Wednesday, September 5, 2018

ಪಾಕಿಸ್ತಾನ 2025ರ ವೇಳೆಗೆ ವಿಶ್ವದ 5ನೇ ದೊಡ್ಡ ಅಣ್ವಸ್ತ್ರ ರಾಷ್ಟ್ರ?


ಪಾಕಿಸ್ತಾನ 2025 ವೇಳೆಗೆ ವಿಶ್ವದ 5ನೇ ದೊಡ್ಡ ಅಣ್ವಸ್ತ್ರ ರಾಷ್ಟ್ರ?

ವಾಷಿಂಗ್ಟನ್: ಪ್ರಸ್ತುತ 140ರಿಂದ 150 ಪರಮಾಣು ಸಿಡಿತಲೆಗಳನ್ನು ಹೊಂದಿರುವ ಪಾಕಿಸ್ತಾನ 2025 ವೇಳೆಗೆ ಪರಮಾಣು ಸಿಡಿತಲೆಗಳ ದಾಸ್ತಾನನ್ನು 220-250ಕ್ಕೆ ಏರಿಸಿಕೊಳ್ಳುವ ನಿರೀಕ್ಷೆಯಿದ್ದು ವಿಶ್ವದ 5ನೇ ಅತಿದೊಡ್ಡ ಅಣ್ವಸ್ತ್ರ ರಾಷ್ಟ್ರವಾಗುವ ಹಾದಿಯಲ್ಲಿದೆ.

ವಿವಿಧ ರಾಷ್ಟ್ರಗಳ ಅಣ್ವಸ್ತ್ರ ತಯಾರಿ ಮೇಲೆ ಕಣ್ಣಿಟ್ಟಿರುವ ಅಮೆರಿಕದ ತಜ್ಞರ ವರದಿಯೊಂದು ಅಂಶವನ್ನು ಹೊರಗೆಡವಿದೆ.

1999 ಅಮೆರಿಕದ ರಕ್ಷಣಾ  ಗುಪ್ತಚರ ಸಂಸ್ಥೆಯು ಪಾಕಿಸ್ತಾನವು  2020 ವೇಳೆಗೆ 60-80 ಪರಮಾಣು ಸಿಡಿತಲೆಗಳನ್ನು ಹೊಂದಬಹುದು ಎಂದು ಊಹಿಸಿತ್ತು. ಆದರೆ  ಪಾಕಿಸ್ತಾನ ಈಗಲೇ 140-150 ಪರಮಾಣು ಸಿಡಿತಲೆಗಳನ್ನು ಹೊಂದಿರುವುದು ಅಮೆರಿಕದ ತಜ್ಞರ ನಿರೀಕ್ಷೆಗಳನ್ನು ಮೀರಿಸಿದೆ.

ಹೆಚ್ಚಿನ ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:

No comments:

Post a Comment