್ಯಾಂಕುಗಳಿಗೆ ಮರುಪಾವತಿ ಮಾಡಬೇಕಾದ ಬದ್ಧತೆಯನ್ನು ಈಡೇರಿಸುವಲ್ಲಿ ಕಂಪೆನಿ ವಿಫಲಗೊಂಡಿತು. ಪರಿಣಾಮವಾಗಿ ಸಾಲಗಳು ಮರುಪಾವತಿಯಾಗದ ಸಾಲಗಳು (ಅನುತ್ಪಾದಕ ಆಸ್ತಿ- ಎನ್ ಪಿಎ) ಆಗಿ ಪರಿವರ್ತನೆಗೊಂಡವು ಎಂದು ಸಿಬಿಐ ದಾಖಲಿಸಿದ ಎಫ್ಐಆರ್ ಹೇಳಿತು. ಹೀಗಾಗಿ ಒಕ್ಕೂಟದ ಬ್ಯಾಂಕುಗಳು ಯುಬಿಎಚ್ ಎಲ್ ನೀಡಿದ ಕಾರ್ಪೋರೇಟ್ ಖಾತರಿ ಮತ್ತು ಮಲ್ಯ ಅವರು ನೀಡಿದ ವೈಯಕ್ತಿಕ ಖಾತರಿಯನ್ನು ಪರಿಗಣನೆಗೆ ತೆಗೆದುಕೊಂಡವು. ಮಲ್ಯ ಅವರು ಉದ್ದೇಶ ಪೂರ್ವಕವಾಗಿಯೇ ಕಿಂಗ್ ಫಿಶರ್ ಏರ್ ಲೈನ್ಸ್ ಒಕ್ಕೂಟದ ಬ್ಯಾಂಕುಗಳಿಗೆ ಪಾವತಿ ಮಾಡಬೇಕಾಗಿದ್ದ ಸಾಲದ ಹಣವನ್ನು ಮರುಪಾವತಿ ಮಾಡಲಿಲ್ಲ ಎಂದು ಎಫ್ ಆರ್ ಆಪಾದಿಸಿತು. ಸಾಲದಾತರನ್ನು ವಂಚಿಸಲು ಕಂಪೆನಿ ಸಮೂಹದ ಪ್ರವರ್ತಕರು ಮತ್ತು ಇತರ ಅಪರಿಚಿತ ವ್ಯಕ್ತಿಗಳು ಸಂಚು ಹೂಡಿದ್ದರು ಎಂದು ಅದು ಹೇಳಿತು. ಏರ್ ಲೈನ್ಸಿಗೆ ೧೬೦೦ ಕೋಟಿ ರೂಪಾಯಿಗಳ ಸಾಲ ನೀಡಿರುವ ಎಸ್ಬಿಐ , ೨೦೧೩ರ ಫೆಬ್ರುವರಿವರೆಗೆ ಯುಬಿಐ ಸಮೂಹ ಕಂಪೆನಿಗಳ ಶೇರು ಮಾರಾಟದಿಂದ ೧೧೦೦ ರೂಪಾಯಿಗಳನ್ನು ಮಾತ್ರ ಭರಿಸಿಕೊಳ್ಳಲು ಸಮರ್ಥವಾಗಿವೆ ಎಂದು ಮೂಲಗಳು ಹೇಳಿವೆಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ (ತಲಾ ೮೦೦ ಕೋಟಿ ರೂಪಾಯಿ), ಬ್ಯಾಂಕ್ ಆಫ್ ಇಂಡಿಯಾ (೬೫೦ ಕೋಟಿ ರೂಪಾಯಿ), ಬ್ಯಾಂಕ್ ಆಫ್ ಬರೋಡಾ (೫೫೦ ಕೋಟಿ ರೂಪಾಯಿ), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (೪೧೦ ಕೋಟಿ ರುಪಾಯಿ) ಸಾಲವನ್ನು ಕಿಂಗ್ ಫಿಶರ್ ಏರ್ ಲೈನ್ಸ್ಗೆ ನೀಡಿವೆ.
  
2018:  ಲಕ್ನೋ: ೨೦೧೯ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ರೂಪುಗೊಳ್ಳುತ್ತಿರುವ ಬಿಜೆಪಿ ವಿರೋಧಿ ವಿಪಕ್ಷ ಮೈತ್ರಿಕೂಟದಲ್ಲಿಮರ್ಯಾದೆಯುತ ಸಂಖ್ಯೆಯ ಸ್ಥಾನಗಳು ಸಿಗದೇ ಇದ್ದಲ್ಲಿ ಬಹುಜನ ಸಮಾಜ ಪಕ್ಷವು (ಬಿಎಸ್ ಪಿ) ಏಕಾಂಗಿಯಾಗಿಯೇ ಚುನಾವಣೆಯಲ್ಲಿ ಸೆಣಸಲಿದೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಇಲ್ಲಿ ಹೇಳಿದರು.  ‘ಬಿಜೆಪಿ ನೇತೃತ್ವದ ಎನ್ ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಗಳೆರಡೂ ಭ್ರಷ್ಟರಿಗೆ ರಕ್ಷಣೆ ಒದಗಿಸುವಲ್ಲಿ ಸಮಾನವಾಗಿ ಹೊಣೆಯಾಗಿವೆ ಎಂದೂ, ಸುಪ್ರೀಂಕೋರ್ಟ್ ಆದೇಶದ ಮೇರೆಗೆ ತಮ್ಮ ವಿಸ್ತಾರವಾದ ಬಂಗಲೆಯನ್ನು ತೆರವುಗೊಳಿಸಿದ ಬಳಿಕ ಲಕ್ನೋದ ತಮ್ಮ ಹೊಸ ಕಚೇರಿಯಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸುತ್ತಾ ಅವರು ನುಡಿದರು. ಗೋ ಸಂರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಗುಂಪು ದಾಳಿ- ಹತ್ಯೆಗಳು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂದು ನುಡಿದ ಅವರು ವಿವಿಧ ರಾಜ್ಯಗಳಲ್ಲಿನ ಬಿಜೆಪಿ ಸರ್ಕಾರಗಳು ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ತಾಳಿವೆ ಎಂದು ಆಪಾದಿಸಿದರು.   ‘ನಮ್ಮ ಪಕ್ಷವು ಮೈತ್ರಿಗೆ ವಿರೋಧಿಯಲ್ಲ, ಆದರೆ ನಮ್ಮ ನಿಲುವು ಅತ್ಯಂತ ಸ್ಪಷ್ಟ. ನಮಗೆ ಗೌರವಯುತವಾದ ಸ್ಥಾನಗಳನ್ನು ಕೊಟ್ಟರೆ ಮಾತ್ರವೇ ನಾವು ಯಾವುದೇ ರಾಜಕೀಯ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತೇವೆ. ಇಲ್ಲದೇ ಇದ್ದಲ್ಲಿ ಚುನಾವಣೆಯಲ್ಲಿ ಏಕಾಂಗಿಯಾಗಿಯೇ ಸೆಣಸುವುದು ಉತ್ತಮ ಎಂಬುದಾಗಿ ನಮ್ಮ ಪಕ್ಷವು ಅಭಿಪ್ರಾಯಪಡುತ್ತದೆ ಎಂದು ಅವರು ನುಡಿದರು.  ‘೨೦೧೯ರ ಲೋಕಸಭಾ ಚುನಾವಣೆ ಮತ್ತು ಕೆಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾವುದೇ ಬೆಲೆ ತೆತ್ತಾದರೂ ತಡೆಯಬೇಕು ಎಂಬುದು ವಿರೋಧ ಪಕ್ಷಗಳ ಯತ್ನ ಎಂದು ಮಾಯಾವತಿ ಹೇಳಿದರು. ಕೇಂದ್ರ ಮತ್ತು ರಾಜ್ಯಗಳಲ್ಲಿನ ಬಿಜೆಪಿ ಸರ್ಕಾರಗಳನ್ನು ಗುರಿಯಾಗಿಟ್ಟು ಟೀಕಾಪ್ರಹಾರ ಮಾಡಿದ ಮಾಯಾವತಿತಪ್ಪು ಭರವಸೆಗಳನ್ನು ಕೊಡುವ ಮೂಲಕ ತಾವು ಅಧಿಕಾರಕ್ಕೆ ಬಂದಿರುವ ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಜನರ ಪರಿಸ್ಥಿತಿಯನ್ನು ಹದಗೆಡಿಸಿವೆ ಎಂದು ಹೇಳಿದರುಬಿಜೆಪಿ ಆಡಳಿತ ಇರುವ ಪ್ರದೇಶಗಳಲ್ಲಿ ಗೋ ಸಂರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಗುಂಪುಹತ್ಯೆಗಳು ಹೆಚ್ಚುತ್ತಿರುವ ಪ್ರವೃತ್ತಿಯು ಪ್ರಜಾಪ್ರಭುತ್ವದ ಮೇಲಿನ ಕಪ್ಪು ಚುಕ್ಕೆಗಳಾಗಿವೆ. ಆದರೂ ರಾಜ್ಯಗಳಲ್ಲಿ ಸರ್ಕಾರಗಳು ಬಗ್ಗೆ ಅತ್ಯಂತ ನಿರ್ಲಕ್ಷ್ಯದಿಂದಿವೆ ಎಂದು ಅವರು ಆಪಾದಿಸಿದರು.  ‘ದಲಿತರು, ಬುಡಕಟ್ಟು ಜನ, ಹಿಂದುಳಿದವರು, ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ ಬಿಜೆಪಿ ಸರ್ಕಾರಗಳ ಚಟುವಟಿಕೆಗಳು ಮೊದಲಿನಿಂದಲೇ ಇದ್ದವು ಮತ್ತು ಸಂವಿಧಾನದ ವಿರುದ್ಧ ಹೋಗುವ ಪಕ್ಷದ ಉದ್ದೇಶದ ಪರಿಣಾಮ ಇದು. ಇದು ಬಿಜೆಪಿಯ ಮೂಲ ನೀತಿಯ  ಭಾಗವಾಗಿದ್ದು, ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ ಎಂದು ಮಾಯಾವತಿ ನುಡಿದರು. ಸರ್ಕಾರ ರಚಿಸಿದ ಬಳಿಕ ಪಕ್ಷವು ಪ್ರಜಾತಾಂತ್ರಿಕ ಚಳವಳಿಗಳನ್ನು ದಮನಿಸಲು ಯತ್ನಿಸುತ್ತಿದೆ ಮತ್ತು ಇದಕ್ಕಾಗಿ ಭಯೋತ್ಪಾದಕ ತಂತ್ರಗಳನ್ನು ಅನುಸರಿಸುತ್ತಿದೆ. ದಲಿತ ಸಂಘಟನೆಗಳು ಕರೆ ನೀಡಿದ್ದ ಏಪ್ರಿಲ್ ೨ರ ಭಾರತ ಬಂದ್ ಬಳಿಕ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಅವರು ಆಪಾದಿಸಿದರು. ಲೋಕಸಭಾ ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ಬಿಜೆಪಿಯಗಮನ ಬದಲಾವಣೆ ತಂತ್ರಗಳನ್ನು ಅನುಸರಿಸುತ್ತಿದೆ ಎಂದು ಆಪಾದಿಸಿದ ಮಾಯಾವತಿ, ’ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದಿಂದ ಹಿಡಿದು ಪ್ರತಿಯೊಂದು ವಿಷಯದಲ್ಲೂ ಲಾಭ ಪಡೆಯಲು ಪಕ್ಷ ಸರ್ವ ಯತ್ನಗಳನ್ನು ಮಾಡುತ್ತಿದೆ ಮತ್ತು ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಲಾಭದಾಯಕ ಪ್ರಕಟಣೆಗಳನ್ನು ಮಾಡುತ್ತಿದೆ. ವಾಜಪೇಯಿ ಅವರು ಜೀವಂತ ಇದ್ದಾಗ ಪಕ್ಷವು ಎಂದೂ ಅವರ ಹೆಜ್ಜೆಗಳನ್ನು ಅನುಸರಿಸಲಿಲ್ಲ ಎಂದು ದೂರಿದರು.  ‘ನರೇಂದ್ರ ಮೋದಿ ಮತ್ತು ಬಿಜೆಪಿ ವಾಜಪೇಯಿ ಅವರ ಹೆಜ್ಜೆಗಳನ್ನು ಅನುಸರಿಸಿದ್ದರೆ ಮತ್ತು ಅದಕ್ಕೆ ಅನುಗುಣವಾಗಿ ಸರ್ಕಾರವನ್ನು ನಡೆಸಿದ್ದರೆ ಧಾರ್ಮಿಕ ಉನ್ಮಾದಗಳು ಇರುತ್ತಿರಲಿಲ್ಲ ಮತ್ತು ಕೋಮು ಘಟನೆಗಳು ಘಟಿಸುತ್ತಿರಲಿಲ್ಲ. ಅಥವಾ ಗುಂಪಾಡಳಿತ (ಮೊಬೋಕ್ರಸಿ) ಇರುತ್ತಿರಲಿಲ್ಲ ಎಂದು ಮಾಯಾವತಿ ಹೇಳಿದರುವಾಜಪೇಯಿ ಅವರ ಹೆಸರಿನಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಕೈಗೊಂಡಿರುವ ಪ್ರಚಾರ ಅಭಿಯಾನವು ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ತಂತ್ರ ಎಂಬುದು ಜನರಿಗೆ ಗೊತ್ತಿದೆ. ಬಿಜೆಪಿಯು ಇದರಿಂದ ಯಾವುದೇ ಲಾಭ ಗಳಿಸಲೂ ಸಾಧ್ಯವಿಲ್ಲ ಎಂದು ಬಿಎಸ್ಪಿ ನಾಯಕಿ ನುಡಿದರು. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ನೀಡಿದ ಯಾವುದೇ ಭರವಸೆಗಳೂ ಈಡೇರಿಲ್ಲ ಎಂಬುದು ಈಗ ಜನರಿಗೆ ಅರ್ಥವಾಗಿದೆ ಎಂದು ಅವರು ಹೇಳಿದರು. ರಫೇಲ್ ವಿಷಯದಲ್ಲೂ ಸರ್ಕಾರ ಪರಿಶುದ್ಧವಾಗಿಲ್ಲ ಎಂದು ಅವರು ನುಡಿದರು. ಸಮರ್ಪಕವಾಗಿ ಯೋಜಿಸದೆ ಜಾರಿಗೊಳಿಸಿದ ನೋಟು ಅಮಾನ್ಯೀಕರಣದಿಂದಹಣಕಾಸು ತುರ್ತುಸ್ಥಿತಿ ಎದುರಾಗಿದೆ ಎಂದು ನುಡಿದ ಮಾಯಾವತಿ ರಾಷ್ಟ್ರೀಯ ದುರಂತಕ್ಕಾಗಿ ಬಿಜೆಪಿ ಸರ್ಕಾರವು ಈಗ ಕನಿಷ್ಠ ಪಕ್ಷ ಕ್ಷಮೆಯಾಚನೆಯನ್ನಾದರೂ ಮಾಡಬೇಕು ಎಂದು ಅವರು ಹೇಳಿದರು. ಪರಿಶಿಷ್ಟ ಜಾತಿ/ ಪರಿಶಿಷ್ಟ ಜನಾಂಗ ಕಾಯ್ದೆಯ ದುರುಪಯೋಗದ ಸಾಧ್ಯತೆ ಬಗ್ಗೆ ಕೇಳಲಾದ ಪ್ರಶ್ನೆಗೆಬಿಎಸ್ಪಿಯ ಸರ್ವಜನ ಹಿತಾಯ, ಸರ್ವಜನ ಸುಖಾಯ ನೀತಿಯನ್ನು ಹಾಲಿ ರಾಜ್ಯ ಸರ್ಕಾರಗಳು ಅನುಸರಿಸಿದೆ ಕಾನೂನಿನ ದುರುಪಯೋಗ ಆಗದು ಎಂದು ಮಾಯಾವತಿ ಉತ್ತರಿಸಿದರು.


2017: ತಿರುವನಂತಪುರ: ಒಂದು ವರ್ಷದ ಹಿಂದೆ ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿ ದೇವಾಲಯದಿಂದ ಕಳವಾಗಿತ್ತು ಎನ್ನಲಾಗಿದ್ದ  ಕೋಟ್ಯಂತರ ರೂ. ಮೌಲ್ಯದ 12ಕ್ಕೂ ಹೆಚ್ಚು ವಜ್ರದ ಹರಳುಗಳು ಅಚ್ಚರಿ ಎನ್ನುವಂತೆ ದೇವಾಲಯದ ಆವರಣದಲ್ಲಿಯೇ ಪತ್ತೆಯಾದವು.  ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸುವ ಸಮಯದಲ್ಲಿಯೇ ಇವು ಪತ್ತೆಯಾದವು. ಭಾರೀ ಬೆಲೆಬಾಳುವ ವಜ್ರ, ಚಿನ್ನಾಭರಣಗಳನ್ನು ಹೊಂದಿರುವ ಅನಂತ ಪದ್ಮನಾಭನಿಗೆ ಸೇರಿದ ಆಭರಣಗಳಲ್ಲಿ ಈ ವಜ್ರದ ಹರಳುಗಳಿದ್ದವು. ಅಲಂಕಾರದ ವೇಳೆ ಬಳಸ ಲಾಗುತ್ತಿದ್ದ ವಜ್ರದ ಹರಳುಗಳು ವರ್ಷದ ಹಿಂದೆ ಕಾಣದೇ ಇದ್ದ ಹಿನ್ನೆಲೆಯಲ್ಲಿ ಪೊಲೀಸ್ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.  ಪ್ರಾಥಮಿಕ ತನಿಖೆ ಪ್ರಕಾರ ಹರಳುಗಳು ಕಳುವಾಗಿರಲಿಲ್ಲ. ಅವು ಕಣ್ಣಿಗೆ ಕಾಣದ ಸ್ಥಳದಲ್ಲಿ ಬಿದ್ದಿದ್ದವು. ತನಿಖೆ ವೇಳೆ ಇವು ಪತ್ತೆಯಾಗಿವೆ. ದೇಗುಲದಲ್ಲಿದ್ದ ಅಮೂಲ್ಯ 26 ಹರಳುಗಳಲ್ಲಿ 12 ಹರಳುಗಳು ಕೂಡ ಸೇರಿವೆ ಎಂದು ಅಪರಾಧ ಪತ್ತೆ ದಳದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಈ ವಜ್ರಗಳು ಅನಂತ ಪದ್ಮನಾಭ ದೇಗುಲದ ನೆಲಮಾಳಿಗೆಯಲ್ಲಿನ "ಬಿ' ಮತ್ತು "ಎಫ್' ಕೋಣೆ ಗಳಲ್ಲಿ ಪತ್ತೆಯಾಗಿದ್ದವು. ಪೊಲೀಸರಿಗೆ ದೂರು ಕೊಟ್ಟಾಗ ದೇಗುಲ ನಿರ್ವಾಹಕರು 22 ವಜ್ರಗಳು ಕಾಣೆಯಾಗಿವೆ ಎಂದು ಹೇಳಿದ್ದರು. ಆದರೆ ತನಿಖೆ ನಡೆಸುತ್ತಿದ್ದ ಅಧಿಕಾರಿ ಅಧಿಕಾರಿ ಐಜಿ ಎಸ್‌. ಶ್ರೀಜಿತ್  ಒಟ್ಟು ಇದ್ದ 26 ವಜ್ರಗಳಲ್ಲಿ 12 ಮಾತ್ರ ಕಾಣೆಯಾಗಿದ್ದವು. ಅವುಗಳನ್ನು ಯಾರೂ ಕದ್ದಿರಲಿಲ್ಲ. ಬದಲಾಗಿ ಎಲ್ಲೋ ಇಟ್ಟು ಮರೆತುಬಿಡಲಾಗಿತ್ತು. ಇದೀಗ ಸಿಕ್ಕಿವೆ ಎಂದು ತನಿಖೆ ನಡೆಸುತ್ತಿದ್ದ ಹೇಳಿದರು. ದೇಗುಲದಿಂದ ವಜ್ರಗಳು ಕಾಣೆಯಾಗಿದ್ದ ಬಗ್ಗೆ ಕಳೆದ ಜುಲೈಯಲ್ಲಿ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಲಾಗಿತ್ತು. ಪೊಲೀಸರ ಪರ ವಾದ ನಡೆಸುತ್ತಿರುವ ಹಿರಿಯ ವಕೀಲ ಗೋಪಾಲ್ಸುಬ್ರಹ್ಮಣ್ಯಮ್ ಅವರು, ವಜ್ರಗಳು ಕಾಣೆಯಾದ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ಇದಕ್ಕೆ ದೇಗುಲದ ನಿರ್ಲಕ್ಷ é ನಿರ್ವಹಣೆಯೇ ಕಾರಣ ಎಂದು ಹೇಳಿದ್ದರು. ಅಲ್ಲದೆ ಕಳೆದ ವರ್ಷ 189 ಕೋಟಿ ರೂ. ಮೌಲ್ಯದ ಚಿನ್ನವೂ ಕಣ್ಮರೆಯಾಗಿತ್ತು ಎಂದು ಅವರು ಕೋರ್ಟ್ಗೆ ಮಾಹಿತಿ ನೀಡಿದ್ದರು.

2016: ಸ್ಟಾಕ್ಹೋಂ(ಸ್ವೀಡನ್‌):  ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ನೀಡಿದ ಆಪಾದನೆಗೆ ಗುರಿಯಾದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್  ಬಂಧನ ವಾರಂಟ್ತೀರ್ಪನ್ನು ಸ್ವೀಡನ್ಮೇಲ್ಮನವಿ ನ್ಯಾಯಾಲಯ ಎತ್ತಿ ಹಿಡಿಯಿತು. 2010ರಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪ ಇದಾಗಿದ್ದು, ಬಂಧನ ವಾರಂಟ್ತೆರವು ಮಾಡಲು ನ್ಯಾಯಾಲಯ ನಿರಾಕರಿಸಿತು. ಸ್ವೀಡನ್ಗೆ ಗಡೀಪಾರು ಆಗುವುದನ್ನು ತಪ್ಪಿಸಲು ಮಾಡಿದ ಎಲ್ಲ ಕಾನೂನು ಹೋರಾಟ ವಿಫಲವಾದ ನಂತರ 2012 ಜೂನ್ನಿಂದ ಲಂಡನ್ನಲ್ಲಿರುವ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಅಸಾಂಜ್ಆಶ್ರಯ ಪಡೆದಿದ್ದಾರೆಅತ್ಯಾಚಾರ ಆರೋಪ ಅಲ್ಲಗಳೆದಿರುವ ಅವರು ವಿಚಾರಣೆಗೆ ಸ್ಟಾಕ್ಹೋಂಗೆ ತೆರಳಲು ನಿರಾಕರಿಸಿದರು.  ಆಫ್ಘಾನಿಸ್ತಾನ ಮತ್ತು ಇರಾಕ್ನಲ್ಲಿ ನಡೆದ ಯುದ್ಧ ಕುರಿತ ಅಮೆರಿಕದ 5 ಲಕ್ಷ  ರಹಸ್ಯ ಸೇನಾ ಕಡತಗಳನ್ನು ವಿಕಿಲೀಕ್ಸ್ಬಯಲು ಮಾಡಿರುವುದರಿಂದ ಸ್ವೀಡನ್‌, ಅಸಾಂಜ್ಅವರನ್ನು ಅಮೆರಿಕಕ್ಕೆ ಗಡೀಪಾರು ಮಾಡುವ ಸಾಧ್ಯತೆ ಇದೆ. ಸ್ವೀಡನ್ನ್ಯಾಯಾಲಯದಲ್ಲಿ ಅಸಾಂಜ್ವಿರುದ್ಧ ಜಾರಿಯಾದ8ನೇ ಬಂಧನ ವಾರಂಟ್ಇದು.

2016: ಬೀಜಿಂಗ್‌ :  ಚೀನಾವು ತನ್ನ ಎರಡನೇ ಪ್ರಾಯೋಗಿಕ ಬಾಹ್ಯಾಕಾಶ ಪ್ರಯೋಗಾಲಯ
ಟಿಯಾಂಗೊಂಗ್‌–2’ ನ್ನು ಹಿಂದಿನ ದಿನ ರಾತ್ರಿ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತು. 2022 ವೇಳೆಗೆ ಅಂತರಿಕ್ಷದಲ್ಲಿ ಮಾನವ ಕಾರ್ಯ ನಿರ್ವಹಿಸಬಹುದಾದ    ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಮಹತ್ವಾಕಾಂಕ್ಷೆಯನ್ನು ಚೀನಾ ಹೊಂದಿದೆಈಗ ಬಾಹ್ಯಾಕಾಶದಲ್ಲಿ ಇರುವ ಅಮೆರಿಕ ನೇತೃತ್ವದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಹೊತ್ತಿಗೆ ತನ್ನ ಕಾರ್ಯನಿರ್ವಹಣೆ ಸ್ಥಗಿತಗೊಳಿಸುವ ನಿರೀಕ್ಷೆ ಇದೆ. ವಾಯವ್ಯ ಚೀನಾದ ಗೋಬಿ ಮರುಭೂಮಿಯಲ್ಲಿರುವ ಜಿಯುಕ್ವಾನ್ಉಪಗ್ರಹ ಉಡಾವಣಾ ಕೇಂದ್ರದಿಂದಟಿಯಾಂಗಾಂಗ್–2’  ಅನ್ನು ಉಡಾವಣೆ ಮಾಡಲಾಯಿತು. 10 ನಿಮಿಷಗಳಲ್ಲಿ ಬಾಹ್ಯಾಕಾಶ ಪ್ರಯೋಗಾಲಯವು ನಿಗದಿತ ಕಕ್ಷೆ ಸೇರಿತು.
8.6 ಟನ್ತೂಕದ ಪ್ರಯೋಗಾಲಯ ಸದ್ಯ ಭೂಮಿಯಿಂದ 380 ಕಿ.ಮೀ ಎತ್ತರದಲ್ಲಿರುವ ಕಕ್ಷೆಯಲ್ಲಿದೆ. ಮುಂದಿನ ತಿಂಗಳು ಇದು  393 ಕಿ.ಮೀ ಎತ್ತರದ ಕಕ್ಷೆಗೆ ವರ್ಗಾವಣೆಗೊಳ್ಳಲಿದೆ.




2016: ಇಸ್ಲಾಮಾಬಾದ್
‌ : ಪಾಕಿಸ್ತಾನ ತನ್ನ ಅಣ್ವಸ್ತ್ರಗಳ ಸಂಗ್ರಹ ಹೆಚ್ಚಿಸಿಕೊಳ್ಳುತ್ತಿರುವ ಸಾಧ್ಯತೆ ಇದೆ. ಜತೆಗೆ ಅಣ್ವಸ್ತ್ರಗಳ ಸಂಗ್ರಹಕ್ಕಾಗಿ ಹೊಸ ಸಂಕೀರ್ಣವನ್ನು ನಿರ್ಮಿಸುತ್ತಿದೆಎಂದು  ರಕ್ಷಣಾ ತಂತ್ರ ವಿಮರ್ಶಾ ಸಂಸ್ಥೆ ಜೇನ್ಸ್ಇಂಟೆಲಿಜೆನ್ಸ್ ರಿವ್ಯೂ ಅನುಮಾನ ವ್ಯಕ್ತಪಡಿಸಿತು. ಯೂರೋಪ್ ಅಣುವಿದ್ಯುತ್ಮತ್ತು ಅಣ್ವಸ್ತ್ರ ಅಭಿವೃದ್ಧಿ ಸಂಸ್ಥೆಯುರೆಂಕೊಆವರಣದಲ್ಲಿರುವ  ಅಣ್ವಸ್ತ್ರ ಅಭಿವೃದ್ಧಿ ಘಟಕವನ್ನೇ ಹೋಲುವ
ಕಟ್ಟಡಗಳನ್ನು ಪಾಕಿಸ್ತಾನ ನಿರ್ಮಿಸುತ್ತಿದೆ. ಸಂಬಂಧ ಬೇರೆ ಬೇರೆ ಅವಧಿಯಲ್ಲಿ ತೆಗೆಯಲಾದ ವೈಮಾನಿಕ ಮತ್ತು ಉಪಗ್ರಹ ಚಿತ್ರಗಳನ್ನು ಹೋಲಿಸಿ ಸಂಸ್ಥೆ ಅನುಮಾನ ವ್ಯಕ್ತಪಡಿಸಿತು. ಪರಮಾಣು ಪೂರೈಕೆದಾರರ ಗುಂಪನ್ನು ಸೇರಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಈಗಾಗಲೆ ಅದರ ಬಳಿ 120ಕ್ಕೂ ಹೆಚ್ಚು ಅಣ್ವಸ್ತ್ರ ಸಿಡಿತಲೆಗಳಿವೆ. ಈಗ ಅಣ್ವಸ್ತ್ರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಪಾಕಿಸ್ತಾನ ಪ್ರಯತ್ನಿಸುತ್ತಿದ್ದರೆ, ಅದು ಆತಂಕಕಾರಿ ಬೆಳವಣಿಗೆ ಎಂದು ಜೇನ್ಸ್ಅಭಿಪ್ರಾಯಪಟ್ಟಿತು.
2008: ಸವಾಯಿ ಗಂಧರ್ವರ ಹೆಸರಿನಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಕಳೆದ 55 ವರ್ಷಗಳಿಂದ  ಸಂಗೀತ ಮಹೋತ್ಸವ ಆಚರಿಸುತ್ತ ಬಂದ ಸವಾಯಿ ಗಂಧರ್ವ ವಿಶ್ವಸ್ಥ ಸಂಸ್ಥೆಯವರು ಪ್ರಸಕ್ತ ಸಾಲಿನಿಂದ ಸವಾಯಿ ಗಂಧರ್ವ ಅವರ ಹೆಸರಿನಲ್ಲಿ ನೀಡಲು ಉದ್ದೇಶಿಸಿದ ರಾಷ್ಟ್ರಮಟ್ಟದ ಮೊದಲ ಪ್ರಶಸ್ತಿಯನ್ನು ಗಂಧರ್ವರ ಪಟ್ಟ ಶಿಷ್ಯರಾದ ಡಾ. ಗಂಗೂಬಾಯಿ ಹಾನಗಲ್ ಹಾಗೂ ಪಂ. ಭೀಮಸೇನ ಜೋಶಿ ಅವರಿಗೆ ನೀಡಲು ನಿರ್ಧರಿಸಿತು. ಸಂಸ್ಥೆಯ ಚೇರ್ಮನ್, ಮಾಜಿ ಸಚಿವ ಎಂ.ಎಸ್. ಕಟಗಿ ಹುಬ್ಬಳ್ಳಿಯಲ್ಲಿ ಈ ಮಾಹಿತಿ ನೀಡಿದರು.

2008: ಬೆಂಗಳೂರು ವಿಶ್ವವಿದ್ಯಾಲಯವು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ (ನ್ಯಾಕ್)ನಿಂದ `ಎ' ದರ್ಜೆಯ ಸ್ಥಾನ ಪಡೆಯಿತು. ನ್ಯಾಕ್ ಸಮಿತಿಯು ಮೇ ತಿಂಗಳಲ್ಲಿ ವಿ.ವಿಗೆ ಭೇಟಿ ನೀಡಿ ಅಧ್ಯಯನ ನಡೆಸಿತ್ತು. ಪ್ರತಿಯೊಂದು ವಿಭಾಗಗಳಿಗೂ ಭೇಟಿ ನೀಡಿ ಸೌಲಭ್ಯ ಹಾಗೂ ಕಾರ್ಯ ನಿರ್ವಹಣೆಯ ಪರಿಶೀಲನೆ ನಡೆಸಿತ್ತು.

2008: 60 ಮತ್ತು 70ರ ದಶಕದಲ್ಲಿ ತಮ್ಮ ಗೀತೆಗಳ ಮೂಲಕ ಸಂಗೀತ ಪ್ರಿಯರ ಹೃದಯ  ತಟ್ಟಿದ್ದ ಹಾಗೂ 2 ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದ ನಾರ್ಮನ್ ವೈಟ್ ಫೀಲ್ಡ್ (67) ಲಾಸ್ ಏಂಜಲಿಸಿನಲ್ಲಿ ದೀರ್ಘ ಕಾಲದ ಅಸೌಖ್ಯದ ಬಳಿಕ ನಿಧನರಾದರು. `ವಾರ್',`ಐ ಹಿಯರ್ಡ್ ಇಟ್ ಥ್ರೂ ದಿ ಗ್ರೇಪ್ ವೈನ್' ಹಾಡುಗಳಿಂದ ಖ್ಯಾತರಾಗಿದ್ದ ವೈಟ್ ಫೀಲ್ಡ್ ಮೊಟೌನ್ ಲೇಬಲ್ ಸಂಗೀತಕ್ಕೆ ದೀರ್ಘ ಕಾಲದ ನಿರ್ಮಾಪಕರಾಗಿದ್ದರು. ಅವರು ಬರೆಟ್ ಸ್ಟ್ರಾಂಗ್ ಜತೆಗೂಡಿ ಹಲವು ಗೀತೆ ರಚಿಸಿದ್ದರು. ಅವರು `ಟೆಂಪ್ಟೇಷನ್', ಇತರ ಹಲವು ಸಂಗೀತಗಳಿಗೂ ನಿರ್ಮಾಪಕರಾಗಿದ್ದರು.

2008: ಬೆಂಗಳೂರು ವಿಶ್ವವಿದ್ಯಾಲಯವು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನಿಂದ (ನ್ಯಾಕ್) `ಎ' ದರ್ಜೆಯ ಸ್ಥಾನ ಪಡೆಯಿತು. ನ್ಯಾಕ್ ಸಮಿತಿಯು ಮೇ ತಿಂಗಳಲ್ಲಿ ವಿ.ವಿಗೆ ಭೇಟಿ ನೀಡಿ ಅಧ್ಯಯನ ನಡೆಸಿತ್ತು. ಪ್ರತಿಯೊಂದು ವಿಭಾಗಗಳಿಗೂ ಭೇಟಿ ನೀಡಿ ಸೌಲಭ್ಯ ಹಾಗೂ ಕಾರ್ಯ ನಿರ್ವಹಣೆಯ ಪರಿಶೀಲನೆ ನಡೆಸಿತ್ತು.

2007: ಥಾಯ್ಲೆಂಡಿನ ಫುಕೆಟ್ ದ್ವೀಪದಲ್ಲಿ ಒನ್-ಟು-ಗೋ ಕಂಪೆನಿಗೆ ಸೇರಿದ ವಿಮಾನ ಭೂ ಸ್ಪರ್ಶ ಮಾಡುತ್ತಿದ್ದಾಗ ನಿಲ್ದಾಣದಲ್ಲಿಯೇ ಅಪಘಾತಕ್ಕೆ ಈಡಾಗಿ 87ಕ್ಕೂ ಹೆಚ್ಚು ಜನರು ಮೃತರಾಗಿ ಇತರ 40 ಜನ ಕಣ್ಮರೆಯಾದರು. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ವಿಮಾನ ಭೂ ಸ್ಪರ್ಶ ಮಾಡುತ್ತಿದ್ದಾಗ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ಸಂಭವಿಸಿತು. ವಿಮಾನದಲ್ಲಿ ಒಟ್ಟು 123 ಪ್ರಯಾಣಿಕರು ಮತ್ತು ಐವರು ಸಿಬ್ಬಂದಿ ಇದ್ದರು.

2007: ಪಾಕ್ ಚುನಾವಣಾ ಆಯೋಗವು ಅಧ್ಯಕ್ಷೀಯ ಚುನಾವಣಾ ನಿಯಮಾವಳಿಗಳಿಗೆ ತಿದ್ದುಪಡಿ ತರುವ ಮೂಲಕ ಪರ್ವೇಜ್ ಮುಷರಫ್ ಅವರ ಮರು ಆಯ್ಕೆಗೆ ಇರುವ ಅಡೆತಡೆಗಳನ್ನು ನಿವಾರಿಸಿದೆ ಎಂದು ಸರ್ಕಾರಿ ಸಚಿವಾಲಯ ಪ್ರಕಟಿಸಿತು. ಅಧ್ಯಕ್ಷೀಯ ಚುನಾವಣಾ ನಿಯಮಗಳ ಪ್ರಕಾರ ಸಂಸತ್ ಸದಸ್ಯತ್ವದಿಂದ ವ್ಯಕ್ತಿಯನ್ನು ಅನರ್ಹಗೊಳಿಸುವ ಸಂದರ್ಭದಲ್ಲಿ 63ನೇ ಕಾಯ್ದೆಯನ್ನು ಬಳಸಲಾಗುತ್ತಿತ್ತು. ತಿದ್ದುಪಡಿ ಪ್ರಕಾರ 63ನೇ ಕಾಯ್ದೆಯು ಅಧ್ಯಕ್ಷರಿಗೆ ಅನ್ವಯವಾಗುವುದಿಲ್ಲ.

2007: ಮೈಸೂರು ಮೂಲದ ಚಿತ್ರ ನಿರ್ದೇಶಕ ಸೇನಾನಿ ಹೆಗಡೆ ಅವರು ಸೀಳು ನಾಯಿಗಳ ಕುರಿತು ನಿರ್ಮಿಸಿದ `ವೈಲ್ಡ್ ಡಾಗ್ ಡೈರೀಸ್' ಚಿತ್ರಕ್ಕೆ `ಅತ್ಯುತ್ತಮ ಸಿಎಂಎಸ್ ವಾತಾವರಣ 2007 ಚಿತ್ರೋತ್ಸವ' ಪ್ರಶಸ್ತಿ ಮತ್ತು 1.50 ಲಕ್ಷ ರೂಪಾಯಿ ನಗದು ಬಹುಮಾನ ದೊರಕಿತು. ಸೇನಾನಿ ಅವರು ಎಸ್. ಕೃಪಾಕರ್ ಜತೆಗೂಡಿ ಬಂಡಿಪುರ ರಾಷ್ಟ್ರೀಯ ಉದ್ಯಾನದಲ್ಲಿನ ಸೀಳು ನಾಯಿಗಳ ನಡವಳಿಕೆ ಕುರಿತು ದಶಕಗಳ ಕಾಲ ನಿರಂತರ ಅಧ್ಯಯನ ನಡೆಸಿ ಈ ಚಿತ್ರ ನಿರ್ಮಿಸಿದ್ದಾರೆ. ಸುಮಾರು 50 ನಿಮಿಷಗಳ ಈ ಚಿತ್ರಕ್ಕೆ `ಅತ್ಯುತ್ತಮ ಕಥೆ ನಿರೂಪಣೆ' ಪ್ರಶಸ್ತಿಯೂ ದೊರಕಿತು.

2007:  ಭಾರತದ ವಿಶ್ವನಾಥನ್ ಆನಂದ್ ಅವರು ಮೆಕ್ಸಿಕೋದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಜಂಟಿ ಆಗ್ರಸ್ಥಾನದಲ್ಲಿ ಮುಂದುವರಿದರು. ಮೂರನೇ ಸುತ್ತಿನ ಪಂದ್ಯದಲ್ಲಿ ಕೆಲವೊಂದು ಆತಂಕದ ಕ್ಷಣಗಳನ್ನು ಎದುರಿಸಿದರೂ ಆನಂದ್ ಸಾಂಪ್ರದಾಯಿಕ ಎದುರಾಳಿ ರಷ್ಯಾದ ವ್ಲಾದಿಮೀರ್  ಕ್ರಾಮ್ನಿಕ್ ಜೊತೆ ಡ್ರಾ ಸಾಧಿಸುವಲ್ಲಿ ಯಶಸ್ವಿಯಾದರು.

2006: ಇಸ್ಲಾಂ ಧರ್ಮದ ಬಗ್ಗೆ ತಾವು ಆಡಿದ ಮಾತುಗಳಿಗೆ ವಿಶ್ವದಾದ್ಯಂತ ಮುಸ್ಲಿಮರಿಂದ ವ್ಯಾಪಕ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೋಪ್ 16ನೇ ಬೆನೆಡಿಕ್ಟ್ ಅವರು ಮುಸ್ಲಿಂ ಸಮುದಾಯದ ಕ್ಷಮೆ ಯಾಚಿಸಿದರು. `ಇಸ್ಲಾಂ ಧರ್ಮದ ಬಗ್ಗೆ ಆಡಿದ ಮಾತುಗಳಿಂದ ನೋವಾಗಿದ್ದರೆ ಕ್ಷಮಿಸಿ. ಮುಸ್ಲಿಮರು ತಮ್ಮ ಧರ್ಮದ ಮೇಲೆ ಹೊಂದಿರುವ ನಂಬಿಕೆಯನ್ನು ಗೌರವಿಸುತ್ತೇನೆ. ನನ್ನ ಮಾತುಗಳ `ನೈಜ ಅರ್ಥವನ್ನು' ತಿಳಿದುಕೊಳ್ಳಬೇಕು' ಎಂದು ಪೋಪ್ ಬೆನೆಡಿಕ್ಟ್ ಕೋರಿರುವುದಾಗಿ ವ್ಯಾಟಿಕನ್ ತಿಳಿಸಿತು. ಜರ್ಮನಿಯ ರೆಗೆನ್ಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಪೋಪ್ ಅವರು `ಜಿಹಾದ್' ಅಥವಾ `ಪವಿತ್ರಯುದ್ಧ'ಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಸ್ತಾಪವು ಇಸ್ಲಾಂ ಬಗೆಗಿನ ಟೀಕೆಯಾಗಿದೆ ಎಂದು ಹೇಳಿ ವಿಶ್ವದಾದ್ಯಂತ ಖಂಡನೆ ವ್ಯಕ್ತಪಡಿಸಿದ ಮುಸ್ಲಿಂ ನಾಯಕರು ಪೋಪ್ ಕ್ಷಮೆಯಾಚನೆಗೆ ಆಗ್ರಹಿಸಿದ್ದರು.

1987: ಭೂಮಿಯ ಓಝೋನ್ ಪದರ ರಕ್ಷಣೆ ಉದ್ದೇಶದ ಒಪ್ಪಂದ `ಮಾಂಟ್ರಿಯಲ್ ಪ್ರೊಟೊಕಾಲ್' ಗೆ ಎರಡು ಡಜನ್ ರಾಷ್ಟ್ರಗಳು ಸಹಿ ಹಾಕಿದವು. 2000ದ ವೇಳೆಗೆ ಹಾನಿಕಾರಕ ರಾಸಾಯನಿಕ ವಸ್ತುಗಳ ಮೂಲಕ ಉಂಟಾಗುವ `ಹೊಗೆ'ಗಳನ್ನು ಕಡಿಮೆಗೊಳಿಸಲು ಈ ಒಪ್ಪಂದ ರಾಷ್ಟ್ರಗಳಿಗೆ ಕರೆ ನೀಡಿತು.

1978: ಇರಾನಿನಲ್ಲಿ ಭೂಕಂಪ. 25,000 ಮಂದಿ ಸಾವು.

1977: ಭಾರತದ ಖ್ಯಾತ ಶಾಸ್ತ್ರೀಯ ಸಂಗೀತಗಾರರಾದ ಕೇಸರಭಾಯಿ ಕೇರ್ಕರ್ ನಿಧನರಾದರು.

1932: ಮಲೇರಿಯಾ ಹರಡಲು ಸೊಳ್ಳೆಗಳು ಕಾರಣ ಎಂದು ಸಾಬೀತು ಪಡಿಸಿದ ವೈದ್ಯ ರೊನಾಲ್ಡ್ ರಾಸ್ (13-5-1857ರಿಂದ 16-9-1932) ಈದಿನ ಲಂಡನ್ನಿನಲ್ಲಿ ನಿಧನರಾದರು. ಬ್ರಿಟಿಷ್ ಸೈನ್ಯದಲ್ಲಿ ಜನರಲ್ ಆಗಿದ್ದ ಸರ್. ಸಿ.ಸಿ.ಜಿ. ರಾಸ್ ಅವರ ಮಗನಾದ ರೊನಾಲ್ಡ್ ರಾಸ್ ಲಂಡನ್ನಿನ ಬಾರ್ಥೊಲೋಮೊ ಆಸ್ಪತೆಯಲ್ಲಿ ಭಾರತೀಯ ವೈದ್ಯಕೀಯ ಸೇವೆಗೆ ಸೇರಿ 1892ರಲ್ಲಿ ಮಲೇರಿಯಾ ಬಗ್ಗೆ ಅಧ್ಯಯನ ಶುರು ಮಾಡಿದರು. 1894ರಲ್ಲಿ ಅವರು ಮಲೇರಿಯಾ ಹರಡುವಲ್ಲಿ ಸೊಳ್ಳೆಗಳ ಪಾತ್ರವಿದೆ ಎಂದು ಪತ್ತೆಹಚ್ಚಿದರು. ನಂತರ ಭಾರತ ಮತ್ತು ಆಫ್ರಿಕದಲ್ಲಿ ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ಅನಾಫಿಲಿಸ್ ಸೊಳ್ಳೆಯಿಂದ ಮಲೇರಿಯಾ ಹರಡುತ್ತದೆ ಎಂದು ಖಚಿತ ಪಡಿಸಿದರು. ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಈ ಮಹತ್ತರ ಕೊಡುಗೆಗಾಗಿ ಅವರಿಗೆ 1902ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು.

1923: ಸಿಂಗಪುರದ ಮಾಜಿ ಪ್ರಧಾನಿ ಲೀ ಕ್ವಾನ್ ಯೂ ಜನ್ಮದಿನ. 1959ರಿಂದ 1990ರವರೆಗೆ ಪ್ರಧಾನಿಯಾಗಿದ್ದ ಅವರು ಸಿಂಗಪುರವನ್ನು ವಸಾಹತುಶಾಹಿಯ ಕಪಿಮುಷ್ಠಿಯಿಂದ ಬಿಡಿಸಿ ಇಂದಿನ ಉನ್ನತ ತಂತ್ರಜ್ಞಾನದ ರಾಷ್ಟ್ರವನ್ನಾಗಿ ಅಭಿವೃದ್ಧಿ ಪಡಿಸಿದರು.

1916: ಖ್ಯಾತ ಸಂಗೀತ ವಿದುಷಿ ಎಂ.ಎಸ್. ಸುಬ್ಬುಲಕ್ಷ್ಮಿ(1916-2004) ಜನ್ಮದಿನ. ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರವು ಅವರಿಗೆ `ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಿದೆ. 2004ರ ಡಿಸೆಂಬರ್ 11ರಂದು ಅವರು ನಿಧನರಾದರು.

1913: ಬ್ರಿಟಿಷರಿಂದ ಗಾಂಧೀಜಿ ಪತ್ನಿ ಕಸ್ತೂರಬಾ ಬಂಧನ.

1835: ಎಚ್ ಎಂ ಎಸ್ ಬೀಗಲ್ ನೌಕೆಯ ಮೂಲಕ ಬ್ರಿಟಿಷ್ ನಿಸರ್ಗ ಸಂಶೋಧಕ ಚಾರ್ಸ್ ಡಾರ್ವಿನ್ ದಕ್ಷಿಣ ಆಫ್ರಿಕದ ಪಶ್ಚಿಮಕ್ಕೆ ಸಮಭಾಜಕ ವೃತ್ತದಿಂದ 600 ಮೈಲು ದೂರದಲ್ಲಿರುವ ಗ್ಯಾಲಾಪಗೋಸ್ ಆರ್ಕಿಪೆಲಾಗೊ ದ್ವೀಪಗಳ ಗುಂಪಿಗೆ ಆಗಮಿಸಿದ. ಗ್ಯಾಲಾಪಗೋಸ್ ನ ಜೀವಸಂಕುಲ ಕುರಿತು ಐದು ವಾರಗಳ ಅಧ್ಯಯನ ನಡೆಸಿದ. ಬೃಹತ್ ಆಮೆಗಳು ಒಂದೊಂದು ದ್ವೀಪದಲ್ಲಿ ಒಂದೊಂದು ಬಗೆ ಇದ್ದುದನ್ನು ಆತ ಗಮನಿಸಿದ. ಇವು `ಸಹಜ ಆಯ್ಕೆ'ಯ ಡಾರ್ವಿನ್ ಸಿದ್ಧಾಂತಕ್ಕೆ ಕಾಣಿಕೆ ಸ್ಲಲಿಸಿದವು.

1810: ಸ್ಪ್ಯಾನಿಷ್ ಆಳ್ವಿಕೆಯಿಂದ ಮುಕ್ತಿ ಪಡೆಯುವ ಸಲುವಾಗಿ ಮೆಕ್ಸಿಕನ್ ಕ್ರಾಂತಿ ಆರಂಭವಾಯಿತು. ಈದಿನವನ್ನು ಮೆಕ್ಸಿಕೊದ ರಾಷ್ಟ್ರೀಯ ದಿನವಾಗಿ ಆಚರಿಸಲಾಗುತ್ತಿದೆ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment