ನಾನು ಮೆಚ್ಚಿದ ವಾಟ್ಸಪ್

Saturday, September 1, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 01


ಇಂದಿನ ಇತಿಹಾಸ History Today  ಸೆಪ್ಟೆಂಬರ್ 01

2018: ಜಕಾರ್ತ: ಇಂಡೋನೇಷ್ಯದ ಜಕಾರ್ತದಲ್ಲಿ ನಡೆಯುತ್ತಿರುವ ೨೦೧೮ರ ಏಷ್ಯನ್ ಕ್ರೀಡಾಕೂಟದಲ್ಲಿ ೨೨ರ ಹರೆಯದ ಭಾರತೀಯ ಯೋಧ ಅಮಿತ್ ಪಂಘಾಲ್ ಅವರು  ಮಲ್ಲಯುದ್ಧದಲ್ಲಿ (ಬಾಕ್ಸಿಂಗ್) ಭಾರತಕ್ಕೆ ಸ್ವರ್ಣ ಪದಕ ತಂದು ಕೊಟ್ಟರು. ಸ್ವರ್ಣ ಪದಕದ ಸಾಧನೆಯೊಂದಿಗೆ ಪಂಘಲ್ ಅವರು ಏಷಿಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ೮ನೇ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಒಲಿಂಪಿಕ್ ಮತ್ತು ಏಷ್ಯನ್ ಚಾಂಪಿಯನ್ ಹಸನ್ ಬಾಯ್ ದುಸ್ಮತೊವ್ ಅವರನ್ನು ಪರಾಭವಗೊಳಿಸುವ ಮೂಲಕ ಅಮಿತ್ ಅವರು ಸ್ವರ್ಣ ಸಾಧನೆ ಮಾಡಿದರು. ೨೨ರ ಹರೆಯದ ಸೇನಾ ಯೋಧ ದುಸ್ಮತೊವ್ ಅವರನ್ನು ಎದುರಿಸಲು ಫೈನಲ್ಗೆ ಬಂದ ಏಕೈಕ ಭಾರತೀಯನಾಗಿದ್ದರು. ಕಳೆದ ವರ್ಷ ದುಸ್ಮತೊವ್ ಅವರು ಪಂಘಲ್ ಅವರನ್ನು ವಿಶ್ವ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಪರಾಭವಗೊಳಿಸಿದ್ದರು. ಬಾರಿ ಪಂಘಲ್ ಅವರು ಸೋಲಿನ ಸೇಡು ತೀರಿಸಿಕೊಂಡರುಏಷ್ಯನ್ ಕ್ರೀಡಾಕೂಟದಲ್ಲಿ ಚೊಚ್ಚಲ ಪ್ರದರ್ಶನ ನೀಡಿದ ಅಮಿತ್ ಅವರು ಉಜ್ಬೆಕ್ ಚಾಂಪಿಯನ್ನನ್ನು ಪರಾಭವಗೊಳಿಸುವಲ್ಲಿ ಅಪ್ರತಿಮ ಕೌಶಲ್ಯ ತೋರಿದರು. ವಿಶೇಷವಾಗಿ ಸ್ವಯಂ ರಕ್ಷಣೆಯಲ್ಲಿ ಎದುರಾಳಿಯನ್ನು ಅವರು ಮೀರಿಸಿದರು.  ಕಳೆದ ವರ್ಷದ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ದುಸ್ಮತೊವ್ ಅವರು ರಜತ ಪದಕ ಗೆದ್ದಿದ್ದರು.

2018: ನವದೆಹಲಿ: ಭಾರತೀಯ ಅಂಚೆ ಇಲಾಖೆಯ ಪಾವತಿ ಬ್ಯಾಂಕ್ ಸೇವೆಗಳಿಗೆ (ಐಪಿಪಿಬಿ) ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಚಾಲನೆ ನೀಡಿದರು. ಭಾರತೀಯ ಅಂಚೆ ಇಲಾಖೆಯ .೫೫ ಲಕ್ಷ ಅಂಚೆ ಕಚೇರಿಗಳು ಮತ್ತು ಲಕ್ಷ ಅಂಚೆ ವಿತರಕರು (ಪೋಸ್ಟ್ ಮ್ಯಾನ್) ಮತ್ತು ಗ್ರಾಮೀಣ ಡಾಕ್ ಸೇವಕರು ಇನ್ನು ಮುಂದೆ ಪ್ರತಿಯೊಬ್ಬ ನಾಗರಿಕನ ಮನೆಗೆ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸವಲತ್ತನ್ನು ತರಲಿದ್ದಾರೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಇತರ ಬ್ಯಾಂಕುಗಳಂತೆಯೇ ಕಾರ್ಯ ನಿರ್ವಹಿಸುತ್ತದೆ. ಆದರೆ ಅದರ ಚಟುವಟಿಕೆ ಸಣ್ಣ ಪ್ರಮಾಣದಲ್ಲಿ ಇರುತ್ತದೆ. ಹಾಗೆಯೇ ಸಾಲ ಕೊಡುವರಿಸ್ಕ್ನ್ನು ಅದು ತೆಗೆದುಕೊಳ್ಳುವುದಿಲ್ಲ. ಠೇವಣಿ ಪಡೆಯುವುದು ಸೇರಿದಂತೆ ಬ್ಯಾಂಕಿಂಗ್ ಕಾರ್ಯಾಚರಣೆಯ ಎಲ್ಲ ಸೇವೆಗಳನ್ನೂ ಅದು ಒದಗಿಸುತ್ತದೆ. ಆದರೆ ಸಾಲ ಕೊಡುವುದಿಲ್ಲ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ನೀಡುವುದಿಲ್ಲ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಲಕ್ಷ ರೂಪಾಯಿವರೆಗೆ ಠೇವಣಿ ಸ್ವೀಕರಿಸುತ್ತದೆ, ಹಣ, ಸರಕಿನ ರವಾನೆ ಸೇವೆಗಳನ್ನು ಒದಗಿಸುತ್ತದೆ, ಮೊಬೈಲ್ ಪಾವತಿಗಳು/ ವರ್ಗಾವಣೆಗಳು/ ಖರೀದಿಗಳು ಮತ್ತು ಎಟಿಎಂ/ ಡೆಬಿಟ್ ಕಾರ್ಡ್, ನೆಟ್ ಬ್ಯಾಂಇಕಿಂಗ್ ಮತ್ತು ಮೂರನೇಯವರ ಹಣ ವರ್ಗಾವಣೆಗಳಂತಹ ಸೇವೆಗಳನ್ನು ನೀಡುತ್ತದೆ೬೫೦ ಶಾಖೆಗಳು ಮತ್ತು ,೨೫೦ ಪ್ರವೇಶ ಕೇಂದ್ರಗಳಲ್ಲಿ ಐಪಿಪಿಬಿ ಸೇವೆಗಳು ಲಭಿಸುತ್ತವೆ ಎಂದು ಸಂಪರ್ಕ ಸಂಚಿವ ಮನೋಜ್ ಸಿನ್ಹ ಹೇಳಿದರು. ಒಂದು ಲಕ್ಷ ರೂಪಾಯಿ ಮೀರಿದ ಯಾವುದೇ ಖಾತೆಯ ಠೇವಣಿ ತತ್ ಕ್ಷಣವೇ ಅಂಚೆ ಕಚೇರಿ ಉಳಿತಾಯ ಖಾತೆಯಾಗಿ ಬದಲಾಗುವುದು ಎಂದು ಅವರು ನುಡಿದರು. ಐಪಿಪಿಬಿಯ ಸ್ವಾಮ್ಯವನ್ನು ಸರ್ಕಾರ ಹೊಂದಿರುತ್ತದೆ. ಮತ್ತು ಅಂಚೆ ಇಲಾಖೆಯ ಅಡಿಯಲ್ಲಿ ಸ್ಥಾಪನೆಗೊಂಡಿರುವ ಇದು ಕೌಂಟರ್ ಸೇವೆಗಳು, ಮೈಕ್ರೋ ಎಟಿಎಂಗಳು, ಮೊಬೈಲ್ ಬ್ಯಾಂಕಿಂಗ್ ಆಪ್, ಮೆಸ್ಸೇಜ್ ಮತ್ತು  ಸಂವಹನಾತ್ಮಕ ಧ್ವನಿ ಸೇವೆಗಳು ಸೇರಿದಂತೆ ಬಹುವಿಧ ಸೇವೆಗಳನ್ನು ಜನರಿಗೆ ನೀಡಲಿದೆ. ಐಪಿಪಿಬಿ ತಾಂತ್ರಿಕ ಕೌಶಲ್ಯಗಳನ್ನು ಬಳಸಿಕೊಳ್ಳಲಿದೆ. ಆಧಾರ್ ಬಳಸಿ ಖಾತೆ ತೆರೆಯಲಿದೆ. ಕ್ಯೂಆರ್ ಕಾರ್ಡ್, ಬಯೋಮೆಟ್ರಿಕ್ ವಿಧಾನಗಳು ಗ್ರಾಹಕರ ದೃಢೀಕರಣವನ್ನು ಮಾಡಬೇಕಾಗಿರುವುದರಿಂದ ಗ್ರಾಮೀಣ ಡಾಕ್ ಸೇವಕರಿಗೆ ವಹಿವಾಟು ನಡೆಸಲು ಸ್ಮಾರ್ಟ್ ಫೋನ್, ಬಯೋಮೆಟ್ರಿಕ್ ಸಾಧನಗಳನ್ನು  ನೀಡಲಾಗುತ್ತದೆ. ಉಳಿತಾಯ ಖಾತೆಗಳಿಗೆ ಶೇಕಡಾ ೪ರಷ್ಟು ಬಡ್ಡಿಯನ್ನು ಅದು ನೀಡುತ್ತದೆ. ಐಪಿಪಿಬಿ ಮೇಲಿನ ವೆಚ್ಚವನ್ನು ಶೇಕಡಾ ೮೦ರಷ್ಟು ಅಂದರೆ ,೪೩೫ ಕೋಟಿ ರೂಪಾಯಿಗಳಿಗೆ ಏರಿಸುವ ಮೂಲಕ ಮಾರುಕಟ್ಟೆಯಲ್ಲಿ ಏರ್ ಟೆಲ್ ಪೇಮೆಂಟ್ ಬ್ಯಾಂಕ್, ಪೇಟಿಎಂ ಪೇಮೆಂಟ್ ಬ್ಯಾಂಕ್ ಇತ್ಯಾದಿಗಳ ಜೊತೆ ಪೈಪೋಟಿ ನಡೆಸುವ ಸಾಮರ್ಥ್ಯವನ್ನು ಒದಗಿಸಲು ಸಚಿವ ಸಂಪುಟ ವಾರಾರಂಭದಲ್ಲಿ ಒಪ್ಪಿಗೆ ನೀಡಿತ್ತು.

2018: ನವದೆಹಲಿ: ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಮುಂದಿನ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಲಿದ್ದಾರೆ. ಮುಂದಿನ ಸಿಜೆಐ ಕುರಿತ ಎಲ್ಲ ಊಹಾಪೋಹಗಳ ಮಧ್ಯೆ, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ಪರಂಪರೆಗೆ ಅನುಗುಣವಾಗಿ ಹಿರಿತನದ ಸೂತ್ರಕ್ಕೆ ಮಣೆ ಹಾಕಿದ್ದು, ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರ ಹೆಸರಿಗೆ ಸಮ್ಮತಿಯ ಮುದ್ರೆ ಒತ್ತಿದ್ದಾರೆ. ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಗೊಗೋಯ್ ಅವರ ಹೆಸರನ್ನು ಅನುಮೋದಿಸಿದ್ದಾರೆ ಮತತು ಶಿಫಾರಸನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ಕಳುಹಿಸುವ ಪತ್ರಗಳನ್ನು ಅಂತಿಮಗೊಳಿಸುತ್ತಿದ್ದಾರೆ ಎಂದು ಮೂಲಗಳು ಹೇಳಿದವು. ಸಿಜೆಐ ಅವರ ಪತ್ರವು ನಿರಂತರತೆಯನ್ನು ಉಳಿಸಿಕೊಂಡಿದೆ. ಮುಂದಿನ ಸಿಜೆಐ ಯಾರು ಎಂಬ ಬಗ್ಗೆ ಯಾವುದೇ ಅಚ್ಚರಿಗಳು ಇರುವುದಿಲ್ಲ. ಸಂಪ್ರದಾಯವನ್ನು ಅನುಸರಿಸಲಾಗಿದೆಎಂದು ಸುಪ್ರೀಂಕೋರ್ಟಿನ ಮೂಲವೊಂದು ತಿಳಿಸಿತು. ಸಂಪ್ರದಾಯದ ಪ್ರಕಾರ ಸುಪ್ರೀಂಕೋರ್ಟಿನ ಅತ್ಯಂತ ಹಿರಿಯ ನ್ಯಾಯಮೂರ್ತಿಯವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗುವುದು. ನ್ಯಾಯಮೂರ್ತಿ ಗೊಗೋಯ್ ಅವರು ತಮ್ಮ ಹಿರಿತನದ ಕಾರಣದಿಂದ ಸಿಜೆಐ ಹುದ್ದೆಯ ಅಭ್ಯರ್ಥಿಗಳ ಸಾಲಿನಲ್ಲಿ ಮುಂದಿದ್ದರು. ಈ ವಾರಾರಂಭದಲ್ಲಿ ಕಾನೂನು ಸಚಿವಾಲಯವು ನ್ಯಾಯಮೂರ್ತಿ ಮಿಶ್ರ ಅವರಿಗೆ ತಮ್ಮ ಉತ್ತರಾಧಿಕಾರಿಯನ್ನು ಸೂಚಿಸುವಂತೆ ಔಪಚಾರಿಕ ಪತ್ರ ಕಳುಹಿಸಿತ್ತುಸಿಜೆಐ ಅವರು ತಮ್ಮ ಉತ್ತರದಲ್ಲಿ ನ್ಯಾಯಮೂರ್ತಿ ಗೊಗೋಯ್ ಅವರನ್ನು ಹೆಸರಿಸುವ ಮೂಲಕ ಶಿಫಾರಸು ಮಾಡಿದರು. ನ್ಯಾಯಮೂರ್ತಿ ಮಿಶ್ರ ಅವರು ಅಕ್ಟೋಬರ್ ೨ರಂದು ನಿವೃತ್ತರಾಗುತ್ತಿದ್ದಾರೆ. ಸಂಪ್ರದಾಯದಂತೆ ಹೊರಹೋಗುತ್ತಿರುವ ಸಿಜೆಐ ತಮ್ಮ ಅವಧಿ ಮುಗಿಯುವ ಒಂದು ತಿಂಗಳು ಮುಂಚಿತವಾಗಿ ಉತ್ತರಾಧಿಕಾರಿ ಬಗ್ಗೆ ಶಿಫಾರಸು ಪತ್ರವನ್ನು ಕಳುಹಿಸಬೇಕು೧೯೯೩ರ ಎರಡನೇ ನ್ಯಾಯಾಧೀಶರ ಪ್ರಕರಣದಲ್ಲಿ ಸಿಜೆಐ ಹುದ್ದೆಗೆ ಸುಪ್ರೀಂಕೋರ್ಟಿನ ಅತ್ಯಂತ ಹಿರಿಯ ನ್ಯಾಯಮೂರ್ತಿಯನ್ನು ನೇಮಿಸಬೇಕು ಎಂದು ಬಹುಮತದ ತೀರ್ಪು ನೀಡಲಾಗಿತ್ತು. ನ್ಯಾಯಮೂರ್ತಿ ಗೊಗೋಯ್ ಅವರು ವರ್ಷ ಜನವರಿಯಲ್ಲಿ ಅಭೂತಪೂರ್ವ ಪತ್ರಿಕಾಗೋಷ್ಠಿ ನಡೆಸಿದ್ದ ಸುಪ್ರೀಂಕೋರ್ಟಿನ ನಾಲ್ವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದು, ನಾಲ್ವರೂ ನ್ಯಾಯಮೂರ್ತಿಗಳು ಸುಪ್ರೀಂಕೋರ್ಟಿನ ಆಡಳಿತ ಮತ್ತು ಸ್ವಾತಂತ್ರ್ಯದ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದರು. ಹಿಂದೆಂದೂ ಘಟಿಸದೇ ಇದ್ದ ಘಟನೆಯ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಮಿಶ್ರ ಅವರು ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಗೊಗೋಯ್ ಅವರ ಹೆಸರನ್ನು ಶಿಫಾರಸು ಮಾಡಬಹುದೇ ಎಂಬ ಊಹಾಪೋಹಗಳು ಎದ್ದಿದ್ದವು. ಗೊಗೋಯ್ ಅವರ ಬದಲಿಗೆ ಬೇರೆ ಕಿರಿಯ ನ್ಯಾಯಮೂರ್ತಿಯನ್ನು ಸಿಜೆಐ ಸ್ಥಾನಕ್ಕೆ ಶಿಫಾರಸು ಮಾಡಬಹುದು ಎಂಬ ವದಂತಿಯೂ ಹರಡಿತ್ತು. ನ್ಯಾಯಮೂರ್ತಿ ಗೊಗೋಯ್ ಅವರು ಅಸ್ಸಾಮಿನವರಾಗಿದ್ದು, ಅಸ್ಸಾಮಿನಲ್ಲಿ ನೆಲೆಸಿರುವ ಅಕ್ರಮ ವಿದೇಶೀಯರನ್ನು ಗುರುತಿಸುವ ಸಲುವಾಗಿ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯ ಉಸ್ತವಾಗಿ ನೋಡಿಕೊಳ್ಳುವ ವಿಶೇಷ ಪೀಠದ ಮುಖ್ಯಸ್ಥರಾಗಿದ್ದಾರೆಸುಪ್ರೀಂಕೋರ್ಟ್ ನೀಡಿದ ಹಲವಾರು ಪ್ರಮುಖ ತೀರ್ಪುಗಳಲ್ಲಿ ಗೊಗೋಯ್ ಅವರ ಕಾಣಿಕೆ ಇದೆ. ಲೋಕಪಾಲ ಮತ್ತು ಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದ ಪ್ರಕರಣವನ್ನು ಅವರ ಪೀಠವೇ ಪರಿಶೀಲಿಸುತ್ತಿದೆ. ತಮ್ಮ ತೀರ್ಪೊಂದರಲ್ಲಿ ನ್ಯಾಯಮೂರ್ತಿ ಗೊಗೋಯ್ ಅವರು ರಾಜಕಾರಣಿಗಳನ್ನು ವೈಭವೀಕರಿಸುವ ಸಾರ್ವಜನಿಕ ಜಾಹೀರಾತುಗಳ ಮೇಲೆ ನಿಯಂತ್ರಣ ಹೇರಿದ್ದರು ಮತ್ತು ಬಗ್ಗೆ ಹೊಸ ನಿಯಮಾವಳಿಗಳನ್ನು ರಚಿಸಿದ್ದರು. ನ್ಯಾಯಮೂರ್ತಿ ಕರ್ಣನ್ ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ನ್ಯಾಯಮೂರ್ತಿ ಗೊಗೋಯ್ ಅವರು ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಅವರ ಜೊತೆಗೆ ನ್ಯಾಯಾಂಗದ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಅಗತ್ಯ ಸುಧಾರಣೆಗಳನ್ನು ತರುವ ಅಗತ್ಯವನ್ನು ಪ್ರತಿಪಾದಿಸಿದ್ದರು. ಇನ್ನೊಂದು ತೀರ್ಪಿನಲ್ಲಿ ನ್ಯಾಯಮೂರ್ತಿ ಗೊಗೋಯ್ ಅವರು ಹಿಂದುಳಿದಿರುವಿಕೆಯನ್ನು ನಿರ್ಣಯಿಸುವ ಮಾನದಂಡವನ್ನು ಪರಿಷ್ಕರಿಸುವಂತೆ ಮತ್ತು ನಿಜವಾಗಿ ಹಿಂದುಳಿದವರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೂ ಅನುಕೂಲಗಳು ಲಭಿಸುವಂತೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸಲಹೆ ಮಾಡಿದ್ದರು.

2018: ನವದೆಹಲಿ: ಸೆಪ್ಟೆಂಬರ್ ೫ರಂದು ನ್ಯಾಯಮೂರ್ತಿಗಳಾದ ಆರ್. ಭಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನು ಒಳಗೊಂಡ ಸರ್ವ ಮಹಿಳಾ ಪೀಠವು ಪ್ರಕರಣಗಳನ್ನು ಆಲಿಸುವುದರೊಂದಿಗೆ ಸುಪ್ರೀಂಕೋರ್ಟ್ ವಾರ ಇತಿಹಾಸವನ್ನು ಪುನರಾವರ್ತಿಸಲಿದೆ. ೨೦೧೩ರಲ್ಲಿ ನ್ಯಾಯಮೂರ್ತಿಗಳಾದ ಗ್ಯಾನ ಸುಧಾ ಮಿಶ್ರ ಮತ್ತು ರಂಜನಾ ಪ್ರಕಾಶ್ ದೇಸಾಯಿ ಅವರು ಒಟ್ಟಾಗಿ ಕುಳಿತು ಪ್ರಕರಣಗಳನ್ನು  ಆಲಿಸುವ ಮೂಲಕ ಸುಪ್ರೀಂಕೋರ್ಟಿನಲ್ಲಿ ಪ್ರಕರಣಗಳನ್ನು ಆಲಿಸಿದ ಚೊಚ್ಚಲ ಸರ್ವ ಮಹಿಳಾ ಪೀಠ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆಗಸ್ಟ್ ತಿಂಗಳಲ್ಲಿ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ಸುಪ್ರೀಂಕೋರ್ಟ್ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಮೂವರು ಹಾಲಿ ಮಹಿಳಾ ನ್ಯಾಯಮೂರ್ತಿಗಳನ್ನು ಹೊಂದಿತು. ಸ್ವಾತಂತ್ರ್ಯಾ ನಂತರ ಸುಪ್ರೀಂಕೋರ್ಟ್ ನಾಯಮೂರ್ತಿಯಾದ ೮ನೇ ಮಹಿಳೆ ಅವರಾಗಿದ್ದರು. ಪ್ರಸ್ತುತ ಸುಪ್ರೀಂಕೋರ್ಟಿನ ಹಾಲಿ ಮಹಿಳಾ ನ್ಯಾಯಮೂರ್ತಿಗಳ ಪೈಕಿ ನ್ಯಾಯಮೂರ್ತಿ ಭಾನುಮತಿ ಅವರು ಅತ್ಯಂತ ಹಿರಿಯರಾಗಿದ್ದು, ೨೦೧೪ರ ಆಗಸ್ಟ್ ೧೩ರಂದು ಅವರು ಸುಪ್ರೀಂಕೋರ್ಟಿಗೆ ಬಡ್ತಿ ಪಡೆದಿದ್ದರು. ನ್ಯಾಯಮೂರ್ತಿ ಫಾತಿಮಾ ಬೀವಿ ಅವರು ಸುಪ್ರೀಂಕೋರ್ಟಿನಲ್ಲಿ ನ್ಯಾಯಮೂರ್ತಿ ಹುದ್ದೆಗೆ ಏರಿದ್ದ ಭಾರತದ ಪ್ರಪ್ರಥಮ ಮಹಿಳೆಯಾಗಿದ್ದರು. ಅವರ ಬಳಿಕ ನ್ಯಾಯಮೂರ್ತಿಗಳಾದ ಸುಜಾತಾ ಮನೋಹರ್, ರುಮಾ ಪಾಲ್, ಗ್ಯಾನ ಸುಧಾ ಮಿಶ್ರ, ರಂಜನಾ ಪ್ರಕಾಶ್ ದೇಸಾಯಿ, ಆರ್. ಭಾನುಮತಿ, ಇಂದು ಮಲ್ಹೋತ್ರ ಮತ್ತು ಇತ್ತೀಚೆಗೆ ಇಂದಿರಾ ಬ್ಯಾನರ್ಜಿ ಅವರು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು. ಪೈಕಿ ನ್ಯಾಯಮೂರ್ತಿಗಳಾದ ಫಾತಿಮಾ ಬೀವಿ, ಮನೋಹರ್ ಮತ್ತು ಪಾಲ್ ಸುಪ್ರೀಂಕೋರ್ಟಿನಲ್ಲಿ ಏಕೈಕ ಮಹಿಳಾ ನ್ಯಾಯಮೂರ್ತಿಗಳಾಗಿ ಪೂರ್ಣಾವಧಿ ಸೇವೆ ಸಲ್ಲಿಸಿದರು. ೨೦೧೧ರಲ್ಲಿ ನ್ಯಾಯಮೂರ್ತಿ ದೇಸಾಯಿ ಅವರ ಬಡ್ತಿಯೊಂದಿಗೆ ಸುಪ್ರೀಂಕೋರ್ಟ್ ಇಬ್ಬರು ಹಾಲಿ ಮಹಿಳಾ ನ್ಯಾಯಮೂರ್ತಿಗಳನ್ನು ಹೊಂದಿತು. ನ್ಯಾಯಮೂರ್ತಿ ಬೀವಿ ಅವರು ೧೯೮೯ರಲ್ಲಿ ಅಂದರೆ ೧೯೫೦ರಲ್ಲಿ ಸುಪ್ರೀಂಕೋರ್ಟ್ ರಚನೆಯಾದ ೩೯ ವರ್ಷಗಳ ಬಳಿಕ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಕೇರಳ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ನಿವೃತ್ತರಾದ ಬಳಿಕ ಬೀವಿ ಅವರಿಗೆ ಸುಪ್ರೀಂಕೋರ್ಟಿಗೆ ಬಡ್ತಿ ನೀಡಲಾಗಿತ್ತು. ನ್ಯಾಯಮೂರ್ತಿ ಮನೋಹರ್ ಅವರು ಬಾಂಬೆ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಮುಂದೆ ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾದ ಅವರು ಸುಪ್ರೀಂಕೋರ್ಟಿಗೆ ಬಡ್ತಿ ಪಡೆದು ೧೯೯೪ರ ನವೆಂಬರ್ ೮ರಿಂದ ೧೯೯೯ರ ಆಗಸ್ಟ್ ೨೭ರವರೆಗೂ ಸೇವೆ ಸಲ್ಲಿಸಿದ್ದರು.ನ್ಯಾಯಮೂರ್ತಿ ಪಾಲ್ ಅವರು ಐದು ತಿಂಗಳುಗಳ ಬಳಿಕ ನ್ಯಾಯಮೂರ್ತಿ ಮನೋಹರ್ ಅವರನ್ನು ಅನುಸರಿಸಿದರು. ಅವರು ೨೦೦೦ದ ಜನವರಿ ೨೮ರಿಂದ ೨೦೦೬ರ ಜೂನ್ ೨ರವರೆಗೆ ಸೇವೆ ಸಲ್ಲಿಸಿ ಅತ್ಯಂತ ದೀರ್ಘ ಕಾಲ ಸುಪ್ರೀಂಕೋರ್ಟಿನ ಮಹಿಳಾ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದವರು ಎಂಬ ಹಿರಿಮೆಗೆ ಪಾತ್ರರಾಗಿದ್ದರು. ನ್ಯಾಯಮೂರ್ತಿ ಪಾಲ್ ನಿವೃತ್ತಿಯ ಬಳಿಕ ಮುಂದಿನ ಮಹಿಳಾ ನ್ಯಾಯಮೂರ್ತಿಯ ನೇಮಕಕ್ಕಾಗಿ ಸುಪ್ರೀಂಕೋರ್ಟ್ ವರ್ಷ ಕಾಯಬೇಕಾಯಿತು. ನ್ಯಾಯಮೂರ್ತಿ ಮಿಶ್ರ ಅವರು ಜಾರ್ಖಂಡ್ ಹೈಕೋರ್ಟಿನಿಂದ ಸುಪ್ರೀಂಕೋರ್ಟಿಗೆ ಬಡ್ತಿ ಪಡೆದರು. ಜಾರ್ಖಂಡ್ ಹೈಕೋರ್ಟಿನಲ್ಲಿ ಅವರು ಆಗ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ೨೦೧೦ರ ಏಪ್ರಿಲ್ ೩೦ರಿಂದ ೨೦೧೪ರ ಏಪ್ರಿಲ್ ೨೭ರವರೆಗೆ ಅವರು ಸುಪ್ರೀಂಕೋರ್ಟಿನಲ್ಲಿ ಸೇವೆ ಸಲ್ಲಿಸಿದರು. ನ್ಯಾಯಮೂರ್ತಿ ಮಿಶ್ರ ಅವರು ಸೇವೆಯಲ್ಲಿ ಇದ್ದಾಗಲೇ ನ್ಯಾಯಮೂರ್ತಿ ದೇಸಾಯಿ ಅವರು ಸುಪ್ರೀಂಕೋರ್ಟ್ ಪ್ರವೇಶಿಸಿ ೨೦೧೧ರ ಸೆಪ್ಟೆಂಬರ್ ೧೩ರಿಂದ ೨೦೧೪ರ ಅಕ್ಟೋಬರ್ ೨೯ರವರೆಗೆ ಸೇವೆ ಸಲ್ಲಿಸಿದರು. ೨೦೧೪ರ ಅಕ್ಟೋಬರ್ ೨೯ರಂದು ನ್ಯಾಯಮೂರ್ತಿ ದೇಸಾಯಿ ಅವರ ನಿವೃತ್ತಿಯ ಬಳಿಕ ವರ್ಷ ಏಪ್ರಿಲ್ ೨೭ರಂದು ನ್ಯಾಯಮೂರ್ತಿ ಮಲ್ಹೋತ್ರ ಅವರ ನೇಮಕವಾಗುವವರೆಗೆ ನ್ಯಾಯಮೂರ್ತಿ ಭಾನುಮತಿ ಸುಪ್ರೀಂಕೋರ್ಟಿನಲ್ಲಿ ಏಕೈಕ ಮಹಿಳಾ ನ್ಯಾಯಮೂರ್ತಿಯಾಗಿದ್ದರು. ನ್ಯಾಯಮೂರ್ತಿ ಭಾನುಮತಿ ಅವರು ೨೦೨೦ರ ಜುಲೈ ೧೯ರಂದು ನಿವೃತ್ತರಾಗುವರು.

2018: ತಿರುವನಂತಪುರಂ: ಪ್ರವಾಹ ಪೀಡಿತ ಕೇರಳದಲ್ಲಿ ಜಲಜನ್ಯ ರೋಗಬಾಧೆಗೆ ಒಂದು ತಿಂಗಳಲ್ಲಿ ೨೮ ಮಂದಿ ಸಾವನ್ನಪ್ಪಿದ್ದು ಇದೀಗ ಇಲಿಜ್ವರ ಭೀತಿ ತಲೆದೋರಿತು. ಜನಜನ್ಯ ರೋಗ, ಇಲಿಜ್ವರಕ್ಕೆ ಕಳೆದ ಒಂದು ವಾರದಲ್ಲಿ ಕನಿಷ್ಠ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿದವು. ಇಲಿಜ್ವರ ಹಾಗೂ ಜಲಜನ್ಯ ರೋಗಗಳ ಬಗ್ಗೆ ಎಚ್ಚರಿಕೆ ನೀಡಿರುವ ರಾಜ್ಯ ಆರೋಗ್ಯ ಇಲಾಖೆಯು ಹೆಚ್ಚುವರಿ ಔಷಧ ಒದಗಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮನವಿ ಮಾಡಿತು. ಪ್ರಾಣಿಗಳಿಂದ ಮಾನವರಿಗೆ ಹರಡುವಂತಹ ಇಲಿಜ್ವರ ಪ್ರವಾಹ ಪ್ರದೇಶದಲ್ಲಿ ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ. ಸೋಂಕು ಪೀಡಿತ ಇಲಿ ಅಥವಾ ಇತರ ದಂಶಕಗಳ ಮೂತ್ರ ನೀರಿನಲ್ಲಿ ಸೇರಿಕೊಂಡು ಸುಲಭವಾಗಿ ಮಾನವರಿಗೆ ತಗುಲುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ವಯಸ್ಸಾದವರು, ಯಕೃತ್ತು, ಮೂತ್ರಕೋಶದ ಸಮಸ್ಯೆ ಇರುವವರಿಗೆ ರೋಗ ಬೇಗನೇ ತಗುಲಬಹುದು ಎಂದು ಅವರು ಹೇಳಿದರು. ಅತಿಯಾದ ಜ್ವರ, ತಲೆನೋವು, ಚಳಿ, ಪಕ್ಕೆಗಳಲ್ಲಿ ನೋವು ಮತ್ತು ದದ್ದುಗಳು (ರ್ಯಾಶ್) ಇಲಿಜ್ವರದ ಲಕ್ಷಣಗಳು ಎಂದು ಅವರು ಹೇಳಿದರು. ಇಲಿಜ್ವರ, ಜಲಜನ್ಯ ರೋಗಗಳಲ್ಲಿ ಮೃತರಾದವರಲ್ಲಿ ಮೂವರು ಪರಿಹಾರ ಕಾರ್ಯಕರ್ತರೂ ಸೇರಿದ್ದಾರೆ. ರಾಜ್ಯದಲ್ಲಿ ಕಳೆದ ಮೂರು ದಿನಗಳಲ್ಲಿ ೩೦೦ ಶಂಕಿತ ಪ್ರಕರಣಗಳು ವರದಿಯಾಗಿವೆ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ನುಡಿದರುಕೋಯಿಕ್ಕೋಡ್ ಸೇರಿದಂತೆ ಐದು ಜಿಲ್ಲೆಗಳಲ್ಲಿ ಇಲಿಜ್ವರ ಮುನ್ನೆಚ್ಚರಿಕೆಯನ್ನು ಆರೋಗ್ಯ ನಿರ್ದೇಶನಾಲಯ ನೀಡಿದ್ದು, ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬೇಡಿ ಎಂದು ಸೂಚಿಸಿತು. ಬಹುತೇಕ ಶಂಕಿತ ಪ್ರಕರಣಗಳು ಕೋಯಿಕ್ಕೋಡ್, ಪಾಲಕ್ಕಾಡ್, ತ್ರಿಶ್ಯೂರು, ಮಲಪ್ಪುರಂ  ಮತ್ತು ಎರ್ನಾಕುಲಂ ಜಿಲ್ಲೆಗಳಿಂದ ವರದಿಯಾಗಿದೆ ಎಂದು ಹಿರಿಯ ಆರೋಗ್ಯ ಅಧಿಕಾರಿ ನುಡಿದರು. ಆಗಸ್ಟ್ ೧ರಿಂದೀಚೆಗೆ ೨೮ ಸಾವುಗಳು ವರದಿಯಾಗಿವೆ ಎಂದು ಅವರು ಹೇಳಿದರು. ಕೋಯಿಕ್ಕೋಡ್ ಜಿಲ್ಲೆ ಇನ್ನೂ ನಿಫಾ ಜ್ವರದ ಆಘಾತದಿಂದ ತತ್ತರಿಸುತ್ತಿರುವಾಗಲೇ ಕನಿಷ್ಠ ೬೦ ಮಂದಿಯಲ್ಲಿ ಇಲಿಜ್ವರದ ಲಕ್ಷಣಗಳು ಕಂಡು ಬಂದಿದ್ದು, ೨೮ ಪ್ರಕರಣಗಳು ದೃಢ ಪಟ್ಟಿವೆ ಎಂದು ವರದಿಗಳು ಹೇಳಿದವು.  ಜೂನ್ ತಿಂಗಳಲ್ಲಿ ನಿಫಾ ಕಾಣಿಸಿಕೊಂಡ ಬಳಿಕ ಕೋಯಿಕ್ಕೋಡ್ ಸೇರಿದಂತೆ ಎರಡು ಜಿಲ್ಲೆಗಳಲ್ಲಿ ಕನಿಷ್ಠ ೧೭ ಮಂದಿ ನಿಫಾಕ್ಕೆ ಬಲಿಯಾಗಿದ್ದರು. ಮುಂಗಾರು ಮಳೆಯ ಕಾಲದಲ್ಲಿ ಸಾಮಾನ್ಯವಾಗಿ ಇಂತಹ ರೋಗಗಳ ಬಾಧೆ ಜಾಸ್ತಿ. ಆದರೆ ಬಾರಿ ಇಲಿಜ್ವರದ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣಿಸಿದೆ ಎಂದು ಕೋಯಿಕ್ಕೋಡ ಜಿಲ್ಲಾ ವೈದ್ಯಾಧಿಕಾರಿ ಡಾ. ವಿ. ಜಯಶ್ರೀ ನುಡಿದರು.


2018: ನವದೆಹಲಿ: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಏರ್ ಇಂಡಿಯಾ ಇಂಟರ್ ನ್ಯಾಷನಲ್ ಹಾರಾಟದ ವಿಮಾನದಲ್ಲಿ ಸಹಪ್ರಯಾಣಿಕರಾಗಿದ್ದ ಮಹಿಳೆಯ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿ ಅಸಭ್ಯವಾಗಿ ನಡೆದುಕೊಂಡ ಘಟನೆ ಘಟಿಸಿದ್ದು ಬೆಳಕಿಗೆ ಬಂತು. ಘಟನೆಯ ವಿವರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನ ಯಾನ ಸಂಸ್ಥೆಯಿಂದ ಘಟನೆ ಬಗ್ಗೆ ವರದಿ ಕೇಳಿತು. ನವದೆಹಲಿಯಿಂದ ನ್ಯೂಯಾರ್ಕಿಗೆ ಪಯಣಿಸಿದ್ದ ಏರ್ ಇಂಡಿಯಾ ವಿಮಾನ ಎಐ ೧೦೨ರಲ್ಲಿ ಆಗಸ್ಟ್ ೩೦ರಂದು ಘಟನೆ ಘಟಿಸಿತ್ತು. ಮಹಿಳಾ ವಿಮಾನಯಾನಿಯ ಪುತ್ರಿ ಇಂದ್ರಾಣಿ ಘೋಷ್ ಅವರು ಘಟನೆಯ ಬಗ್ಗೆ ಟ್ವೀಟ್ ಮಾಡಿದರು. ಆಗಸ್ಟ್ ೩೦ರಂದು ಜೆಎಫ್ಕೆ- ದೆಹಲಿ ಎಐ ೧೦೨ರಲ್ಲಿ ಸೀಟ್ ನಂಬರ್ ೩೬ ಡಿಯಲ್ಲಿ ನನ್ನ ತಾಯಿ ಏಕಾಂಗಿಯಾಗಿ ಪ್ರಯಾಣ ಮಾಡುತ್ತಿದ್ದರು. ಆಗ ಕುಡುಕ ಪ್ರಯಾಣಿಕನೊಬ್ಬ ಆಕೆಯ ಪಕ್ಕದ ಸೀಟಿನ ಮೇಲಕ್ಕೆ ಬಿದ್ದ ಮತ್ತು ಅಲ್ಲಿಯೇ ಪ್ಯಾಂಟ್ ಬಿಚ್ಚಿ ಆಕೆಯ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ. ಘಟನೆಯಿಂದಾಗಿ ನನ್ನ ತಾಯಿ ಆಘಾತಗೊಂಡಿದ್ದಾರೆ. ದಯವಿಟ್ಟು ಬಗ್ಗೆ ತುರ್ತು ಗಮನ ಹರಿಸಿಎಂದು ಟ್ವೀಟ್ ಮಾಡಿದ ಇಂದ್ರಾಣಿ ಘೋಷ್, ಟ್ವೀಟನ್ನು ಸಚಿವರಾದ ಸುರೇಶ ಪ್ರಭು, ಸುಷ್ಮಾ ಸ್ವರಾಜ್ ಮತ್ತು ಏರ್ ಇಂಡಿಯಾಕ್ಕೆ ಲಿಂಕ್ ಮಾಡಿದರು. ಘಟನೆಯ ಬಳಿಕ ಏರ್ ಇಂಡಿಯಾ ಸಿಬ್ಬಂದಿ ತನ್ನ ತಾಯಿಯ ಸೀಟ್ ಬದಲಿಸುವುದು ಬಿಟ್ಟು ಬೇರೇನೂ ಕ್ರಮ ಕೈಗೊಳ್ಳಲಿಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ಕವಿತಾ ಕೃಷ್ಣನ್ ಅವರ ಟ್ವೀಟಿಗೆ ಪ್ರತಿಕ್ರಿಯಿಸಿದ ಇನ್ನೊಂದು ಟ್ವೀಟಿನಲ್ಲಿ ಘೋಷ್ ತಿಳಿಸಿದರು. ‘ನನ್ನ ತಾಯಿ ದೆಹಲಿ ವಿಮಾನ ನಿಲ್ದಾಣದಲ್ಲಿ ತನ್ನ ವ್ಹೀಲ್ ಚೇರಿನಲ್ಲಿ ಸಂಪರ್ಕ ವಿಮಾನಕ್ಕಾಗಿ ಕಾಯುತ್ತಿದ್ದಾಗ, ಆತ (ಆರೋಪಿತ ಪ್ರಯಾಣಿಕ) ನಡೆದುಕೊಂಡು ಹೋಗುತ್ತಿದ್ದುದನ್ನು ಕಂಡಿದ್ದಾರೆಎಂದೂ ಘೋಷ್ ತಿಳಿಸಿದರು. ಘಟನೆಯ ಬೆನ್ನಲ್ಲೇ ಕಿರಿಯ ನಾಗರಿಕ ವಿಮಾನಯಾನ ಸಚಿವ ಜಯಂತ್ ಸಿನ್ಹ ಅವರುವಿಷಯದ ಬಗ್ಗೆ ಪರಿಶೀಲಿಸಿ ತತ್ ಕ್ಷಣವೇ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದ ವಿಮಾನ ಯಾನ ನಿಯಂತ್ರಕರಿಗೆ ವರದಿ ನೀಡುವಂತೆನಿರ್ದೇಶನ ನೀಡಿದರು.  ‘ಪ್ರಕರಣದ ಪರಿಶೀಲನೆ ನಡೆಸಿ ತತ್ ಕ್ಷಣವೇ ಎಂಒಸಿಎ/ ಡಿಜಿಸಿಎಗೆ ವರದಿ ಸಲ್ಲಿಸಿ. ನಿಮ್ಮ ತಾಯಿಯುವರಿಗೆ ಇಂತಹ ಘಾಸಿಗೊಳಿಸುವ ಅನುಭವವಾದುದು ಅತ್ಯಂತ ದುರದೃಷ್ಟಕರಎಂದು ಸಿನ್ಹ ತಮ್ಮ ಟ್ವೀಟಿನಲ್ಲಿ ಪ್ರತಿಕ್ರಿಯಿಸಿದರು.


2016: ನವದೆಹಲಿ ಮಹಾತ್ಮ ಗಾಂಧಿ ಅವರನ್ನು ಆರ್ಎಸ್ಎಸ್ನವರು  ಹತ್ಯೆ ಮಾಡಿದ್ದಾರೆ ಎಂಬ ಹೇಳಿಕೆಗೆ ಬದ್ಧನಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುವುದಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ಗಾಂಧಿ ಸುಪ್ರೀಂ ಕೋರ್ಟಿಗೆ ತಿಳಿಸಿದರು. ಆರ್ಎಸ್ಎಸ್ವಿರುದ್ಧದ ಹೇಳಿಕೆಗೆ ನಾನು ಬದ್ಧನಾಗಿದ್ದುನನ್ನ ಮಾತುಗಳನ್ನು ವಾಪಸ್ಸು ಪಡೆಯುವ ಪ್ರಶ್ನೆಯೇ ಇಲ್ಲ ಎಂದು ರಾಹುಲ್ತಿಳಿಸಿದರು.  ‘ ಪ್ರಕರಣ ಕುರಿತಂತೆ  ವಿಚಾರಣೆ ಎದುರಿಸಲು ನಾನು ಸಿದ್ಧಎಂಬ ಹೇಳಿಕೆಯ ಪತ್ರವನ್ನು  ಹಿರಿಯ ವಕೀಲ ಕಪಿಲ್ಸಿಬಲ್ಮೂಲಕ  ಸುಪ್ರೀಂ ಕೊರ್ಟ್ಗೆ ಸಲ್ಲಿಸಿದರು.  ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ರದ್ದುಪಡಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ರಾಹುಲ್ ಗಾಂಧಿ  ಸುಪ್ರೀಂ ಕೋರ್ಟ್ನಿಂದ ವಾಪಸ್ ಪಡೆದರು.  ತನ್ಮೂಲಕ ರಾಹುಲ್ಗಾಂಧಿ ಅವರು ಆರ್ಎಸ್ಎಸ್ಜೊತೆ ಕಾನೂನು ಸಮರಕ್ಕೆ ಮುಂದಾದರು.. ಪ್ರಕರಣದ ಹಿನ್ನೆಲೆ:  2015 ಮಾ. 6ರಂದು ಮಹಾರಾಷ್ಟ್ರದಲ್ಲಿ ನಡೆದಿದ್ದ ಚುನಾವಣೆ ಪ್ರಚಾರ ಸಭೆಯೊಂದರಲ್ಲಿಆರ್ಎಸ್ಎಸ್ವ್ಯಕ್ತಿಗಳು ಗಾಂಧೀಜಿ ಅವರನ್ನು ಹತ್ಯೆ ಮಾಡಿದ್ದಾರೆ' ಎಂದು  ರಾಹುಲ್ಗಾಂಧಿ ದೂರಿದ್ದರು. ಸಂಬಂಧ ಆರ್ಎಸ್ಎಸ್ಕಾರ್ಯಕರ್ತರೊಬ್ಬರು ಸ್ಥಳೀಯ ನಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದರು.
2016: ಮುಂಬೈ : ಉಚಿತ ಕರೆ, ರೋಮಿಂಗ್ಶುಲ್ಕ ಮುಕ್ತ ಸೇವೆ ಹಾಗೂ ಪ್ರತಿ ಜಿಬಿ ಡೇಟಾಗೆ ₹ 50 ದರ ಘೋಷಿಸುವ ಮೂಲಕ ರಿಲಯನ್ಸ್ಜಿಯೊ ಟೆಲಿಕಾಂ ಕ್ಷೇತ್ರದಲ್ಲಿ ದರ ಸಮರಕ್ಕೆ ಮುಂದಾಯಿತು. ಈದಿನ ನಡೆದ ರಿಲಯನ್ಸ್ 42ನೇ ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ಮುಖ್ಯಸ್ಥ ಮುಖೇಶ್ ಅಂಬಾನಿ ಜಿಯೊ ಸೇವೆಯನ್ನು ಬಿಡುಗಡೆಗೊಳಿಸಿದರು. ಜಿಯೊ 4ಜಿ ಸಿಮ್ ದರ ಪಟ್ಟಿಯ ಬಗೆಗಿನ ಮೌನ ಮುರಿದ ಮುಖ್ಯಸ್ಥ ಮುಖೇಶ್ ಅಂಬಾನಿ, ಜಿಯೊ ಕಡಿಮೆ ಬೆಲೆಗೆ ಡೇಟಾ ಸೇವೆ ಹಾಗೂ ಉಚಿತ ಕರೆ ಮತ್ತು ರೋಮಿಂಗ್ಸೇವೆ ನೀಡಲಿದೆ. ಮೂಲಕ ಭಾರತೀಯರೆಲ್ಲರೂಡೇಟಾಗಿರಿಮಾಡಬಹುದು ಎಂದು ಹೇಳಿದರು. 
2016: ಬ್ರೆಸಿಲಿಯಾ: ಬ್ರೆಜಿಲ್ ಅಧ್ಯಕ್ಷ ಸ್ಥಾನದಿಂದ ದಿಲ್ಮಾ ರೌಸೆಫ್ಅವರನ್ನು ವಾಗ್ದಂಡನೆ ಪ್ರಕ್ರಿಯೆ ಮೂಲಕ ಸಂಸತ್ತು ಪದಚ್ಯುತಿಗೊಳಿಸಿತು. ಎಡಪಂಥೀಯ ಎನಿಸಿಕೊಂಡಿರುವ ದಿಲ್ಮಾ ಅವರು ಬಜೆಟ್ಗೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಯಿತು. ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಲು ದಿಲ್ಮಾ ಅವರು  ರಾಷ್ಟ್ರದ ಬ್ಯಾಂಕ್ಗಳಿಂದ ಹಣವನ್ನು ಕಾನೂನು ಬಾಹಿರವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಸಾಬೀತಾಯಿತು. ಅವರ ಪದಚ್ಯುತಿ ಪರವಾಗಿ 61, ವಿರುದ್ಧವಾಗಿ 20 ಮತಗಳು ಬಂದವು.
2016: ಇಸ್ಲಾಮಾಬಾದ್‌ : ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನಯಾನದ (ಪಿಐಎಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ಪೈಲೆಟ್ಸಹೋದರಿಯರು ಬೋಯಿಂಗ್‌ 777 ವಿಮಾನವನ್ನು ಏಕಕಾಲದಲ್ಲಿ ಜೊತೆಯಾಗಿ ಹಾರಿಸಿದರು. ಮರ್ಯಮ್ಮಸೂದ್ಹಾಗೂ ಈರುಮ್ಮಸೂದ್‌  ಸಹೋದರಿಯರು  ಇಲ್ಲಿಯವರೆಗೆ ಬೇರೆ ಬೇರೆ ವಿಮಾನಗಳನ್ನು ಹಾರಿಸುತ್ತಿದ್ದರು. ಆದರೆ ಈಗ ಒಂದೇ ವಿಮಾನದಲ್ಲಿ ಕೆಲಸ ಮಾಡುತ್ತಿದ್ದಾರೆಎಂದು ಪಿಐಎ ವಕ್ತಾರ ದನ್ಯಲ್ಗಿಲಾನಿ ತಿಳಿಸಿದರು. ಸಹೋದರಿಯರು ಬೋಯಿಂಗ್‌ 777 ವಿಮಾನವನ್ನು ಏಕಕಾಲದಲ್ಲಿ ಹಾರಿಸಿ ಇತಿಹಾಸ ಸೃಷ್ಟಿಸಿದ್ದಾರೆಎಂದು ಟ್ವೀಟ್ನಲ್ಲಿ ತಿಳಿಸಿದರು. ಇಬ್ಬರು ಸಹೋದರಿಯರು ಒಂದೇ ವಿಮಾನವನ್ನು ಚಲಾಯಿಸಿದ ದಾಖಲೆ  ಇರಲಿಲ್ಲ. ಈರುಮ್ಇತ್ತೀಚೆಗೆ ಬೋಯಿಂಗ್‌–777 ವಿಮಾನದಲ್ಲಿ ಪೈಲೆಟ್ಆಗಿ ಸೇರಿಕೊಂಡಿದ್ದರು. ತನ್ನ ಸಹೋದರಿಯೊಂದಿಗೆ ಕಾಕ್ಪಿಟ್ನಲ್ಲಿ ಜೊತೆಯಾಗಿದ್ದಕ್ಕೆ ಅವರು ಸಂತೋಷಗೊಂಡಿದ್ದಾರೆಎಂದು ತಿಳಿಸಿದರು.
2016: ಭೋಪಾಲ: ಮಧ್ಯಪ್ರದೇಶದ ಮಹಾವ್ ಎಂಬಲ್ಲಿ 10 ತರಗತಿ ಸಂಸ್ಕೃತ ಪರೀಕ್ಷೆಯಲ್ಲಿ 24 ಅಂಕ ಪಡೆದು ಅನುತ್ತೀರ್ಣಳಾಗಿದ್ದ ಖುಶ್ಬು ಕಯಾಸ್ತ್ ಎಂಬಾಕೆಗೆ 1 ಲಕ್ಷ ರೂಪಾಯಿ ಪರಿಹಾರ ಪಾವತಿಸುವಂತೆ ಮಧ್ಯಪ್ರದೇಶ ಹೈಕೋರ್ಟ್ ಪ್ರೌಡ ಶಿಕ್ಷಣ ಮಂಡಳಿಗೆ ಆದೇಶಿಸಿತು. ಉಳಿದ ಎಲ್ಲ ವಿಷಯಗಳಲ್ಲೂ 80ಕ್ಕಿಂತ ಹೆಚ್ಚು ಅಂಕ ಪಡೆದಿದ್ದ ಖುಶ್ಬು ಕಯಾಸ್ತ್ ಸಂಸ್ಕೃತವೊಂದರಲ್ಲಿ 24 ಅಂಕ ಸಿಕ್ಕಿದ್ದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಳು. ಮರು ಮೌಲ್ಯ ಮಾಪನದ ನಂತರ ಸಂಸ್ಕೃತ ವಿಷಯದಲ್ಲಿ 24 ಅಂಕವಿದ್ದ ಸ್ಥಾನಕ್ಕೆ 84 ಅಂಕ ಬಂದಿತು. ಮೌಲ್ಯಮಾಪನ ಮಾಡಿದ ಶಿಕ್ಷಕನ ಲೋಪಕ್ಕಾಗಿ ವಿದ್ಯಾರ್ಥಿನಿಗೆ ಪ್ರೌಢ ಶಿಕ್ಷಣ ಮಂಡಳಿ 1 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿತು.  ಮೌಲ್ಯಮಾಪನದಲ್ಲಿ ಲೋಪ ಮಾಡಿದ ಶಿಕ್ಷಕನಿಗೆ ಕೋರ್ಟ್ 3 ವರ್ಷಗಳ ಕಾಲ ಪರೀಕ್ಷೆ ಮೌಲ್ಯ ಮಾಪನ ಮಾಡಲು ಅನುಮತಿ ನಿಷೇಧಿಸಿತು.

2016: ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಎಸ್ಟಿ ತಿದ್ದುಪಡಿ ಮಸೂದೆಯನ್ನು ಒಡಿಸ್ಸಾ ವಿಧಾನ ಸಭೆ ಅಂಗೀಕರಿಸಿತು. ಇದರೊಂದಿಗೆ ಮಸೂದೆ 16 ರಾಜ್ಯಗಳ ಬೆಂಬಲ ಪಡೆದಂತಾಗಿದ್ದು ಶೀಘ್ರ ರಾಷ್ಟ್ರಪತಿಗಳ ಅಂಕಿತಕ್ಕಾಗಿ ರವಾನೆಯಾಗಲಿದೆ. ಜಿಎಸ್ಟಿ ಮಸೂದೆಗೆ ಶೇ. 50 ರಷ್ಟು ರಾಜ್ಯಗಳು ಬೆಂಬಲ ನೀಡುವುದು ಅಗತ್ಯವಿತ್ತು. ಈಗ 16 ರಾಜ್ಯಗಳ ವಿಧಾನಸಭೆಯಲ್ಲಿ ಜಿಎಸ್ಟಿ ಮಸೂದೆ ಅನುಮೋದನೆ ಪಡೆದಿದ್ದು, ಶೀಘ್ರ ರಾಷ್ಟ್ರಪತಿಗಳ ಅಂಕಿತಕ್ಕಾಗಿ ಮಸೂದೆಯನ್ನು ಕಳುಹಿಸಲಾಗುವುದು ಎಂದು ಹಣಕಾಸು ಸಚಿವಾಲಯದ ಕಾರ್ಯದರ್ಶಿ ಹಸ್ಮುಖ್  ಅಧಿಯಾ ತಿಳಿಸಿದರು. ಜಿಎಸ್ಟಿ ಮಸೂದೆಗೆ ಅಸ್ಸಾಂ, ಮಹಾರಾಷ್ಟ್ರ, ಹರಿಯಾಣ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ, ಛತ್ತೀಸ್ಗಢ, ಗುಜರಾತ್, ಮಧ್ಯಪ್ರದೇಶ, ದೆಹಲಿ, ಒಡಿಸ್ಸಾ ಮತ್ತು ನಾಗಾಲ್ಯಾಂಡ್ ರಾಷ್ಟ್ರಗಳು ಅನುಮೋದನೆ ನೀಡಿವೆ.
2008: ತಂದೆಯ ಶತಕೋಟಿ ಡಾಲರ್ ಆಸ್ತಿಗೆ `ಹಕ್ಕುದಾರ ಪುತ್ರಿಯರು ` ಪಟ್ಟಿಯಲ್ಲಿ ಭಾರತದ ವನಿಶಾ ಮಿತ್ತಲ್, ಇಶಾ ಅಂಬಾನಿ ಮತ್ತು ಪಿಯಾ ಸಿಂಗ್ ಅವರು ಪ್ರಮುಖ ವಾಣಿಜ್ಯ ನಿಯತಕಾಲಿಕೆ `ಫೋಬ್ಸ್' ಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಗಳಿಸಿಕೊಂಡರು. ಇವರು ಅನುಕ್ರಮವಾಗಿ ಲಕ್ಷ್ಮೀ ಮಿತ್ತಲ್, ಮುಖೇಶ್ ಅಂಬಾನಿ ಮತ್ತು ಕೆ.ಪಿ. ಸಿಂಗ್ ಅವರ ಪುತ್ರಿಯರು. ಪರಾಂಪರಗತವಾಗಿ ಬರುವ ಅತಿ ಹೆಚ್ಚಿನ ಆಸ್ತಿಗೆ ಒಡತಿಯರಾಗುವ ಸಾಧ್ಯತೆಗಳ ಬಗ್ಗೆ ವಿಶ್ವದಾದ್ಯಂತ ಇರುವ ವಿವಿಧ ಉದ್ಯಮಿಗಳ ಪುತ್ರಿಯರು ಮತ್ತು ಹೆಣ್ಣು ಮೊಮ್ಮಕ್ಕಳನ್ನು ಪರಿಗಣಿಸಿದಾಗ, ಲಕ್ಷ್ಮೀ ಮಿತ್ತಲ್ ಪುತ್ರಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ಪತ್ರಿಕೆ ವಿವರಿಸಿತು.

2007: ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕವಾಗಿ ಶಿಕ್ಷಿಸುವ ಹಾಗೂ ಅವಮಾನ ಮಾಡುವ ಅಧಿಕಾರ ಶಿಕ್ಷಕರಿಗಿಲ್ಲ. ಒಂದು ವೇಳೆ ಶಿಕ್ಷಕರು ಈ ಸಾಹಸಕ್ಕೆ ಕೈಹಾಕಿದರೆ ಸೂಕ್ತ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ವಿಶೇಷ ಸುತ್ತೋಲೆ ಹೊರಡಿಸಿ, ಎಲ್ಲ ಜಿಲ್ಲಾ ಉಪನಿರ್ದೇಶಕರ ಕಚೇರಿಗಳಿಗೆ ಕಳುಹಿಸಿತು. ಬೆಂಗಳೂರಿನಲ್ಲಿ ಆರನೇ ತರಗತಿಯ ಕೆ. ಸಂಗೀತಾ ಎಂಬ ಬಾಲಕಿಯ ಮೇಲೆ ಶಾಲಾ ಶಿಕ್ಷಕಿಯರು ನಡೆಸಿದ ಹಲ್ಲೆ ಹಾಗೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನೀಡಿದ ನಿರ್ದೇಶನಗಳ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ಸುತ್ತೋಲೆ ಹೊರಡಿಸಿತು. ಸುತ್ತೋಲೆಯ ಪ್ರಕಾರ ಶಿಕ್ಷಕರು ವಿದ್ಯಾರ್ಥಿಗಳನ್ನು ಹೊಡೆಯುವ, ಜಿಗುಟುವ, ಶಾಲೆಯ ಸುತ್ತ ಓಡಿಸುವ, ಒಂಟಿ ಕಾಲಿನಲ್ಲಿ ಮತ್ತು ಬೆಂಚಿನ ಮೇಲೆ ನಿಲ್ಲಿಸುವ ಶಿಕ್ಷೆಗಳನ್ನು ನೀಡಿದರೆ ಭಾರತೀಯ ದಂಡ ಸಂಹಿತೆ ಪ್ರಕಾರ ಶಿಕ್ಷೆ ಎದುರಿಸಬೇಕಾಗುತ್ತದೆ.

2007: ಸಂಗಪಲ್ಲಿ ಬಳಿ ಆಗಸ್ಟ್ 24ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಸಾರ್ವಜನಿಕ ಸಂಪರ್ಕ ನಿರ್ದೇಶಕ ಎಸ್. ಕೃಷ್ಣಮೂರ್ತಿ ತಿರುಪತಿಯ ಆಸ್ಪತ್ರೆಯಲ್ಲಿ ಮೃತರಾದರು. ಈ ಅಪಘಾತದಲ್ಲಿ ಇಸ್ರೊ ಹಿರಿಯ ವಿಜ್ಞಾನಿ ರಾಜೀವ ಲೋಚನ ಸ್ಥಳದಲ್ಲಿಯೇ ಅಸು ನೀಗಿದ್ದರು.

2007: ಬೆಂಗಳೂರು ನಗರದ ಭಗವಾನ್ ಮಹಾವೀರ ಜೈನ್ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಜಿ. ಎನ್. ನಿಶ್ಚಲ್ ತನ್ನ ಮೂಗಿನ ಮೇಲೆ ಕ್ರಿಕೆಟ್ ಬ್ಯಾಟ್ ನೆಟ್ಟಗೆ ಇರಿಸಿಕೊಂಡು ಸಮತೋಲನ ಮಾಡುವ ಮೂಲಕ ಗಿನ್ನೆಸ್ ಪುಸ್ತಕದಲ್ಲಿ ಹೆಸರು ದಾಖಲಿಸಲು ಯತ್ನಿಸಿದ. ಪ್ರೆಸ್ ಕ್ಲಬ್ ಆವರಣದಲ್ಲಿ ಮೂಗಿನ ಮೇಲೆ ಸುಮಾರು 1.25 ಕೆ.ಜಿ. ತೂಕವಿರುವ ಕ್ರಿಕೆಟ್ ಬ್ಯಾಟನ್ನು ನೆಟ್ಟಗೆ ನಿಲ್ಲಿಸಿಕೊಂಡು ಸಮತೋಲನ ಕಾಯ್ದುಕೊಳ್ಳುವಲ್ಲಿ ಈತ ಯಶಸ್ವಿಯಾದ. ``ಈ ಅಭ್ಯಾಸವನ್ನು ಗಿನ್ನೆಸ್ ಪುಸ್ತಕದಲ್ಲಿ ದಾಖಲಿಸಲು ಪ್ರಾಥಮಿಕ ಹಂತದಲ್ಲಿ ಪ್ರಯತ್ನ ನಡೆಸಿರುವೆ. ಗಿನ್ನೆಸ್ ಬುಕ್ ಆಫ್ ರೆಕಾರ್ಡಿಸಿನಿಂದ ಅನುಮತಿಗೆ ಕಾಯುತ್ತಿರುವೆ. ನಂತರ ಲಿಮ್ಕಾದಲ್ಲೂ ದಾಖಲೆ ಮಾಡುವೆ'' ಎಂದು ಆತ ಹೇಳಿದ. ಈತ ಗಿರಿನಗರದ ನಿವಾಸಿಗಳಾದ ಜಿ. ನೇತ್ರಾನಂದ್ ಮತ್ತು ಲತಾ ನೇತ್ರಾನಂದ್ ದಂಪತಿಯ ಪುತ್ರ.

2006: ಪೆಪ್ಸಿ ಕಂಪೆನಿಯ ನಿಯೋಜಿತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇಂದ್ರಾ ನೂಯಿ ಅವರು ನಾಲ್ಕನೇ ಜಗತ್ತಿನ ಪ್ರಭಾವಶಾಲಿ ಮಹಿಳೆಯಾಗಿದ್ದು, ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ 13ನೇ ಪ್ರಭಾವಶಾಲಿ ಮಹಿಳೆ ಎಂದು ಫೋರ್ಬ್ ನಿಯತಕಾಲಿಕದ ವಾರ್ಷಿಕ ಸಮೀಕ್ಷೆ ಪ್ರಕಟಿಸಿತು. 2005ರಲ್ಲಿ ಇಂದ್ರಾ ನೂಯಿ ಅವರು ಈ ಪಟ್ಟಿಯಲ್ಲಿ 28ನೇ ಸ್ಥಾನದಲ್ಲಿದ್ದರು. ಈ ಸಲ 4ನೇ ಸ್ಥಾನಕ್ಕೆ ಬಡ್ತಿ ಪಡೆದರು. ಪಟ್ಟಿಗೆ ಸೋನಿಯಾಗಾಂಧಿ ಹೆಸರು ಇದೇ ಮೊದಲ ಬಾರಿಗೆ ಸೇರ್ಪಡೆಗೊಂಡಿತು.

2006: ಇರಾನ್ ಏರ್ ಲೈನ್ಸ್ ಸಂಸ್ಥೆಗೆ ಸೇರಿದ ಪ್ರಯಾಣಿಕರ ವಿಮಾನವೊಂದು ಮಶಾದ್ ವಿಮಾನ ನಿಲ್ದಾಣದಲ್ಲಿ ಕೆಳಗೆ ಇಳಿಯುವಾಗ ಅಪಘಾತಕ್ಕೆ ಈಡಾಗಿ ಕನಿಷ್ಠ 80 ಮಂದಿ ಪ್ರಯಾಣಿಕರು ಅಸು ನೀಗಿದರು. ಅಂತರಿಕ್ಷ ಯಾನಕ್ಕೆ ಬಳಕೆಯಾಗುತ್ತಿದ್ದ ರಷ್ಯ ನಿರ್ಮಿತ `ತುಪಲೊವ್' ವಿಮಾನವು ಬಂದರು ಅಬ್ಬಾಸ್ ನಗರದಿಂದ ಮಶಾದ್ ನಗರಕ್ಕೆ ಆಗಮಿಸಿ ಇಳಿಯಲು ಅಣಿಯಾಗುತ್ತಿದ್ದಾಗ ವಿಮಾನದ ಚಕ್ರಗಳು ಸಿಡಿದು ಬೆಂಕಿ ಹೊತ್ತಿಕೊಂಡಿತು. ವಿಮಾನದಲ್ಲಿ 140 ಮಂದಿ ಪ್ರಯಾಣಿಕರಿದ್ದರು.

2006: ಖ್ಯಾತ ಸರೋದ್ ವಾದಕ ಅಲಿ ಅಕ್ಬರ್ ಖಾನ್ ಅವರ ಪುತ್ರ, ದಂತಕಥೆಯಾಗಿದ್ದ ಉಸ್ತಾದ್ ಅಲ್ಲಾವುದ್ದೀನ್ ಖಾನ್ ಅವರ ಮೊಮ್ಮಗ ಅಶೀಶ್ಖಾನ್ ಹಿಂದು ಧರ್ಮಕ್ಕೆ ಮತಾಂತರ ಮಾಡಿದರು. ತ್ರಿಪುರ ಮೂಲದ ತಮ್ಮ ಪೂರ್ವಜರು ಕ್ರಿಮಿನಲ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ಸಂದರ್ಭದಲ್ಲಿ ಅದರಿಂದ ಪಾರಾಗಲು ಇಸ್ಲಾಮಿಗೆ ಮತಾಂತರ ಮಾಡಿದ್ದು, ಈಗ ಪ್ರಜ್ಞಾಪೂರ್ವಕವಾಗಿಯೇ ತಾನು ಹಿಂದು ಧರ್ಮಕ್ಕೆ ಮರಳಿದ್ದೇನೆ ಎಂದು ಅಶೀಶ್ ಖಾನ್ ಕೋಲ್ಕತಾದಲ್ಲಿ ಪ್ರಕಟಿಸಿದರು.

2006: ವೈಸ್ ಅಡ್ಮಿರಲ್ ಸುರೇಶ ಮೆಹ್ತಾ ಅವರು ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ನೇಮಕಗೊಂಡರು.

2006: ಆಂಧ್ರಪ್ರದೇಶದ ತೆಲಂಗಾಣ ರಾಷ್ಟ್ರಸಮಿತಿ (ಟಿಆರ್ಎಸ್) ಕೇಂದ್ರದ ಯುಪಿಎ ಸರ್ಕಾರಕ್ಕೆನೀಡಿದ್ದ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು.

2006: ಅಮೆರಿಕದ ಬಾಲ್ಟಿಮೋರಿನಲ್ಲಿ ನಾಲ್ಕನೇ `ಅಕ್ಕ' ವಿಶ್ವ ಕನ್ನಡ ಸಮ್ಮೇಳನವು ಡಾ. ರಾಜ್ ಕುಮಾರ್ ನೆನಪಿನಲ್ಲಿ ಸಜ್ಜುಗೊಂಡ ಸಭಾಗಣದಲ್ಲಿ ಆರಂಭವಾಯಿತು. ಜಗತ್ತಿನ ವಿವಿಧೆಡೆಗಳಿಂದ 4000 ಕನ್ನಡಿಗರು ಈ ಸಮ್ಮೇಳನಕ್ಕೆ ಆಗಮಿಸಿದ್ದರು. ಆರ್ಟ್ ಆಫ್ ಲಿವಿಂಗ್ ಖ್ಯಾತಿಯ ಶ್ರೀ ಶ್ರೀ ರವಿ ಶಂಕರ ಅವರ ಆಧ್ಯಾತ್ಮಿಕ ಗೋಷ್ಠಿಯೊಂದಿಗೆ ಸಮ್ಮೇಳನ ವಿಧ್ಯುಕ್ತವಾಗಿ ಆರಂಭಗೊಂಡಿತು.

2006: ಪಾಕಿಸ್ತಾನಿ ವಾಯುಪಡೆಯ ಬಾಂಬ್ ದಾಳಿಗೆ ವಾರದ ಹಿಂದೆ ಬಲಿಯಾದ ಬಲೂಚಿಸ್ಥಾನದ ಬುಡಕಟ್ಟು ಹೋರಾಟದ ಹಾಗೂ ಬಲೂಚಿಸ್ಥಾನ್ ಲಿಬರೇಶನ್ ಆರ್ಮಿಯ ನಾಯಕ ನವಾಬ್ ಅಕ್ಬರ್ ಖಾನ್ ಬುಗ್ತಿ ಅವರ ಪಾರ್ಥಿವ ಶರೀರವನ್ನು ಅವರ ಕುಟುಂಬ ಸದಸ್ಯರಿಗೂ ತೋರಿಸದೆ, ರಹಸ್ಯವಾಗಿ ಅವರ ಹಿರಿಯರಿಗೆ ಸೇರಿದ ದೇರಾ ಬುಗ್ತಿ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. ಪಾಕಿಸ್ಥಾನಿ ಸೇನಾ ಕಾರ್ಯಾಚರಣೆಯಲ್ಲಿ ಹತರಾದ ಬುಗ್ತಿ ಅವರ ಶವವನ್ನು ಐದು ದಿನಗಳ ಬಳಿಕ ಒಂದು ದಿನ ಹಿಂದೆಯಷ್ಟೇ ಬಲೂಚಿಸ್ಥಾನದ ಕೊಹ್ಲು ಜಿಲ್ಲೆಯ ತಾರ್ತಾನಿ ಪ್ರದೇಶದ ಗುಹೆಯೊಂದರಲ್ಲಿ ಪತ್ತೆ ಹಚ್ಚಿ ಗುರುತಿಸಲಾಗಿತ್ತು.

1999: ಬಾಹ್ಯಾಕಾಶ ವಿಜ್ಞಾನಿ ಡಾ. ಎಸ್. ಶ್ರೀನಿವಾಸನ್ ನಿಧನ.

1985: ನ್ಯೂಫೌಂಡ್ ಲ್ಯಾಂಡಿನ ಕರಾವಳಿ ಸಮೀಪ ಸಮುದ್ರದಲ್ಲಿ ಮುಳುಗಿದ ಟೈಟಾನಿಕ್ ನೌಕೆಯ ಅವಶೇಷ ಪತ್ತೆಯಾಯಿತು. ಫ್ರಾನ್ಸ್ ಹಾಗೂ ಅಮೆರಿಕ ಕೈಗೊಂಡ ಜಂಟಿ ಯತ್ನದ ಭಾಗವಾಗಿ ರಾಬರ್ಟ್ ಬಲ್ಲಾರ್ಡ್ ಹಾಗೂ ಜೀನ್ ಲೂಯಿ ಮಿಚೆಲ್ ಅವರು ಟೈಟಾನಿಕ್ ಅವಶೇಷ ಪತ್ತೆಗೆ ಯತ್ನಿಸಿ ಸಫಲರಾದರು. ನೌಕೆ ನ್ಯೂಫೌಂಡ್ ಲ್ಯಾಂಡಿನ ಸೇಂಟ್ ಜಾನ್ಸ್ ಗೆ ಆಗ್ನೇಯಭಾಗದಲ್ಲಿ 375 ಕಿಮೀ ದೂರದಲ್ಲಿ ಸಮುದ್ರಮಟ್ಟಕ್ಕಿಂತ 12,460 ಅಡಿ ಕೆಳಗೆ ಇತ್ತು.

1972: ಅಮೆರಿಕದ ರಾಬರ್ಟ್ `ಬಾಬ್ಬಿ' ಫಿಶರ್ ಅವರು ಐಸ್ ಲ್ಯಾಂಡಿನ ರೇಕ್ಯಾವಿಕ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಸೋವಿಯತ್ ಯೂನಿಯನ್ನಿನ ಬೋರಿಸ್ ಸ್ಪಾಸ್ಕಿ ಅವರನ್ನು ಪರಾಭವಗೊಳಿಸಿ ವಿಶ್ವ ಚೆಸ್ ಕಿರೀಟವನ್ನು ಗೆದ್ದುಕೊಂಡರು. ಈ ಪ್ರಶಸ್ತಿಯನ್ನು ಗೆದ್ದುಕೊಂಡ ಮೊದಲ ರಷ್ಯೇತರ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದಾಯಿತು. 20 ವರ್ಷಗಳ ಬಳಿಕ 50 ಲಕ್ಷ ಡಾಲರುಗಳ ಬಹುಮಾನದ ಮೊತ್ತಕ್ಕಾಗಿ ನಿಗದಿಯಾದ ಸ್ಪರ್ಧೆಯಲ್ಲಿ ಬೋರಿಸ್ ಸ್ಪಾಸ್ಕಿ ಅವರ ಜತೆಗೆ ಮರುಸ್ಪರ್ಧೆಗೆ ಇಳಿಯುವ ಹಿಂದಿನ ದಿನ ರಾಬರ್ಟ್ ಅವರು ಬೋಸ್ನಿಯಾದ ಸ್ವೇತಿ ಸ್ಟೆಫಾನಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಯುಗೋಸ್ಲಾವಿಯಾ ವಿರುದ್ಧ ವಿಶ್ವಸಂಸ್ಥೆಯ ದಿಗ್ಭಂಧನ ಹಾಗೂ ಅಮೆರಿಕದ ಹಣಕಾಸು ಇಲಾಖೆಯ ಎಚ್ಚರಿಕೆಯ ಹೊರತಾಗಿಯೂ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತಾವು ನಿರ್ಧರಿಸಿದ್ದಾಗಿ ಅವರು ಹೇಳಿದರು. ಮರುದಿನ ನಡೆದ ಸ್ಪರ್ಧೆಯಲ್ಲಿ ರಾಬರ್ಟ್ ಅವರು ಸ್ಪಾಸ್ಕಿ ಅವರನ್ನು ಪರಾಭವಗೊಳಿಸಿದರು.

1962: ಸಾಹಿತಿ ಹಂಸ ಆರ್. ಜನನ.

1957: ಸಾಹಿತಿ ಪ್ರೀತಿ ಶುಭ ಚಂದ್ರ ಜನನ.

1956: ಕುಮಾರಿ ಸರಳಾ ಖನ್ನಾ ಐ.ಪಿ.ಎಸ್. ಅವರು ಸಿಮ್ಲಾ ಜಿಲ್ಲಾಧಿಕಾರಿಯಾಗಿ ಈದಿನ ಅಧಿಕಾರ ವಹಿಸಿಕೊಂಡರು. ಭಾರತದ ಪ್ರಥಮ ಮಹಿಳಾ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆ ಇವರದಾಯಿತು.

1956: ಭಾರತೀಯ ಜೀವ ವಿಮಾ ನಿಗಮ (ಎಲ್ಲೈಸಿ) ಅಸ್ತಿತ್ವಕ್ಕೆ ಬಂತು.

1948: ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆ.

1948: ಸಾಹಿತಿ ಉಮಾರಾವ್ ಜನನ.

1948: ಕಥೆಗಾರ್ತಿ ಗಂಗಾ ಪಾದೇಕಲ್ ಜನನ.

1947: ಇಂಡಿಯನ್ ಸ್ಟಾಂಡರ್ಡ್ ಟೈಮ್ (ಐಎಸ್ಟಿ) ಅನುಷ್ಠಾನಗೊಂಡಿತು. ಭಾರತದಾದ್ಯಂತ ಎ್ಲಲ ಗಡಿಯಾರಗಳಲ್ಲಿ ಐಎಸ್ಟಿ ಪ್ರಕಾರವೇ ಗಂಟೆ ನಿಗದಿಯಾಯಿತು.

1947: ಹಿಂದುಗಳು ಮತ್ತು ಮುಸ್ಲಿಮರ ನಡುವೆ ಒಗ್ಗಟ್ಟು ಮೂಡಿಸುವ ಸಲುವಾಗಿ ಮಹಾತ್ಮ ಗಾಂಧಿ ಅವರಿಂದ ಉಪವಾಸ.

1942: ರಾಸ್ ಬಿಹಾರಿ ಬೋಸ್ ಅವರು 50,000 ಸೈನಿಕರನ್ನು ಒಳಗೊಂಡ ಭಾರತೀಯ ರಾಷ್ಟ್ರೀಯ ಸೇನೆ (ಇಂಡಿಯನ್ ನ್ಯಾಷನಲ್ ಆರ್ಮಿ) ಸಂಘಟಿಸಿದರು. ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು 1943ರ ಆಗಸ್ಟ್ 25ರಂದು ಸೇನೆಯ ಪರಮೋಚ್ಚ ನಾಯಕರಾಗಿ (ಸುಪ್ರೀಮ್ ಕಮಾಂಡ್) ಅಧಿಕಾರ ವಹಿಸಿಕೊಂಡರು.

1939: ನಾಝಿ ಜರ್ಮನಿಯ ಪೋಲಂಡ್ ಮೇಲೆ ಆಕ್ರಮಣ ನಡೆಸುವುದರೊಂದಿಗೆ ಎರಡನೇ ಜಾಗತಿಕ ಸಮರ ಆರಂಭಗೊಂಡಿತು.

1938: ಹಾಸ್ಯ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ ಸಾಹಿತಿ ಎಂ.ಪಿ. ಮನೋಹರ ಚಂದ್ರನ್ ಅವರು ಪುಟ್ಟಪ್ಪ- ಸಾವಿತ್ರಮ್ಮ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಜನಿಸಿದರು. ಮಾಸಿಕ ಒಂದರಲ್ಲಿ ಕಂಡ ಅಪೂರ್ಣ ಕಥೆಯನ್ನು ಪೂರ್ಣಗೊಳಿಸುವ ಮೂಲಕ ಅಚಾನಕ್ ಆಗಿ ಸಾಹಿತ್ಯ ಲೋಕ ಪ್ರವೇಶಿಸಿದ ಮನೋಹರ ಚಂದ್ರನ್ ಆಯ್ದುಕೊಂಡದ್ದು ಹಾಸ್ಯ ಸಾಹಿತ್ಯ. ಅವರ ಹಾಸ್ಯ ಲೇಖನಗಳು ಪ್ರಮುಖ ಪತ್ರಿಕೆ, ವಿಶೇಷಾಂಕಗಳಲ್ಲಿ ಪ್ರಕಟವಾಗಿವೆ. ಹಲವಾರು ಹಾಸ್ಯ ಸಂಕಲನ ರೂಪದಲ್ಲೂ ಬಂದಿವೆ. 20ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.

1928: ಖ್ಯಾತ ಸಾಹಿತಿ ತ್ರಿವೇಣಿ ಜನನ.

1928: ಸಾಹಿತಿ ಎಸ್.ಎಂ. ವೃಷಭೇಂದ್ರಸ್ವಾಮಿ ಜನನ.

1923: ಟೋಕಿಯೋ ಮತ್ತು ಯೋಕೋಹೋಮಾದಲ್ಲಿ ಭೂಕಂಪ. 1,06,000 ಮಂದಿ ಬಲಿ.

1896: ಸ್ವಾಮಿ ಪ್ರಭುಪಾದ ಎಂದೇ ಖ್ಯಾತರಾದ ಭಾರತದ ಧಾರ್ಮಿಕ ಧುರೀಣ ಎ.ಸಿ. ಭಕ್ತಿವೇದಾಂತ (1-9-1896ರಿಂದ 14-11-1977) ಜನ್ಮದಿನ. ಕೋಲ್ಕತಾದಲ್ಲಿ ಜನಿಸಿದ ಇವರು 54 ವರ್ಷಗಳ ಸಾಂಸಾರಿಕ ಜೀವನದ ನಂತರ ಸನ್ಯಾಸ ಸ್ವೀಕರಿಸಿದರು. ಆಧ್ಯಾತ್ಮಿಕ ಗುರು, ಭಕ್ತಿ ಸಿದ್ಧಾಂತ ಸರಸ್ವತಿ ಗೋಸ್ವಾಮಿ ಪ್ರಭುಪಾದರ ಗುರು. ಇವರು 1965ರಲ್ಲಿ ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್ ನೆಸ್ (ಇಸ್ಕಾನ್) ಸ್ಥಾಪಿಸಿದರು. ಹರೇ ಕೃಷ್ಣ ಚಳವಳಿ ಎಂದೇ ಇದು ಖ್ಯಾತಿ ಪಡೆಯಿತು. 1977ರ ನವೆಂಬರ್ 14ರಂದು ಇಹಲೋಕ ತ್ಯಜಿಸಿದರು.

No comments:

Post a Comment