Saturday, September 15, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 15

ಇಂದಿನ ಇತಿಹಾಸ History Today ಸೆಪ್ಟೆಂಬರ್ 15

2018: ಲಾಸ್ ಏಂಜೆಲಿಸ್: ಭೂಮಿಯ ಮೇಲಿನ ಮಂಜುಗಡ್ಡೆ ಪದರ ಕರಗುವಿಕೆಯನ್ನು ಪತ್ತೆ ಹಚ್ಚಬಲ್ಲಂತಹ ಅತ್ಯಾಧುನಿಕ ಬಾಹ್ಯಾಕಾಶ ಲೇಸರ್ ಉಪಗ್ರಹವನ್ನು ನಾಸಾ ಸಂಸ್ಥೆಯು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿತು. ಅತ್ಯಾಧುನಿಕ ಉಪಗ್ರಹವು ಭೂಮಿಯಾದ್ಯಂತ ಮಂಜುಗಡ್ಡೆ ಪದರ ಕರಗುವಿಕೆಯನ್ನು ಪತ್ತೆ ಹಚ್ಚಿ ನಿಖರ ಮಾಹಿತಿ ಒದಗಿಸಲಿದೆ. ಮಂಜುಗಡೆ ಪದರಗಳ ನಷ್ಟದಿಂದ ಸಮುದ್ರದ ನೀರಿನ ಮಟ್ಟ ಏರಿಕೆ ಹಾಗೂ ಹವಾಮಾನ ವ್ಯತಾಸದ ಬಗ್ಗೆ ಮುನ್ಸೂಚನೆ ನೀಡಲು ಇದರಿಂದ ಸಾಧ್ಯವಾಗಲಿದೆ. ಈದಿನ ಬೆಳಗ್ಗೆ ಸೂರ್ಯೋದಯಕ್ಕೂ ಮುಂಚೆ .೦೨ ಗಂಟೆಗೆ, ಬಿಲಿಯನ್ (೧೦೦ ಕೋಟಿ) ಡಾಲರ್ ವೆಚ್ಚದ, ಅರ್ಧ ಟನ್ ತೂಕದ ಐಸ್ ಸ್ಯಾಟ್ - ಉಪಗ್ರಹವನ್ನು ಕ್ಯಾಲಿಫೋರ್ನಿಯಾದ ವಾಂಡೆನ್ಬರ್ಗ್ ವಾಯುಪಡೆ ನೆಲೆಯಿಂದ ಡೆಲ್ಟಾ ರಾಕೆಟ್ ಮೂಲಕ ಭೂ ಕಕ್ಷೆಗೆ ಉಡಾವಣೆ ಮಾಡಲಾಯಿತು ಎಂದು ನಾಸಾ ತಿಳಿಸಿತು. ‘ಐಸ್ಸ್ಯಾಟ್- ಉಡಾವಣೆ ಮೂಲಕ ನಮ್ಮ ಭೂಮಿಯಲ್ಲಿ ಬದಲಾಗುತ್ತಿರುವ ಮಂಜುಗಡೆ ಪದರದ ಬಗ್ಗೆ ನಿರಂತರ ನಿಖರ ಮಾಹಿತಿ ಪಡೆಯುವುದು, ವಿಶೇಷವಾಗಿ ಉತ್ತರ ಮತ್ತು ದಕ್ಷಿಣ ಧ್ರುವಗಳ ಹಿಮ ಪದರಗಳ ನಷ್ಟ ಬಗ್ಗೆ ಕಣ್ಣಿಡುವುದು ಸಾಧ್ಯವಾಗಲಿದೆ ಎಂದು ವಿಜ್ಞಾನಿಗಳು ಹೇಳಿದರು. ಕಳೆದ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ನಾಸಾ ಭೂಮಿಯ ಮೇಲಿನ ಮಂಜುಗಡ್ಡೆ ಪದರವನ್ನು ಅಳೆಯುವಂತಹ ಇಂತಹ ಉಪಕರಣವನ್ನು ಹೊಂದಿದ ಉಪಗ್ರಹವನ್ನು ಭೂ ಕಕ್ಷೆಗೆ ಕಳುಹಿಸಿತ್ತು. ಹಿಂದೆ, ೨೦೦೩ರಲ್ಲಿ ಐಸ್ ಸ್ಯಾಟ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ಇದು ೨೦೦೯ರಲ್ಲಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತ್ತು. ಮೊದಲ ಐಸ್ಸ್ಯಾಟ್ ಉಪಗ್ರಹವು ಸಮುದ್ರದ ಮೇಲಿನ ಮಂಜುಗಡ್ಡೆ ತೆಳ್ಳಗಾಗುತ್ತಿರುವ ಬಗ್ಗೆ ಮತ್ತು ಗೀನ್ ಲ್ಯಾಂಡ್ ಮತ್ತು ಅಂಟಾರ್ಕ್ಟಿಕಾದಲ್ಲಿ ಮಂಜುಗಡ್ಡೆ ಪದರ ಕರಗುತ್ತಿರುವುದನ್ನು ಪತ್ತೆ ಹಚ್ಚಿ ಮಾಹಿತಿ ನೀಡಿತ್ತು.  ಕಳೆದ ವರ್ಷಗಳಲ್ಲಿ ಆಪರೇಷನ್ ಐಸ್ ಬ್ರಿಜ್ ಹೆಸರಿನ ವಿಮಾನಯಾನ ಸಾಹಸದ ಮೂಲಕ ಉತ್ತರ ಮತ್ತು ದಕ್ಷಿಣ ಧ್ರುವಗಳ (ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್) ಮೇಲೆ ಹಾರಾಡಿ ಬದಲಾಗುತ್ತಿರುವ ಮಂಜುಗಡ್ಡೆಗಳ ಪದರದ ಅಳತೆ ಮಾಡುವ ಯತ್ನ ನಡೆಸಲಾಗಿತ್ತು. ಆದರೆ ಬಾಹ್ಯಾಕಾಶದಿಂದ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಭೂಮಿಯ ಮೇಲಿನ ಮಂಜುಗಡ್ಡೆ ಪದರವನ್ನು ಅಳೆಯುವುದು ಅತ್ಯಂತ ಹೆಚ್ಚು ನಿಖರವಾಗಿರುತ್ತದೆ.  
ಹೊಸ ಲೇಸರ್ ಉಪಕರಣವು ಒಂದು ಸೆಕೆಂಡ್ ನಲ್ಲಿ ೧೦,೦೦೦ ಸಲ ಲೇಸರ್ ಬೆಳಕನ್ನು ಹೊಮ್ಮ ಬಲ್ಲುದು. ಮೂಲ ಐಸ್ ಸ್ಯಾಟ್ ಉಪಗ್ರಹದ ಉಪಕರಣ ಸೆಕೆಂಡ್ ಗೆ ೪೦ ಬಾರಿ ಮಾತ್ರ ಲೇಸರ್ ಬೆಳಕನ್ನು ಹೊಮ್ಮುವ ಸಾಮರ್ಥ್ಯ ಹೊಂದಿತ್ತು.


2018: ನವದೆಹಲಿ: ಉದ್ಯಮಿ ವಿಜಯ್ ಮಲ್ಯ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧದ ತಮ್ಮ ದಾಳಿಯನ್ನು ಈದಿನವೂ ಮುಂದುವರೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರುಉದ್ಯಮಿ ವಿಜಯ್ ಮಲ್ಯ ಅವರಿಗೆ ದೇಶಬಿಟ್ಟು ಪರಾರಿಯಾಗಲು ಲುಕ್ ಔಟ್ ನೋಟಿಸನ್ನು ದುರ್ಬಲಗೊಳಿಸಿದ್ದ ವ್ಯಕ್ತಿ ಸಿಬಿಐಯಲ್ಲಿನ ಪ್ರಧಾನಿಯ ಪ್ರೀತಿಪಾತ್ರ  ’ನೀಲಿಗಣ್ಣಿನ ಹುಡುಗ ಎಂದು ಹೇಳಿದರು. ಗುಜರಾತ್ ಕೇಡರಿನ ಅಧಿಕಾರಿ ಕೆ ಶರ್ಮ ಅವರು ಮಲ್ಯ ಪರಾರಿಗೆ ನೆರವಾಗಿದ್ದಾರೆ ಎಂದು ಈದಿನ ಟ್ವೀಟ್ ಮಾಡಿದ ರಾಹುಲ್ ಗಾಂಧಿ ಅವರು ವಜ್ರ ವ್ಯಾಪಾರಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಅವರು ಪರಾರಿಯಾಗುವಲ್ಲೂ ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಯೇ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಬರೆದರು.  ‘ಸಿಬಿಐ ಜಂಟಿ ನಿರ್ದೇಶಕ, ಕೆ ಶರ್ಮ ಅವರು  ’ಲುಕ್ ಔಟ್ ನೋಟಿಸನ್ನು ದುರ್ಬಲಗೊಳಿಸುವ ಮೂಲಕ ಮಲ್ಯ ಅವರಿಗೆ ದೇಶದಿಂದ ಪರಾರಿಯಾಗಲು ನೆರವಾದರು. ಗುಜರಾತ್ ಕೇಡರಿನ ಅಧಿಕಾರಿಯಾಗಿರುವ ಶರ್ಮ ಅವರು ಸಿಬಿಐಯಲ್ಲಿ ಪ್ರಧಾನಿಯ ನೀಲಿಗಣ್ಣುಗಳ ಹುಡುಗನಾಗಿದ್ದು, ಇದೇ ಅಧಿಕಾರಿ ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಅವರ ಪರಾರಿ ಯೋಜನೆಯ ಉಸ್ತುವಾರಿ ಹೊತ್ತಿದ್ದ ವ್ಯಕ್ತಿಯಾಗಿದ್ದರು. ವೂಪ್ಸ್ .. ತನಿಖೆ!’ ಎಂದು ರಾಹುಲ್ ಗಾಂಧಿ ಮೈಕ್ರೋ ಬ್ಲಾಗಿಂಗ್ ವೆಬ್ ಸೈಟಿನಲ್ಲಿ ಬರೆದರು. ಬ್ಯಾಂಕುಗಳ ಸಾಲ ಮರುಪಾವತಿ ಮಾಡದೆ ಸುಸ್ತಿದಾರರಾದ ವಿಜಯ್ ಮಲ್ಯ ಅವರಿಗೆ ದೇಶದಿಂದ ಪರಾರಿಯಾಗಲು ಪ್ರಧಾನಿ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿನೆರವಾಗಿದ್ದಾರೆ ಎಂದು ಆಪಾದಿಸಿರುವ ಕಾಂಗ್ರೆಸ್, ವಿಷಯಕ್ಕೆ ಸಂಬಂಧಿಸಿದಂತೆ ಜೇಟ್ಲಿ ಅವರು ರಾಜೀನಾಮೆ ನೀಡಬೇಕು ಎಂದೂ ಮಲ್ಯ ಪರಾರಿಯಾದದ್ದು ಹೇಗೆ ಎಂಬುದಾಗಿ ತನಿಖೆ ನಡೆಸಬೇಕು ಎಂದೂ ಒತ್ತಾಯಿಸಿತು. ೨೦೧೬ರ ಮಾರ್ಚ್ ತಿಂಗಳಲ್ಲಿ ದೇಶ ತ್ಯಜಿಸುವ ಮುನ್ನ ತಾವು ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿದ್ದುದಾಗಿ ಉದ್ಯಮಿ ಮಲ್ಯ ಹೇಳಿಕೆ ನೀಡಿದ ಕೆಲವು ದಿನಗಳ ಬಳಿಕ ರಾಹುಲ್ ಗಾಂಧಿ ಅವರು ಅವರು ಟ್ವೀಟ್ ಮಾಡಿದ್ದಾರೆ. ಏನಿದ್ದರೂ ಜೇಟ್ಲಿ ಅವರು ಮಲ್ಯ ಹೇಳಿಕೆಯನ್ನು ನಿರಾಕರಿಸಿದ್ದಾರೆದೇಶ ತ್ಯಜಿಸುವ ಮುನ್ನ ನಾನು ವಿತ್ತ ಸಚಿವರನ್ನು ಭೇಟಿ ಮಾಡಿದ್ದೆ ಎಂದು ಮಲ್ಯ ಅವರು ಲಂಡನ್ನಿನ ವೆಸ್ಟ್ ಮಿನ್ ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿನ ಹೊರಭಾಗದಲ್ಲಿ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದರು.   ಸುಮಾರು ೯೦೦೦ ಕೋಟಿ ರೂಪಾಯಿಗಳ ಹಣ ವರ್ಗಾವಣೆ ಮತ್ತು ವಂಚನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಸಲ್ಲಿಸಿದ ಗಡೀಪಾರು ಕೋರಿಕೆ ಅರ್ಜಿಯ ವಿಚಾರಣೆ ಎದುರಿಸುತ್ತಿರುವ ೬೨ರ ಹರೆಯದ ಉದ್ಯಮಿ ಕಳೆದ ವರ್ಷ ಏಪ್ರಿಲ್ ನಲ್ಲಿ ತಮ್ಮ ಬಂಧನ ವಿರುದ್ಧ ಜಾಮೀನು ಪಡೆದಿದ್ದರು. ಮಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿಯು, ಕಾಂಗ್ರೆಸ್ ನೇತೃತ್ವದ ಸರ್ಕಾರವು ದೇಶಭ್ರಷ್ಟ ಉದ್ಯಮಿಯನ್ನುಪೋಷಿಸಿತ್ತು ಮತ್ತು ರಕ್ಷಿಸಿತ್ತು ಎಂದು ಪ್ರತ್ಯಾರೋಪ ಮಾಡಿದೆಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಷ್ಟ ಅನುಭವಿಸುತ್ತಿರುವ ಖಾಸಗಿ ಏರ್ ಲೈನ್ಸ್ ಸಂಸ್ಥೆಯನ್ನು ಹೊಣೆ ಮುಕ್ತ  ಮಾಡುವಂತೆ ತಾನು ಕೋರಿದ್ದುದಾಗಿ ಮಾಧ್ಯಮಗಳಿಗೆ ತಿಳಿಸಿದ್ದರು, ಅವರು ಉಲ್ಲೇಖಿಸಿದ್ದುದು ಕಿಂಗ್ ಪಿಶರ್ ಏರ್ ಲೈನ್ಸ್ ಸಂಸ್ಥೆಯನ್ನೇ ಎಂದು ಕೇಂದ್ರ ಸಚಿವ ಪೀಯೂಶ್ ಗೋಯಲ್ ಅವರು ಹೇಳಿದ್ದಾರೆಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಲ್ಯ ಅವರ ನಡುವಣಬಾಂಧವ್ಯಗಳ ಪರಿಣಾಮವಾಗಿಯೇ ಉದ್ಯಮಿಗಳಿಗೆ ಎಲ್ಲ ನಿಯಮಾಗಳಿಗಳನ್ನೂ ಉಲ್ಲಂಘಿಸಿ ಸಾಲ ನೀಡುವಂತೆ ಬ್ಯಾಂಕುಗಳ ಮೇಲೆ ಹಿಂದಿನ ಯುಪಿಎ ಸರ್ಕಾರ ಒತ್ತಡಗಳನ್ನು ಹೇರಿತ್ತು ಎಂದು ಆಪಾದಿಸಿದ ಗೋಯಲ್, ’ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕುಎಂದು ಆಗ್ರಹಿಸಿದ್ದರು. ೨೦೧೦ರ ಆಗಸ್ಟ್ ೧೮ರಂದು ನಿರ್ದಿಷ್ಟ ಕಂಪೆನಿಯೊಂದಕ್ಕೆ ಸಂಬಂಧಿಸಿದ ಪತ್ರವೊಂದನ್ನು ಭಾರತೀಯ ರಿಸರ್ವ್ ಬ್ಯಾಂಕಿಗೆ (ಆರ್ ಬಿಐ) ಕಳುಹಿಸಲಾಗಿತ್ತು ಮತ್ತು ಆಗಸ್ಟ್ ೨೭ರಂದು ಅದನ್ನು ಇತ್ಯರ್ಥ ಪಡಿಸಲಾಗಿತ್ತು. ೨೦೧೧ರ ಅಕ್ಟೋಬರಿನಲ್ಲಿ ಮಲ್ಯ ಅವರು ಸಿಂಗ್ ಅವರಿಗೆ ಧನ್ಯವಾದ ಸಲ್ಲಿಸಿದ್ದರು ಮತ್ತು ತಮಗೆ ಇನ್ನಷ್ಟು ನೆರವಿನ ಅಗತ್ಯವಿದೆ ಎಂದು ಹೇಳಿದ್ದರು. ಮತ್ತು ಅವರ ನೆರವಿಗೆ ಪುನಃ ಬರುವಂತೆ ಆರ್ ಬಿಐ ಮೇಲೆ ಪುನಃ ಒತ್ತಡ ಹಾಕಲಾಗಿತ್ತು ಎಂದು ಸಚಿವರು ಹೇಳಿದರು.

2018: ಜಲಂಧರ್: ಕೇರಳ ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿರುವ ಜಲಂಧರ್ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರು ಪೊಲೀಸರು ತನಿಖೆ ಆರಂಭಿಸುವ ಮುನ್ನವೇ ರೋಮನ್ ಕ್ಯಾಥೋಲಿಕ್ ಡಯೋಸಿಸ್ ಕಿರಿಯ ಅಧಿಕಾರಿಗೆ ಆಡಳಿತದ ಉಸ್ತುವಾರಿಯನ್ನು ವಹಿಸಿದರು. ಆದರೆ ತಾವು ಹುದ್ದೆಯಿಂದ ಕೆಳಗಿಳಿದಿಲ್ಲ ಎಂದು ಸ್ಪಷ್ಟ ಪಡಿಸಿದರು. ಫ್ರಾಂಕೋ ಮುಲಕ್ಕಲ್ ಅವರು ಫಾದರ್ ಜೋಸೆಫ್ ತೆಕ್ಕ್ಕುಮುಕಟ್ಟಿಲ್ ಅವರನ್ನು ಟಂಡಾ ಡಿಯಾನರಿಯ ಡೀನ್ ಆಗಿಯೂ, ಫಾದರ್ ಸುಬಿನ್ ತೆಕ್ಕಡತು ಅವರನ್ನು ಟಂಡಾದ ಸೈಂಟ್ ಮೇರೀಸ್ ಚರ್ಚಿನ ಪ್ಯಾರೋಕಿಯಲ್ ವಿಕಾರ್ ಆಗಿ ನೇಮಕ ಮಾಡಿದ್ದಾರೆನಾನು ಎಲ್ಲವನ್ನೂ ದೇವರ ಕೈಗೆ ಬಿಟ್ಟಿದ್ದೇನೆ ಮತ್ತು ನನ್ನ ವಿರುದ್ಧದ ಆರೋಪ ಬಗ್ಗೆ ನಡೆಯುತ್ತಿರುವ ತನಿಖೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ. ನನ್ನ ಗೈರು ಹಾಜರಿಯಲ್ಲಿ, ನಿಯಮದ ಪ್ರಕಾರ ಮ್ಯಾಥ್ಯೂ ಕೊಕ್ಕಂಡಮ್ ಅವರು ಡಯೋಸಿಸ್ ಆಡಳಿತವನ್ನು ನೋಡಿಕೊಳ್ಳುವರು ಎಂದು ಮುಲಕ್ಕಲ್ ಅವರುಫಾದರ್ಸ್, ಸಿಸ್ಟರ್ಸ್ ಮತ್ತು ಬ್ರದರ್ಸ್ ಅವರನ್ನು ಉದ್ದೇಶಿಸಿ ಬರೆದಿರುವ ಪತ್ರದಲ್ಲಿ ತಿಳಿಸಿದರು. ಹೇಳಿಕೆಯನ್ನು ಮೊದಲಿಗೆ ಹುದ್ದೆ ತ್ಯಾಗದ ಕೊಡುಗೆ ಎಂದು ಭಾವಿಸಲಾಗಿತ್ತುಬಿಷಪ್ ಅವರ ಪ್ರತಿನಿಧಿ ಜೇಮ್ಸ್ ಅವರು ಬಿಷಪ್ ಅವರು ಹುದ್ದೆಯಿಂದ ಕೆಳಗಿಳಿದಿದ್ದಾರೆ ಎಂಬುದನ್ನು ತಳ್ಳಿ ಹಾಕಿದರು. ’ಅವರು (ಬಿಷಪ್) ಫಾದರ್ ಮ್ಯಾಥ್ಯೂ ಅವರನ್ನು ತಮ್ಮ ಗೈರು ಹಾಜರಿಯಲ್ಲಿ ಡಯೋಸಿಸ್ ಆಡಳಿತ ನಿರ್ವಹಿಸುವ ಸಲುವಾಗಿ ಮಾತ್ರ ನೇಮಕ ಮಾಡಿದ್ದಾರೆ. ಬಿಷಪ್ ಅವರು ತನಿಖೆಗಾಗಿ ಕೇರಳಕ್ಕೆ ಹೋಗುತ್ತಿರುವುದರಿಂದ ಕ್ರಮವನ್ನು ಅವರು ಕೈಗೊಂಡಿದ್ದಾರೆ ಎಂದು ಜೇಮ್ಸ್ ಹೇಳಿದರು.  ಬಿಷಪ್ ಅವರಿಗೆ ತನಿಖೆಯ ನೇತೃತ್ವ ವಹಿಸಿರುವ ವೈಕೋಮ್ (ಕೇರಳ) ಡಿಎಸ್ಪಿ ಕೆ. ಸುಭಾಶ್ ಅವರಿಂದ ಅಧಿಕೃತ ಸಮನ್ಸ್ ತಲುಪಿತ್ತು. ಜಲಂಧರ್ ಪೊಲೀಸ್ ಕಮೀಷನರ್ (ಸಿಪಿ) ಪ್ರವೀಣ್ ಸಿನ್ಹ ಅವರು ಬಿಷಪ್ ಅವರಿಗೆ ಸಮನ್ಸ್ನ್ನು ಮುಟ್ಟಿಸಿ, ಸೆಪ್ಟೆಂಬರ್ ೧೯ರಂದು ತನಿಖೆಗೆ ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ್ದರು. ಬಿಷಪ್ ಫ್ರಾಂಕೋ ಅವರು ತಮ್ಮ ಪತ್ರದಲ್ಲಿ ತಮಗಾಗಿ, ತಮ್ಮ ವಿರುದ್ಧ ಆರೋಪ ಮಾಡಿಸುವ ಕ್ರೈಸ್ತ ಸನ್ಯಾಸಿನಿ ಮತ್ತು ಆಕೆಗೆ ಬೆಂಬಲ ನೀಡಿರುವ ಇತರರ ಸಲುವಾಗಿ ಪ್ರಾರ್ಥನೆ ಮಾಡುವಂತೆ ಕೋರಿದ್ದಾರೆ. ಇಂತಹ ಪ್ರಾರ್ಥನೆಯಿಂದ ಮನಃ ಪರಿವರ್ತನೆಯಾಗುವಂತೆ ಮತ್ತು ಸತ್ಯವು ಹೊರಬರುವಂತೆ ದೈವೀ ಶಕ್ತಿಯ ಮಧ್ಯಪ್ರವೇಶವಾಗಲಿ ಎಂದು ಅವರು ಬಿಷಪ್ ಪತ್ರದಲ್ಲಿ ಹಾರೈಸಿದರು. ಕೇರಳದ ಕೋಚಿಯಲ್ಲಿ ಕ್ಯಾಥೋಲಿಕ್ ಸನ್ಯಾಸಿನಿಯರು ಕಳೆದ ಎಂಟು ದಿನಗಳಿಂದ ಬಿಷಪ್ ಫ್ರಾಂಕೋ ಅವರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಚರ್ಚ್ ಅಧಿಕಾರಿಗಳು ಭರವಸೆಗಳು ಮತ್ತು ಹಸ್ತಕ್ಷೇಪದ ಮೂಲಕ  ತಮ್ಮ ಪ್ರತಿಭಟನೆಯನ್ನು ಮುರಿಯಲು ಯತ್ನಿಸುತ್ತಿದ್ದಾರೆ ಎಂದು ಅವರು ಆಪಾದಿಸಿದರು. ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವಂತೆ ಮತ್ತು ತಮಗೆ ನ್ಯಾಯ ಒದಗಿಸುವಂತೆ ಕೋರಿ ಇತ್ತೀಚೆಗೆ ವ್ಯಾಟಿಕನ್ ಗೆ ಕ್ರೈಸ್ತ ಸನ್ಯಾಸಿನಿ ಪತ್ರ ಬರೆದಿದ್ದರು. ಬಿಷಪ್ ಫ್ರಾಂಕೋ ಅವರನ್ನು ಜಲಂಧರ್ ಬಿಷಪ್ ಹುದ್ದೆಯಿಂದ ಕಿತ್ತು ಹಾಕುವಂತೆಯೂ ಅವರು ಆಗ್ರಹಿಸಿದ್ದರು. ಬಿಷಪ್ ಮುಲಕ್ಕಲ್ ಅವರು ತಮ್ಮ ವಿರುದ್ಧದ ಪ್ರಕರಣವನ್ನುಸಮಾಧಿ ಮಾಡಲು ರಾಜಕೀಯ ಮತ್ತು ಹಣದ ಶಕ್ತಿಯನ್ನು ಬಳಸುತ್ತಿದ್ದಾರೆ ಎಂದೂ ಕ್ರೈಸ್ತ ಸನ್ಯಾಸಿನಿ ಆಪಾದಿಸಿದ್ದರು.

2018: ಹೈದರಾಬಾದ್: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತಗ್ಗಿಸಲು ಕೇಂದ್ರ ಸರ್ಕಾರವು ಇಷ್ಟರಲ್ಲೇ ಕಾರ್ಯ ಯೋಜನೆಯೊಂದನ್ನು ಪ್ರಕಟಿಸಲಿದೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಅಮಿತ್ ಶಾ ಅವರು ಇಲ್ಲಿ ಹೇಳಿದರು. ‘ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅತಿಯಾಗಿ ಏರುತ್ತಿರುವುದು ಮತ್ತು ಡಾಲರ್ ಎದುರು ರೂಪಾಯಿಯ ಮೌಲ್ಯ ಕುಸಿಯುತ್ತಿರುವ ಬಗ್ಗೆ ನಮಗೂ ಅತೀವ ಆತಂಕವಿದೆ. ಬಗ್ಗೆ ಜನರ ಕಾತರವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ನಾವು ಶೀಘ್ರದಲ್ಲೇ ಕಾರ್ಯಯೋಜನೆಯೊಂದನ್ನು ಪ್ರಕಟಿಸಲಿದ್ದೇವೆಎಂದು ಶಾ ಅವರು ಹೈದರಾಬಾದಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಬಿಜೆಪಿ ಅಧ್ಯಕ್ಷರು ತೆಲಂಗಾಣಕ್ಕೆ ಒಂದು ದಿನದ ಭೇಟಿ ನೀಡಿದ್ದು, ಮೆಹಬೂಬ್ ನಗರದಲ್ಲಿ ಈದಿನ ಸಂಜೆ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ ದೆಹಲಿಗೆ ವಾಪಸಾಗುವ ಮುನ್ನ, ಶಾದ್ ನಗರದಲ್ಲಿ ಅವರು ಪಕ್ಷದ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೋರಾಟದ ಮಾರ್ಗನಕ್ಷೆಯನ್ನು ಒದಗಿಸಲಿದ್ದಾರೆಕಳೆದ ಕೆಲವು ದಿನಗಳಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ತೀವ್ರ ಸ್ವರೂಪದಲ್ಲಿ ಏರುತ್ತಿರುವುದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳ ಏರಿಳಿತವಾಗುತ್ತಿರುವ ಕಾರಣದಿಂದ ಎಂದು ಶಾ ನುಡಿದರು. ’ಇದೇ ವೇಳೆಗೆ ಡಾಲರ್ ಎದುರು ರೂಪಾಯಿಯ ಮೌಲ್ಯವೂ ಕುಸಿಯುತ್ತಿದೆ. ವಿದ್ಯಮಾನ ರೂಪಾಯಿಗಷ್ಟೇ ಸೀಮಿತವಲ್ಲ, ಇತರ ದೇಶಗಳ ಕರೆನ್ಸಿಯ ಮೌಲ್ಯವೂ ಡಾಲರ್ ಎದುರು ಕುಸಿಯುತ್ತಿದೆ. ಇದರಿಂದ ಜನ ಉದ್ವಿಗ್ನರಾಗಿದ್ದಾರೆ ಎಂಬುದು ನಮಗೆ ಗೊತ್ತಿದೆ. ಬಿಜೆಪಿ ಕೂಡಾ ಏರುತ್ತಿರುವ ಬೆಲೆಗಳ ಬಗ್ಗೆ ಚಿಂತಿತವಾಗಿದೆ ಎಂದು ಅವರು ನುಡಿದರು. ಮತೆ ಏರಿದ ಇಂಧನ ಬೆಲೆ: ದೇಶದಲ್ಲಿ ಪೆಟ್ರೋಲ್ ದರ ಆಗಸ್ಟ್  ೧ರಿಂದೀಚೆಗೆ ಶೇಕಡಾ ೬ರಷ್ಟು ಮತ್ತು ಡೀಸೆಲ್ ದರ ಶೇಕಡಾ ೮ರಷ್ಟು ಹೆಚ್ಚಿದೆ. ಶನಿವಾರ ಪೆಟ್ರೋಲ್ ದರ ಮುಂಬೈಯಲ್ಲಿ ಲೀಟರಿಗೆ ೮೯.೦೧ ರೂಪಾಯಿಗಳಿಗೆ ಏರಿದರೆ, ದೆಹಲಿಯಲ್ಲಿ ಲೀಟರಿಗೆ ೮೧.೬೩ ರೂಪಾಯಿಗೆ ಏರಿತು.  ಡೀಸೆಲ್ ಬೆಲೆ ಮುಂಬೈಯಲ್ಲಿ ಲೀಟರಿಗೆ ೭೮.೦೭ ರೂಪಾಯಿಗೆ ಮುಟ್ಟಿದರೆ, ದೆಹಲಿಯಲ್ಲಿ ೭೩.೫೪ ರೂಪಾಯಿಗೆ ತಲುಪಿತು. ರಾಜಸ್ಥಾನ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶದಲ್ಲಿ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ಮತ್ತು ೨೦೧೯ರಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ ಡಿಎ) ಸರ್ಕಾರಕ್ಕೆ ಏರುತ್ತಿರುವ ಇಂಧನ ಬೆಲೆ ರಾಜಕೀಯಮುಳ್ಳಿನಂತಾಯಿತು. ದುರ್ಬಲ ರೂಪಾಯಿ ಮತ್ತು ಏರುತ್ತಿರುವ ಇಂಧನ ಬೆಲೆಗಳನ್ನು ಪ್ರತಿಭಟಿಸಲು ಕಾಂಗ್ರೆಸ್ ಕರೆಯ ಮೇರೆಗೆ ವಿರೋಧ ಪಕ್ಷಗಳು ಒಗ್ಗಟ್ಟಾಗಿ ವಾರ ಭಾರತ್ ಬಂದ್ ಸಂಘಟಿಸಿದ್ದವುಕೇಂದ್ರದ ಕೆಲವು ಸಚಿವರು ಇಂಧನ ಬೆಲೆ ಏರಿಕೆ ಸರ್ಕಾರದ ನಿಯಂತ್ರಣ ಮೀರಿದ್ದು ಎಂಬುದಾಗಿ ನೀಡಿರುವ ಹೇಳಿಕೆಗೆ ಶಾ ಅವರ ಹೇಳಿಕೆ ವಿರುದ್ಧವಾಗಿರುವಂತೆ ಕಾಣುತ್ತಿದೆ.
ಟಿಆರ್ಎಸ್ ಜೊತೆ ಹೊಂದಾಣಿಕೆ ಇಲ್ಲ: ಬಿಜೆಪಿ ಅಧ್ಯಕ್ಷರು ತೆಲಂಗಾಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿ ಆರ್ ಎಸ್) ಜೊತೆಗೆ ಯಾವುದೇ ರೀತಿಯ ಹೊಂದಾಣಿಕೆ ಸಾಧ್ಯತೆಗಳನ್ನು ಅಲ್ಲಗಳೆದರು.  ‘ಟಿಆರ್ ಎಸ್ ಜೊತೆಗೆ ನಾವು ಯಾವುದೇ ಹೊಂದಾಣಿಕೆ ಅಥವಾ ಮೈತ್ರಿಯನ್ನು ಮಾಡಿಕೊಂಡಿಲ್ಲ. ವಿಚಾರದಲ್ಲಿ ಯಾವುದೇ ಗೊಂದಲವೂ ಇಲ್ಲ. ಚುನಾವಣೆಯಲ್ಲಿ ಟಿಆರ್ ಎಸ್ ನ್ನು ಅಧಿಕಾರದಿಂದ ಇಳಿಸುವ ಗುರಿ ಇಟ್ಟುಕೊಂಡೇ ನಾವು ಪ್ರಬಲ ಹೋರಾಟ ನೀಡಬೇಕು ಎಂದು ಅವರು ನುಡಿದರು.  ಕಾಂಗ್ರೆಸ್ ಪಕ್ಷದಂತೆಯೇ ಟಿಆರ್ ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಅವರೂ ತುಷ್ಟೀಕರಣ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಅಮಿತ್ ಶಾ ಆಪಾದಿಸಿದರುಮಿತ್ರ ಪಕ್ಷ ಮಜ್ಲಿಸ್ --ಇತ್ತೇಹಾದುಲ್ ಮುಸ್ಲಿಮೀನ್ ಒತ್ತಡಕ್ಕೆ ಒಳಗಾಗಿ ಸೆಪ್ಟೆಂಬರ್ ೧೭ರಂದು ಹೈದರಾಬಾದ್ ವಿಮೋಚನೆ ಆಚರಣೆಗೆ ಚಂದ್ರಶೇಖರ ರಾವ್ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಮುಸ್ಲಿಮರಿಗೆ ಶೇಕಡಾ ೧೨ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಅನುಮೋದಿಸಿಕೊಂಡು ಅವರು ಕೇಂದ್ರಕ್ಕೂ ಕಳುಹಿಸಿರುವುದು ಮುಸ್ಲಿಮರ ತುಷ್ಟೀಕರಣಕ್ಕಾಗಿ ಮಾತ್ರ. ಮಸೂದೆ ಸಂವಿಧಾನ ಬಾಹಿರವಾದದ್ದು ಎಂಬುದು ಗೊತ್ತಿದ್ದುಕೊಂಡೇ ಅದನ್ನು ಅವರು ರೂಪಿಸಿದ್ದಾರೆ ಎಂದು ನುಡಿದ ಶಾ, ಬಿಜೆಪಿಯ ಧರ್ಮಾಧಾರಿತ ಮೀಸಲಾತಿಯನ್ನು ವಿರೋಧಿಸಿದೆ ಎಂದು ಹೇಳಿದರುಹಲವಾರು ಕೇಂದ್ರ ಸಚಿವರು, ಪ್ರಧಾನಿ ನರೇಂದ್ರ ಮೋದಿ ಕೂಡಾ ತೆಲಂಗಾಣ ಮುಖ್ಯಮಂತ್ರಿಯನ್ನು ಅವರ ಆಡಳಿತಕ್ಕಾಗಿ ಶ್ಲಾಘಿಸಿರುವ ಬಗ್ಗೆ ಗಮನ ಸೆಳೆದಾಗ, ಬಿಜೆಪಿ ಅಧ್ಯಕ್ಷರುಯಾವ ಸಂದರ್ಭದಲ್ಲಿ ಹೇಳಿಕೆಗಳನ್ನು ನೀಡಲಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಉತ್ತರಿಸಿದರು.  ‘ಪ್ರಧಾನಿಯವರು ಲೋಕಸಭೆಯಲ್ಲಿ ಚಂದ್ರಬಾಬು ನಾಯ್ಡು ಸರ್ಕಾರದ ಜೊತೆಗೆ ಹೋಲಿಸುತ್ತಾ ಕೆ ಸಿಆರ್ ಅವರನ್ನು ಶ್ಲಾಘಿಸಿದ್ದರು ಎಂದು ಶಾ ನೆನಪಿಸಿದರು. ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಸಭ ಉಪಸಭಾಪತಿ ಹುದ್ದೆಗಳಿಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿಯು ಏಕೆ ಟಿಆರ್ ಎಸ್ ಬೆಂಬಲವನ್ನು ಪಡೆದಿತ್ತು ಎಂಬ ಪ್ರಶ್ನೆಗೆ, ’ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಿದ್ದ ಕಾರಣ ಟಿಆರ್ ಎಸ್ ಬಿಜೆಪಿಯನ್ನು ಬೆಂಬಲಿಸಿತು ಎಂದು ಅಮಿತ್ ಶಾ ವಿವರಿಸಿದರು.

2018: ನವದೆಹಲಿ: ಚುನಾವಣೆಗಳಲ್ಲಿ ಕಪ್ಪು ಹಣದ ಹಾವಳಿಯನ್ನು ನಿಭಾಯಿಸಲು ಹಾಲಿ ಕಾನೂನುಗಳು ಅಸಮರ್ಥವಾಗಿವೆ ಎಂದು ಮುಖ್ಯ ಚುನಾವಣಾ ಕಮೀಷನರ್ (ಸಿಇಸಿ) .ಪಿ. ರಾವತ್ ಅವರು ಇಲ್ಲಿ ಹೇಳಿದರು. ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ ಸಂಘಟಿಸಿದ್ದಭಾರತದ ಚುನಾವಣಾ ಪ್ರಜಾಪ್ರಭುತ್ವಕ್ಕೆ ಇರುವ ಸವಾಲುಗಳು ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ರಾವತ್, ’ಕೇಂಬ್ರಿಜ್ ಅನಾಲಿಟಿಕಾ ದಂತಹ ಸಂಸ್ಥೆಗಳಿಂದ ನಡೆಯುತ್ತಿರುವ ಮಾಹಿತಿ ಕಳವು, ಮಾಹಿತಿ ಕೊಯ್ಲು ಮತ್ತು ನಕಲಿ ಸುದ್ದಿಗಳು (ಫೇಕ್ ನ್ಯೂಸ್) ರಾಷ್ಟ್ರದ ಚುನಾವಣಾ ಪ್ರಕ್ರಿಯೆಗೆ ಗಂಭೀರ ಅಪಾಯವನ್ನು ತಂದೊಡ್ಡಿವೆ ಎಂದು ನುಡಿದರು.  ‘ಪ್ರಜಾಪ್ರಭುತ್ವವು ಮನಸೊ ಇಚ್ಛೆಯಂತೆ ನಡೆಯುವುದಿಲ್ಲ. ಧೈರ್, ವ್ಯಕ್ತಿತ್ವ, ಸಮಗ್ರತೆ, ಜ್ಞಾನದಂತಹ ಬೇರುಗಳು ಪ್ರಜಾಪ್ರಭುತ್ವಕ್ಕೆ ಅಗತ್ಯವಾಗಿದ್ದು, ಅವು ರಾಷ್ಟ್ರದಲ್ಲಿ ನಶಿಸುವ ಹಂತದಲ್ಲಿವೆ ಎಂದು ಅವರು ಹೇಳಿದರು.  ಆಯೋಗದ ಮುಂದಿನ ಸವಾಲುಗಳು: ಸ್ವಚ್ಛ ಚುನಾವಣೆಯು ರಾಷ್ಟ್ರದ ನಾಯಕತ್ವ ಮತ್ತು ಜನತೆಗೆ ಕಾನೂನುಬದ್ಧತೆಯನ್ನು ತಂದುಕೊಡುತ್ತವೆ. ಇದು ಕಲುಷಿತವಾದರೆ ಜನ ಸಾಮಾನ್ಯರು ಇಡೀ ವ್ಯವಸ್ಥೆಯ ಬಗ್ಗೆ ಸಿನಿಕರಾಗುತ್ತಾರೆ. ಇದು ಅತ್ಯಂತ ಕಳವಳದ ವಿಷಯ ಎಂದು ಚುನಾವಣಾ ಆಯೋಗದ ಮುಂದಿರುವ ವಿವಿಧ ಸವಾಲುಗಳನ್ನು ವಿವರಿಸುತ್ತಾ ರಾವತ್ ನುಡಿದರು.   ‘ನಕಲಿ ಸುದ್ದಿಗಳ ಹೆಚ್ಚಳ, ಮಾಹಿತಿ ಕಳವು, ಮಾಹಿತಿ ಕೊಯ್ಲು, ವ್ಯಕ್ತಿ ಚಿತ್ರ, ಜನಾಭಿಪ್ರಾಯದ ಮೇಲೆ ಪರಿಣಾಮ ಬೀರುವಂತಹ ಸಂದೇಶಗಳ ರವಾನೆ ಇತ್ಯಾದಿಗಳು, ಆರೋಗ್ಯಕರವಾದ ನಿರ್ಧಾರ ತೆಗೆದುಕೊಳ್ಳಬೇಕಾದ ಮತ್ತು ಆರೋಗ್ಯಕರವಾದ ಪ್ರಾತಿನಿಧಿಕ ಸರ್ಕಾರ ರಚನೆಯಂತಹ ಯಾವುದೇ ಪ್ರಕ್ರಿಯೆ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತವೆ. ಇದು ಪ್ರತಿಯೊಂದು ಪ್ರಜಾಪ್ರಭುತ್ವಕ್ಕೂ ಗಂಭೀರ ಅಪಾಯವನ್ನು ಒಡ್ಡುತ್ತದೆ ಎಂದು ರಾವತ್ ವಿವರಿಸಿದರುಭಾರತದ ಚುನಾವಣಾ ಆಯೋಗಕ್ಕೆ ವಿಷಯಗಳ ಬಗ್ಗೆ ಮತ್ತು ಇದೇ ಮಾದರಿಯ ಇತರ ವಿಷಯಗಳ ಬಗ್ಗೆ ಸ್ಪಷ್ಟವಾದ ಅರಿವು ಇದೆ ಎಂದು ಸಿಇಸಿ ನುಡಿದರು.  ‘ನಮ್ಮ ದೇಶದಲ್ಲಿ ಸೈಬರ್ ಭದ್ರತೆಯಂತಹ ವಿಷಯಗಳು ಚುನಾವಣಾ ಆಯೋಗದ ಗಮನದಲ್ಲಿವೆ. ಆದ್ದರಿಂದ ಕೇಂಬ್ರಿಜ್ ಅನಾಲಿಟಿಕಾ ದಂತಹ ಘಟನೆಗಳು ಚುನಾವಣೆ ಕಾಲದಲ್ಲಿ ನಮ್ಮಲ್ಲಿ ಘಟಿಸಲು ಸಾಧ್ಯವಿಲ್ಲ. ಸಾಮಾಜಿಕ ಮಾಧ್ಯಮ ವೇದಿಕೆಗಳ, ನಕಲಿ ಸುದ್ದಿಗಳ ದುರ್ಬಳಕೆ ಸಾಧ್ಯವಿಲ್ಲ ಎಂದು ಅವರು ಹೇಳಿದರು. ಇದೇ ರೀತಿ ಮತದಾರರ ಯಾದಿ, ಪ್ರಚಾರ ಧನ, ಚುನಾವಣಾ ಪ್ರಕ್ರಿಯೆ ಮತ್ತು ತಂತ್ರಜ್ಞಾನ ನಿರ್ವಹಣೆಗೆ ಸಂಬಂಧಿಸಿದ ಎಲ್ಲ ಅನಿಷ್ಟಗಳ ಬಗೆಗೂ ಚುನಾವಣಾ ಆಯೋಗಕ್ಕೆ ಅರಿವಿದೆ ಎಂದು ಅವರು ನುಡಿದರು. ಹಣ ಬಲದ ಬಳಕೆ: ಚುನಾವಣೆ ಕಾಲದಲ್ಲಿ ಹಣ ಬಲದ ಬಳಕೆ ಬಗ್ಗೆ ಮಾತನಾಡಲಾಗುತ್ತದೆ. ನಮ್ಮ ಹಾಲಿ ಕಾನೂನುಗಳು ಹಾವಳಿಯನ್ನು ಸಂಪೂರ್ಣವಾಗಿ ನಿಗ್ರಹಿಸುವಷ್ಟು ಸಮರ್ಥವಾಗಿಲ್ಲ.   ಕಾರಣದಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಚುನಾವಣೆಗಳಿಗೆ ಸರ್ಕಾರವೇ ಹಣ ಒದಗಿಸುವುದು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಭಾರತದಲ್ಲಿ ಮತ್ತು ಭಾರತದ ಚುನಾವಣೆಯಲ್ಲಿ ಹಣದ ದುರ್ಬಳಕೆ ಅತ್ಯಂತ ಆತಂಕದ ವಿಷಯ. ಪ್ರಚಾರಕ್ಕಾಗಿ ಹಣಬಳಕೆಯಲ್ಲಿ ಪಾರದರ್ಶಕತೆ ತರುವ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಜನರು ಸರ್ಕಾರವೇ ಚುನಾವಣಾ ವೆಚ್ಚ ಭರಿಸುವ ಬಗೆಗೂ ಮಾತನಾಡಿದ್ದಾರೆ. ಆದರೆ, ಇಂದಿನ ದಿನ ಲಭ್ಯವಿರುವ ಕಾನೂನಿನ ಚೌಕಟ್ಟು ಸಮಸ್ಯೆಯನ್ನು ನಿಭಾಯಿಸುವಷ್ಟು ಸಮರ್ಥವಲ್ಲ. ಆದ್ದರಿಂದ ನಿಟ್ಟಿನಲ್ಲಿ ಹಲವಾರು ಸುಧಾರಣೆಗಳನ್ನು ಆಯೋಗವು ಸಲಹೆ ಮಾಡುತ್ತಿದೆ ಎಂದು ಸಿಇಸಿ ಹೇಳಿದರುಚುನಾವಣೆಗೆ ಸರ್ಕಾರವೇ ಹಣ ಒದಗಿಸುವ ಬಗ್ಗೆ ಪ್ರಸ್ತಾಪಿಸಿದ ಸಿಇಸಿ, ’ಚುನಾವಣಾ ಕಣಕ್ಕೆ ಹಣದ ಹೊಳೆ ಹರಿಯುತ್ತಿರುವವರೆಗೆ ಇದು ಪರಿಣಾಮಕಾರಿ ಆಗಲಾರದು. ಇದು ಪ್ರವಾಹವನ್ನು ಸಣ್ಣ ಎಲೆಯಿಂದ ನಿಯಂತ್ರಿಸಲು ಹೊರಟಂತಾದೀತು ಎಂದು ರಾವತ್ ನುಡಿದರು.  ಮಾಧ್ಯಮಗಳ ಪರಿಣಾಮಕಾರಿ ಬಳಕೆ ಮತ್ತು ನಕಲಿ ಸುದ್ದಿ ಹಾಗೂ ಹಣ ಪಾವತಿಸಿದ ಸುದ್ದಿಗಳನ್ನು ನಿಗ್ರಹಿಸುವುದು ಅತ್ಯಂತ ಮಹತ್ವದ ವಿಚಾರವಾಗಿದ್ದು, ಬಗ್ಗೆ ಆಯೋಗ ಗಮನ ಹರಿಸಿದೆ ಎಂದು ಅವರು ಹೇಳಿದರು.  ‘ಸಾಮಾಜಿಕ ಜಾಲತಾಣವೂ ಸೇರಿದಂತೆ ಮಾಧ್ಯಮಗಳ ನಿರ್ವಹಣೆ ದೊಡ್ಡ ಸವಾಲು. ಮಾಧ್ಯಮದ ಮೇಲಿನ ಮಾಲೀಕತ್ವದಿಂದ ಹಿಡಿದು ಹಲವಾರು ವಿಷಯಗಳನ್ನು ಒಳಗೊಂಡ ಬಹು ಆಯಾಮ ವಿಷಯಕ್ಕಿದೆ ಎಂದು ರಾವತ್ ನುಡಿದರು. ಮಾಧ್ಯಮದ ಮಾಲೀಕತ್ವದ ವಿಚಾರದ ಅಧ್ಯಯನ ಮಾಡಿದರೆ, ಅಗಾಧ ಬದಲಾವಣೆ ಆಗಿರುವುದು ಕಂಡು ಬರುತ್ತದೆ. ಮತ್ತು ಪತ್ರಿಕಾ ಸ್ವಾತಂತ್ರ್ಯ ಎಂಬುದು ಮಾಧ್ಯಮ ಜಗತ್ತಿನ ಎಲ್ಲೋ ಮೂಲೆಯಲ್ಲಿ ಪುಟ್ಟ ಭಾಗವಾಗಿ ಇರುವಂತೆ ಕಾಣುತ್ತದೆ. ಆದ್ದರಿಂದ ಪತ್ರಿಕಾ ಸ್ವಾತಂತ್ರ್ಯವು ನೈಜ ರೀತಿಯಲ್ಲಿ ಪ್ರಾಪ್ತವಾಗುವಂತೆ ನೋಡಿಕೊಂಡರೆ, ನಕಲಿ ಸುದ್ದಿ ಮತ್ತು ಪಾವತಿ ಸುದ್ದಿಗಳಿಂದ ಉದ್ಭವಿಸುವ ಎಲ್ಲ ಅನಿಷ್ಟಗಳೂ ತಾವೇ ತಾವಾಗಿ ಮಾಯವಾಗುತ್ತವೆ ಎಂಬುದು ನನ್ನ ಭಾವನೆ ಎಂದು ಸಿಇಸಿ ಹೇಳಿದರು.  ದೇಶದ ಮಾಧ್ಯಮಗಳು ಅಂತಾರಾಷ್ಟ್ರೀಯ ಮಾಧ್ಯಮಗಳು ಅನುಸರಿಸುತ್ತಿರುವ ರೀತಿ ನೀತಿಗಳನ್ನು ಗಮನಿಸಬೇಕು. ಅಂತರ್ ಜಾಲದಲ್ಲಿ ಕಳೆದವಾರ ಬಂದ ನಕಲಿ ಸುದ್ದಿ ಏನು ಮತ್ತು ವರದಿ ಹಿಂದಿನ ವಾಸ್ತವಾಂಶಗಳೇನು ಎಂಬುದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ನಿಯಮಿತವಾಗಿ ಪ್ರಕಟಿಸುವ ಉತ್ತಮ ಹವ್ಯಾಸವನ್ನು ರೂಢಿಸಿಕೊಳ್ಳುತ್ತಿವೆ ಎಂದು ಅವರು ನುಡಿದರು. ಮತದಾರರ ಯಾದಿಯ ಶುದ್ಧೀಕರಣವೂ ಚುನಾವಣಾ ಆಯೋಗದ ಮುಂದಿನ ಅತ್ಯಂತ ಪ್ರಮುಖವಾದ ಮತ್ತು ಮಹತ್ವದ ಕಾರ್. ಆಯೋಗವು ಸ್ವತಃ ತೃಪ್ತಿಯಾಗಿದೆ ಎಂಬುದಾಗಿ ಭಾವಿಸುವವರೆಗೂ ಕೆಲಸವನ್ನು ಮುಂದುವರೆಸಲಿದೆ ಎಂದು ಅವರು ಹೇಳಿದರು. ಬಹಳಷ್ಟು ಮಂದಿ ಒಮ್ಮೆ ಒಂದು ಕಡೆ ಹೆಸರು ನೋಂದಾಯಿಸಿ, ಬಳಿ ಹೊಸ ಸ್ಥಳದಲ್ಲಿ ಹೆಸರು ನೋಂದಾಯಿಸುವಾಗ ಹಿಂದಿನ ಸ್ಥಳದಲ್ಲಿ ನೋಂದಣಿ ಮಾಡಿದ್ದನ್ನು ಕಿತ್ತು ಹಾಕಿಸಲು ಮರೆಯುತ್ತಾರೆ. ಪರಿಣಾಮವಾಗಿ ಎರಡೆರಡು ಕಡೆ ಅವರ ಹೆಸರುಗಳು ಬರುತ್ತವೆ. ಆಯೋಗವು ಇದನ್ನು ನಿವಾರಿಸಿ, ಸ್ವಚ್ಛಗೊಳಿಸಲು ಪ್ರಯತ್ನಗಳನ್ನು ಆರಂಭಿಸಿದ್ದು, ಫಲಪ್ರದವೂ ಆಗುತ್ತಿದೆ ಎಂದು ಸಿಇಸಿ ನುಡಿದರು.
 
2016: ಮಂಡ್ಯ: ಕಾವೇರಿ ನದಿ ನೀರಿನ ಸಮಸ್ಯೆ ಪರಿಹಾರಕ್ಕೆ ಉನ್ನತ ಅಧಿಕಾರವುಳ್ಳ ಆಯೋಗ ರಚನೆ 
ಮಾಡಬೇಕು ಎಂದು ಜಲತಜ್ಞ ಡಾ.ರಾಜೇಂದ್ರ ಸಿಂಗ್ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು ಅಯೋಗದಲ್ಲಿ ಕಾನೂನು, ಪರಿಸರ, ನೀರಾವರಿ, ರೈತರು, ತಂತ್ರಜ್ಞರು ಸೇರಿದಂತೆ ಎಲ್ಲ ಬಗೆಯ ವಿಷಯ ತಜ್ಞರು ಇರಬೇಕು ಎಂದು ನುಡಿದರು. ಮಾತುಕತೆ ಮೂಲಕ ಕಾವೇರಿ ಸಮಸ್ಯೆ ಪರಿಹರಿಸಿಕೊಳ್ಳಲು ಸಾಧ್ಯವಿದೆ. ಹಾಗೆಯೇ ನೀರಿನ ಸರಿಯಾದ ಬಳಕೆ, ಜಲಮೂಲ ಹೆಚ್ಚಳಕ್ಕೆ ಅವಶ್ಯವಿರುವ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಹೇಳಿದರು. ನ್ಯಾಯಾಲಯವು ಅಂಕಿಸಂಖ್ಯೆಯೊಂದಿಗೆ ಎಷ್ಟು ಶಿಸ್ತುಬದ್ಧವಾಗಿ ನೀರನ್ನು ಸರಿಯಾಗಿ ಬಳಸಿಕೊಂಡಿದ್ದೀರಿ ಎಂಬುದನ್ನೂ ನೋಡುತ್ತದೆ. ಆದ್ದರಿಂದ ಜಲ ಸಂಪನ್ಮೂಲ ರಕ್ಷಣೆ ಹಾಗೂ ವಿತರಣೆಯ ಬಗೆಗೂ ಎಚ್ಚರ ವಹಿಸಬೇಕಿದೆ ಎಂದು ಅವರು ನುಡಿದರು. ಪಶ್ಚಿಮ ಘಟ್ಟದಲ್ಲಿ 2 ಸಾವಿರ ಟಿಎಂಸಿ ಅಡಿಯಷ್ಟು ನೀರು ಸಮುದ್ರ ಸೇರುತ್ತದೆ. ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ಮಾಡಬೇಕಿದೆ. ಕಡಿಮೆ ದೂರ ಹಾಗೂ ವೆಚ್ಚದಲ್ಲಿ ಹೆಚ್ಚು ನೀರು ಬಳಸಿಕೊಳ್ಳಬೇಕಿದೆ ಎಂದು ಹೇಳಿದರು. ಪಶ್ಚಿಮ ಘಟ್ಟದಲ್ಲಿ ಸಮುದ್ರ ಸೇರುವ ನೀರನ್ನು ಬಳಸಿಕೊಳ್ಳುವ ಮೂಲಕ 9 ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸಿಕೊಳ್ಳಬಹುದಾಗಿದೆ ಎಂದರು.
2016: ಬೆಂಗಳೂರುಪತ್ರಕರ್ತರು ಹಾಗೂ ವಿವಿಧ ಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗೆ
ಸಂಚು ರೂಪಿಸಿದ್ದ ಪ್ರಕರಣದಲ್ಲಿ 13 ಮಂದಿಯ ವಿರುದ್ಧ ಆರೋಪ ಸಾಬೀತಾಗಿದ್ದು, ಎನ್ಐಎ ವಿಶೇಷ ನ್ಯಾಯಾಲಯ ಸೆ.16ರಂದು ಶಿಕ್ಷೆ ಪ್ರಮಾಣ ನಿಗದಿ ಪಡಿಸುವುದಾಗಿ ಪ್ರಕಟಿಸಿತು. ಶೋಯಬ್ ಅಹಮ್ಮದ್ ಮಿರ್ಜಾ ಅಲಿಯಾಸ್ ಚೋಟು, ಅಬ್ದುಲ್ ಹಕೀಂ, ರಿಯಾಜ್ ಅಹಮ್ಮದ್, ಮಹಮ್ಮದ್ ಅಕ್ರಮ್, ಉಬೇದುಲ್ಲಾ ಬಹದ್ದೂರ್ ಅಲಿಯಾಸ್ ಇಮ್ರಾನ್, ವಾಹಿದ್ ಹುಸೇನ್, ಡಾ.ಜಾಫರ್ ಇಕ್ಬಾಲ್ ಸೊಲ್ಲಾಪುರ, ಮಹಮ್ಮದ್ ಸಾದಿಕ್ ಲಷ್ಕರ್, ಬಾಬಾ ಅಲಿಯಾಸ್ ಮೆಹಬೂಬ್, ಜಾಕೀರ್ ಅಲಿಯಾಸ್ ಉಸ್ತಾದ್, ಉಬೇದುಲ್ಲಾ ಉರ್ ರೆಹಮಾನ್ ಮತ್ತು ಡಾ.ನಹೀಂ ಸಿದ್ದಿಕಿ, ಡಾ.ಇಮ್ರಾನ್ಅಹಮದ್ಆರೋಪಿಗಳು.
ಬೆಂಗಳೂರು ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದ ಲಷ್ಕರ್--ತೈಯಬಾ (ಎಲ್ಇಟಿ) ಹಾಗೂ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ (ಹುಜಿ) ಭಯೋತ್ಪಾದನಾ ಸಂಘಟನೆಯ 13 ಮಂದಿ ಶಂಕಿತ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ನಗರದ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು.
2012
ರಲ್ಲಿ ರಾಜ್ಯದ ಪ್ರಮುಖ ಸಂಸದರು, ಶಾಸಕರು, ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಕೆಲ ಪತ್ರಕರ್ತರ ಹತ್ಯೆಗೆ ಆರೋಪಿಗಳು ಸಂಚು ರೂಪಿಸಿದ್ದರು. ಅಲ್ಲದೇ ವಿದೇಶದಲ್ಲಿ ನೆಲೆಸಿರುವ ಎಲ್ಇಟಿ ಉಗ್ರರ ನೆರವಿನಿಂದ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಿದ್ದರು. ಕಾರಣಕ್ಕಾಗಿ ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದರು. ಜತೆಗೆ ಕಳವು ಮಾಡಿದ ವಾಹನಗಳನ್ನು ಕೃತ್ಯಕ್ಕೆ ಬಳಸಲು ನಿರ್ಧರಿಸಿದ್ದರು ಎಂಬ ಅಂಶಗಳನ್ನು ಆರೋಪ ಪಟ್ಟಿಲ್ಲಿ ಹೇಳಲಾಗಿತ್ತು. ಈದಿನ ವಿಚಾರಣೆ ನಡೆಸಿದ ನ್ಯಾಯಾಲಯ 13 ಮಂದಿ ವಿರುದ್ಧ ಆರೋಪ ಸಾಬೀತಾಗಿದೆ ಎಂದು ಹೇಳಿ, ಶಿಕ್ಷೆ ಪ್ರಮಾಣವನ್ನು ಸೆ.16ಕ್ಕೆ ಕಾಯ್ದಿರಿಸಿತು.
2016: ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು
ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡಬೇಕು ಎಂದು ಉಭಯ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತು. ಸಾರ್ವಜನಿಕರು ಕಾನೂನು ಕೈಗೆತ್ತಿಕೊಂಡು ಹಿಂಸಾಚಾರದಲ್ಲಿ ಭಾಗಿಯಾಗುವುದು, ಆಸ್ತಿ ಹಾನಿ ಮಾಡುವಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲು  ನ್ಯಾಯಮೂರ್ತಿಗಳಾಧ ದೀಪಕ್ಮಿಶ್ರಾ ಮತ್ತು ಯು.ಯು.ಲಲಿತ್ ಅವರ ಪೀಠ ಉಭಯ ರಾಜ್ಯಗಳ ಸರ್ಕಾರಗಳಿಗೆ ಸೂಚಿಸಿತು. ಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಬಂದ್ ಅಥವಾ ಪ್ರತಿಭಟನೆ ನಡೆಯಬಾರದು. ಪ್ರತಿಭಟನಾ ನಿರತರಿಂದ ಹಿಂಸಾಚಾರ ಮತ್ತು ಆಸ್ತಿ ಹಾನಿ ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತಾಗಿ  2009 ತೀರ್ಪನ್ನು ಉಲ್ಲೇಖಿಸಿತು. ಕಾವೇರಿ ನೀರು ಹಂಚಿಕೆ ವಿವಾದ ಸೇರಿದಂತೆ ಎರಡೂ ರಾಜ್ಯಗಳಿಗೆ ನಿರ್ದೇಶನ ನೀಡುವ ಸಂಬಂಧ ಸೆಪ್ಟೆಂಬರ್ 20ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವುದಾಗಿ ತಿಳಿಸಿತು. ಈಮಧ್ಯೆ ಸೆ,16ರ ತಮಿಳುನಾಡು ಬಂದ್ಗೆ ರೈತರ ಸಂಘ, ರಾಜಕೀಯ ಪಕ್ಷಗಳು ಹಾಗೂ ವರ್ತಕರು ಸೇರಿದಂತೆ ಇತರೆ ಸಂಘಗಳು ಕರೆ ಕೊಟ್ಟಿರುವ ಹಿನ್ನೆಲೆ ಯಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಜಯಲಲಿತಾ ಅವರಿಗೆ ಪತ್ರ ಬರೆದರು. ತಮಿಳುನಾಡಿನಲ್ಲಿ ನೆಲೆಸಿರುವ ಕರ್ನಾಟಕದ ಜನರು ಹಾಗೂ ಅವರ ಆಸ್ತಿಗೆ ತೊಂದರೆಯಾಗದಂತೆ ಸೂಕ್ತ ರಕ್ಷಣೆ ಒದಗಿಸಲು ಪತ್ರ ಮುಖೇನ ಮನವಿ ಮಾಡಿದರು.
2016: ಬೆಂಗಳೂರುಕಾವೇರಿ ನೀರು ಹಂಚಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಸಂದೇಶ ಮುಟ್ಟಿಸಲು
ರೈಲುತಡೆ ಚಳವಳಿ ನಡೆಸಲು ಕರೆಕೊಟ್ಟಿದ್ದ ಕನ್ನಡಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆಗಿಳಿದಾಗ ಕೇಂದ್ರ ರೈಲುನಿಲ್ದಾಣದ ಬಳಿ ಪೊಲೀಸರು ವಾಟಾಳ್ನಾಗರಾಜ್ಸೇರಿದಂತೆ 50 ಜನರನ್ನು ಬಂಧಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕನ್ನಡ ಚಳವಳಿ ವಾಟಾಳ್ಪಕ್ಷದ ವಾಟಾಳ್ನಾಗರಾಜ್ಹಾಗೂ ಸಾ.ರಾ. ಗೋವಿಂದು, ಪ್ರವೀಣ್ಶೆಟ್ಟಿ ಅವರನ್ನು ಬಂಧಿಸಿರುವುದಾಗಿ ಬೆಂಗಳೂರು ನಗರ ಪೊಲೀಸರು ಟ್ವೀಟ್ಮಾಡಿದರು.
ಪ್ರತಿಭಟನೆ ನಡೆಸಲು ಮೈಸೂರು ಬ್ಯಾಂಕ್ವೃತ್ತದಿಂದ ಕಾರಿನಲ್ಲಿ ಬಂದ ಮುಖಂಡರನ್ನು ರೈಲು ನಿಲ್ದಾಣದ ಬಳಿ ಇಳಿಯುತ್ತಿದ್ದಂತೆ ಪೊಲೀಸರು ಬಂಧಿಸಿ ಬಸ್ನಲ್ಲಿ ಕರೆದೊಯ್ದರು.
 2016: ಲಾಸ್ ಎಂಜಲೀಸ್:  ಅಮೇರಿಕದ ಟೆಲಿವಿಷನ್ಶೋ ಕ್ವಾಂಡಿಕೋದಲ್ಲಿ ಭಾಗವಹಿಸುವ
ಮೂಲಕ ಪ್ರಿಯಾಂಕಾ ಚೋಪ್ರಾ ತಮ್ಮ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು, ಟೆಲಿವಿಷನ್ಕ್ಷೇತ್ರದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆದ ಭಾರತದ ಮೊದಲ ನಟಿ ಎಂಬ ಖ್ಯಾತಿಗೆ ಪ್ರಿಯಾಂಕಾ ಚೋಪ್ರಾ ಪಾತ್ರರಾದರು. ಪ್ರಸುತ್ತ ಫೋರ್ಬ್ಸ್ ಪಟ್ಟಿಯಲ್ಲಿ ಪ್ರಿಯಾಂಕಾ 8ನೇ ಸ್ಥಾನವನ್ನು ಪಡೆದಿದ್ದು, ಅಮೇರಿಕ ನಟಿ ಸೋಫಿಯಾ ವರ್ಗಾ ಅವರು ಸತತ ಐದನೇ ಬಾರಿಗೆ ಮೊದಲ ಸ್ಥಾನವನ್ನು ಕಾಯ್ದುಕೊಂಡರು.  ಸೋಫಿಯಾ ಅವರ ಆದಾಯ 288 ಕೋಟಿ ರೂಪಾಯಿಗಳಷ್ಟಾದರೆ, ಪ್ರಿಯಾಂಕಾ 73.7 ಕೋಟಿ ರೂ.ಸಂಪಾದಿಸಿದ್ದಾರೆ. ಕಳೆದ ವರ್ಷ ಎಬಿಸಿಯ ಕ್ವಾಂಟಿಕೋ ಶೋದಲ್ಲಿ ಪ್ರಿಯಾಂಕಾ ಭಾಗವಹಿಸಿದ್ದರು. 34 ವರ್ಷದ ಪ್ರಿಯಾಂಕಾ ಚೋಪ್ರಾ ಬಾಲಿವುಡ್ 'ಬಾಜಿರಾವ್ಮಸ್ತಾನಿ', 'ಜೈ ಗಂಗಾಜಲ್‌' ಚಿತ್ರಗಳಲ್ಲಿ ನಟಿಸಿದ್ದಾರೆ ಹಾಗೂ ಹಾಲಿವುಡ್ ಬೇವಾಚ್ಚಿತ್ರದಲ್ಲಿ ಅತಿ ಹೆಚ್ಚು ಸಂಬಾವನೆ ಪಡೆದ ನಟ ದ್ವಾಯ್ನೆ ಜಾನ್ಸನ್ಅವರೊಂದಿಗೂ ನಟಿಸಿದ್ದಾರೆ. ಬಿಗ್ಬ್ಯಾಂಗ್ಥಿಯಾರಿಯ ನಟಿ ಕಲೈ ಕ್ಯೂಕೊ ರೂ164 ಕೋಟಿ ಸಂಭಾವನೆ ಪಡೆಯುವ ಮೂಲಕ 2ನೇ ಸ್ಥಾನ ಗಳಿಸಿದರು. ಮಿಂಡಿ ಕಾಲಿಂಗ್‌ 3ನೇ ಪಡೆದರು. ಈ ಹಿಂದೆ ಬಾಲಿವುಡ್ನಟಿ ದೀಪಿಕಾ ಪಡುಕೋಣೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರೊಂದಿಗೆ ಫೋರ್ಭ್ಸ್ಪಟ್ಟಿಯಲ್ಲಿ 10ನೇ ಸ್ಥಾನ ಗಿಟ್ಟಿಸಿಕೊಂಡು ದೇಶಕ್ಕೆ ಗೌರವ ತಂದಿದ್ದರು.

 2016: ಬೆಂಗಳೂರು: ಸಾಮಾನ್ಯ ಮೊಬೈಲ್ಮೂಲಕ ಇಂಟರ್ನೆಟ್ಸಂಪರ್ಕ ಇಲ್ಲದೆ, ಆಧಾರ್ಆಧರಿಸಿದ ಹಣ ವರ್ಗಾವಣೆ ಸೌಲಭ್ಯಕ್ಕೆ ಸಿಂಡಿಕೇಟ್ಬ್ಯಾಂಕ್ಚಾಲನೆ ನೀಡಿತು. ತಕ್ಷಣಕ್ಕೆ ಹಣ ಪಾವತಿ ಸೇವಾ ಸೌಲಭ್ಯದ (ಐಎಂಪಿಎಸ್‌) ನೆರವಿನಿಂದಲೂ    ಬ್ಯಾಂಕ್ಖಾತೆಗಳಿಗೆ ಸುಲಭವಾಗಿಹಣ ಪಾವತಿಸುವ ಸೌಲಭ್ಯವನ್ನೂ ಬ್ಯಾಂಕ್ಜಾರಿಗೆ ತಂದಿತು. ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಅರುಣ್ಶ್ರೀವಾಸ್ತವ ಅವರು ಎರಡೂ ಸೇವೆಗಳಿಗೆ ಚಾಲನೆ ನೀಡಿದರು.

2008: ಮುರುಘಾಮಠದ ವತಿಯಿಂದ ನೀಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ದೇಶದ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಡಾ.ಕಿರಣ್ ಬೇಡಿ ಅವರನ್ನು ಆಯ್ಕೆ ಮಾಡಲಾಯಿತು.  ಕಿರಣ್ ಬೇಡಿ ಅವರ ಕರ್ತವ್ಯನಿಷ್ಠೆ, ಸಾಮಾಜಿಕ ಬದ್ಧತೆ, ನಿಸ್ಪೃಹ ಸೇವೆ ಮತ್ತು ಸಮಾಜ ಸುಧಾರಣಾ ಚಟುವಟಿಕೆಗಳನ್ನು ಪರಿಗಣಿಸಿ ಅವರನ್ನು 2008 ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಚಿತ್ರದುರ್ಗದಲ್ಲಿ ಪ್ರಕಟಿಸಿದರು.

2008: ದಕ್ಷಿಣದ ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ನಿರತವಾಗಿದ್ದ ಕರ್ನಾಟಕ ಮೂಲದ ದೀನ್ ದಾರ್ ಅಂಜುಮನ್ ಸಂಘಟನೆಯ ಮೇಲೆ ಕೇಂದ್ರ ಸರ್ಕಾರ ಹೇರಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ಸಮರ್ಥಿಸಿತು. ಎರಡು ವರ್ಷಗಳಿಗೆ ನಿಷೇಧ ಮುಂದುವರಿಸುವ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದ್ದಿದ ನ್ಯಾಯಮಂಡಳಿಯ ತೀರ್ಪಿನ ವಿರುದ್ಧ ಗುಲ್ಬರ್ಗ ಮೂಲದ ಈ ಸಂಘಟನೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅರಿಜಿತ್ ಪಸಾಯತ್ ತಳ್ಳಿಹಾಕಿದರು. ಇಗರ್ಜಿಗಳ (ಚರ್ಚ್) ಮೇಲೆ ದಾಳಿ ನಡೆಸುವ ಮೂಲಕ ಹಿಂದೂಗಳು- ಕ್ರಿಶ್ಚಿಯನ್ನರ ನಡುವೆ ದ್ವೇಷದ ಕಿಡಿ ಹೊತ್ತಿಸಲು ಕಾರಣವಾಗಿದ್ದ ಸಂಘಟನೆಯ ವಿರುದ್ಧ ಸರ್ಕಾರ ವಿಧಿಸಿದ್ದ ನಿಷೇಧವನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನೇತೃತ್ವದ ನ್ಯಾಯಮಂಡಳಿ ಈ ವರ್ಷದ ಫೆ. 27ರಂದು ಎತ್ತಿಹಿಡಿದಿತ್ತು. ಕರ್ನಾಟಕ, ಗೋವಾ, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ವಿಧ್ವಂಸಕ ಕೃತ್ಯ ಎಸಗಿದ್ದ ಬಗ್ಗೆ ಹಾಗೂ 2000ನೇ ಇಸವಿಯಲ್ಲಿ ದಕ್ಷಿಣ ಭಾರತದ ಇಗರ್ಜಿಗಳ ಮೇಲೆ 12 ಬಾಂಬ್ ದಾಳಿಗಳನ್ನು ನಡೆಸಿದ್ದ ಬಗ್ಗೆ ಸರ್ಕಾರ ಸಾಕ್ಷ್ಯ ಒದಗಿಸಿತ್ತು. 2001ರಿಂದ ಈವರೆಗೆ ನಾಲ್ಕನೇ ಬಾರಿಗೆ ಸಂಘಟನೆಯ ಮೇಲೆ ನಿಷೇಧ ಹೇರಲಾಗಿತ್ತು.

2007: ಗಣೇಶ ಚತುರ್ಥಿಯ ದಿನ ಮಧ್ಯಾಹ್ನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ನಿಯಂತ್ರಣ ತಪ್ಪಿ ತೆರೆದ ಬಾವಿಗೆ ಬಿದ್ದ ಪರಿಣಾಮವಾಗಿ ಎಂಟು ಮಂದಿ ವಿದ್ಯಾರ್ಥಿಗಳು ಸೇರಿದಂತೆ  10 ಮಂದಿ ಸಾವಿಗೀಡಾದ ದಾರುಣ ಘಟನೆ ಅಥಣಿಗೆ ಎಂಟು ಕಿ.ಮೀ. ದೂರದ ಅಥಣಿ-ಅನಂತಪುರ ರಸ್ತೆಯ ಪ್ರಾರ್ಥನಹಳ್ಳಿ ಬಳಿ ಸಂಭವಿಸಿತು. ವಿದ್ಯಾರ್ಥಿಗಳು ಹಬ್ಬದ ಪ್ರಯುಕ್ತ ಶಾಲೆಯಲ್ಲಿ ಗಣಪತಿ ಪೂಜೆ ನೆರವೇರಿಸಿ ಸ್ವಗ್ರಾಮಗಳಿಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿತು.

2007: ಗೋವಾದ ಮಾರ್ಗೋವ ಜೈಲಿನಲ್ಲಿ ಗಣೇಶ ಚತುರ್ಥಿ ಆಚರಣೆ ಸಂದರ್ಭದಲ್ಲಿ 14 ಮಂದಿ ವಿಚಾರಣಾಧೀನ ಕೈದಿಗಳು ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜೈಲಿನಿಂದ ಪರಾರಿಯಾದರು.

2007: ಮಾಜಿ ಕೇಂದ್ರ ಸಚಿವೆ, ಭಾರತೀಯ ಜನಶಕ್ತಿ ಪಕ್ಷದ ನಾಯಕಿ ಉಮಾ ಭಾರತಿ ಅವರು ಇಂದೋರಿನಲ್ಲಿ ರಿಲಯನ್ಸ್ ಫ್ರೆಶ್ ಬಿಡಿ ಮಾರಾಟ ಮಳಿಗೆಯೊಂದಕ್ಕೆ ಬೀಗ ಜಡಿದರು. ಇಲ್ಲಿನ ಜಂಜೀರ್ ವಾಲಾ ಪ್ರದೇಶದಲ್ಲಿ ರಿಲಯನ್ಸ್ ಫ್ರೆಶ್ ಬಿಡಿ ಮಾರಾಟ ಮಳಿಗೆಗೆ ತರಕಾರಿ ತುಂಬಿದ್ದ ಬುಟ್ಟಿಯೊಂದನ್ನು ಹೊತ್ತುಕೊಂಡು ಬಂದ ಉಮಾ ಭಾರತಿ, ಮಳಿಗೆಗೆ ತಮ್ಮ ಬಳಿ ಇದ್ದ ಬೀಗ ಜಡಿದು ಕೋಲಾಹಲ ಎಬ್ಬಿಸಿದರು. ಸಮಾಜವಾದಿ ಪಕ್ಷದ ಕಾರ್ಯಕರ್ತರು ಕೆಲವು ರಿಲಯನ್ಸ್ ಫ್ರೆಶ್ ಬಿಡಿ ಮಾರಾಟ ಮಳಿಗೆಗಳ  ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮಾಯಾವತಿ ಸರ್ಕಾರವು ಕಳೆದ ತಿಂಗಳು ಎಲ್ಲ ರಿಲಯನ್ಸ್ ಫ್ರೆಶ್ ಬಿಡಿ ಮಾರಾಟ ಮಳಿಗೆಗಳನ್ನು ಮುಚ್ಚುವಂತೆ ಆಜ್ಞಾಪಿಸಿತ್ತು. ಈ ವರ್ಷಾರಂಭದಲ್ಲಿ ಜಾರ್ಖಂಡಿನ ರಾಂಚಿಯಲ್ಲಿ ಪ್ರತಿಭಟನಕಾರರು ರಿಲಯನ್ಸ್  ಫ್ರೆಶ್ ಬಿಡಿ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಬಲಾತ್ಕಾರವಾಗಿ ಮುಚ್ಚಿಸಿದ್ದರು.

2006: ಹಿರಿಯ ವಕೀಲ ಹಾಗೂ ಮಾಜಿ ಸಚಿವ ಪ್ರೊ. ಎಲ್.ಜಿ. ಹಾವನೂರು ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಅವರು ವಸ್ತುನಿಷ್ಠ ವರದಿಯ ಮೂಲಕ ಎಲ್ಲರ ಗಮನ ಸೆಳೆದಿದ್ದರು.

2006: ಇಸ್ಲಾಂ ಬಗ್ಗೆ ಪೋಪ್ ಬೆನೆಡಿಕ್ಟ್ ಅವರು ಮಾಡಿರುವ ಟೀಕೆಗಳು ಧಾರ್ಮಿಕ  ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುತ್ತವೆ ಎಂದು ಇಂಡೋನೇಷ್ಯ ಮತ್ತು ಪಾಕಿಸ್ತಾನಿ ಸರ್ಕಾರಗಳು ಮತ್ತು ಇಸ್ಲಾಮಿಕ್ ವಿದ್ವಾಂಸರು ದೂರಿದರು.

1967: ಹೈದರಾಬಾದ್ ಮುಖ್ಯಮಂತ್ರಿ ರಾಮಕೃಷ್ಣ ರಾವ್ ಬುರ್ಗುಲಾ ನಿಧನ.

1965: ಭಾರತ- ಪಾಕಿಸ್ತಾನ ನಡುವಿನ ಹಗೆತನ ನಿವಾರಣೆಗೆ ಅಮೆರಿಕ ಮಧ್ಯಪ್ರವೇಶಿಸಬೇಕು ಎಂದು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಮನವಿ ಮಾಡಿದರು.

 1953: ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ 8ನೇ ಅಧಿವೇಶನದ ಅಧ್ಯಕ್ಷರಾಗಿ ವಿಜಯಲಕ್ಷ್ಮಿ ಪಂಡಿತ್ ಅವರು ಚುನಾಯಿತರಾದರು. ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಹಾಗೂ ಪ್ರಥಮ ಮಹಿಳೆ ಎಂಬ ಕೀರ್ತಿ ಅವರಿಗೆ ಲಭಿಸಿತು.

1953: ಸಾಹಿತಿ ಪ್ರೇಮಾ ಸಿರ್ಸೆ ಜನನ.

1949: ಸಾಹಿತಿ ಸುಶೀಲಾ ಹೊನ್ನೇಗೌಡ ಜನನ.

1940: ಬ್ರಿಟನ್ ಕದನ ಬ್ರಿಟಿಷರ ಜಯದೊಂದಿಗೆ ಅಂತ್ಯಗೊಂಡಿತು. ಬ್ರಿಟನ್ ಮೇಲೆ ದಾಳಿ ನಡೆಸುವ ಉದ್ದೇಶದೊಂದಿಗೆ ಜರ್ಮನಿ ನಡೆಸಿದ ಸರಣಿ ವಾಯುದಾಳಿಗಳು ಬ್ರಿಟಿಷರ ಉನ್ನತ ತಂತ್ರಗಾರಿಕೆ, ಅತ್ಯಾಧುನಿಕ ವಾಯು ರಕ್ಷಣೆ, ರೇಡಾರ್ ನೆರವು ಹಾಗೂ ಜರ್ಮನ್ ಸಂಕೇತ  ಪತ್ತೆ ಕೌಶಲ್ಯಗಳ ಪರಿಣಾಮವಾಗಿ ವಿಫಲಗೊಂಡವು.
1939: ಸಾಹಿತಿ ಭಾಸ್ಕರ ಪಡುಬಿದ್ರಿ ಜನನ.

1935: ನ್ಯೂರೆಂಬರ್ಗ್ ಕಾನೂನುಗಳಿಂದ ಜರ್ಮನ್ ಯಹೂದಿಗಳು ಪೌರತ್ವ ವಂಚಿತರಾದರು. ಸ್ವಸ್ತಿಕವು ನಾಜಿ ಜರ್ಮನಿಯ ಅಧಿಕೃತ ಲಾಂಛನವಾಯಿತು.

1915: ಸಾಹಿತಿ ರೋಹಿಡೇಕರ್ ಜನನ.
1909: ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಸ್ಥಾಪಕ ಕಾಂಜೀವರಂ ನಟರಾಜನ್ ಅಣ್ಣಾದೊರೈ ಜನನ.

1893: ಕವಿ, ಸಾಹಿತಿ, ಶಿಕ್ಷಕ ಉಗ್ರಾಣ ಮಂಗೇಶರಾವ್ (15-9-1893ರಿಂದ 11-12-1973) ಅವರು ಉಗ್ರಾಣ ಶಿವರಾಯರ ಮಗನಾಗಿ ಈದಿನ ಕುಂದಾಪುರದಲ್ಲಿ ಜನಿಸಿದರು. ಸಣ್ಣಕಥೆ, ಸಂಶೋಧನಾ ಗ್ರಂಥ, ಪ್ರಬಂಧ ಸೇರಿದಂತೆ ಕನ್ನಡ ಸಾಹಿತ್ಯಕ್ಕೆ ಅವರು ಹಲವಾರು ಕೃತಿಗಳನ್ನು ನೀಡಿದ್ದಾರೆ.

1883: ಬಾಂಬೆಯ (ಈಗಿನ ಮುಂಬೈ) ಎಂಟು ಮಂದಿ ನಿವಾಸಿಗಳು ಲಂಡನ್ನಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಮ್ಮಿನಲ್ಲಿ ಸಭೆ ಸೇರಿ `ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ'ಯನ್ನು ಸ್ಥಾಪಿಸಿದರು.
1860: ಭಾರತ ರತ್ನ, ಆಧುನಿಕ ಕರ್ನಾಟಕದ ಶಿಲ್ಪಿ, ಶತಾಯುಷಿ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಸರ್ ಎಂವಿ) (15-9-1860ರಿಂದ 12-4-1962) ಜನ್ಮದಿನ. ಈ ದಿನವನ್ನು ಎಂಜಿನಿಯರುಗಳ ದಿನವಾಗಿ ಆಚರಿಸಲಾಗುತ್ತಿದೆ. ಎಂಜಿನಿಯರ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ವಿಶ್ವೇಶ್ವರಯ್ಯ ಅವರು ಭಾರತದ ನದಿಗಳ ಸದ್ಭಳಕೆ ಬಗ್ಗೆ ಚಿಂತಿಸಿದ ಮೊದಲಿಗರು. ಮೈಸೂರು ರಾಜ್ಯದ ಆಡಳಿತ, ಅಭಿವೃದ್ಧಿಗೆ ಯೋಜನಾಬದ್ಧವಾಗಿ ಶ್ರಮಿಸಿದ ಅವರು ಅಖಿಲ ಭಾರತ ತಯಾರಕರ ಸಂಸ್ಥೆಯನ್ನು (1941) ಸ್ಥಾಪಿಸಿದರು. ಮೈಸೂರಿನ ದಿವಾನ ಹುದ್ದೆ ಸೇರಿ ಹಲವಾರು ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ್ದರು.

1830: ರೈಲ್ವೆ ಅಪಘಾತದಲ್ಲಿ ಮೊದಲ ಸಾವು ಸಂಭವಿಸಿದ ದಿನ ಇದು. ಲಿವರ್ ಪೂಲ್- ಮ್ಯಾಂಚೆಸ್ಟರ್ ನಡುವೆ ಹೊಸದಾಗಿ ಅಳವಡಿಸಲಾದ ರೈಲಿನ ಉದ್ಘಾಟನಾ ಸಮಾರಂಭದಲ್ಲಿ ರೈಲಿನ ಅಡಿಗೆ ಸಿಲುಕಿ ಬ್ರಿಟಿಷ್ ಪಾರ್ಲಿಮೆಂಟ್ ಸದಸ್ಯ ವಿಲಿಯಂ ಹಸ್ ಕಿಸ್ಸನ್ ಮೃತರಾದರು. ರೈಲ್ವೇ ಹಳಿಯನ್ನು ಉದ್ಘಾಟಿಸಿದ ಪ್ರಧಾನಿ, ಡ್ಯೂಕ್ ಆಫ್ ವೆಲ್ಲಿಂಗ್ಟನ್ ಅವರನ್ನು ಭೇಟಿ ಮಾಡುವ ಸಲುವಾಗಿ ಅವರು ರೈಲ್ವೇ ಹಳಿ ದಾಟುತ್ತಿದ್ದಾಗ ಈ ದುರಂತ ಸಂಭವಿಸಿತು.

1821: ಕೋಸ್ಟರಿಕಾ, ಗ್ವಾಟೆಮಾಲಾ, ಹೊಂಡುರಾಸ್, ನಿಕರಾಗುವಾ ಮತ್ತು ಎಲ್ ಸಾಲ್ವಡಾರ್ ರಾಷ್ಟ್ರಗಳಿಗೆ ಸ್ವಾತಂತ್ರ್ಯ ಘೋಷಿಸಲಾಯಿತು.

(ಸಂಗ್ರಹ
ನೆತ್ರಕೆರೆ ಉದಯಶಂಕರ)

No comments:

Post a Comment