ನಾನು ಮೆಚ್ಚಿದ ವಾಟ್ಸಪ್

Friday, September 28, 2018

ಮಹಿಳೆಯರಿಗೆ ಶಬರಿಮಲೈ ದೇಗುಲ ದ್ವಾರ ತೆರೆದ ಸುಪ್ರೀಂ


ಮಹಿಳೆಯರಿಗೆ ಶಬರಿಮಲೈ ದೇಗುಲ ದ್ವಾರ ತೆರೆದ ಸುಪ್ರೀಂ

ನವದೆಹಲಿ: ಎಲ್ಲ ವಯೋಮಾನದ ಮಹಿಳೆಯರಿಗೂ ಕೇರಳದ ಶಬರಿಮಲೈ ದೇವಾಲಯದ ದ್ವಾರಗಳನ್ನು ತೆರೆಯುವ ಐತಿಹಾಸಿಕ ತೀರ್ಪನ್ನು ಸುಪ್ರೀಂಕೋರ್ಟ್ 2018 ಸೆಪ್ಟೆಂಬರ್ 28 ಶುಕ್ರವಾರ ನೀಡಿತು.

ತನ್ನ ಸಮಾಜ ಸುಧಾರಣಾ ಕಾರ್ಯಸೂಚಿಗೆ ಇನ್ನೊಂದು ಅಧ್ಯಾಯವನ್ನು ಸೇರ್ಪಡೆ ಮಾಡಿದ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ  ಸುಪ್ರೀಂಕೋರ್ಟ್  ಪಂಚ ಸದಸ್ಯ ಸಂವಿಧಾನ ಪೀಠವು 10ರಿಂದ 50 ವರ್ಷಗಳ ನಡುವಣ ಮಹಿಳೆಯರು ದೇವಾಲಯವನ್ನು ಪ್ರವೇಶಿಸದಂತೆ ತಡೆ ತಡೆ ಹಿಡಿದಿದ್ದ ನಿಷೇಧದ ಸರಪಳಿಯನ್ನು ತುಂಡರಿಸಿತು.

ಮಹಿಳೆಯರನ್ನು ದೇವಾಲಯ ಪ್ರವೇಶಿಸಿದಂತೆ ನಿಷೇಧಿಸಿದ  ಕ್ರಮವು ಮಹಿಳೆಯರ ವಿರುದ್ಧದ ತಾರತಮ್ಯವಾಗಿದೆ ಎಂದು ಹೇಳಿತು.

ವಿವರಗಳಿಗೆ ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿರಿ:


No comments:

Post a Comment