ನಾನು ಮೆಚ್ಚಿದ ವಾಟ್ಸಪ್

Monday, September 17, 2018

ತೆಂಗಿನ ಎಣ್ಣೆ ವಿಷವಂತೆ! ವಿವಾದದ ಕಿಡಿ ಹಚ್ಚಿದ ಹಾರ್ವಡ್ ವಿವಿ ಉಪನ್ಯಾಸಕಿ


ತೆಂಗಿನ ಎಣ್ಣೆ ವಿಷವಂತೆ! ವಿವಾದದ ಕಿಡಿ ಹಚ್ಚಿದ ಹಾರ್ವಡ್ ವಿವಿ ಉಪನ್ಯಾಸಕಿ

ನವದೆಹಲಿ:ತೆಂಗಿನ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಶುದ್ಧ ವಿಷ ಎಂಬುದಾಗಿ ಹೇಳುವ ಮೂಲಕ ಹಾರ್ವರ್ಡ್ ಉಪನ್ಯಾಸಕಿಯೊಬ್ಬರು ವಿವಾದ ಕಿಡಿ ಹಚ್ಚಿದ್ದು, ಭಾರತ ಮತ್ತು ಥಾಯ್ಲೆಂಡ್ ಸೇರಿದಂತೆ ವಿವಿಧೆಡೆಗಳಿಂದ ಹೇಳಿಕೆಗೆ ಉಗ್ರ ವಿರೋಧ ವ್ಯಕ್ತವಾಗಿದೆ. ’ಇದು ಕೇವಲ ರುಚಿಯ ವಿಷಯವಲ್ಲ, ,೪೪೮ ಕೋಟಿ ರೂಪಾಯಿಗಳ ಆರ್ಥಿಕತೆಯ ಪ್ರಶ್ನೆ ಕೂಡಾ ಆಗಿದೆ ಭಾರತ ಹೇಳಿದೆ.
ಹಾರ್ವರ್ಡ್ ಟಿಎನ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್  ಪ್ರೊಫೆಸರ್ ಕರೀನ್ ಮಿಶೆಲ್ಸ್ ಅವರುಸೂಪರ್ ಫೂಡ್ ಅಭಿಯಾನವನ್ನು ಟೀಕಿಸುತ್ತಾ ತೆಂಗಿನ ಎಣ್ಣೆಯುನೀವು ತಿನ್ನಬಹುದಾದ ಅತ್ಯಂತ ಕೆಟ್ಟ ವಸ್ತು ಬಣ್ಣಿಸಿದ್ದಾರೆ. ಸೋಂಕು ಶಾಸ್ತ್ರಜ್ಞೆಯಾಗಿರುವ ಕರೀನ್ ಅವರು ಯುನಿವರ್ಸಿಟಿ ಆಫ್ ಫ್ರೀಬರ್ಗ್ನಲ್ಲಿ  ತೆಂಗಿನ ಎಣ್ಣೆ ಮತ್ತು ಇತರ ಪುಷ್ಟಿದಾಯಕ ತಪ್ಪುಗಳು ಶೀರ್ಷಿಕೆಯ ಉಪನ್ಯಾಸ ನೀಡುತ್ತಿದ್ದರು. ಜರ್ಮನ್ ಭಾಷೆಯ ಉಪನ್ಯಾಸವಾಗಿದ್ದರೂ ಲಕ್ಷಾಂತರ ಮಂದಿ ಕೆಲವೇ ದಿನಗಳ ಒಳಗಾಗಿ ಉಪನ್ಯಾಸದ ವಿಡಿಯೋವನ್ನು ವೀಕ್ಷಿಸಿದ್ದಾರೆ.

ಭಾರತ ಸರ್ಕಾರವು ಉಪನ್ಯಾಸಕ್ಕೆ ತನ್ನ ತೀವ್ರ ಪ್ರತಿಕ್ರಿಯೆಯನ್ನು ನೀಡಿದೆ. ಕೃಷಿ ಸಚಿವಾಲಯದ ತೋಟಗಾರಿಕಾ ಕಮೀಷನರ್ ಬಿಎನ್ ಎಸ್ ಮೂರ್ತಿ ಅವರು ವಿಶ್ವವಿದ್ಯಾಲಯಕ್ಕೆ ಬರೆದ ಆಗಸ್ಟ್ ೨೮ರ ದಿನಾಂಕದ ಪತ್ರದಲ್ಲಿತಪ್ಪು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ತೆಂಗನ್ನು ಅದು ಪೂಜನೀಯ ಬೆಳೆ ಎಂಬುದಾಗಿ ಪತ್ರ ಶ್ಲಾಘಿಸಿದೆ.

ಯಾವ ಸಂದರ್ಭದಲ್ಲಿ ಆಕೆ (ಪ್ರೊ. ಮಿಶೆಲ್ಸ್) ಕೋಟ್ಯಂತರ ಮಂದಿಯ ಪೂಜನೀಯ ಬೆಳೆಯ ಬಗ್ಗೆ ಇಂತಹ ನಕಾರಾತ್ಮಕ ಹೇಳಿಕೆ ನೀಡಿದ್ದಾರೆ?’ ಎಂಬುದಾಗಿ ಕೇಳಿರುವ ಮೂರ್ತಿ ಅವರು ಹೇಳಿಕೆಯಿಂದ ಹಿಂದೆ ಸರಿಯುವ ಮೂಲಕ ತಪ್ಪು ಸರಿಪಡಿಸುವ ಕ್ರಮ ಕೈಗೊಳ್ಳುವಿರಿ ಎಂಬುದಾಗಿ ನಾನು ಹಾರೈಸಿದ್ದೇನೆ ಎಂದು ಹಾರ್ವರ್ಡ್ ಟಿ.ಎಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಡೀನ್ ಅವರಿಗೆ ಬರೆದಿದ್ದಾರೆ. ಬೆನ್ನಲ್ಲೇ ಏಷ್ಯಾ ಫೆಸಿಫಿಕ್ ಕೋಕೋನೆಟ್ ಕಮ್ಯೂನಿಟಿ ಕೂಡಾ ಥಾಯ್ಲೆಂಡಿನಲ್ಲಿ ನಡೆದ ತನ್ನ ವಾರ್ಷಿಕ ಸಮಾವೇಶದಲ್ಲಿ ಭಾರತದ ಅಭಿಪ್ರಾಯವನ್ನು ಅನುಮೋದಿಸಿದೆ.

ಭಾರತದ ತೆಂಗಿನ ಕಾಯಿ ರಫ್ತು ೨೦೧೪ರಿಂದೀಚೆಗೆ ದುಪ್ಪಟ್ಟಾಗಿದೆ. ೨೦೦೪-೧೪ರ ನಡುವಣ ಅವಧಿಯಲ್ಲಿ ,೯೭೫ ಕೋಟಿ ರೂಪಾಯಿಗಳಷ್ಟಿದ್ದ ಭಾರತದ ತೆಂಗಿನಕಾಯಿ ರಫ್ತು ೨೦೧೮ರ ವೇಳೆಗೆ ,೪೪೮ ಕೋಟಿ ರೂಪಾಯಿಗಳಿಗೆ ಏರಿದೆ. ಇದೇ ವೇಳೆಗೆ ಅಮೆರಿಕ ಮತ್ತು ಯುರೋಪಿನ ಪ್ರಮುಖ ಮಾರುಕಟ್ಟೆಗಳು ತೆಂಗಿನ ಎಣ್ಣೆಯ ಆರೋಗ್ಯ ಲಾಭಗಳ ಪ್ರತಿಪಾದನೆಯ ಹಿಂದಿನ ವಿಜ್ಞಾನವನ್ನು ಪ್ರಶ್ನಿಸುತ್ತಿವೆ.

ಜಾಗತಿಕವಾಗಿ ಸೂಪರ್ ಫುಡ್ ಎಂಬುದಾಗಿ ತೆಂಗಿನ ಎಣ್ಣೆಯನ್ನು ಬ್ರ್ಯಾಂಡ್ ಮಾಡಿದ್ದರಿಂದ ಭಾರತದ ರಫ್ತು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ೨೦೧೧-೧೩ರ ಅವಧಿಯಲ್ಲಿ ಅಮೆರಿಕದ ಗ್ರೂಗಲ್ ಟ್ರೆಂಡ್ ಮಾಹಿತಿ ಪ್ರಕಾರ ತೆಂಗಿನ ಎಣ್ಣೆಗಾಗಿ ಹುಡುಕಾಟವು (ಸರ್ಚ್) ದುಪ್ಪಟ್ಟಾಗಿದೆ. ೨೦೧೪ರಲ್ಲಿನ ಕೆಲವು ಸಂಬಂಧಿತ ಹುಡುಕಾಟಗಳಲ್ಲಿಹಲ್ಲು ಸ್ವಚ್ಛಗೊಳಿಸಲು ತೆಂಗಿನ ಎಣ್ಣೆಯನ್ನು ಮುಕ್ಕಳಿಸುವುದು ವಿಚಾರ ಸೇರಿದಂತೆ ಹಲವಾರು ಅಂಶಗಳು ಕಂಡು ಬಂದಿವೆ.

ಅಮೆರಿಕದಲ್ಲಿ ೨೦೧೫ರಲ್ಲಿ ೨೩೦ ದಶಲಕ್ಷ (ಮಿಲಿಯನ್) ಡಾಲರಿನಷ್ಟಿದ್ದ ತೆಂಗಿನ ಕಾಯಿ ಮಾರಾಟವು ನಂತರದ ಎರಡು ವರ್ಷಗಳಲ್ಲಿ ೫೨ ದಶಲಕ್ಷ (ಮಿಲಿಯನ್) ಡಾಲರುಗಳಷ್ಟು ಕುಸಿದಿದೆ ಎಂದು ಅಮೆರಿಕ ಮೂಲದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಸ್ಪಿನ್ಸ್ ಹೇಳಿದೆ. ಆದರೆ ತೆಂಗಿನ ಬೆಳೆಯನ್ನು ಪ್ರೋತ್ಸಾಹಿಸುತ್ತಿರುವ ಭಾರತದ ಪಾಲಿಗೆ ಇದು ಶುಭ ಸುದ್ದಿಯಲ್ಲ. 
ತೆಂಗು ಉದ್ಯಮವು ೧೨ ದಶಲಕ್ಷ (ಮಿಲಿಯನ್) ರೈತ ಕುಟುಂಬಗಳಿಗೆ ಬದುಕಿಗೆ ಆಸರೆಯಾಗಿದೆ ಎಂದು ಮೂರ್ತಿ ಅವರು ಹಾರ್ವಡ್ ವಿಶ್ವ ವಿದ್ಯಾಲಯಕ್ಕೆ ತಿಳಿಸಿದ್ದಾರೆ. ವಿಶ್ವ ವಿದ್ಯಾಲಯದ ಹೇಳಿಕೆಯನ್ನು ವಿರೋಧಿಸಿ ಭಾರತ ಸರ್ಕಾರ ಪತ್ರ ಬರೆದಿರುವುದರ ಹೊರತಾಗಿಯೂ ತೆಂಗಿನ ಎಣ್ಣೆಯ ಜಾಗತಿಕ ಮಾರುಕಟ್ಟೆ ಕುಸಿದರೆ ತೆಂಗು ಕೃಷಿಕರು ಅತಿದೊಡ್ಡ ಸವಾಲು ಎದುರಿಸಬೇಕಾಗಿ ಬರುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಸ್ತತ ತೆಂಗಿನ ಎಣ್ಣೆಯ ಬೆಲೆ ಏರುತ್ತಿದೆ. ೨೦೧೮ರ ಫೆಬ್ರುವರಿಯಲ್ಲಿ ಕೇರಳದಲ್ಲಿ ಕಿಲೋ ಗ್ರಾಂ ತೆಂಗಿನ ಎಣ್ಣೆಯ ದರ ೨೨೩ ರೂಪಾಯಿ ಇತ್ತು. ಇದು ೧೦ ತಿಂಗಳ ಹಿಂದಿನ ದರಕ್ಕಿಂತ ೧೨೪ ರೂಪಾಯಿ ಹೆಚ್ಚು. ಆದರೂ ದರ ಏರಿಳಿತವು ರೈತರ ಪಾಲಿಗೆ ದೊಡ್ಡ ಸವಾಲಾಗಿಯೇ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಕೋಚಿಯ ಸಿಡಿಬಿ ಉಪ ನಿರ್ದೇಶಕ ಜ್ಞಾನದೇವನ್ ಆರ್ ಅವರ ಪ್ರಕಾರ ತೆಂಗಿನ ಬೆಲೆ ಏರಿಕೆಗೆ ಕಾರಣ ಉತ್ಪಾದನೆ ಇಳಿಮುಖವಾದ್ದದ್ದು ಹೊರತು ಬೇರೇನಲ್ಲ. ಜೊತೆಗೆ ರಪ್ತಿಗೆ ಹೆಚ್ಚಿನ ಬೇಡಿಕೆ ಇರುವುದೂ ಬೆಲೆ ಏರಿಕೆಗೆ ಕಾಣಿಕೆ ನೀಡಿದೆ ಎಂದು ಅವರು ಹೇಳುತ್ತಾರೆ.

೨೦೧೭ರಲ್ಲಿ ಅಮೆರಿಕನ್ ಹಾರ್ಟ್ ಅಸೋಸಿಯೇಶನ್ ತೆಂಗಿನ ಎಣ್ಣೆಯಲ್ಲಿ ಕೊಬ್ಬಿನ ಅಂಶ ಅತ್ಯಧಿಕ ಇರುವುದರಿಂದ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವಾದಿಸಿತ್ತು. ಆದರೆ ಭಾರತ ಇದನ್ನು ಒಪ್ಪಿಲ್ಲ.
ಸಿಡಿಬಿಯು
ತೆಂಗಿನ ಎಣ್ಣೆಯ ೧೮ ವಿಶಿಷ್ಟ ಪೌಷ್ಟಿದಾಯಕ ಮತ್ತು ವೈದ್ಯಕೀಯ ಲಾಭಗಳನ್ನು ಪಟ್ಟಿ ಮಾಡಿದೆ ಮತ್ತು ಕೊಬ್ಬಿನ ವಿರುದ್ಧ ಹೋರಾಟಕ್ಕೆ ಕೊಬ್ಬರಿ ಎಣ್ಣೆ ಅತ್ಯುತ್ತಮ ಆಯುಧ ಎಂದು ಬಣ್ಣಿಸಿದೆ.
ಕೇರಳ ವಿಶ್ವ ವಿದ್ಯಾಲಯದ ಜೀವ ರಸಾಯನ ಇಲಾಖೆಯು ಕೊಬ್ಬರಿ ಎಣ್ಣೆಯು ರಕ್ತದ ಕೊಬ್ಬನ್ನು ಹೆಚ್ಚಿಸುವುದಿಲ್ಲ, ಬದಲಿಗೆ ಎಚ್ ಡಿಎಲ್ನ್ನು (ಉತ್ತಮ ಕೊಬ್ಬು) ಹೆಚ್ಚಿಸುತ್ತದೆ, ಹಾಗೆಯೇ ಎಲ್ ಡಿಎಲ್ ಕೊಲೆಸ್ಟ್ರಾಲ್ ನ್ನು (ಕೆಟ್ಟ ಕೊಬ್ಬು) ಕೂಡಾ ಹೆಚ್ಚಿಸುವುದಿಲ್ಲ. ಮಧುಮೇಹಿಗಳಿಗೂ ತೆಂಗಿನ ಎಣ್ಣೆ ಆರೋಗ್ಯಕರ ಎಂದು ಪ್ರತಿಪಾದಿಸಿದೆ.

No comments:

Post a Comment