ನಾನು ಮೆಚ್ಚಿದ ವಾಟ್ಸಪ್

Monday, September 24, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 24

ಇಂದಿನ ಇತಿಹಾಸ History Today ಸೆಪ್ಟೆಂಬರ್ 24

2018: ಪಾಕ್ಯೋಂಗ್ (ಸಿಕ್ಕಿಂ): ಸಿಕ್ಕಿಂ ರಾಜ್ಯದ ಪ್ರಪ್ರಥಮ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವನ್ನು ಪಾಕ್ಯೋಂಗ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು  ಉದ್ಘಾಟಿಸಿದರು. ಇದರೊಂದಿಗೆ ಭಾರತದ ವಿಮಾನಯಾನ ಭೂಪಟಕ್ಕೆ ಸಿಕ್ಕಿಂ ಸೇರ್ಪಡೆಗೊಂಡಿತು. ವಿಮಾನ ನಿಲ್ದಾಣ ಪಡೆಯುವ ಸಿಕ್ಕಿಂ ರಾಜ್ಯದ ಕನಸು ಶಿಲಾನ್ಯಾಸ ಮಾಡಿದ ವರ್ಷದ ಬಳಿಕ ಈದಿನ ನನಸಾಯಿತು. ೨೦೦೯ರಲ್ಲಿ ರಾಜಧಾನಿ ಗ್ಯಾಂಗ್ಟೊಕ್ ನಿಂದ ೩೩ ಕಿಮೀ ದೂರದ ಪಾಕ್ಯೋಂಗ್ನಲ್ಲಿ ವಿಮಾನ ನಿಲ್ದಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿತ್ತುಅಕ್ಟೋಬರ್ ೪ರಂದು ಪಾಕ್ಯೋಂಗ್ ನಿಂದ ಮೊದಲ ವಾಣಿಜ್ಯ ವಿಮಾನ ತನ್ನ ಹಾರಾಟವನ್ನು ಆರಂಭಿಸಲಿದೆ. ಪಾಕ್ಯೋಂಗ್ ವಿಮಾನ ನಿಲ್ದಾಣವು ಸಿಕ್ಕಿಂ ರಾಜ್ಯಕ್ಕೆ ನೇರ ವಿಮಾನ ಸಂಪರ್ಕಕದ ಮಾರ್ಗವನ್ನು ತೆರೆದಿದ್ದು, ಭಾರತದ ೧೦೦ನೇ ಕ್ರಿಯಾತ್ಮಕ ವಿಮಾನ ನಿಲ್ದಾಣವಾಗಲಿದೆಭಾರತ - ಚೀನಾ ಗಡಿಯಿಂದ ೬೦ ಕಿಮೀ ದೂರದಲ್ಲಿರುವ ವಿಮಾನ ನಿಲ್ದಾಣವು ೨೦೧ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದು, ಪಾಕ್ಯೋಂಗ್ ಗ್ರಾಮದಿಂದ ಕಿಮೀ ದೂರದ ಬೆಟ್ಟದ ಮೇಲೆ ನಿರ್ಮಾಣಗೊಂಡಿದೆ ಎಂದು ಸಿಕ್ಕಿಂ ಮುಖ್ಯ ಕಾರ್ಯದರ್ಶಿ .ಕೆ. ಶ್ರೀವಾಸ್ತವ ನುಡಿದರು. ಎಂಜಿನಿಯರಿಂಗ್ ವಿಸ್ಮಯ: ಪಾಕ್ಯೋಂಗ್ ವಿಮಾನ ನಿಲ್ದಾಣವು ಸಿಕ್ಕಿಂನ್ನು ಭಾರತದ ವಿಮಾನಯಾನ ನಕ್ಷೆಗೆ ಸೇರ್ಪಡೆ ಮಾಡಿತು. ಇಲ್ಲಿಯವರೆಗೆ ರಾಷ್ಟ್ರದಲ್ಲಿ ವಿಮಾನ ನಿಲ್ದಾಣ ಇಲ್ಲದೇ ಇದ್ದ ಏಕೈಕ ರಾಜ್ಯ ಸಿಕ್ಕಿಂ ಆಗಿತ್ತು. ರಾಜ್ಯಕ್ಕೆ ಅತ್ಯಂತ ಹತ್ತಿರದಲ್ಲಿ ಇದ್ದ ವಿಮಾನ ನಿಲ್ದಾಣವೆಂದರೆ ೧೨೫ ಕಿಮೀ ದೂರದಲ್ಲಿರುವ ಪಶ್ಚಿಮ ಬಂಗಾಳದ ಬಗ್ದೋಗ್ರಾ ವಿಮಾನ ನಿಲ್ದಾಣವಾಗಿತ್ತು. ಪಾಕ್ಯೋಂಗ್ ವಿಮಾನ ನಿಲ್ದಾಣವು ಈಶಾನ್ಯ ಭಾರತದಲ್ಲಿ ನಿರ್ಮಾಣಗೊಂಡಿರುವ ಮೊತ್ತ ಮೊದಲ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ. ಈವಿಮಾನ ನಿಲ್ದಾಣ ಯೋಜನೆಗೆ ಕೇಂದ್ರ ಸಚಿವ ಸಂಪುಟವು ದಶಕಗಳಷ್ಟು ಹಿಂದೆ ಮಂಜೂರಾತಿ ನೀಡಿತ್ತು. ಸಮುದ್ರಮಟ್ಟದಿಂದ ೪೫೦೦ ಅಡಿ ಎತ್ತರದಲ್ಲಿ ನಿರ್ಮಾಣಗೊಂಡಿರುವ ವಿಹಂಗಮ ವಿಮಾನ ನಿಲ್ದಾಣ, ಇಷ್ಟೊಂದು ಎತ್ತರದಲ್ಲಿ ನಿರ್ಮಾಣಗೊಂಡಿರುವ ಕಾರಣಕ್ಕಾಗಿಎಂಜಿನಿಯರಿಂಗ್ ವಿಸ್ಮಯ ಎಂಬುದಾಗಿ ಪರಿಗಣಿಸಲ್ಪಟ್ಟಿದೆ. ಗೀನ್ ಫೀಲ್ಡ್ ಯೋಜನೆಯಲ್ಲಿ ಪರಂಪರಾಗತ ರಚನೆಗಳ ಬಳಕೆಯುವ ಕಾರ್ಯಸಾಧ್ಯವಲ್ಲ ಎಂಬ ಕಾರಣಕ್ಕಾಗಿ ಮಣ್ಣಿನ ಬಲವರ್ಧನೆ, ಇಳಿಜಾರು ಸ್ಥಿರತೆ ತಂತ್ರಜ್ಞಾನದಂತಹ ಭೂ ತಾಂತ್ರಿಕ ಎಂಜಿನಿಯರಿಂಗ್ನಂತಹ ಅಸಾಧಾರಣ ತಂತ್ರಜ್ಞಾನವನ್ನು ವಿಮಾನ ನಿಲ್ದಾಣದಲ್ಲಿ ಬಳಸಲಾಗಿದೆ. ಮಣ್ಣಿನ ಬಲವರ್ಧನೆಗಾಗಿ ೮೦ ಮೀಟರ್ ಎತ್ತರದ ಗೋಡೆ ನಿರ್ಮಿಸಲಾಗಿದ್ದು, ಇದು ವಿಶ್ವದಲ್ಲೇ ಅತ್ಯಂತ ಎತ್ತರದ ಗೋಡೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಮುಂದಿನ ತಿಂಗಳು ಪಾಕ್ಯೋಂಗ್ ವಿಮಾನ ನಿಲ್ದಾಣವು ಮುಂದಿನ ತಿಂಗಳು ಸಂಪೂರ್ಣವಾಗೆ ಸೇವೆ ಲಭಿಸಲಿದ್ದು, ಆಗ ಕಡೆಗೂ ಸಿಕ್ಕಿಂಗೆ ನೇರ ವಿಮಾನ ಪಯಣ ಸಾಧ್ಯವಾಗಲಿದೆ. ಮಿತವ್ಯಯದ ಸ್ಪೈಸ್ ಜೆಟ್ ವಿಮಾನ ಸಂಸ್ಥೆಯು ತನ್ನ ಚೊಚ್ಚಲ ವಿಮಾನವನ್ನು ಅಕ್ಟೋಬರ್ ೪ರಂದು ಕೋಲ್ಕತಾ ವಿಮಾನ ನಿಲ್ದಾಣದಿಂದ ಪಾಕ್ಯೋಂಗ್ ವಿಮಾನ ವಿಮಾನ ನಿಲ್ದಾಣಕ್ಕೆ ಹಾರಿಸಲಿದೆಪ್ರಸ್ತುತ ಗ್ಯಾಂಗ್ಟೊಕ್ ತಲುಪಲು ಪಶ್ಚಿಮ ಬಂಗಾಳದ ಬಗ್ದೋಗ್ರಾ ವಿಮಾನ ನಿಲ್ದಾಣಕ್ಕೆ ವಿಮಾನ ಪಯಣ ಮಾಡಬೇಕುಪಾಕ್ಯೋಂಗ್ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉದಾನ್ ಯೋಜನೆಗೆ ಸೇರ್ಪಡೆ ಮಾಡಲಾಗಿದೆ. ಇದರಿಂದ ಪ್ರಾದೇಶಿಕ ಸಂಪರ್ಕ ಸಾಧ್ಯವಾಗಿ ಸಿಕ್ಕಿಂನ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿ ಹೇಳಿದರುಮಾರ್ಚ್ ೫ರಂದು ಭಾರತೀಯ ವಾಯುಪಡೆಯ ಡೋರ್ನಿಯರ್ ೨೨೮ ವಿಮಾನ ನಿಲ್ದಾಣದಿಂದ ಪರೀಕ್ಷಾ ಹಾರಾಟಗಳನ್ನು ನಡೆಸಿತ್ತು. ಮಾರ್ಚ್ ೧೦ರಂದು ಸ್ಪೈಸ್ ಜೆಟ್ ತನ್ನ ೭೮ ಆಸನಗಳ ಬೊಂಬಾರ್ಡಿಯರ್ ಕ್ಯೂ ೪೦೦ ವಿಮಾನವನ್ನು ಕೋಲ್ಕತದಿಂದ ಪಾಕ್ಯೋಂಗ್ ಗೆ ಹಾರಿಸಿತ್ತು.

2018: ಮುಂಬೈ: ಸರ್ಕಾರಿ ರಂಗದ ಬ್ಯಾಂಕುಗಳ ಸಾಲ ಬಾಕಿ ಇತ್ಯರ್ಥಗೊಳಿಸುವ ತಮ್ಮ ಯತ್ನಗಳಿಗೆ ಜಾರಿ ನಿರ್ದೇಶನಾಲಯವೇ (ಇಡಿಪ್ರತಿರೋಧ ವ್ಯಕ್ತ ಪಡಿಸಿದೆ ಎಂದು ಉದ್ಯಮಿ ವಿಜಯ್ ಮಲ್ಯ ಅವರು ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಪ್ರತಿಪಾದಿಸಿದರು. ಪ್ರಸ್ತುತ ಇಂಗ್ಲೆಂಡಿನಲ್ಲಿ ಇರುವ ಮಲ್ಯ ಅವರ ವಿರುದ್ಧ ೯೦೦೦ ಕೋಟಿ ರೂಪಾಯಿ ಮೊತ್ತದ ಬ್ಯಾಂಕ್ ಸಾಲಗಳನ್ನು ಮರುಪಾವತಿ ಮಾಡದೆ ಸುಸ್ತಿ ಸಾಲವನ್ನಾಗಿ ಮಾಡಿದ ಆರೋಪವನ್ನು ಜಾರಿ ನಿರ್ದೇಶನಾಲಯ ಹೊರಿಸಿದೆಪಿಎಂಎಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ಎಂ.ಎಸ್. ಆಜ್ಮಿ ಅವರ ಮುಂದೆ ಅರ್ಜಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯವು ಮಲ್ಯ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯ ಅಡಿಯಲ್ಲಿ ದೇಶಭ್ರಷ್ಟ ಎಂಬುದಾಗಿ ಘೋಷಿಸುವಂತೆ ಕೋರಿತ್ತು. ವಕೀಲರ ಮೂಲಕ ಸಲ್ಲಿಸಿರುವ ತಮ್ಮ ಉತ್ತರದಲ್ಲಿ ಜಾರಿ ನಿರ್ದೇಶನಾಲಯದ ಅರ್ಜಿಯನ್ನು ವಿರೋಧಿಸಿರುವ ಮಲ್ಯ. ’ಕಳೆದ ಎರಡು ಮೂರು ವರ್ಷಗಳಿಂದ ಸರ್ಕಾರಿ ರಂಗದ ಬ್ಯಾಂಕುಗಳ ಸಾಲ ಮರುಪಾವತಿಗೆ ತಾವು ಯತ್ನಗಳನ್ನು ಮಾಡುತ್ತಿದ್ದಾಗ ಬ್ಯಾಂಕುಗಳ ಹಣ ಮರುಪಾವತಿ ಪ್ರಕ್ರಿಯೆಗೆ ಅನುಕೂಲವಾಗುವ ಕ್ರಮ ತೆಗೆದುಕೊಳ್ಳುವ ಬದಲು ಜಾರಿ ನಿರ್ದೇಶನಾಲಯವು ಹೆಜ್ಜೆ ಹೆಜ್ಜೆಗೂ ಪ್ರಯತ್ನಗಳನ್ನು ವಿರೋಧಿಸಿತು ಎಂದು ತಿಳಿಸಿದರು.  ತಮ್ಮ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಯತ್ನವಾಗಿ ಜಾರಿ ನಿರ್ದೇಶನಾಲಯವು ಸಲ್ಲಿಸಿರುವ ಅರ್ಜಿಯು ಸಾರ್ವಜನಿಕ ಮತ್ತು ರಾಷ್ಟ್ರದ ಹಿತಾಸಕ್ತಿಗಳಿಗೆ ವಿರುದ್ಧ ಎಂದೂ ಮಲ್ಯ ತಮ್ಮ ಉತ್ತರದಲ್ಲಿ ತಿಳಿಸಿದರು. ತಮ್ಮನ್ನು ದೇಶಭ್ರಷ್ಟ ಎಂಬುದಾಗಿ ಘೋಷಿಸುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿರುವ ಮಲ್ಯ, ತಾವು ಇಂಗ್ಲಂಡಿನಲ್ಲಿ ಗಡೀಪಾರು ಪ್ರಕ್ರಿಯೆಗಳಲ್ಲಿ ಅಧಿಕಾರಿಗಳ ಜೊತೆ ಸಹಕರಿಸುತ್ತಿದ್ದು, ಭಾರತ ಸರ್ಕಾರದ ಅರ್ಜಿ ಮೇರೆಗೆ ವಿಚಾರಣೆ ನಡೆಸುತ್ತಿರುವ ಇಂಗ್ಲೆಂಡ್ ನ್ಯಾಯಾಲಯಗಳ ವ್ಯಾಪ್ತಿ ಮತ್ತು ಪ್ರಕ್ರಿಯೆಗೆ ತಮ್ಮನ್ನು ಒಡ್ಡಿಕೊಂಡಿರುವುದಾಗಿ ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ, ತಾನು ಭಾರತಕ್ಕೆ ವಾಪಸಾಗಲು ನಿರಾಕರಿಸಿದ್ದೇನೆ ಎಂಬುದಾಗಿ ಹೇಳುವುದು ಸುಳ್ಳಾಗುತ್ತದೆ ಎಂದು ಪ್ರತಿಪಾದಿಸಿರುವ ಮಲ್ಯ ನೆಲದ ಕಾನೂನಿಗೆ ಬದ್ಧನಾಗಿರುವಾಗ ವ್ಯಕ್ತಿಯನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂಬುದಾಗಿ ಘೋಷಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ಹೇಳಿದರು.

2018: ಪಾಟ್ನಾ: ಬಿಹಾರದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮುಂದಿಟ್ಟಿರುವ ೨೦-೨೦ ಸೀಟು ಹಂಚಿಕೆ ಸೂತ್ರವನ್ನು ತಿರಸ್ಕರಿಸುವ ಬಗ್ಗೆ ಆರ್ ಎಲ್ ಎಸ್ ಪಿ ಮುಖ್ಯಸ್ಥ ಉಪೇಂದ್ರ ಕುಶವಾಹ ಅವರು ಸುಳಿವು ನೀಡಿದ್ದು, ೨೦೧೯ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ಬಿಜೆಪಿಗೆ ದೊಡ್ಡ ಹೊಡೆತ ಬಿದ್ದಿತು. ಪಾಟ್ನಾದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಎನ್ ಡಿಎ ಮಿತ್ರ ಪಕ್ಷದ ನಾಯಕ ಕುಶವಾಹ ಅವರುನಾನು ಕ್ರಿಕೆಟ್ ಆಡುವುದಿಲ್ಲ ಮತ್ತು ೨೦-೨೦ ಸೂತ್ರ ನನಗೆ ಅರ್ಥವಾಗುವುದಿಲ್ಲ. ಬದಲಿಗೆ ನಾನು ಗಿಲ್ಲಿ ದಂಡ ಆಡಲು ಇಷ್ಟ ಪಡುತ್ತೇನೆ ಎಂದು ಹೇಳಿದರು. ಬಿಜೆಪಿಯ ೨೦-೨೦ ಸೀಟು ಹಂಚಿಕೆ ಯೋಜನೆಯ ಪ್ರಕಾರ, ಬಿಹಾರದ ೪೦ ಲೋಕಸಭಾ ಸ್ಥಾನಗಳ ಪೈಕಿ ೨೦ರಲ್ಲಿ ಪಕ್ಷ ಸ್ಪರ್ಧಿಸಲಿದೆ. ನಿತೀಶ್ ಕುಮಾರ್ ಅವರ ಜೆಡಿ(ಯು)ಗೆ ೧೨, ರಾಮವಿಲಾಸ್ ಪಾಸ್ವಾನ್ ಅವರು ಎಲ್ ಜೆಪಿಗೆ ಮತ್ತು ಕುಶವಾಹ ಅವರ ಆರ್ ಎಲ್ ಎಸ್ ಪಿಗೆ ಸ್ಥಾನಗಳು ಲಭಿಸಲಿವೆಬಿಜಿಪಿ ನಿಮ್ಮನ್ನು ಸಂಪರ್ಕಿಸಿದೆಯೇ ಎಂಬ ಪ್ರಶ್ನೆಗೆ ಕುಶವಾಹ ಅವರುಇದರ ಬಗ್ಗೆ ಸ್ಪಷ್ಟ ನಿರ್ಧಾರ ಆಗುವವರೆಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಉತ್ತರಿಸಿದರುನಾನು ನನ್ನ ಜೀವಮಾನದಲ್ಲಿ ಎಂದೂ ೨೦-೨೦ ಕ್ರಿಕೆಟ್ ಆಡಿಲ್ಲ ಮತ್ತು ಈಗ ನನಗೆ ಕ್ರಿಕೆಟ್ ಆಡುವ ಆಸಕ್ತಿಯೂ ಇಲ್ಲ. ಬದಲಿಗೆ ನಾನು ಗಿಲ್ಲಿ ದಂಡ ಆಡಲು ಇಷ್ಟ ಪಡುತ್ತೇನೆ ಎಂದು ಅವರು ನುಡಿದರು. ’ಗಿಲ್ಲಿ ದಂಡ ಅಂದರೆ ನೌಕೆ ಬದಲಿಸುವ ಸೂಚನೆಯೇ ಎಂಬ ಪ್ರಶ್ನೆಗೆ ಕುಶವಾಹ ನಸು ನಕ್ಕುಇನ್ನೂ ಕೆಲವು ದಿನ ಕಾಯಿರಿ. ಎಲ್ಲವೂ ಶೀಘ್ರದಲ್ಲೇ ಸ್ಪಷ್ಟವಾಗುತ್ತದೆ ಎಂದು ಹೇಳಿದರು. ಎನ್ ಡಿಎ ಅಂಗ ಪಕ್ಷವಾದ ರಾಷ್ಟ್ರೀಯ ಲೋಕಸಮತಾ ಪಕ್ಷವು (ಆರ್ ಎಲ್ ಎಸ್ ಪಿ) ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿ(ಯು) ಆಡಳಿತಾರೂಢ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ದೂರಿತ್ತು. ಜೆಡಿಯು ದೆಹಲಿಯಲ್ಲಿ ಅಮಿತ್ ಶಾ ಅವರ ಜೊತೆ ಸೀಟು ಹಂಚಿಕೆ ಸೂತ್ರವನ್ನು ಅಂತಿಮಗೊಳಿಸುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಆರ್ ಎಲ್ ಎಸ್ ಪಿ ದಾಳಿ ನಡೆಸಿತು. ಕುಶವಾಹ ಅವರ ಪಕ್ಷಕ್ಕೆ ೪೦ ಲೋಕಸಭಾ ಸ್ಥಾನಗಳ ಪೈಕಿ ೨ಕ್ಕಿಂತ ಹೆಚ್ಚಿನ ಸ್ಥಾನ ಸಿಗುವುದು ಅಸಂಭವ ಎಂದು ಮೂಲಗಳು ಹೇಳಿದವು.
ನಿತೀಶ್ ಕುಮಾರ್ ಅವರ ನಿಕಟವರ್ತಿ ಹಾಗೂ ಜೆಡಿಯು  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್ಸಿಪಿ ಸಿಂಗ್ ಅವರು ಸೀಟು ಹಂಚಿಕೆ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಪ್ರತಿಪಾದಿಸಿದರು. ಕಳೆದ ವರ್ಷ ನಿತೀಶ್ ಕುಮಾರ್ ಅವರು ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಬಂದ ಬಳಿಕ ಗೊಂದಲ ಸೃಷ್ಟಿಯಾಗಿದೆ. ಅವರ ಪಕ್ಷವು ದೊಡ್ಡಣ್ಣದ ಪಾತ್ರ ವಹಿಸಲು ಮತ್ತು ಮುಖ್ಯಮಂತ್ರಿಯನ್ನು ಲೋಕಸಭಾ ಚುನಾವಣೆಯಲ್ಲಿ ಮುಖ್ಯವಾಗಿ ಬಿಂಬಿಸಲು ಬಯಸಿದೆ ಎಂದು ಆರ್ ಎಲ್ ಎಸ್ ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾಧವ್ ಆನಂದ್ ನುಡಿದರು.  ‘ಜನ ಬೆಂಬಲ ಇಲ್ಲದ ಜೆಡಿ(ಯು) ಪರ ಬಿಜೆಪಿ ಪ್ರಚಾರ ಮಾಡುತ್ತಿರುವುದು ದುರದೃಷ್ಟಕರ. ಇದೇ ವೇಳೆಯಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಪರೋಕ್ಷವಾಗಿ ಎನ್ಡಿಎ ಬಿಟ್ಟು ವಿರೋಧಿ ಮಹಾಮೈತ್ರಿಯತ್ತ ಓಡಿ ಎಂದು ನಮಗೆ ಹೇಳಲಾಗುತ್ತಿದೆಯೇ ಎಂದು ನಾಗಮಣಿ ಅವರು ಅಚ್ಚರಿ ವ್ಯಕ್ತ ಪಡಿಸಿದರು.

2018: ನವದೆಹಲಿ: ದ್ವಿತೀಯ ಜಾಗತಿಕ ನೌಕಾಯಾನ ಪ್ರದಕ್ಷಿಣೆ ಸಾಹಸ ಕೈಗೊಂಡಿದ್ದ ಸಂದರ್ಭದಲ್ಲಿ ಹಿಂದೂ ಮಹಾಸಾಗರದಲ್ಲಿ ಭಾರಿ ಬಿರುಗಾಳಿಗೆ ಸಿಲುಕಿ ದೋಣಿ ಭಗ್ನಗೊಳ್ಳುವುದರ ಜೊತೆಗೆ ಗಾಯಗೊಂಡು ಅಪಾಯದಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯ ನೌಕಾಪಡೆಯ ಕಮಾಂಡರ್ ಅಭಿಲಾಶ್ ಟೋಮಿ ಅವರನ್ನು ಫ್ರೆಂಚ್ ನೌಕೆಯೊಂದರ ಮೂಲಕ  ರಕ್ಷಿಸಲಾಯಿತು. ಟೋಮಿ ಅವರು ಚೇತರಿಸುತ್ತಿದ್ದು, ಫ್ರೆಂಚ್ ನೌಕೆಯ ಮೂಲಕ ಅವರನ್ನು ಸಮೀಪದ ದ್ವೀಪಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ವೀಟ್ ಮೂಲಕ ತಿಳಿಸಿದರು. ಟೋಮಿ ಅವರು ಎಚ್ಚರದಲ್ಲಿದ್ದಾರೆ ಆದರೆ ನಿರ್ಜಲೀಕರಣದಿಂದಾಗಿ ಬಳಲಿದ್ದಾರೆ ಎಂದು ಅಧಿಕಾರಿಯ ತಂದೆ ಪಿ.ಸಿ. ಟೋಮಿ ಕೋಚಿಯಲ್ಲಿ ಹೇಳಿದರುಟೋಮಿ ಅವರು ೨೦೧೮ರ ಗೋಲ್ಡನ್ ಗ್ಲೋಬ್ ರೇಸ್ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಅವರ ದೇಸೀ ನಿರ್ಮಿತಥುರಾಯಿ ದೋಣಿಯ ಕೋವೆ ಮರವು (ಸ್ಥಂಭ) ಬಿರುಗಾಳಿ ಮತ್ತು ೧೪ ಮೀಟರ್ ಎತ್ತರದ ಅಲೆಯ ಅಪ್ಪಳಿಸುವಿಕೆಯಿಂದ ಧ್ವಂಸಗೊಂಡಿದೆ. ಬಿರುಗಾಳಿಯ ಹೊಡೆತಕ್ಕೆ ಗಾಯಗೊಂಡ ಟೋಮಿ ಅವರ ಬೆನ್ನುಮೂಳೆಗೆ ಏಟು ಬಿದ್ದಿದ್ದು ಅವರಿಗೆ ಅಲುಗಾಡಲು ಸಾಧ್ಯವಿಲ್ಲದಂತಹ ಸ್ಥಿತಿ ಉಂಟಾಯಿತು. ಮಾರಿಷಸ್ ನಿಂದ ಕಾರ್ಯಾಚರಿಸುತ್ತಿದ್ದ ಭಾರತೀಯ ನೌಕಾಪಡೆಯ ಪಿ-೮೧ ವಿಮಾನವು ಪ್ರಕ್ಷುಬ್ಧ ಸಾಗರದಲ್ಲಿ ಸಿಕ್ಕಿಹಾಕಿಕೊಂಡಿದ್ದಥುರಾಯಿ ದೋಣಿಯನ್ನು ಸೆಪ್ಟೆಂಬರ್ ೨೩ರ ಭಾನುವಾರ ಬೆಳಗ್ಗೆ ಆಸ್ಟ್ರೇಲಿಯಾದ ಪರ್ತ್ನಿಂದ ೧೯೦೦ ನಾಟಿಕಲ್ ಮೈಲು ಆಗ್ನೇಯಕ್ಕೆ ಮತ್ತು ಕೇಪ್ ಕೋಮೋರಿನ್ ನಿಂದ ,೭೦೦ ನಾಟಿಕಲ್ ಮೈಲು ದೂರದಲ್ಲಿ ಪತ್ತೆ ಹಚ್ಚಿತ್ತು ಎಂದು ನೌಕಾಪಡೆ ತಿಳಿಸಿತು. ಟೋಮಿ ಅವರು ತಮ್ಮ ಕೊನೆಯ ಸಂದೇಶದಲ್ಲಿ ತಾವು ಸುರಕ್ಷಿತವಾಗಿರುವುದಾಗಿ ತಿಳಿಸಿದ್ದರು. ಆದರೆ ಬೆನ್ನಿಗೆ ಆಗಿರುವ ಗಾಯದಿಂದ  ಅಲುಗಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಇರುವುದಾಗಿಯೂ ಅವರು ತಿಳಿಸಿದ್ದರು. ೩೯ರ ಹರೆಯದ ನೌಕಾ ಅಧಿಕಾರಿ ಗಾಯಗೊಂಡಂದಿನಿಂದ ಒಂದು ಹನಿ ನೀರಿಲ್ಲದೆ ಬಳಲಿದ್ದರು. ಅವರ ದೋಣಿಯಲ್ಲಿದ್ದ ವಿಎಚ್ ಎಫ್ ರೇಡಿಯೋ ಬ್ಯಾಟರಿಗಳು ನಿಷ್ಕ್ರಿಯಗೊಂಡದ್ದರಿಂದ ರಕ್ಷಣಾ ವಿಮಾನಗಳ ಸಂಪರ್ಕ ಪಡೆಯಲೂ ಅವರಿಗೆ ಸಾಧ್ಯವಾಗಿರಲಿಲ್ಲ. ಭಾರತೀಯ ನೌಕಾಪಡೆ ಮತ್ತು ರಾಯಲ್ ಆಸ್ಟ್ರೇಲಿಯನ್ ವಾಯುಪಡೆ ವಿಮಾನಗಳು ಟೋನಿ ಅವರನ್ನು ರಕ್ಷಿಸುವವರೆಗೂ ದೋಣಿಯ ಮೇಲೆ ನಿರಂತರ ನಿಗಾ ಇರಿಸಿತ್ತು ಎಂದು ನೌಕಾಪಡೆ ತಿಳಿಸಿತು. ರಕ್ಷಣಾ ತಂಡವು ಆಸ್ಟ್ರೇಲಿಯಾ ನೌಕಾಪಡೆ ಜೊತೆಗೆ ಸಮನ್ವಯದೊಂದಿಗೆ ಕಾರ್ ನಿರ್ವಹಿಸಿತ್ತು. ’ಗಾಯಾಳು ಅಧಿಕಾರಿಯನ್ನು ಫ್ರೆಂಚ್ ನೌಕೆ ಒಸೀರಿಸ್ ಮೂಲಕ ಮುಂದಿನ ೧೬ ಗಂಟೆಗಳ ಒಳಗಾಗಿ ಕರೆತರುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಕ್ಯಾನ್ ಬೆರಾದಲ್ಲಿನ ಆಸ್ಟ್ರೇಲಿಯಾ ರಕ್ಷಣಾ ಸಮನ್ವಯ ಕೇಂದ್ರವು ಹಲವಾರು ಸಂಸ್ಥೆಗಳ ಜೊತೆ ಸಮನ್ವಯದೊಂದಿಗೆ ಕೆಲಸ ಮಾಡುತ್ತಿದೆ. ಅದು ರಹಸ್ಯ ಯುದ್ಧ ನಾವೆ ಐಎನ್ ಎಸ್ ಸತ್ಪುರವನ್ನು ಚೇತಕ್ ಹೆಲಿಕಾಪ್ಟರ್ ಮತ್ತು ಟ್ಯಾಂಕರ್ ಐಎನ್ ಎಸ್ ಜ್ಯೋತಿ ಜೊತೆಗೆ ಹಿಂದೂ ಮಹಾಸಾಗರಕ್ಕೆ ಕಳುಹಿಸಿತು.  ೨೦೧೩ರಲ್ಲಿ ಟೋಮಿ ಅವರು ಯಾರೊಬ್ಬರ ನೆರವೂ ಇಲ್ಲದೆ ಏಕಾಂಗಿಯಾಗಿ ತಮ್ಮ ಮ್ಹಾದೇಯಿ ದೋಣಿ ಮೂಲಕ ಜಗತ್ತಿಗೆ ಪ್ರದಕ್ಷಿಣೆ ಹಾಕುವ ಮೂಲಕ ಇಂತಹ ಸಾಹಸಗೈದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರಿಗೆ ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಕೀತಿ ಚಕ್ರವನ್ನು ಸಾಹಸಕ್ಕಾಗಿ ಪಡೆದಿದ್ದರು ಟೋಮಿ ಅವರ ರಕ್ಷಣೆಗಾಗಿ ನೌಕಾಪಡೆಯ ಸರ್ವ ಮಹಿಳಾ ನೌಕೆತಾರಿಣಿ ಸಿಬ್ಬಂದಿ ಪ್ರಾರ್ಥಿಸುತ್ತಿದ್ದಾರೆ. ಮಹಿಳಾ ಸಿಬ್ಬಂದಿ ೨೫೪ ದಿನಗಳಲ್ಲಿ ನೌಕಾಯಾನದ ಮೂಲಕ ವಿಶ್ವಕ್ಕೆ ಪ್ರದಕ್ಷಿಣೆ ಹಾಕಿ ಇತಿಹಾಸ ನಿರ್ಮಿಸಿದ್ದರು.   ‘ನಾವು ಮ್ಹಾದೇಯಿಯಲ್ಲಿ ನೌಕಾಯಾನ ಹೊರಡುವ ಮುನ್ನ ಅವರು ನಮಗೆ ಮುಂಬೈಯಲ್ಲಿ ನಮಗೆ ತರಬೇತಿ ನೀಡಿದ್ದರು. ದೊಡ್ಡ ಸಾಧನೆ ಮಾಡಬಯಸುವ ಲಕ್ಷಾಂತರ ಮಂದಿ ಭಾರತೀಯರಿಗೆ ಅವರು ಸ್ಫೂರ್ತಿಯಾಗಿದ್ದಾರೆ ಎಂದು ತಾರಿಣಿ ಸ್ಕಿಪ್ಪರ್ ಲೆಫ್ಟಿನೆಂಟ್ ಕಮಾಂಡರ್ ವರ್ತಿಕ ಜೋಶಿ ನುಡಿದರು.


2017: ಬೆಂಗಳೂರು: ಮಂಗಳ ಗ್ರಹದ ಕಕ್ಷೆಯಲ್ಲಿ ಪರಿಭ್ರಮಣ ನಡೆಸುತ್ತಿರುವ ಇಸ್ರೊ ಬಾಹ್ಯಾಕಾಶ ನೌಕೆ ಮಾಮ್‌(ಮಾರ್ಸ್ ಆರ್ಬಿಟರ್ ಮಿಷನ್) ಮೂರು ವರ್ಷ ಪೂರೈಸಿತು. 2013 ನವೆಂಬರ್‌ 5ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಧ್ರುವಗಾಮಿ ರಾಕೆಟ್ಮೂಲಕ ಮಂಗಳಯಾನ (ಅಂತರಿಕ್ಷ ನೌಕೆ)ವನ್ನು ಉಡಾವಣೆ ಮಾಡಲಾಗಿತ್ತು. ಭೂಕಕ್ಷೆ, ಸೂರ್ಯಕಕ್ಷೆಯಲ್ಲಿ 300ಕ್ಕೂ ಹೆಚ್ಚು ದಿನ ಕ್ರಮಿಸಿ ಮಂಗಳಯಾನ 2014 ಸೆಪ್ಟೆಂಬರ್‌ 5ರಂದು ಯಶಸ್ವಿಯಾಗಿ ಮಂಗಳಕಕ್ಷೆ ಪ್ರವೇಶಿಸಿತ್ತು. ಯಶಸ್ವಿಯಾಗಿ ಮೂರು ವರ್ಷ ಮಂಗಳ ಕಕ್ಷೆಯಲ್ಲಿ ಪರಿಭ್ರಮಣ ಪೂರೈಸಿದ್ದು, ನಾಲ್ಕನೇ ವರ್ಷದತ್ತ ಸಾಗುತ್ತಿದೆ. ಮೂಲಕ ಮಂಗಳಯಾನ–1 ವಿಕ್ರಮ ಸಾಧಿಸಿದೆ. ಮಾಮ್ನಿಂದ ಪಡೆದಿರುವ ಮಾಹಿತಿಯನ್ನು ವೈಜ್ಞಾನಿಕ ವಿಶ್ಲೇಷಿಸುವ ಕಾರ್ಯ ಮುಂದುವರಿದಿದೆ. ರೂ. 450 ಕೋಟಿ ವೆಚ್ಚದಲ್ಲಿ ಮಂಗಳಯಾನ ಕೈಗೊಳ್ಳಲಾಗಿದ್ದು, ಅಂತರ್ಗ್ರಹೀಯ ಯೋಜನೆಗಳ ಪೈಕಿ ಅತ್ಯಂತ ಅಗ್ಗವಾದುದಾಗಿದೆ. ಮಂಗಳಗ್ರಹಕ್ಕೆ ಅಂತರಿಕ್ಷ ನೌಕೆ ಕಳುಹಿಸುವ ಮೊದಲ ಯತ್ನದಲ್ಲಿಯೇ ಯಶಸ್ಸು ಕಂಡ ಮೊದಲ ದೇಶ ಭಾರತ.

2017: ರಾಂಚಿ: ಅಕ್ರಮವಾಗಿ ಮನೆಯೊಂದರಲ್ಲಿ ಪಟಾಕಿ ತಯಾರಿಸುತ್ತಿದ್ದ ವೇಳೆ ಸಂಭವಿಸಿದ ಭಾರೀ ಅಗ್ನಿ ಅನಾಹುತದಲ್ಲಿ ಸುಮಾರು 8 ಮಂದಿ ಸಾವನ್ನಪ್ಪಿ, 25ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ಜಾರ್ಖಂಡ್ ಪೂರ್ವ ಸಿಂಗ್ ಭೂಮ್ ಜಿಲ್ಲೆಯಲ್ಲಿ ಘಟಿಸಿತು. ಈದಿನ ತಡರಾತ್ರಿ ಘಟನೆ ಸಂಭವಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿತು. ಘಟನಾ ಸ್ಥಳಕ್ಕೆ ಐದು ಅಗ್ನಿಶಾಮಕ ದಳ ತೆರಳಿದ್ದು, ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದ್ದವು ಎಂದು ವರದಿ ತಿಳಿಸಿತು. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಮನೆಗಳಲ್ಲಿ ವಾಸವಾಗಿದ್ದವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಜಾರ್ಖಂಡ್ ಕುಮಾರ್ ದುಬಿ ಗ್ರಾಮದಲ್ಲಿನ ಮನೆಯೊಂದರಲ್ಲಿಯೇ ಬೃಹತ್ ಪ್ರಮಾಣದಲ್ಲಿ ಪಟಾಕಿ ತಯಾರಿಸಲಾಗುತ್ತಿತ್ತು ಎಂದು ಬರ್ಸೊಲ್ ಪೊಲೀಸ್ ಠಾಣೆಯ ಅಧಿಕಾರಿ ಬಿನೋದ್ ಪಾಸ್ವಾನ್ ತಿಳಿಸಿದರು. ಹಲವು ಮಂದಿ ಮನೆಯ ಅವಶೇಷಗಳ ಅಡಿಯಲ್ಲಿ ಸಿಲುಕಿರುವುದಾಗಿ ವಿವರಿಸಿದ್ದು, ನವರಾತ್ರಿ ಹಿನ್ನೆಲೆಯಲ್ಲಿ ಪಟಾಕಿ ತಯಾರಿಸುತ್ತಿದ್ದ ವೇಳೆ ಏಕಾಏಕಿ ಮದ್ದು ಸ್ಫೋಟಗೊಂಡಿದ್ದರಿಂದ ದುರಂತ ಸಂಭವಿಸಿದೆ ಎಂದು ವಿವರಿಸಿದರು.

2017: ವಿಶ್ವಸಂಸ್ಥೆ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದಕ್ಕಾಗಿ ಪಾಕಿಸ್ತಾನವನ್ನು ಕಟುವಾಗಿತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಪಾಕಿಸ್ತಾನವು ವಿಶ್ವಸಂಸ್ಥೆಯ 72ನೇ  ಮಹಾ ಅಧಿವೇಶನದಲ್ಲಿ ಮತ್ತೊಮ್ಮೆ ಕಾಶ್ಮೀರ ವಿಷಯವನ್ನು ಕೆದಕಿತು. ಅಷ್ಟೇ ಅಲ್ಲ, “ಭಾರತವು ಭಯೋತ್ಪಾದನೆಯ ಮಾತೆ’ ಎಂದು ಟೀಕಿಸಿತು. ಸುಷ್ಮಾ ಸ್ವರಾಜ್ ಅವರ ಕಟು ಟೀಕೆಗಳಿಗೆ ಉತ್ತರ ನೀಡಿದ ವಿಶ್ವ ಸಂಸ್ಥೆಯಲ್ಲಿನ ಪಾಕಿಸ್ತಾನದ ಕಾಯಂ ಪ್ರತಿನಿಧಿ ಡಾ. ಮಲಿಹಾ ಲೋಧಿ ಅವರುಕಾಶ್ಮೀರದಲ್ಲಿ ನಡೆಯುತ್ತಿರುವ ಭಾರತದ ಸಮರ ಅಪರಾಧಗಳ ಬಗ್ಗೆ  ಅಂತಾರಾಷ್ಟ್ರೀಯ ತನಿಖೆಯಾಗಲಿ ಎಂದು ಹೇಳಿದರು. ಕಲಹಪ್ರಿಯ ಪಾಕಿಸ್ತಾನದ ಪ್ರತಿನಿಧಿ ಮಲಿಹಾ ಲೋಧಿ ಅವರ ಕೆಲವುಅಣಿಮುತ್ತುಗಳುಇಂತಿವೆ:  * ಭಾರತ ದಕ್ಷಿಣ ಏಷ್ಯಾದಲ್ಲಿನ ಭಯೋತ್ಪಾದನೆಯ ಮಾತೆ * ವಿಶ್ವದ  ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿಕೊಳ್ಳುತ್ತಿರುವ  ಭಾರತವು ವಾಸ್ತವದಲ್ಲಿ ಅತ್ಯಂತ ದೊಡ್ಡ  ಬೂಟಾಟಿಕೆಯ ರಾಷ್ಟ್ರ.  * ಕಾಶ್ಮೀರದಲ್ಲಿ ಭಾರತ ಸರ್ಕಾರಿ ಪ್ರಾಯೋಜಿತ ಹಿಂಸೆ ನಡೆಸುತ್ತಿದೆಜಮ್ಮು ಮತ್ತು ಕಾಶ್ಮೀರದ ಮೂಲ ವಿಷಯವನ್ನು ಮರೆ ಮಾಚುತ್ತಿದೆ. (ಪೆ್ಲ್ಲೆಟ್ / ಬುಲ್ಲೆಟ್ ಗಾಯದ ಮಹಿಳೆಯೊಬ್ಬಳ ಫೊಟೋ ತೋರಿಸಿಇದು ನೋಡಿ ಭಾರತದ ಮುಖಎಂದರು). *ಮೋದಿ ಸರ್ಕಾರ ವರ್ಣೀಯ ಮತ್ತು ಫ್ಯಾಸಿಸ್ಟ್ ಸಿದ್ಧಾಂತದಲ್ಲಿ ನೆಡಲ್ಪಟ್ಟಿರುವ ಸರ್ಕಾರ. 

2016: ಕೋಯಿಕ್ಕೋಡ್ (ಕೇರಳ): ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆ ಮೇಲಿನ ಭಯೋತ್ಪಾದಕ ದಾಳಿಯನ್ನು ಭಾರತ ಎಂದಿಗೂ ಮರೆಯುವುದಿಲ್ಲ. 18 ಸೈನಿಕರ ಬಲಿದಾನ ವ್ಯರ್ಥವಾಗುವುದಿಲ್ಲ. ಭಾರತದೊಂದಿಗೆ ಸಹಸ್ರ ವರ್ಷಗಳ ಯುದ್ಧ ಮಾಡುವ ಪಾಕಿಸ್ತಾನದ ಸವಾಲನ್ನು ಸ್ವೀಕರಿಸಲು ಭಾರತದ ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೋಯಿಕ್ಕೋಡಿನಲ್ಲಿ ಘೋಷಿಸಿದರು. ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಭಾರತ ಸಾಫ್ಟ್ವೇರನ್ನು ಜಗತ್ತಿಗೆ ರಫ್ತು ಮಾಡುತ್ತದೆ. ಆದರೆ ಪಾಕಿಸ್ತಾನ ಭಯೋತ್ಪಾದನೆಯನ್ನು ರಫ್ತು ಮಾಡುತ್ತದೆ. ಭಯೋತ್ಪಾದನೆ ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ಭಾರತದ ಎಲ್ಲಾ ನೆರೆಹೊರೆ ರಾಷ್ಟ್ರಗಳನ್ನೂ ಬಾಧಿಸುತ್ತಿದೆಎಂದು ನುಡಿದರು. ಭಯೋತ್ಪಾದನೆಯ ಸುದ್ದಿ ಜಗತ್ತಿನಲ್ಲಿ ಕೇಳಿ ಬಂದಾಗಲೆಲ್ಲ ಅದರ (ನೆರೆಯ ರಾಷ್ಟ್ರ) ಹೆಸರೂ ಕೇಳಿಬರುತ್ತದೆ. ಒಸಾಮಾ ಬಿನ್ ಲಾಡನ್ನಂತಹ ಉಗ್ರಗಾಮಿಗಳು ಅಲ್ಲೆ ಅಡಗುತಾಣ ನಿರ್ಮಿಸಿಕೊಂಡಿದ್ದರು. ಪಾಕಿಸ್ತಾನದ ಜನರೇ ಭಯೋತ್ಪಾದನೆ ವಿರುದ್ಧ ಹೋರಾಡುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಎದ್ದು ನಿಲ್ಲುವ ದಿನ ಬಂದೇ ಬರುತ್ತದೆ. ಪಾಕಿಸ್ತಾನವನ್ನು ಪ್ರತ್ಯೇಕಿಸುವಂತೆ ಮಾಡುವಲ್ಲಿ ಭಾರತ ಸಫಲವಾಗಿದೆ. ನೀವು ಜಗತ್ತಿನಲ್ಲಿ ಸಂಪೂರ್ಣ ಏಕಾಂಗಿಯಾಗುವಂತೆ ಮಾಡುವ ಯತ್ನವನ್ನು ಭಾರತ ಇನ್ನಷ್ಟು ತೀವ್ರಗೊಳಿಸುವುದು. ಬಡತನ, ನಿರುದ್ಯೋಗ, ಅನಕ್ಷರತೆ ವಿರುದ್ಧ ನಾವು ಹೋರಾಡೋಣ. ಭಾರತ ಮೊದಲು ಗೆಲ್ಲುತ್ತದೋ ಅಥವಾ ಪಾಕಿಸ್ತಾನ ಮೊದಲು ಗೆಲ್ಲುತ್ತದೋ ನೋಡೋಣ ಎಂದು ಪ್ರಧಾನಿ ಹೇಳಿದರು.

2016: ನವದೆಹಲಿ: ಕೆಲವು ದಿನಗಳ ಹಿಂದಷ್ಟೇ ಸ್ವದೇಶಿ ಜೀನ್ಸ್ ಉತ್ಪಾದಿಸುವುದಾಗಿ ಘೋಷಿಸಿದ್ದ ಯೋಗ ಗುರು ಬಾಬಾ ರಾಮದೇವ್ ಇದೀಗ ಶುದ್ಧ ಆಕಳ ಹಾಲು ಮಾರಾಟಕ್ಕಾಗಿ ಪತಂಜಲಿ ಡೇರಿ ಆರಂಭಿಸುವುದಾಗಿ ಪ್ರಕಟಿಸಿದರು. ಕರ್ನೂಲಿನಲ್ಲಿ ನ್ಯಾಷನಲ್ ಡೇರಿ ರಿಸರ್ಚ್ ಇನ್ಸಿಟಟ್ಯೂಟ್ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ರಾಮದೇವ್, ಪ್ರಸಕ್ತ ಹಣಕಾಸು ವರ್ಷದ ಆರಂಭದಲ್ಲಿ ಡೇರಿ ಸ್ಥಾಪನೆಗೆ ಪತಂಜಲಿ ಚಿಂತಿಸಿದ್ದು, ಮೂರು ಡೇರಿ ಪ್ಲಾಂಟ್ ಸ್ಥಾಪನೆಗೆ ಈಗಾಗಲೇ ಯೋಜನೆ ರೂಪಿಸಲಾಗಿದೆ. ಮಹಾರಾಷ್ಟ್ರ, ಕರ್ನಾಟಕ ಹಾಗೂ ಉತ್ತರ ಪ್ರದೇಶದಲ್ಲಿ ಪತಂಜಲಿ ಡೇರಿ ಶಾಖೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು. ಪ್ರಸ್ತುತ ಡೇರಿ ಬಿಸಿನೆಸ್ ಮೂರು ಲಕ್ಷ ಕೋಟಿ ರೂ. ತಲುಪಿದೆ. ಇದು 2022 ವೇಳೆಗೆ 5 ಲಕ್ಷ ಕೋಟಿ ರೂ. ತಲುಪಬೇಕು. ಕಾರ್ಯಕ್ಕೆ ಎನ್ಡಿಆರ್ಎಫ್ ಸಾಥ್ ನೀಡಿ, ದೇಶೀ ತಳಿಗಳ ಹಾಲಿನ ಗುಣಮಟ್ಟ ಕಾಯಲು ಮುಂದಾಗಬೇಕು ಎಂದು ಮನವಿ ಮಾಡಿದರು.

2016: ನ್ಯೂಯಾರ್ಕ್: ಒಂಬತ್ತು ವರ್ಷಗಳಿಂದ ನಿರಂತರ ಸೇವೆ, ಒಂದು ದಿನವೂ ರಜೆ ಇಲ್ಲ. ಹೌದು, ಬೆಕ್ಕೊಂದು ಕಳೆದ 9 ವರ್ಷಗಳಿಂದ ಒಂದು ದಿನವೂ ರಜೆ ತೆಗೆದುಕೊಳ್ಳದೆ ನ್ಯೂಯಾರ್ಕ್ನಲ್ಲಿ ಅಂಗಡಿ ನಡೆಸುತ್ತಿದೆ ಎಂದರೆ ನಂಬುತ್ತೀರಾನಂಬಲೇಬೇಕು, ನ್ಯೂಯಾರ್ಕ್ ಚಿನಾಟೌನ್ ಅಂಗಡಿಯೊಂದಕ್ಕೆ ಅಂಗಡಿ ಮಾಲಕಿ ಆನ್ನೀ ಅವರು ಬೊಬೊ ಹೆಸರಿನ 9 ವರ್ಷದ ಬೆಕ್ಕನ್ನು ಪುಟ್ಟ ಮರಿಯಾಗಿದ್ದಾಗ ತಂದಿದ್ದರು. ಅಲ್ಲಿಂದಾಚೆಗೆ ಬೆಕ್ಕಿಗೆ ಅಂಗಡಿಯೇ ಸರ್ವಸ್ವವಾಯಿತು. ಅಂಗಡಿಯ ಮುಂಭಾಗದ ದ್ವಾರದಲ್ಲಿಯೇ ಸದಾ ಕಾಲ ಕುಳಿತುಕೊಳ್ಳುವ ಬೆಕ್ಕು ಗ್ರಾಹಕರು ಬರುತ್ತಿದ್ದಂತೆಯೇ ಮಿಯಾಂವ್ ಎನ್ನುತ್ತಾ ಸ್ವಾಗತಿಸುತ್ತದೆ. ಬಳಿಕ ಅವರ ಜೊತೆಗೆ ಇಡೀ ಅಂಗಡಿಯಲ್ಲಿ ಸುತ್ತು ಹಾಕುತ್ತದೆ. ಯಾರಾದರೂ ಕಳವು ಮಾಡುತ್ತಿದ್ದಾರೆಯೇ, ಸೆಲ್ಪೀ ತೆಗೆದುಕೊಳ್ಳುತ್ತಿದ್ದಾರೆಯೇ ಎಂದು ಗಮನಿಸುತ್ತಿರುತ್ತದೆ, ಆದರೆ ಎಲ್ಲರ ಜೊತೆಗೂ ಸ್ನೇಹದಿಂದ ಇರುತ್ತದೆ ಎನ್ನುತ್ತಾರೆ ಅಂಗಡಿ ಮಾಲಕಿ ಆನ್ನೀ. ಗ್ರಾಹಕರ ಜೊತೆಗೆ ನನಗಿಂತಲೂ ಚೆನ್ನಾಗಿ ವರ್ತಿಸುತ್ತದೆ. ಹಾಗೆಂದು ಸದಾ ಸಾಧು ಎಂದೇನೂ ಅಲ್ಲ, ಯಾರ ಮೇಲಾದರೂ ಗುಮಾನಿ ಬಂದರೆ ತನ್ನ ಕರ್ಕಶ ಧ್ವನಿಯಿಂದ ಬೆದರಿಸಲೂ ಅದಕ್ಕೆ ಗೊತ್ತು ಎಂದು ಆನ್ನೀ ಹೇಳುತ್ತಾರೆ. ಬೆಕ್ಕಿನ ವಿವಿಧ ಚಟುವಟಿಕೆಗಳನ್ನು ಇನ್ಸ್ಟಾ ಗ್ರಾಮ್ ದಾಖಲೆಯಲ್ಲಿ ಚಿತ್ರ ಸಹಿತವಾಗಿ ಪ್ರಕಟಿಸಲು ನಿರ್ಧರಿಸಿರುವುದಾಗಿ ಆನ್ನೀ  ಹೇಳಿದರು.
2016: ಟೋಕೊಯೊ: ವಿಶ್ವ ನಂ 2 ಡಬಲ್ಸ್ ಆಟಗಾರ್ತಿ ಭಾರತದ ಸಾನಿಯಾ ಮಿರ್ಜಾ ಮತ್ತು ಜೆಕ್ ಗಣರಾಜ್ಯದ ಬಾರ್ಬರ್ ಸ್ಟ್ರೈಕೋವಾ ಜೋಡಿ ನಡೆದ ಟೊರೋ ಪಾನ್ ಪೆಸಿಫಿಕ್ ಡಬಲ್ಸ್ ಫೈನಲ್ ಪ್ರಸಸ್ತಿಯನ್ನು ಮುಡಿಗೇರಿಸಿಕೊಂಡಿತು. ಟಕೋಯೋದಲ್ಲಿ ನಡೆದ ಫೈನಲ್ನಲ್ಲಿ ಚೀನಾದ ಚೆನ್ ಲಿಯಾಂಗ್ -ಜಾವೊ ಯಂಗ್ ಮತ್ತು ಮೂರನೇ ಶ್ರೇಯಾಂಕಿತ ಅಮೆರಿಕದ ರಾಕ್ವೆಲ್ ಅಟಾವೊ-ಅಬಿಗೈಲ್ ಸ್ಪಿಯರ್ಸ್ ಜೋಡಿ ವಿರುದ್ಧ 6-1, 6-1 ನೇರ ಸೆಟ್ಗಳಿಂದ ಇಂಡೋ-ಜೆಕ್ ಜೋಡಿ ಗೆಲುವಿನ ಕೇಕೆ ಹಾಕಿತು. ಮೂಲಕ ಎರಡನೇ ಟೊರೋ ಪಾನ್ ಪೆಸಿಫಿಕ್ ಡಬಲ್ಸ್ ಪ್ರಸಸ್ತಿಯನ್ನು ಜಯಿಸಿದ ಕೀರ್ತಿಗೆ ಕೂಡ ಸಾನಿಯಾ ಮತ್ತು ಚೆನ್ ಭಾಜನರಾದರು. ಸೆಮಿಫೈನಲ್ನಲ್ಲಿ ಕೆನಡಾದ ಗ್ಯಾಬ್ರಿಯಲ್ ಡಬ್ರೋವಸ್ಕಿ ಮತ್ತು ಸ್ಪೇನ್ ಮರಿಯಾ ಜೋಸ್ ಮಾರ್ಟಿನಾ ವಿರುದ್ಧ 4-6, 6-3, 10-5 ಅಂತರದಲ್ಲಿ ಗೆಲುವು ದಾಖಲಿಸಿದ್ದರು.
ಕಳೆದ ತಿಂಗಳು ಸಾನಿಯಾ-ಬಾರ್ಬರ್ ಜೋಡಿ ಸಿನ್ಸಿನಾಟಿ ಓಪನ್ ಟೂರ್ನಿ ಫೈನಲ್ನಲ್ಲಿ ಮಾರ್ಟಿನಾ ಹಿಂಗೀಸ್ ಮತ್ತು ಕೋಕೊ ವಾಂಡೆವೆಘ್ ವಿರುದ್ಧ 7-5, 6-4 ಅಂತರದಲ್ಲಿ ಗೆಲುವು ಸಾಧಿಸಿತ್ತು. ಪ್ರಸಕ್ತ ಟೈಟಲ್ನೊಂದಿಗೆ ಸಾನಿಯಾ ಡಬಲ್ಸ್ನಲ್ಲಿ 40ನೇ ಪ್ರಸಸ್ತಿ ಜಯಿಸಿದ ಸಾಧನೆ ಮಾಡಿದರು. ಇನ್ನು ಟೋಕೊಯೊದಲ್ಲಿ ಸಾನಿಯಾಗೆ ಇದು ಮೂರನೇ ಡಬಲ್ಸ್ ಪ್ರಶಸ್ತಿಯಾಗಿದೆ.

2016: ಇಸ್ಲಾಮಾಬಾದ್: ಕಾಶ್ಮೀರದ ಪರಿಸ್ಥಿತಿಗೆ ಜನರುಪ್ರತಿಕ್ರಿಯಿಸಿದಪರಿಣಾಮವಾಗಿ ಉರಿ ಭಯೋತ್ಪಾದಕ ದಾಳಿ ನಡೆದಿರಬಹುದು ಎಂದು ಹೇಳಿರುವ ಪಾಕಿಸ್ತಾನಿ ಪ್ರಧಾನಿ ನವಾಜ್ ಷರೀಫ್, ಭಾರತವು ಯಾವುದೇ ಸಾಕ್ಷ್ಯಾಧಾರ, ತನಿಖೆ ಇಲ್ಲದೆಯೇ ದಾಳಿಗಾಗಿ ಪಾಕಿಸ್ತಾನವನ್ನು ದೂರುತ್ತಿದೆ ಎಂದು ಟೀಕಿಸಿದರು. ಕಾಶ್ಮೀರದಲ್ಲಿ ನಡೆಯುತ್ತಿರುವ ದೌರ್ಜನ್ಯಗಳಿಗೆ ಪ್ರತಿಕ್ರಿಯೆಯಾಗಿ ಉರಿ ದಾಳಿ ನಡೆದಿರುವ ಸಾಧ್ಯತೆ ಇದೆ. ತಮ್ಮ ಸಮೀಪ ಬಂಧುಗಳನ್ನು ಕಳೆದುಕೊಂಡವರು ಮತ್ತು ಕಳೆದೆರಡು ತಿಂಗಳುಗಳಲ್ಲಿ ದೌರ್ಜನ್ಯಕ್ಕೆ ಬಲಿಯಾಗಿ ನೋವುಂಡವರು ಸಿಟ್ಟಿಗೆದ್ದು ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಷರೀಫ್ ಹೇಳಿದರು. ಅವರು ವಿಶ್ವ ಸಂಸ್ಥೆ ಸಾಮಾನ್ಯ ಸಭೆಯನ್ನು ಮುಗಿಸಿಕೊಂಡು ನ್ಯೂಯಾರ್ಕ್ನಿಂದ ವಾಪಸಾಗುವ ಮಾರ್ಗದಲ್ಲಿ ಲಂಡನ್ನಲ್ಲಿ ಹಿಂದಿನ ದಿನ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಘಟನೆ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲದೆ, ತನಿಖೆಯನ್ನೂ ನಡೆಸದೆ ಪಾಕಿಸ್ತಾನವನ್ನು ದೂರುತ್ತಿರುವುದು ಸರಿಯಲ್ಲ ಎಂದು ಷರೀಫ್ ಪ್ರತಿಪಾದಿಸಿದರು. ಉರಿ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ 18 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆವಿಶ್ವ ಸಂಸ್ಥೆಯಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ವಾಗ್ಯುದ್ಧಕ್ಕೆ ದಾಳಿ ಕಾರಣವಾಗಿತ್ತು.

2016: ನವದೆಹಲಿ: ಪಾಕಿಸ್ತಾನದೊಂದಿಗೆ ಇದೇ ಮೊದಲ ಬಾರಿಗೆ ಜಂಟಿ ಸಮರಾಭ್ಯಾಸದಲ್ಲಿ ಭಾಗವಹಿಸಿರುವ ರಷ್ಯಾದ ಪಡೆಗಳು ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನದಲ್ಲಿ ಸಮರಾಭ್ಯಾಸದಲ್ಲಿ ಪಾಲ್ಗೊಲ್ಳುವುದಿಲ್ಲ ಎಂದು ರಷ್ಯಾ ಸ್ಪಷ್ಟಪಡಿಸಿತು. ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ ಸೇರಿದಂತೆ ಯಾವುದೇ ಸೂಕ್ಷ್ಮ ಪ್ರದೇಶದಲ್ಲಿ ರಷ್ಯಾ ಪಡೆಗಳು ಸಮರಾಭ್ಯಾದಲ್ಲಿ ಪಾಲ್ಗೊಳ್ಳುವುದಿಲ್ಲ. ಖೈಬರ್ ಫಾಖ್ತುಂಕ್ವಾದಲ್ಲಿರುವ ಚಿರಾತ್ನಲ್ಲಿ ಮಾತ್ರ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿದೆ ಎಂದು ರಷ್ಯಾ ರಾಯಭಾರ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿತು. ಈ ಮುನ್ನ ಪಾಕಿಸ್ತಾನ ಗಿಲ್ಗಿಟ್-ಬಾಲ್ಟಿಸ್ತಾನದ ರಿತ್ತುವಿನಲ್ಲಿರುವ ಪಾಕಿಸ್ತಾನದ ಹೈ ಆಲ್ಟಿಟ್ಯೂಟ್ ಆರ್ವಿು ಸ್ಕೂಲ್ನಲ್ಲಿ ಸಮರಾಭ್ಯಾಸ ನಡೆಸಲು ಯೋಜನೆ ರೂಪಿಸಿತ್ತು.

2016: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಪ್ರತಿಭಟಿಸಿಗಜೋಧರಎಂದೇ ಜನಪ್ರಿಯರಾಗಿರುವ ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ ಅವರು ತಮ್ಮ ಕರಾಚಿ ಕಾರ್ಯಕ್ರಮವನ್ನು ರದ್ದು ಪಡಿಸಿದರು. ಗಡಿಯಿಂದಾಚೆಗೆ ನಾವು ಬಂದೂಕು ಹಿಡಿದುಕೊಂಡು ಹೋಗಲಾಗುವುದಿಲ್ಲ. ನಾನು ನನ್ನ ಕರಾಚಿ ಕಾರ್ಯಕ್ರಮವನ್ನು ರದ್ದು ಪಡಿಸಿದ್ದೇನೆ. ಇದು ಪ್ರತಿಭಟನೆಯ ಒಂದು ಮಾರ್ಗ ಅಷ್ಟೆಎಂದು ಅವರು ಹೇಳಿದರು. ಹಾಸ್ಯವು ಹೃದಯದಾಳದಿಂದ ಬರುತ್ತದೆ. ಭಾರವಾದ ಹೃದಯದೊಂದಿಗೆ ಹಾಸ್ಯ ಕಾರ್ಯಕ್ರಮ ನಡೆಸಿಕೊಡಲು ನನಗೆ ಸಾಧ್ಯವಿಲ್ಲಎಂದು ರಾಜು ನುಡಿದರು.

2016: ಬೆಂಗಳೂರು: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಜೆ.ಜಾರ್ಜ್ ಅವರು ಮತ್ತೆ ಸಚಿವರಾಗಿ ಸಿದ್ದರಾಮಯ್ಯ ಅವರ ಸಂಪುಟಕ್ಕೆ ಸೇರ್ಪಡೆಯಾಗಲಿದ್ದು, ಸೆ.26ರಂದು  ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಗಳು ಖಚಿತ ಮಾಹಿತಿ ನೀಡಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜಭವನದಲ್ಲಿ ಬೆಳಗ್ಗೆ 10.15ಕ್ಕೆ ಜರುಗಲಿದೆ ಎಂದು ಅವರು ತಿಳಿಸಿದರು.ವಿಪಕ್ಷಗಳ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದ ಜಾರ್ಜ್ ಕಳೆದ ವಾರವಷ್ಟೇ ಸಿಐಡಿಯಿಂದ ಕ್ಲೀನ್ಚಿಟ್ ಪಡೆದುಕೊಂಡಿದ್ದರು.

2016: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲೋಕ ಕಲ್ಯಾಣ ಮಾರ್ಗದ ನಂ.7 ನಿವಾಸದಲ್ಲಿ ಸೇನಾಪಡೆ, ನೌಕಾಪಡೆ ಮತ್ತು ವಾಯುಪಡೆ ಮುಖ್ಯಸ್ಥರ ಜೊತೆಗೆ ಸುದೀರ್ಘ ಮಾತುಕತೆ ನಡೆಸಿದರುಹಾಲಿ ಭದ್ರತಾ ಪರಿಸ್ಥಿತಿ ಮತ್ತು ಉರಿ ದಾಳಿಗಳಿಗೆ ಭಾರತದ ಪ್ರತಿಕ್ರಿಯೆ ಬಗ್ಗೆ ಪ್ರಧಾನಿ ಸಮಾಲೋಚನೆ ನಡೆಸಿದರು ಎಂದು ಮೂಲಗಳು ತಿಳಿಸಿದವು.

2016: ರಾಯ್ಪುರ: ಲಾರಿ ಮತ್ತು ಮಿನಿ ಟ್ರಕ್ ನಡುವೆ ಮಧ್ಯಪ್ರದೇಶದ ಉಜ್ಜಯಿನಿಯ ದೆವಾಸ್ ಹೆದ್ದಾರಿಯಲ್ಲಿ ನಡೆದ ಮುಖಾಮುಖಿಯಲ್ಲಿ ನಾಲ್ವರು ಮಹಿಳೆಯರು, ಮೂವರು ಮಕ್ಕಳು ಸೇರಿ ಒಟ್ಟು 10 ಮಂದಿ ಸಾವನ್ನಪ್ಪಿರುವ ಘಟನೆ ಬೆಳಗಿನಜಾವ ಘಟಿಸಿತು. ಘಟನೆಯಲ್ಲಿ 19ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ನಾಲ್ವರು ಘಟನಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ. ಉಳಿದ ಆರು ಮಂದಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಚಿರೆಳೆದರು.ಅತಿಯಾದ ವೇಗವೆ ಘಟನೆಗೆ ಕಾರಣ ಎಂದು ಹೇಳಲಾಯಿತು.

2008: ಚೀನಾದಲ್ಲಿ ಕಲುಷಿತ ಹಾಲು ಕುಡಿದ ಮಕ್ಕಳು ಮೃತರಾದ ಘಟನೆಗಳ ಹಿನ್ನೆಲೆಯಲ್ಲಿ ಅಲ್ಲಿಂದ ಮೂರು ತಿಂಗಳು ಕಾಲ ಹಾಲೂ ಸೇರಿದಂತೆ ಹಾಲಿನ ಇತರ ಉತ್ಪನ್ನಗಳ ಆಮದಿಗೆ ಭಾರತ ನಿಷೇಧ ಹೇರಿತು.. ವಿದೇಶ ವ್ಯವಹಾರ ಇಲಾಖೆಯ ಡೈರೆಕ್ಟರ್ ಜನರಲ್ ಅವರು, ಈ ಕುರಿತಂತೆ ಈದಿನ ರಾತ್ರಿ ಆದೇಶ ಹೊರಡಿಸಿದರು. ಚೀನಾದಲ್ಲಿ ಕಲುಷಿತ ಹಾಲು ಕುಡಿದು ನಾಲ್ಕು ಹಸುಗೂಸುಗಳು ಮೃತಪಟ್ಟಿವೆಯೆಂದು ವರದಿಯಾಗಿತ್ತು. ಹಾಲಿಗೆ ಮತ್ತಷ್ಟು  ಬಿಳುಪು ತರಲು ಬಳಸಿದ ರಾಸಾಯನಿಕದಿಂದ ಸಾವಿರಾರು ಮಂದಿ ಅಸ್ವಸ್ಥರಾಗಿದ್ದರು ಎಂದೂ ವರದಿಗಳು ತಿಳಿಸಿದ್ದವು. ಪ್ಲಾಸ್ಟಿಕ್ ಮತ್ತು  ಗೊಬ್ಬರ ತಯಾರಿಕೆಯಲ್ಲಿ ಬಳಸುವ ಮೆಲಮೈನ್ ರಾಸಾಯನಿಕವು ಮಕ್ಕಳ ಹಾಲಿನಲ್ಲಿ ಮತ್ತು ಹಾಲಿನ 22 ಇತರ ಉತ್ಪನ್ನಗಳಲ್ಲಿ ಬೆರೆತಿರುವುದು ಪತ್ತೆಯಾಗಿತ್ತು. ಈ ಅಪಾಯಕರ ರಾಸಾಯನಿಕ ಮೂತ್ರಕೋಶದಲ್ಲಿಕಲ್ಲುಗಳು ಉಂಟಾಗಲು, ಒಮ್ಮೊಮ್ಮೆ ಮೂತ್ರಕೋಶ ವೈಫಲ್ಯಕ್ಕೂ ಕಾರಣವಾಗಬಹುದು.

2008: ಮಾಜಿ ಪ್ರಧಾನಿ ರಾಜೀವ ಗಾಂಧಿ ಹಂತಕಿ ನಳಿನಿ ಸಲ್ಲಿಸಿದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿ ಸಲಹಾ ಮಂಡಳಿಯೊಂದು ನೀಡಿದ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದು ಮಾಡಿತು. ಸನ್ನಡತೆ ಆಧಾರದಲ್ಲಿ ತನಗೆ ವಿಧಿಸಿರುವ ಶಿಕ್ಷೆ ಪ್ರಮಾಣ ಕಡಿವೆು ಮಾಡಬೇಕೆಂದು ಕೋರಿ ನಳಿನಿ ಕಳೆದ ಮೇ ತಿಂಗಳಿನಲ್ಲಿ ಮನವಿ ಸಲ್ಲಿಸಿದ್ದಳು. ನಳಿನಿಗೆ ಕ್ಷಮಾದಾನ ನೀಡುವ ವಿಷಯವನ್ನು ತಮಿಳುನಾಡು ಸರ್ಕಾರನಿರಾಕರಿಸುತ್ತಲೇ ಬಂದಿತ್ತು. ಸರ್ಕಾರ ತನ್ನ ನಿಲುವನ್ನು ಮರುಪರಿಶೀಲಿಸಬೇಕೆಂದು ಹೇಳುವ ಮೂಲಕ ಮದ್ರಾಸ್ ಹೈಕೋರ್ಟ್ ನಳಿನಿ ಪರವಾಗಿ ಆದೇಶ ನೀಡಿತು. ನಳಿನಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 19 ರಂದು ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿತ್ತು. ರಾಜೀವ್ ಹತ್ಯೆಗೆ ಸಂಬಂಧಿಸಿದಂತೆ 1991 ರಲ್ಲಿ ನಳಿನಿ ಹಾಗೂ ಇತರ ಮೂವರನ್ನು ಪೊಲೀಸರು ಬಂಧಿಸಿದ್ದರು. 2000ದಲ್ಲಿ ನಳಿನಿಗೆ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಆದರೆ ಸೋನಿಯಾ ಗಾಂಧಿ ಅವರ ಶಿಫಾರಸಿನಂತೆ  ಈ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಲಾಗಿತ್ತು.

2008: ದಲಿತರ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಅಪರಾಧಕ್ಕಾಗಿ ಮಹಾರಾಷ್ಟ್ರದ ಭಂದರದ ನ್ಯಾಯಾಲಯವು ಆರು ಮಂದಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪಯ ನೀಡಿತು. ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮತ್ತಿಬ್ಬರಿಗೆ ಜೀವಾವಧಿ ಸಜೆ ಘೋಷಿಸಿತು. 2006ರ ಸೆಪ್ಟೆಂಬರ್ 29ರಂದು ಗುಂಪೊಂದು ವಿದರ್ಭ ಜಿಲ್ಲೆಯ ಖೈರಂಜ್ಲಿ ಗ್ರಾಮದ ದಲಿತ ಕುಟುಂಬದ ಮೇಲೆ ದಾಳಿ ನಡೆಸಿ  ಸುರೇಖಾ, ಅವರ ಪುತ್ರಿ ಪ್ರಿಯಾಂಕ ಮಗ ಸುಧೀರ್  ಹಾಗೂ ರೋಷನ್ ಎಂಬುವರನ್ನು ಹತ್ಯೆ ಮಾಡಿದ್ದರು.

2008: ಭಾರತ- ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದ ಕಾರ್ಯಗತಗೊಳಿಸುವತ್ತ ಮತ್ತೊಂದು ಹೆಜ್ಜೆ ಇಡಲಾಯಿತು.. ಅಮೆರಿಕ ಸೆನೆಟಿನ ವಿದೇಶಾಂಗ ಸಂಬಂಧ ಸಮಿತಿ ಒಪ್ಪಂದದ ಪರವಾಗಿ ಮತ ಚಲಾಯಿಸಿತು.. ಅಮೆರಿಕ ಕಾಂಗೆಸ್ಸಿನಲ್ಲಿ ಭಾರಿ ಪ್ರಭಾವಶಾಲಿಯಾದ ಸೆನೆಟ್ ವಿದೇಶಾಂಗ ಸಂಬಂಧ ಸಮಿತಿ 19-2 ಮತಗಳ ಅಂತರದಲ್ಲಿ ಒಪ್ಪಂದದ ಪರವಾಗಿ ಮತ ಚಲಾಯಿಸಿತು.

2007: ಆಫ್ರಿಕಾದ ಜೋಹಾನ್ಸ್ ಬರ್ಗಿನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾರತದ `ಟೀಮ್ ಇಂಡಿಯಾ'ಕ್ಕೆ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಕಿರೀಟ ಲಭಿಸಿತು. ಫೈನಲಿನಲ್ಲಿ ಮಹೇಂದ್ರಸಿಂಗ್ ದೋನಿ ನೇತೃತ್ವದ ಯುವ ಪಡೆ ಪಾಕಿಸ್ಥಾನ ತಂಡವನ್ನು ಕೇವಲ ಐದು ರನ್ನುಗಳಿಂದ ಬಗ್ಗುಬಡಿಯಿತು. 1983ರ ಜೂನ್ 25ರ ಮುಸ್ಸಂಜೆಯ ನಂತರ ಹಿಂದೂಸ್ಥಾನವನ್ನು 2007ರ ಸೆಪ್ಟೆಂಬರ್ 24 ಸಂಭ್ರಮದ ಮಳೆಯಲ್ಲಿ ತೋಯಿಸಿತು.

2007: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸುವ ಮೂಲಕ  ಪಕ್ಷದಲ್ಲಿ ರಾಹುಲ್ ಗಾಂಧಿ ಅವರ ಅಧಿಕೃತ ಪಟ್ಟಾಭಿಷೇಕ ನಡೆಯಿತು. ಪಕ್ಷದ ಕಾರ್ಯಕರ್ತರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮಗನಿಗೆ ಯುವ ಕಾಂಗ್ರೆಸ್ ಮತ್ತು ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ಸಿನ ಜವಾಬ್ದಾರಿ ನೀಡಿದರು. ಇದರ ಜೊತೆಗೆ ಭವಿಷ್ಯದ ಸವಾಲುಗಳತ್ತ ಮುನ್ನೋಟ ಹರಿಸಲಿಕ್ಕಾಗಿ ರಚಿಸಿದ ಗುಂಪಿನಲ್ಲಿಯೂ ರಾಹುಲ್ ಸದಸ್ಯರಾಗಿ ನೇಮಕಗೊಂಡರು.

2007: ಮುಂದಿನ ವರ್ಷದ ಆರಂಭದಲ್ಲಿ ತನ್ನ ಮೊದಲ ಚಂದ್ರಯಾನಕ್ಕೆ ಭಾರತ ವೇದಿಕೆ ಸಜ್ಜುಗೊಳಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಜಿ. ಮಾಧವನ್ ನಾಯರ್ ಪ್ರಕಟಿಸಿದರು. ಹೈದರಾಬಾದಿನಲ್ಲಿ ನಡೆದ 58ನೇ ಅಂತಾರಾಷ್ಟ್ರೀಯ ಗಗನಯಾನ ಸಮಾವೇಶದ ಸಂದರ್ಭದಲ್ಲಿ ನಾಯರ್ ಈ ವಿಷಯ ಬಹಿರಂಗಪಡಿಸಿದರು. `ಚಂದ್ರಯಾನ 1' ಎಂದು ಕರೆಯಲಾಗುವ ಭಾರತದ ಬಾಹ್ಯಾಕಾಶ ಸಾಹಸಕ್ಕೆ ನಾಸಾ ಮತ್ತು ಯುರೋಪ್ ಬಾಹ್ಯಾಕಾಶ ಸಂಸ್ಥೆ (ಇಎಸ್ ಎ) ಸಹಕಾರ  ನೀಡಿದ್ದು, ಯೋಜನೆಗಾಗಿ ನಾಸಾ ಮತ್ತು ಇಎಸ್ ಎ ಜತೆ ಇಸ್ರೋ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಒಂದೇ ವರ್ಷದಲ್ಲಿ ನಾಲ್ಕು ಬಾರಿಚಂದ್ರನಲ್ಲಿಗೆ ಹೋಗುವ ಭಾರತ, ನಂತರದ 5 ವರ್ಷಗಳಲ್ಲಿ ಇಂಥ 60 ಯಾನಗಳನ್ನು ಕೈಗೊಳ್ಳುವುದು ಎಂದು ನಾಯರ್ ನುಡಿದರು.

2007: ಪ್ರತಿಷ್ಠಿತ `ಆಸ್ಕರ್' ಪ್ರಶಸ್ತಿಯ ಅತ್ಯುತ್ತಮ ವಿದೇಶಿ ಚಿತ್ರದ ವಿಭಾಗಕ್ಕೆ ಭಾರತದ ಅಧಿಕೃತ ಚಿತ್ರವಾಗಿ ಅಮಿತಾಭ್ ಬಚ್ಚನ್ ನಟನೆಯ ಏಕಲವ್ಯ ಹಿಂದಿ ಸಿನಿಮಾ ಪ್ರವೇಶ ಪಡೆಯಿತು. ಇದರೊಂದಿಗೆ ಮೂರನೇ ಬಾರಿಗೆ ವಿದುವಿನೋದ್ ಛೋಪ್ರಾ ಅವರ ಸಿನಿಮಾ ಆಸ್ಕರ್ ಪ್ರಶಸ್ತಿಯ ಪೈಪೋಟಿಯಲ್ಲಿ ಕಾಣಿಸಿಕೊಂಡಿತು. 1980 ರಲ್ಲಿ `ಆನ್ ಎನ್ ಕೌಂಟರ್ ವಿತ್ ಫೇಸಸ್' ಮತ್ತು 1989ರಲ್ಲಿ `ಪರಿಂದಾ' ಸಿನಿಮಾಗಳು ಇದೇ ವಿಭಾಗದಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದವು.

2007: 1857ರ ಸಿಪಾಯಿ ದಂಗೆಯಲ್ಲಿ ಮಡಿದ ತಮ್ಮ ಪೂರ್ವಿಕರಿಗೆ ಗೌರವ ಸಲ್ಲಿಸಲು ಆಗಮಿಸಿದ 39 ಜನ ಬ್ರಿಟಿಷ್ ಪ್ರವಾಸಿಗರ ತಂಡವು ಗ್ವಾಲಿಯರಿನಲ್ಲಿ ಕಪ್ಪುಬಾವುಟ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಪ್ರತಿಭಟನಾಕಾರರಲ್ಲಿ ಹಿಂದೂ ಮಹಾಸಭಾ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಿದ್ದರು.  19 ಜನ ಮಹಿಳೆಯರೂ ಇದ್ದ ಬ್ರಿಟಿಷ್ ತಂಡವನ್ನು ಬಿಗಿ ಪೊಲೀಸ್ ಕಾವಲಿನಲ್ಲಿ ರೈಲು ನಿಲ್ದಾಣಕ್ಕೆ ಕರೆದೊಯ್ಯಲಾಯಿತು.

2007: ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಲೀಜ್ ಟೈಮ್ಸ್ ಪತ್ರಿಕೆಯ ಭಾರತೀಯ ಆವೃತ್ತಿಯ ನಿವೃತ್ತ ಸಂಪಾದಕ ಸೇರಿದಂತೆ ಇಬ್ಬರು ಪತ್ರಕರ್ತರಿಗೆ ದುಬೈಯ ಸ್ಥಳೀಯ ನ್ಯಾಯಾಲಯ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಿತು. ಇರಾನ್ ಮೂಲದ ಮಹಿಳೆಯೊಬ್ಬರ ವಿರುದ್ಧ ವರದಕ್ಷಿಣೆ ಲೇಖನ ಪ್ರಕಟಿಸಿದ್ದಕ್ಕಾಗಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿತು.

2007: ಇಂಡೋನೇಷ್ಯಾ ರಾಜಧಾನಿ ಜಕಾರ್ತ ದ್ವೀಪದ ಬಳಿ ಸಮುದ್ರ ತಳದಲ್ಲಿ ಮತ್ತೆ ಭೂಕಂಪ ಸಂಭವಿಸಿತು.

2006: ಸಿಖ್ ಯುವಕನನ್ನು ನೇಮಿಸಿಕೊಂಡ ಒಂದು ತಿಂಗಳ ನಂತರ ದೇಶದ 60 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ಥಾನಿ ಸೇನೆಯು ಹಿಂದೂ ಧರ್ಮದ ಧಾನೇಶ್ ಎಂಬ (ಸಿಂಧ್ ಗ್ರಾಮೀಣ ಪ್ರದೇಶದ ಥಾರ್ ಪರ್ಕೆರ್ ಜಿಲ್ಲೆ) ವ್ಯಕ್ತಿಯನ್ನು ಯೋಧನನ್ನಾಗಿ ನೇಮಕ ಮಾಡಿಕೊಂಡಿತು. ಹರಿಚರಣ್ ಸಿಂಗ್ ಪಾಕಿಸ್ಥಾನಿ ಸೇನಾಪಡೆ ಸೇರಿದ ಮೊತ್ತ ಮೊದಲ ಸಿಖ್ ವ್ಯಕ್ತಿ.

2006: ಚಿತ್ರರಂಗದ ಜನಪ್ರಿಯ ಪಂಚಭಾಷಾ (ಮಲಯಾಳಂ, ಕನ್ನಡ, ತಮಿಳು, ತೆಲುಗು, ಹಿಂದಿ) ತಾರೆಯಾಗಿದ್ದ ಪದ್ಮಿನಿ (74) (12-6-1932ರಿಂದ 24-9-2006) ತಮಿಳುನಾಡಿನ ಚೆನ್ನೈಯ ಅಪೋಲೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಶಾಸ್ತ್ರೀಯ ನರ್ತಕಿಯಾಗಿ ಕೂಡಾ ಜನಮನ್ನಣೆ ಗಳಿಸಿದ್ದ ಪದ್ಮಿನಿ 1932ರ ಜೂನ್ 12ರಂದು ತಿರುವನಂತಪುರದ ಪೂಜಾಪ್ಪುರು ಎಂಬಲ್ಲಿ ಜಮೀನ್ದಾರಿ ಕುಟುಂಬದಲ್ಲಿ ಜನಿಸಿದರು. ಸೂಪರ್ ಸ್ಟಾರ್ ಗಳಾಗಿದ್ದ ಶಿವಾಜಿ ಗಣೇಶನ್, ವರನಟ ರಾಜಕುಮಾರ್, ಪ್ರೇಮ್ ನಜೀರ್, ದೇವಾನಂದ್ ಸೇರಿದಂತೆ ಹಲವಾರು ನಾಯಕರೊಂದಿಗೆ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಪದ್ಮಿನಿ ಸಹೋದರಿಯರಾದ ಲಲಿತಾ ಮತ್ತು ರಾಗಿಣಿ ಕೂಡಾ ಚಿತ್ರನಟಿ, ನೃತ್ಯಗಾತಿಯರಾಗಿ `ತಿರುವನಂತಪುರ (ತಿರುವಾಂಕೂರು) ಸಹೋದರಿಯರು' ಎಂದೇ ಈ ಮೂವರು ಖ್ಯಾತರಾಗಿದ್ದರು. ನಾಲ್ಕನೇ ವಯಸ್ಸಿನಲ್ಲೇ ಕಾಲಿಗೆ ಗೆಜ್ಜೆ ಕಟ್ಟಿದ ಪದ್ಮಿನಿ 1949 ರಲ್ಲಿ ಚಿತ್ರ ಜಗತ್ತಿಗೆ ಕಾಲಿಟ್ಟು `ಕಲ್ಪನಾ' ಹಿಂದಿ ಚಿತ್ರದಲ್ಲಿ ನಟಿಸಿದರು. ಡಾ. ಕೆ.ಟಿ. ರಾಮಚಂದ್ರನ್ ಅವರೊಂದಿಗೆ ವೈವಾಹಿಕ ಬದುಕಿಗೆ ಕಾಲಿಟ್ಟ ಬಳಿಕ ಬೆಳ್ಳಿ ತೆರೆಯಿಂದ ಮಾಯವಾದ ಪದ್ಮಿನಿ ಅಮೆರಿಕದಲ್ಲಿ ನೆಲಸಿದ್ದರು. 1977ರಲ್ಲಿನ್ಯೂಜೆರ್ಸಿಯಲ್ಲಿ ತಮ್ಮದೇ ಆದ ಲಲಿತಕಲಾ ಸಂಸ್ಥೆಯನ್ನೂ ಸ್ಥಾಪಿಸಿದ್ದರು. ಇವರ ಸೋದರ ಸಂಬಂಧಿ ಸುಕುಮಾರಿ ಮತ್ತು ಅಂಬಿಕಾ ಸಹ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದವರು. 1981ರಲ್ಲಿ ಭಾರತಕ್ಕೆ ಮರಳಿದ ಪದ್ಮಿನಿ ಅವರನ್ನು ಬೆಳ್ಳಿತೆರೆ ಮತ್ತೆ ಕರೆಯಿತು. ಎರಡನೇ ಇನ್ನಿಂಗ್ಸಿನಲ್ಲಿ ಅವರು ನಟಿಸಿ `ವಾಸ್ತುಹಾರ' ಮತ್ತಿತರ ಮಲಯಾಳಿ ಚಿತ್ರಗಳು ಅಪಾರ ಜನಮನ್ನಣೆ ಗಳಿಸಿದವು. ಹಿಂದಿಯ `ಜಿಸ್ ದೇಶ್ ಮೆ ಗಂಗಾ ಬೆಹತಿ ಹೈ', `ಮೇರಾ ನಾಮ್ ಜೋಕರ್', ಮಲಯಾಳಂನ `ಸ್ನೇಹಸೀಮಾ', `ಅಧ್ಯಾಪಿಕಾ', `ವಿವಾಹಿತ', `ಕುಮಾರ ಸಂಭವ', ತಮಿಳಿನ `ಮೋಹನಾಂಬಾಳ್' ಅವರ ಕೆಲವು ಪ್ರಮುಖ ಚಿತ್ರಗಳು.

2006: ಒರಿಸ್ಸಾದ ಬಾಲಕ ಬುಧಿಯಾಸಿಂಗ್ ಮ್ಯಾರಥಾನ್ ನೆನನಪು ಮಾಸುವ ಮುನ್ನವೇ ಅದೇ ರಾಜ್ಯದ 7ವರ್ಷದ ಇನ್ನೊಬ್ಬ ಬಾಲಕ ಮೃತ್ಯುಂಜಯ ಮಂಡಲ್ ಥಾಣೆ ಜಿಲ್ಲೆಯ ಕಲ್ಯಾಣದಿಂದ 68 ಕಿ.ಮೀ. ದೂರ ಓಡಿ ಅಚ್ಚರಿ ಮೂಡಿಸಿದ. ಈತ ಕಲ್ಯಾಣದಿಂದ ಮುಂಬೈಯ ಗೇಟ್ ವೇ ಆಫ್ ಇಂಡಿಯಾವರೆಗೆ ಓಡಬೇಕಿತ್ತು. ಆದರೆ 68 ಕಿ.ಮೀ. ಓಡಿದ ಬಳಿಕ ನಿಗದಿತ ಗುರಿ ಮುಟ್ಟುವ ಮುನ್ನವೇ ತೀವ್ರವಾಗಿ ಬಸವಳಿದ ಆತ ಕುಸಿದು ಬಿದ್ದ. ಬಳಿಕ ಆತನನ್ನು ಕಾರಿನಲ್ಲಿ ಗೇಟ್ ವೇ ಆಫ್ ಇಂಡಿಯಾಕ್ಕೆ ಕರೆತರಲಾಯಿತು. ಮೂರನೇ ತರಗತಿಯ ಈ ಬಾಲಕ ನಸುಕಿನ 4 ಗಂಟೆಗೆ ತನ್ನ ಓಟ ಪ್ರಾರಂಬಿಸಿದ್ದ. 50ಕ್ಕೂ ಹೆಚ್ಚು ಮಂದಿ ಈತನ ಜೊತೆಗೆ ಮ್ಯಾರಥಾನಿನಲ್ಲಿಪಾಲ್ಗೊಂಡಿದ್ದರು.

2006: ಮೂರ್ತಿ ವಿ.ಎನ್. ರಾವ್ ಮೆಮೋರಿಯಲ್ ಟ್ರಸ್ಟ್ ಹಾಗೂ ಬೆಂಗಳೂರು ಗಾಯನ ಸಮಾಜ ಭಾನುವಾರ ಜಂಟಿಯಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಂಗೀತಗಾರ ಪದ್ಮಶ್ರೀ ಎಂ.ಎಸ್. ಗೋಪಾಲಕೃಷ್ಣನ್ ಅವರಿಗೆ `ವೀಣೆ ಶೇಷಣ್ಣ ಸ್ಮಾರಕ ಪ್ರಶಸ್ತಿ' ಮತ್ತು ಡಾ. ಆರ್. ಕೆ. ಶ್ರೀಕಂಠನ್ ಅವರಿಗೆ `ಸ್ವರಮೂರ್ತಿ ವಿ.ಎನ್. ರಾವ್ ಸ್ಮಾರಕ ಪ್ರಶಸ್ತಿ' ನೀಡಿ ಗೌರವಿಸಲಾಯಿತು.

2006: ಬೆಲ್ಜಿಯಂನ ರಾಜತಾಂತ್ರಿಕ ಮಹಿಳಾ ಅಧಿಕಾರಿ ಇಸಬೆಲ್ಲಾ ಡಿಸಾಯ್ ಅವರನ್ನು ದಕ್ಷಿಣ ದೆಹಲಿಯ ಪ್ರತಿಷ್ಠಿತ ವಸಂತವಿಹಾರ ಬಡಾವಣೆಯಲ್ಲಿನ ಅವರ ನಿವಾಸದಲ್ಲಿ ಕಾರಿನ ಚಾಲಕ ವಿಜಯಪಾಲ್ ಚೌಧರಿ ಇರಿದು ಕೊಲೆಗೈದ.

2006: ಮೃತ ವ್ಯಕ್ತಿಯ ಭ್ರೂಣದಿಂದ (ಗರ್ಭಪಿಂಡ) ಅಣುಕೋಶಗಳನ್ನು ತೆಗೆದು ಅವುಗಳನ್ನು ಜೀವಂತ ಅಂಗಾಂಶಗಳಾಗಿ ಮಾರ್ಪಡಿಸುವಲ್ಲಿ ಯಶಸ್ವಿಯಾಗಿರುವುದಾಗಿ ಬ್ರಿಟಿಷ್ ಲ್ಯಾಬೋರೇಟರಿಯ ವಿಜ್ಞಾನಿಗಳು ಪ್ರಕಟಿಸಿದರು. `ಸ್ಟೆಮ್ ಸೆಲ್ ವಿಜ್ಞಾನ'ದಲ್ಲಿ ಅತ್ಯಂತ ಮಹತ್ವದ ಸಂಶೋಧನಾ ಸಾಧನೆ ಇದಾಗಿದೆ. ಅಲ್ಜಿಮೀರ್ಸ್, ಪಾರ್ಕಿನ್ ಸನ್ಸ್ ನಂತಹ ರೋಗಗಳಿಂದ ನರಳುತ್ತಿರುವವರಿಗೆ ಇದು ವರದಾನ ಆಗಬಲ್ಲುದು ಎಂದು ವಿಜ್ಞಾನಿಗಳು ಪ್ರತಿಪಾದಿಸಿದರು. ನ್ಯೂ ಕ್ಯಾಸಲ್ ಯುನಿವರ್ಸಿಟಿಯ ಸೆಂಟರ್ ಫಾರ್ ಸ್ಟೆಮ್ ಸೆಲ್ ಬಯಾಲಜಿಯ ಪ್ರೊಫೆಸರ್ ಮಿಯೋಡ್ರಾಗ್ ಸ್ಟೊಜ್ಕೊವಿಕ್ ಮತ್ತು ಅವರ ಸಹೋದ್ಯೋಗಿ ಸಂಶೋಧಕರ ತಂಡ ಈ ಸಾಧನೆ ಮಾಡಿದ್ದು `ಸ್ಟೆಮ್ ಸೆಲ್ಸ್' ಜರ್ನಲ್ ನಲ್ಲಿ ಈ ಕುರಿತ ವಿವರವನ್ನು ಪ್ರಕಟಿಸಿದ್ದಾರೆ. ಆದರೆ ನೈತಿಕತೆಯ ಸ್ಟೆಮ್ ಸೆಲ್ ಸಂಶೋಧನೆಗಳಿಗೆ ತೀವ್ರ ವಿರೋಧವಿದ್ದು ಈ ಸಂಶೋಧನೆ ವಿವಾದಾತ್ಮಕ ರೂಪವನ್ನೂ ಪಡೆದಿದೆ.

1993: ನೊರೋಧಮ್ ಸಿಹಾನೌಕ್ ಅವರು ಕಾಂಬೋಡಿಯಾ ಸಿಂಹಾಸನದ ಮೇಲೆ  ಅಧಿಕಾರ ಮರುಸ್ಥಾಪನೆ ಮಾಡಿ, `ಪ್ರಜಾತಾಂತ್ರಿಕ, ಸಂವೈಧಾನಿಕ ರಾಜಪ್ರಭುತ್ವ' ರಾಷ್ಟ್ರ ತಮ್ಮದು ಎಂದು ಘೋಷಿಸುವ ಸಂವಿಧಾನಕ್ಕೆ ಸಹಿ ಹಾಕಿದರು.

1988: ಕೆನಡಾದ ವೇಗದ ಓಟಗಾರ ಬೆನ್ ಜಾನ್ಸನ್ ಅವರು ಸೋಲ್ ಒಲಿಂಪಿಕ್ಸಿನಲ್ಲಿ 100 ಮೀಟರ್ ದೂರವನ್ನು 9.79 ಸೆಕೆಂಡುಗಳಲ್ಲಿ ಓಡಿ ದಾಖಲೆ ನಿರ್ಮಿಸಿದರು. ಮೂರು ದಿನಗಳ ಬಳಿಕ ನಿಷೇಧಿತ ಉತ್ತೇಜಕ ಮದ್ದು ಸೇವಿಸಿದ್ದರೆಂಬುದು ಬಹಿರಂಗಗೊಂಡು ಅವರ ಪದಕವನ್ನು ಕಿತ್ತುಕೊಳ್ಳಲಾಯಿತು.

1951: ಸಾಹಿತಿ ನಾಗರತ್ನಮ್ಮ ಎಂ. ಶಿವರ ಜನನ.

1947: ಪಾಕಿಸ್ಥಾನಿ ಸೈನಿಕರಿಂದ ಕಾಶ್ಮೀರದ ಮೇಲೆ ದಾಳಿ.

1932: ಚಿತ್ತಗಾಂಗಿನ ಐರೋಪ್ಯ ಕ್ಲಬ್ ಒಂದರ ಮೇಲೆ ಸಶಸ್ತ್ರ ದಾಳಿಯ ನೇತೃತ್ವ ವಹಿಸಿದ್ದ ಪ್ರೀತಿಲತಾ ವಡ್ಡೆದಾರ್ ಆತ್ಮಾಹುತಿ ಮಾಡಿಕೊಳ್ಳುವುದರೊಂದಿಗೆ ರಾಷ್ಟ್ರಕ್ಕಾಗಿ ಆತ್ಮಾರ್ಪಣೆ ಮಾಡಿದ ಮೊದಲ ಭಾರತೀಯ ಮಹಿಳಾ ಉಗ್ರಗಾಮಿ ಎಂಬ ಕೀರ್ತಿಗೆ ಪಾತ್ರರಾದರು.

1932: ಭಾರತದಲ್ಲಿನ ಹಿಂದೂ ನಾಯಕರು ಸಹಿ ಹಾಕಿದ ಒಪ್ಪಂದವೊಂದು ರಾಷ್ಟ್ರದಲ್ಲಿನ `ಅಸ್ಪೃಶ್ಯ'ರಿಗೆ ಹೊಸ ಹಕ್ಕುಗಳನ್ನು ನೀಡಿತು. `ಪೂನಾ ಕಾಯ್ದೆ' ಎಂದೇ ಹೆಸರು ಪಡೆದ ಈ ಒಪ್ಪಂದವು `ಪ್ರತ್ಯೇಕ ಮತದಾರ' ವ್ಯವಸ್ಥೆಯನ್ನು ಹಿಂತೆಗೆದುಕೊಂಡು  ಪರಿಶಿಷ್ಟ ಜಾತಿಗಳಿಗೆ ಹತ್ತು ವರ್ಷಗಳ ಅವಧಿಗೆ ಹೆಚ್ಚಿನ ಪ್ರಾನಿಧ್ಯವನ್ನು ಒದಗಿಸಿತು. ಮಹಾತ್ಮಾ ಗಾಂಧೀಜಿಯವರು `ಪ್ರತ್ಯೇಕ ಮತದಾರ' ವ್ಯವಸ್ಥೆಯು ಪರಿಶಿಷ್ಟರನ್ನು ಹಿಂದೂ ಸಮುದಾಯದಿಂದ ಇನ್ನಷ್ಟು ದೂರಮಾಡುತ್ತದೆ ಎಂದು ವಾದಿಸಿ ಅದನ್ನು ಕಿತ್ತುಹಾಕಲು ಉಪವಾಸ ಹೂಡಿದಾಗ ಡಾ. ಬಿ.ಆರ್. ಅಂಬೇಡ್ಕರ್ ಅವರು ಅದನ್ನು ತೆಗೆದುಹಾಕಿದರು.

1910: `ಗ್ರಾಮಾಯಣ'ದ ಮೂಲಕ ಖ್ಯಾತರಾದ ರಾಮಚಂದ್ರ ರಾವ್ ಭೀಮರಾವ್ ಕುಲಕರ್ಣಿ ಯಾನೆ ರಾವ್ ಬಹದ್ದೂರ್ (24-9-1910ರಿಂದ 31-12-1984) ಅವರು ಭೀಮರಾಯರು- ಸುಭದ್ರಾಬಾಯಿ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಕೃಷ್ಣಾ ನದಿ ತೀರ ಗ್ರಾಮವಾದ ಹಿರೇ ಪಡಸಲಗಿಯಲ್ಲಿ ಜನಿಸಿದರು.

1861: ಭಾರತೀಯ ಸ್ವಾತಂತ್ರ್ಯ ಯೋಧೆ ಭಿಕಾಜಿ ಕಾಮಾ (1861-1936) ಜನ್ಮದಿನ. 1907ರಲ್ಲಿ ಸ್ಟಟ್ ಗರ್ಟಿನಲ್ಲಿ ನಡೆದ 12ನೇ ಅಂತಾರಾಷ್ಟ್ರೀಯ ಸೋಶಿಯಲಿಸ್ಟ್ ಕಾಂಗ್ರೆಸ್ಸಿನಲ್ಲಿ ಕೆಂಪು, ಬಿಳಿ ಮತ್ತು ಹಸಿರು ಪಟ್ಟಿಗಳಿದ್ದ ತ್ರಿವರ್ಣ ರಂಜಿತ ಭಾರತೀಯ ರಾಷ್ಟ್ರಧ್ವಜದ ಮೊದಲ ಮಾದರಿಯನ್ನು ಹಾರಿಸಿದ ವಿಶೇಷ ಕೀರ್ತಿಗೆ ಕಾಮಾ ಅವರು ಭಾಜನರಾಗಿದ್ದಾರೆ.

1829: ಅಸ್ಸಾಮಿ ಕವಿ ಆನಂದರಾಂ ಫೂಕಾನ್ ಜನನ.

No comments:

Post a Comment