ನಾನು ಮೆಚ್ಚಿದ ವಾಟ್ಸಪ್

Saturday, September 29, 2018

ಭಾರತದಿಂದ ಇನ್ನೊಂದು ಸರ್ಜಿಕಲ್ ದಾಳಿ? ರಾಜನಾಥ್ ಸಿಂಗ್ ಸುಳಿವು


ಭಾರತದಿಂದ ಇನ್ನೊಂದು ಸರ್ಜಿಕಲ್ ದಾಳಿ?
ರಾಜನಾಥ್ ಸಿಂಗ್ ಸುಳಿವು

ನವದೆಹಲಿ: ಭಾರತವು ಪಾಕ್ ಗಡಿಯಾಚೆ ನುಗ್ಗಿ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ್ದ ಸರ್ಜಿಕಲ್ ದಾಳಿಯ ಎರಡನೇ ವರ್ಷಾಚರಣೆಗೆ ಮುನ್ನ ಪಾಕಿಸ್ತಾನದ ಮೇಲೆ ಇನ್ನೊಂದು ಸರ್ಜಿಕಲ್ ದಾಳಿ ನಡೆದಿದೆಯೇ?

2016 ಸರ್ಜಿಕಲ್ ದಾಳಿ 2ನೇ ವರ್ಷಾಚರಣೆಯ ಮುನ್ನಾ ದಿನ 2018 ಸೆಪ್ಟೆಂಬರ್ 28 ಶುಕ್ರವಾರ ಗೃಹ ಸಚಿವ ರಾಜನಾಥ್ ಸಿಂಗ್ ಅವರುಕಳೆದೆರಡು ದಿನಗಳಲ್ಲಿ ಏನೂ ಮಹತ್ತರವಾದುದು ನಡೆದಿದೆಎಂದು ಸುಳಿವು ನೀಡಿದ್ದಾರೆ.

ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಪಡೆಗಳು ಭಾರತದ ಗಡಿ ಭದ್ರತಾ ಪಡೆಯ (ಬಿಎಸ್ ಎಫ್) ಯೋಧನನ್ನು ಕೊಲೆಗೈದ ಹಿನ್ನೆಲೆಯಲ್ಲಿ ಮಾತನಾಡುತ್ತಾ ಸಚಿವರು ಸುಳಿವು ಕೊಟ್ಟಿದ್ದಾರೆ.

ಬಿಎಸ್ ಎಫ್ ಯೋಧನನ್ನು ಕ್ರೂರವಾಗಿ ಕೊಂದಿರುವುದಕ್ಕೆ ಸೇಡು ತೀರಿಸಲು ಭಾರತೀಯ ಪಡೆಗಳು ಪಾಕಿಸ್ತಾನಿ ಗುರಿಗಳ ಮೇಲೆ ದಾಳಿ ನಡೆಸಿರುವ ಸಾಧ್ಯತೆಗಳ ಬಗ್ಗೆ ಸಿಂಗ್ ಪರೋಕ್ಷವಾಗಿ ಮಾತನಾಡಿದ್ದಾರೆ.

ಏನೋ ಸಂಭವಿಸಿದೆ, ನಾನು ಈಗ ಬಹಿರಂಗ ಪಡಿಸುವುದಿಲ್ಲ. ೇನು ಸಂಭವಿಸಿದೆಯೋ ಅದು ಒಳ್ಳೆಯದಕ್ಕಾಗಿಯೇ ಸಂಭವಿಸಿದೆ. ನನ್ನನ್ನು ನಂಬಿ. 2-3 ದಿನಗಳ ಹಿಂದೆ ದೊಡ್ಡ ಘಟನೆ ಘಟಿಸಿದೆ. ಭವಿಷ್ಯದಲ್ಲಿಯೂ ಇದು ಘಟಿಸುತ್ತದೆಎಂದು ರಾಜನಾಥ್ ಸಿಂಗ್ ಅವರು ಬಿಎಸ್ ಎಫ್ ಯೋಧ ನರೇಂದ್ರ ಸಿಂಗ್ ಹತ್ಯೆಯನ್ನು ಪ್ರಸ್ತಾಪಿಸುತ್ತಾ ಹೇಳಿದ್ದಾರೆ.

ಅವರು ನಮ್ಮ ನೆರೆಹೊರೆಯವರಾದ್ದರಿಂದ ಮೊದಲು ಗುಂಡು ಹಾರಿಸಬೇಡಿ ಎಂದು ನಾನು ಬಿಎಸ್ ಎಫ್ ಯೋಧರಿಗೆ ಹೇಳಿದ್ದೇನೆ. ಆದರೆ ಅವರು ಮೊದಲ ಗುಂಡು ಹಾರಿಸಿದರೆ, ಪ್ರತಿಯಾಗಿ ನೀವು ಹಾರಿಸುವ ಗುಂಡುಗಳ ಲೆಕ್ಕ ಇಡಬೇಡಿ ಎಂದು ಹೇಳಿದ್ದೇನೆಎಂದು ಗೃಹ ಸಚಿವರು ನುಡಿದರು.

ಕೆಲ ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಬಿಎಸ್ ಎಫ್ ಯೋಧ ನರೇಂದ್ರ ಸಿಂಗ್ ಅವರನ್ನು ಗುಂಡಿಟ್ಟು ಕೊಂದು ದೇಹವನ್ನು ಛಿದ್ರ ಗೊಳಿಸಲಾಗಿತ್ತು.

ಕೃತ್ಯಕ್ಕೆ ಪ್ರತಿಕ್ರಮವನ್ನು ಇಷ್ಟರಲ್ಲೇ ಕೈಗೊಳ್ಳಲಾಗುವುದು ಎಂದು ಬಿಎಸ್ ಎಫ್ ಪ್ರಕಟಿಸಿತ್ತು.
ಸರ್ಕಾರವು ಸೆಪ್ಟೆಂಬರ್ 27ರಂದು 2016 ಸರ್ಜಿಕಲ್ ದಾಳಿಯ ವಿಡಿಯೋ ಪ್ರಕಟಿಸಿದ್ದರೆ, ಬಿಜೆಪಿ ದಾಳಿಯ ಚಿತ್ರಗಳನ್ನು ಪ್ರಕಟಿಸಿತ್ತು.

ಇದೇ ಸಂದರ್ಭದಲ್ಲಿ ಮಾಧ್ಯಮವೊಂದು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯ ಆಚೆ ಪಾಕ್ ಆಕ್ರಮಿತ ಪ್ರದೇಶದಲ್ಲಿ ಸುಮಾರು 250 ಭಯೋತ್ಪಾದಕರು 27 ಲಾಂಚ್ ಪ್ಯಾಡ್ ಗಳನ್ನು ನಿರ್ಮಿಸಿ  ಭಾರತಕ್ಕೆ ನುಗ್ಗಲು ಸಜ್ಜಾಗಿದ್ದಾರೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿತ್ತು.

No comments:

Post a Comment